Tag: ಅರಸು

  • ಅಭಿಮಾನಿಗಳಿಗೆ ಬಿಗ್ ಅಪ್‌ಡೇಟ್ ಕೊಟ್ಟ `ಮೌರ್ಯ’ ನಾಯಕಿ ಮೀರಾ ಜಾಸ್ಮಿನ್

    ಅಭಿಮಾನಿಗಳಿಗೆ ಬಿಗ್ ಅಪ್‌ಡೇಟ್ ಕೊಟ್ಟ `ಮೌರ್ಯ’ ನಾಯಕಿ ಮೀರಾ ಜಾಸ್ಮಿನ್

    ಹುಭಾಷಾ ನಟಿ ಮೀರಾ ಜಾಸ್ಮಿನ್ (Meera Jasmine) ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ನಟಿ ಗುಡ್ ನ್ಯೂಸ್ ನೀಡಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಸುಳಿವು ನೀಡುವ ಮೂಲಕ ನಟಿ ಸದ್ದು ಮಾಡ್ತಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಹೃದಯಂ’ ಚಿತ್ರದ ನಟಿ ಕಲ್ಯಾಣಿ ಸಹೋದರ ಸಿದ್ಧಾರ್ಥ್

     

    View this post on Instagram

     

    A post shared by Meera Jasmine (@meerajasmine)

    ಕನ್ನಡದ ಮೌರ್ಯ (Mourya), ಅರಸು (Arasu)ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ನಾಯಕಿಯಾಗುವ ಗಮನ ಸೆಳೆದ ನಟಿ ಮೀರಾ ಜಾಸ್ಮಿನ್ ಮತ್ತೆ ಸುದ್ದಿಯಲ್ಲಿದ್ದಾರೆ. ವೈಯಕ್ತಿಕ ಜೀವನ ಅಂತಾ ಬ್ಯುಸಿಯಿದ್ದ ನಟಿ ಈಗ 10 ವರ್ಷಗಳ ನಂತರ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಈಗ ನಟಿ ಮತ್ತಷ್ಟು ಫಿಟ್ ಮತ್ತು ಗ್ಲ್ಯಾಮರಸ್  ಆಗಿ ಹೊಸ ಬಗೆಯ ಫೋಟೋಗಳ ಮೂಲಕ ಆಗಾಗ ಮಿಂಚ್ತಿರುತ್ತಾರೆ.

    ಸಿನಿಮಾದಲ್ಲಿ ಮತ್ತಷ್ಟು ಆಕ್ಟೀವ್ ಆಗಲು ನಿರ್ಧರಿಸಿದ್ದಾರೆ. 2022ರಲ್ಲಿ ಮಲಯಾಳಂನ `ಮಕಲ್’ ಚಿತ್ರದ ಮೂಲಕ ಜಯರಾಮ್‌ಗೆ ನಾಯಕಿಯಾಗಿ ನಟಿಸಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಡಬ್ಬಿಂಗ್‌ನಲ್ಲಿ ತೊಡಗಿರುವ ಫೋಟೋ ಶೇರ್ ಮಾಡಿ ಹೊಸ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ.

     

    View this post on Instagram

     

    A post shared by Meera Jasmine (@meerajasmine)

    ಸದ್ಯ ರಾಮ್-ಬೋಪಪತಿ ಶ್ರೀನು ಕಾಂಬಿನೇಷನ್ ಸಿನಿಮಾದಲ್ಲಿ ನಟಿ ಮೀರಾ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೋಹಕತಾರೆ ರಮ್ಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಮೋಹಕತಾರೆ ರಮ್ಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಸ್ಯಾಂಡಲ್‌ವುಡ್ ಪದ್ಮಾವತಿ ರಮ್ಯಾ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಸಾಕಷ್ಟು ಸಿನಿಮಾ ಸಮಾರಂಭಗಳಿಗೆ ರಮ್ಯಾ ಸಾಥ್ ನೀಡುತ್ತಿದ್ದಾರೆ. ಹೀಗಿರುವಾಗ ರಮ್ಯಾ ಮತ್ತೆ ಚಿತ್ರಗಳಲ್ಲಿ ನಟಿಸುತ್ತಾರಾ ಅಂತಾ ಕೇಳ್ತಿದ್ದ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ.

    ಪುನೀತ್ ರಾಜ್‌ಕುಮಾರ್‌ಗೆ ನಾಯಕಿಯಾಗುವ ಮೂಲಕ ದಶಕಗಳ ಕಾಲ ಚಂದನವನವನ್ನು ಆಳಿದ ನಟಿ ರಮ್ಯಾ ನಂತರ ರಾಜಕೀಯದಲ್ಲಿ ಬ್ಯುಸಿಯಾಗಿದ್ದರು. ರಾಜಕೀಯ ಮತ್ತು ಸಿನಿಮಾ ಎರಡರಲ್ಲೂ ಸೈ ಎನಿಸಿಕೊಂಡಿದ್ದ ರಮ್ಯಾ ಅದೇನ್ ಆಯ್ತೋ ಎನೋ ಏಕಾಏಕಿ ಎರಡು ರಂಗವನ್ನು ತೊರೆದು ದೂರದ ಊರಿನಲ್ಲಿ ಸಿಂಗಲ್ ಲೈಫ್ ಲೀಡ್ ಮಾಡುತ್ತಿದ್ದಾರೆ. ಈಗ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗುವ ಮೂಲಕ ಸಿನಿಮಾಗೆ ಬರುವ ಸೂಚನೆಯನ್ನ ನೀಡಿದ್ದಾರೆ.

    ಇತ್ತೀಚೆಗಷ್ಟೇ ನಡೆದ ಖಾಸಗಿ ಅವಾರ್ಡ್ ಫಂಕ್ಷನ್‌ವೊಂದರಲ್ಲಿ ರಮ್ಯಾ ಸಾಧನೆಯನ್ನ ಗುರುತಿಸಿ ಅವಾರ್ಡ್ ನೀಡಲಾಯಿತು. ಈ ವೇಳೆ ಚಿತ್ರರಂಗಕ್ಕೆ ರಮ್ಯಾ ಕಂಬ್ಯಾಕ್ ಕುರಿತು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿರೋ ನಟಿ, ಹೌದು ನಾನು ಮತ್ತೆ ಸಿನಿಮಾದಲ್ಲಿ ನಟಿಸುತ್ತೇನೆ. ಒಂದೊಳ್ಳೆ ಪಾತ್ರ ಮತ್ತು ಚಿತ್ರಕಥೆಯ ಮೂಲಕ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹಾಟ್ ಲುಕ್‌ನಿಂದ ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ ಸಮಂತಾ

    RAMYA

    ಇನ್ನು ಕನ್ನಡ ಚಿತ್ರರಂಗದ ಹಿಟ್ ಜೋಡಿಗಳಲ್ಲಿ ಪವರ್ ಸ್ಟಾರ್ ಪುನೀತ್ ಹಾಗೂ ನಟಿ ರಮ್ಯಾ ಅವರ ಜೋಡಿಯೂ ಒಂದು. ತಮ್ಮ ಮೊದಲ ಚಿತ್ರ ಅಭಿಯಲ್ಲಿ ರಮ್ಯಾ ಪುನೀತ್ ಜೊತೆ ನಟಿಸಿದ್ದರು. ಅದು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಬಳಿಕ ಹಿಟ್ ಎನಿಸಿಕೊಂಡ ಆ ಜೋಡಿ, ಆಕಾಶ್, ಅರಸು ಸಿನಿಮಾಗಳಲ್ಲಿ ಮೋಡಿ ಮಾಡಿತ್ತು. ಅದಾದ ಮೇಲೆ ರಮ್ಯಾ ಹಾಗೂ ಪುನೀತ್ ತೆರೆ ಮೇಲೆ ಒಂದಾಗಿರಲಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪುನೀತ್ ರಾಜ್‌ಕುಮಾರ್ ಜೊತೆ ರಮ್ಯಾ ಸಿನಿಮಾದಲ್ಲಿ ನಟಿಸಬೇಕಿತ್ತು. ಈ ಚಿತ್ರದ ಮೂಲಕ ರಮ್ಯಾ ಕಂಬ್ಯಾಕ್ ಆಗಬೇಕಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಒಟ್ನಲ್ಲಿ ರಮ್ಯಾ ಮತ್ತೆ ಚಿತ್ರರಂಗಕ್ಕೆ ವಾಪಾಸ್ ಆಗೋದರ ಕುರಿತು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸಿನಿಮಾಗಾಗಿ ಕಾಯ್ತಿದ್ದಾರೆ.

  • ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ ಅಂತೀರೋ ರಮ್ಯಾ

    ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ ಅಂತೀರೋ ರಮ್ಯಾ

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್ ನಟಿ ರಮ್ಯಾ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ನೆನೆದು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

    ರಮ್ಯಾ ಅವರು, ಪುನೀತ್ ಜೊತೆ ಅಭಿ ಸಿನಿಮಾದಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ಚಂದನವನಕ್ಕೆ ಕಾಲಿಟ್ಟರು. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನ ದಿವ್ಯಾಸ್ಪಂದನ ಆಗಿದ್ದ ಇವರಿಗೆ ಪಾರ್ವತಮ್ಮ ರಾಜ್‍ಕುಮಾರ್ ಅವರು ರಮ್ಯಾ ಎಂದು ಹೆಸರಿಟ್ಟು, ಚಿತ್ರರಂಗಕ್ಕೆ ಪರಿಚಯಿಸಿದ್ರು. ತಮ್ಮ ಮೊದಲ ಸಿನಿಮಾದಲ್ಲಿಯೇ ಅಭಿಮಾನಿಗಳ ದಿಲ್ ಕದ್ದ ರಮ್ಯಾ ನಂತರ ಸಾಕಷ್ಟು ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ನೀಡುವ ಮೂಲಕ ಸ್ಯಾಂಡಲ್‍ವುಡ್ ಕ್ವೀನ್ ಪಟ್ಟ ಗಿಟ್ಟಿಸಿಕೊಂಡಿರು. ಇದನ್ನೂ ಓದಿ: ನಾನು ಅಶ್ಲೀಲ ಚಿತ್ರ ತಯಾರಿಕೆಯಲ್ಲಿ ತೊಡಗಿಕೊಂಡಿಲ್ಲ: ರಾಜ್ ಕುಂದ್ರಾ

    ಅಪ್ಪು ಜೊತೆ ರಮ್ಯಾ ಇಲ್ಲಿಯವರೆಗೂ ಅಭಿ, ಆಕಾಶ್, ಅರಸು ಎಂಬ ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದು, ಈ ಮೂರು ಚಿತ್ರಗಳು ಕನ್ನಡದಲ್ಲಿ ಹಿಟ್ ಸಿನಿಮಾಗಳಾಗಿತ್ತು. ಮತ್ತೊಮ್ಮೆ ಪುನೀತ್ ಹಾಗೂ ರಮ್ಯಾ ಕಾಂಬೀನೇಷನ್‍ನ ಮತ್ತೊಂದು ಸಿನಿಮಾದ ನಿರೀಕ್ಷೆ ಹೊಂದಿದ್ದ ಅಭಿಮಾನಿಗಳಿಗೆ ಅಪ್ಪು ಅಗಲಿಕೆ ಬಿಗ್ ಶಾಕ್ ನೀಡಿತ್ತು. ಈ ಸುದ್ದಿ ಅಭಿಮಾನಿಗಳಿಗಷ್ಟೇ ಅಲ್ಲದೇ ಕಲಾವಿದರಿಗೂ ಅಷ್ಟೇ ನೋವುಂಟು ಮಾಡಿತ್ತು. ತಮ್ಮ ಬೆಸ್ಟ್ ಫ್ರೆಂಡ್ ಅಪ್ಪು ಇನ್ನಿಲ್ಲ ಎಂಬ ವಿಚಾರ ರಮ್ಯಾ ಅವರಿಗೂ ಆಘಾತವನ್ನುಂಟು ಮಾಡಿತ್ತು. ಆದರೆ ಅಪ್ಪು ಇಲ್ಲದಿದ್ದರೂ ಅವರ ನೆನಪುಗಳನ್ನು ಎಲ್ಲರೂ ಸದಾ ಮೆಲುಕು ಹಾಕುತ್ತಿರುತ್ತಾರೆ.

    ಇದೀಗ ರಮ್ಯಾ ಅವರು ಅಪ್ಪು ಜೊತೆಗೆ ಅಭಿನಯಿಸಿದ್ದ ಅರಸು ಚಿತ್ರದ ಫೇಮಸ್ ‘ನಿನ್ನ ಕಂಡ ಕ್ಷಣದಿಂದ’ ಸಾಂಗ್‍ಗೆ ಹಲವಾರು ಎಕ್ಸ್‍ಪ್ರೇಶನ್ ಇರುವ ವೀಡಿಯೊಂದನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ ಈ ವೀಡಿಯೋದಲ್ಲಿ ರಮ್ಯಾ ತಮ್ಮ ಮುಖ ತೋರಿಸದೇ ಬದಲಿಗೆ ಎಮೋಜಿಯಂತಿರುವುದರ ಮೇಲೆ ಭಿನ್ನ, ಭಿನ್ನ ಎಕ್ಸ್‍ಪ್ರೇಶನ್‍ಗಳನ್ನು ಕ್ರಿಯೆಟ್ ಮಾಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ಎಕ್ಸ್‍ಪ್ರೆಶನ್‍ಗಳ ಮಧ್ಯೆ ಹಿನ್ನೆಲೆಯಲ್ಲಿ ಅರಸು ಸಿನಿಮಾದ ಹಾಡನ್ನು ಕೇಳಬಹುದಾಗಿದೆ. ಇದನ್ನೂ ಓದಿ: ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ, ವಿಜಯ್ ದೇವರಕೊಂಡ

     

    View this post on Instagram

     

    A post shared by Ramya/Divya Spandana (@divyaspandana)

    ಈ ವೀಡಿಯೋ ಜೊತೆಗೆ ರಮ್ಯಾ ಕ್ಯಾಪ್ಷನ್‍ನಲ್ಲಿ ನಿನ್ನ ಕಂಡ ಕ್ಷಣದಿಂದ ಯಾಕೊ ನಾನು ನನ್ನಲಿಲ್ಲ. ಆ ನಿಮಿಷದಿಂದ ನನಗೇನಾಯ್ತಂತ ಗೊತ್ತೇ ಇಲ್ಲ. ಎಂದು ಕಾಣದ ಹರುಷ ಇಂದು ನಾನು ಕಂಡೆನಲ್ಲ. ಇದು ಪ್ರೀತಿ ಅಂತ ತಿಳಿದ ಮೇಲೆ ನೀನೆ ಎಲ್ಲಾ ಎಂಬ ಸಾಲುಗಳ ಜೊತೆಗೆ ಅಪ್ಪು, ಅರಸು ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆ ಪುನೀತ್ ಇಲ್ಲದಿದ್ದರೂ ಅವರ ನೆನಪುಗಳು ಮಾತ್ರ ಎಲ್ಲರ ಮನಸ್ಸಿನಲ್ಲಿ ಜೀವಂತವಾಗಿದೆ ಎನ್ನುವುದಕ್ಕೆ ಇದೊಂದು ಮತ್ತೊಂದು ಉದಾಹರಣೆಯಾಗಿದೆ.