Tag: ಅರ್ಜುನ್ ಜನ್ಯ

  • ಉಪೇಂದ್ರ ಹುಟ್ಟುಹಬ್ಬ: 45 ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್

    ಉಪೇಂದ್ರ ಹುಟ್ಟುಹಬ್ಬ: 45 ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್

    ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ “ಸೂರಜ್ ಪ್ರೊಡಕ್ಷನ್ ” ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯಿದೆ. ಈಗಾಗಲೇ ಹಲವು ವಿಶೇಷಗಳಿಂದ “45” ಎಲ್ಲರ ಗಮನ ಸೆಳೆದಿದೆ. ಚಿತ್ರದ ನಾಯಕರಲ್ಲೊಬ್ಬರಾದ ಉಪೇಂದ್ರ ಅವರ ಹುಟ್ಟುಹಬ್ಬದ ದಿನ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ವಿಶೇಷವಾದ ಬೈಕ್ ಅನಾವರಣ ಮಾಡುವ ಮೂಲಕ “45” ಚಿತ್ರತಂಡ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಈ ಬೈಕ್ “45” ಚಿತ್ರದಲ್ಲಿ ಉಪೇಂದ್ರ ಅವರು ಓಡಿಸುವ ಬೈಕ್ ಆಗಿದೆ. ನಿರ್ಮಾಪಕ ರಮೇಶ್ ರೆಡ್ಡಿ, ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಟ ಉಪೇಂದ್ರ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

     

    ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಮಾತನಾಡಿದ ನಿರ್ದೇಶಕ ಅರ್ಜುನ್ ಜನ್ಯ, ಇಂದು ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಅನಾವರಣಗೊಂಡಿರುವ ಈ ವಿಶೇಷ ಬೈಕ್ ಅನ್ನು ನಮ್ಮ ಚಿತ್ರದಲ್ಲಿ ಉಪೇಂದ್ರ ಅವರೆ ಓಡಿಸುತ್ತಿರುತ್ತಾರೆ. ನಮ್ಮ ಸಿನಿಮಾದಲ್ಲಿ ಇದು ಒಂದು ಪಾತ್ರ ಎಂದು ಹೇಳಬಹುದು. ಇಂದಿನಿಂದ ಚಿತ್ರ ಬಿಡುಗಡೆಯವರೆಗೂ ಈ ಬೈಕ್‌ನ ಸಂಚಾರ ಆರಂಭವಾಗಲಿದೆ. ಉಪೇಂದ್ರ ಅವರ ಅಭಿಮಾನಿಗಳು ಈ ಬೈಕ್‌ನ ಜೊತೆಗೆ ರೀಲ್ ಮಾಡಬಹುದು. ಸೆಲ್ಫಿ ತೆಗೆದುಕೊಳ್ಳಬಹುದು. ಅದನ್ನು ನಮಗೆ ಅಥವಾ ಉಪೇಂದ್ರ ಅವರಿಗೆ ಟ್ಯಾಗ್ ಮಾಡಬಹುದು. ಅದನ್ನು ಉಪೇಂದ್ರ ಅವರು ವೀಕ್ಷಿಸಲಿದ್ದಾರೆ ಎಂದರು.ಇದನ್ನೂ ಓದಿ: ಇದ್ರೆ ನೆಮ್ಮದಿಯಾಗಿ ಇರ್ಬೇಕು ಎಂದ ವೈಷ್ಣವಿಗೌಡ – ದಪ್ಪ ಆಗಿದ್ದೀರಾ ಅಂದ್ರು ಫ್ಯಾನ್ಸ್

    ನಿರ್ದೇಶಕರು ಹೇಳಿದ ಹಾಗೆ ನಮ್ಮ ಚಿತ್ರದಲ್ಲಿ ಈ ವಿಶೇಷ ಬೈಕ್ ಕೂಡ ಒಂದು ಪಾತ್ರ. ಉಪೇಂದ್ರ ಅವರು ಈ ಬೈಕ್ ಓಡಿಸುವ ಸನ್ನಿವೇಶಗಳನ್ನು ನೀವು ಚಿತ್ರದಲ್ಲೇ ನೋಡಬೇಕು. ಈ ಬೈಕ್ ನಿರ್ಮಾಣಕ್ಕೆ ಬಹಳ ದಿನಗಳೇ ತೆಗೆದುಕೊಂಡಿದೆ. ಉಪೇಂದ್ರ ಅವರ ಅಭಿಮಾನಿಗಳು ಇದರ ಜೊತೆಗೆ ಫೋಟೊ ತೆಗೆದುಕೊಂಡು ನಮ್ಮ ತಂಡದವರಿಗೆ ಟ್ಯಾಗ್ ಮಾಡಬಹುದು ಎಂದು ತಿಳಿಸಿದ ನಿರ್ಮಾಪಕ ರಮೇಶ್ ರೆಡ್ಡಿ ಅವರು ಉಪೇಂದ್ರ ಅವರಿಗೆ ಜನ್ಮದಿನದ ಶುಭಾಶಯ ಹೇಳಿದರು.

    ನಿಮ್ಮೆಲ್ಲರ ಪ್ರೀತಿಗೆ ಮನ ತುಂಬಿ ಬಂದಿದೆ. ನಿಮ್ಮಿಂದಲೇ ನಾನು ಅಷ್ಟೇ. ಸಾಮಾನ್ಯವಾಗಿ ಹುಟ್ಟುಹಬ್ಬದ ದಿನ ಟೀಸರ್, ಪೋಸ್ಟರ್ ಮುಂತಾದವುಗಳನ್ನು ಬಿಡುಗಡೆ ಮಾಡುತ್ತಾರೆ. ಆದರೆ “45” ಚಿತ್ರತಂಡ ಈ ಬೈಕ್ ಅನಾವರಣ ಮಾಡಿದ್ದು ವಿಶೇಷವಾಗಿದೆ. ಎಲ್ಲರ ಪ್ರೀತಿಗೆ ಅನಂತ ಧನ್ಯವಾದ ಎಂದರು ನಾಯಕ ಉಪೇಂದ್ರ.ಇದನ್ನೂ ಓದಿ: ನಾನು ಕಷ್ಟಪಟ್ಟು ತಗೊಂಡಿರೋ ಮನೆ ಅವನಿಗ್ಯಾಕೆ ಗಿಫ್ಟ್ ತರ ಬಿಟ್ಕೊಡ್ಲಿ – ರಂಜಿತ್ ಅಕ್ಕ ರಶ್ಮಿ

  • ಅರ್ಜುನ್ ಜನ್ಯ ನಿರ್ದೇಶನದ ಚಿತ್ರಕ್ಕೆ ಉಗಾಂಡ ಕಲಾವಿದರ ಮೆರಗು

    ಅರ್ಜುನ್ ಜನ್ಯ ನಿರ್ದೇಶನದ ಚಿತ್ರಕ್ಕೆ ಉಗಾಂಡ ಕಲಾವಿದರ ಮೆರಗು

    ರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರ ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ `45′ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ.

    ಪ್ರಸ್ತುತ `45′ ಚಿತ್ರಕ್ಕಾಗಿ ಅದ್ದೂರಿ ಪ್ರಮೋಷನ್ ಸಾಂಗ್‌ನ ಚಿತ್ರೀಕರಣ ನಡೆಸಲು ಚಿತ್ರತಂಡ ತಯಾರಿ ನಡೆಸಿದೆ. ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರೊಂದಿಗೆ ಈ ಹಾಡಿಗೆ ಹೆಜ್ಜೆ ಹಾಕಲು ಉಗಾಂಡದಿಂದ `ಜಿಟೊ ಕಿಡ್ಸ್’ ಎಂದೇ ಖ್ಯಾತರಾಗಿರುವ ನೃತ್ಯಗಾರರ ತಂಡ ಆಗಮಿಸಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ನಿರ್ದೇಶಕ ಅರ್ಜುನ್ ಜನ್ಯ ಅವರು ದೂರದ ಉಗಾಂಡಾದಿಂದ ಆಗಮಿಸಿದ ನೃತ್ಯಗಾರರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಅತ್ತೆ ಮನೆ ಮುಂದೆ ಅಳಿಯನ ಟೀ ಅಂಗಡಿ – ಕೈಗೆ ಕೋಳ ಧರಿಸಿ ಚಹಾ ಮಾರಾಟ

    ಪ್ರಮೋಷನ್ ಸಾಂಗ್ ಕುರಿತು ಮಾತನಾಡಿದ ನಿರ್ದೇಶಕ ಅರ್ಜುನ್ ಜನ್ಯ ಅವರು, ಎಲ್ಲಾ ಚಿತ್ರಗಳಲ್ಲೂ ಸಾಮಾನ್ಯವಾಗಿ ಪ್ರಮೋಷನ್ ಸಾಂಗ್ಸ್ ಇರುತ್ತದೆ. ಆದರೆ ನಾವು ಸ್ವಲ್ಪ ವಿಭಿನ್ನವಾಗಿ ಮಾಡೋಣ ಅಂದುಕೊಂಡಿದ್ದೇವೆ. ತಮ್ಮ ಅಮೋಘ ನೃತ್ಯದಿಂದ ಇಡೀ ವಿಶ್ವದಲ್ಲೇ ಪ್ರಸಿದ್ಧರಾಗಿರುವ ಉಗಾಂಡದ `ಜಿಟೊ ಕಿಡ್ಸ್’ ಎಂಬ ನೃತ್ಯಗಾರರ ತಂಡ ಈ ಹಾಡಿಗೆ ನೃತ್ಯ ಮಾಡಲು ದೂರದ ಉಗಾಂಡಾದಿಂದ ಆಗಮಿಸಿದ್ದಾರೆ ಎಂದರು. ಇದನ್ನೂ ಓದಿ: ಕಮಲ್ `ಕನ್ನಡ’ ವಿವಾದ – ಜೂ.20ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

    ಇವರು ಇದೇ ಮೊದಲು ಭಾರತಕ್ಕೆ ಆಗಮಿಸಿರುವುದು. ಈ ಪ್ರಮೋಷನ್ ಸಾಂಗ್‌ನ ಚಿತ್ರೀಕರಣದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಹಾಗೂ ಉಗಾಂಡಾದ `ಜಿಟೊ ಕಿಡ್ಸ್’ ಪಾಲ್ಗೊಳ್ಳಲ್ಲಿದ್ದಾರೆ. ಇದಕ್ಕಾಗಿ ಬೆಂಗಳೂರಿನಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ. ಕನ್ನಡದಲ್ಲಿ ಎಂ.ಸಿ.ಬಿಜ್ಜು ಈ ಹಾಡನ್ನು ಬರೆದು ಹಾಡಿದ್ದಾರೆ. ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಏರ್‌ ಇಂಡಿಯಾ ಪತನ – ಮದುವೆಯಾಗಿದ್ದ Gay Couple ದುರಂತ ಸಾವು

    ನಮ್ಮ ನಿರ್ದೇಶಕರು ಸಿನಿಮಾವನ್ನು ಪ್ರೀತಿಸುವ ರೀತಿ ನೋಡಿದರೆ ಬಹಳ ಸಂತೋಷವಾಗುತ್ತದೆ. ಈಗ ಪ್ರಮೋಷನ್ ಸಾಂಗ್ ಅನ್ನು ಅದ್ದೂರಿಯಾಗಿ ಚಿತ್ರೀಕರಣ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಉಗಾಂಡಾದಿಂದ ಹೆಸರಾಂತ ನೃತ್ಯಗಾರರು ಆಗಮಿಸಿದ್ದಾರೆ. ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರು ಸಹ ಹಾಡಿನಲ್ಲಿ ಅಭಿನಯಿಸಲಿದ್ದಾರೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬರುತ್ತಿದೆ. ನಮ್ಮ `45′ ಚಿತ್ರ ಭಾರತ ಹಾಗೂ ಭಾರತದಾಚೆಗೂ ಯಶಸ್ವಿಯಾಗಲಿದೆ ಎಂಬ ನಂಬಿಕೆ ನನಗಿದೆ ಎಂದು ನಿರ್ಮಾಪಕ ರಮೇಶ್ ರೆಡ್ಡಿ ಹೇಳಿದರು.

  • ಶೂಟಿಂಗ್ ಮುಗಿಸಿದ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾ

    ಶೂಟಿಂಗ್ ಮುಗಿಸಿದ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾ

    ರುನಾಡ ‌ಚಕ್ರವರ್ತಿ ಶಿವರಾಜಕುಮಾರ್ (Shivaraj Kumar), ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಚೊಚ್ಚಲ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಉಮಾ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ಬಹು ನಿರೀಕ್ಷಿತ “45” ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರ. ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ಈ ಪ್ಯಾನ್ ಇಂಡಿಯಾ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಕುಂಬಳಕಾಯಿ ಒಡೆಯಲಾಗಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ಪತ್ರಿಕಾಗೋಷ್ಠಿಗೂ ಮುನ್ನ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರನ್ನು ನಿರ್ಮಾಪಕ ರಮೇಶ್ ರೆಡ್ಡಿ ಅವರು ಸನ್ಮಾನಿಸಿದರು.

    ಮೊದಲು ಮಾತನಾಡಿದ ಶಿವರಾಜಕುಮಾರ್ ಅವರು, “45” ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ಬಹಳ ಖುಷಿಯಾಗಿದೆ. ಈ ಚಿತ್ರದಲ್ಲಿ ನಾವು ಮೂವರು ನಟಿಸಿದ್ದೇವೆ. ಅವರು ಮುಂದು. ಇವರು ಮುಂದು ಅಂತ ಇಲ್ಲ. ಇಲ್ಲಿ ಎಲ್ಲರು ಒಂದೇ. ಉಪೇಂದ್ರ ಅವರ ಜೊತೆ ನಟಿಸಲು ನಾನು ಯಾವಾಗಲೂ ಸಿದ್ದ. ರಾಜ್ ಬಿ ಶೆಟ್ಟಿ ಅವರ ಜೊತೆಗೆ ನಟಿಸಿದ್ದು ಸಂತೋಷವಾಗಿದೆ.  ಅರ್ಜುನ್ ಜನ್ಯ ಅವರ ಮೊದಲ ನಿರ್ದೇಶನದ ಚಿತ್ರ ಅಂತ ಹೇಳಲಿಕ್ಕೆ ಆಗಲ್ಲ. ಅಷ್ಟು ಅದ್ಭುತ ನಿರ್ದೇಶನ ಅವರದು. ಅಷ್ಟೇ ಅದ್ದೂರಿಯಾಗಿ ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಮೂಡಿಬಂದಿರುವ ಸಾಹಸ ಸನ್ನಿವೇಶಗಳು ಸೂಪರ್. “45” ಇಡೀ ಭಾರತೀಯರೆ ಮೆಚ್ಚುವಂತಹ ಆಕ್ಷನ್ ಚಿತ್ರವಾಗಲಿದೆ ಎಂದರು.

    ಕಥೆಯನ್ನು ಅನಿಮೇಷನ್‌ ಮೂಲಕ ಹೇಳಿದ್ದನ್ನು ನಾನು ಹಾಲಿವುಡ್ ನಲ್ಲಿ ಕೇಳಿದ್ದೆ. ಆದರೆ ಅರ್ಜುನ್ ಜನ್ಯ ಅವರು ಕನ್ನಡದಲ್ಲೇ ಅದನ್ನು ಮಾಡಿ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ಅನಿಮೇಷನ್‌ ಮೂಲಕ ಕಥೆ ಹೇಳಿದ ರೀತಿಯಲ್ಲೇ ಚಿತ್ರವನ್ನೂ ಮಾಡಿದ್ದಾರೆ. ಅರ್ಜುನ್ ಜನ್ಯ ಅವರು ಅಂದುಕೊಂಡಂತೆ ಚಿತ್ರ ಮಾಡಲು ನಿರ್ಮಾಪಕ ರಮೇಶ್ ರೆಡ್ಡಿ ಸಾಥ್ ನೀಡಿದ್ದಾರೆ. ಶಿವಣ್ಣ ಹಾಗೂ ರಾಜ್ ಬಿ ಶೆಟ್ಟಿ ಅವರ ಜೊತೆಗೆ ಅಭಿನಯಿಸಿದ್ದು ಸಂತಸವಾಗಿದೆ ಎಂದು ತಿಳಿಸಿದ ನಟ ಉಪೇಂದ್ರ, ಚಿತ್ರೀಕರಣ ಮುಗಿದಿದೆ. ಚಿತ್ರವನ್ನು ಅದಷ್ಟು ಬೇಗ ತೆರೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದರು.

    ಶಿವಣ್ಣ ಅವರ ಚಿತ್ರಗಳನ್ನು ನೋಡುತ್ತಾ ವಿಷಲ್ ಹೊಡೆಯುತ್ತಿದ್ದೆ. ಉಪೇಂದ್ರ ಅವರ “A” ಚಿತ್ರದ ಪೋಸ್ಟರನ್ನು ಬೆರಗಾಗಿ ನೋಡುತ್ತಿದ್ದೆ. ಅವರಿಬ್ಬರ ಅಭಿಮಾನಿ ನಾನು. ಇಂದು ಅವರ ಜೊತೆಗೆ ನಟಿಸಿರುವುದು ನನ್ನ ಭಾಗ್ಯ. ಇನ್ನು “45”, ಕನ್ನಡಿಗರು ಹೆಮ್ಮೆಯ ಪಡುವ ಸಿನಿಮಾ ಅಂತ ಕನ್ನಡಿಗನಾಗಿ ಹೇಳುತ್ತೇನೆ. ಈ ಸಿನಿಮಾದಲ್ಲಿ ನಟಿಸಿದ್ದು ನನಗೂ ಹೆಮ್ಮೆಯಿದೆ ಎಂದರು ರಾಜ್ ಬಿ ಶೆಟ್ಟಿ.

    “45” ಚಿತ್ರವನ್ನು ದೇವಸ್ಥಾನವೆಂದು ಮಾತು ಆರಂಭಿಸಿದ ನಿರ್ದೇಶಕ ಅರ್ಜುನ್ ಜನ್ಯ, ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಈ ಮೂವರು ಬ್ರಹ್ಮ ವಿಷ್ಣು ಮಹೇಶ್ವರ ಇದ್ದ ಹಾಗೆ. ರಮೇಶ್ ರೆಡ್ಡಿ ಅವರು ಈ ದೇವಸ್ಥಾನ ಕಟ್ಟಿದವರು. ಛಾಯಾಗ್ರಾಹಕ ಸತ್ಯ ಹೆಗಡೆ ಪ್ರಧಾನ ಪುರೋಹಿತರು. ಹೀಗೆ ಇವರೆಲ್ಲರ ಸಹಕಾರದಿಂದ 106 ದಿನಗಳ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯವಾಗಿದೆ. ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ. ಮುಂದೆ ಸಿಜಿ ವರ್ಕ್ ಆರಂಭವಾಗಲಿದೆ ಎಂದರು.

    ಅರ್ಜುನ್ ಜನ್ಯ ಅವರು ಕಥೆ ಹೇಳಿದರು. ಆನಂತರ ಈ ಕಥೆಯನ್ನು ಅನಿಮೇಷನ್‌ ನಲ್ಲಿ ಚಿತ್ರ ಮಾಡಿಕೊಂಡು ಬಂದು ತೋರಿಸುತ್ತೇನೆ ಎಂದರು. ಅನಿಮೇಷನ್‌ ನಲ್ಲಿ ಈ ಚಿತ್ರ ನೋಡಿದಾಗ ತುಂಬಾ ಇಷ್ಟವಾಯಿತು. ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶಕರಾಗಿ ಗೆದ್ದಿದ್ದಾರೆ. ನಿರ್ದೇಶಕರಾಗಿ ಮೊದಲ ಚಿತ್ರ ಹೇಗೆ ಮಾಡುತ್ತಾರೆ? ಎಂದು ಸಾಕಷ್ಟು ಜನ ಕೇಳಿದರು. ನನಗೂ ಆತಂಕ ಇತ್ತು. ಆದರೆ ಚಿತ್ರೀಕರಣ ಶುರುವಾದ ಮೇಲೆ ಅವರು ಪ್ರತಿಯೊಂದು ಸನ್ನಿವೇಶಗಳನ್ನು ನನಗೆ ಕಳುಹಿಸುತ್ತಿದ್ದರು. ಅದನ್ನು ನೋಡಿ ನನಗೆ ತುಂಬಾ ಖುಷಿಯಾಯಿತು. ಇನ್ನೂ ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಮೂರು ಜನರು ನನ್ನ ಚಿತ್ರದಲ್ಲಿ ನಟಿಸಿರುವುದು ನನ್ನ ಭಾಗ್ಯ. ಈ ಚಿತ್ರ ಬರೀ ಕರ್ನಾಟಕದಲ್ಲಷ್ಟೇ ಅಲ್ಲ. ಇಡೀ ಭಾರತದಲ್ಲೇ ಹೆಸರು ಮಾಡುವ ನಂಬಿಕೆಯಿದೆ ಎಂದು ನಿರ್ಮಾಪಕ ರಮೇಶ್ ರೆಡ್ಡಿ ತಿಳಿಸಿದರು. ಛಾಯಾಗ್ರಾಹಕ ಸತ್ಯ ಹೆಗಡೆ “45” ಚಿತ್ರದ ಬಗ್ಗೆ ಮಾತನಾಡಿದರು.

  • ಉಪ್ಪಿ ಹುಟ್ಟು ಹಬ್ಬಕ್ಕೆ ’45’ ಚಿತ್ರತಂಡದಿಂದ ವಿಶೇಷ ಪೋಸ್ಟರ್

    ಉಪ್ಪಿ ಹುಟ್ಟು ಹಬ್ಬಕ್ಕೆ ’45’ ಚಿತ್ರತಂಡದಿಂದ ವಿಶೇಷ ಪೋಸ್ಟರ್

    ಟ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya)  ಚೊಚ್ಚಲ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಉಮಾ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ಬಹು ನಿರೀಕ್ಷಿತ “45” ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ.

    ಸೆಪ್ಟೆಂಬರ್ 18 ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರ ಚಿತ್ರತಂಡ ಉಪೇಂದ್ರ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದೆ. ಉಪೇಂದ್ರ ಅವರ ನಿವಾಸಕ್ಕೆ ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ, ನಿರ್ದೇಶಕ ಅರ್ಜುನ್ ಜನ್ಯ ಮುಂತಾದವರು ಭೇಟಿ ನೀಡಿ  ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

    ಇದೇ ಮೊದಲ ಬಾರಿಗೆ ಅರ್ಜುನ್ ಜನ್ಯ ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಪರಿಚಯ ಆಗುತ್ತಿದ್ದು, ಬಹುತೇಕ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಈ ಸಿನಿಮಾ ಅದ್ಧೂರಿಯಾಗಿ ಮೂಡಿ ಬರುತ್ತಿದ್ದು, ರಮೇಶ್ ರೆಡ್ಡಿ ಅವರ ಪತ್ನಿ ಉಮಾ ಚಿತ್ರದ ನಿರ್ಮಾಪಕರು.

  • ಪ್ಯಾನ್ ಇಂಡಿಯಾ ಚಿತ್ರಕ್ಕಾಗಿ 5ನೇ ಬಾರಿ ಒಂದಾದ ಶಶಾಂಕ್, ಅರ್ಜುನ್ ಜನ್ಯ

    ಪ್ಯಾನ್ ಇಂಡಿಯಾ ಚಿತ್ರಕ್ಕಾಗಿ 5ನೇ ಬಾರಿ ಒಂದಾದ ಶಶಾಂಕ್, ಅರ್ಜುನ್ ಜನ್ಯ

    ಸ್ಯಾಂಡಲ್‌ವುಡ್ ನಿರ್ದೇಶಕ ಶಶಾಂಕ್ (Shashank) ಈಗ ಪ್ಯಾನ್ ಇಂಡಿಯಾ ಚಿತ್ರಕ್ಕೆ ಕೈಹಾಕಿದ್ದಾರೆ. ಈ ಚಿತ್ರಕ್ಕಾಗಿ 5ನೇ ಬಾರಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಜೊತೆ ಶಶಾಂಕ್ ಕೈಜೋಡಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಶಶಾಂಕ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:‘ಕಾಟೇರ’ ಡೈರೆಕ್ಟರ್ ತರುಣ್ ಜೊತೆ ಸೋನಲ್ ಮದುವೆ ಡೇಟ್ ಫಿಕ್ಸ್

    ಡಾರ್ಲಿಂಗ್ ಕೃಷ್ಣ (Darling Krishna) ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ಶಶಾಂಕ್ ಡೈರೆಕ್ಷನ್ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟಕ್ಕೆ ಈ ಚಿತ್ರ ರೆಡಿ ಆಗುತ್ತಿದೆ. ಈ ಸಿನಿಮಾಗಾಗಿ 5ನೇ ಬಾರಿ ಅರ್ಜುನ್‌ ಜನ್ಯ ಜೊತೆ ಒಂದಾಗುತ್ತಿರೋದಾಗಿ ಶಶಾಂಕ್ ತಿಳಿಸಿದ್ದಾರೆ. ಈ ಚಿತ್ರಕ್ಕೆ ಸದ್ಯ DKS -02 ಅಂತ ಹೆಸರಿಡಲಾಗಿದೆ. ಈ ಮೂಲಕ ಸಂಗೀತ ಸಂಯೋಜನೆಯ ಕೆಲಸ ಶುರು ಆಗಿದೆ ಅನ್ನೋದನ್ನ ಡೈರೆಕ್ಟರ್ ಶಶಾಂಕ್ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

    ಸಿನಿಮಾದ ಟೈಟಲ್ ಶೀಘ್ರದಲ್ಲಿಯೇ ಅನೌನ್ಸ್ ಮಾಡುವ ಪ್ಲ್ಯಾನ್ ಕೂಡ ಹಾಕಲಾಗಿದೆ. ಆ ವಿಷಯನ್ನ ಕೂಡ ಇದೀಗ ವಿಡಿಯೋ ಮೂಲಕವೇ ಹೇಳಿದ್ದಾರೆ. ಡಾಲ್ಫಿನ್ ಸಂಸ್ಥೆ ಮೂಲಕ ಮಂಜುನಾಥ್ ಕಂದಕೂರು ಈ ಚಿತ್ರವನ್ನ ನಿರ್ಮಿಸೋಕೆ ಸಾಥ್‌ ನೀಡಿದ್ದಾರೆ.

    ಇನ್ನೂ ಈ ಹಿಂದೆ ಮುಂಗಾರು ಮಳೆ 2, ಜರಾಸಂಧ, ಲವ್ 360, ಕೌಸಲ್ಯ ಸುಪ್ರಜಾ ರಾಮ ಚಿತ್ರಕ್ಕಾಗಿ ಶಶಾಂಕ್‌ ಜೊತೆ ಅರ್ಜುನ್‌ ಜನ್ಯ ಕೆಲಸ ಮಾಡಿದ್ದಾರೆ. ಈಗ ಹೊಸ ಪ್ರಾಜೆಕ್ಟ್ ಮೂಲಕ ಬರುತ್ತಿರೋದ್ರಿಂದ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಿಸಿದೆ.

  • ಅರ್ಜುನ್ ಜನ್ಯ ನಿರ್ದೇಶನದ ’40’ ಚಿತ್ರಕ್ಕೆ ಅದ್ಧೂರಿತನದ ಟಚ್

    ಅರ್ಜುನ್ ಜನ್ಯ ನಿರ್ದೇಶನದ ’40’ ಚಿತ್ರಕ್ಕೆ ಅದ್ಧೂರಿತನದ ಟಚ್

    ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಉಮಾ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ನಿರ್ದೇಶನದ ಮೊದಲ ಚಿತ್ರ ಹಾಗು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shivaraj Kumar), ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ರಾಜ್ ಬಿ ಶೆಟ್ಟಿ ಅವರು ಅಭಿನಯಿಸುತ್ತಿರುವ ಮಲ್ಟಿಸ್ಟಾರರ್ ಸಿನಿಮಾ 45.

    ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಅಪಾರ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಅದ್ದೂರಿಯಾಗಿ ಸಾಗಿದೆ.

    ಇತ್ತೀಚಿಗೆ ಬನ್ನೇರುಘಟ್ಟದ ಶ್ರೀಚಂಪಕಧಾಮ ಸ್ವಾಮಿ ದೇವಸ್ಥಾನದ ಬಳಿ ಚಿತ್ರದ ಅದ್ದೂರಿ ಸನ್ನಿವೇಶವೊಂದರ ಚಿತ್ರೀಕರಣ ನಡೆದಿದೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಜನರು ಈ ಸನ್ನಿವೇಶದಲ್ಲಿ ಪಾಲ್ಗೊಂಡಿದ್ದರು. ಮೋಕೋಬೋಲ್ಟ್, ರೋಪ್ ಕ್ಯಾಮೆರಾ ಸೇರಿದಂತೆ ಇನ್ನೂ ಹಲವು ದುಬಾರಿ ಸಲಕರಣೆಗಳ ಬಳಸಿ ಈ ದೃಶ್ಯವನ್ನು ಚಿತ್ರಿಸಲಾಗಿದೆ.

    ಒಂದು ಸನ್ನಿವೇಶಕ್ಕಾಗಿ 418 ಕ್ಕೂ ಹೆಚ್ಚು ಕಲರ್ ಬಾಂಬ್ ಗಳನ್ನು ಬಳಸಿರುವುದು ಕನ್ನಡದಲ್ಲಿ ಇದೇ ಮೊದಲು. ಈ ಅದ್ದೂರಿ ಸನ್ನಿವೇಶಕ್ಕೆ ಭಾರತ ಚಿತ್ರರಂಗದ ಜನಪ್ರಿಯ ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್ ಅವರು ಕೊರಿಯೋಗ್ರಫಿ ಮಾಡಿರುವುದು ವಿಶೇಷ. ಸತ್ಯ ಹೆಗಡೆ ಅವರ ಛಾಯಾಗ್ರಹಣ ಈ ಅದ್ದೂರಿ ಸನ್ನಿವೇಶದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

    ಸೂರಜ್ ಪ್ರೊಡಕ್ಷನ್ಸ್ ಮೂಲಕ ಗಾಳಿಪಟ 2 ಸೇರಿದಂತೆ ಅನೇಕ ಅದ್ದೂರಿ ಹಾಗೂ ಸದಭಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿರುವ ರಮೇಶ್ ರೆಡ್ಡಿ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಬಿಡುಗಡೆಗೆ ಕನ್ನಡ ಕಲಾರಸಿಕರು ಕಾತುರದಿಂದ ಕಾಯುತ್ತಿದ್ದಾರೆ.‌ ಇನ್ನೂ ಸಂಗೀತದಲ್ಲಿ ಜನರ ಮನ ಗೆದ್ದಿರುವ ಅರ್ಜುನ್ ಜನ್ಯ ಅವರು ನಿರ್ದೇಶಕನಾಗಿಯೂ ಜನಪ್ರಿಯತೆ ಪಡೆಯುವುದು ಖಂಡಿತ ಎನ್ನುವುದು ಅಭಿಮಾನಿಗಳ ಮಾತು.

    ಇದರೊಟ್ಟಿಗೆ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರಂತಹ ಅದ್ಭುತ ಕಲಾವಿದರನ್ನು ಒಂದೇ ಚಿತ್ರದಲ್ಲಿ ನೋಡುವುದು ಸಿನಿರಸಿಕರಿಗಂತೂ ಹಬ್ಬವೇ ಸರಿ.

  • ಮೈಸೂರಿನಿಂದ ಆರಂಭವಾಯ್ತು ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ  ಚಿತ್ರ

    ಮೈಸೂರಿನಿಂದ ಆರಂಭವಾಯ್ತು ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ಚಿತ್ರ

    ಶಿವರಾಜಕುಮಾರ್ (Shivaraj Kumar) , ಉಪೇಂದ್ರ (Upendra), ರಾಜ್ ಬಿ. ಶೆಟ್ಟಿ (Raj B Shetty) ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘45’ ಚಿತ್ರದ ಮುಹೂರ್ತ ಇತ್ತೀಚೆಗೆ  ಮೈಸೂರಿನಲ್ಲಿ ನೆರವೇರಿತು. ದೇವರ ಮೇಲೆ ಚಿತ್ರೀಕರಿಸಲಾದ ಮೊದಲ ದೃಶ್ಯಕ್ಕೆ ಗೀತಾ ಶಿವರಾಜಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು, ಗಣ್ಯರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.  ಈ ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ. ರಮೇಶ್ ರೆಡ್ಡಿ (Ramesh Reddy) ನಿರ್ಮಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya), ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆ ಬರೆದು ಸಂಗೀತ ಸಂಯೋಜಿಸಿದ್ದು, ಸತ್ಯ ಹೆಗಡೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದು, ಕೆ. ಎಂ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.

    ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವರಾಜಕುಮಾರ್, ‘ಇದೊಂದು ಫಿಲಾಸಫಿಕಲ್ ಎಂಟರ್ ಟೈನರ್ ಎಂದು ಚಿತ್ರವನ್ನು ಬಣ್ಣಿಸುತ್ತಾರೆ. ಕಳೆದ ಒಂದು ವರ್ಷದಿಂದ ಈ ಚಿತ್ರದ  ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅರ್ಜುನ್ ಜನ್ಯ ಕಥೆ ಹೇಳಿದಾಗ ತುಂಬಾ ಇಷ್ಟವಾಗಿತ್ತು. ಆ ನಂತರ ಅನಿಮೇಶನ್ ರೂಪದಲ್ಲಿ ಚಿತ್ರವನ್ನು ತೋರಿಸಿದ್ದಾರೆ. ಅವರೊಬ್ಬ ಪ್ರತಿಭಾವಂತ. ಈ ಸಿನಿಮಾದ ನಂತರ ಭಾರತದ ಟಾಪ್ ನಿರ್ದೇಶಕರ ಸಾಲಿನಲ್ಲಿ ಅರ್ಜುನ್ ಜನ್ಯ ಕೂಡ ಒಬ್ಬರಾಗುತ್ತಾರೆ ಎಂಬ ನಂಬಿಕೆಯಿದೆ. ತುಂಬಾ ಪ್ರಬುದ್ಧವಾಗಿರುವ ಪಾತ್ರ ಈ ಚಿತ್ರದಲ್ಲಿದೆ’ ಎಂದರು.

    ‘ಸಾಮಾನ್ಯವಾಗಿ ನಟರಿಗೆ ನಿರ್ದೇಶಕರು ಚಿತ್ರದ ಕಥೆ ಹೇಳಿದರೆ, ಅರ್ಜುನ್ ಜನ್ಯ ನನಗೆ ಚಿತ್ರವನ್ನೇ ತೋರಿಸಿದರು. ಒಂದು ಚಿತ್ರಕ್ಕೆ ನಾವು ಸಹ ಸಾಕಷ್ಟು ತಯಾರಿ ಮಾಡಿಕೊಳ್ಳುವುದರಿಂದ, ಮೊದಲು ನನ್ನ ತಂಡದ ಬಗ್ಗೆ ನನಗೆ ಹೆಮ್ಮೆ ಇತ್ತು. ಆದರೆ ಅರ್ಜುನ್ ಜನ್ಯ ಮತ್ತು ಅವರ ತಂಡದ ಕೆಲಸ ನೋಡಿ ಆಶ್ಚರ್ಯವಾಯಿತು. ಅವರು ಈ ಚಿತ್ರಕ್ಕೆ ಮಾಡಿಕೊಂಡ ತಯಾರಿ ಅದ್ಭುತ. ಒಬ್ಬ ನಟನಾಗಿ, ಪ್ರೇಕ್ಷಕನಾಗಿ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಯಿದೆ’ ಎಂದು ರಾಜ್ ಬಿ ಶೆಟ್ಟಿ ಹೇಳಿದರು. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ‘ಮೊದಲ ಬಾರಿಗೆ ಹೆಸರಾಂತ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ.  ಬೋಲ್ಡ್ ಆಗಿರುವಂತ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಕೌಸ್ತುಭ ಮಣಿ. ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಅರ್ಜುನ್ ಜನ್ಯ ಹೇಳಿದ ಕಥೆ ಬಹಳ ಇಷ್ಟವಾಯಿತಂತೆ. ‘ಚಿತ್ರದ ಘೋಷಣೆಯಾಗಿ ಹಲವು ತಿಂಗಳಾದರೂ ನಿಧಾನಕ್ಕೆ ಸಾಗುತ್ತಿತ್ತು. ಈ ಬಗ್ಗೆ ಅರ್ಜುನ್ ಜನ್ಯ ಅವರನ್ನು ಕೇಳಿದಾಗ, ಅವರು ಅನಿಮೇಶನ್ ಮೂಲಕ ಸಿನಿಮಾ ತೋರಿಸಿದರು. ಚಿತ್ರೀಕರಣ ಶುರುವಾಗುವುದಕ್ಕಿಂತ ಮೊದಲೇ, ಚಿತ್ರ ತೋರಿಸಿದರು. ನಾವು ಅಂದುಕೊಂಡಿರುವುದಕ್ಕಿಂತ ಸಿನಿಮಾ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆಯಿದೆ’ ಎಂದರು ರಮೇಶ್ ರೆಡ್ಡಿ.

    ಕೊನೆಗೆ ಮಾತನಾಡಿದ ಅರ್ಜುನ್ ಜನ್ಯ, ‘ಚಿತ್ರೀಕರಣ ಈಗ ಶುರುವಾಗುತ್ತಿದ್ದರೂ, ಸುಮಾರು 9 ತಿಂಗಳ ಕಾಲ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಮಾಡಿ ಈಗ ಚಿತ್ರೀಕರಣಕ್ಕೆ ಹೊರಡುತ್ತಿದ್ದೇವೆ. ಮೊದಲು ಶಿವಣ್ಣ ಅವರಿಗೆ ಕಥೆ ಹೇಳಿದಾಗ, ನೀವೇ ಈ ಸಿನಿಮಾ ಮಾಡಿ ಎಂದು ಹುರುದಿಂಬಿಸಿದರು. ಈ ಚಿತ್ರದ ಮೂಲಕ ಒಂದು ದೊಡ್ಡ ಫಿಲಾಸಫಿಯನ್ನು ಸರಳ ರೀತಿಯಲ್ಲಿ, ಕ್ಲಾಸ್ ಮತ್ತು ಮಾಸ್ ಆಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.   ‘45’ ಚಿತ್ರಕ್ಕೆ 80 ದಿನಗಳ ಕಾಲ ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಕನ್ನಡವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಮೂಡಿಬರುತ್ತಿರುವ ಈ ಚಿತ್ರವನ್ನು 2024ರಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

  • ರೋಸಿ ಟೈಟಲ್ ವಿವಾದ : ಶಿವರಾಜ್ ಕುಮಾರ್ ಗೆ ಮನವಿ ಮಾಡಿದ ಯೋಗಿ

    ರೋಸಿ ಟೈಟಲ್ ವಿವಾದ : ಶಿವರಾಜ್ ಕುಮಾರ್ ಗೆ ಮನವಿ ಮಾಡಿದ ಯೋಗಿ

    ದುನಿಯಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಲೂಸ್ ಮಾದ ಯೋಗಿ (Loose Mada Yogeesh) ಇದೀಗ ಐವತ್ತನೇ ಸಿನಿಮಾ ಪೂರೈಸಿದ್ದಾರೆ. ಮೊನ್ನೆಯಷ್ಟೇ ಅವರ 50ನೇ ಸಿನಿಮಾದ ಮುಹೂರ್ತ ಕೂಡ ಆಗಿದೆ. ಈ ಚಿತ್ರಕ್ಕೆ ರೋಸಿ ಎಂದು ಹೆಸರಿಡಲಾಗಿತ್ತು. ಈ ಟೈಟಲ್ ಸಮಸ್ಯೆಯೊಂದನ್ನು ಸೃಷ್ಟಿ ಮಾಡಿದೆ.

    ಈಗಾಗಲೇ ಇದೇ ಹೆಸರಿನಲ್ಲೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ‍ಘೋಷಣೆ ಮಾಡಿದ್ದಾರೆ. ಯೋಗಿಗೆ ರೋಸಿ ಸಿನಿಮಾ ಐವತ್ತನೇ ಚಿತ್ರವಾದರೆ, ಅರ್ಜುನ್ ಅವರಿಗೆ ಮೊದಲನೇ ಸಿನಿಮಾ. ಹಾಗಾಗಿ ಇಬ್ಬರಿಗೂ ಈ ಟೈಟಲ್ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿದೆ. ಹೀಗಾಗಿ ಇಬ್ಬರೂ ಟೈಟಲ್ ಬಿಟ್ಟು ಕೊಡಲು ತಯಾರಿಲ್ಲ. ಹಾಗಾಗಿ ಅನಿವಾರ್ಯವಾಗಿ ಶಿವರಾಜ್ ಕುಮಾರ್ ಮಧ್ಯ ಪ್ರವೇಶ ಮಾಡಬೇಕಾಗಿ ಬಂದಿದೆ. ಇದನ್ನೂ ಓದಿ:ಲಿಫ್ಟ್‌ನಲ್ಲಿ ಪತಿ ನಿಕ್ ಜೋನಸ್ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾನ್ಸ್

    ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾದಲ್ಲಿ ಶಿವರಾಜ್ ಕುಮಾರ್ (Shivaraj Kumar)ಕೂಡ ನಾಯಕನಾಗಿ ನಟಿಸುತ್ತಿದ್ದಾರೆ. ಹಾಗಾಗಿ ಶಿವಣ್ಣನಿಗೆ ಯೋಗಿ ಮನವಿ ಮಾಡಿಕೊಂಡಿದ್ದಾರೆ. ಇದು ತಮ್ಮ ಐವತ್ತನೇ ಚಿತ್ರವಾಗಿದ್ದರಿಂದ ಟೀಮ್ ಜೊತೆ ಮಾತಾಡಿ ರೋಸಿ ಟೈಟಲ್ ಅನ್ನು ನಮಗೆ ಬಿಟ್ಟು ಕೊಡಿ ಎಂದು ಕೇಳಿಕೊಂಡಿದ್ದಾರೆ. ಟೀಮ್ ಜೊತೆ ಮಾತನಾಡುವುದಾಗಿ ಶಿವರಾಜ್ ಕುಮಾರ್ ಹೇಳಿದ್ದಾರಂತೆ.

    ಅರ್ಜುನ್ ಜನ್ಯ (Arjun Janya) ಚೊಚ್ಚಲ  ನಿರ್ದೇಶನದ, ಸೂರಜ್ ಪ್ರೊಡಕ್ಷನ್ಸ್ ಲಾಂಛನದ ಮೂಲಕ ‘ರೋಸಿ 45’ (Rosy 45) ಶೀರ್ಷಿಕೆಯನ್ನು  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳೀಯಲ್ಲಿ ನೋಂದಾಯಿಸಲಾಗಿದೆ. ಈಗ ಯೋಗಿ ನಟನೆಯ ಡಿ.ವೈ.ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೂ ‘ರೋಸಿ’ ಎಂದು ಶೀರ್ಷಿಕೆ ಇಡಲಾಗಿದೆ. ಈ ವಿಷಯವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ತರಲಾಗಿತ್ತು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ‌ಮಂಡಳಿಯಲ್ಲಿ ಮೊದಲು ಶೀರ್ಷಿಕೆ ನೋಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ವಾಣಿಜ್ಯ ಮಂಡಳಿ ಹೇಳಿದೆ. ಹಾಗಾಗಿ ಸೂರಜ್ ಪ್ರೊಡಕ್ಷನ್ಸ್ ಗೆ ರೋಸಿ 45(Rosy 45) ಶೀರ್ಷಿಕೆ ಸೇರಿದೆ. ಇನ್ನು‌ ಮುಂದೆ ಯಾರು ಕೂಡ ‘ರೋಸಿ’ ಶೀರ್ಷಿಕೆ ಬಳಸುವ ಹಾಗಿಲ್ಲ ಹಾಗೂ ಶೀರ್ಷಿಕೆ ಪಕ್ಕದಲ್ಲಿ ಬೇರೆ ಪದ ಹಾಗೂ ನಂಬರ್ ಗಳನ್ನಾಗಲಿ ಸೇರಿಸಿಕೊಂಡು ಸಹ ಬಳಸುವ ಹಾಗಿಲ್ಲ ಎಂದು ರೋಸಿ 45 ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ (Ramesh Reddy) ಹಾಗೂ ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದ್ದಾರೆ. ಮುಂದೇನಾಗತ್ತೋ ಕಾದು ನೋಡಬೇಕು.

  • ಲೂಸ್ ಮಾದ ಯೋಗಿ 50ನೇ ಚಿತ್ರಕ್ಕೆ ಸಿಗಲಿಲ್ಲ ‘ರೋಸಿ’ ಟೈಟಲ್?

    ಲೂಸ್ ಮಾದ ಯೋಗಿ 50ನೇ ಚಿತ್ರಕ್ಕೆ ಸಿಗಲಿಲ್ಲ ‘ರೋಸಿ’ ಟೈಟಲ್?

    ದುನಿಯಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಲೂಸ್ ಮಾದ ಯೋಗಿ (Loose Mada Yogeesh) ಇದೀಗ ಐವತ್ತನೇ ಸಿನಿಮಾ ಪೂರೈಸಿದ್ದಾರೆ. ಮೊನ್ನೆಯಷ್ಟೇ ಅವರ 50ನೇ ಸಿನಿಮಾದ ಮುಹೂರ್ತ ಕೂಡ ಆಗಿದೆ. ಈ ಚಿತ್ರಕ್ಕೆ ರೋಸಿ ಎಂದು ಹೆಸರಿಡಲಾಗಿತ್ತು. ಆದರೆ, ಈ ಟೈಟಲ್ ಸಿಗುವುದು ಬಹುತೇಕ ಕಷ್ಟ ಎನ್ನಲಾಗುತ್ತಿದೆ. ಇದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಘೋಷಣೆಯಾಗಿದ್ದು, ಅವರು ಚಿತ್ರದ ಟೈಟಲ್ ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದಾರೆ.

    ಅರ್ಜುನ್ ಜನ್ಯ (Arjun Janya) ಚೊಚ್ಚಲ  ನಿರ್ದೇಶನದ, ಸೂರಜ್ ಪ್ರೊಡಕ್ಷನ್ಸ್ ಲಾಂಛನದ ಮೂಲಕ ‘ರೋಸಿ 45’ (Rosy 45) ಶೀರ್ಷಿಕೆಯನ್ನು  ನೋಂದಾಯಿಸಲಾಗಿತ್ತು. ಈಗ ಯೋಗಿ ನಟನೆಯ ಡಿ.ವೈ.ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೂ ‘ರೋಸಿ’ ಎಂದು ಶೀರ್ಷಿಕೆ ಇಡಲಾಗಿತ್ತು. ಈ ವಿಷಯವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ತರಲಾಗಿತ್ತು. ಇದನ್ನೂ ಓದಿ: ನಟ ಚೇತನ್‌ ಭಾರತದ ವೀಸಾ ರದ್ದು

    ಕರ್ನಾಟಕ ಚಲನಚಿತ್ರ ವಾಣಿಜ್ಯ ‌ಮಂಡಳಿಯಲ್ಲಿ ಮೊದಲು ಶೀರ್ಷಿಕೆ ನೋಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ವಾಣಿಜ್ಯ ಮಂಡಳಿ ಹೇಳಿದೆ. ಹಾಗಾಗಿ ಸೂರಜ್ ಪ್ರೊಡಕ್ಷನ್ಸ್ ಗೆ ರೋಸಿ 45(Rosy 45) ಶೀರ್ಷಿಕೆ ಸೇರಿದೆ.

    ಇನ್ನು‌ ಮುಂದೆ ಯಾರು ಕೂಡ ‘ರೋಸಿ’ ಶೀರ್ಷಿಕೆ ಬಳಸುವ ಹಾಗಿಲ್ಲ ಹಾಗೂ ಶೀರ್ಷಿಕೆ ಪಕ್ಕದಲ್ಲಿ ಬೇರೆ ಪದ ಹಾಗೂ ನಂಬರ್ ಗಳನ್ನಾಗಲಿ ಸೇರಿಸಿಕೊಂಡು ಸಹ ಬಳಸುವ ಹಾಗಿಲ್ಲ ಎಂದು ರೋಸಿ 45 ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ (Ramesh Reddy) ಹಾಗೂ ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದ್ದಾರೆ.

  • ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಚಿತ್ರದ ಟೈಟಲ್ ಯಾರ ಪಾಲಾಯ್ತು?

    ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಚಿತ್ರದ ಟೈಟಲ್ ಯಾರ ಪಾಲಾಯ್ತು?

    ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಚೊಚ್ಚಲ ನಿರ್ದೇಶನದ ಸಿನಿಮಾದ ಟೈಟಲ್ (Title) ಬಗ್ಗೆ ಗೊಂದಲ ಮೂಡಿತ್ತು. ಇದೀಗ ಗೊಂದಲಕ್ಕೆ ತೆರೆ ಎಳೆದಿದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ. ಈ ಕುರಿತು ನಿರ್ಮಾಣ ಸಂಸ್ಥೆಗೆ ಅಧಿಕೃತ ಪತ್ರವೊಂದನ್ನು ನೀಡಿದೆ.

    ಸೂರಜ್ ಪ್ರೊಡಕ್ಷನ್ಸ್ ಲಾಂಛನದ ಮೂಲಕ ‘ರೋಸಿ 45’ (Rosy 45) ಶೀರ್ಷಿಕೆಯನ್ನು  ನೊಂದಾಯಿಸಲಾಗಿತ್ತು. ಈಗ ಡಿ.ವೈ.ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೂ ‘ರೋಸಿ’ ಎಂದು ಶೀರ್ಷಿಕೆ ಇಡಲಾಗಿತ್ತು. ಈ ವಿಷಯವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ತರಲಾಗಿತ್ತು.  ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

    ಕರ್ನಾಟಕ ಚಲನಚಿತ್ರ ವಾಣಿಜ್ಯ ‌ಮಂಡಳಿಯಲ್ಲಿ ಮೊದಲು ಶೀರ್ಷಿಕೆ ನೊಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ವಾಣಿಜ್ಯ ಮಂಡಳಿ ಹೇಳಿದೆ. ಹಾಗಾಗಿ ಸೂರಜ್ ಪ್ರೊಡಕ್ಷನ್ಸ್ ಗೆ ರೋಸಿ 45(Rosy 45) ಶೀರ್ಷಿಕೆ ಸೇರಿದೆ.

    ಇನ್ನು‌ ಮುಂದೆ ಯಾರು ಕೂಡ ‘ರೋಸಿ’ ಶೀರ್ಷಿಕೆ ಬಳಸುವ ಹಾಗಿಲ್ಲ ಹಾಗೂ ಶೀರ್ಷಿಕೆ ಪಕ್ಕದಲ್ಲಿ ಬೇರೆ ಪದ ಹಾಗೂ ನಂಬರ್ ಗಳನ್ನಾಗಲಿ ಸೇರಿಸಿಕೊಂಡು ಸಹ ಬಳಸುವ ಹಾಗಿಲ್ಲ ಎಂದು ರೋಸಿ 45 ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ (Ramesh Reddy) ಹಾಗೂ ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದ್ದಾರೆ.