Tag: ಅರ್ಜುನ್‌ ರಮೇಶ್‌

  • ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ನಾನೂ ಪ್ರಬಲ ಆಕಾಂಕ್ಷಿ: ನಟ ಅರ್ಜುನ್ ರಮೇಶ್

    ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ನಾನೂ ಪ್ರಬಲ ಆಕಾಂಕ್ಷಿ: ನಟ ಅರ್ಜುನ್ ರಮೇಶ್

    ಚಾಮರಾಜನಗರ: 2024ರ ಲೋಕಸಭಾ ಚುನಾವಣೆಗೆ (Lok Sabha Election 2023) ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ನಾನೂ ಬಿಜೆಪಿ ಟಿಕೆಟ್ (BJP Ticket) ಆಕಾಂಕ್ಷಿ ಎಂದು ಕಿರುತೆರೆ, ಚಲನಚಿತ್ರ ನಟ ಆರ್.ಅರ್ಜುನ್‌ ರಮೇಶ್ (Arjun Ramesh) ಹೇಳಿದ್ದಾರೆ.

    ನಗರದಲ್ಲಿಂದು ಮಾತನಾಡಿದ ಅವರು, 12 ವರ್ಷಗಳಿಂದ ಬಿಜೆಪಿ (BJP) ಸಂಘಟನೆಯಲ್ಲಿ ತೊಡಗಿದ್ದೇನೆ. ಟಿ.ನರಸೀಪುರ ಪುರಸಭಾ ಸದಸ್ಯನಾಗಿ ಅತ್ಯಧಿಕ ಮತಗಳಿಂದ ಆಯ್ಕೆಯಾಗಿದ್ದೇನೆ. ನನ್ನ ತಂದೆ ಮಾಜಿ ವಿಧಾನಪರಿಷತ್ತ ಸದಸ್ಯ ಸಿ.ರಮೇಶ್ ಕಳೆದ 20 ವರ್ಷಗಳಿಂದ ಪಕ್ಷದ ಸಂಘಟನೆಗೆ ದುಡಿಯುತ್ತಿದ್ದಾರೆ. ಪಕ್ಷ ನನಗೆ ಈ ಬಾರಿ ಅವಕಾಶ ಮಾಡಿಕೊಡಬೇಕೆಂದು ವರಿಷ್ಠರಲ್ಲಿ ಮನವಿ ಮಾಡಿದ್ದೇನೆ ಎಂದಿದ್ದಾರೆ.

    ಬಿಜೆಪಿ ಕಾರ್ಯಕರ್ತರ ಪಕ್ಷ ಅನ್ನೋದನ್ನ ಹಲವು ಬಾರಿ ಸಾಬೀತು ಮಾಡಿದೆ. ನಾನೂ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ. ಜನಸಾಮಾನ್ಯ ಕೇಂದ್ರ ಸ್ಥಾಪಿಸಿ ಸೇವೆ ಸಲ್ಲಿಸುತ್ತಿದ್ದೇನೆ. ಜೊತೆಗೆ ನಟನಾಗಿಯೂ ಗುರುತಿಸಿಕೊಂಡಿದ್ದೇನೆ. ಹಾಗಾಗಿ ರಾಜ್ಯದ ನಾಯಕರು ನನಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದಾರೆ. ಇದನ್ನೂ ಓದಿ: ಡಿಕೆ ಶಿವಕುಮಾರ್ ಲೂಟಿ ಹೊಡೆಯೋದು ಬಿಟ್ಟರೆ ತಮ್ಮನಾಗಿ ಸ್ವೀಕಾರ ಮಾಡ್ತೀನಿ: ಕುಮಾರಸ್ವಾಮಿ ಷರತ್ತು

    ಇಂದಿನ ರಾಜಕೀಯ ವಿದ್ಯಮಾನ ಅನುಭವಿಸಿ, ಪ್ರತಿ ಹಂತದಲ್ಲೂ ರಾಜಕೀಯ ಬಣ್ಣ ಬದಲಾಯಿಸುವುದನ್ನ ನೋಡಿದ್ದೇನೆ. ಆದ್ರೆ ಇದ್ದರೂ, ಸತ್ತರೂ ಬಿಜೆಪಿಯಲ್ಲೇ ಇರುತ್ತೇನೆ, ಅಪ್ಪಟ ಹಿಂದೂ ಕಾರ್ಯಕರ್ತನಾಗಿಯೇ ಸಾಯುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: BJPಯಲ್ಲಿ ಅನಿವಾರ್ಯವಾಗಿ ಹೊಂದಿಕೊಂಡು ಹೋಗ್ತಿದ್ದೀನಿ – ಎಸ್.ಟಿ ಸೋಮಶೇಖರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ದೇವರ ಆಟ ಬಲ್ಲವರಾರು’ ಎನ್ನುತ್ತಾ 3 ವರ್ಷಗಳ ನಂತರ ಬಣ್ಣ ಹಚ್ಚಿದ ಸಿಂಧೂ ವಿಶ್ವನಾಥ್

    ‘ದೇವರ ಆಟ ಬಲ್ಲವರಾರು’ ಎನ್ನುತ್ತಾ 3 ವರ್ಷಗಳ ನಂತರ ಬಣ್ಣ ಹಚ್ಚಿದ ಸಿಂಧೂ ವಿಶ್ವನಾಥ್

    ಸಾಕಷ್ಟು ಹೊಸ ಪ್ರಯೋಗಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿಯಾಗಿದೆ. ಅಂತಹ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ ‘ದೇವರ ಆಟ ಬಲ್ಲವರಾರು’ (Devara Aata Ballavaraaru) ಚಿತ್ರತಂಡ. ಈ ಹಿಂದೆ ಸಂಚಾರಿ ವಿಜಯ್ ಅವರ ‘ಫಿರಂಗಿ ಪುರ ಚಿತ್ರವನ್ನು ಕೈಗೆತ್ತಿಕೊಂಡಿದ್ದ ಜನಾರ್ದನ್ ಪಿ ಜಾನಿ (Janardhan P Jani) ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೂವತ್ತು ದಿನಗಳಲ್ಲಿ ಚಿತ್ರದ ಎಲ್ಲಾ ಪ್ರಕ್ರಿಯೆ ಮುಗಿಸಿ ಬಿಡುಗಡೆ ಮಾಡಿ ಗಿನ್ನಿಸ್ ರೆಕಾರ್ಡ್ ಮಾಡಲು ಹೊರಟಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

    ನಾನು ಈ ಹಿಂದೆ ಫಿರಂಗಿ ಪುರ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ತಮ್ಮನ್ನು ಭೇಟಿ ಮಾಡಿದ್ದೆ. ಈಗ ದೇವರ ಆಟ ಬಲ್ಲವರಾರು ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಇದು 1975 ರ ಕಾಲಘಟ್ಟದಲ್ಲಿ ನಡೆಯುವ ಕಥೆ.  ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಎಲ್ಲಾ ಕೆಲಸಗಳನ್ನು ಒಂದು ತಿಂಗಳೊಳಗೆ ಮುಗಿಸಿ, ಸರಿಯಾಗಿ ಒಂದು ತಿಂಗಳಿಗೆ ಚಿತ್ರವನ್ನು ತೆರೆಗೆ ತರಬೇಕು. ನಮ್ಮ ಚಿತ್ರ ಗಿನ್ನಿಸ್ ರೆಕಾರ್ಡ್ ಆಗಬೇಕು ಎಂಬುದು ನನ್ನ ಆಸೆ. ಈ ಕುರಿತು ನಾನು, ನನ್ನ ತಂಡ ಸುಮಾರು ಆರು ತಿಂಗಳಿನಿಂದ ಶ್ರಮ ಪಡುತ್ತಿದ್ದೇವೆ. ಇಡೀ ಚಿತ್ರದ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯಲಿದೆ. ಅಲ್ಲಿನ ವಿಶಾಲವಾದ ಜಾಗದಲ್ಲಿ ಸೆಟ್ ಗಳನ್ನು ನಿರ್ಮಿಸಿ ಅದೇ ಸ್ಥಳದಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ದಿನ ಸುಮಾರು 160 ಕ್ಕೂ ಹೆಚ್ಚು ಜನ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

    ಜೂನ್ 16 ರಿಂದ ಐದು ದಿನಗಳ ಕಾಲ ಚಿತ್ರೀಕರಣ ನಡೆಯುವ ಸ್ಥಳದಲ್ಲಿಯೇ ತಾಲೀಮು ನಡೆಸಲಿದ್ದೇವೆ.‌ ಆನಂತರ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ. ಹದಿನಾರು ದಿನದೊಳಗೆ ಚಿತ್ರೀಕರಣ ಮುಕ್ತಾಯವಾಗಲಿದೆ. ಚಿತ್ರೀಕರಣವಾದ ನಂತರ ಎಲ್ಲಾ ಕಾರ್ಯಗಳನ್ನು ಪೂರೈಸಿ ಜುಲೈ 20ರಂದು ಚಿತ್ರವನ್ನು ತೆರೆಗೆ ತರುತ್ತಿದ್ದೇವೆ‌. ನಮ್ಮ ಕಾರ್ಯವೈಖರಿ ವೀಕ್ಷಿಸಲು ಆರು ಜನ ತೀರ್ಪುಗಾರರು‌ ಆ ಸ್ಥಳದಲ್ಲೇ ಇರುತ್ತಾರೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ಅರ್ಜುನ್ ರಮೇಶ್, ಸಿಂಧೂ ಲೋಕನಾಥ್, ವರ್ಷ ವಿಶ್ವನಾಥ್, ಸಂಪತ್ ರಾಮ್, ಅರ್ಜುನ್, ಮೇದಿನಿ ಕೇಳಮನೆ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ನಿರ್ದೇಶಕ ಜನಾರ್ದನ್ ಪಿ ಜಾನಿ ತಿಳಿಸಿದರು.

    ನಾನು ಈ ಹಿಂದೆ ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಈ ಚಿತ್ರದ ನಿರ್ದೇಶಕರ ಕಾರ್ಯವೈಖರಿ ಕಂಡು ಆಶ್ಚರ್ಯವಾಯಿತು‌. ಈ ಚಿತ್ರಕ್ಕಾಗಿ ಎರಡು ತಿಂಗಳಲ್ಲಿ ಹದಿನಾಲ್ಕು ಕೆಜಿ ತೂಕ ಇಳಿಸಿದ್ದೇನೆ. ನೋಡಿದವರು ಕಂಡು ಹಿಡಿಯದಷ್ಟು ಸಣ್ಣ ಆಗಿದ್ದೇನೆ. ನಿರ್ದೇಶಕರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಸೂರಿ ನನ್ನ ಪಾತ್ರದ ಹೆಸರು ಎಂದರು ನಾಯಕ ಶನಿ ಧಾರಾವಾಹಿ ಖ್ಯಾತಿಯ (Arjun Ramesh) ಅರ್ಜುನ್ ರಮೇಶ್. ಇದನ್ನೂ ಓದಿ:ಯಶ್ ಸಿನಿಮಾಗಾಗಿ ಬೆಂಗಳೂರಿನಲ್ಲಿ ಬೀಡು ಬಿಟ್ಟ ಡೈರೆಕ್ಟರ್- ಇಲ್ಲಿದೆ ಗುಡ್ ನ್ಯೂಸ್

    ಮೂರು ವರ್ಷಗಳ ನಂತರ ನಾನು ನಟಿಸುತ್ತಿರುವ ಚಿತ್ರವಿದು. ರಚನ ನನ್ನ ಪಾತ್ರದ ಹೆಸರು‌‌. ನಾನು ಈವರೆಗೂ ಮಾಡಿರದ ಪಾತ್ರ ಈ ಚಿತ್ರದಲ್ಲಿ ಮಾಡುತ್ತಿದ್ದೇನೆ ಎಂದರು ನಾಯಕಿ ಸಿಂಧೂ ಲೋಕನಾಥ್ (Sindhu Loknath). ಇಂತಹ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಖುಷಿ ನಮಗಿದೆ ಎಂದರು ನಿರ್ಮಾಪಕರಾದ ಹನುಮಂತರಾಜು, ಲತಾ ರಾಗ ಹಾಗೂ ಸಹ ನಿರ್ಮಾಪಕ ಅನಿಲ್ ಜೈನ್‌.

    ಚಿತ್ರದಲ್ಲಿ ನಟಿಸುತ್ತಿರುವ ವರ್ಷ ವಿಶ್ವನಾಥ್,  ಅರ್ಜುನ್, ಸಂಪತ್ ರಾಮ್,  ಸಂಗೀತ ನಿರ್ದೇಶಕ ಶ್ಯಾನ್ ಎಲ್ ರಾಜ್, ಸಾಹಸ ನಿರ್ದೇಶಕ ಕುಂಗ್ಫು ಚಂದ್ರು ಹಾಗೂ ಕಾರ್ಯಕಾರಿ ನಿರ್ಮಾಪಕ ಶ್ರೀಪಾದ್ ಹೆಗಡೆ ಚಿತ್ರದ ಕುರಿತು ಮಾತನಾಡಿದರು. ದೇವರ ಆಟ ಬಲವರಾರು ಚಿತ್ರಕ್ಕೆ ಪ್ರತಿಯೊಬ್ಬ ಮನುಷ್ಯನ ಒಳಗೆ ಒಂದು ಕ್ರೂರ ಮೃಗ ಇದ್ದೆ ಇರುತ್ತದೆ ಎಂಬ ಅಡಿಬರಹವಿದೆ.

  • ಸೋನು ಶ್ರೀನಿವಾಸ್ ಗೌಡ ತುಂಬಾ ಒಳ್ಳೆಯ ಹುಡುಗಿ, ಫೇಕ್ ಗುಣವಿಲ್ಲ: ಅರ್ಜುನ್ ರಮೇಶ್

    ಸೋನು ಶ್ರೀನಿವಾಸ್ ಗೌಡ ತುಂಬಾ ಒಳ್ಳೆಯ ಹುಡುಗಿ, ಫೇಕ್ ಗುಣವಿಲ್ಲ: ಅರ್ಜುನ್ ರಮೇಶ್

    ಬಿಗ್ ಬಾಸ್ ಮನೆಯಲ್ಲಿ ಇರುವವರಲ್ಲಿ ಕೆಲವು ವ್ಯಕ್ತಿಗಳಿಗೆ ತುಂಬಾ ಕ್ಲ್ಯಾರಿಟಿ ಇದೆ. ಇನ್ನೂ ಕೆಲವರು ತಮ್ಮಿಷ್ಟದಂತೆ ಬದುಕುತ್ತಿದ್ದಾರೆ. ಆದರೆ, ಸೋನು ಶ್ರೀನಿವಾಸ್ ಗೌಡ ಅವರಲ್ಲಿ ಯಾವತ್ತೂ ನಾನು ಫೇಕ್ ಕಾಣಲಿಲ್ಲ. ಅವರು ಮುಖವಾಡ ಹಾಕಿಕೊಂಡು ಆಟವಾಡುತ್ತಿಲ್ಲ. ನಾನು ಮೊದಲ ದಿನದಿಂದ ಗಮನಿಸುತ್ತಿದ್ದೇನೆ, ಅವರು ತುಂಬಾ ಒಳ್ಳೆಯ ಹುಡುಗಿ ಎಂದು ಕೊಂಡಾಡಿದ್ದಾರೆ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ನಟ ಅರ್ಜುನ್ ರಮೇಶ್.

    ಬಿಗ್ ಬಾಸ್ ಮನೆಗೆ ಹೋಗುವುದಕ್ಕೂ ಮುಂಚೆ ಸೋನು ಶ್ರೀನಿವಾಸ್ ಗೌಡ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿರುವ ಅರ್ಜುನ್, ಅವರ ಫೋಟೋವಾಗಲಿ, ವಿಡಿಯೋವಾಗಲಿ ಯಾವುದನ್ನೂ ನಾನು ಗಮನಿಸಿಲ್ಲ. ಅಸಲಿಯಾಗಿ ಅವರು ಯಾರು ಅಂತಾನೇ ನನಗೆ ಗೊತ್ತಿಲ್ಲ ಎಂದಿದ್ದಾರೆ. ಎರಡು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಅವರೊಟ್ಟಿಗೆ ಇದ್ದಾಗ ಅವರನ್ನು ನೋಡಿ ನನಗೆ ಅನಿಸಿದ್ದು ಇಷ್ಟೆ. ಅವರು ಫೇಕ್ ಅಲ್ಲ ಅಂತ ಎಂದು ಮೆಚ್ಚಿ ಮಾತನಾಡಿದ್ದಾರೆ.

    ಸೋನು ಶ್ರೀನಿವಾಸ್ ಗೌಡ ಕುರಿತು ಬಿಗ್ ಬಾಸ್ ಮನೆಯಲ್ಲಿ ಬರೀ ನೆಗೆಟಿವ್ ಕಾಮೆಂಟ್ ಗಳೇ ಬರುತ್ತವೆ. ಪ್ರತಿಯೊಬ್ಬರು ಆ ಹುಡುಗಿಯ ಬಗ್ಗೆ ನೆಗೆಟಿವ್ ಆಗಿಯೇ ಮಾತನಾಡಿದ್ದಾರೆ. ಆದರೆ, ನನಗೆ ಯಾವತ್ತೂ ಆಕೆ ಹಾಗೆ ಅನಿಸಿಲ್ಲ. ಯಾಕೆಂದರೆ, ನನಗೆ ಆಕೆಯ ಯಾವ ವಿಷಯವೂ ನನಗೆ ಗೊತ್ತಿಲ್ಲ. ಎರಡು ವಾರಗಳಿಂದ ಪರಿಚಯವಷ್ಟೇ. ಅದನ್ನೇ ಆಧಾರವಾಗಿ ಇಟ್ಟುಕೊಂಡು ಹೇಳುತ್ತೇನೆ ಮತ್ತು ಆಕೆಯ ನಡೆಗೆ ಬೆಂಬಲಿಸುತ್ತೇನೆ ಎಂದಿದ್ದಾರೆ ಅರ್ಜುನ್ ರಮೇಶ್.

    Live Tv
    [brid partner=56869869 player=32851 video=960834 autoplay=true]

  • ಕೈ ಕಾಲು ಮುರಿದುಕೊಂಡು ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಿದ್ದಾರೆ ಸ್ಪರ್ಧಿಗಳು: ದೊಡ್ಮನೆ ವಾಸ್ತು ಬಗ್ಗೆ ನೆಟ್ಟಿಗರು ಪ್ರಶ್ನೆ

    ಕೈ ಕಾಲು ಮುರಿದುಕೊಂಡು ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಿದ್ದಾರೆ ಸ್ಪರ್ಧಿಗಳು: ದೊಡ್ಮನೆ ವಾಸ್ತು ಬಗ್ಗೆ ನೆಟ್ಟಿಗರು ಪ್ರಶ್ನೆ

    ಬಿಗ್ ಬಾಸ್ ಮನೆಯ ವಾಸ್ತು ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಜನರ ಭವಿಷ್ಯ ಹೇಳುತ್ತಿದ್ದ ಆರ್ಯವರ್ಧನ್ ಗುರೂಜಿಯೇ ಮನೆ ಒಳಗೆ ಇದ್ದರೂ, ಮನೆಯ ವಾಸ್ತು ಯಾಕೋ ಸರಿ ಇಲ್ಲ ಅನಿಸುತ್ತಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಈ ರೀತಿಯ ಕಾಮೆಂಟ್ ಬರುವುದಕ್ಕೆ ಕಾರಣ, ಸ್ಪರ್ಧಿಗಳು ಕೈ ಕಾಲು ಮುರಿದುಕೊಂಡು ಹೊರ ಬರುತ್ತಿದ್ದಾರೆ.

    ಕಳೆದ ವಾರ ಕಾಮಿಡಿ ನಟ ಲೋಕೇಶ್ ಅವರು ಏಟು ಮಾಡಿಕೊಂಡ ಕಾರಣಕ್ಕಾಗಿ ಮನೆಯಿಂದ ಆಚೆ ಬಂದಿದ್ದರು. ಆಟ ಆಡುವ ಸಂದರ್ಭದಲ್ಲಿ ಅವರಿಗೆ ಬಲವಾದ ಏಟಾಗಿತ್ತು. ಹಾಗಾಗಿ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಮತ್ತೆ ಅವರು ವಾಪಸ್ಸು ಬಿಗ್ ಬಾಸ್ ಮನೆಗೆ ಹೋಗಿಲ್ಲ. ಆರೋಗ್ಯದ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಬಲ್ಲ ಮೂಲಗಳ ಪ್ರಕಾರ ಸದ್ಯ ಅವರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ ಕಾನಿಷ್ಕಾ ಸೋನಿ

    ಎರಡನೇ ವಾರದಲ್ಲಿ ಮತ್ತೆ ಏಟು ಮಾಡಿಕೊಂಡಿದ್ದಾರೆ ಅರ್ಜುನ್ ರಮೇಶ್. ಈ ಹಿಂದೆ ಲೋಕೇಶ್ ಅವರಿಗೆ ಕಾಲಿಗೆ ಪೆಟ್ಟಾಗಿದ್ದರೆ, ಇವರಿಗೆ ಕೈ ಪೆಟ್ಟಾಗಿದೆ. ಅದೇ ನೋವಿನಲ್ಲೇ ಒಂದು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲೇ ಉಳಿದುಕೊಂಡಿದ್ದ ಅರ್ಜುನ್ ರಮೇಶ್ ಕೈ ನೋವು ವಾಸಿ ಆಗದೇ ಇರುವ ಕಾರಣಕ್ಕಾಗಿ ಈ ವಾರ ಮನೆಯಿಂದ ಆಚೆ ಬಂದಿದ್ದಾರೆ ಎನ್ನಲಾಗುತ್ತಿದೆ. ಮನೆಯಿಂದ ಆಚೆ ಬರುತ್ತಿದ್ದಂತೆಯೇ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನುವ ಮಾಹಿತಿಯೂ ಇದೆ.

    ಅಷ್ಟೇ ಅಲ್ಲದೇ ಮನೆಯಲ್ಲಿದ್ದ ಸೋನು ಶ್ರೀನಿವಾಸ್ ಗೌಡ, ಸಾನ್ಯ ಐಯ್ಯರ್ ಕೂಡ ಸಣ್ಣ ಪುಟ್ಟ ಗಾಯಗಳನ್ನು ಮಾಡಿಕೊಂಡು, ಆ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಬಿಗ್ ಬಾಸ್ ಮನೆಯ ವಾಸ್ತುವನ್ನು ಒಂದು ಸಲ ಚೆಕ್ ಮಾಡಿಸಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಎಲಿಮಿನೇಟ್ ಆಗಿ ಮನೆಯಿಂದ ಆಚೆ ಬರುವುದು ವಾಡಿಕೆ. ಆದರೆ, ಈ ಬಾರಿ ವಾರಕ್ಕೊಬ್ಬರು ಏಟು ಮಾಡಿಕೊಂಡು ಮನೆಯಿಂದ ಔಟ್ ಆಗುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Bigg Boss OTT- ಬಿಗ್ ಬಾಸ್ ಮನೆಯಿಂದ ಅರ್ಜುನ್ ರಮೇಶ್ ಔಟ್: ಕಣ್ಣೀರಿಟ್ಟ ದೊಡ್ಮನೆ

    Bigg Boss OTT- ಬಿಗ್ ಬಾಸ್ ಮನೆಯಿಂದ ಅರ್ಜುನ್ ರಮೇಶ್ ಔಟ್: ಕಣ್ಣೀರಿಟ್ಟ ದೊಡ್ಮನೆ

    ಬಿಗ್ ಬಾಸ್ ಮನೆಯಿಂದ ಈ ವಾರ ಎಲಿಮಿನೇಟ್ ಆಗುವವರು ಯಾರು ಎಂಬ ಕುತೂಹಲ ಮೂಡಿತ್ತು. ಅಂದುಕೊಂಡಂತೆ ಆಗಿದ್ದರೆ ಸ್ಪೂರ್ತಿ ಗೌಡ ಅಥವಾ ಅಕ್ಷತಾ ಕುಕ್ಕಿ ದೊಡ್ಮನೆಯಿಂದ ಆಚೆ ಬರಲಿದ್ದಾರೆ ಎಂದು ಊಹಿಸಲಾಗಿತ್ತು. ಈ ಊಹೆಗೂ ನಿಲುಕದಂತಹ ಘಟನೆಯೊಂದು ಬಿಗ್ ಬಾಸ್ ಮನೆಯಲ್ಲಿ ನಡೆದಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಅರ್ಜುನ್ ರಮೇಶ್ ಔಟ್ ಆಗಿದ್ದಾರೆ.

    ಅರ್ಜುನ್ ರಮೇಶ್ ಎಲ್ಲರ ನೆಚ್ಚಿನ ಸ್ಪರ್ಧಿಯಾಗಿದ್ದರು. ಮನೆಯಲ್ಲಿದ್ದವರೇ ಪ್ರೀತಿಯಿಂದಲೇ ಅರ್ಜುನ್ ಅವರನ್ನು ಅಣ್ಣ ಎಂದೇ ಕರೆಯುತ್ತಿದ್ದರು. ಅವರ ಖಾಸಗಿ ವಿಚಾರಗಳನ್ನು ಹಂಚಿಕೊಂಡಾಗ ಅನೇಕರು ಅವರಿಗೆ ಮತ್ತಷ್ಟು ಹತ್ತಿರವಾಗಿದ್ದರು. ಹಾಗಾಗಿಯೇ ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಗಿಯೂ ಆಯ್ಕೆಯಾಗಿದ್ದರು. ಈ ಕ್ಯಾಪ್ಟನ್ ಶಿಪ್ ಅವರಿಗೆ ಮುಳುವಾಯಿತು. ಆಟದಲ್ಲಿ ಕೈಗೆ ಏಟು ಮಾಡಿಕೊಂಡು ನೋವಿನಿಂದಲೇ ಇಷ್ಟು ದಿನ ಕಳೆದಿದ್ದಾರೆ. ನೋವು ನಿವಾರಣೆ ಆಗದೇ ಇರುವ ಕಾರಣಕ್ಕಾಗಿ ಅವರು ಅನಿವಾರ್ಯವಾಗಿ ಮನೆಯಿಂದ ಆಚೆ ಬರಬೇಕಾಗಿದೆ. ಇದನ್ನೂ ಓದಿ: ಫಸ್ಟ್‌ ಟೈಮ್ ಮುದ್ದಾದ ಎರಡೂ ಮಕ್ಕಳ ಮುಖ ತೋರಿಸಿದ ನಟಿ ಅಮೂಲ್ಯ

    ಸತತ ಒಂದು ವಾರದಿಂದ ಕೈಗೆ ನೋವು ಮಾಡಿಕೊಂಡೇ ಆಟದಲ್ಲಿ ಭಾಗಿಯಾಗುತ್ತಿದ್ದ ಅರ್ಜುನ್  ರಮೇಶ್ ಅವರನ್ನು ಎಲಿಮಿನೇಟ್ ಮಾಡದೇ ನೇರವಾಗಿಯೇ ಮನೆಯಿಂದ ಆಚೆ ಕಳುಹಿಸಲಾಗಿದೆ. ಹೀಗಾಗಿ ಇಡೀ ಮನೆಯಲ್ಲಿ ಭಾವುಕತೆ ತುಂಬಿತ್ತು. ಕೆಲವರಂತೂ ಅತ್ತೆ ಬಿಟ್ಟರು. ಮನೆಯಿಂದ ಅವರನ್ನು ಕಳುಹಿಸುವಾಗಲ ಆದಷ್ಟು ಬೇಗ ಗುಣಮುಖರಾಗಿ ಎಂದು ಶುಭ ಹಾರೈಸಿ ಕಳುಹಿಸಿ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನು ಎಷ್ಟೋ ಜನರ ಜೊತೆ ಫ್ಲರ್ಟ್ ಮಾಡಿದ್ದೇನೆ ಲೆಕ್ಕವಿಲ್ಲ: ಅರ್ಜುನ್ ರಮೇಶ್

    ನಾನು ಎಷ್ಟೋ ಜನರ ಜೊತೆ ಫ್ಲರ್ಟ್ ಮಾಡಿದ್ದೇನೆ ಲೆಕ್ಕವಿಲ್ಲ: ಅರ್ಜುನ್ ರಮೇಶ್

    ಕಿರುತೆರೆಯ ಸೂಪರ್ ಹಿಟ್ ಶನಿ, ನಾಗಿಣಿ ಸೀರಿಯಲ್ ಮೂಲಕ ಮನೆಮಾತಾದ ನಟ ಅರ್ಜುನ್ ರಮೇಶ್ ಈಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಇನ್ನು ಶೋನಲ್ಲಿ ತಮ್ಮ ಇಬ್ಬರ ಪತ್ನಿಯರ ಬಗ್ಗೆ ಜತೆಗೆ ರಿಲೇಷನ್‌ಶಿಪ್ ಕುರಿತು ನಟ ಮಾತನಾಡಿದ್ದಾರೆ.

    ನಟ ಅರ್ಜುನ್ ರಮೇಶ್ ಅವರು ರಾಜಕೀಯ, ನಟನೆ ಎರಡರಲ್ಲೂ ಮುಂಚೂಣಿಯಲ್ಲಿರುವ ನಟ. ಅವರು ಬಿಗ್ ಬಾಸ್ ಮನೆಯಲ್ಲಿ ವೈಯಕ್ತಿಕ ವಿಚಾರದಿಂದ ಸಾಕಷ್ಟು ಚರ್ಚೆ ಆಗುತ್ತಿದ್ದಾರೆ. ತಮ್ಮ ವೈಯಕ್ತಿಕ ಬದುಕಿನ ಅಸಲಿ ಕಥೆಯನ್ನ ಬಿಚ್ಚಿಟ್ಟಿದ್ದಾರೆ. ತಮಗೆ ಎರಡು ಮದುವೆ ಆಗಿದೆ ಎಂದು ಇದನ್ನು ಆರಂಭದಲ್ಲೇ ಹೇಳಿಕೊಂಡಿದ್ದರು. ಈಗ ಅವರು ಒಂದು ಅಚ್ಚರಿಯ ವಿಚಾರ ಹೇಳಿಕೊಂಡಿದ್ದಾರೆ. ಇನ್ನು ಫ್ಲರ್ಟ್ ವಿಚಾರದಲ್ಲಿ ಸಂಜಯ್ ದತ್ ಅವರನ್ನು ಮೀರಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ರಾಣಾ ದಗ್ಗುಬಾಟಿ ವೈವಾಹಿಕ ಜೀವನದಲ್ಲಿ ಬಿರುಕು?

    ನಾನು ಎಷ್ಟು ಜನರ ಜತೆ ಫ್ಲರ್ಟ್ ಮಾಡಿದ್ದೇನೆ ಎಂಬುದು ನನಗೇ ಗೊತ್ತಿಲ್ಲ. ಆ ಲೆಕ್ಕವನ್ನು ಇಲ್ಲಿ ಕೊಡೋಕೆ ಹೋಗಲ್ಲ. ಇದರ ಲೆಕ್ಕ ನೀಡೋಕೆ ಹೋದರೆ ಸಂಜಯ್ ದತ್ ಅವರನ್ನು ನಾನು ಹಿಂದಿಕ್ಕುತ್ತೇನೆ ಎಂದಿದ್ದಾರೆ ಅರ್ಜುನ್ ರಮೇಶ್. ಈ ಮೂಲಕ ಅವರು ಸಾಕಷ್ಟು ಜನರ ಜತೆ ರಿಲೇಶನ್‌ಶಿಪ್‌ನಲ್ಲಿದ್ದೆ, ಫ್ಲರ್ಟ್ ಮಾಡಿದ್ದೆ ಎಂಬ ವಿಚಾರವನ್ನು ಒಪ್ಪಿಕೊಂಡಿದ್ದಾರೆ.

    ನಾನು ಬಿಗ್ ಬಾಸ್‌ಗೆ ಹೋಗುವ ದಿನ ನನ್ನ ಇಡೀ ಕುಟುಂಬದವರು ಅಳೋಕೆ ಶುರು ಮಾಡಿದರು. ಅವರಿಗೆ ನನ್ನ ಬಿಟ್ಟು ಬೇರೆ ಪ್ರಪಂಚ ಇಲ್ಲ. ಮಿಲನ್ ನನ್ನ ಮೊದಲ ಹೆಂಡತಿ. ಮದುವೆ ಆಗಿದ್ದಾಗಲೇ ರವಿಕಾ ಜತೆ ಪ್ರೀತಿಯಲ್ಲಿದ್ದೆ. ರವಿಕಾಳನ್ನು ಸುಮಾರು ಐದು ವರ್ಷಗಳ ಕಾಲ ಹೊರ ಜಗತ್ತಿನಿಂದ ಬಚ್ಚಿಟ್ಟೆ. ರವಿಕಾಳನ್ನು ಭೇಟಿ ಮಾಡುವ ವಿಚಾರ ಮಿಲನ್‌ಗೆ ಗೊತ್ತಾದರೆ ಎಂಬ ಭಯ ಸದಾ ಕಾಡುತ್ತಿತ್ತು. ನಿಮ್ಮ ಲೈಫ್ ಅರ್ಥ ಏನು ಎಂದು ರವಿಕಾ ಪಾಲಕರು ಒಂದು ದಿನ ಕೇಳಿದರು ಎಂದು ತಮ್ಮ ಹಳೆಯ ಪ್ಲ್ಯಾಶ್‌ ಬ್ಯಾಕ್ ಸ್ಟೋರಿ ನೆನಪಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]