Tag: ಅರವಿಂದ ಲಿಂಬಾವಳಿ

  • ಪ್ರಧಾನಿ ಮೋದಿ ತಿಂಗಳಿಗೊಮ್ಮೆ ಗೊಂಬೆ ಕುಣಿಸಲು ಬರ್ತಾರ – ಹೆಚ್‌ಡಿಕೆ ವ್ಯಂಗ್ಯ

    ಪ್ರಧಾನಿ ಮೋದಿ ತಿಂಗಳಿಗೊಮ್ಮೆ ಗೊಂಬೆ ಕುಣಿಸಲು ಬರ್ತಾರ – ಹೆಚ್‌ಡಿಕೆ ವ್ಯಂಗ್ಯ

    ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಏನ್ ಕೊಟ್ಟಿದ್ದೀವಿ ಅಂತಾ ತಿಂಗಳಿಗೊಮ್ಮೆ ಬರುವುದಾಗಿ ಹೇಳಿದ್ದಾರೆ. ಇಲ್ಲೇನು ಗೊಂಬೆ ಕುಣಿಸಲು ಬರ್ತಾರಾ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

    ಮಂಡ್ಯದ ನಾಗಮಂಗಲ ತಾಲೂಕಿನ ದೊಡ್ಡಚಿಕ್ಕನಹಳ್ಳಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏನ್ ಮಾಡೋದಕ್ಕೆ ಮೋದಿ ತಿಂಗಳಿಗೊಮ್ಮೆ ಬರ್ತಾರೆ? ಏನ್ ಕೊಟ್ಟಿದ್ದೀವಿ ಎಂದು ಬರ್ತಾರೆ? ಇಲ್ಲೇನು ಗೊಂಬೆ ಕುಣಿಸಲು ಬರ್ತಾರಾ? ಮೊದಲು ಜನರ ಸಮಸ್ಯೆ ಬಗೆಹರಿಸಿ. ಕಳೆದ ಮೂರು ವರ್ಷಗಳಲ್ಲಿ 35 ರಿಂದ 40 ಸಾವಿರ ಕೋಟಿ ರೈತರ ಬೆಳೆ ನಾಶವಾಗಿದೆ. ಇದ್ಯಾವುದಕ್ಕೂ ಧ್ವನಿ ಎತ್ತದೆ ಇಲ್ಲಿ ಬಂದು ಏನ್ ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: CPI(M) ಪಕ್ಷ ವಿರೋಧ ಹಿನ್ನೆಲೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ನಿರಾಕರಿಸಿದ ಕೆ.ಕೆ ಶೈಲಜಾ

    ಬೆಂಗಳೂರು – ಮೈಸೂರು ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ಇರೋದ್ರಿಂದ ಬದಲಿ ಮಾರ್ಗ ಸೂಚಿಸಲಾಗಿದೆ. ಪ್ರತಾಪ್ ಸಿಂಹ ಯಾಕೆ ಇಷ್ಟೊಂದು ವಹಿಸಿಕೊಳ್ತಿದ್ದಾರೆ ಎಂದು ಗೊತ್ತಿಲ್ಲ ಎಂದು ಕುಟುಕಿದ್ದಾರೆ.

    ಮುರುಘಾ ಶ್ರೀಗಳ ವಿಚಾರವಾಗಿ ಮಾತನಾಡಿ, ಶ್ರೀಗಳ ವಿಚಾರದಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಕಾನೂನು ವ್ಯಾಪ್ತಿಯಲ್ಲಿ ಘಟನೆಯ ಸತ್ಯಾಂಶ ಹೊರತೆಗೆಯಬೇಕು. ಅದನ್ನು ಬಿಟ್ಟು ಸಾರ್ವಜನಿಕವಾಗಿ ಚರ್ಚೆ ಮಾಡುವುದು ಅನವಶ್ಯಕ. ಜನರಲ್ಲಿ ಅಪನಂಬಿಕೆ ಬಾರದಂತೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ರಾಜಕೀಯಕ್ಕೆ ಸೇರಿ ಅಂದವರಿಗೆ ಕಾಫಿನಾಡು ಚಂದು ಹೇಳಿದ್ದೇನು ಗೊತ್ತಾ?

    ಅರವಿಂದ ಲಿಂಬಾವಳಿ ಮಹಿಳೆ ಜೊತೆ ಅನುಚಿತ ವರ್ತನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಲಿಂಬಾವಳಿ ಹೆಣ್ಣುಮಕ್ಕಳಿಗೆ ದೌರ್ಜನ್ಯ ಮಾಡಲ್ಲ. ಅವರು ದೌರ್ಜನ್ಯ ಮಾಡುವುದೇ ಬೇರೆಯವರಿಗೆ. ಈ ಹಿಂದೆ ಅವರು ಕೋರ್ಟ್‌ ನಲ್ಲಿ ಸ್ಟೇ ತಂದಿದ್ರು. ಆ ಕ್ಯಾಸೆಟ್ ನೋಡಿದ್ರೆ ಅವರು ಯಾರ ಮೇಲೆ ದೌರ್ಜನ್ಯ ಮಾಡುತ್ತಾರೆ ಎಂದು ಗೊತ್ತಾಗುತ್ತದೆ. ಅವರು ಹೆಣ್ಣುಮಕ್ಕಳ ಮೇಲೆ ರೇಪ್ ಮಾಡಲು ಹೋಗಿಲ್ಲ ಅಂತಾ ಹೇಳಿದ್ದಾರೆ. ಅವರ ನಡವಳಿಕೆಗಳು ಬೇರೆ ರೀತಿ ಇದೆ. ಜನಪ್ರತಿನಿಧಿಗಳಿಗೆ ಅಹವಾಲನ್ನು ಕೊಡಲು ಬಂದಾಗ ತೆಗೆದುಕೊಳ್ಳಬೇಕು. ಅಗೌರವವಾಗಿ ನಡೆದುಕೊಳ್ಳಬಾರದು. ಈ ವರ್ತನೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ದೇವೇಗೌಡರ ಆರೋಗ್ಯ ವಿಚಾರವಾಗಿ ಮಾತನಾಡಿದ ಅವರು, ದೇವರ ದಯೆಯಿಂದ ದೇವೇಗೌಡರ ಆರೋಗ್ಯ ಮತ್ತೆ ಚೇತರಿಸುತ್ತಿದೆ. ಗಣೇಶ ಹಬ್ಬದಂದು ಅವರೇ ಹೇಳಿದ್ದಾರೆ. ಜನತೆಯ ಮುಂದೆ ಬಂತು ಆಶೀರ್ವಾದ ತೆಗೆದುಕೊಳ್ಳುತ್ತಾರೆ. ಪಕ್ಷ ಸಂಘಟನೆ ಮಾಡುವ ಕೆಲಸವನ್ನೂ ಮಾಡ್ತಾರೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಇಲಾಖೆಯಲ್ಲಿ ಲಂಚ ಇಲ್ಲದೇ ಕೆಲಸ ನಡೆಯಲ್ಲ; ಭ್ರಷ್ಟಾಚಾರಕ್ಕೆ ಮೋದಿ ಬೆಂಬಲ – ಸಿದ್ದು ಆರೋಪ

    ಸರ್ಕಾರಿ ಇಲಾಖೆಯಲ್ಲಿ ಲಂಚ ಇಲ್ಲದೇ ಕೆಲಸ ನಡೆಯಲ್ಲ; ಭ್ರಷ್ಟಾಚಾರಕ್ಕೆ ಮೋದಿ ಬೆಂಬಲ – ಸಿದ್ದು ಆರೋಪ

    ಹಾಸನ: ಇಂದು ಯಾವುದೇ ಸರ್ಕಾರಿ ಇಲಾಖೆಯ ಕಚೇರಿಗಳಿಗೆ ಹೋದರೂ ಲಂಚವಿಲ್ಲದೇ ಕೆಲಸ ನಡೆಯೋದಿಲ್ಲ. ಹೀಗಿದ್ದೂ ಪ್ರಧಾನಿ ನರೇಂದ್ರ ಮೋದಿ ಅವರೇ ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

    ಅರಸೀಕೆರೆ ತಾಲ್ಲೂಕಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರೇ ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆ. ಕೆಂಪಣ್ಣ ಅವರು ಪತ್ರ ಬರೆದು ಒಂದು ವರ್ಷ ಆಯ್ತು. ಇವತ್ತಿನವರೆಗೂ ಪ್ರಧಾನಿ ಕ್ರಮ ತೆಗೆದುಕೊಂಡಿಲ್ಲ. ಈ ಹಿಂದೆಯೂ ನಾ ಕಾವೂಂಗ್, ನಾ ಕಾನೇದೊಂಗಾ ಅಂತ ಪ್ರಧಾನಮಂತ್ರಿ ಹೇಳಿದ್ರು. ಅವರ ಹೇಳಿಕೆಯಂತೆ ಏನೂ ಕ್ರಮ ತೆಗೆದುಕೊಂಡಿಲ್ಲ. ಕರ್ನಾಟಕದಲ್ಲಿ ಭ್ರಷ್ಟಾಚಾರ ಅವ್ಯಾಹತವಾಗಿ ನಡೆಯುತ್ತಿದೆ. ತಹಸೀಲ್ದಾರ್ ಕಚೇರಿ, ಪೊಲೀಸ್ ಠಾಣೆ, ಪಿಡಬ್ಲ್ಯೂಡಿ ಇಲಾಖೆ, ನೀರಾವರಿ ಇಲಾಖೆ ಯಾವ ಸರ್ಕಾರಿ ಕಚೇರಿಗಳಿಗೆ ಹೋದರೂ ಭ್ರಷ್ಟಾಚಾರವಿಲ್ಲದೇ ಏನೂ ಕೆಲಸ ನಡೆಯುವುದಿಲ್ಲ ಎಂದು ಆರೋಪಿಸಿದ್ದಾರೆ.

    ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಕ್ಕೆ ಸಂಧಿಸಿದಂತೆ `ಭ್ರಷ್ಟಾಚಾರ ನಡೆದಿದ್ದರೆ ಸಾಕ್ಷಿ ನೀಡಲಿ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರರ ಸಂಘ, ಕೆಂಪಣ್ಣ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ: ಮುನಿರತ್ನ

    ಭ್ರಷ್ಟಾಚಾರ ಮಾಡಿರೋರು ಲಂಚ ಕೊಟ್ಟಿದ್ದಕ್ಕೆಲ್ಲಾ ರಶೀದಿ ಕೊಡ್ತಾರಾ? ತನಿಖೆ ಮಾಡಿಸಿದರೆ ಗೊತ್ತಾಗುತ್ತದೆ. ಕೆಂಪಣ್ಣ ನ್ಯಾಯಾಂಗ ತನಿಖೆ ಮಾಡಿದರೆ ದಾಖಲೆ ಕೊಡ್ತೀವಿ ಅಂದಿದ್ದಾರೆ. ನಮ್ಮ ಆರೋಪ ಸಾಬೀತಾಗದೇ ಇದ್ದರೆ ನಮಗೆ ಏನು ಬೇಕಾದರೂ ಶಿಕ್ಷೆ ಕೊಡಿ ಎಂದು ಹೇಳಿದ್ದಾರೆ. ಇದಕ್ಕಿಂತ ಇನ್ನೇನು ಬೇಕು. ನೀವು ಪ್ರಾಮಾಣಿಕರಾಗಿದ್ದರೆ ತನಿಖೆ ಮಾಡಿಸೋಕೆ ಭಯ ಯಾಕೆ ಎಂದು ಪ್ರಶ್ನಿಸಿದ್ದಾರೆ.

    ಕೆಂಪಣ್ಣ ಕಾಂಗ್ರೆಸ್ಸೋ, ಬಿಜೆಪಿಯೊ ನಂಗೆ ಗೊತ್ತಿಲ್ಲ. ಪ್ರಧಾನಿಗೆ ಪತ್ರ ಬರೆದ ಒಂದು ವರ್ಷದ ನಂತರ ಅವರು ನನ್ನನ್ನು ಭೇಟಿಯಾಗಿದ್ದಾರೆ. ಸಂಘದ 25 ಪದಾಧಿಕಾರಿಗಳು ಪಕ್ಷಾತೀತವಾಗಿ ಬಂದು ನನ್ನ ಭೇಟಿಯಾಗಿದ್ದಾರೆ. ಅವರ ಭೇಟಿ ಬಳಿಕ ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡೋಕೆ ಹೇಳಿದ್ದರು ಅಷ್ಟೇ ಹೊರತಾಗಿ ಬೇರೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಬಿಜೆಪಿಯಿಂದ ಜನೋತ್ಸವ ಕಾರ್ಯಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದು ಜನೋತ್ಸವ ಅಲ್ಲ, ಭ್ರಷ್ಟ ಪ್ಲಸ್ ಉತ್ಸವ ಭ್ರಷ್ಟೋತ್ಸವ. ರೂಪ್ಸಾದವರು ಲಂಚ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ. ಕೆಂಪಣ್ಣ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ. ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದು ಸೆಲೆಕ್ಷನ್ ಕಮಿಟಿ ಅಧ್ಯಕ್ಷ ಎಡಿಜಿಪಿ ಜೈಲಿಗೆ ಹೋಗಿದ್ದಾರೆ. ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಕೆಲವರು ಅರೆಸ್ಟ್ ಆಗಿದ್ದಾರೆ. ಬೆಂಕಿಯಿಲ್ಲದೆ ಹೊಗೆ ಬರುತ್ತಾ? `ದಿಸ್ ಗವರ್ನಮೆಂಟ್ ಈಸ್ ಎ ಮೋಸ್ಟ್ ಕರಪ್ಟ್ ಗೌರ್ನಮೆಂಟ್’. ಈಗ ವರ್ಗಾವಣೆಗೂ ದುಡ್ಡು ತೆಗೆದುಕೊಳ್ಳೋಕೆ ಶುರು ಮಾಡಿದ್ದಾರೆ ಎಂದು ಸಾಲು-ಸಾಲು ಹಗರಣಗಳನ್ನು ಉದಾಹರಣೆ ನೀಡಿದ್ದಾರೆ.

    ಅರವಿಂದ ಲಿಂಬಾವಳಿ ಜನಪ್ರತಿನಿಧಿಯಾಗಲು ನಾಲಾಯಕ್:
    ಅಹವಾಲು ಹೇಳಲು ಬಂದ ಮಹಿಳೆ ಜೊತೆ ದುರ್ವರ್ತನೆ ತೋರಿದ ಅರವಿಂದ ಲಿಂಬಾವಳಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದು, ಲಿಂಬಾವಳಿ ಜನಪ್ರತಿನಿಧಿಯಾಗಲು ನಾಲಾಯಕ್. ಆಯಮ್ಮ ಏನು ಹೇಳ್ತಾರೆ ಕೇಳಬೇಕಿತ್ತು. ಅವರು ರಾಜಕಾಲುವೆ ಒತ್ತುವರಿ ಮಾಡಿದ್ದರೆ ಕ್ರಮ ತಗೊಳ್ಳಿ. ನೀವೊಬ್ಬ ಜನಪ್ರತಿನಿಧಿಯಾಗಿ ಸಮಸ್ಯೆ ಕೇಳೋದು ನಿಮ್ಮ ಕರ್ತವ್ಯ ಅಲ್ಲವೇ? ಯಾರೇ ಆಗಲಿ ಕಷ್ಟ-ಸುಖ ಹೇಳಿಕೊಳ್ಳಲು ಬಂದಾಗ ಕೆಟ್ಟದಾಗಿ ಬೈಯ್ದು ಬಿಡೋದಾ? ನಾವೇನು ಆಯಮ್ಮನಿಗೆ ರೇಪ್ ಮಾಡಿದಿವಾ ಅಂದರೆ ಏನರ್ಥ ಹೇಳಿ ನೋಡೋಣ ಎಂದು ಪ್ರಶ್ನಿಸಿದ್ದಾರೆ.

    ಆಯಮ್ಮ ಸುಳ್ಳು ಹೇಳುತ್ತಿದ್ದಾರೆ, ಅಕ್ರಮವಾಗಿ ರಾಜಕಾಲುವೆ ಒತ್ತುವರಿ ಮಾಡಿದ್ದಾರೆ ಅಂತಲೇ ಅಂದುಕೊಳ್ಳೋಣ. ಅವರು ಹೇಳೋದನ್ನು ಕೇಳೋಕೆ ಏನು ಕಷ್ಟ. ತಾಳ್ಮೆಯಿಂದ ಅವರ ಕಷ್ಟ-ಸುಖ ಕೇಳಬೇಕು ಅಲ್ಲವಾ? ಅದು ಬಿಟ್ಟು ಮೈ ಮೇಲೆ ಬಿದ್ದರೆ ಹೇಗೆ? ಅವರು ಎಂಎಲ್‌ಎ ಆಗಲು ಲಾಯಕ್ಕಾ, ನಾಲಾಯಕ್ಕ ನೀವೆ ಹೇಳಿ ವಾಗ್ದಾಳಿ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೇಳುವಷ್ಟು ಶಾಂತಿ, ಸಹನೆ ಇಲ್ಲವೆಂದ್ರೆ ಕ್ಷೇತ್ರದ ಶಾಸಕರಾಗಿ ಇರುವುದಕ್ಕೆ ಯೋಗ್ಯರಲ್ಲ: ಡಿಕೆಶಿ

    ಕೇಳುವಷ್ಟು ಶಾಂತಿ, ಸಹನೆ ಇಲ್ಲವೆಂದ್ರೆ ಕ್ಷೇತ್ರದ ಶಾಸಕರಾಗಿ ಇರುವುದಕ್ಕೆ ಯೋಗ್ಯರಲ್ಲ: ಡಿಕೆಶಿ

    ಬೆಂಗಳೂರು: ಕೇಳಿಸಿಕೊಳ್ಳುವಷ್ಟು ಶಾಂತಿ, ಸಹನೆ ಇಲ್ಲ ಅಂದರೆ ಅವರು ಆ ಕ್ಷೇತ್ರದ ಶಾಸಕರಾಗಿ ಇರುವುದಕ್ಕೆ ಯೋಗ್ಯರಲ್ಲ ಅಂತ ಅನಿಸುತ್ತದೆ. ಇಡೀ ಸರ್ಕಾರಕ್ಕೇ ಮುಂದುವರಿಯುವುದಕ್ಕೆ ಅರ್ಹತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

    ಮಹಿಳೆಯ ಮೇಲೆ ಶಸಕ ಅರವಿಂದ ಲಿಂಬಾವಳಿ ದರ್ಪದ ಕುರಿತು ಪ್ರತಿಕ್ರಿಯಿಸಿದ ಅವರು, ಔಟರ್ ರಿಂಗ್ ರೋಡ್ ನವರು ಮಳೆಯಿಂದ ಆ ಕ್ಷೇತ್ರದಲ್ಲಿ ಏನಾಗಿದೆ ಅಂತ ಸರ್ಕಾರಕ್ಕೆ ಬರೆದಿದ್ದಾರೆ. ಅವರಿಗೆ ಎಷ್ಟು ಕೋಟಿ ನಷ್ಟ ಆಗಿದೆ ಅಂತ ಹೇಳಿದ್ದಾರೆ. ಅವರಿಗೆ ಬಾಯಿ ಇತ್ತು ಹೇಳುವ ಶಕ್ತಿ ಇತ್ತು ಪತ್ರ ಬರೆದಿದ್ದಾರೆ. ಆದರೆ ಶಕ್ತಿ ಇಲ್ಲದ ಮಹಿಳೆಯರು ಯಾವುದೇ ಪಾರ್ಟಿ ಇರಬಹುದು, ಶಾಸಕರಿಗೆ ಕೇಳದೇ ಇನ್ನು ಯಾರಿಗೆ ಕೇಳಬೇಕು ಎಂದು ಪ್ರಶ್ನಿಸಿದರು.

    ಕೇವಲ ಲಿಂಬಾವಳಿಗೆ ಮಾತ್ರವಲ್ಲ, ಯಾರಿಗೂ ಮುಂದುವರಿಯುವುದಕ್ಕೆ ಅರ್ಹತೆ ಇಲ್ಲ. ಇದು ಸರ್ಕಾರದ ವೈಫಲ್ಯ. ಅಧಿಕಾರಿಗಳ ಕೈಗೊಂಬೆ ಆಗಿಟ್ಟುಕೊಂಡು ಬೇಕಾದ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಒಬ್ಬ ಜನಪ್ರತಿನಿಧಿಯಾಗಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಅಕ್ಷಮ್ಯ : ಲಿಂಬಾವಳಿ ವಿರುದ್ಧ ಕಾಂಗ್ರೆಸ್ ಕಿಡಿ

    ಬ್ರಾಂಡ್ ಬೆಂಗಳೂರು ಹಾಳಗಿರುವ ಬಗ್ಗೆ ಐಟಿಯವರು ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರಿಗೆ ಶಕ್ತಿ ಇದೆ ಅವರು ಬರೆಯುವ ಮೂಲಕ ಹೇಳಿದ್ದಾರೆ. ಬ್ರಾಂಡ್ ಇಲ್ಲಾ ಏನೂ ಇಲ್ಲ. 20 ವರ್ಷದಿಂದ ಉಳಿಸಿದ್ದೆವು. ಎಸ್.ಎಂ.ಕೃಷ್ಣ ಕಾಲದಲ್ಲೂ ಇತ್ತು. ಸಿದ್ದರಾಮಯ್ಯ ಕಾಲದಲ್ಲೂ ಬ್ರಾಂಡ್ ಬೆಂಗಳೂರು ಉಳಿಸಿದ್ದೆವು. ಈಗ ಎಲ್ಲಾ ಗೋವಿಂದ ಗೋವಿಂದ ಎಂದು ಬಿಜೆಪಿ ವಿರುದ್ಧ ಗರಂ ಆದರು.

    Live Tv
    [brid partner=56869869 player=32851 video=960834 autoplay=true]

  • ಕ್ಷಮೆ ಕೇಳೋಕೆ ಸಿದ್ಧ, ಒತ್ತುವರಿ ತೆರವು ಮಾಡಿಸಿ- ಕಾಂಗ್ರೆಸ್‍ಗೆ ಲಿಂಬಾವಳಿ ಟಾಂಗ್

    ಕ್ಷಮೆ ಕೇಳೋಕೆ ಸಿದ್ಧ, ಒತ್ತುವರಿ ತೆರವು ಮಾಡಿಸಿ- ಕಾಂಗ್ರೆಸ್‍ಗೆ ಲಿಂಬಾವಳಿ ಟಾಂಗ್

    ಬೆಂಗಳೂರು: ಮಹಿಳೆಯ ಮೇಲೆ ದರ್ಪ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶಾಸಕ ಅರವಿಂದ ಲಿಂಬಾವಳಿ ಸ್ಪಷ್ಟನೆ ನೀಡುವ ಮೂಲಕ ಕಾಂಗ್ರೆಸ್‍ಗೆ ಟಾಂಗ್ ನೀಡಿದ್ದಾರೆ.

    ಬೆಳ್ಳಂದೂರು ಬಳಿ ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಮಹಿಳೆಯ ಜೊತೆ ಕ್ಷಮೆ ಕೇಳೋಕೆ ಸಿದ್ಧನಿದ್ದೇನೆ. ನೀವು ನಿಮ್ಮ ಕಾರ್ಯಕರ್ತೆಯ ಕಟ್ಟಡ ಒತ್ತುವರಿ ತೆರವು ಮಾಡಿಸಿ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಮನವಿ ಸಲ್ಲಿಸಲು ಬಂದ ಮಹಿಳೆಗೆ ಗದರಿದ ಅರವಿಂದ ಲಿಂಬಾವಳಿ

    ಅರೋಪಗಳನ್ನು ಮಾಡುತ್ತಾರೆ. ಆದರೆ ಇದಕ್ಕೆಲ್ಲ ನಾನು ತಲೆಕೆಡಿಸಿಕೊಳಲ್ಲ. ಒತ್ತುವರಿಯಾಗಿರುವ ಜಾಗ ಬಿಡಿ, ಜನರಿಗೆ ತೊಂದರೆಯಿಂದ ತಪ್ಪಿಸಿ ಎಂದು ಹೇಳುವ ಮೂಲಕ ಟಿಜೆಡ್ ಅಪಾರ್ಟ್ ಮೆಂಟ್‌ಗೆ ನೀರು ತುಂಬಿದೆ ನಿಮ್ಮಿಂದ ಎಂದು ಮಹಿಳೆಗೆ ಟಾಂಗ್ ನೀಡಿದರು. ಜನರಿಗೆ ತೊಂದರೆ ಕೊಡೊದೇ ನಿಮ್ಮ ಉದ್ದೇಶನಾ ಎಂದು ಪ್ರಶ್ನಿಸಿದರು.

    ಏನಿದು ಪ್ರಕರಣ..?: ಮಳೆಯಿಂದ ಹಾನಿಗೊಳಗಾದ ಪ್ರದೇಶವಾದ ವರ್ತೂರು ಕೆರೆ ಕೋಡಿ ವೀಕ್ಷಿಸಲು ಅಧಿಕಾರಿಗಳ ಜೊತೆ ಅರವಿಂದ ಲಿಂಬಾವಳಿ ಬಂದಿದ್ದರು. ಈ ವೇಳೆ ಸಮಸ್ಯೆ ಹೇಳಲು ಬಂದ ಮಹಿಳೆಗೆ, ನಿನಗೆ ಮಾನ ಮರ್ಯಾದೆ ಇದ್ಯಾ? ನಿನಗೆ ನಾಚಿಕೆ ಆಗಲ್ವಾ ಎಂದು ಏರು ದನಿಯಲ್ಲಿ ಅವಾಜ್ ಹಾಕಿದ್ದಾರೆ. ನಂತರ ಮಹಿಳೆಯನ್ನು ಸ್ಟೇಷನ್‍ಗೆ ಕರೆದುಕೊಂಡು ಹೋಗಿ ಕೂರಿಸಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಒಬ್ಬ ಜನಪ್ರತಿನಿಧಿಯಾಗಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಅಕ್ಷಮ್ಯ : ಲಿಂಬಾವಳಿ ವಿರುದ್ಧ ಕಾಂಗ್ರೆಸ್ ಕಿಡಿ

    ಶಾಸಕ ಅರವಿಂದ ಲಿಂಬಾವಳಿಯಿಂದ ನಿಂದನೆಗೆ ಒಳಗಾಗಿದ್ದ ಮಹಿಳೆಯ ಮೇಲೆ ಬಿಬಿಎಂಪಿ ಎಂಜಿನಿಯರ್ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ವಿಚಾರಕ್ಕೆ ಕ್ರಮ ಕೈಗೊಳ್ಳಲು ಹೋದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಮಹಿಳೆ ವಿರುದ್ಧ ಆರೋಪಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮನವಿ ಸಲ್ಲಿಸಲು ಬಂದ ಮಹಿಳೆಗೆ ಗದರಿದ ಅರವಿಂದ ಲಿಂಬಾವಳಿ

    ಮನವಿ ಸಲ್ಲಿಸಲು ಬಂದ ಮಹಿಳೆಗೆ ಗದರಿದ ಅರವಿಂದ ಲಿಂಬಾವಳಿ

    ಬೆಂಗಳೂರು: ಮನವಿ ಸಲ್ಲಿಸಲು ಬಂದ ಮಹಿಳೆಗೆ ಶಾಸಕ ಅರವಿಂದ ಲಿಂಬಾವಳಿ ಗದರಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಮಳೆ ಅನಾಹುತ ಪ್ರದೇಶವಾದ ವರ್ತೂರು ಕೆರೆ ಕೋಡಿ ವೀಕ್ಷಿಸಲು ಅಧಿಕಾರಿಗಳ ಜೊತೆ ಅರವಿಂದ ಲಿಂಬಾವಳಿ ಬಂದಿದ್ದರು. ಈ ವೇಳೆ ಸಮಸ್ಯೆ ಹೇಳಲು ಬಂದ ಮಹಿಳೆಗೆ, ನಿನಗೆ ಮಾನ ಮರ್ಯಾದೆ ಇದ್ಯಾ? ನಿನಗೆ ನಾಚಿಕೆ ಆಗಲ್ವಾ ಎಂದು ಏರು ದನಿಯಲ್ಲಿ ಅವಾಜ್ ಹಾಕಿದ್ದಾರೆ. ನಂತರ ಮಹಿಳೆಯನ್ನು ಸ್ಟೇಷನ್‍ಗೆ ಕರೆದುಕೊಂಡು ಹೋಗಿ ಕೂರಿಸಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ 5 ಶಾಸಕರನ್ನು ಕಳೆದುಕೊಂಡ ನಿತೀಶ್ ಕುಮಾರ್ – ಜೆಡಿಯು ಎಂಎಲ್‌ಎಗಳು ಬಿಜೆಪಿಯೊಂದಿಗೆ ವಿಲೀನ

    ನಡೆದಿದ್ದೇನು?
    ಮಹಿಳೆ : ಸರ್ ಒಂದು ನಿಮಿಷ ಸರ್…
    ಶಾಸಕ ಅರವಿಂದ ಲಿಂಬಾವಳಿ: ಹೇ.. ಕೊಡಮ್ಮ ಇಲ್ಲಿ…. ಹೇಯ್…. ಕೊಡೆ ಇಲ್ಲಿ…
    ಮಹಿಳೆ: ಸರ್ ಇದು ಡಾಕ್ಯುಮೆಂಟ್… ಸ್ವಲ್ಪ ಇರಿ ಸರ್. ಕೇಳಿಸ್ಕೊಳಿ..
    ಶಾಸಕ ಅರವಿಂದ ಲಿಂಬಾವಳಿ: ಹೇ.. ಇವಳನ್ನು ಪೊಲೀಸ್ ಕರೆಸಿ ಕಳಿಸು..
    ಮಹಿಳೆ: ಇರಿ ಸರ್. ಸ್ವಲ್ಪ ಇರಿ ಸರ್..
    ಶಾಸಕ ಅರವಿಂದ ಲಿಂಬಾವಳಿ: ಹೇಯ್… ಏನ್ ಕೇಳಿಸ್ಕೊಳೋದು.. ಮುಚ್ಚುಬಾಯಿ…
    ಮಹಿಳೆ: ಸರ್ ಏನ್ ಸರ್.. ಸ್ವಲ್ಪ ಮರ್ಯಾದೆ ಕೊಡಿ… ಮಹಿಳೆ ಅಂತಾ…
    ಶಾಸಕ ಅರವಿಂದ ಲಿಂಬಾವಳಿ: ಏನ್ ಮರ್ಯಾದೆ ನಿಂಗೆ.. ಒತ್ತುವರಿ ಮಾಡಿದ್ದಲ್ಲದೇ, ಮರ್ಯಾದೆ ಬೇರೆ ಕೊಡಬೇಕಾ ನಿಂಗೆ..
    ಮಹಿಳೆ: ಸ್ವಲ್ಪ ಡಾಂಕ್ಯುಮೆಂಟ್ ಪರಿಶೀಲಿಸಿ ನೋಡಿ ಸರ್.. ಆಮೇಲೆ ತೀರ್ಮಾನ ಮಾಡಿ.. ನಾನೆಲ್ಲಿ ಒತ್ತುವರಿ ಮಾಡಿದ್ದೀನಿ…
    ಶಾಸಕ ಅರವಿಂದ ಲಿಂಬಾವಳಿ: ಮರ್ಯಾದೆ ಅಲ್ಲ.. ನಂಗೆ ಬೇರೆ ಭಾಷೆ ಬರುತ್ತದೆ… ಬೇರೆ ಭಾಷೆ ಬಳಸಬೇಕಾಗುತ್ತದೆ…
    ಮಹಿಳೆ: ಸರ್ ಹಾಗೆಲ್ಲಾ ಮಾತನಾಡಬೇಡಿ…
    ಶಾಸಕ ಅರವಿಂದ ಲಿಂಬಾವಳಿ: ಬೇರೆ ಭಾಷೆ ಬರುತ್ತದೆ ನನಗೆ…
    ಮಹಿಳೆ: ಏನ್ ಮಾತನಾಡುತ್ತಿದ್ದೀರಾ ನೀವು… ಬಿಡಲ್ಲ ನಾನು…
    ಶಾಸಕ ಅರವಿಂದ ಲಿಂಬಾವಳಿ: ನಾನು ಬಿಡಲ್ಲ ನಿನ್ನ.. ನಡಿ ಪೊಲೀಸ್ ಸ್ಟೇಷನ್‍ಗೆ… ಕತ್ತು ಹಿಡಿದು ಒಳಗೆ ಹಾಕಿಸುತ್ತೇನೆ..
    ಮಹಿಳೆ: ಸರ್ ನಾನು ನ್ಯಾಯ ಕೇಳುತ್ತಿದ್ದೇನೆ…
    ಶಾಸಕ ಅರವಿಂದ ಲಿಂಬಾವಳಿ: ಒತ್ತುವರಿ ಮಾಡಿ ನ್ಯಾಯ ಕೇಳ್ತಿಯಾ? ನಾಚಿಕೆ ಆಗಲ್ವಾ ನಿನಗೆ

    ಇದೀಗ ಶಾಸಕ ಅರವಿಂದ ಲಿಂಬಾವಳಿಯಿಂದ ನಿಂದನೆಗೆ ಒಳಗಾಗಿದ್ದ ಮಹಿಳೆಯ ಮೇಲೆ ಬಿಬಿಎಂಪಿ ಎಂಜಿನಿಯರ್ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ವಿಚಾರಕ್ಕೆ ಕ್ರಮ ಕೈಗೊಳ್ಳಲು ಹೋದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಮಹಿಳೆ ವಿರುದ್ಧ ಆರೋಪಿಸಲಾಗಿದೆ. ಇದನ್ನೂ ಓದಿ: 2 ದಿನಗಳಿಂದ ದೇವರ ದರ್ಶನ ಇಲ್ಲ – ಮುರುಘಾ ಶ್ರೀಗಳ ಬಗ್ಗೆ ಮಠದ ಮಕ್ಕಳ ಮಾತು

    ಮತ್ತೊಂದೆಡೆ ಶಾಸಕ ಅರವಿಂದ ಲಿಂಬಾವಳಿ ವರ್ತನೆಯನ್ನು ಮಹಾದೇವಪುರ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಧ್ಯಕ್ಷ ಅಶೋಕ್ ಮೃತ್ಯುಂಜಯ ಖಂಡಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ತಪ್ಪು ಮಾಡಿದ್ರೆ ಶಿಕ್ಷಿಸಲು ಕಾನೂನು ಇದೆ.  ಇದೇನು ನಿಮ್ಮ ಮಾತುಗಳು? ನಿಮ್ಮ ಸ್ಥಾನಕ್ಕೆ ಶೋಭೆ ತರುವುದೆ? ಅಧಿಕಾರ ಶಾಶ್ವತ ಅಲ್ಲ, ಅದೇತಕೆ ಇಷ್ಟು ದರ್ಪ?’ ಬಯ್ಯೋದಕ್ಕೆ ನೀವ್ಯಾರು ಅಂತಾ ತರಾಟೆಗೆ ತೆಗೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನು ಯಾರ ಮಗಳು ಗೊತ್ತಾ? – ಟ್ರಾಫಿಕ್ ಪೊಲೀಸರಿಗೆ ಆವಾಜ್‌ ಹಾಕಿದ ಅರವಿಂದ ಲಿಂಬಾವಳಿ ಪುತ್ರಿಗೆ 10,000 ಫೈನ್‌

    ನಾನು ಯಾರ ಮಗಳು ಗೊತ್ತಾ? – ಟ್ರಾಫಿಕ್ ಪೊಲೀಸರಿಗೆ ಆವಾಜ್‌ ಹಾಕಿದ ಅರವಿಂದ ಲಿಂಬಾವಳಿ ಪುತ್ರಿಗೆ 10,000 ಫೈನ್‌

    ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲದೇ ಪೊಲೀಸರಿಗೆ ಆವಾಜ್ ಹಾಕಿದ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿಗೆ 10,000 ರೂ. ದಂಡ ವಿಧಿಸಲಾಗಿದೆ.

    ಟ್ರಾಫಿಕ್ ಪೊಲೀಸರು ತಪಾಸಣೆ ವೇಳೆ ಕಾರು ತಡೆದ ಹಿನ್ನೆಲೆಯಲ್ಲಿ ಸಿಟ್ಟಾದ ಲಿಂಬಾವಳಿ ಪುತ್ರಿ, ಕಾರಿನಿಂದ ಇಳಿದ ಕೂಡಲೇ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ನಾನು MLA ಅರವಿಂದ ಲಿಂಬಾವಳಿ ಮಗಳು ಗೊತ್ತಾ? ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾರೆ. ಅಲ್ಲದೆ ಇದು MLA ಗಾಡಿ, ನಾನು ಅರವಿಂದ ಲಿಂಬಾವಳಿ ಅವರ ಪುತ್ರಿ ಎಂದು ವಾಗ್ವಾದ ನಡೆಸಿದ್ದಾರೆ. ಇದನ್ನೂ ಓದಿ: ನಿಖಿಲ್ ಕುಮಾರ್ ಸ್ವಾಮಿ ಮಗನ ಪೂರ್ತಿ ಹೆಸರು ಅವ್ಯನ್ ದೇವ್ ಎನ್.ಕೆ : ಈ ಹೆಸರು ಸೂಚಿಸಿದ್ದು ಯಾರು?

    10 ಸಾವಿರ ದಂಡ ಕೊಟ್ಟ ಬಳಿಕ ಕಾರುಬಿಟ್ಟ ಪೊಲೀಸರು: ರ‍್ಯಾಷ್ ಡ್ರೈವಿಂಗ್ ಮಾಡಿಕೊಂಡು ಬಂದಿದ್ದಲ್ಲದೆ ಟ್ರಾಫಿಕ್ ಪೊಲೀಸರಿಗೇ ಆವಾಜ್ ಹಾಕಿದ ಶಾಸಕ ಅರವಿಂದ ಲಿಂಬಾವಳಿ ಪುತ್ರಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ. 10 ಸಾವಿರ ರೂ. ದಂಡ ಕಟ್ಟಿದ ಬಳಿಕ ಪೊಲೀಸರು ಕಾರನ್ನು ಬಿಟ್ಟು, ಯಾವುದೇ ಪ್ರಕರಣ ದಾಖಲಿಸಿಕೊಳ್ಳದೆ ಕಳುಹಿಸಿದ್ದಾರೆ. 

    ರ‍್ಯಾಷ್ ಡ್ರೈವಿಂಗ್ ಮಾಡಿಕೊಂಡು ಬಂದ ಲಿಂಬಾವಳಿ ಪುತ್ರಿ, ಪೊಲೀಸರಿಗೂ ಕೇರ್ ಮಾಡದೇ ಪೊಲೀಸರ ಮೇಲೆಯೇ ಕಾರು ಹತ್ತಿಸುವಂತೆ ಕಾರು ಚಲಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆನ್ನತ್ತಿದ ಪೊಲೀಸರನ್ನು ನೋಡಿ ಕ್ಯಾಪಿಟಲ್ ಹೋಟೆಲ್ ಒಳಗೆ ಕಾರು ಚಲಾಯಿಸಿದ್ದಾರೆ. ಕಾರು ವಾಪಸ್ ಬರುತ್ತಿದ್ದ ವೇಳೆ ಹೋಟೆಲ್ ಗೇಟ್ ಬಳಿಯೇ ಪೊಲೀಸರು ತಡೆದಿದ್ದಾರೆ. ಈ ವೇಳೆ ಟ್ರಾಫಿಕ್ ಪೊಲೀಸರ ಮೇಲೆಯೇ ದರ್ಪ ತೋರಿ `ನಾನು ಅರವಿಂದ ಲಿಂಬಾವಳಿ ಮಗಳು’ ಎಂದು ಆವಾಜ್ ಹಾಕಿದ್ದಾರೆ. ಇದನ್ನೂ ಓದಿ: ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ

    ಶಾಸಕರ ಹೆಸರು ಹೇಳುತ್ತಿದ್ದಂತೆ ಸೈಲೆಂಟ್ ಆದ ಟ್ರಾಫಿಕ್ ಪೊಲೀಸರು ಯಾವುದೇ ಕೇಸ್ ದಾಖಲಿಸದೇ ಹಾಗೇ ಬಿಟ್ಟು ಕಳುಹಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ, ನಂತರ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

  • ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ನೆರವು ಘೋಷಿಸಿದ ಶಾಸಕ ಅರವಿಂದ ಲಿಂಬಾವಳಿ

    ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ನೆರವು ಘೋಷಿಸಿದ ಶಾಸಕ ಅರವಿಂದ ಲಿಂಬಾವಳಿ

    ಬೆಂಗಳೂರು: ಹತ್ಯೆಯಾಗಿರುವ ಹಿಂದೂ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಶಾಸಕ ಅರವಿಂದ ಲಿಂಬಾವಳಿ ಒಂದು ಲಕ್ಷ ರೂ ನೆರವು ಘೋಷಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಹಿಂದೂ ಕಾರ್ಯಕರ್ತ ಹರ್ಷ ಅವರನ್ನು ಹತ್ಯೆ ಮಾಡಿರುವ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತೇನೆ. ಹರ್ಷರವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

    ನಿನ್ನೆ ನಡೆದ ಆಘಾತಕಾರಿ ಘಟನೆಯಲ್ಲಿ ತಮ್ಮ ಮಗನನ್ನು ಕಳೆದುಕೊಂಡ ಹರ್ಷ ಕುಟುಂಬಸ್ಥರಿಗೆ ನಾನು ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ಪರಿಹಾರ ನೀಡುತ್ತೇನೆ ಮತ್ತು ಎಲ್ಲಾ ನೋವು ಮತ್ತು ದುಃಖಗಳಲ್ಲಿ ಅವರ ಕುಟುಂಬದ ಜೊತೆಗಿರುತ್ತೇನೆ ಎಂದು ಟ್ವೀಟ್ ಮಾಡಿ ಸಹಾಯ ಹಸ್ತವನ್ನು ಚಾಚುವುದಾಗಿ ತಿಳಿಸಿದ್ದಾರೆ.

    ನಡೆದಿದ್ದೇನು?: ಭಾನುವಾರ ರಾತ್ರಿ ಹರ್ಷ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿದೆ. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿದೆ. ಈ ವೇಳೆ ದಾಳಿಗೆ ಒಳಗಾದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಹರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ದೇಶ, ಧರ್ಮಕ್ಕೋಸ್ಕರ ಕೆಲಸ ಮಾಡಿದ ಯುವಕ ಇವತ್ತಿಲ್ಲ: ಕೆ. ಸುಧಾಕರ್

    ಆ ಬಳಿಕದಿಂದ ಶಿವಮೊಗ್ಗ ನಗರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತು. ಇಮದು ಹರ್ಷ ಮೃತದೇಹ ಮೆರವಣಿಗೆ ವೇಳೆ ಕಲ್ಲು ತೂರಾಟ ಹಾಗೂ ವಾಹನಗಳಿಗೆ ಬೆಂಕಿ ಹಚ್ಚುವ ಮೂಲಕ ಹಿಂಸಾಚಾರಕ್ಕ ತಿರುಗಿತು. ಸದ್ಯ ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.  ಇದನ್ನೂ ಓದಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ಕಿಡ್ನಿದಾನ ಮಾಡಿದ ತಾಯಿ!

  • ಬೆಂಗಳೂರಿಗೆ ಆಗಮಿಸಿದ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್

    ಬೆಂಗಳೂರಿಗೆ ಆಗಮಿಸಿದ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್

    ಬೆಂಗಳೂರು: ಕೇಂದ್ರ ರಕ್ಷಣಾ ಸಚಿವರಾದ ರಾಜ್‍ನಾಥ್ ಸಿಂಗ್ ಅವರು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ.

    ಹೆಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್ ಹಾಗೂ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ರಕ್ಷಣಾ ಸಚಿವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ರಾಜ್‍ನಾಥ್ ಸಿಂಗ್, ರಾಜಭವನಕ್ಕೆ ಭೇಟಿ ನೀಡಿ ನಂತರ ಕೇಂದ್ರ ಸಂಸದೀಯ ವ್ಯವಹಾರ ಸಚಿವರಾದ ಪ್ರಹ್ಲಾದ್ ಜೋಶಿ ಅವರ ಪುತ್ರಿಯ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಗೆ ಅಮಿತ್ ಶಾರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸಿಎಂ

    ಅಮಿತ್ ಶಾ ರಾಜ್ಯ ಪ್ರವಾಸ:
    ಸೆಪ್ಟೆಂಬರ್ 2 ರಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ರಾಜ್ಯ ಪ್ರವಾಸಕೈಗೊಂಡಿದ್ದರು. ಲೋಕಸಭಾ ಅಧ್ಯಕ್ಷ ಓಂ ಪ್ರಕಾಶ್ ಬಿರ್ಲಾ ಹಾಗೂ ಕೇಂದ್ರ ಸರ್ಕಾರದ ಸಚಿವರುಗಳೊಂದಿಗೆ ಕರ್ನಾಟಕ ರಾಜ್ಯ ಪ್ರವಾಸ ಕೈಗೊಂಡಿದ್ದ ಅಮಿತ್ ಶಾ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದರು. ಈ ವೇಳೆ ಬೊಮ್ಮಾಯಿ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅವರನ್ನೆಲ್ಲ ಆತ್ಮೀಯವಾಗಿ ಬರಮಾಡಿಕೊಂಡರು. ಇದನ್ನೂ ಓದಿ: ರಾಜ್ಯಾದ್ಯಂತ ಮಳೆಯ ಅಬ್ಬರ – ಮತ್ತೆ ಪ್ರವಾಹ ಭೀತಿ

    ಅಮಿತ್ ಶಾ ಅವರಿಗೆ ಶಾಲುಹೊದಿಸಿ, ಹಾರ ತೊಡಿಸಿದ ಸಿಎಂ ಲೇಖಕ ದೀಪಕ್ ಚೋಪ್ರಾ ಬರೆದಿರುವ ಬುದ್ಧ- ದ ಸ್ಟೋರಿ ಆಫ್ ಎನಲೈಟ್‍ಮೆಂಟ್ ಪುಸ್ತಕವನ್ನು ನೀಡಿದ್ದರು.

  • ತುಳು ಲಿಪಿ ಯೂನಿಕೋಡ್ ನಕಾಶೆ ಸೇರ್ಪಡೆಗೆ ಕ್ರಮ- ಅರವಿಂದ ಲಿಂಬಾವಳಿ

    ತುಳು ಲಿಪಿ ಯೂನಿಕೋಡ್ ನಕಾಶೆ ಸೇರ್ಪಡೆಗೆ ಕ್ರಮ- ಅರವಿಂದ ಲಿಂಬಾವಳಿ

    ಬೆಂಗಳೂರು: ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯು ಬಹು ಕಾಳಜಿಯಿಂದ ಇತಿಹಾಸದ ದಾಖಲೆಗಳನ್ನು ಆಧರಿಸಿ ರೂಪಿಸಿದ ತುಳು ಲಿಪಿಯನ್ನು ಸೂಕ್ತವಾಗಿ ಯುನಿಕೋಡ್‌ ನಕಾಶೆ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲು ಅಕಾಡೆಮಿಗೆ ಸೂಚಿಸಲಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

    ಈ ಕ್ರಮದಿಂದಾಗಿ ತುಳು ಲಿಪಿಯು ಯುನಿಕೋಡ್‌ ನಕಾಶೆಯಲ್ಲಿ ಅಧಿಕೃತವಾಗಿ ಸೇರ್ಪಡೆಯಾಗುವ ಕಾರ್ಯವು ವೇಗ ಪಡೆಯಲಿದೆ ಎಂದು ಹೇಳಿರುವ ಅವರು ಸುಮಾರು ಹತ್ತು ವರ್ಷಗಳಿಂದ ತುಳು ಲಿಪಿಯನ್ನು ರೂಪಿಸುವ ಬಗ್ಗೆ ಹಲವು ಚರ್ಚೆಗಳು ನಡೆದಿದ್ದವು. ಅಂತಿಮವಾಗಿ ತುಳು ಭಾಷಾ ಮತ್ತು ಲಿಪಿ ತಜ್ಞರು ಸರ್ವಾನುಮತಿಯಿಂದ ರೂಪಿಸಿದ ತುಳು ಲಿಪಿ ಪಟ್ಟಿಯನ್ನು ಅಕಾಡೆಮಿಯು ಅಂಗೀಕರಿಸಿ ಯುನಿಕೋಡ್‌ ನಕಾಶೆಗೆ ಸೇರಿಸಲು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

    ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತುಳು ಲಿಪಿ ಪಟ್ಟಿಯನ್ನು ಪರಾಮರ್ಶಿಸಿ ಅನುಮೋದಿಸಲು ಮೈಸೂರಿನಲ್ಲಿರುವ ಕೇಂದ್ರ ಸರ್ಕಾರದ ಭಾರತೀಯ ಭಾಷಾ ಸಂಸ್ಥಾನಕ್ಕೆ ಕರ್ನಾಟಕ ಸರ್ಕಾರದಿಂದ ಕೋರಲಾಗಿತ್ತು. ಭಾಭಾ ಸಂಸ್ಥಾನವು ಇದಕ್ಕಾಗಿ ಭಾಷಾ ತಜ್ಞರ ಸಮಿತಿಯನ್ನು ರಚಿಸಿ, ಚರ್ಚಿಸಿ ಲಿಪಿ ಪಟ್ಟಿಯನ್ನು ಅನುಮೋದಿಸಿ, ಯುನಿಕೋಡ್‌ ಕನ್ಸಾರ್ಶಿಯಂಗೆ ಸಲ್ಲಿಸಲು ಶಿಫಾರಸು ಮಾಡಿತು. ಅದರಂತೆ ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತುಳು ಅಕಾಡೆಮಿಗೆ ಪತ್ರ ಬರೆಯಲಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಅಲ್ಲದೆ ಯುನಿಕೋಡ್‌ ನಕಾಶೆಗೆ ಸೇರಿಸಲು ಅಗತ್ಯವಿರುವ ಇನ್ನಿತರೆ ತಾಂತ್ರಿಕ ಅಂಶಗಳ ಬಗ್ಗೆಯೂ ಗಮನ ಕೊಡುವಂತೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು.

    ತುಳು ಲಿಪಿಯನ್ನು ಯುನಿಕೋಡ್‌ ನಕಾಶೆಗೆ ತಕ್ಕಂತೆ ರೂಪಿಸುವಲ್ಲಿ ಶ್ರಮವಹಿಸಿದ ಎಲ್ಲ ತಜ್ಞರಿಗೂ ಸಚಿವ ಅರವಿಂದ ಲಿಂಬಾವಳಿ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ : 8ನೇ ಪರಿಚ್ಛೇದಕ್ಕೆ ತುಳು – ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ ಎಂದ ಕಟೀಲ್ 

    ಡಿಜಿಟಲ್‌ ವೇದಿಕೆಗಳಲ್ಲಿ, ಮುದ್ರಿತ ಸಾಹಿತ್ಯದಲ್ಲಿ, ಪ್ರಚಾರ ಸಾಹಿತ್ಯದಲ್ಲಿ – ಹೀಗೆ ತುಳು ಲಿಪಿಯು ಹೆಚ್ಚು ಹೆಚ್ಚು ಬಳಕೆಗೆ ಬಂದರೆ ಲಿಪಿಯನ್ನು ರೂಪಿಸಿದ್ದಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ ಎಂದಿರುವ ಅವರು  ಕರ್ನಾಟಕದ ಇತಿಹಾಸದಲ್ಲಿ ಒಂಬತ್ತು ಶತಮಾನಗಳ ಅತಿದೀರ್ಘವಾದ ಆಡಳಿತವನ್ನು ನಡೆಸಿದ ಖ್ಯಾತಿಯನ್ನು ಹೊಂದಿದ ತುಳು ಸಂಸ್ಕೃತಿಯ ಪ್ರತೀಕವಾದ ತುಳು ಲಿಪಿಯು ಯುನಿಕೋಡ್‌ಗೆ ಸೇರುತ್ತಿರುವುದಕ್ಕೆ ಲಕ್ಷಾಂತರ ತುಳು ಭಾಷಿಗರು ತೋರಿದ ಸಂಭ್ರಮದಲ್ಲಿ ಭಾಗಿಯಾಗಲು ನನಗೂ ಹರ್ಷವಾಗುತ್ತಿದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

    ಕನ್ನಡ ನಾಡಿನ ಉಳಿದೆಲ್ಲ ಭಾಷೆಗಳಂತೆಯೇ ತುಳು ಭಾಷೆ, ಸಂಸ್ಕೃತಿಯ ಉಳಿವು, ಬೆಳವಣಿಗೆಗಾಗಿ ನಮ್ಮ ಸರ್ಕಾರದ ಪ್ರಯತ್ನವು ನಿರಂತರವಾಗಿ ನಡೆಯುತ್ತದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

  • ಸುಮಲತಾ ಏಕಾಂಗಿಯಾಗಿ ಗೆದ್ದಿದ್ದಾರೆ ಏಕಾಂಗಿಯಾಗಿ ಎದುರಿಸ್ತಾರೆ: ಲಿಂಬಾವಳಿ

    ಸುಮಲತಾ ಏಕಾಂಗಿಯಾಗಿ ಗೆದ್ದಿದ್ದಾರೆ ಏಕಾಂಗಿಯಾಗಿ ಎದುರಿಸ್ತಾರೆ: ಲಿಂಬಾವಳಿ

    ಉಡುಪಿ: ಕೆಆರ್‍ಎಸ್ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಕಚ್ಚಾಟ ನಡೆಯುತ್ತಿದೆ. ಸುಮಲತಾಗೆ ಬಿಜೆಪಿ ಬೆಂಬಲ ಬೇಕಾಗಿಲ್ಲ. ಅವರು ಏಕಾಂಗಿಯಾಗಿ ಗೆದ್ದವರು ಏಕಾಂಗಿಯಾಗಿ ಹೋರಾಡುತ್ತಾರೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಲಿಂಬಾವಳಿ ಅವರು, ಇಬ್ಬರೂ ರಾಜಕಾರಣದ ಮಟ್ಟವನ್ನು ಮೀರಿ ಟೀಕೆ ಮಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ಥರ ಕಚ್ಚಾಡುವುದು, ಯಾರಿಗೂ ಶೋಭೆ ತರುವಂತದ್ದಲ್ಲ ಇಬ್ಬರು ಯೋಚನೆ ಮಾಡಲಿ. ಕೆಆರ್‍ಎಸ್ ನಿಜವಾಗಿ ಬಿರುಕು ಬಿಟ್ಟಿದ್ದರೆ, ರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದ್ದು. ಆ ಕೆಲಸವನ್ನು ನೀರಾವರಿ ಇಲಾಖೆ ನಿಶ್ಚಿತವಾಗಿ ಕೈಗೆತ್ತಿಕೊಳ್ಳುತ್ತದೆ. ಪರಸ್ಪರ ಆರೋಪಗಳನ್ನು ಮಾಡಿಕೊಳ್ಳೋದು ಶೋಭೆಯಲ್ಲ. ಇಲ್ಲಿ ವೈಯಕ್ತಿಕ ವಿಚಾರ, ಹಳೇ ಜಟಾಪಟಿಯನ್ನು ಮುಂದುವರೆಸೋದು ಸರಿಯಲ್ಲ ಎಂದರು.

    ಉಡುಪಿ ಜಿಲ್ಲೆ ಕಾರ್ಕಳದ ರಾಧಾಕೃಷ್ಣ ಹಿರ್ಗಾನ ಎಂಬ ವ್ಯಕ್ತಿಯು ಸೈನ್ಯವನ್ನು ಅವಹೇಳನ ಮಾಡಿ ಫೇಸ್‍ಬುಕ್ ಪೋಸ್ಟ್ ಹಾಕಿದ ವಿಚಾರದಲ್ಲಿ ಸಿದ್ದರಾಮಯ್ಯ ಆತನ ಪರ ಟ್ವೀಟ್ ಮಾಡಿರೋದು ಸರಿಯಲ್ಲ. ಸೈನ್ಯವನ್ನು ಅವಹೇಳನ ಮಾಡಿದ ವ್ಯಕ್ತಿಗೆ ಸಿದ್ದರಾಮಯ್ಯ ಬೆಂಬಲ ನೀಡುತ್ತಿದ್ದಾರೆ ಎಂದು ಅರವಿಂದ ಲಿಂಬಾವಳಿ ಟೀಕಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ಅವಕಾಶ- ತೀರ್ಥ, ಪ್ರಸಾದ ಇಲ್ಲ

    ಭಾರತೀಯ ಸೈನಿಕರನ್ನು ಕೊಲ್ಲಿ ಎಂದ ವಿಚಾರವನ್ನು ಖಂಡಿಸಬೇಕಿತ್ತು. ಸಿದ್ದರಾಮಯ್ಯ ಅವರು ಹಿರಿಯ ರಾಜಕಾರಣಿ. ಈ ಥರ ಯಾರಾದರೂ ಹೇಳಿದ್ದರೆ ಯಾವುದೇ ಭಾರತೀಯನಿಗೆ ಸಹಜವಾಗಿ ಸ್ವಾಭಿಮಾನ ಕೆರಳುತ್ತದೆ, ಸಿದ್ದರಾಮಯ್ಯ ಆತನನ್ನು ಬೆಂಬಲಿಸಿರುವುದು ಸರಿಯಲ್ಲ. ನಮ್ಮ ಕಾರ್ಯಕರ್ತರ ಮೇಲೆ ಕ್ರಮ ಜರುಗಿಸಿದ್ದು ತಪ್ಪು ಎನ್ನುತ್ತಾರೆ. ಸಿದ್ದರಾಮಯ್ಯ ತಮ್ಮ ಹೇಳಿಕೆ ಹಿಂಪಡೆಯುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.