Tag: ಅರವಿಂದ್ ಲಿಂಬಾವಳಿ

  • ಮಹಾದೇವಪುರದಲ್ಲಿ ಯಾವುದೇ ಅಕ್ರಮ ಆಗಿಲ್ಲ: ರಾಹುಲ್‌ ಗಾಂಧಿ ಆರೋಪಕ್ಕೆ ದಾಖಲೆ ಸಮೇತ ಲಿಂಬಾವಳಿ ತಿರುಗೇಟು

    ಮಹಾದೇವಪುರದಲ್ಲಿ ಯಾವುದೇ ಅಕ್ರಮ ಆಗಿಲ್ಲ: ರಾಹುಲ್‌ ಗಾಂಧಿ ಆರೋಪಕ್ಕೆ ದಾಖಲೆ ಸಮೇತ ಲಿಂಬಾವಳಿ ತಿರುಗೇಟು

    – ಮತಗಳ್ಳತನ ಆರೋಪಕ್ಕೆ ಅರವಿಂದ್‌ ಲಿಂಬಾವಳಿ ಸ್ಪಷ್ಟನೆ ಏನು?

    ಬೆಂಗಳೂರು: ಬೆಂಗಳೂರು ‌ಕೇಂದ್ರ ಲೋಕಸಭೆಯ ಮಹಾದೇವಪುರದಲ್ಲಿ 1,00,250 ಮತಗಳ್ಳತನ ಆಗಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ, ಮಹಾದೇವಪುರ ಕ್ಷೇತ್ರದ ಮಾಜಿ ಶಾಸಕ ಅರವಿಂದ ಲಿಂಬಾವಳಿ (Arvind Limbavali) ತಿರುಗೇಟು ಕೊಟ್ಟಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾದೇವಪುರದಲ್ಲಿ ಯಾವುದೇ ಅಕ್ರಮ ಆಗಿಲ್ಲ. ಸಕ್ರಮ ಚುನಾವಣೆ ನಡೆದಿದೆ. ರಾಹುಲ್ ಗಾಂಧಿ ಆರೋಪಗಳು ನಿರಾಧಾರ, ಸತ್ಯಕ್ಕೆ ದೂರ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲದೇ, ರಾಹುಲ್ ಗಾಂಧಿ ಮಾಡಿರುವ ಐದು ಹಂತದ ಮತಗಳ್ಳತನ ಹಾಗೂ ಏಳು ಉದಾಹರಣೆಗಳಿಗೂ ಲಿಂಬಾವಳಿ ದಾಖಲೆ ಸಹಿತ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಮೋದಿ ಮತಗಳ್ಳತನ ಮಾಡಿ ಪ್ರಧಾನಿಯಾಗಿದ್ದಾರೆ: ರಾಹುಲ್‌ ಗಾಂಧಿ ವಾಗ್ದಾಳಿ

    ಆರೋಪ 1: ಡುಪ್ಲಿಕೇಟ್ ಮತದಾರರ ಸಂಖ್ಯೆ 11,965
    ಉತ್ತರ – ಗುರುಕಿರೀತ್ ಸಿಂಗ್ ದಾಂಗ್ ಹೆಸರು ಸೇರ್ಪಡೆಗೆ 4 ಬಾರಿ ಅರ್ಜಿ ಸಲ್ಲಿಸಿದಾಗ ತಿರಸ್ಕರಿಸಲ್ಪಟ್ಟಿತ್ತು. ಆದರೆ, ಮತದಾರರ ಪಟ್ಟಿಯಲ್ಲಿ ಬೇರೆ ಬೇರೆ ಕಡೆ ಕಾಣಿಸಿಕೊಂಡಿದೆ. 3 ಕಡೆ ಹೆಸರು ರದ್ದತಿಗೆ ಅವರು ಕೋರಿದ್ದಾರೆ.
    ಲಕ್ನೋದ ಆದಿತ್ಯ ಶ್ರೀವಾಸ್ತವ್ ಹೆಸರು ಲಕ್ನೋದಲ್ಲಿ ಸೇರ್ಪಡೆಯಾಗಿತ್ತು. ಬಳಿಕ ಕೆಲಸದಲ್ಲಿದ್ದ ಮುಂಬೈನಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ, ಬಳಿಕ ಬೆಂಗಳೂರಿನಲ್ಲಿ ಹೆಸರು ಸೇರಿಸಿ ಮತ ಚಲಾಯಿಸಿದ್ದಾರೆ. ಇವರು ಕೂಡ ಫಾರ್ಮ್ 7 ಮೂಲಕ ಬದಲಾವಣೆಗೆ ಅರ್ಜಿ ಕೊಟ್ಟವರು.
    ವಾರಣಾಸಿಯ ವಿನೋದ್ ಸಿಂಗ್ ಬೆಂಗಳೂರಿನ ಮಾರಥಹಳ್ಳಿಯಲ್ಲಿದ್ರು. ಈಗ ಮನೆ ಖರೀದಿಸಿದ್ದಾರೆ. 513 ಬೂತ್‌ಗೆ ಮನೆ ಬದಲಾಯಿಸಿ ವೋಟ್ ಹಾಕಿದ್ದಾರೆ. ವೋಟರ್ ಲಿಸ್ಟ್ ನಿಯಮದ ಪ್ರಕಾರ ಬದಲಾಯಿಸಿಕೊಂಡಿದ್ದಾರೆ. ಇವರು ವಾರಣಾಸಿಯಲ್ಲಿ ಮತ ಹಾಕಿಲ್ಲ, ಹಾಕಿದ್ರೆ ಪ್ರೂವ್ ಮಾಡಿ

    ಆರೋಪ 2: ಒಂದೇ ವಿಳಾಸದ 10,452 ಬಲ್ಕ್ ಮತದಾರರು
    ಉತ್ತರ – ನಕಲಿ ವಿಳಾಸದ ಚೆಕ್ ಮಾಡಿದ್ದು, 13 ಜನ ಸಿಕ್ಕಿದ್ದಾರೆ. ಇವರು ವಿಳಾಸ ಕೊಟ್ಟರೂ ಆಯೋಗದವರು ಸೇರಿಸಿಲ್ಲ. ಒಂದೇ ಮನೆ ನಂಬರ್ 35 ಅಂತ ಇದೆ. ಇಲ್ಲಿ 80 ವೋಟರ್ಸ್ ಇದ್ದಾರೆ ಅಂದಿದ್ದಾರೆ. ಬಲ್ಕ್ ವೋಟರ್ಸ್ ಬಿಟಿಎಂ ಲೇಔಟ್‌ನಲ್ಲೂ ಇದ್ದಾರೆ. ಬಲ್ಕ್ ಮತದಾರರ ಕುರಿತ ಆರೋಪ ಸರಿಯಲ್ಲ.

    ಆರೋಪ 3: 40,009 ನಕಲಿ ವಿಳಾಸಗಳು ಮತ್ತು ಅಸಿಂಧು ಮತಗಳು
    ಉತ್ತರ – ನಮ್ಮ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಮನೆ ವಿಳಾಸದ ಜಾಗದಲ್ಲಿ ಜೀರೋ ಇದೆ ಅಂತ ಅಂದಿದ್ದಾರೆ. ಸಿಎಂ ಅವರ ವರುಣಾ ಕ್ಷೇತ್ರದಲ್ಲಿ ಮನೆ ವಿಳಾಸದ ಜಾಗದಲ್ಲಿ ಜೀರೋ ಜೀರೋ ಅಂತ ಇದೆ. ವರುಣಾದ ವಾರ್ಡ್ ನಂಬರ್ 8 ರಲ್ಲಿ ವಿಳಾಸ ಜಾಗದಲ್ಲಿ ಜೀರೋ ಅಂತ ಇದೆ. ನಮ್ಮಲ್ಲಿ ಇದು ತಪ್ಪಾಗಿದ್ರೆ, ಸಿದ್ದರಾಮಯ್ಯ ಕ್ಷೇತ್ರದ್ದೂ ತಪ್ಪೇ ಅಲ್ಲವಾ? ಸಂಡೂರು, ಮಾನ್ವಿ, ಮಸ್ಕಿ ಕ್ಷೇತ್ರಗಳಲ್ಲೂ ಮನೆ ವಿಳಾಸದ ಜಾಗದಲ್ಲಿ ಜೀರೋ ಜೀರೋ ಅಂತ ಇದೆ. ಇದು ಒಂದು ಎರರ್, ಸರಿಪಡಿಸುವ ಹೊಣೆ ಆಯೋಗದ್ದು. ಇದನ್ನೂ ಓದಿ: ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ‍ – ರಾಹುಲ್ ವಿರುದ್ಧ ಹೆಚ್‌ಡಿಕೆ ಕಿಡಿ

    ಆರೋಪ 4: ಫಾರ್ಮ್ 6ರ (ಹೊಸ ಮತದಾರ) ದುರ್ಬಳಕೆ-33692
    ಉತ್ತರ – ಶಕುನ್ ರಾಣಿಯಯವರು 2 ಕಡೆ ಮತ ಹಾಕಿದ್ದಾರೆ ಎಂದು ರಾಹುಲ್ ಆರೋಪಿಸಿದ್ದು, ಅದನ್ನೂ ತಪಾಸಣೆ ಮಾಡಿದ್ದೇವೆ. ಅವರು ಒಂದೇ ಕಡೆ ಮತ ಹಾಕಿದ್ದಾರೆ.

    ಆರೋಪ 5: ನಕಲಿ ಫೋಟೋಗಳು 4,132
    ಉತ್ತರ – ಅಪ್‌ಲೋಡ್ ‌ಮಾಡುವಾಗ ಫೋಟೋಗಳು ಹಾಗೆ ಬಂದಿವೆ. ಮಂಡೂರಿನ ಬೂತ್ ನಂಬರ್ 5 ರಲ್ಲಿ ಈ ಮತದಾರರು ಇದ್ದಾರೆ. ಫೋಟೋ ಸರಿಯಿಲ್ಲ ಅಂದ್ರೆ ವೋಟರ್ ಕಾರ್ಡ್ ಒಂದೇ ನೋಡಲ್ಲ, ಬೇರೆ ಗುರುತು ಚೀಟಿ ನೋಡಿಯೇ ವೋಟ್ ಹಾಕೋಕೆ ಅವಕಾಶ ಕೊಡೋದು ಎಂದು ಅರವಿಂದ್‌ ಲಿಂಬಾವಳಿ ಉತ್ತರಿಸಿದ್ದಾರೆ. ಆ ಮೂಲಕ ರಾಹುಲ್‌ ಗಾಂಧಿ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾರೆ.

  • ದಾವಣಗೆರೆಯಲ್ಲಿ ಅತೃಪ್ತರ ಬಲ ಪ್ರದರ್ಶನ – ಬಿಎಸ್‌ವೈ ವಿರುದ್ಧ ಸಿದ್ದೇಶ್ವರ್, ಲಿಂಬಾವಳಿ ಗುಡುಗು

    ದಾವಣಗೆರೆಯಲ್ಲಿ ಅತೃಪ್ತರ ಬಲ ಪ್ರದರ್ಶನ – ಬಿಎಸ್‌ವೈ ವಿರುದ್ಧ ಸಿದ್ದೇಶ್ವರ್, ಲಿಂಬಾವಳಿ ಗುಡುಗು

    ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ (Davanagere) ಕೇಂದ್ರದ ಮಾಜಿ ಸಚಿವ ಜಿಎಂ ಸಿದ್ದೇಶ್ವರ್ (GM Siddeshwar) ಜನ್ಮದಿನ ಸಂಭ್ರಮ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ಬಿಎಸ್‌ವೈ, ರೇಣುಕಾಚಾರ್ಯ ವಿರುದ್ಧ ರೆಬೆಲ್ ನಾಯಕರು ಮುಗಿಬಿದ್ದು ಕೆಂಡ ಕಾರಿದರು.

    ಇಂದು ಬೆಣ್ಣೆನಗರಿ ಬಿಜೆಪಿಯಲ್ಲಿ ಅಕ್ಷರಶಃ ಇನ್‌ಸೈಡ್ ಸ್ಟೋರಿಗಳು ಓಪನ್ ಆದವು. ಸುಮಾರು ದಿನಗಳಿಂದ ಹೊಟ್ಟೆಯಲ್ಲಿ ಬಚ್ಚಿಟ್ಟ ಸಂಗತಿಗಳು ಹೊರಬಂದವು, ಕಾರ್ಯಕರ್ತರಿಗೆ ಕನಸಲ್ಲೂ ಕಂಡಿರದ ವಿಷಯಗಳ ಅನಾವರಣ ಆಗಿತ್ತು. ನಾಯಕರ ಮಧ್ಯ ಈ ರೀತಿ ಆಗಿದೆಯಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಸಂದರ್ಭ ನಿರ್ಮಾಣ ಆಗಿತ್ತು. ಮಾಜಿ ಸಚಿವ ಜಿಎಂ ಸಿದ್ದೇಶ್ವರ್ ಅವರ 74ನೇ ಜನ್ಮದಿನವನ್ನ ಅಭಿಮಾನಿ ಬಳಗದಿಂದ ನಗರದ ರೇಣುಕಾ ಮಂದಿರದಲ್ಲಿ ಏರ್ಪಡಿಸಲಾಗಿತ್ತು. ಮೊದಲಿಗೆ ಇದು ಜನ್ಮದಿನ ಮಾತ್ರ ಎಂದು ನಾಯಕರು ಸಾರಿದ್ದರು. ಆದರೆ ಬರುಬರುತ್ತಾ ಆಗಿದ್ದೆ ಬೇರೆ. ಬಿಜೆಪಿ ರೆಬೆಲ್ಸ್ ನಾಯಕರ ಶಕ್ತಿ ಪ್ರದರ್ಶನಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು. ಅರವಿಂದ್ ಲಿಂಬಾವಳಿ, ಗೋವಿಂದ ಕಾರಜೋಳ, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ, ಬಿಪಿ ಹರೀಶ್ ಸೇರಿದಂತೆ ಹಲವು ನಾಯಕರ ಸಮಾಗಮವಾಯಿತು. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲು ಎಎಸ್‌ಐ, ಮನೋವೈದ್ಯ ಸೇರಿ ಮೂವರು ಶಂಕಿತ ಉಗ್ರರ ಬಂಧನ

    ಈ ವೇಳೆ ಮಾತನಾಡಿದ ಅರವಿಂದ ಲಿಂಬಾವಳಿ (Aravind Limbavali), ಯಡಿಯೂರಪ್ಪ (BS Yediyurappa) ಪಕ್ಷ ಬಿಟ್ಟು ಹೋದವರು. ಕಾಂಗ್ರೆಸ್, ಜೆಡಿಎಸ್ ಕದ ತಟ್ಟಿ ಬಂದವರು. ಮತ್ಯಾಕೆ ವಾಪಾಸ್ ಬಂದರೋ ಗೊತ್ತಿಲ್ಲ. ಯಡಿಯೂರಪ್ಪ ಸಿಎಂ ಆಗೋಕೆ ಸಿದ್ದೇಶ್ವರ್ ಕಾರಣ. ಆದರೆ ಸಿದ್ದೇಶ್ವರ್ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ನೇರವಾಗಿ ಟಾಂಗ್ ಕೊಟ್ಟು ಕಿಡಿಕಾರಿದರು. ಇದನ್ನೂ ಓದಿ: 50 ಮೌಲಾನ ಆಜಾದ್ ಮಾದರಿ ಶಾಲೆ ತೆರೆಯಲು ಸರ್ಕಾರ ಆದೇಶ – ವಿಪಕ್ಷಗಳ ಕಿಡಿ

    ಕಾರ್ಯಕ್ರಮದ ಉದ್ದಕ್ಕೂ ದಾವಣಗೆರೆ ಎಂಪಿ ಸೋಲಿನ ಚರ್ಚೆ, ಬಿಎಸ್‌ವೈ ವಿಚಾರವೇ ಪ್ರಮುಖವಾಗಿತ್ತು. ರೇಣುಕಾಚಾರ್ಯ ಅಂಡ್ ಟೀಂ ಸೋಲಿಗೆ ಪ್ರಮುಖ ಕಾರಣ ಹಾಗೂ ಬಿಎಸ್ ವೈ, ವಿಜಯೇಂದ್ರ ಕಾರಣ ಎಂದು ನಾಯಕರು ಪರೋಕ್ಷವಾಗಿ ಆರೋಪಿಸಿದರು. ನಮ್ಮವರ ಅಡ್ಜಸ್ಟ್ಮೆಂಟ್ ಕಾರಣದಿಂದ ಕಾಂಗ್ರೆಸ್ ಗೆದ್ದಿದೆ. ಮೊಣಕಾಲುದ್ದ ನೀರಲ್ಲಿ ದೋಣಿ ಚಲಾಯಿಸಿ, ಕೊರೊನಾ ಟೈಂನಲ್ಲಿ ಡಿಂಗ್ ಡಾಂಗ್ ಮಾಡಿದ್ರು ಎಂದು ರೇಣುಕಾಚಾರ್ಯಗೆ ಪ್ರತಾಪ್ ಸಿಂಹ ಟಾಂಗ್ ಕೊಟ್ಟರು. ಇದನ್ನೂ ಓದಿ: 111.8 ಕೋಟಿ ಅನುದಾನದ ಬಳಿಕವೂ ಶಾಲಾ ಮಕ್ಕಳ ಶೂ-ಸಾಕ್ಸ್‌ಗಾಗಿ ದಾನಿಗಳ ಮೊರೆಹೋದ ಸರ್ಕಾರ

    2006ರಲ್ಲಿ ಮೊದಲ ಭಾರೀ ಬಿಜೆಪಿ ಸರ್ಕಾರ ಬರಲು ನಾನೇ ಕಾರಣ. ಕುಮಾರಸ್ವಾಮಿ ಸಿಎಂ, ಬಿಎಸ್‌ವೈ ಸಿಎಂ ಆಗೋ ವಿಚಾರ ಮಾತುಕತೆ ಮಾಡಿದ್ದೇ ನಾನು. ನಂತರ 110 ಸೀಟು ಬಂದಾಗ ಉಳಿದ ಶಾಸಕರನ್ನ ಕರೆದುಕೊಂಡು ಬಂದು ಬಿಎಸ್‌ವೈ ಸಿಎಂ ಮಾಡಿದ್ದೇ ನಾವು. ಅವರಿಂದ ನಾನೇನು ಗಳಿಸಿಲ್ಲ, ಪಡೆದಿಲ್ಲ. ನನ್ನನ್ನು ಮಂತ್ರಿ ಮಾಡಿದ್ದಾರೆ ಎಂದಿದ್ದಾರೆ. ನನ್ನನ್ನು ಮಂತ್ರಿ ಮಾಡಿದ್ದು ಮೋದಿಜಿ, ಅನಂತಕುಮಾರ್. ಇವರಿಂದ ನಾನೇನು ಪಡೆದಿಲ್ಲ, ನನ್ನಿಂದ ಇವರಿಗೆ ಅನುಕೂಲ ಆಗಿದೆ. ಆದರೆ ನನ್ನ ಪತ್ನಿಯನ್ನು ಚುನಾವಣೆಯಿಂದ ಸೋಲಿಸಿದರು ಎಂದು ಸಿದ್ದೇಶ್ವರ್ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ

    ಒಟ್ಟಾರೆ ಬೆಣ್ಣೆನಗರಿಯಲ್ಲಿಂದು ರೆಬೆಲ್ಸ್ ಸೈಲೆಂಟಾಗಿ ಠಕ್ಕರ್ ಮೇಲೆ ಠಕ್ಕರ್ ಕೊಟ್ಟರು. ರಾಜ್ಯಾಧ್ಯಕ್ಷ ವಿಜಯೇಂದ್ರ ಹೆಸರು ಪ್ರಸ್ತಾಪಿಸಿದರೆ ತೊಡಕಾಗಬಹುದೆಂದ ಅರಿತ ನಾಯಕರು ಚಾಣಾಕ್ಷತನದಿಂದ ಮಾತುಗಳನ್ನಾಡಿದರು. ವಿಜಯೇಂದ್ರನ ಬಿಟ್ಟು ಯಡಿಯೂರಪ್ಪ ವಿರುದ್ಧ ಸೈಲೆಂಟಾಗಿ ಸಮರ ಸಾರಿದಂತೆ ಕಾಣುತ್ತಿದೆ. ಇನ್ನೊಂದು ಕಡೆ ಬಿಎಸ್‌ವೈ, ರೇಣುಕಾಚಾರ್ಯ ವಿರುದ್ಧ ಮಾತನಾಡಬೇಕಾದದ್ದನ್ನೆಲ್ಲ ಮಾತಾಡಿಬಿಟ್ಟರು. 30 ವರ್ಷದಿಂದ ಭದ್ರಕೋಟೆಯಾಗಿದ್ದ ದಾವಣಗೆರೆಯನ್ನು ಲಗಾನ್ ಟೀಂನಿಂದ ಕಳೆದುಕೊಂಡಿದ್ದರ ಕುರಿತಾಗಿ ಎಲ್ಲರು ರೋಷಾವೇಶ ಹೊರ ಹಾಕಿದರು. ಇದನ್ನೂ ಓದಿ: 15 ಏಷ್ಯನ್ ರಾಷ್ಟ್ರಗಳ ಎದುರು ವಿಜಯಪುರದ ಇತಿಹಾಸ ಅನಾವರಣಗೊಳಿಸಿದ ಡಿಸಿ

  • ಬಿಜೆಪಿ ಬಣ ವೀರರ ಲಿಂಗಾಯತ ಸಭೆಗಳಿಗೆ ಹೈಕಮಾಂಡ್ ಬ್ರೇಕ್ – ಬಿವೈವಿ ವಿರುದ್ಧ ಅಮಿತ್ ಶಾಗೆ ಲಿಂಬಾವಳಿ ದೂರು

    ಬಿಜೆಪಿ ಬಣ ವೀರರ ಲಿಂಗಾಯತ ಸಭೆಗಳಿಗೆ ಹೈಕಮಾಂಡ್ ಬ್ರೇಕ್ – ಬಿವೈವಿ ವಿರುದ್ಧ ಅಮಿತ್ ಶಾಗೆ ಲಿಂಬಾವಳಿ ದೂರು

    ನವದೆಹಲಿ\ಬೆಂಗಳೂರು: ರಾಜ್ಯ ಬಿಜೆಪಿ ಗೊಂದಲ ಶಮನಕ್ಕೆ ಕೊನೆಗೂ ಹೈಕಮಾಂಡ್ ಮುಂದಾಗಿದೆ. ಬಿಜೆಪಿಯಲ್ಲಿ ನಡೆಯುತ್ತಿದ್ದ ಲಿಂಗಾಯತ ವರ್ಸಸ್ ಲಿಂಗಾಯತ ಸಮರಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆ. ಈ ಬೆನ್ನಲ್ಲೇ ಎರಡೂ ಬಣಗಳ ಸಭೆಗಳಿಗೂ ವಿರಾಮ ಸಿಕ್ಕಿದೆ. ಇನ್ನೊಂದು ಕಡೆ ಮೊನ್ನೆಯಷ್ಟೇ ದೆಹಲಿಗೆ ಹೋಗಿದ್ದ ಅರವಿಂದ ಲಿಂಬಾವಳಿ (Aravind Limbavali) ನೇರವಾಗಿ ಅಮಿತ್ ಶಾ (Amith Shah) ಅವರನ್ನ ಭೇಟಿ ಮಾಡಿ ವಿಜಯೇಂದ್ರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದರು.

    ಇತ್ತೀಚೆಗೆ ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ಇದೀಗ ಬಿಜೆಪಿ ಮನೆ ರಿಪೇರಿಗೆ ಕೈ ಹಾಕಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿದ್ದ ಲಿಂಗಾಯತ ವರ್ಸಸ್ ಲಿಂಗಾಯತ ಸಮರಕ್ಕೆ ಅಮಿತ್ ಶಾ ಬ್ರೇಕ್ ಹಾಕಿದ್ದಾರೆ. ದೆಹಲಿಯಿಂದಲೇ ಖಡಕ್ ಸಂದೇಶ ರವಾನಿಸಿರುವ ಅಮಿತ್ ಷಾ, ಪ್ರತ್ಯೇಕ ಸಭೆಗಳನ್ನು ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: 83,00,00,00,00,000 ಕ್ರಿಪ್ಟೋ ವಂಚನೆ – ಕೇರಳದಲ್ಲಿ ಸಿಬಿಐನಿಂದ ಲಿಥುವೇನಿಯಾದ ಪ್ರಜೆ ಅರೆಸ್ಟ್‌

    ಅಮಿತ್ ಶಾ ಎಚ್ಚರಿಕೆ ಬೆನ್ನಲ್ಲೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಡ್ಯಾಮೇಜ್ ಕಂಟ್ರೊಲ್‌ಗೆ ಮುಂದಾಗಿದ್ದಾರೆ. ಲಿಂಗಾಯತ ಅಸ್ತ್ರ ಮುಂದಿಟ್ಟುಕೊಂಡು ಯಾವುದೇ ಕಾರಣಕ್ಕೂ ಭವಿಷ್ಯದಲ್ಲಿ ಸಭೆ ಹಾಗೂ ಶಕ್ತಿ ಪ್ರದರ್ಶನ ನಡೆಸದಂತೆ ಮಾಜಿ ಶಾಸಕ ರೇಣುಕಾಚಾರ್ಯಗೆ ಬಿಎಸ್‌ವೈ ಅವರು ಖಡಕ್ ಸಂದೇಶ ನೀಡಿದ್ದಾರೆ. ಬುಧವಾರ ರಾತ್ರಿ ತಮ್ಮ ಧವಳಗಿರಿ ನಿವಾಸಕ್ಕೆ ರೇಣುಕಾಚಾರ್ಯ ಅವರನ್ನು ಕರೆಸಿಕೊಂಡು ಮಾತಾಡಿರುವ ಯಡಿಯೂರಪ್ಪ ಅವರು, ವಿಜಯೇಂದ್ರ ಬೆಂಬಲಿಸಿ ಲಿಂಗಾಯತರು ಯಾವುದೇ ಸಭೆ ನಡೆಸದಂತೆ ಸೂಚನೆ ನೀಡಿದ್ದಾರೆ. ಯಡಿಯೂರಪ್ಪ ಸೂಚನೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಸುಮ್ಮನಿದ್ದರೂ ಸಮುದಾಯದ ಮಹಾಸಂಗಮ ಸಮಾವೇಶ ನಡೆಸುವುದಾಗಿ ರೇಣುಕಾಚಾರ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಪದ್ದತಿ ಜಾರಿ ಮಾಡ್ತೀವಿ, ಸಮಯ ನಿಗದಿ ಮಾಡಲು ಆಗಲ್ಲ: ಬೋಸರಾಜು

    ರೆಬೆಲ್ ನಾಯಕ ಯತ್ನಾಳ್ ಸಹ ಮಾ. 22ರಂದು ನಡೆಸಬೇಕಿದ್ದ ಲಿಂಗಾಯತ ಸಮಾವೇಶವನ್ನು ಮುಂದೂಡಿದ್ದಾರೆ. ಬುಧವಾರ ತಂಡದ ಪ್ರಮುಖರ ಸಭೆ ನಡೆಸಿದ್ದ ಯತ್ನಾಳ್ ಹಾಗೂ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಲಿಂಗಾಯತ ಸಮಾವೇಶ ಸದ್ಯಕ್ಕೆ ನಡೆಸದಿರುವ ತೀರ್ಮಾನಕ್ಕೆ ಬಂದಿದ್ದಾರೆ. ಇದನ್ನೂ ಓದಿ: ಬೈಕ್ ಅಡ್ಡಗಟ್ಟಿ ವ್ಯಕ್ತಿಯ ಬರ್ಬರ ಹತ್ಯೆ

    ಈ ನಡುವೆ ವಿಜಯೇಂದ್ರಗೆ ಕೊಂಚ ಹಿನ್ನಡೆಯಾಗುವ ವಿದ್ಯಮಾನ ನಡೆದಿದೆ. ರಾಜ್ಯಾಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರರನ್ನ ಮುಂದುವರೆಸದಂತೆ ನೇರವಾಗಿ ಅಮಿತ್ ಷಾ ಅವರಿಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹುಟ್ಟೂರಿನ ರಥೋತ್ಸವದಲ್ಲಿ ತೇರು ಎಳೆದ ಅರ್ಜುನ್ ಸರ್ಜಾ, ಧ್ರುವ ಸರ್ಜಾ

    ಮಾ. 11ರಂದು ಅರವಿಂದ ಲಿಂಬಾವಳಿ, ಅಮಿತ್ ಷಾ ಬುಲಾವ್ ಮೇರೆಗೆ ದೆಹಲಿಗೆ ಹೋಗಿದ್ದರು. ದೆಹಲಿಯ ಸಂಸತ್ ಭವನದಲ್ಲಿ ಸುಮಾರು 15 ನಿಮಿಷಗಳ ಕಾಲ ಅಮಿತ್ ಶಾ ಜತೆ ಅರವಿಂದ ಲಿಂಬಾವಳಿ ಮಾತುಕತೆ ನಡೆಸಿ ರಾಜ್ಯ ಬಿಜೆಪಿಯ ಪ್ರಸಕ್ತ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರಾಗಿ ಮುಂದುವರೆಸದಂತೆ ಕಾರಣ ಸಹಿತ ದೂರು ಕೊಟ್ಟು ಬಂದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರನ್ಯಾಗೆ ಮಾತ್ರ ಸಿನಿಮಾ ನಂಟಿಲ್ಲ – ಆರೋಪಿ ತರುಣ್‌ಗೆ ಇದೆ ಟಾಲಿವುಡ್ ನಂಟು!

    ರಾಜ್ಯ ಬಿಜೆಪಿಯತ್ತ ಹೈಕಮಾಂಡ್ ಈಗ ಗಮನ ಕೊಡುತ್ತಿರುವುದು ನಿಷ್ಠ ಬಿಜೆಪಿಗರಲ್ಲಿ ಸಮಾಧಾನ ತಂದಿದೆ. ವಿಜಯೇಂದ್ರ ಹಾಗೂ ಯತ್ನಾಳ್ ಬಣಗಳಲ್ಲಿ ಏನಾಗುತ್ತದೋ ಎಂಬ ಆತಂಕ ಸೃಷ್ಟಿಸಿದೆ. ಆದರೆ ಈ ಬಾರಿ ಹೈಕಮಾಂಡ್ ನಿಜಕ್ಕೂ ಬಿಜೆಪಿಯ ಭಿನ್ನಮತ, ಗೊಂದಲ ಸರಿಪಡಿಸುತ್ತದೆಯೇ ಎನ್ನುವ ಪ್ರಶ್ನೆಗೆ ಉತ್ತರವನ್ನು ಕಾದು ನೋಡಬೇಕಿದೆ.

  • ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರದೀಪ್ ನಮ್ಮ ಕಾರ್ಯಕರ್ತನೇ – ಲಿಂಬಾವಳಿ ಸ್ಪಷ್ಟನೆ

    ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರದೀಪ್ ನಮ್ಮ ಕಾರ್ಯಕರ್ತನೇ – ಲಿಂಬಾವಳಿ ಸ್ಪಷ್ಟನೆ

    ಬೆಂಗಳೂರು: ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಉದ್ಯಮಿ (Businessman) ಪ್ರದೀಪ್ ನಮ್ಮ ಪಕ್ಷದ ಕಾರ್ಯಕರ್ತನೇ ಎಂದು ಶಾಸಕ ಅರವಿಂದ್ ಲಿಂಬಾವಳಿ (Arvind Limbavali) ಸ್ಪಷ್ಟನೆ ನೀಡಿದ್ದಾರೆ.

    ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ವಿರುದ್ಧ ಎಫ್‌ಐಆರ್ (FIR) ದಾಖಲಾಗಿರುವ ಕುರಿತು ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ. ನಿನ್ನೆಯಿಂದಲೂ ಕುತೂಹಲದಿಂದ ಬಹಳ ಜನ ನನಗೆ ಕರೆ ಮಾಡಿದ್ದರು. ಆ ಘಟನೆ ಬಗ್ಗೆ ಸ್ಪಷ್ಟಿಕರಣ ಕೊಡಲು ಮಾತನಾಡುತ್ತಿದ್ದೇನೆ. ಮೊದಲನೆಯದಾಗಿ ಪ್ರದೀಪನ ಆತ್ಮಕ್ಕೆ ಶಾಂತಿ ಸಿಗಲಿ, ಅವನು ನಮ್ಮ ಕಾರ್ಯಕರ್ತನೆ ಎಂದು ತಿಳಿಸಿದ್ದಾರೆ. 

    ಪ್ರದೀಪ್ ನಮ್ಮ ಪಕ್ಷದ ಕಾರ್ಯಕರ್ತ, 2019ರ ಚುನಾವಣೆಯಲ್ಲಿ (Election) ಸೋಷಿಯಲ್ ಮೀಡಿಯಾ (Social Media) ಕಾಂಟ್ರ್ಯಾಕ್ಟ್‌ ತೆಗೆದುಕೊಂಡು ಕೆಲಸ ಮಾಡಿದರು. ಆ ನಂತರ ಕಾರ್ಯಕರ್ತನಾಗಿ ವಾರ್ಡ್ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದ. ಅಂತಹವನು ಈ ಸ್ಥಿತಿಗೆ ಹೋಗಿರುವುದು ದುರದೃಷ್ಟಕರ ಎಂದು ವಿಷಾದಿಸಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಸಿನಿಮಾದಲ್ಲಿ ನಾನಾ ಪಾಟೇಕರ್: ಏನಿದು ಮಿಸ್ ಮ್ಯಾಚ್ ಜೋಡಿ?

    ಕಳೆದ ಜೂನ್ ತಿಂಗಳ ಜನತಾ ದರ್ಶನ ಕಾರ್ಯಕ್ರಮದಲ್ಲಿ ನನ್ನೊಂದಿಗೆ ಮಾತನಾಡಲು ಬಂದಿದ್ದ. ನನ್ನ ಹತ್ತಿರ ಸಮಸ್ಯೆ ಹೇಳಿಕೊಂಡ. ಕೂಡಲೇ ನಾನು ಅವನು ಹೇಳಿದ ನಂಬರ್‌ಗಳಿಗೆ ಕರೆ ಮಾಡಿದ್ದೆ, ಪ್ರದೀಪ್ ಹೂಡಿಕೆ ಮಾಡಿದ್ದ ಹಣ ವಾಪಸ್ ಕೊಡಿ ಅಂತ ಹೇಳಿದ್ದೆ. ಆದ್ರೆ ಕರೆ ಸ್ವೀಕರಿಸಿದ್ದ ವ್ಯಕ್ತಿ ಕೊರೊನಾ ಸಂಕಷ್ಟ ನಿವಾರಿಸಿಕೊಂಡು ಹಣ ಕೊಡ್ತೀವಿ ಎಂದಿದ್ದರು. 15 ದಿನದ ನಂತರ ಪುನಃ ಬಂದಾಗ ಅವನು ಹೇಳಿದ ಇಬ್ಬರಿಗೂ ಮತ್ತೆ ಕರೆ ಮಾಡಿ ಖಾರವಾಗಿಯೇ ಹೇಳಿದೆ. ಪ್ರದೀಪ್ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾನೆ ಹಣ ಸೆಟ್ಲು ಮಾಡಿ ಅಂತಾ ವಾರ್ನಿಂಗ್ ಸಹ ಮಾಡಿದ್ದೆ. ನಂತರ ಗುದ್ದಲಿ ಪೂಜೆ ಕಾರ್ಯಕ್ರಮವೊಂದರಲ್ಲಿ ಸಿಕ್ಕಿ ಸಮಸ್ಯೆ ಬಗೆಹರಿದಿದೆ ಥ್ಯಾಂಕ್ಸ್ ಅಂತಾ ಹೇಳಿದ್ದ ಎಂದು ವಿವರಿಸಿದ್ದಾರೆ.

    ಅದಾದ ನಂತರ ಬೆಳ್ಳಂದೂರು ಠಾಣೆಯಲ್ಲಿ ಅವರ ಪತ್ನಿ ದೂರು ನೀಡಿದ್ದರು. ಅವರ ಕೌಟುಂಬಿಕ ಸಮಸ್ಯೆ ಆದಾಗ ನನ್ನ ಹತ್ತಿರ ಬಂದಿದ್ದರು. ಆಗಲೂ ಪೊಲೀಸರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಹೇಳಿದ್ದೆ. ಈಗ ಡೆತ್ ನೋಟ್ ಬರೆದಿಟ್ಟಿರುವ ಬಗ್ಗೆಯೂ ತನಿಖೆ ನಡೆಯಬೇಕು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

    ಎಫ್‌ಐಆರ್‌ನಲ್ಲಿ ಹೆಸರು ದಾಖಲಾಗಿರೋ ಗೋಪಿ, ಸುಬ್ಬಯ್ಯ ಎಲ್ಲರೂ ನನಗೆ ಪರಿಚಯಸ್ಥರೇ. ಅವರು ವೈಟ್ ಪಟೇಲ್ಸ್‌ನ (White Petals) ಮಾಲಿಕರು. ನಮ್ಮ ಪಕ್ಷದ ಕಾರ್ಯಕ್ರಮಗಳು ಅಲ್ಲಿ ನಡೆಯುತ್ತಿರುತ್ತದೆ. ಆದ್ದರಿಂದ ಸಹಜವಾಗಿಯೇ ಪರಿಚಯ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ ಪ್ರಕರಣ – ಲಿಂಬಾವಳಿ ಸೇರಿ 6 ಜನರ ವಿರುದ್ಧ FIR

    ಏನಿದು ಪ್ರಕರಣ?
    ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಒಟ್ಟು 6 ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಉದ್ಯಮಿ ಪ್ರದೀಪ್ ಡೆತ್ ನೋಟ್‌ನಲ್ಲಿ ಲಿಂಬಾವಳಿ ಸೇರಿದಂತೆ 6 ಜನರ ಹೆಸರು ಬರೆದಿಟ್ಟು ಬೆಂಗಳೂರಿನ ದಕ್ಷಿಣ ತಾಲೂಕು ನೆಟ್ಟಗೆರೆ ಬಳಿ ತಮ್ಮ ಕಾರಿನಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್ ನೋಟ್‌ನಲ್ಲಿ ಅರವಿಂದ ಲಿಂಬಾವಳಿ, ಗೋಪಿ, ರಘುವ ಭಟ್, ಸೋಮಯ್ಯ, ರಮೇಶ್ ರೆಡ್ಡಿ ಹಾಗೂ ಜಯರಾಮ್ ಎಂದು ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿಯ ಸ್ತ್ರೀಪರ ಕಾಳಜಿಯ ವೀರಾಧಿವೀರರೇ, ಸಿಡಿ ಶೂರರೇ ಲಿಂಬಾವಳಿಯವರನ್ನು ಉಚ್ಛಾಟಿಸುವುದು ಯಾವಾಗ?: ಕಾಂಗ್ರೆಸ್

    ಬಿಜೆಪಿಯ ಸ್ತ್ರೀಪರ ಕಾಳಜಿಯ ವೀರಾಧಿವೀರರೇ, ಸಿಡಿ ಶೂರರೇ ಲಿಂಬಾವಳಿಯವರನ್ನು ಉಚ್ಛಾಟಿಸುವುದು ಯಾವಾಗ?: ಕಾಂಗ್ರೆಸ್

    ಬೆಂಗಳೂರು: ಬಿಜೆಪಿಯ ಸ್ತ್ರೀಪರ ಕಾಳಜಿಯ ವೀರಾಧಿವೀರರೇ, ಸಿಡಿ ಶೂರರೇ, ಕೋರ್ಟಿನಿಂದ ತಡೆಯಾಜ್ಞೆ ತಂದ ಧೀರರೇ. ನಿಮ್ಮ ಪಕ್ಷದ ಅರವಿಂದ್ ಲಿಂಬಾವಳಿಯ ಮಹಿಳೆ ಮೇಲಿನ ದೌರ್ಜನ್ಯಕ್ಕೆ ರೊಚ್ಚಿಗೇಳುವುದು ಯಾವಾಗ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದೆ.

    ಟ್ವೀಟ್‍ನಲ್ಲಿ ಏನಿದೆ?
    ಬಿಜೆಪಿಯ ಸ್ತ್ರೀಪರ ಕಾಳಜಿಯ ವೀರಾಧಿವೀರರೇ, ಸಿಡಿ ಶೂರರೇ, ಕೋರ್ಟಿನಿಂದ ತಡೆಯಾಜ್ಞೆ ತಂದ ಧೀರರೇ. ನಿಮ್ಮ ಪಕ್ಷದ ಅರವಿಂದ್ ಲಿಂಬಾವಳಿಯ ಮಹಿಳೆ ಮೇಲಿನ ದೌರ್ಜನ್ಯಕ್ಕೆ ರೊಚ್ಚಿಗೇಳುವುದು ಯಾವಾಗ? ಸ್ತ್ರೀ ಕುಲದ ಗೌರವವನ್ನು ಎತ್ತಿ ಹಿಡಿಯುವುದು ಯಾವಾಗ? ನಳಿನ್ ಕುಮಾರ್ ಕಟೀಲ್ ಅವರೇ, ಲಿಂಬಾವಳಿಯವರನ್ನು ಉಚ್ಛಾಟಿಸುವುದು ಯಾವಾಗ?. ಇದನ್ನೂ ಓದಿ: ಕೇಳುವಷ್ಟು ಶಾಂತಿ, ಸಹನೆ ಇಲ್ಲವೆಂದ್ರೆ ಕ್ಷೇತ್ರದ ಶಾಸಕರಾಗಿ ಇರುವುದಕ್ಕೆ ಯೋಗ್ಯರಲ್ಲ: ಡಿಕೆಶಿ

    ಮಹಿಳೆಗೆ ನಿಂದಿಸಿದ್ದರು ಮಾಧುಸ್ವಾಮಿ. ಮಹಿಳೆಗೆ ಹಲ್ಲೆ ಮಾಡಿದ್ದರು ಸಿದ್ದು ಸವದಿ. ಉದ್ಯೋಗ ಕೇಳಿದಾಕೆಯನ್ನು ಮಂಚ ಹತ್ತಿಸಿದ್ದರು ರಮೇಶ್ ಜಾರಕಿಹೊಳಿ. ಅತ್ಯಾಚಾರ ಸಂತ್ರಸ್ತೆಯದ್ದೇ ತಪ್ಪು ಎಂದಿದ್ದರು ಆರಗ ಜ್ಞಾನೇಂದ್ರ. ಮಹಿಳೆಯ ಮೇಲೆ ದರ್ಪ ಮೆರೆದರು ಅರವಿಂದ್ ಲಿಂಬಾವಳಿ. ಇದೇನಾ ಬಿಜೆಪಿಯ ಸ್ತ್ರೀಗೌರವದ ಸಂಸ್ಕೃತಿ? ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಶಾಸಕ ಅರವಿಂದ್ ಲಿಂಬಾವಳಿಯ ವರ್ತನೆಯು ಬಿಜೆಪಿಯ ಜನವಿರೋಧಿ ಧೋರಣೆ, ದುರಹಂಕಾರ ಪರಮಾವಧಿಗೆ ತಲುಪಿರುವುದಕ್ಕೆ ಸಾಕ್ಷಿ. ಜನತೆಯ ಮೇಲೆ ದರ್ಪ ತೋರಿದ ಮಾತ್ರಕ್ಕೆ ನಿಮ್ಮ ಅಯೋಗ್ಯತನ ಮರೆಯಾಗುವುದಿಲ್ಲ. ಇದನ್ನೂ ಓದಿ: ಕ್ಷಮೆ ಕೇಳೋಕೆ ಸಿದ್ಧ, ಒತ್ತುವರಿ ತೆರವು ಮಾಡಿಸಿ- ಕಾಂಗ್ರೆಸ್‍ಗೆ ಲಿಂಬಾವಳಿ ಟಾಂಗ್

    ಬೊಮ್ಮಾಯಿ ಅವರೇ, ನಿಮ್ಮ ಶಾಸಕರ ಈ ವರ್ತನೆ ನಿಮಗೆ ಸಹ್ಯವೇ? ಮಹಿಳೆಯ ಮೇಲೆ ದಬ್ಬಾಳಿಕೆ ಎಸಗಿದ್ದಲ್ಲದೆ “ನಾನೇನು ರೇಪ್ ಮಾಡಿದ್ನಾ” ಎಂದು ಉದ್ಧಟತನದಲ್ಲಿ ಕೇಳಿದ ಅರವಿಂದ್ ಲಿಂಬಾವಳಿ ಅವರ ಮಾತುಗಳು ಇಡೀ ಬಿಜೆಪಿ ಸಂಸ್ಕೃತಿಗೆ ಹಿಡಿದ ಕನ್ನಡಿ. ಲಿಂಬಾವಳಿಯ ಈ ಮಾತುಗಳು ಇಡೀ ಸ್ತ್ರೀ ಕುಲಕ್ಕೆ ಮಾಡಿದ ಘೋರ ಅವಮಾನ. ಇಂತಹ ಕೊಳಕು ಮನಸ್ಥಿತಿಯ ಶಾಸಕನ ವಿರುದ್ಧ ಕ್ರಮ ಕೈಗೊಳ್ಳದೆ ಸಿಎಂ ಮೌನವಹಿಸಿರುವುದು ಏಕೆ? ತನ್ನದೇ ಮತಕ್ಷೇತ್ರದ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದರೂ ಶಾಸಕ ಅರವಿಂದ್ ಲಿಂಬಾವಳಿ ವಿರುದ್ಧ ಕ್ರಮ ಜರುಗಿಸದೆ ನಾಲಿಗೆ ಉದ್ಧವಾಗಲು ಬಿಟ್ಟ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಂಡಿಯೂರಿ ರಾಜ್ಯದ ಮಹಿಳೆಯರ ಕ್ಷಮೆ ಕೇಳಬೇಕು. ಇದನ್ನೂ ಓದಿ: ಮನವಿ ಸಲ್ಲಿಸಲು ಬಂದ ಮಹಿಳೆಗೆ ಗದರಿದ ಅರವಿಂದ ಲಿಂಬಾವಳಿ

    ಬಿಜೆಪಿಗೆ ನಿಜಕ್ಕೂ ಮಹಿಳೆಯರ ಮೇಲೆ ಗೌರವ ಇದ್ದರೆ ಲಿಂಬಾವಳಿಯನ್ನು ವಜಾಗೊಳಿಸಿ ನಿರೂಪಿಸಲಿ. ಬಿಜೆಪಿ ರೇಪ್ ಆರೋಪಿ ರಮೇಶ್ ಜಾರಕಿಹೊಳಿಯನ್ನೇ ಸಮರ್ಥಿಸಿಕೊಂಡಿದೆ. ಮೈಸೂರಿನ ರೇಪ್ ಸಂತ್ರಸ್ತೆಯನ್ನು ದೂಷಿಸಿದೆ. ಗುಜರಾತ್‍ನಲ್ಲಿ ರೇಪಿಸ್ಟನನ್ನು ಸನ್ಮಾನಿಸಿದೆ. ಕಾಶ್ಮೀರದಲ್ಲಿ ರೇಪ್ ಆರೋಪಿಗಳ ಮೆರವಣಿಗೆಯನ್ನೇ ಮಾಡಿದೆ. ಇಂತಹ ಮಹಿಳಾವಿರೋಧಿ ಬಿಜೆಪಿಗೆ ಲಿಂಬಾವಳಿ ಮಾತು ಪ್ರಿಯವಾಗಬಹುದು, ಆದರೆ ರಾಜ್ಯದ ಮಹಿಳೆಯರಿಗೆ ಅದು ಅಸಹ್ಯವಾಗಿದೆ. ‘ಬೇಟಿ ಬಚಾವ್’ ಆಗಬೇಕಿರುವುದು ಬಿಜೆಪಿಯ ಗೂಂಡಾಗಳಿಂದ! ಮನುಶಾಸ್ತ್ರವನ್ನು ನಂಬುವ ಬಿಜೆಪಿಗೆ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಎಸಗುವುದು ಪರಂಪರೆಯಿಂದ ಬಂದ ಗುಣ. ಮಹಿಳೆಯನ್ನು ನಿಂದಿಸಿ, ದೌರ್ಜನ್ಯವೆಸಗಿದ ಅರವಿಂದ್ ಲಿಂಬಾವಳಿ ವಿರುದ್ಧ ಯಾವ ಕ್ರಮ ಕೈಗೊಳ್ಳುವಿರಿ ಬೊಮ್ಮಾಯಿ ಅವರೇ? ಅಥವಾ ಈ ದೌರ್ಜನ್ಯಕ್ಕೆ ನಿಮ್ಮ ಬೆಂಬಲವೂ ಇದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಒಬ್ಬ ಜನಪ್ರತಿನಿಧಿಯಾಗಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಅಕ್ಷಮ್ಯ : ಲಿಂಬಾವಳಿ ವಿರುದ್ಧ ಕಾಂಗ್ರೆಸ್ ಕಿಡಿ

    ಒಬ್ಬ ಜನಪ್ರತಿನಿಧಿಯಾಗಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಅಕ್ಷಮ್ಯ : ಲಿಂಬಾವಳಿ ವಿರುದ್ಧ ಕಾಂಗ್ರೆಸ್ ಕಿಡಿ

    ಬೆಂಗಳೂರು: ಒಬ್ಬ ಜನಪ್ರತಿನಿಧಿಯಾಗಿ ಮಹಿಳೆಯೊಂದಿಗೆ ಅನುಚಿತವಾಗಿ ನಡೆದುಕೊಂಡ ರೀತಿ ಅಕ್ಷಮ್ಯ ಎಂದು ಶಾಸಕ ಅರವಿಂದ್ ಲಿಂಬಾವಳಿ ವಿರುದ್ಧ ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದೆ.

    ಮಹಿಳೆಯ ಮೇಲೆ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ದರ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಶಾಸಕ ಲಿಂಬಾವಳಿಯ ವರ್ತನೆ ಬಿಜೆಪಿಯ ಜನವಿರೋಧಿ ಧೋರಣೆ. ಇದು ದುರಹಂಕಾರ ಪರಮಾವಧಿಗೆ ತಲುಪಿರುವುದಕ್ಕೆ ಸಾಕ್ಷಿ. ದರ್ಪ ತೋರಿದ ಮಾತ್ರಕ್ಕೆ ನಿಮ್ಮ ಅಯೋಗ್ಯತೆ ಮರೆಯಾಗುವುದಿಲ್ಲ.
    ಬೊಮ್ಮಾಯಿ ಅವರೇ, ನಿಮ್ಮ ಶಾಸಕರ ಈ ವರ್ತನೆ ನಿಮಗೆ ಸಹ್ಯವೇ ಎಂದು ವಾಗ್ದಾಳಿ ನಡೆಸಿದ್ದಾರೆ.

    ಸ್ತ್ರೀ ಉದ್ಧಾರಕರಂತೆ ಕೇವಲ ಬೂಟಾಟಿಕೆಯ ಮಾತಾಡುವ ಬಿಜೆಪಿಗರೇ, ನಿಮ್ಮ ಪಕ್ಷದ ಅರವಿಂದ ಲಿಂಬಾವಳಿಯವರು ಒಬ್ಬ ಜನಪ್ರತಿನಿಧಿಯಾಗಿ ಮಹಿಳೆಯೊಂದಿಗೆ ಅನುಚಿತವಾಗಿ ನಡೆದುಕೊಂಡ ರೀತಿ ಅಕ್ಷಮ್ಯ. ಇಂಥ ಮಹಿಳಾ ವಿರೋಧಿ ನಡೆಯ ವಿರುದ್ಧ ಮಾತಾಡುವ ಧೈರ್ಯ ತೋರುತ್ತೀರಾ? ಅರವಿಂದ ಲಿಂಬಾವಳಿಯವರು ಆ ಹೆಣ್ಣಿನ ಕ್ಷಮೆ ಕೇಳುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮನವಿ ಸಲ್ಲಿಸಲು ಬಂದ ಮಹಿಳೆಗೆ ಗದರಿದ ಅರವಿಂದ ಲಿಂಬಾವಳಿ

    ಮನವಿ ಸಲ್ಲಿಸಲು ಬಂದ ಮಹಿಳೆಗೆ ಶಾಸಕ ಅರವಿಂದ ಲಿಂಬಾವಳಿ ಗದರಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮಳೆ ಅನಾಹುತ ಪ್ರದೇಶವಾದ ವರ್ತೂರು ಕೆರೆ ಕೋಡಿ ವೀಕ್ಷಿಸಲು ಅಧಿಕಾರಿಗಳ ಜೊತೆ ಅರವಿಂದ ಲಿಂಬಾವಳಿ ಬಂದಿದ್ದರು. ಈ ವೇಳೆ ಸಮಸ್ಯೆ ಹೇಳಲು ಬಂದ ಮಹಿಳೆಗೆ, ನಿನಗೆ ಮಾನ ಮರ್ಯಾದೆ ಇದ್ಯಾ? ನಿನಗೆ ನಾಚಿಕೆ ಆಗಲ್ವಾ ಎಂದು ಏರು ದನಿಯಲ್ಲಿ ಅವಾಜ್ ಹಾಕಿದ್ದಾರೆ. ನಂತರ ಮಹಿಳೆಯನ್ನು ಸ್ಟೇಷನ್‍ಗೆ ಕರೆದುಕೊಂಡು ಹೋಗಿ ಕೂರಿಸಿ ಎಂದು ಕಿಡಿಕಾರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಎಎಪಿ ಕಚೇರಿ ಕಟ್ಟಡದ ಮಾಲೀಕರಿಗೆ ಅರವಿಂದ ಲಿಂಬಾವಳಿ ಬೆದರಿಕೆ ಆರೋಪ!

    ಎಎಪಿ ಕಚೇರಿ ಕಟ್ಟಡದ ಮಾಲೀಕರಿಗೆ ಅರವಿಂದ ಲಿಂಬಾವಳಿ ಬೆದರಿಕೆ ಆರೋಪ!

    ಬೆಂಗಳೂರು: ಆಮ್ ಆದ್ಮಿ ಪಾರ್ಟಿಯು ಭ್ರಷ್ಟ ರಾಜಕಾರಣಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದು, ನಮಗೆ ಕಚೇರಿ ತೆರೆಯಲು ಅವಕಾಶ ನೀಡಿದ ಕಟ್ಟಡದ ಮಾಲೀಕರಿಗೆ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಬೆದರಿಕೆ ಹಾಕಿರುವುದೇ ಇದಕ್ಕೆ ಸಾಕ್ಷಿ ಎಂದು ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋಹನ್ ದಾಸರಿ, ಮಹದೇವಪುರ ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷರಾದ ಅಶೋಕ್ ಮೃತ್ಯುಂಜಯರವರು ಕಸವನಹಳ್ಳಿ ವೃತ್ತದಲ್ಲಿ ಕಟ್ಟಡವೊಂದನ್ನು ಲೀಸ್‍ಗೆ ಪಡೆದು, ಅಲ್ಲಿ ಬೆಳ್ಳಂದೂರು ವಾರ್ಡ್ ಕಚೇರಿಯನ್ನು ಭಾನುವಾರ ಆರಂಭಿಸಿದ್ದರು. ವಿಷಯ ತಿಳಿದ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿಯವರು ಕಚೇರಿಗೆ ಕಟ್ಟಡವನ್ನು ಬಾಡಿಗೆ ನೀಡಿದ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ. ಕಚೇರಿಯನ್ನು ಖಾಲಿ ಮಾಡಿಸದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಪಕ್ಷವೊಂದು ಕಚೇರಿ ತೆರೆಯುವುದನ್ನೂ ಸಹಿಸಲಾರದಷ್ಟು ಅರವಿಂದ್ ಲಿಂಬಾವಳಿ ಹತಾಶರಾಗಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

    ಜನರ ಕಲ್ಯಾಣವೊಂದೇ ಆಮ್ ಆದ್ಮಿ ಪಾರ್ಟಿಯ ಆಶಯವಾಗಿದೆ. ದ್ವೇಷ ರಾಜಕಾರಣದಲ್ಲಿ ನಾವು ಆಸಕ್ತಿ ಹೊಂದಿಲ್ಲ. ನಮ್ಮ ಸಹನೆಯನ್ನು ದೌರ್ಬಲ್ಯವೆಂದು ಬಿಜೆಪಿಯವರು ಭಾವಿಸಬಾರದು. ಗೂಂಡಾಗಿರಿಯು ಬಿಜೆಪಿಯ ಸಂಸ್ಕೃತಿಯಾಗಿದ್ದು, ಶಾಸಕರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನಮಗೆ ಕಿರುಕುಳ ನೀಡುತ್ತಿದ್ದಾರೆ. ಲಿಂಬಾವಳಿಯವರ ಪ್ರಜಾಪ್ರಭುತ್ವ ವಿರೋಧಿ ನಡೆಗೆ ಪ್ರಜಾಪ್ರಭುತ್ವದ ಮಾರ್ಗದಲ್ಲಿಯೇ ತಕ್ಕ ಪಾಠ ಕಲಿಸುವುದು ನಮಗೆ ತಿಳಿದಿದೆ ಎಂದು ಮೋಹನ್ ದಾಸರಿ ಹೇಳಿದರು.

    ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂರವರು ಮಾತನಾಡಿ, ಕ್ಷೇತ್ರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕೆರೆ ಒತ್ತುವರಿ ವಿರುದ್ಧ ಎಎಪಿ ದನಿ ಎತ್ತಿತ್ತು. ಇದರಿಂದ ಕಂಗೆಟ್ಟಿರುವ ಶಾಸಕ ಲಿಂಬಾವಳಿಯವರು ತಮ್ಮ ಇನ್ನಷ್ಟು ಅಕ್ರಮ ಬಯಲಾಗಬಹುದು ಎಂಬ ಭಯದಿಂದ ಬೆದರಿಕೆ ಹಾಕಿದ್ದಾರೆ. ಅವರ ಗೂಂಡಾಗಿರಿ ಮುಂದುವರಿದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಕಚೇರಿ ಆರಂಭಿಸುವುದು ಪ್ರಜಾಪ್ರಭುತ್ವ ನಮಗೆ ನೀಡಿರುವ ಹಕ್ಕಾಗಿದ್ದು, ಈ ಹಕ್ಕನ್ನು ಕಿತ್ತುಕೊಳ್ಳುವ ದುಸ್ಸಾಹಸದಿಂದ ಲಿಂಬಾವಳಿಯವರು ಹಿಂದೆ ಸರಿಯಬೇಕು ಎಂದು ಕಿಡಿಕಾರಿದರು.

    ಶಾಸಕ ಅರವಿಂದ ಲಿಂಬಾವಳಿಯವರು ತಮ್ಮ ಕ್ಷೇತ್ರವನ್ನು ರಿಪಬ್ಲಿಕ್ ಆಫ್ ಮಹದೇವಪುರ ಮಾಡಲು ಹೊರಟಿದ್ದಾರೆ. ಅಧಿಕಾರದ ಮದದಿಂದ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಬೇರೆ ಪಕ್ಷಗಳ ಏಳಿಗೆಯನ್ನು ಹತ್ತಿಕ್ಕಲು ಯಾವ ಮಟ್ಟಕ್ಕಾದರೂ ಇಳಿಯುವ ಹಂತ ತಲುಪಿದ್ದಾರೆ. ಎಎಪಿಯ ಕಚೇರಿಯ ಆರಂಭಕ್ಕೆ ಅಡ್ಡಗಾಲು ಹಾಕುವ ಬದಲು, ತಾಕತ್ತಿದ್ದರೆ ಮುಂಬರುವ ಚುನಾವಣೆಗಳಲ್ಲಿ ನಮ್ಮನ್ನು ಎದುರಿಸಲಿ ಎಂದು ಜಗದೀಶ್ ವಿ. ಸದಂ ಸವಾಲು ಹಾಕಿದರು.

  • ಡಾ. ಸುಧೀಂದ್ರ ಹಾಲ್ದೊಡ್ಡೇರಿ ನಿಧನಕ್ಕೆ ಸಚಿವ ಅರವಿಂದ ಲಿಂಬಾವಳಿ ಶೋಕ

    ಡಾ. ಸುಧೀಂದ್ರ ಹಾಲ್ದೊಡ್ಡೇರಿ ನಿಧನಕ್ಕೆ ಸಚಿವ ಅರವಿಂದ ಲಿಂಬಾವಳಿ ಶೋಕ

    ಬೆಂಗಳೂರು: ಕನ್ನಡದ ಖ್ಯಾತ ಬರಹಗಾರ, ಅಂಕಣಕಾರ , ವಿಜ್ಞಾನಿ ಡಾ.ಸುಧೀಂದ್ರ ಹಾಲ್ದೊಡ್ಡೇರಿ ನಿಧನಕ್ಕೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

    ಅವರಿಗೆ ಇಂದು ಕನ್ನಡ ಪುಸ್ತಕ ಪ್ರಾಧಿಕಾರದ ಡಾ . ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಪ್ರಶಸ್ತಿ ಘೋಷಿಸಿದ ದಿನವೇ ಅವರು ನಿಧನರಾದದ್ದು ತುಂಬಾ ದುರಾದೃಷ್ಟಕರ ಸಂಗತಿ, ಅಭಿನಂದನೆ ಹೇಳಬೇಕಾದ ದಿನ ಸಂತಾಪ ಹೇಳಬೇಕಾದ ಸಂಕಟ ಎಂದಿರಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಇದನ್ನೂ ಓದಿ:  ಡಿಆರ್‌ಡಿಒ ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಇನ್ನಿಲ್ಲ

    ಕನ್ನಡ ವಿಜ್ಞಾನ ಸಾಹಿತ್ಯಕ್ಕೆ ಸುಧೀಂದ್ರ ಹಾಲ್ದೊಡ್ಡೇರಿ ಅವರ ಕೊಡುಗೆ ಅನನ್ಯವಾದದ್ದು , ಕನ್ನಡದ ಅನೇಕ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಅವರು ಜನಪ್ರಿಯರಾಗಿದ್ದರು. ಕೇಂದ್ರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ 22 ವರ್ಷ ಸೇವೆ ಸಲ್ಲಿಸಿದ್ದ ಅವರು ನಂತರ ಸ್ವಯಂನಿವೃತ್ತಿ ಪಡೆದು ಜೈನ್ ವಿಶ್ವವಿದ್ಯಾಲಯದಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಬರೆಯುವ ಕಲೆ ಅವರಿಗೆ ಕರಗತವಾಗಿತ್ತು ಅವರ ನಿಧನದಿಂದ ಕನ್ನಡ ಅಕ್ಷರ ಲೋಕ ಒಬ್ಬ ಅತ್ಯುತ್ತಮ ಲೇಖಕರನ್ನು ಕಳೆದುಕೊಂಡಿದೆ. ಅವರ ಕುಟುಂಬಕ್ಕೆ ಈ ಆಘಾತವನ್ನು ತಡೆದುಕೊಳ್ಳುವ ಶಕ್ತಿ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

  • ಏನಪ್ಪಾ ಶಿವಮೂರ್ತಿ, ನಾನು ಅರವಿಂದ್ ಲಿಂಬಾವಳಿ ಮಾತಾಡ್ತಾ ಇರೋದು!

    ಏನಪ್ಪಾ ಶಿವಮೂರ್ತಿ, ನಾನು ಅರವಿಂದ್ ಲಿಂಬಾವಳಿ ಮಾತಾಡ್ತಾ ಇರೋದು!

    ನಪ್ಪಾ ಶಿವಮೂರ್ತಿ ನಾನು ಅರವಿಂದ ಲಿಂಬಾವಳಿ ಮಾತಾಡ್ತಾ ಇದ್ದೀನಿ, ನೀವು ಧೈರ್ಯವಾಗಿರಬೇಕು, ತುಂಬಾ ಹೆದರಿದ್ದೀರಿ ಅನ್ಸುತ್ತೆ ಅದಕ್ಕೆ ನಿಮ್ಮ ಬಿಪಿ ಜಾಸ್ತಿ ಇದೆ. ಆರಾಮಾಗಿರಿ ನಿಮಗೆ ಬೇಕಾದ ಚಿಕಿತ್ಸೆ ನಾವು ಕೊಡ್ತೀವಿ. ನಿನಗೆ ಯಾವ ಆಸ್ಪತ್ರೆಯಲ್ಲಿ ಬೆಡ್ ಬೇಕು,” ಹೀಗೊಂದು ಸಂಭಾಷಣೆ ಮತ್ತು ಸನ್ನಿವೇಶ ನಡೆದಿದ್ದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ. ಟ್ರಯಾ ಜಿಂಗ್ ಕೇಂದ್ರಗಳಿಂದ ನೇರವಾಗಿ ಕೋವಿಡ್ ಆಸ್ಪತ್ರೆಗಳಿಗೆ ಬೆಡ್ ಬುಕ್ ಮಾಡಲು ಸಿದ್ಧಪಡಿಸಿರುವ ಹೊಸ ತಂತ್ರಾಂಶ ಲೋಕಾರ್ಪಣೆ ಮಾಡಿದ ಸಂದರ್ಭ.

    ತಂತ್ರಾಂಶ ಲೋಕಾರ್ಪಣೆ ಮಾಡಿದ ನಂತರ ಆನ್‍ಲೈನ್ ಮೂಲಕ ಮಹದೇವಪುರದ ಜಿಂಕ್ ಹೋಟೆಲ್ ನ ಟ್ರಯಾಜಿಂಗ್ ಕೇಂದ್ರವನ್ನು ಸಂಪರ್ಕ ಮಾಡಿದ ವಾರ್ ರೂಮ್ ಅಧಿಕಾರಿಗಳು ಅಲ್ಲಿನ ಡಾಕ್ಟರ್ ಮಹೇಶ್ವರಿ ಅವರನ್ನು ಸಂಪರ್ಕಿಸಿದರು, ಅವರು ತಪಾಸಣೆ ಮಾಡುತ್ತಿದ್ದ ಕೋವಿಡ್ ಸೋಂಕಿತ ಶಿವಮೂರ್ತಿ ಎನ್ನುವ ಚೆನ್ನಸಂದ್ರ ನಿವಾಸಿ ಜೊತೆ ಸಚಿವರು ಮಾತನಾಡಿದರು. ಈ ವೇಳೆ ಮೇಲ್ಕಂಡ ಸಂಭಾಷಣೆ ನಡೆಯಿತು.

    ಡಾಕ್ಟರ್ ಮಹೇಶ್ವರಿ ಅವರಿಗೆ ಶಿವಮೂರ್ತಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ ಸಚಿವರು ಅವರಿಗೆ ಆಸ್ಪತ್ರೆಗೆ ಸೇರಿಸುವ ಅವಶ್ಯಕತೆ ಇದೆಯೇ ಎಂದು ಕೇಳಿದರು. ಶಿವಮೂರ್ತಿಯವರು ಹೃದಯ ಸಂಬಂಧಿ ಕಾಯಿಲೆ ಮತ್ತು ಸಕ್ಕರೆ ಕಾಯಿಲೆಗಳಿಂದ ಬಳಲುತ್ತಿರುವುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸುವುದು ಸೂಕ್ತ ಎಂದು ಡಾಕ್ಟರ್ ಮಹೇಶ್ವರಿ ಹೇಳಿದಾಗ, ಸಚಿವರು ಯಾವ ಆಸ್ಪತ್ರೆ ಬೇಕು ಶಿವ ಮೂರ್ತಿಯವರೇ ಎಂದರು.

    ಶಿವಮೂರ್ತಿ ಅವರ ಮನೆಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಹತ್ತಿರವಿರುವುದರಿಂದ ತಮಗೆ ಅಲ್ಲಿ ಚಿಕಿತ್ಸೆಗೆ ಅವಕಾಶ ಮಾಡಿಕೊಡುವಂತೆ ಸಚಿವರಿಗೆ ಮನವಿ ಮಾಡಿದರು. ಕೂಡಲೇ ಸಚಿವರು ಅವರಿಗೆ ಬೆಡ್ ಬುಕ್ ಮಾಡುವಂತೆ ಸೂಚಿಸಿದರು. ಕೆಲವೇ ಕ್ಷಣಗಳಲ್ಲಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಅವರಿಗೆ ಹಾಸಿಗೆ ಮೀಸಲಿಡಲಾಗಿತ್ತು ಮತ್ತು ಎಸ್‍ಎಂಎಸ್ ಮೂಲಕ ಮಾಹಿತಿ ಕೂಡ ನೀಡಲಾಯಿತು.

    ಈ ವ್ಯವಸ್ಥೆ ತುಂಬಾ ಚೆನ್ನಾಗಿದೆ ಸರ್ ಎಂದು ಶಿವಮೂರ್ತಿ ಹಾಗೂ ಅವರನ್ನು ತಪಾಸಣೆ ಮಾಡಿದ ವೈದ್ಯೆ ಡಾಕ್ಟರ್ ಮಹೇಶ್ವರಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.

     

  • ಕೋಲಾರದಲ್ಲಿ ಶನಿವಾರ, ಭಾನುವಾರ ವೀಕೆಂಡ್ ಲಾಕ್‍ಡೌನ್: ಅರವಿಂದ ಲಿಂಬಾವಳಿ

    ಕೋಲಾರದಲ್ಲಿ ಶನಿವಾರ, ಭಾನುವಾರ ವೀಕೆಂಡ್ ಲಾಕ್‍ಡೌನ್: ಅರವಿಂದ ಲಿಂಬಾವಳಿ

    ಕೋಲಾರ: ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಇದನ್ನ ಮತ್ತಷ್ಟು ಕಡಿಮೆ ಮಾಡಲು ಕೋಲಾರದಲ್ಲಿ ಶನಿವಾರ, ಭಾನುವಾರ ವೀಕೆಂಡ್ ಲಾಕ್‍ಡೌನ್ ಅನ್ನು ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ವೀಕೆಂಡ್ ಲಾಕ್ ಡೌನ್ ಘೋಷಣೆ ಮಾಡಿದರು. ಇದನ್ನೂ ಓದಿ: ಹೆಸರಿಟ್ಟು ಮುದ್ದು ಮಗನನ್ನು ಪರಿಚಯಿಸಿದ ಗಾಯಕಿ ಶ್ರೇಯಾ ಘೋಷಾಲ್

    ಕೋಲಾರ ಜಿಲ್ಲಾಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ 600 ಕೆ.ಎಲ್ ಆಕ್ಸಿಜನ್ ಪ್ಲಾಂಟ್ ಉದ್ಟಾಟನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೊರೊನಾ ಸೋಂಕಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಶನಿವಾರ 10 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಕಠಿಣ ಲಾಕ್‍ಡೌನ್ ಇರಲಿದೆ. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಹಕಾರ ಹಾಗೂ ಅಧಿಕಾರಿಗಳ ಪರಿಶ್ರಮದಿಂದ ಕೋಲಾರ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ ನಟಿ ಪ್ರೇಮಾ

    ಜಿಲ್ಲೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಗಳು ರದ್ದಾದ ಹಿನ್ನೆಲೆ ಹಿನ್ನೆಲೆ ರಾಜ್ಯದಲ್ಲಿ ಪರೀಕ್ಷೆ ಬೇಕಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಶಿಕ್ಷಣ ಸಚಿವರ ಜೊತೆ ಚರ್ಚಿಸಿ ಅಭಿಪ್ರಾಯ ತಿಳಿಸುತ್ತೇನೆ ಎಂದರು. ಇದೇ ವೇಳೆ ಸಂಸದ ಎಸ್.ಮುನಿಸ್ವಾಮಿ ಎಮ್ಮೆಲ್ಸಿ ವೈ.ಎ.ನಾರಾಯಣಸ್ವಾಮಿ, ಡಿಸಿ ಸೆಲ್ವಮಣಿ, ಎಸ್ಪಿ ಕಾರ್ತಿಕ್ ರೆಡ್ಡಿ ಉಪಸ್ಥಿತರಿದ್ದರು.