Tag: ಅರೆನಗ್ನ

  • ಅರೆನಗ್ನ ಸ್ಥಿತಿಯಲ್ಲಿ ಓಡಾಡುತ್ತಿದ್ದ ಮಹಿಳೆಯರ ವಿರುದ್ಧ ಸಾರ್ವಜನಿಕರ ಆಕ್ರೋಶ!

    ಅರೆನಗ್ನ ಸ್ಥಿತಿಯಲ್ಲಿ ಓಡಾಡುತ್ತಿದ್ದ ಮಹಿಳೆಯರ ವಿರುದ್ಧ ಸಾರ್ವಜನಿಕರ ಆಕ್ರೋಶ!

    ಮಂಡ್ಯ: ಬಸ್ ನಿಲ್ದಾಣದಲ್ಲಿ ಅರೆನಗ್ನ ಸ್ಥಿತಿಯಲ್ಲಿ ಓಡಾಡುತ್ತಿದ್ದ ಮಹಿಳೆಯರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ ಘಟನೆ ಮಂಡ್ಯದ ಮದ್ದೂರಿನಲ್ಲಿ ನಡೆದಿದೆ.

    ಮದ್ದೂರಿನಲ್ಲಿ ಮಹಿಳೆಯರು ಅರೆ ನಗ್ನವಾಗಿ ಓಡಾಡುತ್ತಿದ್ದರು. ಇದನ್ನು ನೋಡಿದ ಸಾರ್ವಜನಿಕರು ಮಹಿಳೆಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಮದ್ದೂರು ಪೊಲೀಸರು, ಮಹಿಳೆಯರಿಗೆ ಬಟ್ಟೆ ಹಾಕಿಕೊಳ್ಳುವಂತೆ ಬುದ್ಧಿ ಹೇಳಿದ್ದಾರೆ. ಅಲ್ಲದೇ ಸಭ್ಯವಾಗಿ ವರ್ತಿಸುವಂತೆ ತಿಳಿ ಹೇಳಿದ್ದಾರೆ.

    ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ಎಚ್ಚರ: ಮಹಿಳೆಯರೇ ಮಸಾಜ್ ಪಾರ್ಲರ್ ಗೆ ಹೋಗೋ ಮುನ್ನ ಈ ಸುದ್ದಿ ಓದಿ

    ಎಚ್ಚರ: ಮಹಿಳೆಯರೇ ಮಸಾಜ್ ಪಾರ್ಲರ್ ಗೆ ಹೋಗೋ ಮುನ್ನ ಈ ಸುದ್ದಿ ಓದಿ

    ಬೆಂಗಳೂರು: ಹೋಟೆಲ್ ಹಾಗೂ ಡ್ರೆಸ್ ಚೇಂಜಿಂಗ್ ರೂಮ್ ಗಳಲ್ಲಿ ಹಿಡನ್ ಕ್ಯಾಮೆರಾಗಳನ್ನಿಟ್ಟು ಮಹಿಳೆಯರ ನಗ್ನ, ಅರೆನಗ್ನ ದೃಶ್ಯಗಳನ್ನು ಸೆರೆಹಿಡಿದಿರೋ ಘಟನೆಗಳು ಸಾಕಷ್ಟು ಸುದ್ದಿಯಾಗಿವೆ. ಇದೇ ರೀತಿ ಇದೀಗ ಮಸಾಜ್ ಪಾರ್ಲರ್ ನಲ್ಲೂ ಈ ತರಹ ಹಿಡನ್ ಕ್ಯಾಮೆರಾವನ್ನಿಟ್ಟು ಮಹಿಳೆಯ ಅರೆನಗ್ನ ದೃಶ್ಯಗಳನ್ನು ಸೆರೆಹಿಡಿದಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ನಗರದ ಯಲಹಂಕದ ಮಾರುತಿ ನಗರದ ಶ್ರೀಸಾಯಿ ನಂದೀಶ್ವರ್ ನ್ಯಾಚುರೋಪತಿ ಕ್ಲಿನಿಕ್ ನಲ್ಲಿ ಈ ಘಟನೆ ನಡೆದಿದೆ. ಬಾಡಿ ಪೇನ್ ಎಂದು ಮಸಾಜ್ ಗೆ ಬಂದಿದ್ದ ಮಹಿಳೆಯ ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಣ ಮಾಡಲಾಗಿದೆ.

    ಬೆಳಕಿಗೆ ಬಂದಿದ್ದೇಗೆ?: ಪಾರ್ಲರ್ ನ ಕಿಟಕಿಯ ಕರ್ಟನ್ ನಲ್ಲಿ ಸಿಬ್ಬಂದಿ ಕ್ಯಾಮೆರಾ ಫಿಕ್ಸ್ ಮಾಡಿದ್ದರು. ಇದರಿಂದ ಬಾಡಿ ಮಸಾಜ್ ಗೆ ಬಂದಿದ್ದ ಮಹಿಳೆ ಅನುಮಾನಗೊಂಡು ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಸಿಬ್ಬಂದಿ ಮಾತ್ರ ಕರ್ಟನ್ ಇರೋದೆ ಹಾಗೆ ಅಂತ ಯಾಮಾರಿಸಿದ್ದರು. ಆದ್ರೆ ಮಹಿಳೆ ಕರ್ಟನ್ ಪರಿಶೀಲನೆ ಮಾಡಿದಾಗ ಕ್ಯಾಮೆರಾ ಫಿಕ್ಸ್ ಮಾಡಿರುವುದು ಬೆಳಕಿಗೆ ಬಂದಿದೆ.

    ಇದರಿಂದ ಆತಂಕಗೊಂಡ ಮಹಿಳೆ ಈ ಬಗ್ಗೆ ಗಲಾಟೆ ಮಾಡಿ, ಬಳಿಕ ಯಲಹಂಕ ಪೊಲೀಸರಿಗೆ ದೂರು ನೀಡಿದ್ದಾರೆ. ಅಂತೆಯೇ ಯಲಹಂಕ ಪೊಲೀಸರು ದಾಳಿ ಮಾಡುತ್ತಿದ್ದಂತೆ ಕ್ಲಿನಿಕ್ ಸಿಬ್ಬಂದಿ ಪರಾರಿಯಾಗಿದ್ದಾರೆ. ಸದ್ಯ ಮಸಾಜ್ ಪಾರ್ಲರ್ ಸೀಜ್ ಮಾಡಿ, ಕ್ಯಾಮೆರಾ, ಫೋಟೊಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಘಟನೆ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.