Tag: ಅರುಂಧತಿ

  • ಹೆಸರಾಂತ ಯುವ ಸಂಗೀತ ಸಂಯೋಜಕ ಮನೋಜ್ ವಸಿಷ್ಠ ನಿಧನ

    ಹೆಸರಾಂತ ಯುವ ಸಂಗೀತ ಸಂಯೋಜಕ ಮನೋಜ್ ವಸಿಷ್ಠ ನಿಧನ

    ಸುಗಮ ಸಂಗೀತ (Music) ಮತ್ತು ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಯುವ ಗಾಯಕ, ಸಂಗೀತ ಸಂಯೋಜಕ ಮನೋಜ್ ವಸಿಷ್ಠ (Manoj Vasistha) ಅನಾರೋಗ್ಯದ ಕಾರಣದಿಂದಾಗಿ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಹಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗಿ ಇಂದು ಇಹಲೋಕ (Passed Away) ತ್ಯಜಿಸಿದ್ದಾರೆ.

    ಕನ್ನಡ ಕಿರುತೆರೆಯ ಬಹುತೇಕ ರಿಯಾಲಿಟಿ ಶೋಗಳಲ್ಲಿ ಮನೋಜ್ ಮೆಂಟರ್ ಆಗಿ ಕೆಲಸ ಮಾಡಿದ್ದಾರೆ. ಅದರಲ್ಲೂ ಪ್ರವೀಣ್ ಡಿ ರಾವ್ ಅವರ ಅನೇಕ ಧಾರಾವಾಹಿ ಶೀರ್ಷಿಕೆಗಳಿಗೆ ಮನೋಜ್ ವಸಿಷ್ಠ ಕೆಲಸ ಮಾಡಿದ್ದಾರೆ. ಪತ್ನಿ ಅರುಂಧತಿ (Arundhati) ಕೂಡ ಗಾಯಕಿ. ಕನ್ನಡ ಕೋಗಿಲೆ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಅರುಂಧತಿ ಮತ್ತು ಮನೋಜ್ ಒಟ್ಟಿಗೆ  ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದಾರೆ.

     

    ರಿಯಾಲಿಟಿ ಶೋಗಳು ಮಾತ್ರವಲ್ಲ, ಸಾಕಷ್ಟು ಸಂಗೀತ ಕಾರ್ಯಕ್ರಮಗಳನ್ನೂ ಈ ಜೋಡಿ ನೀಡಿದೆ. ಅಗಲಿದ ಮನೋಜ್ ಅವರಿಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಶೃದ್ಧಾಂಜಲಿ ಸಲ್ಲಿಸಿದ್ದಾರೆ. ಮಧ್ಯಾಹ್ನದ ನಂತರ ಮನೋಜ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಜಯನಗರ ಹೌಸಿಂಗ್ ಸೊಸೈಟಿ ಬಳಿಯ ಬೇ ಅಪಾರ್ಟ್ಮೆಂಟ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅರುಂಧತಿ ಸಿನಿಮಾ ನೋಡಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆ

    ಅರುಂಧತಿ ಸಿನಿಮಾ ನೋಡಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆ

    ತುಮಕೂರು: ಅರುಂಧತಿ ಸಿನಿಮಾ ನೋಡಿ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧುಗಿರಿ ತಾಲ್ಲೂಕಿನ ಕೊಂಡವಾಡಿ ಗ್ರಾಮದ ರಸ್ತೆ ಬದಿಯಲ್ಲಿ ನಡೆದಿದೆ.

    ಮೃತ ಯುವಕನನ್ನು ರೇಣುಕಾ ಪ್ರಸಾದ್ (22) ಎಂದು ಗುರುತಿಸಲಾಗಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ನೋವು ತಾಳಲಾರದೇ ರಸ್ತೆಯಲ್ಲಿ ಕಿರುಚಾಡುತ್ತಾ, ಒದ್ದಾಡುತ್ತಿದ್ದ ಯುವಕನನ್ನು ಸ್ಥಳೀಯರು ರಕ್ಷಿಸಿ ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.  ಇದನ್ನೂ ಓದಿ: ದೇವನಹಳ್ಳಿಯಲ್ಲಿ ಒಂಟಿ ಮಹಿಳೆ ಕೊಲೆ – ಕತ್ತು ಕೊಯ್ದು ನಗದು ದೋಚಿದ್ದ ಕೆಲಸಗಾರನ ಬಂಧನ

    ಇತ್ತೀಚೆಗೆ ಸಿನಿಮಾಗಳಿಗೆ ಅಡಿಕ್ಟ್ ಆಗಿದ್ದ ರೇಣುಕಾ ಪ್ರಸಾದ್, ಅರುಂಧತಿ ಸಿನಿಮಾ ನಾಯಕಿಯಂತೆ ದುಷ್ಟ ಸಂಸಾರಕ್ಕಾಗಿ ಪುನರ್ಜನ್ಮ ತಾಳಲು ಬೆಂಕಿ ಹಚ್ಚಿಕೊಂಡು ಮುಕ್ತಿ ಕೊಡಿ, ಮುಕ್ತಿ ಕೊಡಿ ಎನ್ನುತ್ತಿದ್ದ. ಈ ವಿಚಾರದ ಬಗ್ಗೆ ಹೆಚ್ಚು ಚಿಂತಿಸಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಆತನ ಪರಿಚಯಸ್ಥರು ಶಂಕಿಸಿದ್ದಾರೆ. ಇದನ್ನೂ ಓದಿ: ಮಧ್ಯರಾತ್ರಿ, ಮದ್ಯ ಸೇವಿಸಿದ ಅಮಲಿನಲ್ಲಿ ಕಾಂಗ್ರೆಸ್ ಐಟಿ ಸೆಲ್ ಟ್ವೀಟ್ ಮಾಡಿದೆ: ರೇಣುಕಾಚಾರ್ಯ

    Live Tv
    [brid partner=56869869 player=32851 video=960834 autoplay=true]

  • ಯಾವುದೇ ನಟಿಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಪಾತ್ರ ಜೇಜಮ್ಮ : ಅನುಷ್ಕಾ ಶೆಟ್ಟಿ

    ಯಾವುದೇ ನಟಿಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಪಾತ್ರ ಜೇಜಮ್ಮ : ಅನುಷ್ಕಾ ಶೆಟ್ಟಿ

    ಹೈದರಾಬಾದ್: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಅಭಿನಯದ ಬ್ಲಾಕ್ ಬಾಸ್ಟರ್ ಹಿಟ್ ಅರುಂಧತಿ ಸಿನಿಮಾ ರಿಲೀಸ್ ಆಗಿ ಜನವರಿ ೧೬ಕ್ಕೆ 13 ವರ್ಷ ಕಳೆದಿದ್ದು, ಈ ಚಿತ್ರದ ಪೋಸ್ಟ್‌ವೊಂದನ್ನು ಅನುಷ್ಕಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

    ಅನುಷ್ಕಾ ಶೆಟ್ಟಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅರುಂಧತಿ ಸಿನಿಮಾದ ಫೋಟೋವೊಂದನ್ನು ಹಂಚಿಕೊಂಡಿದ್ದು, ಫೋಟೋದಲ್ಲಿ ಅನುಷ್ಕಾ ಕತ್ತಿ ಹಿಡಿದು ಖಡಕ್ ಲುಕ್ ನೀಡಿರುವುದನ್ನು ಕಾಣಬಹುದಾಗಿದೆ. ಈ ಫೋಟೋ ಜೊತೆಗೆ ಅರುಧಂತಿ ಸಿನಿಮಾ ಬಿಡುಗಡೆಗೊಂಡು 13 ವರ್ಷ ಕಳೆದಿದೆ. ಜೇಜಮ್ಮ – ಯಾವುದೇ ನಟಿಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಪಾತ್ರ ಇದಾಗಿದ್ದು, ನಾನು ಬಹಳ ಪುಣ್ಯಮಾಡಿದ್ದೇನೆ. ಈ ಸಿನಿಮಾ ನೀಡಿದ್ದಕ್ಕಾಗಿ ಕೋಡಿ ರಾಮಕೃಷ್ಣ, ಶ್ಯಾಮ್ ಪ್ರಸಾದ್ ರೆಡ್ಡಿ ಗುರು ಅವರಿಗೆ ಮತ್ತು ಇಡೀ ಚಿತ್ರತಂಡಕ್ಕೆ ಧನ್ಯವಾದಗಳು. ಅದರಲ್ಲಿಯೂ ಅಭಿನಮಾನಿಗಳು ನೀಡಿದ ಬೆಂಬಲ ಹಾಗೂ ಪ್ರೀತಿಗೆ ಬಹಳ ಧನ್ಯವಾದಗಳು. ಜೊತೆಗೆ ಇದು ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಸಿನಿಮಾ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: Happy Birthday To My Love – ಬಾಲಿವುಡ್ ನಟನಿಗೆ ಸುದೀಪ್ ಪುತ್ರಿ ವಿಶ್

    2009ರಲ್ಲಿ ಹಾರರ್, ಥ್ರಿಲ್ಲರ್ ಸಿನಿಮಾ ಅರುಂಧತಿ ಟಾಲಿವುಡ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಈ ಸಿನಿಮಾಕ್ಕೆ ನಿರ್ದೇಶಕ ಕೋಡಿ ರಾಮಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದರು ಮತ್ತು ಶ್ಯಾಮ್ ಪ್ರಸಾದ್ ರೆಡ್ಡಿ ಅವರ ಬ್ಯಾನರ್ ಅಡಿ ಚಿತ್ರ ಸೊಗಸಾಗಿ ಮೂಡಿಬಂದಿತ್ತು. ಸೋನು ಸೂದ್, ದೀಪಕ್, ಸಯಾಜಿ ಶಿಂಧೆ, ಮನೋರಮಾ ಮತ್ತು ಕೈಕಲಾ ಸತ್ಯನಾರಾಯಣ ಸೇರಿದಂತೆ ಹಲವಾರು ಕಲಾವಿದರೂ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾಕ್ಕೆ ಕೋಟಿ ಹಿನ್ನೆಲೆ ಸಂಗೀತ ಸಂಯೋಜಿಸಿದ್ದು, ಕೆ.ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣವಿತ್ತು. ಇದನ್ನೂ ಓದಿ: ಪಂಡಿತ್ ಬಿರ್ಜೂ ಮಹಾರಾಜ್ ನನ್ನ ಗುರುಗಳು ಮಾತ್ರವಲ್ಲ, ಸ್ನೇಹಿತರು ಹೌದು: ಮಾಧುರಿ ದೀಕ್ಷಿತ್

    ಅನುಷ್ಕಾ ಶೆಟ್ಟಿ ಅದ್ಭುತವಾಗಿ ಅಭಿನಯಿಸಿರುವ ಅರುಂಧತಿ ಸಿನಿಮಾಕ್ಕೆ ಎರಡು ಫಿಲ್ಮ್‍ಫೇರ್ ಪ್ರಶಸ್ತಿಗಳು ಲಭಿಸಿದ್ದು, ಎಲ್ಲೆಡೆ ಪ್ರಶಂಸೆ ಗಿಟ್ಟಿಸಿಕೊಂಡಿತ್ತು. 2014ರಲ್ಲಿ ಅರುಂಧತಿ ಚಿತ್ರವನ್ನು ಬಂಗಾಳಿ ಭಾಷೆಯಲ್ಲಿ ರೀಮೇಕ್ ಸಹ ಮಾಡಲಾಗಿತ್ತು.