ಬ್ಯೂನಸ್ ಐರಿಸ್: ಮಾದಕ ವ್ಯಸನಿಗಳ ಗ್ಯಾಂಗ್‌ವೊಂದು ಅರ್ಜೆಂಟೀನಾದ ಮೂವರು ಯುವತಿಯರ ಹತ್ಯೆ ಮಾಡಿದ್ದು, ಕೊಲೆಯ ದೃಶ್ಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೇರಪ್ರಸಾರ ಮಾಡಿರುವ ಘಟನೆ ನಡೆದಿದೆ.
ಐರಿಸ್‌ನ ದಕ್ಷಿಣ ಉಪನಗರದಲ್ಲಿರುವ ಮನೆಯ ಅಂಗಳದಲ್ಲಿ ಮೂವರ ಅಂತ್ಯಕ್ರಿಯೆ ನಡೆಸಲಾಗಿದೆ. ‘ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ನೀಡಬೇಕು’ ಎಂದು ಬ್ರೆಂಡಾಳ ತಂದೆ ಲಿಯೋನೆಲ್ ಡೆಲ್ ಕ್ಯಾಸ್ಟಿಲ್ಲೊ ಪ್ರತಿಭಟನೆ ಆಗ್ರಹಿಸಿದ್ದಾರೆ. ನನ್ನ ಮಗಳ ದೇಹವನ್ನು ಗುರುತಿಸಲು ಸಾಧ್ಯವಾಗದ ಮಟ್ಟಿಗೆ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾರೆಂದು ಕಣ್ಣೀರಿಟ್ಟಿದ್ದಾರೆ.
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಜು.2 ರಿಂದ 9ರವರೆಗೆ ವಿದೇಶ ಪ್ರವಾಸಕ್ಕೆ ತೆರಳಲಿದ್ದು, ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ.
ಗ್ಲೋಬಲ್ ಸೌತ್ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಬಲಪಡಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ. `ಆಪರೇಷನ್ ಸಿಂಧೂರ’ (Operation Sindoor) ಮೂಲಕ ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ಜಾಗತಿಕವಾಗಿ ಮಂಡಿಸುವುದು ಮತ್ತು ರಾಜತಾಂತ್ರಿಕ ಸಹಕಾರವನ್ನು ಉತ್ತೇಜಿಸುವುದಾಗಿದೆ. ಈ ಭೇಟಿಯು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುವುದರ ಜೊತೆಗೆ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಗುರಿಯನ್ನು ಹೊಂದಿದೆ.ಇದನ್ನೂ ಓದಿ: ಸಾರ್ವಕಾಲಿಕ ದಾಖಲೆಯತ್ತ ತೆಂಗಿನಕಾಯಿ ದರ – ಕೆಜಿಗೆ ಬರೋಬ್ಬರಿ 70-80 ರೂ.
ಘಾನಾ:
ನಾಳೆ ವಿದೇಶ ಪ್ರವಾಸ ಕೈಗೊಳ್ಳಲಿರುವ ಮೋದಿ ಮೊದಲು ಘಾನಾ ದೇಶಕ್ಕೆ ಭೇಟಿ ನೀಡಲಿದ್ದಾರೆ. ಕಳೆದ 30 ವರ್ಷಗಳಲ್ಲಿ ಭಾರತದ ಪ್ರಧಾನಮಂತ್ರಿಯ ಮೊದಲ ಭೇಟಿ ಇದಾಗಿದೆ. ಜುಲೈ 2-3ರಂದು ನಡೆಯುವ ಈ ಭೇಟಿಯಲ್ಲಿ ಘಾನಾದ ರಾಷ್ಟ್ರಪತಿ ಜಾನ್ ಡ್ರಮಾನಿ ಮಹಾಮಾರೊಡನೆ ಮಾತುಕತೆ ನಡೆಸಲಿದ್ದಾರೆ. ಆರ್ಥಿಕ ಸಹಕಾರ, ಲಸಿಕೆ ಉತ್ಪಾದನಾ ಕೇಂದ್ರ ಸ್ಥಾಪನೆ, ಡಿಜಿಟಲ್ ತಂತ್ರಜ್ಞಾನ ಮತ್ತು ಕೃಷಿ ಕ್ಷೇತ್ರದಲ್ಲಿ ಸಹಕಾರವನ್ನು ವೃದ್ಧಿಗೊಳಿಸುವುದು ಈ ಭೇಟಿಯ ಮುಖ್ಯ ಗುರಿಯಾಗಿದೆ. ಭಾರತ ಮತ್ತು ಘಾನಾದ ದ್ವಿಪಕ್ಷೀಯ ವ್ಯಾಪಾರವು 3 ಬಿಲಿಯನ್ ಡಾಲರ್ ಮೌಲ್ಯದ್ದಾಗಿದ್ದು, ಭಾರತವು ಘಾನಾದಿಂದ ಚಿನ್ನವನ್ನು ಆಮದು ಮಾಡಿಕೊಳ್ಳುವ ಪ್ರಮುಖ ರಾಷ್ಟ್ರವಾಗಿದೆ. ಈ ವೇಳೆ ಮೋದಿಯವರು ಘಾನಾದ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಟ್ರಿನಿಡಾಡ್ ಮತ್ತು ಟೊಬಾಗೊ
ಜುಲೈ 3-4ರಂದು ಮೋದಿ ಟ್ರಿನಿಡಾಡ್ ಮತ್ತು ಟೊಬಾಗೊ ದೇಶಕ್ಕೆ ಭೇಟಿ ನೀಡಲಿದ್ದಾರೆ, 1999ರ ನಂತರ ಭಾರತದ ಪ್ರಧಾನಮಂತ್ರಿಯ ಮೊದಲ ಭೇಟಿ ಇದಾಗಿದೆ. ಈ ವರ್ಷ ಭಾರತೀಯ ವಲಸಿಗರು ಈ ದೇಶಕ್ಕೆ ಆಗಮಿಸಿದ 180ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ಭೇಟಿಯು ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಟ್ರಿನಿಡಾಡ್‌ನ ರಾಷ್ಟ್ರಪತಿ ಕ್ರಿಸ್ಟಿನ್ ಕಾಂಗಲೂ ಮತ್ತು ಪ್ರಧಾನಮಂತ್ರಿ ಕಮಲಾ ಪರ್ಸಾದ್-ಬಿಸ್ಸೇಸರ್ ಇಬ್ಬರೂ ಭಾರತೀಯ ಮೂಲದವರಾಗಿದ್ದಾರೆ. ಇದು ಈ ಭೇಟಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಮೋದಿಯವರು ಟ್ರಿನಿಡಾಡ್ ಸಂಸತ್ತಿನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಯುಪಿಐ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ಒಪ್ಪಂದವನ್ನು ಮಾಡಿಕೊಳ್ಳಲಾಗುವುದು.
ಅರ್ಜೆಂಟೀನಾ
ಜುಲೈ 4-5ರಂದು, ಮೋದಿಯವರು ಅರ್ಜೆಂಟೀನಾಕ್ಕೆ ಭೇಟಿ ನೀಡಿ ರಾಷ್ಟ್ರಪತಿ ಜೇವಿಯರ್ ಮಿಲೇ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. 57 ವರ್ಷಗಳಲ್ಲಿ ಭಾರತದ ಪ್ರಧಾನ ಮಂತ್ರಿಯ ಮೊದಲ ಭೇಟಿ ಇದಾಗಿದೆ. ರಕ್ಷಣಾ ಸಹಕಾರ, ಕೃಷಿ, ಗಣಿಗಾರಿಕೆ, ಶೆಲ್ ಗ್ಯಾಸ್ ಮತ್ತು ನವೀಕರಣ ಶಕ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ವೃದ್ಧಿಗೊಳಿಸುವುದು ಈ ಭೇಟಿಯ ಗುರಿಯಾಗಿದೆ. ಅರ್ಜೆಂಟೀನಾದಲ್ಲಿ ಭಾರತದ ಗಣಿಗಾರಿಕೆ ಕಂಪನಿಯಾದ KABIL ಲಿಥಿಯಂ ಮತ್ತು ತಾಮ್ರದಂತಹ ಅಪರೂಪದ ಖನಿಜಗಳ ಶೋಧನೆಗೆ ಒಪ್ಪಂದವನ್ನು ಮಾಡಿಕೊಂಡಿದೆ.
ಬ್ರೆಜಿಲ್:
ಜುಲೈ 5-8 ರಂದು, ಮೋದಿಯವರು ಬ್ರೆಜಿಲ್‌ಗೆ ಭೇಟಿ ನೀಡಿ 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಶೃಂಗಸಭೆಯು ಜಾಗತಿಕ ಆಡಳಿತ ಸುಧಾರಣೆ, ಶಾಂತಿ, ಎಐ ನಿಯಂತ್ರಣ, ಹವಾಮಾನ ಬದಲಾವಣೆ ಮತ್ತು ಆರೋಗ್ಯ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲಿದೆ. ಭಾರತವು 2026ರಲ್ಲಿ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ. ಬ್ರೆಜಿಲ್‌ನ ರಾಷ್ಟ್ರಪತಿ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಜೊತೆ ದ್ವಿಪಕ್ಷೀಯ ಮಾತುಕತೆಯಲ್ಲಿ ರಕ್ಷಣಾ ಉತ್ಪಾದನೆ, ಸಮುದ್ರ ಗಸ್ತು ಹಡಗುಗಳು, ಮತ್ತು ಆಕಾಶ್ ಕ್ಷಿಪಣಿ ವ್ಯವಸ್ಥೆಯಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಗಟ್ಟಿಗೊಳಿಸಲಾಗುವುದು. `ಆಪರೇಷನ್ ಸಿಂಧೂರ’ದಲ್ಲಿ ಬಳಸಲಾದ ಭಾರತದ ರಕ್ಷಣಾ ತಂತ್ರಜ್ಞಾನದ ಬಗ್ಗೆ ಬ್ರೆಜಿಲ್ ಆಸಕ್ತಿಯನ್ನು ತೋರಿದೆ.ಇದನ್ನೂ ಓದಿ: ರಾಜ್ಯದಲ್ಲಿ ಐದೂವರೆ ವರ್ಷದಲ್ಲಿ 82 ಹುಲಿಗಳ ಸಾವು; ಸಮಗ್ರ ವರದಿ ಕೇಳಿದ ಅರಣ್ಯ ಸಚಿವ
ನಮೀಬಿಯಾ:
ಭೇಟಿಯ ಕೊನೆಯ ತಾಣವಾದ ನಮೀಬಿಯಾಕ್ಕೆ ಜುಲೈ 9 ರಂದು ಮೋದಿಯವರು ಭೇಟಿ ನೀಡಲಿದ್ದಾರೆ. 27 ವರ್ಷಗಳಲ್ಲಿ ಭಾರತದ ಪ್ರಧಾನಮಂತ್ರಿಯ ಮೊದಲ ಭೇಟಿ ಇದಾಗಿದೆ. ನಮೀಬಿಯಾದ ರಾಷ್ಟ್ರಪತಿ ನೆಟುಂಬೊ ನಾಂಡಿ-ನ್ಡೈತ್ವಾಹ್ ಜೊತೆ ಮಾತುಕತೆ ನಡೆಸಲಾಗುವುದು ಮತ್ತು ಯುಪಿಐ ವ್ಯವಸ್ಥೆಯನ್ನು ಜಾರಿಗೆ ತರಲು ಒಪ್ಪಂದವನ್ನು ಮಾಡಿಕೊಳ್ಳಲಾಗುವುದು. ಮೋದಿಯವರು ನಮೀಬಿಯಾದ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಡಿಕೋಲನೈಸೇಶನ್ ಐಕಾನ್ ಸ್ಯಾಮ್ ನುಜೋಮಗೆ ಗೌರವ ಸಲ್ಲಿಸಲಿದ್ದಾರೆ.
ಭಯೋತ್ಪಾದನೆಯ ವಿರುದ್ಧ ಜಾಗತಿಕ ನಿಲುವು
ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಮೇ 7ರಂದು ಪಾಕಿಸ್ತಾನದಲ್ಲಿನ ಉಗ್ರರ ತಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಕಾರ್ಯಾಚರಣೆಯೇ `ಆಪರೇಷನ್ ಸಿಂಧೂರ’. ಈ ಭೇಟಿಯು ಪ್ರಮುಖವಾಗಿ ಈ ಕಾರ್ಯಾಚರಣೆಗೆ ಸಂಬಂಧಿಸಿದೆ. ಇದು ಭಯೋತ್ಪಾದನೆಯ ವಿರುದ್ಧ ಭಾರತದ ಜಾಗತಿಕ ಕರೆಗೆ ಬೆಂಬಲವನ್ನು ಕೋರಲಿದೆ.
ಗ್ಲೋಬಲ್ ಸೌತ್‌ನೊಂದಿಗೆ ಭಾರತದ ರಾಜತಾಂತ್ರಿಕತೆ
ಈ ಐದು ರಾಷ್ಟ್ರಗಳ ಭೇಟಿಯು ಗ್ಲೋಬಲ್ ಸೌತ್ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಬಲಪಡಿಸುವ ಒಂದು ಕಾರ್ಯತಂತ್ರದ ಹೆಜ್ಜೆಯಾಗಿದೆ. ರಕ್ಷಣಾ ಸಹಕಾರ, ಡಿಜಿಟಲ್ ಮೂಲಸೌಕರ್ಯ, ಕೃಷಿ, ಮತ್ತು ಶಕ್ತಿಯಂತಹ ಕ್ಷೇತ್ರಗಳಲ್ಲಿ ಭಾರತವು ತನ್ನ ಪಾಲುದಾರಿಕೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.ಇದನ್ನೂ ಓದಿ: ಎಷ್ಟೇ ದುಡ್ಡು ಕೊಟ್ರೂ `ಆ’ ಕೆಲಸ ಮಾಡಲ್ಲವೆಂದ ರಶ್ಮಿಕಾ!
ನವದೆಹಲಿ: ಭಾರತ (India) ಮತ್ತು ಅರ್ಜೆಂಟೀನಾ (Argentina) ನಡುವೆ 5 ಲಿಥಿಯಂ ಬ್ಲಾಕ್‌ಗಳ ಪರಿಶೋಧನೆ ಹಾಗೂ ಗಣಿಗಾರಿಕೆಗೆ ಒಪ್ಪಂದ ಏರ್ಪಟ್ಟಿದೆ.
ಅರ್ಜೆಂಟೀನಾದ ಕ್ಯಾಟಮಾರ್ಕಾ ಪ್ರಾಂತ್ಯದಲ್ಲಿ 5 ಲಿಥಿಯಂ ಬ್ಲಾಕ್‌ಗಳ ಪರಿಶೋಧನೆ ಮತ್ತು ಗಣಿಗಾರಿಕೆ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ ಎಂದು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಟ್ವಿಟ್ಟರ್ ಮೂಲಕ ಮಾಹಿತಿ ರವಾನಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ರೇಸ್‌ನಿಂದ ಹೊರಗುಳಿದ ಭಾರತೀಯ ಮೂಲದ ವಿವೇಕ್ – ಟ್ರಂಪ್‌ಗೆ ಬೆಂಬಲ
ಅರ್ಜೆಂಟೀನಾದಲ್ಲಿ 5 ಲಿಥಿಯಂ ಬ್ಲಾಕ್‌ಗಳಲ್ಲಿ ಗಣಿಗಾರಿಕೆ (Lithium Mining) ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಹಿ ಹಾಕುವ ಮೂಲಕ ಭಾರತ ಹೊಸ ಮೈಲಿಗಲ್ಲು ಸಾಧಿಸಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಎಂಎಸ್ ಧೋನಿಗೆ ಆಹ್ವಾನ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಅರ್ಜೆಂಟೀನಾ (Argentina) ಫುಟ್‌ಬಾಲ್ ತಂಡದ ನಾಯಕ ಲಿಯೊನೆಲ್ ಮೆಸ್ಸಿ (Lionel Messi) ಹೆಸರಿನ ಜೆರ್ಸಿಯನ್ನು ಉಡುಗೊರೆಯಾಗಿ ನೀಡಲಾಗಿದೆ.
ಬೆಂಗಳೂರಿನಲ್ಲಿ (Bengaluru) ನಡೆದ ಇಂಡಿಯಾ ಎನರ್ಜಿ ವೀಕ್‌ನ ಅಂಗವಾಗಿ ಅರ್ಜೆಂಟೀನಾದ ವೈಪಿಎಫ್ ಅಧ್ಯಕ್ಷ ಪಾಬ್ಲೊ ಗೊನ್ಜಾಲೆಜ್ ಅವರು, ವಿಶ್ವಕಪ್ ವಿಜೇತ ಚಾಂಪಿಯನ್ ಲಿಯೊನೆಲ್ ಮೆಸ್ಸಿ ಅವರ ಹೆಸರನ್ನು ಒಳಗೊಂಡ ಅರ್ಜೆಂಟೀನಾ ಫುಟ್‌ಬಾಲ್ ತಂಡದ ಜೆರ್ಸಿಯನ್ನು (Messi Jersey) ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ – ವಿಕ್ಟೋರಿಯಾ ಗೌರಿ ಪ್ರಮಾಣ ವಚನ ಸ್ವೀಕಾರ
This will be remembered as one of the most thrilling Football matches! Congrats to Argentina on becoming #FIFAWorldCup Champions! They’ve played brilliantly through the tournament. Millions of Indian fans of Argentina and Messi rejoice in the magnificent victory! @alferdez
ಕಳೆದ ವರ್ಷ ಡಿಸೆಂಬರ್‌ನಲ್ಲಿ ಅರ್ಜೆಂಟೀನಾ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡದ ವಿರುದ್ಧ ಜಯಗಳಿಸಿತು. ಅರ್ಜೆಂಟೀನಾ ಪೆನಾಲ್ಟಿಗಳಲ್ಲಿ 4-2 ಗೋಲುಗಳಿಂದ ಅಂತಿಮ ಪಂದ್ಯವನ್ನು ಗೆದ್ದುಕೊಂಡಿತು.
ಫಿಫಾ 2022 ವಿಶ್ವಕಪ್ (FIFA World Cup 2022) ಗೆದ್ದ ಅರ್ಜೆಂಟೀನಾವನ್ನು ಅಭಿನಂದಿಸಿದ್ದ ಪ್ರಧಾನಿ ಮೋದಿ, ಅರ್ಜೆಂಟೀನಾ ಮತ್ತು ಲಿಯೊನೆಲ್ ಮೆಸ್ಸಿ ಅವರ ವಿಜಯವನ್ನು ಲಕ್ಷಾಂತರ ಭಾರತೀಯರು ಆಚರಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದರು.
“ಇದು ಅತ್ಯಂತ ರೋಮಾಂಚಕ ಫುಟ್‌ಬಾಲ್ ಪಂದ್ಯಗಳಲ್ಲಿ ಒಂದಾಗಿ ನೆನಪಿನಲ್ಲಿ ಉಳಿಯುತ್ತದೆ. FIFA World Cup ಚಾಂಪಿಯನ್ ಆದ ಅರ್ಜೆಂಟೀನಾಗೆ ಅಭಿನಂದನೆಗಳು. ಟೂರ್ನಿಯಲ್ಲಿ ಅವರು ಅದ್ಭುತವಾಗಿ ಆಡಿದ್ದಾರೆ. ಅರ್ಜೆಂಟೀನಾ ಮತ್ತು ಮೆಸ್ಸಿಯ ಲಕ್ಷಾಂತರ ಭಾರತೀಯ ಅಭಿಮಾನಿಗಳು ವಿಜಯದಲ್ಲಿ ಭಾಗಿಯಾಗಿದ್ದಾರೆ” ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದರು. ಇದನ್ನೂ ಓದಿ: T20I ನಾಯಕ ಆರನ್ ಫಿಂಚ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ
Live Tv
[brid partner=56869869 player=32851 video=960834 autoplay=true]
ಲುಸೈಲ್: ಅರ್ಜೆಂಟೀನಾ(Argentina) ವಿರುದ್ಧದ ಫೈನಲ್‌ನಲ್ಲಿ ಹ್ಯಾಟ್ರಿಕ್ ಗೋಲು ಹೊಡೆದು ಕೊನೆಯವರೆಗೆ ಹೋರಾಡಿದ್ದ 23 ವರ್ಷದ ಕಿಲಿಯನಾ ಎಂಬಾಪೆಗೆ(Kylian Mbappe) ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರನ್ ಸಮಾಧಾನ ಮಾಡಿದ್ದಾರೆ.
ಪಂದ್ಯ ಸೋತ ಬಳಿಕ ಎಂಬಾಪೆ ಮೈದಾನದಲ್ಲೇ ಕುಳಿತು ಅಳುತ್ತಿದ್ದರು. ಈ ವೇಳೆ ಎಂಬಾಪೆ ಬಳಿ ತೆರಳಿದ ಮ್ಯಾಕ್ರನ್(Emmanuel Macron) ಸಮಾಧಾನ ಹೇಳಿದ್ದಾರೆ. ಅರ್ಜೆಂಟೀನಾದ ಗೋಲ್‌ಕೀಪರ್ ಎಮಿಲಿಯಾನೋ ಮಾರ್ಟಿನೆಜ್ ಕೂಡ ಇದ್ದರು. ಪಂದ್ಯ ಮುಗಿದ ಬಳಿಕ ತಂಡದ ಡ್ರೆಸ್ಸಿಂಗ್ ರೂಮಿಗೆ ತೆರಳಿದ ಮ್ಯಾಕ್ರನ್ ನೋವಿನಲ್ಲಿದ್ದ ಆಟಗಾರರಿಗೆ ಸಮಾಧಾನ ಹೇಳಿ ನಿಮ್ಮ ಆಟದ ಬಗ್ಗೆ ನಮಗೆ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೆಸ್ಸಿ ಮ್ಯಾಜಿಕ್- ಮೂರನೇ ಬಾರಿ ಅರ್ಜೆಂಟೀನಾ ಚಾಂಪಿಯನ್
ಎಂಬಾಪೆ 80, 82, 118 ನಿಮಿಷದಲ್ಲಿ ಗೋಲ್ ಹೊಡೆದಿದ್ದರು. ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ಒಂದು ಗೋಲ್ ಬಾರಿಸಿದ್ದರು. ಈ ಟೂರ್ನಿಯಲ್ಲಿ 8 ಗೋಲು ಹೊಡೆದ ಎಂಬಾಪೆ ಗೋಲ್ಡನ್ ಬೂಟ್ ಪ್ರಶಸ್ತಿ ಜಯಿಸಿದರು.
Only the SECOND player ever to score hat-trick in a #FIFAWorldCup Final 👑
ವಿಶ್ವಕಪ್ ಫೈನಲ್‌ಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಎಂಬಾಪೆ ಪಾತ್ರರಾಗಿದ್ದಾರೆ. ಈ ಮೊದಲು 1966ರಲ್ಲಿ ಇಂಗ್ಲೆಂಡಿನ ಜಿಯೋಫ್ ಹರ್ಸ್ಟ್ ಜರ್ಮನಿ ವಿರುದ್ಧ ಹ್ಯಾಟ್ರಿಕ್ ಗೋಲ್ ಬಾರಿಸಿದ್ದರು. 2018ರಲ್ಲಿ ಫೈನಲ್ ಕ್ರೋಷಿಯಾ ವಿರುದ್ಧವೂ ಎಂಬಾಪೆ 1 ಗೋಲು ಹೊಡೆದಿದ್ದರು.
120 ನಿಮಿಷಗಳ ಆಟದಲ್ಲಿ ಎರಡು ತಂಡಗಳು ತಲಾ 3 ಗೋಲ್ ಹೊಡೆದ ಕಾರಣ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಗಿತ್ತು. ಪೆನಾಲ್ಟಿಯಲ್ಲಿ 4-2 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಸೋಲಿಸುವ ಮೂಲಕ ಅರ್ಜೆಂಟೀನಾ ವಿಶ್ವಕಪ್‌ಗೆ ಮುತ್ತಿಕ್ಕಿತು. ವಿಶೇಷ ಏನೆಂದರೆ ಅರ್ಜೆಂಟೀನಾ ಮೊದಲ ಪಂದ್ಯಲ್ಲೇ ಸೌದಿ ಅರೇಬಿಯಾ ವಿರುದ್ಧ ಸೋತಿತ್ತು. ಆದರೆ ನಂತರದ ಪಂದ್ಯಗಳಲ್ಲಿ ಅತ್ಯುತ್ತಮ ಆಟದ ಮೂಲಕ ಫೈನಲ್ ಪ್ರವೇಶಿಸಿತ್ತು.
Live Tv
[brid partner=56869869 player=32851 video=960834 autoplay=true]
ಲುಸೈಲ್: ಫಿಫಾ ಫುಟ್‌ಬಾಲ್ ಫೈನಲಿನಲ್ಲಿ ನಾಯಕ ಲಿಯೋನೆಲ್ ಮೆಸ್ಸಿ ಅವರ ಅದ್ಭುತ ಆಟದಿಂದಾಗಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೊನೆಯ ಪಂದ್ಯದಲ್ಲಿ ಮೆಸ್ಸಿ 2 ಗೋಲ್ ಹೊಡೆದು ತಂಡಕ್ಕೆ ಜಯ ತಂದು ಕೊಡುವ ಮೂಲಕ ತಮ್ಮ ಕನಸನ್ನು ನನಸು ಮಾಡಿದ್ದಾರೆ.
1978, 1986ರಲ್ಲಿ ಅರ್ಜೆಂಟೀನಾ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. 2014ರಲ್ಲಿ ಜರ್ಮನಿ ವಿರುದ್ಧ ಫೈನಲ್‌ನಲ್ಲಿ ಅರ್ಜೆಂಟೀನಾ ಸೋತಿತ್ತು. ಈಗ 36 ವರ್ಷದ ಬಳಿಕ ಮೂರನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಫ್ರಾನ್ಸ್ ವಿರುದ್ಧದ ಪಂದ್ಯ ಆರಂಭದಲ್ಲೇ ಅರ್ಜೆಂಟೀನಾ ಮುನ್ನಡೆ ಪಡೆದಿತ್ತು. 23ನೇ ನಿಮಿಷದಲ್ಲಿ ಮೆಸ್ಸಿ ಪೆನಾಲ್ಟಿ ಕಿಕ್ ಮೂಲಕ ಮೊದಲ ಗೋಲು ಹೊಡೆದರು. ಇದರ ಬೆನ್ನಲ್ಲೇ ಡಿ ಮಾರಿಯಾ 36ನೇ ನಿಮಿಷದಲ್ಲಿ ಗೋಲು ಹೊಡೆದರು. 80ನೇ ನಿಮಿಷದಲ್ಲಿ ಕಿಲಿಯನ್ ಎಂಬಾಪೆ ಪೆನಾಲ್ಟಿ ಮೂಲಕ ಫ್ರಾನ್ಸ್ ಪರ ಮೊದಲ ಗೋಲು ಬಾರಿಸಿದರು. ಎರಡೇ ನಿಮಿಷದಲ್ಲಿ ಮತ್ತೊಂದು ಗೋಲು ಹೊಡೆದು ಪಂದ್ಯಕ್ಕೆ ರೋಚಕ ತಿರುವು ನೀಡಿದರು.
ನಿಗದಿತ 90 ನಿಮಿಷದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ್ದರಿಂದ ಪಂದ್ಯ 30 ನಿಮಿಷಗಳ ಹೆಚ್ಚುವರಿ ಸಮಯಕ್ಕೆ ವಿಸ್ತರಿಸಿತ್ತು. ಈ ವೇಳೆ ಮೆಸ್ಸಿ 109ನೇ ನಿಮಿಷದಲ್ಲಿ ಗೋಲು ಹೊಡೆಯುವ ಮೂಲಕ ಫ್ರಾನ್ಸ್‌ಗೆ ಮುನ್ನಡೆ ತಂದುಕೊಟ್ಟರು. ಆದರೆ 118ನೇ ನಿಮಿಷದಲ್ಲಿ ಎಂಬಾಪೆ ಪೆನಾಲ್ಟಿ ಮೂಲಕ ಗೋಲು ಹೊಡೆದು ಮತ್ತೆ ತಿರುವು ನೀಡಿದರು.
120 ನಿಮಿಷಗಳ ಆಟದಲ್ಲಿ ಎರಡು ತಂಡಗಳು ತಲಾ 3 ಗೋಲ್ ಹೊಡೆದ ಕಾರಣ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿಯಲ್ಲಿ 4-2 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಸೋಲಿಸುವ ಮೂಲಕ ಅರ್ಜೆಂಟೀನಾ ವಿಶ್ವಕಪ್‌ಗೆ ಮುತ್ತಿಕ್ಕಿತು. ವಿಶೇಷ ಏನೆಂದರೆ ಅರ್ಜೆಂಟೀನಾ ಮೊದಲ ಪಂದ್ಯಲ್ಲೇ ಸೌದಿ ಅರೇಬಿಯಾ ವಿರುದ್ಧ ಸೋತಿತ್ತು. ಆದರೆ ನಂತರದ ಪಂದ್ಯಗಳಲ್ಲಿ ಅತ್ಯುತ್ತಮ ಆಟದ ಮೂಲಕ ಫೈನಲ್ ಪ್ರವೇಶಿಸಿತ್ತು.
🤯🤯🤯
Messi is at the right place at the right time to give #Argentina the lead once again 😲
ಪ್ರಶಸ್ತಿ ಎಷ್ಟು?
ಅರ್ಜೆಂಟೀನಾ ಬರೋಬ್ಬರಿ 42 ಮಿಲಿಯನ್ ಡಾಲರ್ (ಅಂದಾಜು 347 ಕೋಟಿ ರೂ.) ಸಿಕ್ಕರೆ, ರನ್ನರ್-ಅಪ್ ಫ್ರಾನ್ಸ್‌ಗೆ 30 ಮಿಲಿಯನ್ ಡಾಲರ್ (ಅಂದಾಜು 248 ಕೋಟಿ ರೂ.) ನಗದು ಬಹುಮಾನ ಸಿಕ್ಕಿದೆ.
ಕತಾರ್: ಫಿಫಾ ವಿಶ್ವಕಪ್ (FIFA World Cup) ಇತಿಹಾಸದಲ್ಲಿ ನಿನ್ನೆ ನಡೆದ ಅರ್ಜೆಂಟೀನಾ (Argentina) ಮತ್ತು ಮೆಕ್ಸಿಕೋ (Mexico) ನಡುವಿನ ಪಂದ್ಯದಲ್ಲಿ ಬರೋಬ್ಬರಿ 88,966 ಪ್ರೇಕ್ಷಕರು ಸ್ಟೇಡಿಯಂಗೆ ಆಗಮಿಸಿ ಪಂದ್ಯ ನೋಡಿ ದಾಖಲೆ ಬರೆದಿದ್ದಾರೆ.
ಶನಿವಾರ ರಾತ್ರಿ 12:30ಕ್ಕೆ ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಅರ್ಜೆಂಟೀನಾ ಮತ್ತು ಮೆಕ್ಸಿಕೋ ನಡುವಿನ ಪಂದ್ಯಕ್ಕೆ ಅಭಿಮಾನಿಗಳು ಕಿಕ್ಕಿರಿದು ಆಗಮಿಸಿದರು. ವಿಶ್ವಕಪ್‍ನಲ್ಲಿ ಅಳಿವು ಉಳಿವಿನ ಪರಿಸ್ಥಿತಿಯೊಂದಿಗೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಒತ್ತಡದಲ್ಲಿತ್ತು. ಹಾಗಾಗಿ ಅರ್ಜೆಂಟೀನಾ ಮತ್ತು ಮೆಸ್ಸಿ (Lionel Messi) ಅಭಿಮಾನಿಗಳು ಒಟ್ಟಿಗೆ ತಂಡಕ್ಕೆ ಚಿಯರ್ ಅಪ್ ಮಾಡಲು ಕ್ರೀಡಾಂಗಣಕ್ಕೆ ಆಗಮಿಸಿದರು. ಇದನ್ನೂ ಓದಿ: ಡು ಆರ್ ಡೈ ಪಂದ್ಯದಲ್ಲಿ ಮಿಂಚಿದ ಮೆಸ್ಸಿ – ನಾಕೌಟ್ ರೇಸ್‍ನಲ್ಲಿ ಉಳಿದುಕೊಂಡ ಅರ್ಜೆಂಟೀನಾ
ಲುಸೈಲ್ ಕ್ರೀಡಾಂಗಣದಲ್ಲಿ ಬರೋಬ್ಬರಿ 88,966 ಜನ ಕಿಕ್ಕಿರಿದು ತುಂಬಿದರು. ಇದು ಕಳೆದ 28 ವರ್ಷಗಳ ವಿಶ್ವಕಪ್ ಇತಿಹಾದಲ್ಲಿ ಅತೀ ಹೆಚ್ಚಿನ ಪ್ರೇಕ್ಷಕರು ಪಂದ್ಯ ವೀಕ್ಷಿಸಿದ ದಾಖಲೆ ಬರೆಯಿತು. ಸ್ಟೇಡಿಯಂನ ಹೊರ ಭಾಗದಲ್ಲೂ ಜನ ಮುಗಿಬಿದ್ದಿದ್ದರು. ವಿಶ್ವದಾದ್ಯಂತ ಫ್ಯಾನ್ಸ್ ಅಲ್ಲಲ್ಲಿ ಫ್ಯಾನ್ಸ್ ಆರ್ಮಿ ಸೇರಿ ಪಂದ್ಯ ವೀಕ್ಷಿಸಿದವರು. ಇದನ್ನೂ ಓದಿ: ಕಾಡಿದ ವರುಣ – 2ನೇ ಏಕದಿನ ಪಂದ್ಯ 12 ಓವರ್‌ಗಳಿಗೆ ಅಂತ್ಯ
ಪಂದ್ಯದಲ್ಲಿ 64 ನಿಮಿಷದಲ್ಲಿ ಅರ್ಜೆಂಟೀನಾ ಪರ ನಾಯಕ ಮೆಸ್ಸಿ ಮೊದಲ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಅರ್ಜೆಂಟೀನಾ ಎಲ್ಲಾ ವಿಭಾಗದಲ್ಲೂ ಮೆಕ್ಸಿಕೋ ವಿರುದ್ಧ ಪ್ರಬಲವಾಗಿ ಕಂಡಿತು. ಪರಿಣಾಮ 87ನೇ ನಿಮಿಷದಲ್ಲಿ ಎಂಝೋ ಫೆರ್ನಾಂಡಿಸ್ ಮತ್ತೊಂದು ಗೋಲು ಸಿಡಿಸುವ ಮೂಲಕ ಅರ್ಜೆಂಟೀನಾ 2-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಸಹಕರಿಸಿದರು. ಬಳಿಕ ಮೆಕ್ಸಿಕೋ ಗೋಲು ಸಿಡಿಸಲು ಶತಪ್ರಯತ್ನಿಸಿದರೂ ಅರ್ಜೆಂಟೀನಾ ಆಟಗಾರರು ಇದಕ್ಕೆ ಅವಕಾಶ ನೀಡಲಿಲ್ಲ.
ಅಂತಿಮವಾಗಿ ಫುಲ್‍ಟೈಮ್ ಮುಕ್ತಾಯದ ವೇಳೆಗೆ 2-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದ್ದ ಅರ್ಜೆಂಟೀನಾ ಗೆಲುವಿನ ನಗೆ ಬೀರಿತು. ಈ ಮೂಲಕ ಸೌದಿ ಅರೇಬಿಯಾ ವಿರುದ್ಧ ಸೋತಿದ್ದ ನೋವು ಮರೆಸಿತು.
Live Tv
[brid partner=56869869 player=32851 video=960834 autoplay=true]
ಕತಾರ್: ಫಿಫಾ ವಿಶ್ವಕಪ್‍ನಲ್ಲಿ (FIFA World Cup) ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮೆಕ್ಸಿಕೋ (Mexico) ವಿರುದ್ಧ 2-0 ಅಂತರದ ಗೋಲುಗಳಿಂದ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ (Argentina) ಗೆಲುವು ದಾಖಲಿಸಿ ನಾಕೌಟ್ ರೇಸ್‍ನಲ್ಲಿ ಉಳಿದುಕೊಂಡಿದೆ.
ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಮೆಸ್ಸಿ (Lionel Messi) ಬಳಗ ಎದುರಾಳಿಗೆ ಎಲ್ಲಾ ವಿಭಾಗದಲ್ಲೂ ಕಂಟಕವಾಗಿ ಕಾಡಿತು. ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 64 ನಿಮಿಷದಲ್ಲಿ ಅರ್ಜೆಂಟೀನಾ ಪರ ನಾಯಕ ಮೆಸ್ಸಿ ಮೊದಲ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಇದನ್ನೂ ಓದಿ: ಭಾರತಕ್ಕೆ ವಿಶ್ವಕಪ್ ಟೂರ್ನಿ ಬಹಿಷ್ಕರಿಸೋ ಬೆದರಿಕೆ ಹಾಕಿದ ಪಾಕ್
ಬಳಿಕ ರೋಚಕವಾಗಿ ಸಾಗಿದ ಕಾದಾಟದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿನಿಂದ ಕಾದಾಡಿದವು. ಅರ್ಜೆಂಟೀನಾ ಎಲ್ಲಾ ವಿಭಾಗದಲ್ಲೂ ಮೆಕ್ಸಿಕೋ ವಿರುದ್ಧ ಪ್ರಬಲವಾಗಿ ಕಂಡಿತು. ಪರಿಣಾಮ 87ನೇ ನಿಮಿಷದಲ್ಲಿ ಎಂಝೋ ಫೆರ್ನಾಂಡಿಸ್ ಮತ್ತೊಂದು ಗೋಲು ಸಿಡಿಸುವ ಮೂಲಕ ಅರ್ಜೆಂಟೀನಾ 2-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಸಹಕರಿಸಿದರು. ಬಳಿಕ ಮೆಕ್ಸಿಕೋ ಗೋಲು ಸಿಡಿಸಲು ಶತಪ್ರಯತ್ನಿಸಿದರೂ ಅರ್ಜೆಂಟೀನಾ ಆಟಗಾರರು ಇದಕ್ಕೆ ಅವಕಾಶ ನೀಡಲಿಲ್ಲ. ಇದನ್ನೂ ಓದಿ: ಜಡೇಜಾ ಟೀಂ ಇಂಡಿಯಾ ಪರ ಆಡಲು ಅನ್‍ಫಿಟ್ – ಬಿಜೆಪಿ ಪರ ಪ್ರಚಾರಕ್ಕೆ ಫಿಟ್
ಅಂತಿಮವಾಗಿ ಫುಲ್‍ಟೈಮ್ ಮುಕ್ತಾಯದ ವೇಳೆಗೆ 2-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದ್ದ ಅರ್ಜೆಂಟೀನಾ ಗೆಲುವಿನ ನಗೆ ಬೀರಿತು. ಈ ಮೂಲಕ ಸೌದಿ ಅರೇಬಿಯಾ ವಿರುದ್ಧ ಸೋತಿದ್ದ ನೋವು ಮರೆಸಿತು. ಜೊತೆಗೆ ನಾಕೌಟ್‍ಗೇರುವ ಅವಕಾಶವನ್ನು ಉಳಿಸಿಕೊಂಡಿತು.
ಅತ್ತ ಗೆಲುವಿನ ಹೀರೋ ಆಗಿ ಅರ್ಜೆಂಟೀನಾ ದಿಗ್ಗಜ ಆಟಗಾರ ಮೆಸ್ಸಿ ಮೆರೆದಾಡಿದರು. ಮೆಕ್ಸಿಕೋ ವಿರುದ್ಧ ಏಕೈಕ ಗೋಲು ಸಿಡಿಸಿದ ಮೆಸ್ಸಿ ವಿಶ್ವಕಪ್‍ನಲ್ಲಿ ಈವರೆಗೆ ಅರ್ಜೆಂಟೀನಾ ಪರ 8 ಗೋಲು ಸಿಡಿಸಿದ ಸಾಧನೆ ಮಾಡಿದರು. ಈ ಸಾಧನೆಯೊಂದಿಗೆ ಫುಟ್‍ಬಾಲ್ ದಂತಕಥೆ ಅರ್ಜೆಂಟೀನಾದ ಮಾಜಿ ಆಟಗಾರ ಡಿಯಾಗೋ ಮರಡೋನಾ ಅವರ 8 ಗೋಲುಗಳ ದಾಖಲೆಯನ್ನು ಮೆಸ್ಸಿ ಸರಿಗಟ್ಟಿದ್ದಾರೆ. ಇವರಿಬ್ಬರೂ ಕೂಡ ತಾವಾಡಿದ 21 ಪಂದ್ಯಗಳಲ್ಲಿ 8 ಗೋಲು ಸಿಡಿಸಿ ಮಿಂಚಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕತಾರ್: ಅರಬ್ಬರ ನಾಡಲ್ಲಿ ಫಿಫಾ ವಿಶ್ವಕಪ್ (FIFA World Cup) ಆರಂಭಕ್ಕೂ ಮುನ್ನ ಲಿಯೋನೆಲ್ ಮೆಸ್ಸಿ (Lionel Messi) ಸಾರಥ್ಯದ ಅರ್ಜೆಂಟೀನಾ (Argentina) ತಂಡದ ಪರ ನಿರೀಕ್ಷೆ ಹೆಚ್ಚಿತ್ತು. ಆದರೆ ಇದೀಗ ಅರ್ಜೆಂಟೀನಾ ಮಾಡು ಇಲ್ಲವೇ ಮಡಿ ಹಂತಕ್ಕೆ ತಲುಪಿದೆ.
ಫುಟ್‍ಬಾಲ್‍ನ ದಿಗ್ಗಜ ಆಟಗಾರ ಮೆಸ್ಸಿ ಮುಂದಾಳತ್ವದಲ್ಲಿ ಫಿಫಾ ವಿಶ್ವಕಪ್ ಆಡಲು ಕತಾರ್‌ಗೆ ಬಂದಿಳಿಯುತ್ತಿದ್ದಂತೆ ಅರ್ಜೆಂಟೀನಾ ಫುಟ್‍ಬಾಲ್ ಪ್ರಿಯರ ಅಚ್ಚುಮೆಚ್ಚಿನ ತಂಡವಾಗಿತ್ತು. ಆದರೆ ತನ್ನ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ (Saudi Arabia) ವಿರುದ್ಧ ಅಚ್ಚರಿ ಎಂಬಂತೆ ಅರ್ಜೆಂಟೀನಾ ಸೋತು ತನ್ನ ನಾಕೌಟ್ ಹಾದಿಯನ್ನು ದುರ್ಬಲಗೊಳಿಸಿಕೊಂಡಿದೆ. ಇದೀಗ ಎರಡನೇ ಪಂದ್ಯವಾಡಲು ಸಜ್ಜಾಗಿದ್ದು, ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಇದನ್ನೂ ಓದಿ: ಅರ್ಜೆಂಟೀನಾ ವಿರುದ್ಧ ಗೆಲುವು – ಸೌದಿ ಅರೇಬಿಯಾ ಆಟಗಾರರಿಗೆ ರೋಲ್ಸ್ ರಾಯ್ಸ್ ಗಿಫ್ಟ್ ಘೋಷಿಸಿದ ಸರ್ಕಾರ
ಸೌದಿ ಅರೇಬಿಯಾ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾದ ಅರ್ಜೆಂಟೀನಾ, ವಿಶ್ವಕಪ್‍ನ ನಾಕೌಟ್ ರೇಸ್‍ನಲ್ಲಿ ಉಳಿಯಬೇಕಿದ್ದರೆ ಮೆಕ್ಸಿಕೋ ವಿರುದ್ಧದ ಎರಡನೇ ಪಂದ್ಯ ಗೆಲ್ಲಲೇಬೇಕಿದೆ. ಹಾಗಾಗಿ ಮೆಸ್ಸಿ ಚಿತ್ತ ಗೆಲುವಿನತ್ತ ನೆಟ್ಟಿದೆ.
ಆದರೆ ಅರ್ಜೆಂಟೀನಾಗೆ ಪ್ರಬಲ ಪೈಪೋಟಿ ನೀಡಲು ಮೆಕ್ಸಿಕೋ (Mexico) ಸಿದ್ಧವಾಗಿದೆ. ಇದಕ್ಕಾಗಿ ರಣತಂತ್ರವನ್ನು ಹೆಣೆದಿದ್ದು, 2014-16ರ ವರೆಗೆ ಅರ್ಜೆಂಟೀನಾ ತಂಡವನ್ನು ಮುನ್ನಡೆಸಿದ್ದ ಗೆರಾರ್ಡೊ ಮಾರ್ಟಿನೋ ಈಗ ಮೆಕ್ಸಿಕೋ ಕೋಚ್ ಆಗಿದ್ದಾರೆ. ಎದುರಾಳಿಯ ತಂತ್ರಗಾರಿಕೆಯನ್ನು ಸರಿಯಾಗಿ ಅರಿತಿದ್ದಾರೆ. ಹೀಗಾಗಿ ಅರ್ಜೆಂಟೀನಾ ಹೊಸ ಹಾಗೂ ವಿಭಿನ್ನ ರಣತಂತ್ರಗಳೊಂದಿಗೆ ಮೈದಾನಕ್ಕಿಳಿಯಬೇಕಿದೆ. ವಿಶ್ವಕಪ್‍ನಲ್ಲಿ ಅರ್ಜೆಂಟೀನಾ ವಿರುದ್ಧ ಮೆಕ್ಸಿಕೋ 3 ಬಾರಿ ಸೆಣಸಾಡಿದ್ದು ಒಮ್ಮೆಯೂ ಗೆದ್ದಿಲ್ಲ. ಇದನ್ನೂ ಓದಿ: ಬ್ರೆಜಿಲ್‌ಗೆ ಆಘಾತ – ಮುಂದಿನ ಪಂದ್ಯಗಳಲ್ಲಿ ಆಡಲ್ಲ ನೇಮರ್
ಇಂದು ಲುಸೈಲ್ ಕ್ರೀಡಾಂಗಣದಲ್ಲಿ ಅರ್ಜೆಂಟೀನಾ ಮತ್ತು ಮೆಕ್ಸಿಕೋ ನಡುವಿನ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 12:30ಕ್ಕೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಮೆಸ್ಸಿ ಮ್ಯಾಜಿಕ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಕತಾರ್ ಕಥೆ ಮುಗಿಯಿತು:
ಆತಿಥೇಯ ಕತಾರ್ ಹಾಗೂ ಸೆನೆಗಲ್ ನಡುವಿನ ಪಂದ್ಯದಲ್ಲಿ 1-3 ಗೋಲುಗಳಲ್ಲಿ ಕತಾರ್ ಸೋಲುಂಡಿತು. 41ನೇ ನಿಮಿಷದಲ್ಲಿ ಬೌಲಾಯೆ ಡಿಯಾ, 48ನೇ ನಿಮಿಷದಲ್ಲಿ ಫಮಾರಾ ಡೈಡಿಯೊ, 84ನೇ ನಿಮಿಷದಲ್ಲಿ ಬಂಬಾ ಡಿಯೆಂಗ್ ಸೆನೆಗಲ್ ಪರ ಗೋಲು ಬಾರಿಸಿದರೆ, ಕತಾರ್ ಪರ 78ನೇ ನಿಮಿಷದಲ್ಲಿ ಮೊಹಮದ್ ಮುಂಟಾರಿ ಏಕೈಕ ಗೋಲು ದಾಖಲಿಸಿದರು. ಹೀಗಾಗಿ ಕತಾರ್ ಸೋಲು ಕಾಣಬೇಕಾಯಿತು. ಈ ಮೂಲಕ ಕತಾರ್ ಗುಂಪು ಹಂತದಲ್ಲೇ ಹೊರಬೀಳುವುದು ಬಹುತೇಕ ಖಚಿತವಾಗಿದೆ.
Live Tv
[brid partner=56869869 player=32851 video=960834 autoplay=true]
ಕತಾರ್: ಫಿಫಾ ಫುಟ್‍ಬಾಲ್ ವಿಶ್ವಕಪ್‍ನಲ್ಲಿ (FIFA World Cup 2022) ಬಲಿಷ್ಠ ಅರ್ಜೆಂಟೀನಾ (Argentina) ವಿರುದ್ಧ ಗೆದ್ದಿದ್ದ ಸೌದಿ ಅರೇಬಿಯಾ (Saudi Arabia) ಆಟಗಾರರಿಗೆ ಲಕ್ ಬದಲಾಗಿದೆ. ಸೌದಿ ಅರೇಬಿಯಾ ಸರ್ಕಾರ ತಂಡದಲ್ಲಿದ್ದ ಫುಟ್‍ಬಾಲ್ ಆಟಗಾರರಿಗೆ ದುಬಾರಿ ಉಡುಗೊರೆ ಘೋಷಿಸಿದೆ.
ಲಿಯೋನೆಲ್ ಮೆಸ್ಸಿ (Lionel Messi) ಸಾರಥ್ಯದ ಅರ್ಜೆಂಟೀನಾ ವಿರುದ್ಧ 2-1 ಗೋಲುಗಳ ಅಂತರದಿಂದ ಸೌದಿ ಅರೇಬಿಯಾ ಗೆದ್ದ ಬೆನ್ನಲ್ಲೇ ಸೌದಿ ಅರೇಬಿಯಾ ಖುಷಿಯಲ್ಲಿ ತೇಲಾಡುತ್ತಿದೆ. ಗೆಲುವಿನ ಸಂಭ್ರಮದಿಂದ ಹೊರಬರಲಾಗದೇ ಸಂಭ್ರಮಿಸುತ್ತಿರುವ ಸೌದಿ ಅರೇಬಿಯಾ ಈ ಗೆಲುವಿಗೆ ಕಾರಣರಾದ ಆಟಗಾರರಿಗೆ ಉಡುಗೊರೆ ಘೋಷಿಸಿದೆ. ಫಿಫಾ ವಿಶ್ವಕಪ್‍ನಲ್ಲಿ ಆಡುತ್ತಿರುವ ಸೌದಿ ಅರೇಬಿಯಾ ತಂಡದಲ್ಲಿರುವ ಆಟಗಾರರಿಗೆ ದುಬಾರಿ ರೋಲ್ಸ್ ರಾಯ್ಸ್ (Rolls-Royce) ಫ್ಯಾಂಟಮ್ ಕಾರ್ ಉಡುಗೊರೆಯಾಗಿ ನೀಡುವುದಾಗಿ ಸರ್ಕಾರ ತಿಳಿಸಿದೆ. ಇದನ್ನೂ ಓದಿ: ಲ್ಯಾಥಮ್ ಭರ್ಜರಿ ಶತಕ – ಕೀವಿಸ್ ಗೆ 7 ವಿಕೆಟ್‌ಗಳ ಜಯ
ಕತಾರ್‌ನ ಲುಸೈಲ್ ಕ್ರೀಡಾಂಗಣದಲ್ಲಿ ನ.22 ರಂದು ನಡೆದ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ತಂಡ ಗೆಲುವಿನ ಫೇವರಿಟ್ ತಂಡವಾಗಿ ಕಾಣಿಸಿಕೊಂಡಿತ್ತು. ಆದರೆ ಇತ್ತ ಅದ್ಭುತ ಪ್ರದರ್ಶನದ ಮೂಲಕ ಸೌದಿ ಅರೇಬಿಯಾ ಫುಟ್‍ಬಾಲ್ ಅಭಿಮಾನಿಗಳ ಮನಗೆದ್ದಿದೆ. ಪಂದ್ಯದ 10ನೇ ನಿಮಿಷದಲ್ಲಿ ಮೆಸ್ಸಿ ಗೋಲಿನೊಂದಿಗೆ ಅರ್ಜೆಂಟೀನಾಗೆ 1-0 ಮುನ್ನಡೆ ತಂದುಕೊಟ್ಟಿದ್ದರು. ಬಳಿಕ ನಡೆದದ್ದು ಸೌದಿ ಅರೇಬಿಯಾದ ಕಾಲ್ಚೆಂಡು ಕರಾಮತ್ತು. ಬಲಿಷ್ಠ ಅರ್ಜೆಂಟೀನಾಗೆ ಸೆಡ್ಡು ಹೊಡೆಯುವ ಮಟ್ಟಿಗೆ ಸೌದಿ ಅರೇಬಿಯಾ ತಂಡ ಪುಟಿದೆದ್ದಿತು. 48ನೇ ನಿಮಿಷದಲ್ಲಿ ಸಲೇಹ್ ಅಲ್-ಶೆಹ್ರಿ ಸಿಡಿಸಿದ ಗೋಲಿನಿಂದ ಎರಡೂ ತಂಡಗಳು 1-1ರಲ್ಲಿ ಸಮಬಲದ ಹೋರಾಟ ನಡೆಸಿದವು. ಇದನ್ನೂ ಓದಿ: ಅರ್ಜೆಂಟೀನಾ ವಿರುದ್ಧ ಗೆಲುವು – ಸಂಭ್ರಮಾಚರಣೆಗಾಗಿ ಬುಧವಾರ ರಾಷ್ಟ್ರೀಯ ರಜಾದಿನವನ್ನಾಗಿ ಘೋಷಿಸಿದ ಸೌದಿ ಅರೇಬಿಯಾ
ನಂತರ ಸೌದಿ ಅರೇಬಿಯಾ ಮತ್ತೆ ತಮ್ಮ ಸೂಪರ್ ಡೂಪರ್ ಪ್ರದರ್ಶನ ಮುಂದುವರಿಸಿ 53ನೇ ನಿಮಿಷದಲ್ಲಿ ಸೇಲಂ ಅಲ್ದಾವ್ಸರಿ ಸಿಡಿಸಿದ ಗೋಲಿನಿಂದ 2-1 ಮುನ್ನಡೆ ಪಡೆದುಕೊಂಡಿತು. ಈ ಮುನ್ನಡೆಯನ್ನು ಪಂದ್ಯದ ಅತ್ಯಂದ ವರೆಗೆ ಕಾಯ್ದುಕೊಂಡು ಕೂಟದ ಬಲಿಷ್ಠ ತಂಡವನ್ನು ಸೋಲಿಸಿ ಸೌದಿ ಅರೇಬಿಯಾ ಗೆಲುವಿನ ಸಂಭ್ರಮ ಆಚರಿಸಿತ್ತು.
ಅರ್ಜೆಂಟೀನಾ ವಿರುದ್ಧ ಗೆದ್ದ ಬಳಿಕ ಸಂಭ್ರಮಾಚರಣೆಗಾಗಿ ಸೌದಿ ಅರೇಬಿಯಾ ಸರ್ಕಾರ ನ.23 ರಂದು ರಾಷ್ಟ್ರೀಯ ರಜಾದಿನವನ್ನಾಗಿ ಘೋಷಿಸಿತ್ತು. ಇದೀಗ ಆಟಗಾರರಿಗೆ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್ ಘೋಷಿಸಿದೆ.
Live Tv
[brid partner=56869869 player=32851 video=960834 autoplay=true]