Tag: ಅರುಣ್ ಸಾಗರ್

  • ರೂಪೇಶ್ ರಾಜಣ್ಣ- ಪ್ರಶಾಂತ್ ಸಂಬರ್ಗಿ ‘ಲೇ..’ ಜಗಳ: ರಣರಂಗವಾಯ್ತು ಬಿಗ್ ಬಾಸ್ ಮನೆ

    ರೂಪೇಶ್ ರಾಜಣ್ಣ- ಪ್ರಶಾಂತ್ ಸಂಬರ್ಗಿ ‘ಲೇ..’ ಜಗಳ: ರಣರಂಗವಾಯ್ತು ಬಿಗ್ ಬಾಸ್ ಮನೆ

    ಬಿಗ್ ಬಾಸ್ ಮನೆಯಲ್ಲಿ ಹಾವು ಮುಂಗಸಿಯಂತಿದ್ದ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ (Prashant Sambargi) ಕಳೆದೊಂದು ವಾರದಿಂದ ತೀರಾ ಹತ್ತಿರವಾಗಿದ್ದರು. ಒಡಹುಟ್ಟಿದವರಂತೆ ಅನ್ಯೋನ್ಯವಾಗಿದ್ದರು. ಸ್ವತಃ ಬಿಗ್ ಬಾಸ್ಸೇ ಅಚ್ಚರಿ ಪಡುವಷ್ಟು ಒಬ್ಬರಿಗೊಬ್ಬರು ಗೌರವ ಕೊಟ್ಟುಕೊಂಡು ದಿನಗಳನ್ನು ದುಡುತ್ತಿದ್ದರು. ಆದರೆ, ದೀಪಾವಳಿ ದಿನದಂದು ಲಕ್ಷ್ಮಿ ಪಟಾಕಿ ಸಿಡಿಯುವಂತೆ ಇಬ್ಬರೂ ಸಿಡಿದುಕೊಂಡಿದ್ದಾರೆ. ಇವರಿಬ್ಬರ ಮಾತಿಗೆ ಬಿಗ್ ಬಾಸ್ ಮನೆ ರಣರಂಗವಾಗಿ ಮಾರ್ಪಟಿದೆ.

    ಕಳೆದ ನಾಲ್ಕೈದು ದಿನಗಳಿಂದ ರೂಪೇಶ್ ರಾಜಣ್ಣ (Rupesh Rajanna)ನನ್ನು ಪ್ರ್ಯಾಂಕ್ ಮಾಡುತ್ತಾ, ಮಜಾ ತಗೆದುಕೊಳ್ಳುತ್ತಿದ್ದರು ಪ್ರಶಾಂತ್ ಸಂಬರ್ಗಿ. ದೆವ್ವದ ವಿಚಾರವಾಗಿ ಕಾವ್ಯಶ್ರೀ ಗೌಡ ಮತ್ತು ಪ್ರಶಾಂತ್ ಸಂಬರ್ಗಿ ಹೂಡಿದ್ದ ಆಟಕ್ಕೆ ರೂಪೇಶ್ ರಾಜಣ್ಣ ಕ್ಲೀನ್ ಬೋಲ್ಡ್ ಆಗಿದ್ದರು. ಹೀಗಾಗಿ ರೂಪೇಶ್ ಮತ್ತು ಪ್ರಶಾಂತ್ ನಡುವೆ ಸ್ನೇಹ ಗಟ್ಟಿಯಾಗುತ್ತಿತ್ತು. ಆದರೆ, ದೀಪಾವಳಿ ದಿನದಂದು ಆಡಿದ ಆಟ ಮಾತ್ರ ಇಬ್ಬರನ್ನೂ ಕೆರಳಿಸಿತ್ತು. ದೀಪಾವಳಿ ಸಂಭ್ರಮವನ್ನು ನುಂಗಿತ್ತು. ಇಬ್ಬರ ಕಿತ್ತಾಟದಲ್ಲಿ ಬಿಗ್ ಬಾಸ್ ಮನೆಯ ಉಳಿದ ಸದಸ್ಯರು ಕೂಡ ಆತಂಕಗೊಂಡರು. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ‘ಉಡುಗೊರೆ ಬೇಕಾ, ಕ್ಯಾಪ್ಟನ್ಸಿ ಪಾಯಿಂಟ್ಸ್ ಬೇಕಾ’ ವಿಚಾರವು ಅರುಣ್ ಸಾಗರ್ (Arun Sagar) ಸೇರಿದಂತೆ ಹಲವು ಸದಸ್ಯರನ್ನು ಚರ್ಚೆಗೀಡು ಮಾಡಿತ್ತು. ಮೊದಲ ಹಂತದ ಚರ್ಚೆಯಲ್ಲಿ ಅರುಣ್ ಸಾಗರ್ ಮತ್ತು ರೂಪೇಶ್ ರಾಜಣ್ಣ ಸಣ್ಣದಾಗಿ ಕಿತ್ತಾಡಿಕೊಂಡರು. ರೂಪೇಶ್ ಅವರಿಗೆ ದುರಾಸೆ ಎಂದು ಅರುಣ್ ಆಡಿದ ಮಾತು ರೂಪೇಶ್ ರಾಜಣ್ಣರನ್ನು ಕೆರಳಿಸಿತ್ತು. ಇವರಿಬ್ಬರ ನಡುವಿನ ಕಿತ್ತಾಟದಲ್ಲಿ ಪ್ರಶಾಂತ್ ಸಂಬರ್ಗಿ ಮೂಗು ತೂರಿಸಿದರು. ಪ್ರಶಾಂತ್ ಎಂಟ್ರಿ ಕೊಡುತ್ತಿದ್ದಂತೆಯೇ ಜಗಳ ಬೇರೆ ಹಂತ ತಲುಪಿತು.

    ಅರುಣ್ ಮತ್ತು ರೂಪೇಶ್ ನಡುವಿನ ಗಲಾಟೆಗೆ  ಉರಿವ ಬೆಂಕಿಗೆ ತುಪ್ಪ ಸುರಿದಂತೆ ಅರುಣ್ ಪರ ಬ್ಯಾಟ್ ಬೀಸಿದರು ಪ್ರಶಾಂತ್. ಅದರಿಂದ ಮತ್ತಷ್ಟು ಕುಪಿತಗೊಂಡ ರೂಪೇಶ್ ರಾಜಣ್ಣ ಸಿಡಿದೆದ್ದು ಬಿಟ್ಟರು. ಮಾತಿನ ಭರಾಟೆಯಲ್ಲಿ ರೂಪೇಶ್ ಅವರನ್ನು ‘ಲೇ..’ ಎಂದು ಕರೆದುಬಿಟ್ಟರು ಪ್ರಶಾಂತ್ ಸಂಬರ್ಗಿ. ರೂಪೇಶ್ ರಾಜಣ್ಣ ಮತ್ತಷ್ಟು ಸಿಟ್ಟಾಗಿ ಹೊಡೆಯಲೆಂದು ಹೊರಟರು. ಇಬ್ಬರೂ ಕೈ ಕೈ ಮಿಲಾಯಿಸಿದರು. ದೀಪಾವಳಿ ಸಂಭ್ರಮದಲ್ಲಿದ್ದ ಬಿಗ್ ಬಾಸ್ ಮನೆ ರಣರಂಗವಾಯಿತು. ರೂಪೇಶ್ ಶೆಟ್ಟಿ (Rupesh Shetty) ಇವರನ್ನು ಸಮಾಧಾನ ಪಡಿಸದೇ ಇದ್ದರೆ, ಬಿಗ್ ಬಾಸ್ ಮನೆ ಇನ್ನೇನಾಗುತ್ತಿತ್ತೋ. ಈ ಗಲಾಟೆ ಕಿಚ್ಚನ ಪಂಚಾಯತಿಯಲ್ಲಿ ಯಾವೆಲ್ಲ ಚರ್ಚೆಯನ್ನು ಹುಟ್ಟು ಹಾಕತ್ತೋ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಮೊದಲು ಕಳ್ಳತನ ಮಾಡ್ತಿದ್ರಾ? ಕಾವ್ಯಶ್ರೀ ಖತರ್ನಾಕ್‌ ಕೆಲಸಕ್ಕೆ ಅಚ್ಚರಿಗೊಂಡ ಅರುಣ್‌ ಸಾಗರ್

    ಮೊದಲು ಕಳ್ಳತನ ಮಾಡ್ತಿದ್ರಾ? ಕಾವ್ಯಶ್ರೀ ಖತರ್ನಾಕ್‌ ಕೆಲಸಕ್ಕೆ ಅಚ್ಚರಿಗೊಂಡ ಅರುಣ್‌ ಸಾಗರ್

    ಬಿಗ್ ಬಾಸ್(Bigg Boss) ಮನೆಯಲ್ಲಿ `ಮಂಗಳಗೌರಿ’ (Mangala Gowri) ಕಾವ್ಯಶ್ರೀ ಕಾಲಿಟ್ಟಿದ್ದಾರೆ. ಚೆನ್ನಾಗಿ ಆಟವಾಡುತ್ತ ಆಗಾಗ ತಮ್ಮ ಹುಸಿಕೋಪದಿಂದ ಹೈಲೆಟ್ ಆಗುತ್ತಿದ್ದಾರೆ. ಸದ್ಯ ಪ್ರಶಾಂತ್ ಸಂಬರ್ಗಿ ಅವರ ಸೂಟ್‌ಕೇಸ್‌ನ ಗೊತ್ತಿಲ್ಲದ ಪಾಸ್‌ವರ್ಡ್ ಟಕ್ಕನೇ ತೆಗೆದು ಕಾವ್ಯಶ್ರೀ ಅಚ್ಚರಿ ಮೂಡಿಸಿದ್ದಾರೆ.

    `ಮಂಗಳಗೌರಿ ಮದುವೆ’ ಸೀರಿಯಲ್ ಮೂಲಕ ಮನೆಮಾತಾದ ನಟಿ ಕಾವ್ಯಶ್ರೀ ಇದೀಗ ಬಿಗ್ ಬಾಸ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಸಂಬರ್ಗಿ ಅವರ ಸೂಟ್‌ಕೇಸ್ ಲಾಕ್ ಓಪನ್ ಮಾಡಿ ಎಲ್ಲರಿಗೂ ಕಾವ್ಯಶ್ರೀ ಶಾಕ್ ಕೊಟ್ಟಿದ್ದಾರೆ. ಗೊತ್ತಿಲ್ಲದ ಪಾಸ್‌ವರ್ಡ್‌ ಟಕ್ಕನೇ ಓಪನ್ ಮಾಡಿ, ತಮ್ಮ ಕೈಚಳಕ ತೋರಿಸಿದ್ದಾರೆ.

    ಟಾಸ್ಕ್‌ ನಂತರ ಸಂಬರ್ಗಿ ತಮ್ಮ ಸೂಟ್‌ಕೇಸ್ ಪಾಸ್ ವರ್ಡ್ ಮರೆತಿದ್ದರು. ಅದನ್ನ ಓಪನ್ ಮಾಡಲಾಗದೇ ಪರಡಾಡುತ್ತಿದ್ದರು. ಈ ವೇಳೆ ಕಾವ್ಯಶ್ರೀ ಸೂಟ್‌ಕೇಸ್ ಓಪನ್ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಕಾವ್ಯಶ್ರೀ ಕೈಚಳಕ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಜೊತೆಗೆ ಸಂಬರ್ಗಿಗೆ ಕಾವ್ಯಳನ್ನ ಅಸಿಸ್ಟೆಂಟ್ ಮಾಡಿಕೋ ಎಂದು ಅರುಣ್ ಸಾಗರ್ (Arun Sagar) ರೇಗಿಸಿದ್ದಾರೆ. ಸಂಬರ್ಗಿ ಅವರು ಎರಡು ಬ್ಯಾಗ್‌ಗಳನ್ನು ಕಾವ್ಯ ಓಪನ್ ಮಾಡಿ ಕೊಟ್ಟಿದ್ದಾರೆ. ಕಾವ್ಯ ಕೈಚಳಕ ನೋಡಿ, ಮನೆಯಲ್ಲಿ ಏನಾದ್ರೂ ಕದಿಯುತ್ತಿದ್ರಾ ಎಂದು ಅರುಣ್ ಸಾಗರ್ ಕೇಳಿದ್ದಾರೆ. ಇದನ್ನೂ ಓದಿ:ಗಲ್ಲಾಪೆಟ್ಟಿಗೆಗೆ ಕನ್ನಾ ಹಾಕಿದ ʻಕಾಂತಾರʼ: 2ನೇ ವಾರವೂ ಯಶಸ್ವಿ ಪ್ರದರ್ಶನ

    ಇನ್ನೂ ಕಾವ್ಯಶ್ರೀ ಅವರನ್ನ ಕಳ್ಳತನಕ್ಕೆ ಕರೆದುಕೊಂಡು ಹೋದರೆ ವರ್ಕೌಟ್ ಆಗುತ್ತದೆ ಎಂದು ಅರುಣ್ ಸಾಗರ್ ಕಾವ್ಯಶ್ರೀ ಅವರ ಕಾಲೆಳೆದಿದ್ದಾರೆ. ತಮ್ಮ ನೇರ ಮಾತಿನ ಮೂಲಕ ಹೈಲೆಟ್ ಆಗಿರುವ ಕಾವ್ಯಶ್ರೀ ಈ ವಾರ ನಾಮಿನೇಷನ್‌ನಿಂದ ಬಚಾವ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್‌ ಬಾಸ್‌ ಮನೆಯಲ್ಲಿ ಅಮೂಲ್ಯ ತುಟಿ ನೋಡಿ ಜ್ಯೋತಿಷ್ಯ ಹೇಳಿದ ಗುರೂಜಿ

    ಬಿಗ್‌ ಬಾಸ್‌ ಮನೆಯಲ್ಲಿ ಅಮೂಲ್ಯ ತುಟಿ ನೋಡಿ ಜ್ಯೋತಿಷ್ಯ ಹೇಳಿದ ಗುರೂಜಿ

    ಬಿಗ್ ಬಾಸ್ ಮನೆಯಲ್ಲಿ(Bigg Boss House) ಒಂದಲ್ಲಾ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುವ ಆರ್ಯವರ್ಧನ್ ಗುರೂಜಿ (Aryavardhan Guruji), ನಂಬರ್ ಅಂದ್ರೆ ನಾನು ಎಂದು ಹೇಳುವ ಮೂಲಕ ಸಖತ್ ಹೈಲೆಟ್ ಆಗಿದ್ದರು. ಜ್ಯೋತಿಷ್ಯವನ್ನೇ ನಂಬಿ ಬದುಕುತ್ತಿರುವ ಗುರೂಜಿ ಇದೀಗ ದೊಡ್ಮನೆಯಲ್ಲಿ ಅಮೂಲ್ಯ ತುಟಿ ನೋಡಿ ಜ್ಯೋತಿಷ್ಯ ಹೇಳಿದ್ದಾರೆ.

    ದೊಡ್ಮನೆ ಈಗ ಎರಡನೇ ವಾರಕ್ಕೆ ಕಾಲಿಟ್ಟಿದೆ. ಸಾಕಷ್ಡು ರೋಚಕ ತಿರುವುಗಳನ್ನ ಪಡೆದುಕೊಳ್ಳುತ್ತಿರುವ ಬಿಗ್ ಬಾಸ್ ಮನೆಯಲ್ಲಿ ಕಾಲಿಗೆ ಒಂದು ಕಾಲ ಎಂಬ ಟಾಸ್ಕ್ ಅನ್ನು ಕೊಡಲಾಗಿದೆ. ದಿವ್ಯಾ ಉರುಡುಗ(Divya Uruduga) ಮತ್ತು ಸಾನ್ಯ (Sanya Iyer) ಒಂದು ಜೋಡಿ ಮತ್ತು ದೀಪಿಕಾ ಮತ್ತು ರೂಪೇಶ್ ಮತ್ತೊಂದು ಜೋಡಿಯಾಗಿ ಎರಡು ತಂಡಗಳ ಜಟಾಪಟಿ ನಡೆದಿದೆ. ಈ ವೇಳೆ ಗುರೂಜಿ ಮತ್ತು ನಟಿ ಅಮೂಲ್ಯ ಸಂಭಾಷಣೆ ಎಲ್ಲರ ನಗುವಿಗೆ ಕಾರಣವಾಗಿದೆ.

    ಟಾಸ್ಕ್ ವೀಕ್ಷಿಸುವ ಸಮಯದಲ್ಲಿ ಗುರೂಜಿ ಅಮೂಲ್ಯ ತುಟಿ ನೋಡಿ ಭವಿಷ್ಯ ನುಡಿದಿದ್ದಾರೆ. ನಿಮ್ಮ ತುಟಿ ಮೇಲೆ ಚೂಪಾಗಿದೆ. ಹೀಗಿದ್ದರೆ ಒಳ್ಳೆಯದು ಎಲ್ಲರೂ ನಿಮ್ಮನ್ನು ಇಷ್ಟಪಡುತ್ತಾರೆ ಎಂದು ಗುರೂಜಿ ಹೇಳಿದ್ದಾರೆ. ಅವರ ಮಾತಿಗೆ ಅಮೂಲ್ಯ ನಕ್ಕಿದ್ದಾರೆ. ಇದೇ‌ ವೇಳೆ ರಾಕೇಶ್ ಅಡಿಗ ನನ್ನ ತುಟಿ ಭವಿಷ್ಯ ಹೇಳಿ ಎಂದು ಕೇಳಿದ್ದಾರೆ. ಆಗ ಗುರೂಜಿ, ನಿನ್ನ ಹಿಂದೆ ಯಾರು ಬೀಳಲ್ಲ, ನೀನೇ ಎಲ್ಲರ ಹಿಂದೆ ಹೋಗುತ್ತಿಯಾ ಟಾಂಗ್ ಕೊಟ್ಟಿದ್ದಾರೆ. ಗುರೂಜಿ ಮಾತಿಗೆ ಮನೆಮಂದಿಯೆಲ್ಲಾ ಬಿದ್ದು ಬಿದ್ದು ನಕ್ಕಿದ್ದಾರೆ. ಇದನ್ನೂ ಓದಿ:ಒಂದು ವಾರಕ್ಕೆ ‘ಕಾಂತಾರ’ದ ಕಲೆಕ್ಷನ್ 50 ಕೋಟಿ: ಸಿನಿ ಪಂಡಿತರ ಅಚ್ಚರಿಯ ಲೆಕ್ಕಾಚಾರ

    ಇದೇ ವೇಳೆ ಅರುಣ್ ಸಾಗರ್ ಕೂಡ ನನ್ನ ತುಟಿ ನೋಡಿ ಭವಿಷ್ಯ ಹೇಳಿ ಎಂದಿದ್ದಾರೆ. ನೀವು ಮೊದಲು‌ ಮೀಸೆ ಬೊಳಿಸಿಕೊಂಡು ಬನ್ನಿ ಎಂದು ಗುರೂಜಿ ಚಮಕ್ ಕೊಟ್ಟಿದ್ದಾರೆ. ಈ ಮೂಲಕ ಗುರೂಜಿ ಬಿಗ್ ಬಾಸ್ ಮನೆಯಲ್ಲಿ ನೇರ ಮಾತಿನ ಮೂಲಕ ಹೈಲೆಟ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅರುಣ್ ಸಾಗರ್‌ಗೆ ಕಳಪೆ ಹಣೆಪಟ್ಟಿ ಕಟ್ಟಿದ ಬಿಗ್ ಬಾಸ್ ಮನೆಮಂದಿ

    ಅರುಣ್ ಸಾಗರ್‌ಗೆ ಕಳಪೆ ಹಣೆಪಟ್ಟಿ ಕಟ್ಟಿದ ಬಿಗ್ ಬಾಸ್ ಮನೆಮಂದಿ

    ಸ್ಯಾಂಡಲ್‌ವುಡ್‌ನಲ್ಲಿ (Sandalwood) ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟ ಅರುಣ್ ಸಾಗರ್(Arun Sagar), ಕಿರುತೆರೆಯ ಬಿಗ್ ಶೋ ಬಿಗ್ ಬಾಸ್ ಸೀಸನ್ ಒಂದರಲ್ಲಿ ರನ್ನರ್ ಅಪ್ ಆಗಿ ಗುರುತಿಸಿಕೊಂಡಿದ್ದರು. ಇದೀಗ ಮತ್ತೆ ದೊಡ್ಮನೆಗೆ ಎಂಟ್ರಿ ಕೊಟ್ಟಿರುವ ಅರುಣ್ ಸಾಗರ್ ಬಗ್ಗೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. ನಟನ ಬಗ್ಗೆ ನೆಗೆಟಿವ್ ಕಾಮೆಂಟ್‌ಗಳ ಮಹಾಪೂರವೇ ಹರಿದು ಬರುತ್ತಿದೆ.

    ನಟ, ಖಳನಟ, ಹಾಸ್ಯ ಕಲಾವಿದ ಹೀಗೆ ಸಾಕಷ್ಟು ಪಾತ್ರಗಳ ಮೂಲಕ ರಂಜಿಸಿರುವ ನಟ ಅರುಣ್ ಸಾಗರ್ ಸೀಸನ್ ಒನ್ ಬಿಗ್ ಬಾಸ್‌ನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಇದೀಗ ಮತ್ತೆ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಮೂಲಕ ಅರುಣ್ ಸಾಗರ್ ಸದ್ದು ಮಾಡುತ್ತಿದ್ದಾರೆ. ಒಂದ್ ಕಡೆ ನಟನ ಎಂಟ್ರಿಗೆ ನೆಟ್ಟಿಗರಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದರೆ, ಇತ್ತ ದೊಡ್ಮನೆಯಲ್ಲಿ ಸ್ಪರ್ಧಿಗಳ ಕೆಂಗಣ್ಣಿಗೂ ಕೂಡ ಗುರಿಯಾಗಿದ್ದಾರೆ. ಇದನ್ನೂ ಓದಿ:ನಟಿ ಸಮಂತಾ ಆರೋಗ್ಯದ ಬಗ್ಗೆ ಮತ್ತೆ ಆತಂಕ: ‘ಶಾಕುಂತಲಾ’ ಸಿನಿಮಾ ರಿಲೀಸ್ ಮುಂದಕ್ಕೆ

     

    View this post on Instagram

     

    A post shared by Arun Sagar (@arunsagar_official)

    ಬಿಗ್ ಬಾಸ್ ಸೀಸನ್ 9ಕ್ಕೆ ಎಂಟ್ರಿ ಕೊಟ್ಟ ದಿನವೇ ನಟ ಅರುಣ್ ಟಿವಿ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಮತ್ತೆ ಯಾಕೆ ಇವರನ್ನೇ ಆಯ್ಕೆ ಮಾಡಿದ್ರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಗಿತ್ತು. ಇದೀಗ ದೊಡ್ಮನೆಯಲ್ಲೂ ಬಿಗ್ ಬಾಸ್ ಕೊಡುವ ಟಾಸ್ಕ್‌ಗೆ ಅರುಣ್ ಗೌರವ ಕೊಡುವುದಿಲ್ಲ. ಮನೆಯ ರೂಲ್ಸ್ ಫಾಲೋವ್ ಮಾಡೋದಿಲ್ಲ. ಮನೆಯಲ್ಲಿ ಅರುಣ್ ಸಾಗರ್ ಗಂಭೀರವಾಗಿ ಆಡುತ್ತಿಲ್ಲಾ ಎಂದು ಮನೆಯವರ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದಾರೆ. ಅವರ ವರ್ತನೆಗೆ ಬೆಸತ್ತ ಮನೆಮಂದಿ ಮೊದಲ ವಾರವೇ ಅರುಣ್‌ಗೆ ಕಳಪೆ ಹಣೆಪಟ್ಟಿ ಕೂಡ ಕೊಟ್ಟಿದ್ದಾರೆ.

     

    View this post on Instagram

     

    A post shared by Arun Sagar (@arunsagar_official)

    ಮೊದಲ ಸೀಸನ್‌ನಲ್ಲಿ ರನ್ನರ್ ಅಪ್ ಆಗಿ ಅಪಾರ ಅಭಿಮಾನಿಗಳ ಮನಗೆದ್ದ ಅರುಣ್ ಸಾಗರ್ ಇದೀಗ ತಮಗೆ ಸಿಕ್ಕಿರುವ ಬಿಗ್ ಬಾಸ್‌ನ ಎರಡನೇ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ‘ನಾನು ಸೈಲೆಂಟ್ ಅಲ್ಲ ವೈಲೆಂಟ್’ ಎಂದು ಖಡಕ್ ಎಚ್ಚರಿಕೆ ಕೊಟ್ಟ ಆರ್ಯವರ್ಧನ್ ಗುರೂಜಿ

    ‘ನಾನು ಸೈಲೆಂಟ್ ಅಲ್ಲ ವೈಲೆಂಟ್’ ಎಂದು ಖಡಕ್ ಎಚ್ಚರಿಕೆ ಕೊಟ್ಟ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ 9ನೇ (Bigg Boss Season 9) ಸೀಸನ್ ಶುರುವಾಗಿದೆ. ಪ್ರವೀಣರ ಜೊತೆ ನವೀನರ ಜುಗಲ್ ಬಂದಿ ಕೂಡ ಜೋರಾಗಿದೆ. ಇದೀಗ ದೊಡ್ಮನೆಯಲ್ಲಿ ಮೊದಲ ದಿನವೇ ಜಗಳ ಶುರುವಾಗಿದ್ದು,  ಕೆಣಕಲು ಬಂದ ಪ್ರಶಾಂತ್ ಸಂಬರ್ಗಿಗೆ ಆರ್ಯವಧನ್ ಗುರೂಜಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಮೋದಿ, ಹೇಮಾ ಮಾಲಿನಿಗೆ ರಾಖಿ ಸಾವಂತ್ ಥ್ಯಾಂಕ್ಸ್ ಹೇಳಿದ್ದೇಕೆ?

    ದೊಡ್ಮನೆಯಲ್ಲಿ 18 ಜನ ಭಿನ್ನ ವ್ಯಕ್ತಿಗಳಿದ್ದಾರೆ. ಮನೆಯ ರಂಗು ಮತ್ತಷ್ಟು ಜೋರಾಗಿದೆ. ಇನ್ನೂ ಈ ವೇಳೆ ಗುರೂಜಿ ಪ್ರಶಾಂತ್ ಸಂಬರ್ಗಿ (Prashant Sambargi) ಅವರನ್ನು ಸಂಪಂಗಿ ಅಂದಿದ್ದಾರೆ. ಈ ಮಾತು ಜಗಳಕ್ಕೆ ಎಡೆ ಮಾಡಿ ಕೊಟ್ಟಿದೆ. ರೀ ಅದು ಸಂಬರ್ಗಿ ಊರಿನ ಹೆಸರು ಎಂದು ಪ್ರಶಾಂತ್ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಬಳಿಕ ನೀವು ಆರ್ಯವರ್ಧನ್ ಅಂತಾ ಯಾಕೆ  ಇಟ್ಟುಕೊಂಡ್ರಿ ನಾನು ಹೇಳಲಾ ನಿಮ್ಮ ನಿಜವಾದ ಹೆಸರು ಎಂದು ಪ್ರಶಾಂತ್, ಗುರೂಜಿಗೆ ಟಾಂಗ್ ಕೊಟ್ಟಿದ್ದಾರೆ.

    ಆರ್ಯವರ್ಧನ್ (Aryavardhan Guruji) ಉರುಫ್ ಏನು ಎಂದು ಪ್ರಶಾಂತ್ ಮತ್ತೆ ಕೇಳಿದ್ದಾರೆ. ಈ ಮಾತಿನ ಚಕಮಕಿ ಉರ್ಫಿಯಿಂದ ಉರಿಸೋದರವೆಗೆ ಚರ್ಚೆ ಆಗಿದೆ. ಈ ಜಗಳದ ನಡುವೆ ಇತ್ತ ಅರುಣ್ ಸಾಗರ್ (Arun Sagar) ಉರ್ಫಿಗೆ ಉರವಿದ್ದಾರೆ ಎಂದು ನಗೆಚಟಾಕಿ ಹಾರಿಸಿದ್ದಾರೆ. ಇವರು ಇನ್ಮೇಲೆ ಆರ್ಯವರ್ಧನ್ ಉರಸು ಎಂದು ಅರಣ್ ಸಾಗರ್ ಮನೆ ಮಂದಿ ಮುಂದೆ ಹೇಳಿದ್ದಾರೆ. ಅಷ್ಟಕ್ಕೇ ನಿಲ್ಲದ ಈ ಚರ್ಚೆ ಕಡೆಗೆ ಗುರೂಜಿ ಸಂಬರ್ಗಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    ನನಗೆ ಏನೇ ಹೇಳಬೇಕಿದ್ದರೂ ನೇರವಾಗಿ ಹೇಳಿ ಎಂದು ನಾನು ಸೈಲೆಂಟ್ (Silent) ಅಲ್ಲ ವೈಲೆಂಟ್.. ಫೈಯರ್ ನಾನು‌ ಎಂದು ಸಂಬರ್ಗಿಗೆ ನೇರವಾಗಿ ಟಾಂಗ್ ಕೊಟ್ಟಿದ್ದಾರೆ. ಉರಿಸಲು ಬಂದ ಪ್ರಶಾಂತ್ ಗೆ ಪಂಚಿಂಗ್ ಡೈಲಾಗ್ ಗಳ ಮೂಲಕ ಗುರೂಜಿ ಬೆವರಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಂಟೆಸ್ಟೆಂಟ್ ನಂಬರ್ 1 ಆಗಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ ನಟ ಅರುಣ್ ಸಾಗರ್

    ಕಂಟೆಸ್ಟೆಂಟ್ ನಂಬರ್ 1 ಆಗಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ ನಟ ಅರುಣ್ ಸಾಗರ್

    ಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರಲಿರುವ ಬಿಗ್ ಬಾಸ್ ಸೀಸನ್ 9 (Bigg Boss Season 9) ಶುರುವಾಗಲೇ ಇನ್ನೊಂದೇ ಗಂಟೆ ಬಾಕಿ ಇದೆ. ಅದಕ್ಕೂ ಮುನ್ನ ವಾಹಿನಿಯು ಪ್ರೋಮೋ ಒಂದನ್ನು ರಿಲೀಸ್ ಮಾಡಿದ್ದು, ದೊಡ್ಮನೆಗೆ ಮೊದಲು ಸ್ಪರ್ಧಿಯಾಗಿ ನಟ, ಕಲಾ ನಿರ್ದೇಶಕ ಅರುಣ್ ಸಾಗರ್ (Arun Sagar) ಕಾಲಿಟ್ಟಿದ್ದಾರೆ. ಅಲ್ಲದೇ, ಸುದೀಪ್ ಅವರ ಜೊತೆ ಹ್ಯೂಮರೆಸ್ ಆಗಿ ಮಾತನಾಡಿ ಮನರಂಜನೆ ನೀಡಿದ್ದಾರೆ. ಸುದೀಪ್ ಮತ್ತು ಅರುಣ್ ಸಾಗರ್ ಆಪ್ತರು ಆಗಿರುವ ಕಾರಣದಿಂದಾಗಿ ಮಾತುಗಳು ಕೂಡ ಅದೇ ಶೈಲಿಯಲ್ಲೇ ಮೂಡಿ ಬಂದಿವೆ.

    ನಟ, ಕಲಾ ನಿರ್ದೇಶಕ, ರಂಗಭೂಮಿ ಪ್ರತಿಭೆ ಅರುಣ್ ಸಾಗರ್ ಕೂಡ ಈಗಾಗಲೇ ಬಿಗ್ ಬಾಸ್ ಮನೆ ಸೇರಿದ್ದಾರೆ. ಬಿಗ್ ಬಾಸ್ ಸೀಸನ್ 1ರಲ್ಲೂ ಅರುಣ್ ಸಾಗರ್ ದೊಡ್ಮನೆ ಪ್ರವೇಶ ಮಾಡಿದವರು. ಎರಡನೇ ಸ್ಥಾನವನ್ನೂ ಪಡೆದವರು. ಈ ಬಾರಿಯೂ ಅವರಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ. ನಟನಾಗಿ, ಕಲಾ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಅರುಣ್, ತಮ್ಮ ಮಾತುಗಳ ಮೂಲಕವೇ ಮೋಡಿ ಮಾಡಿದವರು. ಕಿಚ್ಚ ಸುದೀಪ್ (Sudeep) ಅವರಿಗೆ ತೀರಾ ಆಪ್ತರು ಕೂಡ. ಸೀಸನ್ 1ರಲ್ಲಿ ಬಿಗ್ ಬಾಸ್ ಪಟ್ಟ ಇವರಿಗೆ ಒಲಿಯುತ್ತದೆ ಎಂದು ಹೇಳಲಾಗಿತ್ತು. ಆದರೆ, ಅದು ಫಲ ಕೊಡಲಿಲ್ಲ. ಈ ಬಾರಿಯಾದರೂ ಗೆದ್ದು ಬರುತ್ತಾರಾ ಕಾದು ನೋಡಬೇಕು.

    ಅರುಣ್ ಲುಕ್ ತುಂಬಾ ಸ್ಪೆಷಲ್ ಆಗಿದೆ. ಬಿಗ್ ಬಾಸ್ ಮನೆ ಒಳಗೆ ಅವರನ್ನು ಕಳುಹಿಸಿಲು ಪತ್ನಿ, ಪುತ್ರಿ ಹಾಗೂ ಪುತ್ರ ಆಗಮಿಸಿದ್ದರು. ಎರಡನೇ ಬಾರಿಗೆ ಮನೆಯ ಯಜಮಾನನ್ನು ದೊಡ್ಮೆನೆಗೆ ಕಳುಹಿಸಿ, ಈ ಬಾರಿ ಗೆದ್ದು ಬರಲಿ ಎಂದು ಹಾರೈಸಿದ್ದಾರೆ. ತಮ್ಮ ಮಾತು ಮತ್ತು ಅಭಿನಯ ಮೂಲಕವೇ ಬಿಗ್ ಬಾಸ್ ಮನೆಯ ಗಮನ ಸೆಳೆದಿದ್ದರು ಅರುಣ್. ಇವರೇ ಆ ಸೀಸನ್ ನಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಕೊನೆ ಗಳಿಗೆಯ ಆಟವೇ ಬದಲಾಗಿತ್ತು. ಈ ಬಾರಿ ಅವರು ಏನು ಮಾಡುತ್ತಾರೆ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • Breaking- ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಎಕ್ಸ್‌ಕ್ಲೂಸಿವ್ ಸೆಲೆಬ್ರಿಟಿಗಳು

    Breaking- ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಎಕ್ಸ್‌ಕ್ಲೂಸಿವ್ ಸೆಲೆಬ್ರಿಟಿಗಳು

    ಬಿಗ್ ಬಾಸ್ ಸೀಸನ್ 9 (Bigg Boss Season 9) ಇಂದಿನಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನಿನ್ನೆಯಿಂದಲೇ ಕಿಚ್ಚ ಸುದೀಪ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಈಗಾಗಲೇ ಹಲವು ಅಚ್ಚರಿಯ ಸ್ಪರ್ಧೆಗಳು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ಅದರಲ್ಲಿ ಹಲವು ಅಚ್ಚರಿಯ ಹೆಸರುಗಳು ಕೇಳಿ ಬಂದಿದ್ದವು. ಆದರೂ, ಅಳೆದು ತೂಗಿ ಕೆಲವರನ್ನು ಆಕೆ ಮಾಡಿಕೊಂಡು ಈಗಾಗಲೇ ಬಿಗ್ ಬಾಸ್ ಮನೆಗೆ ಕಳುಹಿಸಲಾಗಿದೆ.

    ಪ್ರಶಾಂತ್ ಸಾಂಬರಗಿ

    ಕಳೆದ ಬಾರಿ ಬಿಗ್ ಬಾಸ್ ಮನೆಯಲ್ಲಿ ಇದ್ದ ಪ್ರಖರ ಹೋರಾಟಗಾರ ಪ್ರಶಾಂತ್ ಸಾಂಬರಗಿ (Prashant Sambaragi) ಈ ಬಾರಿಯೂ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ಡ್ರಗ್ಸ್ ಕೇಸ್ ನಲ್ಲಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳನ್ನು ಕಟೆಕಟೆಯಲ್ಲಿ ನಿಲ್ಲಿಸಿದ್ದ ಪ್ರಶಾಂತ್, ಒಂದು ರೀತಿಯಲ್ಲಿ ತಮ್ಮದೇ ಆದ ಹೋರಾಟದ ಮೂಲಕ ಬಣ್ಣದ ಜಗತ್ತಿನ ಕರಾಳ ಮುಖವನ್ನು ಬಿಚ್ಚಿಟ್ಟವರು. ಅಲ್ಲದೇ, ಹಿಂದೂಪರ ಸಂಘಟನೆಗಳ ಜೊತೆಯೂ ಗುರುತಿಸಿಕೊಂಡವರು. ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದರೂ, ಮೀಟೂ ಮತ್ತು ಡ್ರಗ್ಸ್ ಕೇಸುಗಳಿಂದಾಗಿ ಹೆಚ್ಚು ಸುದ್ದಿಯಾದವರು. ಇದನ್ನೂ ಓದಿ: `ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ

    ಮಯೂರಿ

    ನಟಿ ಮಯೂರಿ ಕೂಡ ಈ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಹೆಚ್ಚು ಜನರಿಗೆ ಪರಿಚಯವಾದ ಮಯೂರಿ (Mayuri), ಆ ನಂತರ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರು. ಮದುವೆಯ ನಂತರ ಸಿನಿಮಾ ರಂಗದಿಂದ ದೂರವಿದ್ದಾರೆ. ಪುಟ್ಟ ಮಗುವಿನೊಂದಿಗೆ ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದವರು, ಇದೀಗ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಉತ್ತರ ಕರ್ನಾಟಕದ ಹುಡುಗಿ, ಬೆಳೆದದ್ದು ಬೆಂಗಳೂರಿನಲ್ಲಿ. ತಮ್ಮ ಮುಗುಳು ನಗೆ ಮೂಲಕವೇ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದವರು.

    ಅರುಣ್ ಸಾಗರ್

    ನಟ, ಕಲಾ ನಿರ್ದೇಶಕ, ರಂಗಭೂಮಿ ಪ್ರತಿಭೆ ಅರುಣ್ ಸಾಗರ್ (Arun Sagar) ಕೂಡ ಈಗಾಗಲೇ ಬಿಗ್ ಬಾಸ್ ಮನೆ ಸೇರಿದ್ದಾರೆ. ಬಿಗ್ ಬಾಸ್ ಸೀಸನ್ 1ರಲ್ಲೂ ಅರುಣ್ ಸಾಗರ್ ದೊಡ್ಮನೆ ಪ್ರವೇಶ ಮಾಡಿದವರು. ಎರಡನೇ ಸ್ಥಾನವನ್ನೂ ಪಡೆದವರು. ಈ ಬಾರಿಯೂ ಅವರಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ. ನಟನಾಗಿ, ಕಲಾ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಅರುಣ್, ತಮ್ಮ ಮಾತುಗಳ ಮೂಲಕವೇ ಮೋಡಿ ಮಾಡಿದವರು. ಕಿಚ್ಚ ಸುದೀಪ್ (Sudeep) ಅವರಿಗೆ ತೀರಾ ಆಪ್ತರು ಕೂಡ. ಸೀಸನ್ 1ರಲ್ಲಿ ಬಿಗ್ ಬಾಸ್ ಪಟ್ಟ ಇವರಿಗೆ ಒಲಿಯುತ್ತದೆ ಎಂದು ಹೇಳಲಾಗಿತ್ತು. ಆದರೆ, ಅದು ಫಲ ಕೊಡಲಿಲ್ಲ. ಈ ಬಾರಿಯಾದರೂ ಗೆದ್ದು ಬರುತ್ತಾರಾ ಕಾದು ನೋಡಬೇಕು.

    ದೀಪಿಕಾ ದಾಸ್

    ರಾಕಿಂಗ್ ಸ್ಟಾರ್ ಯಶ್ ಅವರ ಚಿಕ್ಕಮ್ಮನ ಮಗಳಾದ ದೀಪಿಕಾ ದಾಸ್ (Deepika Das) ಕೂಡ ಈಗಾಗಲೇ ಬಿಗ್ ಬಾಸ್ ಮನೆ ಸೇರಿಕೊಂಡಿದ್ದಾರೆ. ಸೀಸನ್ 7ರಲ್ಲೂ ದೀಪಿಕಾ ದೊಡ್ಮನೆ ಸೇರಿದ್ದರು. ಸಿನಿಮಾ ರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದಿರುವ ದೀಪಿಕಾ, ಸಿನಿಮಾ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದರು. ಆದರೆ, ದೊಡ್ಡ ಪರದೇ ಅವರ ಕೈ ಹಿಡಿಯಲಿಲ್ಲ. ಕಿರುತೆರೆ ಅಪ್ಪಿಕೊಂಡಿತು. ಜೀ ವಾಹಿನಿಯಲ್ಲಿ ಪ್ರಸಾರವಾದ ನಾಗಿಣಿ ಸೀರಿಯಲ್ ಇವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಈ ಮನಸೇ, ಡ್ರೀಮ್ ಗರ್ಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ದೀಪಿಕಾ ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಮುವಾಯ್‌ಥೈ’ ಕ್ರೀಡೆಯಲ್ಲಿ ಅಪರೂಪದ ಸಾಧನೆ ಮಾಡಿದ ಅರುಣ್ ಸಾಗರ್ ಪುತ್ರ

    `ಮುವಾಯ್‌ಥೈ’ ಕ್ರೀಡೆಯಲ್ಲಿ ಅಪರೂಪದ ಸಾಧನೆ ಮಾಡಿದ ಅರುಣ್ ಸಾಗರ್ ಪುತ್ರ

    ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸಿನಿಮಾ ಮತ್ತು ನಿರೂಪಣೆಯ ಮೂಲಕ ಗಮನ ಸೆಳೆದಿರುವ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ವಿಶೇಷ ಸಾಧನೆಯೊಂದನ್ನ ಮಾಡಿದ್ದಾರೆ. ಮಗನ ಅಪರೂಪದ ಸಾಧನೆಯ ಕುರಿತು ನಟ ಅರುಣ್ ಸಾಗರ್ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Arun Sagar (@arunsagar_official)

    ಸಾಕಷ್ಟು ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ಕ್ರೀಡಾ ಜಗತ್ತಿನಲ್ಲಿ ವಿಶೇಷ ಸಾಧನೆಯನ್ನ ಮಾಡಿ, ಭಾರತಕ್ಕೆ ಕೀರ್ತಿ ತಂದಿದ್ದಾರೆ. ಈಗಾಗಲೇ ಸೂರ್ಯ, ದೇಶ ವಿದೇಶಗಳಲ್ಲಿ `ಮುವಾಯ್‌ಥೈ’ ಕ್ರೀಡೆ ಆಡಿ ಗೆದ್ದಿದ್ದಾರೆ. ಈಗ ಥಾಯ್ಲೆಂಡ್‌ನ ರಾಜಡಮ್ನೆರ್ನ್ ಕ್ರೀಡಾಂಗಣದಲ್ಲಿ ಆಡಿ ಗೆದ್ದ ಮೊದಲ ಮುವಾಯ್‌ಥೈ ಪಟು ಎನಿಸಿಕೊಂಡಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್ ಪತ್ನಿಯ, ದುಬಾರಿ ಮಿನಿ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗುತ್ತೀರಾ

     

    View this post on Instagram

     

    A post shared by surya sagar (@surya_sagar14)

    ರಾಜಡಮ್ನೆರ್ನ್ ಪ್ರಪಂಚದ ಮೊದಲ ಮುವಾಯ್‌ಥೈ ಸ್ಟೇಡಿಯಂ ಆಗಿದ್ದು, ಹಾಗಾಗಿ ಇಲ್ಲಿ ಪಂದ್ಯ ಆಡಿ, ಗೆಲ್ಲವುದು ಅದೆಷ್ಟೋ ಪಟುಗಳ ಕನಸುಸಾಗಿದೆ. ಇದೀಗ ಸೂರ್ಯ ಸಾಗರ್‌ನ ಅಪರೂಪದ ಸಾಧನೆ ನೋಡಿ ಕಿಚ್ಚ ಸುದೀಪ್ ಸೇರಿದಂತೆ ಹಲವಾರು ಚಿತ್ರರಂಗದ ಕಲಾವಿದರು ಸೂರ್ಯಗೆ ಶುಭಹಾರೈಸಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಂಯುಕ್ತ ಹೆಗಡೆ ನಟನೆಯ ‘ಕ್ರೀಂ’ ಸಿನಿಮಾದ ಶೂಟಿಂಗ್ ಆರಂಭ

    ಸಂಯುಕ್ತ ಹೆಗಡೆ ನಟನೆಯ ‘ಕ್ರೀಂ’ ಸಿನಿಮಾದ ಶೂಟಿಂಗ್ ಆರಂಭ

    ತುರ್ತು ನಿರ್ಗಮನ ಸೇರಿದಂತೆ ಸದ್ಯ ಹಲವು ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ಸಂಯುಕ್ತ ಹೆಗ್ಡೆ ಇದೀಗ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಕ್ರೀಂ ಎಂದು ಹೆಸರಿಡಲಾಗಿದೆ.  ‘ಕ್ರೀಂ’ ಚಿತ್ರಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಕೆ. ಜಿ. ಎಫ್.ನಲ್ಲಿ ಕಲಾ ನಿರ್ದೇಶನ ಮಾಡಿ ಪ್ರೇಕ್ಷಕರನ್ನು ಸೆಳೆದ ಶಿವಕುಮಾರ್ ಜೆ.ರವರು ಹಾಕಿರುವ ಸೆಟ್ಗಳು ಎಲ್ಲರ ಹುಬ್ಬೇರಿಸಿವೆ. ಇತ್ತೀಚಿನ ವರ್ಷಗಳಲ್ಲಿ ಶ್ರೀಮಂತಿಕೆಯ ಸೆಟ್ಗಳನ್ನು ಯಾರು ಕಂಡಿಲ್ಲ.

    ಅದಕ್ಕಿಂತಲೂ ಪ್ರಮುಖವಾಗಿ ಆ ಚಿತ್ರದ ತಾರಾಗಣ, ಸಂಯುಕ್ತ ಹೆಗ್ಡೆ, ಅರುಣ್ ಸಾಗರ್, ಮತ್ತು ಅಚ್ಯುತ್ ಕುಮಾರ್ ರವರ ಜೊತೆಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿರುವ ನಟರ ಹೆಸರನ್ನು ಭಾರಿ ಗೌಪ್ಯವಾಗಿಡಲಾಗಿದೆ. ಅದು ಎಲ್ಲೆಡೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ:ಮದುವೆಯ ವದಂತಿಗೆ ಸ್ಪಷ್ಟನೆ ನೀಡಿದ ರಾಮ್ ಪೋತಿನೇನಿ

     

    ಕ್ರೀಂ ಚಿತ್ರದ ಕಥೆ, ಸಂಯೋಜನೆ ಮತ್ತು ಚಿತ್ರಕಥೆಯನ್ನು ಸ್ರುಷ್ಟಿಸಿರುವವರು ಅಗ್ನಿ ಶ್ರೀಧರ್ ಅಂದಮೇಲೆ ಸಹಜವಾಗಿಯೇ ನೈಜ ಹಾಗೂ ಗೌಪ್ಯವಾಗಿ ನಡೆಯುತ್ತಿರುವ ಘಟನೆಗಳನ್ನು ಆಧರಿಸುವ ಸಿನೆಮಾ. ಚಿತ್ರವನ್ನು ಅಭಿಷೇಕ್ ಬಸಂತ್ ನಿರ್ದೇಶಿಸುತ್ತಿದ್ದಾರೆ. ನಿರ್ಮಾಪಕರು ಡಿ. ಕೆ. ದೇವೇಂದ್ರರವರಂತೂ ಹತ್ತು ದಿನಗಳ ಚಿತ್ರೀಕರಣ ಮುಗಿಯುವಷ್ಟರಲ್ಲಿ ಅಪಾರ ಹರ್ಷದಲ್ಲಿದ್ದಾರೆ. ಅವರ ಪ್ರಕಾರ ಈ ಸಿನಿಮಾ ಜಾಕ್ಪಾಟ್ ಹೊಡೆಯಲಿದೆ. ಸುನೋಜ್ ವೇಲಾಯುದನ್ ರವರ ಛಾಯಾಗ್ರಹಣ ಮತ್ತು ಸುರಾಗ್ ಸಂಗೀತವಿರುವ ಈ ಚಿತ್ರ, ವರ್ಷದ ಅಂತ್ಯದ ಹೊತ್ತಿಗೆ ಪ್ರೇಕ್ಷಕರಿಗೆ ಕಾಣಿಸಿಕೊಳ್ಳಲಿದೆ.

    Live Tv

  • ಸಾಮಾಜಿಕ ಕಳಕಳಿ ಹೊತ್ತ `ಕನ್ನೇರಿ’ಗೆ 50ರ ಸಂಭ್ರಮ

    ಸಾಮಾಜಿಕ ಕಳಕಳಿ ಹೊತ್ತ `ಕನ್ನೇರಿ’ಗೆ 50ರ ಸಂಭ್ರಮ

    ಬುಡಕಟ್ಟು ಜನರ ಬದುಕು, ಒಕ್ಕಲೆಬ್ಬಿಸಿದ ನಂತರದ ಬವಣೆ, ಹೆಣ್ಣುಮಕ್ಕಳ ಮೇಲಾಗುವ ದೌರ್ಜನ್ಯದ ಸುತ್ತ ಬೆಳಕು ಚೆಲ್ಲುವ `ಕನ್ನೇರಿ’ ಸಿನಿಮಾ 50ನೇ ದಿನದ ಸಂಭ್ರಮದಲ್ಲಿದೆ.

    ದೊಡ್ಡ ದೊಡ್ಡ ಸಿನಿಮಾಗಳ ಪೈಪೋಟಿ ನಡುವೆ ಪ್ರೇಕ್ಷಕರ ಪ್ರೀತಿಗೆ ಪಾತ್ರವಾದ `ಕನ್ನೇರಿ’ ಚಿತ್ರ ಮಾರ್ಚ್ 4ರಂದು ತೆರೆಕಂಡಿತ್ತು. ನೀನಾಸಂ ಮಂಜು ನಿರ್ದೇಶನ ಸಾರಥ್ಯದ 2ನೇ ಸಿನಿಮಾ ಇದಾಗಿದ್ದು, ಚಿತ್ರ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದನ್ನೂ ಓದಿ: ಪ್ರೆಗ್ನೆನ್ಸಿಯಲ್ಲೂ ಫಿಟ್‍ನೆಸ್ ಇರಬೇಕು ಎಂದು ವೀಡಿಯೋ ಮಾಡಿದ ನಟಿ ಪ್ರಣಿತಾ

    KANNERI 2

    ಮೊದಲಿನಿಂದಲೂ ಕನ್ನಡ ಸಿನಿಮಾಗಳ ಮೇಲೆ ವಿಶೇಷ ಪ್ರೀತಿ ಮೆರೆಯುತ್ತ ಬಂದಿರುವ ಉತ್ತರ ಕರ್ನಾಟಕದ ಜನತೆ ಕನ್ನೇರಿ ಸಿನಿಮಾ ನೋಡಿ ಮೆಚ್ಚಿ ಅಪ್ಪಿಕೊಂಡಿದ್ದಾರೆ. ಅದರಲ್ಲೂ ರಾಯಬಾಗದ ದತ್ತ ಚಿತ್ರಮಂದಿರದಲ್ಲಿ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಹಾಗಾಗಿ, ಇಡೀ ಚಿತ್ರತಂಡ ದತ್ತ ಚಿತ್ರಮಂದಿರದಲ್ಲೇ 50ನೇ ದಿನದ ಸಂಭ್ರಮವನ್ನು ಆಚರಿಸಿಕೊಂಡಿದೆ. ರಾಜ್ಯಾದ್ಯಂತ `ಕನ್ನೇರಿ’ ಸಿನಿಮಾ 10 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು ಸದ್ಯದಲ್ಲೇ OTT ವೇದಿಕೆಗೂ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

    KANNERI 3

    `ಕನ್ನೇರಿ’ ಅಪ್ಪಟ ಮಹಿಳಾ ಪ್ರಧಾನವಾದ ಸಿನಿಮಾ. ಕಾಡಿನಲ್ಲಿ ಬದುಕು ಕಟ್ಟಿಕೊಂಡಿರುವ ಜನರನ್ನು ಒಕ್ಕಲೆಬ್ಬಿಸಿದ ನಂತರದ ಬದುಕಿನ ಚಿತ್ರಣವನ್ನು ಅದರಲ್ಲೂ ಹೆಣ್ಣುಮಕ್ಕಳು ಯಾವ ರೀತಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಬಿತ್ತರಿಸಲಾಗಿದೆ. ನಗರ ಪ್ರದೇಶಕ್ಕೆ ಜೀವನ ಕಟ್ಟಿಕೊಳ್ಳಲು ಬಂದ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಕೃತ್ಯಗಳ ಮೇಲೂ ಬೆಳಕು ಚೆಲ್ಲುವ ಕೆಲಸವನ್ನು ಈ ಚಿತ್ರ ಮಾಡಿದೆ. ಇದನ್ನೂ ಓದಿ: ತಮಿಳು ನಟ ಸಂತಾನಂ ಜೊತೆ ಹಾಟ್ ಹಾಟ್ ಆಗಿ ಕಾಣಿಸಿಕೊಳ್ತಾರಂತೆ ರಾಗಿಣಿ

    KANNERI

    ತಾರಾಗಣದಲ್ಲಿ ಅರ್ಚನಾ ಮಧುಸೂದನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅನಿತಾ ಭಟ್, ಕರಿ ಸುಬ್ಬು, ಅರುಣ್ ಸಾಗರ್, ಎಂ.ಕೆ.ಮಠ ಒಳಗೊಂಡ ಅನುಭವಿ ಕಲಾವಿದರ ಅಭಿನಯವಿದೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಪಿ.ಪಿ. ಹೆಬ್ಬಾರ್ ಮತ್ತು ಚಂದ್ರಶೇಖರ್ ನಿರ್ಮಾಪಕರು. ಕೊಟಿಗಾನಹಳ್ಳಿ ರಾಮಯ್ಯ ಕಥೆ ಮತ್ತು ಸಾಹಿತ್ಯ, ಸುಜಿತ್ ಎಸ್ ನಾಯಕ್ ಸಂಕಲನ, ಗಣೇಶ್ ಹೆಗ್ಡೆ ಕ್ಯಾಮೆರಾ ನಿರ್ದೇಶನ ಚಿತ್ರಕ್ಕಿದೆ.