Tag: ಅರಿವು ಕಾರ್ಯಕ್ರಮ

  • ವಿಶ್ವ ಡ್ರಗ್ಸ್ ನಿಷೇಧ ದಿನ- ಶಾಲಾ ಕಾಲೇಜುಗಳಲ್ಲಿ ಪೊಲೀಸರಿಂದ ಜಾಗೃತಿ ಕಾರ್ಯಕ್ರಮ

    ವಿಶ್ವ ಡ್ರಗ್ಸ್ ನಿಷೇಧ ದಿನ- ಶಾಲಾ ಕಾಲೇಜುಗಳಲ್ಲಿ ಪೊಲೀಸರಿಂದ ಜಾಗೃತಿ ಕಾರ್ಯಕ್ರಮ

    ಬೆಂಗಳೂರು: ವಿಶ್ವ ಡ್ರಗ್ಸ್ ನಿಷೇಧ ದಿನದ (World Drug Prohibition Day) ಹಿನ್ನೆಲೆ ಬೆಂಗಳೂರು (Bengaluru) ನಗರದಲ್ಲಿ ಡ್ರಗ್ಸ್ ಮಾರಾಟ ಮತ್ತು ಸೇವನೆ ತಡೆಯುವ ಸಲುವಾಗಿ ಪೊಲೀಸರು (Police) ವಿಶೇಷ ಕಾಳಜಿ ವಹಿಸಿದ್ದಾರೆ.

    ಡ್ರಗ್ಸ್ ನಿಷೇಧ ದಿನದ ಅಂಗವಾಗಿ ಸೋಮವಾರ ಪೊಲೀಸರು ಬೆಂಗಳೂರು ನಗರದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ (Students) ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಹೆಚ್ಚುವರಿ ಪೊಲೀಸ್ ಆಯುಕ್ತರಾದ ರಮನ್ ಗುಪ್ತ ನಗರದ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅರಿವು (Awareness) ಮೂಡಿಸುವ ಕೆಲಸ ಮಾಡಿದರು. ಇದನ್ನೂ ಓದಿ: ಪೊಲೀಸರು ನನ್ನನ್ನ ಒದ್ದು ಒಳಗೆ ಹಾಕಿದ್ರು – ಇಂಟರೆಸ್ಟಿಂಗ್‌ ಸಂಗತಿ ಹಂಚಿಕೊಂಡ ಸಿಎಂ

    ನಗರದ 388 ಶಾಲೆಗಳು, 253 ಕಾಲೇಜುಗಳು ಹಾಗೂ 51 ವೃತ್ತಿ ನಿರತ ಕಾಲೇಜುಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಇದರ ಜೊತೆಗೆ ಬಿಸಿಪಿ ಎನ್ ಡಿಪಿಎಸ್ ಪೋರ್ಟಲ್ ಅನಾವರಣ ಮಾಡಿದ ಪೊಲೀಸ್ ಕಮೀಷನರ್, ಡ್ರಗ್ಸ್ ಸೇವನೆ ಮತ್ತು ಕಳ್ಳಸಾಗಣೆ ಬಗ್ಗೆ ಪ್ರತಿಜ್ಞೆ ಮಾಡಿದವರಿಗೆ ಪ್ರಮಾಣ ಪತ್ರ ನೀಡಿದರು. ಇದನ್ನೂ ಓದಿ: ಹೊಯ್ಸಳಲು ಗ್ರಾಮಕ್ಕೆ 75 ವರ್ಷಗಳ ಬಳಿಕ ಬಂತು ಸರ್ಕಾರಿ ಬಸ್

    ಇತ್ತೀಚೆಗೆ ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ದಂಧೆ ಹೆಚ್ಚುತ್ತಿದ್ದು, ಇದರ ಪರಿಣಾಮ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯವನ್ನು ತಮ್ಮ ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟುವ ಸಲುವಾಗಿ ಇಂತಹ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಮಾಡಬೇಕು ಎಂಬುದು ಎಲ್ಲರ ಆಶಯ. ಇದನ್ನೂ ಓದಿ: ಬೆಲೆ ಏರಿಕೆ ಪಟ್ಟಿ ನೋಡಿದ್ರೆ ಎದೆ ನಡುಗುತ್ತೆ – ಹೆಚ್‌.ಡಿ ಕುಮಾರಸ್ವಾಮಿ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಕೊಡಗಿನ ಪೊಲೀಸ್ ಠಾಣೆಗೆ ಇನ್ಮುಂದೆ ತಿಂಗಳಿಗೊಮ್ಮೆ ಬರ್ತಾರೆ ವಿದ್ಯಾರ್ಥಿಗಳು

    ಕೊಡಗಿನ ಪೊಲೀಸ್ ಠಾಣೆಗೆ ಇನ್ಮುಂದೆ ತಿಂಗಳಿಗೊಮ್ಮೆ ಬರ್ತಾರೆ ವಿದ್ಯಾರ್ಥಿಗಳು

    ಮಡಿಕೇರಿ: ಪ್ರತಿ ತಿಂಗಳಿಗೊಮ್ಮೆ ಶಾಲಾ ಮಕ್ಕಳು ಪೊಲೀಸ್ ಠಾಣೆಗೆ ಬರುತ್ತಾರೆ ಅಂದರೆ ಯಾಕೆ ಬರುತ್ತಾರೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಆದರೆ ಇದಕ್ಕೆ ಉತ್ತರ ‘ತೆರೆದ ಮನೆ’ ಕಾರ್ಯಕ್ರಮ.

    ಹೌದು. ಪೊಲೀಸ್ ಇಲಾಖೆಯು ಜನಸ್ನೇಹಿ, ಸಮಾಜಮುಖಿಯಾಗಲಿ ಎಂದು ‘ತೆರೆದ ಮನೆ’ ಅನ್ನುವ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಕೊಡಗು ಜಿಲ್ಲೆಯಲ್ಲಿ ‘ತೆರೆದ ಮನೆ’ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ಹೀಗಾಗಿ ಕಡ್ಡಾಯವಾಗಿ ಕೊಡಗಿನ ಪೊಲೀಸ್ ಠಾಣೆಯಲ್ಲಿ ಪ್ರತಿ ತಿಂಗಳು ಈ ಕಾರ್ಯಕ್ರಮ ನಡೆಯಲಿದ್ದು ವಿದ್ಯಾರ್ಥಿಗಳು ಠಾಣೆಗೆ ಬಂದು ಇಲ್ಲಿನ ಕೆಲಸ, ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ.

    ಏನಿದು ತೆರೆದ ಮನೆ?
    ತೆರೆದ ಮನೆಗೆ ಶಾಲಾ ಮಕ್ಕಳು ಮುಕ್ತವಾಗಿ ಬರಬಹುದಾಗಿದೆ.  ಪೊಲೀಸ್ ಠಾಣೆಯಲ್ಲಿ ಏನೇನು ದೈನಂದಿನ ಕಾರ್ಯಗಳು ನಡೆಯುತ್ತೆ? ಪೊಲೀಸರು ಹಾಗೂ ಶಾಲಾ ಮಕ್ಕಳ ಮಧ್ಯೆ ಬಾಂಧವ್ಯ ವೃದ್ಧಿ, ಕಾನೂನು ತಿಳುವಳಿಕೆ, ಮಕ್ಕಳ ಸುರಕ್ಷತೆ, ರಸ್ತೆ ಸಂಚಾರ ನಿಯಮಾವಳಿ, ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ಸೇರಿದಂತೆ ಮಕ್ಕಳಿಗೆ ಉಪಯುಕ್ತವಾದ ಕಾನೂನಿನ ಬಗ್ಗೆ ತೆರೆದ ಮನೆಯಲ್ಲಿ ಅರಿವು ಮೂಡಿಸಲಾಗುತ್ತಿದೆ.

    ಶಾಲಾ ಹಂತದಲ್ಲೇ ಮಕ್ಕಳಿಗೆ ಕಾನೂನಿನ ಬಗ್ಗೆ ತಿಳುವಳಿಕೆ ನೀಡಿದರೆ ಉತ್ತಮ ನಾಗರಿಕರನ್ನಾಗಿ ಮಾಡಬಹುದು ಅನ್ನೋದು ಪೊಲೀಸ್ ಇಲಾಖೆ ಚಿಂತನೆಯಾಗಿದೆ. ಈ ಕಾರ್ಯಕ್ರಮ ರಾಜ್ಯಾದ್ಯಂತ ಜಾರಿಯಲ್ಲಿದ್ದು, ತೆರೆದ ಮನೆಯಲ್ಲಿ ಕಾನೂನಿನ ಬಗ್ಗೆ ತಿಳಿದುಕೊಳ್ಳಲು  ಶಾಲಾ ಮಕ್ಕಳು ಸಹ ಉತ್ಸುಕರಾಗಿದ್ದಾರೆ. ಕಾನೂನು ಪಾಲನೆಯಲ್ಲಿ ನಮ್ಮ ಪಾತ್ರವೇನು ಎನ್ನುವುದನ್ನು ವಿದ್ಯಾರ್ಥಿಗಳ ಮೂಲಕ ಅವರ ಕುಟುಂಬಸ್ಥರಿಗೂ ಕಾನೂನಿನ ತಿಳುವಳಿಕೆ ವರ್ಗಾಯಿಸೋದು ಇದರ ಉದ್ದೇಶವಾಗಿದೆ.

    ಪೊಲೀಸರು ಸಮಾಜದ ಒಂದು ಭಾಗ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪೊಲೀಸರು ಸಮಾಜದೊಂದಿಗೆ ಹೇಗಿರಬೇಕು? ನಾಗರಿಕರು ಪೊಲೀಸರೊಂದಿಗೆ ಹೇಗಿರಬೇಕು? ಹೀಗೆ ಪರಸ್ಪರ ಬಾಂಧವ್ಯ ಬೆಳೆಸಲು, ಪೊಲೀಸ್ ಇಲಾಖೆ ಸಮಾಜಮುಖಿ ಹಾಗೂ ಜನ ಸ್ನೇಹಿಯಾಗುವುದಕ್ಕೆ ತೆರೆದ ಮನೆ ಕಾರ್ಯಕ್ರಮ ಸಹಕಾರಿಯಾಗಿದೆ. ಅಲ್ಲದೆ ಇದರಿಂದ ಮಕ್ಕಳಿಗೂ ಪೋಲಿಸರ ಭಯ ಮತ್ತು ಆತಂಕ ದೂರವಾಗುತ್ತದೆ ಎಂಬುವುದು ವಿದ್ಯಾರ್ಥಿಗಳ ಮಾತಾಗಿದೆ.

  • ಚುನಾವಣಾ ಸಾಕ್ಷರತೆ ಕ್ಲಬ್ ವತಿಯಿಂದ ಮತದಾನ ಮಹತ್ವದ ಬಗ್ಗೆ ಜಾಥಾ

    ಚುನಾವಣಾ ಸಾಕ್ಷರತೆ ಕ್ಲಬ್ ವತಿಯಿಂದ ಮತದಾನ ಮಹತ್ವದ ಬಗ್ಗೆ ಜಾಥಾ

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ 7ನೇ ಹೊಸಕೋಟೆಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಚುನಾವಣಾ ಸಾಕ್ಷರತೆ ಕ್ಲಬ್(ಇಎಲ್‍ಸಿ) ವತಿಯಿಂದ ಮತದಾನ ಮಹತ್ವದ ಬಗ್ಗೆ ಜಾಥಾವನ್ನು ಹಮ್ಮಿಕೊಳ್ಳಲಾಯಿತು.

    ಜೂನ್ 15 2019ರಲ್ಲಿ ಸ್ಥಾಪನೆ ಅದ ಚುನಾವಣಾ ಸಾಕ್ಷರತೆ ಕ್ಲಬ್‍ನಲ್ಲಿ ನೋಡಲ್ ಅಧಿಕಾರಿಯಾಗಿ ಚಂದ್ರಹಾಸ ಮಾಯಗೌಡ, ಸಮಾಜ ಶಿಕ್ಷಕಿ ಶೈಲಾ, ಸಹಾಯಕ ನೋಡಲ್ ಅಧಿಕಾರಿಯಾಗಿ ಬಸವರಾಜ್ ಹಾಗೂ ಸುಮಾರು 10 ಜನ ವಿದ್ಯಾರ್ಥಿ ಪ್ರತಿನಿಧಿಗಳನ್ನು ಈ ಕ್ಲಬ್ ಒಳಗೊಂಡಿದೆ. ಇದರ ಉದ್ದೇಶ ಶಾಲೆಯ ಆಸು-ಪಾಸಿನಲ್ಲಿರುವ ಗ್ರಾಮದ ಜನರಿಗೆ ಜಾಥಾದ ಮೂಲಕ ಮತದಾನದ ಅರಿವು ಹಾಗೂ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.

    ಇಂದು ಶಾಲಾ ಮಕ್ಕಳು 7ನೇ ಹೊಸಕೋಟೆಯ ಬೀದಿಗಳಲ್ಲಿ ಜಾಥಾ ನಡೆಸಿ ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಮತದಾನದ ಅರಿವು ಮೂಡಿಸಿದ್ದಾರೆ. ಶಾಲೆಯಲ್ಲಿಯೇ ಮಂತ್ರಿ ಮಂಡಲವನ್ನು ರಚಿಸಿ ಯಾವ ರೀತಿ ಅಭ್ಯರ್ಥಿಯು ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು? ಜನ ಸಾಮಾನ್ಯರು ಯಾವ ರೀತಿ ಯಾವುದೇ ಆಮಿಷಗಳಿಗೆ ಬಲಿಯಾಗದೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು? ಹೀಗೆ ಮತದಾನದ ಹಲವು ವಿಚಾರದ ಬಗ್ಗೆ ಶಾಲೆಯಲ್ಲಿಯೇ ಮಾದರಿ ಚುನಾವಣೆಯನ್ನು ಏರ್ಪಡಿಸಿ, ಶಾಲಾ ಮಂತ್ರಿಮಂಡಲವನ್ನು ರಚಿಸಿಕೊಂಡು ಶಾಲೆಯ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿದರು.