Tag: ಅರ್ಧ ಶತಕ

  • ಅಗಲಿದ ಮುದ್ದು ನಾಯಿಗೆ 47ನೇ ಅರ್ಧಶತಕವನ್ನು ಅರ್ಪಿಸಿದ ರೋಹಿತ್ ಶರ್ಮಾ

    ಅಗಲಿದ ಮುದ್ದು ನಾಯಿಗೆ 47ನೇ ಅರ್ಧಶತಕವನ್ನು ಅರ್ಪಿಸಿದ ರೋಹಿತ್ ಶರ್ಮಾ

    ಗುವಾಹಟಿ: ಅಗಲಿದ ತಮ್ಮ ಮುದ್ದು ನಾಯಿಗೆ (Dog) ತಮ್ಮ 47ನೇ ಅರ್ಧಶತಕವನ್ನು (Half Century) ನಾಯಕ ರೋಹಿತ್ ಶರ್ಮಾ (Rohit Sharma) ಅರ್ಪಿಸಿದ್ದಾರೆ.

    ಶ್ರೀಲಂಕಾ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತದ ಪರ ಮೊದಲ ವಿಕೆಟಿಗೆ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ 118 ಎಸೆತಗಳಿಗೆ 143 ರನ್ ಜೊತೆಯಾಟ ನೀಡಿದರು. ಶುಭಮನ್ ಗಿಲ್ 70 ರನ್(60 ಎಸೆತ, 11 ಬೌಂಡರಿ) ಹೊಡೆದರೆ ರೋಹಿತ್ ಶರ್ಮಾ 83 ರನ್( 67 ಎಸೆತ, 9 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು.

    ಈ ಹಿಂದೆ ಬಾಂಗ್ಲಾದೇಶದ ಸರಣಿಯಲ್ಲಿ ಗಾಯಗೊಂಡು ಪಂದ್ಯಕ್ಕೆ ಕಂಬ್ಯಾಕ್ ಮಾಡಿದ್ದ ರೋಹಿತ್ ಶರ್ಮಾ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ (ಒಡಿಐ) 47ನೇ ಅರ್ಧ ಶತಕ ಬಾರಿಸಿದ ಬಳಿಕ ಆಕಾಶದತ್ತ ನೋಡುತ್ತಾ ತಮ್ಮ ಪ್ರೀತಿಯ ನಾಯಿಯನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಶತಕ ಹೊಡೆದು ಸಚಿನ್‌ ದಾಖಲೆ ಸರಿಗಟ್ಟಿದ ಕಿಂಗ್‌ ಕೊಹ್ಲಿ

     

    View this post on Instagram

     

    A post shared by Ritika Sajdeh (@ritssajdeh)

    ಈ ಬಗ್ಗೆ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸಾಕು ನಾಯಿಯ ಭಾವನಾತ್ಮಕ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಸೋಮವಾರ ನಮ್ಮ ಜೀವನದ ಅತ್ಯಂತ ಕಠಿಣವಾದ ದಿನವಾಗಿತ್ತು. ನಾವು ನಮ್ಮ ಜೀವನದ ಪ್ರೀತಿಯ ನಾಯಿಗೆ ವಿದಾಯ ಹೇಳಿದೆವು. ನಮ್ಮ ಮೊದಲ ಪ್ರೀತಿ, ಮೊದಲ ಮಗು, ಇದುವರೆಗೆ ಬದುಕಿದ್ದ ಅತ್ಯಂತ ಸೌಮ್ಯವಾದ ಜೀವ. ನಿನ್ನನ್ನು ಮತ್ತೆ ಭೇಟಿಯಾಗುವವರೆಗೆ ನಮ್ಮ ಜೀವನದಲ್ಲಿ ಸಂತೋಷ ಕಡಿಮೆಯಿರುತ್ತದೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: Top Performing Airports 2022 – ವಿಶ್ವದಲ್ಲೇ ಬೆಂಗಳೂರು ನಂ.2

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೊಹ್ಲಿ V/s ರೋಹಿತ್: ಮೊದಲ ಸ್ಥಾನಕ್ಕಾಗಿ ಪೈಪೋಟಿ

    ಕೊಹ್ಲಿ V/s ರೋಹಿತ್: ಮೊದಲ ಸ್ಥಾನಕ್ಕಾಗಿ ಪೈಪೋಟಿ

    ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವಿನ ರನ್ ಗಳಿಕೆಯ ಪೈಪೋಟಿ ಮುಂದುವರೆದಿದ್ದು, ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ ಯಾರು ಟಾಪ್ ಸ್ಥಾನ ಪಡೆಯಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

    ಅಂತರಾಷ್ಟ್ರೀಯ ಟಿ20 ಮಾದರಿಯಲ್ಲಿ ರೋಹಿತ್ ಶರ್ಮಾ 93 ಇನ್ನಿಂಗ್ಸ್ ಗಳಲ್ಲಿ 2,539 ರನ್ ಗಳಿಸಿದ್ದು, ಕೊಹ್ಲಿ 67 ಇನ್ನಿಂಗ್ಸ್ ಗಳಲ್ಲಿ 2,450 ರನ್ ಗಳಿಸಿದ್ದಾರೆ. ಇದರೊಂದಿಗೆ ಟಿ20 ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 2 ಸ್ಥಾನಗಳಲ್ಲಿ ರೋಹಿತ್, ಕೊಹ್ಲಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ನ್ಯೂಜಿಲೆಂಡ್ ಆಟಗಾರ ಮಾರ್ಟಿನ್ ಗಪ್ಟಿಲ್ 2,436 ರನ್ ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಸರಣಿಯಲ್ಲಿ ರೋಹಿತ್ ಶರ್ಮಾ ತಮ್ಮ ನಂ.1 ಸ್ಥಾನವನ್ನು ಉಳಿಸಿಕೊಳ್ಳುತ್ತಾರಾ ಅಥವಾ ಕೊಹ್ಲಿ ಈ ಸ್ಥಾನ ಪಡೆಯುತ್ತಾರಾ ಎಂಬ ಕುತೂಹಲ ಮೂಡಿದೆ. ಅಲ್ಲದೇ ಟಿ-20 ಮಾದರಿಯಲ್ಲಿ 50+ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲೂ ಕೊಹ್ಲಿ, ರೋಹಿತ್ ಶರ್ಮಾ ನಡುವೆ ಪೈಪೋಟಿ ಸಾಗಿದ್ದು, ಇಬ್ಬರು ಆಟಗಾರರೂ ತಲಾ 22 ಬಾರಿ 50+ ರನ್ ಗಳಿಸಿ ಜಂಟಿಯಾಗಿ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ಇದರಲ್ಲಿ ರೋಹಿತ್ ಶರ್ಮಾ 18 ಅರ್ಧ ಶತಕ, 4 ಶತಕ ಗಳಿಸಿದ್ದರೆ, ಕೊಹ್ಲಿ 22 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ಪಟ್ಟಿಯಲ್ಲೂ ಮಾರ್ಟಿನ್ ಗಪ್ಟಿಲ್ 17 ಅರ್ಧ ಶತಕಗಳೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ಶುಕ್ರವಾರದಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ಹೈದರಾಬಾದ್‍ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ.

  • ಹ್ಯಾಟ್ರಿಕ್ ಫಿಫ್ಟಿ – ಟೀಕೆಗಳಿಗೆ ಬ್ಯಾಟ್‍ನಿಂದಲೇ ಉತ್ತರಿಸಿದ ಎಂಎಸ್‍ಡಿ

    ಹ್ಯಾಟ್ರಿಕ್ ಫಿಫ್ಟಿ – ಟೀಕೆಗಳಿಗೆ ಬ್ಯಾಟ್‍ನಿಂದಲೇ ಉತ್ತರಿಸಿದ ಎಂಎಸ್‍ಡಿ

    ಮೆಲ್ಬರ್ನ್: ಕಳಪೆ ಪ್ರದರ್ಶನದ ಕಾರಣ ನೀಡಿ ನಿವೃತ್ತಿ ನೀಡುವಂತೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ಟೀಕೆ ಮಾಡಿದ್ದವರಿಗೆ ಎಂಎಸ್‍ಡಿ ಹ್ಯಾಟ್ರಿಕ್ ಫಿಫ್ಟಿ ಸಿಡಿಸುವ ಮೂಲಕ ಉತ್ತರಿಸಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧ ಏಕದಿನ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿರುವ ಧೋನಿ ಹ್ಯಾಟ್ರಿಕ್ ಫಿಫ್ಟಿ ಸಿಡಿಸಿ ವೃತ್ತಿ ಜೀವನದ 70ನೇ ಅರ್ಧ ಶತಕ ಪೂರೈಸಿದರು. ಉಳಿದಂತೆ ಮೊದಲ ಪಂದ್ಯದಲ್ಲಿ 96 ಎಸೆತಗಳಲ್ಲಿ 51 ರನ್, 2ನೇ ಪಂದ್ಯದಲ್ಲಿ 54 ಎಸೆತಗಳಲ್ಲಿ 55* ರನ್ ಹಾಗೂ 3ನೇ ಪಂದ್ಯದಲ್ಲಿ 114 ಎಸೆತಗಳಲ್ಲಿ 87* ರನ್ ಸಿಡಿಸಿದ್ದಾರೆ.

    ಧೋನಿ ಈ ಹಿಂದೆ 2 ಬಾರಿ ಹ್ಯಾಟ್ರಿಕ್ ಅರ್ಧ ಶತಕ ಗಳಿಸಿದ ಸಾಧನೆ ಮಾಡಿದ್ದು, 2011 ಇಂಗ್ಲೆಂಡ್, 2014 ನ್ಯೂಜಿಲೆಂಡ್, ಸರಣಿಯಲ್ಲಿ ಹ್ಯಾಟ್ರಿಕ್ ಅರ್ಧ ಶತಕ ಸಿಡಿಸಿದ್ದರು. ಉಳಿದಂತೆ 2018ರಲ್ಲಿ 13 ಇನ್ನಿಂಗ್ಸ್ ಗಳನ್ನು ಆಡಿದ್ದ ಧೋನಿ ಒಂದು ಅರ್ಧ ಶತಕ ಕೂಡ ಗಳಿಸಿರಲಿಲ್ಲ. ಅಲ್ಲದೇ 2018ರಲ್ಲಿ 20 ಏಕದಿನ ಪಂದ್ಯಗಳಿಂದ 275 ರನ್ ಮಾತ್ರ ಗಳಿಸಿದ್ದರು.

    ಟೀಂ ಇಂಡಿಯಾ ಪರ ಧೋನಿ 6ನೇ ಬಾರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಹಿಂದೆ ಸಚಿನ್ 14 ಬಾರಿ, ಯುವರಾಜ್ ಸಿಂಗ್ 7 ಬಾರಿ ಹಾಗೂ ಸೌರವ್ ಗಂಗೂಲಿ, ಕೊಹ್ಲಿ ತಲಾ 6 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

    1 ಸಾವಿರ ರನ್: ಧೋನಿ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಆಸೀಸ್ ವಿರುದ್ಧ ಏಕದಿನ ಮಾದರಿಯಲ್ಲಿ 1 ಸಾವಿರ ರನ್ ಪೂರೈಸಿದರು. ಈ ಮೂಲಕ ಸಚಿನ್, ಕೊಹ್ಲಿ, ರೋಹಿತ್ ಶರ್ಮಾ ಬಳಿಕ ಈ ಸಾಧನೆ ಮಾಡಿದ ಭಾರತೀಯ ಆಟಗಾರ ಎನಿಸಿಕೊಂಡರು.

    ನಂ.4: ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ, ಧೋನಿ ಪರ ಬ್ಯಾಟ್ ಮಾಡಿದ್ದರು. ಈ ವೇಳೆ ಧೋನಿಗೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಅವಕಾಶ ನೀಡುವುದು ಉತ್ತಮ ಎಂದು ತಿಳಿಸಿದ್ದರು. ಈ ಕುರಿತು ಅರಿತ ನಾಯಕ ಕೊಹ್ಲಿ, ಧೋನಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿದ್ದರು. ಒಟ್ಟಾರೆ 2018ರ ವೈಫಲ್ಯಗಳ ಧೋನಿ ಬ್ಯಾಟಿಂಗ್‍ನಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಾರ್ನರ್ ದಾಖಲೆ ಸರಿಗಟ್ಟಿದ ಗೌತಮ್ ಗಂಭೀರ್

    ವಾರ್ನರ್ ದಾಖಲೆ ಸರಿಗಟ್ಟಿದ ಗೌತಮ್ ಗಂಭೀರ್

    ಮೊಹಾಲಿ: ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕ ಗೌತಮ್ ಗಂಭೀರ್ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ಐಪಿಎಲ್ ಟೂರ್ನಿಯಲ್ಲಿ ಹೆಚ್ಚು ಅರ್ಧಶತಕ ಹೊಡೆದಿದ್ದ ವಾರ್ನರ್ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಐಪಿಎಲ್ ಟೂರ್ನಿಯಲ್ಲಿ ಈ ಮೂಲಕ 36 ನೇ ಅರ್ಧಶತಕ ಸಿಡಿಸಿದ ಗಂಭೀರ್ ಪಟ್ಟಿಯಲ್ಲಿ ಆಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ. ಸದ್ಯ ಚೆಂಡು ವಿರೂಪಗೊಳಿದ ಪ್ರಕರಣದಲ್ಲಿ ಐಪಿಎಲ್ ನಿಂದ ಹೊರಗುಳಿದಿರುವ ವಾರ್ನರ್ ದಾಖಲೆಯನ್ನು ಗಂಭೀರ್ ಮುರಿಯುವ ಅವಕಾಶವಿದೆ. ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ (32) ಮೂರನೇ ಸ್ಥಾನ, ಸುರೇಶ್ ರೈನಾ (31) 4ನೇ ಸ್ಥಾನ, ಆರ್ ಸಿಬಿ ನಾಯಕ ಕೊಹ್ಲಿ (30) ನಂತರದ ಸ್ಥಾನ ಪಡೆದಿದ್ದಾರೆ.

    ಐಪಿಎಲ್ 11 ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಗೌತಮ್ ಗಂಭೀರ್ ಅರ್ಧ ಶತಕ ಗಳಿಸಿದ್ದಾರೆ. ಪಂದ್ಯದಲ್ಲಿ 36 ಎಸೆತಗಳಲ್ಲಿ 1 ಸಿಕ್ಸರ್, 4 ಬೌಂಡರಿ ನೆರವಿನಿಂದ ಅರ್ಧಶತಕ ಸಿಡಿಸಿದರು.

    ಕಳೆದ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ನಾಯಕತ್ವ ವಹಿಸಿದ್ದ ಗಂಭೀರ್ ಈ ಬಾರಿ ಡೆಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

    ಗಂಭೀರ್ ಕಳೆದ 10 ಆವೃತ್ತಿಗಳ ಆರಂಭಿಕ ಪಂದ್ಯಗಳಲ್ಲಿ ಗಳಿದ ಪಟ್ಟಿ: 58 , 15, 72, 1, 0, 41, 0, 57, 38, 76, 50. ಒಟ್ಟಾರೆ 11 ಆವೃತ್ತಿಗಳ ಆರಂಭಿಕ ಪಂದ್ಯಗಳಲ್ಲಿ 68 ರನ್ ಸರಾಸರಿ ಯೊಂದಿಗೆ 5 ಅರ್ಧಶತಕಗಳನ್ನು ಸಿಡಿಸಿದ್ದಾರೆ.