Tag: ಅರವಿಂದ ಲಿಂಬಾವಳಿ

  • ಮಾಜಿ ಸಚಿವ ಅರವಿಂದ ಲಿಂಬಾವಳಿಗೆ ಮಾತೃ ವಿಯೋಗ

    ಮಾಜಿ ಸಚಿವ ಅರವಿಂದ ಲಿಂಬಾವಳಿಗೆ ಮಾತೃ ವಿಯೋಗ

    ಬಾಗಲಕೋಟೆ: ಮಾಜಿ ಸಚಿವ ಅರವಿಂದ ಲಿಂಬಾವಳಿ (Arvind Limbavali) ತಾಯಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

    ಬಾಗಲಕೋಟೆ (Bagalkote) ನಗರದ ದೀಪಂ ಕಾಲೋನಿಯಲ್ಲಿ ಭೀಮಾಬಾಯಿ ಲಿಂಬಾವಳಿ(84) ನೆಲೆಸಿದ್ದರು. ಇಂದು ಬೆಳಗ್ಗೆ 4 ಗಂಟೆಗೆ ಅವರು ಮನೆಯಲ್ಲೇ ಮೃತಪಟ್ಟಿದ್ದಾರೆ.

    ಇಂದು ಸಂಜೆ ತುಳಸಿಗೇರಿಯ ಹೊಲದಲ್ಲಿ ಅಂತ್ಯಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ. ಮೃತರಿಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಐವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಇದನ್ನೂ ಓದಿ: ಬಾಗಲಕೋಟೆ | ಸಹಪಾಠಿಗಳಿಂದ ರ‍್ಯಾಗಿಂಗ್ ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ


    ತಾಯಿಯ ಪ್ರೀತಿ, ಮಮತೆ ಮತ್ತು ಆಶೀರ್ವಾದ ನಮ್ಮ ಹೃದಯದಲ್ಲಿ ಸದಾ ಹಸಿರಾಗಿರುತ್ತದೆ. ಜೀವನದಲ್ಲಿ ಅವರು ಕಲಿಸಿದ ಸರಳತೆ ಮತ್ತು ನೀತಿ ಪಾಠಗಳು ನನಗೆ ಸನ್ಮಾರ್ಗದಲ್ಲಿ ನಡೆಯಲು ಸದಾ ಪ್ರೇರಣೆ ನೀಡುತ್ತಿರುತ್ತವೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಕೋರುತ್ತೇನೆ ಎಂದು ಲಿಂಬಾವಳಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

  • ಗುಜರಾತ್ ರೀತಿ ಕಾಂಗ್ರೆಸ್ ಸರ್ಕಾರ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಎದೆಗಾರಿಕೆ ತೋರಿಸಲಿ: ಅರವಿಂದ ಲಿಂಬಾವಳಿ

    ಗುಜರಾತ್ ರೀತಿ ಕಾಂಗ್ರೆಸ್ ಸರ್ಕಾರ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಎದೆಗಾರಿಕೆ ತೋರಿಸಲಿ: ಅರವಿಂದ ಲಿಂಬಾವಳಿ

    ಬೆಂಗಳೂರು: ವಕ್ಫ್ ವಿರೋಧಿ ಹೋರಾಟ ಬಳಿಕ ಅಕ್ರಮ ಬಾಂಗ್ಲಾ ನಿವಾಸಿಗಳ (Illegal Bangladeshi Residents) ವಿರುದ್ಧ ಹೋರಾಟಕ್ಕೆ ಬಿಜೆಪಿ (BJP) ಭಿನ್ನಮತೀಯ ನಾಯಕರು ಮುಂದಾಗಿದ್ದಾರೆ.

    ಮಹಾದೇವಪುರ (Mahadevapura) ವಿಧಾನಸಭೆ ಕ್ಷೇತ್ರದಲ್ಲಿಂದು ಬಿಜೆಪಿ ರೆಬೆಲ್‌ಗಳ ಟೀಮ್ ಅಕ್ರಮ ವಲಸಿಗರ ವಿರುದ್ಧ ಬೃಹತ್ ಜನಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ ಎಂ ಸಿದ್ದೇಶ್ವರ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಾಸಕಿ ಮಂಜುಳಾ ಲಿಂಬಾವಳಿ, ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಮಾಜಿ ಸಂಸದರಾದ ಬಿ ವಿ ನಾಯಕ್, ಪ್ರತಾಪ್ ಸಿಂಹ, ಶಾಸಕ ಬಿ ಪಿ ಹರೀಶ್ ಭಾಗವಹಿಸಿದ್ದರು.

    ಕಾರ್ಯಕ್ರಮದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಗಡೀಪಾರು ಸಂಬಂಧ ರಾಜ್ಯ ಸರ್ಕಾರ (Karnataka Government) ನಿರ್ಲಕ್ಷ್ಯ ವಹಿಸಿದೆ. ಅಪರಾಧ, ಭಯೋತ್ಪಾದನಾ ಚಟುವಟಿಕೆಗಳಲ್ಲಿ ಅಕ್ರಮ ವಲಸಿಗರು ಭಾಗವಹಿಸಿ ದೇಶದ ಭದ್ರತೆಗೆ ಸವಾಲಾಗಿದ್ದಾರೆ. ಗುಜರಾತ್ ಮಾದರಿಯಲ್ಲಿ ರಾಜ್ಯ ಸರ್ಕಾರವು ಅಕ್ರಮ ವಲಸಿಗರ ಗಡೀಪಾರಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಅಕ್ರಮ ಮುಸ್ಲಿಂ ವಲಸಿಗರು ಭಯೋತ್ಪಾದನೆ, ಜನೋತ್ಪಾದನೆಯಲ್ಲಿ ತೊಡಗಿದ್ದಾರೆ: ಪ್ರತಾಪ್ಸಿಂಹ

    ಇನ್ನು ಇದೇವೇಳೆ ಮಹಾದೇವಪುರ ಕ್ಷೇತ್ರದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ನಿವಾಸಿಗಳ ಕುರಿತು ಕುರು ಸಾಕ್ಷ್ಯಚಿತ್ರ ಪ್ರದರ್ಶನ ಪ್ರಸಾರ ಮಾಡಿದ್ದಲ್ಲದೇ ಕಿರು ಪುಸ್ತಕ ಬಿಡುಗಡೆಗೊಳಿಸಲಾಯ್ತು. ಅಲ್ರಮ ವಲಸಿಗರ ವಿರುದ್ಧದ ಈ ಜನಜಾಗೃತಿ ಅಭಿಯಾಮವನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವುದಾಗಿ ಬಿಜೆಪಿ ಭಿನ್ನ ನಾಯಕರು ನಿರ್ಧಾರ ಪ್ರಕಟಿಸಿದರು.

    ಇದೇವೇಳೆ ಕಾರ್ಯಕ್ರಮದಲ್ಲಿ ಮಾತಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ (Aravind Limbavali), ಅಕ್ರಮ ವಲಸಿಗರ ವಿಚಾರದಲ್ಲಿ ಗುಜರಾತ್ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಎದೆಗಾರಿಕೆ ತೋರಬೇಕು ಎಂದು ಬಿಜೆಪಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಆಗ್ರಹಿಸಿದರು.

    ಅಕ್ರಮ ವಲಸಿಗರ ವಿಚಾರದಲ್ಲಿ ಸಿದ್ದರಾಮಯ್ಯ ರಾಜಕಾರಣ ಮಾಡಬಾರದು. ವಲಸಿಗರ ವಿಚಾರದಲ್ಲಿ ರಾಜ್ಯ ಸರ್ಕಾರ ಸಾಫ್ಟ್ ಆಗಿದೆ. ಗುಜರಾತ್‌ನಲ್ಲಿ ಇತ್ತೀಚೆಗೆ ಎರಡು ಸಾವಿರಕ್ಕೂ ಹೆಚ್ಚು ಅಕ್ರಮ ವಲಸಿಗರ ಗಡೀಪಾರು ಮಾಡಲಾಯ್ತು.‌ ರಾಜ್ಯ ಸರ್ಕಾರವೂ ಆ ಕೆಲಸ ಮಾಡಲಿ. ಅಕ್ರಮ ವಲಸಿಗರಿಗೆ ಯಾವುದೋ ಒತ್ತಡದ ಕಾರಣಕ್ಕೆ ಅವಕಾಶ ಕೊಟ್ರೆ ಕರ್ನಾಟಕ ಪಶ್ಚಿಮ ಬಂಗಾಳ ಆಗುತ್ತೆ. ಯಾರ್ಯಾರು ಅಕ್ರಮವಾಗಿ ಬಂದಿದ್ದಾರೋ ಅವರನ್ನು ವಾಪಸ್ ಕಳಿಸಿ ಎಂದು ಒತ್ತಾಯಿಸಿದರು.

     

    ಅಕ್ರಮ ವಲಸಿಗರಿಗೆ ಫೇಕ್ ಆಧಾರ್ ಕಾರ್ಡ್ ಮಾಡಿಕೊಡುವ ಜಾಲ ಬೆಂಗಳೂರಿನಲ್ಲಿ ಇದೆ. ಅದಕ್ಕಾಗಿ ಏಜೆನ್ಸಿಗಳೂ ಇವೆ. ಪೊಲೀಸರು ವಲಸಿಗರ ಮೊಬೈಲ್ ಪರಿಶೀಲಿಸಿದ್ರೆ ಅವರ ಜಾತಕವೇ ಗೊತ್ತಾಗುತ್ತೆ. ಈ ಕೆಲಸ ಸರ್ಕಾರ, ಪೊಲೀಸ್ ಬದ್ಧತೆಯಿಂದ ಮಾಡಬೇಕು. ಅಕ್ರಮ ವಲಸಿಗರನ್ನು ಕೆಲಸಕ್ಕೆ ಯಾರೂ ಸೇರಿಸಿಕೊಳ್ಳದಂತೆ ಕರೆ ನೀಡಿದರು. ಇದನ್ನೂ ಓದಿ: ಇನ್ಮುಂದೆ ಸರ್ಕಾರಿ ಬಸ್ಸಿನಲ್ಲಿ ಪ್ರಾಣಿಗಳ ಜೊತೆ ಟಯರ್‌, ಫ್ರಿಡ್ಜ್‌, ವಾಷಿಂಗ್ಮೆಷಿನ್ಸಾಗಿಸಬಹುದು! –ಯಾವುದಕ್ಕೆ ಎಷ್ಟು ದರ?

    ಇನ್ನು ಇದೇವೇಳೆ ಪೊಲೀಸ್ ಒಬ್ಬರು ಮೊಬೈಲ್‌ನಲ್ಲಿ ತಮ್ಮ ಭಾಷಣ ರೆಕಾರ್ಡ್ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿ ಗರಂ ಆದ ಲಿಂಬಾವಳಿ,ಇಲ್ಲಿ ಬಂದು ರೆಕಾರ್ಡ್ ಮಾಡೋದೇಕೆ? ನಾವು ದೇಶಭಕ್ತರು. ಅಕ್ರಮ ವಲಸಿಗರನ್ನು ಹೋಗಿ ರೆಕಾರ್ಡ್ ಮಾಡಲು ತಾಕತ್ ಇದೆಯಾ ಕಿಡಿಕಾರಿದರು.

    ಇದು ಬಿಜೆಪಿ ಅಸಮಧಾನಿತರ ಹೋರಾಟ ಅಂತ ಮಾಧ್ಯಮಗಳು ಬರೆಯುತ್ತವೆ. ನಾವು ಅಸಮಾಧಾನಿತ ಹೋರಾಟವಲ್ಲ. ನಮ್ಮದು ದೇಶ ಉಳಿಸುವ ಹೋರಾಟ ಎಂದು ಲಿಂಬಾವಳಿ ಸ್ಪಷ್ಟಪಡಿಸಿದರು.

  • ನಾವು ಯಾರಿಗೂ ಎಚ್ಚರಿಕೆ ಕೊಡದೇ ಜನಜಾಗೃತಿ ಮಾಡುವ ಕೆಲಸ ಮಾತ್ರ ಮಾಡಲಿದ್ದೇವೆ – ಅರವಿಂದ ಲಿಂಬಾವಳಿ

    ನಾವು ಯಾರಿಗೂ ಎಚ್ಚರಿಕೆ ಕೊಡದೇ ಜನಜಾಗೃತಿ ಮಾಡುವ ಕೆಲಸ ಮಾತ್ರ ಮಾಡಲಿದ್ದೇವೆ – ಅರವಿಂದ ಲಿಂಬಾವಳಿ

    ಬೀದರ್: ನಾವು ಯಾರಿಗೂ ಎಚ್ಚರಿಕೆ ಕೊಡದೆ, ಜನಜಾಗೃತಿ ಮಾಡುವ ಕೆಲಸ ಮಾತ್ರ ಮಾಡಲಿದ್ದೇವೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ (Arvind Limbavali) ಹೇಳಿದ್ದಾರೆ.

    ಗಡಿ ಜಿಲ್ಲೆಯಲ್ಲಿ ಬಿಜೆಪಿ ರೆಬಲ್ಸ್ ಟೀಂ ಇಂದಿನಿಂದ (ನ.25) ವಕ್ಫ್ (Waqf Board) ವಿರುದ್ಧ ಹೋರಾಟ ಆರಂಭಿಸಿದೆ. ವಕ್ಫ್ ಹಠಾವೋ ಭಾರತ್ ದೇಶ್ ಬಚಾವೋ’ ಘೋಷವಾಕ್ಯದಡಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹಾಗೂ ತಂಡ ಹೋರಾಟ ನಡೆಸಿದೆ. ಈ ವೇಳೆ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು.ಇದನ್ನೂ ಓದಿ: ಭೋವಿ ನಿಗಮ ಹಗರಣದ ತನಿಖೆ ಎದುರಿಸಿದ್ದ ಮಹಿಳೆ ಆತ್ಮಹತ್ಯೆ ಕೇಸ್ – ಸಿಸಿಬಿಗೆ ವರ್ಗಾವಣೆ

    ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ವಕ್ಫ್ ವಿರುದ್ಧ ಬಿಜೆಪಿ ಹೋರಾಟವನ್ನು ಕೈಗೆತ್ತಿಕೊಂಡಿದೆ. ಯತ್ನಾಳ್ ಅವರು ಸ್ಥಳೀಯವಾಗಿ ಹೋರಾಟ ಮಾಡಿದ್ದಾರೆ. ನಿಮಗೆ ವಕ್ಫ್ ಸಮಸ್ಯೆ ಇದ್ರೆ ದಯವಿಟ್ಟು ತಿಳಿಸಿ. ಜನರು ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಯಾರಿಗೂ ಎಚ್ಚರಿಕೆ ಕೊಡದೇ ಜನರ ಸಮಸ್ಯೆ ಆಲಿಸಲು ಮುಂದಾಗಿದ್ದೇವೆ. ಜನರ ಸಮಸ್ಯೆ ಆಲಿಸಲು ಜಾಗೃತಿ ಮೂಡಿಸಲು ಸ್ಥಳೀಯವಾಗಿ ಎಲ್ಲರೂ ಒಟ್ಟಾಗಿ ಬನ್ನಿ ಎಂದು ಕರೆ ನೀಡಿದ್ದೇವೆ. ರಾಜ್ಯಾಧ್ಯಕ್ಷರ ಭಾವನೆಯನ್ನ ನಾವು ಗೌರವಿಸುತ್ತೇವೆ ಎಂದರು.

    ಇಂದು ಧರ್ಮಾಪುರ ಹಾಗೂ ಚಟ್ನಹಳ್ಳಿಗೆ ಭೇಟಿ ಕೊಡ್ತಿದ್ದೇವೆ. ವಾರ್ ರೂಮ್ ಬಂದ ತಕ್ಷಣ ಜನಜಾಗೃತಿ ಮಾಡುತ್ತಿದ್ದೇವೆ. ಎಲ್ಲರೂ ಭಾಗವಹಿಸಲು ಬೀದರ್‌ನಿಂದ ನರಸಿಂಹ ಝಾರನಾ ದೇವಸ್ಥಾನಕ್ಕೆ ಭೇಟಿ ನೀಡಿ ಆರಂಭ ಮಾಡ್ತಿದ್ದೇವೆ. ಯತ್ನಾಳ್, ರಮೇಶ್ ಜಾರಕಿಹೊಳಿ, ಜಿ.ಎಂ ಸಿದ್ದೇಶ್ವರ್, ಬಿ.ಪಿ ಹರೀಶ್, ಜೆಡಿಎಸ್ ನಾಯಕ ಎನ್.ಆರ್ ಸಂತೋಷ್ ಇದ್ದಾರೆ. ಈಶ್ವರ್ ಸಿಂಗ್ ಠಾಕೂರ್ ಅವರು ಸ್ಥಳೀಯವಾಗಿ ನಾಯಕತ್ವ ವಹಿಸಿದ್ದಾರೆ ಎಂದು ಹೇಳಿದರು.

    ಈಗಾಗಲೇ ಯತ್ನಾಳ್ ಅವರು ಬಿಜಾಪುರ ಜಿಲ್ಲೆಯಲ್ಲಿ ಅವರ ಗಮನಕ್ಕೆ ಬಂದ ತಕ್ಷಣ ಹೋರಾಟ ಮಾಡಿದ್ದರು. ಹೋರಾಟದ ಭಾಗವಾಗಿ ದೊಡ್ಡ ಸಭೆಯಾಯ್ತು. ಹಗಲು, ರಾತ್ರಿ ಹೋರಾಟ ಮಾಡಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿಯಾಗಿದ್ದರು. ವಕ್ಫ್ ಜಂಟಿ ಸಮಿತಿಯ ಅಧ್ಯಕ್ಷರೂ ಕೂಡ ಬಂದು ಮನವಿ ತೆಗೆದುಕೊಂಡು ಹೋದರು. ನಮಗೆ ಮಾಹಿತಿ ಸಂಗ್ರಹಿಸಿ ಕಳಿಸುವಂತೆ ಸೂಚನೆ ನೀಡಿದರು. ಕೇವಲ ಮಾಹಿತಿ ಮಾತ್ರವಲ್ಲ, ಜನಜಾಗೃತಿ ಕೂಡ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಇದನ್ನೂ ಓದಿ: ಡಿಚ್ಚಿ ಹೊಡಿತಿನಿ ಅಂತ ಬಂದಿದ್ಯಲ್ಲ, ಡೆಪಾಸಿಟ್ ಬಂತಾ?: ಅಶೋಕ್‍ಗೆ ಡಿಕೆಶಿ ತಿರುಗೇಟು

  • ಉದ್ಯಮಿ ಆತ್ಮಹತ್ಯೆ ಪ್ರಕರಣ – ಅರವಿಂದ ಲಿಂಬಾವಳಿಗೆ ಬಿಗ್‌ ರಿಲೀಫ್‌

    ಉದ್ಯಮಿ ಆತ್ಮಹತ್ಯೆ ಪ್ರಕರಣ – ಅರವಿಂದ ಲಿಂಬಾವಳಿಗೆ ಬಿಗ್‌ ರಿಲೀಫ್‌

    ರಾಮನಗರ: ಕಗ್ಗಲೀಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿಯೋರ್ವ ತಲೆಗೆ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಸಂಬಂಧ ಮಾಜಿ ಸಚಿವ ಅರವಿಂದ ಲಿಂಬಾವಳಿಗೆ (Arvind Limbavali) ಬಿಗ್ ರಿಲೀಫ್ ಸಿಕ್ಕಿದೆ.

    ಉದ್ಯಮಿ ಬರೆದಿಟ್ಟಿದ್ದ ಡೆತ್‌ನೋಟ್‌ (Death Note) ಆರೋಪಕ್ಕೆ ಸರಿಯಾದ ಸಾಕ್ಷ್ಯಗಳಿಲ್ಲದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ (B Report) ಸಲ್ಲಿಸಿ ತನಿಖೆ ಮುಕ್ತಾಯಗೊಳಿಸಲಾಗಿದೆ.  ಇದನ್ನೂ ಓದಿ: India GDP – ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ

     

    ಕಳೆದ ಜನವರಿ 2ರಂದು ಬೆಂಗಳೂರಿನ ಉದ್ಯಮಿ ಪ್ರದೀಪ್‌ ಕಗ್ಗಲೀಪುರ ಸಮೀಪ ಕಾರಿನಲ್ಲಿಯೇ ಡೆತ್‌ನೋಟ್‌ ಬರೆದಿಟ್ಟು ಶೂಟೌಟ್‌ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದರು. ಅದರಲ್ಲಿ ಮಾಜಿ ಶಾಸಕ ಅರವಿಂದ ಲಿಂಬಾವಳಿ ಆತ್ಮಹತ್ಯೆಗೆ ಕಾರಣವೆಂದು ಹೆಸರು ಬರೆದಿಟ್ಟಿದ್ದರು.

     

    ಪ್ರದೀಪ್ ಪತ್ನಿ ನೀಡಿದ ದೂರಿನ ಅನ್ವಯ 6 ಮಂದಿ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿತ್ತು. ಡೆತ್ ನೋಟ್ ಆರೋಪಕ್ಕೆ ಸರಿಯಾದ ಸಾಕ್ಷ್ಯಗಳು ಸಿಗದ ಹಿನ್ನಲೆಯಲ್ಲಿ ತನಿಖೆ ಮುಕ್ತಾಯಗೊಳಿಸಲಾಗಿದೆ. ತನಿಖೆ ವೇಳೆ ಕೌಟುಂಬಿಕ ಕಲಹ ಹಾಗೂ ಹಣಕಾಸಿನ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

  • ಸಮಾಜದ ಮುಖಂಡರ ಕಡೆಗಣನೆ – ರಾಷ್ಟ್ರೀಯ ಪಕ್ಷಗಳ ವಿರುದ್ಧ ಭೋವಿ ಶ್ರೀ ಕಿಡಿ

    ಸಮಾಜದ ಮುಖಂಡರ ಕಡೆಗಣನೆ – ರಾಷ್ಟ್ರೀಯ ಪಕ್ಷಗಳ ವಿರುದ್ಧ ಭೋವಿ ಶ್ರೀ ಕಿಡಿ

    ಚಿತ್ರದುರ್ಗ: ಭೋವಿ ಸಮುದಾಯದ ಮುಖಂಡರಿಗೆ ಟಿಕೆಟ್ ನೀಡದ ಹಿನ್ನೆಲೆ ರಾಷ್ಟ್ರೀಯ ಪಕ್ಷಗಳ ವಿರುದ್ಧ ಭೋವಿ ಮಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ (Immadi Siddharameshwara Shri) ಅಸಮಾಧಾನ ಹೊರಹಾಕಿದ್ದಾರೆ.

    ಚಿತ್ರದುರ್ಗದ (chitradurga) ಭೋವಿ ಮಠದಲ್ಲಿ (Bovimath) ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅರವಿಂದ ಲಿಂಬಾವಳಿ ಮತ್ತು ಗೂಳಿಹಟ್ಟಿ ಶೇಖರ್ ಅವರನ್ನು ಕಡೆಗಣನೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅಖಂಡ ಶ್ರೀನಿವಾಸ್ ಅವರು ಹೆಚ್ಚಿನ ಅಂತರದಿಂದ ದಾಖಲೆಯ ಗೆಲುವು ಸಾಧಿಸಿದ್ದರು. ಅವರನ್ನು ಸಹ ಕಡೆಗಣನೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಭೇಟಿ ರಾಜಕೀಯದ ಬಣ್ಣ ಬೇಡ : ನಟ ರಿಷಬ್ ಶೆಟ್ಟಿ

    ಈ ಹಿಂದೆ 8 ರಿಂದ 10 ಭೋವಿ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿದ್ದರು. ಈ ಬಾರಿ ಎರಡೂ ರಾಷ್ಟ್ರೀಯ ಪಕ್ಷದ ವರಿಷ್ಠರಿಗೆ ಭೋವಿ ಸಮಾಜದ (Bovi community) ಮುಖಂಡರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೆವು. ಆದರೆ ಈ ಬಾರಿ ಸಮುದಾಯವನ್ನು ಎರಡು ರಾಷ್ಟ್ರೀಯ ಪಕ್ಷಗಳು ಕಡೆಗಣಿಸಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಅರವಿಂದ ಲಿಂಬಾವಳಿ (Aravind Limbavali), ಗೂಳಿಹಟ್ಟಿ ಶೇಖರ್ (Gulihatti D Shekar) ಅವರಿಗೆ ಬಿಜೆಪಿ ಹಾಗೂ ಅಖಂಡ ಶ್ರೀನಿವಾಸ್ (Akhanda Srinivas) ಅವರಿಗೆ ಕಾಂಗ್ರೆಸ್ ಸಾಮಾಜಿಕ ನ್ಯಾಯದಡಿ ಟಿಕೆಟ್ ನೀಡಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ. ಟಿಕೆಟ್ ನೀಡದಿದ್ದರೆ ಭೋವಿ ಸಮುದಾಯ ಕಡೆಗಣಿಸಿದ ಪಕ್ಷಗಳನ್ನು ಸಮುದಾಯ ಕೈಬಿಡಲಿದೆ ಎಂದು ಎರಡೂ ಪಕ್ಷದ ವರಿಷ್ಠರಿಗೆ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಪ್ರಯಾಣದ ನಡುವೆಯೇ ಪಕ್ಷದ ಕೆಲಸ, ಆಹಾರ ಸೇವನೆ, ವಿಶ್ರಾಂತಿ – ಇದು ಹೆಚ್‌ಡಿಕೆ ದಿನಚರಿ

  • ಉದ್ಯಮಿ ಪ್ರದೀಪ್ ಶೂಟೌಟ್ ಕೇಸ್- A3 ಆರೋಪಿ ಲಿಂಬಾವಳಿ ಹೇಳಿಕೆ ಕೂಡ ದಾಖಲು

    ಉದ್ಯಮಿ ಪ್ರದೀಪ್ ಶೂಟೌಟ್ ಕೇಸ್- A3 ಆರೋಪಿ ಲಿಂಬಾವಳಿ ಹೇಳಿಕೆ ಕೂಡ ದಾಖಲು

    ರಾಮನಗರ: ಕಗ್ಗಲೀಪುರದ ಉದ್ಯಮಿ ಪ್ರದೀಪ್ (Businessman Pradeep) ಶೂಟೌಟ್ ಕೇಸ್‍ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು ಇನ್ನೊಂದು ವಾರದಲ್ಲಿ ನ್ಯಾಯಾಲಯಕ್ಕೆ ತನಿಖಾ ರಿಪೋರ್ಟ್ ಸಲ್ಲಿಕೆ ಮಾಡಲಿದ್ದಾರೆ.

    ಬರೋಬ್ಬರಿ ಇಪ್ಪತ್ತು ಮಂದಿಯ ಹೇಳಿಕೆಯನ್ನ ದಾಖಲಿಸಿರೋ ಪೊಲೀಸ್ರು, ಎ3 ಆರೋಪಿ ಅರವಿಂದ್ ಲಿಂಬಾವಳಿ ಸೇರಿದಂತೆ ಎಲ್ಲರ ಮೇಲೂ ಬಿ ರಿಪೋರ್ಟ್ ಸಲ್ಲಿಕೆ ಸಾಧ್ಯತೆ ಇದೆ. ಪೊಲೀಸರು ಪ್ರಕರಣ ಸಂಬಂಧ ಶಾಸಕ ಅರವಿಂದ ಲಿಂಬಾವಳಿ (Aravind Limbavali) ಬಳಿ ಎರಡು ಪುಟಗಳ ಹೇಳಿಕೆ ಪಡೆದಿದ್ದಾರೆ ಎನ್ನಲಾಗ್ತಿದೆ. ಆದರೆ ನನಗೂ ಪ್ರದೀಪ್ ಆತ್ಮಹತ್ಯೆ ಕೇಸ್‍ಗೂ ಸಂಬಂಧವಿಲ್ಲ. ಪ್ರದೀಪ್ ಪರಿಚಿತ ವ್ಯಕ್ತಿವಾಗಿದ್ದು, ಸ್ನೇಹಿತರ ನಡುವಿನ ಹಣಕಾಸಿನ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದೇ ಅಷ್ಟೇ ಎಂದು ಅರವಿಂದ ಲಿಂಬಾವಳಿ ಹೇಳಿಕೆ ನೀಡಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಮೂರು ಡೆತ್‍ನೋಟ್ ಪತ್ತೆ

    ಅಲ್ಲದೆ ಡೆತ್‍ನೋಟ್‍ನಲ್ಲಿ ಪ್ರದೀಪ್ ಮಾಡಿರೋ ಆರೋಪಕ್ಕೆ ಸ್ಪಷ್ಟ ಸಾಕ್ಷ್ಯ ಸಿಗ್ತಿಲ್ಲ. ಮೊಬೈಲ್‍ನ ಟೆಕ್ನಿಕಲ್ ಎವಿಡೆನ್ಸ್ ಹಾಗೂ ಡೆತ್‍ನೋಟ್ ಬಗ್ಗೆಯೂ ಪ್ರಬಲ ಸಾಕ್ಷ್ಯವಿಲ್ಲ. ಸದ್ಯ ಎ1 ಆರೋಪಿ ಗೋಪಿ ಸೇರಿ ಶಾಸಕ ಅರವಿಂದ ಲಿಂಬಾವಳಿ ಒಳಗೊಂಡಂತೆ ಆರು ಮಂದಿ ಆರೋಪಿತರ ಹೇಳಿಕೆಯನ್ನ ದಾಖಲಿಸಿರೋ ಪೊಲೀಸ್ರು ತನಿಖಾ ರಿಪೋರ್ಟ್ ಸಲ್ಲಿಕೆಗೆ ಸಿದ್ಧರಾಗಿದ್ದಾರೆ. ಇದನ್ನೂ ಓದಿ: ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರದೀಪ್ ನಮ್ಮ ಕಾರ್ಯಕರ್ತನೇ – ಲಿಂಬಾವಳಿ ಸ್ಪಷ್ಟನೆ

  • ಲಿಂಬಾವಳಿ ಸಹಿತ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ- ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ

    ಲಿಂಬಾವಳಿ ಸಹಿತ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ- ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ

    ಬೆಂಗಳೂರು: ಉದ್ಯಮಿ ಪ್ರದೀಪ್ (Businessman Pradeep) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ ಲಿಂಬಾವಳಿ ಸಹಿತ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಒತ್ತಾಯ ಮಾಡಿದ್ದಾರೆ.

    ಇಂದು ಪ್ರದೀಪ್ ಮನೆಗೆ ಭೇಟಿ ಬಳಿಕ ಸರಣಿ ಟ್ವೀಟ್ ಮಾಡಿರುವ ಅವರು, ಉದ್ಯಮಿ ಪ್ರದೀಪ್ ಅವರ ಆತ್ಮಹತ್ಯೆ ದುರದೃಷ್ಟಕರ. ಅವರ ಆತ್ಮಹತ್ಯೆಗೆ ಕಾರಣರಾದ ಶಾಸಕ ಅರವಿಂದ ಲಿಂಬಾವಳಿ (Aravind Limbavali) ಸಹಿತ ಇತರೆ ಎಲ್ಲಾ ಆರೋಪಿಗಳನ್ನು ಈ ಕೂಡಲೇ ಬಂಧಿಸಿ, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಒತ್ತಾಯಿಸುತ್ತೇನೆ ಎಂದರು.

    ದಿವಂಗತ ಪ್ರದೀಪ್ ಅವರು ಉದ್ಯಮವೊಂದಕ್ಕೆ ಸುಮಾರು 1.5 ಕೋಟಿ ರೂಪಾಯಿ ಬಂಡವಾಳ ಹೂಡಿದ್ದರು. ಆದರೆ ಈವರೆಗೆ ನಯಾಪೈಸೆ ಲಾಭದ ಹಣ ಅವರ ಕೈಸೇರಿಲ್ಲ. ಈ ವಿವಾದದಲ್ಲಿ ಶಾಸಕ ಅರವಿಂದ ಲಿಂಬಾವಳಿ ಅವರು ಮಧ್ಯಸ್ಥಿಕೆ ವಹಿಸಿದ್ದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ತನ್ನ ಪತಿಯ ಸಾವಿಗೆ ನ್ಯಾಯ ಸಿಗಬೇಕು ಮತ್ತು ಸಾಲಮಾಡಿ ಹೂಡಿಕೆ ಮಾಡಿದ್ದ ಹಣವನ್ನು ವಾಪಸ್ ಕೊಡಿಸಬೇಕು ಎಂಬುದು ಮೃತನ ಪತ್ನಿ ನಮಿತಾ (Namitha) ಅವರ ಮನವಿ. ಪೊಲೀಸ್ ಇಲಾಖೆ ತಕ್ಷಣ ಕ್ರಮವಹಿಸಿ, ಈ ಹಣವನ್ನು ವಾಪಸ್ ಕೊಡಿಸುವ ಕೆಲಸ ಮಾಡಬೇಕು. ಇದನ್ನೂ ಓದಿ: BPL ಪಡಿತರದಾರರಿಗೆ 5 ಕೆಜಿ ಜೊತೆ 1 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ – ಸರ್ಕಾರ ಆದೇಶ

    ಡೆತ್ ನೋಟ್ ನಲ್ಲಿ ಆಡಳಿತದ ಪಕ್ಷದ ಶಾಸಕರ ಹೆಸರಿದೆ ಎಂಬ ಕಾರಣಕ್ಕೆ ಪೊಲೀಸರು ಅಪರಾಧಿಗಳನ್ನು ಬಂಧಿಸದಿದ್ದರೆ ಅವರು ಸಾಕ್ಷ್ಯನಾಶ ಮಾಡುವ ಸಾಧ್ಯತೆಗಳಿರುತ್ತದೆ. ಹೀಗಾದಾಗ ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ಪೊಲೀಸರು ಮೃತನ ಮೊಬೈಲ್ ಕೊಡಿ ಎಂದು ಮಧ್ಯರಾತ್ರಿಯಲ್ಲಿ ಕುಟುಂಬದವರ ಬಳಿ ಬಂದು ಕೇಳಿದ್ದಾರೆ. ಸಾವಿಗೂ ಮುನ್ನ ಪ್ರದೀಪ್ ಅವರು ಬರೆದ ಡೆತ್‍ನೋಟ್ ನಲ್ಲಿ ಸಾವಿಗೆ ಕಾರಣರಾದವರ ಹೆಸರು ಸ್ಪಷ್ಟವಾಗಿರುವಾಗ ತನಿಖೆಯನ್ನು ಬೇರೆ ಆಯಾಮಗಳಿಗೆ ತಿರುಗಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

    ಈ ಹಿಂದೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ಸೂಕ್ತ ತನಿಖೆ ನಡೆಸದೆ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ. ಈ ಪ್ರಕರಣವು ಅದೇ ರೀತಿ ಆಗುವುದು ಬೇಡ. ತನಿಖೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ (BJP Government) ಹಸ್ತಕ್ಷೇಪ ಮಾಡಬಾರದು ಎಂದು ಒತ್ತಾಯ ಮಾಡುತ್ತೇನೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದಾಗಿ ಹಲವರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ, ಇನ್ನು ಕೆಲವರು ದಯಾಮರಣ ಕೋರಿ ಅರ್ಜಿ ಹಾಕಿದ್ದಾರೆ. ಬಿಜೆಪಿಯವರು ನಾಯಕರ ಹಣದಾಸೆಗೆ ಇಂಥಾ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು ಎಂದು ಮರು ಪ್ರಶ್ನೆ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ ಪ್ರಕರಣ – ಲಿಂಬಾವಳಿ ಸೇರಿ 6 ಜನರ ವಿರುದ್ಧ FIR

    ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ ಪ್ರಕರಣ – ಲಿಂಬಾವಳಿ ಸೇರಿ 6 ಜನರ ವಿರುದ್ಧ FIR

    ರಾಮನಗರ: ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ (businessman) ಪ್ರದೀಪ್ ಆತ್ಮಹತ್ಯೆ (Suicide) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಅರವಿಂದ ಲಿಂಬಾವಳಿ (Arvind Limbavali) ಸೇರಿದಂತೆ ಒಟ್ಟು 6 ಜನರ ವಿರುದ್ಧ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ.

    ಉದ್ಯಮಿ ಪ್ರದೀಪ್ ಡೆತ್ ನೋಟ್‌ನಲ್ಲಿ (Death Note) ಲಿಂಬಾವಳಿ ಸೇರಿದಂತೆ 6 ಜನರ ಹೆಸರು ಬರೆದಿಟ್ಟು ಬೆಂಗಳೂರಿನ ದಕ್ಷಿಣ ತಾಲೂಕು ನೆಟ್ಟಗೆರೆ ಬಳಿ ತಮ್ಮ ಕಾರಿನಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್ ನೋಟ್‌ನಲ್ಲಿ ಅರವಿಂದ ಲಿಂಬಾವಳಿ, ಗೋಪಿ, ರಘುವ ಭಟ್, ಸೋಮಯ್ಯ, ರಮೇಶ್ ರೆಡ್ಡಿ ಹಾಗೂ ಜಯರಾಮ್ ಎಂದು ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಘಟನೆಯೇನು?: ಹೊಸ ವರ್ಷಾಚರಣೆ ಸಲುವಾಗಿ ಕುಟುಂಬ ಸಮೇತ ರಾಮನಗರದ ಕಗ್ಗಲೀಪುರ ಸಮೀಪವಿರುವ ನೆಟ್ಟಗೆರೆ ಬಳಿ ಇರುವ ರೆಸಾರ್ಟ್‌ಗೆ ಬಂದಿದ್ದ ಪ್ರದೀಪ್ ರಾತ್ರಿ ಪಾರ್ಟಿ ಮಾಡಿ, ಬೆಳಗ್ಗೆ ಶಿರಾಗೆ ಹೋಗಬೇಕು ಎಂದು ಹೇಳಿ ರೆಸಾರ್ಟ್‌ನಿಂದ ಭಾನುವಾರ ಬೆಳಗ್ಗೆ ಒಬ್ಬರೇ ಬೆಂಗಳೂರಿನಲ್ಲಿನ ತಮ್ಮ ನಿವಾಸಕ್ಕೆ ಹೋಗಿ ಡೆತ್ ನೋಟ್ ಬರೆದಿದ್ದಾರೆ. ಬಳಿಕ ರೆಸಾರ್ಟ್‌ಗೆ ವಾಪಸ್ ಬರುವಾಗ ಕಾರಿನಲ್ಲೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಡೆತ್ ನೋಟ್‌ನಲ್ಲಿ ಕಾರಣ ಉಲ್ಲೇಖಿಸಿರುವ ಪ್ರದೀಪ್, ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ಬಳಿ ರೆಸಾರ್ಟ್ ತೆರೆಯಲು 5 ಮಂದಿ ನನ್ನ ಬಳಿ ಮಾತನಾಡಿ, ಒಂದೂವರೆ ಕೋಟಿ ರೂ. ಹಣ ಪಡೆದುಕೊಂಡಿದ್ದರು. ನನ್ನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಮನೆ ಮಾರಿದ್ದೆ. ಸಾಕಷ್ಟು ಸಾಲ ಮಾಡಿಕೊಂಡಿದ್ದೆ. ಆದರೆ, ಪಾಲುದಾರಿಕೆ ಹೆಸರಿನಲ್ಲಿ ನನಗೆ ಮೋಸ ಮಾಡಿದ್ದಾರೆ. ಒಟ್ಟು ಎರಡೂವರೆ ಕೋಟಿ ಹಣ ನನಗೆ ಬರಬೇಕು. ಇದನ್ನೂ ಓದಿ: ಸಂಸದ ರಾಘವೇಂದ್ರರ ಫೋಟೋಗ್ರಾಫರ್ ಕೆರೆಯಲ್ಲಿ ಮುಳುಗಿ ದರ್ಮರಣ

    ಈ ನಡುವೆ ರಾಜಕಾರಣಿಯೊಬ್ಬರು ರಾಜಿ ಮಾಡುವ ಪ್ರಯತ್ನ ಮಾಡಿದ್ದರು. ಆದರೂ ನನಗೆ ಪೂರ್ಣ ಹಣ ನೀಡದೇ ಮೋಸ ಮಾಡಲಾಗಿದೆ. ಈ ಬಗ್ಗೆ ಕೇಳಿದರೆ ಆ ರಾಜಕಾರಣಿಯವರು ಸಹ ನನಗೆ ಸಹಾಯ ಮಾಡಿಲ್ಲ. ಹೀಗಾಗಿ ನನ್ನ ಸಾವಿಗೆ ಈ 6 ಮಂದಿ ಕಾರಣ, ಎಲ್ಲರಿಗೂ ಶಿಕ್ಷೆ ಆಗಬೇಕು ಎಂದು ಪ್ರದೀಪ್ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

    ಇದೀಗ ಮೃತ ಉದ್ಯಮಿ ಪತ್ನಿ ನಮಿತಾ ದೂರಿನನ್ವಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಈ 6 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳೆಲ್ಲರಿಗೂ ನೋಟಿಸ್ ನೀಡಿ ಪೊಲೀಸರು ವಿಚಾರಣೆಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ವೋಟರ್ ಐಡಿ ಗೋಲ್ಮಾಲ್ – ಸ್ಥಳೀಯ ಶಾಸಕರ ಮೇಲೆ ಕಾಂಗ್ರೆಸ್ ಆರೋಪ

    Live Tv
    [brid partner=56869869 player=32851 video=960834 autoplay=true]

  • ನಾನೇನು ಸ್ವಂತ ಬೋಟ್‌ನಲ್ಲಿ ಹೋಗಿದ್ನಾ; ಬೇಕಿದ್ರೆ ಲಿಂಬಾವಳಿ ಕೇಳಿ?: ಸಿದ್ದು ಬೋಟ್‌ ಪ್ರಸಂಗ

    ನಾನೇನು ಸ್ವಂತ ಬೋಟ್‌ನಲ್ಲಿ ಹೋಗಿದ್ನಾ; ಬೇಕಿದ್ರೆ ಲಿಂಬಾವಳಿ ಕೇಳಿ?: ಸಿದ್ದು ಬೋಟ್‌ ಪ್ರಸಂಗ

    ಬೆಂಗಳೂರು: ರಾಜಧಾನಿಯಲ್ಲಿ ಭಾರೀ ಮಳೆಯಿಂದಾಗಿ ನೆರೆ ಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ(Siddaramaiah) ಅವರು ಬೋಟ್‌ನಲ್ಲಿ ಭೇಟಿ ನೀಡಿದ ಪ್ರಸಂಗ ಸದನದಲ್ಲಿ ಹಾಸ್ಯ ಚಟಾಕಿಗೆ ಕಾರಣವಾಯಿತು.

    ವಿಧಾನಸಭೆಯಲ್ಲಿ (Vidhanasabha Session) ರಾಜ್ಯದಲ್ಲಿನ ಅತಿವೃಷ್ಟಿ ಸಂಬಂಧ ನಿಯಮ 69ರಡಿ ಚರ್ಚೆ ನಡೆಯಿತು. ಬೆಂಗಳೂರಿನಲ್ಲಿ ಮಳೆ ಅವಾಂತರಗಳ ಕುರಿತು ಸಿದ್ದರಾಮಯ್ಯ ಅವರು ಮಾತನಾಡುವಾಗ ಬೋಟ್‌ ಪ್ರಸಂಗ ಮುನ್ನೆಲೆಗೆ ಬಂತು. ಸೆಲೆಬ್ರಿಟಿಗಳು ಇರುವ ಯಮಲೂರಿನಲ್ಲಿ ಬೋಟ್‌ನಲ್ಲೇ ಹೋಗಬೇಕು ಎಂದು ಸಿದ್ದರಾಮಯ್ಯ ಹೇಳುವಾಗ ಮಧ್ಯೆ ಪ್ರವೇಶಿಸಿದ ಶಾಸಕ ಅರವಿಂದ್‌ ಲಿಂಬಾವಳಿ, ರೋಡಲ್ಲೇ ಹೋಗಬಹುದಿತ್ತು. ನೀವ್ಯಾಕೆ ಬೋಟಲ್ಲಿ ಹೋದಿರಿ ಗೊತ್ತಿಲ್ಲ ಎಂದು ಸಿದ್ದು ಕಾಲೆಳೆದರು.

    ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಿದ್ದು, ನೀವು ಬರೋದಾಗಿ ಹೇಳಿದ್ರೆ ನಾನೇ ವೆಲ್ ಕಮ್ ಮಾಡ್ತಿದ್ದೆ. ರಸ್ತೆ ತೋರಿಸಬಹುದಿತ್ತು ಎಂದು ತಿರುಗೇಟು ಕೊಟ್ಟರು. ಅದಕ್ಕೆ ಲಿಂಬಾವಳಿ ಪ್ರತಿಕ್ರಿಯಿಸಿ, ನಿಮ್ಮನ್ನ ದಿಕ್ಕು ತಪ್ಪಿಸೋರು ತುಂಬಾ ಜನ ಇದಾರೆ, ಹುಷಾರಾಗಿರಿ ಸಾರ್ ಎಂದು ಮತ್ತೆ ಕಾಳೆದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸಿಎಂ ಬೊಮ್ಮಾಯಿ(Basavaraj Bommai), ಒಂದೂವರೆ ಅಡಿ ನೀರಿರುವ ಜಾಗದಲ್ಲಿ ನಿಮ್ಮನ್ನು ಬೋಟಲ್ಲಿ ಕರ್ಕೊಂಡ್ ಹೋಗಿದ್ದ ಪುಣ್ಯಾತ್ಮ ಯಾರಪ್ಪ? ನಾವೆಲ್ಲ ರಸ್ತೆಯಲ್ಲೇ ಹೋಗಿದ್ದು ಎಂದು ಸಿದ್ದುಗೆ ಟಾಂಗ್‌ ಕೊಟ್ಟರು.

    ಕೃಷ್ಣ ಬೈರೇಗೌಡ ಮಾತನಾಡಿ, ಎನ್‌ಡಿಆರ್‌ಎಫ್ ಬೋಟ್‌ನಲ್ಲೇ ಹೋಗಿದ್ದೆವು. ಸುಮಾರು ಲೇಔಟ್ ನೀರಿನಲ್ಲಿ ಮುಳುಗಿತ್ತು. ಅಲ್ಲಿ ಜನ ಕಷ್ಟ ಅನುಭವಿಸಿದ್ದು, ಸುಳ್ಳಾ? ನಾವು ಬೋಟಲ್ಲ, ನೆಡೆದುಕೊಂಡೇ ಹೋಗಿದ್ದೆವು ಎಂದ ಸಿಎಂ ಮಾತಿಗೆ ತಿರುಗೇಟು ನೀಡಿದರು. ಇದೇ ವೇಳೇ ಅರವಿಂದ ಲಿಂಬಾವಳಿ ಮಾತನಾಡಿ ಲೇಔಟ್ ಮಾಡಿದವನ ತಪ್ಪಿಂದ ನೀರು ನಿಂತಿದ್ದು ನಿಜ. ದೊಡ್ಡ ದೊಡ್ಡ ಐಷಾರಾಮಿ ಕಾರಿನಲ್ಲಿ ಓಡಾಡ್ತಿದ್ದವರನ್ನ, ಟ್ರಾಕ್ಟರ್‌ನಲ್ಲಿ ಕರೆದುಕೊಂಡು ಬರುವ ಪರಿಸ್ಥಿತಿ ಬಂತು ಎಂದರು.

    ನಾನು ನನ್ನ ಸ್ವಂತ ಬೋಟ್ ತಗೊಂಡ್ ಹೋಗಿರಲಿಲ್ಲ. ಎನ್‌ಡಿಆರ್‌ಎಫ್ ಬೋಟ್ ತೆಗೆದುಕೊಂಡು ಹೋಗಿದ್ದೆ. ಲಿಂಬಾವಳಿ ಅವರನ್ನೇ ಕೇಳಿ, ಮೋಟಾರ್ ಬೋಟ್ ತೆಗೆದುಕೊಂಡು ಹೋಗಿದ್ದೆ. ಒಂದೂವರೆ ಅಡಿ ನೀರು ಇರಲಿಲ್ಲ, 10-12 ಅಡಿ ನೀರು ನಿಂತಿತ್ತು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಅರವಿಂದ್ ಲಿಂಬಾವಳಿ ಮಧ್ಯಪ್ರವೇಶಿಸಿ, ಸಿಎಂ ಯಂಗ್ ಆಗಿದ್ದಾರೆ. ಹಾಗಾಗಿ ನಡೆದುಕೊಂಡು ಹೋದ್ರು, ನಿಮಗೆ ಸ್ವಲ್ಪ ವಯಸ್ಸಾಗಿದೆ ಹಾಗಾಗಿ ಬೋಟಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಕಾಲೆಳೆದರು.

    ನಾನು ಹೋದಾಗ ನೀರು ಹೆಚ್ಚಿತ್ತೋ, ಕಡಿಮೆ ಇತ್ತೋ ಗೊತ್ತಿಲ್ಲ. ಆದ್ರೆ ನಾನು ನಡೆದುಕೊಂಡು ಹೋಗಿದ್ದು. ನನ್ನ ಬೋಟಲ್ಲಿ ಬರೋದಕ್ಕೆ ಹೇಳಿದ್ರು, ಆದ್ರೆ ನಾನು ಜೀಪಲ್ಲಿ ಹೋದೆ ಎಂದು ಸಿಎಂ ಹೇಳಿದರು. ಬೋಟಲ್ಲಿ ಹೋಗಿದ್ದು ನಿಜ, ನೀರೆದ್ದರೇನೇ ಬೋಟಲ್ಲಿ ಹೋಗೋಕೆ ಸಾಧ್ಯ, ಅದು ಒಂದೂವರೆ ಅಡಿಯಾದ್ರೂ ಇರಲಿ, ಹತ್ತೂವರೆ ಅಡಿಯಾದ್ರೂ ಇರಲಿ. ಮಳೆಯಿಂದ ಹಾನಿಯಾಗಿರೋದು ಸತ್ಯವಾಗಿದ್ದು, ಅಲ್ಲಿ ಭೇಟಿ ಕೊಟ್ಟಾಗ ಜನ ಸಮಸ್ಯೆ ಹೇಳಿಕೊಂಡ್ರು, ಕಾರು, ಸ್ಕೂಟರ್ ಎಲ್ಲ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮಳೆ ಹಾನಿಯಾದ ಪ್ರದೇಶದಲ್ಲಿ ಪರಿಹಾರ ಕೊಡುವಂತೆ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

    ಈ ವೇಳೆ ಮಧ್ಯಪ್ರವೇಶ ಮಾಡಿದ ಅಶೋಕ್ (R Ashok), ಎನ್‌ಡಿಆರ್‌ಎಫ್ ನಾರ್ಮ್ಸ್ ಪ್ರಕಾರ, ಮಳೆ ನಿಂತ ಬಳಿಕವೇ ಸರ್ವೆ ಮಾಡಬೇಕು. ಪ್ರತಿದಿನ ಹೋಗಿ ಪರಿಶೀಲನೆ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಂತೆ ಸಿದ್ದರಾಮಯ್ಯ ಅವರು, ಪರಿಹಾರ ಕೊಡಲೇ ಬೇಕು. ಬರದಲ್ಲಿ ಎರಡು ವಿಧ, ಒಂದು ಒಣ ಬರ, ಮತ್ತೊಂದು ಹಸಿ ಬರ. ಒಣ ಬರ ಅಂದ್ರೆ ಮಳೆ ಬಾರದೆ, ಬೆಳೆ ಒಣಗಿ ಹೋಗುತ್ತೆ. ಇದರಿಂದ ಗೊಬ್ಬರ, ಬಿತ್ತನೆ ಬೀಜದ ಎಲ್ಲಾ ಖರ್ಚುಗಳು ಉಳಿಯುತ್ತೆ. ಹಸಿ ಬರ ಅಂದ್ರೆ, ಬೆಳೆ ಬೆಳೆದು ಮಳೆ ಬಿದ್ದು ಹಾನಿಯಾಗೋದು. ಇದರಿಂದ ಬೆಳೆದ ಎಲ್ಲ ಬೆಳೆ ಹಾಳಾಗುತ್ತೆ, ರೈತರಿಗೂ ನಷ್ಟ ಆಗುತ್ತದೆ, ಇದರಿಂದ ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

    ಇದಕ್ಕೂ ಮೊದಲು ಮಾತನಾಡಿದ ಅತಿವೃಷ್ಟಿ ಕುರಿತು ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಜನ ಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನ ಒಳ ಹಾಗೂ ಹೊರ ಭಾಗದಲ್ಲಿ ಇಡೀ ಜನ ಜೀವನ ಅಸ್ತವ್ಯಸ್ತ ಆಗಿದೆ. ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಿಲ್ಲ. ಅವರ ಬೇಜವಾಬ್ದಾರಿತನದಿಂದ ಈ ಪರಿಸ್ಥಿತಿ ಬಂದಿದೆ. ನಾನು ಜವಾಬ್ದಾರಿಯಿಂದಲೇ ಬೇಜವಾಬ್ದಾರಿ ಅಂತ ಬಳಸಿದ್ದೇನೆ. ಸುಮಾರು 20 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಕಳೆದ ಬಾರಿ ಮುಂಗಾರು ಅಧಿವೇಶನದಲ್ಲಿ ಮಾತನಾಡುವಾಗ ಆಗಲೂ ಪ್ರವಾಹ ಬಂದಿತ್ತು ಎಂದರು. ಇದನ್ನೂ ಓದಿ: ಕಾಂಗ್ರೆಸ್‌ನವರು ಚಡ್ಡಿ ಹಾಕಿ ಶಾಖೆಗೆ ಬರೋ ದಿನ ದೂರವಿಲ್ಲ – ಸಿಟಿ ರವಿ ವ್ಯಂಗ್ಯ

    ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ಮಾತನಾಡಿದ್ದೆ. ಹವಾಮಾನ ತಜ್ಞರು ಮುಂದಿನ ದಿನದಲ್ಲಿ ಹವಾಮಾನ ಬದಲಾವಣೆಯಿಂದ ರಾಜ್ಯ ಭೀಕರ ಪರಿಸ್ಥಿತಿ ಎದುರಿಸಬೇಕಾಗಲಿದೆ ಅಂತ ಮುನ್ನೆಚ್ಚರಿಕೆ ನೀಡಿದರು. ಈ ವಿಚಾರ ಕಳೆದ ಬಾರಿ ಈ ವಿಚಾರ ಪ್ರಸ್ತಾಪ ಮಾಡಿದ್ದೆ. ಹವಾಮಾನ ವಿಜ್ಞಾನಿಗಳು 2030ರೊಳಗೆ ಕೃಷಿ ಮೇಲೆ ಪರಿಣಾಮ ಬೀರಲಿದೆ. ಭತ್ತ ಬೆಳೆ ಸುಮಾರು 5.6ರಷ್ಟು ಕಡಿಮೆಯಾಗಬಹುದು. ಕಡ್ಲೆ 19.2ರಷ್ಟು, ರಾಗಿ ಶೇ.12 ರಷ್ಟು, ಶೇಂಗಾ 9.6ರಷ್ಟು, ಸೋಯಾಬಿನ್ ಕಡಿಮೆ ಆಗಬಹುದು. ಬೆಳೆ ಹೆಚ್ಚಾಗೋದ್ರಲ್ಲಿ ಹತ್ತಿ, ಜೋಳ, ಕಬ್ಬು ಜಾಸ್ತಿಯಾಗುವ ಬೆಳೆಗಳು ಎಂದು ಹವಮಾನ ತಜ್ಞರು ತಿಳಿಸಿದ್ದಾರೆ. ಅದಕ್ಕಾಗಿ ಕೆಲವೆಡೆ ಮಳೆ ಹೆಚ್ಚಾಗಿದೆ, ಕೆಲವೆಡೆ ಕಡಿಮೆಯಾಗಿದೆ ಎಂದರು. ಇದನ್ನೂ ಓದಿ: ನೀನು ಕಬಡ್ಡಿ ಆಡಿ ಆಡಿ ಸ್ಟ್ರಾಂಗ್ ಆಗಿದ್ದೀಯಾ- ಅಶೋಕ್ ಕಾಲೆಳೆದ ಸಿದ್ದರಾಮಯ್ಯ

    ಮಲೆನಾಡಿನಲ್ಲಿ ಕಡಿಮೆ ಮಳೆಯಾಗಿದ್ದು, ಬಯಲುಸೀಮೆಯಲ್ಲಿ ಮಳೆ ಹೆಚ್ಚಾಗಿದೆ. ಹವಾಮಾನ ಬದಲಾವಣೆಯಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ 15-20ರಷ್ಟು ಹೆಚ್ಚಾಗಬಹುದು. ದಕ್ಷಿಣ ಒಳನಾಡಿನಲ್ಲಿ ಬೆಂಗಳೂರು ಸುತ್ತಮುತ್ತ ಹೆಚ್ಚಾಗಬಹುದು. ಭಾರೀ ಮಳೆಯಿಂದ ರಸ್ತೆಗಳೆಲ್ಲ ಉಕ್ಕಿ ಹರಿದಿವೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ರಮ್ಯಾ ಹೇಳಿದ್ದು ನಿಜ: ಶಾಸಕ ಅರವಿಂದ ಲಿಂಬಾವಳಿ

    ರಮ್ಯಾ ಹೇಳಿದ್ದು ನಿಜ: ಶಾಸಕ ಅರವಿಂದ ಲಿಂಬಾವಳಿ

    ಬೆಂಗಳೂರು: ಪ್ರಭಾವಿ ಶಾಸಕರ ಜಮೀನು ಈ ಭಾಗದಲ್ಲಿಯೇ ಇದೆ. ರಮ್ಯಾ ಹೇಳಿದ್ದು ನಿಜ ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, 17 ಕೋಟಿ ವಿಲ್ಲಾ ಮಾಡಿದವರಿಗೆ ಬುದ್ಧಿ ಇಲ್ಲ ಬಿಡಿ ಎಂದು ಕೆಂಡಾಮಂಡಲರಾಗಿದ್ದಾರೆ. ಎಲ್ಲವೂ ನಿಧಾನಕ್ಕೆ ಗೊತ್ತಾಗುತ್ತೆ ಎಂದು ಒತ್ತುವರಿ ಬಗ್ಗೆ ಶಾಸಕ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

    ಒತ್ತುವರಿದಾರರಿಗೆ ಇನ್ನೂ ಟೈಂ ಇಲ್ಲ. ಎಲ್ಲವೂ ತೆರವು ಮಾಡೋದೇ. ಒತ್ತುವರಿದಾರರಿಗೆ ಬಿಸಿ ಮುಟ್ಟಿಸೋಕೆ ಹೋಗಿಯೇ ನಂಗೆ ಸಮಸ್ಯೆಯಾಗಿದೆ. ಹಾಗಂತ ನಾನು ಸುಮ್ಮನೆ ಇರಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೈಸೂರು ಮೇಯರ್, ಉಪ ಮೇಯರ್ ಎಲೆಕ್ಷನ್: ಬಿಜೆಪಿ ಬಾಯಿಗೆ ಬಿತ್ತು ಡಬಲ್ ಲಡ್ಡು!

    ರಮ್ಯಾ ಹೇಳಿದ್ದೇನು..?: ಕಳೆದ ಎರಡು ವಾರಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ಅನೇಕ ಪ್ರದೇಶಗಳು ಕೆರೆಗಳಂತಾಗಿವೆ. ಮನೆಗೆ ನೀರು ನುಗ್ಗಿ ಜನ ಜೀವನಕ್ಕೆ ಅಪಾರ ತೊಂದರೆ ಉಂಟಾಗಿದೆ. ವಾಹನ ಸವಾರರಿಗಂತೂ ನಿತ್ಯ ನರಕ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ರಮ್ಯಾ, ಬೆಂಗಳೂರು ಹೀಗೆ ಆಗುವುದಕ್ಕೆ ಕಾರಣ ಜನಪ್ರತಿನಿಧಿಗಳು. 28 ಎಂಎಲ್.ಎ ಗಳಿಗೆ 26 ಎಂಎಲ್‍ಎಗಳು ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ. ಈ ಪ್ರಮಾಣದಲ್ಲಿ ಅವರೇ ಇದ್ದರೆ, ಬೆಂಗಳೂರನ್ನು ಕಾಪಾಡಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    ಹಣ ಇದ್ದವರಿಗೆ ಅದರಲ್ಲೂ ರಿಯಲ್ ಎಸ್ಟೇಟ್ ಮಾಡುತ್ತಿರುವ ಹೆಚ್ಚಿನ ಜನರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದು ಏಕೆ ಎಂದು ಪ್ರಶ್ನೆ ಮಾಡಿರುವ ರಮ್ಯಾ, ಚುನಾವಣಾ ಆಯೋಗವು ಒಬ್ಬ ಎಂ.ಎಲ್.ಎ ಗೆ ಚುನಾವಣೆ ಖರ್ಚು ಮಾಡಲು 40 ಲಕ್ಷ ರೂಪಾಯಿ ಮಿತಿ ನಿಗದಿ ಮಾಡಿದೆ. ಆದರೆ ಕೋಟಿ ಲೆಕ್ಕಗಳಲ್ಲಿ ಖರ್ಚಾಗುತ್ತಿದೆ ಏಕೆ? ಎಂದಿದ್ದಾರೆ. ಹಾಗಾಗಿ ಬುದ್ಧಿವಂತಿಕೆಯಿಂದ ಮತ ಚಲಾಯಿಸುವಂತೆ ಅವರು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]