Tag: ಅರುಣ್ ವಿಜಯ್

  • ತಮಿಳು ಚಿತ್ರ ಒಪ್ಪಿಕೊಂಡ ಲೂಸ್ ಮಾದ ಯೋಗಿ

    ತಮಿಳು ಚಿತ್ರ ಒಪ್ಪಿಕೊಂಡ ಲೂಸ್ ಮಾದ ಯೋಗಿ

    ನ್ನಡದ ಪ್ರತಿಭಾವಂತ ನಟ, ಲೂಸ್ ಮಾದ (Loose Mada Yogi) ಖ್ಯಾತಿಯ ಯೋಗಿ ಇದೀಗ ತಮಿಳು (Tamil) ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅರುಣ್ ವಿಜಯ್ (Arun Vijay) ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಯೋಗಿ ಪ್ರಮುಖ ಪಾತ್ರವೊಂದನ್ನು ಮಾಡಲಿದ್ದಾರೆ. ತಿರುಕುಮಾರನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.

    ಈ ನಡುವೆ ಯೋಗಿ (Loose Mada Yogi)  ತಮ್ಮ 50ನೇ ಚಿತ್ರದ ಮೂಲಕ ಸದ್ದು ಮಾಡುತ್ತಿದ್ದಾರೆ. ‘ರೋಸಿ’ ಸಿನಿಮಾದಲ್ಲಿ ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಶ್ರೀನಗರ ಕಿಟ್ಟಿ ಬೆನ್ನಲ್ಲೇ ಇದೀಗ ಒರಟ ಪ್ರಶಾಂತ್ (Orata Prashanth) ಕೂಡ ‘ರೋಸಿ’ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ‘ರೋಸಿ’ (Rosy Film) ಚಿತ್ರದಲ್ಲಿ ಸಖತ್ ರಗಡ್ ಆಗಿ ಪ್ರಶಾಂತ್ ಕಾಣಿಸಿಕೊಂಡಿದ್ದಾರೆ.‌

    ಒರಟ ಪ್ರಶಾಂತ್ ಮಾಡುತ್ತಿರುವ ಪಾತ್ರದ ಹೆಸರು ಸ್ವಾಮಿ ಅಣ್ಣ ಎಂದು. ಚಿತ್ರತಂಡ ಒರಟ ಪ್ರಶಾಂತ್ ಅವರ ಪಾತ್ರವನ್ನು ಪೋಸ್ಟರ್‌ ಮೂಲಕ ಪರಿಚಯಿಸಿದ್ದಾರೆ. ಇದರಲ್ಲಿ ಖಡಕ್ & ಮಾಸ್ ಪಾತ್ರದ ಮೂಲಕ ಅವರು ಗಮನ ಸೆಳೆದಿದ್ದಾರೆ. ಈ ಸಿನಿಮಾ ಬಗ್ಗೆ ಇರುವ ನಿರೀಕ್ಷೆ ಈಗ ಹೆಚ್ಚಾಗಿದೆ. ಒರಟನ ನಯಾ ಅವತಾರ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

     

    ‘ರೋಸಿ’ ಚಿತ್ರಕ್ಕೆ ಶೂನ್ಯ ಅವರ ನಿರ್ದೇಶನ ಇದೆ. ಈ ಚಿತ್ರ ಪಕ್ಕಾ ಗ್ಯಾಂಗ್‌ಸ್ಟರ್ ಸಿನಿಮಾವಾಗಿದ್ದು, ಒರಟ ಪ್ರಶಾಂತ್ ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸ್ವಾಮಿ ಅಣ್ಣ ಎಂಬುದು ಅವರ ಪಾತ್ರದ ಹೆಸರು. ಈ ಸಿನಿಮಾದಲ್ಲಿ ಇನ್ನೂ ಎರಡು ಮುಖ್ಯ ಪಾತ್ರಗಳಿವೆ. ಸದ್ಯದಲ್ಲೇ ಮಾಹಿತಿ ರಿವೀಲ್ ಮಾಡುತ್ತೇವೆ ಎಂದಿದ್ದಾರೆ ನಿರ್ದೇಶಕ ಶೂನ್ಯ.

  • ಲೈಕಾ ತೆಕ್ಕೆಗೆ ‘ಮಿಷನ್: ಚಾಪ್ಟರ್-1’: ಅರುಣ್ ವಿಜಯ್ ನಟನೆಯ ಸಿನಿಮಾ

    ಲೈಕಾ ತೆಕ್ಕೆಗೆ ‘ಮಿಷನ್: ಚಾಪ್ಟರ್-1’: ಅರುಣ್ ವಿಜಯ್ ನಟನೆಯ ಸಿನಿಮಾ

    ಇಂಡಿಯನ್, ಖೈದಿ ನಂಬರ್ 150, 2.0, ದರ್ಬಾರ್ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಇದೀಗ ಮಿಷನ್:ಚಾಪ್ಟರ್ 1 ಸಿನಿಮಾವನ್ನು ವಿಶ್ವಾದ್ಯಂತ ರಿಲೀಸ್ ಮಾಡಲಿದೆ. ಸಿನಿಮಾ ನಿರ್ಮಾಣ ಹಾಗೂ ವಿತರಣೆಯಲ್ಲಿ ಭಾರೀ ಹೆಸರು ಮಾಡಿರುವ ಲೈಕಾ, ಪ್ರೇಕ್ಷಕರಿಗೆ ವಿಭಿನ್ನ ಬಗೆಯ ಚಿತ್ರಗಳನ್ನು ಉಣಬಡಿಸುತ್ತಿದೆ. ಪೊನ್ನಿಯಿನ್ ಸೆಲ್ವನ್-2, ಇಂಡಿಯನ್-2, ಲಾಲ್ ಸಲಾಂ ಸೇರಿದಂತೆ ಹಲವು ಚಿತ್ರಗಳ ನಿರ್ಮಾಣ ಮಾಡ್ತಿರುವ ಲೈಕಾ ಮಾಲೀಕ ಸುಭಾಷ್ ಕರಣ್, ‘ಮಿಷನ್:ಚಾಪ್ಟರ್-1’ (Mission: Chapter 1) ಅಖಂಡ ವಿಶ್ವ ತಲುಪಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

    ಕಾಲಿವುಡ್ ಹೀರೋ ಅರುಣ್ ವಿಜಯ್ (Arun Vijay) ನಟನೆಯ ‘ಮಿಷನ್:ಚಾಪ್ಟರ್-1’ ಸಿನಿಮಾಗೆ ಪ್ರತಿಭಾನ್ವಿತ ನಿರ್ದೇಶಕ ವಿಜಯ್ ಆಕ್ಷನ್ ಕಟ್ ಹೇಳಿದ್ದು, ದುಬಾರಿ ಬಜೆಟ್ ನಲ್ಲಿ ಎ ರಾಜಶೇಖರ್ ಹಾಗೂ ಎಸ್ ಸ್ವಾತಿ ನಿರ್ಮಾಣ ಮಾಡಿದ್ದಾರೆ. ‘ಮಿಷನ್:ಚಾಪ್ಟರ್-1’ ಸಿನಿಮಾವನ್ನು ಕೇವಲ 70 ದಿನದಲ್ಲಿ ಚೆನ್ನೈ ಹಾಗೂ ಲಂಡನ್ ನಲ್ಲಿ ಶೂಟಿಂಗ್ ನಡೆಸಲಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸೆಟ್ ಹಾಕಿ ಚಿತ್ರೀಕರಿಸಲಾಗಿದ್ದು, ನಾಯಕ ಅರುಣ್ ವಿಜಯ್ ಅದ್ಭುತ ಸ್ಟಂಟ್ ಮಾಡಿದ್ದಾರೆ. ಇದನ್ನೂ ಓದಿ: ಅವಳಿ ಮಕ್ಕಳ ಹೆಸರನ್ನು ರಿವೀಲ್ ಮಾಡಿದ ನಟಿ ನಯನತಾರಾ

    ಆಮಿ ಜಾಕ್ಸನ್(Amy Jackson)  ಸಣ್ಣದೊಂದು ಗ್ಯಾಪ್ ಬಳಿಕ ಈ ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದು, ಮಾಲಿವುಡ್ ಖ್ಯಾತ ನಟಿ ನಿಮಿಷಾ (Nimisha) ಸಜಯನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಭರತ್ ಬೋಪಣ್ಣ, ವಿರಾಜ್, ಅಭಿ ಹಾಸನ್ ಸೇರಿದಂತೆ ಹಲವರು ನಟಿಸಿದ್ದಾರೆ. ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರುವ ‘ಮಿಷನ್:ಚಾಪ್ಟರ್-1’ ಸಿನಿಮಾಗೆ ಜಿವಿ ಪ್ರಕಾಶ್ ಕುಮಾರ್ ಸಂಗೀತ, ವಿಜಯ್ ಸಂಭಾಷಣೆ, ಆಂಥೋನಿ ಸಂಕಲನ, ಶರವಣ್ ವಸಂತ ಕಲಾ ನಿರ್ದೇಶನ, ಸಂದೀಪ್ ಕೆ ವಿಜಯ್ ಛಾಯಾಗ್ರಹಣ ಸಿನಿಮಾಕ್ಕಿದೆ. ಶೀಘ್ರದಲ್ಲಿಯೇ ಈ ಚಿತ್ರದ ಟ್ರೇಲರ್, ಆಡಿಯೋ ಹಾಗೂ ರಿಲೀಸ್ ಡೇಟ್ ಅನೌನ್ಸ್ ಆಗಲಿದ್ದು, ನಾಲ್ಕು ಭಾಷೆಯಲ್ಲಿ ಸಜ್ಜಾಗ್ತಿರುವ ‘ಮಿಷನ್:ಚಾಪ್ಟರ್-1’ ಸಿನಿಮಾವನ್ನು ಲೈಕಾ ವಿಶ್ವಾದ್ಯಂತ ವಿತರಣೆ ಮಾಡಲಿದೆ.