Tag: ಅರುಣಾದೇವಿ

  • ತಂದೆ ಸಿಎಂ ಆಗಿರೋದು ನಮ್ಮೆಲ್ಲರ ಅದೃಷ್ಟ – ಬಿಎಸ್‍ವೈ ಪುತ್ರಿ

    ತಂದೆ ಸಿಎಂ ಆಗಿರೋದು ನಮ್ಮೆಲ್ಲರ ಅದೃಷ್ಟ – ಬಿಎಸ್‍ವೈ ಪುತ್ರಿ

    – ಆ ಅದೃಷ್ಟ ಕೈ ಕೊಟ್ರೆ ಏನು ಮಾಡೋಕೆ ಆಗಲ್ಲ

    ಧಾರವಾಡ: ಬಿಎಸ್‍ವೈ ಸಿಎಂ ಆಗಿರುವುದು ನಮ್ಮೆಲ್ಲರ ಸೌಭಾಗ್ಯ. ಅವರು ಸಿಎಂ ಆಗಿರುವುದು ನಮ್ಮೆಲ್ಲರ ಅದೃಷ್ಟ. ಒಂದು ವೇಳೆ ಆ ಅದೃಷ್ಟ ನಮ್ಮಿಂದ ಕೈ ಕೊಟ್ಟರೇ ಏನೂ ಮಾಡೋಕೆ ಆಗೋದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರಿ ಅರುಣಾದೇವಿ ಹೇಳಿದ್ದಾರೆ.

    ಧಾರವಾಡದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅರುಣಾದೇವಿ, ನಮ್ಮ ತಂದೆ ಸಿಎಂ ಆಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ನಮ್ಮ ತಂದೆ ಎನ್ನುವ ಅಭಿಮಾನ ಮಾತ್ರವಲ್ಲ ಸಾಮಾನ್ಯ ಮಹಿಳೆಯಾಗಿ ಈ ಮಾತು ಹೇಳಿತ್ತಿರುವೆ. ಅವರು ಅವಧಿ ಪೂರ್ಣ ಮಾಡುವದಿಲ್ಲ ಎನ್ನುವುದೆಲ್ಲ ವದಂತಿ ಅಷ್ಟೆ. ಅವರು ಕೌನ್ಸಿಲರ್, ಎಂಎಲ್‍ಎ ಇದ್ದಾಗಿನಿಂದಲೂ ಇಂತಹುದೆಲ್ಲ ಎದುರಿಸಿಕೊಂಡು ಬಂದಿದ್ದಾರೆ ಎಂದರು.

    ಈಗ ಸಿಎಂ ಆಗಿದ್ದಾಗ ಯಾರೋ ಹೇಳಿದ್ದಾರಂತ ಅಳಕು ಪಡೋದಿಲ್ಲ. ತಂದೆಯವರು ನೆಮ್ಮದಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಕೋವಿಡ್ ಮತ್ತು ಪ್ರವಾಹ ಬಂದಾಗ ಸಮರ್ಥವಾಗಿ ಎದುರಿಸಿದ್ದಾರೆ. ಸಾಮಾನ್ಯ ಜನ ಪಕ್ಷಾತೀತವಾಗಿ ಯಡಿಯೂರಪ್ಪನವರನ್ನು ಬಹಳ ಪ್ರೀತಿಯಿಂದ ಕಾಣ್ತಾರೆ. ಪಕ್ಷದ ಆತಂರಿಕ ವಿಷಯಗಳ ಬಗ್ಗೆ ನನಗೆ ಜ್ಞಾನವಿಲ್ಲ. ಆದರೆ ಯಡಿಯೂರಪ್ಪ ಮೇರು ಪರ್ವತ. ಸಿದ್ದರಾಮಯ್ಯ ಭ್ರಷ್ಟಾಚಾರ ಆರೋಪ ವಿಚಾರವಾಗಿ ಮತನಾಡಿ, ಆ ಆರೋಪಗಳಿಗೆ ತಂದೆ ಮತ್ತು ವಿಜಯೇಂದ್ರ ಬೇಕಾದ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.

  • ಅಖಿಲ ಭಾರತ ವೀರಶೈವ ಮಹಾಸಭಾ – ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಸಿಎಂ ಬಿಎಸ್‍ವೈ ಪುತ್ರಿ ನೇಮಕ

    ಅಖಿಲ ಭಾರತ ವೀರಶೈವ ಮಹಾಸಭಾ – ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಸಿಎಂ ಬಿಎಸ್‍ವೈ ಪುತ್ರಿ ನೇಮಕ

    ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಮಹಿಳಾ ವಿಭಾಗದ ಅಧ್ಯಕ್ಷರಾಗಿ ಸಿಎಂ ಯಡಿಯೂರಪ್ಪ ಅವರ ಪುತ್ರಿ ಅರುಣಾದೇವಿ ಉದಯಕುಮಾರ್ ನೇಮಕವಾಗಿದ್ದಾರೆ.

    ಯಡಿಯೂರಪ್ಪ ಅವರ ಅವರು ಮೊದಲ ಪುತ್ರಿ ಅರುಣಾದೇವಿ ಉದಯಕುಮಾರ್ ಅವರನ್ನು ಇಂದು ಮಹಿಳಾ ವಿಭಾಗದ ಅಧ್ಯಕ್ಷರಾಗಿ ನೇಮಕ ಮಾಡಲಾಯ್ತು. ಬೆಂಗಳೂರಿನ ಅಖಿಲ ಭಾರತ ವೀರಶೈವ ಮಹಾಸಭಾದ ಕಚೇರಿಯಲ್ಲಿ ಅರುಣಾದೇವಿ ಅವರು ಅಧಿಕಾರ ಸ್ವೀಕರಿಸಿದರು.

    ಇದೇ ಕಾರ್ಯಕ್ರಮದಲ್ಲಿ ವೀರಶೈವ ಮಹಾಸಭಾದ ಕೋಶಾಧ್ಯಕ್ಷರಾಗಿ ಜಿ. ಗುರುಬಸಪ್ಪ ನೇಮಕಗೊಂಡರು. ಅರುಣಾದೇವಿಯವರು ವೀರಶೈವ ಮಹಾಸಭಾದ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ, ಮಹಾಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಉಪಸ್ಥಿತಿಯಲ್ಲಿ ಪದಗ್ರಹಣ ಮಾಡಿದರು.

  • ನನ್ನ ತಂದೆಗೆ ಯಾವುದೇ ಕೆಟ್ಟ ಅಭ್ಯಾಸ ಇರಲಿಲ್ಲ, ಶೀಘ್ರ ಗುಣಮುಖರಾಗ್ತಾರೆ- ಸಿಎಂ ಪುತ್ರಿ ಅರುಣಾದೇವಿ

    ನನ್ನ ತಂದೆಗೆ ಯಾವುದೇ ಕೆಟ್ಟ ಅಭ್ಯಾಸ ಇರಲಿಲ್ಲ, ಶೀಘ್ರ ಗುಣಮುಖರಾಗ್ತಾರೆ- ಸಿಎಂ ಪುತ್ರಿ ಅರುಣಾದೇವಿ

    ಶಿವಮೊಗ್ಗ: ನಮ್ಮ ತಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶೀಘ್ರ ಗುಣಮುಖರಾಗುತ್ತಾರೆ ಎಂದು ಪುತ್ರಿ ಅರುಣಾದೇವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆತಂಕ ಬೇಡ, ಆರೋಗ್ಯವಾಗಿದ್ದೇನೆ- ಆಸ್ಪತ್ರೆಯಿಂದ ಸಿಎಂ ವಿಡಿಯೋ ಸಂದೇಶ

    ಶಿವಮೊಗ್ಗದ ಗೋಪಾಳ ಬಡಾವಣೆಯ ತಮ್ಮ ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅರುಣಾದೇವಿ, ನನ್ನ ತಂದೆಯವರಾದ ಯಡಿಯೂರಪ್ಪ ಅವರಿಗೆ ಭಾನುವಾರ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಕೊರೊನಾದಿಂದ ಬೇಗ ಗುಣಮುಖರಾಗಿ ರಾಜ್ಯವನ್ನು ಮುನ್ನಡೆಸಲಿದ್ದಾರೆ. ಯಾರೂ ಆತಂಕ ಪಡುವುದು ಬೇಡ ಎಂದು ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.

    ನನ್ನ ತಂದೆ ಅವರಿಗೆ ಮುಂಜಾನೆ ಫೋನ್ ಮಾಡಿ ಆರೋಗ್ಯ ವಿಚಾರಿಸಿದ್ದೇನೆ. ಆರೋಗ್ಯವಾಗಿದ್ದೇನೆ ಯಾರೂ ಆತಂಕ ಪಡುವುದು ಬೇಡ ಎಂದು ಅವರು ಸಹ ತಿಳಿಸಿದ್ದಾರೆ. ನಿನ್ನೆಯಿಂದಲೂ ಜನ ಕರೆ ಮಾಡಿ ತಂದೆಯವರ ಆರೋಗ್ಯ ವಿಚಾರಿಸುತ್ತಿದ್ದಾರೆ ಎಂದರು.

    ವಿರೋಧ ಪಕ್ಷದ ನಾಯಕರುಗಳು ಸಹ ಟ್ವೀಟ್, ಮೆಸೇಜ್ ಮೂಲಕ, ರಾಜ್ಯದಾದ್ಯಂತ ಕಾರ್ಯಕರ್ತರು ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುವ ಮೂಲಕ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ. ಎಲ್ಲರ ಹಾರೈಕೆಯಿಂದಾಗಿ ಶೀಘ್ರ ಗುಣಮುಖರಾಗುತ್ತಾರೆ ಎಂದರು.

    ಅಲ್ಲದೇ ನನ್ನ ಅಪ್ಪ ಯಡಿಯೂರಪ್ಪ ಅವರಿಗೆ ಯಾವುದೇ ಕೆಟ್ಟ ಅಭ್ಯಾಸಗಳು ಇರಲಿಲ್ಲ. ಅವರು ಉತ್ತಮ ಆರೋಗ್ಯದೊಂದಿಗೆ ಇದ್ದವರು. ಹಾಗಾಗಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಅಷ್ಟೇ. ಶೀಘ್ರ ಗುಣಮುಖರಾಗಿ ಕೊರೊನಾ ಗೆದ್ದು ಬರಲಿದ್ದಾರೆ ಎಂದು ಸಿಎಂ ಪುತ್ರಿ ಅರುಣಾದೇವಿ ತಿಳಿಸಿದರು.