Tag: ಅರ್ಜುನ್ ಕಪೂರ್

  • ಮದ್ವೆ ಬಗ್ಗೆ ಮಾತಾಡಿ, ವಿಮಾನ ಏರಿದ ಮಲೈಕಾ ಅರೋರಾ

    ಮದ್ವೆ ಬಗ್ಗೆ ಮಾತಾಡಿ, ವಿಮಾನ ಏರಿದ ಮಲೈಕಾ ಅರೋರಾ

    ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ಮತ್ತು ನಟ ಅರ್ಜುನ್ ಕಪೂರ್ (Arjun Kapoor) ವಯಸ್ಸಿನ ಅಂತರದ ನಡುವೆಯೂ ಬಿಂದಾಸ್ ಆಗಿ ಬದುಕುತ್ತಿದ್ದಾರೆ. ಮದುವೆ ಆಗದೇ ಇದ್ದರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೇ, ಒಟ್ಟೊಟ್ಟಿಗೆ ಅನೇಕ ದೇಶಗಳನ್ನು ಸುತ್ತಿದ್ದಾರೆ. ಇದೀಗ ಇಬ್ಬರೂ ಮದುವೆ ಆಗುವ ಆಲೋಚನೆ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

    ಮೊನ್ನೆಯಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಲೈಕಾ, ‘ಈಗಾಗಲೇ ನಾನು ಪ್ರಿ ಹನಿಮೂನ್ ಹಂತ ತಲುಪಿದ್ದೇವೆ. ಮದುವೆ (Marriage) ಅನ್ನೋದು ವೈಯಕ್ತಿಕವಾದದ್ದು. ನಮಗೂ ಮದುವೆ ಆಗಬೇಕು ಅಂತ ಅನಿಸಿದೆ’ ಎಂದು ಹೇಳಿದ್ದರು. ಈ ಮಾತು ಸಖತ್ ವೈರಲ್ ಕೂಡ ಆಗಿತ್ತು. ಪ್ರಿ ಹನಿಮೂನ್ ಮುಗಿಸಿದವರು ಮದುವೆ ಹಂತಕ್ಕೂ ಬಂದಿದ್ದಾರೆ ಎಂದು ಕಾಲೆಳೆದಿದ್ದರು. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಉತ್ತರಾ ಬಾಕರ್ ವಿಧಿವಶ

    ಇತ್ತೀಚಿನ ದಿನಗಳಲ್ಲಿ ಮಲೈಕಾ ಮತ್ತು ಅರ್ಜುನ್ ಬಗ್ಗೆ ಸಾಕಷ್ಟು ಸುದ್ದಿಗಳು ಕೇಳಿ ಬಂದವು. ಮದುವೆ ಆಗುತ್ತಾರೋ ಅಥವಾ ಇಲ್ಲವೋ  ಎನ್ನುವ ಕುರಿತಂತೆ ಚರ್ಚೆಯೂ ಆಗಿತ್ತು. ಮಲೈಕಾ ಅವರೇ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇದೀಗ ಇಬ್ಬರೂ ವಿಮಾನ ಏರಿದ್ದಾರೆ. ಹಾಗಾಗಿ ಮದುವೆ ಶಾಪಿಂಗ್ ಮಾಡುವುದಕ್ಕಾಗಿ ಒಟ್ಟಾಗಿ ಹೋಗಿದ್ದಾರಾ ಎನ್ನುವ ಅನುಮಾನ ಮೂಡಿದೆ.

  • ಕ್ರಿಕೆಟರ್ ಆಗುವ ಕನಸು ಕಂಡ ಬಡ ಹುಡುಗಿಗೆ ನಟ ಅರ್ಜುನ್ ಕಪೂರ್ ಸಾಥ್

    ಕ್ರಿಕೆಟರ್ ಆಗುವ ಕನಸು ಕಂಡ ಬಡ ಹುಡುಗಿಗೆ ನಟ ಅರ್ಜುನ್ ಕಪೂರ್ ಸಾಥ್

    ಬಾಲಿವುಡ್ (Bollywood) ನಟ ಅರ್ಜುನ್ ಕಪೂರ್ (Arjun Kapoor) ಅವರು ತಮ್ಮ ಸಿನಿಮಾಗಳಿಗಿಂತ ಮಲೈಕಾ ಅರೋರಾ ಜೊತೆಗಿನ ರಿಲೇಷನ್‌ಶಿಪ್ ವಿಷ್ಯ ಹೆಚ್ಚೆಚ್ಚು ಸುದ್ದಿಯಾಗಿದ್ದಾರೆ. ಸಿನಿಮಾ ಕುಟುಂಬವಾಗಿದ್ರು ಕೂಡ ಅರ್ಜುನ್‌ಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಆದರೆ ಈ ನಡುವೆ ಅಭಿಮಾನಿಗಳು ಒಂದು ಕಾರ್ಯವನ್ನು ಅರ್ಜುನ್ ಕಪೂರ್ ಮಾಡಿದ್ದಾರೆ. ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿರುವ ಅನಿಶಾ ರಾವತ್ (Anisha Rawat) ಎಂಬ ಬಡ ಹುಡುಗಿಗೆ ಸಹಾಯ ಮಾಡಲು ಅರ್ಜುನ್ ಕಪೂರ್ ಮುಂದೆ ಬಂದಿದ್ದಾರೆ.

    ಕ್ರಿಕೆಟ್ ಕ್ಷೇತ್ರದಲ್ಲಿ ಹುಡುಗರು ಮಾತ್ರವಲ್ಲ, ಹುಡುಗಿಯರು ಕೂಡ ಗುರುತಿಸಿಕೊಳ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿರುವ ಲಕ್ಷಾಂತರ ಹುಡುಗಿಯರು ಇದ್ದಾರೆ. ಆದರೆ ಎಲ್ಲರಿಗೂ ಸೂಕ್ತ ತರಬೇತಿ ಸಿಗುವುದಿಲ್ಲ. ಅದನ್ನು ಅರ್ಥ ಮಾಡಿಕೊಂಡಿರುವ ಅರ್ಜುನ್ ಕಪೂರ್ ಅವರು ಅನಿಶಾ ರಾವತ್‌ಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಅನಿಶಾಗೆ ಈಗ 11 ವರ್ಷ ವಯಸ್ಸು. ಆಕೆಗೆ 18ರ ಪ್ರಾಯ ಆಗುವ ತನಕ ಕ್ರಿಕೆಟ್ ತರಬೇತಿಗೆ ಬೇಕಾಗುವ ಎಲ್ಲ ಸಾಮಾಗ್ರಿಗಳನ್ನು ಅರ್ಜುನ್ ಕಪೂರ್ ಪೂರೈಸಲಿದ್ದಾರೆ. ಇದನ್ನೂ ಓದಿ: ಬೋಲ್ಡ್ ಅವತಾರ ತಾಳಿದ ‘ಕಬ್ಜ’ ಸುಂದರಿ ಶ್ರೀಯಾ

     

    View this post on Instagram

     

    A post shared by Viral Bhayani (@viralbhayani)

    ಪ್ರಸಿದ್ಧ ಕ್ರಿಕೆಟರ್ ಆಗಬೇಕು ಎಂಬುದು ಅನಿಶಾ ಆಸೆ. ಅದಕ್ಕಾಗಿ ಪ್ರತಿ ದಿನ 80 ಕಿಲೋ ಮೀಟರ್ ಪ್ರಯಾಣ ಮಾಡಿ ಆಕೆ ತರಬೇತಿ ಪಡೆಯುತ್ತಿದ್ದಾಳೆ. ಅವಳ ಕನಸನ್ನು ನನಸು ಮಾಡಲು ಆಕೆಯ ತಂದೆ ಕೂಡ ಸಕಲ ಸಹಕಾರ ನೀಡುತ್ತಿದ್ದಾರೆ. ಆದರೆ ಬೇಕಾಗಿರುವ ಸಾಮಾಗ್ರಿಗಳನ್ನು ಒದಗಿಸಲು ಅವರಿಗೆ ಕಷ್ಟ ಆಗುತ್ತಿದೆ. ಈಗ ಅರ್ಜುನ್ ಕಪೂರ್ ಸಹಾಯ ಹಸ್ತ ಚಾಚಿರುವುದರಿಂದ ಅನಿಶಾ ಕನಸಿಗೆ ಸಾಥ್ ಸಿಕ್ಕಿದೆ. ಅನಿಶಾ 10ನೇ ವಯಸ್ಸಿನಲ್ಲಿ ಆಕೆ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಪರವಾಗಿ ಅಂಡರ್-15 ಮಹಿಳಾ ತಂಡದಲ್ಲಿ ಕ್ರಿಕೆಟ್ ಆಡಿದ್ದಾಳೆ. ಮೂರು ಹಾಫ್ ಸೆಂಚುರಿ ಬಾರಿಸಿದ್ದಾಳೆ. ಪ್ರಸ್ತುತ ಎಂಐಜಿ ಕ್ಲಬ್ ಪರವಾಗಿ ಓಪನಿಂಗ್ ಬ್ಯಾಟರ್ ಆಗಿ ಆಡುತ್ತಿದ್ದಾಳೆ. ಒಟ್ನಲ್ಲಿ ಅರ್ಜುನ್ ಕಪೂರ್ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

  • ಸೆಕ್ಸ್ ಸಿಂಬಲ್ ಅಂತ ಕರೆದರೆ ಬೇಸರವಿಲ್ಲ ಎಂದ ನಟಿ ಮಲೈಕಾ

    ಸೆಕ್ಸ್ ಸಿಂಬಲ್ ಅಂತ ಕರೆದರೆ ಬೇಸರವಿಲ್ಲ ಎಂದ ನಟಿ ಮಲೈಕಾ

    ಬಾಲಿವುಡ್ (Bollywood ) ನಟಿ ಮಲೈಕಾ ಆರೋರ (Malaika Arora) ಬೋಲ್ಡ್ ಮಾತ್ರಗಳಿಂದಲೇ ಬಿಟೌನ್ ನಲ್ಲಿ ಫೇಮಸ್ ಆದವರು. ಅವರು ಧರಿಸುವ ಬಟ್ಟೆ ಕೂಡ ಅಷ್ಟೇ ಬೋಲ್ಡ್ ಆಗಿಯೇ ಇರುತ್ತದೆ. ಐವತ್ತರ ವಯಸ್ಸಿನಲ್ಲೂ ಮಲೈಕಾ ಸಖತ್ ಹಾಟ್ ಹಾಟ್ ಆಗಿ ಕಾಣುತ್ತಾರೆ. ಈ ನಟಿಗೆ 22ರ ವಯಸ್ಸಿನ ಮಗ ಕೂಡ ಇದ್ದಾನೆ. ಆದರೂ, ತುಂಡುಡುಗೆ ತೊಡುವುದನ್ನು ಮಾತ್ರ ನಿಲ್ಲಿಸಿಲ್ಲ.

    ಯಾವುದೇ ಕಾರ್ಯಕ್ರಮವಿರಲಿ, ಜಿಮ್ ಗೆ ಹೋಗಲಿ, ಮನೆಯಿಂದ ಆಚೆ ಹೆಜ್ಜೆ ಇಟ್ಟರೆ ಸಾಕು ಅವರು ಹಾಕುವ ಬಟ್ಟೆಗಳು ಯಾವತ್ತಿಗೂ ತುಂಡು ತುಂಡು. ಈ ಕಾರಣಕ್ಕಾಗಿಯೇ ಮಲೈಕಾ ಅವರನ್ನು ಸೆಕ್ಸ್ ಸಿಂಬಲ್ ಗೆ ಹೋಲಿಸಿ ಟ್ರೋಲ್ ಮಾಡಲಾಗುತ್ತದೆ. ಈ ನಡೆ ಅವರಿಗೆ ಯಾವುದೇ ಕಾರಣಕ್ಕೂ ಬೇಸರ ತರಿಸಿಲ್ಲವಂತೆ. ಅವರೇ ಸಂದರ್ಶನದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್‌ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ

    ನಾನು ಧರಿಸುವ ಬಟ್ಟೆಗಳ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ನನ್ನನ್ನು ಸೆಕ್ಸ್ ಸಿಂಬಲ್ ಅಂತ ಕರೆದರೂ ಕೋಪ ಬರುವುದಿಲ್ಲ. ಒಂದು ರೀತಿಯಲ್ಲಿ ನಾನು ಅದನ್ನು ಪಾಸಿಟಿವ್ ಆಗಿಯೇ ತಗೆದುಕೊಳ್ಳುತ್ತೇನೆ. ಇಂಡಸ್ಟ್ರಿಯಲ್ಲಿ ನಾನು ಮೂವತ್ತು ವರ್ಷಗಳಿಂದ ಇದ್ದೇನೆ ಅಂದರೆ, ಅದು ಕೇವಲ ಸೌಂದರ್ಯದಿಂದ ಮಾತ್ರವಲ್ಲ ಎಂದು ಹೇಳುವ ಮೂಲಕ ಕಾಸ್ಟ್ಯೂಮ್‍ ಬಗೆಗಿನ ತಕರಾರಿಗೆ ತೆರೆ ಎಳೆದಿದ್ದಾರೆ.

    ಈ ಹಿಂದೆ ಮದುವೆ ವಿಚಾರದಲ್ಲೂ ಇಂಥದ್ದೇ ಬೋಲ್ಡ್ ಮಾತುಗಳನ್ನು ಆಡಿದ್ದರು. ಡಿವೋರ್ಸ್ ನಂತರ ತಮಗಿಂತಲೂ ಚಿಕ್ಕವಯಸ್ಸಿನ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಅರ್ಜುನ್ ಜೊತೆ ಅನೇಕ ದೇಶಗಳನ್ನು ಸುತ್ತಿದ್ದಾರೆ. ಈ ವಿಷಯದಲ್ಲಿ ಅವರಿಗೆ ಯಾವುದೇ ವಿಷಾದವಿಲ್ಲ ಎಂದು ಅವರು ಮಾತನಾಡಿದ್ದಾರೆ.

  • ಉರ್ಫಿ ಜೊತೆ ಫೋಟೋಗೆ ಪೋಸ್ ಕೊಟ್ಟ ಅರ್ಜುನ್ ಕಪೂರ್

    ಉರ್ಫಿ ಜೊತೆ ಫೋಟೋಗೆ ಪೋಸ್ ಕೊಟ್ಟ ಅರ್ಜುನ್ ಕಪೂರ್

    ಬಾಲಿವುಡ್ (Bollywood) ಖ್ಯಾತ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಉರ್ಫಿ ಜಾವೇದ್ (Urfi Javed) ಕಾಣಿಸಿಕೊಂಡ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅರ್ಜುನ್ ಕಪೂರ್ ಜೊತೆ ಉರ್ಫಿ ಫೋಟೋವೊಂದನ್ನು ತಗೆಸಿಕೊಳ್ಳಲು ಏನೆಲ್ಲ ಸಾಹಸ  ಮಾಡಿದಳು ಎನ್ನುವ ಸಂಗತಿ ಆ ವಿಡಿಯೋದಲ್ಲಿದೆ. ಉರ್ಫಿ ಜೊತೆಗಿನ ಫೋಟೋ ಅಂದರೆ ಸಾಮಾನ್ಯವಾಗಿ ಎಲ್ಲರೂ ಭಯ ಬೀಳುತ್ತಾರೆ. ಆದರೆ, ಅರ್ಜುನ್ ಆ ರೀತಿ ಮಾಡಿಲ್ಲ ಎನ್ನುವುದೇ ಸಮಾಧಾನದ ಸಂಗತಿ.

    ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಉರ್ಫಿ ಜಾವೇದ್ ಮತ್ತು ಅರ್ಜುನ್ ಕಪೂರ್ ಜೊತೆಯಾಗಿ ಬಂದಿದ್ದರು. ಆ ವೇಳೆಯಲ್ಲಿ ಮಾಧ್ಯಮದ ಕ್ಯಾಮೆರಾಗಳು ಅವರಿಬ್ಬರನ್ನೂ ಒಟ್ಟಿಗೆ ಸೆರೆ ಹಿಡಿಯಲು ಬಯಸಿದ್ದವು. ಹಾಗಾಗಿ ಒಟ್ಟಿಗೆ ಇಬ್ಬರೂ ಪೋಸ್ ಕೊಡಲು ಸಾಧ್ಯವಾ? ಎಂದು ಅರ್ಜುನ್ ನನ್ನು ಕೇಳಲಾಯಿತು. ಅಲ್ಲದೇ, ಉರ್ಫಿ ಕೂಡ ಒಂದು ಫೋಟೋಗಾಗಿ ಅರ್ಜುನ್ ಕಪೂರ್ ಗೆ ವಿನಂತಿಸಿದರು. ಕೂಡಲೇ ಅರ್ಜುನ್ ಒಪ್ಪಿಕೊಂಡರು. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ

    ಬಿಳಿಬಣ್ಣದ ಉಡುಗೆ ತೊಟ್ಟಿದ್ದ ಉರ್ಫಿ ತುಸು ಆತಂಕದಿಂದಲೇ ಅರ್ಜುನ್ ಬಳಿ ಬಂದರು. ಅರ್ಜುನ್ ಖುಷಿಯಲ್ಲೇ ಉರ್ಫಿ ಜೊತೆಗಿನ ಫೋಟೋಗೆ ನಿಂತರು. ಅರ್ಜುನ್ ಅವರ ನಡೆಗೆ ಉರ್ಫಿ ಸಂಭ್ರಮಿಸಿದರು. ಫೋಟೋ ನೀಡಿ ಹಗ್ ಕೂಡ ಮಾಡಿದರು. ನಂತರ ಉರ್ಫಿ ಖುಷಿಯಿಂದಲೇ ಅರ್ಜುನ್ ಬಗ್ಗೆ ಹೊಗಳಿದ್ದಾರೆ. ಇದೊಂದು ಮರೆಯಲಾರದ ಗಳಿಗೆ ಎಂದು ಮಾತನಾಡಿದ್ದಾರೆ.

    ಸಾಮಾನ್ಯವಾಗಿ ಉರ್ಫಿ ಜೊತೆಗೆ ಕಾಣಿಸಿಕೊಳ್ಳಲು ಯಾರೂ ಬಯಸುವುದಿಲ್ಲ. ಅವರ ಕಾಸ್ಟ್ಯೂಮ್ ವಿಚಾರವಾಗಿ ದೂರುಗಳು ದಾಖಲಾಗಿವೆ. ಅಲ್ಲದೇ, ಉರ್ಫಿ ಜಗಳಗಂಟಿ. ಈ ಎಲ್ಲ ಕಾರಣದಿಂದಾಗಿ ದೂರ ಇರಲು ಬಯಸುತ್ತಾರೆ. ಆದರೆ, ಇದೆಲ್ಲವೂ ಗೊತ್ತಿರುವ ಅರ್ಜುನ್ ಮಾತ್ರ, ಉರ್ಫಿಯ ಆಸೆಯನ್ನು ಪೂರೈಸುವ ಮೂಲಕ ಭಿನ್ನವಾಗಿ ನಿಂತಿದ್ದಾರೆ.

  • ಮಗನಿಗಾಗಿ ಮತ್ತೆ ಒಂದಾದ್ರಾ ಮಲೈಕಾ-ಅರ್ಬಾಜ್? ಮಾಜಿ ಗಂಡನನ್ನು ತಬ್ಬಿಕೊಂಡ ನಟಿ

    ಮಗನಿಗಾಗಿ ಮತ್ತೆ ಒಂದಾದ್ರಾ ಮಲೈಕಾ-ಅರ್ಬಾಜ್? ಮಾಜಿ ಗಂಡನನ್ನು ತಬ್ಬಿಕೊಂಡ ನಟಿ

    ಬಾಲಿವುಡ್ (Bollywood) ನಟ ಅರ್ಬಾಜ್ ಖಾನ್ (Arbaaz Khan) ಮತ್ತು ಮಲೈಕಾ ಅರೋರಾ (Malaika Arora) ಮತ್ತೆ ಸುದ್ದಿಯಲ್ಲಿದ್ದಾರೆ. ದಾರಿ ಮಧ್ಯೆ ಮಾಜಿ ಪತಿಯನ್ನ ಮಲೈಕಾ ಅರೋರಾ ತಬ್ಬಿಕೊಂಡಿದ್ದಾರೆ. ಈ ಕುರಿತ ವೀಡಿಯೋ ನೋಡಿ ಇವರಿಬ್ಬರು ಒಂದಾದ್ರಾ ಅಂತಾ ನೆಟ್ಟಿಗರು ಕನ್ಪ್ಯೂಸ್ ಆಗಿದ್ದಾರೆ.

    ಪ್ರೀತಿಸಿ ಮದುವೆಯಾಗಿದ್ದ ಮಲೈಕಾ ಅರೋರಾ ಮತ್ತು ಅರ್ಬಾಜ್ ಜೋಡಿ ಹಲವು ವರ್ಷಗಳ ಹಿಂದೆ ಡಿವೋರ್ಸ್ ಪಡೆದು ದೂರಾಗಿದ್ದರು. ಆದರೆ ತಮ್ಮ ಮಗನಿಗಾಗಿ ಪೋಷಕರಾಗಿ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಾರೆ. ಇದೀಗ ವೈರಲ್ ಆಗಿರುವ ವೀಡಿಯೋನೇ ಸಾಕ್ಷಿ. ಅಮೆರಿಕಾದಲ್ಲಿ ಶಿಕ್ಷಣ ಪಡೆಯುತ್ತಿರುವ ಅರ್ಹಾನ್, ಮುಂಬೈನ ವಿಮಾನ ನಿಲ್ದಾಣಕ್ಕೆ ಬಂದಾಗ ಪಾಲಕರಾಗಿ ಒಟ್ಟಿಗೆ ಬಂದು ಮಗನನ್ನ ಬರಮಾಡಿಕೊಂಡರು. ಈಗ ಮತ್ತೆ ದೂರದ ದೇಶಕ್ಕೆ ಕಳುಹಿಸುವಾಗ ಜೊತೆಯಾಗಿ ಹೋಗಿದ್ದಾರೆ. ಆಗ ಅರ್ಬಾಜ್ ಮತ್ತು ಮಲೈಕಾ ತಬ್ಬಿಕೊಂಡಿದ್ದಾರೆ. ಇದನ್ನೂ ಓದಿ: ರಮ್ಯಾ ವಿರುದ್ಧ ಮತ್ತೆ ಆರೋಪಗಳ ಸುರಿಮಳೆಗೈದ ನಟ ನರೇಶ್

     

    View this post on Instagram

     

    A post shared by Viral Bhayani (@viralbhayani)

    ಹಾಗಾಗಿ ವೀಡಿಯೋ ಈಗ ಅನೇಕರ ಮನಮುಟ್ಟಿದೆ. ಇದಕ್ಕೆ ಪ್ರಭುದ್ಧತೆ ಎನ್ನುವುದು ಅಂತ ವೀಡಿಯೋಗೆ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವರಿಗೆ ಡಿವೋರ್ಸ್ (Divorce) ಆಗಿದೆ. ಇಬ್ಬರೂ ತಮ್ಮ ತಮ್ಮ ಬದುಕಿನ ದಾರಿಯಲ್ಲಿ ಮುಂದೆ ಸಾಗಿದ್ದಾರೆ. ಆದರೂ ಕೂಡ ಮಗನ ಸಲುವಾಗಿ ಅವರು ಒಂದಾಗುತ್ತಾರೆ. ಅಗತ್ಯ ಇದ್ದಾಗಲೆಲ್ಲ ಮಗನಿಗಾಗಿ ಜೊತೆಯಾಗುತ್ತಾರೆ. ಯಾರು ಏನೇ ಹೇಳಬಹುದು ಮಗನಿಗಾಗಿ ಇವರಿಬ್ಬರು ಉತ್ತಮ ಪೋಷಕರು ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್ ಅವರು ಕಿತ್ತಾಡಿಕೊಂಡಿಲ್ಲ. ಇಬ್ಬರು ಗೌರವಯುತವಾಗಿ ನಡೆದುಕೊಳ್ಳುವುದನ್ನು ಇವರನ್ನು ನೋಡಿ ಕಲಿಯಬೇಕು ಎಂದು ಹಲವು ಅಭಿಮಾನಿಗಳು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಅರ್ಬಾಜ್ ಅವರಿಂದ ದೂರಾದ ಬಳಿಕ ಮಲೈಕಾ ಅರ್ಜುನ್ ಕಪೂರ್ (Arjun Kapoor) ಜೊತೆ ಎಂಗೇಜ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಯ್ ಫ್ರೆಂಡ್ ಗೆ ಕಿಸ್ ಕೊಟ್ಟು ನ್ಯೂ ಯಿಯರ್ ಬರಮಾಡಿಕೊಂಡ ಸಿಲೆಬ್ರಿಟಿಗಳು

    ಬಾಯ್ ಫ್ರೆಂಡ್ ಗೆ ಕಿಸ್ ಕೊಟ್ಟು ನ್ಯೂ ಯಿಯರ್ ಬರಮಾಡಿಕೊಂಡ ಸಿಲೆಬ್ರಿಟಿಗಳು

    ಮೊನ್ನೆ ಮೊನ್ನೆಯಷ್ಟೇ ಪವಿತ್ರಾ ಲೋಕೇಶ್ ಅವರಿಗೆ ಟಾಲಿವುಡ್ ನಟ ನರೇಶ್ ಮುತ್ತಿಡುವ ಮೂಲಕ ಮದುವೆ ವಿಷಯವನ್ನು ಬಹಿರಂಗಪಡಿಸಿದ್ದರು. ನಮ್ಮಿಬ್ಬರ ಮಧ್ಯ ಏನೂ ಇಲ್ಲ, ನಾವು ಕೇವಲ ವೃತ್ತಿ ಬಂಧುಗಳು ಎನ್ನುತ್ತಿದ್ದ ಈ ಜೋಡಿ ಕಿಸ್ ಮಾಡುವ ಮೂಲಕ ಮದುವೆ ವಿಷಯ ಮಾತ್ರವಲ್ಲ, ಹೊಸ ವರ್ಷವನ್ನೂ ಬರಮಾಡಿಕೊಂಡಿದ್ದರು. ಈ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಅಂತೆಯೇ ಬಾಲಿವುಡ್ ನಲ್ಲೂ ಮತ್ತೊಂದು ಜೋಡಿ ಹೀಗೆಯೇ ಹೊಸ ವರ್ಷವನ್ನು ಸ್ವಾಗತಿಸಿದೆ.

    ಬಾಲಿವುಡ್ ನಟ ಅರ್ಜುನ್ ಕಪೂರ್ ಮತ್ತು ಬಾಲಿವುಡ್ ನಟಿ ಮಲೈಕಾ ಅರೋರ್ ಇಬ್ಬರೂ ಡೇಟಿಂಗ್ ಮಾಡುತ್ತಿರುವುದು ಹೊಸದೇನೂ ಅಲ್ಲ. ಅನೇಕ ಸಲ ವಿದೇಶಕ್ಕೂ ಈ ಜೋಡಿ ಹೋಗಿ ಬಂದಿದೆ. ಒಟ್ಟೊಟ್ಟಿಗೆ ಅನೇಕ ಪಾರ್ಟಿಗಳನ್ನೂ ಮಾಡಿದ್ದಾರೆ. ಮದುವೆ ವಿಚಾರದಲ್ಲಿ ಮುಂದೂಡುತ್ತಲೇ ಬಂದಿರುವ ಮಲೈಕಾ, ತಮ್ಮ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಗೆ ಮುತ್ತಿಡುವ ಮೂಲಕ ನ್ಯೂ ಯಿಯರ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಆ ಫೋಟೋವೊಂದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಮಲೈಕಾ ಡಿವೋರ್ಸ್ ಆದ ನಂತರ ತಮಗಿಂತ ಚಿಕ್ಕ ವಯಸ್ಸಿನ ಅರ್ಜುನ್ ಕಪೂರ್ ಜೊತೆ ಡೇಟ್ ಮಾಡುತ್ತಿದ್ದಾರೆ. ಆಳೆತ್ತೆರದ ಮಗನನ್ನು ಹೊಂದಿರುವ ಮಲೈಕಾ ಈ ಹೊತ್ತಿಗೂ ವಿಶೇಷ ಕಾಸ್ಟ್ಯೂಮ್ ಮತ್ತು ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುವುದನ್ನು ಬಿಟ್ಟಿಲ್ಲ. ಈ ವಿಚಾರವಾಗಿ ಅವರು ಹಲವಾರು ಬಾರಿ ಟ್ರೋಲ್ ಕೂಡ ಆಗಿದ್ದಾರೆ. ಇಂದು ಕಿಸ್ ಕೊಟ್ಟಿರುವ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಅರ್ಬಾಜ್ ಖಾನ್ ಜೊತೆಗಿನ ಡಿವೋರ್ಸ್‌ ಬಗ್ಗೆ ಮಾತನಾಡಿ ಮಲೈಕಾ ಅರೋರಾ ಕಣ್ಣೀರು

    ಅರ್ಬಾಜ್ ಖಾನ್ ಜೊತೆಗಿನ ಡಿವೋರ್ಸ್‌ ಬಗ್ಗೆ ಮಾತನಾಡಿ ಮಲೈಕಾ ಅರೋರಾ ಕಣ್ಣೀರು

    ಬಾಲಿವುಡ್ ನಟಿ ಮಲೈಕಾ ಅರೋರಾ,(Malaika Arora) ಅರ್ಜುನ್ ಕಪೂರ್ (Arjun Kapoor) ಜೊತೆಗಿನ ಡೇಟಿಂಗ್, ಮದುವೆಯ ವಿಷ್ಯವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಪ್ರೆಗ್ನೆನ್ಸಿ ವದಂತಿಗೆ ಖಡಕ್ ಆಗಿ ಉತ್ತರ ಕೊಟ್ಟ ಬೆನ್ನಲ್ಲೇ ಕಾರ್ಯಕ್ರಮವೊಂದರಲ್ಲಿ ಅರ್ಬಾಜ್ ಖಾನ್ (Arbaaz Khan) ಜೊತೆಗಿನ ಡಿವೋರ್ಸ್ ಬಗ್ಗೆ ನೆನೆದು ಕಣ್ಣೀರಿಟ್ಟಿದ್ದಾರೆ.

    ಸಲ್ಮಾನ್ ಖಾನ್ (Salman Khan) ಸಹೋದರ ಅರ್ಬಾಜ್ ಜೊತೆಗಿನ ದಾಂಪತ್ಯ ಜೀವನಕ್ಕೆ ಮಲೈಕಾ ಅಂತ್ಯ ಹಾಡಿದ ಮೇಲೆ ಸಾಕಷ್ಟು ವರ್ಷಗಳಿಂದ ಅರ್ಜುನ್ ಕಪೂರ್ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಇದೀಗ ಒಟಿಟಿಯಲ್ಲಿ `ಮೂವಿಂಗ್ ವಿತ್ ಮಲೈಕಾ'(Moving With Malaika) ಎಂಬ ಶೋ ಮೂಲಕ ಮಲೈಕಾ ಬರುತ್ತಿದ್ದಾರೆ. ಈ ವೇಳೆ ನಟಿ ಪಾಸ್ಟ್ ಲೈಫ್ ಬಗ್ಗೆ ನಟಿ ಮಾತನಾಡಿದ್ದಾರೆ. ಫರ್ಹಾ ಖಾನ್ ಜೊತೆ ನಡೆದ ಸಂವಾದದಲ್ಲಿ ಮಲೈಕಾ ತನ್ನ ಜೀವನದ ಬಗ್ಗೆ ಮಾತನಾಡಿದ್ದಾರೆ. ಅರ್ಬಾಜ್ ಖಾನ್ ಅವರಿಂದ ವಿಚ್ಛೇದನ ಪಡೆದ ಬಗ್ಗೆಯೂ ಮಾತನಾಡಿದ್ದಾರೆ. ಈ ವೇಳೆ ಮಲೈಕಾ ಕಣ್ಣೀರಿಟ್ಟರು. ಮಲೈಕಾ ಬೆಸ್ಟ್ ಫ್ರೆಂಡ್ ಕರೀನಾ ಕಪೂರ್ ಕೂಡ ಮಾತನಾಡಿ ಮಲೈಕಾರನ್ನು ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ಬ್ಯಾನ್ ಆಕ್ರೋಶಕ್ಕೆ ಡೋಂಟ್ ಕೇರ್, ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ರಶ್ಮಿಕಾ

     

    View this post on Instagram

     

    A post shared by Malaika Arora (@malaikaaroraofficial)

    ಲೈಫ್‌ನಲ್ಲಿ ನಾನು ಮುಂದೆ ಹೋಗಿದ್ದೇನೆ, ನನ್ನ ಎಕ್ಸ್ ಕೂಡ ಮುಂದೆ ಸಾಗಿದ್ದಾರೆ. ಆದರೆ ನೀವು ಯಾವಾಗ ಮುಂದೆ ಸಾಗುತ್ತೀರಿ ಎಂದು ಮಲೈಕಾ ಕೇಳಿದ್ದಾರೆ. ಮತ್ತೊಂದು ದೃಶ್ಯದಲ್ಲಿ, ಮಲೈಕಾ ತನ್ನ ಜೀವನದ ನಿರ್ಧಾರಗಳ ಬಗ್ಗೆ ಮಾತನಾಡುವಾಗ ಕಣ್ಣೀರು ಹಾಕಿದರು. ನನ್ನ ಜೀವನದಲ್ಲಿ ನಾನು ಮಾಡಿದ ಪ್ರತಿಯೊಂದು ನಿರ್ಧಾರವು ಸಂಪೂರ್ಣವಾಗಿ ಸರಿಯಾಗಿದೆ. ನಾನು ಈಗ ಸಂತೋಷವಾಗಿದ್ದೇನೆ ಎಂದು ಹೇಳಿ ಭಾವುಕರಾದರು. ಫರ್ಹಾ ಖಾನ್ ಸಮಾಧಾನ ಪಡಿಸದರು. ಅಯ್ಯೋ, ನೀನು ಅಳುತ್ತಿರುವಾಗಲೂ ಸುಂದರವಾಗಿ ಕಾಣುತ್ತೀಯ ಫರ್ಹಾ ತಮಾಷೆ ಮಾಡಿದರು.

    ಇನ್ನೂ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮದುವೆಗೂ ಮುನ್ನ ಮಲೈಕಾ ಪ್ರೆಗ್ನೆಂಟ್: ಬೆಚ್ಚಿದ ಬಿಟೌನ್

    ಮದುವೆಗೂ ಮುನ್ನ ಮಲೈಕಾ ಪ್ರೆಗ್ನೆಂಟ್: ಬೆಚ್ಚಿದ ಬಿಟೌನ್

    ಬಾಲಿವುಡ್ ನಟಿ ಮಲೈಕಾ ಅರೋರಾ ಅಚ್ಚರಿಯ ಸುದ್ದಿಯೊಂದನ್ನು ನೀಡಿದ್ದಾರೆ. ಮದುವೆಯಾಗದೇ ಮಗು ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯ ಮೂಲಕ ಬಿಟೌನ್‍ ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ. ಇದು ನಿಜವಾಗಿದ್ದರೆ ಅರೋರಾಗೆ ಇದು ಎರಡನೇ ಮಗುವಾಗಿದೆ. ಮೊನ್ನೆ ಮೊನ್ನೆಯಷ್ಟೇ ಮಲೈಕಾ, ‘ನಾನು ಎಸ್ ಅಂದೆ’ ಎಂದು ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಅವರ ಮದುವೆಗೆ ಸಂಬಂಧಿಸಿದ್ದು ಎಂದು ಹೇಳಲಾಗಿತ್ತು.

    ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಹಲವು ವರ್ಷಗಳಿಂದ ಡೇಟ್ ಮಾಡುತ್ತಿದ್ದಾರೆ. ಒಟ್ಟಿಗೆ ಹಲವಾರು ಪ್ರವಾಸಗಳನ್ನೂ ಮಾಡಿದ್ದಾರೆ. ಒಂದೇ ಮನೆಯಲ್ಲೇ ವಾಸವಿದ್ದಾರೆ ಎನ್ನುವ ಮಾತೂ ಇದೆ. ಇತ್ತೀಚೆಗಷ್ಟೇ ಈ ಜೋಡಿ ವಿದೇಶ ಪ್ರವಾಸದಲ್ಲಿತ್ತು. ಅಲ್ಲಿಂದಲೇ ‘ನಾನು ಎಸ್ ಅಂದೆ’ ಎನ್ನುವ ಪೋಸ್ಟ್ ಅನ್ನು ಮಲೈಕಾ ಮಾಡಿದ್ದರು. ಹಾಗಾಗಿ ಈ ಜೋಡಿ ಸದ್ಯದಲ್ಲೇ ಮದುವೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಪ್ರೆಗ್ನೆಂಟ್ ವಿಚಾರಕ್ಕೆ ಅವರು ಹಾಗೆ ಪೋಸ್ಟ್ ಮಾಡಿದರಾ ಅನ್ನುವ ಚರ್ಚೆ ನಡೆದಿದೆ. ಇದನ್ನೂ ಓದಿ: ಪ್ರತಿಷ್ಠಿತ ಆಭರಣ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾ ಔಟ್

    ಅರ್ಜುನ್ ಕಪೂರ್ ಜೊತೆಗಿನ ಡೇಟಿಂಗ್ ಗೂ ಮುನ್ನ ಮಲೈಕಾ ಅವರು ಅರ್ಬಾಜ್ ಖಾನ್ ಜೊತೆ ವಿವಾಹ ಮಾಡಿಕೊಂಡಿದ್ದರು. ಈ ಜೋಡಿ ಈಗಾಗಲೇ ಇಪ್ಪತ್ತರ ವಯಸ್ಸಿನ ಒಂದು ಗಂಡು ಮಗ ಕೂಡ ಇದ್ದಾನೆ. ಅರ್ಬಾಜ್ ಖಾನ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡ ನಂತರ  ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಮಲೈಕಾ ಪ್ರೆಗ್ನೆಂಟ್ ಆಗಿರುವುದು ನಿಜವಾದರೆ, ಮಲೈಕಾ ಜೀವನಕ್ಕೆ ಬಂದ ಎರಡನೇ ಮಗು ಇದಾಗಲಿದೆ.

    ಮದುವೆಯ ಸುದ್ದಿ ಕೊಟ್ಟಿದ್ದ ಮಲೈಕಾ ಮತ್ತು ಅರ್ಜುನ್, ಮದುವೆಗೂ ಮುನ್ನ ಇಂಥದ್ದೊಂದು ನಿರ್ಧಾರ ತಗೆದುಕೊಂಡಿದ್ದಾರಾ ಅಥವಾ ಇದು ಗಾಸಿಪ್ ಇರಬಹುದಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಸುದ್ದಿಯಂತೂ ಭಾರಿ ಸದ್ದು ಮಾಡುತ್ತಿರುವುದು ಸುಳ್ಳಲ್ಲ. ಈ ವಿಚಾರವಾಗಿ ಅವರೇ ಸ್ಪಷ್ಟನೆ ಕೊಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಮಲೈಕಾ ಅರೋರಾ

    ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಮಲೈಕಾ ಅರೋರಾ

    ಬಾಲಿವುಡ್ ನಟಿ ಮಲೈಕಾ ಅರೋರಾ(Malaika Arora) ತಮ್ಮ ಫ್ಯಾನ್ಸ್‌ಗೆ ಡಬಲ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅರ್ಜುನ್ ಕಪೂರ್ (Arjun Kapoor) ಮತ್ತು ಮಲೈಕಾ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಮಲೈಕಾ ಪ್ರೆಗ್ನೆನ್ಸಿ (Pregnant) ಸುದ್ದಿಯೊಂದು ಸಖತ್ ಚರ್ಚೆಯಾಗುತ್ತಿದೆ.

    ಅರ್ಜುನ್ ಕಪೂರ್ ಮತ್ತು ಮಲೈಕಾ ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ. ಅದರ ಪ್ರತಿಫಲವಾಗಿಯೇ ಇದೀಗ ನಟಿ ಪ್ರಗ್ನೆಂಟ್ ಆಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇತ್ತೀಚೆಗಷ್ಟೇ ಈ ಜೋಡಿ ಲಂಡನ್‌ಗೆ ಹೋಗಿದ್ದರು. ಈ ವೇಳೆ ತಮ್ಮ ಆಪ್ತರಿಗೆ ತಮ್ಮ ಪ್ರೆಗ್ನೆನ್ಸಿ ವಿಚಾರವನ್ನ ಬಿಚ್ಚಿಟ್ಟಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಬ್ಯಾನ್ ಆಕ್ರೋಶದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ರಶ್ಮಿಕಾ ಮಂದಣ್ಣ

    ಇನ್ನೊಂದು ಕಡೆ ನಟಿ ಮಲೈಕಾ ಹೊಸ ರಿಯಾಲಿಟಿ ಶೋನ ನಿರೂಪಣೆಯ ಜವಬ್ದಾರಿ ಹೊತ್ತಿದ್ದಾರೆ. `ಮೂವಿಂಗ್ ಇನ್ ವಿತ್ ಮಲೈಕಾ’ ಶೋ ಮೂಲಕ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಇದರ ಜೊತೆ ಮಲೈಕಾ ಅವರ ಮಗ ಅರ್ಹಾನ್ ಖಾನ್ ಕೂಡ ಚಿತ್ರರಂಗಕ್ಕೆ ಲಗ್ಗೆ ಇಡಲು ಸಕಲ ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಬ್ಯಾನ್ ಆಕ್ರೋಶದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ರಶ್ಮಿಕಾ ಮಂದಣ್ಣ

    ಅಷ್ಟಕ್ಕೂ ಈ ಪ್ರೆಗ್ನೆನ್ಸಿ ಸುದ್ದಿ ನಿಜಾನಾ ಅಥವಾ ಗಾಸಿಪ್‌ ಎಂಬುದಕ್ಕೆ ಮಲೈಕಾ ಅವರು ಅಧಿಕೃತ ಮಾಹಿತಿ ತಿಳಿಸುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೊಂದು ಮದುವೆಗೆ ಒಪ್ಕೊಂಡ್ರಾ ಮಲೈಕಾ?: ಯಸ್ ಅಂದೆ ಅಂತ ಪೋಸ್ಟ್ ಹಾಕಿದ ನಟಿ

    ಮತ್ತೊಂದು ಮದುವೆಗೆ ಒಪ್ಕೊಂಡ್ರಾ ಮಲೈಕಾ?: ಯಸ್ ಅಂದೆ ಅಂತ ಪೋಸ್ಟ್ ಹಾಕಿದ ನಟಿ

    ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ಸೆಕ್ಸಿ ಆಗಿರುವಂತಹ ವಿಶೇಷ ಫೋಟೋವೊಂದನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಫೋಟೋದ ಜೊತೆ ಹಾಕಿರುವ ಕ್ಯಾಪ್ಷನ್ ಕೂಡ ನಾನಾ ಚರ್ಚೆಗೆ ಕಾರಣವಾಗಿದ್ದು, ಡಿಸೆಂಬರ್ ಹೊತ್ತಿಗೆ ಇವರು ಎರಡನೇ ಮದುವೆ ಆಗಲಿದ್ದಾರಾ ಎನ್ನುವ ಸುದ್ದಿಯು ದಟ್ಟವಾಗಿದೆ. ಕಳೆದ ಐದಾರು ತಿಂಗಳಿಂದ ಇವರ ಮದುವೆ ವಿಚಾರ ಹರಿದಾಡುತ್ತಿದ್ದು, ಇದೀಗ ಅದನ್ನು ಅಧಿಕೃತಗೊಳಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

    ನಾಚಿಕೊಳ್ಳುವ ಫೋಟೊದ ಜೊತೆಗೆ ‘ನಾನು ಯಸ್ ಅಂದೆ’ ಎಂದು ಅವರು ಬರೆದುಕೊಂಡಿದ್ದಾರೆ. ಹಾಗಾಗಿ ಮದುವೆಗೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ತಮಗಿಂತ ಹತ್ತು ವರ್ಷ ಚಿಕ್ಕ ವಯಸ್ಸಿನ ಅರ್ಜುನ್ ಕಪೂರ್ (Arjun Kapoor)  ಜೊತೆ ಮಲೈಕಾ ಡೇಟಿಂಗ್ ಮಾಡುತ್ತಿದ್ದು, ಅವರನ್ನೇ ಮದುವೆ ಆಗಲಿದ್ದಾರೆ. ಅರ್ಜುನ್ ಮತ್ತು ಮಲೈಕಾ ಈಗಾಗಲೇ ಒಂದೇ ಮನೆಯಲ್ಲೇ ವಾಸಿಸುತ್ತಿದ್ದು, ಮದುವೆ ಎಂಬ ಮುದ್ರೆಯಷ್ಟೇ ಬೀಳಬೇಕಿದೆ. ಇದನ್ನೂ ಓದಿ:ಮುತ್ತೆತ್ತರಾಯನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್

    1998ರಲ್ಲಿ ಸಲ್ಮಾನ್ ಖಾನ್ ಸಹೋದರ  ಅರ್ಬಾಜ್ ಖಾನ್ (Arbaaz Khan) ಅವರನ್ನು ಮದುವೆ ಆಗಿದ್ದ ಮಲೈಕಾ, ಆನಂತರ ಅವರಿಂದ ವಿಚ್ಚೇದನೆ ಪಡೆದರು. ಕೆಲ ವರ್ಷಗಳ ಕಾಲ ಒಂಟಿಯಾಗಿಯೇ ಇದ್ದರು. ಆನಂತರ  ಅರ್ಜುನ್ ಕಪೂರ್ ಜೊತೆ ಡೇಟಿಂಗ್ ನಲ್ಲಿ ತೊಡಗಿದರು. ಅರ್ಬಾಜ್ ಮತ್ತು ಮಲೈಕಾಗೆ ಓರ್ವ ಪುತ್ರನಿದ್ದು, ಮಗ ಬಂದಾಗ ಇಬ್ಬರೂ ವಿಮಾನ ನಿಲ್ದಾಣಕ್ಕೆ ಹೋಗಿ ಮಗನನ್ನು ವಿದೇಶಕ್ಕೆ ಕಳುಹಿಸಿಯೂ ಬಂದಿದ್ದರು.

    ಅಂದುಕೊಂಡಂತೆ ಎಲ್ಲ ನಡೆದರೆ, ಈ ವರ್ಷ ಡಿಸೆಂಬರ್ ಒಳಗೆ ಅರ್ಜುನ್ ಕಪೂರ್ ಮತ್ತು ಮಲೈಕೆ ವಿವಾಹವಾಗಲಿದ್ದಾರೆ. ಆಪ್ತರಷ್ಟೇ ಈ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಅರ್ಜುನ್ ಕಪೂರ್ ಕುಟುಂಬಕ್ಕೂ ವಿಷಯ ಮುಟ್ಟಿಸಿದ್ದು, ಮದುವೆಗೆ ಮಲೈಕೆ ‘ಓಕೆ’ ಎಂದಿದ್ದಾರೆ ಎನ್ನುವುದು ತಾಜಾ ಸುದ್ದಿ. ಅದನ್ನೇ ಇನ್ಸ್ಟಾದಲ್ಲಿ ಮಲೈಕೆ ಪರೋಕ್ಷವಾಗಿ ಹಂಚಿಕೊಂಡಿದ್ದಾರೆ ಎನ್ನುತ್ತಿದೆ ಬಿಟೌನ್.

    Live Tv
    [brid partner=56869869 player=32851 video=960834 autoplay=true]