Tag: ಅರಿಶಿನ

  • ದೇವರನ್ನು ಮೆಚ್ಚಿಸಲು ಮಗಳಿಗೆ ಅರಿಶಿಣ- ಕುಂಕುಮ ತಿನ್ನಿಸಿದ ತಂದೆ

    ದೇವರನ್ನು ಮೆಚ್ಚಿಸಲು ಮಗಳಿಗೆ ಅರಿಶಿಣ- ಕುಂಕುಮ ತಿನ್ನಿಸಿದ ತಂದೆ

    ಅಮರಾವತಿ: ದೇವರನ್ನು ಮೆಚ್ಚಿಸಲು ತಂದೆಯೊಬ್ಬ ತನ್ನ ನಾಲ್ಕು ವರ್ಷದ ಮಗಳಿಗೆ ಕುಂಕುಮ ಹಾಗೂ ಅರಿಶಿಣವನ್ನು ತಿನ್ನಿಸಲು ಯತ್ನಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಆಂಧ್ರಪ್ರದೇಶದ ಆತ್ಮಕೂರು ಪುರಸಭಾ ವ್ಯಾಪ್ತಿಯ ಪೆರಾರೆಡ್ಡಿಪಲ್ಲಿ ಗ್ರಾಮದಲ್ಲಿ ಮೌಢ್ಯ ಆಚರಿಸಲಾಗಿದೆ. ಕಂಡ್ರಾ ವೇಣುಗೋಪಾಲ್ ಬಂಧಿತ ಆರೋಪಿ. ವೇಣುಗೋಪಾಲ್ ದೇವರನ್ನು ಮೆಚ್ಚಿಸಲು ಕುಂಕುಮ ಹಾಗೂ ಅರಿಶಿಣವನ್ನು ತೆಗೆದುಕೊಂಡು ಮನೆಯ ತುಂಬೆಲ್ಲಾ ಹಾಕಿದ್ದಾನೆ. ನಂತರ ಅಲ್ಲಿಯೇ ಇದ್ದ ತನ್ನ ನಾಲ್ಕು ವರ್ಷದ ಮಗಳಿಗೆ ಕುಂಕುಮಾ ಹಾಗೂ ಅರಿಶಿಣವನ್ನು ತಿನ್ನಲು ಹೇಳಿದ್ದಾನೆ. ಅವಳು ನಿರಾಕರಿಸಿದಾಗ ಬಲವಂತವಾಗಿ ಅರಿಶಿಣ ಹಾಗೂ ಕುಂಕುಮವನ್ನು ಅವಳ ಬಾಯಿಗೆ ಹಾಕಿದ್ದಾನೆ. ಇದರಿಂದಾಗಿ ಆಕೆ ಕಿರುಚುತ್ತಾ ಅಲ್ಲೇ ಕುಸಿದು ಬಿದ್ದಿದ್ದಾಳೆ.

    ಇದನ್ನು ಕೇಳಿದ ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸಿ, ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ವೇಣುಗೋಪಾಲ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪ್ರವಾದಿ ಕುರಿತ ಬಿಜೆಪಿ ನಾಯಕರ ಹೇಳಿಕೆ ಖಂಡಿಸಿದ ಅಮೆರಿಕ

    ಘಟನೆ ಸಂಬಂಧ ಕಳೆದ ಮೂರು ದಿನಗಳಿಂದ ವೇಣುಗೋಪಾಲ್ ತಮ್ಮ ನಿವಾಸದಲ್ಲಿ ವಿಚಿತ್ರ ಆಚರಣೆಗಳಲ್ಲಿ ತೊಡಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಆತ್ಮಕೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಎಸಿಬಿ ಶಾಕ್- ಬೆಂಗಳೂರು ಸೇರಿ 21 ಕಡೆ ದಾಳಿ

    Live Tv

  • ಮಗ ಬದುಕಿದ್ದಾನೆಂದು ರಾತ್ರಿಯಿಡಿ ಶವದ ಜೊತೆ ಕಾಲ ಕಳೆದ ತಾಯಿ

    ಮಗ ಬದುಕಿದ್ದಾನೆಂದು ರಾತ್ರಿಯಿಡಿ ಶವದ ಜೊತೆ ಕಾಲ ಕಳೆದ ತಾಯಿ

    ಮುಂಬೈ: 70 ವರ್ಷದ ಮಹಿಳೆಯೊಬ್ಬಳು ಬಾತ್ ರೂಮಿನಲ್ಲಿ ಬಿದ್ದಿದ್ದ ತನ್ನ ಮಗ ಬದುಕಿದ್ದಾನೆ ಎಂದು ಭಾವಿಸಿ ಇಡೀ ರಾತ್ರಿ ಶವದ ಜೊತೆ ಕಾಲ ಕಳೆದಿದ್ದಾಳೆ.

    ಮೃತಪಟ್ಟ 42 ವರ್ಷದ ವ್ಯಕ್ತಿ ಮೇಘಾಲಯದ ಮೂಲದವನಾಗಿದ್ದು, ಕುಡಿತ ಮತ್ತಿನಲ್ಲಿ ಕಲಿನಾ ಪ್ರದೇಶದಲ್ಲಿರುವ ಮನೆಯ ಬಾತ್ ರೂಮ್‍ನಲ್ಲಿ ಸೋಮವಾರ ಬಿದ್ದಿದ್ದಾನೆ. ಬಳಿಕ ಮಗ ಕೆಳಗೆ ಬಿದ್ದು ಒದ್ದಾಡುತ್ತಿರುವುದನ್ನು ಕಂಡ ಆತನ ತಾಯಿ ಎಳೆದುಕೊಂಡು ಹೋಗಿ ಬೆಡ್ ಮೇಲೆ ಮಲಗಿಸಿ, ಗಾಯಗೊಂಡಿದ್ದ ಆತನಿಗೆ ಅರಿಶಿನದ ಪುಡಿ ಹಚ್ಚಿದ್ದಾಳೆ.

    ಮಾರನೇ ದಿನ ಮುಂಜಾನೆ ಮಗ ಎಚ್ಚರಗೊಳ್ಳದಿರುವುದನ್ನು ಕಂಡು ಗಾಬರಿಯಿಂದ ಮಹಿಳೆ ತನ್ನ ಸಂಬಂಧಿಕರಿಗೆ ತಿಳಿಸಿದ್ದಾಳೆ. ವಿಷಯ ತಿಳಿದ ಸಂಬಂದಿಕರು ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ವ್ಯಕ್ತಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

    ತನಿಖೆ ವೇಳೆ ಮೃತವ್ಯಕ್ತಿ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದು, ಆತನ ಕುಟುಂಬವು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದ ವಿಚಾರ ತಿಳಿದು ಬಂದಿದೆ. ಸದ್ಯ ಪ್ರಾಥಮಿಕ ಮಾಹಿತಿಯ ಪ್ರಕಾರ, ವ್ಯಕ್ತಿ ಸಾವು ಆಕಸ್ಮಿಕ ಸಾವು ಎಂಬ ಕಾರಣದಡಿ ಪ್ರಕರಣ ದಾಖಲಿಸಿಕೊಂಡಿದ್ದು, ಈ ವಿಚಾರವಾಗಿ ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ವಕೋಲಾ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ಅವಿನಾಶ್ ಧರ್ಮಧಿಕಾರಿ ತಿಳಿಸಿದ್ದಾರೆ.

  • ಸೌಂದರ್ಯಕ್ಕಾಗಿ ಮಾತ್ರವಲ್ಲ ಆರೋಗ್ಯವರ್ಧನೆಗಾಗಿ ಅರಿಶಿನ ಉಪಯುಕ್ತ

    ಸೌಂದರ್ಯಕ್ಕಾಗಿ ಮಾತ್ರವಲ್ಲ ಆರೋಗ್ಯವರ್ಧನೆಗಾಗಿ ಅರಿಶಿನ ಉಪಯುಕ್ತ

    ಇಂದಿನ ಫ್ಯಾಷನ್ ಯುಗದಲ್ಲಿ ಮಹಿಳೆಯರು ಹೆಚ್ಚಾಗಿ ಸೌಂದರ್ಯದ ಕಾಳಜಿಗಾಗಿ ತಲೆಕೆಡಿಸಿಕೊಳ್ಳುತ್ತಾರೆ. ಇಂದು ತರಾವರಿ ಸೌಂದರ್ಯ ವರ್ಧಕಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರೂ ಅವುಗಳು ನೈಸರ್ಗಿಕ ಸೌಂದರ್ಯವರ್ಧಕದ ರಾಣಿಯೆಂದೇ ಕರೆಯುವ ‘ಅರಿಶಿನ’ದ ಜೊತೆ ಸ್ಪರ್ಧಿಸಲು ಸಾಧ್ಯವಾಗಿಲ್ಲ. ಚಲನಚಿತ್ರ ನಟಿಯರೂ ಸೇರಿದಂತೆ ಫ್ಯಾಷನ್ ಪ್ರಿಯ ಮಹಿಳೆಯರು ತಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ಮತ್ತು ದೈಹಿಕ ಅರೋಗ್ಯವನ್ನು ಹೆಚ್ಚಿಸಿಕೊಳ್ಳಲು ಅರಿಶಿನ ಉತ್ಪನ್ನವನ್ನು ಬಳಕೆ ಮಾಡುತ್ತಾರೆ.

    ಅರಿಶಿನ ಕೇವಲ ತ್ವಚೆಯನ್ನು ಪೋಷಿಸುವುದಲ್ಲದೇ ಕಣ್ಣುಗಳ ಆರೋಗ್ಯದಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ. ಕಣ್ಣಿನಲ್ಲಿ ಧೂಳು ಸೇರಿಕೊಂಡು ಕಣ್ಣು ಉರಿ ಮತ್ತು ಕಣ್ಣು ಕೆಂಪಗಾಗಿದ್ದರೆ, ಒಂದು ಲೋಟ ನೀರಿಗೆ ಚಿಟಿಕೆ ಅರಿಶಿನ ಬೆರೆಸಿ 10 ನಿಮಿಷ ಪಕ್ಕಕ್ಕಿಡಿ. ಅರಿಶಿನ ಲೋಟದ ತಳಭಾಗದಲ್ಲಿ ಉಳಿದುಕೊಂಡು ನೀರು ತಿಳಿಯಾಗುತ್ತದೆ. ಈ ತಿಳಿನೀರನ್ನು ಕಣ್ಣಿಗೆ 2 ಹನಿ ಹಾಕುವುದರಿಂದ ಅಥವಾ ಈ ನೀರಿನಿಂದ ಕಣ್ಣುಗಳನ್ನೂ ತೊಳೆದುಕೊಳ್ಳುವುದರಿಂದ ಕಣ್ಣು ಉರಿ ಮತ್ತು ಕೆಂಪಗಾಗುವುದು ಕಡಿಮೆಯಾಗುತ್ತದೆ.

    ಅರಿಶಿನದಲ್ಲಿರುವ ಆರೋಗ್ಯವರ್ಧಕ ಅಂಶಗಳೇನು?
    1. ಅರಿಶಿನವು ಉರಿಯೂತ ಮತ್ತು ಬ್ಯಾಕ್ಟೀರಿಯಾ ನಿರೋಧಕ ಲಕ್ಷಣವನ್ನು ಹೊಂದಿದೆ.
    2. ಅರಿಶಿನವು ಆಂಟಿಸೆಪ್ಟಿಕ್ ಆಗಿರುವುದರಿಂದ ಗಾಯಗಳನ್ನು ಅತೀ ಬೇಗ ವಾಸಿಮಾಡುತ್ತದೆ.
    3. ಅರಶಿನ ಎಲ್ಲಾ ಕಾಲದಲ್ಲಿಯೂ ಎಲ್ಲಾ ತರಹದ ಚರ್ಮಕ್ಕೂ ಹೊಂದಿಕೆಯಾಗಿ ತ್ವಚೆಯನ್ನು ರಕ್ಷಿಸುವ ಅಂಶವನ್ನು ಹೊಂದಿದೆ.
    4. ಮುಖದಲ್ಲಿನ ಮೊಡವೆ ಮತ್ತು ಇತರೆ ಚರ್ಮ ಸಮಸ್ಯೆಗಳಿಗೂ ರಾಮಬಾಣ.


    5. ಮಹಿಳೆಯರಿಗೆ ಫೇಸ್‍ಪ್ಯಾಕ್ ಮತ್ತು ಬಾಡಿ ಸ್ಕ್ರಬರ್ ಗಳಲ್ಲಿ ಮುಖ್ಯ ಪದಾರ್ಥವಾಗಿದೆ.
    6. ಅರಿಶಿನದೊಂದಿಗೆ ಹಾಲಿನ ಕೆನೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಗುಳ್ಳೆ ನಿವಾರಣೆಯಾಗಿ ಮುಖಕ್ಕೆ ಹೊಳಪು ತಂದುಕೊಂಡುತ್ತದೆ.
    7. ಹಾಲಿನೊಂದಿಗೆ ಅರಿಶಿನ ಪುಡಿ ಬೆರೆಸಿ ಕುಡಿಯುವುದರಿಂದ ಕೆಮ್ಮು, ಕಫ ನಿವಾರಣೆಯಾಗುತ್ತದೆ.
    8. ಅರಿಶಿನ ಪುಡಿಯೊಂದಿಗೆ, ಬೇವಿನ ಎಲೆಯನ್ನು ಅರೆದು ಚರ್ಮಕ್ಕೆ ಹಚ್ಚುವುದರಿಂದ ಫಂಗಸ್ ಸೊಂಕು ನಿವಾರಣೆಯಾಗುತ್ತದೆ.
    9. ಅರಿಶಿನ ಪುಡಿ ಹಾಗೂ ನೆಲ್ಲಿ ಕಾಯಿ ಪುಡಿಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸುವುದರಿಂದ ಮಧುಮೇಹ ಹತೋಟಿಗೆ ಬರುತ್ತದೆ.
    10. ಅರಿಶಿನ ಕಷಾಯವನ್ನು ಗಾಯಗಳನ್ನು ತೊಳೆಯಲು, ಬಿದ್ದಗಾಯದ ರಕ್ತ ತಡೆಗಟ್ಟಲು ಬಳಸಬಹುದು.
    11. ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ಅರಿಶಿನ ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಕಿಬ್ಬೊಟ್ಟೆ ನೋವನ್ನು ಶಮನಗೊಳಿಸುತ್ತದೆ.

    ಹೀಗೆ ಹಲವಾರು ವೈದ್ಯಕೀಯ ಗುಣಗಳನ್ನು ಒಳಗೊಂಡಿರುವ ಅರಿಶಿನ ದಿನನಿತ್ಯ ಬಳಕೆಯ ಪ್ರಮುಖ ಪದಾರ್ಥ. ದೇವರ ಪೂಜೆಯಿಂದ ಹಿಡಿದು ಶುಭ ಕಾರ್ಯಗಳು, ಅಡುಗೆ ಮತ್ತು ಸೌಂದರ್ಯದವರೆಗೂ ಅರಿಶಿನ ಬಳಕೆ ಮಾಡದೇ ಇರುವವರೂ ಯಾರು ಇಲ್ಲ. ಬಹಳ ಹಿಂದಿನ ಕಾಲದಿಂದಲೂ ಅರಿಶಿನಕ್ಕೆ ಪ್ರಾಮುಖ್ಯತೆ ಹೆಚ್ಚಿದ್ದು, ‘ಆರೋಗ್ಯಕ್ಕೆ ಅರಿಶಿನ ಮದ್ದು’ ಎಂಬ ಶಿಫಾರಸ್ಸುಗಳು ಇಂದಿನ ಕಾಲದವರೆಗೂ ಉಪಯೋಗದಲ್ಲಿದೆ. ಎಲ್ಲಾದರೂ ಬಿದ್ದು ಗಾಯ ಮಾಡಿಕೊಂಡು ಬಂದ ಮಗುವಿಗೆ ಅಮ್ಮ ಮೊದಲು ಅರಿಶಿನ ಹಚ್ಚು ಎನ್ನುತ್ತಾಳೆ. ಅಂತಹ ಪುಟ್ಟ ಗಾಯಗಳಿಂದ ದೊಡ್ಡ ಕ್ಯಾನ್ಸರ್ ಕಾಯಿಲೆಗಳನ್ನು ನಿವಾರಿಸುವಲ್ಲಿ ಅರಿಶಿನ ಪರಿಣಾಮಕಾರಿ ಮದ್ದು. ದಿನನಿತ್ಯದ ಆಹಾರದಲ್ಲಿಯೂ ಅರಿಶಿನ ಬಳಸುತ್ತಾ ಬಂದರೆ ನಮ್ಮ ಜ್ಞಾಪಕ ಶಕ್ತಿಕೂಡ ಹೆಚ್ಚಾಗುತ್ತದೆ.

    ಆಯುರ್ವೇದದಲ್ಲಿ ಅರಿಶಿನವು ರಕ್ತ ಶುದ್ಧೀಕರಣದಲ್ಲಿ ಮುಖ್ಯವಾದುದು ಎಂದು ಹೇಳಲಾಗುತ್ತದೆ. ಅರಿಶಿನ ಬಳಕೆಯು ರಕ್ತವನ್ನು ಶುದ್ಧೀಕರಿಸುತ್ತದೆ. ಇದನ್ನು ತಿನ್ನುವ ಮೂಲಕ, ರಕ್ತದಲ್ಲಿ ಕಂಡುಬರುವ ವಿಷಕಾರಿ ವಸ್ತುಗಳು ಹೊರಬರುತ್ತವೆ ಮತ್ತು ರಕ್ತ ಪರಿಚಲನೆ ಸುಗಮವಾಗುತ್ತದೆ. ಹೃದಯದಲ್ಲಿ ರಕ್ತದ ಹರಿವು ಹೆಚ್ಚಾಗುವುದರಿಂದ ವ್ಯಕ್ತಿಗೆ ಹೃದಯದ ತೊಂದರೆಗಳು ಕಂಡು ಬರುವುದಿಲ್ಲ.