Tag: ಅರಿಶಿಣ

  • ಆಯುಧಪೂಜೆ ವೇಳೆ ರಾಸಾಯನಿಕಯುಕ್ತ ಅರಿಶಿಣ, ಕುಂಕುಮ ಬಳಸ್ಬೇಡಿ- ರಾಜಕೀಯ ಸ್ವರೂಪ ಪಡೆದ ಆದೇಶ

    ಆಯುಧಪೂಜೆ ವೇಳೆ ರಾಸಾಯನಿಕಯುಕ್ತ ಅರಿಶಿಣ, ಕುಂಕುಮ ಬಳಸ್ಬೇಡಿ- ರಾಜಕೀಯ ಸ್ವರೂಪ ಪಡೆದ ಆದೇಶ

    ಬೆಂಗಳೂರು: ವಿಧಾನಸೌಧ (Vidhanasoudha), ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಆಯುಧಪೂಜೆ (Ayudha Pooja) ವೇಳೆ ರಾಸಾಯನಿಕಯುಕ್ತ ಅರಿಶಿಣ, ಕುಂಕುಮ ಬಳಸದಂತೆ ಹೊರಡಿಸಿದ ಆದೇಶ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

    ವಿಪಕ್ಷಗಳು ಇಂದು ಕೂಡ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಈ ಸರ್ಕಾರದಿಂದ ನಾಡಿಗೆ ಯಾವುದೇ ಒಳಿತು ಸಾಧ್ಯವಿಲ್ಲ ಎಂಬುದು ಇವರ ನಿರ್ಧಾರಗಳು ಸಾಬೀತು ಮಾಡ್ತಿವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ. ಹಿಂದೂಗಳ ಹಬ್ಬಗಳಿಗೆ ಕಂಡೀಷನ್ ಹಾಕೋ ಈ ಸರ್ಕಾರವನ್ನು ನಾವೇಕೆ ಬೀಳಿಸಬಾರದು ಎಂದು ಮಾಜಿ ಮಂತ್ರಿ ಈಶ್ವರಪ್ಪ (KS Eshwarappa) ಪ್ರಶ್ನಿಸಿದ್ದಾರೆ.

    ಇದು ತುಷ್ಟೀಕರಣದ ಒಂದು ಭಾಗ ಎಂದು ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakai) ಕಿಡಿಕಾರಿದ್ದಾರೆ. ವಿಪಕ್ಷಗಳ ಈ ರಾಜಕೀಯಕ್ಕೆ ಸಿಎಂ ತಿರುಗೇಟು ನೀಡಿದ್ದಾರೆ. ಆಯುಧಪೂಜೆ ವೇಳೆ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿ ರಾಸಾಯನಿಕಯುಕ್ತ ಅರಿಶಿನ,ಕುಂಕುಮ ಬಳಸಬಾರದು ಎಂಬ ಆದೇಶ ಇದೇ ಮೊದಲಲ್ಲ.. ಪಾರಂಪರಿಕಾ ಕಟ್ಟಡಗಳು ಹಾಳಾಗಬಾರದು ಎಂಬ ಉದ್ದೇಶದಿಂದ ಹಿಂದಿನ ಸರ್ಕಾರಗಳು ಪಾಲಿಸಿಕೊಂಡ ಸಂಪ್ರದಾಯವನ್ನೇ ನಾವು ಪಾಲಿಸ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಡಿ. 4ರಿಂದ 15ರ ವರೆಗೆ ಚಳಿಗಾಲದ ಅಧಿವೇಶನ

    ಅಲ್ಲದೇ 2021 ಮತ್ತು 2022ರಲ್ಲಿ ಬೊಮ್ಮಾಯಿ (Basavaraj Bommai) ಸರ್ಕಾರ ಹೊರಡಿಸಿದ್ದ ಆದೇಶ ಪ್ರತಿಗಳನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡು ವಿಪಕ್ಷಗಳಿಗೆ ಟಕ್ಕರ್ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಖಕ್ಕೆ ಅರಿಶಿಣ ಸ್ಕ್ರಬ್ ಮಾಡಿದರೆ ಆಗುವ ಉಪಯೋಗ

    ಮುಖಕ್ಕೆ ಅರಿಶಿಣ ಸ್ಕ್ರಬ್ ಮಾಡಿದರೆ ಆಗುವ ಉಪಯೋಗ

    ಮುಖಕ್ಕೆ ಅರಿಶಿಣದ ಸ್ಕ್ರಬ್ ಮಾಡಿಕೊಳ್ಳುವುದರಿಂದ ನಿಮ್ಮನ್ನು ಸುಂದರವಾಗಿ ಕಾಣಿಸಲು ಸಹಾಯ ಮಾಡುತ್ತದೆ. ಅರಿಶಿಣದಲ್ಲಿ ಆಂಟಿಕ್ಸೆಸಿಂಡಸ್, ಆಂಟಿ ಮೈಕ್ರೊಬಿಬಲ್ ಹಾಗೂ ಆಂಟಿ ಇಂಫ್ಲೆಮೆಂಟರಿ ಅಂಶವಿರುತ್ತದೆ. ಇದು ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

    ಅರಿಶಿಣ ಉಪಯೋಗಿಸುವುದರಿಂದ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುವುದಲ್ಲದೇ ಇನ್‍ಫೆಕ್ಷನ್ ಆಗುವುದರಿಂದ ತಡೆಯುತ್ತದೆ. ಅರಿಶಿಣದ ಫೇಸ್ ಸ್ಕ್ರಬ್ ಬಳಸುವುದರಿಂದ ತ್ವಚೆಯ ಕೊಳೆಯನ್ನು ಹೋಗಲಾಡಿಸುತ್ತದೆ.

    ಸ್ಕ್ರಬ್ ತಯಾರಿಸಲು ಏನೇನ್ ಬೇಕು?
    * ಅರಿಶಿಣ
    * ಜೇನು
    * ಸಕ್ಕರೆ

    ಸ್ಕ್ರಬ್ ತಯಾರಿಸುವುದು ಹೇಗೆ:
    ಒಂದು ಕಪ್‍ನಲ್ಲಿ 2 ದೊಡ್ಡ ಚಮಚದಲ್ಲಿ ಅರಿಶಿಣಕ್ಕೆ 2 ದೊಡ್ಡ ಚಮಚ ಜೇನು ಹಾಕಿ ದಪ್ಪವಾಗಿ ಪೇಸ್ಟ್ ತಯಾರಿಸಬೇಕು. ಪೇಸ್ಟ್ ತಯಾರಿಸಿದ ನಂತರ 1 ದೊಡ್ಡ ಚಮಚದಲ್ಲಿ ಸಕ್ಕರೆ ಹಾಕಿ ಮಿಕ್ಸ್ ಮಾಡಬೇಕು. ನಿಮ್ಮ ಸ್ಕಿನ್ ಡ್ರೈ ಆಗಿದ್ದಲ್ಲಿ ಜೇನು ಸ್ವಲ್ಪ ಜಾಸ್ತಿ ಹಾಕಿ.

    ಉಪಯೋಗಿಸುವುದು ಹೇಗೆ?
    ಮುಖಕ್ಕೆ ಸ್ಕ್ರಬ್ ಹಾಕುವ ಮೊದಲು ನಿಮ್ಮ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಅರಿಶಿಣದ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಾಗೂ ಕುತ್ತಿಗೆಗೆ ಹಾಕಿಕೊಳ್ಳಿ. ಸ್ಕ್ರಬ್ ಮುಖಕ್ಕೆ ಹಾಕಿದ ನಂತರ 2-3 ನಿಮಿಷದವರೆಗೂ ಅದನ್ನು ಉಜ್ಜಿ. ಸ್ವಲ್ಪ ಸಮಯದ ನಂತರ ನೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿ ಅರಿಶಿಣದ ಸ್ಕ್ರಬ್ ಉಪಯೋಗಿಸುವುದರಿಂದ ನಿಮ್ಮ ತ್ವಚೆಯ ವ್ಯತ್ಯಾಸ ನಿಮಗೆ ಗೊತ್ತಾಗುತ್ತದೆ.

    ಗಮನಿಸಿ: ಸ್ಕ್ರಬ್ ತಯಾರಿಸಲು ಮನೆಯಲ್ಲಿಯೇ ಅರಿಶಿಣದ ಪೌಡರ್ ಮಾಡಿದರೆ ಒಳ್ಳೆಯದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv