Tag: ಅರಿಯಾನಾ ಡಿಬೋಸ್

  • ಆಸ್ಕರ್ 2022: ಅತ್ಯುತ್ತಮ ಪೋಷಕ ಪಾತ್ರಗಳಿಗೆ ಅರಿಯಾನಾ ಡಿಬೋಸ್, ಟ್ರಾಯ್ಕೋಟ್ಸೂರ್‌ಗೆ ಅವಾರ್ಡ್

    ಆಸ್ಕರ್ 2022: ಅತ್ಯುತ್ತಮ ಪೋಷಕ ಪಾತ್ರಗಳಿಗೆ ಅರಿಯಾನಾ ಡಿಬೋಸ್, ಟ್ರಾಯ್ಕೋಟ್ಸೂರ್‌ಗೆ ಅವಾರ್ಡ್

    ವಿಶ್ವವೇ ಕಾಯುತ್ತಿದ್ದ ಹಾಲಿವುಡ್ ಡಾಲ್ಬಿ ಥಿಯೇಟರ್ 94ನೇ ಆಸ್ಕರ್ ಪ್ರಶಸ್ತಿ ಸಮಾರಂಭ ಭಾನುವಾರ ಲಾಸ್ ಏಂಜಲಿಸ್‍ನಲ್ಲಿ ನಡೆಯಿತು. ಎಲ್ಲರೂ ಕಾತುರದಿಂದ ಕಾಯುತ್ತಿದ್ದ ಈ ಪ್ರಶಸ್ತಿ ಸಮಾರಂಭಕ್ಕೆ ತೆರೆಬಿದಿದ್ದು, ನಿರೀಕ್ಷೆಯಂತೆ ಅರಿಯಾನಾ ಡಿಬಾಸ್ ಅತ್ಯುತ್ತಮ ಪೋಷಕ ನಟಿ ಮತ್ತು ಟ್ರಾಯ್ಕೋಟ್ಸೂರ್‌ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿ ಗೌರವಕ್ಕೆ ಪಾತ್ರರಾಗಿದ್ದಾರೆ.

    ಕಳೆದ ವರ್ಷ ಕೋವಿಡ್‍ನಿಂದ ಸರಳವಾಗಿ ನಡೆದಿದ್ದ, ಆಸ್ಕರ್ ಇವೆಂಟ್ ಈ ಬಾರಿ ಅದ್ದೂರಿಯಾಗಿ ನಡೆಯಿತು. ಇವೆಂಟ್ ಮೊದಲು ರೆಡ್ ಕಾರ್ಪೆಟ್‍ನೊಂದಿಗೆ ಪ್ರಾರಂಭವಾಯ್ತು. ಲಾಸ್ ಏಂಜಲಿಸ್‍ನ ಡಾಲ್ಬಿ ಥಿಯೇಟರ್‌ನಲ್ಲಿ ಈ ಅದ್ದೂರಿ ಕಾರ್ಯಕ್ರಮ ನಡೆದಿದ್ದು, ಹಾಲಿವುಡ್ ತಾರೆಯರ ಅಕರ್ಷಕ ಉಡುಗೆಯನ್ನು ತೊಟ್ಟಿಕೊಂಡು ಫುಲ್ ಮಿಂಚುತ್ತಿದ್ದರು. ಇದನ್ನೂ ಓದಿ: ಹೊಸ ದಾಖಲೆ ಬರೆದ ಕೆಜಿಎಫ್ 2 ಟ್ರೈಲರ್ – ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಲಕ್ಷಾಂತರ ವ್ಯೂ

    ಅವಾರ್ಡ್ ಇವೆಂಟ್ ರೆಡ್ ಡ್ರೆಸ್, ಬ್ಲೂ ರೆಬ್ಬನ್ಸ್‌ನೊಂದಿಗೆ ಕಂಗೊಳಿಸುತ್ತಿತ್ತು. ಕಳೆದ ವರ್ಷವನ್ನು ಮರೆಸುವಂತೆ ಎಲ್ಲಕಡೆ ಆಕರ್ಷಕವಾಗಿ ಇವೆಂಟ್ ಆಯೋಜಿಸಲಾಗಿತ್ತು. ಎಲ್ಲ ಹಾಲಿವುಡ್ ತಾರೆಯರು ಕ್ಯಾಮೆರಗೆ ಪೋಸ್‌ ಕೊಟ್ಟು ಪ್ರಶಸ್ತಿ ಸಮಾರಂಭದ ಬಗ್ಗೆ ಅವರಿಗಿದ್ದ ಕಾತುರಕ ಬಗ್ಗೆ ವಿವರಿಸಿದ್ದರು.

    ಆಮಿ ಶುಮರ್, ರೆಜಿನಾ ಹಾಲ್ ಮತ್ತು ವಂಡಾ ಸೈಕ್ಸ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಆಸ್ಕರ್‌ನಲ್ಲಿ ʼdune ʼ ಸಿನಿಮಾ 10 ನಾಮಿನೇಷನ್ಸ್ ಪಡೆದಿದ್ದು, ಆರು ಪ್ರಶಸ್ತಿಯನ್ನು ಬಾಚಿಕೊಂಡಿದೆ. ಎಲ್ಲರ ನಿರೀಕ್ಷೆಯಂತೆ ಅರಿಯಾನಾ ಡಿಬಾಸ್ ‘wes side story’ ಸಿನಿಮಾ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ. ‘coda’ ಸಿನಿಮಾಗಾಗಿ ‘ಟ್ರಾಯ್ಕೋಟ್ಸೂರ್‌’ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದೆ.

    ಈ ಇವೆಂಟ್ ಆಯೋಜಿಸಿರುವುದನ್ನು ನೋಡಿ ಎಲ್ಲ ತಾರೆಯರು ಸಖತ್ ಖುಷ್ ಆಗಿದ್ದು, ಹಲವು ವರ್ಷಗಳಿಂದ ಈ ಸಂಭ್ರಮವನ್ನು ಮಿಸ್ ಮಾಡಿಕೊಳ್ಳುತ್ತಿದ್ದೆವು ಎಂದು ಹೇಳಿದ್ದರು. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು