Tag: ಅರ್ಜುನ್ ಯೋಗಿ

  • ‘ಅನಾವರಣ’ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

    ‘ಅನಾವರಣ’ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

    ನಾವರಣ (Anavarana) ಸಿನಿಮಾದ ಹಾಡುಗಳು ಈಗಾಗಲೇ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಮೊದಲ ನೋಟ ಬಿಡುಗಡೆಯಾಗಿದೆ. ಪ್ರೀತಿ, ಕೊಲೆ ಕುಟುಂಬ, ಎಮೋಷನ್ ಜೊತೆಗೆ ಸಸ್ಪೆನ್ಸ್ ಅಂಶಗಳಿಂದ ಕೂಡಿರುವ ಚಿತ್ರದ ಟ್ರೈಲರ್ (Trailer) ನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ ಶುಭಾಶಯ ಕೋರಿದ್ದಾರೆ.

    ಕಿಚ್ಚ ಸುದೀಪ್ (Kiccha Sudeep) ಮಾತನಾಡಿ, ರಾಮಚಂದ್ರ, ಅದ್ವೈತ್ ಪ್ರಭಾಕರ್ ನಿರ್ಮಾಣ ಮಾಡಿರುವ, ಮೊದಲ ಬಾರಿಗೆ ಮಂಜು ಹರಿ ನಿರ್ದೇಶನ ಮಾಡಿರುವ, ಅರ್ಜುನ್ ಯೋಗಿ (Arjun Yogi) ನಟನೆಯ ಅನಾವರಣ ಸಿನಿಮಾದ ಟ್ರೈಲರ್ ನೋಡಿದೆ. ಅವರ ತಂಡಕ್ಕೆ ಅವರ ಪರಿಶ್ರಮಕ್ಕೆ ಒಳ್ಳೆದಾಗಲಿ. ಟ್ರೈಲರ್ ನೋಡ್ತಾ ಇರಬೇಕಾದ್ರೆ ಬಹಳ ಪರಿಚಯಸ್ಥರು ತುಂಬ ಜನ ಸಿನಿಮಾದಲ್ಲಿದ್ದಾರೆ. ಎಲ್ಲರಿಗೂ ಒಳ್ಳೆದಾಗಲಿ ಎಂದರು.

    ಫ್ಯಾಮಿಲಿ ಡ್ರಾಮಾ ಜೊತೆಗೆ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಾವರಣ ಸಿನಿಮಾ ಡಿಸೆಂಬರ್ ನಲ್ಲಿ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಹರೀಶ್ ಕುಮಾರ್ ಹಾಗೂ ಮಂಜುನಾಥ್ ಪಿಳ್ಳಪ್ಪ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ರಂಗ ಕಲಾವಿದರು ನಿರ್ದೇಶಕರು ಆಗಿರುವ ಹರೀಶ್ ಕುಮಾರ್ ಹಾಗೂ ಮಂಜುನಾಥ್ ಪಿಳ್ಳಪ್ಪ ಇಬ್ಬರು ಅನಾವರಣ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ 40ಕ್ಕೂ ಹೆಚ್ಚು ಕಿರು ಚಿತ್ರಗಳನ್ನು ಮಾಡಿರುವ ಅನುಭವ ಈ ಇಬ್ಬರು ನಿರ್ದೇಶಕರಿಗಿದೆ.

    ನಮ್ಮ ಸಿನಿಮಾ ಬ್ಯಾನರ್ ನಡಿ ಅದ್ವೈತ್ ಪ್ರಭಾಕರ್, ಆರ್.ರಾಮಚಂದ್ರ, ಸತ್ಯ ರಾಣಿ ಜಿ ಮತ್ತು ರಚನಾ ಬಿ. ಹೆಚ್ ನಿರ್ಮಾಣಗೊಂಡಿರುವ ಅನಾವರಣ ಸಿನಿಮಾದಲ್ಲಿ ಅರ್ಜುನ್ ಯೋಗಿ, ಸಾರಿಕಾ ರಾವ್ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ, ರಥಸಪ್ತಮಿ ಅರವಿಂದ್, ಕಾಮಿಡಿ ಕಿಲಾಡಿ ಸೂರಜ್, ಸೂರ್ಯ, ಸಂತು, ವಾಣಿ, ರಾಜೇಶ್ವರಿ, ಕಮಲಾ, ಯುಕ್ತಾ, ಧರಣಿ ಕುಮಾರ್, ಸಿದ್ದೀ ವಿನಾಯಕ, ಗಿರೀಶ್ ಯು.ಬಿ, ಶಿವರಾಜ್, ರಂಗೋಲಿ ವಿಜಿ, ರಾಜುಹಾಸನ್, ಬೇಬಿ ದೃತಿ ಶುತ್ವ ಮತ್ತು ಅಭಿ ತಾರಾಬಳಗದಲ್ಲಿದ್ದಾರೆ.

    ವೆಂಕಿ ಸಂಕಲನ, ಡಾ.ವಿ.ನಾಗೇಂದ್ರ ಪ್ರಸಾದ್ ಮತ್ತು ಶಶಿಕುಮಾರ್ ಬೆಳಕವಾಡಿ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಹಿನ್ನಲೆ ಸಂಗೀತ ಬಿ.ಆರ್.ಹೇಮಂತ್ ಕುಮಾರ್, ವಿಶಾಲ್ ಸಿ ಕೃಷ್ಣ ಸಂಗೀತ, ನಂದಕುಮಾರ್ ಛಾಯಾಗ್ರಹಣ, ಮದನ್ ಹರಿಣಿ ಮತ್ತು ರಾಮ್ಜ್ ನೃತ್ಯ ಸಂಯೋಜನೆ ಸಿನಿಮಾಕ್ಕಿದೆ.

  • ಅರ್ಜುನ್ ಯೋಗಿ ನಟನೆಯ ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್

    ಅರ್ಜುನ್ ಯೋಗಿ ನಟನೆಯ ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್

    ಮ್ಮ ಸಿನಿಮಾ ಬ್ಯಾನರ್ ನಡಿ ಅದ್ವೈತ್ ಪ್ರಭಾಕರ್, ಆರ್.ರಾಮಚಂದ್ರ, ಸತ್ಯ ರಾಣಿ ಜಿ & ರಚನಾ ಬಿ. ಹೆಚ್ ನಿರ್ಮಾಣದ ‘ಅನಾವರಣ’ (Anavarana) ಸಿನಿಮಾದ ಎರಡನೇ ಹಾಡು (Song) ಬಿಡುಗಡೆಯಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಏನಾಗಿದೆ ಎಂಬ ಪ್ರೇಮಗೀತೆಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಅನಾವರಣ ಸಿನಿಮಾದ ರೀ ದೇವರೇ ಎಂಬ ಮತ್ತೊಂದು ಗಾನಬಜಾನ ಬಿಡುಗಡೆಯಾಗಿದೆ. ಗಂಡ ಹೆಂಡತಿ ನಡುವಿನ ಮೆಲೋಡಿ ಮಸ್ತಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಹರೀಶ್ ಕುಮಾರ್ ಬಿ.ಕೆ ಹಾಗೂ ಮೇಘನಾ ಕುಲಕರ್ಣಿ ಜೋಶಿ ಕಂಠ ಕುಣಿಸಿದ್ದಾರೆ. ಅರ್ಜುನ್ ಯೋಗಿ ಹಾಗೂ ಸಾರಿಕಾ ರಾವ್ ರೀ ದೇವರೇ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

    ಅರ್ಜುನ್ ಯೋಗಿ (Arjun Yogi), ಸಾರಿಕಾ ರಾವ್ (Sarika Rao) ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ, ರಥಸಪ್ತಮಿ ಅರವಿಂದ್, ಕಾಮಿಡಿ ಕಿಲಾಡಿ ಸೂರಜ್, ಸೂರ್ಯ, ಸಂತು, ವಾಣಿ, ರಾಜೇಶ್ವರಿ, ಕಮಲಾ, ಯುಕ್ತಾ, ಧರಣಿ ಕುಮಾರ್, ಸಿದ್ದೀ ವಿನಾಯಕ, ಗಿರೀಶ್ ಯು.ಬಿ, ಶಿವರಾಜ್, ರಂಗೋಲಿ ವಿಜಿ.. ಬೇಬಿ ದೃತಿ ಶುತ್ವ ಮತ್ತು ಅಭಿ ತಾರಾಬಳಗದಲ್ಲಿದ್ದಾರೆ. ರಂಗ ಕಲಾವಿದರು ನಿರ್ದೇಶಕರು ಆಗಿರುವ ಹರೀಶ್ ಕುಮಾರ್ ಹಾಗೂ ಮಂಜುನಾಥ್ ಪಿಳ್ಳಪ್ಪ ಇಬ್ಬರು ಅನಾವರಣ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ 40ಕ್ಕೂ ಹೆಚ್ಚು ಕಿರು ಚಿತ್ರಗಳನ್ನು ಮಾಡಿರುವ ಅನುಭವ ಈ ಇಬ್ಬರು ನಿರ್ದೇಶಕರಿಗಿದೆ.

    ವೆಂಕಿ UDV ಸಂಕಲನ, ಡಾ.ವಿ.ನಾಗೇಂದ್ರ ಪ್ರಸಾದ್ ಮತ್ತು ಶಶಿಕುಮಾರ್ ಬೆಳಕವಾಡಿ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಹಿನ್ನಲೆ ಸಂಗೀತ ಬಿ.ಆರ್.ಹೇಮಂತ್ ಕುಮಾರ್, ವಿಶಾಲ್ ಸಿ ಕೃಷ್ಣ ಸಂಗೀತ, ನಂದಕುಮಾರ್ ಛಾಯಾಗ್ರಹಣ, ಮದನ್ ಹರಿಣಿ ಮತ್ತು ರಾಮ್ಜ್ ನೃತ್ಯ ಸಂಯೋಜನೆ ಸಿನಿಮಾಕ್ಕಿದೆ. ಫ್ಯಾಮಿಲಿ ಡ್ರಾಮಾ ಜೊತೆಗೆ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಾವರಣ ಸಿನಿಮಾ ಡಿಸೆಂಬರ್ 1ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದ್ದು, ವಿಜಯ್ ಸಿನಿಮಾಸ್ ಬಿಡುಗಡೆ ಮಾಡಲಿದ್ದಾರೆ.

    ನಟ ಅರ್ಜುನ್ ಯೋಗಿ ಕಿರುತೆರೆಯಲ್ಲಂತೂ ಬಹಳಷ್ಟು ಹೆಸರು ಮಾಡಿದರು. ವರ್ಷಗಳ ಕಾಲ ಕಿರುತೆರೆಯಲ್ಲಿ ಅಭಿನಯಿಸಿ ತಮ್ಮ ನಟನೆಯ ಮೂಲಕ ಕಿರುತೆರೆ ಪ್ರಿಯರನ್ನು ರಂಜಿಸಿದ್ದಲ್ಲದೆ ಬೆಳ್ಳಿತೆರೆಯಲ್ಲೂ ಅದ್ಭುತಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿ ತಮ್ಮ ಅಭಿನಯ ಶಕ್ತಿಯನ್ನು ತೋರಿಸಿದರು. ಧಾರಾವಾಹಿ ಅಷ್ಟೇ ಅಲ್ಲದೆ ಕೆಲವು ರಿಯಾಲಿಟಿ ಶೋಗಳಲ್ಲಿಯೂ ಇವರು ಚೆನ್ನಾಗಿ ಹೆಸರು ಮಾಡಿದ್ದಾರೆ.

  • ‘ಅನಾವರಣ’ ಚಿತ್ರದ ಮೊದಲ ಹಾಡು ರಿಲೀಸ್: ಅರ್ಜುನ್ ಯೋಗಿ ಸಿನಿಮಾ

    ‘ಅನಾವರಣ’ ಚಿತ್ರದ ಮೊದಲ ಹಾಡು ರಿಲೀಸ್: ಅರ್ಜುನ್ ಯೋಗಿ ಸಿನಿಮಾ

    ಮ್ಮ ಸಿನಿಮಾ ಬ್ಯಾನರ್ ನಡಿ ಅದ್ವೈತ್ ಪ್ರಭಾಕರ್, ಆರ್. ರಾಮಚಂದ್ರ, ಸತ್ಯ ರಾಣಿ ಜಿ ಮತ್ತು ರಚನಾ ಬಿ. ಹೆಚ್ ನಿರ್ಮಾಣದ ‘ಅನಾವರಣ’ (Anavarana) ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಏನಾಗಿದೆ ಎಂಬ ಪ್ರೇಮಗೀತೆಗೆ ಶಶಿಕುಮಾರ್ ಬೆಳವಾಡಿ ಸಾಹಿತ್ಯ ಬರೆದಿದ್ದು, ವಿಶಾಲ್ ಸಿ ಕೃಷ್ಣ ಟ್ಯೂನ್ ಹಾಕಿದ್ದಾರೆ. ಅರ್ಜುನ್ ಯೋಗಿ (Arjun Yogi), ಸಾರಿಕಾ ರಾವ್ (Sarika Rao) ಹಾಡಿನಲ್ಲಿ ಮಿಂಚಿದ್ದಾರೆ.

    ನಿರ್ದೇಶಕ ಹರೀಶ್ ಕುಮಾರ್ (Harish Kumar) ಮಾತನಾಡಿ, ಇದು ನಮ್ಮ ಹಲವಾರು ವರ್ಷದ ಕನಸು. ನಾನು 15 ವರ್ಷ ರಂಗಭೂಮಿಯಲ್ಲಿ ದುಡಿದೆವು. ಸಿನಿಮಾ ಸೆಳೆತ ಬಂತು. 40 ಕಿರುಚಿತ್ರ ನಿರ್ದೇಶಿಸಿದ್ದೇವೆ. ನಮ್ಮ ಕಥೆ ಒಳ್ಳೆ ಒಮ್ಮತ ಬಂತು. ಹೀಗಾಗಿ ಚಿತ್ರ ಮಾಡಲು ಹೆಜ್ಜೆ ಇಟ್ಟೆವು. ಚಿತ್ರದಲ್ಲಿ ಬರುವ ಹಲವಾರು ವಿಶೇಷತೆಗಳ ಅನಾವರಣ. ನಮ್ಮ ನಿರ್ದೇಶಕರ ಪಯಣಕ್ಕೆ ಅನಾವರಣ. ಒಳ್ಳೆ ಸಾಹಿತ್ಯದ ಅನಾವರಣ, ಇಬ್ಬರು ಬೆನ್ನುತಟ್ಟಿದ ನಿರ್ಮಾಪಕ ಅನಾವರಣ.. ನಮ್ಮದೇ ಕಥೆ ಅನಿಸುವ ಸಿನಿಮಾವಿದು ಎಂದರು. ನಿರ್ದೇಶಕ ಮಂಜುನಾಥ್ ಮಾತನಾಡಿ, ತುಂಬಾ ಪ್ರೀತಿ ಮಾಡುವವರು, ತುಂಬಾ ಪ್ರೀತಿಯಾದರೆ ಯಾವ ರೀತಿ, ಕಾಟ, ಭಾದೆ ಇರುತ್ತದೆ ಅನ್ನುವುದನ್ನು ಸಿನಿಮಾದಲ್ಲಿ ತೋರಿಸಿದ್ದೇವೆ ಎಂದರು.

    ಅರ್ಜುನ್ ಯೋಗಿ ಮಾತನಾಡಿ, ನನ್ನ ಹಿಂದಿನ ಸಿನಿಮಾ ಚೇಸ್ ನೋಡಿ ಕಾಲ್ ಮಾಡಿದ್ದರು. ಚಿತ್ರ ರಿಲೀಸ್ ದಿನ ನಮ್ಮ ಕೆಲಸ ನೋಡಿ ಮೆಚ್ಚಿ ಇನ್ನೊಂದು ಕೆಲಸ ಕೊಡ್ತಾರೆ ಅದೇ ಖುಷಿ ವಿಚಾರ. ಅನಾವರಣ ಚಿತ್ರಕ್ಕೆ ಇಬ್ಬರು ನಿರ್ದೇಶಕರು. ಅವರು ಏನ್ ಕಥೆ ಹೇಳಿದ್ದರು ಅದಕ್ಕಿಂತ ದುಪ್ಪಟ್ಟಾಗಿ ಸಿನಿಮಾ ಮೂಡಿಬಂದಿದೆ. ಗ್ಲಿಂಪ್ಸ್, ಟ್ರೇಲರ್ ನೋಡಿದ್ದೇನೆ. ಈ ತಂಡ ಗೆದ್ದರೆ ಇನ್ನೊಂದಿಷ್ಟು ಸಿನಿಮಾಗಳು ಹುಟ್ಟಿಕೊಳ್ಳುತ್ತದೆ. ತುಂಬಾ ಚೆನ್ನಾಗಿ ಕಥೆ ಕಟ್ಟಿದ್ದಾರೆ. ನನಗೆ ಬಹಳ ಇಷ್ಟವಾಗಿದೆ. ನಾನು ಸಾಫ್ಟ್ ವೇರ್ ಇಂಜಿನಿಯರ್ ಪಾತ್ರ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ ಎಂದರು.

    ನಟಿ ಸಾರಿಕಾ ಮಾತನಾಡಿ, ತುಂಬಾ ಪೊಸೆಸಿವ್ ನೆಸ್ ಆಗಿರುವ ಹುಡುಗಿ ಪಾತ್ರ ನನ್ನದು. ನಿಮಗೆ ಎಲ್ಲರಿಗೂ ಕೋಪ ಬರುತ್ತದೆ ಅಂತಹ ಕಾರೆಕ್ಟರ್. ಗಂಡ ಎಲ್ಲಿ ಹೋಗಲಿ ಬಿಡ್ಲಿ ಅವನಿಗೆ ಅಷ್ಟು ಟಾರ್ಚರ್ ಕೊಟ್ಟಾಗಿ ಬಿಟ್ಟಿದ್ದೇನೆ. ಶೂಟಿಂಗ್ ಸೆಟ್ ನಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದೇನೆ. ಶೂಟಿಂಗ್ ಅನಿಸುತ್ತನೆ ಇರಲಿಲ್ಲ. ಹಾಲಿಡೇ ತರ ಇತ್ತು. ಮಂಜು ಸರ್ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ನಿಮ್ಮ ಆಶೀರ್ವಾದ ನಮ್ಮ ಇಡೀ ತಂಡದ ಮೇಲೆ ಇರಬೇಕು ಎಂದರು.

     

    ಅರ್ಜುನ್ ಯೋಗಿ, ಸಾರಿಕಾ ರಾವ್ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ,ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ, ರತಸಪ್ತಮಿ ಅರವಿಂದ್, ಕಾಮಿಡಿ ಕಿಲಾಡಿ ಸೂರಜ್, ಸೂರ್ಯ, ಸಂತು, ವಾಣಿ, ರಾಜೇಶ್ವರಿ, ಕಮಲಾ ತಾರಾಬಳಗದಲ್ಲಿದ್ದಾರೆ. ಆಗಿದೆ. ಹರೀಶ್ ಕುಮಾರ್, ಮಂಜುನಾಥ್ ಪಿಳ್ಳಪ್ಪ ಇಬ್ಬರು ಅನಾವರಣ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ವೆಂಕಿ ಸಂಕಲನ, ಶಶಿಕುಮಾರ್ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ವಿಶಾಲ್ ಸಿ ಕೃಷ್ಣ ಸಿನಿಮಾಕ್ಕಿದೆ. ಫ್ಯಾಮಿಲಿ ಡ್ರಾಮಾ ಜೊತೆಗೆ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಾವರಣ ಶೂಟಿಂಗ್ ಮುಗಿಸಿ ಸೆನ್ಸಾರ್ ಅಂಗಳ ಹೋಗಲು ರೆಡಿಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಕ್ಷಿರಾಜನಾಗಿ ಚೇಸ್‍ಗೆ ಸಾಥ್ ಕೊಟ್ಟರೇ ಅರವಿಂದ್ ಬೋಳಾರ್?

    ಪಕ್ಷಿರಾಜನಾಗಿ ಚೇಸ್‍ಗೆ ಸಾಥ್ ಕೊಟ್ಟರೇ ಅರವಿಂದ್ ಬೋಳಾರ್?

    ತುಳು ಚಿತ್ರರಂಗದಲ್ಲಿ ತಮ್ಮ ಹಾಸ್ಯ ನಟನೆಯಿಂದ ಸ್ಟಾರ್ ನಟನಾಗಿ ಹೊರ ಹೊಮ್ಮಿರುವವರು ಅರವಿಂದ ಬೋಳಾರ್. ಅವರ ಖ್ಯಾತಿಯೀಗ ತುಳು ಚಿತ್ರರಂಗದ ಗಡಿ ದಾಟಿಕೊಂಡು ಎಲ್ಲೆಡೆ ಪಸರಿಸಿಕೊಂಡಿದೆ. ಬಾಡಿ ಲ್ವಾಗ್ವೇಜ್ ಮೂಲವೇ ನಗೆಯುಕ್ಕಿಸಬಲ್ಲ ಈ ಹಾಸ್ಯ ಕಲಾವಿದ ಇದೀಗ ಬಿಡುಗಡೆಯ ಹಂತದಲ್ಲಿರುವ ಚೇಸ್‍ ಚಿತ್ರದಲ್ಲಿಯೂ ಪ್ರಧಾನ ಪಾತ್ರವೊಂದರಲ್ಲಿ ನಟಿಸಿದ್ದಾರೆಂದು ಹೇಳಲಾಗುತ್ತಿದೆ. ನಿರ್ದೇಶಕ ವಿಲೋಕ್ ಶೆಟ್ಟಿ ಬೋಳಾರ್ ಗಾಗಿಯೇ ಒಂದು ವಿಭಿನ್ನವಾದ ಪಾತ್ರವನ್ನು ಸೃಷ್ಟಿಸಿದ್ದಾರಂತೆ. ಅದು ಕನ್ನಡ ಚಿತ್ರರಂಗದಲ್ಲಿಯೇ ಒಂದು ವಿಭಿನ್ನ ಪ್ರಯತ್ನವಾಗಿ ನೆಲೆ ನಿಲ್ಲುವಂಥಾ ಪಾತ್ರವೆಂಬ ಸಣ್ಣ ಮಾಹಿತಿಯೊಂದಷ್ಟೇ ಚಿತ್ರತಂಡದ ಕಡೆಯಿಂದ ಹೊರಬೀಳುತ್ತದೆ.

    ಇದು ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಚಿತ್ರ. ಹಾಗಂತ ಈ ಜಾನರಿನ ಸಿದ್ಧ ಸೂತ್ರಗಳಿಗೆ ಬದ್ಧವಾಗಿ ಚೇಸ್‍ ಸೃಷ್ಟಿಯಾಗಿಲ್ಲ ಅನ್ನೋದಕ್ಕೆ ಇತ್ತೀಚೆಗಷ್ಟೇ ಲಾಂಚ್ ಆಗಿರೋ ಟೀಸರ್ ಸಾಕ್ಷಿಯಂತಿದೆ. ನಿರ್ದೇಶಕ ವಿಲೋಕ್ ಶೆಟ್ಟಿ ಎರಡು ವರ್ಷಗಳ ಕಾಲ ಧ್ಯಾನದಂತೆಯೇ ಈ ಸಿನಿಮಾವನ್ನು ರೂಪಿಸಿದ್ದಾರೆ. ಈ ಸುದೀರ್ಘಾವಧಿಯ ಶ್ರಮವೆಲ್ಲವೂ ಟೀಸರ್ ಗೆ ಸಿಕ್ಕಿರುವ ಅಗಾಧ ಮೆಚ್ಚುಗೆ, ಸದಭಿಪ್ರಾಯಗಳಿಂದಲೇ ಸಾರ್ಥಕ್ಯ ಕಂಡಿವೆ. ಈ ಸಿನಿಮಾದಲ್ಲಿ ರಂಗಿತರಂಗ ಖ್ಯಾತಿಯ ರಾಧಿಕಾ ನಾರಾಯಣ್ ಮತ್ತು ಅವಿನಾಶ್ ನರಸಿಂಹರಾಜು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ಅರವಿಂದ್ ರಾವ್, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ವೀಣಾ ಸುಂದರ್, ಉಷಾ ಭಂಡಾರಿ, ಸುಂದರ್ ಮುಂತಾದವರ ತಾರಗಣವಿದೆ. ರೆಹಮಾನ್ ಹಾಸನ್ ಇನ್ನೊಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

    ಸಿಂಪ್ಲಿ ಫನ್ ಮೀಡಿಯಾ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರೋ ಚೇಸ್‍ ಚಿತ್ರದ ಪ್ರತೀ ಪಾತ್ರಗಳನ್ನೂ ಸಹ ನಿರ್ದೇಶಕ ವಿಲೋಕ್ ಶೆಟ್ಟಿ ಒಂದಕ್ಕಿಂತ ಒಂದು ಭಿನ್ನವಾಗಿರುವಂತೆಯೇ ನಟಿಸಿದ್ದಾರಂತೆ. ಅದೇ ರೀತಿಯಲ್ಲಿ ಅರವಿಂದ್ ಬೋಳಾರ್ ಅವರ ಪಾತ್ರವೂ ಸೃಷ್ಟಿಯಾಗಿದೆ. ರೋಬೋ 2.0 ಚಿತ್ರದಲ್ಲಿ ಅಕ್ಷಯ್ ಕುಮಾರ್ ಪಕ್ಷಿರಾಜನ ಪಾತ್ರದಲ್ಲಿ ನಟಿಸಿದ್ದರಲ್ಲಾ? ಅರವಿಂದ್ ಬೋಳಾರ್ ಪಾತ್ರವೂ ಅದೇ ಚಹರೆಯೊಂದಿಗೆ ಮೂಡಿ ಬಂದಿದೆಯಂತೆ. ಬೋಳಾರ್ ಒಂದು ಪಾತ್ರವನ್ನು ನಿರ್ವಹಿಸುತ್ತಿದ್ದಾರೆಂದರೆ ಅದರಲ್ಲಿ ಭರಪೂರ ನಗುವಿನ ಅಂಶಗಳು ಇದ್ದೇ ಇರುತ್ತವೆ. ಈ ಪಾತ್ರ ಅದೆಷ್ಟು ನಗೆಯುಕ್ಕಿಸುತ್ತದೆಯೆಂದರೆ, ಚಿತ್ರೀಕರಣದ ಸಂದರ್ಭದಲ್ಲಿ ನಗುವನ್ನು ಕಂಟ್ರೋಲು ಮಾಡಿಕೊಂಡು ನಟಿಸೋದೇ ಇತರೇ ಕಲಾವಿದರಿಗೊಂದು ದೊಡ್ಡ ಸವಾಲಿನಂತಾಗಿತ್ತಂತೆ. ಇನ್ನೇನು ಈ ಸಿನಿಮಾ ಬಿಡುಗಡೆಗೆ ತಯಾರಾಗಿರೋದರಿಂದ ಸದ್ಯದಲ್ಲಿಯೇ ಅರವಿಂದ್ ಬೋಳಾರ್ ಅವರ ನಗವಿನ ಕಚಗುಳಿಗೆ ಪ್ರೇಕ್ಷಕರೆಲ್ಲ ಒಡ್ಡಿಕೊಳ್ಳುವ ದಿನ ಹತ್ತಿರದಲ್ಲಿದೆ.