Tag: ಅರಬ್ಬೀ ಸಮುದ್ರ

  • ಅರಬ್ಬೀ ಸಮುದ್ರದಲ್ಲಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ – 9 ಮಂದಿ ರಕ್ಷಣೆ

    ಅರಬ್ಬೀ ಸಮುದ್ರದಲ್ಲಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ – 9 ಮಂದಿ ರಕ್ಷಣೆ

    ಮುಂಬೈ: ತೈಲ ಹಾಗೂ ನೈಸರ್ಗಿಕ ಅನಿಲ ನಿಗಮದ(ಒಎನ್‌ಜಿಸಿ) ಹೆಲಿಕಾಪ್ಟರ್ ಮಂಗಳವಾರ ಅರಬ್ಬೀ ಸಮುದ್ರದ ತೈಲ ರಿಂಗ್ ಬಳಿ ತುರ್ತು ಲ್ಯಾಂಡಿಂಗ್ ಮಾಡಿದೆ. ಹೆಲಿಕಾಪ್ಟರ್‌ನಲ್ಲಿ 9 ಜನರಿದ್ದು ಸದ್ಯ ಎಲ್ಲರನ್ನು ರಕ್ಷಿಸಲಾಗಿದೆ ಎಂದು ಒಎನ್‌ಜಿಸಿ ತಿಳಿಸಿದೆ.

    ಹೆಲಿಕಾಪ್ಟರ್ ಇಂದು ಬೆಳಗ್ಗೆ 11:50ರ ವೇಳೆ ಮುಂಬೈಯಿಂದ ಪಶ್ಚಿಮಕ್ಕೆ 60 ಮೈಲುಗಳಷ್ಟು ದೂರದಲ್ಲಿ ಒಎನ್‌ಜಿಸಿಯ ಸಾಗರ್ ಕಿರಣ್ ಆಫ್‌ಶೋರ್ ರಿಂಗ್ ಬಳಿ ತುರ್ತು ಭೂಸ್ಪರ್ಶ ಮಾಡಿದೆ. ಹೆಲಿಕಾಪ್ಟರ್‌ನಲ್ಲಿ 7 ಪ್ರಯಾಣಿಕರು ಹಾಗೂ ಇಬ್ಬರು ಪೈಲಟ್‌ಗಳು ಇದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪಾಕಿಸ್ತಾನದ ರಾಯಭಾರಿ ಕಚೇರಿಗಳ ಟ್ವಿಟ್ಟರ್ ಖಾತೆಗಳನ್ನು ನಿಷೇಧಿಸಿದ ಭಾರತ

    ಹೆಲಿಕಾಪ್ಟರ್ ತುರ್ತು ಭೂಸ್ಪರ್ಶದ ಬಳಿಕ ಮಾಲ್ವಿಯಾ 16 ಸರಬರಾಜು ಹಡಗನ್ನು ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಲಾಗಿದೆ. ಸದ್ಯ ಎಲ್ಲರೂ ಪ್ರಾನಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಹಾಂಕಾಂಗ್ ತೇಲುವ ಜಂಬೋ ರೆಸ್ಟೋರೆಂಟ್ ಮಗುಚಿದೆ, ಮುಳುಗಿಲ್ಲ: ಸ್ಪಷ್ಟನೆ ಕೊಟ್ಟ ಮಾಲೀಕ

    Live Tv

  • ಅರಬ್ಬೀ ಸಮುದ್ರದಲ್ಲಿ ಹಡಗು ಮುಳುಗಡೆ – ತೈಲ ಸೋರಿಕೆ ಆತಂಕದಲ್ಲಿ ದ.ಕ ಜಿಲ್ಲಾಡಳಿತ ಅಲರ್ಟ್

    ಅರಬ್ಬೀ ಸಮುದ್ರದಲ್ಲಿ ಹಡಗು ಮುಳುಗಡೆ – ತೈಲ ಸೋರಿಕೆ ಆತಂಕದಲ್ಲಿ ದ.ಕ ಜಿಲ್ಲಾಡಳಿತ ಅಲರ್ಟ್

    ಮಂಗಳೂರು: ಜೂನ್ 23 ರಂದು ಸಿರಿಯಾ ದೇಶದ ಎಂಬಿ ಪ್ರಿನ್ಸೆಸ್ ಮಿರಲ್ ವ್ಯಾಪಾರಿ ಹಡಗು ಅರಬ್ಬೀ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಇದೀಗ ವಿದೇಶಿ ಸರಕು ಸಾಗಾಣೆ ಹಡಗಿನಲ್ಲಿ ಬರೋಬ್ಬರಿ 220 ಮೆಟ್ರಿಕ್ ಟನ್ ತೈಲ ಸೋರಿಕೆಯಾಗಿರುವ ಬಗ್ಗೆ ಆತಂಕದ ವಾತಾವರಣ ಸೃಷ್ಟಿಯಾಗಿದೆ.

    ಜೂನ್ 23 ರಂದು ಮಂಗಳೂರಿನ ಉಚ್ಚಿಲ ಬಟ್ಟಪಾಡಿ ಕಡಲ ತೀರದಲ್ಲಿ ಸಿರಿಯಾ ದೇಶದ ಎಂಬಿ ಪ್ರಿನ್ಸೆಸ್ ಮಿರಲ್ ವ್ಯಾಪಾರಿ ಹಡಗು ಮುಳುಗಡೆಯಾಗಿತ್ತು. ಅದು ಚೀನಾದಿಂದ ಲೆಬನಾನ್‌ಗೆ 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸುತ್ತಿತ್ತು. ಹಡಗು ಮುಳುಗಡೆ ವೇಳೆ ಇಂಡಿಯನ್ ಕೋಸ್ಟ್ ಗಾರ್ಡ್ ಅದರಲ್ಲಿದ್ದ 15 ಸಿಬ್ಬಂದಿಯ ರಕ್ಷಣೆ ಮಾಡಿತ್ತು. ಆದರೆ ಇದೀಗ ತೈಲ ಸೋರಿಕೆ ಬಗ್ಗೆ ಆತಂಕ ಸೃಷ್ಟಿಯಾಗಿದೆ.

    ತೈಲ ಸೋರಿಕೆಯಾದರೆ, ಮತ್ಸ್ಯ ಸಂಕುಲದ ನಾಶವಾಗಿ, ಮೀನುಗಾರರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ತೈಲ ಸೋರಿಕೆ ಆತಂಕದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಅಲರ್ಟ್ ಆಗಿದೆ. ತೈಲ ಸೋರಿಕೆಯಾದರೆ, ಮುಂದಿನ ಕ್ರಮಗಳ ಬಗ್ಗೆ ದ.ಕ. ಡಿಸಿ ಡಾ. ರಾಜೇಂದ್ರ ಮಾನಿಟರ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಬ್ರಾಹ್ಮಣ ಅಡುಗೆ ಭಟ್ಟ ಬಂದ್ರೆ ನಮಸ್ಕಾರ ಮಾಡ್ತಾರೆ, ಹಿಂದುಳಿದವನು ಶ್ರೀಮಂತನಾಗಿದ್ರೂ ಏನ್ಲಾ ಅಂತಾರೆ: ಸಿದ್ದು

    ಚೀನಾದ ಹಡಗು ಮಂಗಳೂರು ಸಮುದ್ರ ತೀರ ಪ್ರವೇಶದ ಬಗ್ಗೆ ಅನುಮಾನ ಮೂಡಿದ್ದು, ಲೆಬನಾನ್‌ಗೆ ಸಾಗಬೇಕಿದ್ದ ಹಡಗು ಮಂಗಳೂರಿಗೆ ಬಂದಿದ್ದೇಕೆ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಕೇಂದ್ರ ತನಿಖಾ ದಳದಿಂದ ತನಿಖೆ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: ಹೊಟ್ಟೆ ಹರಿದುಕೊಂಡಿದ್ದ ಕೋತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

    Live Tv

  • ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ – ರಾಜ್ಯದಲ್ಲಿ ಮುಂದಿನ 3 ದಿನ ಮಳೆ

    ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ – ರಾಜ್ಯದಲ್ಲಿ ಮುಂದಿನ 3 ದಿನ ಮಳೆ

    ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆ ರಾಜ್ಯದಲ್ಲಿ ಮುಂದಿನ 3 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಅರಬ್ಬೀ ಸಮುದ್ರದ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮೇಲ್ಮೈ ಸುಳಿಗಾಳಿ ಹಿನ್ನೆಲೆ ಮಳೆಯಾಗಲಿದೆ. ಬೆಂಗಳೂರು ಸೇರಿದಂತೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಕೆಲವೇ ದಿನ – ಗಡಿಯಲ್ಲಿ ಶೋಧ ಕಾರ್ಯ ಚುರುಕು

    RAIN IN BENGALURU

    ಬೆಂಗಳೂರಿನಲ್ಲಿ ಶನಿವಾರವೇ ಮಳೆ ಪ್ರಾರಂಭವಾಗಿದ್ದು, ಯಶವಂತಪುರ, ಮಲ್ಲೇಶ್ವರಂ, ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್ ಹಾಗೂ ಗೊರಗುಂಟೆ ಪಾಳ್ಯದ ಸುತ್ತಮುತ್ತ ಮಳೆಯಾಗಿದೆ. ವಾತಾವರಣ ಇದೇ ರೀತಿ 3 ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈಯಲ್ಲಿ ಜೂನ್ 30ರವರೆಗೂ 144 ಸೆಕ್ಷನ್ ಜಾರಿ

    Live Tv

  • ಪ್ರವಾಸಿಗರ ಆಕರ್ಷಣೆಗೆ ನಿರ್ಮಾಣವಾಗಿದ್ದ ಮಲ್ಪೆಯ ತೇಲುವ ಸೇತುವೆ ಸ್ಥಗಿತ

    ಪ್ರವಾಸಿಗರ ಆಕರ್ಷಣೆಗೆ ನಿರ್ಮಾಣವಾಗಿದ್ದ ಮಲ್ಪೆಯ ತೇಲುವ ಸೇತುವೆ ಸ್ಥಗಿತ

    ಉಡುಪಿ: ಅರಬ್ಬೀ ಸಮುದ್ರದ ಅಬ್ಬರ ಜೋರಾಗಿರುವುದರಿಂದ ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರ ಆಕರ್ಷಣೆಗೋಸ್ಕರ ನಿರ್ಮಾಣವಾಗಿದ್ದ ತೇಲುವ ಸೇತುವೆ ವಾಟರ್ ಸ್ಪೋರ್ಟ್ಸ್ ನ್ನು ಸ್ಥಗಿತ ಮಾಡಲಾಗಿದೆ.

    ರಾಜ್ಯದಲ್ಲಿಯೇ ಮೊದಲ ಬಾರಿಗೆ ನಿರ್ಮಾಣವಾಗಿದ್ದ ಸಮುದ್ರದ ತೇಲುವ ಸೇತುವೆ, ಮಲ್ಪೆ ಬೀಚ್‍ನ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ಮೂರು ದಿನಗಳಿಂದ ಸಾವಿರಾರು ಪ್ರವಾಸಿಗರು ಬಂದು ಮೋಜುಮಸ್ತಿಯಲ್ಲಿ ತೊಡಗಿದ್ದರು. ಸಮುದ್ರದ ಅಬ್ಬರ ಜಾಸ್ತಿ ಇರುವುದರಿಂದ ತೇಲುವ ಸೇತುವೆ ಸೇರಿದಂತೆ ಎಲ್ಲಾ ವಾಟರ್ ಸ್ಪೋರ್ಟ್ಸ್ ಗಳನ್ನು ಸ್ಥಗಿತ ಮಾಡುವುದಾಗಿ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಹೇಳಿದೆ.

    ಸೇತುವೆಯ ಬಿಡಿಭಾಗಗಳನ್ನು ಮೇಲಕ್ಕೆತ್ತುವ ಸಂದರ್ಭದಲ್ಲಿ ಸ್ಥಳೀಯರು ವೀಡಿಯೋ ಮಾಡಿದ್ದು ಸೇತುವೆ ಮುರಿದಿದೆ ಎಂದು ವೀಡಿಯೋಗಳನ್ನು ಹರಿಬಿಟ್ಟಿದ್ದಾರೆ. ತೇಲುವ ಸೇತುವೆಗೆ ಯಾವುದೇ ಸಮಸ್ಯೆಗಳು ಆಗಿಲ್ಲ, ಬೀಚ್ ಅಭಿವೃದ್ಧಿ ಸಮಿತಿಯವರು ಅಲೆಗಳ ಅಬ್ಬರ ಜಾಸ್ತಿ ಇರುವುದರಿಂದ ಫ್ಲೋಟಿಂಗ್ ಬ್ರಿಡ್ಜ್ ಮೇಲಕ್ಕೆತ್ತಲಾಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಅಮೆರಿಕಾದಿಂದ ವಾಪಸ್ಸಾದ ದಂಪತಿಯನ್ನು ಕೊಂದೇ ಬಿಟ್ಟ ಕಾರು ಡ್ರೈವರ್!

  • ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಸಾಧ್ಯತೆ

    ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಸಾಧ್ಯತೆ

    ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

    ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಮತ್ತು ವಾಯುಭಾರ ಕುಸಿತ ಕಾಣಿಸಿಕೊಂಡಿರುವ ಹಿನ್ನೆಲೆ ಮುಂದಿನ ಮೂರು ದಿನ ಮಳೆಯ ಆರ್ಭಟ ಇರಲಿದೆ. ಜೊತೆಗೆ ಬೆಂಗಳೂರಿನಲ್ಲಿಯೂ ವ್ಯಾಪಾಕವಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಬೆಂಗ್ಳೂರಿನ ಹಲವೆಡೆ ಧಾರಾಕಾರ ಮಳೆ- ವಾಹನ ಸವಾರರ ಪರದಾಟ

    ಕಳೆದ ಒಂದು ವಾರದಿಂದ ಬಿಡುವು ನೀಡಿದ್ದ ಮಳೆರಾಯ ಇದೀಗ ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ. ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಇಡೀ ಬೆಂಗಳೂರು ಅಕ್ಷರಶಃ ತತ್ತರಿಸಿ ಹೋಗಿದೆ. ಅಲ್ಲದೇ ನಗರದ ಹಲವಾರು ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಅನೇಕ ವಾಹನಗಳು ನೀರಿನಲ್ಲಿ ಮುಳುಗಿ ಹೋಗಿದೆ.

    ನಗರದ ಹಲವಾರು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆಯ ನೀರು ನುಗ್ಗಿದ್ದು, ರಾತ್ರಿ ಎಲ್ಲ ಜನ ನೀರನ್ನು ಮನೆಯಿಂದ ಹೊರಹಾಕಲು ಜಾಗರಣೆ ಮಾಡಿದ್ದಾರೆ. ಮಾಗಡಿ ರಸ್ತೆಯ ಟೋಲ್‍ಗೇಟ್, ಕಸ್ತೂರಬಾ ನಗರ, ಅಶೋಕ ಪಿಲ್ಲರ್, ಜೆ.ಸಿ ರಸ್ತೆ, ಊರ್ವಶಿ ಥಿಯೇಟರ್ ರಸ್ತೆ, ಕೆ.ಆರ್.ಮಾರ್ಕೆಟ್, ಕಾರ್ಪೊರೇಷನ್, ಶಾಂತಿನಗರ, ಲಾಲ್‍ಬಾಗ್, ಸುಧಾಮನಗರ, ಟೌನ್‍ಹಾಲ್, ಮೆಜೆಸ್ಟಿಕ್, ರಾಜಾಜಿನಗರ, ಶಾಂತಿನಗರದಲ್ಲಿ ಭಾರೀ ಮಳೆಯಾಗಿದೆ. ಇದನ್ನೂ ಓದಿ: ವರುಣನ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು – ಹಲವು ರಸ್ತೆಗಳು ಜಲಾವೃತ

     

  • ಯಾಸ್ ಎಫೆಕ್ಟ್ – ಉಡುಪಿಯಲ್ಲಿ ಗಾಳಿ ಮಳೆ

    ಯಾಸ್ ಎಫೆಕ್ಟ್ – ಉಡುಪಿಯಲ್ಲಿ ಗಾಳಿ ಮಳೆ

    ಉಡುಪಿ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಕೆಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಪೂರ್ವ ಕರಾವಳಿಯಲ್ಲಿ ಯಾಸ್ ಚಂಡಮಾರುತ ಎದ್ದಿರುವ ಪರಿಣಾಮ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಗಾಳಿ ಮಳೆಯಾಗುತ್ತಿದೆ.

    ಇಂದು ಬೆಳಗ್ಗೆ ಸುಮಾರು ಒಂದು ಗಂಟೆಗಳ ಕಾಲ ಮಳೆ ಸುರಿದಿದೆ. ಕಾರ್ಕಳ, ಹೆಬ್ರಿ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ಕಳೆದ ಎರಡು ದಿನದಿಂದ ಮಧ್ಯಾಹ್ನದ ನಂತರ ಪ್ರತಿದಿನ ಮಳೆ ಆರಂಭವಾಗಿದ್ದು, ಮಳೆಯೊಂದಿಗೆ ಗುಡುಗು ಸಹಿತ ಭಾರೀ ಗಾಳಿ ಬೀಸುತ್ತಿದೆ. ವಾತಾವರಣ ಸಂಪೂರ್ಣ ಮಳೆಗಾಲದಂತೆ ಆಗಿದೆ. ಇದನ್ನೂ ಓದಿ. ನಾಯಿ ಬೆನ್ನತ್ತಿ ಬಂದು ವಾಟರ್ ಟ್ಯಾಂಕ್‍ಗೆ ಬಿತ್ತು ಚಿರತೆ 

    ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದ್ದು ಮಳೆ ಮುಂದುವರಿಯುವ ಸಾಧ್ಯತೆ ಇದೆ. ಕುಂದಾಪುರ ಮತ್ತು ಬೈಂದೂರು ತಾಲೂಕಿನಾದ್ಯಂತ ಸಾಧಾರಣ ಮಳೆಯಾಗುತ್ತಿದೆ. ಏಕಾಏಕಿ ಮಳೆ ಸುರಿಯುತ್ತಿರುವುದರಿಂದ ಲಾಕ್‍ಡೌನ್ ನಡುವಿನ ಅಗತ್ಯ ಜನಸಂಚಾರಕ್ಕೆ ಕೊಂಚ ಸಮಸ್ಯೆಯಾಗಿದೆ. ಮುಂದಿನ ಒಂದೆರಡು ದಿನಗಳ ಕಾಲ ಸಾಧಾರಣದಿಂದ ಭಾರೀ ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಅರಬ್ಬಿ ಸಮುದ್ರಕ್ಕಿಳಿಯುವ ಮೀನುಗಾರರು ಎಚ್ಚರಿಕೆವಹಿಸಬೇಕು. ಗಾಳಿಯ ಪ್ರಮಾಣ ಹೆಚ್ಚಿದ್ದಾಗ ಸಮುದ್ರಕ್ಕೆ ಇಳಿಯಬಾರದು ಎಂದು ಜಿಲ್ಲಾಡಳಿತ ಖಡಕ್ ಸೂಚನೆ ಕೊಟ್ಟಿದೆ.

  • ನೌಕಾದಳದಿಂದ ಸಮುದ್ರದ ಮಧ್ಯೆ ಸಿಲುಕಿದ್ದ 9 ಮಂದಿಯ ರಕ್ಷಣೆ

    ನೌಕಾದಳದಿಂದ ಸಮುದ್ರದ ಮಧ್ಯೆ ಸಿಲುಕಿದ್ದ 9 ಮಂದಿಯ ರಕ್ಷಣೆ

    ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಟಗ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದ 9 ಜನರನ್ನು ರಕ್ಷಿಸಿ ಸುರಕ್ಷಿತವಾಗಿ ದಡ ಸೇರಿಸಲಾಗಿದೆ.

    ಕಳೆದ ಎರಡು ದಿನದ ಹಿಂದೆ ಎಂಆರ್ ಪಿಎಲ್ ಗೆ ಸೇರಿದ್ದ ಸಮುದ್ರದಲ್ಲಿ ಅಂಡರ್ ಗ್ರೌಂಡ್ ಪೈಪ್ ಜೋಡಿಸುವ ಕೋರಮಂಡಲ ಸಪೋರ್ಡರ್-9 ಎಂಬ ಟಗ್ ಸಮುದ್ರ ಮಧ್ಯೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿತ್ತು.

    9 ಮಂದಿಯ ರಕ್ಷಣೆಗೆ ಮುಂದಾದ ಜಿಲ್ಲಾಡಳಿತ ಇಂಡಿಯನ್ ಕೋಸ್ಟ್ ಗಾರ್ಡ್, ನೌಕಾದಳದ ಜಂಟಿ ಕಾರ್ಯಾಚರಣೆಯ ಮೂಲಕ ಇಂದು ಹೆಲಿಕಾಪ್ಟರ್ ಹಾಗೂ ಸ್ಪೀಡ್ ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ.ನಾಲ್ವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪಣಂಬೂರು ಎನ್ ಎಂಪಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೀಡಲಾಗಿದೆ.

    ಇನ್ನುಳಿದ 5 ಮಂದಿಯನ್ನು ಸ್ಪೀಡ್ ಮೂಲಕ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂದಾಯ ಸಚಿವ ಆರ್.ಅಶೋಕ್ ರಕ್ಷಿಸಲ್ಪಟ್ಟ ಟಗ್ ಸಿಬ್ಬಂದಿ ಜೊತೆ ಮಂಗಳೂರಿನ ಎನ್‍ಎಂಪಿಟಿ ಬಂದರ್ ನಲ್ಲಿ ಮಾತುಕತೆ ನಡೆಸಿದ್ರು. ದುರಂತದ ಮಾಹಿತಿ ಸಂಗ್ರಹಿಸಿ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ರು.

  • ತೌಕ್ತೆ ಚಂಡಮಾರುತಕ್ಕೆ ಕೃಷಿಕ ಸಾವು

    ತೌಕ್ತೆ ಚಂಡಮಾರುತಕ್ಕೆ ಕೃಷಿಕ ಸಾವು

    ಉಡುಪಿ: ಅರಬ್ಬೀ ಸಮುದ್ರದಲ್ಲಿ ಎದ್ದಿರುವ ತೌಕ್ತೆ ಚಂಡಮಾರುತದಿಂದ ಉಡುಪಿ ಜಿಲ್ಲೆಯಾದ್ಯಂತ ಕಳೆದ 24 ಗಂಟೆಯಲ್ಲಿ ಭಾರಿ ಮಳೆ ಬಿದ್ದಿದೆ. ಹೀಗಾಗಿ ಉಡುಪಿ, ಬ್ರಹ್ಮಾವರ, ಕುಂದಾಪುರ, ಬೈಂದೂರಿನಲ್ಲಿ ಅವಾಂತರ ಸೃಷ್ಟಿಯಾಗಿದೆ.

    ಕಾಪು ತಾಲೂಕಿನಲ್ಲಿ ವಿದ್ಯುತ್ ತಂತಿ ಕೆಳಗೆ ಬಿದ್ದು ವಿದ್ಯುತ್ ತಗುಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಬ್ರಹ್ಮಾವರ ತಾಲೂಕಿನಲ್ಲಿ 4 ಮನೆಗಳಗೆ, ಬೈಂದೂರು ತಾಲೂಕಿನಲ್ಲಿ 3 ಮನೆಗಳಿಗೆ, 5 ತಾತ್ಕಾಲಿಕ ಶೆಡ್‍ಗಳಿಗೆ ಹಾಗೂ ಉಡುಪಿ ತಾಲೂಕಿನಲ್ಲಿ 1 ಮನೆಗೆ ಭಾಗಶಃ ಹಾನಿಯಾಗಿದೆ.

    ಜಿಲ್ಲೆಯಾದ್ಯಂತ ಸುಮಾರು 50 ತೆಂಗಿನಮರಗಳಿಗೆ ಹಾನಿಯಾಗಿದ್ದು, ಮರಗಳು, ರೆಂಬೆ ಕೊಂಬೆ ಧರೆಗೆ ಉರುಳಿರುವುದರಿಂದ ಅಲ್ಲಲ್ಲಿ ರಸ್ತೆ ಬಂದದ ಆಗಿದೆ. ಸಾರ್ವಜನಿಕ ಸಂಚಾರಕ್ಕೆ ತೊಂದರೆ ಆಗಿದ್ದು, ಕೂಡಲೇ ತೆರವುಗೊಳಿಸಲಾಯ್ತು. ಬೈಂದೂರು ತಾಲೂಕಿನಲ್ಲಿ ಕಡಲ ತೀರದ 4 ಕುಟುಂಬಗಳನ್ನು ಉಪ್ಪುಂದ ಜೂನಿಯರ್ ಕಾಲೇಜಿನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕುಂದಾಪುರ ತಾಲೂಕಿನ 7 ಕುಟುಂಬಗಳನ್ನು ಸಂಬಂಧಿಕರ ಮನೆಗೆ, ಕಾಪು ತಾಲೂಕಿನ ಒಂದು ಕುಟುಂಬವನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.

    ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮದ ಸುಮಾರು 50 ರಿಂದ 60 ಜನಗಳಿಗೆ ಪರಿಸ್ಥಿತಿ ಅವಲೋಕಿಸಿ ಕೋಡಿ ಶಾಲೆಯಲ್ಲಿ ಆರಂಭಿಸಿದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಉಡುಪಿ ಕಾಪುವಿನಲ್ಲಿ ಈಗಾಗಲೇ ಸಮುದ್ರ ತೀರದ ಜನಗಳಿಗೆ ಪರಿಸ್ಥಿತಿ ಬಿಗಡಾಯಿಸಿದಲ್ಲಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ವ್ಯವಸ್ಥೆಯನ್ನು ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.

  • ಸಾಗರವನ್ನೇ ಹಿಂದೆ ಸರಿಸಿದ ಕಾಳಿ ನದಿ

    ಸಾಗರವನ್ನೇ ಹಿಂದೆ ಸರಿಸಿದ ಕಾಳಿ ನದಿ

    ಕಾರವಾರ: ಅಬ್ಬರದ ಮಳೆಬಂದ್ರೆ ಭೂ ಕುಸಿತವಾಗುತ್ತೆ, ಇದ್ದ ಜಾಗವೇ ಮಾಯವಾಗುತ್ತೆ ಅಂತದ್ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಸುರಿದ ಅಬ್ಬರದ ಮಳೆಯಿಂದ ಅರಬ್ಬೀ ಸಮುದ್ರ ಭಾಗದಲ್ಲಿ ಹತ್ತು ಎಕರೆ ಪ್ರದೇಶದಷ್ಟು ಭೂ ಭಾಗ ಸೃಷ್ಟಿಯಾಗಿದ್ದು ಸಮುದ್ರವೇ ಹಿಂದೆಸರಿದಿದೆ.

    ಕಾರವಾರದ ಟಾಗೂರ್ ಕಡಲತಡಿ ನೋಡಲು ಸಾಧಾರಣವಾಗಿ ಕಾಣ್ತಿದೆಯಾದ್ರೂ ಇದರ ಹಿಂದೆ ಇರೋ ಪ್ರಕೃತಿಯ ಕೌತುಕ ಹೊಸ ಸವಾಲುಗಳನ್ನು ಹುಟ್ಟು ಹಾಕುತ್ತಿವೆ. ಕಾಳಿ ನದಿ ಸಂಗಮದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಮುದ್ರವನ್ನೇ ನುಂಗಿ ಹತ್ತು ಎಕರೆಯಷ್ಟು ಹೊಸ ಭೂಭಾಗ ನಿರ್ಮಾಣವಾಗಿದೆ.

    ನದಿಯೊಂದಿಗೆ ಹೆಚ್ಚಿನ ಪ್ರಮಾಣದ ಮರಳು ಕಡಲತಡಿಯನ್ನು ಸೇರುತ್ತಿದೆ. ಇದರಿಂದ ಕಾಳಿ ನದಿ ಪ್ರದೇಶದ ಅಳವೆಗಳು ಮುಚ್ಚಿಹೋಗುವ ಭಯ ಸ್ಥಳೀಯರನ್ನು ಕಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯೇ ಇದಕ್ಕೆ ಕಾರಣ ಎನ್ನಲಾಗ್ತಿದೆ.

    ಮರಳಿನ ಭೂಮಿ ನಿರ್ಮಾಣವಾಗಿ ಅರಬ್ಬಿ ಸಮುದ್ರವೇ ಹಿಂದೆ ಸರಿದಿದ್ದು, ಮರಳು ಹೇರಳವಾಗಿ ಸಂಗ್ರಹವಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ನಿರಂತರ ಅಬ್ಬರದ ಮಳೆಯ ಪ್ರಭಾವವೇ ಇದಕ್ಕೆ ಕಾರಣ ಎಂದು ಕಡಲ ಜೀವಶಾಸ್ತ್ರಜ್ಞರಾದ ಡಾ.ಜಗನ್ನಾಥ್ ರಾಥೋಡ್ ಹೇಳುತ್ತಾರೆ.

    ಅಕ್ರಮ ಮರಳುಗಾರಿಕೆಯಿಂದ ಸಹ ಕಡಲತಡಿಯಲ್ಲಿ ಮರಳು ಸಂಗ್ರಹವಾಗ್ತಿದೆ ಎಂಬ ಮಾತು ಇದೆ. ಈ ಮಟ್ಟದಲ್ಲಿ ಮರಳು ಸಂಗ್ರಹವಾದರೆ ನದಿಯ ಹರಿಯುವ ದಿಕ್ಕು ಬದಲಾಗಿ ದೊಡ್ಡ ಹಾನಿಯಾಗಬಹುದೆಂಬ ಆತಂಕವೂ ಇದೆ.

  • ರಕ್ಕಸ ಅಲೆಗಳಿಗೆ ಸುಂದರ ಪಡುಬಿದ್ರೆ ಬೀಚ್‌ ನಾಶ – ನೀರಿನಲ್ಲಿ ಕೊಚ್ಚಿ ಹೋಯ್ತು ಕೋಟ್ಯಂತರ ರೂ.

    ರಕ್ಕಸ ಅಲೆಗಳಿಗೆ ಸುಂದರ ಪಡುಬಿದ್ರೆ ಬೀಚ್‌ ನಾಶ – ನೀರಿನಲ್ಲಿ ಕೊಚ್ಚಿ ಹೋಯ್ತು ಕೋಟ್ಯಂತರ ರೂ.

    ಉಡುಪಿ: ಅರಬ್ಬೀ ಸಮುದ್ರ ಉಡುಪಿಯ ಪಡುಬಿದ್ರೆ ಸುಂದರ ಬೀಚ್‌ ಪ್ರದೇಶವನ್ನೇ ನಾಶ ಮಾಡಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬೀಚನ್ನು ಸಮುದ್ರದ ಭೀಕರ ಅಲೆಗಳು ಕೊಚ್ಚಿಕೊಂಡು ಮುನ್ನುಗ್ಗುತ್ತಿದೆ. ಸಮುದ್ರ ದಡದಲ್ಲಿದ್ದ ಎಲ್ಲವನ್ನೂ ಆಪೋಷಣ ಪಡೆಯುತ್ತಿದೆ.

    ಉಡುಪಿ ಜಿಲ್ಲೆಯಲ್ಲಿ ಅರಬ್ಬಿ ಸಮುದ್ರದ ಅಬ್ಬರ ಜಾಸ್ತಿಯಾಗಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯ ಅಲ್ಲಲ್ಲಿ ಕಡಲ್ಕೊರೆತ ಕಾಣಿಸಿಕೊಳ್ಳುತ್ತಿದೆ. ಕಾಪು ತಾಲೂಕಿನ ಪಡುಕರೆಯಲ್ಲಿ ಗುರುವಾರ ಸಮುದ್ರದ ನೀರು ಮೀನುಗಾರಿಕಾ ರಸ್ತೆಗೆ ಅಪ್ಪಳಿಸಿತ್ತು. ನದಿ ಮತ್ತು ಸಮುದ್ರದ ಮಧ್ಯಭಾಗದಲ್ಲಿರುವ ಮನೆಗಳಲ್ಲಿ ಸಮುದ್ರದ ನೀರು ನುಗ್ಗಿತ್ತು. ಇದೀಗ ಸುಂದರವಾದ ಪಡುಬಿದ್ರಿ ಬೀಚನ್ನು ಬೃಹತ್ ಗಾತ್ರದ ಅಲೆಗಳು ನಾಶ ಮಾಡಿವೆ.

    ಭೂಮಿಯನ್ನು ಸೀಳುತ್ತಾ ನುಗ್ಗುತ್ತಿರುವ ಅರಬ್ಬೀ ಸಮುದ್ರ, ತೆಂಗಿನ ಮರಗಳನ್ನು ಭೂಭಾಗವನ್ನು ಆಕ್ರಮಿಸಿಕೊಳ್ಳುತ್ತಿದೆ. ಬೀಚಿನಲ್ಲಿ ಅಳವಡಿಸಲಾದ ವಿದ್ಯುತ್ ದೀಪಗಳನ್ನು ಕಡಲಿನ ಅಲೆಗಳು ಉರುಳಿಸಿದೆ. ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಆಡಳಿತ ಸಂಸ್ಥೆ ಪಡುಬಿದ್ರೆ ಬೀಚ್ ನಲ್ಲಿ ಅಳವಡಿಸಲಾಗಿದ್ದ ಕಾಂಕ್ರೀಟ್ ಇಂಟರ್ಲಾಕ್, ಕಾಂಕ್ರೀಟ್ ಕಟ್ಟೆಗಳನ್ನು ನಿರ್ಮಿಸಿತ್ತು. ಈಗ ಅಲೆಗಳ ಹೊಡೆತಕ್ಕೆ ಇವುಗಳೆಲ್ಲ ಹಾಳಾಗಿವೆ.

    ಈ ಬಗ್ಗೆ ಸ್ಥಳೀಯ ನಿವಾಸಿ ಎರ್ಮಾಳು ಸುರೇಶ್ ಮಾತನಾಡಿ, ಪಡುಬಿದ್ರೆಯಲ್ಲಿ ಪ್ರತಿವರ್ಷ ಕಡಲ್ಕೊರೆತ ಆಗುತ್ತದೆ. ಇದು ಸಾಮಾನ್ಯ ಪ್ರಕ್ರಿಯೆ. ಪಡುಬಿದ್ರೆಯಲ್ಲಿ ಆದಂತಹ ಕಡಲ್ಕೊರೆತ ಬಹಳ ನಿರೀಕ್ಷಿತ. ಸಮುದ್ರದ ತೀರದಲ್ಲಿ ಕಾಮಗಾರಿ ನಡೆಸಲಾಗಿದೆ. ಪ್ರತಿ ಮಳೆಗಾಲದಲ್ಲಿ ಸಮುದ್ರ ಮುಂದೆ ಬರುತ್ತದೆ. ಕಾಮಗಾರಿ ನಿರ್ಮಾಣ ಸಂದರ್ಭ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಅವರ ಮಾತಿಗೆ ಅಧಿಕಾರಿಗಳು ಬೆಲೆ ಕೊಟ್ಟಿಲ್ಲ. ಪಡುಬಿದ್ರೆಯಲ್ಲಿ ಶಾಶ್ವತವಾದ ತಡೆಗೋಡೆ ನಿರ್ಮಾಣ ಆಗದಿದ್ದರೆ ಪ್ರತಿವರ್ಷ ಸಚಿವರು ಭೇಟಿ ಕೊಡಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.