Tag: ಅರ್ಜುನ್ ತೆಂಡೂಲ್ಕರ್

  • ಅರ್ಜುನ್ ಬೌಲಿಂಗ್ ಎದುರಿಸುವುದು ಕಷ್ಟ: ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ

    ಅರ್ಜುನ್ ಬೌಲಿಂಗ್ ಎದುರಿಸುವುದು ಕಷ್ಟ: ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ

    ಲಂಡನ್: ಯುವ ಕ್ರಿಕೆಟಿಗ ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ಎದುರಿಸುವುದು ಕಷ್ಟ ಎಂದು ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಡೇನಿಯಲ್ ವ್ಯಾಟ್ ತಿಳಿಸಿದ್ದಾರೆ.

    ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜುನ್ ಹೆಚ್ಚಿನ ಸಮಯವನ್ನು ಇಂಗ್ಲೆಂಡ್‍ನಲ್ಲಿ ಕಳೆಯುತ್ತಾರೆ. ಇಂಗ್ಲೆಂಡ್ ಕ್ರಿಕೆಟ್ ಆಟಗಾರರಿಗೆ ತರಬೇತಿ ವೇಳೆ ಬೌಲಿಂಗ್ ಮಾಡುವ ಅವಕಾಶವನ್ನು ಅರ್ಜುನ್ ಪಡೆದಿದ್ದಾರೆ. ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಜೊತೆಯೂ ಅರ್ಜುನ್ ಹಲವು ಬಾರಿ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ.

    ತರಬೇತಿ ವೇಳೆ ಇಂಗ್ಲೆಂಡ್ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಡೇನಿಯಲ್ ವ್ಯಾಟ್‍ರೊಂದಿಗೆ ಸ್ನೇಹವನ್ನು ಬೆಳೆಸಿಕೊಂಡಿದ್ದರು. ಸದ್ಯ ಅರ್ಜನ್ ಬೌಲಿಂಗ್ ಕುರಿತು ಡೇನಿಯಲ್ ಆಸಕ್ತಿಕರ ಮಾಹಿತಿಯನ್ನು ಹಂಚಿಕೊಂಡಿದ್ದು, ಅರ್ಜುನ್ ನಾನು ಉತ್ತಮ ಸ್ನೇಹಿತರು. ಲಾಡ್ರ್ಸ್ ಕ್ರೀಡಾಂಗಣದಲ್ಲಿ ತರಬೇತಿ ಪಡೆಯಲು ಅರ್ಜುನ್ ಬರುತ್ತಿದ್ದರು. ಆಗ ಅರ್ಜುನ್ ಹೊಸ ಚೆಂಡಿನೊಂದಿಗೆ ಬೌಲ್ ಮಾಡಿದರೆ ಎದುರಿಸಲು ಭಯವಾಗುತ್ತಿತ್ತು. ನಾನು ಎಸೆಯುವ ಬೌನ್ಸರ್ ಗಳು ನಿಮ್ಮ ತಲೆಗೆ ಬಡಿಯುತ್ತವೆ ಎಂದು ಅರ್ಜುನ್ ಹೇಳುತ್ತಿದ್ದರು. ಅವರ ವೇಗದ ಬೌಲಿಂಗ್ ಎದುರಿಸಿ ಬ್ಯಾಟಿಂಗ್ ಮಾಡುವುದು ಬಹಳ ಕಷ್ಟ ಎಂದು ಡೇನಿಯಲ್ ಹೇಳಿದ್ದಾರೆ.

     

    View this post on Instagram

     

    Great to be back in Melbourne again ???? ????

    A post shared by Danielle Wyatt (@danniwyatt28) on

    ಶೀಘ್ರವೇ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅರ್ಜುನ್ ತೆಂಡೂಲ್ಕರ್ ಅವರನ್ನು ನೋಡುವ ಅವಕಾಶವಿದೆ. ಅಲ್ಲದೇ ನನಗೆ ಅರ್ಜುನ್ ಅವರ ತಾಯಿ ಅಂಜಲಿರೊಂದಿಗೆ ಹಲವು ಬಾರಿ ಮಾತನಾಡಿದ್ದೇನೆ. ಸಚಿನ್ ದಂಪತಿ ಇಂಗ್ಲೆಂಡ್ ಬಂದರೆ ತಪ್ಪದೇ ಭೇಟಿ ಮಾಡುತ್ತೇನೆ ಎಂದು ಡೇನಿಯಲ್ ವ್ಯಾಟ್ ತಿಳಿಸಿದ್ದಾರೆ. 2017ರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಡೇನಿಯಲ್ ವ್ಯಾಟ್ ಇಂಗ್ಲೆಂಡ್ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂಗ್ಲೆಂಡ್ ಪರ ಇದುವರೆಗೂ 74 ಏಕದಿನ, 109 ಟಿ20 ಪಂದ್ಯಗಳನ್ನು ಡೇನಿಯಲ್ ವ್ಯಾಟ್ ಆಡಿದ್ದಾರೆ.

     

    View this post on Instagram

     

    A post shared by Arjun Tendulkar (@arjuntendulkar24) on

  • ಮಗನ ಹೇರ್ ಕಟ್ ಮಾಡಿದ ಸಚಿನ್- ವಿಡಿಯೋ

    ಮಗನ ಹೇರ್ ಕಟ್ ಮಾಡಿದ ಸಚಿನ್- ವಿಡಿಯೋ

    ಮುಂಬೈ: ಬ್ಯಾಟಿಂಗ್ ಕೌಶಲ್ಯದಿಂದ ವಿಶ್ವದಾದ್ಯಂತ ಪ್ರಸಿದ್ಧರಾಗಿರುವ, ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಅವರು ಲಾಕ್‍ಡೌನ್‍ನಿಂದಾಗಿ ಮಗನ ಹೇರ್ ಕಟಿಂಗ್ ಮಾಡಿದ್ದಾರೆ.

    ಈ ಹಿಂದೆ ಸಚಿನ್ ಸ್ವತಃ ತಮ್ಮ ಕೂದಲನ್ನು ಕತ್ತರಿಸಿಕೊಂಡಿದ್ದರು. ಇದಾದ ಒಂದು ತಿಂಗಳ ನಂತರ, ತಮ್ಮ ಮಗ ಅರ್ಜುನ್ ತೆಂಡೂಲ್ಕರ್ ಹೇರ್ ಕಟ್ ಮಾಡಿದ್ದಾರೆ. ತಮ್ಮ 20 ವರ್ಷದ ಮಗನ ಹೇರ್ ಕಟಿಂಗ್ ಮಾಡುತ್ತಿರುವ ವಿಡಿಯೋವನ್ನು ಲಿಟಲ್ ಮಾಸ್ಟರ್ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಇಂದು ಹಂಚಿಕೊಂಡಿದ್ದಾರೆ. ಜೊತೆಗೆ ಈ ವೇಳೆ ಸಹಾಯಕ್ಕೆ ನಿಂತ ಮಗಳು ಸಾರಾಗೆ ಸಚಿನ್ ಧನ್ಯವಾದ ತಿಳಿಸಿದ್ದಾರೆ.

    ತಂದೆಯಾಗಿ ನೀವು ಎಲ್ಲವನ್ನೂ ಮಾಡಬೇಕಾಗುತ್ತದೆ. ನಿಮ್ಮ ಮಕ್ಕಳೊಂದಿಗೆ ಆಟವಾಡುವುದು, ಅವರೊಂದಿಗೆ ಜಿಮ್ ಮಾಡುವುದು ಅಥವಾ ಅವರ ಕೂದಲನ್ನು ಕತ್ತರಿಸುವುದು ಎಂದು ಸಚಿನ್ ಬರೆದುಕೊಂಡಿದ್ದಾರೆ. ಜೊತೆಗೆ ಕಟಿಂಗ್ ಹೇಗಾದರೂ ನೀನು ಯಾವಾಗಲೂ ಸುಂದರವಾಗಿ ಕಾಣುತ್ತಿಯಾ ಅರ್ಜುನ್. ನನ್ನ ಈ ಸಲೂನ್‍ಗೆ ಸಹಾಯಕಳಾದ ಸಾರಾಗೆ ವಿಶೇಷ ಧನ್ಯವಾದಗಳು ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

    ಕೊರೊನಾವೈರಸ್ ಲಾಕ್‍ಡೌನ್‍ನ ನಾಲ್ಕನೇ ಹಂತವನ್ನು ಘೋಷಿಸಿದ ಬಳಿಕ ಸರ್ಕಾರವು ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿದ್ದರೂ, ಸಲೂನ್‍ಗಳನ್ನು ತೆರೆಯಲು ಇನ್ನೂ ಅವಕಾಶ ನೀಡಿಲ್ಲ. ಇದರಿಂದಾಗಿ ಜನರು ತಮ್ಮ ಕುಟುಂಬ ಸದಸ್ಯರಿಗೆ ಹೇರ್ ಕಟಿಂಗ್ ಮಾಡುವುದನ್ನು ಬಿಟ್ಟರೆ ಬೇರೆ ದಾರಿಯೇ ಇಲ್ಲದಂತಾಗಿದೆ. ಹೀಗಾಗಿ ಸಚಿನ್ ತೆಂಡೂಲ್ಕರ್ ಅವರು ಮಗ ಅರ್ಜುನ್ ಅವರ ಹೇರ್ ಕಟಿಂಗ್ ಮಾಡಿದ್ದಾರೆ.

    https://www.instagram.com/p/CAXhC5klnr-/

    ಕೇಂದ್ರ ಸರ್ಕಾರವು ಮಾರ್ಚ್ ನಲ್ಲಿ ಮೊದಲ ಹಂತದ ಲಾಕ್‍ಡೌನ್ ಘೋಷಿಸಿದ ಕೆಲವೇ ದಿನಗಳ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಕೂದಲನ್ನು ಪತ್ನಿ ಅನುಷ್ಕಾ ಶರ್ಮಾ ಕತ್ತರಿಸಿದ್ದರು.

  • ಮುಂಬೈ ಟಿ20 ಲೀಗ್: ಅರ್ಜುನ್ ತೆಂಡೂಲ್ಕರ್ 5 ಲಕ್ಷಕ್ಕೆ ಹರಾಜು

    ಮುಂಬೈ ಟಿ20 ಲೀಗ್: ಅರ್ಜುನ್ ತೆಂಡೂಲ್ಕರ್ 5 ಲಕ್ಷಕ್ಕೆ ಹರಾಜು

    ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮುಂಬೈ ಟಿ20 ಲೀಗ್ ಭಾಗವಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 5 ಲಕ್ಷಕ್ಕೆ ಆಕಾಶ್ ಟೈಗರ್ಸ್ ಮುಂಬೈ ವೆಸ್ಟರ್ನ್ ತಂಡ ಖರೀದಿ ಮಾಡಿದೆ.

    ಟೂರ್ನಿಯಲ್ಲಿ 1 ಲಕ್ಷ ರೂ. ಮೂಲ ಬೆಲೆಯನ್ನ ಹೊಂದಿದ್ದ ಅರ್ಜುನ್ ತೆಂಡೂಲ್ಕರ್ ಆಲ್‍ರೌಂಡರ್ ಆಟಗಾರರಾಗಿ ಮುಂಬೈ ವೆಸ್ಟರ್ನ್ ತಂಡ ಖರೀದಿ ಮಾಡಿದೆ. ಈಗಾಗಲೇ ಅರ್ಜುನ್ ಟೀಂ ಇಂಡಿಯಾ ಅಂಡರ್ 19 ತಂಡದ ಪರ ಆಡಿರುವ ಅನುಭವ ಹೊಂದಿದ್ದಾರೆ. ಎಡಗೈ ವೇಗದ ಬೌಲರ್ ಆಗಿರುವ ಅರ್ಜುನ್, ಉತ್ತಮವಾಗಿ ಬ್ಯಾಟ್ ಬೀಸುವ ಸಾಮಥ್ರ್ಯವನ್ನು ಹೊಂದಿದ್ದಾರೆ.

    ಇತ್ತ ಸಚಿನ್ ಮುಂಬೈ ಟಿ20 ಲೀಗ್‍ನ ಅಂಬಾಸಿಡರ್ ಆಗಿದ್ದಾರೆ. ಟೂರ್ನಿಯಲ್ಲಿ ಪೃಥ್ವಿ ಶಾ, ಶ್ರೇಯಸ್ ಅಯ್ಯರ್ ಅವರನ್ನು ಕೂಡ ಹರಾಜು ಪ್ರಕ್ರಿಯೆಯಲ್ಲಿ ಮುಂಬೈ ತಂಡಗಳು ಖರೀದಿ ಮಾಡಿದೆ. ಟೂರ್ನಿಯಲ್ಲಿ 8 ತಂಡಗಳು ಪಾಲ್ಗೊಳ್ಳುತ್ತಿವೆ. ಈ ಬಾರಿ ನಡೆಯುತ್ತಿರುವ ಟೂರ್ನಿ 4ನೇ ಆವೃತ್ತಿಯಾಗಿದೆ.

  • ತಂದೆ ದಾರಿಯನ್ನೇ ತುಳಿದ ಪುತ್ರ ಅರ್ಜುನ್ ತೆಂಡೂಲ್ಕರ್

    ತಂದೆ ದಾರಿಯನ್ನೇ ತುಳಿದ ಪುತ್ರ ಅರ್ಜುನ್ ತೆಂಡೂಲ್ಕರ್

    ನವದೆಹಲಿ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಅಂಡರ್ 19 ಯೂತ್ ಟೆಸ್ಟ್ ಪಂದ್ಯದ ಬ್ಯಾಂಟಿಂಗ್ ಅರ್ಜುನ್ ಕೂಡ ರನ್ ಖಾತೆ ತೆಗೆಯಲು ವಿಫಲರಾಗಿದ್ದು, ತಂದೆ ಸಚಿನ್ ತೆಂಡೂಲ್ಕರ್ ರಂತೆ ತಮ್ಮ ವೃತ್ತಿ ಜೀವನದ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ.

    ಕೊಲಂಬೊದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಬೌಲರ್ ಶಶಿಕಾ ದುಲ್ಶನ್ ಬೌಲಿಂಗ್ ನಲ್ಲಿ ಅರ್ಜುನ್ ಶೂನ್ಯಕ್ಕೆ ಔಟಾದರು. ಇದಕ್ಕೂ ಮುನ್ನ ಅರ್ಜುನ್ 11 ಎಸೆತಗಳನ್ನು ಎದುರಿಸಿದರೂ ಸಹ ರನ್ ಖಾತೆ ತೆಗೆಯಲು ವಿಫಲರಾಗಿ ನಿರಾಸೆ ಮೂಡಿಸಿದರು.

    ಈ ಪಂದ್ಯದಲ್ಲೇ ಅರ್ಜುನ್ ತಮ್ಮ ಮೊದಲ ವಿಕೆಟ್ ಪಡೆದ ಸಾಧನೆಯನ್ನು ಮಾಡಿರುವ ಅರ್ಜುನ್, ತಮ್ಮ ಬೌಲಿಂಗ್ ನ 12 ಎಸೆತಗಳಲ್ಲಿ ಶ್ರೀಲಂಕಾ ಆಟಗಾರ ಕಮಿಲ್ ಮಿಶ್ರಾರನ್ನು ಎಲ್‍ಬಿ ಬಲೆಗೆ ಕೆಡವಿ ಮೊದಲ ವಿಕೆಟ್ ಪಡೆದು ಮಿಂಚಿದ್ದರು. ಇದಕ್ಕೂ ಮುನ್ನ ತಮ್ಮ ಮೊದಲ ಎಸೆತದ ರನ್ ಆಫ್ ಮಾಡುವ ವೇಳೆ ಅರ್ಜುನ್ ಎಡವಿದ್ದರು. ಅಂದಹಾಗೇ ಅರ್ಜುನ್ ಎಡಗೈ ವೇಗಿಯಾಗಿದ್ದು, ಇನ್ ಸ್ವೀಂಗ್ ಮಾಡುವ ಕೌಶಲ್ಯ ಹೊಂದಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 11 ಓವರ್ ಬೌಲ್ ಮಾಡಿರುವ ಅರ್ಜುನ್ 33 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ. ಇದರಲ್ಲಿ 2 ಮೆಡಿನ್ ಓವರ್ ಗಳು ಸಹ ಸೇರಿದೆ.

    1989 ರ ವೇಳೆ 16 ವರ್ಷದ ಸಚಿನ್ ಕೂಡ ತಮ್ಮ ಏಕದಿನ ಪಂದ್ಯದ ಪಾದಾರ್ಪಣೆ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿದ್ದರು. ಪಾಕ್ ಬೌಲರ್ ವಕಾರ್ ಯೂನಿಸ್ ಬೌಲಿಂಗ್ ನಲ್ಲಿ ಸಚಿನ್ ವಿಕೆಟ್ ಒಪ್ಪಿಸಿದ್ದರು.

    ಟೀಂ ಇಂಡಿಯಾ ಅಂಡರ್ 19 ತಂಡದಲ್ಲಿ 18 ವರ್ಷದ ಅರ್ಜನ್ ಮೊದಲ ಬಾರಿಗೆ ಸ್ಥಾನ ಪಡೆದಿದ್ದರು. ಬಳಿಕ ಶ್ರೀಲಂಕಾ ಸರಣಿ ತರಬೇತಿ ಶಿಬಿರಕ್ಕೆ ಹಾಜರಾಗಿದ್ದರು. ಟೀಂ ಇಂಡಿಯಾ ಸದ್ಯ ಶ್ರೀಲಂಕಾ ವಿರುದ್ಧ ಯೂತ್ ಟೆಸ್ಟ್ ಟೂರ್ನಿಯಲ್ಲಿ 2 ಪಂದ್ಯಗಳನ್ನು ಆಡಲಿದೆ. ಬಳಿಕ 2 ಪಂದ್ಯಗಳ ಏಕದಿನ ಟೂರ್ನಿಯಲ್ಲಿ ಭಾಗವಹಿಸಲಿದೆ.

    https://twitter.com/KSKishore537/status/1019143288685776896?