Tag: ಅರವಿಂದ್ ಕೆಪಿ

  • ಅದೃಷ್ಟದಿಂದಲೇ ಇಷ್ಟು ದಿನ ಬಿಗ್ ಬಾಸ್‌ನಲ್ಲಿದ್ದರು: ದಿವ್ಯಾಗೆ ಸಂಬರ್ಗಿ ಟಾಂಗ್

    ಅದೃಷ್ಟದಿಂದಲೇ ಇಷ್ಟು ದಿನ ಬಿಗ್ ಬಾಸ್‌ನಲ್ಲಿದ್ದರು: ದಿವ್ಯಾಗೆ ಸಂಬರ್ಗಿ ಟಾಂಗ್

    ಬಿಗ್ ಬಾಸ್ ಮನೆಯಲ್ಲಿ (Bigg Boss House) ಸೀಸನ್ 9ರಲ್ಲಿ ದಿವ್ಯಾ ಫೈನಲಿಸ್ಟ್ ಆಗಿ ಗುರುತಿಸಿಕೊಂಡಿದ್ದರು. ಇದೀಗ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ (Bigg Boss Grand Finale) ದಿವ್ಯಾ ಉರುಡುಗ ಮತ್ತು ಪ್ರಶಾಂತ್ ಸಂಬರ್ಗಿ ಜಗಳ ಮಾಡಿಕೊಂಡಿದ್ದಾರೆ. ಅದೃಷ್ಟದಿಂದ ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಇದ್ರೂ ಎಂದು ಸಂಬರ್ಗಿ ಟಾಂಗ್ ಕೊಟ್ಟಿದ್ದಾರೆ.

    ದೊಡ್ಮನೆಯ ಆಟ ಮುಗಿಯಲು ಕ್ಷಣಗಣನೆ ಶುರುವಾಗಿದೆ. ಈ ವೇಳೆ ಮನೆಯಿಂದ ಯಾರು ಹೊರಬೇಕು ಎಂದು ಸುದೀಪ್ (Kiccha Sudeep)  ಈಗಾಗಲೇ ಹೊರಬಂದಿರುವ ಸ್ಪರ್ಧಿಗಳಿಗೆ ಕೇಳಿದ್ದಾರೆ. ಹಾಗೆಯೇ ಸಂಬರ್ಗಿ ಅವರಿಗೂ ಕೇಳಿದ್ದಾರೆ. ಈ ವೇಳೆ ದಿವ್ಯಾ ಬಗ್ಗೆ ಖಾರವಾಗಿ ಸಂಬರ್ಗಿ ಪ್ರಶ್ನೆ ಮಾಡಿದ್ದಾರೆ.

    “ದಿವ್ಯಾ ಉರುಡುಗ ಅವರು ಇಷ್ಟುದಿನ ಇದ್ದಿದ್ದೆ ಹೆಚ್ಚು. ಅವರು ಏನೂ ಮಾಡದೆ ಬಿಗ್ ಬಾಸ್ ಫಿನಾಲೆ ತಲುಪಿದ್ದಾರೆ. ದಿವ್ಯಾ ಬಿಗ್ ಬಾಸ್ ಮನೆಯಲ್ಲಿ ಏನು ಮಾಡಿದ್ದಾರೆ ಎಂದು ಅವರನ್ನು ಅವರೇ ಕೇಳಿಕೊಳ್ಳಲಿ. ಇಷ್ಟು ದಿನ ದಿವ್ಯಾ ಹೆಜ್ಜೆ ಹಾಕಿದ್ದು ಅದೃಷ್ಟದಿಂದ ಮಾತ್ರ. ದಿವ್ಯಾ ಉರುಡುಗ ಅವರೇ ಮನೆಯಿಂದ ಹೊರಗಡೆ ಬರಬೇಕು, ಹೊರಗಡೆ ಬರುತ್ತಾರೆ” ಎಂದು ಖಾರವಾಗಿ ಹೇಳಿದ್ದರು. ಇದನ್ನು ಮನೆಯ ಒಳಗಡೆ ಇದ್ದಾಗಲೇ ಕೇಳಿಸಿಕೊಂಡ ದಿವ್ಯಾ ಉರುಡುಗ ಅವರು ಹೊರಗಡೆ ಬಂದು, ಕಿಚ್ಚ ಸುದೀಪ್ ಮುಂದೆ ನಿಂತು ಪ್ರಶಾಂತ್ ಸಂಬರಗಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ನಾನು ಅದೃಷ್ಟದಿಂದ ಬಿಗ್ ಬಾಸ್‌ನಲ್ಲಿ ಇಷ್ಟುದಿನ ಇಲ್ಲ. ನನ್ನನ್ನು ಜನರು ಇಷ್ಟಪಟ್ಟಿರೋದಿಕ್ಕೆ ಇಲ್ಲಿ ಇರೋದು, ಇಲ್ಲ ಅಂದ್ರೆ ಇರುತ್ತಿರಲಿಲ್ಲ. ದಿವ್ಯಾ ಅಂತ ಹೆಸರು ಬಂದ ಕೂಡಲೇ ನನ್ನ ಬಗ್ಗೆ ಏನೇನೋ ಮಾತನಾಡುತ್ತೀರಿ. ಪ್ರಶಾಂತ್ ಸಂಬರಗಿಯವರನ್ನು ನಾನೊಬ್ಬಳೇ ಹ್ಯಾಂಡಲ್ ಮಾಡಬಹುದಿತ್ತು. ಆದರೆ ಸಂಬರಗಿಗೆ ಉಳಿದ ಸ್ಪರ್ಧಿಗಳನ್ನು ಹ್ಯಾಂಡಲ್ ಮಾಡೋದು ಕಷ್ಟ ಆಗಿತ್ತು. ಹಾಗಾಗಿ ನನಗೆ ಈ ಸಲ ಸ್ವಲ್ಪ ಹೊಂದಿಕೊಳ್ಳೋದು ಕಷ್ಟ ಆಗಿರಬಹುದು. ಯಾರು ಮನೆಯಿಂದ ಹೊರಗಡೆ ಹೋಗ್ತಾರೆ ಎಂದು ಕೇಳಿದಾಗ ಪ್ರಶಾಂತ್ ಸಂಬರಗಿ ಅವರು ಬೇರೆಯವರು ಕೂಡ ನನ್ನ ಹೆಸರು ಹೇಳಬೇಕು ಅನ್ನೋ ತರ ಮಾತನಾಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ರಕ್ಷಿತ್ ಶೆಟ್ಟಿ ಜೊತೆಗಿನ `ಕಿರಿಕ್ ಪಾರ್ಟಿ’ ಚಿತ್ರ ನೆನಪಿಸಿಕೊಂಡ ರಶ್ಮಿಕಾ ಮಂದಣ್ಣ

    ಇನ್ನೂ ದಿವ್ಯಾ ಉರುಡುಗ (Divya Uruduga) ಎಲಿಮಿನೇಷನ್ (Elimination) ನಂತರ ರೂಪೇಶ್ ಶೆಟ್ಟಿ, ರಾಜಣ್ಣ, ದೀಪಿಕಾ ದಾಸ್, ರಾಕೇಶ್ ಅಡಿಗ ನಡುವೆ ಪೈಪೋಟಿ ಮುಂದುವರೆದಿದೆ. ಯಾರಾಗಲಿದ್ದಾರೆ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಎಂದು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ದಿವ್ಯಾ- ಅರವಿಂದ್ ಮದುವೆ ಆದರೆ ಡಿವೋರ್ಸ್ ಗ್ಯಾರಂಟಿ: ಆರ್ಯವರ್ಧನ್

    ದಿವ್ಯಾ- ಅರವಿಂದ್ ಮದುವೆ ಆದರೆ ಡಿವೋರ್ಸ್ ಗ್ಯಾರಂಟಿ: ಆರ್ಯವರ್ಧನ್

    ಬಿಗ್ ಬಾಸ್ ಮನೆ (Bigg Boss House) ಆಟ ಗ್ರ್ಯಾಂಡ್‌ ಫಿನಾಲೆಗೆ ಲಗ್ಗೆ ಇಡ್ತಿದ್ದಂತೆ ದೊಡ್ಮನೆಯಿಂದ ಆರ್ಯವರ್ಧನ್ ಗುರೂಜಿ ಹೊರಬಂದಿದ್ದಾರೆ. ಮಿಡ್ ನೈಟ್‌ನಲ್ಲಿ ಎಲಿಮಿನೇಟ್ ಆಗುವ ಮೂಲಕ ಗುರೂಜಿ ಆಟಕ್ಕೆ ಬ್ರೇಕ್ ಬಿದ್ದಿದೆ. ದೊಡ್ಮನೆಯಲ್ಲಿ ದಿವ್ಯಾ (Divya Uruduga) ಮತ್ತು ಅರವಿಂದ್ (Aravind Kp) ಮದುವೆಯಾದರೆ ಡಿವೋರ್ಸ್ (Divorce) ಆಗುತ್ತೆ ಎಂಬ ಮಾತನ್ನ ಹೇಳಿದ್ದರು. ಇದೀಗ ಈ ಬಗ್ಗೆ ಗುರೂಜಿ ಮಾತನಾಡಿದ್ದಾರೆ.

    ಬಿಗ್ ಬಾಸ್ ಸೀಸನ್ 8ರಲ್ಲಿ ಲವ್ ಬರ್ಡ್ಸ್ (Love Birds) ಆಗಿ ದಿವ್ಯಾ ಮತ್ತು ಅರವಿಂದ್ ಕಾಣಿಸಿಕೊಂಡಿದ್ದರು. ಈ ಶೋ ಮೂಲಕ ಇಬ್ಬರ ಪ್ರೀತಿಯ ವಿಚಾರ ಇಡೀ ಕರ್ನಾಟಕಕ್ಕೆ ಪರಿಚಯವಾಗಿತ್ತು. ಹೀಗಿರುವಾಗ ದಿವ್ಯಾ ಮತ್ತು ಅರವಿಂದ್ ಮದುವೆ ಆದರೆ ಡಿವೋರ್ಸ್ ಆಗುತ್ತೆ ಎಂದು ಮಾತನಾಡಿದ್ದರು. ಬಿಗ್ ಬಾಸ್ ಜರ್ನಿಯ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಹಂಚಿಕೊಳ್ಳುವಾಗ ದಿವ್ಯಾ, ಅರವಿಂದ್ ಬಗ್ಗೆ ಕೂಡ ಮಾತನಾಡಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ ಮಾಡಲು ಲಂಡನ್‌ಗೆ ಹಾರಿದ ರಮ್ಯಾ- ಅಮೃತಾ

    ಯಾವಾಗಲೂ ರಾಂಗ್ ಡೇಟ್ ಬೆಸ್ಟ್ ಫ್ರೆಂಡ್ಸ್ ಆಗುತ್ತಾರೆ. ಆದರೆ ಬೆಸ್ಟ್ ಜೋಡಿಯಾಗಿ ಬದುಕೋಕೆ ಆಗಲ್ಲ. ದಿವ್ಯಾ, ಅರವಿಂದ್ ಮದುವೆಯಾದರೆ ಡಿವೋರ್ಸ್ ಗ್ಯಾರಂಟಿ ಎಂದು ಗುರೂಜಿ ಹೇಳಿದ್ದಾರೆ.

    ಇನ್ನೂ ದಿವ್ಯಾ ಉರುಡುಗ ಕೂಡ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ರೂಪೇಶ್ ಶೆಟ್ಟಿ, ರಾಕೇಶ್, ರಾಜಣ್ಣ, ದೀಪಿಕಾ, ದಿವ್ಯಾ ಈ ಐವರಲ್ಲಿ ಬಿಗ್ ಬಾಸ್ ವಿನ್ನರ್ ಪಟ್ಟ ಯಾರಿಗೆ ಸಿಗಲಿದೆ ಎಂದು ಕಾದುನೋಡಬೇಕಿದೆ. ಫಿನಾಲೆಗೆ ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ಅರವಿಂದ್‌ಗಾಗಿ ಬೇಡಿಕೆಯಿಟ್ಟ ದಿವ್ಯಾ ಉರುಡುಗ

    ಬಿಗ್ ಬಾಸ್ ಮನೆಯಲ್ಲಿ ಅರವಿಂದ್‌ಗಾಗಿ ಬೇಡಿಕೆಯಿಟ್ಟ ದಿವ್ಯಾ ಉರುಡುಗ

    ದೊಡ್ಮನೆಯಲ್ಲಿ ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಹಾಗಾಗಿ ಸ್ಪರ್ಧಿಗಳಿಗೆ ವಿಶೇಷ ಅವಕಾಶವೊಂದನ್ನ ಬಿಗ್ ಬಾಸ್ (Bigg Boss) ನೀಡಿದ್ದಾರೆ. ಸ್ಪರ್ಧಿಗಳ ಒಂದು ಆಸೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.

    ಬಿಗ್ ಬಾಸ್ ಸೀಸನ್‌ 9ರ ಫಿನಾಲೆಗೆ ನಾಲ್ಕು ದಿನ ಬಾಕಿಯಿದೆ. ಈ ಅಂತಿಮ ಹಂತದಲ್ಲಿ ಬಿಗ್ ಬಾಸ್ ಮನೆಯಲ್ಲಿ ಪೂರೈಸದೇ ಉಳಿದ ಆಸೆಯನ್ನ ಪೂರೈಸುವ ಭರವಸೆಯನ್ನು ಬಿಗ್ ಬಾಸ್ ನೀಡಿದ್ದಾರೆ. ಅವುಗಳ ಪೈಕಿ ಸಾಧ್ಯವಿರುವ ಒಂದು ಆಸೆಯನ್ನು ಬಿಗ್ ಬಾಸ್ ಪೂರೈಸುತ್ತಾರೆ. ಒಬ್ಬಬ್ಬರಾಗಿ ತಮ್ಮ ಆಸೆಗಳನ್ನ ಸ್ಪರ್ಧಿಗಳು ಬಿಚ್ಚಿಟ್ಟಿದ್ದಾರೆ. ಈ ವೇಳೆ ದಿವ್ಯಾ (Divya Uruduga) ಇಟ್ಟಿರುವ ಬೇಡಿಕೆ ವೀಕ್ಷಕರಿಗೆ ಖುಷಿ ಕೊಟ್ಟಿದೆ.‌ ಇದನ್ನೂ ಓದಿ: ರಚನಾ ದಶರಥ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡ ಲೋಕೇಶ್ ಬಸವಟ್ಟಿ

    ಪ್ರತಿಯೊಬ್ಬರು ಆಕ್ಟಿವಿಟಿ ರೂಮಿಗೆ ತೆರಳಿ, ಅಲ್ಲಿರುವ ಆಶಾ ಭಾವಿಯ ಎದುರು ತಮ್ಮ ಮೂರು ಆಸೆಗಳನ್ನ ಕೋರಿಕೊಂಡು ಆ ನಾಣ್ಯವನ್ನು ಭಾವಿಯೊಳಗೆ ಎಸೆಯಬೇಕು. ಅದರಂತೆ ಎಲ್ಲಾ ಸ್ಪರ್ಧಿಗಳು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

    ಈ ವೇಳೆ ದಿವ್ಯಾ, ಮನೆಯೊಳಗೆ ಜಾತ್ರೆ ನಡೆಯಬೇಕು. ಸುದೀಪ್ ಸರ್ (Kiccha Sudeep) ಮನೆಯೊಳಗೆ ಬಂದು ಅಡುಗೆ ಮಾಡಿ. ಅವರೊಂದಿಗೆ ಊಟ ಮಾಡಬೇಕು. ಹಾಗೆಯೇ ಬಿಗ್ ಬಾಸ್ 8ರ ದಿವ್ಯಾ ಸಹಸ್ಪರ್ಧಿ ಅರವಿಂದ್ ಕೆ.ಪಿ (Aravind Kp) ಮನೆಯೊಳಗೆ ಬರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಮನವಿ ಮಾಡಿ, ಬಾವಿಯೊಳಗೆ ನಾಣ್ಯವನ್ನ ಎಸೆದಿದ್ದಾರೆ. ಈ ಎಲ್ಲದರ ಪೈಕಿ ಬಿಗ್ ಬಾಸ್ ಯಾರ ಆಸೆಯನ್ನು ಪೂರೈಸುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.

    ಬಿಗ್ ಬಾಸ್ ಸೀಸನ್ 8ರಲ್ಲಿ ಅರವಿಂದ್ ಮತ್ತು ದಿವ್ಯಾ ಕಾಣಿಸಿಕೊಂಡಿದ್ದರು. ಈ ಶೋನಿಂದ ಪರಿಚಯವಾದ ಸ್ನೇಹ, ಪ್ರೇಮಕ್ಕೆ ತಿರುಗಿದೆ. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದೆ.

    Live Tv
    [brid partner=56869869 player=32851 video=960834 autoplay=true]

  • ವಿರಹ ಮುಂದುವರೆಯಲಿ ಎಂದು ದಿವ್ಯಾ ಉರುಡುಗ ಕಾಲೆಳೆದ ಕಿಚ್ಚ

    ವಿರಹ ಮುಂದುವರೆಯಲಿ ಎಂದು ದಿವ್ಯಾ ಉರುಡುಗ ಕಾಲೆಳೆದ ಕಿಚ್ಚ

    ಕಿರುತೆರೆಯ ನಂಬರ್ ಒನ್ ಶೋ ಬಿಗ್ ಬಾಸ್(Bigg Boss) ಸಾಕಷ್ಟು ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚನನ್ನು ನೋಡಲೆಂದೇ ಕಾಯುವ ಅಪಾರ ಅಭಿಮಾನಿಗಳಿದ್ದಾರೆ. ಇನ್ನೂ ಈ ವಾರಾಂತ್ಯದ ಮಾತುಕತೆಯಲ್ಲಿ ದಿವ್ಯಾ ಉರುಡುಗ ಅವರಿಗೆ ಅರವಿಂದ್ (Arvind Kp) ವಿಷ್ಯವಾಗಿ ಸುದೀಪ್ ಕಾಲೆಳೆದಿದ್ದಾರೆ.

    ಪ್ರೇಕ್ಷಕರು ಮೆಚ್ಚಿರುವ ಬಿಗ್ ಬಾಸ್ ಶೋ ಸಾಕಷ್ಟು ವಿಚಾರವಾಗಿ ಸದ್ದು ಮಾಡುತ್ತಿದೆ. ಬಿಗ್ ಬಾಸ್‌ನ(Bigg Boss) ಎಲ್ಲಾ ಸ್ಪರ್ಧಿಗಳಿಗೆ ಕಿಚ್ಚ ಅಚ್ಚರಿಯ ಗಿಫ್ಟ್‌ವೊಂದನ್ನ ಕಳುಹಿಸಿ ಕೊಟ್ಟಿದ್ದಾರೆ. ತಮ್ಮ ಕೈ ಬರಹದ ರೂಪದಲ್ಲಿ ಕಿಚ್ಚ, ಪ್ರತಿ ಸ್ಪರ್ಧಿಗೂ ಪತ್ರದ ಮೂಲಕ ಉತ್ಸಾಹ ತುಂಬಿದ್ದಾರೆ. ಇನ್ನೂ ಸುದೀಪ್ ಕಳುಹಿಸಿದ್ದ ಪತ್ರದಲ್ಲಿ ದಿವ್ಯಾಗೆ ಬರೆದ ಬರಹ ಎಲ್ಲರ ಗಮನ ಸೆಳೆದಿದೆ.

    ಪ್ರೀತಿಯ ದಿವ್ಯಾ ಅವರೇ, ಈ ವಿರಹ ಮುಂದುವರೆಯಲಿ ಅಲ್ವಾ ಎಂದು ದಿವ್ಯಾಗೆ ಕಿಚ್ಚ ಕಾಲೆಳೆದಿದ್ದಾರೆ. ಕಿಚ್ಚನ ಬರಹಕ್ಕೆ ದಿವ್ಯಾ ನಾಚಿ ನೀರಾಗಿದ್ದಾರೆ. ಬಿಗ್ ಬಾಸ್ ಸೀಸನ್ 8ರಲ್ಲಿ ದಿವ್ಯಾ ಉರುಡುಗ(Divya Uruduga) ಮತ್ತು ಅರವಿಂದ್ ಪರಿಚಯವಾಗಿತ್ತು. ಈ ಸ್ನೇಹ ಪ್ರೀತಿಗೆ ತಿರುಗಿ, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. `ಅರ್ದಂ ಬರ್ಧ ಪ್ರೇಮ ಕಥೆ’ ಚಿತ್ರದ ಮೂಲಕ ದಿವ್ಯಾ ಮತ್ತು ಅರವಿಂದ್ ತೆರೆಯ ಮೇಲೂ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಮಗ ಯಥರ್ವ್ ಹುಟ್ಟುಹಬ್ಬಕ್ಕೆ ರಾಧಿಕಾ ಪಂಡಿತ್ ಲವ್ಲಿ ವಿಶ್

    ಸದ್ಯ ದಿವ್ಯಾ ಟಿವಿ ಬಿಗ್ ಬಾಸ್ 9ರಲ್ಲಿ ಪ್ರವೀಣರ ಸಾಲಿನಲ್ಲಿ ಪ್ರತಿ ಸ್ಪರ್ಧಿಗೂ ಟಫ್ ಸ್ಪರ್ಧೆ ನೀಡುತ್ತಿದ್ದಾರೆ. ಹೀಗೆ ಗೆಲುವಿನ ವಿಜಯಲಕ್ಷ್ಮಿ ದಿವ್ಯಾ ಪಾಲಿಗೆ ಸಿಗಲಿ ಎಂಬುದೇ ಅಭಿಮಾನಿಗಳ ಆಶಯ. ಈಗಾಗಲೇ ಐಶ್ವರ್ಯ, ನವಾಜ್, ದರ್ಶ್, ಮಯೂರಿ, ನೇಹಾ ಗೌಡ ಮನೆಯಿಂದ ಹೊರ ಬಂದಿದ್ದಾರೆ. ಮುಂದಿನ ವಾರ ದೊಡ್ಮನೆಯ ಆಟ ಯಾರಿಗೆ ಅಂತ್ಯವಾಗಲಿದೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ-ಅರವಿಂದ ಪಾಲಿಗೆ ಈ ದಿನ ಯಾಕೆ ಸ್ಪೆಷಲ್ ಗೊತ್ತಾ?

    ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ-ಅರವಿಂದ ಪಾಲಿಗೆ ಈ ದಿನ ಯಾಕೆ ಸ್ಪೆಷಲ್ ಗೊತ್ತಾ?

    ಕಿರುತೆರೆಯ ದೊಡ್ಮನೆ `ಬಿಗ್ ಬಾಸ್ ಸೀಸನ್ 8’ರ ಮೂಲಕ ಗಮನ ಸೆಳೆದ ಜೋಡಿ ದಿವ್ಯಾ ಉರುಡುಗ ಮತ್ತು ಅರವಿಂದ್ ಅವರ ಪಾಲಿಗೆ ಈ ದಿನ ವಿಶೇಷವಾಗಿದೆ. ತಮ್ಮ ಜೋಡಿಯ ಫೋಟೋ ಶೇರ್ ಮಾಡಿ, ಈ ಬಗ್ಗೆ ನಟಿ ದಿವ್ಯಾ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by DU✨ (@divya_uruduga)


    `ಬಿಗ್ ಬಾಸ್ ಸೀಸನ್ 8′ 2021ರಲ್ಲಿ ಆರಂಭವಾಯಿತು. ನಟಿ ದಿವ್ಯಾ ಆಗಲೇ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದರು. ಅರವಿಂದ್ ಕೆ.ಪಿ ಅವರು ಕ್ರೀಡಾ ರಂಗದಲ್ಲಿ ಹೆಸರುವಾಸಿಯಾಗಿದ್ದರು. ಆದರೆ ಇಬ್ಬರಿಗೂ ನೇಮ್ ಆ್ಯಂಡ್ ಫೇಮ್ ಕೊಟ್ಟ ಶೋ ಅಂದ್ರೆ ಬಿಗ್ ಬಾಸ್ ಕಾರ್ಯಕ್ರಮ. ಈ ಶೋ ಮೂಲಕ ಅಪಾರ ಅಭಿಮಾನಿಗಳ ಮನ ಗೆದ್ದಿದ್ದರು.

    ಈ ಶೋ ಮೂಲಕನೇ ಇಬ್ಬರು ಪರಿಚಯವಾಗಿ, ಆ ಪರಿಚಯ ಪ್ರೀತಿಗೆ ಸೇತುವೆ ಆಗಿತ್ತು. ಇದೀಗ ನಟಿ ದಿವ್ಯಾ, ಅರವಿಂದ್ ಜತೆಗಿನ ಹೊಸ ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    A post shared by DU✨ (@divya_uruduga)

    ನಟಿ ದಿವ್ಯಾ ಮತ್ತು ಅರವಿಂದ್ ಕೆ.ಪಿ ಭೇಟಿ ಮಾಡಿ ಇಂದಿಗೆ 500 ದಿನ ಕಳೆದಿದೆ. ಈ ವಿಶೇಷ ದಿನಕ್ಕೆ ವಿಶೇಷ ಫೋಟೋ ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿದ್ದಾರೆ. ಭೇಟಿಯಾದ ಮೊದಲ ದಿನದಿಂದ ಇಲ್ಲಿಯವರೆಗೂ ಒಬ್ಬರ ಕೆಲಸಕ್ಕೆ ಮತ್ತೊಬ್ಬರು ಸಾಥ್ ನೀಡುತ್ತಲೇ ಬಂದಿದ್ದಾರೆ. ಈ ಜೋಡಿ ಭೇಟಿಯಾಗಿ 500 ದಿನದ ಸಂಭ್ರಮದ ಸಾಕ್ಷಿಯಾಗಿ ಅಭಿಮಾನಿಗಳು ಕೂಡ ವಿಶೇಷ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಶೇರ್ ಮಾಡಿಕೊಂಡು ಫ್ಯಾನ್ಸ್‌ಗೆ ದಿವ್ಯಾ ಮತ್ತು ಅರವಿಂದ್‌ ಜೋಡಿ ಧನ್ಯವಾದ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅರವಿಂದ್ ವರ್ಸಸ್ ನಿಧಿ – ಯಾರು ಸರಿ? ಯಾರು ತಪ್ಪು?

    ಅರವಿಂದ್ ವರ್ಸಸ್ ನಿಧಿ – ಯಾರು ಸರಿ? ಯಾರು ತಪ್ಪು?

    ಬಿಗ್‍ಬಾಸ್ ಮನೆಯ ಎರಡನೇ ಇನ್ನಿಂಗ್ಸ್ ನ  7ನೇ ದಿನ ಅರವಿಂದ್ ಕೆಪಿ ಮತ್ತು ನಿಧಿ ಸುಬ್ಬಯ್ಯ ನಡುವೆ ಭಾರೀ ಮಾತಿನ ಚಕಮಕಿ ನಡೆದಿದೆ.

    ‘ಥರ ಥರ ಈ ಎತ್ತರ’ ಟಾಸ್ಕ ನ ಮೂರನೇ ಸುತ್ತು ವೇಳೆ ಅರವಿಂದ್ ತರುತ್ತಿದ್ದಾಗ ಟಿಶ್ಯು ರೋಲ್ ಗಾರ್ಡನ್ ಏರಿಯಾದಲ್ಲಿ ಬಿದ್ದಿತ್ತು. ಈ ಟಿಶ್ಯುವನ್ನು ಮಂಜು ಮತ್ತು ನಿಧಿ ಎತ್ತಿದ್ದರು. ಈ ವಿಚಾರದ ಬಗ್ಗೆ ಅರವಿಂದ್ ಅಲ್ಲೇ ಆಕ್ಷೇಪ ವ್ಯಕ್ತಪಡಿಸಿ ಎತ್ತುವಂತಿಲ್ಲ ಎಂದು ಸಿಟ್ಟು ಹೊರಹಾಕಿದರು.

    ಈ ಟಾಸ್ಕ್ ಕೊನೆಯಲ್ಲಿ ಫಲಿತಾಂಶಕ್ಕೂ ಮೊದಲು ಸೂರ್ಯಸೇನೆ ಸದಸ್ಯರು ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಅರವಿಂದ್, ಸಂಬರಗಿ, ಚಕ್ರವರ್ತಿ ಚಂದ್ರಚೂಡ್ ಎತ್ತುವಂತಿಲ್ಲ ಎಂದು ಹೇಳಿದರೆ, ದಿವ್ಯಾ ಈ ನಿಯಮದ ಬಗ್ಗೆ ಪುಸ್ತಕದಲ್ಲಿ ಪ್ರಸ್ತಾಪ ಮಾಡಿಲ್ಲ ಎಂದರು. ಕೊನೆಗೆ ಅರವಿಂದ್ “ಥಟ್ ಶೋಸ್ ಕ್ಯಾರೆಕ್ಟರ್” ಎಂದು ಹೇಳಿ 90 ಸೆಕೆಂಡ್ ಒಳಗಡೆ ರಿಂಗ್ ಒಳಗಡೆ ಸದಸ್ಯ ಟಿಶ್ಯು ಇಡಬೇಕು ಎನ್ನುವುದು ನಿಯಮ. ಹೀಗಾಗಿ ಸ್ಟೋರ್ ರೂಮಿಗೆ ಹೋದ ಸದಸ್ಯ ಮಾತ್ರ ಟಿಶ್ಯು ಕೊಡಬೇಕು ವಿನಾ: ಬೇರೆ ಸದಸ್ಯರು ಎತ್ತುವಂತಿಲ್ಲ ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ನಿಧಿ ದೊಡ್ಡ ಫಿಗರ್ ಎಂದರೆ ನಾನು ದೊಡ್ಡ ಫಿಗರೇ

    ಈ ಚರ್ಚೆಯನ್ನು ಗಮನಿಸಿದ ನಿಧಿ ಮಂಜು ಬಳಿ ನಮ್ಮ ‘ಕ್ಯಾರೆಕ್ಟರ್’ ಬಗ್ಗೆ ಅರವಿಂದ್ ಮಾತನಾಡಿದ್ದಾನೆ ಎಂದು ದೂರಿದರು. ಸೃಷ್ಟಿಯಾಗಿರುವ ಗೊಂದಲ ಸರಿಪಡಿಸಲು ಅರವಿಂದ್ ಮಂಜು ಜೊತೆ ಮಾತನಾಡಲು ತೆರಳಿದರು. ನಿಯಮದ ಪ್ರಕಾರ ತಂಡದ ಬೇರೆ ಸದಸ್ಯರು ಟಿಶ್ಯುವನ್ನು ಎತ್ತುವಂತಿಲ್ಲ. ಮೊದಲು ನೀವು ಬೀಳಿಸಿದಾಗ ನಮ್ಮ ತಂಡದ ಸದಸ್ಯರು ಎತ್ತಿಲ್ಲ ಎಂದು ಹೇಳಿದರು. ಆದರೆ ಮಂಜು ಎತ್ತಬಹುದು ಎಂದು ಉತ್ತರಿಸಿದರು. ಈ ಸುತ್ತಿನಲ್ಲಿ ಕ್ವಾಟ್ಲೆ ಕಿಲಾಡಿಗಳು ತಂಡ ಜಯವನ್ನು ಗಳಿಸಿತು. ಇದನ್ನೂ ಓದಿ: ಒಂದೇ ಡೈಲಾಗಿನಿಂದ ನಿಧಿ, ದಿವ್ಯಾ, ಮಂಜುಗೆ ತಿವಿದ ಅರವಿಂದ್

    ಮುಂದಿನ ಸುತ್ತುಗಳಲ್ಲಿ ಈ ರೀತಿ ಗೊಂದಲ ಆಗದೇ ಇರಲು ಮತ್ತೆ ಅರವಿಂದ್ ಮಂಜು ಜೊತೆ ಮಾತನಾಡುತ್ತಿದ್ದಾಗ ನಿಧಿ ಮಧ್ಯೆ ಮಾತನಾಡಲು ಆರಂಭಿಸಿದರು. ಈ ವೇಳೆ ಅರವಿಂದ್, “ನಾನು ಕ್ಯಾಪ್ಟನ್ ಜೊತೆ ಮಾತನಾಡುತ್ತಿದ್ದೇನೆ. ನೀವು ಸ್ವಲ್ಪ ಮುಚ್ಕೊಳ್ಳಿ” ಎಂದು ನಿಧಿಗೆ ಹೇಳಿದರು.

    ಕ್ಯಾರೆಕ್ಟರ್ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ನಿಧಿ ಮೊದಲೇ ಅರವಿಂದ್ ವಿರುದ್ಧ ಸಿಟ್ಟಾಗಿದ್ದರು. ಈಗ ಮತ್ತೆ ಅರವಿಂದ್ ಸಿಟ್ಟಿನಲ್ಲಿ ಪ್ರತಿಕ್ರಿಯಿಸಿದ್ದಕ್ಕೆ ಮತ್ತೆ ಆಕ್ರೋಶಗೊಂಡರು. ಟಾಸ್ಕ್ ಮುಗಿದ ಬಳಿಕ ಅರವಿಂದ್ ನಿಧಿ ಬಳಿ ಹೋದಾಗ,”ನೋ ನೋ ಅರವಿಂದ್. ಮುಚ್ಚೊಂಡು ಹೋಗಿ”ಎಂದಾಗ ಅರವಿಂದ್,”ನೀವು ಮುಚ್ಕೊಂಡು ಇರಿ. ಜಾಸ್ತಿ ಮಾತನಾಡಬೇಡಿ” ಎಂದು ತಿರುಗೇಟು ನೀಡಿದರು. ಇದಕ್ಕೆ ನಿಧಿ,”ಕ್ರೀಡಾ ಸ್ಫೂರ್ತಿ ಇಲ್ಲ. ಪಾರ್ಟಿಸಿಪೇಷನ್ ಮೆಡಲ್‍ನಲ್ಲಿ ಬಂದಿರೋದು, ಗೆದ್ದು ತೋರಿಸು ಡಾಕರ್ ರ್‍ಯಾಲಿನ. ಲೂಸರ್ ಗೆಟ್ ಲಾಸ್ಟ್” ಎಂದು ಆಕ್ರೋಶ ಹೊರಹಾಕಿದರು. ಇದಕ್ಕೆ ಅರವಿಂದ್ ನಗುತ್ತಾ ಮುಂದಕ್ಕೆ ಸಾಗಿದರು.

    ಕೊನೆಗೆ ಶುಭಾ ಜೊತೆ ಮಾತನಾಡಿದ ಅರವಿಂದ್, ನಾನು ಇಲ್ಲಿಯವರೆಗೂ ಯಾರಿಗೂ ಕೆಟ್ಟ ಉದ್ದೇಶದಲ್ಲಿ ಮಾತನಾಡಿಲ್ಲ. ನಾನು ಹೇಳುವುದನ್ನು ನೇರವಾಗಿ ಹೇಳುತ್ತೇನೆ ಹೊರತು ಹಿಂದೆ ಹೇಳುವುದಿಲ್ಲ. ನಾಯಕರ ಮಧ್ಯೆ ಹೀಟ್ ಡಿಸ್ಕಷನ್ ಆಗಿದ್ದಾಗ ಮಧ್ಯೆ ಮಾತನಾಡಿದ್ದಕ್ಕೆ ನಾನು ಹೇಳಿದ್ದೇನೆ ಹೊರತು ಬೇರೆ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ ಎಂದು ತಾನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡರು.

    ಒಟ್ಟಿನಲ್ಲಿ ಸುದೀಪ್ ನಡೆಸಿಕೊಡು ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಈ ವಿಚಾರ ಚರ್ಚೆಗೆ ಬರುವ ಸಾಧ್ಯತೆಯಿದೆ. ಹೀಗಾಗಿ ಇಲ್ಲಿ ನಿಧಿ, ಅರವಿಂದ್ ಹೇಳಿಕೆಯನ್ನು ನೀಡಲಾಗಿದ್ದು ಇದರಲ್ಲಿ ಯಾರು ಸರಿ? ಯಾರು ತಪ್ಪು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ.

  • ದೊಡ್ಮನೆಯಲ್ಲಿ ‘ಕೆ’ ಯಾರು – ರಿವೀಲ್ ಮಾಡಿದ್ರು ಅರವಿಂದ್

    ದೊಡ್ಮನೆಯಲ್ಲಿ ‘ಕೆ’ ಯಾರು – ರಿವೀಲ್ ಮಾಡಿದ್ರು ಅರವಿಂದ್

    ಬಿಗ್ ಮನೆಯಲ್ಲಿದ್ದಾಗ ಸುದ್ದಿಯಾಗಿದ್ದ ಅರವಿಂದ್, ದಿವ್ಯಾ ಉರುಡುಗ ಈಗ ದೊಡ್ಮನೆಯಿಂದ ಹೊರ ಬಂದ ಬಳಿಕವೂ ಸುದ್ದಿಯಾಗುತ್ತಿದ್ದಾರೆ. ಲೈವ್‍ಗೆ ಬಂದು ಅಭಿಮಾನಿಗಳ ಪ್ರಶ್ನೆಗೆ ಈ ಜೋಡಿ ಉತ್ತರ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅರವಿಂದ್ ಅವರು ‘ಕೆ’ ಎಂದು ಯಾರನ್ನು ನಾನು ಕರೆಯುತ್ತಿದ್ದೆ ಎಂಬುದನ್ನು ತಿಳಿಸಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ದಿವ್ಯಾ ಹೆಸರಿನಲ್ಲಿ ಇಬ್ಬರು ಸ್ಪರ್ಧಿಗಳು ಇರುವ ಕಾರಣ ಮನೆಯ ಸದಸ್ಯರು ದಿವ್ಯಾ ಸುರೇಶ್ ಅವರನ್ನು ‘ಡಿಎಸ್’ ಎಂದು ದಿವ್ಯಾ ಉರುಡುಗ ಅವರನ್ನು ‘ಡಿಯು’ ಎಂದು ಕರೆಯುತ್ತಿದ್ದರು. ಉಳಿದ ಸ್ಪರ್ಧಿಗಳು ಅರವಿಂದ್ ಅವರನ್ನು ‘ಅರವಿಂದ್’ ಎಂದೇ ಕರೆಯುತ್ತಿದ್ದರೆ ದಿವ್ಯಾ ಅವರು ‘ಅವಿ’ ಎಂದು ಕರೆಯುತ್ತಿದ್ದರು. ಆದರೆ ಅರವಿಂದ್ ಉರುಡುಗ ಅವರನ್ನು ಕೆಲವೊಮ್ಮೆ ‘ಕೆ’ ಎಂದು ಕರೆಯುತ್ತಿದ್ದರು.

     

    ಈ ಪ್ರಶ್ನೆಗೆ ಉತ್ತರಿಸಿದ ಅರವಿಂದ್,”ದಿವ್ಯಾ ಅವರ ಇನ್ನೊಂದು ಹೆಸರು ‘ಕವನ’. ಹೀಗಾಗಿ ನಾನು ಶಾರ್ಟ್ ಆಗಿ ‘ಕೆ’ ಕರೆಯುತ್ತಿದ್ದೆ” ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಮಾತನಾಡಿದ ದಿವ್ಯಾ,”ಮನೆಯವರಿಗೆ ಮತ್ತು ಕುಟುಂಬ ಹತ್ತಿರದ ಸಂಬಂಧಿಗಳಿಗೆ ಮಾತ್ರ ‘ಕವನ’ ಹೆಸರು ಗೊತ್ತಿತ್ತು. ಬೇರೆಯವರಿಗೆ ಗೊತ್ತಿರಲಿಲ್ಲ. ನನ್ನ ಎಲ್ಲ ದಾಖಲೆಗಳಲ್ಲಿ ದಿವ್ಯಾ ಅಂತ ಇದೆ” ಎಂದು ತಿಳಿಸಿದರು.

    ಅಭಿಮಾನಿಗಳ ಹಲವು ಪ್ರಶ್ನೆಗೆ ಉತ್ತರ ನೀಡಿದ ದಿವ್ಯಾ, “ನಾನು ಹುಷಾರಿಲ್ಲದ ಸಮಯದಲ್ಲಿ ಅರವಿಂದ್ ಅವರು ನನ್ನನ್ನು ತಾಯಿ ರೀತಿ ನೋಡಿದ್ದರು. ಅವರು ನನ್ನ ಬಟ್ಟೆ ಒಗೆಯುತ್ತಾರೆ ಎನ್ನುವುದು ಗಮನಕ್ಕೆ ಬಂದೇ ಇರಲಿಲ್ಲ. ಸುದೀಪ್ ಸರ್ ವಾಯ್ಸ್ ನೋಟ್ ಬಗ್ಗೆ ಅವರ ಪ್ರತಿಕ್ರಿಯೆ ತಿಳಿದುಕೊಳ್ಳಲು ವಾಷ್ ರೂಮ್‍ಗೆ ಬಂದಾಗ ನನಗೆ ಶಾಕ್ ಆಯ್ತು. ಇದಕ್ಕೆ ಹೇಗೆ ಪ್ರತಿಕ್ರಿಯೆ ಕೊಡಬೇಕು ಎನ್ನುವುದು ಗೊತ್ತಾಗುತ್ತಿಲ್ಲ” ಎಂದು ಪ್ರತಿಕ್ರಿಯಿಸಿದರು.

    ಯಾಕೆ ದಿವ್ಯಾ ಅವರ ಬಟ್ಟೆಯನ್ನು ಒಗೆದುಕೊಟ್ಟೆ ಎಂಬುದನ್ನು ವಿವರಿಸಿದ ಅರವಿಂದ್, “ನಾನು ಹಾಸ್ಟೆಲ್‍ನಲ್ಲಿ ಓದಿ ಬೆಳೆದಿದ್ದೇನೆ. ನನಗೂ ಬೇರೆಯವರ ಕಷ್ಟ ಗೊತ್ತಾಗುತ್ತದೆ. ನಾನು ಗಾಯಗೊಂಡಿದ್ದಾಗ ನನ್ನ ಬಟ್ಟೆಯನ್ನು ಬೇರೆಯವರು ಒಗೆದುಕೊಟ್ಟಿದ್ದರು. ಹೀಗಾಗಿ ಹುಷಾರಿಲ್ಲದೇ ಇರುವಾಗ ಸಹಾಯ ಮಾಡಿದೆ. ಒಂದು ವೇಳೆ ಅಂದು ನಾನು ಬಟ್ಟೆ ಒಗೆಯದೇ ಇದ್ದರೆ ಸುಸ್ತಾಗಿ ಅಂದೇ ದಿವ್ಯಾ ಮನೆಯನ್ನು ತೊರೆಯುವ ಸಾಧ್ಯತೆ ಇತ್ತು” ಎಂದು ಹೇಳಿದರು.

    ಬಿಗ್‍ಬಾಸ್ ಮನೆಯಲ್ಲಿ ‘ಕ್ಯಾಚ್’ ಆಗಿರುವ ಈ ಜೋಡಿಯ ಕ್ಯೂಟ್ ನಡತೆಗೆ ಅಭಿಮಾನಿಗಳು ‘ಬೌಲ್ಡ್’ ಆಗಿದ್ದಾರೆ. ದೊಡ್ಮನೆಯಲ್ಲಿ ‘ಕವನ’ಗೆ ಕವನದ ಮೂಲಕ ಪ್ರೇಮ ಪತ್ರ ರವಾನಿಸಿದ್ದ ಅರವಿಂದ್ ಮುಂದೆ ಉರುಡುಗ ಜೀವನದಲ್ಲೂ ‘ಕವನ’ ಬರೆಯಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

  • ದಿವ್ಯಾ ಪಕ್ಕಕ್ಕೆ ಇರುತ್ತಿದ್ದದ್ದು ನೆನೆದು ಮತ್ತೆ ಕಣ್ಣೀರು ಹಾಕಿದ ಅರವಿಂದ್

    ದಿವ್ಯಾ ಪಕ್ಕಕ್ಕೆ ಇರುತ್ತಿದ್ದದ್ದು ನೆನೆದು ಮತ್ತೆ ಕಣ್ಣೀರು ಹಾಕಿದ ಅರವಿಂದ್

    ರವಿಂದ್ ಅವರಿಗೆ ದಿವ್ಯಾ ಉರುಡುಗ ಪದೇ ಪದೇ ನೆನಪಾಗುತ್ತಿದ್ದು, ಪ್ರತಿಯೊಂದು ವಿಚಾರದಲ್ಲೂ ಅವರನ್ನು ಊಹಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಇಂದು ಬಿಗ್ ಬಾಸ್ ಮನೆಯಲ್ಲಿ ಕೊನೇಯದಾಗಿ ಮಾತನಾಡುವಾಗ ಸಹ ಅವರ ಸ್ನೇಹ, ಬಾಂಧವ್ಯದ ಕುರಿತು ಹೇಳಿ ಕಣ್ಣೀರು ಹಾಕಿದ್ದಾರೆ.

    ಬಿಗ್ ಬಾಸ್ ಸೀಸನ್ 8 ಮೊಟಕುಗೊಳ್ಳುತ್ತಿರುವ ಹಿನ್ನೆಲೆ ಇಂದು ಕೊನೆಯ ದಿನವಾಗಿದ್ದು, ಬಿಗ್ ಮನೆಯ ಅನುಭವದ ಕುರಿತು ಕೊನೆಯ ಮಾತು ಹೇಳುವಂತೆ ಸ್ಪರ್ಧಿಗಳಲ್ಲಿ ಕಣ್ಮಣಿ ಕೇಳಿದ್ದಾರೆ. ಎಲ್ಲರೂ ತಮ್ಮ ಅನಿಸಕೆಯನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ ಅರವಿಂದ ಮಾತನಾಡುತ್ತಲೇ ಭಾವುಕರಾದರು. ಅಲ್ಲದೆ ದಿವ್ಯಾ ಉರುಡುಗ ಅವರನ್ನು ನೆನೆದು ಕಣ್ಣೀರನ್ನು ಸಹ ಹಾಕಿದ್ದಾರೆ.

    ನಾನು ಕ್ರೀಡಾ ವಲಯದಿಂದ ಬಂದವನು, ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಮನರಂಜನಾ ಕ್ಷೇತ್ರದವರಾಗಿದ್ದಾರೆ. ಹೇಗೆ ಬೆರೆಯುವುದು, ಕನೆಕ್ಟ್ ಆಗುತ್ತಾರಾ ಎಂಬ ಚಿಂತೆ ಮನೆಗೆ ಬರುವುದಕ್ಕೂ ಮುನ್ನ ಕಾಡಿತ್ತು. ತುಂಬಾ ಡೌಟ್‍ಫುಲ್ ಆಗೇ ಬಂದೆ. ಆದರೆ ದಿನ ಕಳೆದಂತೆ ತಿಳಿಯಿತು, ಯಾರೀಗೂ ಆ ರೀತಿಯ ಆಟಿಟ್ಯೂಡ್ ಇರಲ್ಲ, ಎಲ್ಲರೂ ನಮ್ಮ ರೀತಿಯೇ ಸ್ವಲ್ಪ ಜೀವನ ನೋಡಿರುತ್ತಾರೆ ಎನ್ನುವುದು.

    ಈ ರೀತಿಯ ಅನುಭವ ನೋಡಿ ಸುಮಾರು 15 ವರ್ಷಗಳೇ ಕಳೆಯಿತು. ಬೈಕ್ ರೇಸ್‍ನಲ್ಲಿ ಭಾಗವಹಿಸುವುದರಿಂದ ಕುಟುಂಬಸ್ಥರಿಂದ ದೂರ ಇರುತ್ತೇನೆ. ಟ್ರಾವೆಲ್ ಮಾಡುತ್ತಲೇ ಇರುತ್ತೇನೆ. ಹೀಗಾಗಿ ಸ್ನೇಹಿತರಿಗೂ ಸಿಗುವುದು ಅಪರೂಪ. ಆದರೆ 15 ವರ್ಷಗಳ ಬಳಿಕ ಈ ರೀತಿ 17 ಸ್ನೇಹಿತರು, ದಿನ ನಿತ್ಯ ಅವರೊಟಿಗೆ ಕಾಲ ಕಳೆಯುವುದು, ಟಾಸ್ಕ್ ಮಾಡುವುದು, ಅವರ ಜೊತೆಗೆ ಗುದ್ದಾಡುವುದು, ಮಾತನಾಡುವುದು, ಮತ್ತೆ ಅವರಿಂದಲೇ ಮೆಚ್ಚುಗೆ ಪಡೆಯುವುದು, ತಪ್ಪಾದಲ್ಲಿ ಸರಿ ಮಾಡಿಕೊಳ್ಳುವುದು ತುಂಬಾ ಖುಷಿ ಆಯಿತು ಎಂದು ಭಾವುಕರಾದರು.

    ನನ್ನ ಫೀಲ್ಡ್ ಅವರಿಗೆ ಅರ್ಥವಾಗದಿದ್ದರೂ, ಮಾನವೀಯತೆಯ ದೃಷ್ಟಿಯಿಂದ ನನ್ನ ಮಟ್ಟಕ್ಕೆ ಇಳಿದು ನನ್ನನ್ನು ಒಪ್ಪಿಕೊಂಡರು. ಒಳ್ಳೆಯ ಸ್ನೇಹಿತನನ್ನಾಗಿ ತೆಗೆದುಕೊಂಡು, ಎಲ್ಲದರಲ್ಲೂ ಸರಿಸಮಾನವಾಗಿ ತೆಗೆದುಕೊಂಡರು. ಡೌಟ್ ಇದ್ದಾಗ ನನ್ನ ಬಳಿ ಬಂದಿದ್ದಾರೆ, ನನಗೆ ಡೌಟ್ ಇದ್ದಾಗ ಅವರ ಬಳಿ ಹೋಗಿದ್ದೇನೆ. ಇದೇ ಗ್ಯಾಪ್‍ನಲ್ಲಿ ದಿವ್ಯಾ ಉರುಡುಗ ಕ್ಲೋಸ್ ಆದರು, ಇಂದು ಅವಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಯಾವಾಗಲೂ ನನ್ನ ಪಕ್ಕದಲ್ಲೇ ಕುಳಿತುಕೊಳ್ಳುತ್ತಿದ್ದಳು. ಒಳ್ಳೆ ಫ್ರಂಡ್ ಸಿಕ್ಕಿದಾರೆ ಇಲ್ಲಿ, ಅಲ್ಲದೆ ಎಕ್ಸ್ಟೆಂಡೆಡ್ ಫ್ಯಾಮಿಲಿ, ಒಳ್ಳೆಯ ಅನುಭವ ನನ್ನ ಜೀವನದಲ್ಲಿ ಇಷ್ಟು ಸಿಲ್ಲಿಯಾಗಿರೋಕೆ, ಇಷ್ಟು ನಗಲು ಆಗಿರಲಿಲ್ಲ. ಆರಂಭದಲ್ಲಿ ಮನೆಗೆ ಬಂದಾಗ ಎರಡು ವಾರ ನಕ್ಕು, ನಕ್ಕು ನನ್ನ ಧ್ವನಿಯೇ ಹೋಗಿತ್ತು. ಮಾತನಾಡಲು ಆಗುತ್ತಕಲೇ ಇರಲಿಲ್ಲ, ಅಷ್ಟು ನಕ್ಕಿದ್ದೇನೆ. ನನ್ನ ಜೀವನದ ಅದ್ಭುತ ಭಾಗ ಇದು. ಇಲ್ಲಿಂದ ದೊಡ್ಡ ಎಕ್ಸ್ಟೆಂಡೆಟ್ ಫ್ಯಾಮಿಲಿ ಕೊಂಡೊಯ್ಯುತ್ತೇನೆ. ಇದೊಂದು ರಿಲೇಶನ್‍ಶಿಪ್ ಫಾರ್ ಲೈಫ್ ಎಂದು ಭಾವಿಸುತ್ತೇನೆ ಎಂದಿದ್ದಾರೆ.

  • ನನ್ನ ಮೇಲೆ ವರ್ಷಕ್ಕೆ 3 ಕೋಟಿ ಇನ್ವೆಸ್ಟ್ ಮಾಡ್ತಾರೆ

    ನನ್ನ ಮೇಲೆ ವರ್ಷಕ್ಕೆ 3 ಕೋಟಿ ಇನ್ವೆಸ್ಟ್ ಮಾಡ್ತಾರೆ

    ಬಿಗ್‍ಬಾಸ್ ಶೋ ಆರಂಭದ ದಿನ ಅರವಿಂದ್ ಅವರು ವೇದಿಕೆಗೆ ಬೈಕನ್ನು ಏರಿ ಬಂದಿದ್ದರು. ಈ ಕಾರ್ಯಕ್ರಮಕ್ಕೆ ನಾನು ಅಂದು ಹೇಗೆ ತಯಾರಾಗಿದ್ದೆ ಎಂಬುದನ್ನು ಅರವಿಂದ್ ಅವರು ವಿವರಿಸಿದ್ದಾರೆ.

    ಅರವಿಂದ್, ಚಕ್ರವರ್ತಿ ಚಂದ್ರಚೂಡ್ ಮತ್ತು ಪ್ರಶಾಂತ್ ಸಂಬರಗಿ ಅವರು ಲಿವಿಂಗ್ ಏರಿಯಾದಲ್ಲಿ ಬೈಕ್ ಜಾಕೆಟ್ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ಮಾತುಕತೆಯ ಸಮಯದಲ್ಲಿ,”ನಾನು ಬೈಕಿನಲ್ಲಿ ಸ್ಟೇಜ್‍ಗೆ ಬಂದೆ” ಎಂದು ಅರವಿಂದ್ ಹೇಳುತ್ತಾರೆ. ಇದಕ್ಕೆ ಚಕ್ರವರ್ತಿ,”ಬೈಕನ್ನು ನೀವು ಹಾರಿಸಿದ್ರಾ?” ಎಂದು ಪ್ರಶ್ನಿಸುತ್ತಾರೆ. ಆಗ ಅರವಿಂದ್,”ನಾನು ಬೈಕ್ ಹಾರಿಸಿಲ್ಲ. ಬೈಕಿನಲ್ಲೇ ಇಳ್ಕೊಂಡು ಬಂದೆ. 5 ನಿಮಿಷ ಮೊದಲು ಪ್ರಾಕ್ಟಿಸ್ ಮಾಡಿದ್ದೆ. ಎಲ್ಲೆಲ್ಲಿ ಸ್ಟಾಪ್ ಕೊಡಬೇಕು ಎಂದು ಹೇಳಿದ್ರು. ಅದೇ ರೀತಿ ಮಾಡಿದೆ” ಎಂದು ಉತ್ತರ ನೀಡುತ್ತಾರೆ.

    ಪ್ರಶಾಂತ್ ಸಂಬರಗಿ,”450 ಆರ್‍ಆರ್ ಬೈಕ್.. ಸಿಕ್ಕಾಪಟ್ಟೆ ಸೌಂಡ್ ಇರುತ್ತಾ”ಅಂತ ಪ್ರಶ್ನೆ ಮಾಡ್ತಾರೆ. ಇದಕ್ಕೆ ಅರವಿಂದ್, “ಅದು 450 ಆರ್‍ಆರ್ ಟಿವಿಎಸ್ ಫ್ಯಾಕ್ಟರಿ ಬೈಕ್. ನಾನು ಸರ್ಕಿಟ್ ರೇಸ್‍ನಲ್ಲಿ ಇಲ್ಲ. ಈಗ ರೇಸರ್ ಗಳು ಮೊಣಕಾಲು ಅಲ್ಲ. ಭುಜವನ್ನು ಟಚ್ ಮಾಡುತ್ತಾರೆ. ಈ ವೇಳೆ ಬೈಕ್ 120 ರಲ್ಲಿ ಇರುತ್ತದೆ” ಎಂದು ವಿವರಿಸುತ್ತಾರೆ.

    ಈ ಹಿಂದೆ ಗಾರ್ಡನ್ ಏರಿಯಾದಲ್ಲಿ ತಮ್ಮ ಬೈಕ್ ರೇಸ್ ಜೀವನದ ಅನುಭವ ಕಥೆಯನ್ನು ರಾಜೀವ್, ನಿಧಿ, ಮಂಜು ಅವರಿಗೆ ಅರವಿಂದ್ ವಿವರಿಸುತ್ತಿದ್ದರು. ರಾಜೀವ್ ಅವರು,”ಬೇರೆ ಕಂಪನಿಯರು ಅಪ್ರೋಚ್ ಮಾಡಿಲ್ವ?” ಎಂದು ಕೇಳಿದ್ದರು. ಅದಕ್ಕೆ ಅರವಿಂದ್,”ನನ್ನನ್ನು ಅಪ್ರೋಚ್ ಮಾಡಿದ್ರು. ಸುಮ್ನೆ ದುಡ್ಡು ಸಿಗುತ್ತೆ ಎಂಬ ಕಾರಣಕ್ಕೆ ಬೇರೆ ಕಡೆ ಹೋಗಬಾರದು. ನನಗೆ ಕಂಪನಿ ನನಗೆ ಬಹಳಷ್ಟು ನೀಡಿದೆ. ಒಮ್ಮೆ ಬದಲಾವಣೆ ಮಾಡಿದ್ರೆ ಪ್ರೋಗ್ರಾಂ, ಕ್ರೀವ್ ಎಲ್ಲವೂ ಬದಲಾವಣೆ ಮಾಡಬೇಕಾಗುತ್ತದೆ. ಮತ್ತೆ ಅದಕ್ಕೆ ಅಡ್ಜಸ್ಟ್ ಆಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ” ಎಂದು ಹೇಳುತ್ತಾರೆ.

    “ನಮ್ಮ ಜೀವನದಲ್ಲಿ 45 ವರ್ಷ ಓಡಿಸಬಹುದು. ಆದರೆ ಈ ರೀತಿ ಗಾಯ ಮಾಡಿದ್ರೆ ಯಾರೂ ಓಡಿಸಲ್ಲ. ಮುಂದೆ ನಾನು 5 ವರ್ಷ ಆರಾಮವಾಗಿ ಓಡಿಸಬಹುದು. ಎಲ್ಲ ವಿಷಯಗಳು ನಮ್ಮ ಪರವಾಗಿ ಇರಬೇಕು. ಫಿಟ್‍ನೆಸ್, ಬೈಕ್ ಫಾರ್ ಆಗಿರಬೇಕು, ಮುಖ್ಯವಾಗಿ ಇಂಜುರಿ ಫ್ರೀ ಆಗಿರಬೇಕು” ಎಂದು ವಿವರಿಸುತ್ತಾರೆ.

    ತನ್ನನ್ನು ಪ್ರೋತ್ಸಾಹಿಸುತ್ತಿರುವ ಕಂಪನಿಯ ಬಗ್ಗೆ ಮಾತನಾಡಿದ ಅವರು,”ಯುಎಸ್ ವೀಸಾಗೆ ಅಪ್ಲೈ ಮಾಡಿದಾಗ ನನ್ನ ಬ್ಯಾಂಕ್ ಖಾತೆಯಲ್ಲಿ 700 ರೂ. ಇತ್ತು. ಆದರೆ ಅಮೆರಿಕದ ವೀಸಾ ಪಡೆಯಬೇಕಾದರೆ ಬ್ಯಾಂಕ್ ಖಾತೆಯಲ್ಲಿ ಕನಿಷ್ಟ 10 ಸಾವಿರ ಡಾಲರ್ ಇರಬೇಕು. ಮನೆಯವರ ಜೊತೆ ಲಕ್ಷ ಹಣ ಹಾಕಿ ಎಂದರೆ ಅವರಿಗೆ ಶಾಕ್ ಆಗಬಹುದು. ಆದರೆ ಎಲ್ಲವನ್ನೂ ಕಂಪನಿಯೇ ನನಗೆ ನೀಡಿದೆ. ತರಬೇತಿ, ವಿಮಾನ ಟಿಕೆಟ್ ಎಲ್ಲ ಸೇರಿ ವರ್ಷಕ್ಕೆ ನನ್ನ ಮೇಲೆ 3 ಕೋಟಿ ರೂ. ಹಣವನ್ನು ಕಂಪನಿ ಇನ್‍ವೆಸ್ಟ್ ಮಾಡುತ್ತೆ. ಅಷ್ಟೇ ಅಲ್ಲದೇ ಗಾಯವಾದರೂ ವಿಮಾನದಲ್ಲಿ ಟಿಕೆಟ್ ಮಾಡಿ ಕರೆದುಕೊಂಡು ಬರುತ್ತದೆ. ಎಲ್ಲದ್ದಕ್ಕೂ ಟ್ರಸ್ಟ್ ಬಹಳ ಮುಖ್ಯ” ಎಂದು ಕಂಪನಿಯ ಬಗ್ಗೆ ಅಭಿಮಾನದ ಮಾತನ್ನು ಅರವಿಂದ್ ವ್ಯಕ್ತಪಡಿಸಿದ್ದರು.

  • ದಿವ್ಯಾ ನೆನಪಿಸಿಕೊಂಡು ಮತ್ತೆ ಮತ್ತೆ ಕಣ್ಣೀರಿಟ್ಟ ಅರವಿಂದ್

    ದಿವ್ಯಾ ನೆನಪಿಸಿಕೊಂಡು ಮತ್ತೆ ಮತ್ತೆ ಕಣ್ಣೀರಿಟ್ಟ ಅರವಿಂದ್

    ಬಿಗ್‍ಬಾಸ್ ಮನೆಯಲ್ಲಿ ಅರವಿಂದ್, ವಿದ್ಯಾ ಉರುಡುಗ ಎಂತಹಾ ಒಳ್ಳೆಯ ಸ್ನೇಹಿತರು ಎನ್ನುವುದು ತಿಳಿದಿರುವ ವಿಷಯ. ಆದರೆ ದಿವ್ಯಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಬಳಿಕ ಅರವಿಂದ್ ತಮಗೆ ಗೊತ್ತಾಗದಂತೆ ರೂಲ್ಸ್ ಬ್ರೇಕ್ ಮಾಡುತ್ತಿದ್ದಾರೆ.

    ಹೌದು. ದಿವ್ಯಾ ಬಿಗ್‍ಬಾಸ್ ಮನೆಯಿಂದ ಆಚೆ ಹೋದ ದಿನದಿಂದಲೂ ಅರವಿಂದ್, ಅಷ್ಟೇನೂ ಆ್ಯಕ್ಟೀವ್ ಆಗಿಲ್ಲ. ಒಬ್ಬಂಟಿಯಾಗಿ ಕುಳಿತುಕೊಂಡೇ ಹೆಚ್ಚು ಕಾಲ ಕಳೆಯುತ್ತಾರೆ. ಏನೋ ಒಂದು ಯೋಚನೆಯಲ್ಲಿ ಮುಳುಗಿದ್ದಂತೆ ಅರವಿಂದ್ ಕಾಣುತ್ತಿದೆ. ಗಾರ್ಡನ್ ಏರಿಯಾದಲ್ಲಿ ಒಬ್ಬರೆ ಕುಳಿತಿರುತ್ತಾರೆ. ಆಗ ಮಂಜು ಅರವಿಂದ್ ಅವರಿಗೆ ಏನೋ ಮಾಡಲು ಸಾಧ್ಯವಿಲ್ಲ. ನಾವು ಹೊಂದಿಕೊಳ್ಳಲೇ ಬೇಕು ನನಗೂ ಅವಳ ನೆನೆಪು ಕಾಡುತ್ತಿದೆ ಎಂದು ಅರವಿಂದ್‍ಗೆ ಸಮಾಧಾನ ಮಾಡಿದ್ದಾರೆ. ಆಗ ಅರವಿಂದ್ ಅವರ ಕಣ್ಣಂಚಲ್ಲಿ ನೀರು ಜಾರಿತ್ತು.

    ಅರವಿಂದ್, ನಿಧಿ, ವೈಷ್ಣವಿ, ಮಂಜು ಮನೆಯಲ್ಲಿ ಒಂದು ಕಡೆ ಕುಳಿತು ಮಾತನಾಡುತ್ತಾ ಇದ್ದರು. ಆಗ ಅರವಿಂದ್ ಮಾತನಾಡುತ್ತಾ ಹಾಗೇ ನಿದ್ದೆಗೆ ಹೋಗಿದ್ದಾರೆ. ಆಗ ಬಿಗ್‍ಬಾಸ್ ಎದ್ದೇಳು ಮಂಜುನಾಥ ಎದ್ದೇಳು ಮಂಜುನಾಥ.. ಎಂದು ಸಾಂಗ್ ಹಾಕಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ಇದೆ ಮೊದಲ ಬಾರಿಗೆ ಅರವಿಂದ್ ಹಗಲು ನಿದ್ದೆ ಮಾಡಿ ಬಿಗ್‍ಬಾಸ್ ಮನೆಯ ನಿಯಮವನ್ನು ಇದೇ ಮೊದಲು ಬ್ರೇಕ್ ಮಾಡಿದ್ದಾರೆ ಎಂದು ಮನೆ ಮಂದಿ ಹೇಳಿದ್ದಾರೆ. ಅರವಿಂದ್ ಮಾತ್ರ ಕಿರು ನಗೆ ಬೀರುತ್ತಾ ಎದ್ದು ಕುಳಿತ್ತಿದ್ದಾರೆ.

    ದಿವ್ಯಾ ಅನಾರೋಗ್ಯದಿಂದ ಬಿಗ್‍ಬಾಸ್ ಮನೆಯಿಂದ ಆಚೆಹೋಗಿರುವುದು ಅರವಿಂದ್‍ಗೆ ಮಾತ್ರ ಸಖತ್ ಬೇಜಾರ್ ಉಂಟುಮಾಡಿದೆ. ಅರವಿಂದ್ ಮನೆಯಲ್ಲಿ ಯಾರೊಂದಿಗೂ ಬೆರೆಯದೆ ತುಂಬಾ ಬೇಜಾರ್‍ನಲ್ಲಿ ಇದ್ದಾರೆ. ದಿವ್ಯಾ ಆರೋಗ್ಯ ಚೇತರಿಸಿಕೊಂಡು ಆದಷ್ಟು ಬೇಗ ಬಂದು ಅರವಿಂದ್ ಮತ್ತು ದಿವ್ಯಾ ಮೊದಲಿನಂತೆ ಆಟವಾಡುವಂತಾಗಲಿ ಎಂದು ಬಿಗ್‍ಬಾಸ್ ವೀಕ್ಷಕರು ಹೇಳುತ್ತಿದ್ದಾರೆ.