Tag: ಅರ್ಜುನ್ ಕಪೂರ್

  • ಅರ್ಜುನ್ ಕಪೂರ್ ಶರ್ಟ್ ಲೆಸ್ ಫೋಟೋಗೆ ಮಲೈಕಾ ಫಿದಾ

    ಅರ್ಜುನ್ ಕಪೂರ್ ಶರ್ಟ್ ಲೆಸ್ ಫೋಟೋಗೆ ಮಲೈಕಾ ಫಿದಾ

    ಮುಂಬೈ: ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರ ನಡುವೆ ಸಾಕಷ್ಟು ಗಾಸಿಪ್ ಹರಿದಾಡುತ್ತಿದ್ದು, ಇದೂವರೆಗೂ ಇಬ್ಬರು ಬಹಿರಂಗವಾಗಿ ತಮ್ಮ ಪ್ರೀತಿಯ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ. ಈ ನಡುವೆ ಅರ್ಜುನ್ ಕಪೂರ್ ಇನ್‍ಸ್ಟಾಗ್ರಾಮ್ ಫೋಟೋಗೆ ಮಲೈಕಾ ಅರೋರ ಕಮೆಂಟ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಸದ್ಯ ಅರ್ಜುನ್ ಕಪೂರ್ ಬಹುನಿರೀಕ್ಷಿತ ಸಿನಿಮಾ ‘ಪಾಣಿಪತ್’ನಲ್ಲಿ ಬ್ಯುಸಿಯಾಗಿದ್ದು, ಬಾಡಿ ಬಿಲ್ಡ್‍ಗಾಗಿ ಸಾಕಷ್ಟು ವರ್ಕೌಟ್ ನಡೆಸುತ್ತಿದ್ದಾರೆ. ಅದಕ್ಕಾಗಿ ಸಾಕಷ್ಟು ಬೆವರನ್ನು ಕೂಡ ಹರಿಸುತ್ತಿದ್ದಾರೆ. ಇತ್ತೀಚೆಗೆ ಅರ್ಜೂನ್ ಕಪೂರ್ ವರ್ಕೌಟ್ ಮಾಡಿದ ಶರ್ಟ್‍ಲೆಸ್ ಪಿಕ್‍ವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವುದು ಮಲೈಕಾ ಫಿದಾ ಆಗುವಂತೆ ಮಾಡಿದೆ.

    ಚಿತ್ರದಲ್ಲಿ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅರ್ಜುನ್ ಕಪೂರ್ ತಮ್ಮ ಚಿತ್ರೀಕರಣದ ಹಿಂದಿನ ದೃಶ್ಯಾವಳಿಗಳನ್ನು ತಮ್ಮ ಅಭಿಮಾನಿಗಳಿಗೆ ತೋರಿಸಲು ‘ವಾರಿಯರ್ ಮೂಡ್ ಆನ್ #ಪಾಣಿಪತ್’ ಎಂಬ ಕಾಪ್ಷನ್‍ನೊಂದಿಗೆ ಶರ್ಟ್‍ಲೆಸ್ ಪಿಕ್ ಪೋಸ್ಟ್ ಮಾಡಿದ್ದಾರೆ.

    ಈ ಪಿಕ್ಚರ್ ಗೆ ಕಮೆಂಟ್ ಮಾಡಿರುವ ಮಲೈಕಾ ಬಾಡಿಬಿಲ್ಡ್ ಮಾಡಿರುವ ಆರ್ಮ್ ಎಮೋಜಿಗಳನ್ನು ಕಳುಹಿಸಿ ಕಮೆಂಟ್ ಮಾಡಿದ್ದಾರೆ. ಪ್ರತಿಬಾರಿಯೂ ಇಬ್ಬರ ಪೋಸ್ಟ್ ಗಳಿಗೆ ಇಬ್ಬರು ಕಮೆಂಟ್ ಮಾಡುವ ಮೂಲಕ ಇನ್ಸ್ಟಾ ಲವ್‍ನಲ್ಲಿ ಸುದ್ದಿಯಾಗಿದ್ದಾರೆ.

    ಕೆಲವು ದಿನಗಳಿಂದ ಅರ್ಜುನ್ ಕಪೂರ್ ಮತ್ತು 45 ವರ್ಷದ ಮಲೈಕಾ ಅರೋರಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡು-ಮೂರು ವರ್ಷಗಳಿಂದ ಇಬ್ಬರ ಸಂಬಂಧದ ಬಗ್ಗೆ ಹಲವು ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಮಾಧ್ಯಮಗಳ ಮುಂದೆ ಬಂದು ನಾವಿಬ್ಬರು ಒಳ್ಳೆ ಸ್ನೇಹಿತರು ಎಂದು ಕೂಡ ಹೇಳಿಕೊಂಡಿದ್ದರು. ಆದರೆ ಕೆಲವು ತಿಂಗಳ ಹಿಂದೆ ಮಲೈಕಾ ಮತ್ತು ಅರ್ಜುನ್ ಕಪೂರ್ ರೆಸ್ಟೋರೆಂಟ್‍ಗೆ ಪಾರ್ಟಿಗೆಂದು ಬಂದಿದ್ದರು. ಈ ವೇಳೆ ರೆಸ್ಟೋರೆಂಟ್‍ನಿಂದ ಹೊರಬರುವಾಗ ಮಲೈಕಾ ಅವರೊಂದಿಗೆ ಬರುತ್ತಿದ್ದ ಅರ್ಜುನ್ ಮಾಧ್ಯಮದವರನ್ನು ಕಂಡು ತಮ್ಮ ಮುಖ ಮುಚ್ಚಿಕೊಂಡು ಹೋಗಿದ್ದರು.

    ಮಲೈಕಾಗೆ ಈಗಾಗಲೇ ಮದುವೆಯಾಗಿದ್ದು ತಮ್ಮ ಪತಿ ಅರ್ಬಾಜ್ ಖಾನ್ ಗೆ ವಿಚ್ಛೇಧನ ನೀಡಿ ತಮ್ಮ 16ವರ್ಷದ ಮಗನೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಅರ್ಜುನ್ ಕಪೂರ್ ಮತ್ತು ಮಲೈಕಾರವರ ಇನ್ಸ್ಟಾ ಪೋಸ್ಟ್‍ಗಳಿಗೆ ಸ್ವತಃ ಇಬ್ಬರು ತಪ್ಪದೇ ಕಮೆಂಟ್ ಮಾಡಿ ತಮ್ಮ ಒಲವು ತೋರ್ಪಡಿಸುತ್ತಿದ್ದಾರೆ.

  • ಮಾಧ್ಯಮದವರನ್ನ ನೋಡಿ ಮುಖ ಮುಚ್ಚಿಕೊಂಡ ಅರ್ಜುನ್ ಕಪೂರ್

    ಮಾಧ್ಯಮದವರನ್ನ ನೋಡಿ ಮುಖ ಮುಚ್ಚಿಕೊಂಡ ಅರ್ಜುನ್ ಕಪೂರ್

    ಮುಂಬೈ: ಒಟ್ಟಿಗೆ ಓಡಾಡಿ ಬಿಟೌನ್‍ನಲ್ಲಿ ಬಹಳಷ್ಟು ಗಾಸಿಪ್ ಸೃಷ್ಟಿಸಿರುವ ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರ ಜೋಡಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ.

    ಶುಕ್ರವಾರದಂದು ಕರಣ್ ಜೋಹರ್, ಸಂಜಯ್ ಕಪೂರ್ ಮತ್ತು ಅವರ ಪತ್ನಿ ಹಾಗೂ ಮಲೈಕಾ ಮತ್ತು ಅರ್ಜುನ್ ಕಪೂರ್ ಎಲ್ಲರು ರೆಸ್ಟೋರೆಂಟ್‍ವೊಂದಕ್ಕೆ ಪಾರ್ಟಿಗೆಂದು ಬಂದಿದ್ದರು. ಈ ವೇಳೆ ರೆಸ್ಟೋರೆಂಟ್‍ನಿಂದ ಹೊರಬರುವಾಗ ಮಲೈಕಾ ಅವರೊಂದಿಗೆ ಬರುತ್ತಿದ್ದ ಅರ್ಜುನ್ ಮಾಧ್ಯಮದವರನ್ನು ಕಂಡು ತಮ್ಮ ಮುಖ ಮುಚ್ಚಿಕೊಂಡು ಹೋಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಅರ್ಜುನ್ ಯಾಕೆ ಮುಖ ಮುಚ್ಚಿಕೊಂಡರು ಅಂತಾ ಎಲ್ಲರು ಮಾತನಾಡುವಂತಾಗಿದೆ.

    ಈ ಹಿಂದೆ ಕೂಡ ಬಹಳಷ್ಟು ಕಡೆ ಅರ್ಜುನ್ ಹಾಗೂ ಮಲೈಕಾ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇಟಲಿಯಲ್ಲಿ ನಡೆದ ಮಲೈಕಾ ಅವರ ಹುಟ್ಟುಹಬ್ಬದಲ್ಲೂ ಅರ್ಜುನ್ ಪಾಲ್ಗೊಂಡಿದ್ದರು.

    https://www.instagram.com/p/BqiXpSwjq0n/?utm_source=ig_embed&utm_campaign=embed_video_watch_again

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕ್ಯಾಂಡಲ್‍ಲೈಟ್ ಡಿನ್ನರ್ ಪಾರ್ಟಿ ವೇಳೆ ಸೆಕ್ಸಿ ಅವತಾರದಲ್ಲಿ ಮಿಂಚಿದ ನಟಿ

    ಕ್ಯಾಂಡಲ್‍ಲೈಟ್ ಡಿನ್ನರ್ ಪಾರ್ಟಿ ವೇಳೆ ಸೆಕ್ಸಿ ಅವತಾರದಲ್ಲಿ ಮಿಂಚಿದ ನಟಿ

    ಮುಂಬೈ: ಬಾಲಿವುಡ್ ಅನಾರ್ಕಲಿ ಮಲೈಕಾ ಅರೋರಾ ಇತ್ತೀಚೆಗೆ ಗೆಳತಿಯರೊಂದಿಗೆ ‘ಥ್ಯಾಂಕ್ಸ್ ಗಿವಿಂಗ್ ಡೇ’ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. 45 ವರ್ಷದ ಮಲೈಕಾ ಇಂದಿಗೂ ತಮ್ಮ ಫಿಟ್‍ನೆಸ್ ನಿಂದ 18ರ ಹುಡುಗಿಯರು ನಾಚಿಸುವಂತೆ ಕಾಣುತ್ತಾರೆ. ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಸಹ ಮಲೈಕಾ ಅರೋರಾ ತಮ್ಮ ಔಟ್ ಫಿಟ್ ನಲ್ಲಿ ಇಂದಿಗೂ ಪಡ್ಡೆ ಹುಡುಗರ ಕನಸಿನ ರಾಣಿಯಾಗಿದ್ದಾರೆ.

    ಬುಧವಾರ ಇನ್ ಸ್ಟಾಗ್ರಾಂನಲ್ಲಿ ಕೆಲ ಫೋಟೋಗಳನ್ನು ಪೋಸ್ಟ್ ಮಾಡಿಕೊಂಡಿರುವ ಮಲೈಕಾ ಡೆನಿಮ್ ಡ್ರೆಸ್ ನಲ್ಲಿ ಸಖತ್ ಗ್ಲಾಮರ್ ಆಗಿ ಕಾಣಿಸುತ್ತಿದ್ದಾರೆ. ಫೋಟೋಗಳನ್ನು ನೋಡಿದ ನೆಟ್ಟಿಗರು ಈ ವಯಸ್ಸಿನಲ್ಲಿಯೂ ನೀವು ಹಾಟ್, ಪ್ರಿಟ್ಟಿ ಆಗಿ ಕಾಣುತ್ತಿದ್ದೀರಿ ಅಂತಾ ಕೆಲವರು ಬರೆದ್ರೆ, ಹಲವು ಸುಂದರವಾದ ಫೋಟೋ ಅಂತ ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ದೇವರು ನೀಡಿದ ಚೆಲುವು ನಿಮ್ಮದು ಅಂದ್ರೆ, ನಿಮ್ಮ ನಗುವಿನಲ್ಲಿ ಚಮತ್ಕಾರ ಅಡಗಿದೆ ಎಂದು ಬರೆದಿದ್ದಾರೆ.

    https://www.instagram.com/p/Bqas9peBAii/

    ಕೆಲವು ದಿನಗಳಿಂದ ಅರ್ಜುನ್ ಕಪೂರ್ ಜೊತೆ ಮಲೈಕಾ ಹೆಸರು ಕೇಳಿಬರುತ್ತಿದ್ದು, ಮುಂದಿನ ವರ್ಷ ಇಬ್ಬರು ಮದುವೆ ಆಗಲಿದ್ದಾರಂತೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಆದ್ರೆ ಇದೆಲ್ಲ ಸುಳ್ಳು ಎಂದು ಹೇಳಿರುವ ಮಲೈಕಾ, ನನ್ನ ಜೀವನವನ್ನು ಸಂತೋಷವಾಗಿ ಎಂಜಾಯ್ ಮಾಡುತ್ತಿದ್ದೇನೆ ಅಂತಾ ಹೇಳಿದ್ದಾರೆ.

    ಇದೂವರೆಗೂ ಮಲೈಕಾ ಅಥವಾ ಅರ್ಜುನ್ ಎಲ್ಲಿಯೂ ತಾವಿಬ್ಬರು ಪ್ರೀತಿಯಲ್ಲಿ ಇರೋದನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲ. ಮಾಧ್ಯಮಗಳ ಮುಂದೆ ನಾವಿಬ್ಬರು ಒಳ್ಳೆಯ ಗೆಳೆಯರು ಎಂಬುದನ್ನು ಹೇಳುತ್ತಾ ಬಂದಿದ್ದಾರೆ. ಮಲೈಕಾ ಈಗಾಗಲೇ ಪತಿ ಅರ್ಬಾಜ್ ಖಾನ್ ಗೆ ವಿಚ್ಛೇದನ ನೀಡಿ 16 ವರ್ಷದ ಮಗ ಅರ್ಹಾನ್ ಖಾನ್ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಇತ್ತೀಚೆಗೆ ಮಲೈಕಾ ಪತಿ, ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್ ತಮ್ಮ ಹೊಸ ಗೆಳತಿ ಜಾರ್ಜಿಯಾ ಆಂಡ್ರಿಯಾನಿ ಜೊತೆ ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.

    https://www.instagram.com/p/BqeLJU6BFh0/

    ಅರ್ಜುನ್ ಕಪೂರ್ ಮತ್ತು 45 ವರ್ಷದ ಮಲೈಕಾ ಅರೋರಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಇಬ್ಬರ ಸಂಬಂಧದ ಬಗ್ಗೆ ಹಲವು ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತಿತ್ತು. ಆದ್ರೆ ಇಬ್ಬರು ಒಂದು ವರ್ಷದಿಂದ ಸಾರ್ವಜನಿಕವಾಗಿ ಇಬ್ಬರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಮಲೈಕಾ ಅರೋರಾ ಖಾಸಗಿ ವಾಹಿನಿಯ ರಿಯಾಲಿಟಿ ಶೋದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದ ಕಾರ್ಯಕ್ರಮದಲ್ಲಿ ಅರ್ಜುನ್ ಭಾಗಿಯಾಗಿದ್ದರು. ಸಿನಿಮಾ ಪ್ರಮೋಶನ್ ಅಂತಾ ಮೇಲ್ನೋಟಕ್ಕೆ ಹೇಳಿದ್ರೂ, ಮಲೈಕಾ ಪ್ರೀತಿಗಾಗಿ ಅರ್ಜುನ್ ಭಾಗಿಯಾಗಿದ್ದರು ಎಂಬುವುದು ಇನ್ ಸೈಡ್‍ಸ್ಟೋರಿ.

    https://www.instagram.com/p/Bqb6n4yBnln/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸೋದರಿ ಪಕ್ಕ ಕುಳಿತು ಸೆಕ್ಸ್ ಲೈಫ್ ರಿವೀಲ್ ಮಾಡಿದ್ರಾ ಅರ್ಜುನ್ ಕಪೂರ್!

    ಸೋದರಿ ಪಕ್ಕ ಕುಳಿತು ಸೆಕ್ಸ್ ಲೈಫ್ ರಿವೀಲ್ ಮಾಡಿದ್ರಾ ಅರ್ಜುನ್ ಕಪೂರ್!

    ಮುಂಬೈ: ಕಳೆದ ವಾರ ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಪಕ್ಕವೇ ಕುಳಿತು ಎರಡನೇ ಪತ್ನಿ ಕರೀನಾ ಕಪೂರ್ ಜೊತೆಗಿನ ಸೆಕ್ಸ್ ಲೈಫ್ ಬಗ್ಗೆ ಮಾತನಾಡಿದ್ದರು. ಇದೀಗ  ನಟ ಅರ್ಜುನ್ ಕಪೂರ್ ಸೋದರಿ ಜಾಹ್ನವಿ ಕಪೂರ್ ಪಕ್ಕ ಕುಳಿತು ಸೆಕ್ಸ್ ಜೀವನದ ಕುರಿತು ಮಾತನಾಡಿದ್ದಾರೆ.

    ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿಥ್ ಕರಣ್’ ಕಾರ್ಯಕ್ರಮಕ್ಕೆ ಈ ಬಾರಿ ಅರ್ಜುನ್ ಮತ್ತು ಜಾಹ್ನವಿ ಅತಿಥಿಗಳಾಗಿ ಆಗಮಿಸಿದ್ದಾರೆ. ಭಾನುವಾರ ಪ್ರಸಾರವಾಗುವ ಸಂಚಿಕೆಯ ಪ್ರೋಮೋವನ್ನು ವಾಹಿನಿ ಬಿಡುಗಡೆ ಮಾಡಿದೆ. ಅತಿಥಿಗಳ ಸಂದರ್ಶನ ನಡೆಸುವ ಕರಣ್, ನೇರವಾಗಿಯೇ ಖಾಸಗಿ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ. ಕರಣ್ ಕೇಳುವ ಪ್ರಶ್ನೆಗಳಿಗೆ ಅತಿಥಿಗಳು ಸಹ ನೇರಾನೇರ ಉತ್ತರ ನೀಡುವುದು ಕಾರ್ಯಕ್ರಮದ ವಿಶೇಷತೆ.

    ನೇರ ಪ್ರಶ್ನೆಗಳನ್ನು ಕೇಳುವ ಸುತ್ತಿನಲ್ಲಿ ಸೈಫ್ ಅಲಿ ಖಾನ್ ಅವರಿಗೆ ಕೇಳಿದ ಪ್ರಶ್ನೆಗಳನ್ನೇ ಅರ್ಜುನ್ ಕಪೂರ್ ಸಂದರ್ಶನದಲ್ಲಿ ಪುನಾರವರ್ತಿತ ಮಾಡಿದ್ದಾರೆ. ಅದ್ರೆ ಸೈಫ್ ಮದುವೆ ಆಗಿದ್ದರಿಂದ ನೇರ ಉತ್ತರಗಳನ್ನು ನೀಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಇನ್ನು ಬ್ಯಾಚೂಲರ್ ಆಗಿರುವ ಅರ್ಜುನ್, ಸೆಕ್ಸ್ ಲೈಫ್ ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಹೇಗೆ ಉತ್ತರಿಸಿದ್ದಾರೆ ಎಂಬುದನ್ನು ಭಾನುವಾರ ಪ್ರಸಾರವಾಗುವ ಸಂಚಿಕೆಯನ್ನು ನೋಡಬಹುದು.

    ಇದೇ ಪ್ರೋಮೋದಲ್ಲಿ ಕರಣ್ ಖಾಸಗಿ ಪ್ರಶ್ನೆಗಳನ್ನು ಕೇಳಲು ಆರಂಭಿಸಿದಾಗ, ಅರ್ಜುನ್ ನನ್ನ ಪಕ್ಕವೇ ಸೋದರಿ ಕುಳಿತಿದ್ದಾಳೆ. ಅವಳ ಮುಂದೆ ಖಾಸಗಿ ಜೀವನದ ಅನುಭವ ಹೇಗೆ ಹಂಚಿಕೊಳ್ಳಬೇಕು ಎಂದು ಮುಜುಗರಕ್ಕೆ ಒಳಗಾಗಿರುವುದನ್ನು ಕಾಣಬಹುದು.

    ಅರ್ಜುನ್ ಕಪೂರ್ ಮುಂದಿನ ವರ್ಷ ತನಗಿಂತ 14 ವರ್ಷ ಹಿರಿಯ ನಟಿ, ಒಂದು ಮಗುವಿನ ತಾಯಿ ಮಲೈಕಾ ಅರೋರಾರನ್ನು ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ. ಇತ್ತೀಚಿನ ಕೆಲವು ದಿನಗಳಿಂದ ಮಲೈಕಾ ಮತ್ತು ಅರ್ಜುನ್ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕರಣ್, ಅತಿಥಿಯಾಗಿ ಕಾರ್ಯಕ್ರಮಕ್ಕೆ ಬಂದಿರುವ ಅರ್ಜುನ್ ಕಪೂರ್ ಕಾಲೆಳೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ತನಗಿಂತ 12 ವರ್ಷ ಹಿರಿಯ ನಟಿಯ ಜೊತೆ ಅರ್ಜುನ್ ಕಪೂರ್ ಮದುವೆ?

    ತನಗಿಂತ 12 ವರ್ಷ ಹಿರಿಯ ನಟಿಯ ಜೊತೆ ಅರ್ಜುನ್ ಕಪೂರ್ ಮದುವೆ?

    ಮುಂಬೈ: ಪ್ರೀತಿಗೆ ಕಣ್ಣಿಲ್ಲ. ಪ್ರೇಮಿಗಳು ಒಬ್ಬರಿಗೊಬ್ಬರು ಇಷ್ಟಪಟ್ಟರೆ ವಯಸ್ಸಿನ ಅಂತರವೂ ಗೊತ್ತಾಗಲ್ಲ ಎಂಬ ಮಾತನ್ನು ಕೇಳಿರುತ್ತೇವೆ. ಇತ್ತೀಚೆಗೆ ನಟಿ ಪ್ರಿಯಾಂಕ ಚೋಪ್ರಾ ತಮಗಿಂತ 10 ವರ್ಷ ಚಿಕ್ಕವನಾದ ನಿಕ್ ಜೋನ್ಸ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ಇದೀಗ ನಿರ್ಮಾಪಕ ಬೋನಿ ಕಪೂರ್ ಮಗ, 33 ವರ್ಷದ ಅರ್ಜುನ್ ಕಪೂರ್ ತನಗಿಂತ 12 ವರ್ಷ ಹಿರಿಯ ನಟಿ ಮಲೈಕಾ ಅರೋರ ಜೊತೆ ಮುಂದಿನ ವರ್ಷ ಮದುವೆ ಆಗಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

    ಇತ್ತೀಚಿನ ಕೆಲವು ದಿನಗಳಲ್ಲಿ ಅರ್ಜುನ್ ಕಪೂರ್ ಮತ್ತು 45 ವರ್ಷದ ಮಲೈಕಾ ಅರೋರಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಇಬ್ಬರ ಸಂಬಂಧದ ಬಗ್ಗೆ ಹಲವು ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡಿದುತಿತ್ತು. ಆದ್ರೆ ಇಬ್ಬರು ಒಂದು ವರ್ಷದಿಂದ ಸಾರ್ವಜನಿಕವಾಗಿ ಇಬ್ಬರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಮಲೈಕಾ ಅರೋರಾ ಖಾಸಗಿ ವಾಹಿನಿಯ ರಿಯಾಲಿಟಿ ಶೋದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದ ಕಾರ್ಯಕ್ರಮದಲ್ಲಿ ಅರ್ಜುನ್ ಭಾಗಿಯಾಗಿದ್ದರು. ಸಿನಿಮಾ ಪ್ರಮೋಶನ್ ಅಂತಾ ಮೇಲ್ನೋಟಕ್ಕೆ ಹೇಳಿದ್ರೂ, ಮಲೈಕಾ ಪ್ರೀತಿಗಾಗಿ ಅರ್ಜುನ್ ಭಾಗಿಯಾಗಿದ್ದರು ಎಂಬುವುದು ಇನ್ ಸೈಡ್‍ಸ್ಟೋರಿ.

    ಇದೂವರೆಗೂ ಮಲೈಕಾ ಅಥವಾ ಅರ್ಜುನ್ ತಮ್ಮ ಪ್ರೀತಿ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ತಾವಿಬ್ಬರು ಪ್ರೀತಿಯಲ್ಲಿ ಇರೋದನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲ. ಮಾಧ್ಯಮಗಳ ಮುಂದೆ ನಾವಿಬ್ಬರು ಒಳ್ಳೆಯ ಗೆಳೆಯರು ಎಂಬುದನ್ನು ಹೇಳುತ್ತಾ ಬಂದಿದ್ದಾರೆ. ಮಲೈಕಾ ಈಗಾಗಲೇ ಪತಿ ಅರ್ಬಾಜ್ ಖಾನ್ ಗೆ ವಿಚ್ಛೇದನ ನೀಡಿ 16 ವರ್ಷದ ಮಗ ಅರ್ಹಾನ್ ಖಾನ್ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಇತ್ತೀಚೆಗೆ ಮಲೈಕಾ ಪತಿ, ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್ ತಮ್ಮ ಹೊಸ ಗೆಳತಿ ಜಾರ್ಜಿಯಾ ಆಂಡ್ರಿಯಾನಿ ಜೊತೆ ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅರ್ಜುನ್ ಕಪೂರ್ ಬರ್ತ್ ಡೇ ದಿನ ಭಾವುಕಳಾದ ಜಾಹ್ನವಿ

    ಅರ್ಜುನ್ ಕಪೂರ್ ಬರ್ತ್ ಡೇ ದಿನ ಭಾವುಕಳಾದ ಜಾಹ್ನವಿ

    ಮುಂಬೈ: ಇಂದು ಬಾಲಿವುಡ್‍ನ ಎಂಗ್ ಆ್ಯಂಡ್ ಹ್ಯಾಂಡ್ ಸಮ್ ಬ್ಯಾಚ್ಯುಲರ್ ನಟ ಅರ್ಜುನ್ ಕಪೂರ್ ಅವರ ಹುಟ್ಟುಹಬ್ಬ. ಆದ್ದರಿಂದ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಅರ್ಜುನ್ ಕಪೂರ್ ಇಂದು 33 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಬರ್ತ್ ಡೇ ಸಂಭ್ರಮದ ಕಾರ್ಯಕ್ರಮದಲ್ಲಿ ತಂದೆ ಬೋನಿ ಕಪೂರ್, ಸಹೋದರಿ ಅನ್ಷುಲಾ ಕಪೂರ್, ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಸಹ ಪಾಲ್ಗೊಂಡಿದ್ದರು.

    ಈ ವೇಳೆ ಜಾಹ್ನವಿ ತನ್ನ ಇನ್ಸ್ ಸ್ಟಾಗ್ರಾಂನಲ್ಲಿ ಫೋಟೋವೊಂದನ್ನ ಪೋಸ್ಟ್ ಮಾಡಿದ್ದು, ಜೊತೆಗೆ “ಅಣ್ಣ ನೀವು ನಮ್ಮ ಶಕ್ತಿ, ಲವ್ ಯು, ಜನ್ಮದಿನದ ಶುಭಾಶಯಗಳು” ಎಂದು ಬರೆದು ಭಾವನಾತ್ಮಕವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

    ಬೋನಿ ಕಪೂರ್ ಹಾಗೂ ಮೋನಾ ಶೂರಿ ಕಪೂರ್ ರವರ ಪುತ್ರನಾಗಿ ಜೂನ್ 26-1985 ರಂದು ಮುಂಬೈಯಲ್ಲಿ ಅರ್ಜುನ್ ಜನಿಸಿದ್ದರು. ಅರ್ಜುನ್ ಕಪೂರ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ ತಮ್ಮ ಹುಟ್ಟುಹಬ್ಬದಂದು ಬಿಡುವು ಮಾಡಿಕೊಂಡು ಕುಟುಂಬದವರೊಂದಿಗೆ ಸಮಯ ಕಳೆದಿದ್ದಾರೆ.

    https://www.instagram.com/p/Bkdb_3lhb5i/?hl=en&taken-by=janhvikapoor

  • ಅರ್ಜುನ್ ಕಪೂರ್ ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ, ನನಗೆ ನ್ಯಾಯ ಕೊಡಿ: ಪರಿಣೀತಿ ಚೋಪ್ರಾ

    ಅರ್ಜುನ್ ಕಪೂರ್ ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ, ನನಗೆ ನ್ಯಾಯ ಕೊಡಿ: ಪರಿಣೀತಿ ಚೋಪ್ರಾ

    ಮುಂಬೈ: ನಟ ಅರ್ಜುನ್ ಕಪೂರ್ ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಅದು ಈಗ ಕ್ಯಾಮೆರಾದಲ್ಲೂ ಸೆರೆಯಾಗಿದೆ ಎಂದು ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ತನ್ನ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

    ಅರ್ಜುನ್ ಕಪೂರ್ ಪರಿಣೀತಿಯನ್ನು ತಳ್ಳಿ ಆಕೆಯನ್ನು ಸಿಟ್ಟು ಬರುವ ಹಾಗೇ ಕಿರಿಕಿರಿ ಮಾಡುತ್ತಿದ್ದರು. ಅದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ವಿಡಿಯೋವನ್ನು ಪರಿಣೀತಿ ಚೋಪ್ರಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ಪರಿಣೀತಿ, ಅರ್ಜುನ್ ಕಪೂರ್ ಜೊತೆ ನಡೆದಿರುವ ಹಾಸ್ಯಭರಿತ ವಿಡಿಯೋವನ್ನು ಹಾಕಿ ಅದಕ್ಕೆ, “ಅರ್ಜುನ್ ಕಪೂರ್ ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದು, ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈಗ ಜಗತ್ತಿಗೆ ನಿಜವೇನು ಎಂದು ಗೊತ್ತಾಗುತ್ತದೆ. ನನಗೆ ನ್ಯಾಯ ಬೇಕು” ಎಂದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ಸದ್ಯ ಪರಿಣೀತಿ ಚೋಪ್ರಾ ‘ನಮಸ್ತೇ ಇಂಗ್ಲೆಂಡ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅರ್ಜುನ್ ಕಪೂರ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಳಿಕ ಪರಿಣೀತಿ ಚೋಪ್ರಾ ಅಕ್ಷಯ್ ಕುಮಾರ್ ಜೊತೆ ‘ಕೇಸರಿ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಾದ ಬಳಿಕ ಮತ್ತೆ ಅರ್ಜುನ್ ಕಪೂರ್‍ಗೆ ಜೊತೆ ನಟಿಸಲಿದ್ದಾರೆ.

  • ಅರ್ಜುನ್ ಕಪೂರ್ ಕಂಡು ಮುಖ ತಿರುಗಿಸಿಕೊಂಡ ಸಲ್ಮಾನ್ ಖಾನ್: ವಿಡಿಯೋ

    ಅರ್ಜುನ್ ಕಪೂರ್ ಕಂಡು ಮುಖ ತಿರುಗಿಸಿಕೊಂಡ ಸಲ್ಮಾನ್ ಖಾನ್: ವಿಡಿಯೋ

    ಮುಂಬೈ: ಬಾಲಿವುಡ್ ನಟಿ ಸೋನಮ್ ಕಪೂರ್ ಮೇ 8ರಂದು ತನ್ನ ಗೆಳೆಯ ಆನಂದ್ ಅಹುಜಾ ಜೊತೆ ಬಾಂದ್ರಾದ ತನ್ನ ಆಂಟಿಯ ಬಂಗಲೆಯಲ್ಲಿ ಮದುವೆಯಾಗಿದ್ದರು.

    ಮಂಗಳವಾರ ಬೆಳಗ್ಗೆ ಮದುವೆಯಾದ ನಂತರ ಸಂಜೆ ಲೀಲಾ ಹೋಟೆಲಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಜರುಗಿತ್ತು. ಆರತಕ್ಷತೆಯಲ್ಲಿ ಕತ್ರಿನಾ ಕೈಫ್, ಐಶ್ವರ್ಯ ರೈ ಬಚ್ಚನ್, ಅಲಿಯಾ ಭಟ್, ಜಾಕ್ವೇಲಿನ್ ಫರ್ನಾಂಡಿಸ್ ಹಲವು ಮಂದಿ ಪಾಲ್ಗೊಂಡಿದ್ದರು.

    ಸೋನಮ್ ಆರತಕ್ಷತೆಯಲ್ಲಿ ಸಲ್ಮಾನ್ ಖಾನ್ ಕೂಡ ಭಾಗಿಯಾಗಿದ್ದರು. ಇದೇ ವೇಳೆ ಅರ್ಜುನ್ ಕಪೂರ್ ನಿಂತಿದ್ದನ್ನು ಕಂಡರೂ ನೋಡದೇ ಮಾತನಾಡಿಸದೇ ಸಲ್ಮಾನ್ ಮುಖ ತಿರುಗಿಸಿಕೊಂಡಿದ್ದಾರೆ.

    ನಡೆದಿದ್ದೇನು?: ಮಂಗಳವಾರ ಸಂಜೆ ಮುಂಬೈನ ಲೀಲಾ ಹೋಟೆಲಿನಲ್ಲಿ ಸೋನಮ್ ಕಪೂರ್ ಹಾಗೂ ಆನಂದ್ ಅಹುಜಾ ಆರತಕ್ಷತೆ ನಡೆಯಿತು. ಈ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಕೂಡ ಆಗಮಿಸಿದ್ದರು. ಸಲ್ಮಾನ್ ಖಾನ್ ಆಗಮಿಸುವಾಗ ಜಾಹ್ನವಿ ಕಪೂರ್, ಖುಷಿ ಕಪೂರ್ ಹಾಗೂ ಅನ್ಷುಲಾ ಕಪೂರ್ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಇನ್ನೂ ಕತ್ರಿನಾ ಕೈಫ್ ಕೂಡ ಸ್ವಲ್ಪ ದೂರದಲ್ಲೇ ನಿಂತಿದ್ದರು. ಆರತಕ್ಷತೆಗೆ ಬಂದ ತಕ್ಷಣ ಸಲ್ಮಾನ್ ಕತ್ರಿನಾ ಅವರನ್ನು ಅಪ್ಪಿಕೊಂಡರು. ಆದರೆ ಅಲ್ಲೇ ನಿಂತಿದ್ದ ಅರ್ಜುನ್ ಕಪೂರ್ ರನ್ನು ಭಾಯಿಜಾನ್ ತಿರುಗಿ ಸಹ ನೋಡಿಲ್ಲ. ಇಷ್ಟೆಲ್ಲಾ ಆದ್ಮೇಲೆ ಅರ್ಜುನ್, ಸಲ್ಮಾನ್ ಖಾನ್ ಅವರನ್ನು ಮಾತನಾಡಿಸುವ ಧರ್ಯ ಮಾಡಲಿಲ್ಲ. ನಂತರ ಅಲ್ಲಿಂದ ಹೊರಟು ಹೋದರು.

    ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಹಾಗೂ ಅವರ ಪತ್ನಿ ಮಲೈಕಾ ಅರೋರ ವಿಚ್ಚೇದನ ಪಡೆದು ಒಂದು ವರ್ಷ ಆಗಿದೆ. ಅರ್ಜುನ್ ಕಪೂರ್ ರಿಂದ ಅರ್ಬಾಜ್ ಖಾನ್ ಸಂಸಾರ ಹಾಳಾಯಿತು. ಈ ಕಾರಣಕ್ಕಾಗಿ ಸಲ್ಮಾನ್ ಖಾನ್‍ಗೆ ಅರ್ಜುನ್ ಕಪೂರ್ ಮೇಲೆ ಕೋಪ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

    ಅರ್ಬಾಜ್ ಖಾನ್ ಹಾಗೂ ಮಲೈಕಾ ಮದುವೆಯಾಗಿ 18 ವರ್ಷಗಳು ಆಗಿದ್ದು, ಕಳೆದ ವರ್ಷ ವಿಚ್ಛೇದನೆ ಕೂಡ ಪಡೆದರು. ಈ ದಂಪತಿಯ ವಿಚ್ಛೇದನಕ್ಕೆ ನಟ ಅರ್ಜುನ್ ಕಪೂರ್ ಜೊತೆ ಮಲೈಕಾಗಿದ್ದ ಆತ್ಮೀಯ ಸಂಬಂಧ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು.

  • ಶ್ರೀದೇವಿಯ ಅಂತ್ಯಕ್ರಿಯೆ ಮಾಡ್ತಾರಾ ಮಲಮಗ ಅರ್ಜುನ್ ಕಪೂರ್!

    ಶ್ರೀದೇವಿಯ ಅಂತ್ಯಕ್ರಿಯೆ ಮಾಡ್ತಾರಾ ಮಲಮಗ ಅರ್ಜುನ್ ಕಪೂರ್!

    ಮುಂಬೈ: ಶ್ರೀದೇವಿ ನನ್ನ ಸ್ವಂತ ತಾಯಿಯಲ್ಲ. ಜಾಹ್ನವಿ ಕಪೂರ್ ನನ್ನ ಸ್ವಂತ ತಂಗಿಯಲ್ಲ ಎಂದು ಈ ಮೊದಲು ನಟ ಅರ್ಜುನ್ ಕಪೂರ್ ಹೇಳಿಕೆ ನೀಡಿದ್ದರು. ಆದರೆ ಶ್ರೀದೇವಿ ಜೊತೆಗೆ ಅರ್ಜುನ್ ಕಪೂರ್ ಉತ್ತಮ ಬಾಂಧವ್ಯ ಹೊಂದಿದ್ದರು ಎಂದೆನಿಸುತ್ತದೆ. ಹೀಗಾಗಿ ಅರ್ಜುನ್ ಕಪೂರ್ ಚಿಕ್ಕಮ್ಮ ಶ್ರೀದೇವಿ ಅವರ ಅಂತ್ಯಸಂಸ್ಕಾರ ಮಾಡ್ತಾರಾ ಎಂಬ ಪ್ರಶ್ನೆ ಎದ್ದಿದೆ.

    ಕಾರ್ಯಕ್ರಮವೊಂದರಲ್ಲಿ ಅರ್ಜುನ್ ಕಪೂರ್ ತಮ್ಮ ಹಾಗೂ ಶ್ರೀದೇವಿ ಮಧ್ಯೆ ಇರುವ ಸಂಬಂಧ ಉತ್ತಮವಾಗಿದೆ ಎಂದು ತಿಳಿಸಿದ್ದರು. ನನ್ನ ತಂದೆ ಬದುಕಿನಲ್ಲಿರುವ ಪ್ರತಿಯೊಂದು ವ್ಯಕ್ತಿಯನ್ನು ನಾನು ಗೌರವಿಸುತ್ತೇನೆ. ಏಕೆಂದರೆ ನನ್ನ ತಂದೆ ನನ್ನಿಂದ ಅದನ್ನು ನಿರೀಕ್ಷಿಸುತ್ತಾರೆ. ಹಾಗಾಗಿ ನಾನು ಶ್ರೀದೇವಿಯನ್ನು ಗೌರವಿಸುತ್ತೇನೆ. ಅವರಿಗೆ ಕೆಟ್ಟದನ್ನು ಬಯಸುವುದಿಲ್ಲ ಎಂದು ಅರ್ಜುನ್ ಕಪೂರ್ ಹೇಳಿದ್ದರು.

    ಶ್ರೀದೇವಿ ಸಾವಿನ ಸಂದರ್ಭದಲ್ಲಿ ಅರ್ಜುನ್ ತಮ್ಮ ಕುಟುಂಬದ ಜೊತೆ ಇರಬೇಕೆಂದು ಮುಂಬೈಗೆ ಬಂದಿಳಿದಿದ್ದಾರೆ. ಕುಟುಂಬದ ಜೊತೆಯಿದ್ದು, ತಂಗಿ ಜಾಹ್ನವಿಗೆ ಸಾಂತ್ವಾನ ಹೇಳಲು ಮುಂಬೈಗೆ ಬಂದಿದ್ದಾರೆ. ಈ ವೇಳೆ ಶ್ರೀದೇವಿ ಮನೆ ಮುಂದೆ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ಕಾಯುತ್ತಿದ್ದಾರೆ.

    ಅರ್ಜುನ್ ಕಪೂರ್ ಬೋನಿ ಕಪೂರ್ ಹಾಗೂ ಅವರ ಮೊದಲನೇ ಪತ್ನಿ ಮೋನಾ ಕಪೂರ್ ಮಗ. ಬಳಿಕ ಬೋನಿ ಶ್ರೀದೇವಿಯನ್ನು ಮದುವೆಯಾಗಿದ್ದರು. ಶ್ರೀದೇವಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರ ಮಲಮಗ ಅರ್ಜುನ್ ಅಂತ್ಯಕ್ರಿಯೆ ಮಾಡುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.

    ಶ್ರೀದೇವಿ ಹೃದಯಾಘಾತದಿಂದ ದುಬೈಯಲ್ಲಿ ಶನಿವಾರ ರಾತ್ರಿ ಮೃತಪಟ್ಟರು. ತಮ್ಮ ಪತಿ ಬೋನಿ ಕಪೂರ್ ಮತ್ತು ಕಿರಿಯ ಪುತ್ರಿ ಖುಷಿ ಜೊತೆ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತಗೊಂಡು ನಿಧನರಾಗಿದ್ದಾರೆ.

     

  • ಅರ್ಜುನ್ ಕಪೂರ್ ಅಲ್ಲ ರಣ್‍ವೀರ್ ಸಿಂಗ್ ಆಗಲಿದ್ದಾರೆ ಕಪಿಲ್ ದೇವ್

    ಅರ್ಜುನ್ ಕಪೂರ್ ಅಲ್ಲ ರಣ್‍ವೀರ್ ಸಿಂಗ್ ಆಗಲಿದ್ದಾರೆ ಕಪಿಲ್ ದೇವ್

    ಮುಂಬೈ: ರಣ್‍ವೀರ್ ಸಿಂಗ್ ತಮ್ಮ ಎಲ್ಲಾ ಚಿತ್ರಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ರಣ್‍ವೀರ್ ಸಿಂಗ್ ಮಾಜಿ ಕ್ರಿಕೆಟರ್ ಕಪಿಲ್ ದೇವ್ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ಈ ಮೊದಲು ಕಪಿಲ್ ದೇವ್ ಜೀವನಾಧರಿತ ಸಿನಿಮಾದಲ್ಲಿ ಅರ್ಜುನ್ ಕಪೂರ್ ನಟಿಸಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದ್ದವು. ಈ ಸಿನಿಮಾದ ನಟನೆಗಾಗಿ ರಣ್‍ವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್ ಮಧ್ಯೆ ಭಾರೀ ಪೈಪೋಟಿ ನಡೆದಿತ್ತು. ನಿಜ ಜೀವನದಲ್ಲಿ ರಣ್‍ವೀರ್ ಹಾಗೂ ಅರ್ಜುನ್ ಒಳ್ಳೆಯ ಸ್ನೇಹಿತರು ಆದರೆ ಚಿತ್ರದಲ್ಲಿ ಪಾತ್ರದ ವಿಷಯ ಬಂದಾಗ ಇಬ್ಬರೂ ಎದುರಾಳಿಗಳಾಗುತ್ತಾರೆ. ಆದರೆ ಈಗ ಕಪಿಲ್ ಅವರ ಚಿತ್ರ ರಣ್‍ವೀರ್‍ಗೆ ಒಲಿದಿದೆ.

    1983ರಲ್ಲಿ ಲಂಡನ್‍ನಲ್ಲಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಗೆದ್ದಿತ್ತು. ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಭಾರತ ಜಯಿಸಿದ ಕ್ಷಣಗಳನ್ನು ಬೆಳ್ಳಿ ಪರದೆ ಮೇಲೆ ತರಲು ಕಬಿರ್ ಖಾನ್ ತರಲು ಪ್ರಯತ್ನಿಸಿದ್ದಾರೆ.

    ಭಜರಂಗಿ ಭಾಯ್‍ಜಾನ್ ಚಿತ್ರದ ನಿರ್ದೇಶಕ ಕಬಿರ್ ಖಾನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ವೀಕೆಂಡ್‍ನಲ್ಲಿ ರಣವೀರ್ ಭೇಟಿ ಆಗಿ ಎಲ್ಲಾ ಮಾತುಕತೆ ನಡೆಸಿದ್ದಾರೆ. ಈ ಚಿತ್ರದ ಕಥೆಯನ್ನು ರಾಷ್ಟ್ರ ಪ್ರಶಸ್ತಿ ವಿಜೇತರಾದ ನಿರ್ದೇಶಕ ಸಂಜಯ್ ಪುರಾನ್ ಸಿಂಗ್ ಚೌಹಾನ್ ಬರೆಯಲಿದ್ದಾರೆ. ಫ್ಯಾಂಟಮ್ ಫಿಲ್ಮ್ಸ್ ಹಾಗೂ ಸಿಸಿಎಲ್‍ನ ಮ್ಯಾನೆಜಿಂಗ್ ಡೈರೆಕ್ಟರ್ ಆದ ವಿಷ್ಣುವರ್ಧನ್ ಇಂದೂರಿ ಈ ಚಿತ್ರದ ಸಹ-ನಿರ್ಮಾಪಕರಾಗಿದ್ದಾರೆ.