Tag: ಅರುಣ್ ಸಾಗರ್

  • ‘ಕನ್ನೇರಿ’ಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ ರಾಜ್ಯ ಪ್ರಶಸ್ತಿ ವಿಜೇತ ಎಂ.ಕೆ.ಮಠ

    ‘ಕನ್ನೇರಿ’ಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ ರಾಜ್ಯ ಪ್ರಶಸ್ತಿ ವಿಜೇತ ಎಂ.ಕೆ.ಮಠ

    ನ್ನೇರಿ’ಸ್ಯಾಂಡಲ್‍ವುಡ್‌ನಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಚಿತ್ರ. ಮಾರ್ಚ್ 4ರಂದು ಪ್ರೇಕ್ಷಕರೆದುರು ಬರಲು ಸಜ್ಜಾಗಿರುವ ಈ ಚಿತ್ರ ಈಗಾಗಲೇ ಪ್ರೇಕ್ಷಕರನ್ನು ಸಾಕಷ್ಟು ವಿಚಾರಗಳಿಂದ ತನ್ನತ್ತ ಸೆಳೆದುಕೊಂಡಿದೆ.

    ಹಾಡು, ಟ್ರೇಲರ್, ಮನಸ್ಸಿಗೆ ನಾಟಿವೆ. ಏನೋ ವಿಶೇಷತೆ ಇದೆ ಅನ್ನೋದನ್ನು ಸಾರಿ ಹೇಳಿವೆ. ಬಿಡುಗಡೆಯಾಗಿರುವ ಟೀಸರ್ ಕೂಡ ಅಷ್ಟೇ ಕುತೂಹಲ ಹುಟ್ಟು ಹಾಕಿದೆ. ಹೀಗೆ ಸಿನಿರಸಿಕರ ಮನಸೆಳೆದ ಈ ಚಿತ್ರದಲ್ಲಿ ಸ್ಯಾಂಡಲ್‍ವುಡ್ ಅಂಗಳದ ಹೆಮ್ಮೆಯ ಹಿರಿಯ ನಟ ಎಂ.ಕೆ ಮಠ ಕೂಡ ಬಣ್ಣಹಚ್ಚಿದ್ದಾರೆ.  ಇದನ್ನೂ ಓದಿ: ಎಂತವರಿಗೂ ಮರುಕ ಹುಟ್ಟಿಸುತ್ತೆ ಕನ್ನೇರಿ ಚಿತ್ರದ ‘ಕಾಣದ ಊರಿಗೆ ಕೂಲಿಗೆ ಹೊರಟವಳೆ’ ಹಾಡು

    ತಮ್ಮ ಅಮೋಘ ಅಭಿನಯದ ಮೂಲಕ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಎಂ.ಕೆ.ಮಠ ಕನ್ನೇರಿ ಚಿತ್ರದಲ್ಲಿ ಬಹು ಮುಖ್ಯ ಪಾತ್ರವೊಂದಕ್ಕೆ ಜೀವತುಂಬಿದ್ದಾರೆ. ಈಗಾಗಲೇ ಗೊತ್ತಿರುವ ಹಾಗೆ ಕನ್ನೇರಿ ನೆಲೆ ಕಳೆದುಕೊಂಡು ನಿರ್ವಸತಿಗರಾದ ಕಾಡಿನ ಜನರ ಸುತ್ತ ನೈಜ ಘಟನೆಗಳನ್ನು ಸ್ಪೂರ್ತಿಯಾಗಿ ಇಟ್ಟುಕೊಂಡು ಹೆಣೆದ ಚಿತ್ರ. ಇಂತಹ ಚಿತ್ರದಲ್ಲಿ ಎಂ.ಕೆ ಮಠ ಅವ್ರು ಕಾಡಿನ ಜನರ ಹಾಡಿಯ ನಾಯಕನಾಗಿ ಬಣ್ಣಹಚ್ಚಿದ್ದಾರೆ. ಕೇವಲ ಬಣ್ಣಹಚ್ಚಿಲ್ಲ ಅದನ್ನು ಜೀವಿಸಿದ್ದಾರೆ. ಚಿತ್ರದ ಸ್ಯಾಂಪಲ್‍ಗಳಲ್ಲೂ ಅದನ್ನು ಕಾಣಬಹುದಾಗಿದೆ. ತಮ್ಮ ಪಾತ್ರದ ಬಗ್ಗೆ ಹಾಗೂ ನೀನಾಸಂ ಮಂಜು ಆಯ್ದುಕೊಂಡ ಕಥೆ ಬಗ್ಗೆ ಬಹಳ ಸಂತಸ ವ್ಯಕ್ತಪಡಿಸಿರುವ ಇವ್ರು ಈ ಸಿನಿಮಾ ಖಂಡಿತ ಪ್ರೇಕ್ಷಕರ ಮನಮುಟ್ಟಲಿದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿಗೂ ಇಷ್ಟವಾಯ್ತು ‘ಕನ್ನೇರಿ’ ಚಿತ್ರದ ‘ಈ ಗಾಳಿ ತಂಗಾಳಿ’ ಹಾಡು!

    ನೀನಾಸಂ ಮಂಜು ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಕೊಟಿಗಾನಹಳ್ಳಿ ರಾಮಯ್ಯ ಕಥೆ ಬರೆದಿದ್ದಾರೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಮತ್ತು ಚಂದ್ರಶೇಖರ್ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ಕದ್ರಿ ಮಣಿಕಾಂತ್ ಅದ್ಭುತ ಸಂಗೀತ ಸಂಯೋಜನೆ, ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಸುಜಿತ್ ಎಸ್ ನಾಯಕ್ ಸಂಕಲನ ಚಿತ್ರಕ್ಕಿದೆ. ಇದನ್ನೂ ಓದಿ: ‘ಕನ್ನೇರಿ’ ಒಡಲೊಳಗಿದೆ ಬೇರೆಯದ್ದೇ ಲೋಕ – ಟ್ರೇಲರ್ ನೋಡಿ ಮೆಚ್ಚಿದ ಪ್ರೇಕ್ಷಕ ಮಹಾಶಯರು

    ನೈಜ ಘಟನೆಯೊಂದಿಗೆ ಮಹಿಳಾ ಪ್ರಧಾನ ಚಿತ್ರವಾಗಿರುವ ಕನ್ನೇರಿಯಲ್ಲಿ ಅರ್ಚನಾ ಮಧುಸೂದನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಅರುಣ್ ಸಾಗರ್, ಕರಿ ಸುಬ್ಬು, ಸರ್ದಾರ್ ಸತ್ಯ,ಅನಿತ ಭಟ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಅರುಣ್ ಸಾಗರ್ ಮಗನ ಸಾಧನೆ ಕೊಂಡಾಡಿದ ಸುದೀಪ್

    ಅರುಣ್ ಸಾಗರ್ ಮಗನ ಸಾಧನೆ ಕೊಂಡಾಡಿದ ಸುದೀಪ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅರುಣ್ ಸಾಗರ್ ಮಗ ಸೂರ್ಯ ಬಾಕ್ಸಿಂಗ್‍ನಲ್ಲಿ ಮಾಡಿರುವ ಸಾಧನೆಯ ಕುರಿತಾಗಿ ಸುದೀಪ್ ಮೆಚ್ಚುಗೆಯ ಮಾತನಾಡಿದ್ದಾರೆ.

    ಬೆಂಗಳೂರಿನಲ್ಲೇ ನಡೆದ ವಿಶ್ವ ಬಾಕ್ಸಿಂಗ್ ಕೌನ್ಸಿಲ್ (WBC) ಮುವಾಯ್ ಥಾಯ್ ಚಾಂಪಿಯನ್ ಶಿಪ್‍ನಲ್ಲಿ (MuayThai Championship) ಸ್ಪಧಿಸಿದ್ದ ನಟ ಅರುಣ್ ಸಾಗರ್  ಅವರ ಮಗ ಸೂರ್ಯ ಸಾಗರ್ ಅವರು ಚಾಂಪಿಯನ್ ಆಗಿದ್ದಾರೆ. ಸೂರ್ಯ ಸಾಗರ್ ಸಾಧನೆಗೆ ಮೆಚ್ಚಿಕೊಂಡು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಶುಭ ಕೋರಿದ್ದಾರೆ.

    ಅಭಿನಂದನೆಗಳು ಸೂರ್ಯ ಸಾಗರ್ ಭಾರತದ ಮೊದಲ WBC MuayThai ಚಾಂಪಿಯನ್ ಆಗಿ ಕಿರೀಟವನ್ನು ಪಡೆದಿದ್ದಾರೆ.   MAX MUAYTHAI ಕ್ರೀಡಾಂಗಣದಲ್ಲಿ ಗೆದ್ದ ಮೊದಲ ಭಾರತೀಯ ಹೋರಾಟಗಾರ ಪಟ್ಟ ಮತ್ತು ಭಾರತೀಯ WBC MuayThai ಚಾಂಪಿಯನ್‍ಶಿಪ್ ಹೊಂದಿದ ಸಾಧನೆಗಳ ಪಟ್ಟಿ ಎಂದು ಬರೆದುಕೊಂಡು ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ಇದನ್ನೂ ಓದಿ: ಹಾಸ್ಯನಟ ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪ

     

    View this post on Instagram

     

    A post shared by Arun Sagar (@arunsagar_official)

    ಸೆಪ್ಟೆಂಬರ್ 4, 2021 ನನ್ನ ಮಗನ wbc muaythai championship  ಆಗಿದ್ದಾನೆ. ಅದರ ವೀಡಿಯೋ ನಿಮ್ಮ ಮುಂದೆ, ಸೂರ್ಯ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡ ಮಗನ ಸಾಧನೆ ಕುರಿತಾಗಿ ನಟ ಅರುಣ್ ಸಾಗರ್ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ಬಾಕ್ಸಿಂಗ್‍ನ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

  • ಅಂತರರಾಷ್ಟ್ರೀಯ ಮಟ್ಟದಲ್ಲಿ ಅರುಣ್ ಸಾಗರ್ ಪುತ್ರನ ಸಾಧನೆ

    ಅಂತರರಾಷ್ಟ್ರೀಯ ಮಟ್ಟದಲ್ಲಿ ಅರುಣ್ ಸಾಗರ್ ಪುತ್ರನ ಸಾಧನೆ

    ಬೆಂಗಳೂರು: ಸಾಮಾನ್ಯವಾಗಿ ನಟರ ಮಕ್ಕಳು ತಂದೆಯಂತೆಯೇ ಸಿನಿಮಾ ಕ್ಷೇತ್ರದ ಮೇಲೆ ಹೆಚ್ಚಿನ ಆಶಕ್ತಿ ಹೊಂದಿರುತ್ತಾರೆ. ಆದರೆ ನಟ ಅರುಣ್ ಸಾಗರ್ ಪುತ್ರ ಸಿನಿಮಾ ಬಿಟ್ಟು ಕ್ರೀಡಾ ವಿಭಾಗದಲ್ಲಿ ಆಶಕ್ತಿ ಹೊಂದಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

    ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ವಿದೇಶಿ ಕ್ರೀಡೆ ಮಾಕ್ಸ್ ಮೌಥಾಯ್‍ಯಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಹೌದು, ಅಂತರಾಷ್ಟ್ರೀಯ ಮಟ್ಟದ ಮಾಕ್ಸ್ ಮೌಥಾಯ್ ಸ್ಪರ್ಧೆ ಥಾಯ್ಲಂಡ್‍ನ ಪಟಾಯಲ್ಲಿ ನಡೆದಿತ್ತು. ಇದರಲ್ಲಿ ವಿವಿಧ ದೇಶಗಳು ಭಾಗಿಯಾಗಿದ್ದವು. ಇದೇ ರೀತಿ ಈ ಸ್ಪರ್ಧೆಯಲ್ಲಿ ಅರುಣ್ ಪುತ್ರ ಸೂರ್ಯ ಭಾರತದಿಂದ ಸ್ಪರ್ಧೆ ಮಾಡಿದ್ದರು.

    ಸ್ಪರ್ಧೆಯಲ್ಲಿ ಥಾಯ್ ಫೈಟರ್ ಅರ್ಪಿಂಗ್ ಚಿತಾಂಗ್ ವಿರುದ್ಧ ಸೂರ್ಯ ಗೆಲುವು ಸಾಧಿಸಿದ್ದರು. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಮಾಕ್ಸ್ ಮೌಥಾಯ್ ಸ್ಪರ್ಧೆಯಲ್ಲಿ ಭಾರತಕ್ಕೆ ಗೆಲುವು ಸಿಕ್ಕಿದೆ.

    ಸೂರ್ಯ ಮೌಥಾಯ್ ನಲ್ಲಿ ಮೂರು ವರ್ಷಗಳಿಂದ ಮೈಸೂರಿನ ವಿಕ್ರಮ್ ನಾಗರಾಜ್ ಬಳಿ ತರಬೇತಿ ಪಡೆಯುತ್ತಿದ್ದಾರೆ. ಈಗ ಥಾಯ್ಲಂಡ್ ನಲ್ಲಿ ನಡೆದ ಸ್ಪರ್ಧೆ ಗೆದ್ದಿರುವ ಸೂರ್ಯನಿಗೆ ಒಲಂಪಿಕ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆಯಿದೆಯಂತೆ. ಹೀಗಾಗಿ ಸೂರ್ಯ ಈಗಿನಿಂದಲೇ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ತಂದೆ ಅರುಣ್ ಅವರು ಮಾತನಾಡಿ, “ಮಕ್ಕಳು ಯಾವುದರಲ್ಲಿ ಆಶಕ್ತಿ ಹೊಂದಿರುತ್ತಾರೋ ಅದಕ್ಕೆ ನಾವು ಸಪೋರ್ಟ್ ಮಾಡಬೇಕು. ಅದೇ ರೀತಿ ನನ್ನ ಮಗ ಸೂರ್ಯ ಮೌಥಾಯ್ ನಲ್ಲಿ ತರಬೇತಿ ಪಡೆಯುತ್ತೇನೆ ಎಂದಾಗ ತುಂಬಾ ಖುಷಿಯಾಗಿತ್ತು. ಇದೀಗ ಈಗ ಅವನು ಭಾರತವೇ ಹೆಮ್ಮೆ ಪಡುವಂಥ ಕೆಲಸ ಮಾಡಿದ್ದಾನೆ” ಎಂದು ಪುತ್ರನ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ನಟ ಅರುಣ್ ಸಾಗರ್ ಅವರ ಮಗನ ಸಾಧನೆಗೆ ಸ್ಟಾರ್ ನಟರೂ ಕೂಡ ವಿಶ್ ಮಾಡಿದ್ದಾರೆ. ಸುದೀಪ್ ಅವರು ಟ್ವೀಟ್ ಮಾಡುವ ಮೂಲಕ ಸೂರ್ಯಗೆ ಶುಭಾ ಕೋರಿದ್ದಾರೆ.

  • ಅರುಣ್ ಸಾಗರ್ ಶೂಟಿಂಗ್ ಶೆಡ್‍ಗೆ ಬೆಂಕಿ – ಧಗಧಗನೆ ಹೊತ್ತಿ ಉರಿದ ಆರ್ಟ್ ಗ್ಯಾಲರಿ

    ಅರುಣ್ ಸಾಗರ್ ಶೂಟಿಂಗ್ ಶೆಡ್‍ಗೆ ಬೆಂಕಿ – ಧಗಧಗನೆ ಹೊತ್ತಿ ಉರಿದ ಆರ್ಟ್ ಗ್ಯಾಲರಿ

    ಬೆಂಗಳೂರು: ನಟ ಅರುಣ್ ಸಾಗರ್ ಅವರಿಗೆ ಸೇರಿದ ಶೂಟಿಂಗ್ ಶೆಡ್ ಬೆಂಕಿಗಾಹುತಿಯಾದ ಘಟನೆ ಬೆಂಗಳೂರಿನ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದಿದೆ.

    ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ಅರುಣ್ ಸಾಗರ್ ಅವರಿಗೆ ಸೇರಿದ ಶೂಟಿಂಗ್ ಶೆಡ್ ಹೌಸ್ ಇತ್ತು. ಅದರ ಪಕ್ಕದಲ್ಲೆ ಪ್ಲಾಸ್ಟಿಕ್ ಗೋದಾಮು ಕೂಡಾ ಇತ್ತು. ಆಕಸ್ಮಿಕವಾಗಿ ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ ಬಿದ್ದ ಪರಿಣಾಮ ಬೆಂಕಿಯ ತೀವ್ರತೆ ಪಕ್ಕದಲ್ಲಿದ್ದ ಶೂಟಿಂಗ್ ಶೆಡ್‍ಗೂ ಆವರಿಸಿದೆ. ಇದರಿಂದಾಗಿ ಶೂಟಿಂಗ್ ಶೆಡ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ.

    ಸುದ್ದಿ ತಿಳಿದು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸುವ ವೇಳೆಗೆ ಶೂಟಿಂಗ್ ಶೆಡ್ ಸಂಪೂರ್ಣವಾಗಿ ಕರಕಲಾಗಿ ಹೋಗಿತ್ತು. ಈ ಕುರಿತು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.