Tag: ಅರುಣ್ ಸಾಗರ್

  • ಮಹಿಳೆಯರ ಹತ್ಯೆ, ಮಕ್ಕಳ ಕಣ್ಮರೆ ಹಿಂದಿನ ಕಥನವೇ ‘ಕ್ರೀಮ್’ ಚಿತ್ರ

    ಮಹಿಳೆಯರ ಹತ್ಯೆ, ಮಕ್ಕಳ ಕಣ್ಮರೆ ಹಿಂದಿನ ಕಥನವೇ ‘ಕ್ರೀಮ್’ ಚಿತ್ರ

    ಗ್ನಿ ಶ್ರೀಧರ್ ಅವರು ಕಥೆ ಹಾಗೂ ಸಂಭಾಷಣೆ ಬರೆದಿರುವ, ಅಭಿಷೇಕ್ ಬಸಂತ್ (Abhishek Basant) ನಿರ್ದೇಶನದಲ್ಲಿ ಮೂಡಿಬಂದಿರುವ ಮಹಿಳಾ ಪ್ರಧಾನ ಚಿತ್ರ  ‘ಕ್ರೀಮ್’ (Kreem). ಸಂಯುಕ್ತಾ ಹೆಗ್ಡೆ (Samyuktha Hegde) ಈ ಚಿತ್ರದ ನಾಯಕಿಯಾಗಿದ್ದು, ಅಚ್ಯುತಕುಮಾರ್, ಅರುಣಸಾಗರ್  (Arun Sagar) ಪ್ರಮುಖ ಪಾತ್ರಗಳಲ್ಲಿದ್ದಾರೆ.  ಡಿ.ಕೆ. ದೇವೇಂದ್ರ ನಿರ್ಮಾಣ ಮಾಡಿದ್ದಾರೆ.

    ಇತ್ತೀಚೆಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಚಿತ್ರತಂಡದ ಸದಸ್ಯರು ಕ್ರೀಮ್ ಚಿತ್ರದ ಕುರಿತು ಮಾತನಾಡಿದರು.  ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಈ ಸಿನಿಮಾ ಮಾಡಲು ನನಗೆ ರೋಷನ್‌ ಅವರು ಸೇರಿದಂತೆ ಸಾಕಷ್ಟು ಜನ ಸಹಕಾರ ನೀಡಿದ್ದಾರೆ.    ಅಗ್ನಿ ಶ್ರೀಧರ್ ಅವರು ಈ ಚಿತ್ರದ ಕಥೆ ಬರೆದಿದ್ದಾರೆ. ಮುಖ್ಯವಾಗಿ ಕಥೆ ಬರೆದಿರುವವರಿಗೆ ನಿರ್ದೇಶನ ಇಷ್ಟವಾಗಬೇಕು. ಆ ನಿಟ್ಟಿನಲ್ಲಿ ನಾನು ಗೆದ್ದಿದ್ದೇನೆ ಅಂದುಕೊಳ್ಳಬಹುದು. ಇನ್ನು ಚಿತ್ರ ಉತ್ತಮವಾಗಿ ಮೂಡಿಬರಲು ಎಲ್ಲವನ್ನು ಒದಗಿಸುತ್ತಿರುವ ನಿರ್ಮಾಪಕ ದೇವೇಂದ್ರ ಅವರಿಗೆ ಧನ್ಯವಾದ.  ನಮ್ಮ ಚಿತ್ರಕ್ಕೆ  ಸಂಯುಕ್ತ ಹೆಗಡೆ ಅವರನ್ನು ಬಿಟ್ಟು ಬೇರೆ ಯಾರನ್ನೂ ನಾಯಕಿಯ ಪಾತ್ರಕ್ಕೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಚಿತ್ರಕ್ಕಾಗಿ ಅವರು ಪಟ್ಟಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ಸಾಹಸ ದೃಶ್ಯದಲ್ಲಿ ಅಭಿನಯಿಸುವಾಗ ಅವರ ಕಾಲಿಗೆ ಬಿದ್ದ ಪೆಟ್ಟಿನಿಂದ ಚೇತರಿಸಿಕೊಳ್ಳಲು ಕೆಲವು ತಿಂಗಳುಗಳೆ ಆಯಿತು. ಆನಂತರ ಕೂಡ ಅವರು ಮೊದಲಿನ ಹುಮ್ಮಸಿನಿಂದಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸದ್ಯ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ ಎಂದರು ನಿರ್ದೇಶಕ ಅಭಿಷೇಕ್ ಬಸಂತ್.

    ಕ್ರೀಮ್ ಎಂದರೆ ಕಾಳಿ ಮಾತೆಯನ್ನು ಆರಾಧಿಸುವ ಬೀಜಾಕ್ಷರಿ ಮಂತ್ರ.  ದೇಶದಲ್ಲಿ ಪ್ರತಿ ತಿಂಗಳು 400ಕ್ಕೂ ಹೆಚ್ಚು ಮಹಿಳೆಯರ ಹತ್ಯೆಯಾಗುತ್ತಿದೆ. ಜೊತೆಗೆ ಮಕ್ಕಳೂ ಕಣ್ಮರೆಯಾಗುತ್ತಿದ್ದಾರೆ, ಈ ಪ್ರಕರಣಗಳ ಹಿಂದೆ ಯಾರಿದ್ದಾರೆ? ಯಾಕೆ ಮಾಡುತ್ತಿದ್ದಾರೆ?  ಎನ್ನುವ ಅಂಶವನ್ನಿಟ್ಟುಕೊಂಡು ಕಥೆ ಬರೆದಿದ್ದೇನೆ.   ಸಂಯುಕ್ತ ಹೆಗಡೆ ಅವರದು ಇದರಲ್ಲಿ ವೇಶ್ಯೆಯ ಪಾತ್ರ. ಈ ಚಿತ್ರದ ಬಗ್ಗೆ ಕೂಡ ಕೆಲವು ವಿವಾದಗಳು ಬರಬಹುದು. ಎದುರಿಸಲು ನಾನು ಸಿದ್ದನಿದ್ದೇನೆ ಎಂದರು ಚಿತ್ರಕ್ಕೆ ಕಥೆ ಹಾಗೂ ಸಂಭಾಷಣೆ ಬರೆದಿರುವ ಅಗ್ನಿ ಶ್ರೀಧರ್. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ

    ಈ ಸಿನಿಮಾಗಾಗಿ ನಾನು 2೦೦ ಪರ್ಸೆಂಟ್ ಎಫರ್ಟ್ ಹಾಕಿದ್ದೇನೆ. ಚಿತ್ರೀಕರಣ ಸಮಯದಲ್ಲಿ ಕಾಲಿಗೆ ತೀವ್ರವಾದ ಪೆಟ್ಟಾಯಿತು.  ನಾನು ಎರಡು ತಿಂಗಳು ಮನೆಯಲ್ಲೇ ಇದ್ದು, ವಿಶ್ರಾಂತಿ ಪಡೆದಿದ್ದು ಇದೇ ಮೊದಲ ಬಾರಿ. ಫಿಸಿಯೋ ಥೆರಪಿ ಮಾಡಿಸಿಕೊಳ್ಳಬೇಕಾದರೆ ನಾನು ಪಟ್ಟ ನೋವು ಅಷ್ಟಿಷ್ಟಲ್ಲ. ಈ ಚಿತ್ರಕ್ಕಾಗಿ ನಾನು ಬೆವರು ಮಾತ್ರ ಹರಿಸಿಲ್ಲ. ರಕ್ತವನ್ನು ಹರಿಸಿದ್ದೇನೆ. ಇಷ್ಟೆಲ್ಲ ಶ್ರಮಪಟ್ಟರು ಒಂದೊಳ್ಳೆಯ ಸಿನಿಮಾದಲ್ಲಿ ನಟಿಸಿದ ತೃಪ್ತಿಯಿದೆ ಎಂದರು ನಾಯಕಿ ಸಂಯುಕ್ತ ಹೆಗಡೆ. ಚಿತ್ರ ಚೆನ್ನಾಗಿ ಬರಲು ಸಹಕಾರ ನೀಡುತ್ತಿರುವ ಚಿತ್ರತಂಡದ ಸದಸ್ಯರಿಗೆ ನಿರ್ಮಾಪಕ ದೇವೇಂದ್ರ ಧನ್ಯವಾದ ತಿಳಿಸಿದರು. ನಟ ರೋಷನ್ ಸೇರಿದಂತೆ ಚಿತ್ರತಂಡ ಹಲವು ಸದಸ್ಯರು ಹಾಜರಿದ್ದರು.

  • ಬಿಗ್ ಬಾಸ್ ಆರ್ಯವರ್ಧನ್ ಗುರೂಜಿಯನ್ನು ಭೇಟಿಯಾದ ಅರುಣ್ ಸಾಗರ್

    ಬಿಗ್ ಬಾಸ್ ಆರ್ಯವರ್ಧನ್ ಗುರೂಜಿಯನ್ನು ಭೇಟಿಯಾದ ಅರುಣ್ ಸಾಗರ್

    ಬಿಗ್ ಬಾಸ್ ಮನೆಯ (Bigg Boss House) ಆಟ ಮುಗಿದಿದೆ. ಆದರೆ ಸಂಬಂಧಗಳಿಗೆ ಲಗಾಮು ಬಿದ್ದಿಲ್ಲ. ದೊಡ್ಮನೆಯ ಆಟ ಮುಗಿದ ಬಳಿಕವೂ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಿದೆ. ಇದೀಗ ಆರ್ಯವರ್ಧನ್ ಗುರೂಜಿ (Aryavardhan Guruji) ಮನೆಗೆ ಅರುಣ್ ಸಾಗರ್ (Arun Sagar) ಭೇಟಿ ನೀಡಿದ್ದಾರೆ.

    ಸಂಖ್ಯಾಶಾಸ್ತ್ರ ಹೇಳುವ ಮೂಲಕ ಜನಪ್ರಿಯತೆ ಹೊಂದಿದ್ದ ಆರ್ಯವರ್ಧನ್ ಗುರೂಜಿ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಮನೆಯಲ್ಲಿ ಕಡೆಯ ದಿನದವರೆಗೂ ಆಟವಾಡಿ ಸೈ ಎನಿಸಿಕೊಂಡಿದ್ದರು. ಅದೇ ರೀತಿ ಸ್ಪರ್ಧಿ ಅರುಣ್ ಸಾಗರ್ ಅವರು ತಮ್ಮದೇ ಶೈಲಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದರು.‌ ಇದನ್ನೂ ಓದಿ: ಮಾಜಿ ಪತಿ ಫ್ಯಾಮಿಲಿ ಜೊತೆ ಸಮಂತಾ ಒಡನಾಟ, ವೈರಲಾಯ್ತು ಪೋಸ್ಟ್

    ಈಗ ಬಿಗ್ ಬಾಸ್ ಮನೆಯ ಆಟ ಮುಗಿದು ಒಂದು ತಿಂಗಳು ಕಳೆದಿದೆ. ಆಟ ಮುಗಿದ ಬಳಿಕವೂ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಿದೆ. ಈಗ ಆರ್ಯವರ್ಧನ್ ಗುರೂಜಿ ಮನೆಗೆ ಅರುಣ್ ಸಾಗರ್ ಭೇಟಿ ನೀಡಿದ್ದಾರೆ. ಕೆಲ ಸಮಯ ಕಳೆದಿದ್ದಾರೆ. ದೊಡ್ಮನೆಯ ಸಾಕಷ್ಟು ವಿಚಾರಗಳನ್ನ ನೆನಪಿಸಿಕೊಂಡಿದ್ದಾರೆ.

    ಆರ್ಯವರ್ಧನ್ ಗುರೂಜಿ, ಅರುಣ್ ಸಾಗರ್ ಅವರಿಗೆ ಪೇಟ ತೋಡಿಸಿ, ಶಾಲು ಹಾಕಿ ಸನ್ಮಾನ ಮಾಡಿದ್ದಾರೆ. ಅರುಣ್ ಸಾಗರ್ ಸಹ ಖುಷಿ ಆಗಿದ್ದಾರೆ.
    ಇನ್ನು ಅರುಣ್ ಸಾಗರ್ ಅವರು ಗುರೂಜಿ ಅವರ ಮಗಳ ಜೊತೆಯೂ ಮಾತನಾಡಿ ಖುಷಿಪಟ್ಟರು. ಇಬ್ಬರ ಭೇಟಿ ನೋಡುಗರಿಗೂ ಖುಷಿ ನೀಡಿದೆ. ಈ ಪೋಸ್ಟ್ ಇದೀಗ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೊಡ್ಮನೆಯಲ್ಲಿ ಡಬಲ್ ಎಲಿಮಿನೇಷನ್: ಅಮೂಲ್ಯ, ಅರುಣ್ ಸಾಗರ್ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್

    ದೊಡ್ಮನೆಯಲ್ಲಿ ಡಬಲ್ ಎಲಿಮಿನೇಷನ್: ಅಮೂಲ್ಯ, ಅರುಣ್ ಸಾಗರ್ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್

    ಬಿಗ್ ಬಾಸ್ (Bigg Boss) ಮನೆಯ ಆಟ ಕಡೆಯ ಘಟ್ಟದಲ್ಲಿದೆ. ಫಿನಾಲೆಗೆ ಕೆಲವೇ ದಿನಗಳು ಬಾಕಿಯಿದೆ. 8 ಜನ ಸ್ಪರ್ಧಿಗಳಿದ್ದ ಮನೆಯಲ್ಲಿ, ಈ ವಾರ ಡಬಲ್ ಎಲಿಮಿನೇಷನ್ ಆಗಿದೆ. ಅಮೂಲ್ಯ ಗೌಡ (Amulya Gowda) ಮತ್ತು ಅರುಣ್ ಸಾಗರ್ (Arun Sagar) ಮನೆಯಿಂದ ಹೊರ ಬಂದಿದ್ದಾರೆ.

    ‘ಕಮಲಿ’ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದ ನಟಿ ಅಮೂಲ್ಯ ಗೌಡ ಸೀಸನ್ 9ಕ್ಕೆ ಕಾಲಿಟ್ಟಿದ್ದರು. ಟಾಸ್ಕ್, ಅಡುಗೆ, ಮನರಂಜನೆ ಅಂತಾ ಇತರೆ ಸ್ಪರ್ಧಿಗಳಿಗೆ ಸಖತ್ ಪೈಪೋಟಿ ನೋಡಿದ್ದರು. ಆದರೆ ಅಮೂಲ್ಯ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಅಮೂಲ್ಯ ಗೌಡ ಔಟ್

    ನಟ, ಖಳ ನಟ, ಹೀಗೆ ಸಾಕಷ್ಟು ಪಾತ್ರಗಳ ಮೂಲಕ ಬೆಳ್ಳಿ ಪರದೆಯಲ್ಲಿ ರಂಜಿಸಿದ್ದ ಅರುಣ್ ಸಾಗರ್, ಬಿಗ್ ಬಾಸ್ ಸೀಸನ್ 1ರ ರನ್ನರ್ ಅಪ್ ಆಗಿದ್ದರು. ಬಳಿಕ ಸೀಸನ್ 9ರಲ್ಲೂ ರಂಜಿಸಿ ಸೈ ಎನಿಸಿಕೊಂಡಿದ್ದರು. 60ರ ಆಸುಪಾಸಿನಲ್ಲಿದ್ದರು ಕೂಡ 16ರ ಚಿರಯುವಕನಂತೆ ಟಾಸ್ಕ್, ಮನರಂಜನೆ ಅಂತಾ ಅರುಣ್ ಸಾಗರ್ ಮುಂದಿದ್ದರು. ಆದರೆ 14 ವಾರಕ್ಕೆ ಅರುಣ್ ಸಾಗರ್ ಆಟ ಅಂತ್ಯವಾಗಿದೆ. ಅಮೂಲ್ಯ ಜೊತೆ ಎರಡನೇ ಸ್ಪರ್ಧಿಯಾಗಿ ಎಲಿಮಿನೇಟ್ ಆಗಿದ್ದಾರೆ.

    ಅನಾರೋಗ್ಯದ ಹಿನ್ನೆಲೆ ಈ ವಾರ ಟಾಸ್ಕ್‌ಗಳಲ್ಲಿ ಅರುಣ್ ಸಾಗರ್ ಕೊಂಚ ಎಡವಿದ್ದಾರೆ‌. ಹಾಗಾಗಿ ಫಿ‌ನಾಲೆಗೆ ಹೋಗುವ ಅವಕಾಶ ಈ ಬಾರಿಯೂ ಕೈ ತಪ್ಪಿದೆ. ಈ ಸಲ‌ ಕೂಡ ಅರುಣ್ ಸಾಗರ್ ಅವರ ಅದೃಷ್ಟ ಕೈ ಕೊಟ್ಟಿದೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ದಿವ್ಯಾಗೆ ಕ್ಲಾಸ್ ತಗೆದುಕೊಂಡು ಆರ್ಯವರ್ಧನ್ ಗುರೂಜಿ

    ಕನ್ನಡದ ಬಿಗ್ ಬಾಸ್ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಕೊನೆಗೂ ಬಿಗ್ ಬಾಸ್ ಫಿನಾಲೆ ದಿನಾಂಕವನ್ನು ಘೋಷಣೆ ಮಾಡಿದ್ದು ಡಿಸೆಂಬರ್ 31 ಹಾಗೂ ಜನವರಿ 1ನೇ ತಾರೀಖು ಬಿಗ್ ಬಾಸ್ ಫಿನಾಲೆ ನಡೆಯುವುದು ನಿಕ್ಕಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಡಿಸೆಂಬರ್ 31, ಜನವರಿ 1ಕ್ಕೆ ಕನ್ನಡ ಬಿಗ್ ಬಾಸ್ ಫಿನಾಲೆ

    ಡಿಸೆಂಬರ್ 31, ಜನವರಿ 1ಕ್ಕೆ ಕನ್ನಡ ಬಿಗ್ ಬಾಸ್ ಫಿನಾಲೆ

    ವೀನರು ಹಾಗೂ ಪ್ರವೀಣರು ಎಂಬ ಟ್ಯಾಗ್ ಲೈನ್ ನೊಂದಿಗೆ ಶುರುವಾದ ಕನ್ನಡದ ಬಿಗ್ ಬಾಸ್ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಕೊನೆಗೂ ಬಿಗ್ ಬಾಸ್ ಫಿನಾಲೆ ದಿನಾಂಕವನ್ನು ಘೋಷಣೆ ಮಾಡಿದ್ದು ಡಿಸೆಂಬರ್ 31 ಹಾಗೂ ಜನವರಿ 1ನೇ ತಾರೀಖು ಬಿಗ್ ಬಾಸ್ ಫಿನಾಲೆ ನಡೆಯುವುದು ನಿಕ್ಕಿಯಾಗಿದೆ. ಸದ್ಯ ಮನೆಯಲ್ಲಿ ಎಂಟು ಜನರು ಇರುವುದರಿಂದ ಈ ವಾರ ಅನಿವಾರ್ಯವಾಗಿ ಡಬಲ್ ಎಲಿಮಿನೇಷನ್ ನಡೆಯಬೇಕಾಗುತ್ತದೆ.

    ಮೊದಲ ದಿನ ಬಿಗ್ ಬಾಸ್ ಮನೆಗೆ ಬಂದವರು 9 ನವೀನರು 9 ಹಳೆಯ ಸ್ಪರ್ಧಿಗಳು. ಈಗ ಮನೆಯಲ್ಲಿ ಇರುವುದು ಎಂಟು ಜನರು ಮಾತ್ರ. ಉಳಿದಿರುವುದು ಎರಡೇ ವಾರ. ಹಾಗಾಗಿ ಈ ವಾರ ಇಬ್ಬರು ಮನೆಯಿಂದ ಹೊರ ಹೋಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಫಿನಾಲೆಯ ವೇದಿಕೆಯ ಮೇಲೆ ಐದು ಜನರಿಗೆ ಮಾತ್ರ ಅವಕಾಶ ಇರುವುದರಿಂದ ಈ ವಾರ ಇಬ್ಬರು ಯಾರು ಮನೆಯಿಂದ ಹೊರ ಬರುತ್ತಾರೆ ಎನ್ನುವುದ ಕುತೂಹಲ. ಇದನ್ನೂ ಓದಿ: ‘ಪುಷ್ಪಾ 2’ ಟೀಮ್ ಸೇರಿಕೊಂಡ ನಟಿ ಸಾಯಿ ಪಲ್ಲವಿ: ರಶ್ಮಿಕಾ ಮಂದಣ್ಣ ಪಾತ್ರವೇನು?

    ಸದ್ಯ ಮನೆಯಲ್ಲಿ ರೂಪೇಶ್ ರಾಜಣ್ಣ, ಅಮೂಲ್ಯ ಗೌಡ. ದಿವ್ಯಾ ಉರುಡುಗ, ಅರುಣ್ ಸಾಗರ್, ದೀಪಿಕಾ ದಾಸ್, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ ಉಳಿದುಕೊಂಡಿದ್ದಾರೆ. ಪ್ರತಿಯೊಬ್ಬರೂ ಚೆನ್ನಾಗಿ ಆಟವಾಡುತ್ತಿದ್ದಾರೆ. ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಹಾಗಾಗಿ ಇವರಲ್ಲಿ ಯಾರು ಈ ವಾರ ಆಚೆ ಬರುತ್ತಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಯಿಂದ ಅರುಣ್ ಸಾಗರ್ ದಿಢೀರ್ ನಾಪತ್ತೆ: ಪ್ರೇಕ್ಷಕರಲ್ಲಿ ಗೊಂದಲ

    ‘ಬಿಗ್ ಬಾಸ್’ ಮನೆಯಿಂದ ಅರುಣ್ ಸಾಗರ್ ದಿಢೀರ್ ನಾಪತ್ತೆ: ಪ್ರೇಕ್ಷಕರಲ್ಲಿ ಗೊಂದಲ

    ನ್ನಡದ ಬಿಗ್ ಬಾಸ್ ಮನೆಯಿಂದ ನಟ, ಕಲಾ ನಿರ್ದೇಶಕ ಅರುಣ್ ಸಾಗರ್ ದಿಢೀರ್ ನಾಪತ್ತೆ ಆಗಿರುವ ಸುದ್ದಿ ಬಂದಿದೆ. ವಾರದ ಕಿಚ್ಚನ ಕಾರ್ಯಕ್ರಮದಲ್ಲಿ ಇದ್ದವರು, ಒಂದಷ್ಟು ಮಾತನಾಡಿದವರು, ಸೋಮವಾರ ಮನೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅದಕ್ಕೆ ಕಾರಣವನ್ನೂ ಬಿಗ್ ಬಾಸ್ ಆಗಲಿ ಅಥವಾ ಮನೆಯಲ್ಲಿರುವ ಸದಸ್ಯರಾಗಲಿ ಕೊಟ್ಟಿಲ್ಲ. ಅರುಣ್ ಸಾಗರ್ ಕುರಿತು ನಿನ್ನೆಯ ಎಪಿಸೋಡ್ ನಲ್ಲಿ ಒಂದೇ ಒಂದು ಮಾತನ್ನೂ ಯಾರೂ ಆಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

    ಬಿಗ್ ಬಾಸ್ ಮನೆಯೆಂದರೆ ಅಲ್ಲಿ ಅರುಣ್ ಸಾಗರದ್ದೇ ಅಬ್ಬರ, ಆರ್ಭಟ. ಟಾಸ್ಕ್ ಯಾವುದೇ ಆಗಿರಲಿ ಅಲ್ಲಿ ಅವರ ಉಪಸ್ಥಿತಿ ಇದ್ದೇ ಇರುತ್ತದೆ. ಅಲ್ಲದೇ, ದಿನಕ್ಕೊಂದು ವೇಷ ಹಾಕಿಕೊಂಡು ಬಂದು ಪ್ರೇಕ್ಷಕರಿಗೆ ಮನರಂಜನೆಯನ್ನು ಕೊಡುತ್ತಲೇ ಇರುತ್ತಾರೆ. ಎಲ್ಲರೊಂದಿಗೆ ಬೆರೆಯುವುದು, ನಗಿಸೋದು, ಅಳಿಸೋದು ಇದು ಅರುಣ್ ಸಾಗರ್ ಗುಣ. ಆದರೆ ಸೋಮವಾರ ಇದಾವುದೂ ಕಾಣಿಸಿಕೊಳ್ಳಲೇ ಇಲ್ಲ. ಹಾಗಾಗಿ ಅರುಣ್ ಸಾಗರ್ ಅನುಪಸ್ಥಿತಿ ಬಿಗ್ ಬಾಸ್ ಮನೆಯಲ್ಲಿ ಎದ್ದು ಕಾಣುತ್ತಿತ್ತು. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ

    ಈ ವಾರ ಬಿಗ್ ಬಾಸ್ ಮನೆಯಿಂದ ಇಬ್ಬರು ಎಲಿಮಿನೇಟ್ ಆಗುತ್ತಾರೆ ಎನ್ನುವ ಮಾಹಿತಿ ಇತ್ತು. ಈಗಾಗಲೇ ಅನುಪಮಾ ಗೌಡ ಮನೆಯಿಂದ ಬಂದಾಗಿದೆ. ಸಿಕ್ರೇಟ್ ಆಗಿ ಅರುಣ್ ಸಾಗರ್ ಅವರನ್ನೂ ಮನೆಯಿಂದ ಕಳುಹಿಸಿ ಬಿಟ್ಟರಾ ಅನ್ನುವ ಅನುಮಾನ ಕೂಡ ಮೂಡಿದೆ. ಆದರೆ, ಸಿಕ್ಕಿರುವ ಮಾಹಿತಿ ಪ್ರಕಾರ ಅರುಣ್ ಸಾಗರ್ ಮನೆಗೂ ಬಂದಿಲ್ಲ. ಹಾಗಾಗಿ ಅವರು ಆರೋಗ್ಯದಲ್ಲಿ ಏರುಪೇರು ಆಗಿದೆ ಎನ್ನುವ ಚರ್ಚೆ ಕೂಡ ಶುರುವಾಗಿದೆ. ಅಥವಾ ಸಿಕ್ರೇಟ್ ರೂಮ್ ನಲ್ಲಿ ಅವರನ್ನು ಇಡಲಾಗಿದೆ ಎನ್ನುವ ಮಾಹಿತಿಯೂ ಸಿಕ್ಕಿಲ್ಲ.

    ಒಂದೊಂದು ಸಾರಿ ಬಿಗ್ ಬಾಸ್ ಭಾರೀ ಗೇಮ್ ಪ್ಲ್ಯಾನ್ ಮಾಡಲಾಗುತ್ತದೆ. ಇದ್ದಕ್ಕಿದ್ದಂತೆಯೇ ಮನೆ ಒಬ್ಬರ ಸದಸ್ಯರನ್ನು ಅರ್ಧಕ್ಕೆ ಮನೆಯಿಂದ ಕಳುಹಿಸಿ, ಅವರನ್ನು ಸಿಕ್ರೇಟ್ ರೂಮ್ ನಲ್ಲಿ ಇಡಲಾಗುತ್ತದೆ. ಆದರೆ, ಅದನ್ನು ಪ್ರೇಕ್ಷಕರಿಗೆ ತೋರಿಸುತ್ತಾರೆ. ಅರುಣ್ ಸಾಗರ್ ವಿಷಯದಲ್ಲಿ ಏನಾಯಿತು ಎನ್ನುವ ಗೊಂದಲ ನೋಡುಗರದ್ದು. ಅರುಣ್ ಸಾಗರ್ ಎಲ್ಲಿ ಹೋದರು? ಏನು ಆಯಿತು ಎನ್ನುವ ಕುರಿತು ಬಹುಶಃ ಇವತ್ತು ಸ್ಪಷ್ಟತೆ ಸಿಗಬಹುದು. ಮಗಳಿಗೆ ಹುಷಾರಿಲ್ಲದ ಕಾರಣ, ಮಗಳನ್ನು ನೋಡಲು ಹೋಗಿರಬಹುದಾ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ದೀಪಿಕಾ ದಾಸ್‌ಗೆ ಚಿನ್ನದ ಚೈನ್, ಮನಸ್ಸು ಆಫರ್ ಮಾಡಿದ ಗುರೂಜಿ

    ದೀಪಿಕಾ ದಾಸ್‌ಗೆ ಚಿನ್ನದ ಚೈನ್, ಮನಸ್ಸು ಆಫರ್ ಮಾಡಿದ ಗುರೂಜಿ

    ಬಿಗ್ ಬಾಸ್ ಮನೆಗೆ (Bigg Boss Kannada) ಇದೀಗ ಮಿಣಿ ಮಿಣಿ ಮೀನಾಕ್ಷಿಯ ಎಂಟ್ರಿಯಾಗಿದೆ. ಮೀನಾಕ್ಷಿ ಮದುವೆಗೆ ವರ ಅನ್ವೇಷಣೆ ಜೋರಾಗಿದೆ. ದೀಪಿಕಾ ದಾಸ್ (Deepika Das) ಮತ್ತು ಅರುಣ್ ಸಾಗರ್ (Arun Sagar) ಹೊಸ ಅವತಾರದಲ್ಲಿ ಮನೆ ಮಂದಿಗೆ, ಪ್ರೇಕ್ಷಕರಿಗೆ ಕಮಾಲ್ ಮಾಡಿದ್ದಾರೆ. ಇದರ ಮಧ್ಯೆ ನನ್ನ ಕತ್ತಿನಲ್ಲಿರುವ ಚೈನ್, ಬಾಡಿಯಲ್ಲಿರುವ ಮನಸ್ಸು ನಿಮಗೆ ಕೊಡ್ತೀನಿ ಎಂದು ಗುರೂಜಿ ಮೀನಾಕ್ಷಿಗೆ ಪ್ರಪೋಸ್ ಮಾಡಿದ್ದಾರೆ.

    ದೊಡ್ಮನೆಯಲ್ಲಿ ಹುಂಬಲ್ಲು, ವಿಚಿತ್ರ ಜಡೆ, ಇಳಕಲ್ ಸೀರೆ, ಹಣೆಗೆ ದೊಡ್ಡ ಕುಂಕುಮ, ಕೈತುಂಬ ಬಳೆ ಹಾಕಿಕೊಂಡು ದೀಪಿಕಾ ದಾಸ್ ಅವರು ಮದುವೆಗೆ ಹುಡುಗನನ್ನು ನೋಡಲು ರೆಡಿಯಾಗಿದ್ದಾರೆ. ಸದಾ ಮಾಡರ್ನ್ ಲುಕ್‌ನಲ್ಲಿರುವ ದೀಪಿಕಾ ಅವರು ಈ ರೀತಿ ರೆಡಿ ಆಗಿದ್ದಾರೆ. ಯಾರಿಗೂ ಗುರುತು ಸಿಗದಷ್ಟು ರೀತಿಯಲ್ಲಿ ದೀಪಿಕಾ ದಾಸ್ ಅವರು ಗೆಟಪ್ ಬದಲಾಯಿಸಿಕೊಂಡು, ಅಣ್ಣ ಅರುಣ್ ಸಾಗರ್ ಜೊತೆ ವರ ಅನ್ವೇಷಣೆ ಮಾಡಿದ್ದಾರೆ.

    ದೀಪಿಕಾ ಅವರು ವಿಚಿತ್ರವಾಗಿ ರೆಡಿಯಾಗಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ನಾನು ಮದುವೆಯಾಗಲು ಹುಡುಗ ಬೇಕು ಎಂದು ಹೇಳಿದ ದೀಪಿಕಾ ಅವರು ರೂಪೇಶ್ ಶೆಟ್ಟಿ, ರಾಜಣ್ಣ, ಗುರೂಜಿ, ರಾಕೇಶ್ ಅಡಿಗ ಅವರಲ್ಲಿ ಯಾರು ಬೆಸ್ಟ್ ಎಂದು ತಿಳಿದುಕೊಳ್ಳಲು ಒಂದಷ್ಟು ಮಾತುಕತೆ ಮಾಡಿದ್ದಾರೆ. ಒಟ್ಟಿನಲ್ಲಿ ಮದುವೆ ನೆಪ ಇಟ್ಟುಕೊಂಡು ಅರುಣ್ ಸಾಗರ್, ದೀಪಿಕಾ ಜೋಡಿ ತಮಾಷೆಗೆ ಒಂದು ನಾಟಕ ಮಾಡಿದ್ದಾರೆ.

    ಧಾರವಾಡದ ಹುಡುಗಿಯಾಗಿ ಎಂಟ್ರಿ ಕೊಟ್ಟಿರುವ ದೀಪಿಕಾಗೆ ಮದುವೆಯಾಗಲು ಗಂಡು ಬೇಕಂತೆ. ದೀಪಿಕಾ ಮನೆಗೆ ಬರುವವರಿಗೆ ಅರುಣ್ ಸಾಗರ್ ಅವರು ಹುಂಬಲ್ಲು ಇರುವಂತೆ ನೋಡಿಕೊಳ್ಳುತ್ತಾರಂತೆ. ಅರುಣ್ ಅವರು ದೀಪಿಕಾಗೆ ಮಿಣಿ ಮಿಣಿ ಮೀನಾಕ್ಷಿ ಎಂದು ಹೆಸರಿಟ್ಟಿದ್ದಾರೆ. ಇನ್ನು ದೀಪಿಕಾ ಹೊಸ ಗೆಟಪ್ ನೋಡಿದವರಿಗೆ ಅವರು ದೀಪಿಕಾ ಅಂತ ನೋಡಿದಾಗ ಗೊತ್ತಾಗಿಲ್ಲ. ಇದನ್ನೂ ಓದಿ:ಮುಂದಿನ ವಾರ ವಿಚಾರಣೆಗೆ ಹಾಜರಾಗುತ್ತೇನೆ: ಪೊಲೀಸ್ ನೋಟಿಸ್ ಗೆ ದುನಿಯಾ ವಿಜಯ್ ಉತ್ತರ

    ಈ ನಾಟಕಕ್ಕೆ ರೂಪೇಶ್ ಶೆಟ್ಟಿ (Roopesh Shetty)  ಕೂಡ ಎಂಟ್ರಿ ಕೊಟ್ಟು, ಅವರು ದೊಡ್ಡ ಹೊಟ್ಟೆ ಮಾಡಿಕೊಂಡು, ಮಂಗಳೂರು ಭಾಷೆಯಲ್ಲಿ ಸಖತ್ ಡೈಲಾಗ್ ಹೊಡೆದಿದ್ದಾರೆ. ಒಟ್ಟಿನಲ್ಲಿ ದೀಪಿಕಾ, ಅರುಣ್, ರೂಪೇಶ್ ಶೆಟ್ಟಿ, ರಾಜಣ್ಣ, ರಾಕೇಶ್ ಅವರು ಈ ಡ್ರಾಮಾದಲ್ಲಿ ಭಾಗಿಯಾಗಿ ಎಲ್ಲರನ್ನು ನಕ್ಕು ನಗಿಸಿದ್ದಾರೆ. ಕತ್ತಿನಲ್ಲಿರುವ ಚೈನ್ ಕೊಟ್ಟರೆ ಗುರೂಜಿಯನ್ನು ಮದುವೆಯಾಗ್ತೀನಿ ಎಂದು ಮಿಣಿ ಮಿಣಿ ಮೀನಾಕ್ಷಿ ಹೇಳಿದಾಗ, ಗುರೂಜಿ ಅವರು, ಕತ್ತಲ್ಲಿರುವ ಚೈನ್ ಕೊಡ್ತೀನಿ, ಬಾಡಿಲಿರೋ ಮನಸು ಕೊಡ್ತೀನಿ ಎಂದಿದ್ದಾರೆ. ದೀಪಿಕಾ, ಗುರೂಜಿ ರಾಜ ರಾಜ.. ಎನ್ನುವ ಹಾಡಿಗೆ ಡ್ಯುಯೆಟ್ ಹಾಡಿದ್ದಾರೆ. ಅಂತೂ ಇಂತೂ ಈ ಸಂದರ್ಭ ಮನೆಯವರಿಗೆ, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಕೊಟ್ಟಿದೆ.

    Live Tv
    [brid partner=56869869 player=32851 video=960834 autoplay=true]

  • ಆಟ ಬೇರೆ, ಸ್ನೇಹ ಬೇರೆ: ಅರುಣ್ ಸಾಗರ್ ಮಾತಿಗೆ ಕಿಚ್ಚನ ಮುಂದೆ ಕಣ್ಣೀರಿಟ್ಟ ಸಂಬರ್ಗಿ

    ಆಟ ಬೇರೆ, ಸ್ನೇಹ ಬೇರೆ: ಅರುಣ್ ಸಾಗರ್ ಮಾತಿಗೆ ಕಿಚ್ಚನ ಮುಂದೆ ಕಣ್ಣೀರಿಟ್ಟ ಸಂಬರ್ಗಿ

    ಬಿಗ್ ಬಾಸ್ ಮನೆಯ (Bigg Boss House) ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದು ಮುನ್ನುಗ್ಗುತ್ತಿದೆ. 70 ದಿನಕ್ಕಿಂತ ಅಧಿಕ ದಿನಗಳು ಆಟ ಆಡಿ ಸಂಬರ್ಗಿ ಸೈ ಎನಿಸಿಕೊಂಡಿದ್ದರು. ಈಗ 12ನೇ ವಾರಕ್ಕೆ ಪ್ರಶಾಂತ್ ಸಂಬರ್ಗಿ (Prasahnth Sambargi) ಆಟ ಅಂತ್ಯವಾಗಿದೆ. ಇದೀಗ ವೇದಿಕೆಯ ಮೇಲೆ ಕಿಚ್ಚನ ಜೊತೆ ತಾವು ಎಲಿಮಿನೇಟ್ ಆಗಿರುವುದರ ಬಗ್ಗೆ ಮತ್ತು ಅರುಣ್ ಸಾಗರ್ (Arun Sagar) ಆಟದ ಬಗ್ಗೆ ಸಂಬರ್ಗಿ ಕಣ್ಣೀರಿಟ್ಟಿದ್ದಾರೆ.

    ದೊಡ್ಮನೆಯಲ್ಲಿ ಮಾಸ್ಟರ್ ಮೈಂಡ್ ಎಂದು ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರ್ಗಿ ಇದೀಗ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ತಮ್ಮ ಎಲಿಮಿನೇಷನ್, ಅರುಣ್ ಸಾಗರ್ ಜೊತೆಗಿನ ನಂಟಿನ ಬಗ್ಗೆ ಪ್ರಶಾಂತ್ ಮಾತನಾಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಪ್ರಶಾಂತ್ ಮತ್ತು ಅರುಣ್ ಸಾಗರ್ ಸಾಕಷ್ಟು ವರ್ಷಗಳಿಂದ ಸ್ನೇಹಿತರು, ಬಿಗ್ ಬಾಸ್ ಮನೆಗೆ ಬರುವ ಮುಂಚೆಗೆ ಒಬ್ಬರಿಗೊಬ್ಬರು ತಿಳಿದಿದ್ದರು. ಇದೀಗ ಆಟ ಬೇರೇ ಫ್ರೆಂಡ್‌ಶಿಪ್ ಎಂದು ಅರುಣ್ ಸಾಗರ್ ಆಡಿರುವ ಮಾತಿಗೆ ಸಂಬರ್ಗಿ ವೇದಿಕೆಯ ಮೇಲೆ ಭಾವುಕರಾಗಿದ್ದಾರೆ.

    ಆಟ ಬೇರೇ ಫ್ರೇಂಡ್‌ಶಿಪ್ ಬೇರೇ ನೀನು ನನ್ನ ಸ್ಪರ್ಧಿ ಎಂದು ಅರುಣ್ ಸಾಗರ್ ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದರು. ಈ ಮಾತನ್ನ ನಾನು ಅರುಣ್ ಕಡೆಯಿಂದ ನಿರೀಕ್ಷೆ ಮಾಡಿರಲಿಲ್ಲ ಎಂದು ಕಿಚ್ಚನ ಮುಂದೆ ಅತ್ತಿದ್ದಾರೆ. ಅರುಣ್ ಸಾಗರ್ ಇದೀಗ ಇರುವ ರೀತಿಯೇ ಬೇರೇ ಎಂದು ಸಂಬರ್ಗಿ ಮಾತನಾಡಿದ್ದಾರೆ. ಇದನ್ನೂ ಓದಿ: `ಕಾಂತಾರ’ ನೋಡಿ ತುಂಬಾ ಕಲಿತೆ: ರಿಷಬ್ ಚಿತ್ರಕ್ಕೆ ಹೃತಿಕ್ ರೋಷನ್ ಮೆಚ್ಚುಗೆ

    ಎಲಿಮಿನೇಟ್ ಆಗಿ ಆಚೆ ಬರುವಾಗ ಸಂಬರ್ಗಿ ಭಾವುಕರಾದರು. ಅದರಲ್ಲೂ ಸುದೀಪ್ (Sudeep) ಅವರ ಜೊತೆಗೆ ವೇದಿಕೆ ಮೇಲೆ ಮುಖಾಮುಖಿಯಾದ ಬಿಕ್ಕಿ ಬಿಕ್ಕಿ ಅತ್ತರು. ಅದಕ್ಕೆ ಕಾರಣ, ಅರುಣ್ ಸಾಗರ್. ನಾನು ಆಚೆ ಬಂದಿರುವುದಕ್ಕೆ ಶಾಕ್ ಆಗಿದೆ. ನಾನು ಮನೆಯಲ್ಲಿ ಇದ್ದಾಗ ಅರುಣ್ ಸಾಗರ್ ಕಡೆಯಿಂದ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆ. ಯಾಕೆಂದರೆ, ಆತ ನನ್ನ 20 ವರ್ಷಗಳ ಸ್ನೇಹಿತ. ಆದರೆ ಬಿಗ್ ಬಾಸ್ ಶೋನಲ್ಲಿ ಎಲ್ಲರೂ ಸ್ಪರ್ಧಿಗಳೇ ಎಂಬಂತೆ ವರ್ತಿಸಿದ. ಅದು ನನಗೆ ನೋವು ತಂದಿತ್ತು. ಹೌದು, ನಾನೇ ಹೇಳಿದ್ದೆ, ಆಟದ ಮುಂದೆ ಯಾವ ಸಂಬಂಧಗಳು ಲೆಕ್ಕಕ್ಕೆ ಬರುವುದಿಲ್ಲ. ಯಾವ ಸ್ನೇಹ ಕೂಡ ಇರುವುದಿಲ್ಲ ಎಂದು. ಆದರೆ ಅದನ್ನು ನನ್ನಿಂದಲೇ ಪಾಲಿಸಲು ಆಗಲಿಲ್ಲ ಎಂದು ಸಂಬರ್ಗಿ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ಅರುಣ್ ಸಾಗರ್‌ಗೆ ಆಪರೇಷನ್

    ಬಿಗ್ ಬಾಸ್ ಮನೆಯಲ್ಲಿ ಅರುಣ್ ಸಾಗರ್‌ಗೆ ಆಪರೇಷನ್

    ಬಿಗ್ ಬಾಸ್ ಮನೆಯಲ್ಲಿ(Bigg Boss)  ಸದಾ ಒಂದಲ್ಲಾ ಒಂದು ವಿಚಾರಕ್ಕೆ ಕಿತ್ತಾಟ ಆಗುತ್ತಲೇ ಇರುತ್ತದೆ. ಗೊಂಬೆ ತಯಾರಿಸುವ ಟಾಸ್ಕ್‌ನಲ್ಲಿ ಅರುಣ್ ಸಾಗರ್ ಕೈ ಬೆರಳಿಗೆ ಪೆಟ್ಟಾಗಿದೆ. ಇದರ ಪರಿಣಾಮ, ಆಪರೇಷನ್ ಕೂಡ ಮಾಡಲಾಗಿದೆ.

    ದೊಡ್ಮನೆ ಇದೀಗ ಎಂಟನೇ ವಾರಕ್ಕೆ ಕಾಲಿಟ್ಟಿದೆ. ಸಾಕಷ್ಟು ಟ್ವಿಸ್ಟ್ ಮತ್ತು ತಿರುವುಗಳೊಂದಿಗೆ ಮುನ್ನಗ್ಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಇದೀಗ ಟಾಸ್ಕ್ ವೇಳೆ ಅರುಣ್ ಸಾಗರ್‌ಗೆ ಪೆಟ್ಟಾಗಿದೆ. ಟಾಯ್ ಫ್ಯಾಕ್ಟರಿ ಎಂಬ ಟಾಸ್ಕ್ ಕೊಟ್ಟಿದ್ದರು ಬಿಗ್ ಬಾಸ್. ಈ ಟಾಸ್ಕ್‌ನಲ್ಲಿ ಗೊಂಬೆಗಳನ್ನ ತಯಾರಿಸಲು ಕನ್ವೇಯರ್ ಬೆಲ್ಟ್‌ನಿಂದ ಸಾಮಾಗ್ರಿಗಳನ್ನ ಪಡೆಯಬೇಕಿತ್ತು.

    ಹೀಗಾಗಿ, ಸಾಮಾಗ್ರಿಗಳನ್ನ ಪಡೆಯಲು ಎರಡೂ ತಂಡಗಳು ಜಿದ್ದಾಜಿದ್ದಿಗೆ ಬಿದ್ದವು. ಸಾಮಾಗ್ರಿಗಳಿಗಾಗಿ ಎರಡೂ ತಂಡದ ಸದಸ್ಯರ ಮಧ್ಯೆ ಕಿತ್ತಾಟ, ನೂಕಾಟ, ತಳ್ಳಾಟ್ಟ ನಡೆಯಿತು. ಒಮ್ಮೆ ಪ್ರಶಾಂತ್ ಸಂಬರ್ಗಿ ಅವರಿಂದಾಗಿ ಅರುಣ್ ಸಾಗರ್ ಕೆಳಗೆ ಬಿದ್ದರು. ಮತ್ತೊಮ್ಮೆ ಅವರ ಕೈಗೆ ಪೆಟ್ಟು ಬಿತ್ತು. ಬಲಗೈ ಕಿರುಬೆರಳಿಗೆ ಪೆಟ್ಟು ಬಿದ್ದಿದ್ದ ಕಾರಣ ಅರುಣ್ ಸಾಗರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದನ್ನೂ ಓದಿ:ವಿಜಯ್ ದೇವರಕೊಂಡ ನಂತರ ಅವರ ತಾಯಿಯೂ ಅಂಗಾಂಗ ದಾನಕ್ಕೆ ನೋಂದಣಿ

    ಚಿಕಿತ್ಸೆ ಅವಶ್ಯವಿದ್ದ ಕಾರಣ ಒಂದು ದಿನ ಆಸ್ಪತ್ರೆಯಲ್ಲೇ ಅರುಣ್ ಸಾಗರ್ ಇದ್ದರು. ಪರಿಣಾಮ, ಕೊನೆಯ ದಿನದ ಟಾಸ್ಕ್‌ನಲ್ಲಿ ಅವರು ಭಾಗವಹಿಸಲಿಲ್ಲ. ಸದ್ಯ ಬಿಗ್ ಬಾಸ್ ಮನೆಗೆ ಅರುಣ್ ಸಾಗರ್ ವಾಪಸ್ ಆಗಿದ್ದಾರೆ. ತಮ್ಮ ಕೈಗೆ ಆಪರೇಷನ್ ಮಾಡಲಾಗಿದೆ ಎಂದು ಅರುಣ್ ಸಾಗರ್ ಮನೆಮಂದಿಗೆ ತಿಳಿಸಿದ್ದಾರೆ. ಸದ್ಯಕ್ಕೆ ಟಾಸ್ಕ್‌ನಿಂದ ದೂರವಿದ್ದು, ದೊಡ್ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೊಡ್ಮನೆ ರಣರಂಗ: ರೂಪೇಶ್ ಶೆಟ್ಟಿ ಶರ್ಟ್ ಕಿತ್ತೆಸೆದ ಪ್ರಶಾಂತ್ ಸಂಬರ್ಗಿ

    ದೊಡ್ಮನೆ ರಣರಂಗ: ರೂಪೇಶ್ ಶೆಟ್ಟಿ ಶರ್ಟ್ ಕಿತ್ತೆಸೆದ ಪ್ರಶಾಂತ್ ಸಂಬರ್ಗಿ

    ಬಿಗ್ ಬಾಸ್ ಮನೆ(Bigg Boss House) ಇದೀಗ ಹೊತ್ತಿ ಉರಿಯುತ್ತಿದೆ. ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದು ಮುನ್ನುಗ್ಗುತ್ತಿದೆ. ಟಾಸ್ಕ್‌ವೊಂದರಲ್ಲಿ ರೂಪೇಶ್ ಶೆಟ್ಟಿ ಅವರ ಶರ್ಟ್‌ನ ಪ್ರಶಾಂತ್‌ ಸಂಬರ್ಗಿ ಕಿತ್ತೆಸಿದಿದ್ದಾರೆ. ಸಂಬರ್ಗಿ ವೈಲೆಂಟ್ ಆಟಕ್ಕೆ ಮನೆಮಂದಿ ಫುಲ್ ಗರಂ ಆಗಿದ್ದಾರೆ.

    ದಿನದಿಂದ ದಿನಕ್ಕೆ ಮನೆಯ ವಾತಾವರಣ ಹದಗೆಡುತ್ತಿದೆ. ಮಾಸ್ಟರ್ ಮೈಂಡ್ ಸಂಬರ್ಗಿಯ ಆಟ ಲಿಮಿಟ್ ಮೀರಿ ಅಡ್ಡ ದಾರಿಹಿಡಿಯುತ್ತಿದೆ. ಮನೆಮಂದಿಗೆ ಗೊಂಬೆ ತಯಾರಿಸುವ ಟಾಸ್ಕ್ ನೀಡಲಾಗಿತ್ತು. ಗೊಂಬೆ ತಯಾರಿಸಲು ಕಚ್ಚಾ ವಸ್ತುಗಳು ಬರುತ್ತವೆ. ಅದನ್ನು ಪಡೆಯಲು ಮನೆ ಮಂದಿ ಮಧ್ಯೆ ಜಗಳ ಏರ್ಪಟ್ಟಿದೆ. ಪ್ರಶಾಂತ್ ಸಂಬರ್ಗಿ(Prashnath Sambargi) ಎಲ್ಲರಿಂದಲೂ ವಸ್ತುಗಳನ್ನು ಕಿತ್ತುಕೊಂಡರು ಎನ್ನುವ ಆರೋಪವನ್ನು ಮಾಡಿದರು. ಇದಕ್ಕೆ ಅರುಣ್ ಸಾಗರ್(Arun Sagar) ಕೂಡ ಸಂಬರ್ಗಿ ವಿರುದ್ಧ ಕಿಡಿಕಾರಿದ್ದರು. ಇದನ್ನೂ ಓದಿ:‘ಕಾಂತಾರ’ ಸಿನಿಮಾಗೆ ಕೇರಳದಲ್ಲೂ ಹರಿದು ಬಂತು ಭಾರೀ ಕಲೆಕ್ಷನ್

    ಪ್ರಶಾಂತ್ ಸಂಬರ್ಗಿ ಅವರೇ ನೀವು ನಡೆದುಕೊಂಡ ರೀತಿ ಸರಿ ಇಲ್ಲ. ನಾನು ಈಗ ಸಂಬರ್ಗಿ ಆಡಿದ ರೀತಿಯೇ ಆಡುತ್ತೇನೆ ಎಂದು ಚಾಲೆಂಜ್ ಮಾಡಿದರು. ಅದೇ ರೀತಿ ನಡೆದುಕೊಂಡರು. ಅವರು ಕೂಡ ವೈಲೆಂಟ್ ಆಗಿ ಆಟ ಆಡಿದರು. ಬಳಿಕ ರೂಪೇಶ್ ಶೆಟ್ಟಿ ಅವರಿಂದ ಪ್ರಶಾಂತ್ ಸಂಬರ್ಗಿ ವಸ್ತುಗಳನ್ನು ಕದಿಯಲು ಪ್ರಯತ್ನಿಸಿದರು. ಈ ವೇಳೆ ಸಂಬರ್ಗಿ ಮತ್ತು ರೂಪೇಶ್ ಶೆಟ್ಟಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ರೂಪೇಶ್ ಶೆಟ್ಟಿಯ(Roopesh Shetty) ಅಂಗಿಯನ್ನು ಹಿಡಿದು ಪ್ರಶಾಂತ್ ಸಂಬರ್ಗಿ ಎಳೆದಾಡಿದರು. ರೂಪೇಶ್ ಶೆಟ್ಟಿಯ ಅಂಗಿ ಕಳಚಿತು. ಮಾತಿನ ದಾಟಿ ಬದಲಾಗಿ ಕೈ ಕೈ ಮಿಲಾಯಿಸಿದ್ದಾರೆ.

    ಬಳಿಕ ನಾನೇನೂ ಮಾಡೇ ಇಲ್ಲಾ ಎಂದು ವಾದ ಮಾಡಿದ್ದಾರೆ. ಪ್ರಶಾಂತ್ ಸಂಬರ್ಗಿ ಆಟಕ್ಕೆ ಮನೆ ಮಂದಿ ಕೂಡ ರಾಂಗ್ ಆಗಿದ್ದಾರೆ. ತನ್ನ ತಂಡವನ್ನ ಗೆಲ್ಲಿಸುವ ನಿಟ್ಟಿನಲ್ಲಿ ಸಂಬರ್ಗಿ ಇಟ್ಟ ಹೆಜ್ಜೆ ಹಲವರ ಮನಸ್ತಾಪಕ್ಕೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಂಬರ್ಗಿಗೆ ಬೌ ಬೌ ಸ್ಟಾರ್ ಬಿರುದು ಕೊಟ್ಟ ಅರುಣ್ ಸಾಗರ್

    ಸಂಬರ್ಗಿಗೆ ಬೌ ಬೌ ಸ್ಟಾರ್ ಬಿರುದು ಕೊಟ್ಟ ಅರುಣ್ ಸಾಗರ್

    ಬಿಗ್ ಬಾಸ್(Bigg Boss Kannada) ಮನೆ ಇದೀಗ 6ನೇ ವಾರಕ್ಕೆ ಕಾಲಿಟ್ಟಿದೆ. ಸಾಕಷ್ಟು ವಿಷ್ಯವಾಗಿ ದೊಡ್ಮನೆ ಹೈಲೈಟ್ ಆಗುತ್ತಿದೆ. ಇದೀಗ ಸಂಬರ್ಗಿಗೆ ಅರುಣ್ ಸಾಗರ್ ಭಿನ್ನವಾಗಿರುವ ಸ್ಟಾರ್ ಪಟ್ಟವನ್ನ ಕೊಟ್ಟಿದ್ದಾರೆ. ಪ್ರಶಾಂತ್‌ಗೆ ಬೌ ಬೌ ಸ್ಟಾರ್ ಎಂದು ಕರೆಯುವ ಮೂಲಕ ಅರುಣ್ ಸಾಗರ್(Arun Sagar) ಗಮನ ಸೆಳೆದಿದ್ದಾರೆ.

    ದೊಡ್ಮನೆಯ ಆಟ ಇದೀಗ ಮೊದಲ ದಿನ ಇದ್ದಂತೆ ಇಲ್ಲ. ಶಾಂತವಾಗಿದ್ದ ಮನೆ ಈಗ ರಣರಂಗವಾಗಿದೆ. ಇನ್ನೂ ಕಿಚ್ಚನ ವೀಕೆಂಡ್ ಪಂಚಾಯಿತಿಯಲ್ಲಿ ಸಿನಿಮಾ ಸ್ಟಾರ್‌ಗಳಂತೆ ಮನೆಯ ಸ್ಪರ್ಧಿಗಳಿಗೆ ಯಾರಿಗೆ ಯಾವ ಸ್ಟಾರ್ ಪಟ್ಟ ಕೊಡುತ್ತೀರಾ ಎಂದು ಸುದೀಪ್ ಕೇಳಿದ್ದಾರೆ. ಆಗ ಒಬ್ಬಬ್ಬರು ಒಂದೊಂದು ರೀತಿಯ ಭಿನ್ನ ಉತ್ತರವನ್ನ ಕೊಟ್ಟಿದ್ದರೆ, ಅರುಣ್ ಸಾಗರ್ ಅವರ ಉತ್ತರ ಮನೆಮಂದಿಯ ನಗುವಿಗೆ ಕಾರಣವಾಗಿದೆ. ಇದನ್ನೂ ಓದಿ:ಖಾಸಗಿ ವಿಮಾನ ಖರೀದಿಸಿದ್ರಾ ರಿಷಬ್ ಶೆಟ್ಟಿ? ‘ಬಡವ್ರ ಮಕ್ಕಳು ಬೆಳಿಬೇಕು’ ಟ್ರೋಲ್

    ಪ್ರಶಾಂತ್ ಸಂಬರ್ಗಿ(Prashanth Sambargi) ಅವರಿಗೆ ನಾನು ಬೌ ಬೌ ಸ್ಟಾರ್ ಪಟ್ಟ ಕೊಡುತ್ತೀನಿ ಎಂದು ಅರುಣ್ ಸಾಗರ್ ಹೇಳಿದ್ದಾರೆ. ಅವರು ಯಾವಾಗಲೂ ನಾನ್ ಸ್ಟಾಪ್ ಆಗಿ ಮಾತನಾಡುತ್ತಾರೆ, ಜಗಳ ಆಡುತ್ತಾರೆ ಅವರಿಗೆ ಬೌ ಬೌ ಸ್ಟಾರ್ ಎಂಬ ಬಿರುದು ಕೊಡುತ್ತೀನಿ ಎಂದಿದ್ದಾರೆ. ಅರುಣ್ ಮಾತಿಗೆ ಸುದೀಪ್ ಸೇರಿದಂತೆ ಮನೆಮಂದಿಯ ಜೊತೆ ಸಂಬರ್ಗಿ ಕೂಡ ಇದನ್ನ ಪಾಸಿಟಿವ್ ಆಗಿ ತೆಗೆದುಕೊಂಡು ನಕ್ಕಿದ್ದಾರೆ.

    ಇನ್ನೂ ರೂಪೇಶ್ ರಾಜಣ್ಣ(Roopesh Rajanna) ಅವರಿಗೆ ರೂಪೇಶ್ ಶೆಟ್ಟಿ, ಕಂಟಿನಿಟಿ ಸ್ಟಾರ್ ಬಿರುದು ಕೊಟ್ಟಿದ್ದಾರೆ. ಅವರು ಯಾವಾಗಲೂ ಹೇಳಿದ್ದನ್ನೇ ಹೇಳುತ್ತಾರೆ ಎಂದು ಮಾತನಾಡಿದ್ದಾರೆ. ಇದಕ್ಕೆ ಮನೆಮಂದಿ ಕೂಡ ನಿಜ ಎಂದು ಬಿದ್ದು ಬಿದ್ದು ನಕ್ಕಿದ್ದಾರೆ. ಅದರಲ್ಲೂ ಬೌ ಬೌ ಸ್ಟಾರ್ ಬಿರುದು ಎಲ್ಲರನ್ನೂ ನಗಿಸಿದೆ.

    Live Tv
    [brid partner=56869869 player=32851 video=960834 autoplay=true]