ಧಾರವಾಡ: ಶಾಸಕ ಅರವಿಂದ್ ಬೆಲ್ಲದ್ (Arvind Bellad) ಅವರ ಧಾರವಾಡ (Dharwad) ಮನೆ ಮುಂದಿನ ಬಾವಿ (well) ಕಾಣೆಯಾಗಿದ್ದು, ಅದನ್ನು ಹುಡುಕಿಕೊಡುವಂತೆ ಕಾಂಗ್ರೆಸ್ (Congress) ಮುಖಂಡ ನಾಗರಾಜ ಗೌರಿ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಧಾರವಾಡದ ಸರ್ವೇ ನಂಬರ್ 31/1ರಲ್ಲಿ ಸಾರ್ವಜನಿಕ ಬಾವಿ ಇತ್ತು. ಅಲ್ಲಿಯೇ ಶಾಸಕ ಅರವಿಂದ್ ಬೆಲ್ಲದ್ ಅವರ ನಿವಾಸವಿದೆ. ಆದರೆ ಬೆಲ್ಲದ್ ಅವರು ಜೋತಿಷ್ಯ ಕೇಳಿ ಆ ಬಾವಿಯನ್ನು ಮುಚ್ಚಿ ಹಾಕಿದ್ದಾರೆ. ಆ ಬಾವಿ ಮುಚ್ಚಿದರೆ, ನೀವು ಸಿಎಂ ಆಗುತ್ತೀರಿ ಎಂದು ಯಾರೋ ಬೆಲ್ಲದ್ ಅವರಿಗೆ ಭವಿಷ್ಯ ಹೇಳಿದ್ದರಂತೆ, ಹೀಗಾಗಿ ಬೆಲ್ಲದ ಅವರು ಆ ಬಾವಿ ಮುಚ್ಚಿಸಿದ್ದಾರೆ ಎಂದು ಅಲ್ಲಿನ ಅಕ್ಕಪಕ್ಕದ ನಿವಾಸಿಗಳು ಆರೋಪಿಸಿದ್ದಾರೆ ಎಂದು ಗೌರಿ ತಿಳಿಸಿದರು. ಇದನ್ನೂ ಓದಿ: 11ನೇ ಮಹಡಿಯಿಂದ ಲಿಫ್ಟ್ ಕೆಳಗೆ ಬಿದ್ದು ವಿದ್ಯಾರ್ಥಿ ಸಾವು
ಬಾವಿ ಹುಡುಕಿಕೊಡುವಂತೆ ಮಹಾನಗರ ಪಾಲಿಕೆಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಕೆಲವು ವರ್ಷಗಳ ಹಿಂದೆಯೇ ಈ ಬಾವಿಯನ್ನು ಶಾಸಕರು ಮುಚ್ಚಿಸಿದ್ದಾರೆ. ಹೀಗಾಗಿ ಪೊಲೀಸರು ಈ ಬಾವಿಯನ್ನು ಹುಡುಕಿಕೊಡಬೇಕು ಎಂದು ಗೌರಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರ ಆಸ್ತಿ ಪತ್ತೆ ಮಾಡದೇ ಹೋದಲ್ಲಿ ಲೋಕಾಯುಕ್ತಕ್ಕೂ ದೂರು ನೀಡುವುದಾಗಿ ಗೌರಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಅಳುವ ಗಂಡಸರನ್ನ ನೋಡಬಾರದು- ಡಿಕೆಶಿ ಕಣ್ಣೀರಿಗೆ ಯತ್ನಾಳ್ ವ್ಯಂಗ್ಯ
Live Tv
[brid partner=56869869 player=32851 video=960834 autoplay=true]
ಧಾರವಾಡ: ದೇವಸ್ಥಾನ ಆವರಣದಲ್ಲಿ ಮುಸ್ಲಿಂ ವ್ಯಾಪಾರಿ ಇದ್ದರೂ ಯಾವ ರೀತಿ ವೇಷದಲ್ಲಿರಬೇಕು, ತಲೆ ಮೇಲೆ ಟೋಪಿ ಹಾಕಿ, ಗಡ್ಡ ಬಿಟ್ಟುಕೊಂಡು, ಮೀಸೆ ಬೋಳಿಸಿಕೊಂಡು, ಪಾಯಿಜಾಮ ಹಾಕಿಕೊಂಡಾಗ ಹಿಂದೂ ಭಕ್ತರ ಮನಸಿನಲ್ಲಿ ಇವರಿಗ್ಯಾಕೆ ವ್ಯಾಪಾರಕ್ಕೆ ಅವಕಾಶ ಕೊಡಬೇಕು ಅನಿಸುತ್ತದೆ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದರು.
ಧಾರವಾಡ ನುಗ್ಗಿಕೇರಿ ಧರ್ಮ ವ್ಯಾಪಾರ ಗಲಾಟೆ ವಿಚಾರವಾಗಿ ಮಾತನಾಡಿದ ಅವರು, ಕಲ್ಲಂಗಡಿ ಒಡೆದ ಘಟನೆ ನಡೆಯಬಾರದಿತ್ತು, ಆದರೆ ಇದು ಯಾಕೆ ಆಗುತ್ತಿದೆ ಎನ್ನುವುದರ ಕುರಿತು ವಿಚಾರ ಮಾಡಬೇಕಿದೆ ಎಂದರು.
ಘಟನೆ ನಡೆಯಲು ಕಾರಣವಾದ ವಿಷಯಗಳ ಬಗ್ಗೆ ನೋಡಬೇಕಿದೆ. ಹೈಕೋರ್ಟ್ ಹಿಜಬ್ ಕುರಿತು ಶಾಲೆಗಳಲ್ಲಿ ಸಮವಸ್ತ್ರ ಧರಿಸಬೇಕು ಎಂದು ತೀರ್ಪು ನೀಡಿತ್ತು. ಇದನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಅಂಗಡಿ ಬಂದ್ ಮಾಡಿದ್ದವು. ಆಗಲೇ ಅವರಿಗೆ ಕಾನೂನಿನ ಬಗ್ಗೆ ಕಾಳಜಿ ಹಾಗೂ ಗೌರವ ಇಲ್ಲ ಎನ್ನುವುದು ಗೊತ್ತಾಗಿದೆ ಎಂದ ಅವರು, ತಲೆ ಒಡೆದಾಗ ಇಲ್ಲದ ಕಾಳಜಿ, ಕಲ್ಲಂಗಡಿ ಒಡೆದಾಗ ಏಕೆ ಎಂದು ಸಿಟಿ ರವಿ ಹೇಳಿದ್ದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.
ಮುಸ್ಲಿಂ ಸಮಾಜದ ನಾಯಕರು ಮೊದಲು ವಿಚಾರ ಮಾಡಬೇಕಿದೆ. ಇಲ್ಲದೇ ಹೋದಲ್ಲಿ ಆ್ಯಕ್ಷನ್‍ಗೆ-ರಿಯಾಕ್ಷನ್ ಆಗುತ್ತಾ ಹೋಗುತ್ತದೆ ಎಂದ ಅವರು, ನುಗ್ಗಿಕೇರಿ ಖಾಸಗಿ ದೇವಸ್ಥಾನವಾಗಿದೆ. ಅಲ್ಲಿ ಯಾರ ಅಂಗಡಿ ಇರಬೇಕು ಎನ್ನುವುದು ಆಡಳಿತ ಮಂಡಳಿಗೆ ಬಿಟ್ಟ ವಿಷಯವಾಗಿದೆ. ಅದು ಹಿಂದೂ ದೇವಸ್ಥಾನ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ:ಬೆಳಗಾವಿ ಬಿಜೆಪಿಯಲ್ಲಿನ ಭಿನ್ನಮತ ಶಮನಕ್ಕೆ ಮುಂದಾದ ಅರುಣ್ ಸಿಂಗ್, ಬಿಎಸ್‍ವೈ
ಒಂದು ಕಡೆ ಕಾನೂನು ವಿರೋಧಿಸುತ್ತಾರೆ. ಮತ್ತೊಂದೆಡೆ ನಮ್ಮ ದೇವಸ್ಥಾನಕ್ಕೆ ವ್ಯಾಪಾರಕ್ಕೆ ಬರುತ್ತಾರೆ. ಸಮಾಜದಲ್ಲಿ ಈಗ ಎರಡೂ ಕಡೆ ವಿಚಾರ ಮಾಡಬೇಕಿದೆ ಎಂದ ಅವರು, ಒಂದೇ ಕಡೆಯಿಂದ ಚಪ್ಪಾಳೆ ಆಗೋದಿಲ್ಲ, ಎರಡು ಕೈ ಸೇರಿಸಿಯೇ ಚಪ್ಪಾಳೆ ಆಗಬೇಕು, ಹಾಗಂತ ನಾನು ಗಲಾಟೆ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ ಎಂದರು.
ಧಾರವಾಡ: ನಾನು ಸಚಿವ ಸ್ಥಾನದ ಲಾಬಿಗಾಗಿ ಅಮಿತ್ ಶಾ ಅವರನ್ನು ಭೇಟಿ ಮಾಡಿಲ್ಲ, ನಾನು 6 ತಿಂಗಳ ಹಿಂದೆಯೇ ಭೇಟಿಯಾಗಲು ಕೇಳಿದ್ದೆ ಎಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಶಾ ಅವರು ನನ್ನನ್ನು ಕರೆದಿದ್ದರು, ಹೀಗಾಗಿ ಭೇಟಿ ಮಾಡಿ ಬಂದಿದ್ದೇನೆ. ಸಚಿವ ಸ್ಥಾನದ ಲಾಬಿಗಾಗಿ ಭೇಟಿ ಮಾಡಿಲ್ಲ. ರಾಜ್ಯ ಪ್ರವಾಸದ ಮುನ್ನ ಏಕಾಏಕಿ ಬಂದು ಭೇಟಿ ಮಾಡಲು ಹೇಳಿದರು. ದೆಹಲಿಯಲ್ಲಿ ಪ್ರಸಕ್ತ ರಾಜ್ಯದ ಸ್ಥಿತಿ ಗತಿ ಬಗ್ಗೆ ಚರ್ಚೆ ಮಾಡಿದರು ಎಂದರು. ಇದನ್ನೂ ಓದಿ: ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂ. ಘೋಷಿಸಿದ ಬಸವರಾಜ ಬೊಮ್ಮಾಯಿ
ಉತ್ತರ ಕರ್ನಾಟಕ ಹಾಗೂ ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತುಕತೆ ಆಗಿದೆ. ನಾನಂತು ಅವರಿಗೆ ಏನು ಕೇಳುವುದಕ್ಕೆ ಹೋಗಿಲ್ಲ. ಡಿಸಿಎಂ ಸ್ಥಾನದಲ್ಲಿ ನಾನು ರೇಸ್‍ನಲ್ಲಿ ಇರುವುದು ಮಾಧ್ಯಮದವರಿಗೆ ಗೊತ್ತು ಎಂದು ಡಿಸಿಎಂ ಸ್ಥಾನದ ಆಕಾಂಕ್ಷಿ ಪ್ರಶ್ನೆ ಬಗ್ಗೆ ಉತ್ತರಿಸಿದರು. ಇದನ್ನೂ ಓದಿ: ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪೊಲೀಸರ ಮಸ್ತ್ ಡ್ಯಾನ್ಸ್: ಪರ,ವಿರೋಧ ಚರ್ಚೆ
ಹುಬ್ಬಳ್ಳಿ: ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಶಾಸಕರಿಗೂ ಸಚಿವರಾಗಬೇಕು ಅಂತಾ, ಸಚಿವರಿಗೆ ಸಿಎಂ ಆಗಬೇಕು ಅಂತಾ ಆಸೆ ಇರುತ್ತದೆ. ಆದರೆ ನಾನು ವರಿಷ್ಠರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದರು.
ಮಾಧ್ಯಮಗಳಲ್ಲಿ ಸಂಪುಟ ವಿಸ್ತರಣೆ ಇದೆ ಎಂದು ಬಂದಿರುವುದನ್ನು ನೋಡಿದ್ದೇನೆ. ಆದರೆ ಸಂಪುಟ ವಿಸ್ತರಣೆ ವಿಷಯದ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಹೈಕಮಾಂಡ್ ತಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ಸಚಿವ ಸ್ಥಾನವನ್ನು ಕೇಳುವ ಅವಶ್ಯಕತೆ ಇಲ್ಲ. ಪಕ್ಷದ ನಾಯಕರಿಗೆ ಯಾವಾಗ ಯಾರಿಗೆ ಯಾವ ಜವಾಬ್ದಾರಿಯನ್ನು ನೀಡಬೇಕು ಎನ್ನುವುದು ಗೊತ್ತಿದೆ ಎಂದು ಹೇಳಿದರು. ಇದನ್ನೂ ಓದಿ:ಖ್ಯಾತ ಫೋಟೋಗ್ರಾಫರ್ ತೆಗೆದಿರುವ ಸೂರ್ಯನ ಒಂದು ಫೋಟೋಗೆ 3766ರೂ.!
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಬುದ್ಧ ರಾಜಕಾರಣಿ. ಅವರು ಹೆಚ್ಚು ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ತೀರ್ಮಾನಕ್ಕೆ ನಾನು ಬದ್ಧನಾಗಿರುವೆ ಎಂದು ತಿಳಿಸಿದರು. ಹಿರಿಯರನ್ನು ಕೈಬಿಟ್ಟು ಕಿರಿಯರಿಗೆ ಸ್ಥಾನ ನೀಡಬೇಕು ಎನ್ನುವ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇದನ್ನೂ ಓದಿ:ಬಿಜೆಪಿ ಸರ್ಕಾರಕ್ಕೆ ರೆಡ್ ಅಲರ್ಟ್: ಅಖಿಲೇಶ್ ಯಾದವ್
-ಹಿಂದಿನ ಸರ್ಕಾರ ಶಾಲೆಗಳನ್ನು ಇಂಗ್ಲೀಷ್ ಮಾಧ್ಯಮ ಮಾಡಿತ್ತು
ಹುಬ್ಬಳ್ಳಿ: ಹಿಂದಿನ ಸರ್ಕಾರ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಮಾಡುವಂತೆ ನಿರ್ಣಯ ತಗೆದುಕೊಂಡಿತ್ತು, ಆದರೆ ನ್ಯಾಯಾಲಯ ಅದಕ್ಕೆ ತಡೆಹಿಡಿದಿತ್ತು. ಇದೀಗ ನೂತನವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದ್ದು, ಅದರಡಿ ಪ್ರತಿಯೊಂದು ರಾಜ್ಯದಲ್ಲಿ ಆಯಾ ಪ್ರಾಥಮಿಕ ಭಾಷೆಗೆ ಹೆಚ್ಚು ಒತ್ತು ನೀಡಲಾಗಿದೆ. ಅದರಂತೆ ನಮ್ಮ ರಾಜ್ಯದಲ್ಲಿ ಪ್ರಾಥಮಿಕ ಭಾಷೆಯಾಗಿ ಕನ್ನಡಕ್ಕೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.
ನಗರದ ಶ್ರೀಸಿದ್ಧಾರೂಢ ಮಠದ ಆವರಣದಲ್ಲಿಂದು ಕನ್ನಡ ರಾಜ್ಯೋತ್ಸವ ಅಂಗವಾಗಿ ಶ್ರೀಭುವನೇಶ್ವರಿ ಮಾತೆಗೆ ಪೂಜೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದ ಅವರು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪ್ರಾಥಮಿಕ ಶಿಕ್ಷಣ ಸಂಪೂರ್ಣವಾಗಿ ಕನ್ನಡದ ಭಾಷೆ ಹಾಗೂ ಆಯಾ ರಾಜ್ಯದ ಭಾಷೆಯಲ್ಲಿಯೇ ಆಗುವುದು. ಇದರಿಂದ ನಮ್ಮ ದೇಶದ ಸಂಸ್ಕೃತಿ ಗಟ್ಟಿಯಾಗುತ್ತದೆ. ಮೂಲ ಭಾಷೆಗೆ ಗೌರವ ನೀಡಿದಂತಾಗುತ್ತದೆ. ಕರ್ನಾಟಕ ಹಾಗೂ ಕನ್ನಡ ಭಾಷೆ ಉದಯವಾಗಲು ಹುಬ್ಬಳ್ಳಿ ಧಾರವಾಡದ ಪಾತ್ರ ದೊಡ್ಡದಿದೆ ಎಂದರು.
ಕನ್ನಡ ಏಕೀಕರಣಕ್ಕಾಗಿ ಕನ್ನಡ ಭಾಷೆಗಾಗಿ ಅದರಗುಂಚಿ ಶಂಕರರಾಯರು ಹೋರಾಟ ಮಾಡಿದ್ದರು. ಎಲ್ಲ ಹೋರಾಟಗಳಿಗೆ ಮುಂಚೂಣಿಯಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವಿತ್ತು. ಈ ಮೊದಲು ಕರ್ನಾಟಕವು ಹೈದರಾಬಾದ್ ಕರ್ನಾಟಕ, ಮಂಗಳೂರು, ಗೋವಾ ಬಾಂಬೆ ಕರ್ನಾಟಕ ಹೀಗೆ ಹರಿದು ಹಂಚಿಹೋಗಿತ್ತು. ಇವೆಲ್ಲವೂ ಅಖಂಡವಾಗಬೇಕು, ಕನ್ನಡ ಭಾಷೆ ಮಾತನಾಡುವವರು ಒಂದೇ ಕಡೆ ಇರಬೇಕು, ಕರ್ನಾಟಕ ನಿವಾಸಿಗಳಾಗಬೇಕು ಎಂದು ಹೋರಾಟ ಮಾಡಿದವರು ಅದರಗುಂಚಿ ಶಂಕರರಾಯರು ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಹೋರಾಟಗಾರರು. ಮೈಸೂರು ಭಾಗದ ನಾಯಕರು ಅಖಂಡ ಕರ್ನಾಟಕ ಒಂದಾದರೇ ಪ್ರಾತಿನಿತ್ಯ ಹೆಚ್ಚಾಗುತ್ತದೆ ಎಂದು ಮೈಸೂರು ಕರ್ನಾಟಕ ಸೇರಿ ಒಂದಾಯಿತು. ಇದೆಲ್ಲವು ಕರ್ನಾಟಕ ಉದಯಕ್ಕೆ ಕಾರಣವಾಯಿತು. ಭಾಷೆ ಉಳಿದರೆ ಆ ಭಾಷೆಯ ಸಂಸ್ಕೃತಿ ಉಳಿಯಲು ಸಾಧ್ಯವಾಗುತ್ತದೆ ಎಂದು ನುಡಿದರು. ಇದನ್ನೂ ಓದಿ: ಮರಣೋತ್ತರ ರಾಜ್ಯೋತ್ಸವ ನೀಡಲು ಅವಕಾಶವಿಲ್ಲ: ಸುನೀಲ್ ಕುಮಾರ್
ಮುಖ್ಯ ಅತಿಥಿಯಾಗಿ ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ್ ಮಾತನಾಡಿ, ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಪಾತ್ರ ದೊಡ್ಡದು, ಅದರಲ್ಲೂ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಹಾಗೂ ಸಂಘಟಣೆಗಾರರ ಪಾತ್ರವು ಹೆಚ್ಚಿದೆ. ನಗರದಲ್ಲಿ ನಾಮಫಲಕ ಬದಲಿಸುವ ಕೆಲಸ ಕಾರ್ಯೋನ್ಮುಖವಾಗಿದ್ದು, ಈಗಾಗಲೇ 320 ನಾಮಫಲಕಗಳನ್ನು ಬದಲಾವಣೆ ಮಾಡಲಾಗಿದೆ. ಇನ್ನುಳಿದ ಫಲಕಗಳನ್ನು ಶೀಘ್ರದಲ್ಲಿ ಬದಲಾವಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಮಾತನಾಡಿ, ಇಂದು ರಾಜ್ಯಾದ್ಯಂತ ಎಲ್ಲ ಕಡೆ ಕನ್ನಡ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಎಲ್ಲರಿಗೂ ಕನ್ನಡದ ಬಗ್ಗೆ ಅಭಿಮಾನ ಇರಬೇಕು. ಏಕೆಂದರೆ ಕನ್ನಡ ಅಳಿವು ಉಳಿವಿಗಾಗಿ ಕನ್ನಡ ಪರ ಸಂಘಟನೆಯು ದಿನನಿತ್ಯ ಹೋರಾಟ ಮಾಡುತ್ತಿದೆ. ಕನ್ನಡಕ್ಕೆ ದಕ್ಕೆಯಾದಾಗ ಹೋರಾಟ ನಡೆಸಿ ತಪ್ಪನ್ನು ತಿದ್ದುವ ಮೂಲಕ ಕನ್ನಡಪರ ಸಂಘಟನಕಾರರು ಅಭಿಮಾನವನ್ನು ತೋರುತ್ತ ಬಂದಿದ್ದಾರೆ. ಎಲ್ಲಿಯೋ ಇರು ಹೇಗೆಯೇ ಎಂದೆಂದಿಗೂ ನೀ ಕನ್ನಡವಾಗಿರು ಎಂದು ಡಾ. ರಾಜ್‍ಕುಮಾರ್, ಡಾ. ವಿಷ್ಣುವರ್ಧನ್ ಹಾಗೂ ಇನ್ನಿತರ ಕನ್ನಡ ಚಲನಚಿತ್ರ ನಟರು ಹಾಡಿನ ಮೂಲಕ ಕನ್ನಡ ಅಭಿಮಾನ ವ್ಯಕ್ತಪಡಿಸಿ, ಜನರಿಗೆ ಅರಿವು ಮೂಡಿಸುವಂತೆ ಮಾಡಿದ್ದಾರೆ. ನಮ್ಮ ನಾಡು ನುಡಿ ಉಳಿವಿಗಾಗಿ ನಾವು ಶ್ರಮಿಸಬೇಕು ಹಾಗೂ ಕನ್ನಡಕ್ಕೆ ಮೊದಲ ಆಧ್ಯತೆಯನ್ನು ನೀಡಬೇಕು. ನಮ್ಮ ಕನ್ನಡ ನಾಡು ಸಂಸ್ಕೃತಿಯನ್ನು ವಿದೇಶದವರು ಸಹ ಬೆಳೆಸುತ್ತಿದ್ದಾರೆ. ಕನ್ನಡ ಹಾಡುಗಳನ್ನು ಹಾಡಿ ಕುಣಿದು ಕುಪ್ಪಳಿಸಿ ಅಭಿಮಾನ ತೋರಿಸುತ್ತಾರೆ. ಅದಕ್ಕಾಗಿ ನಾವು ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು
ಇದೆ ಸಂದರ್ಭದಲ್ಲಿ 2021 ನೇ ಸಾಲಿನ ಕನ್ನಡ ಭಾಷೆಯಲ್ಲಿ 125 ಕ್ಕೆ 125 ಅಂಕ ಪಡೆದ 36 ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಹಾಗೂ ಹುಬ್ಬಳ್ಳಿ ಮತ್ತು ಧಾರವಾಡ ವಿಭಾಗದಿಂದ ಪ್ರಬಂಧ ಸ್ಪರ್ಧೆಯಲ್ಲಿ ಆಯ್ಕೆಯಾದ 6 ವಿಜೇತರಿಗೆ ಸನ್ಮಾನ ಮಾಡಲಾಯಿತು. ಇದನ್ನೂ ಓದಿ: ನಮ್ಮನ್ನ ಎಂದೂ ಅವ್ರು ಕೆಲ್ಸದವರಂತೆ ನೋಡಿಲ್ಲ: ಕೇಶ ವಿನ್ಯಾಸಕಾರ ಕಾರ್ತಿಕ್ ಭಾವುಕ
ಕಾರ್ಯಕ್ರಮದಲ್ಲಿ ಮೊಷ್ಲೋದೇವಿ ಮಂದಿರದ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ದೇವಪ್ಪಜ್ಜನವರ, ಹೆಚ್ಚುವರಿ ಆಯುಕ್ತ ಎ.ಆರ್.ದೇಸಾಯಿ, ಪಾಲಿಕೆ ಪಿ.ಆರ್.ಒ ಎಸ್.ಸಿ ಬೇವೂರ ಸೇರಿದಂತೆ ಪಾಲಿಕೆ ನೂತನವಾಗಿ ಆಯ್ಕೆಯಾದ ಸರ್ವ ಸದಸ್ಯರು, ಪಾಲಿಕೆ ಅಧಿಕಾರಿಗಳು, ಕನ್ನಡಪರ ಸಂಘಟನೆಯವರು, ಪದಾಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಧಾರವಾಡ: ಕಲಬುರಗಿ ಫಲಿತಾಂಶದಷ್ಟೇ ಕುತೂಹಲ ಕೆರಳಿಸಿದ್ದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ. ಇಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಿಎಂ ಕ್ಯಾಂಡಿಡೇಟ್ ಅಂತಲೇ ಬಿಂಬಿತವಾಗಿದ್ದ ಅರವಿಂದ್ ಬೆಲ್ಲದ್ ರಂತಹ ಘಟಾನುಘಟಿಗಳು ಇದ್ದರೂ, ಇಲ್ಲಿ ಅಧಿಕಾರ ಉರುಳಿಸಿಕೊಳ್ಳಲು ಏದುಸಿರು ಬಿಡ್ತಿದೆ.
ಕಾಂಗ್ರೆಸ್ ನಿರೀಕ್ಷೆ ಮೀರಿ ಉತ್ತಮ ಸಾಧನೆ ಮಾಡಿದ್ರಿಂದ ಇಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ. ಬಿಜೆಪಿ ಕಷ್ಟಪಟ್ಟು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಶಾಸಕರು, ಸಂಸದರ ನೆರವಿನಿಂದ ಗದ್ದುಗೆ ಏರುವುದು ನಿಶ್ಚಿತವಾಗಿದೆ. ಇಲ್ಲಿ ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾಗಿದ್ದು ಬಿಜೆಪಿಯಲ್ಲ. ಎಂಐಎಂ ಅಂದ್ರೆ ತಪ್ಪಾಗಲಿಕ್ಕಿಲ್ಲ. ಕಾಂಗ್ರೆಸ್‍ನ ಪಾರಂಪರಿಕ ಮತಗಳಿಗೆ ಅಸಾದುದ್ದೀನ್ ಓವೈಸಿ ಪಕ್ಷ ಕನ್ನಹಾಕದೇ ಇದ್ದಿದ್ರೆ ಬಿಜೆಪಿಗೆ ಅಧಿಕಾರ ಗಗನ ಕುಸುಮವಾಗುತ್ತಿತ್ತು. ಇದನ್ನೂ ಓದಿ: ನಾಡದ್ರೋಹಿ ಎಂಇಎಸ್‍ಗೆ ಸೋಲು – ಬೆಳಗಾವಿಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ?
ಯಾರಿಗೆ ಎಷ್ಟು ಸ್ಥಾನ?
ಒಟ್ಟು 92 ಸ್ಥಾನಗಳಿದ್ದು, ಬಹುಮತಕ್ಕೆ 47 ಮತಗಳು ಬೇಕಿದೆ. ಬಿಜೆಪಿ 39, ಕಾಂಗ್ರೆಸ್ 33, ಜೆಡಿಎಸ್ 1, ಎಂಐಎಂ 3, 6 ಮಂದಿ ಪಕ್ಷೇತರ(ಮೂವರು ಬಿಜೆಪಿ ಬಂಡಾಯ ಅಭ್ಯರ್ಥಿಗಳಿಗೆ ಗೆಲುವು) ಅಭ್ಯರ್ಥಿಗಳಿಗೆ ಗೆಲುವು ಸಿಕ್ಕಿದೆ.
ಬಿಜೆಪಿ ಇಲ್ಲಿ 60 ಸ್ಥಾನಗಳನ್ನು ಗೆಲ್ಲುವ ಪ್ಲ್ಯಾನ್ ಹಾಕಿಕೊಂಡಿತ್ತು. ಆದರೆ ಬಿಜೆಪಿಗೆ ಬಂಡಾಯ ಅಭ್ಯರ್ಥಿಗಳಿಂದ ಮತ ವಿಭಜನೆಯಾಗಿ ಹೊಡೆತ ಬಿದ್ದಿದೆ. ಇದರ ಜೊತೆ ಸ್ವಲ್ಪ ಪ್ರಮಾಣದಲ್ಲಿ ಆಡಳಿತ ವಿರೋಧಿ ಅಲೆಯೂ ಕಾರಣವಾಗಿದೆ.
ಕಾಂಗ್ರೆಸ್‍ಗೆ ಬಂಡಾಯ ಅಭ್ಯರ್ಥಿಗಳು ಕಂಟಕವಾಗಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಪಾರಂಪರಿಕ ಮತಗಳಿಗೆ ಎಂಐಎಂ ಕನ್ನ ಹಾಕಿದ್ದರಿಂದ ಹಿನ್ನಡೆಯಾಗಿದೆ.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಲಿಬಾನ್ ಸಮಸ್ಯೆಯಿಂದಾಗಿ ಬೆಲೆ ಏರಿಕೆಯಾಗಿವೆ. ಅಲ್ಲದೇ ಕಚ್ಚಾ ತೈಲ ಬರುತ್ತಿಲ್ಲ. ಹೀಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯಾಗಿದೆ ಮತ್ತು ಗ್ಯಾಸ್ ದರ ಹೆಚ್ಚಳ ಯಾಕೆ ಆಗಿದೆ ಎಂದು ಮತದಾರರೇ ವಿಚಾರ ಮಾಡಿ ಮತ ಹಾಕುತ್ತಾರೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಒಳ್ಳೆಯ ಸಂಗತಿ: ಶೆಟ್ಟರ್
ಇದೇ ವೇಳೆ ಹುಬ್ಬಳ್ಳಿ ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಮತ್ತೆ ನಾವೇ ಗೆಲ್ಲಲಿದ್ದೇವೆ. ಜನ ಅಭಿವೃದ್ಧಿ ನೋಡಿ ಮತ ಹಾಕುತ್ತಾರೆ. ಹೀಗಾಗಿ ನಾವು ಪಾಲಿಕೆ ಚುನಾವಣೆಯಲ್ಲಿ 55 ರಿಂದ 60 ಸೀಟು ಗೆಲ್ಲುತ್ತೇವೆ. ಈ ಬಾರಿ ಪಾಲಿಕೆಯಲ್ಲಿ ಮತ್ತೇ ಅಧಿಕಾರಕ್ಕೆ ಬರುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಧಾರವಾಡ: ಮೈಸೂರು ಅತ್ಯಾಚಾರ ಪ್ರಕರಣ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯಾಚಾರ ತನಿಖೆ ಬಗ್ಗೆ ನಾವು ಓಪನ್ ಡಿಸ್ಕಷನ್ ಮಾಡುವುದು ಇರುವುದಿಲ್ಲ, ಅಧಿಕಾರಿಗಳು ಆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಈ ಸಣ್ಣ ವಿಷಯವನ್ನು ಬೆಳೆಸುವ ಅವಶ್ಯಕತೆ ಇಲ್ಲ, ಗೃಹ ಇಲಾಖೆ ಮುಖ್ಯಮಂತ್ರಿಗಳ ನಂತರದ ಅತ್ಯಂತ ಲೋಡ್ ಇರುವ ಇಲಾಖೆ. ಎಲ್ಲೋ ತಪ್ಪಾದರೂ ಅದನ್ನು ಗೃಹ ಮಂತ್ರಿಗೆ ಕಟ್ಟುವುದು ತಪ್ಪು ಎಂದರು. ಇದನ್ನೂ ಓದಿ: ಮೈಸೂರು ಪ್ರಕರಣದ ಬಗ್ಗೆ ಸುಳಿವು ಸಿಕ್ಕಿದ್ದರೂ, ಈ ಪರಿಸ್ಥಿತಿಯಲ್ಲಿ ಹೇಳಲು ಸಾಧ್ಯವಿಲ್ಲ: ಪ್ರವೀಣ್ ಸೂದ್
ಹೊಸ ವಿಷಯ ತಿಳಿದುಕೊಂಡು ಕೆಲಸ ಮಾಡಲು ಸ್ವಲ್ಪ ಸಮಯ ಹಿಡಯುತ್ತದೆ. ಗೃಹ ಮಂತ್ರಿ ಬಹಳ ಸಮಾಧಾನದ ರಾಜಕಾರಣಿ, ಅರಗ ಜ್ಞಾನೇಂದ್ರ ಅವರಿಗೆ ಇಲಾಖೆ ಗ್ರಿಪ್ ಸಿಕ್ಕಿದೆ ಎಂದರು.
ಧಾರವಾಡ: ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಇದೆ, ದೆಹಲಿಗೆ ಹೋದರೆ ಅವರ ಕುಟುಂಬದ ಹೆಸರುಗಳೇ ಇವೆ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿದ್ದ ಶಾಸಕ ಸಿ.ಟಿ.ರವಿ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಸರ್ಕಾರದ ಹಣದಿಂದ ಯೋಜನೆಗಳನ್ನು ಮಾಡುತ್ತೇವೆ, ಆದರೆ ದೆಹಲಿಯಲ್ಲಿ ಇಂದಿರಾ ಗಾಂಧಿ, ನೆಹರು, ರಾಜೀವ್ ಗಾಂಧಿ ಹೆಸರುಗಳೇ ಇವೆ. ದೇಶದ ತುಂಬ ಅದೇ ಹೆಸರಿವೆ, ಹೀಗಾಗಿ ಸಹಜವಾಗಿಯೇ ಅದರ ಬಗ್ಗೆ ಸಿ.ಟಿ.ರವಿ ಗಮನ ಸೆಳೆದಿದ್ದಾರೆ ಎಂದರು.
ಹಿಂದೆ ಮಾಯಾವತಿ ಪಾರ್ಕ್‍ನಲ್ಲಿ ಪ್ರತಿಮೆ ಮಾಡಲು ಮುಂದಾಗಿದ್ದರು, ಆಗ ದೇಶಾದ್ಯಂತ ಹೋರಾಟವೇ ನಡೆಯಿತು. ದೇಶಾದ್ಯಂತ ಗಾಂಧಿ ಕುಟುಂಬದ ಹೆಸರಿನಲ್ಲಿ ಎಲ್ಲ ಇವೆ, ಪಾರ್ಕ್, ರಸ್ತೆ, ರೈಲ್ವೆ ನಿಲ್ದಾಣಗಳು, ಕ್ರೀಡಾಂಗಣ, ಸರ್ಕಾರ ಯೋಜನೆ, ಆಸ್ಪತ್ರೆ ಎಲ್ಲ ಅವರ ಹೆಸರಿನಲ್ಲಿವೆ. ಕಾಂಗ್ರೆಸ್ ತನ್ನ ಈ ದ್ವಂದ್ವ ನೀತಿ ಬಿಡಬೇಕು, ಸರ್ಕಾರದ ಯೋಜನೆಗಳಿಗೆ ಇವರ ಒಂದೆರಡು ಹೆಸರಿಟ್ಟರೆ ಅಡ್ಡಿ ಇಲ್ಲ, ಎಲ್ಲದ್ದಕ್ಕೂ ಅವರದೇ ಹೆಸರು ಇಡುತ್ತ ಹೋಗುವುದು ತಪ್ಪು ಎಂದು ಬೆಲ್ಲದ ಹೇಳಿದರು.
ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಅರವಿಂದ್ ಬೆಲ್ಲದ್ ಹೆಸರು ಕೆಳಿ ಬಂದಿತ್ತು. ಆದರೆ ಇದೀಗ ಅವರಿಗೆ ಸಚಿವ ಸ್ಥಾನವೂ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಬೆಲ್ಲದ್ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಹೌದು. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಹಾಕಿಕೊಳ್ಳುವ ಮೂಲಕ, ನಿಮ್ಮಲ್ಲರಂತೆ ನನಗೂ ಸಚಿವ ಸ್ಥಾನ ಸಿಗದೇ ಇರುವುದು ಬೇಸರ ತಂದಿದೆ. ಆದರೆ ಪಕ್ಷದ ಚೌಕಟ್ಟಿನಲ್ಲಿ ಇದೆಲ್ಲವನ್ನೂ ಸಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ಕ್ಷೇತ್ರ ಕ್ಷೇತ್ರದ ಜನತೆಯ ಸೇವೆಯೇ ನನ್ನ ಆದ್ಯತೆ. ಸಚಿವ ಸ್ಥಾನ ಸಿಗದಿರುವುದು ನನಗೆ ಅಡೆತಡೆ ಆಗುವುದಿಲ್ಲ. ಭ್ರಷ್ಟಾಚಾರಿಗಳ ವಿರುದ್ಧ ಹಿಂದಿನಂತೆಯೇ ಧ್ವನಿ ಎತ್ತುತ್ತೇನೆ. ನನ್ನ ಮೇಲೆ, ನನ್ನ ಕುಟುಂಬದ ಮೇಲೆ ಭ್ರಷ್ಟಾಚಾರ ಸಣ್ಣ ಕಪ್ಪುಚುಕ್ಕೆಯೂ ಇಲ್ಲ. ಆದರೆ ನಾನು ನಂಬಿದ ತತ್ವ ಸಿದ್ಧಾಂತ, ಸ್ವಚ್ಛ ಮತ್ತು ಭ್ರಷ್ಟಾಚಾರ ರಹಿತ ರಾಜಕೀಯ ಅನುಷ್ಠಾನಕ್ಕೆ ಬದ್ಧನಿರ್ತೇನೆ. ಜೀವನದಲ್ಲಿ ಸೋಲು ಗೆಲುವು ಶಾಶ್ವತ ಅಲ್ಲ. ದೇವರು ಎಲ್ಲವನ್ನೂ ಸಮಯಕ್ಕೆ ತಕ್ಕಂತೆ ಒದಗಿಸುತ್ತಾನೆ ಎಂದು ಬೆಲ್ಲದ್ ಬೇಸರ ಹೊರಹಾಕಿದ್ದಾರೆ.
ನಿನ್ನೆ ಬಸವರಾಜ್ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟ ರಚನೆಯಾಗಿದೆ. ಸಚಿವರ ಪಟ್ಟಿ ರಿಲೀಸ್ ಆಗುತ್ತಿದ್ದಂತೆಯೇ ಬೆಲ್ಲದ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಧಾರವಾಡ ನಗರದ ಜುಬ್ಲಿ ವೃತ್ತದಲ್ಲಿ ಏಕಾಏಕಿ ರಸ್ತೆ ತಡೆಮಾಡಿದ ಕಾರ್ಯಕರ್ತರು, ಬೆಲ್ಲದ್ ಪರ ಘೋಷಣೆ ಕೂಗಿದ್ದರು. ಮತ್ತೊಂದು ಕಡೆ ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿರುವ ನವನಗರದಲ್ಲಿ ಬೆಲ್ಲದ ಬೆಂಬಲಿಗರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಬಿಎಸ್ ಯಡಿಯೂರಪ್ಪ ಭಾವಚಿತ್ರದ ಮೇಲೆ ಧಿಕ್ಕಾರ ಎಂದು ಬರೆದು ಆಕ್ರೋಶ ವ್ಯಕ್ತ ಪಡಿಸಿದ್ದರು.
ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಬೆಲ್ಲದ್ ಬೆಂಬಲಿಗರು, ಅವರ ಭಾವಚಿತ್ರ ಹಿಡಿದು ಸಚಿವ ಸ್ಥಾನಕ್ಕೆ ಆಗ್ರಹಿಸಿದ್ದರು. ಅಲ್ಲದೇ ಸಿಎಂ ರೆಸ್‍ನಲ್ಲಿದ್ದ ಬೆಲ್ಲದ್‍ಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ಸಿ.ಪಿ ಯೋಗೇಶ್ವರ್, ಆರ್ ಶಂಕರ್ ಹಾಗೂ ಶ್ರೀಮಂತ ಪಾಟೀಲ್ ಇವರುಗಳ ಹೆಸರನ್ನು ಈ ಬಾರಿ ಕೈ ಬಿಡಲಾಗಿದೆ.