Tag: ಅರುಣಾಚಲಪ್ರದೇಶ

  • ವಿಧಾನಸಭಾ ಚುನಾವಣೆ 2024- ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಭರ್ಜರಿ ಜಯ

    ವಿಧಾನಸಭಾ ಚುನಾವಣೆ 2024- ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಭರ್ಜರಿ ಜಯ

    ಇಟಾನಗರ: ಅರುಣಾಚಲ ಪ್ರದೇಶದ (Arunachal Pradesh) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದೆ. ರಾಜ್ಯದ 60 ವಿಧಾನಸಭಾ ಸ್ಥಾನಗಳ ಪೈಕಿ 46ರಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಈ ಮೂಲಕ ಪೇಮಾ ಖಂಡು ಅವರು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲಿದ್ದಾರೆ.

    ನ್ಯಾಷನಲ್ ಪೀಪಲ್ಸ್ ಪಾರ್ಟಿ 5 ಸ್ಥಾನಗಳನ್ನು ಗೆದ್ದಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (NCP) 3 ಸ್ಥಾನಗಳನ್ನು ಗೆದ್ದಿದೆ. ಅರುಣಾಚಲದ ಪೀಪಲ್ಸ್ ಪಾರ್ಟಿ 2, ಕಾಂಗ್ರೆಸ್ 1 ಮತ್ತು ಸ್ವತಂತ್ರರು 3 ಸ್ಥಾನಗಳನ್ನು ಗೆದ್ದಿದ್ದಾರೆ.

    2019ರಲ್ಲಿ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 41 ಸ್ಥಾನಗಳನ್ನು ಗೆದ್ದಿತ್ತು. 50.86% ರಷ್ಟು ಮತಗಳನ್ನು ಪಡೆದಿದ್ದಾರೆ. ಜೆಡಿಯು 7 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 2024 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 54.57 % ಮತಗಳನ್ನು ಪಡೆದು 5 ಸ್ಥಾನಗಳನ್ನು ಗಳಿಸಿತು. ಇದನ್ನೂ ಓದಿ: ಅರುಣಾಚಲಪ್ರದೇಶ, ಬಿಜೆಪಿಗೆ ಐತಿಹಾಸಿಕ ದಿನ: ಪೆಮಾ ಖಂಡು

    ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ 10 ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದಿದ್ದಾರೆ. 2016ರ ಜುಲೈನಲ್ಲಿ ಕಾಂಗ್ರೆಸ್‌ನಲ್ಲಿದ್ದಾಗ ಪೆಮಾ ಖಂಡು ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಸಿಎಂ ಆದ ನಂತರ ಅವರು ಸೆಪ್ಟೆಂಬರ್‌ನಲ್ಲಿ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲಕ್ಕೆ ಸೇರಿದರು. ಇದಾದ ಬಳಿಕ 2016ರ ಡಿಸೆಂಬರ್‌ನಲ್ಲಿ ಬಿಜೆಪಿ ಸೇರಿದ್ದರು.

  • ಅರುಣಾಚಲಪ್ರದೇಶ, ಬಿಜೆಪಿಗೆ ಐತಿಹಾಸಿಕ ದಿನ: ಪೆಮಾ ಖಂಡು

    ಅರುಣಾಚಲಪ್ರದೇಶ, ಬಿಜೆಪಿಗೆ ಐತಿಹಾಸಿಕ ದಿನ: ಪೆಮಾ ಖಂಡು

    ಇಟಾನಗರ: ಅರುಣಾಚಲ ಪ್ರದೇಶಕ್ಕೆ, ಅದರಲ್ಲೂ ಬಿಜೆಪಿಗೆ (BJP) ಇಂದು ಐತಿಹಾಸಿಕ ದಿನ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೊಸ ದಾಖಲೆ ನಿರ್ಮಿಸಿದೆ ಎಂದು ಸಿಎಂ ಪೆಮಾ (Pema Khandu) ಖಂಡು ಹೇಳಿದ್ದಾರೆ.

    ಅರುಣಾಚಲ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ ಬೆನ್ನಲ್ಲೇ ಮಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೊಸ ದಾಖಲೆ ನಿರ್ಮಿಸಿದೆ.  2019 ರಲ್ಲಿ ನಾವು 41 ಸ್ಥಾನಗಳನ್ನು ಗೆದ್ದಿದ್ದು, ಈ ಬಾರಿ ನಾವು 46 ಸ್ಥಾನಗಳನ್ನು ಗೆದ್ದಿದ್ದೇವೆ. ಈ ಮೂಲಕ ಹೊಸ ದಾಖಲೆ ನಿರ್ಮಿಸಿದ್ದೇವೆ ಎಂದು ತಿಳಿಸಿದರು.

    ಜೂನ್ 4 ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಈ ವೇಳೆ ಗೆಲ್ಲುವ ಎಲ್ಲಾ ಅಭ್ಯರ್ಥಿಗಳು ಇಟಾನಗರಕ್ಕೆ ಆಗಮಿಸುತ್ತಾರೆ. ದೆಹಲಿಯ ಹಿರಿಯ ನಾಯಕರು ಕೂಡ ಬರಬಹುದು. ಪಕ್ಷದ ಔಪಚಾರಿಕತೆಯ ನಂತರ ನಾವು ಹೊಸ ಸರ್ಕಾರ ರಚಿಸಲು ನಮ್ಮ ಹಕ್ಕು ಮಂಡಿಸುತ್ತೇವೆ ಎಂದರು.

    ಒಟ್ಟಿನಲ್ಲಿ ರಾಜ್ಯದ ಎರಡೂ ಲೋಕಸಭಾ ಸ್ಥಾನಗಳನ್ನು ಗೆಲ್ಲುವುದು ನಮಗೆ ಖಚಿತವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಇಟಿ ಫಲಿತಾಂಶ ದಿಢೀರ್‌ ಪ್ರಕಟ: ಸ್ಪಷ್ಟನೆ ನೀಡಿದ ಕೆಇಎ

    ಬಿಜೆಪಿಯು ಅರುಣಾಚಲ ಪ್ರದೇಶದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಿದೆ. ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, 60 ಸದಸ್ಯರ ವಿಧಾನಸಭೆಯಲ್ಲಿ 46 ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷವು ಬಹುಮತವನ್ನು ಪಡೆದುಕೊಂಡಿತು. ಏಪ್ರಿಲ್ 19 ರಂದು ಈಶಾನ್ಯ ರಾಜ್ಯದಲ್ಲಿ ಚುನಾವಣೆ ನಡೆದ 50 ಸ್ಥಾನಗಳ ಮತ ಎಣಿಕೆ ಮುಕ್ತಾಯಗೊಂಡಿದೆ. ಉಳಿದ 10 ಸ್ಥಾನಗಳನ್ನು ಬಿಜೆಪಿಯು  ಅವಿರೋಧವಾಗಿ ಗೆದ್ದಿದೆ. 50 ಸ್ಥಾನಗಳ ಪೈಕಿ ಬಿಜೆಪಿ 36 ವಿಧಾನಸಭಾ ಸ್ಥಾನಗಳನ್ನು ಗೆದ್ದಿದೆ.

  • ಪ್ರವಾಹಕ್ಕೆ ಕೊಚ್ಚಿ ಹೋದ ಚೀನಾ-ಭಾರತ ಗಡಿಯಲ್ಲಿನ ಸೇತುವೆ

    ಪ್ರವಾಹಕ್ಕೆ ಕೊಚ್ಚಿ ಹೋದ ಚೀನಾ-ಭಾರತ ಗಡಿಯಲ್ಲಿನ ಸೇತುವೆ

    ಇಟಾನಗರ: ಅರುಣಾಚಲ ಪ್ರದೇಶದ ಕುರುಂಗ್ ಕುಮೇ ಜಿಲ್ಲೆಯಲ್ಲಿ ಭಾರತ ಮತ್ತು ಚೀನಾವನ್ನು ಸಂಪರ್ಕಿಸುವ ಸ್ಟ್ರಾಟೆಜಿಕ್ ಸೇತುವೆಯು ಪ್ರವಾಹದಿಂದಾಗಿ ಕೊಚ್ಚಿಹೋದ ಘಟನೆ ನಡೆದಿದೆ.

    ಕೊರೊರು ಗ್ರಾಮದ ಬಳಿ ಓಯಾಂಗ್ ನದಿಯ ಮೇಲೆ ಇರುವ ಸೇತುವೆಯು ಜಿಲ್ಲಾ ಕೇಂದ್ರವಾದ ಕೊಲೊರಿಂಗ್ ಅನ್ನು ಡಾಮಿನ್‍ನೊಂದಿಗೆ ಸಂಪರ್ಕಿಸುತ್ತಿತ್ತು. ಇದು ಭಾರತ-ಚೀನಾ ಗಡಿಯಲ್ಲಿ ಪ್ರಮುಖ ಕೊಂಡಿಯಾಗಿದೆ.

    ಬಿಆರ್‌ಓದ ಪ್ರಾಜೆಕ್ಟ್ ಅರುಣಾಂಕ್ ಮುಖ್ಯ ಇಂಜಿನಿಯರ್ ಬ್ರಿಗ್ ಅನಿರುದ್ಧ್ ಎಸ್. ಕನ್ವರ್ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರವಾಹದಿಂದಾಗಿ ಕೊಲೊರಿಯಾಂಗ್-ಹುರಿ ರಸ್ತೆಯಲ್ಲಿನ ಸೇತುವೆಯು ಲೀಯಿಂದ ಸುಮಾರು ಒಂದು ಕಿ.ಮೀವರೆಗೆ ಕೊಚ್ಚಿಹೋಗಿದೆ. ಇದರ ಪರಿಣಾಮ ಎಷ್ಟಿತ್ತೆಂದರೆ ಸೇತುವೆಯ ಫಲಕವು 100 ಮೀ. ಕೆಳಗೆ ಕಾಣುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಹೋಳಿಗೆ, ನಿಪ್ಪಟ್ಟು, ಆಲೂ ಕೂರ್ಮಾ; ತೆಲಂಗಾಣ ಸಾಂಪ್ರದಾಯಿಕ ಖಾದ್ಯ ಸವಿದ ಮೋದಿ – ಮೆನುವಿನಲ್ಲಿತ್ತು 50 ಐಟಂ

    ಪ್ರಾಜೆಕ್ಟ್ ಅರುಣಾಂಕ್ ಅಡಿಯಲ್ಲಿ 756 ಬಿಆರ್‌ಟಿಎಫ್‍ನ 119 ರಸ್ತೆ ನಿರ್ಮಾಣ ಕಂಪನಿ (ಆರ್‌ಸಿಸಿ)ಯು ಈ ಸೇತುವೆಯನ್ನು ಪುನಃಸ್ಥಾಪಿಸಲು ಯೋಚಿಸಿದೆ. ಇದರ ಆದ್ಯತೆಯ ಮೇಲೆ ಕಾರ್ಯವನ್ನು ಕೈಗೊಳ್ಳಲು ಅಗತ್ಯವಿರುವ ಎಲ್ಲಾ ಯಂತ್ರಗಳನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಾರ್ಯಕರ್ತರೊಂದಿಗೆ ನಾಗಿಣಿ ಡ್ಯಾನ್ಸ್ ಮಾಡಿದ ಸಚಿವ ಎಂಟಿಬಿ

    Live Tv
    [brid partner=56869869 player=32851 video=960834 autoplay=true]

  • ಸಿಬ್ಬಂದಿ ಮುಖಕ್ಕೆ ಖಾರದ ಪುಡಿ ಎರಚಿ 7 ಕೈದಿಗಳು ಪರಾರಿ

    ಸಿಬ್ಬಂದಿ ಮುಖಕ್ಕೆ ಖಾರದ ಪುಡಿ ಎರಚಿ 7 ಕೈದಿಗಳು ಪರಾರಿ

    ಇಟಾನಗರ್: ಜೈಲಿನಲ್ಲಿದ್ದ 7 ಮಂದಿ ವಿಚಾರಣಾಧೀನ ಕೈದಿಗಳು ಸೆಕ್ಯುರಿಟಿ ಗಾರ್ಡ್‍ಗಳ ಮುಖಕ್ಕೆ ಖಾರದ ಪುಡಿ ಎರಚಿ ಜೈಲಿನಿಂದ ತಪ್ಪಿಸಿಕೊಂಡಿರುವ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ.

    ಅಭಿಜಿತ್ ಗೊಗೋಯ್, ತಾರೋ ಹಮಾಮ್, ಕಲಾಂ ಅಪಂಗ್, ತಾಲುಮ್ ಪನೀಯಿಂಗ್, ಸುಭಾಷ್ ಮಂಡಲ್, ರಾಜಾ ತಾಯೆಂಗ್ ಮತ್ತು ದನಿ ಗಮ್ಲಿನ್ ಜೈಲಿನಿಂದ ಪರಾರಿಯಾಗಿರುವ ಕೈದಿಗಳಾಗಿದ್ದಾರೆ. ಅರುಣಾಚಲಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯಲ್ಲಿರುವ ಪಾಸಿಘಾಟ್ ಜೈಲಿನಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ:  ಬಡ-ಮಧ್ಯಮ ವರ್ಗದವರಿಗೆ ದುಬಾರಿಯಾದ ನಂದಿಬೆಟ್ಟ – ಊಟ, ತಿಂಡಿ, ಕಾಫಿ ಸೇರಿದಂತೆ ಪ್ರವೇಶ ಶುಲ್ಕವೂ ಬಲು ದುಬಾರಿ

    ಈ ಜೈಲಿನಲ್ಲಿದ್ದ 7 ಮಂದಿ ವಿಚಾರಣಾಧೀನ ಕೈದಿಗಳು ಭಾನುವಾರ ರಾತ್ರಿ ಸೆಕ್ಯುರಿಟಿ ಗಾರ್ಡ್‍ಗಳ ಮುಖಕ್ಕೆ ಖಾರದ ಪುಡಿ ಎರಚಿ ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ. ಆ ಜೈಲಿನಲ್ಲಿ 94 ಕೈದಿಗಳಿದ್ದರು. ಭಾನುವಾರ ರಾತ್ರಿ 7.30ರ ವೇಳೆಗೆ 7 ಕೈದಿಗಳು ಜೈಲಿನ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅವರ ಕಣ್ಣಿಗೆ ಖಾರದ ಪುಡಿ ಹಾಕಿದ್ದಾರೆ. ಈ ದಾಳಿಯಲ್ಲಿ ಐದಕ್ಕೂ ಹೆಚ್ಚು ಸೆಕ್ಯುರಿಟಿ ಗಾರ್ಡ್‍ಗಳಿಗೆ ಗಾಯಗಳಾಗಿವೆ.

    ಈ ದಾಳಿ ನಡೆದ ವೇಳೆ ಕೇವಲ 10 ಮಂದಿ ಸೆಕ್ಯುರಿಟಿ ಗಾರ್ಡ್‍ಗಳು ಕಾರ್ಯ ನಿರ್ವಹಿಸುತ್ತಿದ್ದರು. ಪರಾರಿಯಾಗಿರುವ ಕೈದಿಗಳ ಮಾಹಿತಿಯನ್ನು ಎಲ್ಲ ಪೊಲೀಸ್ ಠಾಣೆಗಳಿಗೂ ಕಳುಹಿಸಲಾಗಿದ್ದು, ಅವರನ್ನು ಹುಡುಕಲು ಪೊಲೀಸರು ಮುಂದಾಗಿದ್ದಾರೆ.

  • ಅರುಣಾಚಲ ಪ್ರದೇಶದಲ್ಲಿದೆ ಏಷ್ಯಾದ ಶ್ರೀಮಂತ ಹಳ್ಳಿ!

    ಅರುಣಾಚಲ ಪ್ರದೇಶದಲ್ಲಿದೆ ಏಷ್ಯಾದ ಶ್ರೀಮಂತ ಹಳ್ಳಿ!

    ಇಟಾನಗರ: ಕೇಂದ್ರ ರಕ್ಷಣಾ ಸಚಿವಾಲಯದಿಂದ ಅರುಣಾಚಲಪ್ರದೇಶದ ಹಳ್ಳಿಯ ಜನರಿಗೆ ಕೊಟ್ಯಾಧಿಪತಿಯಾಗುವ ಭಾಗ್ಯ ಬಂದಿದೆ. ಅರುಣಾಚಲಪ್ರದೇಶದ ಬೊಮ್ಜ ಎಂಬ ಹಳ್ಳಿಯು ಈಗ ಏಷ್ಯಾದ ಅತೀ ಶ್ರೀಮಂತ ಹಳ್ಳಿಯಾಗಿ ಹೊರ ಹೊಮ್ಮಿದೆ.

    ಕೇಂದ್ರದ ರಕ್ಷಣಾ ಸಚಿವಾಲಯವು ಬೊಮ್ಜ ಹಳ್ಳಿಯಲ್ಲಿ 200.056 ಎಕರೆ ಭೂ ಸ್ವಾಧೀನ ಮಾಡಿರುವ ಕಾರಣ ಪರಿಹಾರ ಧನವಾಗಿ 40,80,38,400 ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಹಳ್ಳಿಯ ಎಲ್ಲಾ ಕುಟುಂಬಗಳಿಗೆ ಪರಿಹಾರ ಹಣವನ್ನು ಕೊಡಲಾಗಿದ್ದು, ಒಂದು ಕುಟುಂಬಕ್ಕೆ 2.44 ಕೋಟಿ ರೂ. ಪರಿಹಾರ ಸಿಕ್ಕಿದರೆ ಮತ್ತೊಂದು ಕುಟುಂಬಕ್ಕೆ 6.73 ಕೋಟಿ ರೂ. ಸಿಕ್ಕಿದೆ.

    31 ಕುಟುಂಬಗಳಿರುವ ಹಳ್ಳಿಯಲ್ಲಿ, 29 ಕುಟುಂಬಗಳಿಗೆ ತಲಾ 1,09,03,813.37 ರೂ. ಗಳನ್ನು ಕೊಡಲಾಗಿದೆ. ಇದರಿಂದ ಬೊಮ್ಜ ಕೋಟ್ಯಾಧಿಪತಿಗಳ ಹಳ್ಳಿಯಾಗಿ ಬದಲಾಗಿದೆ. ತಾವಾಂಗ್ ಗ್ಯಾರಿಸನ್‍ನ ಪ್ರಮುಖ ಯೋಜನೆ ಘಟಕಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಭಾರತೀಯ ಸೇನೆಯು ಈ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ.

    ಈ ಹಣವನ್ನು ಸೋಮವಾರ ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪೆಮಾ ಖಾಂಡು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆಯು ಭೂಸ್ವಾಧೀನ ಪರಿಹಾರವನ್ನು ಮತ್ತಷ್ಟು ನೀಡಲಿದೆ ಎಂದು ಹೇಳಿದರು.

  • 88 ಹುಡುಗಿಯರಿಗೆ ಬಟ್ಟೆ ಬಿಚ್ಚುವಂತೆ ಶಿಕ್ಷೆ ನೀಡಿದ ಶಿಕ್ಷಕರು

    88 ಹುಡುಗಿಯರಿಗೆ ಬಟ್ಟೆ ಬಿಚ್ಚುವಂತೆ ಶಿಕ್ಷೆ ನೀಡಿದ ಶಿಕ್ಷಕರು

    ಇಟಾನಗರ್: ಅರುಣಾಚಲಪ್ರದೇಶದ ಬಾಲಕಿಯರ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರಿಗೆ ಬಟ್ಟೆ ಬಿಚ್ಚುವಂತೆ ಮೂವರು ಶಿಕ್ಷಕರು ಶಿಕ್ಷೆ ನೀಡಿರುವ ಬಗ್ಗೆ ವರದಿಯಾಗಿದೆ.

    ನವೆಂಬರ್ 23ರಂದು ಪಾಪುಮ್ ಪರೆ ಜಿಲ್ಲೆಯ ತಾನಿ ಹಪ್ಪಾದಲ್ಲಿರುವ ಕಸ್ತೂರಬಾ ಬಾಲಿಕಾ ವಿದ್ಯಾಲಯದಲ್ಲಿ 6 ಮತ್ತು 7ನೇ ತರಗತಿಯ ಸುಮಾರು 88 ವಿದ್ಯಾರ್ಥಿನಿಯರಿಗೆ ಈ ರೀತಿ ಅವಮಾನಕರವಾಗಿ ಶಿಕ್ಷೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮುಖ್ಯ ಶಿಕ್ಷಕರ ಬಗ್ಗೆ ಕೆಟ್ಟ ಶಬ್ದಗಳನ್ನ ಬರೆದಿದ್ದರಿಂದ ಈ ರೀತಿ ಶಿಕ್ಷಿಸಲಾಗಿದೆ.

    ನವೆಂಬರ್ 27ರಂದು ವಿದ್ಯಾರ್ಥಿನಿಯರು ಆಲ್ ಸಗಾಲೀ ಸ್ಟೂಡೆಂಟ್ಸ್ ಯೂನಿಯನ್(ಎಎಸ್‍ಎಸ್‍ಯು) ಮೊರೆ ಹೋಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

    ದೂರಿನ ಪ್ರಕಾರ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯೊಬ್ಬಳ ಬಗ್ಗೆ ಕೆಟ್ಟ ಶಬ್ದಗಳನ್ನ ಬರೆಯಲಾಗಿದ್ದ ಪೇಪರ್ ಸಿಕ್ಕ ನಂತರ ಇಬ್ಬರು ಸಹಾಯಕ ಶಿಕ್ಷಕರು ಹಾಗೂ ಒಬ್ಬರು ಜೂನಿಯರ್ ಶಿಕ್ಷಕರು 88 ವಿದ್ಯಾಥಿಗಳಿಗೆ ಇತರೆ ವಿದ್ಯಾರ್ಥಿನಿಯರ ಮುಂದೆ ಬಟ್ಟೆ ಬಿಚ್ಚುವಂತೆ ಶಿಕ್ಷಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಎಎಸ್‍ಎಸ್‍ಯು ಎಫ್‍ಐಆರ್ ದಾಖಲಿಸಿರುವುದನ್ನು ಪಾಪುಮ್ ಪರೇ ಪೊಲೀಸ್ ವರಿಷ್ಠಾಧಿಕಾರಿ ಟಮ್ಮಿ ಆಮೋ ಖಚಿತಪಡಿಸಿದ್ದಾರೆ. ಕೇಸ್ ದಾಖಲಿಸಿಕೊಳ್ಳುವುದಕ್ಕೂ ಮುನ್ನ ವಿದ್ಯಾರ್ಥಿನಿಯರು, ಅವರ ಪೋಷಕರು ಹಾಗೂ ಶಿಕ್ಷಕರನ್ನು ವಿಚಾರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

    ಅರುಣಾಚಲಪ್ರದೇಶ ಕಾಂಗ್ರೆಸ್ ಕಮಿಟಿ ಈ ಘಟನೆಯನ್ನು ಖಂಡಿಸಿದ್ದು, ಶಿಕ್ಷಕರ ಈ ರೀತಿಯ ಕೃತ್ಯದಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಮಕ್ಕಳ ಘನತೆಗೆ ಧಕ್ಕೆ ತರುವುದು ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧ ಎಂದು ಹೇಳಿಕೆಯಲ್ಲಿ ತಿಳಿಸಿದೆ.