Tag: ಅರ್ಜುನ್ ಜನ್ಯ

  • ಸ್ಯಾಂಡಲ್‍ವುಡ್ ನಟನಿಗೆ ಗಾಡ್ ಫಾದರ್ ಎಂದ್ರು ಅರ್ಜುನ್ ಜನ್ಯ

    ಸ್ಯಾಂಡಲ್‍ವುಡ್ ನಟನಿಗೆ ಗಾಡ್ ಫಾದರ್ ಎಂದ್ರು ಅರ್ಜುನ್ ಜನ್ಯ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು 99 ಚಿತ್ರಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಶತಕದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಕಿಚ್ಚ ಸುದೀಪ್ ಅವರು ಶುಭಾಶಯನ್ನು ತಿಳಿಸಿದ್ದಾರೆ. ಅದಕ್ಕೆ ಉತ್ತರವಾಗಿ ಅರ್ಜುನ್ ಜನ್ಯ ಅವರು ನೀವು ನನ್ನ ಗಾಡ್ ಫಾದರ್ ಎಂದು ಸುದೀಪ್ ಅವರನ್ನು ಕರೆದಿದ್ದಾರೆ.

    ತಮಿಳಿನ ’96’ ಸಿನಿಮಾ ’99’ ಹೆಸರಿನಲ್ಲೇ ಕನ್ನಡಕ್ಕೆ ಬರುತ್ತಿದ್ದು ಈ ಚಿತ್ರದಲ್ಲಿ ಗಣೇಶ್ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೇ ನೆರವೇರಿತ್ತು. ’99’ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನೀಡುತ್ತಿದ್ದಾರೆ. ವಿಶೇಷ ಅಂದರೆ ಈ ಸಿನಿಮಾ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡುತ್ತಿರುವ ನೂರನೇ ಸಿನಿಮಾವಾಗಿದೆ.

    ಶತಕದ ಸಂಭ್ರಮದಲ್ಲಿರುವ ಕಾರಣ ನಟ ಸುದೀಪ್ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದರು. ಸುದೀಪ್ ಅವರು, “ನಿಮ್ಮ ಈ ಯಶಸ್ಸಿಗೆ ನೀವು ಅರ್ಹವಾದ ವ್ಯಕ್ತಿಯಾಗಿದ್ದು, ಅದ್ಭುತ ಜರ್ನಿಯ ಸಾಧನೆ ಮಾಡಿದ್ದೀರಿ. ನನ್ನ ಸಿನಿಮಾ ಜೀವನದ ಪಯಣದಲ್ಲೂ ನೀವು ಒಂದು ಭಾಗವಾಗಿದ್ದು, ನನಗೆ ತುಂಬಾ ಖುಷಿಯಾಗಿದೆ. ನೀವು ಒಬ್ಬ ಸಂಗೀತ ನಿರ್ದೇಶಕರಲ್ಲದೇ ಒಬ್ಬ ಮನುಷ್ಯನಾಗಿಯೂ ಪ್ರಬುದ್ಧರಾಗಿದ್ದೀರಿ. ಇದೇ ರೀತಿ ಸದಾ ನಮಗೆ ಮನರಂಜನೆ ನೀಡುತ್ತಿರಿ. ನಿಮ್ಮ ನೂರನೇ ಸಿನಿಮಾಗೆ ಶುಭಾಶಯಗಳು” ಎಂದು ಹೇಳಿ ಟ್ವೀಟ್ ಮಾಡಿದ್ದಾರೆ.

    ಸುದೀಪ್ ಟ್ವೀಟ್ ಗೆ ಅರ್ಜುನ್ ಜನ್ಯ ಅವರು, ”ನಿಮ್ಮ ಪ್ರೋತ್ಸಾಹ ಇಲ್ಲದಿದ್ದರೆ ನಾನು ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನೀವು ಯಾವಾಗಲೂ ನನ್ನ ಗಾಡ್ ಫಾದರ್ ಮತ್ತು ಮಾರ್ಗದರ್ಶಿಯಾಗಿದ್ದೀರಿ. ನನ್ನ ಈ ಸಣ್ಣ ಸಾಧನೆಯನ್ನು ಸಂಪೂರ್ಣವಾಗಿ ನಿಮಗೆ ಅರ್ಪಿಸುತ್ತೇನೆ” ಎಂದು ಕೃತಜ್ಞತೆ ತಿಳಿಸಿದ್ದಾರೆ.

    ಸುದೀಪ್ ಅಭಿನಯದ ‘ಕೆಂಪೇಗೌಡ’ ಸಿನಿಮಾದಿಂದ ಅರ್ಜುನ್ ಜನ್ಯ ಸಂಗೀತ ಶುರುವಾಗಿದ್ದು, ಸುದೀಪ್ ಕಾಂಬಿನೇಶನ್ ನಲ್ಲಿ ‘ಮಾಣಿಕ್ಯ’, ‘ಮುಕುಂದ ಮುರಾರಿ’ ‘ಹೆಬ್ಬುಲಿ’, ‘ಅಂಬಿ ನಿಂಗೆ ವಯಸ್ಸಾಯ್ತೋ’, ‘ದಿ ವಿಲನ್’ ಚಿತ್ರಗಳಲ್ಲಿ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅಷ್ಟೆ ಅಲ್ಲದೇ ಈಗ ‘ಪೈಲ್ವಾನ್’ ಮತ್ತು ‘ಕೋಟಿಗೊಬ್ಬ 3’ ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಯಸ್ಸಾದ ಅಂಬಿ ಬಗ್ಗೆ ಮಾಲಾಶ್ರೀ ಹೇಳಿದ್ದೇನು?

    ವಯಸ್ಸಾದ ಅಂಬಿ ಬಗ್ಗೆ ಮಾಲಾಶ್ರೀ ಹೇಳಿದ್ದೇನು?

    ರೆಬೆಲ್ ಸ್ಟಾರ್ ಅಂಬರೀಶ್ 14 ವರ್ಷಗಳ ನಂತರ ನಾಯಕ ನಟನಾಗಿ ಅಭಿನಯಿಸುತ್ತಿರುವ ಚಿತ್ರ ಅಂಬಿ ನಿಂಗೆ ವಯಸ್ಸಾಯ್ತೋ. ಅಂಬರೀಶ್ ಅವರ ವಯಸ್ಸಿಗೆ, ಮಾಗಿದ ಅಭಿನಯಕ್ಕೆ ಪಕ್ಕಾ ಹೇಳಿ ಮಾಡಿಸಿದಂಥಾ ಕಥೆಯಿರೋ ಚಿತ್ರವಿದು. ಇದೀಗ ಈ ಚಿತ್ರದ ಹಾಡುಗಳು ಎಲ್ಲೆಡೆ ಮೆಚ್ಚುಗೆ ಗಳಿಸಿಕೊಂಡಿವೆ. ಚಿತ್ರರಂಗದ ತಾರೆಯರೂ ಕೂಡಾ ಈ ಹಾಡುಗಳನ್ನು ಕೇಳಿ ತಲೆದೂಗಿದ್ದಾರೆ.

    ನಟಿ ಮಾಲಾಶ್ರೀಯವರಂತೂ ಈ ಚಿತ್ರದ ಹಾಡುಗಳನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಹಾಡುಗಳನ್ನು ಕೇಳಿದ ನಂತರ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಾನು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಹಾಡುಗಳನ್ನು ಕೇಳಿದೆ. ಅಂಬರೀಶ್ ಅವರ ನಟನೆಯ ಬಗೆಗಂತೂ ಮಾತನಾಡಲು ಪದಗಳಿಲ್ಲ. ದೊಡ್ಡ ಯಶಸ್ಸು ಈ ಚಿತ್ರಕ್ಕೆ ಸಿಗಲಿ’ ಅಂತ ಮಾಲಾಶ್ರೀಯವರು ಹಾರೈಸಿದ್ದಾರೆ.

    ಈ ಚಿತ್ರದ ಹಾಡುಗಳು ಈ ಪಾಟಿ ಮೆಚ್ಚುಗೆ ಗಳಿಸಿಕೊಳ್ಳಲು ಕಾರಣ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸೃಷ್ಟಿಸಿರುವ ಮಾಂತ್ರಿಕ ಟ್ಯೂನುಗಳು. ಅರ್ಜುನ್ ಆರಂಭದಿಂದಲೂ ಈ ಚಿತ್ರದ ಬಗ್ಗೆ ವಿಶೇಷವಾದ ಆಸಕ್ತಿಯಿಂದಲೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರಂತೆ. ಯಾವ ಹೋಲಿಕೆಗೂ ಸಿಗದ ಭಿನ್ನವಾದ ಹಾಡುಗಳನ್ನು ಸೃಷ್ಟಿಸಬೇಕೆಂಬ ಹಂಬಲದಿಂದಲೇ ಎಲ್ಲ ಹಾಡುಗಳನ್ನೂ ರೂಪಿಸಿದ್ದಾರೆ. ಈ ಬಗ್ಗೆ ನಿರ್ದೇಶಕ ಗುರುದತ್ ಗಾಣಿಗ, ಅಂಬಿ ಮತ್ತು ಕಿಚ್ಚ ಸುದೀಪ್ ಕೂಡಾ ಸಂತಸಗೊಂಡಿದ್ದಾರೆ.

  • ಪ್ಲೀಸ್ ಟ್ರಸ್ಟ್, ನಾನು ಚೀಪ್ & ಬೆಸ್ಟ್- ಆಸ್ಮಿತಾ ಜೊತೆ ವಿಕ್ಟರಿ ಶರಣ್ ಡ್ಯಾನ್ಸ್

    ಪ್ಲೀಸ್ ಟ್ರಸ್ಟ್, ನಾನು ಚೀಪ್ & ಬೆಸ್ಟ್- ಆಸ್ಮಿತಾ ಜೊತೆ ವಿಕ್ಟರಿ ಶರಣ್ ಡ್ಯಾನ್ಸ್

    -ಲಿರಿಕಲ್ ವಿಡಿಯೋ ರಿಲೀಸ್

    ಬೆಂಗಳೂರು: ಸ್ಯಾಂಡಲ್‍ವುಡ್ ಅಧ್ಯಕ್ಷ ಶರಣ್ ಅಭಿನಯದ ವಿಕ್ಟರಿ-2 ಚಿತ್ರ ಸೆಟ್ಟೇರಿದಾಗಿನಿಂದಲೂ ಚಂದನವನದಲ್ಲಿ ಭರವಸೆ ಮೂಡಿಸುತ್ತಿರುವ ಚಿತ್ರ. ಡಬಲ್ ಫನ್ ಎಂಬ ಸಬ್ ಟೈಟಲ್ ನ್ನು ವಿಕ್ಟರಿ ಸಿನಿಮಾ ಬಳಸಿಕೊಂಡಿದ್ದು, ಈಗಾಗಲೇ ರಿವೀಲ್ ಆಗಿರೋ ಫೋಟೋಗಳು ಮತ್ತು ಟೀಸರ್ ನಿಂದ ಸಖತ್ ಸದ್ದು ಮಾಡುತ್ತಿದೆ.

    ಸೆಪ್ಟೆಂಬರ್ 10ರಂದು ವಿಕ್ಟರಿ ಸಿನಿಮಾ ಲಿರಿಕಲ್ ಹಾಡಿನ ವಿಡಿಯೋ ಬಿಡುಗಡೆಯಾಗಿದೆ. ‘ಬ್ರಹ್ಮನಿಂಗೆ ಲಂಚ ಕೊಟ್ಟು ಬುಕ್ ಮಾಡಿಸಿದ್ದೀನಿ ಕಮ್,. ಏಳೇಳು ಜನ್ಮ ನೀನೇ ನನ್ನ ವೈಫು ಅಂತಾ ಬರೆಸಿದ್ದೀನಿ’ ಎಂಬ ಸಾಲುಗಳ ಮೂಲಕ ಸಾಗುವ ಹಾಡು ಕೇಳಲು ತುಂಬಾ ಕ್ಯಾಚಿಯಾಗಿದೆ. ಹಾಡಿನ ಚಿತ್ರೀಕರಣ ರಷ್ಯಾದಲ್ಲಿ ನಡೆದಿದ್ದು, ಶರಣ್ ಮತ್ತು ಆಸ್ಮಿತಾ ಕಲರ್ ಫುಲ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಹಾಡಿನ ಮತ್ತೊಂದು ವಿಶೇಷ ಅಂದ್ರೆ ಸಹ ಡ್ಯಾನ್ಸರ್ ಹುಲಿ ಕುಣಿತ, ಯಕ್ಷಗಾನ ಮತ್ತು ಪೌರಾಣಿಕ ಉಡುಪಿನಲ್ಲಿ ಕಾಣುವ ಮೂಲಕ ಹಾಡನ್ನು ಮತ್ತಷ್ಟು ಸುಂದರವಾಗಿಸಿದೆ.

    ಪಕ್ಕಾ ಹಳ್ಳಿ ಭಾಷೆಯ ಇಂಗ್ಲಿಷ್ ಮಿಶ್ರಿತವಾಗಿ ರಚಿಸಿರುವ ಹಾಡು ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿ ಬಂದಿದೆ. ತರುಣ್ ಸುಧೀರ್ ಕಥೆ ಬರೆದಿದ್ದು, ಹಾಡಿನ ಸಾಲುಗಳು ನಾಗೇಂದ್ರ ಪ್ರಸಾದ್ ಅವರ ಲೇಖನಿಯಲ್ಲಿ ರಚಿತವಾಗಿದೆ.

    ವಿಕ್ಟರಿ 2 ಸಿನಿಮಾವನ್ನು ಅಲೆಮಾರಿ ಸಂತು(ಹರಿ ಸಂತೋಷ್) ನಿರ್ದೇಶಿಸುತ್ತಿದ್ದು, ಸಿನಿಮಾದ ಹಾಡಿನ ಚಿತ್ರೀಕರಣ ರಷ್ಯಾದಲ್ಲಿ ನಡೆದಿದೆ. ಈ ಸಿನಿಮಾದ ಮೇಕಿಂಗ್ ಫೋಟೋಗಳು ಬಿಡುಗಡೆಯಾಗಿದ್ದು, ಶರಣ್, ಸಾಧುಕೋಕಿಲ ಮತ್ತು ರವಿಶಂಕರ್ ಹೆಣ್ಣಿನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್‍ನಲ್ಲಿ ಒಟ್ಟು ಎರಡು ಫೋಟೋಗಳನ್ನು ಚಿತ್ರತಂಡ ಬಿಡುಗೊಡೆಗೊಳಿಸಿತ್ತು. ಒಂದರಲ್ಲಿ ವೈಟ್ ಆ್ಯಂಡ್ ವೈಟ್ ಶರ್ಟ್, ಪಂಚೆ ತೊಟ್ಟು ಮಿಂಚಿದರೆ, ಇನ್ನೊಂದರಲ್ಲಿ ಮಾಸ್ ಗೆಟಪ್ ನಲ್ಲಿ ಕಂಡಿದ್ದರು

    ಸಿನಿಮಾದಲ್ಲಿ ಶರಣ್ ಅವರಿಗೆ ಅಪೂರ್ವ ಜೋಡಿಯಾಗಿದ್ದಾರೆ. ಅಲ್ಲದೇ ಈ ಹಿಂದೆ ವಿಕ್ಟರಿ ಸಿನಿಮಾದಲ್ಲಿ ನಟಿಸಿದ್ದ ಅಸ್ಮಿತಾ ಸೂದ್ ಕೂಡ ಇಲ್ಲಿ ಕಾಣಿಸಿಕೊಂಡಿದ್ದಾರೆ. ತಬಲಾ ನಾಣಿ, ನಾಸೀನ್, ಅವಿನಾಶ್, ಮಿತ್ರಾ, ಕಲ್ಯಾಣಿ, ಅರಸು ಮತ್ತು ಸಿದ್ದಿ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ. ಅಲೆಮಾರಿ ಸಂತು ನಿರ್ದೇಶನ ಮತ್ತು ತರುಣ್ ಶಿವಪ್ಪ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಂದನ್ ಶೆಟ್ಟಿ ನಂತ್ರ ಅರ್ಜುನ್ ಜನ್ಯ, ಅಧಿತಿ ಸಾಗರ್ ಗೆ ಬಂಧನದ ಭೀತಿ!

    ಚಂದನ್ ಶೆಟ್ಟಿ ನಂತ್ರ ಅರ್ಜುನ್ ಜನ್ಯ, ಅಧಿತಿ ಸಾಗರ್ ಗೆ ಬಂಧನದ ಭೀತಿ!

    ಬೆಂಗಳೂರು: ಸ್ಯಾಂಡಲ್ ವುಡ್ ಮೇಲೆ ಸಿಸಿಬಿ ಕಣ್ಣು ಬಿದ್ದಿದ್ದು, ಚಂದನ್ ಶೆಟ್ಟಿ ನಂತರ ಈಗ ‘ರ‍್ಯಾಂಬೋ -2’ ಚಿತ್ರದ ತಂಡಕ್ಕೆ ಸಂಕಷ್ಟ ಎದುರಾಗಿದೆ.

    ರ‍್ಯಾಂಬೋ -2 ಚಿತ್ರದ ಧಮ್ ಮಾರೋ ಧಮ್ ಹಾಡಿನ ಮೇಲೆ ಸಿಸಿಬಿ ಕಣ್ಣು ಬಿದ್ದಿದ್ದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಅಧಿತಿ ಸಾಗರ್ ಗೆ ಸಮನ್ಸ್ ನೀಡಲು ಸಿಸಿಬಿ ತಂಡ ಸಿದ್ಧತೆ ನಡೆಸುತ್ತಿದೆ. ಚಂದನ್ ಶೆಟ್ಟಿ ಅವರ ವಿಚಾರಣೆಯ ಬಳಿಕ ಅರ್ಜುನ್ ಜನ್ಯ ಮತ್ತು ಮುತ್ತುಗೆ ಸಂಕಷ್ಟ ಎದುರಾಗಲಿದೆ. ಚಿತ್ರದ ಈ ಹಾಡಿನಲ್ಲಿ ಗಾಂಜಾ ಹೊಡಿ ಎಂಬ ಪ್ರಚೋದನೆ ಹಿನ್ನೆಲೆಯಲ್ಲಿ ಸಿಸಿಬಿ ತಂಡ ಇಬ್ಬರಿಗೂ ಸಮನ್ಸ್ ಜಾರಿಗೊಳಿಸಲಿದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಇತ್ತೀಚೆಗೆ ಬಿಡುಗಡೆಯಾದ ರ‍್ಯಾಪರ್ ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ ‘ಅಂತ್ಯ’ ಸಿನಿಮಾದ “ಗಾಂಜಾ ಕಿಕ್” ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಆದರೆ ಗಾಂಜಾ ಕಿಕ್ ಹಾಡಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಕುರಿತು ವೈಭವೀಕರಿಸಿ ತೋರಿಸಲಾಗಿದೆ. ಹೀಗಾಗಿ ಖುದ್ದು ಸ್ವಯಂ ದೂರು ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ಸಮನ್ಸ್ ಜಾರಿ ಮಾಡಿದರು. ಇಂದು ಚಂದನ್ ವಿಚಾರಣೆಗೆ ಹಾಜರಾಗಿದ್ದಾರೆ. ಇದನ್ನೂ ಓದಿ: ರ‍್ಯಾಪರ್ ಚಂದನ್ ಶೆಟ್ಟಿಗೆ ಬಂಧನ ಭೀತಿ?

    ಚಂದನ್ ಶೆಟ್ಟಿ ವಿಚಾರಣೆ ಆದ ಬಳಿಕ ರ‍್ಯಾಂಬೋ-2 ಚಿತ್ರದ ‘ಧಮ್ ಮಾರೋ ಧಮ್’ ಹಾಡಿನ ಸಾಹಿತ್ಯ ಬರೆದ ಮುತ್ತು ಸೇರಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಗಾಯಕಿ ಅಧಿತಿ ಸಾಗರ್ ಅವರಿಗೆ ನೋಟಿಸ್ ನೀಡುವ ಸಾಧ್ಯತೆಗಳಿವೆ. ಈ ಹಾಡು ಯುವಜನತೆಗೆ ಗಾಂಜಾ ಸೇವನೆ ಮಾಡಲು ಪ್ರಚೋದನೆ ನೀಡುವ ರೀತಿಯಲ್ಲಿದೆ. ಯುವ ಜನತೆ ಪಾರ್ಟಿ ಹಾಗೂ ಪಬ್‍ಗೆ ಹೋದಾಗ ಈ ಹಾಡು ಕೇಳಿ ಗಾಂಜಾಗೆ ಆಕರ್ಷಕರಾಗಿ ಅದನ್ನು ಸೇವಿಸಲು ಮುಂದಾಗುತ್ತಾರೆ.

    ಸಿಸಿಬಿ ಪೊಲೀಸರು ಚಂದನ್ ಶೆಟ್ಟಿ ಅವರಿಗೆ ನೋಟಿಸ್ ನೀಡುವ ಮೊದಲು ಫಿಲಂ ಚೇಂಬರ್ ಗೆ ಮನವಿ ಮಾಡಿಕೊಂಡಿದ್ದರು. ಮನವಿಯಲ್ಲಿ `ಈ ರೀತಿಯ ಹಾಡುಗಳು ಸಮಾಜದಲ್ಲಿ ಸಾಕಷ್ಟು ಕೆಡುಕು ಉಂಟು ಮಾಡುತ್ತಿದೆ. ಅಲ್ಲದೇ ಯುವಜನತೆಗೆ ಗಾಂಜಾ ಸೇವನೆ ಮಾಡಲು ಆಕರ್ಷಿಸುತ್ತದೆ. ಹಾಗಾಗಿ ನೀವು ಈ ರೀತಿಯ ಹಾಡುಗಳ ಬಗ್ಗೆ ನಿಗಾವಹಿಸಿ ಎಂದು ತಿಳಿಸಿದ್ದರು. ಅಲ್ಲದೇ ಈ ರೀತಿಯ ಹಾಡುಗಳ ಲಿಂಕ್‍ಗಳನ್ನು ಸಾಮಾಜಿಕ ಜಾಲತಾಣ ಹಾಗೂ ಯೂಟ್ಯೂಬ್‍ನಲ್ಲಿ ಡಿಲೀಟ್ ಮಾಡಬೇಕೆಂದು ಸಿಸಿಬಿ ಪೊಲೀಸರು ಹೇಳಿದ್ದರು ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭರಾಟೆಯಲ್ಲಿ ಭಾಗಿಯಾದ್ರು ಅರ್ಜುನ್ ಜನ್ಯ!

    ಭರಾಟೆಯಲ್ಲಿ ಭಾಗಿಯಾದ್ರು ಅರ್ಜುನ್ ಜನ್ಯ!

    ಬೆಂಗಳೂರು: ಶ್ರೀಮುರುಳಿ ಅಭಿನಯದ ಭರಾಟೆ ಚಿತ್ರ ಪ್ರಚಾರದ ಭರಾಟೆಯಲ್ಲಿಯೂ ಮುಂದಿದೆ. ಮೊದಲ ಫೋಟೋ ಶೂಟ್ ಅನ್ನೇ ಅದ್ಧೂರಿಯಾಗಿ ಮುಗಿಸಿಕೊಂಡಿರೋ ಚಿತ್ರತಂಡ ಈ ಮೂಲಕವೇ ಎಬ್ಬಿಸಿರೋ ಹವಾ ಸಣ್ಣ ಮಟ್ಟದ್ದೇನಲ್ಲ. ಇಂಥಾ ಅಬ್ಬರದೊಂದಿಗೇ ಈ ಚಿತ್ರತಂಡಕ್ಕೆ ಹೊಸಬರ ಸೇರ್ಪಡೆಯೂ ಮುಂದುವರೆದಿದೆ. ಇದೀಗ ಅರ್ಜುನ್ ಜನ್ಯ ಈ ಚಿತ್ರದ ಸಂಗೀತ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದಾರೆ!

    ಅರ್ಜುನ್ ಜನ್ಯ ಎಂಟ್ರಿಯ ಮೂಲಕ ಈ ಚಿತ್ರದ ಹಾಡುಗಳಿಗಾಗಿಯೂ ಅಭಿಮಾನಿಗಳು ತುದಿಗಾಲಲ್ಲಿ ಕಾಯುವಂಥಾ ವಾತಾವರಣ ನಿರ್ಮಾಣವಾಗಿದೆ. ಇದಲ್ಲದೇ ಅರ್ಜುನ್ ಎಂಟ್ರಿಯಲ್ಲೊಂದು ವಿಶೇಷವೂ ಇದೆ. ಈವರೆಗೂ ಶ್ರೀಮುರಳಿ ಚಿತ್ರಗಳಿಗೆ ಇವರು ಸಂಗೀತ ನಿರ್ದೇಶನ ಮಾಡಿರಲಿಲ್ಲ. ಇನ್ನುಳಿದಂತೆ ಭರ್ಜರಿ ಚೇತನ್ ಮತ್ತು ಜನ್ಯಾ ಕಾಂಬಿನೇಷನ್ ಕೂಡಾ ಇದೇ ಮೊದಲು. ಈ ಮೂವರೂ ಇದೇ ಮೊದಲ ಬಾರಿ ಒಂದಾಗಿರೋದರಿಂದ ಹಾಡುಗಳೂ ಹೊಸಾ ರೀತಿಯಲ್ಲಿ ಕಮಾಲ್ ಮಾಡೋ ನಿರೀಕ್ಷೆಗಳೆದ್ದಿವೆ.

    ಇದಲ್ಲದೇ ಆಗಸ್ಟ್ ಹದಿನೈದರಂದು ಭರಾಟೆ ಚಿತ್ರದ ವತಿಯಿಂದ ಹುಬ್ಬಳ್ಳಿಯಲ್ಲಿ ವರ್ಣರಂಜಿತವಾದ ಕಾರ್ಯಕ್ರಮವೊಂದು ನಡೆಯಲಿದೆ. ಅದರ ಮೂಲಕವೇ ಭರ್ಜರಿ ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಲು ನಿರ್ದೇಶಕ ಚೇತನ್ ಯೋಜನೆ ಹಾಕಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ತಾರಾಗಣವೂ ಸೇರಿದಂತೆ ಅನೇಕ ವಿಚಾರಗಳನ್ನು ಜಾಹೀರು ಮಾಡಲೂ ಚೇತನ್ ಮುಂದಾಗಿದ್ದಾರೆ.

    ಸದ್ಯಕ್ಕೆ ಅರ್ಜುನ್ ಜನ್ಯ ಹಿಟ್ ಹಾಡುಗಳನ್ನು ಸಾಲು ಸಾಲಾಗಿ ನೀಡುತ್ತಾ ಚಾಲ್ತಿಯಲ್ಲಿರುವ ಸಂಗೀತ ನಿರ್ದೇಶಕ. ಚಿತ್ರದಿಂದ ಚಿತ್ರಕ್ಕೆ ಹೊಸತನಗಳಿಗೆ ಹಾತೊರೆಯುತ್ತಲೇ ಹೊಸಾ ಪ್ರಯೋಗಗಳನ್ನೂ ನಡೆಸುವ ಜನ್ಯಾ ಭರಾಟೆ ಚಿತ್ರದಲ್ಲಿ ಎಂಥಾ ಮೋಡಿ ಮಾಡಲಿದ್ದಾರೆಂಬುದರ ಸುತ್ತಾ ಇದೀಗ ಪ್ರೇಕ್ಷಕರ ಗಮನ ಕೇಂದ್ರೀಕೃತಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಂದನ್ ಶೆಟ್ಟಿ ನನಗೆ ಯಾಕೆ ಸ್ಪೆಷಲ್ ಅಂತ ಹೇಳಿದ್ರು ಅರ್ಜುನ್ ಜನ್ಯ

    ಚಂದನ್ ಶೆಟ್ಟಿ ನನಗೆ ಯಾಕೆ ಸ್ಪೆಷಲ್ ಅಂತ ಹೇಳಿದ್ರು ಅರ್ಜುನ್ ಜನ್ಯ

    ಬೆಂಗಳೂರು: ಬಿಗ್‍ಬಾಸ್ ಸೀಸನ್-5ರ ಟ್ರೋಫಿ ಮುಡಿಗೇರಿಸಿಕೊಂಡಿರೋ ರ‍್ಯಾಪ್ ಸಿಂಗರ್ ಚಂದನ್ ಶೆಟ್ಟಿ ಸೋಮವಾರ ರಾತ್ರಿ ಬಿಡದಿಯ ಫಿಲ್ಮ್ ಸಿಟಿಯಿಂದ ನಿರ್ಗಮಿಸಿದ್ದರು.

    105ದಿನ ಬಿಗ್‍ಬಾಸ್ ಮನೆಯಲ್ಲಿ ಭರ್ಜರಿ ಮನರಂಜನೆ ನೀಡಿ ಜನರ ಮನ ಗೆದ್ದಿದ್ದ ಚಂದನ್ ಶೆಟ್ಟಿಯನ್ನು ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡರು. ಮೆರವಣಿಗೆ ಮೂಲಕ ಸಾವಿರಾರು ಜನರೊಂದಿಗೆ ಆಗಮಿಸಿದ್ದರು. ಆಂಜನೇಯ ದೇವಸ್ಥಾನಕ್ಕೆ ತೆರಳಿ ಚಂದನ್ ಶೆಟ್ಟಿ ಪೂಜೆ ಸಲ್ಲಿಸಿ ಪಬ್ಲಿಕ್ ಟಿವಿಗೆ ಆಗಮಿಸಿದ್ದರು.

    ಪಬ್ಲಿಕ್ ಟಿವಿಗೆ ಬಂದಿದ್ದ ಚಂದನ್ ಶೆಟ್ಟಿಗೆ ಅರ್ಜುನ್ ಜನ್ಯ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಚಂದು ನನಗೆ ತುಂಬಾನೇ ಖುಷಿಯಾಗಿದೆ. ನಾನು ನಿನ್ನನ್ನು ಮೊದಲಿನಿಂದ ನೋಡಿದ್ದೇನೆ. ನೀನು ಕಷ್ಟ ಪಟ್ಟಿದ್ದನ್ನು ಹಾಗೂ ಕನಸು ಕಂಡಿದ್ದರ ಬಗ್ಗೆ ನನಗೆ ತಿಳಿದಿದೆ. ಯಾರಾದರೂ ಕನಸು ಕಂಡು ಅದನ್ನು ಸಾಧಿಸಿದಾಗ ಆಗುವ ಖುಷಿ ನನಗೂ ತಿಳಿದಿದೆ. ನೀನು ಈ ಚಿಕ್ಕ ವಯಸ್ಸಿನಲ್ಲೇ ಒಬ್ಬನೇ ಕಷ್ಟಪಟ್ಟು ಒಬ್ಬನೇ ರ‍್ಯಾಪ್ ಮಾಡಿ ಅದನ್ನು ಹಾಡಿ ನಂತರ ಒಬ್ಬನೇ ವಿಡಿಯೋ ಮಾಡಿ ನಿನ್ನದೇ ಒಂದು ದಾರಿಯನ್ನು ಕಂಡುಕೊಂಡಿದ್ದೀಯ. ಅದು ನನಗೆ ಖುಷಿಯಾಗುತ್ತಿದೆ. ದೇವರು ನಿನಗೆ ಒಳ್ಳೆದು ಮಾಡಲಿ ಹಾಗೂ ನೀನು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ ಎಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹರ್ಷ ವ್ಯಕ್ತಪಡಿಸಿದ್ದಾರೆ.

    ಅರ್ಜುನ್ ಮಾತಿಗೆ ಪ್ರತಿಕ್ರಿಯಿಸಿದ ಶೆಟ್ಟಿ, ಸರ್. ನಿಮ್ಮ ಆರ್ಶೀವಾದ ನನ್ನ ಮೇಲೆ ಯಾವಾಗಲೂ ಇದೆ. ನಿಮ್ಮ ಸ್ಟೂಡೆಂಟ್ ಎಂದು ಹೇಳಿಕೊಳ್ಳಲು ನನಗೆ ಬಹಳ ಹೆಮ್ಮೆಯಿದೆ. ನೀವು ಪ್ರತಿ ಸಲ ನನಗೆ ಸಿಕ್ಕಿದಾಗ ಎರಡು ಮಾತನ್ನು ಆಡುತ್ತಿದ್ದೀರಿ. ಆದರೆ ಆ ಮಾತಲ್ಲಿ ದೊಡ್ಡ ಅರ್ಥವಿರುತ್ತಿತ್ತು. ನಾನು ಆ ಮಾತಗಳನ್ನು ಪಾಲಿಸುತ್ತಿದ್ದೇನೆ. ನೀವು ಹೇಳಿದ ಪ್ರತಿಯೊಂದು ಮಾತನ್ನೂ ನಾನು ಈವರೆಗೂ ಪಾಲಿಸುತ್ತಾ ಬಂದಿದ್ದೀನಿ. ನಾನು ಒಬ್ಬ ಚಂದನ್ ಶೆಟ್ಟಿ ಆಗಿರುವುದೇ ನಿಮ್ಮಿಂದ. ನನ್ನಿಂದ ಏನಾದರೂ ತಪ್ಪು ಆಗಿದ್ದರೆ ಕ್ಷಮಿಸಿ ಸರ್ ಎಂದು ಹೇಳಿದ್ರು.

    ನಿನ್ನ ಪರಿಶ್ರಮದಿಂದ ನೀನು ಚಂದನ್ ಶೆಟ್ಟಿ ಆಗಿದ್ದೀಯಾ? ನನಗೆ ನಿನ್ನ ಸ್ವಾಭಾವಿತ ನಡವಳಿಕೆ ನನಗೆ ಬಹಳ ಇಷ್ಟವಾಯಿತ್ತು. ಮನುಷ್ಯ ಎಷ್ಟೇ ಯಶಸ್ಸು ಕಂಡರೂ ಅವನಿಗೆ ಸ್ವಾಭಾವಿತ ನಡವಳಿಕೆಯಿರಬೇಕು. ಅದು ನಿನ್ನಲ್ಲಿ ಇದೆ. ಅದು ಇರೋವರೆಗೂ ನಿನ್ನನ್ನು ಯಾರೂ ಏನು ಮಾಡಲು ಆಗುವುದಿಲ್ಲ. ನಿನಗೆ ಯಾವುದೇ ಅಡಚನೆ ಕೂಡ ಇರುವುದಿಲ್ಲ. ಆ ಸ್ವಭಾವನ್ನು ನಾನು ಬಿಗ್‍ಬಾಸ್ ಮನೆಯಲ್ಲಿ ಕಂಡಿದ್ದೇನೆ. ಚಂದನ್ ಮೆಚ್ಯೂರಿಟಿಯನ್ನು ಕಂಡಿದ್ದಾನೆ ಎಂದು ಅನಿಸಿತ್ತು ಅಂತ ಅರ್ಜುನ್ ಜನ್ಯ ಹೇಳಿದ್ರು.

    ಚಂದನ್ ಶೆಟ್ಟಿ ಯಾಕೆ ಸ್ಪೆಷಲ್: ಚಂದನ್ ಶೆಟ್ಟಿ ಒಬ್ಬ ಕನಸುಗಾರ. ಕನಸು ಕಾಣದಲ್ಲದೇ ಅದನ್ನು ನನಸು ಮಾಡಲು ಪ್ರಯತ್ನಿಸುತ್ತಾನೆ. ಆ ಕನಸಿನ ಹಿಂದೆ ಹೋಗಿ ತನ್ನದೇ ಆದ ಒಂದು ದಾರಿಯನ್ನು ಮಾಡಿಕೊಳ್ಳುತ್ತಾನೆ. `ಮೂರೇ ಮೂರು ಪೆಗ್’ ಹಾಡು ವಿಶ್ವದಾದ್ಯಂತ ಜನಪ್ರಿಯವಾಗಿದೆ. ನಾನು ದುಬೈಗೆ ಹೋದರು ಅಲ್ಲಿನ ಜನರು ಆ ಹಾಡನ್ನು ಕೇಳುತ್ತಾರೆ. ಇದು ಕರ್ನಾಟಕದ ಹೆಮ್ಮಯ ವಿಷಯ. ಚಂದನ್ ಶೆಟ್ಟಿಗೆ ಯಾವ ಗಾಡ್ ಫಾದರ್ ಇಲ್ಲ. ಯಾವ ಮ್ಯೂಸಿಕ್ ಬ್ಯಾಗ್ರೌಂಡ್ ಕೂಡ ಇಲ್ಲದೆ ಈ ರೀತಿ ಹಾಡುಗಳನ್ನು ಮಾಡುತ್ತಾನೆಂದರೆ ಅದು ದೇವರ ಆರ್ಶಿವಾದ ಎಂದು ಅರ್ಜುನ್ ಜನ್ಯ ತಿಳಿಸಿದ್ದಾರೆ.

    ಅಷ್ಟೇ ಅಲ್ಲದೇ ಅರ್ಜುನ್ ಜನ್ಯ ಅವರು ಚಂದನ್ ಶೆಟ್ಟಿಯಿಂದ ಒಂದು ಹಾಡನ್ನು ಕೂಡ ಹಾಡಿಸಿದ್ದಾರೆ. ಅರ್ಜುನ ಜನ್ಯಗೋಸ್ಕರ ಚಂದನ್ ನಿವೇದಿತಾ ಗೌಡಗೆ ಹಾಡಿದ ಗೊಂಬೆ.. ಗೊಂಬೆ.. ಹಾಡನ್ನು ಹಾಡಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ವಿಜಯ ಪತಾಕೆ ಹಾರಿಸಿದ ಚಂದನ್ ಶೆಟ್ಟಿಗೆ ಅಮ್ಮನಿಂದ ಮುದ್ದಾದ ಉಡುಗೊರೆ

     

  • ಗಣಿನಾಡಲ್ಲಿ ಜನ್ಯ ಮ್ಯೂಸಿಕ್ ಗೆ ಜನ್ರು ಫಿದಾ – ಬಾಲ ಗಾಯಕಿ ಆದ್ಯಾ ಹಾಡಿಗೆ ಮನಸೋತ ಪ್ರೇಕ್ಷಕರು

    ಗಣಿನಾಡಲ್ಲಿ ಜನ್ಯ ಮ್ಯೂಸಿಕ್ ಗೆ ಜನ್ರು ಫಿದಾ – ಬಾಲ ಗಾಯಕಿ ಆದ್ಯಾ ಹಾಡಿಗೆ ಮನಸೋತ ಪ್ರೇಕ್ಷಕರು

    ಬಳ್ಳಾರಿ: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಡಿಗೆ ಗಣಿನಾಡಿನ ಪೇಕ್ಷಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ದಾರೆ.

    ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ವತಿಯಿಂದ ಗಡಿನಾಡ ಕನ್ನಡಿಗರ ಸಮಾವೇಶದ ಸಮಾರೋಪ ಸಮಾರಂಭವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅರ್ಜುನ ಜನ್ಯ ಸೇರಿದಂತೆ ಹಲವಾರು ಕಲಾವಿದರು ಹಾಡು ಹಾಡಿ ಪೇಕ್ಷಕರನ್ನು ರಂಜಿಸಿದ್ರು.

    ಅರ್ಜುನ್ ಜನ್ಯ ಜೊತೆ ಬಾಲ ಗಾಯಕಿ ಆದ್ಯಾ ಸಹ ಹಾಡು ಹಾಡಿ ಪೇಕ್ಷಕರನ್ನು ರಂಜಿಸಿದಳು. ಹಾಸ್ಯ ಕಲಾವಿದರಾದ ಗೋವಿಂದಗೌಡ ಹಾಗೂ ತಂಡದ ಸದಸ್ಯರು ಅಲ್ಲಾಡ್ಸು ಅಲ್ಲಾಡ್ಸು ಹಾಡಿಗೆ ವಿಭಿನ್ನವಾಗಿ ಹಾಸ್ಯ ಮಾಡಿ ಎಲ್ಲರನ್ನೂ ನಕ್ಕು ನಲಿಸಿದ್ರು.

    ಅರ್ಜುನ ಜನ್ಯ ಅಧ್ಯಕ್ಷ ಅಧ್ಯಕ್ಷ ಹಾಡು ಸೇರಿದಂತೆ, ಹೆಬ್ಬುಲಿ, ಭಜರಂಗಿ ಹಲವಾರು ಸಿನಿಮಾಗಳ ಹಾಡು ಹಾಡಿ ಸಾವಿರಾರು ಪೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು.

  • ಮಂಗ್ಳೂರಲ್ಲಿ ಅಪಾಯದಿಂದ ಪಾರಾದ ಅರ್ಜುನ್ ಜನ್ಯ!

    ಮಂಗ್ಳೂರಲ್ಲಿ ಅಪಾಯದಿಂದ ಪಾರಾದ ಅರ್ಜುನ್ ಜನ್ಯ!

    ಮಂಗಳೂರು: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಂಗಳೂರಿನ ಕಾರ್ಯಕ್ರಮವೊಂದರ ವೇಳೆ ಅಪಾಯದಿಂದ ಪಾರಾಗಿದ್ದಾರೆ.

    ನಗರದ ಮಾಲ್‍ವೊಂದರಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಬೈಕ್ ಕ್ರ್ಯಾಕರ್ಸ್ ಬೆಂಕಿ ಹೊತ್ತಿಕೊಂಡಿದ್ದು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮಂಗಳೂರಿನ ಫೋರಂ ಮಾಲ್ ನಲ್ಲಿ ಮೆಕ್ ಡಾವೆಲ್ ಕಂಪನಿ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಪಾಲ್ಗೊಂಡಿದ್ದರು. ವೇದಿಕೆಗೆ ಬೈಕ್ ಏರಿ ಬರುವ ವೇಳೆ ಕ್ರ್ಯಾಕರ್ಸ್ ಉರಿಸಲಾಗಿತ್ತು. ಅರ್ಜುನ್ ಬೈಕಿನಿಂದ ಇಳಿಯುವ ವೇಳೆ ಕ್ರ್ಯಾಕರ್ಸ್ ಉರಿ ಭುಜಕ್ಕೆ ಮತ್ತು ಕೈಗೆ ತಾಗಿದ್ದು ಸುಟ್ಟ ಗಾಯಗಳಾಗಿವೆ.

    ಬೈಕ್ ನಿಂದ ಇಳಿದ ಅರ್ಜುನ್ ಜನ್ಯ ನೇರವಾಗಿ ವೇದಿಕೆಗೆ ಹತ್ತಿ ಹಾಡು ಹಾಡಿ ಸಂಗೀತಪ್ರಿಯರನ್ನು ರಂಜಿಸಿದರು.