Tag: ಅರ್ಜುನ್ ಕಪೂರ್

  • ಸದ್ದಿಲ್ಲದೇ ಎಂಗೇಜ್‌ಮೆಂಟ್‌ಗೆ ಸಿದ್ಧರಾದ್ರಾ ಮಲೈಕಾ ಅರೋರಾ?

    ಸದ್ದಿಲ್ಲದೇ ಎಂಗೇಜ್‌ಮೆಂಟ್‌ಗೆ ಸಿದ್ಧರಾದ್ರಾ ಮಲೈಕಾ ಅರೋರಾ?

    ಬಾಲಿವುಡ್‌ನ(Bollywood) ಪ್ರೇಮ ಪಕ್ಷಿಗಳಾಗಿರುವ ಮಲೈಕಾ(Malaika Arora) ಮತ್ತು ಅರ್ಜುನ್ ಕಪೂರ್(Arjun Kapoor) ಇದೀಗ ಮತ್ತೆ ಹೊಸ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಸಾಕಷ್ಟು ವರ್ಷಗಳಿಂದ ಡೇಟಿಂಗ್‌ನಲ್ಲಿರುವ ಈ ಜೋಡಿ, ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಳ್ಳಲು ಸಜ್ಜಾಗಿದ್ದಾರಾ ಎಂಬ ಅನುಮಾನ ಅಭಿಮಾನಿಗಳ ವಲಯದಲ್ಲಿ ಸಖತ್ ಚರ್ಚೆ ನಡೆಯುತ್ತಿದೆ. ಮಲೈಕಾ ಅವರ ಸದ್ಯದ ಪೋಸ್ಟ್ ಟಾಕ್ ಆಫ್ ದಿ ಟೌನ್ ಆಗಿದೆ.

    ಅರ್ಜುನ್ ಮತ್ತು ಮಲೈಕಾ ಬಿಟೌನ್‌ನ ಬೆಸ್ಟ್ ಜೋಡಿಗಳಲ್ಲಿ ಒಬ್ಬರು. ಹೀಗೆ ಸಾಕಷ್ಟು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿರುವ ಈ ಜೋಡಿ ಇದೀಗ ತಮ್ಮ ಎಂಗೇಜ್‌ಮೆಂಟ್ ವಿಷ್ಯವಾಗಿ ಸದ್ದು ಮಾಡ್ತಿದ್ದಾರೆ. ಇದೀಗ ಮಲೈಕಾ ಐ ಸೆಡ್ ಯೆಸ್ ಎಂಬ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಗೆ ‘ಕಾಂತಾರ’ ಸಪ್ತಮಿ ಗೌಡ ನಾಯಕಿ

     

    View this post on Instagram

     

    A post shared by Malaika Arora (@malaikaaroraofficial)

    ಮಲೈಕಾ ಅರೋರಾ, ನಾಚಿಕೊಂಡಿರುವ ಚೆಂದದ ಫೋಟೋ ಜೊತೆ ಐ ಸೆಡ್ ಯೆಸ್ ಎಂಬ ಅಡಿಬರಹ ಕೊಟ್ಟಿದ್ದಾರೆ. ಈ ಪೋಸ್ಟ್‌ನಿಂ ಮಲೈಕಾ ಮತ್ತು ಅರ್ಜುನ್ ಜೋಡಿಯ ನಿಶ್ಚಿತಾರ್ಥಕ್ಕೆ ಸೈಲೆಂಟ್ ಆಗಿ ರೆಡಿಯಾದ್ರಾ ಎಂಬ ಪ್ರಶ್ನೆ ನೆಟ್ಟಿಗರಿಗೆ ಕಾಡುತ್ತಿದೆ. ಅದಕ್ಕೆ ಪೂರಕವಾಗಿ ಸಾಕಷ್ಟು ಸೆಲೆಬ್ರಿಟಿ ಸ್ನೇಹಿತರು ಕೂಡ ಶೂಭ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗರ್ಲ್‌ಫ್ರೆಂಡ್ ಮಲೈಕಾ ಜೊತೆ ಭರ್ಜರಿ ಸ್ಟೆಪ್ ಹಾಕಿದ ಅರ್ಜುನ್ ಕಪೂರ್

    ಗರ್ಲ್‌ಫ್ರೆಂಡ್ ಮಲೈಕಾ ಜೊತೆ ಭರ್ಜರಿ ಸ್ಟೆಪ್ ಹಾಕಿದ ಅರ್ಜುನ್ ಕಪೂರ್

    ಬಾಲಿವುಡ್‌ನ ಮುದ್ದಾದ ಜೋಡಿಗಳಲ್ಲಿ ಒಂದಾಗಿರುವ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಪಾರ್ಟಿವೊಂದರಲ್ಲಿ ಗರ್ಲ್‌ಫ್ರೆಂಡ್ ಮಲೈಕಾ ಜೊತೆ ಭರ್ಜರಿ ಹೆಜ್ಜೆ ಹಾಕಿ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾರೆ.

    ಅರ್ಜುನ್ ಕಪೂರ್ ಮತ್ತು ಮಲೈಕಾ ರಿಲೇಷನ್‌ಶಿಪ್ ವಿಚಾರ ಬಾಲಿವುಡ್‌ನಲ್ಲಿ ಗುಟ್ಟಾಗಿ ಉಳಿದಿಲ್ಲ. ಅದ್ಯಾವಾಗ ಈ ಜೋಡಿ ಮದುವೆಯ ಗುಡ್ ನ್ಯೂಸ್ ಕೊಡುತ್ತಾರೆ ಅಂತಾ ಫ್ಯಾನ್ಸ್ ಕಾಯ್ತಿದ್ದಾರೆ. ಇನ್ನು ಪಾರ್ಟಿವೊಂದರಲ್ಲಿ `ಚೈಯಾ ಚೈಯಾ’ ಹಾಡಿಗೆ ಜಬರ್‌ದಸ್ತ್ ಆಗಿ ಮಲೈಕಾ ಜತೆ ಅರ್ಜುನ್ ಹೆಜ್ಜೆ ಹಾಕಿದ್ದಾರೆ. ಈ ವೀಡಿಯೋ ವೈರಲ್ ಆಗೋದರ ಜೊತೆಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    `ಎಕ್ ವಿಲನ್ ರಿಟರ್ನ್ಸ್’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಅರ್ಜುನ್ ನಟನೆಯನ್ನ ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಈ ಚಿತ್ರದ ರಿಲೀಸ್ ನಂತರ ಗರ್ಲ್ಫ್ರೆಂಡ್ ಜತೆ ಅರ್ಜುನ್ ಫುಲ್ ಜಾಲಿ ಮೂಡ್‌ನಲ್ಲಿದ್ದಾರೆ. ಫ್ರೆಂಡ್ಸ್ ಜೊತೆ ಪಾರ್ಟಿ ಮಾಡುತ್ತಾ ಬಾಲಿವುಡ್‌ನ ಚೆಂದದ ಹಾಡುಗಳಿಗೆ ಸೂಪರ್ ಸ್ಟೆಪ್ಸ್ ಹಾಕುತ್ತಾ ಎಂಜಾಯ್ ಮಾಡಿದ್ದಾರೆ. ಇದನ್ನೂ ಓದಿ:ರಮ್ಯಾ ಮನೆಯಲ್ಲೇ ಕಥೆ ಹೇಳಿದ್ರಂತೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ : ಪದ್ಮಾವತಿ ಕಮ್ ಬ್ಯಾಕ್ ಕನ್ಫರ್ಮ್

     

    View this post on Instagram

     

    A post shared by Manav Manglani (@manav.manglani)

    ಒಟ್ನಲ್ಲಿ ನೆಚ್ಚಿನ ಜೋಡಿ ಅರ್ಜುನ್ ಮತ್ತು ಮಲೈಕಾ ಅರೋರಾ ಖುಷಿ ನೋಡುತ್ತಾ ಫ್ಯಾನ್ಸ್ ಖುಷಿಪಡ್ತಿದ್ದಾರೆ. ಅರ್ಜುನ್ ಕಪೂರ್ ಅವರ ಮುಂದಿನ ಸಿನಿಮಾಗಾಗಿ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿಂದಿ ಸಿನಿಮಾ ಬಾಯ್ಕಾಟ್: ಪ್ರೇಕ್ಷಕರನ್ನು ಬೆದರಿಸುತ್ತಿದ್ದಾರಂತೆ ನಟ ಅರ್ಜುನ್ ಕಪೂರ್

    ಹಿಂದಿ ಸಿನಿಮಾ ಬಾಯ್ಕಾಟ್: ಪ್ರೇಕ್ಷಕರನ್ನು ಬೆದರಿಸುತ್ತಿದ್ದಾರಂತೆ ನಟ ಅರ್ಜುನ್ ಕಪೂರ್

    ಬಾಲಿವುಡ್ ಸಿನಿಮಾಗಳ, ಅದರಲ್ಲೂ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಬಾಯ್ಕಾಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಒತ್ತಡ ಹಾಕಿದವರ ಮೇಲೆ ನಟ ಅರ್ಜುನ್ ಕಪೂರ್ ಗರಂ ಆಗಿದ್ದರು. ಇಂತಹ ಶಕ್ತಿಗಳನ್ನು ಬೆಳೆಯಲು ಬಿಡಬಾರದು, ಬೆಳೆಯುತ್ತಿರುವಾಗಲೇ ಕಿತ್ತು ಬೀಸಾಕಬೇಕು ಎಂದು ಹೇಳಿದ್ದರು. ಅರ್ಜುನ್ ಕಪೂರ್ ಈ ಹೇಳಿಕೆ ಭಾರೀ ಚರ್ಚೆಗೂ ಗ್ರಾಸವಾಗಿತ್ತು. ಹಾಗಾಗಿ ಬಿಜೆಪಿ ಮುಖಂಡರು ಅರ್ಜುನ್ ಮಾತಿಗೆ ತಮ್ಮದೇ ಆದ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.

    ಬಿ.ಜೆ.ಪಿ ಮುಖಂಡ, ಮಧ್ಯ ಪ್ರದೇಶದ ಗೃಹ ಸಚಿವ ಡಾ.ನರೋತ್ತಮ್ ಮಿಶ್ರಾ ಮಾತನಾಡಿ, ಬಾಲಿವುಡ್ ನಟ ಅರ್ಜುನ್ ಕಪೂರ್ ಪ್ರೇಕ್ಷಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಭಯ ಹುಟ್ಟಿಸುತ್ತಿದ್ದಾರೆ. ಯಾವ ಕಾರಣಕ್ಕೆ ಸಿನಿಮಾಗಳನ್ನು ಬಾಯ್ಕಾಟ್ ಮಾಡಲಾಗುತ್ತಿದೆ ಎನ್ನುವುದನ್ನು ಅರ್ಜುನ್ ಅರಿಯಲಿ ಎಂದು ಅವರು ಹೇಳಿಕೆ ನೀಡಿದ್ದಾರೆ. ಯಾವುದೇ ರೀತಿಯಲ್ಲಿ ನೀವು ಹೆದರಿಸಿದರೂ, ಪ್ರೇಕ್ಷಕರು ಹೆದರುತ್ತಾರೆ ಎಂಬ ತಪ್ಪು ಕಲ್ಪನೆ ಇದ್ದರೆ ಕೈ ಬಿಡಿ ಎಂದಿದ್ದಾರೆ ಮಿಶ್ರಾ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್ ಗುರೂಜಿ

    ಲಾಲ್ ಸಿಂಗ್ ಚಡ್ಡಾ ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳನ್ನು ಬಾಯ್ಕಾಟ್ ಮಾಡಬೇಕೆಂದು ಹಲವರು ಕರೆ ನೀಡಿದ್ದಾರೆ. ಅದರಲ್ಲೂ ಹಿಂದೂ ವಿರೋಧಿ ನಟ, ನಟಿಯರ ಹಾಗೂ ನಿರ್ದೇಶಕರ ಚಿತ್ರಗಳನ್ನು ನೋಡಬಾರದು ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿರುವ ಕುರಿತು ಅರ್ಜುನ್ ಕಪೂರ್ ಬೇಸರ ವ್ಯಕ್ತ ಪಡಿಸಿದ್ದರು. ಇಂತಹ ಶಕ್ತಿಗಳನ್ನು ತಡೆಯಬೇಕು ಎಂದು ಅವರು ಕರೆ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬಾಯ್ಕಾಟ್ ಟ್ರೆಂಡ್ ಬೆಳೆಯದಂತೆ ಹತ್ತಿಕ್ಕಬೇಕು : ನಟ ಅರ್ಜುನ್ ಕಪೂರ್

    ಬಾಯ್ಕಾಟ್ ಟ್ರೆಂಡ್ ಬೆಳೆಯದಂತೆ ಹತ್ತಿಕ್ಕಬೇಕು : ನಟ ಅರ್ಜುನ್ ಕಪೂರ್

    ಬಾಲಿವುಡ್ ಸಿನಿಮಾಗಳ ಬಗ್ಗೆ, ಅದರಲ್ಲೂ ಖಾನ್ ಕುಟುಂಬದ ಸಿನಿಮಾಗಳ ಬಗ್ಗೆ ವಿಪರೀತ ನೆಗೆಟಿವ್ ಪ್ರಚಾರ ಮಾಡಲಾಗುತ್ತಿದೆ. ಆಮೀರ್ ಖಾನ್ ನಟಿಸಿ, ನಿರ್ಮಾಣ ಮಾಡಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಯ್ಕಾಟಿಗೆ ಬಲಿಯಾಗಿದೆ. ಅಲ್ಲದೇ, ಇನ್ನೂ ಹಲವು ಸಿನಿಮಾಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಎದ್ದಿದೆ. ಇದರ ಬೆನ್ನಲ್ಲೆ ನಟ ಅರ್ಜುನ್ ಕಪೂರ್ ಈ ಕುರಿತು ಅಸಮಾಧಾನ ಹೊರಹಾಕಿದ್ದಾರೆ.

    ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಕರೀನಾ ಕಪೂರ್ ಕೂಡ ನಾಯಕಿಯಾಗಿ ನಟಿಸಿದ್ದಾರೆ. ಹೀಗಾಗಿ ಕರೀನಾ ಬೆನ್ನಿಗೆ ನಿಂತಿರುವ ಅರ್ಜುನ್ ಕಪೂರ್, ಬಾಯ್ಕಾಟ್ ಟ್ರೆಂಡ್ ಯಾರಿಗೂ ಒಳ್ಳೆಯದಲ್ಲ. ಇದರಿಂದ ಅದೆಷ್ಟು ಕುಟುಂಬಗಳ ನಾಶವಾಗುತ್ತವೆ ಎನ್ನುವ ಅರಿವು ಹೋರಾಟ ಮಾಡುತ್ತಿರುವವರಿಗೆ ಇಲ್ಲ. ಅಲ್ಲದೇ, ಇಂತಿಷ್ಟೇ ಜನರನ್ನೇ ಅವರು ಟಾರ್ಗೆಟ್ ಮಾಡುತ್ತಿದ್ದಾರೆ. ಹೀಗಾಗಿ ಇದನ್ನು ಚಿಗುರಿನಲ್ಲೇ ಚಿವುಟ ಬೇಕು ಎಂದು ಅರ್ಜುನ್ ಕಪೂರ್ ಹೇಳಿದ್ದಾರೆ.  ಇದನ್ನೂ ಓದಿ:ಶಿವಣ್ಣ -ಪ್ರಭುದೇವ ಹೊಸ ಪ್ರಾಜೆಕ್ಟ್‌ಗೆ ಈ ನಾಯಕಿಯರು ಫಿಕ್ಸ್

    ಆಮೀರ್ ಖಾನ್ ಸಿನಿಮಾ ಅಷ್ಟೇ ಅಲ್ಲ, ಇನ್ನೂ ಹಲವು ಸಿನಿಮಾಗಳಿಗೆ ಬಾಯ್ಕಾಟ್ ಬಿಸಿ ತಾಗಿದೆ. ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಚಿತ್ರಕ್ಕೂ ಬಾಯ್ಕಾಟ್ ಹೇಳಲಾಗಿತ್ತು. ಶಾರುಖ್ ಖಾನ್ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎಂಬ ಕೂಗು ಎದ್ದಿದೆ. ಹೀಗೆ ಆದರೆ, ಬಾಲಿವುಡ್ ಸಿನಿಮಾಗಳು ಸೋಲಿನಲ್ಲೇ ಸಾವನ್ನಪ್ಪಬೇಕಾಗುತ್ತವೆ. ಹಾಗಾಗಿ ಇದರ ವಿರುದ್ಧ ದೊಡ್ಡ ಮಟ್ಟದಲ್ಲೇ ಧ್ವನಿ ಎತ್ತಬೇಕು ಎಂದು ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೈ ಕಾಣುವಂತಹ ಮಿನಿ ಡ್ರೆಸ್‌ಗೆ 2 ಲಕ್ಷ ರೂ. ಕೊಟ್ರಾ ಮಲೈಕಾ ಅರೋರಾ!

    ಮೈ ಕಾಣುವಂತಹ ಮಿನಿ ಡ್ರೆಸ್‌ಗೆ 2 ಲಕ್ಷ ರೂ. ಕೊಟ್ರಾ ಮಲೈಕಾ ಅರೋರಾ!

    ಬಾಲಿವುಡ್ ಬ್ಯೂಟಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಡೇಟಿಂಗ್ ಮಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇತ್ತೀಚೆಗಷ್ಟೇ ಬಾಯ್‌ಫ್ರೆಂಡ್ ಜತೆ ಪಾರ್ಟಿಗೆ ಹೋಗುವಾಗ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ಮಲೈಕಾ, ಪಾರ್ಟಿಗೆ ಧರಿಸಿರುವ ದುಬಾರಿ ಡ್ರೆಸ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಈ ಡ್ರೆಸ್ ಬೆಲೆ ಕೇಳಿದ್ರೆ ನೀವು ಶಾಕ್ ಆಗುತ್ತೀರಾ.

     

    View this post on Instagram

     

    A post shared by Nevanta (@nevantamedia)

    ಕೆಲ ವರ್ಷಗಳಿಂದ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಡೇಟಿಂಗ್ ಮಾಡ್ತಿದ್ದಾರೆ. ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಯೂ ಬಿಟೌನ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈಗ ಮಲೈಕಾ ಪಾರ್ಟಿಗೆ ಧರಿಸಿರುವ ಡ್ರೆಸ್ ವಿಚಾರವಾಗಿ ಸೌಂಡ್ ಮಾಡ್ತಿದ್ದಾರೆ. ಪಾರ್ಟಿಗೆ ಹೋಗುವಾಗ ನೇರಳೆ ಬಣ್ಣದ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ದುಬಾರಿ ಡ್ರೆಸ್‌ನ ಬೆಲೆಯ ಕುರಿತು ಸಾಕಷ್ಟು ಚರ್ಚೆ ಕೂಡ ಆಗುತ್ತಿದೆ. ಇದನ್ನೂ ಓದಿ:Breaking- ಅಭಿಮಾನಿಗಳಿಗೆ ನಿವೇದಿತಾ ಗೌಡ ಗುಡ್ ನ್ಯೂಸ್

    ನೇರಳೆ ಬಣ್ಣದ ಡ್ರೆಸ್‌ನ ಅಸಲಿ ಬೆಲೆ 2 ಲಕ್ಷ ರೂಪಾಯಿ ಆಗಿದ್ದು, ಡ್ರೆಸ್ ಔಟ್ ಲುಕ್ ಜತೆ ಬೆಲೆ ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮಲೈಕಾ ಅರೋರಾ ಹೊಸ ಲುಕ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • 48ನೇ ವಯಸ್ಸಿನಲ್ಲೂ ಮೈ ಕಾಣುವ ಗೌನ್‌ನಲ್ಲಿ ಮಲೈಕಾ ಅರೋರಾ ಹಾಟ್‌ ಫೋಟೋಶೂಟ್

    48ನೇ ವಯಸ್ಸಿನಲ್ಲೂ ಮೈ ಕಾಣುವ ಗೌನ್‌ನಲ್ಲಿ ಮಲೈಕಾ ಅರೋರಾ ಹಾಟ್‌ ಫೋಟೋಶೂಟ್

    ಟಿ ಮಲೈಕಾ ಅರೋರಾ ಆಗಾಗ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡಿರುವ ಮಲೈಕಾ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ಈ ನಟಿಯ ಬೋಲ್ಡ್‌ ವಿಡಿಯೋ ಮತ್ತು ಫೋಟೋ ಸಖತ್‌ ವೈರಲ್‌ ಆಗುತ್ತಿದೆ.

     

    View this post on Instagram

     

    A post shared by Malaika Arora (@malaikaaroraofficial)

    ನಟಿ ಮಲೈಕಾ 48ನೇ ವಯಸ್ಸಿನಲ್ಲಿಯೂ ಸಿಕ್ಕಾಪಟ್ಟೆ ಹಾಟ್ ಆಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಮಲೈಕಾ, ಯುವ ನಾಯಕಿಯರಿಗೂ ಟಕ್ಕರ್ ಕೊಡ್ತಿದ್ದಾರೆ. ಸದಾ ಹಾಟ್ ಆಗಿ ಕಾಣಿಸಿಕೊಳ್ಳುವ ಮಲೈಕಾ, ಇದೀಗ ಹೊಸ ಫೋಟೋಶೂಟ್‌ನಲ್ಲಿ ತನ್ನ ಮೈ ಮಾಟ ಪ್ರದರ್ಶನ ಮಾಡಿದ್ದಾರೆ. ನಟಿಯ ಹೊಸ ಅವತಾರಕ್ಕೆ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಇದನ್ನೂ ಓದಿ:ಮಗಳು ಬಂದ ಮೇಲೆ ಜೀವನ ಬದಲಾಗಿದೆ: ನಿಕ್ ಜೋನಸ್

     

    View this post on Instagram

     

    A post shared by Malaika Arora (@malaikaaroraofficial)

    ಗೋಲ್ಡನ್ ಬಣ್ಣದ ಗೌನ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಹಾಟ್ ಆಗಿ ಪೋಸ್ ನೀಡಿದ್ದಾರೆ. ಮಲೈಕಾ ಬೋಲ್ಡ್ ಪೋಸ್ ಅಭಿಮಾನಿಗಳ ನಿದ್ದೆಗೆಡಿಸಿದೆ. ಫೋಟೋ ಮತ್ತು ವಿಡಿಯೋ ಶೇರ್ ಮಾಡಿ ʻಪ್ರತಿ ಕ್ಷಣ ಗೋಲ್ಡನ್ ಸಮಯʼ ಎಂದು ಬರೆದುಕೊಂಡಿದ್ದಾರೆ. ಇನ್ನು ಮಲೈಕಾ ಇತ್ತೀಚೆಗಷ್ಟೆ ಗೆಳೆಯ ಅರ್ಜುನ್ ಕಪೂರ್ ಜೊತೆ ಪ್ಯಾರಿಸ್‌ಗೆ ಹಾರಿದ್ದರು. ಅರ್ಜುನ್ ಕಪೂರ್ ಹುಟ್ಟುಹಬ್ಬದ ಸಂಭ್ರಮವನ್ನು ಮಲೈಕಾ ಪ್ಯಾರಿಸ್‌ನಲ್ಲಿ ಆಚರಿಸಿದ್ದರು. ಪ್ಯಾರಿಸ್‌ನಿಂದ ರೊಮ್ಯಾಂಟಿಕ್ ಫೋಟೋ ಶೇರ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ವಯಸ್ಸಿನ ಅಂತರಕ್ಕೆ ಮತ್ತೆ ಟ್ರೋಲ್ ಆದ ಅರ್ಜುನ್ ಮತ್ತು ಮಲೈಕಾ

    ವಯಸ್ಸಿನ ಅಂತರಕ್ಕೆ ಮತ್ತೆ ಟ್ರೋಲ್ ಆದ ಅರ್ಜುನ್ ಮತ್ತು ಮಲೈಕಾ

    ಬಾಲಿವುಡ್ ನಟ ಅರ್ಜುನ್ ತಮ್ಮ 37ನೇ ವರ್ಷದ ಹುಟ್ಟು ಹಬ್ಬವನ್ನು ಪ್ಯಾರೀಸ್ ನಲ್ಲಿ ಆಚರಿಸಿಕೊಂಡಿದ್ದಾರೆ. ಗೆಳತಿ ನಟಿ ಮಲೈಕಾ ಅರೋರಾ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಮತ್ತೆ ಟ್ರೋಲ್ ಆಗಿದೆ ಈ ಜೋಡಿ. ಅರ್ಜುನ್ ಮತ್ತು ಮಲೈಕಾ ಸುದ್ದಿಗೆ ಬಂದಾಗೆಲ್ಲ ಅವರ ನಡುವಿನ ವಯಸ್ಸಿನ ಅಂತರದ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಇದೀಗ ಮತ್ತೆ ಅದೇ ಸುದ್ದಿಯು ಟ್ರೋಲ್ ಆಗುತ್ತಿದೆ.

    ಅರ್ಜುನ್ ಕಪೂರ್ 37ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಗೆಳತಿ ಮಲೈಕಾಗೆ 48 ವರ್ಷ. ಈ ವಯಸ್ಸಿನ ಅಂತರವನ್ನಿಟ್ಟುಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಈ ಜೋಡಿ ಕಳೆದ ಹಲವು ವರ್ಷಗಳಿಂದಲೂ ರಿಲೇಷನ್ ಶಿಪ್ ನಲ್ಲಿದ್ದಾರೆ. ಹಾಗಾಗಿ ಇಂತಹ ಟ್ರೋಲ್ ಗಳನ್ನು ಅವರು ಹಲವು ಬಾರಿ ಎದುರಿಸಿದ್ದಾರೆ. ಅದಕ್ಕೆ ಪ್ರತ್ಯುತ್ತರವನ್ನೂ ಈ ಜೋಡಿ ಹಲವಾರು ಬಾರಿ ನೀಡಿದ್ದಾರೆ. ಇದನ್ನೂ ಓದಿ:ದುಬೈಗೆ ಹಾರಿದ ಸಮಂತಾ: ಸ್ನೇಹಿತೆಯರ ಜೊತೆ ನೈಟ್ ಔಟ್

    ಪ್ಯಾರಿಸ್ ನಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಅರ್ಜುನ್ ಗೆ ವಿಭಿನ್ನವಾಗಿಯೇ ಶುಭಾಶಯ ಕೋರಿದ್ದಾರೆ ಮಲೈಕಾ. ಅಲ್ಲದೇ, ಪ್ಯಾರಿಸ್ ಪ್ರವಾಸ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮುಂದಿನ ನಿನ್ನೆಲ್ಲ ಕನಸುಗಳು ನನಸಾಗಲಿ ಎಂದು ಶುಭ ಹಾರೈಸಿದ್ದಾರೆ. ಅರ್ಜುನ್ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಕೂಡ ಶುಭ ಹಾರೈಸಿದ್ದು, ಆದಷ್ಟು ಬೇಗ ಮದುವೆ ಮಾಡಿಕೊಳ್ಳುವಂತೆ ಸಲಹೆ ಕೂಡ ನೀಡಿದ್ದಾರೆ.

    Live Tv

  • ಹುಟ್ಟುಹಬ್ಬ ಆಚರಣೆಗೆ ಮಲೈಕಾ ಜೊತೆ ಪ್ಯಾರಿಸ್‌ಗೆ ಹಾರಿದ ಅರ್ಜುನ್ ಕಪೂರ್

    ಹುಟ್ಟುಹಬ್ಬ ಆಚರಣೆಗೆ ಮಲೈಕಾ ಜೊತೆ ಪ್ಯಾರಿಸ್‌ಗೆ ಹಾರಿದ ಅರ್ಜುನ್ ಕಪೂರ್

    ಬಾಲಿವುಡ್ ನಟ ಅರ್ಜುನ್ ಕಪೂರ್ ಹುಟ್ಟುಹಬ್ಬಕ್ಕೆ ಇನ್ನು ಎರಡೇ ದಿನ ಬಾಕಿಯಿದೆ. ಸೆಲೆಬ್ರೇಶನ್‌ಗಾಗಿ ಅರ್ಜುನ್, ಮಲೈಕಾ ಅರೋರಾ ಜೋಡಿ ವಿದೇಶಕ್ಕೆ ಹಾರಿದೆ. ಏರ್ಪೋಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಈ ಜೋಡಿಯ ಫೋಟೋಗಳು ವೈರಲ್ ಆಗಿದೆ. ಫೋಟೋ ನೋಡಿರೋ ಫ್ಯಾನ್ಸ್ ಮದುವೆ ಯಾವಾಗ ಅಂತಿದ್ದಾರೆ.

    ನಟಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಪ್ರೀತಿಯ ವಿಚಾರ ಗುಟ್ಟಾಗಿ ಉಳಿದಿಲ್ಲ. ಅದು ಯಾವತ್ತೋ ಜಗತ್ ಜಾಹೀತಾರಾಗಿದೆ. ಮಲೈಕಾ ಪತಿ ಅರ್ಬಾಜ್ ಖಾನ್‌ಗೆ ವಿಚ್ಛೇದನ ನೀಡಿ, ಖಾನ್ ಕುಟುಂಬದಿಂದ ಹೊರ ಬಂದ ಮೇಲೆ ಬಳಿಕ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ನಲ್ಲಿದ್ದಾರೆ. ಇಬ್ಬರು ಸದಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ ಮದುವೆ ಬಗ್ಗೆ ಕೇಳಿದರೇ ಯಾವುದೇ ಪ್ರತಿಕ್ರಿಯೆ ನೀಡದೆ ನುಣುಚಿಕೊಳ್ಳುತ್ತಾರೆ. ಇದನ್ನೂ ಓದಿ: ಮಗುವಿನೊಂದಿಗೆ ಅಣ್ಣಮ್ಮ ದೇವಸ್ಥಾನಕ್ಕೆ ಪ್ರಣಿತಾ ಸುಭಾಷ್ ಭೇಟಿ

    ಮಗುವಿನೊಂದಿಗೆ ಅಣ್ಣಮ್ಮ ದೇವಸ್ಥಾನಕ್ಕೆ ಪ್ರಣಿತಾ ಸುಭಾಷ್ ಭೇಟಿ

    View this post on Instagram

     

    A post shared by Viral Bhayani (@viralbhayani)

    ಇದೀಗ ಈ ಜೋಡಿ ಪ್ಯಾರಿಸ್‌ಗೆ ಹಾರಿದೆ. ಏರ್ಪೋಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಈ ಜೋಡಿಯ ಫೋಟೋಗಳು ವೈರಲ್ ಆಗಿದೆ. ಅಂದಹಾಗೆ ಈ ಜೋಡಿ ದಿಢೀರ್ ವಿದೇಶಕ್ಕೆ ಹಾರಲು ಕಾರಣ ಅರ್ಜುನ್ ಕಪೂರ್ ಹುಟ್ಟುಹಬ್ಬದ ಸಂಭ್ರಮಾಚರಣೆಗೆ. ಗೆಳೆಯನಿಗೆ ಸ್ಪೆಷಲ್ ಆಗಿ ವಿಶ್ ಮಾಡಲು ಬರ್ತಡೇ ಸಂಭ್ರಮವನ್ನ ಮಲೈಕಾ ಜೋರಾಗಿಯೇ ಪ್ಲ್ಯಾನ್‌ ಮಾಡಿದ್ದಾರೆ. ಅದಕ್ಕಾಗಿ ಈ ಜೋಡಿ ಹಕ್ಕಿಗಳು ಫಾರಿನ್ ಟ್ರಿಪ್ ಹೊರಟಿದ್ದಾರೆ.

    Live Tv

  • ಅರ್ಜುನ್ ಕಪೂರ್ -ಮಲೈಕಾ ಅರೋರಾ ಮ್ಯಾರೇಜ್ ಡೇಟ್ ಫಿಕ್ಸ್

    ಅರ್ಜುನ್ ಕಪೂರ್ -ಮಲೈಕಾ ಅರೋರಾ ಮ್ಯಾರೇಜ್ ಡೇಟ್ ಫಿಕ್ಸ್

    ಬಾಲಿವುಡ್‌ನ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿಯ ನಂತರ ಮತ್ತೊಂದು ಸ್ಟಾರ್ ಜೋಡಿ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಹೀಗೊಂದು ಸುದ್ದಿ ಬಾಲಿವುಡ್ ಗಲ್ಲಿನಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿದೆ.

    ರಣ್‌ಬೀರ್ ಮತ್ತ ಆಲಿಯಾ ಮದುವೆಯ ನಂತರ ಬಿಟೌನ್ ಲವ್ ಬರ್ಡ್ಸ್ ಎಂದೇ ಫೇಮಸ್ ಆಗಿರುವ ಜೋಡಿ ಅರ್ಜುನ್ ಕಪೂರ್ ಮತ್ತು ಮಲೈಕಾ ಮದುವೆ ಯಾವಾಗ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಇದೇ ವರ್ಷದ ಕೊನೆಗೆ ಹಸೆಮಣೆ ಏರಲು ಈ ಜೋಡಿ ರೆಡಿಯಾಗಿದೆ.

    ಕಪೂರ್ ಕುಟುಂಬದ ಕುಡಿ ಅರ್ಜುನ್ ಮತ್ತು ಮಲೈಕಾ ತಮ್ಮ ಹಲವು ವರ್ಷಗಳ ಪ್ರೀತಿಗೆ ಮದುವೆ ಎಂಬ ಮೂರಕ್ಷರದ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಇದೇ ವರ್ಷ ನವೆಂಬರ್ ಕೊನೆಯಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ. ಯಾವುದೇ ಆಡಂಬರವಿಲ್ಲದೇ ಸರಳವಾಗಿ ಮದುವೆಯಾಗಲು ಈ ಜೋಡಿ ಯೋಚಿಸಿದೆಯಂತೆ. ಇದನ್ನೂ ಓದಿ: ಅಟ್ಲೀ ಸಂಭಾವನೆ ಕೇಳಿ ಅಲ್ಲು ಅರ್ಜುನ್ ಶಾಕ್

    ಸಾಕಷ್ಟು ವರ್ಷಗಳಿಂದ ಡೇಟಿಂಗ್‌ನಲ್ಲಿರುವ ಅರ್ಜುನ್ ಮತ್ತು ಮಲೈಕಾ ಜೋಡಿಯ ಮದುವ ಸುದ್ದಿ ಮೂಲಕ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನೆಚ್ಚಿನ ಜೋಡಿಯ ಸಖತ್ ಸುದ್ದಿ ಕೇಳಿ ಫ್ಯಾನ್ಸ್ ಥ್ರೀಲ್ ಆಗಿದ್ದಾರೆ.

  • ಭವಿಷ್ಯದಲ್ಲಿ ಅರ್ಜುನ್ ಕಪೂರ್‌ ಕೊನೆ ಬಾಯ್‌ ಫ್ರೆಂಡ್‌: ಮಲೈಕಾ ಅರೋರಾ

    ಭವಿಷ್ಯದಲ್ಲಿ ಅರ್ಜುನ್ ಕಪೂರ್‌ ಕೊನೆ ಬಾಯ್‌ ಫ್ರೆಂಡ್‌: ಮಲೈಕಾ ಅರೋರಾ

    ಬಿಟೌನ್ ಅಂಗಳದ ಅಚ್ಚು ಮೆಚ್ಚಿನ ಜೋಡಿಗಳಲ್ಲಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಕೂಡ ಒಬ್ಬರು. ಸಾಕಷ್ಟು ವರ್ಷಗಳಿಂದ ಲಿಪ್ ಇನ್ ರಿಲೇಷನ್ ಶಿಪ್‌ನಲ್ಲಿರೋ ಈ ಜೋಡಿ, ಭವಿಷ್ಯದಲ್ಲಿ ಒಟ್ಟಿಗೆ ಇರುವ ಆಲೋಚನೆ ಕುರಿತು ನಟಿ ಮಲೈಕಾ ಹೇಳಿಕೊಂಡಿದ್ದಾರೆ.

    ನಟಿ ಮಲೈಕಾ ಅರ್ಜುನ್ ಕಪೂರ್‌ಗಿಂತ ವಯಸ್ಸಿನಲ್ಲಿ ದೊಡ್ಡವರು, ಇವರ ಲವ್ವಿ ಡವ್ವಿ ನೋಡಿರೋ ನೆಟ್ಟಿಗರು ಅದೆಷ್ಟೋ ಬಾರಿ ಇವರಿಬ್ಬರದ್ದು ಟೈಮ್ ಪಾಸ್ ಲವ್ ಎಂದು ಹೇಳಿದ್ದು ಇದೆ. ಆದರೆ ಈಗ ಮಲೈಕಾ ತಮ್ಮ ಪ್ರೀತಿಯ ಜೀವನದ ಕುರಿತು ಮನಬಿಚ್ಚಿ ಸಂದರ್ಶನವೊಂದರಲ್ಲಿ ಮಾತಾನಾಡಿದ್ದಾರೆ.

    ಪ್ರತಿಯೊಂದು ರಿಲೇಶನ್‌ಶಿಷ್‌ನಲ್ಲಿಯೂ ತನ್ನದೇ ಆದ ರೀತಿ ನೀತಿಗಳಿರುತ್ತದೆ. ನಾವು ಒಟ್ಟಿಗೆ ಭವಿಷ್ಯವನ್ನು ಕಳೆಯುವ ವಿಚಾರ ನಮಗೆಷ್ಟೇ ತಿಳಿದಿರಬೇಕು ಎಂದು ಇನಿಯನ ಜತೆ ಭವಿಷ್ಯವನ್ನು ಒಟ್ಟಿಗೆ ಕಳೆಯುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಇವರಿಬ್ಬರ ಬ್ರೇಕ್ ಅಪ್ ವಿಚಾರ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ಮಲೈಕಾರ ಈ ಮಾತು ಬ್ರೇಕ್ ಅಪ್ ಕಥೆಗೂ ಅಂತ್ಯ ಹಾಡಿದೆ.

    ನಾವು ಬಹಳಷ್ಟು ವಿಷಯಗಳನ್ನು ಒಟ್ಟಿಗೆ ಚರ್ಚಿಸುತ್ತೇವೆ. ನಾವು ಒಂದೇ ರೀತಿಯ ಆಲೋಚನೆಯನ್ನು ಹೊಂದಿದ್ದೇವೆ ಮತ್ತು ಒಬ್ಬರನೊಬ್ಬರು ತುಂಬಾ ಇಷ್ಟಪಡುತ್ತೇವೆ. ನಾವು ಭವಿಷ್ಯದಲ್ಲಿ ಒಟ್ಟಿಗೆ ಇರಲು ಬಯಸುತ್ತೇವೆ. ಸಂಬಂಧದಲ್ಲಿ ಯಾವಾಗೂ ನಾವು ಸೇಫ್ ಮತ್ತು ಪಾಸಿಟಿವ್ ಎಂಬ ಭಾವನೆ ಇರಬೇಕು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

     

    View this post on Instagram

     

    A post shared by Malaika Arora (@malaikaaroraofficial)

    ಕಾರ್ ಆಕ್ಸಿಡೆಂಟ್‌ನಿಂದ ಚೇತರಿಕೊಂಡಿರುವ ಮಲೈಕಾ, ಅರ್ಜುನ್ ಕಪೂರ್ ಜತೆಗಿನ ರಿಲೇಷನ್‌ಶಿಪ್ ಬಗ್ಗೆ ಮುಕ್ತವಾಗಿ ಮಾತಾನಾಡಿದ್ದಾರೆ. ಮಲೈಕಾ ಮತ್ತು ಅರ್ಜುನ್ ಕಪೂರ್ ಜತೆಗಿನ ರಿಲೇಷನ್‌ಶಿಷ್ ದೃಢಿಕರಿಸಿದ ನಂತರ ವಯಸ್ಸಿನ ಅಂತರದ ವಿಚಾರವಾಗಿ ಇವರಿಬ್ಬರು ಟ್ರೋಲ್ ಆಗಿದ್ದರು. ಇವು ಯಾವುದರ ಕುರಿತು ತಲೆಕೆಡೆಸಿಕೊಳ್ಳದೇ ಭವಿಷ್ಯದಲ್ಲಿ ಒಟ್ಟಿಗೆ ಇರುವ ಆಲೋಚನೆ ಕುರಿತು ನಟಿ ಮಲೈಕಾ ಮನಬಿಚ್ಚಿ ಮಾತಾನಾಡಿದ್ದಾರೆ.