Tag: ಅರ್ಜುನ್ ಕಪೂರ್

  • ಬಿಕಿನಿ ಫೋಟೋಗೆ ಕಾಮೆಂಟ್ ಮಾಡಿದ್ದ ಅರ್ಜುನ್‍ಗೆ ಚೋರ್ ಎಂದ ಮಲೈಕಾ

    ಬಿಕಿನಿ ಫೋಟೋಗೆ ಕಾಮೆಂಟ್ ಮಾಡಿದ್ದ ಅರ್ಜುನ್‍ಗೆ ಚೋರ್ ಎಂದ ಮಲೈಕಾ

    ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಹಾಟ್ ಬಿಕಿನಿ ಫೋಟೋಗೆ ಕಾಮೆಂಟ್ ಮಾಡಿದ ಅರ್ಜುನ್ ಕಪೂರ್‌ಗೆ ಚೋರ್ ಎಂದು ಕರೆದಿದ್ದಾರೆ.

    ಬಾಲಿವುಡ್ ಕ್ಯೂಟ್ ಜೋಡಿಗಳಲ್ಲಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಜೋಡಿ ಕೂಡ ಒಂದು. ರಿಲೇಶನ್ ಶಿಪ್ ವಿಚಾರಕ್ಕೆ ಬಂದರೆ ಮಲೈಕಾ ಮತ್ತು ಅರ್ಜುನ್ ಇಬ್ಬರು ಪರಸ್ಪರ ಎಂದಿಗೂ ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ. ಹಲವಾರು ಸಂಕಷ್ಟದ ಸಮಯದಲ್ಲಿ ಇಬ್ಬರು ಒಬ್ಬರಿಗೊಬ್ಬರು ಪರಸ್ಪರ ಸೋಶಿಯಲ್ ಮೀಡಿಯಾದಲ್ಲಿ ಬೆಂಬಲಿಸುತ್ತಾ ಬಂದಿದ್ದಾರೆ.

    ಸದ್ಯ ಇತ್ತೀಚೆಗಷ್ಟೇ ಮಲೈಕಾ ಆರೆಂಜ್ ಕಲರ್ ಬ್ರಾ ಮತ್ತು ಶಾರ್ಟ್ಸ್ ತೊಟ್ಟಿರುವ ಸುಂದರವಾದ ಫೋಟೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಮಧ್ಯೆ ಎಲ್ಲರ ಗಮನ ಸೆಳೆದಿದ್ದು, ಅರ್ಜುನ್ ಕಪೂರ್ ಮಾಡಿದ್ದ ಕಾಮೆಂಟ್. ಇದನ್ನೂ ಓದಿ: ಸಖತ್ ಹಾಟ್ ಫೋಟೋಗಳಿಂದ ಮೋಡಿ ಮಾಡಿದ ರಾಯ್ ಲಕ್ಷ್ಮೀ

    ಹೌದು, ಮಲೈಕಾ ಅರೋರಾ ಆರೆಂಜ್ ಕಲರ್ ಬ್ರಾ ಮತ್ತು ಶಾರ್ಟ್ಸ್ ತೊಟ್ಟು ಸ್ವೀಮಿಂಗ್ ಪೂಲ್‍ನಲ್ಲಿ ಫೋಟೋಗೆ ಸಖತ್ ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ. ಇದರ ಜೊತೆಗೆ ಕ್ಯಾಪ್ಷನ್‍ನಲ್ಲಿ ಸನ್ ಡೇ ಸನ್ನಿ ಸೈಡ್ ಅಪ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಈ ಫೋಟೋಗೆ ಅರ್ಜುನ್ ಕಪೂರ್ ಫುಲ್ ಫಿದಾ ಆಗಿದ್ದು, ನೈಸ್ ಕ್ಯಾಪ್ಷನ್ ಎಂದು ರಿಯಾಕ್ಟ್ ಮಾಡಿದ್ದಾರೆ. ಇದಕ್ಕೆ ಮಲೈಕಾ, ಅರ್ಜುನ್ ಕಪೂರ್ ಅವರನ್ನು ಕ್ಯಾಪ್ಷನ್ ಚೋರ್ ಎಂದು ಕರೆದಿದ್ದಾರೆ.

     

    View this post on Instagram

     

    A post shared by Malaika Arora (@malaikaaroraofficial)

    ಮಲೈಕಾ ಹಾಗೂ ಅರ್ಜುನ್ ಕಪೂರ್ ಇಬ್ಬರಿಗೂ ಬಹಳಷ್ಟು ವಯಸ್ಸಿನ ಅಂತರವಿದೆ ಎಂದು ಅನೇಕ ಮಂದಿ ಟೀಕೆ ವ್ಯಕ್ತಪಡಿಸಿದರು, ಇದ್ಯಾವುದನ್ನು ಇಬ್ಬರೂ ಲೆಕ್ಕಿಸದೇ ಪ್ರೀತಿಸುತ್ತಿದ್ದಾರೆ. ಈ ಕುರಿತಂತೆ ಮಲೈಕಾ ಇತ್ತೀಚೆಗಷ್ಟೇ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ 40ರಲ್ಲಿ ಪ್ರೀತಿಸುವುದನ್ನು ಸಾಮಾನ್ಯವಾಗಿಸಿ, 30ರಲ್ಲಿ ನಿಮ್ಮ ಕನಸುಗಳನ್ನು ಬೆನ್ನಟ್ಟುವುದನ್ನು ಸಾಮಾನ್ಯಗೊಳಿಸಿ. 50ರಲ್ಲಿ ನಿಮ್ಮ ಉದ್ದೇಶವನ್ನು ಕಂಡುಕೊಳ್ಳಿ. 25ಕ್ಕೆ ಪ್ರೀತಿಯ ಜೀವನ ಕೊನೆಗೊಳ್ಳುವುದಿಲ್ಲ ಎಂದು ತಿಳಿಸಿದ್ದರು. ಇದನ್ನೂ ಓದಿ:  ಹೊಸ ಮೆಟ್ರೋ ನಿಲ್ದಾಣಕ್ಕೆ ಅಪ್ಪು ಹೆಸರಿಡುವಂತೆ ಒತ್ತಾಯ

  • ಬ್ರೇಕಪ್ ವಿಚಾರವಾಗಿ ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್!

    ಬ್ರೇಕಪ್ ವಿಚಾರವಾಗಿ ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್!

    ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಜೊತೆಗಿನ ಬ್ರೇಕಪ್ ವಿಚಾರವಾಗಿ ಹರಿದಾಡುತ್ತಿದ್ದ ಗಾಳಿ ಸುದ್ದಿ ಬಗ್ಗೆ ಅರ್ಜುನ್ ಕಪೂರ್ ಕೊನೆಗೂ ಮೌನ ಮುರಿದಿದ್ದಾರೆ.

    ಅರ್ಜುನ್ ಕಪೂರ್ ಇನ್‍ಸ್ಟಾಗ್ರಾಮ್‍ನಲ್ಲಿ ಮಲೈಕಾ ಜೊತೆಗಿನ ಅಪರೂಪದ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಫೋಟೋ ಜೊತೆಗೆ, ನನ್ನ ಹಾಗೂ ಮಲೈಕಾ ನಡುವೆ ಎಲ್ಲವೂ ಚೆನ್ನಾಗಿದೆ. ಇವೆಲ್ಲ ಕೇವಲ ವದಂತಿಗಳು. ಸುಳ್ಳುಸುದ್ದಿಗಳನ್ನು ಯಾರು ನಂಬಬೇಡಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರಣವೀರ್ ಒಳ್ಳೆಯ ಎಂಟರ್ಟೈನರ್ ಎಂದ ಪೂಜಾ ಹೆಗ್ಡೆ

    ಫೋಟೋದಲ್ಲಿ ಮೀರರ್ ಮುಂದೆ ನಿಂತು ಅರ್ಜುನ್ ಕಪೂರ್ ಹಾಗೂ ಮಲೈಕಾ ಪೋಸ್ ಕೊಟ್ಟಿದ್ದು, ಇಬ್ಬರು ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಇನ್ನೂ ಅರ್ಜುನ್ ಕ್ಯಾಪ್ಷನ್‍ನಲ್ಲಿ, ವದಂತಿಗಳಿಗೆ ಸ್ಥಳವಿಲ್ಲ. ಸುರಕ್ಷಿತವಾಗಿರಿ. ಎಲ್ಲರೂ ಚೆನ್ನಾಗಿರಿ ಎಂದು ಪ್ರಾರ್ಥಿಸುತ್ತೇನೆ. ಲವ್ ಯೂ ಆಲ್ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Arjun Kapoor (@arjunkapoor)

    ಅರ್ಜುನ್ ಮತ್ತು ಮಲೈಕಾ ನಾಲ್ಕು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ನಡೆಯುವ ಪಾರ್ಟಿಗಳು, ಮದುವೆ ಕಾರ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಈ ಜೋಡಿ ಯಾವಾಗಲೂ ಒಟ್ಟಿಗೆ ಇರುತ್ತಾರೆ. 2018 ರಲ್ಲಿ ಅರ್ಜುನ್ ಮತ್ತು ಮಲೈಕಾ ಮಾಧ್ಯಮಗಳ ಮುಂದೆ ತಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದರು. ಎಲ್ಲರಿಗೂ ಸುದ್ದಿ ತಿಳಿದ ನಂತರ ಇವರಿಬ್ಬರು ಎಲ್ಲೇ ಹೋದರೂ ಒಟ್ಟಿಗೆ ಹೋಗುತ್ತಿದ್ದರು. ಆದರೆ ಇತ್ತೀಚೆಗೆ ಇವರಿಬ್ಬರ ಬ್ರೇಕಪ್ ಬಗ್ಗೆ ಸುದ್ದಿ ಕೇಳಿಬರುತ್ತಿತ್ತು. ಅದಕ್ಕೆ ಇಂದು ಅವರು ಮುಕ್ತಾಯವಾಡಿದ್ದಾರೆ. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ

     

    View this post on Instagram

     

    A post shared by Arjun Kapoor (@arjunkapoor)

    ಈ ತಿಂಗಳ ಆರಂಭದಲ್ಲಿ ಅರ್ಜುನ್ ಅವರಿಗೆ ಕೋವಿಡ್ ಪಾಸಿಟಿವ್ ದೃಢವಾಗಿತ್ತು. ಪರಿಣಾಮ ಇವರು ಹೋಮ್ ಕ್ವಾರಂಟೈನ್ ಆಗಿದ್ದಾರೆ. ಈಗ ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

  • ಗೆಳೆಯ ಅರ್ಜುನ್ ನಂತರ ಮಲೈಕಾ ಅರೋರಾಗೆ ಕೊರೊನಾ ಪಾಸಿಟಿವ್

    ಗೆಳೆಯ ಅರ್ಜುನ್ ನಂತರ ಮಲೈಕಾ ಅರೋರಾಗೆ ಕೊರೊನಾ ಪಾಸಿಟಿವ್

    ಮುಂಬೈ: ಬಾಲಿವುಡ್ ಹಾಟ್ ಬೆಡಗಿ ಮಲೈಕಾ ಅರೋರಾ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಇಂದು ಬೆಳಗ್ಗೆ ಮಲೈಕಾ ಅವರ ಪ್ರಿಯಕರ ಅರ್ಜುನ್ ಕಪೂರ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇದನ್ನು ಸ್ವತಃ ಅವರೇ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ದೃಢಪಡಿಸಿದ್ದರು. ಈಗ ಅರ್ಜುನ್ ಜೊತೆ ಇದ್ದ ಮಲೈಕಾ ಅರೋರಾ ಅವರಿಗೂ ಕೊರೊನಾ ವೈರಸ್ ದೃಢಪಟ್ಟಿದೆ.

    ಈಗ ಸಂಜೆ ಮಲೈಕಾ ಅರೋರಾ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಅವರ ಸಹೋದರಿ ಅಮೃತ ಅರೋರಾ ಅವರು ರಾಷ್ಟ್ರೀಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಮಲೈಕಾ ಆರೋರ ಇತ್ತೀಚೆಗೆ ಹಿಂದು ಸುದ್ದಿವಾಹಿನಿಯೊಂದರಲ್ಲಿ ಪ್ರಸಾರವಾಗುವ ಇಂಡಿಯನ್ ಬೆಸ್ಟ್ ಡ್ಯಾನ್ಸರ್ ಎಂಬ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಇವರ ಜೊತೆ ನಟಿ ನೋರಾ ಫತೇಹಿಯವರು ಕೂಡ ಕಾಣಿಸಿಕೊಂಡಿದ್ದರು.

    ತನಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಇಂದು ಬೆಳಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿದ್ದ ಅರ್ಜುನ್ ಕಪೂರ್, ನನಗೆ ಕೊರೊನಾ ಸೋಂಕು ತಗುಲಿರೋದು ನಿಮಗೆ ತಿಳಿಸುವುದು ನನ್ನ ಕರ್ತವ್ಯ. ಸದ್ಯ ನಾನು ಆರೋಗ್ಯವಾಗಿದ್ದು, ಕೆಲ ಕೊರೊನ ಗುಣಲಕ್ಷಣಗಳು ಕಾಣಿಸಿಕೊಂಡಿವೆ. ವೈದ್ಯರ ಸಲಹೆ ಮೇರೆಗೆ ಹೋಂ ಐಸೋಲೇಶನ್ ನಲ್ಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ನಿಮ್ಮ ಬೆಂಬಲಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಮುಂದಿನ ದಿನಗಳಲ್ಲಿ ಆರೋಗ್ಯದ ಅಪ್‍ಡೇಟ್ ನೀಡುತ್ತಿರುತ್ತೇನೆ ಎಂದು ಬರೆದುಕೊಂಡಿದ್ದರು.

    ಇದಕ್ಕೂ ಮುನ್ನ ಕಳೆದ ಮೇ ತಿಂಗಳಿನಲ್ಲಿ ಅರ್ಜುನ್ ಕಪೂರ್ ಅವರ ತಂದೆ ಬೋನಿ ಕಪೂರ್ ಮತ್ತು ಅವರ ಮನೆಯ ಸಿಬ್ಬಂದಿಗೆ ಸಹ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಸದ್ಯ ಬೋನಿ ಕಪೂರ್ ಮತ್ತು ಅವರ ಮಕ್ಕಳಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಕೊರೊನಾದಿಂದ ಗುಣಮುಖರಾಗಿದ್ದಾರೆ. ನಂತರ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಮತ್ತು ಅವರ ಮಗಳಿಗೂ ಕೊರೊನಾ ವೈರಸ್ ತಗುಲಿತ್ತು.

  • ನಟ ಅರ್ಜುನ್ ಕಪೂರ್‌ಗೆ ಕೊರೊನಾ ದೃಢ

    ನಟ ಅರ್ಜುನ್ ಕಪೂರ್‌ಗೆ ಕೊರೊನಾ ದೃಢ

    ಮುಂಬೈ: ಬಾಲಿವುಡ್ ನಟ ಅರ್ಜುನ್ ಕಪೂರ್ ಅವರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಅರ್ಜುನ್ ಕಪೂರ್ ಬರೆದುಕೊಂಡಿದ್ದು, ಹೋಂ ಐಸೋಲೇಶನ್ ನಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

    ನನಗೆ ಕೊರೊನಾ ಸೋಂಕು ತಗುಲಿರೋದು ನಿಮಗೆ ತಿಳಿಸುವುದು ನನ್ನ ಕರ್ತವ್ಯ. ಸದ್ಯ ನಾನು ಆರೋಗ್ಯವಾಗಿದ್ದು, ಕೆಲ ಕೊರೊನ ಗುಣಲಕ್ಷಣಗಳು ಕಾಣಿಸಿಕೊಂಡಿವೆ. ವೈದ್ಯರ ಸಲಹೆ ಮೇರೆಗೆ ಹೋಂ ಐಸೋಲೇಶನ್ ನಲ್ಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ನಿಮ್ಮ ಬೆಂಬಲಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಮುಂದಿನ ದಿನಗಳಲ್ಲಿ ಆರೋಗ್ಯದ ಅಪ್‍ಡೇಟ್ ನೀಡುತ್ತಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಆರೋಗ್ಯದತ್ತ ಗಮನ ಕೊಡಿ. ಬೇಗ ಗುಣಮುಖರಾಗಿ ಬನ್ನಿ ಎಂದು ನಟಿ ಕೃತಿ ಸನನ್ ಹಾರೈಸಿದ್ದಾರೆ. ನಟಿ ಜಾಹ್ನವಿ ಕಪೂರ್, ಪರಿಣೀತಿ ಚೋಪ್ರಾ, ನಟ ಹೃತಿಕ್ ರೋಷನ್, ನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ಬಹುತೇಕ ಸ್ಟಾರ್ ಗಳು ಗುಣಮುಖರಾಗಿ ಬನ್ನಿ ಎಂದು ಅರ್ಜುನ್ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ.

    https://www.instagram.com/p/CEydxJNp3mB/

  • ಆರ್ ಜೆ ಕಪಾಳಕ್ಕೆ ಬಾರಿಸಿದ ನಟ ಅರ್ಜುನ್ ಕಪೂರ್

    ಆರ್ ಜೆ ಕಪಾಳಕ್ಕೆ ಬಾರಿಸಿದ ನಟ ಅರ್ಜುನ್ ಕಪೂರ್

    -ಆರ್ ಜೆ ಪ್ರಶ್ನೆಗೆ ನಿಗಿ ನಿಗಿ ಕೆಂಡವಾದ ನಟ

    ಮುಂಬೈ: ಬಾಲಿವುಡ್ ನಟ ಅರ್ಜುನ್ ಕಪೂರ್ ಆರ್ ಜೆ ಕಪಾಳಕ್ಕೆ ಹೊಡೆದಿರುವ ಹಳೆಯ ವಿಡಿಯೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಆರ್ ಜೆ ಕೇಳಿದ ಪ್ರಶ್ನೆಗೆ ಕೋಪಗೊಂಡ ಅರ್ಜುನ್ ಕಪೂರ್ ಕಪಾಳಕ್ಕೆ ಬಾರಿಸುತ್ತಾರೆ. ಏನಿದು ಪ್ರಶ್ನೆ, ಕ್ಯಾಮೆರಾ ಬಂದ್ ಮಾಡಿ ಎಂದು ಕೂಗ್ತಾರೆ. ಹೊರ ಹೋಗುವಾಗ ಕ್ಯಾಮೆರಾ ಸಹ ಬೀಳಿಸಿದ್ದಾರೆ. ಮಾರುಕಟ್ಟೆಯಲ್ಲಿ ನಿಮ್ಮ ಕ್ಯಾರೆಕ್ಟರ್ ಮಾರಾಟ ಆಗ್ತಿಲ್ಲವಾ? ಅದಕ್ಕೆ ಹುಡುಗಿಯರ ಕ್ಯಾರೆಕ್ಟರ್ ಮಾಡ್ತಿದ್ದೀರಾ ಎಂದು ಆರ್ ಜೆ ಪ್ರಶ್ನೆ ಮಾಡಿದ್ದಾರೆ. ಕ್ಯಾಮೆರಾಗಳ ಮುಂದೆ ನಿಂತಿದ್ದರೂ ಅರ್ಜುನ್ ಆರ್‍ಜೆ ಮೇಲೆ ಹಲ್ಲೆ ನಡೆಸಿದ್ದಾರೆ.

    ಪ್ರಶ್ನೆ ಸರಿ ಇಲ್ಲದಿದ್ರೆ ಸಂದರ್ಶನದಿಂದ ಹೊರ ಬರಬಹುದಿತ್ತು. ಹೀಗೆ ಹಲ್ಲೆ ನಡೆಸೋದು ಎಷ್ಟು ಸರಿ ಎಂದು ಕೆಲ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಮತ್ತೊಂದು ಕಡೆ ಅರ್ಜುನ್ ಕೆಲ ಅಭಿಮಾನಿಗಳು, ನಟನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮತ್ತೆ ಕೆಲವರು ಇದು ಸ್ಕ್ರಿಪ್ಟೆಡ್ ಡ್ರಾಮಾ ಅಂತ ಬರೆದು ಇಲ್ಲಿಯೂ ಸಹ ಅರ್ಜುನ್ ನಟನೆ ಸರಿ ಮಾಡಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇನ್‍ಬಾಲಿವುಡ್ ಪೇಜ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಎರಡು ಗಂಟೆಯಲ್ಲಿ 10 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ.

    https://www.instagram.com/p/CEBWu47BoOu/

  • ಕೆಲಸ ನೋಡಿ ಕತ್ರಿನಾಗೆ ಆಮಂತ್ರಣ ನೀಡಿದ ಅರ್ಜುನ್ ಕಪೂರ್

    ಕೆಲಸ ನೋಡಿ ಕತ್ರಿನಾಗೆ ಆಮಂತ್ರಣ ನೀಡಿದ ಅರ್ಜುನ್ ಕಪೂರ್

    ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಕೆಲಸ ನೋಡಿದ ನಟ ಅರ್ಜುನ್ ಕಪೂರ್ ತಮ್ಮ ಮನೆಗೆ ಆಹ್ವಾನ ನೀಡಿದ್ದಾರೆ.

    ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಇಡೀ ದೇಶವೇ ಸ್ತಬ್ಧವಾಗಿದೆ. ಸಿನಿಮಾ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಚಿತ್ರರಂಗ ಎಲ್ಲ ಸ್ಟಾರ್ ಗಳು ಮನೆಯಲ್ಲಿ ಕುಟುಂಬಸ್ಥರೊಂದಿಗೆ ಸಮಯ ಕಳೆಯುತ್ತಿದ್ದಾರೆ. ತಮ್ಮ ಅಮೂಲ್ಯ ಕ್ಷಣಗಳನ್ನು ಮೊಬೈಲಿನಲ್ಲಿ ಸೆರೆಹಿಡಿದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ನೀವು ನಿಮ್ಮ ಮನೆಗಳಲ್ಲಿ ಇರಿ ಎಂಬ ಸಂದೇಶವನ್ನು ತಮ್ಮ ಅಭಿಮಾನಿಗಳಿಗೆ ನೀಡುತ್ತಿದ್ದಾರೆ.

    ಇದೇ ರೀತಿ ಬಾಲಿವುಡ್ ಸೆಕ್ಸಿ ಲೇಡಿ ಕತ್ರಿನಾ ಕೈಫ್ ಮನೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕತ್ರಿನಾ ಪಾತ್ರೆ ತೊಳೆಯುತ್ತಿರುವ ವಿಡಿಯೋ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಫನ್ನಿಯಾಗಿ ಕಮೆಂಟ್ ನೀಡಲು ಆರಂಭಿಸಿದ್ದಾರೆ. ನಟ ಅರ್ಜುನ್ ಕಪೂರ್ ಸಹ ಕಮೆಂಟ್ ಮಾಡಿದ್ದು, ನಮ್ಮ ಮನೆಗೆ ನಿಮಗೆ ಆಹ್ವಾನ ಕೊಡುತ್ತಿದ್ದೇನೆ. ಕಾಂತಾಬಾಯಿ 2.0 ಎಂದು ಬರೆದು ಕತ್ರಿನಾರ ಕಾಲೆಳೆದಿದ್ದಾರೆ.

     

    View this post on Instagram

     

    ???? +????=???????? really makes u appreciate all the help we have at home #socialdistancing #staysafe #helpoutathome

    A post shared by Katrina Kaif (@katrinakaif) on

  • ಗರ್ಲ್ ಫ್ರೆಂಡ್ ಹೆಸರು ಬರ್ತಿದ್ದಂತೆ ಕಾಲ್ಕಿತ್ತ ಅರ್ಜುನ್ ಕಪೂರ್

    ಗರ್ಲ್ ಫ್ರೆಂಡ್ ಹೆಸರು ಬರ್ತಿದ್ದಂತೆ ಕಾಲ್ಕಿತ್ತ ಅರ್ಜುನ್ ಕಪೂರ್

    ಮುಂಬೈ: ಬಾಲಿವುಡ್ ನಟ ಅರ್ಜುನ್ ಕಪೂರ್ ತಮ್ಮ ಗರ್ಲ್ ಪ್ರೆಂಡ್ ಹೆಸರು ಕೇಳುತ್ತಿದ್ದಂತೆ ಕುಳಿತ ಜಾಗದಿಂದ ಎದ್ದು ಹೋಗಿದ್ದಾರೆ. ಈ ವಿಡಿಯೋವನ್ನು ಅರ್ಜುನ್ ಕಪೂರ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಭಾನುವರಾ ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ವಿಡಿಯೋ ಆಪ್ಲೋಡ್ ಮಾಡಿಕೊಂಡಿರುವ ಅರ್ಜುನ್ ಕಪೂರ್, ತನ್ನ ಆಪ್ತ ಮಹಿಳೆಯರ ಬಗ್ಗೆ ಒಂದು ಪದದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅಮ್ಮ, ಸೋದರಿಯರು, ತನ್ನ ಸಹಾಯಕಿಯರು, ಮಹಿಳಾ ಮ್ಯಾನೇಜರ್ ಹೀಗೆ ಎಲ್ಲರ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ನಿಮ್ಮ ಗರ್ಲ್ ಫ್ರೆಂಡ್ ಬಗ್ಗೆ ಹೇಳಿ ಎಂದಾಗ ತುಟಿಯ ಮೇಲೆ ಬೆರಳಿಟ್ಟು ಶ್..! ಎಂದು ನಕ್ಕು ಹೋಗಿದ್ದಾರೆ.

    ಈ ವಿಡಿಯೋ ನೋಡಿದ ನೆಟ್ಟಿಗರು, ಈ ಪ್ರಶ್ನೆಗೆ ನಮಗೆ ಉತ್ತರ ತಿಳಿದಿದೆ. ನೀವು ಹೇಳುವುದು ಬೇಡ ಎಂದು ಪ್ರತಿಕ್ರಿಯಿಸಿದ್ರೆ, ಕೆಲವರು ಮಲೈಕಾ ಅರೋರಾಗೆ ಟ್ಯಾಗ್ ಮಾಡಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲು ಕದ್ದುಮುಚ್ಚಿ ಓಡಾಡುತ್ತಿದ್ದ ಜೋಡಿ ಸದ್ಯ ಬಹಿರಂಗವಾಗಿ ಕಾಣಿಸಿಕೊಳ್ಳುವ ಮೂಲಕ ಪರೋಕ್ಷವಾಗಿ ತಮ್ಮ ಪ್ರೀತಿಯನ್ನು ರಿವೀಲ್ ಮಾಡಿದ್ದಾರೆ. ಮಲೈಕಾ ಪತಿ ಅರ್ಬಾಜ್ ಖಾನ್ ನಿಂದ ವಿಚ್ಛೇದನ ಪಡೆದು ಮಗನೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಅರ್ಜುನ್ ಕಪೂರ್ ಗಿಂತ ಮಲೈಕಾ 10 ವರ್ಷ ಹಿರಿಯರಾಗಿದ್ದು, 17 ವರ್ಷದ ಮಗನಿದ್ದಾನೆ.

    https://www.instagram.com/p/B9dzhCWpSBC/

  • ಮಲೈಕಾ ಜೊತೆ ಫ್ಲರ್ಟ್ ಮಾಡಿದ್ದಕ್ಕೆ ಅರ್ಜುನ್ ಪ್ರತಿಕ್ರಿಯೆ ನೀಡಿದ ವಿಡಿಯೋ ವೈರಲ್

    ಮಲೈಕಾ ಜೊತೆ ಫ್ಲರ್ಟ್ ಮಾಡಿದ್ದಕ್ಕೆ ಅರ್ಜುನ್ ಪ್ರತಿಕ್ರಿಯೆ ನೀಡಿದ ವಿಡಿಯೋ ವೈರಲ್

    ಕ್ಯಾನ್ಬೆರಾ: ಬಾಲಿವುಡ್ ನಟಿ ಮಲೈಕಾ ಅರೋರಾ ಜೊತೆ ಕಿರುತೆರೆ ನಟ ಕರಣ್ ಟ್ಯಾಕರ್ ಫ್ಲರ್ಟ್ ಮಾಡಿದ್ದಕ್ಕೆ ಅರ್ಜುನ್ ಕಪೂರ್ ಪ್ರತಿಕ್ರಿಯೆ ನೀಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೆಲ್ಬೋರ್ನ್ ನ ಭಾರತೀಯ ಚಲನಚಿತ್ರೋತ್ಸವ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಭಾಗವಹಿಸಿದ್ದರು. ಮೆಲ್ಭೋರ್ನ್‍ನ ಸೆಂಟ್ ಕಿಲ್ಡಾದಲ್ಲಿ ಇರುವ ಪಲೈಸ್ ಥಿಯೇಟರ್ ನಲ್ಲಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಒಟ್ಟಿಗೆ ಕುಳಿತಿದ್ದರು. ಈ ವೇಳೆ ಕಿರುತೆರೆ ನಟ ಕರಣ್ ಟ್ಯಾಕರ್, ಮಲೈಕಾ ಜೊತೆ ನಡೆಸಿದ ಸಂಭಾಷಣೆ ವಿಡಿಯೋ ವೈರಲ್ ಆಗಿದೆ.

    ವಿಡಿಯೋದಲ್ಲಿ ಕರಣ್ ನಟಿ ಮಲೈಕಾ ಅವರಿಗೆ “20 ಗಂಟೆ ವಿಮಾನದಲ್ಲಿ ಸಂಚಾರ ಮಾಡಿದ್ದರು ಸುಂದರವಾಗಿ ಕಾಣಿಸುತ್ತಿದ್ದೀರಾ” ಎಂದು ಹೇಳಿದ್ದಾರೆ. ಈ ವೇಳೆ ಪಕ್ಕದಲ್ಲಿಯೇ ಕುಳಿತಿದ್ದ ಅರ್ಜುನ್, “ಹಿಂದೆ ಬೇರೆ ಮಹಿಳೆಯರು ಕುಳಿತಿದ್ದಾರೆ. ಅವರ ಜೊತೆ ಫ್ಲರ್ಟ್ ಮಾಡು ಹೋಗು’ ಎಂದು ನಗುತ್ತಾ ಕರಣ್‍ಗೆ ಪ್ರತಿಕ್ರಿಯಿಸಿದ್ದಾರೆ. ಅರ್ಜುನ್ ಮಾತು ಕೇಳಿ ಅಲ್ಲಿದ್ದ ಬೇರೆ ಕಲಾವಿದರು ಜೋರಾಗಿ ನಗಲು ಶುರು ಮಾಡಿದ್ದರು.

    ಮಲೈಕಾ ಅರೋರಾ ಅವರು 1998ರಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ಈ ಜೋಡಿಗೆ ಒಂದು ಮಗುವಿದೆ. ಆದರೆ 2017ರಲ್ಲಿ ಮಲೈಕಾ ಹಾಗೂ ಅರ್ಬಾಜ್ ಖಾನ್ ವಿಚ್ಛೇದನ ಪಡೆದು, ಬೇರೆಯಾಗಿದ್ದರು. ಈಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಅವರ ಜೊತೆಗೆ ಮಲೈಕಾ ಪ್ರೇಮ ಬಂಧನದಲ್ಲಿ ಬಂಧಿಯಾಗಿದ್ದಾರೆ.

  • 9 ತಿಂಗಳ ಬಳಿಕ ಕ್ಯಾಪ್ ತೆಗೆದ ಅರ್ಜುನ್ ಕಪೂರ್

    9 ತಿಂಗಳ ಬಳಿಕ ಕ್ಯಾಪ್ ತೆಗೆದ ಅರ್ಜುನ್ ಕಪೂರ್

    -ಖುಷಿಯಿಂದ ಕುಣಿದ ಮಲೈಕಾ

    ಮುಂಬೈ: ಬಾಲಿವುಡ್ ಲವರ್ ಬಾಯ್ ಪಟ್ಟದಲ್ಲಿರೋ ಅರ್ಜುನ್ ಕಪೂರ್ 9 ತಿಂಗಳ ಬಳಿಕ ತಮ್ಮ ತಲೆಯ ಮೇಲೆ ಟೋಪಿಯನ್ನು ತೆಗೆದಿದ್ದಾರೆ. ಕ್ಯಾಪ್ ತೆಗೆಯುತ್ತಿರುವ ಸಣ್ಣ ಝಲಕ್ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅರ್ಜುನ್ ಕಪೂರ್ ವಿಡಿಯೋ ನೋಡಿದ ಪ್ರೇಯಸಿ ಮಲೈಕಾ ಅರೋರಾ ಖುಷಿಯಿಂದ ಕುಣಿದಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಇನ್ಸ್ಟಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿರುವ ಅರ್ಜುನ್ ಕಪೂರ್, ಪಾಣಿಪತ್ ಸಿನಿಮಾಗೆ ಪೂರ್ಣವಾಗಿ ತಲೆ ಕೂದಲಿಗೆ ಕತ್ತರಿ ಹಾಕಲಾಗಿತ್ತು. ಸಿನಿಮಾಗಾಗಿ ಲುಕ್ ರಿವೀಲ್ ಗೊಳ್ಳದಂತೆ 2018 ನವೆಂಬರ್ ನಿಂದ ಕ್ಯಾಪ್ ಧರಿಸುತ್ತಾ ಬಂದಿದ್ದೇನೆ. ಇದೀಗ ಶೂಟಿಂಗ್ ಮುಕ್ತಾಯ ಹಂತಕ್ಕೆ ತಲುಪಿದೆ. ಹಾಗಾಗಿ ಕ್ಯಾಪ್ ರಿವೀಲ್ ಮಾಡುವ ದಿನ ಬಂದಿದೆ ಎಂದು ತಮ್ಮೆಲ್ಲ ಟೋಪಿಗಳನ್ನು ತೋರಿಸಿದ್ದಾರೆ. ಕೊನೆಗೆ ಕ್ಯಾಪ್ ತೆಗೆದಿದ್ದಾರೆ.

    https://www.instagram.com/p/B0X4s-Alc3F/

    ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ನಡುವಿನ ಪ್ರೀತಿಯ ವಿಚಾರ ಬಾಲಿವುಡ್‍ನ ಗಲ್ಲಿ ಗಲ್ಲಿಗೂ ಗೊತ್ತು. ಆದ್ರೆ ಇಂದಿಗೂ ಈ ಜೋಡಿ ಅಧಿಕೃತವಾಗಿ ತಮ್ಮ ವಿಚಾರವನ್ನು ತಿಳಿಸದೇ ಪರೋಕ್ಷವಾಗಿ ಹೇಳುತ್ತಾ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಒಬ್ಬರನ್ನೊಬ್ಬರ ಫೋಟೋಗಳಿಗೆ ಕಮೆಂಟ್ ಮಾಡೋದು, ಹುಟ್ಟುಹಬ್ಬಕ್ಕೆ ಶುಭಕೋರುವ ಮೂಲಕ ತಮ್ಮ ಅಭಿಮಾನಿಗಳಿಗೆ ತಮ್ಮ ಪ್ರೀತಿಯ ವಿಷಯವನ್ನು ಹೇಳುತ್ತಾ ಬಂದಿದ್ದಾರೆ.

    ಈ ಹಿಂದೆ ಮಲೈಕಾ ಅರೋರಾ, ನಾನು ನನಗಿಂತ ಚಿಕ್ಕ ವಯಸ್ಸಿನ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಮುಂದೆ ಮದುವೆಯಾಗುತ್ತೇನೆ. ಇದರಿಂದ ಯಾರಿಗಾದ್ರೂ ತೊಂದರೆ ಇದೆಯಾ? ಎಂದು ಖಾರವಾಗಿ ಹೇಳಿದ್ದರು.

    https://www.instagram.com/p/B0XvmF9FTVm/

  • ಅರ್ಜುನ್ ಜೊತೆಗಿನ ಸಂಬಂಧದ ಬಗ್ಗೆ ಅಧಿಕೃತವಾಗಿ ತಿಳಿಸಿದ ಮಲೈಕಾ

    ಅರ್ಜುನ್ ಜೊತೆಗಿನ ಸಂಬಂಧದ ಬಗ್ಗೆ ಅಧಿಕೃತವಾಗಿ ತಿಳಿಸಿದ ಮಲೈಕಾ

    ಮುಂಬೈ: ಬಾಲಿವುಡ್ ಬೆಡಗಿ ಮಲೈಕಾ ಅರೋರಾ ನಟ ಅರ್ಜುನ್ ಕಪೂರ್ ಅವರ ಜೊತೆಗಿನ ಸಂಬಂಧದ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

    ನಟ ಅರ್ಜುನ್ ಕಪೂರ್ ಬುಧವಾರ ತಮ್ಮ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಮಲೈಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅರ್ಜುನ್ ಜೊತೆಗಿರುವ ರೊಮ್ಯಾಂಟಿಕ್ ಫೋಟೋವನ್ನು ಹಂಚಿಕೊಂಡು ಹುಟ್ಟುಹಬ್ಬದ ಶುಭ ಕೋರಿದ್ದಾರೆ.

    ಮಲೈಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅರ್ಜುನ್ ಜೊತೆಗಿರುವ ಫೋಟೋ ಹಾಕಿ ಅದಕ್ಕೆ, “ಹುಟ್ಟುಹಬ್ಬದ ಶುಭಾಶಯಗಳು ನನ್ನ ಅದ್ಭುತ ಅರ್ಜುನ್ ಕಪೂರ್. ನಿನಗೆ ಯಾವಾಗಲೂ ಪ್ರೀತಿ ಹಾಗೂ ಖುಷಿ ಸಿಗಲಿ” ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.

     

    View this post on Instagram

     

    Happy bday my crazy,insanely funny n amazing @arjunkapoor … love n happiness always

    A post shared by Malaika Arora (@malaikaaroraofficial) on

    ಅರ್ಜುನ್ ಕಪೂರ್ ತಮ್ಮ ಹುಟ್ಟುಹಬ್ಬವನ್ನು ಮಲೈಕಾ ಜೊತೆ ನ್ಯೂಯಾರ್ಕ್ ನಲ್ಲಿ ಆಚರಿಸಿದ್ದಾರೆ. ಹುಟ್ಟುಹಬ್ಬ ಆಚರಿಸಲೆಂದೇ ಇಬ್ಬರು ಸೋಮವಾರ ರಾತ್ರಿ ನ್ಯೂಯಾರ್ಕ್‍ಗೆ ತಲುಪಿದ್ದರು. ಮಲೈಕಾ ನ್ಯೂಯಾರ್ಕ್ ನಲ್ಲಿ ಕಳೆದ ಕೆಲವು ಕ್ಷಣಗಳ ಫೋಟೋವನ್ನು ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

    ಕೆಲವು ದಿನಗಳಿಂದ ಅರ್ಜುನ್ ಕಪೂರ್ ಮತ್ತು 45 ವರ್ಷದ ಮಲೈಕಾ ಅರೋರಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಕಳೆದ ಎರಡು-ಮೂರು ವರ್ಷಗಳಿಂದ ಇಬ್ಬರ ಸಂಬಂಧದ ಬಗ್ಗೆ ಹಲವು ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತಿತ್ತು. ಮಾಧ್ಯಮಗಳ ಮುಂದೆ ಬಂದು ನಾವಿಬ್ಬರು ಒಳ್ಳೆ ಸ್ನೇಹಿತರು ಎಂದು ಕೂಡ ಹೇಳಿಕೊಂಡಿದ್ದರು. ಮಲೈಕಾಗೆ ಈಗಾಗಲೇ ಮದುವೆಯಾಗಿದ್ದು ತಮ್ಮ ಪತಿ ಅರ್ಬಾಜ್ ಖಾನ್ ಗೆ ವಿಚ್ಛೇಧನ ನೀಡಿ ತಮ್ಮ 16 ವರ್ಷದ ಮಗನೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ.