Tag: ಅರೆಬೆತ್ತಲೆ

  • ಆರೋಪಿಯನ್ನು ಅರೆಬೆತ್ತಲೆಯಾಗಿ ಠಾಣೆಗೆ ಕರೆತಂದ ಪೊಲೀಸರು

    ಆರೋಪಿಯನ್ನು ಅರೆಬೆತ್ತಲೆಯಾಗಿ ಠಾಣೆಗೆ ಕರೆತಂದ ಪೊಲೀಸರು

    ಚಿತ್ರದುರ್ಗ: ಆರೋಪಿಯನ್ನು ಅರೆಬೆತ್ತಲೆಯಾಗಿ ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಈ ಘಟನೆ ನಡೆದಿದೆ. ನಾಯಕನಹಟ್ಟಿ ಗ್ರಾಮದ ವಿಗ್ರಹ ವ್ಯಾಪಾರಿ ವೇಣುಗೋಪಾಲ್ ಬಂಧಿತ ಆರೋಪಿ. ಈತ ಪಕ್ಕದ ಮನೆಯವರ ಜೊತೆ ಗಲಾಟೆ ಮಾಡಿದ್ದ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿತ್ತು.

    ಈ ಹಿನ್ನೆಲೆಯಲ್ಲಿ ವೇಣುಗೋಪಾಲ್ ಮನೆಗೆ ಹೋದ ಕಾನ್‌ಸ್ಟೇಬಲ್ ಚಂದ್ರನಾಯಕ್ ಅರೆಸ್ಟ್ ವಾರೆಂಟ್ ಹಿಡಿದು ಬಂದಿದ್ದರು. ಆ ಸಮಯದಲ್ಲಿ ವೇಣುಗೋಪಾಲ್ ಸ್ನಾನಕ್ಕೆ ಹೋಗಿದ್ದರು.

    ಆದರೆ ನಾಯಕನಹಟ್ಟಿ ಪಿಎಸ್‌ಐ ಮಹೇಶ್ ಕೂಡಲೇ ಅವರನ್ನು ಕರೆತರುವಂತೆ ಕಾನ್‌ಸ್ಟೇಬಲ್ ಸೂಚನೆ ನೀಡಿದ್ದರಿಂದ ವೇಣುಗೋಪಾಲ್ ಎಷ್ಟೇ ಮನವಿ ಮಾಡಿಕೊಂಡರು, ಆರೋಪಿಯನ್ನು ಅರೆಬೆತ್ತಲೆ ಮೆರವಣಿಗೆ ಮೂಲಕ ನಾಯಕನಟ್ಟಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಈ ಬಗ್ಗೆ ಆರೋಪಿ ವೇಣುಗೋಪಾಲ್ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಭಾವನಾತ್ಮಕ ಹೇಳಿಕೆ ಹೃದಯ ಇದ್ದವರಿಗೆ ಮಾತ್ರ ಅರ್ಥವಾಗುತ್ತದೆ: ಎಚ್‍ಡಿಕೆ

    ಆರೋಪಿಯನ್ನು ಪೊಲೀಸರು ಅರೆ ಬೆತ್ತಲೆಯಲ್ಲಿ ಠಾಣೆಗೆ ಕರೆದೊಯ್ಯುತ್ತಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲೆಯಾದ್ಯಂತ ಪ್ರಜ್ಞಾವಂತರಿAದ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಎಚ್ಚೆತ್ತಿರುವ ಚಿತ್ರದುರ್ಗ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಆರೋಪಿ ಬೇಕಂತಲೇ ಈ ರೀತಿ ಮಾಡಿದ್ದಾರೆ. ಪೊಲೀಸರು ಬಟ್ಟೆ ಹಾಕಿಕೊಳ್ಳಿ ಎಂದರೂ ಸಹ, ಯಾರ ಮಾತನ್ನು ಕೇಳದೆ ಏಕಾಏಕಿ ರಸ್ತೆಗೆ ಬಂದಿದ್ದಾರೆ. ಸದ್ಯಕ್ಕೆ ವಿಚಾರಣೆ ನಡೆಯುತ್ತಿದೆ ಎಂದು ಚಿತ್ರದುರ್ಗ ಎಸ್.ಪಿ ಜಿ. ರಾಧಿಕಾ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶ – ಕೈ ವಿರುದ್ಧ ಬಿಜೆಪಿ ಟ್ವೀಟ್ ದಾಳಿ

    ಅರೆಬೆತ್ತಲೆ ಸ್ಥಿತಿಯಲ್ಲಿ ಕರೆತಂದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ನಾಯಕನಹಟ್ಟಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಕರಾವಳಿಯ ಪ್ರಸಿದ್ಧ ದೇವರಗುಂಡಿ ಜಲಪಾತದಲ್ಲಿ ಮಾಡೆಲ್‍ಗಳ ಅರೆಬೆತ್ತಲೆ ಫೋಟೋ ಶೂಟ್

    ಕರಾವಳಿಯ ಪ್ರಸಿದ್ಧ ದೇವರಗುಂಡಿ ಜಲಪಾತದಲ್ಲಿ ಮಾಡೆಲ್‍ಗಳ ಅರೆಬೆತ್ತಲೆ ಫೋಟೋ ಶೂಟ್

    – ವಿವಾದಕ್ಕೆ ಸಿಲುಕಿದ ಮಾಡೆಲ್ ಬೃಂದಾ ಅರಸ್

    ಮಂಗಳೂರು: ಬೆಂಗಳೂರಿನ ಇಬ್ಬರು ಮಾಡೆಲ್ ಗಳು ಕರಾವಳಿಯ ಪುಣ್ಯಕ್ಷೇತ್ರದ ಬಳಿ ಇರುವ ದೇವರ ಜಲಪಾತದ ಎದುರು ಅರೆಬೆತ್ತಲೆಯಾಗಿ ಫೋಟೋ ಶೂಟ್ ಮಾಡಿದ್ದು, ಇದೀಗ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದಲ್ಲಿ 13 ಶತಮಾನದ ಇತಿಹಾಸವಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವಿದೆ. ಇಲ್ಲಿ ನೆಲೆಸಿರೋ ಪರಮಾತ್ಮ ಇಲ್ಲಿಂದ 2 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದ ಎಂಬ ಐತಿಹ್ಯ ಇದೆ. ಹೀಗಾಗಿ ಇದಕ್ಕೆ ದೇವರಗುಂಡಿ ಎಂದು ಜನ ಕರೆಯುತ್ತಾರೆ. ವಿಶೇಷ ದಿನಗಳಲ್ಲಿ ವರ್ಷಕ್ಕೆ ಏಳೆಂಟು ಬಾರಿ ದೇವರಹೊಂಡದಿಂದ ತೀರ್ಥವನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ.

    ಈ ಸ್ಥಳದಲ್ಲಿ ಸ್ಥಳಿಯರು ನೀರಿಗೆ ಇಳಿಯುವುದಿಲ್ಲ. ಅಷ್ಟು ಪವಿತ್ರ ಭಾವನೆಯಿಂದ ಇಲ್ಲಿನ ಪರಿಶುದ್ಧತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಬೆಂಗಳೂರಿನ ಮಾಡೆಲ್ ಗಳಾದ ಬೃಂದಾ ಅರಸ್ ಮತ್ತು ಆಕೆಯೊಂದಿಗೆ ಮತ್ತೊಬ್ಬಳು ಮಾಡೆಲ್ ಸೇರಿಕೊಂಡು ಬಿಕಿನಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇದು ಸ್ಥಳೀಯರ ವಿರೋಧಕ್ಕೆ ಕಾರಣವಾಗಿದೆ.

    ಬಿಕಿನಿ ಶೂಟಿಂಗ್ ನಡೆದ ಸ್ಥಳದಲ್ಲಿ ಸುತ್ತಾಮುತ್ತ ಮನೆಗಳಿವೆ. ಆದರೂ ಹೀಗೆ ಅರೆಬೆತ್ತಲಾಗಿ ಓಡಾಡಿ ಸ್ಥಳೀಯರಿಗೆ ಮುಜುಗರವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಇಂದು ಸ್ಥಳೀಯರು ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ದೂರು ಕೂಡ ನೀಡಿದ್ದಾರೆ. ಈ ವಿಚಾರ ದೇವಸ್ಥಾನದ ಆಡಳಿತ ಮಂಡಳಿಗೂ ಕೂಡ ಗೊತ್ತಿಲ್ಲವಂತೆ. ಈ ದೇವರ ಗುಂಡಿ ಜಲಪಾತ ಇರುವುದು ದೇವಸ್ಥಾನದಿಂದ 2 ಕಿಲೋಮೀಟರ್ ದೂರದಲ್ಲಿ. ಅಲ್ಲಿ ಶೂಟ್ ಮಾಡುವ ಬಗ್ಗೆ ನಮ್ಮ ಗಮನಕ್ಕೆ ತಂದಿಲ್ಲ ಎಂದು ಆಡಳಿತ ಮಂಡಳಿಯವರು ಹೇಳಿದ್ದಾರೆ.

    ಈ ಬಗ್ಗೆ ಆಡಳಿತ ಮಂಡಳಿ ಸುಳ್ಯ ತಹಶಿಲ್ದಾರ್ ಗೆ ಮತ್ತು ಅರಣ್ಯ ಇಲಾಖೆಗೆ ದೂರು ನೀಡುವ ನಿರ್ಧಾರ ಮಾಡಿದೆ. ಹೇಳಿ ಕೇಳಿ ಇದು ಅರಣ್ಯ ಪ್ರದೇಶ. ಹೀಗೆ ನಿರ್ಜನ ಪ್ರದೇಶದಲ್ಲಿ ಎರಡ್ಮೂರು ಜನರು ಅರೆಬೆತ್ತಾಲಾಗಿದ್ದರೆ ಅವರಿಗೂ ಕೂಡ ಅಪಾಯ ಎದುರಾಗುವ ಸಾಧ್ಯತೆ ಇರುತ್ತೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ಮಹಿಳೆಯನ್ನು ಅರೆಬೆತ್ತಲೆ ಮಾಡಿ ಗ್ರಾಮದಲ್ಲಿ ಓಡಿಸಿದ ನೀಚರು

    ಮಹಿಳೆಯನ್ನು ಅರೆಬೆತ್ತಲೆ ಮಾಡಿ ಗ್ರಾಮದಲ್ಲಿ ಓಡಿಸಿದ ನೀಚರು

    ಲಕ್ನೋ: ಚುಡಾಯಿಸಿದಾಗ ವಿರೋಧ ವ್ಯಕ್ತಪಡಿಸಿದ್ದಕ್ಕೆ ಮಹಿಳೆಯ ಮೇಲೆ ನಾಲ್ವರು ನೀಚರು ಹಲ್ಲೆ ಮಾಡಿ ಗ್ರಾಮದಲ್ಲಿ ಅರೆಬೆತ್ತಲೆಗೊಳಿಸಿ ಓಡಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಭದೋಯ್ ನಲ್ಲಿ ನಡೆದಿದೆ.

    ಈ ಘಟನೆ ರಾಪ್ರಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ಈ ಘಟನೆ ಸಂಬಂಧ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದು, ಇತರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಯನ್ನು ದಬಂಗ್ ಲಾಲ್ ಚಂದ್ ಎಂದು ಗುರುತಿಸಲಾಗಿದೆ.

    ಏನಿದು ಪ್ರಕರಣ?
    ಸಂತ್ರಸ್ತೆ ತಮ್ಮ ಗ್ರಾಮದಿಂದ ಹೊರಗಡೆ ಹೋಗಿದ್ದಾಗ ಆರೋಪಿ ಚಂದ್ ತನ್ನ ಮೂವರು ಸ್ನೇಹಿತರ ಜೊತೆ ಸೇರಿಕೊಂಡು ಮಹಿಳೆಯನ್ನು ಚುಡಾಯಿಸಿ ಹಿಂಸಿಸಿದ್ದಾನೆ. ಇದಕ್ಕೆ ಮಹಿಳೆ ಮತ್ತು ಆಕೆಯ ಪತಿಯ ವಿರೋಧ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ಕೋಪಗೊಂಡ ಆರೋಪಿ ತನ್ನ ಮೂವರು ಸ್ನೇಹಿತರೊಂದಿಗೆ ಮಹಿಳೆ ಮನೆಗೆ ಏಕಾಏಕಿ ನುಗ್ಗಿ ಹಲ್ಲೆ ಮಾಡಿದ್ದಾನೆ.

    ಅಷ್ಟೇ ಅಲ್ಲದೇ ಮಹಿಳೆಯ ಸೀರೆ ಬಿಚ್ಚಿ ಅರೆಬೆತ್ತಲೆಗೊಳಿಸಿ ಗ್ರಾಮದಲ್ಲಿ ಓಡುವಂತೆ ಮಾಡಿದ್ದಾನೆ. ಈ ಕೃತ್ಯವನ್ನು ಕೆಲವರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದು, ಅದು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಸಂತ್ರಸ್ತೆ ಮಹಿಳೆ ನೀಚರಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದು, ಅವರ ಬಟ್ಟೆ ಮನೆಯ ಮುಂದೆ ಬಿದ್ದಿರುವುದನ್ನು ಕಾಣಬಹುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

    ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿ ಇತರರಿಗಾಗಿ ಶೋಧ ಮಾಡುತ್ತಿದ್ದೇವೆ. ವೈರಲ್ ಆಗಿರುವ ವಿಡಿಯೋಗಳನ್ನು ಆಧಾರಿಸಿ ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅರೆಬೆತ್ತಲೆ ಮಹಿಳೆಯರ ಮೇಲೆ ಅಪಾರ್ಟ್ ಮೆಂಟ್ ಚಿತ್ರ ಬಿಡಿಸಿ ಪ್ರಚಾರ!

    ಅರೆಬೆತ್ತಲೆ ಮಹಿಳೆಯರ ಮೇಲೆ ಅಪಾರ್ಟ್ ಮೆಂಟ್ ಚಿತ್ರ ಬಿಡಿಸಿ ಪ್ರಚಾರ!

    ಬೀಜಿಂಗ್: ಅರೆಬೆತ್ತಲೆ ಮಹಿಳೆಯರ ಮೇಲೆ ಅಪಾರ್ಟ್ ಮೆಂಟ್ ಚಿತ್ರ ಬಿಡಿಸಿ ಚೀನಾದ ಪ್ರಾಪರ್ಟಿ ಡೆವಲಪರ್ ಗಳು ವಿಲಕ್ಷಣವಾಗಿ ಕಾಂಪ್ಲೆಕ್ಸ್ ಗಳ ಪ್ರಚಾರ ಮಾಡುತ್ತಿದ್ದಾರೆ.

    ದಕ್ಷಿಣ ಚೀನಾದ ಗುವಾಂಗ್ಕ್ಸಿ ಝುವಾಂಗ್ ಸ್ವಾಯತ್ತ ಪ್ರದೇಶದ ಪ್ರಾಪರ್ಟಿ ಡೆವಲಪರ್ ನವೆಂಬರ್ 30ರಂದು ಘಟನೆ ನಡೆದಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ ಎಂದು ವರದಿಯಾಗಿದೆ.

    ವಿಡಿಯೋದಲ್ಲಿ ಏನಿದೆ?:
    ಪ್ರಾಪರ್ಟಿ ಡೆವಲಪರ್ ಗಳು ಖರೀದಿದಾರರನ್ನು ಸೆಳೆಯಲು ನಾಲ್ವರು ಮಹಿಳೆಯರನ್ನು ಅರೆಬೆತ್ತಲಾಗಿ ಮಾಡಿ. ಅವರ ಬೆನ್ನಿನ ಮೇಲೆ ಅಪಾರ್ಟ್ ಮೆಂಟ್ ಒಳ ನಕ್ಷೆ ಹಾಗೂ ಹೊಸ ವಿನ್ಯಾಸವನ್ನು ಬಿಡಿಸಿ, ಸಾಲಾಗಿ ಕೂರಿಸಲಾಗಿತ್ತು. ಬಳಿಕ ಒಬ್ಬೊರನ್ನೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಗ್ರಾಹಕರು ಇದನ್ನು ನೋಡಿ ಅಪಾರ್ಟ್ ಮೆಂಟ್ ಖರೀದಿಗೆ ಮುಂದಾಗುತ್ತಾರೆ ಎನ್ನುವ ಉದ್ದೇಶದಿಂದ ಹೀಗೆ ಮಾಡಲಾಗಿದೆ.

    ಮಹಿಳೆಯ ಮೈ ಮೇಲೆ ಕೇವಲ ಒಂದು ತುಂಡು ಬಟ್ಟೆ, ಎದೆಯ ಭಾಗದಲ್ಲಿ ಚಿಟ್ಟೆ ಮತ್ತು ಹೂವುಗಳ ಚಿತ್ತಾರ ಬಿಡಿಸಿಕೊಂಡಿದ್ದಾರೆ. ಇದು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ.

    ಇದೊಂದು ಅಶ್ಲೀಲ ಮತ್ತು ಅವಮಾನಕರ ಘಟನೆ ಎಂದು ಸ್ಥಳೀಯರು ಟೀಕಿಸಿದ್ದಾರೆ. ಈ ಕುರಿತು ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ರಿಯಲ್ ಎಸ್ಟೇಟ್ ಕಚೇರಿಯನ್ನು ಬಂದ್ ಮಾಡಲಾಗಿದೆ ಎಂದು ಚೀನಾದ ಮಾಧ್ಯಮವೊಂದರ ವರದಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಡಿಯೋ: ನಡುರಸ್ತೆಯೆಲ್ಲೇ ಬೆತ್ತಲಾಗ್ತಾನೆ, ವಾಹನ ಸವಾರರಿಗೆ ಅಡ್ಡ ಹಾಕ್ತಾನೆ

    ವಿಡಿಯೋ: ನಡುರಸ್ತೆಯೆಲ್ಲೇ ಬೆತ್ತಲಾಗ್ತಾನೆ, ವಾಹನ ಸವಾರರಿಗೆ ಅಡ್ಡ ಹಾಕ್ತಾನೆ

    ತುಮಕೂರು: ನಡುರಸ್ತೆಯಲ್ಲಿ ಅರೆಬೆತ್ತಲೆಯಾಗಿ ನಿಂತು ಅಸಭ್ಯ ಭಂಗಿ ತೋರಿಸುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬನಿಗೆ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥನೊಬ್ಬ ದ್ವಿಚಕ್ರ ವಾಹನ, ಆಟೋ, ಬಸ್‍ಗಳನ್ನು ಅಡ್ಡಿಗಟ್ಟಿ ಅಸಭ್ಯ ಭಂಗಿಗಳನ್ನು ತೋರಿಸುತ್ತಿದ್ದನು. ಇದರಿಂದ ವಾಹನ ಸವಾರರು, ಸಾರ್ವಜನಿಕರು ಮುಜುಗರಕ್ಕೊಳಗಾಗುತ್ತಿದ್ದರು.

    ಬಸ್‍ವೊಂದರ ವೈಪರ್‍ನ್ನು ಕಿತ್ತು ಸಾರ್ವಜನಿಕರ ಮೇಲೆ ಈತ ಹಲ್ಲೆಗೂ ಮುಂದಾಗಿದ್ದ. ಮಾನಸಿಕ ಅಸ್ವಸ್ಥನ ಉಪಟಳ ತಾಳಲಾರದೇ ಸ್ಥಳೀಯರು ಛಡಿ ಏಟು ಕೊಟ್ಟು ಕೈಕಾಲು ಕಟ್ಟಿ ನಗರದ ತಿಲಕ್ ಪಾರ್ಕ್ ಪೊಲೀಸರಿಗೆ ಒಪ್ಪಿಸಿದ್ದಾರೆ.

    https://www.youtube.com/watch?v=VQgI4dYQDSQ

     

  • ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಬೆತ್ತಲೆ ಪ್ರತಿಭಟನೆ

    ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಬೆತ್ತಲೆ ಪ್ರತಿಭಟನೆ

    ಹಾವೇರಿ: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ರೈತರೊಬ್ಬರು ಹಾವೇರಿಯಲ್ಲಿ ಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.

    ನಗರದ ಹೊಸಮನಿ ಸಿದ್ದಪ್ಪ ಸರ್ಕಲ್ ಬಳಿ ರೈತ ಕಾಳಪ್ಪ ಲಮಾಣಿ ಬೆತ್ತಲಾಗಿ ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಇದೇ ವೇಳೆ ಚಂದ್ರಪ್ಪ ಎಂಬವರು ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಹುಚ್ಚವ್ವನಹಳ್ಳಿ ಮಂಜುನಾಥ ಬಣದ ಕಾರ್ಯಕರ್ತರು ನಗರದ ಮುರುಘರಾಜೇಂದ್ರಮಠದಿಂದ ಅರೆಬೆತ್ತಲೆ ಪ್ರತಿಭಟನೆ ಪ್ರಾರಂಭಿಸಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲ ರೈತರು ಬೇವಿನಸೊಪ್ಪು ಕಟ್ಟಿಕೊಂಡು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

    ಇದೂವರೆಗೂ ಜಿಲ್ಲೆಯ ಯಾವ ರೈತರಿಗೂ ಬಗರ್ ಹುಕುಂ ಪತ್ರವನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ರೈತರು ರಾಣೇಬೆನ್ನೂರು ಪಟ್ಟಣದಲ್ಲಿ ಪ್ರತಿಭಟನೆ ಕೈಗೊಂಡಿದ್ರೂ, ಯಾವ ಅಧಿಕಾರಿಗಳು ಗಮನ ಹರಿಸಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ರೈತ ಕಾಳಪ್ಪ ಸಾರ್ವಜನಿಕವಾಗಿ ಬೆತ್ತಲಾಗುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ವಿಷ ಸೇವಿಸಿದ ರೈತ ಚಂದ್ರಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿಭಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ರೈತರ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಮುನ್ನೇಚ್ಚರಿಕಾ ಕ್ರಮವಾಗಿ ಪ್ರತಿಭಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    https://www.youtube.com/watch?v=ODhN2OQZmUI