Tag: ಅರ್ಜುನ್ ತೆಂಡೂಲ್ಕರ್

  • ಖ್ಯಾತ ಉದ್ಯಮಿಯ ಮೊಮ್ಮಗಳ ಜೊತೆ ಅರ್ಜುನ್‌ ತೆಂಡ್ಕೂಲರ್‌ ಎಂಗೇಜ್‌

    ಖ್ಯಾತ ಉದ್ಯಮಿಯ ಮೊಮ್ಮಗಳ ಜೊತೆ ಅರ್ಜುನ್‌ ತೆಂಡ್ಕೂಲರ್‌ ಎಂಗೇಜ್‌

    ಮುಂಬೈ: ಸಚಿನ್‌ ತೆಂಡೂಲ್ಕರ್‌ (Sachin Tendulkar) ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಮುಂಬೈನ ಪ್ರಮುಖ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು ಸಾನಿಯಾ ಚಾಂದೋಕ್ (Saaniya Chandok) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ನಿಶ್ಚಿತಾರ್ಥ ಕಾರ್ಯಕ್ರಮ ಖಾಸಗಿಯಾಗಿ ನಡೆದಿದೆ. ಎರಡೂ ಕಡೆಯ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಹಾಜರಿದ್ದರು.

    ರವಿ ಘಾಯ್ ಕುಟುಂಬವು ಆತಿಥ್ಯ ಮತ್ತು ಆಹಾರ ಉದ್ಯಮಗಳಲ್ಲಿ ಹೆಸರು ಪಡೆದಿದೆ. ಇಂಟರ್ ಕಾಂಟಿನೆಂಟಲ್ ಹೋಟೆಲ್ ಮತ್ತು ಜನಪ್ರಿಯ ಐಸ್‌ ಕ್ರೀಂ ಬ್ರ್ಯಾಂಡ್‌ ಬ್ರೂಕ್ಲಿನ್ ಕ್ರೀಮರಿಗಳನ್ನು ಕುಟುಂಬ ಹೊಂದಿದೆ.

    ಅಧಿಕೃತ ಭಾರತೀಯ ಸರ್ಕಾರಿ ದಾಖಲೆಗಳ ಪ್ರಕಾರ (ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ), ಸಾನಿಯಾ ಚಾಂದೋಕ್ ಮುಂಬೈ ಮೂಲದ ಮಿಸ್ಟರ್ ಪಾವ್ಸ್ ಪೆಟ್ ಸ್ಪಾ & ಸ್ಟೋರ್ LLP ಯಲ್ಲಿ ನಿಯೋಜಿತ ಪಾಲುದಾರ ಮತ್ತು ನಿರ್ದೇಶಕಿಯಾಗಿದ್ದಾರೆ. ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್ ಇಡಿ ವಿಚಾರಣೆಗೆ ಹಾಜರಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ

    25 ವರ್ಷದ ಅರ್ಜುನ್ ಎಡಗೈ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಗೋವಾವನ್ನು ಪ್ರತಿನಿಧಿಸುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರವೂ ಆಡಿದ್ದಾರೆ.

  • ಸಿಕ್ಸ್ ಪ್ಯಾಕ್ ತೋರಿಸಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಅರ್ಜುನ್ ತೆಂಡೂಲ್ಕರ್

    ಸಿಕ್ಸ್ ಪ್ಯಾಕ್ ತೋರಿಸಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಅರ್ಜುನ್ ತೆಂಡೂಲ್ಕರ್

    ಮುಂಬೈ: ಐಪಿಎಲ್ (IPL) ಬಳಿಕ ಕಾಣಿಸಿಕೊಳ್ಳುತ್ತಿರುವ ಯುವ ವೇಗಿ ಅರ್ಜುನ್ ತೆಂಡೂಲ್ಕರ್ (Arjun Tendulkar) ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ.

    ಮುಂಬರುವ ದೇವಧರ್ ಟ್ರೋಫಿಗೆ ದಕ್ಷಿಣ ವಲಯಕ್ಕಾಗಿ ಆಡಲಿರುವ ಅರ್ಜುನ್ ತೆಂಡೂಲ್ಕರ್ ಸಿಕ್ಸ್‌ಪ್ಯಾಕ್‌ (Six Pack) ಫೋಟೋವೊಂದನ್ನ ಹಂಚಿಕೊಂಡಿದ್ದು, ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 31 ರನ್‌ – ಸಚಿನ್‌ ತೆಂಡೂಲ್ಕರ್‌ ಪುತ್ರನ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್‌

    ಕಳೆದ ಜೂನ್ ತಿಂಗಳಲ್ಲಿ ನಡೆದ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಗೋವಾ ಪರ ಆಟವಾಡಿದ್ದ ಅರ್ಜುನ್ ತೆಂಡೂಲ್ಕರ್ 20 ದಿನಗಳ ಶಿಬಿರಕ್ಕೆ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಆಗಮಿಸಿದ್ದರು. 130 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಎಡಗೈ ವೇಗಿ ಈಗಾಗಲೇ ರಣಜಿಯಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ. ಮುಂಬರುವ ದೇವಧರ್ ಟ್ರೋಫಿಗೆ ದಕ್ಷಿಣ ವಲಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮಯಾಂಕ್ ಅಗರ್ವಾಲ್ ತಂಡವನ್ನ ಮುನ್ನಡೆಸಲಿದ್ದಾರೆ.

    2021ರಲ್ಲಿ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಹರಾಜಾಗಿದ್ದ ಅರ್ಜುನ್ ತೆಂಡೂಲ್ಕರ್ 2022ರ ಐಪಿಎಲ್ ಹರಾಜಿನಲ್ಲಿ ಅರ್ಜುನ್ ಮುಂಬೈ ಇಂಡಿಯನ್ಸ್ಗೆ 30 ಲಕ್ಷಕ್ಕೆ ಬಿಕರಿಯಾಗಿದ್ದರು. 2021ರಲ್ಲಿ ಐಪಿಎಲ್‌ಗೂ ಮುನ್ನವೇ ಗಾಯಗೊಂಡಿದ್ದರಿಂದ ಟೂರ್ನಿಯಿಂದಲೇ ಹೊರಬಿದ್ದರು. 2021ರ ಆವೃತ್ತಿಯಲ್ಲಿ ಒಂದು ಪಂದ್ಯವನ್ನೂ ಆಡುವ ಅವಕಾಶ ಸಿಗಲಿಲ್ಲ. 2022ರಲ್ಲೂ ಮುಂಬೈ ಇಂಡಿಯನ್ಸ್ ತಂಡಕ್ಕೆ ಹರಾಜಾದರೂ ಮೈದಾನದಲ್ಲಿ ಆಡುವ ಅವಕಾಶ ಸಿಗಲಿಲ್ಲ.

    2023ರ ಆವೃತ್ತಿಯಲ್ಲಿ ಕಣಕ್ಕಿಳಿಯುವ ಅವಕಾಶ ಸಿಕ್ಕಿತು. ನಾಲ್ಕು ಪಂದ್ಯಗಳಲ್ಲಿ ಮುಂಬೈ ಪರ ಆಡಿದ ಅರ್ಜುನ್ ಮೂರು ವಿಕೆಟ್‌ಗಳನ್ನ ಪಡೆದು 92 ರನ್ ಬಿಟ್ಟುಕೊಟ್ಟರು. ಅದರಲ್ಲೂ ಕಿಂಗ್ಸ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 31 ರನ್ ಬಿಟ್ಟುಕೊಡುವ ಮೂಲಕ ಟೀಕೆಗೆ ಗುರಿಯಾಗಿದ್ದರು. ಇದನ್ನೂ ಓದಿ: ತಂದೆಯ ಸಾಧನೆ ಸರಿಗಟ್ಟಿದ ಮಗ – ಮೊದಲ ರಣಜಿ ಪಂದ್ಯದಲ್ಲೇ ಅರ್ಜುನ್‌ ತೆಂಡೂಲ್ಕರ್‌ ಶತಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲಕ್ನೋ ವಿರುದ್ಧ ಪಂದ್ಯಕ್ಕೂ ಮುನ್ನ ನಾಯಿಯಿಂದ ಕಚ್ಚಿಸಿಕೊಂಡ ಸಚಿನ್‌ ತೆಂಡೂಲ್ಕರ್‌ ಪುತ್ರ

    ಲಕ್ನೋ ವಿರುದ್ಧ ಪಂದ್ಯಕ್ಕೂ ಮುನ್ನ ನಾಯಿಯಿಂದ ಕಚ್ಚಿಸಿಕೊಂಡ ಸಚಿನ್‌ ತೆಂಡೂಲ್ಕರ್‌ ಪುತ್ರ

    ಲಕ್ನೋ: ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ವಿರುದ್ಧ ಮಂಗಳವಾರ ನಡೆಯುತ್ತಿರುವ ನಿರ್ಣಾಯಕ ಪಂದ್ಯಕ್ಕೂ‌ ಮುನ್ನ ಮುಂಬೈ ಇಂಡಿಯನ್ಸ್‌ (Mumbai Indians) ತಂಡದ ಯುವ ಆಲ್‌ರೌಂಡರ್‌ ಆಟಗಾರ ಅರ್ಜುನ್‌ ತೆಂಡೂಲ್ಕರ್‌ ನಾಯಿಯಿಂದ ಕಚ್ಚಿಸಿಕೊಂಡಿದ್ದನ್ನು ಬಹಿರಂಗಪಡಿಸಿದ್ದಾರೆ.

    ಲಕ್ನೋ ತವರಿನ ಅಟಲ್‌ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಪಂದ್ಯ ಆರಂಭಕ್ಕೂ ಮುನ್ನ ಲಕ್ನೋ ಆಟಗಾರ ಯುದ್ವೀರ್‌ ಸಿಂಗ್‌ ಅವರನ್ನ ಭೇಟಿಯಾದ ಅರ್ಜುನ್‌ ನಾಯಿ ಕಚ್ಚಿರುವುದಾಗಿ ತಾವೇ ಹೇಳಿಕೊಂಡಿದ್ದಾರೆ. ಯುದ್ವೀರ್‌, ಅರ್ಜುನ್‌ (Arjun Tendulkar) ಹೇಗಿದ್ದೀಯಾ? ಎಂದು ಕೇಳುತ್ತಿದ್ದಂತೆ ಸಚಿನ್‌ ತೆಂಡೂಲ್ಕರ್‌ ಪುತ್ರ ನಾಯಿ ಕಚ್ಚಿದೆ ಎಂದು ಹೇಳಿ ತಮ್ಮ ಕೈ ತೋರಿಸಿದ್ದಾರೆ. ಲಕ್ನೋ ಸೂಪರ್‌ ಜೈಂಟ್ಸ್‌ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಈ ಕುರಿತ ವೀಡಿಯೋವನ್ನು ಹಂಚಿಕೊಂಡಿದೆ. ಇದನ್ನೂ ಓದಿ: ಪಾಂಡ್ಯ ಪಡೆ ಲ್ಯಾವೆಂಡರ್‌ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದು ಏಕೆ? – ಗೊತ್ತಾದ್ರೆ ನೀವೂ ಬೇಷ್ ಅಂತೀರಾ

    ಪಂಜಾಬ್‌ ಕಿಂಗ್ಸ್‌ ವಿರುದ್ಧ ಒಂದೇ ಓವರ್‌ನಲ್ಲಿ 31 ರನ್‌ ಚಚ್ಚಿಸಿಕೊಂಡು ಸುದ್ದಿಯಾಗಿದ್ದ ಅರ್ಜುನ್‌ ತೆಂಡೂಲ್ಕರ್‌ ಇದೀಗ ನಾಯಿಯಿಂದ ಕಚ್ಚಿಸಿಕೊಂಡಿರುವುದಾಗಿ ಹೇಳಿ ಸುದ್ದಿಯಾಗಿದ್ದಾರೆ. 5 ಬಾರಿ ಚಾಂಪಿಯನ್ಸ್‌ ಆಗಿರುವ ಮುಂಬೈ ಇಂಡಿಯನ್ಸ್‌ ತಂಡದ ಪರವಾಗಿ ಈ ಸೀಸನ್‌ನಲ್ಲಿ ಅರ್ಜುನ್‌ ತೆಂಡೂಲ್ಕರ್‌ ಕೆಲವು ಪಂದ್ಯಗಳನ್ನಾಡಿದ್ದಾರೆ. 4 ಪಂದ್ಯಗಳಲ್ಲಿ 30.66 ಸರಾಸರಿ ಹಾಗೂ 9.35 ಎಕಾನಮಿ ರೇಟ್‌ನಲ್ಲಿ 3 ವಿಕೆಟ್‌ ಪಡೆದಿದ್ದಾರೆ. ಈ ಋತುವಿನಲ್ಲಿ ಈವರೆಗೆ ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದುಕೊಂಡಿದ್ದು, 13 ರನ್‌ ಗಳಿಸಿದ್ದಾರೆ. ಇದನ್ನೂ ಓದಿ: ಕುಸ್ತಿಪಟುಗಳ ಪ್ರತಿಭಟನೆ ವಿಶ್ವವ್ಯಾಪಿಯಾಗಿಸಲು ಚಿಂತನೆ – ಬ್ರಿಜ್‌ ಭೂಷಣ್‌ ಬಂಧನಕ್ಕೆ ಮೇ 21 ಗಡುವು

    ಮಂಗಳವಾರ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ನ ನಿರ್ಣಾಯಕ ಪಂದ್ಯ ನಡೆಯುತ್ತಿದ್ದು, ಮುಂಬೈ ಇಂಡಿಯನ್ಸ್‌ ಜಯ ಸಾಧಿಸಿದರೆ ಪ್ಲೇ ಆಫ್‌ಗೆ ಬಹುತೇಕ ಅರ್ಹತೆ ಪಡೆದುಕೊಳ್ಳಲಿದೆ. ಆರಂಭದಲ್ಲಿ ರನ್‌ ಕದಿಯಲು ಪರದಾಡಿದ ಸೂರ್ಯಕುಮಾರ್‌ ಇದೀಗ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆದರೆ, ಲಕ್ನೋ ಬೌಲಿಂಗ್‌ ಪಿಚ್‌ ಆಗಿರುವುದರಿಂದ ಯಾವ ತಂಡದ ಹಣೆಬರಹ ಹೇಗೆ ಅನ್ನೋದನ್ನ ಕಾದುನೋಡಬೇಕಿದೆ.

  • ಒಂದೇ ಓವರ್‌ನಲ್ಲಿ 31 ರನ್‌ – ಸಚಿನ್‌ ತೆಂಡೂಲ್ಕರ್‌ ಪುತ್ರನ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್‌

    ಒಂದೇ ಓವರ್‌ನಲ್ಲಿ 31 ರನ್‌ – ಸಚಿನ್‌ ತೆಂಡೂಲ್ಕರ್‌ ಪುತ್ರನ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್‌

    ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) 13 ರನ್‌ಗಳಿಂದ ವಿರೋಚಿತ ಸೋಲನುಭವಿಸಿತು.

    ಸಿಕ್ಸರ್‌ ಬೌಂಡರಿಗಳ ಆಟದಲ್ಲಿ ಬರೋಬ್ಬರಿ 25 ಸಿಕ್ಸರ್‌ ಹಾಗೂ 33 ಬೌಂಡರಿಗಳು ಸಿಡಿದವು. ಪಂಜಾಬ್‌ ಕಿಂಗ್ಸ್‌ ಪರ 14 ಸಿಕ್ಸರ್‌, 16 ಬೌಂಡರಿ ಹಾಗೂ ಮುಂಬೈ ಇಂಡಿಯನ್ಸ್‌ ಪರ 11 ಸಿಕ್ಸರ್‌, 17 ಬೌಂಡರಿಗಳು ದಾಖಲಾದವು. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 31 ರನ್‌ ಕೊಟ್ಟ ಅರ್ಜುನ್‌ ತೆಂಡೂಲ್ಕರ್‌; ಹರ್ಷ ತಂದ ಅರ್ಷ್‌ದೀಪ್‌ – ಪಂಜಾಬ್‌ಗೆ 13 ರನ್‌ಗಳ ಜಯ

    ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಕೊನೆಯ 6 ಓವರ್‌ಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಿಕೊಂಡಿತು. ಮೊದಲ 14 ಓವರ್‌ಗಳ ಅಂತ್ಯಕ್ಕೆ 105 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಪಂಜಾಬ್‌, ಮುಂಬೈಗೆ ಸುಲಭ ಗುರಿಗೆ ತುತ್ತಾಗಲಿದೆ ಎಂದೇ ಭಾವಿಸಲಾಗಿತ್ತು. ಆದ್ರೆ ಅರ್ಜುನ್‌ ತೆಂಡೂಲ್ಕರ್‌ (Arjun Tendulkar) ಎಸೆದ 16ನೇ ಓವರ್‌ನಲ್ಲಿ ಸ್ಯಾಮ್‌ ಕರ್ರನ್‌ ಹಾಗೂ ಹರ್ಪ್ರೀತ್‌ ಸಿಂಗ್‌ ಜೋಡಿ ಬರೋಬ್ಬರಿ 31 ರನ್‌ (6,1,4,1,4,6,5,4) ಸಿಡಿಸಿತ್ತು. ಈ ಬೆನ್ನಲ್ಲೇ ಕ್ಯಾಮರೂನ್ ಗ್ರೀನ್ ಎಸೆದ 18ನೇ ಓವರ್‌ನಲ್ಲಿ ಜಿತೇಶ್‌ ಶರ್ಮಾ ಸ್ಫೋಟಕ 25 ರನ್ ಚಚ್ಚಿದರು. ಇದು ಪಂಜಾಬ್‌ ಗೆಲುವಿಗೆ ಪ್ರಮುಖ ತಿರುವು ಪಡೆದುಕೊಂಡಿತು.

    ಅರ್ಜುನ್‌ ತೆಂಡೂಲ್ಕರ್‌ ಒಂದೇ ಓವರ್‌ನಲ್ಲಿ 31 ರನ್‌ ನೀಡಿರುವ ಬಗ್ಗೆ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಕೆಲವರು ʻಇದು ಪಕ್ಕಾ ನೆಪೊಟಿಸಮ್‌ ಪ್ರಾಡಕ್ಟ್‌ʼ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: 7 ಸಾವಿರ ರನ್‌ ಪೂರೈಸಿದ ರಾಹುಲ್‌ – ಕೊಹ್ಲಿ, ರೋಹಿತ್‌ ಸೇರಿ ಹಲವರ ದಾಖಲೆ ಉಡೀಸ್‌

    ಹಿಟ್‌ ಮ್ಯಾನ್‌ ಬೆಂಬಲ: ಸದ್ಯ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ ಪಂದ್ಯ ಸೋತ ಹೊರತಾಗಿಯೂ ಅರ್ಜುನ್‌ ತೆಂಡೂಲ್ಕರ್‌ನನ್ನ ಬೆಂಬಲಿಸಿದ್ದಾರೆ. ಬಹುಶಃ ಅರ್ಜುನ್‌ ಒತ್ತಡದಲ್ಲಿದ್ದರು ಅನ್ನಿಸುತ್ತೆ. ಆದರೆ ಇದೇ ಅಂತ್ಯವಲ್ಲ ಈ ಬೆಳವಣಿಗೆಯಿಂದ ಇನ್ನಷ್ಟು ಕಲಿಯುತ್ತಾರೆ. ಅರ್ಜುನ್‌ ಆಶಾದಾಯಕ ಬೆಳವಣಿಗೆ ಹೊಂದಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಕಂಬ್ಯಾಕ್‌  ಮಾಡಲಿದ್ದಾರೆ. ಅವರಿಗೆ ನಮ್ಮ ತಂಡದ ಆಟಗಾರರ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ.

  • IPL 2023: ಕೊನೆಗೂ ಐಪಿಎಲ್‌ಗೆ ಎಂಟ್ರಿಕೊಟ್ಟ ಸಚಿನ್‌ ತೆಂಡೂಲ್ಕರ್‌ ಪುತ್ರ

    IPL 2023: ಕೊನೆಗೂ ಐಪಿಎಲ್‌ಗೆ ಎಂಟ್ರಿಕೊಟ್ಟ ಸಚಿನ್‌ ತೆಂಡೂಲ್ಕರ್‌ ಪುತ್ರ

    ಮುಂಬೈ: ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ (Arjun Tendulkar) ಕೊನೆಗೂ ಐಪಿಎಲ್‌ಗೆ (IPL 2023) ಎಂಟ್ರಿ ಕೊಟ್ಟಿದ್ದಾರೆ.

    ಕಳೆದ 2 ವರ್ಷಗಳಿಂದಲೂ ಮುಂಬೈ ಬೆಂಚ್‌ಗಾಗಿ ಕಾದಿದ್ದ ಅರ್ಜುನ್‌ ತೆಂಡೂಲ್ಕರ್‌ ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕೆಕೆಆರ್‌ (KKR) ವಿರುದ್ಧದ ಪಂದ್ಯ ಆಡುವ ಮೂಲಕ ತಮ್ಮ ಕನಸು ನನಸಾಗಿಸಿಕೊಂಡಿದ್ದಾರೆ. ಅಪ್ಪ ಸಚಿನ್‌ ತೆಂಡೂಲ್ಕರ್‌ ಆಡಿದ್ದ ಅದೇ ತಂಡದ ಮೂಲಕ ಮಗ ಐಪಿಎಲ್‌ಗೆ ಎಂಟ್ರಿ ಕೊಟ್ಟಿರುವುದು ವಿಶೇಷವಾಗಿದೆ.

    ಮುಂಬೈ ಇಂಡಿಯನ್ಸ್‌ (Mumbai Indians) ತಂಡದ ನಾಯಕ ರೋಹಿತ್‌ ಶರ್ಮಾ (Rohit Sharma) ಭಾನುವಾರ ಪಂದ್ಯಕ್ಕೆ ಕ್ಯಾಪ್‌ ನೀಡಿ ಅರ್ಜುನ್‌ ಅವರನ್ನ ಸ್ವಾಗತಿಸಿದ್ದಾರೆ. ಇದನ್ನೂ ಓದಿ: IPL 2023: ಇಶಾನ್‌ ಕಿಶನ್‌ ಶೈನ್‌, ಅಯ್ಯರ್‌ ಶತಕದಾಟ ವ್ಯರ್ಥ – ಮುಂಬೈಗೆ 5 ವಿಕೆಟ್‌ಗಳ ಜಯ

    2022ರ ಐಪಿಎಲ್‌ ಹರಾಜಿನಲ್ಲಿ ಅರ್ಜುನ್‌ ಮುಂಬೈ ಇಂಡಿಯನ್ಸ್‌ಗೆ 30 ಲಕ್ಷಕ್ಕೆ ಬಿಕರಿಯಾಗಿದ್ದರು. ಅದಕ್ಕೂ ಮುನ್ನ 2021ರಲ್ಲಿ 20 ಲಕ್ಷಕ್ಕೆ ಹರಾಜಾಗಿದ್ದರು. ಆದರೆ ಐಪಿಎಲ್‌ಗೂ ಮುನ್ನವೇ ಗಾಯಗೊಂಡಿದ್ದರಿಂದ ಟೂರ್ನಿಯಿಂದಲೇ ಹೊರಬಿದ್ದರು. 2021ರ ಆವೃತ್ತಿಯಲ್ಲಿ ಒಂದು ಪಂದ್ಯವನ್ನೂ ಆಡುವ ಅವಕಾಶ ಸಿಗಲಿಲ್ಲ. 2022ರಲ್ಲೂ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಹರಾಜಾದರೂ ಮೈದಾನದಲ್ಲಿ ಆಟುವ ಅವಕಾಶ ಸಿಗಲಿಲ್ಲ. ಆದ್ರೆ 16ನೇ ಆವೃತ್ತಿಯಲ್ಲಿ ಅದೃಷ್ಟ ಕೈಹಿಡಿದಿದ್ದು, ಕೊನೆಗೂ ಮೈದಾನಕ್ಕೆ ಕಾಲಿಟ್ಟಿದ್ದಾರೆ.

    ಈ ಬಾರಿಯ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಲ್ಕನೇ ಪಂದ್ಯದಲ್ಲಿ ಅರ್ಜುನ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬ್ಯಾಟಿಂಗ್‌ ಮಾಡುವ ಅವಕಾಶ ಕೈತಪ್ಪಿದರೂ ಬೌಲಿಂಗ್‌ನಲ್ಲಿ ಕಮಾಲ್‌ ಮಾಡಿದ್ದಾರೆ. 2 ಓವರ್‌ಗಳಲ್ಲಿ ಕಂಟ್ರೋಲ್‌ ಮಾಡಿ 17 ರನ್‌ ನೀಡಿದ್ದಾರೆ. ಇದನ್ನೂ ಓದಿ: ಎಸ್‌ಡಿಪಿಐ ಜೊತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್‌ಗೆ ಹೋಗಲು ನಾಚಿಕೆ ಆಗಲ್ವಾ? – ಶೆಟ್ಟರ್, ಸವದಿ ವಿರುದ್ಧ ಯತ್ನಾಳ್ ಕಿಡಿ

    ಭಾನುವಾರ ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ (KKR) 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 185 ರನ್‌ ಗಳಿಸಿತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್‌ ಸಂಘಟಿತ ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ 17.4 ಓವರ್‌ಗಳಲ್ಲೇ 186 ರನ್‌ ಗಳಿಸಿ ಗೆದ್ದು ಬೀಗಿತು.

  • ಶತಕ ಸಿಡಿಸಿ ಅಪ್ಪನಂತೆ ಸಂಭ್ರಮಿಸಿದ ಅರ್ಜುನ್ ತೆಂಡೂಲ್ಕರ್

    ಶತಕ ಸಿಡಿಸಿ ಅಪ್ಪನಂತೆ ಸಂಭ್ರಮಿಸಿದ ಅರ್ಜುನ್ ತೆಂಡೂಲ್ಕರ್

    ಪಣಜಿ: ರಾಜಸ್ಥಾನ (Rajasthan) ವಿರುದ್ಧದ ರಣಜಿ ಪಂದ್ಯದಲ್ಲಿ (Ranji Trophy) ಗೋವಾ (Goa) ಪರ ತನ್ನ ಮೊದಲ ಪಂದ್ಯವಾಡುತ್ತಿರುವ ಅರ್ಜುನ್ ತೆಂಡೂಲ್ಕರ್ (Arjun Tendulkar) ತನ್ನ ಅಪ್ಪ ಸಚಿನ್ ತೆಂಡೂಲ್ಕರ್ (Sachin Tendulkar) ಶತಕ ಸಿಡಿಸಿದ ಬಳಿಕ ಸಂಭ್ರಮಿಸುತ್ತಿದ್ದಂತೆ ಸಂಭ್ರಮಿಸಿದ್ದಾರೆ.

     

     

    ಅರ್ಜುನ್ ತೆಂಡೂಲ್ಕರ್ ಈ ಹಿಂದೆ ಮುಂಬೈ (Mumbai) ಪರ ಆಡುತ್ತಿದ್ದರು. ಈ ಬಾರಿ ರಣಜಿ ಪಂದ್ಯದಲ್ಲಿ ಗೋವಾ ಪರ ಆಡುತ್ತಿದ್ದಾರೆ. ಪ್ರಸ್ತುತ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ 120 ರನ್ (207 ಎಸೆತ, 16 ಬೌಂಡರಿ, 2 ಸಿಕ್ಸ್) ಶತಕ ಬಾರಿಸಿದರು. ಇದು ಅರ್ಜುನ್ ತೆಂಡೂಲ್ಕರ್ ಗೋವಾ ಪರ ಆಡಿದ ಮೊದಲ ರಣಜಿ ಪಂದ್ಯವಾಗಿದೆ. ಶತಕ ಸಿಡಿಸುತ್ತಿದ್ದಂತೆ ಅರ್ಜುನ್ ತೆಂಡೂಲ್ಕರ್ ತಮ್ಮ ತಂದೆ ಸಚಿನ್ ತೆಂಡೂಲ್ಕರ್ ಶತಕ ಸಿಡಿಸಿದ ಬಳಿಕ ಬ್ಯಾಟ್ ಮೇಲೆತ್ತಿ ಆಕಾಶ ನೋಡುವಂತೆ ತಾವು ಕೂಡ ಸಂಭ್ರಮಿಸಿದರು. ಇದನ್ನೂ ಓದಿ: ತಂದೆಯ ಸಾಧನೆ ಸರಿಗಟ್ಟಿದ ಮಗ – ಮೊದಲ ರಣಜಿ ಪಂದ್ಯದಲ್ಲೇ ಅರ್ಜುನ್‌ ತೆಂಡೂಲ್ಕರ್‌ ಶತಕ

    15 ವರ್ಷದಲ್ಲೇ ರಣಜಿ ಕ್ಯಾಪ್ ಧರಿಸಿದ್ದ ಸಚಿನ್ 1988ರಲ್ಲಿ ತಮ್ಮ ಮೊದಲ ರಣಜಿ ಪಂದ್ಯದಲ್ಲಿ ಗುಜರಾತ್ ವಿರುದ್ಧ ಅಜೇಯ 100 ರನ್ ಹೊಡೆದಿದ್ದರು. ಇದೀಗ 23 ವರ್ಷದ ಅರ್ಜುನ್ ತೆಂಡೂಲ್ಕರ್ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿ ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಇದನ್ನೂ ಓದಿ: ಡಿ.18ರ ಫೈನಲ್‌ ನನ್ನ ಕೊನೆಯ ವಿಶ್ವಕಪ್‌ ಪಂದ್ಯ – ನಿವೃತ್ತಿ ಖಚಿತಪಡಿಸಿದ ಮೆಸ್ಸಿ

    https://twitter.com/Cric_GRH/status/1603057187139772416

    ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ದುಕೊಂಡಿತು. ಗೋವಾ ಮೊದಲು ಬ್ಯಾಟಿಂಗ್ ಮಾಡಿ ಸುಯಶ್ ಪ್ರಭುದೇಸಾಯಿ 202 ರನ್ (416 ಎಸೆತ, 29 ಬೌಂಡರಿ), ಅರ್ಜುನ್ ತೆಂಡೂಲ್ಕರ್ 120 ರನ್ ಮತ್ತು ಸ್ನೇಹಲ್ ಸುಹಾಸ್ ಕೌಠಂಕರ್ 59 (104 ಎಸೆತ, 7 ಬೌಂಡರಿ, 1 ಸಿಕ್ಸ್) ರನ್ ನೆರವಿನಿಂದ 174 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 547 ರನ್ ಬಾರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ತಂದೆಯ ಸಾಧನೆ ಸರಿಗಟ್ಟಿದ ಮಗ – ಮೊದಲ ರಣಜಿ ಪಂದ್ಯದಲ್ಲೇ ಅರ್ಜುನ್‌ ತೆಂಡೂಲ್ಕರ್‌ ಶತಕ

    ತಂದೆಯ ಸಾಧನೆ ಸರಿಗಟ್ಟಿದ ಮಗ – ಮೊದಲ ರಣಜಿ ಪಂದ್ಯದಲ್ಲೇ ಅರ್ಜುನ್‌ ತೆಂಡೂಲ್ಕರ್‌ ಶತಕ

    ಪಣಜಿ: ಸಚಿನ್‌ ತೆಂಡೂಲ್ಕರ್‌(Sachin Tendulkar) ಅವರ ಪುತ್ರ 23 ವರ್ಷದ ಅರ್ಜುನ್‌ ತೆಂಡೂಲ್ಕರ್‌(Arjun Tendulkar) ತಾನು ಆಡಿದ ಮೊದಲ ರಣಜಿ(Ranji debut) ಪಂದ್ಯದಲ್ಲೇ ಶತಕ ಸಿಡಿಸಿದ್ದಾರೆ.

    ಗೋವಾ(Goa) ಪರ ಆಡುತ್ತಿರುವ ಅರ್ಜುನ್‌ ತೆಂಡೂಲ್ಕರ್‌ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ 120 ರನ್‌(207 ಎಸೆತ, 16 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾಗಿದ್ದಾರೆ. ಈ ಹಿಂದೆ ಸಚಿನ್‌ ತೆಂಡೂಲ್ಕರ್‌ ಮೊದಲ ರಣಜಿ ಪಂದ್ಯದಲ್ಲೇ ಶತಕ ಹೊಡೆದಿದ್ದರು. ಈಗ ತಂದೆಯಂತೆ ಅರ್ಜುನ್‌ ತೆಂಡೂಲ್ಕರ್‌ ಶತಕ ಬಾರಿಸಿದ್ದಾರೆ.

    ಟಾಸ್‌ ಸೋತು ಬ್ಯಾಟಿಂಗ್‌ ನಡೆಸುತ್ತಿರುವ ಗೋವಾ ಎರಡನೇ ದಿನಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ ನಷ್ಟಕ್ಕೆ 493 ರನ್‌ ಹೊಡೆದಿದೆ. ಗೋವಾ ಪರ ಸುಯಶ್ ಪ್ರಭುದೇಸಾಯಿ 202 ರನ್‌(416 ಎಸೆತ, 29 ಬೌಂಡರಿ), ಸ್ನೇಹಲ್ ಸುಹಾಸ್ ಕೌಠಂಕರ್ 59 ರನ್‌ ಹೊಡೆದಿದ್ದಾರೆ. ಇದನ್ನೂ ಓದಿ: ಡಿ.18ರ ಫೈನಲ್‌ ನನ್ನ ಕೊನೆಯ ವಿಶ್ವಕಪ್‌ ಪಂದ್ಯ – ನಿವೃತ್ತಿ ಖಚಿತಪಡಿಸಿದ ಮೆಸ್ಸಿ

    15 ವರ್ಷದಲ್ಲೇ ರಣಜಿ ಕ್ಯಾಪ್‌ ಧರಿಸಿದ್ದ ಸಚಿನ್‌ 1988ರಲ್ಲಿ ತಮ್ಮ ಮೊದಲ ರಣಜಿ ಪಂದ್ಯದಲ್ಲಿ ಗುಜರಾತ್‌ ವಿರುದ್ಧ ಅಜೇಯ 100 ರನ್‌ ಹೊಡೆದಿದ್ದರು. 23 ವರ್ಷದ ಅರ್ಜುನ್‌ ತೆಂಡೂಲ್ಕರ್‌ ಮಾಧ್ಯಮ ವೇಗಿ ಬೌಲರ್‌ ಆಗಿದ್ದು ಈ ಹಿಂದೆ ಸೈಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು. ಐಪಿಎಲ್‌ನಲ್ಲಿ ಮುಂಬೈ ತಂಡ ಖರೀದಿಸಿದ್ದರೂ ಅರ್ಜುನ್‌ ತೆಂಡೂಲ್ಕರ್‌ ಅಂತಿಮ 11ರ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಮಗ ಅರ್ಜುನ್‍ಗೆ ಐಪಿಎಲ್‍ನಲ್ಲಿ ಸಿಗದ ಅವಕಾಶ – ಕೊನೆಗೂ ಮೌನ ಮುರಿದ ತೆಂಡೂಲ್ಕರ್

    ಮಗ ಅರ್ಜುನ್‍ಗೆ ಐಪಿಎಲ್‍ನಲ್ಲಿ ಸಿಗದ ಅವಕಾಶ – ಕೊನೆಗೂ ಮೌನ ಮುರಿದ ತೆಂಡೂಲ್ಕರ್

    ಮುಂಬೈ: ಐಪಿಎಲ್ 2022ರ ಟೂರ್ನಿಯಲ್ಲಿ ಮುಂಬೈ ತಂಡದ ಪರ ಲೀಗ್ ಪಂದ್ಯಗಳಲ್ಲಿ ಆಡಲು ಅರ್ಜುನ್‍ಗೆ ಒಂದೇ ಒಂದು ಅವಕಾಶ ಸಿಗದ ಕಾರಣ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮೌನ ಮುರಿದಿದ್ದಾರೆ.

    ಈ ಕುರಿತು ಮಂಗಳವಾರ ಯೂಟ್ಯೂಬ್ ಚಾನೆಲ್‍ವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಮುಂಬೈ ಫ್ರಾಂಚೈಸಿಯ ಮಾರ್ಗದರ್ಶಕರಾದ ಸಚಿನ್, ಮಗ ಅರ್ಜುನ್‍ಗೆ ನೀಡಿದ್ದ ಕೆಲ ಸಲಹೆಗಳನ್ನು ಬಹಿರಂಗಪಡಿಸಿದ್ದಾರೆ. ಅರ್ಜುನ್‍ಗೆ ಕೇವಲ ತನ್ನ ಆಟದ ಮೇಲೆ ಗಮನಹರಿಸು ಅಂತ ಹೇಳಿದ್ದೆ. ತಂಡದ ಆಯ್ಕೆಯ ಭಾಗದ ಬಗ್ಗೆ ಯೋಚಿಸುವುದಿಲ್ಲ. ನಾನು ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗುವುದಿಲ್ಲ. ನಾನು ಆ ಭಾಗವನ್ನು ನಿರ್ವಹಣೆಗೆ ಮಾತ್ರ ಬಿಡುತ್ತೇನೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಇಂದು ಎಲಿಮಿನೇಟರ್ ಪಂದ್ಯ – ಡುಪ್ಲೆಸಿ ಬಳಗಕ್ಕೆ ನಿರ್ಣಾಯಕ

    ಎಡಗೈ ಮಧ್ಯಮ ವೇಗಿ ಅರ್ಜುನ್‍ರನ್ನು ಈ ವರ್ಷದ ಐಪಿಎಲ್ 2022ರ ಮೆಗಾ ಹರಾಜಿನಲ್ಲಿ 30 ಲಕ್ಷ ನೀಡಿ ಖರೀದಿಸಲಾಗಿತ್ತು. ಆದರೆ ಲೀಗ್ ಹಂತದ ಒಂದೇ ಒಂದು ಪಂದ್ಯದಲ್ಲೂ ಅವರಿಗೆ ಆಡಲೂ ಅವಕಾಶ ಸಿಕ್ಕಿರಲಿಲ್ಲ. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಮಿಲ್ಲರ್‌ ಹ್ಯಾಟ್ರಿಕ್‌ ಸಿಕ್ಸ್‌ – ಫೈನಲ್‌ಗೆ ಗುಜರಾತ್‌ ಎಂಟ್ರಿ

    ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಆಡಿರುವ 14 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದ್ದು, 10 ಪಂದ್ಯಗಳಲ್ಲಿ ಸೋಲು ಕಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಕ್ರಮವಾಗಿ ಕೊನೆ ಸ್ಥಾನದಲ್ಲಿದೆ. ಟೂರ್ನಿಯ ಆರಂಭದಿಂದಲೂ ಸ್ಥಿರ ಪದರ್ಶನ ನೀಡಲು ಎಡವಿದ್ದ ಮುಂಬೈ, ಪ್ಲೇ ಆಫ್ ಹಂತಕ್ಕೇರಲು ವಿಫಲವಾಗಿದೆ.

  • ಡೆಲ್ಲಿ ವಿರುದ್ಧದ ಪಂದ್ಯದ ಮೂಲಕ ಅರ್ಜುನ್ ತೆಂಡೂಲ್ಕರ್ ಐಪಿಎಲ್‍ಗೆ ಪದಾರ್ಪಣೆ?

    ಡೆಲ್ಲಿ ವಿರುದ್ಧದ ಪಂದ್ಯದ ಮೂಲಕ ಅರ್ಜುನ್ ತೆಂಡೂಲ್ಕರ್ ಐಪಿಎಲ್‍ಗೆ ಪದಾರ್ಪಣೆ?

    ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಡೆಲ್ಲಿ ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಐಪಿಎಲ್‍ಗೆ ಪದಾರ್ಪಣೆ ಮಾಡಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆ ನಡೆಯುತ್ತಿದೆ.

    IPL 2022 MI VS KKR 02

    ಈಗಾಗಲೇ 15ನೇ ಆವೃತ್ತಿ ಐಪಿಎಲ್‍ನಲ್ಲಿ ಮುಂಬೈ ತಂಡ ಹೀನಾಯ ಪ್ರದರ್ಶನ ನೀಡಿ ಪ್ಲೇ ಆಫ್ ರೇಸ್‍ನಿಂದ ಹೊರನಡೆದಿದೆ. ಇಂದು ಡೆಲ್ಲಿ ವಿರುದ್ಧ ಕೊನೆಯ ಲೀಗ್ ಪಂದ್ಯವಾಡುತ್ತಿದೆ. ಈ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್‌ಗೆ ಅವಕಾಶ ಕೊಡಿ ಎಂಬ ಅಭಿಪ್ರಾಯ ಅಭಿಮಾನಿಗಳಿಂದ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಧೋನಿಗೆ ಚೆನ್ನೈ ಪರ ಕೊನೆಯ ಪಂದ್ಯ? – #DefinitelyNot ಟ್ರೆಂಡಿಂಗ್

    ಮುಂಬೈ ಮತ್ತು ಡೆಲ್ಲಿ ನಡುವಿನ ಪಂದ್ಯ ಮುಂಬೈಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದಾದರೆ, ಡೆಲ್ಲಿಗೆ ಪ್ಲೇ ಆಫ್‍ಗೇರಲು ಕಡೆಯ ಅವಕಾಶವಾಗಿದೆ. ಈ ಪಂದ್ಯದಲ್ಲಿ ಮುಂಬೈ ಗೆದ್ದರೆ, ಆರ್‌ಸಿಬಿ ಪ್ಲೇ ಆಫ್‍ಗೆ ಎಂಟ್ರಿ ಕೊಡಲಿದೆ. ಡೆಲ್ಲಿ ಗೆದ್ದರೆ, ಆರ್‌ಸಿಬಿ ಅದೃಷ್ಟದಾಟದಲ್ಲಿ ಸೋತು ಮನೆ ದಾರಿ ಹಿಡಿಯಬೇಕಾಗಿದೆ. ಹಾಗಾಗಿ ಇಂದಿನ ಪಂದ್ಯ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ: ಚೆನ್ನೈಗೆ ಸಿಂಹಸ್ವಪ್ನವಾದ ಅಶ್ವಿನ್ – ಸೋಲಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ಹಾಲಿ ಚಾಂಪಿಯನ್

    ಮುಂಬೈಗೆ ಈ ಪಂದ್ಯವನ್ನು ಗೆಲ್ಲುವ ಮೂಲಕ ಟೂರ್ನಿಗೆ ವಿದಾಯ ಹೇಳುವ ಅವಕಾಶವಿದೆ. ಜೊತೆಗೆ ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡಿ ಮುಂದಿನ ಐಪಿಎಲ್ ವೇಳೆ ತಂಡವನ್ನು ಬಲಿಷ್ಠವಾಗಿಸುವ ವೇದಿಕೆಯಾಗಿ ಬಳಸಿಕೊಳ್ಳವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಇಂದಿನ ಪಂದ್ಯದಲ್ಲಿ ಬದಲಾವಣೆಯ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಅಲ್ಲದೇ ಯುವ ಆಟಗಾರ ಅರ್ಜುನ್ ತೆಂಡೂಲ್ಕರ್‌ಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಹರಾಜಿನಲ್ಲಿ ಅರ್ಜುನ್ ತೆಂಡೂಲ್ಕರ್‌ಗೆ 30 ಲಕ್ಷ ರೂ. ನೀಡಿ ಖರೀದಿಸಿತು. ಆದರೆ ಈವರೆಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿಲ್ಲ. ಹಾಗಾಗಿ ಇಂದಿನ ಕೊನೆಯ ಲೀಗ್ ಪಂದ್ಯದಲ್ಲಿ ಅವಕಾಶ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಆದರೆ ಮುಂಬೈ ತಂಡ ಅವಕಾಶ ನೀಡುತ್ತಾ? ಅಥವಾ ಮತ್ತೆ ಅರ್ಜುನ್ ತೆಂಡೂಲ್ಕರ್‌ಗೆ ನಿರಾಸೆ ಮಾಡುತ್ತಾ? ಎಂಬುದನ್ನು ಕಾದುನೋಡಬೇಕಾಗಿದೆ.

  • ಮುಂಬೈ ಹಿರಿಯರ ತಂಡದ ಪರ ಕಣಕ್ಕಿಳಿದ ಜೂನಿಯರ್ ತೆಂಡೂಲ್ಕರ್

    ಮುಂಬೈ ಹಿರಿಯರ ತಂಡದ ಪರ ಕಣಕ್ಕಿಳಿದ ಜೂನಿಯರ್ ತೆಂಡೂಲ್ಕರ್

    ಮುಂಬೈ: ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ನಡೆಯುತ್ತಿರುವ ಪಂದ್ಯಾಟದಲ್ಲಿ ಮುಂಬೈ ಹಿರಿಯರ ತಂಡದಲ್ಲಿ ಬ್ಯಾಟಿಂಗ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಕಣಕ್ಕಿಳಿದಿದ್ದಾರೆ.

    21 ವರ್ಷದ ಅರ್ಜುನ್ ತೆಂಡೂಲ್ಕರ್ ಹರಿಯಾಣ ವಿರುದ್ಧದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿ 3 ಓವರ್ ಎಸೆದು 1 ವಿಕೆಟ್ ಕಿತ್ತಿದ್ದಾರೆ.

    ಅಲ್‍ರೌಂಡರ್ ಆಗಿರುವ ಅರ್ಜುನ್ ತೆಂಡೂಲ್ಕರ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಒಂದು ವಿಕೆಟ್ ಕಿತ್ತು ಭರವಸೆ ಮೂಡಿಸಿದ್ದಾರೆ. ಆದರೂ ಈ ಪಂದ್ಯದಲ್ಲಿ ಮುಂಬೈ ಸೋಲನ್ನು ಅನುಭವಿಸಿದೆ.

    ಮುಂಬೈನ ಬಾಂದ್ರ ಕುರ್ಲಾ ಕಾಂಪ್ಲೆಕ್ಸ್ ಶರದ್ ಪವಾರ್ ಕ್ರಿಕೆಟ್ ಮೈದಾನದಲ್ಲಿ ನಡದ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 143 ರನ್ ಗಳಿಸಿತು. ಈ ಸಾಧಾರಣ ಮೊತ್ತವನ್ನು ಚೇಸ್ ಮಾಡಲು ಹೊರಟ ಹರಿಯಾಣ ತಂಡದ ಪರ ಹಿಮಾಂಶು ರಾಣಾ 75 ರನ್(53 ಎಸೆತ)ರನ್ ಹೊಡೆದು 17.4 ಓವರ್ ಗಳಲ್ಲಿ ಪಂದ್ಯ ಗೆಲ್ಲಿಸಿಕೊಟ್ಟರು.

     

    ಅರ್ಜುನ್ ತೆಂಡೂಲ್ಕರ್ ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲಿ 3 ಓವರ್ ಮಾಡಿ 34ರನ್ ಬಿಟ್ಟುಕೊಟ್ಟರು. ಇವರ ಮೊದಲ ವಿಕೆಟ್ ಸಂಭ್ರಮಕ್ಕೆ ವಿಕೆಟ್ ಒಪ್ಪಿಸಿದವರು ಹರಿಯಾಣ ತಂಡದ ಆರಂಭಿಕ ಆಟಗಾರ ಚೈತ್ಯ ಬಿಷ್ಣೋಯ್. ಇವರ ವಿಕೆಟ್ ಪಡೆಯುವ ಮೂಲಕ ಮೊದಲ ವಿಕೆಟ್ ಪಡೆದು ಆರಂಭಿಕ ಯಶಸ್ಸು ತಂದು ಕೊಟ್ಟಿದ್ದರು. ಈ ಮೂಲಕ ಮುಂಬೈ ತಂಡಕ್ಕೆ ಮುಂದಿನ ಪಂದ್ಯಗಳಲ್ಲಿ ಭರವಸೆ ಮೂಡಿಸಿದ್ದಾರೆ.