Tag: ಅರುಣಾಚಲ ಪ್ರದೇಶ

  • ಆಕಸ್ಮಿಕ ಅಗ್ನಿ ಅವಘಡ – 700 ಮಳಿಗೆಗಳು ಭಸ್ಮ

    ಆಕಸ್ಮಿಕ ಅಗ್ನಿ ಅವಘಡ – 700 ಮಳಿಗೆಗಳು ಭಸ್ಮ

    ಇಟಾನಗರ: ಅರುಣಾಚಲ ಪ್ರದೇಶದ (Arunachal Pradesh) ನಹರ್ಲಗುನ್ ಪ್ರದೇಶದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡಿದ್ದು, ಅಗ್ನಿ ಅವಘಡದಿಂದ 700ಕ್ಕೂ ಹೆಚ್ಚು ಮಳಿಗೆಗಳು ಸುಟ್ಟು ಭಸ್ಮವಾಗಿವೆ.

    ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಕಿ (Fire) ಕಾಣಿಸಿಕೊಳ್ಳಲು ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಅಪಾರ್ಟ್‍ಮೆಂಟ್ ಕಿಟಕಿಗಳಿಗೆ ರಾಕೆಟ್ ಬಿಟ್ಟ ಕಿಡಿಗೇಡಿ – ವೀಡಿಯೋ ವೈರಲ್

    ಮೂಲಗಳ ಪ್ರಕಾರ, ಬೆಂಕಿ ಕಾಣಿಸಿಕೊಂಡ ಎರಡು ಗಂಟೆಗಳವರೆಗೆ ಕೇವಲ 2 ಮಳಿಗೆಗಳಿಗೆ ಮಾತ್ರ ಆವರಿಸಿತ್ತು. ಆದರೆ ಅಗ್ನಿಶಾಮಕ ದಳ (Fire Department) ಬೆಂಕಿ ನಿಯಂತ್ರಿಸುವಲ್ಲಿ ವಿಫಲವಾದ್ದರಿಂದ ಗಾಢವಾಗಿ ವ್ಯಾಪಿಸಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ

    ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ

    ಇಟಾನಗರ: ಭಾರತೀಯ ಸೇನಾ ಹೆಲಿಕಾಪ್ಟರ್ (Army Helicopter) ಒಂದು ಶುಕ್ರವಾರ ಅರುಣಾಚಲ ಪ್ರದೇಶದ (Arunachal Pradesh) ಅಪ್ಪರ್ ಸಿಯಾಂಗ್ ಜಿಲ್ಲೆಯ ಮಿಗ್ಗಿಂಗ್ ಗ್ರಾಮದಲ್ಲಿ ಪತನಗೊಂಡಿದೆ (Helicopter Crash). ಅಪಘಾತ ನಡೆದಿರುವ ಸ್ಥಳಕ್ಕೆ ರಕ್ಷಣಾ ತಂಡವನ್ನು ಕಳುಹಿಸಲಾಗಿದೆ ಎಂದು ಸೇನೆ ತಿಳಿಸಿದೆ.

    ಇಂದು ಪತನವಾಗಿರುವ ಹೆಲಿಕಾಪ್ಟರ್ ಭಾರತೀಯ ಸೇನೆಗಾಗಿ ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ ತಯಾರಿಸಿದೆ. ರುದ್ರ ಎಂದು ಕರೆಯಲಾಗುವ ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್ ಮಿಗ್ಗಿಂಗ್ ಗ್ರಾಮದಲ್ಲಿ ಪತನವಾಗಿದೆ. ಇದನ್ನೂ ಓದಿ: ವ್ಯರ್ಥವಾಯ್ತು 10 ಕೋಟಿ ಕೋವಿಶೀಲ್ಡ್ ಡೋಸ್

    ವರದಿಗಳ ಪ್ರಕಾರ ಘಟನೆ ನಡೆದಿರುವ ಸ್ಥಳದಲ್ಲಿ ಅನುಕೂಲಕರ ರಸ್ತೆ ಸಂಪರ್ಕ ಇಲ್ಲ ಎನ್ನಲಾಗಿದೆ. ಇದೀಗ ಶೋಧ ನಡೆಸಲು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ

    Live Tv
    [brid partner=56869869 player=32851 video=960834 autoplay=true]

  • ಅರುಣಾಚಲ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಥುಪ್ಟೆನ್ ಟೆಂಪಾ ನಿಧನ

    ಅರುಣಾಚಲ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಥುಪ್ಟೆನ್ ಟೆಂಪಾ ನಿಧನ

    ಇಟಾನಗರ: ಅರುಣಾಚಲ ಪ್ರದೇಶದ ತವಾಂಗ್‍ನ (Tawang) ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ರಾಜ್ಯ ಸಚಿವ ಥುಪ್ಟೆನ್ ಟೆಂಪಾ(63) (Thupten Tempa) ಅವರು ಇಟಾನಗರದ (Itanagar) ರಾಮಕೃಷ್ಣ ಮಿಷನ್ ಆಸ್ಪತ್ರೆಯಲ್ಲಿ (Ramakrishna Mission Hospital) ನಿಧನರಾಗಿದ್ದಾರೆ.

    ಥುಪ್ಟೆನ್ ಟೆಂಪಾ ಅವರ ನಿಧನಕ್ಕೆ ಅರುಣಾಚಲ ಪ್ರದೇಶದ (Arunachal Pradesh) ಮುಖ್ಯಮಂತ್ರಿ ಪ್ರೇಮಾ ಖಂಡು (Prema Khandu) ಅವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಅರುಣಾಚಲ ಪ್ರದೇಶದ ಹಿರಿಯ ನಾಯಕ ಥುಪ್ಟೆನ್ ಟೆಂಪಾ ಅವರ ನಿಧನದಿಂದ ದುಃಖವಾಗಿದೆ. ಭಗವಾನ್ ಬುದ್ಧ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ. ಓಂ ಮಣಿ ಪದ್ಮೇ ಹಮ್ ಎಂದು ಥುಪ್ಟೆನ್ ಟೆಂಪಾ ಅವರ ಫೋಟೋ ಜೊತೆಗೆ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಥುಪ್ಟೆನ್ ಟೆಂಪಾ ಅವರಿಗೆ ಗುರುವಾರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಶುಕ್ರವಾರ ಸಂಜೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಡಿಮೆ ರಕ್ತದೊತ್ತಡ ಹಿನ್ನೆಲೆ ಥುಪ್ಟೆನ್ ಟೆಂಪಾ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ದಿನಗಳ ಅಂತರದಲ್ಲಿ ಎಮ್ಮೆ ಬಳಿಕ ಹಸುವಿಗೆ ಗುದ್ದಿದ ವಂದೇ ಭಾರತ್ ಎಕ್ಸ್‌ಪ್ರೆಸ್

    ರಾಜಕಾರಣಕ್ಕೆ ಸೇರುವ ಮುನ್ನ ಥುಪ್ಟೆನ್ ಟೆಂಪಾ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಹೊಸ ದೆಹಲಿಯ ಜೆಎನ್‍ಯುವಿನಲ್ಲಿ ಇಂಟರ್ ನ್ಯಾಷನಲ್ ರಿಲೇಶನ್ಸ್‌ನಲ್ಲಿ ಎಂಎ ಪದವಿ ಮತ್ತು ರಾಜತಾಂತ್ರಿಕತೆಯಲ್ಲಿ ಎಂಫಿಲ್ ಪಡೆದರು. 2019ರಲ್ಲಿ ಟೆಂಪಾ 2-ತವಾಂಗ್ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ಪಡೆದು ಬಿಜೆಪಿಯ ತ್ಸೆರಿಂಗ್ ತಾಶಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಇದನ್ನೂ ಓದಿ: ಟ್ರಕ್‍ಗೆ ಬಸ್ ಡಿಕ್ಕಿ – ಬೆಂಕಿ ಹೊತ್ತಿ 11 ಸಾವು, 38 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • 2 ವಾರದಿಂದ ಸಿಕ್ಕಿಲ್ಲ ಸೈನಿಕರು – ಮುಂದುವರಿದ ಶೋಧಕಾರ್ಯ

    2 ವಾರದಿಂದ ಸಿಕ್ಕಿಲ್ಲ ಸೈನಿಕರು – ಮುಂದುವರಿದ ಶೋಧಕಾರ್ಯ

    ಇಟಾನಗರ: ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿರುವ ಇಬ್ಬರು ಭಾರತೀಯ ಸೇನಾ ಸಿಬ್ಬಂದಿಯ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

    ಹರೇಂದ್ರ ನೇಗಿ ಮತ್ತು ಪ್ರಕಾಶ್ ಸಿಂಗ್ ರಾಣಾ ಮೇ 28 ರಂದು ನಾಪತ್ತೆಯಾಗಿದ್ದರು. ಉತ್ತರಾಖಂಡದ 7ನೇ ಗರ್ವಾಲ್ ರೈಫಲ್ಸ್ ಸೈನಿಕರಾದ ಇವರನ್ನು ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಮುಂಚೂಣಿ ಪ್ರದೇಶಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

    2 Soldiers Missing For Two Weeks In Arunachal, Search Ops On, Says Army

    ನಡೆದಿದ್ದೇನು?
    ನಾಯಕ್ ಪ್ರಕಾಶ್ ಸಿಂಗ್ ಮತ್ತು ಲ್ಯಾನ್ಸ್ ನಾಯಕ್ ಹರೇಂದರ್ ಸಿಂಗ್ ಅವರು ತಮ್ಮ ಪೋಸ್ಟ್‌ಗೆ ಸಮೀಪದಲ್ಲಿ ವೇಗವಾಗಿ ಹರಿಯುತ್ತಿದ್ದ ನದಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಸುದ್ದಿ ತಿಳಿದ ತಕ್ಷಣ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ವ್ಯಾಪಕವಾದ ಶೋಧ ಕಾರ್ಯಾಚರಣೆ ಮಾಡಲಾಗುತ್ತಿದೆ. ಆದರೆ ಎಷ್ಟೇ ಹುಡುಕಿದರು ಸೈನಿಕರನ್ನು ಪತ್ತೆ ಮಾಡುವಲ್ಲಿ ಯಾವುದೇ ಯಶಸ್ಸು ಕಂಡುಬಂದಿಲ್ಲ. ಕಳೆದ ಎರಡು ವಾರಗಳಿಂದ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಇದನ್ನೂ ಓದಿ: ED ನಿಯಂತ್ರಣವನ್ನ ನಮಗೆ ಕೊಟ್ರೆ ಫಡ್ನವಿಸ್ ಕೂಡ ನಮ್ಮ ಸೇನೆಗೆ ಮತ ಹಾಕ್ತಾರೆ: ಸಂಜಯ್ 

    ಜೂನ್ 11(ಶನಿವಾರ) ರಂದು, ಹರೇಂದ್ರ ನೇಗಿ ಅವರ ಪತ್ನಿ ಪೂನಂ ನೇಗಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಇಬ್ಬರೂ ಸೈನಿಕರು ನದಿಯ ಬಳಿ ಹೋಗಿರುವುದು ಯಾರಿಗೂ ತಿಳಿದಿಲ್ಲ. ಇದನ್ನು ನಂಬಲು ನನಗೆ ಕಷ್ಟವಾಗುತ್ತದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

  • ಬಿಹು ಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ಅರುಣಾಚಲ ಪ್ರದೇಶದ ಸಿಎಂ

    ಬಿಹು ಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ಅರುಣಾಚಲ ಪ್ರದೇಶದ ಸಿಎಂ

    ಇಟಾನಗರ: ಅಸ್ಸಾಮಿ ಹಬ್ಬ ಬಿಹು ಆಚರಣೆಯ ವೇಳೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ಕುಣಿದು ಕುಪ್ಪಳಿಸಿದ್ದಾರೆ.

    ಮುಖ್ಯಮಂತ್ರಿಗಳು ಇಟಾನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಸ್ಸಾಮಿ ಸಮುದಾಯದ ಬಿಹು ಹಬ್ಬ ಆಚರಣೆಯಲ್ಲಿ ಪಾಲ್ಗೊಂಡರು. ಈ ಹಬ್ಬದ ಪುಟ್ಟ ವೀಡಿಯೋವೊಂದನ್ನು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಬಿಹು ನೃತ್ಯವನ್ನು ಕಲಿಯಲು ಪ್ರಯತ್ನಿಸಿದ್ದೇನೆ. ಇಟಾನಗರದ ನನ್ನ ನಿವಾಸದಲ್ಲಿ ನಡೆದ ಬಿಹು ಹಬ್ಬದ ವೇಳೆ ಅಸ್ಸಾಮಿ ಸಮುದಾಯವರೊಂದಿಗೆ ಸೇರಿಕೊಂಡೆನು. ಇಂತಹ ಆಚರಣೆಯ ಮನೋಭಾವವು ಅರುಣಾಚಲ ಮತ್ತು ಅಸ್ಸಾಂ ನಡುವಿನ ಹಳೆಯ ಸಾಂಸ್ಕøತಿಕ ಬಾಂಧವ್ಯವನ್ನು ಪುನಃ ಸೃಷ್ಟಿಸುತ್ತದೆ. ಇದನ್ನೂ ಓದಿ: ಗೃಹ ಸಚಿವ ಆರಗ ಜ್ಞಾನೇಂದ್ರ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ: ಕೆ.ಜಿ ಬೋಪಯ್ಯ

    ಶುಕ್ರವಾರ ಟ್ವಿಟ್ಟರ್‌ನಲ್ಲಿ ಶ್ರೀ ಖಂಡು ಬರೆದುಕೊಂಡಿದ್ದಾರೆ, “ಬಿಹು ನೃತ್ಯದ ನನ್ನ ಪ್ರಯತ್ನವು ಚಲಿಸುತ್ತದೆ. ನನ್ನ ನಿವಾಸದಲ್ಲಿ ಬಿಹು ಹಬ್ಬಕ್ಕಾಗಿ ಇಟಾನಗರದ ಅಸ್ಸಾಮಿ ಸಮುದಾಯವನ್ನು ಸೇರಿಕೊಂಡಿದ್ದೇನೆ. ಅಂತಹ ಆಚರಣೆಯ ಮನೋಭಾವವು ಅರುಣಾಚಲ ಮತ್ತು ಅಸ್ಸಾಂ ನಡುವಿನ ಹಳೆಯ ಸಾಂಸ್ಕೃತಿಕ ಬಾಂಧವ್ಯವನ್ನು ಪುನಃ ಹುಟ್ಟುಹಾಕಲಿ. ಸದಾ ಅಭಿವೃದ್ಧಿಯಾಗುವುದಕ್ಕೆ ಮುಂದುವರಿಸಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಆಡಳಿತ ಟೀಕಿಸಿದ ಸಿಧು- ಭಗವಂತ್ ಮಾನ್‍ಗೆ ಬೆಂಬಲ

    ಬೋಹಾಗ್ ಬಿಹು ಅಥವಾ ರೊಂಗಾಲಿ ಬಿಹು, ಅಸ್ಸಾಂನ ದೊಡ್ಡ ಹಬ್ಬಗಳಲ್ಲಿ ಒಂದಾಗಿದ್ದು, ಪ್ರತಿ ವರ್ಷ ಏಪ್ರಿಲ್ ಎರಡನೇ ವಾರದಲ್ಲಿ ಬರುತ್ತದೆ. ಇದು ಸುಗ್ಗಿಯ ಅವಧಿಯ ಆರಂಭವನ್ನು ಸೂಚಿಸುತ್ತದೆ. ಈ ವರ್ಷ ಬೋಹಾಗ್ ಬಿಹುವನ್ನು ಏಪ್ರಿಲ್ 14 ರಿಂದ ಏಪ್ರಿಲ್ 16ರವರೆಗೆ ಆಚರಿಸಲಾಯಿತು.

  • ಅರುಣಾಚಲ ಪ್ರದೇಶದಲ್ಲಿ ಹಿಮಪಾತ: 7 ಸೈನಿಕರು ಹುತಾತ್ಮ

    ಅರುಣಾಚಲ ಪ್ರದೇಶದಲ್ಲಿ ಹಿಮಪಾತ: 7 ಸೈನಿಕರು ಹುತಾತ್ಮ

    ಇಟಾನಗರ: ಫೆಬ್ರವರಿ 6 ರಂದು ಅರುಣಾಚಲ ಪ್ರದೇಶದಲ್ಲಿ ನಡೆದ ಹಿಮಕುಸಿತದಲ್ಲಿ 7 ಸೈನಿಕರು ಹಿಮದ ಅಡಿ ಹೂತು ಹೋಗಿದ್ದರು. ಹಿಮದಲ್ಲಿ ಸಿಲುಕಿಕೊಂಡಿದ್ದ 7 ಸೈನಿಕರು ಮೃತಪಟ್ಟಿದ್ದಾರೆ ಎಂದು ಮಂಗಳವಾರ ಘೋಷಿಸಲಾಗಿದೆ.

    ಹಿಮಪಾತವಾಗಿದ್ದ ಚುಮೆ ಗಯಾಟರ್ ಪ್ರದೇಶಕ್ಕೆ ರಕ್ಷಣಾ ತಂಡಗಳನ್ನು ವಿಮಾನದ ಮೂಲಕ ಕಳುಹಿಸಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ. ಈ ಪ್ರದೇಶ ತವಾಂಗ್ ಜಿಲ್ಲಾ ಕೇಂದ್ರದಿಂದ 100 ಕಿಮೀ ದೂರದಲ್ಲಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

    ಮೃತ 7 ಮಂದಿ ಸೈನಿಕರು 19ನೇ ಜಮ್ಮು ಹಾಗೂ ಕಾಶ್ಮೀರ ರೈಫಲ್ಸ್‍ಗೆ ಸೇರಿದವರು ಎನ್ನಲಾಗಿದೆ. ಇದನ್ನೂ ಓದಿ: ಮಧ್ಯಪ್ರದೇಶಕ್ಕೂ ಹಿಜಬ್‌ ವಿವಾದ ಎಂಟ್ರಿ – ನಿಷೇಧ ಮಾಡ್ತೀವಿ ಎಂದ ಶಿಕ್ಷಣ ಸಚಿವ

    ಅರುಣಾಚಲ ಪ್ರದೇಶದಲ್ಲಿನ ಹಿಮಪಾತದಲ್ಲಿ ನಮ್ಮ 7 ವೀರ ಯೋಧರ ದುರದೃಷ್ಟಕರ ನಿಧನದ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ. ಯೋಧರು ನಿಸ್ವಾರ್ಥವಾಗಿ ನಮ್ಮ ಸುರಕ್ಷತೆ ಮತ್ತು ಭದ್ರತೆಗಾಗಿ ಶ್ರಮಿಸುತ್ತಿದ್ದರು. ಯೋಧರಿಗೆ ನನ್ನ ನಮನಗಳು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯೋಧರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: Karnataka Hijab Row: ಹೈಸ್ಕೂಲ್‌, ಕಾಲೇಜುಗಳಿಗೆ 3 ದಿನ ರಜೆ

  • ನಾಪತ್ತೆಯಾಗಿದ್ದ ಅರುಣಾಚಲ ಯುವಕನಿಗೆ ಚೀನಾ ಕಸ್ಟಡಿಯಲ್ಲಿ ಕರೆಂಟ್ ಶಾಕ್

    ನಾಪತ್ತೆಯಾಗಿದ್ದ ಅರುಣಾಚಲ ಯುವಕನಿಗೆ ಚೀನಾ ಕಸ್ಟಡಿಯಲ್ಲಿ ಕರೆಂಟ್ ಶಾಕ್

    ಇಟಾನಗರ: ಅಪಹರಣಕ್ಕೊಳಗಾಗಿದ್ದ ಅರುಣಾಚಲ ಮೂಲದ ಯುವಕನನ್ನು ಚೀನಾ ಬಿಡುಗಡೆ ಮಾಡಿದೆ. ಸೋಮವಾರ ತನ್ನ ಕುಟುಂಬ ಸೇರಿದ ಯುವಕನಿಗೆ ಅಪಹರಣಕ್ಕೊಳಗಾಗಿದ್ದಾಗ ಚೀನಾ ತನ್ನ ಕಸ್ಟಡಿಯಲ್ಲಿ ಒದ್ದು, ವಿದ್ಯುತ್ ಶಾಕ್ ನೀಡಿದೆ ಎಂದು ಆತನ ತಂದೆ ಆರೋಪಿಸಿದ್ದಾರೆ.

    ಸೋಮವಾರ ಸಂಜೆ ಅಪ್ಪರ್ ಸಿಯಾಂಗ್ ಜಿಲ್ಲೆಯ ಟ್ಯೂಟಿಂಗ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಸೇನೆ ಅಪಹರಣವಾಗಿದ್ದ ಯುವಕ ಮಿರಾಮ್ ಟ್ಯಾರೋನ್‌ನನ್ನು ತನ್ನ ಪೋಷಕರೊಂದಿಗೆ ಮತ್ತೆ ಸೇರಿಸಿದೆ ಎಂದು ಜಿಲ್ಲಾ ಉಪ ಆಯುಕ್ತ ಶಾಶ್ವತ್ ಸೌರಭ್ ತಿಳಿಸಿದ್ದರು.

    ಭಾರತಕ್ಕೆ ಮರಳಿದ ಮಿರಾಮ್‌ನನ್ನು ಸ್ಥಳೀಯ ಆಡಳಿತ ಮತ್ತು ಪಂಚಾಯಿತಿ ಮುಖಂಡರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಆದರೆ ಆತನ ತಂದೆ ಒಪಾಂಗ್ ಟ್ಯಾರೋನ್ ಇಡೀ ಘಟನೆಯಿಂದಾಗಿ ನನ್ನ ಮಗ ಹೆದರಿದ್ದಾನೆ ಹಾಗೂ ಮಾನಸಿಕವಾಗಿ ಕುಗ್ಗಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಯುವಕನನ್ನು ಬಿಡುಗಡೆ ಮಾಡಿದ ಚೀನಾ

    ಒಂದು ವಾರಕ್ಕೂ ಹೆಚ್ಚು ಕಾಲ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ) ಆತನನ್ನು ವಶದಲ್ಲಿಟ್ಟುಕೊಂಡಿತ್ತು. ಈ ಸಂದರ್ಭದಲ್ಲಿ ಅವರನ್ನು ಕಟ್ಟಿಹಾಕಿ ಕಣ್ಣು ಮುಚ್ಚಲಾಗಿತ್ತು ಎಂದು ತಂದೆ ಆರೋಪಿಸಿದ್ದಾರೆ.

    ಅವನು ಇನ್ನೂ ಆಘಾತದಲ್ಲಿಯೇ ಇದ್ದಾನೆ. ಅವನಿಗೆ ಬೆನ್ನಿಗೆ ಒದೆಯಲಾಗಿತ್ತು ಹಾಗೂ ಆರಂಭದಲ್ಲಿ ವಿದ್ಯುತ್ ಶಾಕ್ ನೀಡಲಾಗಿತ್ತು. ಅವನ ಕಣ್ಣುಗಳನ್ನು ಹೆಚ್ಚಿನ ಸಮಯ ಮುಚ್ಚಿಯೇ ಇರಿಸಿದ್ದರು ಹಾಗೂ ಅವನ ಕೈಗಳನ್ನು ಬಿಗಿಯಾಗಿ ಕಟ್ಟಿದ್ದರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಡವರ ಕಲ್ಯಾಣವೇ ನಮ್ಮ ಆದ್ಯತೆ: ನರೇಂದ್ರ ಮೋದಿ

    ಊಟ ಹಾಗೂ ವಿಶ್ರಾಂತಿಯ ಸಮಯದಲ್ಲಿ ಮಾತ್ರ ಆತನ ಕೈಯನ್ನು ಬಿಡಿಸಲಾಗುತ್ತಿತ್ತು. ಊಟದಲ್ಲಿ ಯಾವುದೇ ತೊಂದರೆ ನೀಡಿಲ್ಲ ಎಂಬುದಾಗಿ ಒಪಾಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಮಿರಾಮ್ ಜನವರಿ 12ರಂದು ತನ್ನ ಸ್ನೇಹಿತನ್ನು ಭೇಟಿ ಮಾಡಲು ಚೀನಾ ಗಡಿ ಲುಂಗ್ಟಾ ಜೋರ್ ಪ್ರದೇಶದ ಬಳಿ ಹೋಗಿದ್ದಾಗ ಆತನನ್ನು ಚೀನಾ ಸೇನೆ ಅಪಹರಿಸಿತ್ತು. ಭಾರತ ಆತನನ್ನು ಹುಡುಕಿ, ಮರಳಿ ದೇಶಕ್ಕೆ ಬಿಡುಗಡೆ ಮಾಡಬೇಕೆಂದು ಕೋರಿದಾಗ ಚೀನಾ ಸೇನೆ ಜನವರಿ 27 ರಂದು ಮಿರಾಮ್‌ನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿತ್ತು.

  • ನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಯುವಕನನ್ನು ಬಿಡುಗಡೆ ಮಾಡಿದ ಚೀನಾ

    ನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಯುವಕನನ್ನು ಬಿಡುಗಡೆ ಮಾಡಿದ ಚೀನಾ

    ನವದೆಹಲಿ: ಅರುಣಾಚಲ ಪ್ರದೇಶದ ಮಿರಮ್ ತಾರೋನ್‍ನಿಂದ ಕಾಣೆಯಾಗಿದ್ದ ಯುವಕನನ್ನು ಚೀನಾ ಭಾರತ ಸೇನೆಗೆ ಹಸ್ತಾಂತರಿಸಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ದೃಢಪಡಿಸಿದ್ದಾರೆ.

    ಘಟನೆ ಕುರಿತು ಚೀನಾದೊಂದಿಗೆ ಪ್ರಕರಣವನ್ನು ಇತ್ಯರ್ಥ ಪಡಿಸಲು ಹಾಗೂ ಯುವಕನನ್ನು ಸುರಕ್ಷಿತವಾಗಿ ಮನೆಗೆ ಮರಳುವಂತೆ ಮಾಡಿದ ಭಾರತೀಯ ಸೇನೆಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಕಿರಣ್ ರಿಜಿಜು ಟ್ವೀಟ್‍ನಲ್ಲಿ ತಿಳಿಸಿದರು.

    ಘಟನೆಯೇನು?: ಜನವರಿ 18ರಂದು ಅರುಣಾಚಲ ಪ್ರದೇಶದಲ್ಲಿ ತ್ಸಾಂಗ್ಪೋ ನದಿಯು ಭಾರತವನ್ನು ಪ್ರವೇಶಿಸುವ ಸಮೀಪದಲ್ಲಿ ಜೀಡೋ ಗ್ರಾಮದ ಮಿರಾಮ್ ಟ್ಯಾರೋನ್ (17) ಹಾಗೂ ಆತನ ಸ್ನೇಹಿತ ಜಾನಿ ಯಾಯಿಂಗ್ ಬೇಟೆಗಾಗಿ ತೆರಳಿದ್ದರು. ಅಲ್ಲಿ ಮಿರಾಮ್ ಅವರನ್ನು ಚೀನಾ ಅಧಿಕಾರಿಗಳು ಅಪಹರಿಸಿದ್ದರು. ಅವನ ಜೊತೆಯಿದ್ದ ಸ್ನೇಹಿತ ಜಾನಿ ಯಾಯಿಂಗ್ ಚೀನಾ ಅಧಿಕಾರಿಗಳಿಂದ ತಪ್ಪಿಸಿಕೊಂಡು ಬಂದಿದ್ದಾನೆ. ನಂತರ ವಿರಾಮನ್ ಟ್ಯೂರೋನ್‍ನ ಅಪಹರಣದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದನು. ಇದನ್ನೂ ಓದಿ: ನಾಪತ್ತೆಯಾಗಿದ್ದ ಯುವಕನನ್ನು ಶೀಘ್ರವೇ ಬಿಡುಗಡೆ ಮಾಡಲಿದೆ ಚೀನಾ

    ಜನವರಿ 20ರಂದು, ಕಾಣೆಯಾದ ಅರುಣಾಚಲ ಯುವಕನ ಗುರುತನ್ನು ಪತ್ತೆ ಹಚ್ಚಲು ಚೀನಾದ ಕಡೆಯವರು ಭಾರತದ ಕಡೆಯಿಂದ ವಿವರಗಳನ್ನು ಕೇಳಿದ್ದರು. ನಂತರ, ಭಾರತೀಯ ಸೇನೆಯು ಮಿರಾಮ್ ಟ್ಯಾರೋನ್ ಅವರ ಗುರುತನ್ನು ಖಚಿತಪಡಿಸಲು ಅವರ ವೈಯಕ್ತಿಕ ವಿವರಗಳನ್ನು ಹಂಚಿಕೊಂಡಿತು. ಇದನ್ನೂ ಓದಿ: ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ

    ಮಂಗಳವಾರ, ಹವಾಮಾನ ವೈಪರಿತ್ಯದಿಂದಾಗಿ ಬಿಡುಗಡೆ ವಿಳಂಬವಾಗಿದೆ. ಟ್ಯಾರನ್ ಅವರನ್ನು ಭಾರತಕ್ಕೆ ವಾಪಸ್ಸು ಕಳುಹಿಸಲಾಗುವುದು ಎಂದು ದೃಢಪಡಿಸಿತು. ಈ ಹಿನ್ನೆಲೆಯಲ್ಲಿ ಇಂದು ಯುವಕನನ್ನು ಭಾರತಕ್ಕೆ ಹಿಂದಿರುಗಿಸಿದ್ದಾರೆ. ಇದನ್ನೂ ಓದಿ: ಕಣ್ಮರೆಯಾಗಿದ್ದ ಯುವಕ ಪತ್ತೆ: ಭಾರತೀಯ ಸೇನೆಗೆ ಚೀನಾ ಮಾಹಿತಿ

  • ನಾಪತ್ತೆಯಾಗಿದ್ದ ಯುವಕನನ್ನು ಶೀಘ್ರವೇ ಬಿಡುಗಡೆ ಮಾಡಲಿದೆ ಚೀನಾ

    ನಾಪತ್ತೆಯಾಗಿದ್ದ ಯುವಕನನ್ನು ಶೀಘ್ರವೇ ಬಿಡುಗಡೆ ಮಾಡಲಿದೆ ಚೀನಾ

    ನವದೆಹಲಿ: ಜನವರಿ 18ರಂದು ನಾಪತ್ತೆಯಾಗಿದ್ದ ಅರುಣಾಚಲ ಮೂಲದ ಯುವಕನನ್ನು ಕೆಲವು ದಿನಗಳ ಬಳಿಕ ಚೀನಾದಲ್ಲಿ ಪತ್ತೆಹಚ್ಚಲಾಗಿತ್ತು. ಇದೀಗ ಚೀನಾ ಯುವಕನನ್ನು ಬಿಡುಗಡೆ ಮಾಡಲು ಸೂಚನೆ ನೀಡಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

    ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ 17 ವರ್ಷದ ಯುವಕನ ಬಿಡುಗಡೆಗೆ ಚೀನಾ ಸೂಚಿಸಿದ್ದು, ಅದರ ದಿನಾಂಕ ಹಾಗೂ ಸಮಯವನ್ನು ಶೀಘ್ರವೇ ಹಂಚಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಚೀನಾ ಯುವಕನ ಬಿಡುಗಡೆಯ ಸ್ಥಳವನ್ನು ಸೂಚಿಸಿದೆ. ಆದರೆ ಹವಾಮಾನ ವೈಪರಿತ್ಯದಿಂದಾಗಿ ಬಿಡುಗಡೆ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಣ್ಮರೆಯಾಗಿದ್ದ ಯುವಕ ಪತ್ತೆ: ಭಾರತೀಯ ಸೇನೆಗೆ ಚೀನಾ ಮಾಹಿತಿ

    ಅಪ್ಪರ್ ಸಿಯಾಂಗ್ ಜಿಲ್ಲೆಯ ಜಿಡೋ ಗ್ರಾಮದ ಯುವಕ ಮಿರಾಮ್ ಟ್ಯಾರೋನ್ 2022ರ ಜನವರಿ 18 ರಂದು ಬಿಶಿಂಗ್ ಪ್ರದೇಶದ ಶಿಯುಂಗ್‌ಲಾದಿಂದ ನಾಪತ್ತೆಯಾಗಿದ್ದ. ಟ್ಯಾರೋನ್‌ನ ಸ್ನೇಹಿತ ಜಾನಿ ಯಾಯಿಂಗ್ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ) ಆತನನ್ನು ಅಪಹರಿಸಿದ್ದಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ. ಇದನ್ನೂ ಓದಿ: ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ

    ಭಾರತೀಯ ಸೇನೆ ಪಿಎಲ್‌ಎಯನ್ನು ಸಂಪರ್ಕಿಸಿ ಯುವಕನನ್ನು ಪತ್ತೆ ಹಚ್ಚಿ ಹಿಂದಿರುಗಿಸುವಂತೆ ಮನವಿ ಮಾಡಿತ್ತು. ಬಳಿಕ ಆತ ಪತ್ತೆಯಾಗಿರುವ ಬಗ್ಗೆ ಪಿಎಲ್‌ಎ ಭಾರತೀಯ ಸೇನೆಗೆ ಮಾಹಿತಿ ನೀಡಿತ್ತು.

  • ಕಣ್ಮರೆಯಾಗಿದ್ದ ಯುವಕ ಪತ್ತೆ: ಭಾರತೀಯ ಸೇನೆಗೆ ಚೀನಾ ಮಾಹಿತಿ

    ನವದೆಹಲಿ: ಅರುಣಾಚಲ ಪ್ರದೇಶದಿಂದ ಕಣ್ಮರೆಯಾಗಿದ್ದ 17 ವರ್ಷದ ಯುವಕ ಪತ್ತೆಯಾಗಿದ್ದಾನೆ ಎಂದು ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ)ಯು ಭಾರತೀಯ ಸೇನೆಗೆ ಮಾಹಿತಿ ನೀಡಿದೆ.

    ಯುವಕನ ಬಿಡುಗಡೆ ಹಾಗೂ ಭಾರತಕ್ಕೆ ವಾಪಸ್‌ ಕಳುಹಿಸುವ ಸಂಬಂಧ ಸೂಕ್ತ ಕಾರ್ಯವಿಧಾನ ಅನುಸರಿಸಲಾಗುತ್ತಿದೆ ಎಂದು ಭಾನುವಾರ ಪಿಎಲ್‌ಎ ಮಾಹಿತಿ ನೀಡಿರುವುದಾಗಿ ತೇಜ್‌ಪುರ ಗಡಿ ನಿಯಂತ್ರಣದ ರಕ್ಷಣಾ ಪಿಆರ್‌ಒ ಹರ್ಷವರ್ಧನ್‌ ಪಾಂಡೇ ತಿಳಿಸಿದ್ದಾರೆ. ಇದನ್ನೂ ಓದಿ: NDRF ಟ್ವಿಟ್ಟರ್ ಖಾತೆ ಹ್ಯಾಕ್

    ಪಿಎಲ್‌ಎ ಗಡಿ ಭಾಗದಲ್ಲಿ ನಿಯಂತ್ರಣ ಸಾಧಿಸಿದ್ದು, ಅಕ್ರಮವಾಗಿ ಚೀನಾ ನೆಲದೊಳಗೆ ಪ್ರವೇಶಿಸುವ ಮತ್ತು ಹೊರ ಹೋಗುವ ಚಟುವಟಿಕೆಗಳನ್ನು ಹತ್ತಿಕ್ಕುತ್ತಿದೆ ಎಂದು ಹೇಳಲಾಗಿತ್ತು. ನಾಪತ್ತೆಯಾಗಿದ್ದ ಯುವಕನನ್ನು ಹುಡುಕುವಲ್ಲಿ ನೆರವಾಗಬೇಕು ಎಂದು ಭಾರತೀಯ ಸೇನೆಯು ಪಿಎಲ್‌ಎಗೆ ಮನವಿ ಮಾಡಿತ್ತು.

    ಅರುಣಾಚಲ ಪ್ರದೇಶದ ಝಿಡೋದ 17 ವರ್ಷದ ಯುವಕ ಮಿರಾಮ್‌ ತಾರೋಮ್‌ ನಾಪತ್ತೆಯಾಗಿದ್ದಾನೆ ಎಂದು ಪೂರ್ವ ಅರುಣಾಚಲ ಸಂಸದ ತಾಪಿರ್‌ ಗಾವ್‌ ತಿಳಿಸಿದ್ದರು. ನಂತರ ಭಾರತೀಯ ಸೇನೆಯು ಪಿಎಲ್‌ಎ ಸಂಪರ್ಕಿಸಿ ಯುವಕನನ್ನು ಪತ್ತೆ ಹಚ್ಚಿ ಹಿಂದಿರುಗಿಸುವಂತೆ ಮನವಿ ಮಾಡಿತ್ತು. ಇದನ್ನೂ ಓದಿ: ಗಣರಾಜ್ಯೋತ್ಸವ ಆಚರಣೆಗೆ ರಾಜಪಥದಲ್ಲಿ ಸಿದ್ಧತೆ

    2020ರ ಸೆಪ್ಟೆಂಬರ್‌ನಲ್ಲಿ ಸುಬಾನ್ಸಿರಿ ಜಿಲ್ಲೆಯ ಐವರು ಬಾಲಕರನ್ನು ಪಿಎಲ್‌ಎ ಅಪಹರಿಸಿತ್ತು. ಒಂದು ವಾರದ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು. ಅದೇ ವರ್ಷದ ಮಾರ್ಚ್‌ನಲ್ಲೂ 21 ವರ್ಷದ ವ್ಯಕ್ತಿಯೊಬ್ಬನನ್ನು ಅಪಹರಿಸಿ, ಭಾರತೀಯ ಸೇನೆಯು ಸಂವಹನ ನಡೆಸುವ ಮೊದಲೇ ಬಿಡುಗಡೆ ಮಾಡಿತ್ತು.