Tag: ಅರ್ಬಾಜ್ ಖಾನ್

  • ಡಿವೋರ್ಸ್ ಬಗ್ಗೆ ಜನ ಕೀಳಾಗಿ ನೋಡುತ್ತಾರೆ- ಮಲೈಕಾ ಅರೋರಾ

    ಡಿವೋರ್ಸ್ ಬಗ್ಗೆ ಜನ ಕೀಳಾಗಿ ನೋಡುತ್ತಾರೆ- ಮಲೈಕಾ ಅರೋರಾ

    ಬಾಲಿವುಡ್ ಬೆಡಗಿ ಮಲೈಕಾ ಅರೋರಾ (Malaika Arora) 7 ವರ್ಷಗಳ ಹಿಂದೆ ಅರ್ಬಾಜ್ ಖಾನ್ (Arbaaz Khan) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಆದರೆ ಈಗಲೂ ಜನರು ಟೀಕೆ ಮಾಡ್ತಾರೆ ಕೀಳಾಗಿ ನೋಡ್ತಾರೆ ಎಂದು ಡಿವೋರ್ಸ್ ಬಗ್ಗೆ ಮಲೈಕಾ ಅರೋರಾ ಮಾತನಾಡಿದ್ದಾರೆ.

    ಅರ್ಬಾಜ್ ಖಾನ್ ಮತ್ತು ಮಲೈಕಾ 19 ವರ್ಷಗಳ ಕಾಲ ದಾಂಪತ್ಯ ಜೀವನ ಜೊತೆಯಾಗಿ ಕಳೆದಿದ್ದಾರೆ. ಕೆಲ ಮನಸ್ತಾಪಗಳಿಂದ ಇಬ್ಬರೂ ದೂರವಾದರು. ಗಂಡನಿಂದ ದೂರವಾದರೆ ಸಮಾಜ ನೋಡುವ ರೀತಿ ಆಡುವ ಮಾತು ಹೇಗಿರುತ್ತೆ ಎಂದು ನಟಿ ಅಸಮಾಧಾನ ಹೊರಹಾಕಿದ್ದಾರೆ.

    ಸಂದರ್ಶನವೊಂದರಲ್ಲಿ ಡಿವೋರ್ಸ್ ಅನ್ನು ಜನರು ಕೀಳಾಗಿ ನೋಡುತ್ತಾರೆ ಆದರೆ ನನಗೆ ವಿಚ್ಛೇದನದಿಂದ ಖುಷಿ ಸಿಕ್ಕಿದೆ ಎಂದು ಮಲೈಕಾ ಹೇಳಿದ್ದಾರೆ. ನಾನು ಅರ್ಬಾಜ್ ಖಾನ್‌ನಿಂದ ಭಾರಿ ಡಿವೋರ್ಸ್ ಪರಿಹಾರ ಪಡೆದಿದ್ದರಿಂದ ಬೋಲ್ಡ್ ಬಟ್ಟೆಗಳನ್ನು ಧರಿಸಲು ಸಾಧ್ಯವಾಗುತ್ತಿದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದರು. ಆಗ ಜನರ ಕಾಮೆಂಟ್ ನನಗೆ ಆಘಾತಕ್ಕೀಡು ಮಾಡಿತ್ತು ಎಂದು ಮಲೈಕಾ ಹೇಳಿದ್ದಾರೆ.

    ಈ ಹಿಂದೆ ಮಲೈಕಾ, ಹೌದು ನಮಗೆ ಡಿವೋರ್ಸ್ ಆಗಿದೆ. ಆದರೆ ನಾವು ಮುಂದೆ ಬಂದಿದ್ದೇವೆ. ಆದರೆ ನೀವಿನ್ನೂ ಅಲ್ಲೇ ಇದ್ದೀರಾ ಎಂದು ಕೆಣಕುವವರಿಗೆ ತಿರುಗೇಟು ನೀಡಿದ್ದರು. ಇದನ್ನೂ ಓದಿ:26ನೇ ವಯಸ್ಸಿಗೆ ನೀಲಿ ತಾರೆ ಸೋಫಿಯಾ ಲಿಯೋನ್ ನಿಧನ

    ಕಳೆದ ವರ್ಷ ಡಿಸೆಂಬರ್ 24ರಂದು ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಜೊತೆ ಅರ್ಬಾಜ್ ಖಾನ್ ಮದುವೆಯಾಗಿದ್ದಾರೆ. ಇತ್ತ ಅರ್ಜುನ್ ಕಪೂರ್ ಜೊತೆ ಮಲೈಕಾ ಅರೋರಾ ಎಂಗೇಜ್ ಆಗಿದ್ದಾರೆ. ಇಬ್ಬರ ಮದುವೆ ಯಾವಾಗ ಎಂದು ಇನ್ನೂ ಅಧಿಕೃತವಾಗಿ ಹೊರಬೀಳಬೇಕಿದೆ.

  • ಮಾಜಿ ಪತಿಯ ಮದುವೆ ಬೆನ್ನಲ್ಲೇ, ಅಚ್ಚರಿ ಹೇಳಿಕೆ ಕೊಟ್ಟ ಮಲೈಕಾ

    ಮಾಜಿ ಪತಿಯ ಮದುವೆ ಬೆನ್ನಲ್ಲೇ, ಅಚ್ಚರಿ ಹೇಳಿಕೆ ಕೊಟ್ಟ ಮಲೈಕಾ

    ವಾರದ ಹಿಂದೆಯಷ್ಟೇ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ (Arbaaz Khan) ಅವರ ಎರಡನೇ ಮದುವೆ (Marriage) ನಡೆಯಿತು. ನಟಿ ಮಲೈಕಾ ಅರೋರಾ (Malaika Arora) ವಿಚ್ಛೇದನದ ನಂತರ ಒಂಟಿಯಾಗಿಯೇ ಉಳಿದುಕೊಂಡಿದ್ದ ಅರ್ಬಾಜ್, ಮೇಕಪ್ ಕಲಾವಿದೆ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ನಡೆಯುತ್ತಿದ್ದಂತೆಯೇ ಅರ್ಬಾಜ್ ಮಾಜಿ ಪತ್ನಿ ಮಲೈಕಾ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

    ಸದ್ಯ ನಟಿ ಮಲೈಕಾ ಅರೋರಾ ರಿಯಾಲಿಟಿ ಶೋನಲ್ಲಿ ನಿರ್ಣಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಶೋನಲ್ಲಿ ಮಲೈಕಾ ಅವರ ಮದುವೆ ವಿಚಾರ ಪ್ರಸ್ತಾಪಿಸಲಾಯಿತು. ಯಾವಾಗ ಮದುವೆ ಆಗಲಿದ್ದೀರಿ ಎಂದು ಕೇಳಲಾಯಿತು. ಕೊಂಚವೂ ಯೋಚನೆ ಮಾಡದೇ ಮುಂದಿನ ವರ್ಷ ಹೊಸ ಜೀವನಕ್ಕೆ ಕಾಲಿಡುವುದಾಗಿ ತಿಳಿಸಿದ್ದಾರೆ.

    ಈಗಾಗಲೇ ಅರ್ಜುನ್ ಕಪೂರ್ ಜೊತೆ ಮಲೈಕಾ ಡೇಟ್ ಮಾಡುತ್ತಿದ್ದಾರೆ. ಸಹಜೀವನ ನಡೆಸುತ್ತಿರುವ ರೀತಿಯಲ್ಲೇ ಬದುಕುತ್ತಿದ್ದಾರೆ. ಅರ್ಜುನ್ ಜೊತೆ ಸಾಕಷ್ಟು ದೇಶಗಳನ್ನೂ ಮಲೈಕಾ ಸುತ್ತಿದ್ದಾರೆ. ಕೊನೆಗೂ ಮದುವೆ ವಿಷಯದ ಕುರಿತು ಮಲೈಕಾ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ತಿಂಗಳು ಮತ್ತು ಡೇಟ್ ಮಾತ್ರ ತಿಳಿಸಿಲ್ಲ.

  • ತಂದೆಯ ಮದುವೆಗೆ ಬಂದ ಅರ್ಬಾಜ್ ಪುತ್ರ, ಮಲೈಕಾ ಕೇಕ್ ಉಡುಗೊರೆ

    ತಂದೆಯ ಮದುವೆಗೆ ಬಂದ ಅರ್ಬಾಜ್ ಪುತ್ರ, ಮಲೈಕಾ ಕೇಕ್ ಉಡುಗೊರೆ

    ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ಮತ್ತು ನಟ ಅರ್ಬಾಜ್ ಖಾನ್ ದಂಪತಿ ಪುತ್ರ ಅರ್ಹಾನ್ ಖಾನ್ (Arhaan Khan) ಭಾರತಕ್ಕೆ ಬಂದಿಳಿದಿದ್ದಾರೆ. ತಂದೆ ಅರ್ಬಾಜ್ ಅವರ ಎರಡನೇ ಮದುವೆಯಲ್ಲಿ ಅವರು ಪಾಲ್ಗೊಂಡಿದ್ದಾರೆ. ನೇರವಾಗಿ ತಂದೆಯ ಮದುವೆಯಲ್ಲಿ ಪುತ್ರ ಪಾಲ್ಗೊಂಡಿದ್ದರೆ, ಮಾಜಿ ಪತಿಗೆ ಕೇಕ್ ನೀಡುವ ಮೂಲಕ ಮಲೈಕಾ ಶುಭಾಶಯ ಕೋರಿದ್ದಾರೆ.

    ನಟ ಸಲ್ಮಾನ್ ಖಾನ್ ಕಿರಿಯ ಸಹೋದರ ಅರ್ಬಾಜ್ ಖಾನ್ (Arbaaz Khan) ನಿನ್ನೆ (ಡಿ.24) ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೇಕಪ್ ಆರ್ಟಿಸ್ಟ್ ಶುರಾ ಖಾನ್ (Shura Khan) ಜೊತೆ ಅರ್ಬಾಜ್ ಮದುವೆ (Marriage) ನಡೆಸಿದ್ದು, ಮುಂಬೈನಲ್ಲಿರುವ ಕುಟುಂಬದ ಸದಸ್ಯರು ಮತ್ತು ಆತ್ಮೀಯರಿಗೆ ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದಾರೆ.

    ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ಭಾನುವಾರ ನಡೆದ ನಿಕಾಹ್ ಗಾಗಿ ವಧು ಶುರಾ ಕಾಣ್ ಲೈಟ್ ವೈಟ್ ಪೀಚ್ ಲೆಹೆಂಗಾ ಧರಿಸಿದ್ದರು. ಅರ್ಬಾಜ್ ಕೂಡ ಅಷ್ಟೇ ಗ್ರ್ಯಾಂಡ್ ಆಗಿರುವ ಕಾಸ್ಟ್ಯೂಮ್ ಹಾಕಿಕೊಂಡಿದ್ದರು. ತಮ್ಮ ಇನ್ಸ್ಟಾ ಪೇಜ್ ನಲ್ಲಿ ಮದುವೆ ಕುರಿತು ಅರ್ಬಾಜ್ ಬರೆದುಕೊಂಡಿದ್ದಾರೆ.

    ಮಲೈಕಾ ಅರೋರಾ ಜೊತೆ ಅರ್ಬಾಜ್ 1998ರಲ್ಲಿ ಮದುವೆ ಆಗಿದ್ದರು. ನಂತರ ಇಬ್ಬರೂ ಡಿವೋರ್ಸ್ ಪಡೆದುಕೊಂಡು ದೂರವಾದರು. 19 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಮಲೈಕಾ ಮತ್ತು ಅರ್ಬಾಜ್ ಅವರಿಗೆ ಒಬ್ಬ ಮಗ ಕೂಡ ಇದ್ದಾನೆ. ನಂತರ ಅರ್ಬಾಜ್ ರೂಪದರ್ಶಿ ಜಾರ್ಜಿಯಾ ಜೊತೆ ಡೇಟ್ ಮಾಡುತ್ತಿದ್ದರು. ಆ ಸಂಬಂಧವೂ ಮುರಿದು ಬಿದ್ದಿತ್ತು.

     

    ಒಂಟಿಯಾಗಿ ಜೀವನ ನಡೆಸುತ್ತಿದ್ದ ಅರ್ಬಾಜ್ ಖಾನ್ ಇದೀಗ ಮೇಕಪ್ ಕಲಾವಿದೆ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರ್ಬಾಜ್ ಖಾನ್ ಅವರಿಗೂ ಮತ್ತು ಶುರಾ ಖಾನ್ ಅವರ ವಯಸ್ಸಿನ ಅಂತ ಬರೋಬ್ಬರಿ 22 ವರ್ಷ ಎಂದು ಹೇಳಲಾಗುತ್ತಿದೆ.

  • ಮೇಕಪ್ ಆರ್ಟಿಸ್ಟ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ಸಲ್ಮಾನ್ ಸಹೋದರ

    ಮೇಕಪ್ ಆರ್ಟಿಸ್ಟ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ಸಲ್ಮಾನ್ ಸಹೋದರ

    ಬಾಲಿವುಡ್ (Bollywood) ಖ್ಯಾತ ನಟ ಸಲ್ಮಾನ್ ಖಾನ್ ಕಿರಿಯ ಸಹೋದರ ಅರ್ಬಾಜ್ ಖಾನ್ (Arbaaz Khan) ನಿನ್ನೆ (ಡಿ.24) ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೇಕಪ್ ಆರ್ಟಿಸ್ಟ್ ಶುರಾ ಖಾನ್ (Shura Khan) ಜೊತೆ ಅರ್ಬಾಜ್ ಮದುವೆ (Marriage) ನಡೆಸಿದ್ದು, ಮುಂಬೈನಲ್ಲಿರುವ ಕುಟುಂಬದ ಸದಸ್ಯರು ಮತ್ತು ಆತ್ಮೀಯರಿಗೆ ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದಾರೆ.

    ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ಭಾನುವಾರ ನಡೆದ ನಿಕಾಹ್ ಗಾಗಿ ವಧು ಶುರಾ ಕಾಣ್ ಲೈಟ್ ವೈಟ್ ಪೀಚ್ ಲೆಹೆಂಗಾ ಧರಿಸಿದ್ದರು. ಅರ್ಬಾಜ್ ಕೂಡ ಅಷ್ಟೇ ಗ್ರ್ಯಾಂಡ್ ಆಗಿರುವ ಕಾಸ್ಟ್ಯೂಮ್ ಹಾಕಿಕೊಂಡಿದ್ದರು. ತಮ್ಮ ಇನ್ಸ್ಟಾ ಪೇಜ್ ನಲ್ಲಿ ಮದುವೆ ಕುರಿತು ಅರ್ಬಾಜ್ ಬರೆದುಕೊಂಡಿದ್ದಾರೆ.

    ಮಲೈಕಾ ಅರೋರಾ ಜೊತೆ ಅರ್ಬಾಜ್ 1998ರಲ್ಲಿ ಮದುವೆ ಆಗಿದ್ದರು. ನಂತರ ಇಬ್ಬರೂ ಡಿವೋರ್ಸ್ ಪಡೆದುಕೊಂಡು ದೂರವಾದರು. 19 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಮಲೈಕಾ ಮತ್ತು ಅರ್ಬಾಜ್ ಅವರಿಗೆ ಒಬ್ಬ ಮಗ ಕೂಡ ಇದ್ದಾನೆ. ನಂತರ ಅರ್ಬಾಜ್ ರೂಪದರ್ಶಿ ಜಾರ್ಜಿಯಾ ಜೊತೆ ಡೇಟ್ ಮಾಡುತ್ತಿದ್ದರು. ಆ ಸಂಬಂಧವೂ ಮುರಿದು ಬಿದ್ದಿತ್ತು.

     

    ಒಂಟಿಯಾಗಿ ಜೀವನ ನಡೆಸುತ್ತಿದ್ದ ಅರ್ಬಾಜ್ ಖಾನ್ ಇದೀಗ ಮೇಕಪ್ ಕಲಾವಿದೆ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರ್ಬಾಜ್ ಖಾನ್ ಅವರಿಗೂ ಮತ್ತು ಶುರಾ ಖಾನ್ ಅವರ ವಯಸ್ಸಿನ ಅಂತ ಬರೋಬ್ಬರಿ 22 ವರ್ಷ ಎಂದು ಹೇಳಲಾಗುತ್ತಿದೆ.

  • ಡಿ.24ಕ್ಕೆ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಮದುವೆ

    ಡಿ.24ಕ್ಕೆ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಮದುವೆ

    ಬಾಲಿವುಡ್ (Bollywood) ಖ್ಯಾತ ನಟ ಸಲ್ಮಾನ್ ಖಾನ್ ಕಿರಿಯ ಸಹೋದರ ಅರ್ಬಾಜ್ ಖಾನ್ (Arbaaz Khan) ಮದುವೆ ಇದೇ ಡಿಸೆಂಬರ್ 24ರಂದು ನಡೆಯಲಿದೆ. ಮೇಕಪ್ ಆರ್ಟಿಸ್ಟ್ ಶುರಾ ಖಾನ್ (Shura Khan) ಜೊತೆ ಅರ್ಬಾಜ್ ಮದುವೆ (Marriage) ನಡೆಯಲಿದ್ದು, ಮುಂಬೈನಲ್ಲಿರುವ ಕುಟುಂಬದ ಸದಸ್ಯರು ಮತ್ತು ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

    ಮಲೈಕಾ ಅರೋರಾ ಜೊತೆ ಅರ್ಬಾಜ್ 1998ರಲ್ಲಿ ಮದುವೆ ಆಗಿದ್ದರು. ನಂತರ ಇಬ್ಬರೂ ಡಿವೋರ್ಸ್ ಪಡೆದುಕೊಂಡು ದೂರವಾದರು. 19 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಮಲೈಕಾ ಮತ್ತು ಅರ್ಬಾಜ್ ಅವರಿಗೆ ಒಬ್ಬ ಮಗ ಕೂಡ ಇದ್ದಾನೆ. ನಂತರ ಅರ್ಬಾಜ್ ರೂಪದರ್ಶಿ ಜಾರ್ಜಿಯಾ ಜೊತೆ ಡೇಟ್ ಮಾಡುತ್ತಿದ್ದರು. ಆ ಸಂಬಂಧವೂ ಮುರಿದು ಬಿದ್ದಿದೆ.

     

    ಒಂಟಿಯಾಗಿ ಜೀವನ ನಡೆಸುತ್ತಿದ್ದ ಅರ್ಬಾಜ್ ಖಾನ್ ಇದೀಗ ಮೇಕಪ್ ಕಲಾವಿದೆ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅರ್ಬಾಜ್ ಖಾನ್ ಅವರಿಗೂ ಮತ್ತು ಶುರಾ ಖಾನ್ ಅವರ ವಯಸ್ಸಿನ ಅಂತ ಬರೋಬ್ಬರಿ 22 ವರ್ಷ ಎಂದು ಹೇಳಲಾಗುತ್ತಿದೆ.

  • ಮಗನಿಗಾಗಿ ಮತ್ತೆ ಒಂದಾದ್ರಾ ಮಲೈಕಾ-ಅರ್ಬಾಜ್? ಮಾಜಿ ಗಂಡನನ್ನು ತಬ್ಬಿಕೊಂಡ ನಟಿ

    ಮಗನಿಗಾಗಿ ಮತ್ತೆ ಒಂದಾದ್ರಾ ಮಲೈಕಾ-ಅರ್ಬಾಜ್? ಮಾಜಿ ಗಂಡನನ್ನು ತಬ್ಬಿಕೊಂಡ ನಟಿ

    ಬಾಲಿವುಡ್ (Bollywood) ನಟ ಅರ್ಬಾಜ್ ಖಾನ್ (Arbaaz Khan) ಮತ್ತು ಮಲೈಕಾ ಅರೋರಾ (Malaika Arora) ಮತ್ತೆ ಸುದ್ದಿಯಲ್ಲಿದ್ದಾರೆ. ದಾರಿ ಮಧ್ಯೆ ಮಾಜಿ ಪತಿಯನ್ನ ಮಲೈಕಾ ಅರೋರಾ ತಬ್ಬಿಕೊಂಡಿದ್ದಾರೆ. ಈ ಕುರಿತ ವೀಡಿಯೋ ನೋಡಿ ಇವರಿಬ್ಬರು ಒಂದಾದ್ರಾ ಅಂತಾ ನೆಟ್ಟಿಗರು ಕನ್ಪ್ಯೂಸ್ ಆಗಿದ್ದಾರೆ.

    ಪ್ರೀತಿಸಿ ಮದುವೆಯಾಗಿದ್ದ ಮಲೈಕಾ ಅರೋರಾ ಮತ್ತು ಅರ್ಬಾಜ್ ಜೋಡಿ ಹಲವು ವರ್ಷಗಳ ಹಿಂದೆ ಡಿವೋರ್ಸ್ ಪಡೆದು ದೂರಾಗಿದ್ದರು. ಆದರೆ ತಮ್ಮ ಮಗನಿಗಾಗಿ ಪೋಷಕರಾಗಿ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಾರೆ. ಇದೀಗ ವೈರಲ್ ಆಗಿರುವ ವೀಡಿಯೋನೇ ಸಾಕ್ಷಿ. ಅಮೆರಿಕಾದಲ್ಲಿ ಶಿಕ್ಷಣ ಪಡೆಯುತ್ತಿರುವ ಅರ್ಹಾನ್, ಮುಂಬೈನ ವಿಮಾನ ನಿಲ್ದಾಣಕ್ಕೆ ಬಂದಾಗ ಪಾಲಕರಾಗಿ ಒಟ್ಟಿಗೆ ಬಂದು ಮಗನನ್ನ ಬರಮಾಡಿಕೊಂಡರು. ಈಗ ಮತ್ತೆ ದೂರದ ದೇಶಕ್ಕೆ ಕಳುಹಿಸುವಾಗ ಜೊತೆಯಾಗಿ ಹೋಗಿದ್ದಾರೆ. ಆಗ ಅರ್ಬಾಜ್ ಮತ್ತು ಮಲೈಕಾ ತಬ್ಬಿಕೊಂಡಿದ್ದಾರೆ. ಇದನ್ನೂ ಓದಿ: ರಮ್ಯಾ ವಿರುದ್ಧ ಮತ್ತೆ ಆರೋಪಗಳ ಸುರಿಮಳೆಗೈದ ನಟ ನರೇಶ್

     

    View this post on Instagram

     

    A post shared by Viral Bhayani (@viralbhayani)

    ಹಾಗಾಗಿ ವೀಡಿಯೋ ಈಗ ಅನೇಕರ ಮನಮುಟ್ಟಿದೆ. ಇದಕ್ಕೆ ಪ್ರಭುದ್ಧತೆ ಎನ್ನುವುದು ಅಂತ ವೀಡಿಯೋಗೆ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವರಿಗೆ ಡಿವೋರ್ಸ್ (Divorce) ಆಗಿದೆ. ಇಬ್ಬರೂ ತಮ್ಮ ತಮ್ಮ ಬದುಕಿನ ದಾರಿಯಲ್ಲಿ ಮುಂದೆ ಸಾಗಿದ್ದಾರೆ. ಆದರೂ ಕೂಡ ಮಗನ ಸಲುವಾಗಿ ಅವರು ಒಂದಾಗುತ್ತಾರೆ. ಅಗತ್ಯ ಇದ್ದಾಗಲೆಲ್ಲ ಮಗನಿಗಾಗಿ ಜೊತೆಯಾಗುತ್ತಾರೆ. ಯಾರು ಏನೇ ಹೇಳಬಹುದು ಮಗನಿಗಾಗಿ ಇವರಿಬ್ಬರು ಉತ್ತಮ ಪೋಷಕರು ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್ ಅವರು ಕಿತ್ತಾಡಿಕೊಂಡಿಲ್ಲ. ಇಬ್ಬರು ಗೌರವಯುತವಾಗಿ ನಡೆದುಕೊಳ್ಳುವುದನ್ನು ಇವರನ್ನು ನೋಡಿ ಕಲಿಯಬೇಕು ಎಂದು ಹಲವು ಅಭಿಮಾನಿಗಳು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಅರ್ಬಾಜ್ ಅವರಿಂದ ದೂರಾದ ಬಳಿಕ ಮಲೈಕಾ ಅರ್ಜುನ್ ಕಪೂರ್ (Arjun Kapoor) ಜೊತೆ ಎಂಗೇಜ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುನಿಸು ಮರೆತು ಮಗನಿಗಾಗಿ ಮತ್ತೆ ಒಂದಾದ ಅರ್ಬಾಜ್- ಮಲೈಕಾ ಅರೋರಾ

    ಮುನಿಸು ಮರೆತು ಮಗನಿಗಾಗಿ ಮತ್ತೆ ಒಂದಾದ ಅರ್ಬಾಜ್- ಮಲೈಕಾ ಅರೋರಾ

    ಬಾಲಿವುಡ್ (Bollywood) ನಟಿ ಮಲೈಕಾ ಅರೋರಾ(Malaika Arora) ಮತ್ತು ಅರ್ಬಾಜ್ ಖಾನ್ (Arbaaz Khan) ಜೋಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಮಗ ಅರ್ಹಾನ್‌ಗಾಗಿ ಮಾಜಿ ದಂಪತಿ ಮಲೈಕಾ, ಅರ್ಬಾಜ್ ಮುಂಬೈ ನಿಲ್ದಾಣದಲ್ಲಿ ಕಾದು ನಿಂತಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಮಲೈಕಾ ಮತ್ತು ಅರ್ಬಾಜ್ ಖಾನ್ (Arbaaz Khan) ಪ್ರೀತಿಸಿ, ಮದುವೆಯಾದ ಜೋಡಿ ಆದರೆ ಸಾಕಷ್ಟು ವೈಯಕ್ತಿಕ ಕಾರಣದಿಂದ 2017ರಲ್ಲಿ ಡಿವೋರ್ಸ್ ಪಡೆದು ದೂರವಾಗಿದ್ದರು. ಆದರೆ ಈಗ ಮಗನಿಗಾಗಿ ಮತ್ತೆ ಜೊತೆಯಾಗಿದ್ದಾರೆ. ಹೌದು.. ಅರ್ಹಾನ್ ಖಾನ್ (Arhaan Khan) ಪ್ರಸ್ತುತ ಯುಎಸ್‌ನಲ್ಲಿ ಚಲನಚಿತ್ರ ನಿರ್ಮಾಣದ ಕೋರ್ಸ್ ಅಧ್ಯಯನ ಮಾಡ್ತಿದ್ದಾರೆ. ಇದೀಗ ಭಾರತಕ್ಕೆ ಮರಳುತ್ತಿರುವ ಮಗನನ್ನ ಸ್ವಾಗತಿಸಲು ಮುಂಬೈ ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ನಿಂತಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಇವರಿಬ್ಬರ ಡಿವೋರ್ಸ್ ನಂತರ ಅರ್ಜುನ್ ಕಪೂರ್ ಜೊತೆ ಮಲೈಕಾ ಎಂಗೇಜ್ ಆಗಿದ್ದಾರೆ. ಆದರೆ ಅಸಮಾಧಾನವನ್ನೆಲ್ಲಾ ಪಕ್ಕಕ್ಕಿಟ್ಟು ಪೋಷಕರಾಗಿರುವ ಮಲೈಕಾ, ಅರ್ಬಾಜ್ ಮಗನಿಗಾಗಿ ಜೊತೆಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಮಗ ಬಂದ ತಕ್ಷಣ ಮಲೈಕಾ ತಬ್ಬಿ, ಮುದ್ದು ಮಾಡಿದ್ದಾರೆ. ತಂದೆ ಅರ್ಬಾಜ್ ನೋಡಿ, ನಗುತ್ತಾ ಸ್ವಾಗತಿಸಿದ್ದಾರೆ. ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್

    ಇಂತಹ ಪ್ರಬುದ್ಧ ಪೋಷಕರನ್ನ ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಮುನಿಸು ಮರೆತು ಮಗನಿಗಾಗಿ ಒಂದಾದ ಜೋಡಿಗೆ ಬಗೆ ಬಗೆಯ ಕಾಮೆಂಟ್ ಮಾಡುವ ಮೂಲಕ ಭೇಷ್ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅರ್ಬಾಜ್ ಖಾನ್ ಜೊತೆಗಿನ ಡಿವೋರ್ಸ್‌ ಬಗ್ಗೆ ಮಾತನಾಡಿ ಮಲೈಕಾ ಅರೋರಾ ಕಣ್ಣೀರು

    ಅರ್ಬಾಜ್ ಖಾನ್ ಜೊತೆಗಿನ ಡಿವೋರ್ಸ್‌ ಬಗ್ಗೆ ಮಾತನಾಡಿ ಮಲೈಕಾ ಅರೋರಾ ಕಣ್ಣೀರು

    ಬಾಲಿವುಡ್ ನಟಿ ಮಲೈಕಾ ಅರೋರಾ,(Malaika Arora) ಅರ್ಜುನ್ ಕಪೂರ್ (Arjun Kapoor) ಜೊತೆಗಿನ ಡೇಟಿಂಗ್, ಮದುವೆಯ ವಿಷ್ಯವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಪ್ರೆಗ್ನೆನ್ಸಿ ವದಂತಿಗೆ ಖಡಕ್ ಆಗಿ ಉತ್ತರ ಕೊಟ್ಟ ಬೆನ್ನಲ್ಲೇ ಕಾರ್ಯಕ್ರಮವೊಂದರಲ್ಲಿ ಅರ್ಬಾಜ್ ಖಾನ್ (Arbaaz Khan) ಜೊತೆಗಿನ ಡಿವೋರ್ಸ್ ಬಗ್ಗೆ ನೆನೆದು ಕಣ್ಣೀರಿಟ್ಟಿದ್ದಾರೆ.

    ಸಲ್ಮಾನ್ ಖಾನ್ (Salman Khan) ಸಹೋದರ ಅರ್ಬಾಜ್ ಜೊತೆಗಿನ ದಾಂಪತ್ಯ ಜೀವನಕ್ಕೆ ಮಲೈಕಾ ಅಂತ್ಯ ಹಾಡಿದ ಮೇಲೆ ಸಾಕಷ್ಟು ವರ್ಷಗಳಿಂದ ಅರ್ಜುನ್ ಕಪೂರ್ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಇದೀಗ ಒಟಿಟಿಯಲ್ಲಿ `ಮೂವಿಂಗ್ ವಿತ್ ಮಲೈಕಾ'(Moving With Malaika) ಎಂಬ ಶೋ ಮೂಲಕ ಮಲೈಕಾ ಬರುತ್ತಿದ್ದಾರೆ. ಈ ವೇಳೆ ನಟಿ ಪಾಸ್ಟ್ ಲೈಫ್ ಬಗ್ಗೆ ನಟಿ ಮಾತನಾಡಿದ್ದಾರೆ. ಫರ್ಹಾ ಖಾನ್ ಜೊತೆ ನಡೆದ ಸಂವಾದದಲ್ಲಿ ಮಲೈಕಾ ತನ್ನ ಜೀವನದ ಬಗ್ಗೆ ಮಾತನಾಡಿದ್ದಾರೆ. ಅರ್ಬಾಜ್ ಖಾನ್ ಅವರಿಂದ ವಿಚ್ಛೇದನ ಪಡೆದ ಬಗ್ಗೆಯೂ ಮಾತನಾಡಿದ್ದಾರೆ. ಈ ವೇಳೆ ಮಲೈಕಾ ಕಣ್ಣೀರಿಟ್ಟರು. ಮಲೈಕಾ ಬೆಸ್ಟ್ ಫ್ರೆಂಡ್ ಕರೀನಾ ಕಪೂರ್ ಕೂಡ ಮಾತನಾಡಿ ಮಲೈಕಾರನ್ನು ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ಬ್ಯಾನ್ ಆಕ್ರೋಶಕ್ಕೆ ಡೋಂಟ್ ಕೇರ್, ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ರಶ್ಮಿಕಾ

     

    View this post on Instagram

     

    A post shared by Malaika Arora (@malaikaaroraofficial)

    ಲೈಫ್‌ನಲ್ಲಿ ನಾನು ಮುಂದೆ ಹೋಗಿದ್ದೇನೆ, ನನ್ನ ಎಕ್ಸ್ ಕೂಡ ಮುಂದೆ ಸಾಗಿದ್ದಾರೆ. ಆದರೆ ನೀವು ಯಾವಾಗ ಮುಂದೆ ಸಾಗುತ್ತೀರಿ ಎಂದು ಮಲೈಕಾ ಕೇಳಿದ್ದಾರೆ. ಮತ್ತೊಂದು ದೃಶ್ಯದಲ್ಲಿ, ಮಲೈಕಾ ತನ್ನ ಜೀವನದ ನಿರ್ಧಾರಗಳ ಬಗ್ಗೆ ಮಾತನಾಡುವಾಗ ಕಣ್ಣೀರು ಹಾಕಿದರು. ನನ್ನ ಜೀವನದಲ್ಲಿ ನಾನು ಮಾಡಿದ ಪ್ರತಿಯೊಂದು ನಿರ್ಧಾರವು ಸಂಪೂರ್ಣವಾಗಿ ಸರಿಯಾಗಿದೆ. ನಾನು ಈಗ ಸಂತೋಷವಾಗಿದ್ದೇನೆ ಎಂದು ಹೇಳಿ ಭಾವುಕರಾದರು. ಫರ್ಹಾ ಖಾನ್ ಸಮಾಧಾನ ಪಡಿಸದರು. ಅಯ್ಯೋ, ನೀನು ಅಳುತ್ತಿರುವಾಗಲೂ ಸುಂದರವಾಗಿ ಕಾಣುತ್ತೀಯ ಫರ್ಹಾ ತಮಾಷೆ ಮಾಡಿದರು.

    ಇನ್ನೂ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮದುವೆಗೂ ಮುನ್ನ ಮಲೈಕಾ ಪ್ರೆಗ್ನೆಂಟ್: ಬೆಚ್ಚಿದ ಬಿಟೌನ್

    ಮದುವೆಗೂ ಮುನ್ನ ಮಲೈಕಾ ಪ್ರೆಗ್ನೆಂಟ್: ಬೆಚ್ಚಿದ ಬಿಟೌನ್

    ಬಾಲಿವುಡ್ ನಟಿ ಮಲೈಕಾ ಅರೋರಾ ಅಚ್ಚರಿಯ ಸುದ್ದಿಯೊಂದನ್ನು ನೀಡಿದ್ದಾರೆ. ಮದುವೆಯಾಗದೇ ಮಗು ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯ ಮೂಲಕ ಬಿಟೌನ್‍ ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ. ಇದು ನಿಜವಾಗಿದ್ದರೆ ಅರೋರಾಗೆ ಇದು ಎರಡನೇ ಮಗುವಾಗಿದೆ. ಮೊನ್ನೆ ಮೊನ್ನೆಯಷ್ಟೇ ಮಲೈಕಾ, ‘ನಾನು ಎಸ್ ಅಂದೆ’ ಎಂದು ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಅವರ ಮದುವೆಗೆ ಸಂಬಂಧಿಸಿದ್ದು ಎಂದು ಹೇಳಲಾಗಿತ್ತು.

    ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಹಲವು ವರ್ಷಗಳಿಂದ ಡೇಟ್ ಮಾಡುತ್ತಿದ್ದಾರೆ. ಒಟ್ಟಿಗೆ ಹಲವಾರು ಪ್ರವಾಸಗಳನ್ನೂ ಮಾಡಿದ್ದಾರೆ. ಒಂದೇ ಮನೆಯಲ್ಲೇ ವಾಸವಿದ್ದಾರೆ ಎನ್ನುವ ಮಾತೂ ಇದೆ. ಇತ್ತೀಚೆಗಷ್ಟೇ ಈ ಜೋಡಿ ವಿದೇಶ ಪ್ರವಾಸದಲ್ಲಿತ್ತು. ಅಲ್ಲಿಂದಲೇ ‘ನಾನು ಎಸ್ ಅಂದೆ’ ಎನ್ನುವ ಪೋಸ್ಟ್ ಅನ್ನು ಮಲೈಕಾ ಮಾಡಿದ್ದರು. ಹಾಗಾಗಿ ಈ ಜೋಡಿ ಸದ್ಯದಲ್ಲೇ ಮದುವೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಪ್ರೆಗ್ನೆಂಟ್ ವಿಚಾರಕ್ಕೆ ಅವರು ಹಾಗೆ ಪೋಸ್ಟ್ ಮಾಡಿದರಾ ಅನ್ನುವ ಚರ್ಚೆ ನಡೆದಿದೆ. ಇದನ್ನೂ ಓದಿ: ಪ್ರತಿಷ್ಠಿತ ಆಭರಣ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾ ಔಟ್

    ಅರ್ಜುನ್ ಕಪೂರ್ ಜೊತೆಗಿನ ಡೇಟಿಂಗ್ ಗೂ ಮುನ್ನ ಮಲೈಕಾ ಅವರು ಅರ್ಬಾಜ್ ಖಾನ್ ಜೊತೆ ವಿವಾಹ ಮಾಡಿಕೊಂಡಿದ್ದರು. ಈ ಜೋಡಿ ಈಗಾಗಲೇ ಇಪ್ಪತ್ತರ ವಯಸ್ಸಿನ ಒಂದು ಗಂಡು ಮಗ ಕೂಡ ಇದ್ದಾನೆ. ಅರ್ಬಾಜ್ ಖಾನ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡ ನಂತರ  ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಮಲೈಕಾ ಪ್ರೆಗ್ನೆಂಟ್ ಆಗಿರುವುದು ನಿಜವಾದರೆ, ಮಲೈಕಾ ಜೀವನಕ್ಕೆ ಬಂದ ಎರಡನೇ ಮಗು ಇದಾಗಲಿದೆ.

    ಮದುವೆಯ ಸುದ್ದಿ ಕೊಟ್ಟಿದ್ದ ಮಲೈಕಾ ಮತ್ತು ಅರ್ಜುನ್, ಮದುವೆಗೂ ಮುನ್ನ ಇಂಥದ್ದೊಂದು ನಿರ್ಧಾರ ತಗೆದುಕೊಂಡಿದ್ದಾರಾ ಅಥವಾ ಇದು ಗಾಸಿಪ್ ಇರಬಹುದಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಸುದ್ದಿಯಂತೂ ಭಾರಿ ಸದ್ದು ಮಾಡುತ್ತಿರುವುದು ಸುಳ್ಳಲ್ಲ. ಈ ವಿಚಾರವಾಗಿ ಅವರೇ ಸ್ಪಷ್ಟನೆ ಕೊಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೊಂದು ಮದುವೆಗೆ ಒಪ್ಕೊಂಡ್ರಾ ಮಲೈಕಾ?: ಯಸ್ ಅಂದೆ ಅಂತ ಪೋಸ್ಟ್ ಹಾಕಿದ ನಟಿ

    ಮತ್ತೊಂದು ಮದುವೆಗೆ ಒಪ್ಕೊಂಡ್ರಾ ಮಲೈಕಾ?: ಯಸ್ ಅಂದೆ ಅಂತ ಪೋಸ್ಟ್ ಹಾಕಿದ ನಟಿ

    ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ಸೆಕ್ಸಿ ಆಗಿರುವಂತಹ ವಿಶೇಷ ಫೋಟೋವೊಂದನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಫೋಟೋದ ಜೊತೆ ಹಾಕಿರುವ ಕ್ಯಾಪ್ಷನ್ ಕೂಡ ನಾನಾ ಚರ್ಚೆಗೆ ಕಾರಣವಾಗಿದ್ದು, ಡಿಸೆಂಬರ್ ಹೊತ್ತಿಗೆ ಇವರು ಎರಡನೇ ಮದುವೆ ಆಗಲಿದ್ದಾರಾ ಎನ್ನುವ ಸುದ್ದಿಯು ದಟ್ಟವಾಗಿದೆ. ಕಳೆದ ಐದಾರು ತಿಂಗಳಿಂದ ಇವರ ಮದುವೆ ವಿಚಾರ ಹರಿದಾಡುತ್ತಿದ್ದು, ಇದೀಗ ಅದನ್ನು ಅಧಿಕೃತಗೊಳಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

    ನಾಚಿಕೊಳ್ಳುವ ಫೋಟೊದ ಜೊತೆಗೆ ‘ನಾನು ಯಸ್ ಅಂದೆ’ ಎಂದು ಅವರು ಬರೆದುಕೊಂಡಿದ್ದಾರೆ. ಹಾಗಾಗಿ ಮದುವೆಗೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ತಮಗಿಂತ ಹತ್ತು ವರ್ಷ ಚಿಕ್ಕ ವಯಸ್ಸಿನ ಅರ್ಜುನ್ ಕಪೂರ್ (Arjun Kapoor)  ಜೊತೆ ಮಲೈಕಾ ಡೇಟಿಂಗ್ ಮಾಡುತ್ತಿದ್ದು, ಅವರನ್ನೇ ಮದುವೆ ಆಗಲಿದ್ದಾರೆ. ಅರ್ಜುನ್ ಮತ್ತು ಮಲೈಕಾ ಈಗಾಗಲೇ ಒಂದೇ ಮನೆಯಲ್ಲೇ ವಾಸಿಸುತ್ತಿದ್ದು, ಮದುವೆ ಎಂಬ ಮುದ್ರೆಯಷ್ಟೇ ಬೀಳಬೇಕಿದೆ. ಇದನ್ನೂ ಓದಿ:ಮುತ್ತೆತ್ತರಾಯನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್

    1998ರಲ್ಲಿ ಸಲ್ಮಾನ್ ಖಾನ್ ಸಹೋದರ  ಅರ್ಬಾಜ್ ಖಾನ್ (Arbaaz Khan) ಅವರನ್ನು ಮದುವೆ ಆಗಿದ್ದ ಮಲೈಕಾ, ಆನಂತರ ಅವರಿಂದ ವಿಚ್ಚೇದನೆ ಪಡೆದರು. ಕೆಲ ವರ್ಷಗಳ ಕಾಲ ಒಂಟಿಯಾಗಿಯೇ ಇದ್ದರು. ಆನಂತರ  ಅರ್ಜುನ್ ಕಪೂರ್ ಜೊತೆ ಡೇಟಿಂಗ್ ನಲ್ಲಿ ತೊಡಗಿದರು. ಅರ್ಬಾಜ್ ಮತ್ತು ಮಲೈಕಾಗೆ ಓರ್ವ ಪುತ್ರನಿದ್ದು, ಮಗ ಬಂದಾಗ ಇಬ್ಬರೂ ವಿಮಾನ ನಿಲ್ದಾಣಕ್ಕೆ ಹೋಗಿ ಮಗನನ್ನು ವಿದೇಶಕ್ಕೆ ಕಳುಹಿಸಿಯೂ ಬಂದಿದ್ದರು.

    ಅಂದುಕೊಂಡಂತೆ ಎಲ್ಲ ನಡೆದರೆ, ಈ ವರ್ಷ ಡಿಸೆಂಬರ್ ಒಳಗೆ ಅರ್ಜುನ್ ಕಪೂರ್ ಮತ್ತು ಮಲೈಕೆ ವಿವಾಹವಾಗಲಿದ್ದಾರೆ. ಆಪ್ತರಷ್ಟೇ ಈ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಅರ್ಜುನ್ ಕಪೂರ್ ಕುಟುಂಬಕ್ಕೂ ವಿಷಯ ಮುಟ್ಟಿಸಿದ್ದು, ಮದುವೆಗೆ ಮಲೈಕೆ ‘ಓಕೆ’ ಎಂದಿದ್ದಾರೆ ಎನ್ನುವುದು ತಾಜಾ ಸುದ್ದಿ. ಅದನ್ನೇ ಇನ್ಸ್ಟಾದಲ್ಲಿ ಮಲೈಕೆ ಪರೋಕ್ಷವಾಗಿ ಹಂಚಿಕೊಂಡಿದ್ದಾರೆ ಎನ್ನುತ್ತಿದೆ ಬಿಟೌನ್.

    Live Tv
    [brid partner=56869869 player=32851 video=960834 autoplay=true]