Tag: ಅರವಿಂದ್ ಬೆಲ್ಲದ್

  • ಜಯಮೃತ್ಯುಂಜಯ ಶ್ರೀಗಳಿಗೆ ವಿಷಪ್ರಾಶನ ಪ್ರಯತ್ನ ನಡೆದಿದೆ: ಬೆಲ್ಲದ್‌ ಗಂಭೀರ ಆರೋಪ

    ಜಯಮೃತ್ಯುಂಜಯ ಶ್ರೀಗಳಿಗೆ ವಿಷಪ್ರಾಶನ ಪ್ರಯತ್ನ ನಡೆದಿದೆ: ಬೆಲ್ಲದ್‌ ಗಂಭೀರ ಆರೋಪ

    ಹುಬ್ಬಳ್ಳಿ: ಕೂಡಲ ಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳಿಗೆ (Jayamruthyunjaya Swamiji) ವಿಷಪ್ರಾಶನ ಪ್ರಯತ್ನ ನಡೆದಿದೆ. ಶ್ರೀಗಳ ಆಹಾರವನ್ನು ವಿಷ ಮಾಡಿ ಅವರನ್ನು ಮುಗಿಸಬೇಕು ಅಂತ ಯೋಚನೆ ಮಾಡಿದ್ದಾರೆ ಎಂದು ವಿಧಾನ ಸಭೆ ವಿಪಕ್ಷ ಉಪ ನಾಯಕ ಅರವಿಂದ್ ಬೆಲ್ಲದ್ (Arvind Bellad) ಹೊಸ ಬಾಂಬ್ ಸಿಡಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ‘ಪಬ್ಲಿಕ್ ಟಿವಿ’ಗೆ ಹೇಳಿಕೆ ನೀಡುವಾಗ ಗಂಭೀರ ಆರೋಪ ಮಾಡಿರುವ ಅವರು, ಶ್ರೀಗಳ ಆರೋಗ್ಯ ಹದಗೆಟ್ಟಿದೆ. ಅವರಿಗೆ ಫುಡ್ ಪಾಯಿಸನ್ ಆಗಿದೆ ಅಂತ ಗೊತ್ತಿತ್ತು. ಇದಕ್ಕೆ ಕಾರಣ ಬೇರೆಯಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಡಾ ಕೇಸ್ | ಸಿಎಂ ಪತ್ನಿ ವಿಚಾರಣೆ ರದ್ದು – ನಿಮ್ಮನ್ಯಾಕೆ ರಾಜಕೀಯಕ್ಕೆ ಬಳಕೆ ಮಾಡ್ತಾರೆ?: ಇ.ಡಿಗೆ ಸುಪ್ರೀಂ ಛೀಮಾರಿ

    ಮಠದ ಹೊರಗಡೆ ಇಬ್ಬರು ಮುಸ್ಲಿಂ ಸಮಾಜದ ಹುಡುಗರು ಇದ್ದಾರೆ. ಆ ಇಬ್ಬರು ಮಠಕ್ಕೆ ಯಾರು ಬರ್ತಾರೆ ಯಾರು ಹೋಗತ್ತಾರೆ ಅಂತ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ವಿಡಿಯೋ ಸಹ ಮಾಡಿಕೊಳ್ಳುತ್ತಿದ್ದಾರೆ ಅಂತ ಭಕ್ತರು ನನಗೆ ಹೇಳಿದ್ದಾರೆ‌. ಅದೇ ಮುಸ್ಲಿಂ ಯುವಕರು ಅಡುಗೆ ಮನೆಗೆ ಹೋಗಿದ್ದರು. ಈ ಬಗ್ಗೆ ಸ್ಥಳೀಯ ಭಕ್ತರು ಯುವಕರನ್ನು ವಿಚಾರಣೆ ಮಾಡಿದ್ದಾರೆ. ಆ ಯುವಕರು ಅಡುಗೆ ಮನೆಗೆ ಹೋಗಿ ಬಂದ ಕೆಲವೆ ಹೊತ್ತಿನಲ್ಲಿ ಶ್ರೀಗಳ ಆರೋಗ್ಯ ಹದಗೆಟ್ಟಿದೆ ಶ್ರೀಗಳು ಈ ಬಗ್ಗೆ ನನಗೆ ಮುಂದೆ ಹೇಳಿಕೊಂಡಿದ್ದಾರೆ. ನನಗೆ ಮನಸ್ಸಿ ಸರಿಯಾಗುತ್ತಿಲ್ಲ, ನನಗೆ ವಿಷ ಪ್ರಾಶನ ಆಗಿದೆ ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ.

    ಊಟದಲ್ಲಿ ಏನೋ ಹೆಚ್ಚು ಕಡಿಮೆ ಹಾಕಲಾಗಿದೆ. ಈ ಕೆಟ್ಟ ಕೆಲಸ ಮಾಡುತ್ತಿದ್ದಾರೆ. ಸಮಾಜ ನೋಡುತ್ತಿದೆ. ಅವರು ಮಾಡಿದ ಕೆಟ್ಟ ಕೆಲಸಕ್ಕೆ ತಕ್ಕ ಶಿಕ್ಷೆ ಸಮಾಜ ನೀಡುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಂಜುನಾಥನ ಶಾಪದಿಂದ ಸರ್ಕಾರ ಸರ್ವನಾಶವಾಗುತ್ತೆ: ಜನಾರ್ದನ ರೆಡ್ಡಿ

  • ಚಿನ್ನಸ್ವಾಮಿ ಘಟನೆ ಬಗ್ಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮಾತಾಡಲಿ: ಅರವಿಂದ್ ಬೆಲ್ಲದ್

    ಚಿನ್ನಸ್ವಾಮಿ ಘಟನೆ ಬಗ್ಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮಾತಾಡಲಿ: ಅರವಿಂದ್ ಬೆಲ್ಲದ್

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ರಾಹುಲ್ ಗಾಂಧಿ (Rahul Gandhi), ಸೋನಿಯಾ ಗಾಂಧಿ (Sonia Gandhi) ಮಾತನಾಡಬೇಕು ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ್ ಬೆಲ್ಲದ್ (Arvind Bellad) ಕಾಂಗ್ರೆಸ್ ಹೈಕಮಾಂಡ್‌ಗೆ ಆಗ್ರಹಿಸಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಚಿನ್ನಸ್ವಾಮಿ ಕಾಲ್ತುಳಿತ ಘಟನೆಗೆ ಸಿಎಂ, ಡಿಸಿಎಂ, ಗೃಹ ಸಚಿವರೇ ಕಾರಣ. ತಕ್ಷಣ ಹೊಣೆ ಹೊತ್ತು 3 ಜನ ರಾಜೀನಾಮೆ ಕೊಡಬೇಕು. ವಿಧಾನಸೌಧ ಎದುರಿನ ವೇದಿಕೆ 25-30 ಜನರಿಗೆ ಮಾತ್ರ ಸೀಮಿತವಾಗಿತ್ತು. ಆದರೆ 350 ಜನ ಬಂದಿದ್ದರು. ಸಚಿವರ ಕುಟುಂಬದವರೇ ತುಂಬಿದ್ದರು. ಘಟನೆ ಬಳಿಕ ಕಣ್ಣೀರಿನ ರಾಜಕಾರಣ ಮಾಡಿದರು. ಘಟನೆ ತಿಳಿದಿದ್ದರೂ ಡಿಸಿಎಂ ಸ್ಟೇಡಿಯಂಗೆ ಹೋಗಿ ಕಪ್‌ಗೆ ಮುತ್ತು ಕೊಟ್ಟಿದ್ದಾರೆ. ಸಾವಿನ ಮೇಲೆ ರಾಜಕೀಯ ಮಾಡುತ್ತಿರುವುದು ಯಾರು? ನಾಚಿಕೆ ಆಗಲ್ವಾ ಇವರಿಗೆ? ನಿಮಗೆ ಮಕ್ಕಳಿಲ್ವಾ, ಮನುಷ್ಯತ್ವ ಇಲ್ವಾ? ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 11 ಅಮಾಯಕ ಜೀವಗಳ ಬಲಿ ಪಡೆದು ಈ ಸರ್ಕಾರ ಪಾಪಕ್ಕೆ ಗುರಿಯಾಗಿದೆ: ಸೋಮಣ್ಣ

    ಈಗ ವಿಷಯಾಂತರ ಮಾಡಲು ಮುಂದಿನ ಸಂಪುಟಕ್ಕೆ ಜಾತಿಗಣತಿ ವಿಷಯ ತರುತ್ತಿದ್ದಾರೆ.ರಾಜ್ಯದ ಜನ ಇವರನ್ನು ಕ್ಷಮಿಸಲ್ಲ. ಜನರ ಮುಂದೆ ನಾವು ಹೋಗಬೇಕಾದ ಅವಶ್ಯಕತೆ ಇದೆ. ಈ ಬಗ್ಗೆ ಪಕ್ಷದಲ್ಲಿ ಚರ್ಚೆ ಮಾಡುತ್ತಿದ್ದೇವೆ.ನಿಜವಾದ ತಲೆದಂಡ ಆಗಬೇಕಾಗಿದ್ದು ಪೊಲಿಸರದ್ದಲ್ಲ. ಸಿಎಂ, ಡಿಸಿಎಂ, ಗೃಹ ಸಚಿವರ ತಲೆದಂಡ ಆಗಬೇಕು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಏನೂ ಮಾತಾಡಿಲ್ಲ. ಮಲಗಿಕೊಂಡಿದ್ದಾರಾ ಅವರು? ಕಾಂಗ್ರೆಸ್ ಹೈಕಮಾಂಡ್ ಘಟನೆ ಬಗ್ಗೆ ಮಾತನಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆ ಸರ್ಕಾರದ ಪ್ರಾಯೋಜಿತ ಕೊಲೆ: ಅರಗ ಜ್ಞಾನೇಂದ್ರ

  • ಮಸೀದಿಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ – ಪರಿಶೀಲಿಸುವಂತೆ ಪೊಲೀಸ್ ಆಯುಕ್ತರಿಗೆ ಬೆಲ್ಲದ್ ಪತ್ರ

    ಮಸೀದಿಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ – ಪರಿಶೀಲಿಸುವಂತೆ ಪೊಲೀಸ್ ಆಯುಕ್ತರಿಗೆ ಬೆಲ್ಲದ್ ಪತ್ರ

    ಹುಬ್ಬಳ್ಳಿ/ಧಾರವಾಡ: ಅಪರಿಚಿತ ಹಾಗೂ ಅನುಮಾನಾಸ್ಪದವಾಗಿ ಬೇರೆ ದೇಶದ ವ್ಯಕ್ತಿಗಳು ಹುಬ್ಬಳ್ಳಿ-ಧಾರವಾಡ (Hubballi-Dharwad) ಮಹಾನಗರದ ಕೆಲ ಮಸೀದಿಗಳಲ್ಲಿ ಓಡಾಟ ನಡೆಸುತ್ತಿದ್ದು, ಪರಿಶೀಲಿಸುವಂತೆ ಪೊಲೀಸ್ ಆಯುಕ್ತರಿಗೆ ಶಾಸಕ ಅರವಿಂದ್ ಬೆಲ್ಲದ್ (Aravind Bellad) ಪತ್ರ ಬರೆದಿದ್ದಾರೆ.

    ಅಪರಿಚಿತರ ಓಡಾಟ ಪರಿಶೀಲಿಸುವಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರಿಗೆ ಬೆಲ್ಲದ್ ಪತ್ರ ಬರೆದಿದ್ದಾರೆ. ಮೇ 17ರಂದು ಬೆಲ್ಲದ್ ಪತ್ರ ಬರೆದಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕೆಲ ಮಸೀದಿಗಳಲ್ಲಿ ಅಪರಿಚಿತರ ಓಡಾಟ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಅವರು ಸ್ಥಳೀಯರು ಅಲ್ಲ ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಬೇಕಾ, ನರಕ ಬೇಕಾ ಅಂತ ಕೇಳಿದ್ರೆ ನಾನು ನರಕವನ್ನೇ ಆಯ್ಕೆ ಮಾಡ್ತೀನಿ: ಜಾವೇದ್‌ ಅಖ್ತರ್‌

    ಹೀಗೆ ಓಡಾಡುತ್ತಿರುವವರಲ್ಲಿ ಹೊಸ ಮುಖ, ಅಪರಿಚಿತ, ಅನುಮಾನಾಸ್ಪದ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ. ಅವರು ಹೊರ ದೇಶದ ಪ್ರಜೆಗಳಂತೆ ಭಾಸವಾಗುತ್ತಾರೆ. ಅವಳಿ ನಗರದ ವಿವಿಧ ಕೊಳಚೆ ಪ್ರದೇಶದಲ್ಲಿ (ಜನ್ನತ್ ನಗರ ಧಾರವಾಡ ಸೇರಿದಂತೆ) ವಾಸವಾಗಿದ್ದಾರೆಂಬ ಮಾಹಿತಿಯೂ ಇದೆ. ಅದಕ್ಕಾಗಿ ಈ ಕುರಿತು ಪೊಲೀಸ್ ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: Hyderabad | ಚಾರ್‌ಮಿನಾರ್ ಬಳಿಯ ಗುಲ್ಜಾರ್ ಹೌಸ್‌ನಲ್ಲಿ ಬೆಂಕಿ ಅವಘಡ – 8 ಮಂದಿ ಸಜೀವ ದಹನ

    ಅವಳಿ ನಗರದಲ್ಲಿರುವ ಅಪರಿಚಿತ, ಹೊಸಮುಖದ ವ್ಯಕ್ತಿಗಳನ್ನು ವಿಚಾರಿಸಿ ಸೂಕ್ತ ಕ್ರಮ ಜರುಗಿಸಬೇಕು. ಇದರಿಂದ ಮಹಾನಗರದಲ್ಲಿ ಅಹಿತಕರ ಘಟನೆ ಆಗದಂತೆ ತಡೆಯುವ ಕೆಲಸ ಮಾಡಬೇಕೆಂದು ಶಾಸಕ ಬೆಲ್ಲದ್ ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಟಿಬಿ ಡ್ಯಾಂನಲ್ಲಿ ಅಧಿಕಾರಿಯ ಪುತ್ರನ ನಿಶ್ಚಿತಾರ್ಥ – ನಿಷೇಧವಿದ್ದರೂ ಖಾಸಗಿ ಕಾರ್ಯಕ್ಕೆ ಬಳಸಿಕೊಂಡು ನಿಯಮ ಉಲ್ಲಂಘನೆ

  • ಯತ್ನಾಳ್ ಉಚ್ಚಾಟನೆ ದುಃಖ ತಂದಿದೆ, ಹೈಕಮಾಂಡ್ ನಿರ್ಧಾರಕ್ಕೆ ತಲೆ ಬಾಗುವೆ: ಬೆಲ್ಲದ್

    ಯತ್ನಾಳ್ ಉಚ್ಚಾಟನೆ ದುಃಖ ತಂದಿದೆ, ಹೈಕಮಾಂಡ್ ನಿರ್ಧಾರಕ್ಕೆ ತಲೆ ಬಾಗುವೆ: ಬೆಲ್ಲದ್

    ಹುಬ್ಬಳ್ಳಿ: ಪಕ್ಷದಿಂದ ಬಸನಗೌಡ ಪಾಟೀಲ್ ಯತ್ನಾಳ್‌ರನ್ನ (Basanagouda Patil Yatnal) ಉಚ್ಚಾಟನೆ ಮಾಡಿರುವುದು ಬಹಳಷ್ಟು ದುಃಖ ತಂದಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ (Aravind Bellad) ಹೇಳಿದರು.

    ಯತ್ನಾಳ್‌ರನ್ನು ಬಿಜೆಪಿ ಪಕ್ಷದಿಂದ 6 ವರ್ಷ ಹೈಕಮಾಂಡ್ ಉಚ್ಚಾಟನೆ ಮಾಡಿರುವ ವಿಚಾರವಾಗಿ ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮದವರೊಂದಿಗೆ ಮಾತನಾಡಿದರು. ಯತ್ನಾಳ್ ಒಬ್ಬ ಪಕ್ಷದ ಹಿರಿಯ ಜನಪ್ರಿಯ ನಾಯಕರು. ಅವರು ಪಕ್ಷದಿಂದ ದೂರವಾಗುತ್ತಿರುವುದು ನನಗೆ ದುಃಖ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿಯಿಂದ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಛಾಟನೆ

    ಹೈಕಮಾಂಡ್‌ನ ನಿರ್ಧಾರಕ್ಕೆ ನಾನು ತಲೆ ಬಾಗುತ್ತೇನೆ. ಪಕ್ಷದಲ್ಲಿ ಮುಂದೆ ಎಲ್ಲವೂ ಸರಿಯಾಗುತ್ತದೆ ಎನ್ನುವ ಭರವಸೆ ನನಗಿದೆ. ಯತ್ನಾಳ್ ಅವರಿಗೆ ಕೇಂದ್ರದ ಮಂತ್ರಿಯಾಗಿ, ಶಾಸಕರಾಗಿ ಸಾಕಷ್ಟು ಅನುಭವವಿದೆ. ಅವರು ಏನೇ ವಿಷಯವಿದ್ದರೂ ನೇರವಾಗಿಯೇ ಹೇಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಸತ್ಯವಂತರಿಗಿದು ಕಾಲವಲ್ಲ.. ದುಷ್ಟಜನರಿಗೆ ಸುಭಿಕ್ಷಕಾಲ: ಉಚ್ಚಾಟನೆಗೆ ದಾಸರ ಹಾಡಿನ ಮೂಲಕ ಯತ್ನಾಳ್ ಕೌಂಟರ್

  • ಎಸ್‌ಡಿಎ ರುದ್ರಣ್ಣ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಬೇಕು: ಅರವಿಂದ ಬೆಲ್ಲದ್‌

    ಎಸ್‌ಡಿಎ ರುದ್ರಣ್ಣ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಬೇಕು: ಅರವಿಂದ ಬೆಲ್ಲದ್‌

    ಬೆಳಗಾವಿ: ಎಸ್‌ಡಿಎ ರುದ್ರಣ್ಣ ಯಡವಣ್ಣವರ್ ಆತ್ಮಹತ್ಯೆ (Rudranna Yadavannavar) ಪ್ರಕರಣದ ತನಿಖೆಯನ್ನು ಸಿಬಿಐಗೆ (CBI) ನೀಡಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌ (Arvind Bellad) ಆಗ್ರಹಿಸಿದ್ದಾರೆ.

    ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತನ್ನ ಪಿಎಗಳನ್ನು ಬಳಸಿ ಮಾಡುತ್ತಿರುವ ಅನ್ಯಾಯ ನೋಡಲಾಗದೇ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಗ್ರಾಮೀಣದಲ್ಲಿ ಜನ ಹೆಚ್ಚಿನ ಲೀಡ್‌ ನೀಡಿದ್ದರು. ಹೆಬ್ಬಾಳ್ಕರ್ ಬಂದ ಮೇಲೆ ಭ್ರಷ್ಟಾಚಾರ ಹೆಚ್ಚಾಗಿದೆ. ಅಮಾಯಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ಸಂಬಂಧ ಇಲ್ಲಿಯವರೆಗೆ ಯಾವುದೇ ಬಂಧನ ಆಗಿಲ್ಲ. ತಹಶೀಲ್ದಾರ್‌ ಕಚೇರಿ ಸಿಸಿಟಿವಿಯನ್ನು ವಶಕ್ಕೆ ಪಡೆದುಕೊಂಡಿಲ್ಲ‌. ಸಾಕ್ಷಿ ನಾಶದ ಅನುಮಾನ ವ್ಯಕ್ತವಾಗಿದೆ ಎಂದು ದೂರಿದರು. ಇದನ್ನೂ ಓದಿ: ಸರ್‌ ಎಂ.ವಿಶ್ವೇಶ್ವರಯ್ಯ ಓದಿದ್ದ ಸರ್ಕಾರಿ ಶಾಲೆಯೂ ವಕ್ಫ್‌ ಹೆಸರಿಗೆ

     

    ಸಾಕ್ಷಿ ನಾಶ ಮಾಡುವ ಬಗ್ಗೆ ಜನರಿಗೆ ಸಂಶಯವಿದೆ. ಪೊಲೀಸ್ ಇಲಾಖೆ ತನ್ನ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ಸಿಎಂ‌ ಹಾಗೂ ಸಚಿವರ ಒತ್ತಡಕ್ಕೆ ಪೊಲೀಸ್ ಅಧಿಕಾರಿಗಳು ಮಣಿದಿದ್ದಾರೆ‌. ಪಿಎ ಮಾಡಿರುವ ಕೆಲಸಕ್ಕೆ ಸಚಿವರೇ ಹೊಣೆ ಹೊರಬೇಕು.ಪೊಲೀಸ್‌ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಸಿಬಿಐಗೆ ಪ್ರಕರಣದ ತನಿಖೆ ವಹಿಸಬೇಕು ಎಂದು ಬೆಲ್ಲದ್‌ ಆಗ್ರಹಿಸಿದರು.

    ರಾಜ್ಯ ಸರ್ಕಾರದ 16 ತಿಂಗಳಲ್ಲಿ ದಿನಕ್ಕೆ ಒಂದೊಂದು ಹಗರಣ ಹೊರಗೆ ಬರುತ್ತಿವೆ. ಭ್ರಷ್ಟಾಚಾರ ಅಂದರೆ ಕಾಂಗ್ರೆಸ್ ಎನ್ನುವಂತೆ ರಾಜ್ಯದಲ್ಲಿ ಆಗಿದೆ. ಯಾವುದೇ ಹಗರಣ ಬಂದರೂ ಅದರಲ್ಲಿ ಹೆಬ್ಬಾಳ್ಕರ್ ಹೆಸರು ಕೇಳಿ ಬರುತ್ತಿದೆ. ವಾಲ್ಮೀಕಿ ಹಗರಣ ಬಗ್ಗೆ ಸತೀಶ್ ಜಾರಕಿಹೊಳಿ ಚಕಾರ ಎತ್ತಿಲ್ಲ. ಮುಡಾ, ವಕ್ಫ್ ಇಲಾಖೆಯಲ್ಲಿ ಹಗರಣ ಮಾಡಿದ್ದಾರೆ. ಪ್ರವಾಸೋದ್ಯಮ, ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದರು.

     

  • ನಾವು ಗೆಲ್ಲಬೇಕು ಅಂದ್ರೆ ಸಿಪಿವೈ ಅವರಿಗೆ ಟಿಕೆಟ್ ಕೊಡಬೇಕು:  ಬೆಲ್ಲದ್ ಬ್ಯಾಟಿಂಗ್

    ನಾವು ಗೆಲ್ಲಬೇಕು ಅಂದ್ರೆ ಸಿಪಿವೈ ಅವರಿಗೆ ಟಿಕೆಟ್ ಕೊಡಬೇಕು: ಬೆಲ್ಲದ್ ಬ್ಯಾಟಿಂಗ್

    ಹುಬ್ಬಳ್ಳಿ: ನಾವು ಗೆಲ್ಲಬೇಕು ಅಂದ್ರೆ ಯೋಗೇಶ್ವರ್ ( C P Yogeshwar) ಅವರಿಗೆ ಟಿಕೆಟ್ ಕೊಡಬೇಕು. ಕರ್ನಾಟಕದಲ್ಲಿ ಮೂರು ಉಪಚುನಾವಣೆ ನಡೆಯಲಿದೆ. ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆದಿದೆ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ (Aravind Bellad) ಹೇಳಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರ ಮನಸ್ಸಿನಲ್ಲಿ ಯೋಗೇಶ್ವರ್ ಅಭ್ಯರ್ಥಿ ಆಗಬೇಕು ಅನ್ನೋ ಆಸೆ ಇದೆ. ಅವರೇ ಚನ್ನಪಟ್ಟಣ ಅಭ್ಯರ್ಥಿ ಆಗಬೇಕು. ಯೋಗೇಶ್ವರ್ ಎನ್‌ಡಿಎ ಅಭ್ಯರ್ಥಿ ಆಗಬೇಕು. ನಮ್ಮೆಲ್ಲರಿಗೂ ಯೋಗೇಶ್ವರ್ ಅವರನ್ನೇ ಅಭ್ಯರ್ಥಿ ಮಾಡಬೇಕು ಅನ್ನೋ ಒತ್ತಾಯ ಇದೆ. ನಾವೆಲ್ಲ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡುತ್ತೇವೆ. ಅಂತಿಮವಾಗಿ ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ. ಹಾಗೇ ನೋಡಿದರೆ ಕುಮಾರಸ್ವಾಮಿ ಅವರೇ ಯೋಗಿಶ್ವರ್ ಅವರನ್ನು ಕರೆದು ಟಿಕೇಟ್ ನೀಡಬೇಕು ಎಂದು ಹೇಳಿದರು. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಹಣಕಾಸು ವಹಿವಾಟು ನಡೆದಿಲ್ಲ, ಹಣಕಾಸಿನ ವಿಚಾರ ಎಲ್ಲೂ ತನಿಖೆಯಾಗಿಲ್ಲ: ಡಿ.ಕೆ.ಸುರೇಶ್

    ನಾನು ಶಿಗ್ಗಾಂವಿ ಕ್ಷೇತ್ರ ಸುತ್ತಾಡಿದಾಗ ಮತ್ತೊಮ್ಮೆ ಬೊಮ್ಮಾಯಿ (Basavaraj Bommai) ಕುಟುಂಬಕ್ಕೆ ಅವಕಾಶ ಕೊಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ತೀರ್ಮಾನಕ್ಕೆ ಬೊಮ್ಮಾಯಿ ಬದ್ಧವಾಗಿರಬೇಕು. ಹೈಕಮಾಂಡ್ ಕೂಡಾ ಎಲ್ಲ ಆಯಾಮಗಳಲ್ಲಿ ಸರ್ವೆ ಮಾಡಿದೆ. ಕೋರ್ ಕಮಿಟಿಯಿಂದ ಮೂರ್ನಾಲ್ಕು ಹೆಸರು ಹೋಗಿರುವ ಬಗ್ಗೆ ಮಾಹಿತಿ ಇದೆ. ಪಕ್ಷ ಅಂದ ಮೇಲೆ ಭಿನ್ನಾಭಿಪ್ರಾಯ ಸಹಜ. ಪಕ್ಷದಲ್ಲಿ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದರು. ಇದನ್ನೂ ಓದಿ: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಬಿಂದಾಸ್ ಲೈಫ್ – ಪ್ರಕರಣ ಸಿಸಿಬಿಗೆ ವರ್ಗಾವಣೆ

  • ಸಿಎಂ ಸಿದ್ದರಾಮಯ್ಯಗೆ ಕ್ಷಮೆ ಕೋರಿದ ಅರವಿಂದ್ ಬೆಲ್ಲದ್

    ಸಿಎಂ ಸಿದ್ದರಾಮಯ್ಯಗೆ ಕ್ಷಮೆ ಕೋರಿದ ಅರವಿಂದ್ ಬೆಲ್ಲದ್

    ಬೆಂಗಳೂರು: ಕೆಲವು ದಿನಗಳ ಹಿಂದೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದ ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ (Arvind Bellad), ಈಗ ಸಿದ್ದರಾಮಯ್ಯರಿಗೆ (CM Siddaramaiah) ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಸಿಎಂ ಅವರಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ವಿಚಾರವಾಗಿ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ ಕ್ಷಮೆ ಕೇಳಿದ್ದಾರೆ.ಇದನ್ನೂ ಓದಿ: ಬಾಲಿವುಡ್ ಸಿನಿಮಾ ಶೂಟಿಂಗ್‌ಗಾಗಿ ಹಂಪಿಗೆ ಬರಲಿದ್ದಾರೆ ರಶ್ಮಿಕಾ ಮಂದಣ್ಣ

    ಧಾರವಾಡದಲ್ಲಿ ಮಾತನಾಡಿದ್ದ ಅವರು, ‘ಸಿದ್ದರಾಮಯ್ಯನವರದ್ದು ಏನು ಅಪ್ಪನ ಮನೆಯ ಆಸ್ತಿನಾ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಅರವಿಂದ್ ಬೆಲ್ಲದ್ ಅವರು ಪತ್ರ ಬರೆದು ಕ್ಷಮೆ ಕೇಳಿದ್ದಾರೆ.

    ತಾವು ಬಳಸಿದ ಪದ ನನಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಕ್ಕೆ, ಈ ಹಿನ್ನಲೆಯಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದು ಕ್ಷಮಾಪಣೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.ಇದನ್ನೂ ಓದಿ: 9.99 ಲಕ್ಷಕ್ಕೆ ಟಾಟಾ ಕರ್ವ್ ಬಿಡುಗಡೆ

    ಜಿಂದಾಲ್‌ಗೆ (Jindal) ಭೂಮಿ ಕೊಟ್ಟಿದ್ದಾರೆ. ಮಾರುಕಟ್ಟೆ ಮೌಲ್ಯದ ಒಂದು ಭಾಗಕ್ಕೆ ಬೆಲೆಬಾಳುವ ಸರ್ಕಾರಿ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಈ ಮೂಲಕ ಇನ್ನೊಂದು ಹಗರಣವನ್ನು ಮಾಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ಬೆಲ್ಲದ್ ಹರಿಹಾಯ್ದಿದ್ದರು.

    ಸರ್ಕಾರವು ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ಆಂತರಿಕ ಒಪ್ಪಂದವನ್ನು ಮಾಡಿಕೊಂಡು ಭೂಮಿಯನ್ನು ಲೂಟಿ ಮಾಡುತ್ತಿದೆ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

  • ಯಾರಿಗೂ ಬೇಸರ ಆಗಿಲ್ಲ, ಸಭೆ ಬಹಿಷ್ಕರಿಸಿಲ್ಲ: ಅರವಿಂದ್ ಬೆಲ್ಲದ್

    ಯಾರಿಗೂ ಬೇಸರ ಆಗಿಲ್ಲ, ಸಭೆ ಬಹಿಷ್ಕರಿಸಿಲ್ಲ: ಅರವಿಂದ್ ಬೆಲ್ಲದ್

    ಬೆಂಗಳೂರು: ಯಾರು ಕೂಡ ಸಭೆ ಬಹಿಷ್ಕರಿಸಿಲ್ಲ. ಯಾರಿಗೂ ಬೇಸರವಿಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ್ (Aravind Bellad) ಹೇಳಿದ್ದಾರೆ.

    ಬಿಜೆಪಿ ಶಾಸಕಾಂಗ ಸಭೆಗೂ ಮುನ್ನ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಯಾರು ಸಭೆ ಬಹಿಷ್ಕರಿಸಿಲ್ಲ. ವೀಕ್ಷಕರು ಎಲ್ಲರ ಅಭಿಪ್ರಾಯ ಪಡೆಯುತ್ತಿದ್ದಾರೆ. ಬೇಸರ ಆಗಿಲ್ಲ ಎಂದರು.

    ವೀಕ್ಷಕರು ಒನ್ ಟು ಒನ್ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಯಾರಿಗೂ ಬೇಸರ ಆಗಿಲ್ಲ, ಬಹಿಷ್ಕಾರ ಮಾಡಿಲ್ಲ. ಉತ್ತರ ಕರ್ನಾಟಕ ಭಾಗದ ಕಡೆ ಹೆಚ್ಚು ಶಾಸಕರಿದ್ದಾರೆ. ಇನ್ನೂ ಏನೂ ನಿರ್ಧಾರ ಆಗಿಲ್ವಲ್ಲ. ಉ.ಕ ಭಾಗಕ್ಕೆ ಪರಿಗಣಿಸಿ ಅಂದಿದ್ದೇವೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಶಾಸಕಾಂಗ ಸಭೆಗೂ ಮುನ್ನ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ- ಸಭೆ ಬಹಿಷ್ಕರಿಸಿದ ಇಬ್ಬರು ಶಾಸಕರು

    ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ರಾಜ್ಯ ಬಿಜೆಪಿಯ ಪ್ರಮುಖ ನಾಯಕರ ಜೊತೆ ಹೈಕಮಾಂಡ್ ವೀಕ್ಷಕರ ಸಭೆ ಕರೆದಿತ್ತು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪ್ರಮುಖ ನಾಯಕರ ಜೊತೆ ಚರ್ಚೆ ನಡೆಯುತ್ತಿದೆ. ನಿರ್ಮಲಾ ಸೀತಾರಾಮನ್, ಅಶ್ವತ್ಥ ನಾರಾಯಣ, ಮುನಿರತ್ನ, ಗೋಪಾಲಯ್ಯ, ವಿಜಯೇಂದ್ರ, ಅಶೋಕ್, ಎಸ್ ಆರ್ ವಿಶ್ವನಾಥ್ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದಾರೆ.

  • ಹೆಚ್‌ಡಿಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಶಾಸಕ ಬೆಲ್ಲದ್‌

    ಹೆಚ್‌ಡಿಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಶಾಸಕ ಬೆಲ್ಲದ್‌

    ಧಾರವಾಡ: ಹೆಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರು ಮಾಜಿ ಪ್ರಧಾನಿ ಹಾಗೂ ಮಹಾಮುತ್ಸದ್ಧಿ ದೇವೇಗೌಡರ (HD Deve Gowda) ಮಗನಾಗಿದ್ದರೂ ಇಂತಹ ತಳಬುಡ ಇಲ್ಲದ ಹೇಳಿಕೆ ಕೊಟ್ಟಿದ್ದಾರೆ ಎಂದು ಧಾರವಾಡ ಶಾಸಕ ಅರವಿಂದ್‌ ಬೆಲ್ಲದ್‌ (Aravind Bellad) ಕಿಡಿಕಾರಿದರು.

    ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಗೋಡ್ಸೆ ವಂಶಸ್ಥರು ಎಂಬ ಮಾಜಿ ಸಿಎಂ ಹೆಚ್‌ಡಿಕೆ ಹೇಳಿಕೆಗೆ ಧಾರವಾಡದಲ್ಲಿ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಮಾನಸಿಕ ಸ್ಥಿತಿ ತಪ್ಪಿದಂತೆ ಅನಿಸುತ್ತದೆ. ಅವರ ಪಕ್ಷದಿಂದ ಜನ ಓಡಿ ಹೋಗುತ್ತಿದ್ದಾರೆ. ಅವರ ನಾಯಕರೇ ಅವರ ವಿರುದ್ಧ ಬಂಡೆದ್ದಿದ್ದಾರೆ. ಹೀಗಾಗಿ ಏನು ಮಾಡಬೇಕು, ಏನು ಮಾತನಾಡಬೇಕು ತಿಳಿಯದಾಗಿದೆ ಎಂದರು.

    ಈ ರೀತಿ ಹೇಳಿಕೆ ನೀಡಿರುವುದು ಬಹಳ ದುರಾದೃಷ್ಟಕರ ವಿಚಾರ. ಮೋದಿ ಸರ್ಕಾರದಲ್ಲಿ ಜಾತಿ, ಪಂಥ ನೋಡದೆ ಯೋಗ್ಯರಿದ್ದವರಿಗೆ ಸಿಎಂ ಮಾಡುತ್ತಾರೆ ಎಂದ ಅವರು, ಇದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ, ಈ ರೀತಿಯ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಜಾತಿ ಹೆಸರಿನಿಂದ ರಾಜಕಾರಣ ಮಾಡುವುದು ಗೌಡರ ಕುಟುಂಬಕ್ಕೆ ಗೌರವ ತರುವ ವಿಚಾರ ಅಲ್ಲ ಎಂದು ಹೇಳಿದರು. ಇದನ್ನೂ ಓದಿ: ಜನಾರ್ದನ ಪೂಜಾರಿ ಪ್ರಭಾವ ಬಳಸಿ ಟಿಕೆಟ್‍ಗಾಗಿ ಭಾರೀ ಕಸರತ್ತು

    ಕುಮಾರಸ್ವಾಮಿ ಈ ಹೇಳಿಕೆ ಮೂಲಕ ತಮಗೆ ಮಾತ್ರವಲ್ಲ ಗೌಡರ ಕುಟುಂಬಕ್ಕೆ ಕಳಂಕ ತಂದಿದ್ದಾರೆ. ದೇವೇಗೌಡ, ರೇವಣ್ಣ ಕುಟುಂಬದವರು ಎಲ್ಲರೂ ಕುಮಾರಸ್ವಾಮಿ ಹೇಳಿಕೆ ಖಂಡಿಸುತ್ತಾರೆ ಎಂದು ಕೊಂಡಿದ್ದೇನೆ ಎಂದ ಅವರು, ತಮ್ಮ ವಿಚಾರ ಎಷ್ಟು ಕೆಳಮಟ್ಟದೆಂದು ತೋರಿಸಿದ್ದಾರೆ. ಸಾಮರಸ್ಯ ಕೆಡಿಸುವ ಕೆಲಸ ಕುಮಾರಸ್ವಾಮಿ ಮಾಡಿದ್ದಾರೆ, ಬ್ಯಾಲೆನ್ಸ್ ಇಲ್ಲದ ಹೇಳಿಕೆ ಅವರು ನೀಡಬಾರದು ಎಂದು ತಿಳಿಸಿದರು. ಇದನ್ನೂ ಓದಿ: Traffic Fine- 50% ವಿನಾಯಿತಿಯ ಕಾಲಮಿತಿಯನ್ನು ಮೂರು ತಿಂಗಳು ವಿಸ್ತರಿಸಿ: ಸಿಎಂಗೆ ಆಪ್‌ ಪತ್ರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚಂದಮಾಮ ಪುಸ್ತಕದಲ್ಲಿ ‘ದಿನಕ್ಕೊಂದು ಕತೆ’ ಎಂದು ಬರ್ತಿತ್ತು – ಬಿಜೆಪಿ ಸರ್ಕಾರದಿಂದ ‘ದಿನಕ್ಕೊಂದು ಹಗರಣ’ ಬರುತ್ತಿದೆ: ಕಾಂಗ್ರೆಸ್

    ಚಂದಮಾಮ ಪುಸ್ತಕದಲ್ಲಿ ‘ದಿನಕ್ಕೊಂದು ಕತೆ’ ಎಂದು ಬರ್ತಿತ್ತು – ಬಿಜೆಪಿ ಸರ್ಕಾರದಿಂದ ‘ದಿನಕ್ಕೊಂದು ಹಗರಣ’ ಬರುತ್ತಿದೆ: ಕಾಂಗ್ರೆಸ್

    ಬೆಂಗಳೂರು: ಹಿಂದೆ ಚಂದಮಾಮ ಪುಸ್ತಕದಲ್ಲಿ ‘ದಿನಕ್ಕೊಂದು ಕತೆ’ ಎಂದು ಬರ್ತಿತ್ತು. ಈಗ ಬಿಜೆಪಿ (BJP) ಸರ್ಕಾರದಲ್ಲಿ ‘ದಿನಕ್ಕೊಂದು ಹಗರಣ’ ಹೊರಬರುತ್ತಿವೆ. ನಿಗಮಗಳಲ್ಲಿ ಭ್ರಷ್ಟಾಚಾರ ಸುಗಮ’ ಎಂಬಂತಾಗಿದೆ ಎಂದು ಬಿಜೆಪಿ ಸರ್ಕಾರವನ್ನು ಟೀಕಿಸಿ ಕಾಂಗ್ರೆಸ್ (Congress) ಸರಣಿ ಟ್ವೀಟ್ ಮಾಡಿದೆ.

    ಟ್ವೀಟ್‍ನಲ್ಲಿ ಏನಿದೆ?
    ದಲಿತರ ಸ್ವಾವಲಂಬನೆಗೆ ನಾವು ಜಾರಿಗೊಳಿಸಿದ್ದ ಐರಾವತ, ಸಮೃದ್ಧಿ ಯೋಜನೆಗಳಲ್ಲಿ ಅಕ್ರಮ ನಡೆದರೂ ಸರ್ಕಾರ ಕೈಕಟ್ಟಿ ಕುಳಿತಿದ್ದೇಕೆ ಬೊಮ್ಮಾಯಿ (Basavaraj Bommai) ಅವರೇ? ಮಹಿಳೆಯರ ಮೇಲೆ ಬಿಜೆಪಿಗರ ದರ್ಪ, ದೌರ್ಜನ್ಯ ಮಿತಿ ಮೀರುತ್ತಿದೆ. ಶಾಸಕ ಅರವಿಂದ್ ಬೆಲ್ಲದ್ (Arvind Bellad) ಸಮಸ್ಯೆ ಹೇಳಿಕೊಳ್ಳಲು ಹೋದ ಮಹಿಳೆಯನ್ನು ಅವಮಾನಿಸಿದ ಕಾರಣ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಹಳೆಯ ಪಿಂಚಣಿ ಯೋಜನೆ ಜಾರಿಗೆ: ರಾಹುಲ್ ಗಾಂಧಿ

    ಸ್ತ್ರೀ ಪೀಡಕರ ಸಾಮ್ರಾಜ್ಯವಾಗಿರುವ ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೆ ಗೌರವವಿಲ್ಲವೇಕೆ ಬೊಮ್ಮಾಯಿ ಅವರೇ? ಇದರ ವಿರುದ್ಧ ನಿಮ್ಮ ಕ್ರಮವೇನು? ಶಾಸಕ ಅರವಿಂದ್ ಬೆಲ್ಲದ್ ಮಾಡಿದ ಅವಮಾನದಿಂದಾಗಿ ದಲಿತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಾಸಕರ ದುರ್ವರ್ತನೆಯೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂಬುದು ಮಹಿಳೆ ಬರೆದ ಡೆತ್‍ನೋಟ್‍ನಲ್ಲಿ ಸ್ಪಷ್ಟವಾಗಿದೆ, ಬೊಮ್ಮಾಯಿ ಅವರೇ, ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಿರಾ ಅಥವಾ ಸಿದ್ದು ಸವದಿ ಪ್ರಕರಣದಂತೆ ಮುಚ್ಚಿ ಹಾಕುವಿರಾ? ಶಾಸಕ ಅರವಿಂದ್ ಲಿಂಬಾವಳಿಯಿಂದ ಮಹಿಳೆಗೆ ನಿಂದನೆ. ಸಚಿವ ವಿ.ಸೋಮಣ್ಣರಿಂದ (V.Somanna) ಮಹಿಳೆಯ ಮೇಲೆ ಹಲ್ಲೆ. ಶಾಸಕ ಅರವಿಂದ್ ಬೆಲ್ಲದ್‍ರಿಂದ ಮಹಿಳೆಗೆ ನಿಂದನೆ. ಇತ್ತೀಚಿನ ಕೆಲವೇ ದಿನಗಳಲ್ಲಿ ನಡೆದ ಈ ಮೂರು ಘಟನೆಗಳು ಬಿಜೆಪಿಯ ಮಹಿಳಾ ವಿರೋಧಿ ಧೋರಣೆಯನ್ನು ಬೆತ್ತಲಾಗಿಸಿವೆ. ಬೊಮ್ಮಾಯಿ ಅವರೇ, ಮಹಿಳೆಯರ ಘನತೆ ನಿಮ್ಮ ಅದ್ಯತೆಯಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೇಕಿಲ್ಲ ಗೌರವ – ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ

    Live Tv
    [brid partner=56869869 player=32851 video=960834 autoplay=true]