ಬೆಂಗಳೂರು: ಸಂಗೀತಲೋಕದ ಮಾಂತ್ರಿಕ ಅರ್ಜುನ್ ಜನ್ಯಾ ಹೊಸ ದಾಖಲೆ ಮಾಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ರೇಕಾರ್ಡ್ ಒಂದನ್ನು ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಅರ್ಜುನ್ ಜನ್ಯಾ ಅವರು ಸಂಗೀತ ಸಂಯೋಜಿಸಿರುವ ಮೂರು ಹಾಡುಗಳು ಈಗ ಬರೋಬ್ಬರಿ ನೂರು ಮಿಲಿಯನ್ ವಿವ್ಸ್ ಪಡೆಯುವ ಮೂಲಕವಾಗಿ ರೆಕಾರ್ಡ್ ಮಾಡಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ ಶರಣ್, ಆಶಿಕಾ ರಂಗನಾಥ್ ನಟನೆಯ ಚುಟು ಚುಟು ಅಂತೈತೆ, ನೀನಾಸಂ ಸತೀಶ್, ರಚಿತಾರಾಮ್ ನಟನೆಯ ಅಯೋಗ್ಯ ಸಿನಿಮಾದ ಎನಮ್ಮಿ ಎನಮ್ಮಿ , ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಕಣ್ಣು ಹೊಡಿಯಾಕ ಹಾಡು ನೂರು ಮಿಲಿಯನ್ ವೀಕ್ಷಣೆ ಪಡೆದುಕೊಂಡಿವೆ. ಈ ವಿಚಾರವನ್ನು ಅರ್ಜುನ್ ಜನ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
2006ರಲ್ಲಿ ಆಟೋಗ್ರಾಫ್ ಪ್ಲಿಸ್ ಸಿನಿಮಾದ ಮೂಲಕವಾಗಿ ಸ್ಯಾಂಡಲ್‍ವುಡ್ ಸಂಗೀತ ಲೋಕಕ್ಕೆ ಎಂಟ್ರಿಕೊಟ್ಟ ಅರ್ಜುನ್ ಜನ್ಯ ಅವರು ಅದ್ಭುತ ಹಾಡುಗಳನ್ನು ಕೊಟ್ಟಿದ್ದಾರೆ. ಇಲ್ಲಿಯ ವರೆಗೆ ಬರೋಬ್ಬರಿ ನೂರು ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸಂಗೀತ ಕ್ಷೇತ್ರಕ್ಕೆ ಉತ್ತಮ ಹಾಡುಗಳನ್ನು ಕೊಡುವ ಮೂಲಕವಾಗಿ ಸ್ಯಾಂಡಲ್‍ವುಡ್‍ನಲ್ಲಿ ತಮ್ಮದೆ ಆಗಿರುವ ಛಾಪನ್ನು ಮೂಡಿಸಿದ್ದಾರೆ.
ಶೀತಲ್ ಶೆಟ್ಟಿ ನಿರ್ದೇಶನದ ಚೊಚ್ಚಲ ಚಿತ್ರವಾದ ‘ವಿಂಡೋ ಸೀಟ್’ ಶುಭ ಸೂಚನೆಗಳಿಂದ ಕಂಗೊಳಿಸುತ್ತಿದೆ. ಕೊರೊನಾ ಕಾಲದ ತುಂಬಾ ಜನರ ಮನಸುಗಳೆಲ್ಲವೂ ಅನಿಶ್ಚಿತತೆಯಿಂದ ಕಂಗಾಲಾಗಿತ್ತಲ್ಲಾ? ಆ ಘಳಿಗೆಯಲ್ಲಿ ಅಮೋಘ ಮನೋರಂಜನೆಯ ಸ್ಪಷ್ಟ ಸೂಚನೆಗಳೊಂದಿಗೆ ಏಕಾಏಕಿ ವಿಂಡೋ ಸೀಟ್ ಫಳಗುಟ್ಟಿತ್ತು. ಮೋಷನ್ ಪೋಸ್ಟರ್ ಒಂದರಿಂದಲೇ ಶೀತಲ್ ಕಮಾಲ್ ಮಾಡಿದ್ದರು. ಅದರ ಬೆನ್ನಿಗೇ ಲಾಂಚ್ ಆಗಿರೋ ಫಸ್ಟ್ ಲುಕ್ ಅಂತೂ ಸಮಸ್ತ ಪ್ರೇಕ್ಷಕರನ್ನೂ ಥ್ರಿಲ್ ಆಗಿಸಿ ಬಿಟ್ಟಿದೆ.
ಮೋಷನ್ ಪೋಸ್ಟರ್, ಫಸ್ಟ್ ಲುಕ್ಕುಗಳೆಲ್ಲ ಒಂದು ಸಿನಿಮಾದ ಪಾಲಿಗೆ ಗೆಲುವಿನ ಮೆಟ್ಟಿಲುಗಳಿದ್ದಂತೆ. ಅದರಲ್ಲಿ ಆಯ ತಪ್ಪದೆ ಸಲೀಸಾಗಿ ಹತ್ತಿ ನಿಲ್ಲುವ, ಸಾವಧಾನದಿಂದಲೇ ವಿಕ್ಟರಿ ಸಿಂಬಲ್ಲು ತೋರಿಸುವ ಛಾತಿಯೊಂದು ಕಲೆಗಾರಿಕೆ. ಅದನ್ನು ಶೀತಲ್ ಶೆಟ್ಟಿ ಮೊದಲ ಹೆಜ್ಜೆಯಲ್ಲಿಯೇ ಸಮರ್ಥವಾಗಿ ಪ್ರದರ್ಶಿಸಿದ್ದಾರೆ. ರೊಮ್ಯಾಂಟಿಕ್ ಥ್ರಿಲ್ಲರ್ ಜಾನರಿನ ಈ ಕಥನವನ್ನು ರೊಮ್ಯಾಂಟಿಕ್ ಶೈಲಿಯಲ್ಲಿಯೇ ಪ್ರೇಕ್ಷಕರಿಗೆಲ್ಲ ದಾಟಿಸಿದ್ದಾರೆ.
ಈಗಂತೂ ವ್ಯಾಪಕವಾಗಿ ಎಲ್ಲ ಕಡೆಗಳಿಂದಲೂ ಈ ಫಸ್ಟ್ ಲುಕ್ಕಿಗೆ ಪ್ರಶಂಸೆಗಳು ಕೇಳಿ ಬರಲಾರಂಭಿಸಿವೆ. ಈ ಸಿನಿಮಾದಲ್ಲಿ ಏನೋ ಇದೆ ಅನ್ನೋ ಗಾಢ ನಂಬಿಕೆ ಎಲ್ಲರಲ್ಲಿಯೂ ಮೊಳೆತುಕೊಂಡಿದೆ. ಇದು ಶೀತಲ್ ಶೆಟ್ಟಿ ಮಾತ್ರವಲ್ಲದೆ ಅವರ ಇಡೀ ತಂಡದ ಮುಖದಲ್ಲಿ ಸಂತಸ ಮಿರುಗುವಂತೆ ಮಾಡಿದೆ. ಯಾಕಂದ್ರೆ, ಈಗ ಎಲ್ಲೆಡೆ ಮನೆ ಮಾಡಿಕೊಂಡಿರೋದು ವಿಂಡೋ ಸೀಟ್‍ನ ಗೆಲುವಿನ ಸ್ಪಷ್ಟವಾದ ಮುನ್ಸೂಚನೆ!
ಹೀಗೆ ಫಸ್ಟ್ ಲುಕ್‍ಗೆ ಪಾಸಿಟಿವ್ ಪ್ರತಿಕ್ರಿಯೆ ಪಡಿಮೂಡಿಕೊಂಡಿರೋದರ ಹಿಂದೆ ನಿರ್ಮಾಪಕ ಜಾಕ್ ಮಂಜು ಅವರ ಅಗಾಧವಾದ ಸಿನಿಮಾ ಪ್ರೇಮವಿದೆ. ಅದಿಲ್ಲದೇ ಹೋಗಿದ್ದರೆ ವಿಂಡೋ ಸೀಟ್ ಹೀಗೆ ಗೆಲುವಿನ ಪ್ರಭಾವಳಿಯಲ್ಲಿ ಮಿರಗುಡೋದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಸಾಮಾನ್ಯವಾಗಿ ಎಲ್ಲರ ಚಿತ್ತವೂ ಅದಾಗಲೇ ಗೆದ್ದವರ ಮೇಲಿರುತ್ತೆ. ಆದರೆ ಒಂದೊಳ್ಳೆ ಕಥೆ ಹಿಡಿದು ಕಾದು ನಿಂತ ಹೊಸಬರಿಗೆ ಸಾಥ್ ನೀಡೋ ಮನಸ್ಥಿತಿಯ ನಿರ್ಮಾಪಕರ ಸಂಖ್ಯೆ ಕಡಿಮೆ. ಆ ವಿರಳರ ಸಾಲಿನಲ್ಲಿ ಜಾಕ್ ಮಂಜು ಮೊದಲಿಗರಾಗಿ ನಿಲ್ಲುತ್ತಾರೆ.
ಅಷ್ಟಕ್ಕೂ ಜಾಕ್ ಮಂಜು ಸಿನಿಮಾ ರಂಗದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡಿರುವವರು. ಕಥೆಯ ಕಸುವನ್ನು ಸೂಕ್ಷ್ಮವಾಗಿ ಗ್ರಹಿಸೋ ಗುಣ ಅವರ ನಿಜವಾದ ಶಕ್ತಿ. ಅದರ ಮೂಲಕವೇ ಶೀತಲ್ ಶೆಟ್ಟಿಯವರ ವಿಂಡೋ ಸೀಟ್ ಅನ್ನವರು ನಿರ್ಮಾಣ ಮಾಡಿದ್ದಾರೆ. ಇದೀಗ ಆರಂಭಿಕವಾಗಿ ಅವರಿಟ್ಟಿದ್ದ ಭರವಸೆ ಫಸ್ಟ್ ಲುಕ್ಕಿಗೆ ಸಿಗುತ್ತಿರೋ ವ್ಯಾಪಕ ಮನ್ನಣೆಯಿಂದ ಮತ್ತಷ್ಟು ಗಟ್ಟಿಗೊಳ್ಳುತ್ತಿದೆ.
ನಿರ್ದೇಶಕಿ ಶೀತಲ್ ಶೆಟ್ಟಿ ಈ ಸಿನಿಮಾ ಬಗ್ಗೆ ಬಿಟ್ಟುಕೊಟ್ಟಿರೋ ವಿಚಾರಗಳೇ ಕಡಿಮೆ. ಅದುವೇ ಒಂದಷ್ಟು ಬೆರಗುಗಳ ಹುಟ್ಟಿಗೆ ಕಾರಣವಾಗಿರೋದು ಸುಳ್ಳಲ್ಲ. ಅದು ಸುಳ್ಳಾಗೋದೂ ಇಲ್ಲ ಅನ್ನೋದನ್ನು ಈ ಫಸ್ಟ್ ಲುಕ್ ಸಾಕ್ಷೀಕರಿಸಿದೆ. ವಿಂಡೋ ಸೀಟ್‍ನ ಆಚೀಚೆಯ ಅಚ್ಚರಿಗಳು ನಿಜಕ್ಕೂ ಸಾಕಷ್ಟಿವೆ. ಅದರಲ್ಲಿ ಮೊದಲ ನೋಟಕ್ಕೆ ಕಾಣಿಸೋದು ಅರ್ಜುನ್ ಜನ್ಯಾ ಸಾರಥ್ಯದ ಸಂಗೀತ. ಅದುವೇ ಈ ಸಿನಿಮಾದ ನಿಜವಾದ ಶಕ್ತಿಯಂತಿದೆ ಅನ್ನೋ ವಿಚಾರ ಫಸ್ಟ್ ಲುಕ್ಕಿನಲ್ಲಿ ತೇಲಿ ಬಂದ ಮಂದ್ರ ಸಂಗೀತದ ಫಲುಕುಗಳಲ್ಲಿಯೇ ಸ್ಪಷ್ಟವಾಗಿದೆ.
ಅರ್ಜುನ್ ಜನ್ಯಾ ಸದ್ಯ ಕನ್ನಡ ಚಿತ್ರರಂಗದ ಸ್ಟಾರ್ ಸಂಗೀತ ನಿರ್ದೇಶಕ. ಬರೀ ಸಂಗೀತ ವಿಭಾಗ ಮಾತ್ರವಲ್ಲ; ಇಡೀ ಕಥೆ ಹಿಡಿಸಿದರೆ, ಅದರಲ್ಲಿ ಹೊಸತನ ಮಿರುಗಿದಂತೆ ಕಂಡರೆ ಮಾತ್ರವೇ ಅವರು ಸಂಗೀತ ಸಾರಥ್ಯ ವಹಿಸಿಕೊಳ್ಳಲು ಒಪ್ಪಿಕೊಳ್ಳುತ್ತಾರೆ. ವಿಂಡೋ ಸೀಟ್ ಕಥೆಯನ್ನಂತೂ ಅವರು ಕೇಳಿ ಥ್ರಿಲ್ ಆಗಿದ್ದಾರಂತೆ. ಈ ಕಾರಣದಿಂದಲೇ ಅತ್ಯುತ್ಸಾಹದಿಂದ, ಎಂದಿನ ಭಕ್ತಿಯಿಂದ ಈ ಸಿನಿಮಾಗಾಗಿ ವಿಶಿಷ್ಟ ಸಂಗೀತದ ಪಟ್ಟುಗಳನ್ನ ಹಾಕಿದ್ದಾರಂತೆ. ಇದು ವಿಂಡೋ ಸೀಟ್ ಮ್ಯೂಸಿಕಲ್ ಹಿಟ್ ಆಗೋದರ ಮಧುರವಾದ ಮುನ್ಸೂಚನೆ ಎನ್ನಲಡ್ಡಿಯಿಲ್ಲ.
ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಕೊರೊನಾ ಬಾಧೆಯ ನಡುವೆಯೂ ಒಂದಷ್ಟು ಸುದ್ದಿ ಮಾಡುತ್ತಾ ಬಂದಿತ್ತು. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಸಿನಿಮಾದ ಮೋಷನ್ ಪೋಸ್ಟರ್ ತನ್ನ ನಿಗೂಢ ಚಹರೆಗಳ ಮೂಲಕ ಚರ್ಚೆಗೆ ಗ್ರಾಸವಾಗಿತ್ತು. ಸಿನಿಮಾವನ್ನು ಗಂಭೀರವಾಗಿ ಪರಿಗಣಿಸಿ ಅದನ್ನೇ ಕನಸಾಗಿಸಿಕೊಂಡಿರೋ ಶೀತಲ್ ಈ ಮೂಲಕ ನಿರ್ಣಾಯಕ ಹೆಜ್ಜೆಯಿರಿಸಿದ್ದಾರೆಂಬ ಮೆಚ್ಚುಗೆಯೂ ಕೇಳಿ ಬಂದಿತ್ತು. ಅದೇ ಖುಷಿಯಲ್ಲೀಗ ಶೀತಲ್ ಮತ್ತೊಂದು ಖುಷಿಯ ಸಂಗತಿಯನ್ನೂ ಹಂಚಿಕೊಂಡಿದ್ದಾರೆ.
ಕೊರೊನಾ ವೈರಸ್ ರುದ್ರತಾಂಡವವಾಡುತ್ತಿರುವಾಗಲೇ ಶೀತಲ್ ವಿಂಡೋ ಸೀಟ್‍ನ ಪೋಸ್ಟ್ ಪ್ರೊಡಕ್ಷನ್ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದರು. ಅದಾದ ನಂತರದಲ್ಲಿ ನಾನಾ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ಜರುಗುತ್ತಾ ಬಂದಿದ್ದವು. ಹೀಗಿರುವಾಗಲೇ ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ವಿಂಡೋ ಸೀಟ್‍ಗೆ ಬಂದು ಕೂತಿರೋ ಸುದ್ದಿ ಸ್ವತಃ ಶೀತಲ್ ಕಡೆಯಿಂದಲೇ ಹೊರ ಬಿದ್ದಿದೆ.
ವಿಂಡೋ ಸೀಟ್ ಅನ್ನೋದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರದ ಚಿತ್ರ. ಸಂಕೀರ್ಣ ಕಥೆಯನ್ನ ಚೇತೋಹಾರಿಯಾಗಿಯೇ ಸಿನಿಮಾ ಚೌಕಟ್ಟಿಗೆ ಒಗ್ಗಿಸುವ ಸವಾಲನ್ನು ಶೀತಲ್ ಇಲ್ಲಿ ಸ್ವೀಕರಿಸಿದ್ದಾರಂತೆ. ಈ ಕಥೆಯಲ್ಲಿ ನಾಯಕ ನಿರೂಪ್ ಭಂಡಾರಿ ಗಿಟಾರಿಸ್ಟ್ ಆಗಿ ನಟಿಸಿದ್ದಾರೆ. ಅದಕ್ಕೆ ಪೂರಕವಾಗಿ ಈ ಸಿನಿಮಾವನ್ನ ಮ್ಯೂಸಿಕಲ್ ಹಿಟ್ ಆಗಿಸೋ ಜವಾಬ್ದಾರಿಯನ್ನ ಅರ್ಜುನ್ ಜನ್ಯಾ ವಹಿಸಿಕೊಂಡಿದ್ದಾರೆ.
Its always fun to work with very talented ones and equally humble one like @arjunjanya himself. And when you see your months of efforts taking a beautiful shape,, its ecstatic!!! 'window seat' post production work:) And ya, thats my brother who is spoiling the video royally) pic.twitter.com/0f8JXy60fy
ಈಗಾಗಲೇ ಅರ್ಜುನ್ ಜನ್ಯಾರ ಕೆಲಸ ಆರಂಭವಾಗಿದೆ. ಜನ್ಯಾ ತನ್ಮಯರಾಗಿ ಸಂಗೀತ ಪಟ್ಟು ಹಾಕುತ್ತಿರೋದರ ಬಗೆಗಿನ ವಿಡಿಯೋ ಒಂದನ್ನು ಶೀತಲ್ ಹಂಚಿಕೊಂಡಿದ್ದಾರೆ. ಅವರ ಪ್ರತಿಭೆ, ಕೆಲಸದ ಬಗ್ಗೆಯೂ ಬೆರಗಿನ ಮಾತುಗಳನ್ನಾಡಿದ್ದಾರೆ. ಜನ್ಯಾರ ಪ್ರತಿಭೆಯಿಂದಲೇ ವಿಂಡೋ ಸೀಟ್ ಮತ್ತಷ್ಟು ಆಕರ್ಷಣೀಯವಾಗುತ್ತಿರೋದರ ಬಗ್ಗೆಯೂ ಶೀತಲ್ ಥ್ರಿಲ್ ಆದಂತಿದ್ದಾರೆ.
ಈ ಸಿನಿಮಾದ ಹೀರೋ ಗಿಟಾರಿಸ್ಟ್ ಎಂಬ ವಿಚಾರವೇ ಇಲ್ಲಿ ಸಂಗೀತದ ಮಹತ್ವ ಅದೆಷ್ಟಿದೆ ಅನ್ನೋದರ ಸಂಕೇತ. ಕಥೆಯಲ್ಲಿಯೇ ಸಂಗೀತ ಹೊಸೆದುಕೊಂಡಿದ್ದಾಗ ಅದು ಸಂಗೀತ ನಿರ್ದೇಶಕನ ಪಾಲಿಗೂ ಸವಾಲು. ಅದನ್ನು ಅರ್ಜುನ್ ಜನ್ಯಾ ಖುಷಿಯಿಂದಲೇ ಸ್ವೀಕರಿಸಿದ್ದಾರೆ. ಕಥೆಯನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಲೇ ವಿಂಡೋ ಸೀಟ್ ಅನ್ನು ರಾಗಗಳಿಂದ ಕಳೆಗಟ್ಟಿಸೋ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಜಾಕ್ ಮಂಜು ನಿರ್ಮಾಣ ಮಾಡಿರುವ ವಿಂಡೋ ಸೀಟ್ ಕೊರೊನಾ ಕಾಲದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಪ್ರಧಾನವಾದದ್ದು. ಲಾಕ್‍ಡೌನ್ ಆರಂಭವಾಗೋದಕ್ಕೂ ಮುಂಚಿತವಾಗಿಯೇ ಇದರ ಚಿತ್ರೀಕರಣವನ್ನ ಶೀತಲ್ ಮುಗಿಸಿಕೊಂಡಿದ್ದರು. ಯಾವುದೇ ಸದ್ದುಗದ್ದಲವಿಲ್ಲದೆ ಇತ್ತೀಚೆಗೆ ಪೋಸ್ಟ್ ಪ್ರೊಡಕ್ಷನ್ ಅನ್ನೂ ಆರಂಭಿಸಿದ್ದರು. ಅರ್ಜುನ್ ಜನ್ಯಾ ಎಂಟ್ರಿಯ ಮೂಲಕ ಅದೀಗ ನಿರ್ಣಾಯಕ ಹಂತ ತಲುಪಿಕೊಂಡಿದೆ. ಇಷ್ಟರಲ್ಲಿಯೇ ಶೀತಲ್ ಕಡೆಯಿಂದ ಮತ್ತೊಂದಷ್ಟು ಸಿಹಿ ಸುದ್ದಿಗಳು ರವಾನೆಯಾಗೋ ನಿರೀಕ್ಷೆಗಳಿದ್ದಾವೆ.
ಬೆಂಗಳೂರು: ಚಂದನವನದಲ್ಲಿ ಚಿಕ್ಕ ಚಿಕ್ಕ ಪಾತ್ರಗಳಿಂದ ಮೇಲೆ ಬಂದವರು ಹಾಸ್ಯ ನಟ ಶರಣ್. ಇಂದು ಅದೇ ಹಾಸ್ಯ ನಟ ಪೂರ್ಣ ಪ್ರಮಾಣದ ನಾಯಕರಾಗಿ ಈಗಾಗಲೇ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ರ‍್ಯಾಂಬೋ ಎಂಬ ಸೂಪರ್ ಹಿಟ್ ಸಿನಿಮಾ ನೋಡಿದ್ದ ತಂಡ ಮತ್ತೊಮ್ಮೆ ಒಂದಾಗಿ ರ‍್ಯಾಂಬೋ-2 ಚಿತ್ರವನ್ನು ನಿರ್ಮಾಣ ಮಾಡಿದೆ.
ಇದೇ ಶುಕ್ರವಾರ ರ‍್ಯಾಂಬೋ-2 ಚಂದನವನದಲ್ಲಿ ಬಿಡುಗಡೆ ಮುನ್ನವೇ ಹವಾ ಕ್ರಿಯೇಟ್ ಮಾಡಿದೆ. ರ‍್ಯಾಂಬೋ ಚಿತ್ರದ ಮುಂದುವರಿದ ಭಾಗವೇ ರ‍್ಯಾಂಬೋ -2 ಅಂತಾ ಹೇಳಲಾಗುತ್ತಿದೆ. ಆದ್ರೆ ಚಿತ್ರತಂಡ ಮುಂದುವರೆದ ಭಾಗ ಹೇಳುವಕ್ಕಿಂತ ರ್ಯಾಂಬೋ ಚಿತ್ರದ ಮತ್ತೊಂದು ಅಧ್ಯಾಯ ಅಂತಾ ಹೇಳಬಹುದು ಅಂತಾ ಹೇಳಿಕೊಂಡಿದೆ. ಇದೂವರೆಗೂ ಶರಣ್ ಮತ್ತು ಚಿಕ್ಕಣ್ಣ ಜೋಡಿಯಾಗಿ ನಟಿಸಿರುವ ಚಿತ್ರಗಳಲ್ಲಿ ಹಾಸ್ಯವೇ ಪ್ರಧಾನವಾಗಿತ್ತು. ಆದ್ರೆ ಚಿತ್ರತಂಡದ ಪ್ರಕಾರ ಈ ಬಾರಿ ಶರಣ್ ಮತ್ತು ಚಿಕ್ಕಣ್ಣ ತುಂಬಾ ವಿಭಿನ್ನವಾಗಿ ರ‍್ಯಾಂಬೋ ದಲ್ಲಿ ಕಾಣಿಸಿಕೊಂಡಿದ್ದಾರೆ ಅಂತಾ ತಿಳಿಸಿದೆ.
ಮುದ್ದು ಹುಡುಗಿ ಆಶಿಕಾ ರಂಗನಾಥ್ ರ‍್ಯಾಂಬೋ-2 ಚಿತ್ರದಲ್ಲಿ ಶರಣ್‍ಗೆ ಜೊತೆಯಾಗಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ಯ ಜನ್ಯ ಸಂಯೋಜನೆಯಲ್ಲಿ ಐದು ಹಾಡುಗಳು ಮೂಡಿಬಂದಿವೆ. ಚಿತ್ರದ ಉತ್ತರ ಕರ್ನಾಟಕ ಶೈಲಿಯ ‘ಚುಟು ಚುಟು’ ಹಾಡು ಸೂಪರ್ ಹಿಟ್ ಆಗಿದೆ.
ರ‍್ಯಾಂಬೋ ಚಿತ್ರ ಎಲ್ಲ ತಂತ್ರಜ್ಞರು ಒಂದಾಗಿ ಬಂಡವಾಳ ಹಾಕಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ನಟ ಚಿಕ್ಕಣ್ಣ, ನಿರ್ದೇಶಕರಾದ ತರುಣ್ ಸುಧೀರ್, ಮೋಹನ್ ಬಿ.ಕೆರೆ, ಛಾಯಾಗ್ರಾಹಕ ಎಸ್.ರಾಜ್, ಸಂಕಲನಕಾರ ಕೆ.ಎಂ.ಪ್ರಕಾಶ್, ಅಟ್ಲಾಂಟ್ ನಾಗೇಂದ್ರ ಮತ್ತು ಪ್ರೊಡೆಕ್ಷನ್ ಮ್ಯಾನೇಜರ್ ನರಸಿಂಹ ಜಾಲಹಳ್ಳಿ ಒಂದಾಗಿ ಹಣ ಹೂಡಿದ್ದಾರೆ. ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣಲಿದೆ.