Tag: ಅರಬ್ಬೀ ಸಮುದ್ರ

  • ಲಕ್ಷದ್ವೀಪ ಸಮೀಪ ವಾಯುಭಾರ ಕುಸಿತ; ಕರಾವಳಿಯಲ್ಲಿ ಮುಂದಿನ ಮೂರ್ನಾಲ್ಕು ದಿನ ಭಾರೀ ಮಳೆ ಸಾಧ್ಯತೆ

    ಲಕ್ಷದ್ವೀಪ ಸಮೀಪ ವಾಯುಭಾರ ಕುಸಿತ; ಕರಾವಳಿಯಲ್ಲಿ ಮುಂದಿನ ಮೂರ್ನಾಲ್ಕು ದಿನ ಭಾರೀ ಮಳೆ ಸಾಧ್ಯತೆ

    – ಉಡುಪಿ ಜಿಲ್ಲೆಗೆ ಹೈ ಅಲರ್ಟ್‌; ಮೀನುಗಾರಿಕೆಯ ತೆರಳಿದ್ದ ಬೋಟ್‌ಗಳೆಲ್ಲ ವಾಪಸ್

    ಉಡುಪಿ: ಲಕ್ಷದ್ವೀಪದ ಸುತ್ತಮುತ್ತ ವಾಯುಭಾರ ಕುಸಿತವಾಗಿದ್ದು, ಚಂಡಮಾರುತದ ವಾತಾವರಣ ಸೃಷ್ಟಿಯಾಗಿದೆ. ಮುಂದಿನ ಮೂರ್ನಾಲ್ಕು ದಿನ ಭಾರಿ ಗಾಳಿಮಳೆ ಬೀಳುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಕರ್ನಾಟಕ ಕರಾವಳಿಯ ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ ಮಾಡಿದೆ.

    ಉಡುಪಿ (Udupi) ಜಿಲ್ಲೆಯ ಮಲ್ಪೆ ಸರ್ವ ಋತು ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಎಲ್ಲ ಬೋಟುಗಳು ವಾಪಸ್ ಆಗಿವೆ. ರಾಜ್ಯದ ಗಡಿ ದಾಟಿ ಗೋವಾ, ಮಹಾರಾಷ್ಟ್ರ ಗುಜರಾತ್ ಬಾರ್ಡರ್‌ನಲ್ಲಿ ಇರುವ ಬೋಟ್‌ಗಳಿಗೆ ಹತ್ತಿರದ ಬಂದರುಗಳನ್ನು ಆಶ್ರಯಿಸುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಬಂಗಾಳ ಕೊಲ್ಲಿಯಲ್ಲಿ ‘ಮೋಂಥಾ’ ಸೈಕ್ಲೋನ್ ಅಬ್ಬರ – ಚೆನ್ನೈನಲ್ಲಿ ಭಾರೀ ಮಳೆ ಸಾಧ್ಯತೆ

    ಉಡುಪಿಯ ಬೋಟ್‌ಗಳು ಗೋವಾ, ಮಹಾರಾಷ್ಟ್ರ, ಗುಜರಾತ್ ಬಂದರು ಸೇರಿವೆ. ಮಲ್ಪೆ, ಗಂಗೊಳ್ಳಿ, ಕುಂದಾಪುರದ ಸಾವಿರಾರು ಬೋಟ್‌ಗಳು ವಾಪಸ್ ಆಗಿವೆ. ಚಂಡಮಾರುತವು ಕಡಲ ತೀರದಿಂದ ಸುಮಾರು 300 ಕಿಲೋಮೀಟರ್ ದೂರದಲ್ಲಿದೆ.

    ಅರಬ್ಬೀ ಕಡಲ ತೀರದ ಎಲ್ಲಾ ರಾಜ್ಯಗಳಿಗೂ ಕಟ್ಟೆಚ್ಚರ ನೀಡಲಾಗಿದೆ. 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆಳಸಮುದ್ರ, ಪರ್ಶಿಯನ್, ಟ್ರಾಲ್, ನಾಡದೋಣಿಗಳು ಲಂಗರು ಹಾಕಿವೆ. ಇದನ್ನೂ ಓದಿ: ಕರಾವಳಿಯಲ್ಲಿ ಅಬ್ಬರದ ಬಿರುಗಾಳಿ ಸಹಿತ ಮಳೆ – ಮುಳುಗಿದ ರಸ್ತೆ, ಕುಸಿದ ಗುಡ್ಡ

  • ತೈಲ ಸೋರಿಕೆ ಎಚ್ಚರಿಕೆ – ಇತಿಹಾಸ ಕಂಡ ಅತಿದೊಡ್ಡ ತೈಲ ಸೋರಿಕೆ ದುರಂತಗಳ ಬಗ್ಗೆ ನಿಮಗೆ ಗೊತ್ತಾ?

    ತೈಲ ಸೋರಿಕೆ ಎಚ್ಚರಿಕೆ – ಇತಿಹಾಸ ಕಂಡ ಅತಿದೊಡ್ಡ ತೈಲ ಸೋರಿಕೆ ದುರಂತಗಳ ಬಗ್ಗೆ ನಿಮಗೆ ಗೊತ್ತಾ?

    – ಸಮುದ್ರ ಜೀವರಾಶಿಗಳಿಗೆ ಅಪಾಯ – ಕರಾವಳಿ ಆರ್ಥಿಕತೆಗೆ ಪೆಟ್ಟು
    – ಕೇರಳ ಕರಾವಳಿಯಲ್ಲಿ ಅಪಾಯಕಾರಿ ರಾಸಾಯನಿಕ ಸಾಗಿಸುತ್ತಿದ್ದ ಕಂಟೇನರ್ ಹಡಗು ಮುಳುಗಡೆ

    ಕೇರಳದಲ್ಲಿ ತೈಲ ತುಂಬಿದ ಕಂಟೇನರ್‌ಗಳನ್ನು ಹೊತ್ತ ಲೈಬೀರಿಯಾದ ಸರಕು ಸಾಗಣೆ ಹಡಗು MSC Elsa 3 ಸಂಪೂರ್ಣ ಮುಳುಗಡೆಯಾಗಿದೆ. ಕೇರಳದ ಅಲಪ್ಪುಳದಲ್ಲಿರುವ ತೊಟ್ಟಪ್ಪಲ್ಲಿ ಬಂದರಿನಿಂದ 14.6 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಹಡಗು ಮುಳುಗಿತ್ತು. ಇದರಿಂದ ಕ್ಯಾಲ್ಸಿಯಂ ಕಾರ್ಬೈಡ್‌ನಂತಹ ಅಪಾಯಕಾರಿ ರಾಸಾಯನಿಕಗಳು, ಡೀಸೆಲ್‌ ಮತ್ತು ಮರೀನ್ ಗ್ಯಾಸ್ ಆಯಿಲ್‌ (ಹಡಗುಗಳಿಗೆ ಬಳಸುವ ಇಂಧನ) ಸಮುದ್ರ ಪಾಲಾಗಿದೆ.

    ಹಡಗಿನಲ್ಲಿ 13 ಬಗೆಯ ಅಪಾಯಕಾರಿ ರಾಸಾಯನಿಕ ತುಂಬಿದ 643 ಕಂಟೈನರ್‌ಗಳಿದ್ದವು. ಈ ಪೈಕಿ 73 ಕಂಟೈನರ್‌ಗಳು ಖಾಲಿಯಿದ್ದವು. ಇದರಲ್ಲಿ ಒಟ್ಟು 5 ಕಂಟೇನರ್‌ಗಳು ಇಂದು ಪತ್ತೆಯಾಗಿವೆ. ಮೊದಲಿಗೆ ಹಡಗಿನ ಒಂದು ಭಾಗವು ವಾಲಿಕೊಂಡಿದ್ದರಿಂದ 10 ಕಂಟೈನರ್‌ಗಳು ಮಾತ್ರ ಸಮುದ್ರದಲ್ಲಿ ಮುಳುಗಿದ್ದವು, ಬಳಿಕ ರಕ್ಕಸ ಅಲೆಗಳ ಹೊಡೆತಕ್ಕೆ ಸಿಕ್ಕಿ ಹಡಗೇ ಮುಳುಗಡೆಯಾಯಿತು. ಹಡಗಿನಲ್ಲಿದ್ದ 24 ಸಿಬ್ಬಂದಿಯನ್ನು ಭಾರತೀಯ ಕರಾವಳಿ ಕಾವಲು ಪಡೆ ರಕ್ಷಿಸಿದೆ. ಆದ್ರೆ ತೈಲ ಕಂಟೇನರ್‌ಗಳಿಂದ ಪರಿಸರಕ್ಕೆ ಹಾನಿಯಾಗುವ ಆತಂಕವಿದೆ. ಹೀಗಾಗಿ ದಡಗಳಿಗೆ ತೇಲಿ ಬಂದರೆ ಜನರು ಹತ್ತಿರ ಹೋಗದಂತೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಕೇರಳ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಪ್ರಾಧಿಕಾರವು (KSDMA) ಎಚ್ಚರಿಕೆ ನೀಡಿದೆ. ಇದರಿಂದ ಪರಿಸರಕ್ಕೆ ಸಂಭವಿಸಬಹುದಾದ ಅಪಾಯಗಳ ಸಾಧ್ಯತೆ ಕುರಿತು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ಹಡಗು ಮುಳುಗಿದ್ದು ಹೇಗೆ?
    ಶನಿವಾರ ಮಧ್ಯಾಹ್ನದ ವೇಳೆಗೆ ಕೊಚ್ಚಿ ಕರಾವಳಿಯಿಂದ ನೈರುತ್ಯಕ್ಕೆ 38 ನಾಟಿಕಲ್ ಮೈಲುಗಳಷ್ಟು (70.376 ಕಿಮೀ) ದೂರದ ಅರಬ್ಬಿ ಸಮುದ್ರದಲ್ಲಿ ಕಾರ್ಗೋ ಶಿಪ್‌ ಸುಮಾರು 26 ಡಿಗ್ರಿಗಳಷ್ಟು ಕೆಳಮಟ್ಟಕ್ಕೆ ಇಳಿದಿತ್ತು. ತಕ್ಷಣವೇ ಭಾರತೀಯ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಲಾಯಿತು. ಐಎನ್‌ಎಸ್ ಸುಜಾತಾ, ಐಸಿಜಿಎಸ್ ಅನ್ವೇಷ್ ಮತ್ತು ಐಸಿಜಿಎಸ್ ಸಕ್ಷಮ್ ಎಂಬ ಮೂರು ಹಡಗುಗಳನ್ನು ರಕ್ಷಣಾ ಕಾರ್ಯಕ್ಕಾಗಿ ಕಳುಹಿಸಲಾಯಿತು. ಅಷ್ಟರಲ್ಲಿ ಎಂಎಸ್‌ಸಿ ELSA 3 ಪ್ರವಾಹದ ಅಲೆ ವಿಪರೀತವಾಗಿ ಹಡಗು ಮಗುಚಿತ್ತು. ಹಡಗಿನಲ್ಲಿ 13 ಬಗೆಯ ಅಪಾಯಕಾರಿ ರಾಸಾಯನಿಕಗಳು ತುಂಬಿದ್ದವು. ಈ ಪೈಕಿ 12 ಕ್ಯಾಲ್ಸಿಯಂ ಕಾರ್ಬೈಡ್‌, ಹೆಚ್ಚುವರಿಯಾಗಿ 84.44 ಮೆಟ್ರಿಕ್‌ ಟನ್‌ ಡೀಸೆಲ್‌, 367.1 ಮೆಟ್ರಿಕ್‌ ಟನ್‌ ಫರ್ನೇಸ್‌ ಆಯಿಲ್‌ ಟ್ಯಾಂಕ್‌ಗಳು ಇದ್ದವು ಎಂದು ಭಾರತೀಯ ಕೋಸ್ಟ್ ಗಾರ್ಡ್ ತಿಳಿಸಿದೆ.

    MSC ELSA 3 ಹಡಗು 1997 ರಲ್ಲಿ ನಿರ್ಮಿಸಲಾದ 184 ಮೀಟರ್ ಉದ್ದದ ಹಡಗಾಗಿತ್ತು. ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿ (MSC) ಈ ಹಡಗನ್ನು ನಿರ್ವಹಣೆ ಮಾಡುತ್ತಿತ್ತು. ಇದರಲ್ಲಿ ಓರ್ವ ರಷ್ಯನ್‌ ಕ್ಯಾಪ್ಟನ್‌, 20 ಮಂದಿ ಫಿಲಿಫೈನ್ಸ್‌ ಪ್ರಜೆಗಳು, ಇಬ್ಬರು ಉಕ್ರೇನ್‌ ಮತ್ತು ಓರ್ವ ಜಾರ್ಜಿಯನ್‌ ಸಿಬ್ಬಂದಿ ಸೇರಿ 24 ಮಂದಿ ಇದ್ದರು.

    ತೈಲ ಸೋರಿಕೆ ಅಂದ್ರೆ ಏನು?
    ಕಚ್ಚಾ ತೈಲ, ಡೀಸೆಲ್ ಅಥವಾ ಇಂಧನ ತೈಲದಂತಹ ಪೆಟ್ರೋಲಿಯಂ ಉತ್ಪನ್ನಗಳು ಪರಿಸರಕ್ಕೆ, ಸಾಮಾನ್ಯವಾಗಿ ಸಾಗರ, ನದಿಗಳು ಅಥವಾ ಕರಾವಳಿ ಪ್ರದೇಶಗಳಂತಹ ಜಲಮೂಲಗಳಿಗೆ ಆಕಸ್ಮಿಕವಾಗಿ ಅಥವಾ ಪ್ರಾಕೃತಿಕ ವಿಕೋಪಕ್ಕೆ ಸಿಕ್ಕಿ ಸೋರಿಕೆಯಾಗುವುದನ್ನು ತೈಲ ಸೋರಿಕೆ ಎನ್ನುತ್ತಾರೆ. ಹಡಗು ಅಪಘಾತಗಳು, ಕಡಲ ಕೊರೆತ, ಪೈಪ್‌ಲೈನ್‌ ಸೋರಿಕೆ ಅಥವಾ ಅಕ್ರಮ ಡಂಪಿಂಗ್‌ನಿಂದಾಗಿ ತೈಲ ಸೋರಿಕೆಗಳು ಹೆಚ್ಚಾಗಿ ಸಂಭವಿಸುತ್ತವೆ. ನೀರಿನಲ್ಲಿ ತೈಲಸೋರಿಕೆಯು ವೇಗವಾಗಿ ಹರಡುವುದರಿಂದ ಕಡಿಮೆ ಸಾಂದ್ರತೆಯಿಂದಾಗಿ ನೀರಿನ ಮೇಲೆ ಪದರವನ್ನು ಸೃಷ್ಟಿಸುತ್ತದೆ. ಇದರಿಂದ ಸೂರ್ಯನ ಬೆಳಕು ತಡೆದು ಸಮುದ್ರ ಸಸ್ಯಗಳಲ್ಲಿ ದ್ಯುತಿಶ್ಲೇಷಣೆ ಕ್ರಿಯೆಗೆ ಅಡ್ಡಿಯುಂಟುಮಾಡುತ್ತದೆ.

    ತೈಲ ಸೋರಿಕೆಯಿಂದ ಪರಿಸರದ ಮೇಲಾಗುವ ಪರಿಣಾಮ ಏನು?
    ತೈಲ ಸೋರಿಕೆಯು ಒಂದು ಕಡೆ ಸಮುದ್ರಲ್ಲಿನ ಸಸ್ಯಗಳ ದ್ಯುತಿಶ್ಲೇಷಣೆ ಕ್ರಿಯೆಗೆ ಅಡಿಯುಂಟುಮಾಡಿದ್ರೆ ಮತ್ತೊಂದು ಕಡೆ ಮೀನು, ಸಮುದ್ರ ಪಕ್ಷಿಗಳು ಮತ್ತು ಇತರ ಸಮುದ್ರ ಪ್ರಾಣಿಗಳ ಮೇಲೂ ಪರಿಣಾಮ ಬೀರುತ್ತದೆ.

    ಪರಿಸರ ಹಾನಿ: ತೈಲವು ಸಮುದ್ರ ಜೀವಿಗಳ ಆಹಾರ ಮೂಲಗಳ ಮೇಲೆ ಪರಿಣಾಮ ಬೀರಬಹುದು. ಅವುಗಳಿಗೆ ಸಿಗುವ ಆಹಾರ ವಿಷಪೂರಿತವಾಗಬಹುದು. ಜಲಚರಗಳ ಉಸಿರಾಟಕ್ಕೂ ತೊಂದರೆಯಾಗಬಹುದು. ಒಂದು ವೇಳೆ ತೈಲ ಎತೆಚ್ಚವಾಗಿ ಸೋರಿಕೆಯಾದ್ರೆ, ಅಪಾಯದಿಂದ ಬದುಕುಳಿದ ಪ್ರಾಣಿಗಳು ಮುಂದಿನ ಕೆಲ ವಾರ, ತಿಂಗಳುಗಳಲ್ಲೇ ಸಾವನ್ನಪ್ಪುವ ಸಾಧ್ಯತೆಗಳಿವೆ. ಅಲ್ಲದೇ ಸಮುದ್ರ ಪ್ರಾಣಿಗಳು ಮತ್ತು ಜಲಚರಗಳ ಸಂತಾನೋತ್ಪತ್ತಿಗೂ ಅಡ್ಡಿಯುಂಟು ಮಾಡುತ್ತದೆ. ಜೊತೆಗೆ ನೀರಿನ ಗುಣಮಟ್ಟ ಮತ್ತು ಜಲಚರ ಪರಿಸರ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತವೆ.

    ಆರ್ಥಿಕ ಪರಿಣಾಮಗಳು, ಪ್ರವಾಸೋದ್ಯಮಕ್ಕೂ ಹೊಡೆತ: MSC ELSA 3 ಹಡಗು ಮುಳುಗಡೆಯಿಂದ ತೈಲ ಸೋರಿಕೆ ಆತಂಕ ಹೆಚ್ಚಾಗಿದ್ದು, ಮೀನುಗಾರಿಕೆಗೂ ನಿಷೇಧ ವಿಧಿಸಲಾಗಿದೆ. ಇದರಿಂದ ಮೀನುಗಾರಿಕೆಯನ್ನೇ ಅವಲಂಬಿಸಿರುವ ಕೇರಳದ ಮೀನುಗಾರಿಕಾ ಸಮುದಾಯಗಳಿಗೆ ಆರ್ಥಿಕ ಹೊರೆ ಉಂಟಾಗಿದೆ. ಮತ್ತೊಂದೆಡೆ, ಪ್ರವಾಸಿಗರಿಗೂ ನಿರ್ಬಂಧ ವಿಧಿಸಿರುವ ಹಿನ್ನೆಲೆ ಕರಾವಳಿ ಆರ್ಥಿಕತೆಗೂ ಹೊಡೆತ ಬಿದ್ದಂತಾಗಿದೆ.

    ಶುಚಿಗೊಳಿಸಲು ದುಬಾರಿ ವೆಚ್ಚ: ಒಂದು ವೇಳೆ ಸಮುದ್ರದಲ್ಲಿ ತೈಲ ಸೋರಿಕೆ ಸಂಭವಿಸಿದ್ದರೆ, ಭಾರತೀಯ ಕರಾವಳಿ ಕಾವಲು ಪಡೆಗಳು ಪ್ರಸರಣಕಾರಕಗಳು ಮತ್ತು ಬೂಮ್‌ಗಳನ್ನು (ತೈಲವನ್ನು ಹೀರಿಕೊಳ್ಳುವ ವಸ್ತು) ಬಳಸಿಕೊಂಡು ಶುಚಿಗೊಳಿಸುತ್ತವೆ. ಆದರೆ ಇದಕ್ಕೆ ದುಬಾರಿ ವೆಚ್ಚ, ಸಮಯವೂ ಬೇಕಾಗುತ್ತದೆ.

    ಆರೋಗ್ಯ ಸಮಸ್ಯೆ: ತೈಲ ಆವಿ ಅಥವಾ ಕಲುಷಿತ ಸಮುದ್ರಾಹಾರಕ್ಕೆ ಒಡ್ಡಿಕೊಳ್ಳುವುದರಿಂದ ಉಸಿರಾಟದ ಸಮಸ್ಯೆಗಳು, ಚರ್ಮದ ರೋಗ ಅಥವಾ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ ಎನ್ನುತ್ತಾರೆ ತಜ್ಞರು.

    ಇತಿಹಾಸದಲ್ಲೇ ಅತಿದೊಡ್ಡ ತೈಲ ಸೋರಿಕೆ ದುರಂತಗಳಾವುವು?
    ಡೀಪ್ ವಾಟರ್ ಹರೈಸನ್ (ಗಲ್ಫ್ ಆಫ್ ಮೆಕ್ಸಿಕೋ, ಏಪ್ರಿಲ್ 20-ಜುಲೈ 15, 2010): ಡೀಪ್ ವಾಟರ್ ಹರೈಸನ್ ಆಫ್‌ಶೋರ್ ಡ್ರಿಲ್ಲಿಂಗ್ ರಿಗ್ (ತೈಲ ತೆಗೆಯುವ ಯಂತ್ರೋಪಕರಣ ಘಟಕ) ಸ್ಫೋಟಗೊಂಡ ನಂತರ ಸುಮಾರು 206 ಮಿಲಿಯನ್ ಗ್ಯಾಲನ್‌ಗಳು, ಅಂದರೆ 4.9 ಮಿಲಿಯನ್ ಬ್ಯಾರೆಲ್‌ನಷ್ಟು ತೈಲ ನೀರಿನಲ್ಲಿ ಸೋರಿಕೆಯಾಗಿತ್ತು. ಈ ಘಟನೆಯಲ್ಲಿ 11 ಕಾರ್ಮಿಕರು ಸಾವನ್ನಪ್ಪಿದರು. ಇದು ಗಲ್ಫ್ ಕರಾವಳಿ ಪರಿಸರ ವ್ಯವಸ್ಥೆಗಳನ್ನು ಸಾಕಷ್ಟು ಹಾನಿಗೊಳಿಸಿತ್ತು. ಡಾಲ್ಫಿನ್‌, ಆಮೆಯಂತಹ ಸಾವಿರಾರು ಸಮುದ್ರ ಪ್ರಾಣಿಗಳನ್ನ ಕೊಂದು ಮೀನುಗಾರಿಕೆಯನ್ನೂ ನಾಶಪಡಿಸಿತ್ತು. ಲೂಸಿಯಾನ, ಮಿಸ್ಸಿಸ್ಸಿಪ್ಪಿ ಮತ್ತು ಫ್ಲೋರಿಡಾದಲ್ಲಿ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿತ್ತು. ಸಮುದ್ರದಲ್ಲಿ ಇದರ ಶುದ್ಧೀಕರಣಕ್ಕೆ 65 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಹಣ ವಿನಿಯೋಗಿಸಲಾಗಿತ್ತು.

    ಗಲ್ಫ್ ಯುದ್ಧ ತೈಲ ಸೋರಿಕೆ (ಪರ್ಷಿಯನ್ ಕೊಲ್ಲಿ, ಜನವರಿ 19-28, 1991): 1991 ರಲ್ಲಿ ಪರ್ಷಿಯನ್ ಗಲ್ಫ್ ಯುದ್ಧದ ವೇಳೆ ಅಮೆರಿಕ ಮಿಲಿಟರಿ ಕಾರ್ಯಾಚರಣೆಗಳಿಗೆ ಅಡ್ಡಿಯಾಗಲು ಇರಾಕಿ ಪಡೆಗಳು ಕುವೈತ್‌ನ ಸೀ ಐಲ್ಯಾಂಡ್ ಟರ್ಮಿನಲ್ ಮತ್ತು ಟ್ಯಾಂಕರ್‌ಗಳಿಂದ ಗಲ್ಫ್ ಯುದ್ಧದ ಸಮಯದಲ್ಲಿ ಉದ್ದೇಶಪೂರ್ವಕವಾಗಿ ತೈಲವನ್ನು ಸಮುದ್ರಕ್ಕೆ ಸೋರಿಕೆ ಮಾಡಿದ್ದವು. ಸುಮಾರು 240-336 ಮಿಲಿಯನ್ ಗ್ಯಾಲನ್‌ಗಳು, ಅಂದರೆ, 6-8 ಮಿಲಿಯನ್ ಬ್ಯಾರೆಲ್‌ ತೈಲ ಸೋರಿಕೆಯಾಗಿತ್ತು. ಇದು ಇದುವರೆಗಿನ ಅತಿದೊಡ್ಡ ಉದ್ದೇಶಪೂರ್ವಕ ತೈಲ ಸೋರಿಕೆ ಘಟನೆಯಾಗಿದೆ.

    ಇಕ್ಸ್ಟಾಕ್-i (ಗಲ್ಫ್ ಆಫ್ ಮೆಕ್ಸಿಕೋ, ಜೂನ್ 3, 1979–ಮಾರ್ಚ್ 23, 1980): 1973ರ ಜೂನ್‌ 3ರಂದು ಮೆಕ್ಸಿಕೋದ ಕ್ಯಾಂಪೇಚೆ ಕೊಲ್ಲಿ ಪ್ರದೇಶದಲ್ಲಿರುವ ಕಡಲಾಚೆಯ ಬಾವಿಯಲ್ಲಿ ಸಂಭವಿಸಿದ ತೈಲ ಸೋರಿಕೆ ದುರಂತವಾಗಿದೆ. ಒಟ್ಟು 140 ಮಿಲಿಯನ್ ಗ್ಯಾಲನ್‌ಗಳು ಅಂದ್ರೆ ಸುಮಾರು 3.3 ಮಿಲಿಯನ್ ಬ್ಯಾರೆಲ್‌ನಷ್ಟು ತೈಲ ಹಂತಹಂತವಾಗಿ 10 ತಿಂಗಳ ಕಾಲ ಸೋರಿಕೆಯಾಗಿತ್ತು. ಇದು ಇದುವೆರೆಗಿನ ದೀರ್ಘಶ್ರೇಣಿಯ ತೈಲ ಸೋರಿಕೆಯಾಗಿದೆ.

    ಅಟ್ಲಾಂಟಿಕ್ ಎಂಪ್ರೆಸ್ (ಆಫ್ ಟೊಬಾಗೋ, ಜುಲೈ 19, 1979): ಗ್ರೀಕ್ ಟ್ಯಾಂಕರ್ ಅಟ್ಲಾಂಟಿಕ್ ಎಂಪ್ರೆಸ್ ಟ್ರಿನಿಡಾಡ್ ಮತ್ತು ಟೊಬಾಗೋ ಬಳಿ ಏಜಿಯನ್ ಕ್ಯಾಪ್ಟನ್ ಎಂಬ ಮತ್ತೊಂದು ಹಡಗಿಗೆ ಡಿಕ್ಕಿ ಹೊಡೆದು, ಅಂದಾಜು 88 ಮಿಲಿಯನ್ ಗ್ಯಾಲನ್‌ಗಳಷ್ಟು ಕಚ್ಚಾ ತೈಲ ಸೋರಿಕೆಯಾಗಿತ್ತು. ಎರಡೂ ಹಡಗುಗಳಿಗೆ ಬೆಂಕಿ ಹೊತ್ತಿಕೊಂಡು 27 ಸಿಬ್ಬಂದಿ ಸಜೀವದಹನವಾಗಿದ್ದರು. ಆದ್ರೆ ಹೆಚ್ಚಿನ ಪ್ರಮಾಣದ ತೈಲ ಬೆಂಕಿಗೆ ಆಹುತಿಯಾದ್ದರಿಂದ ಕರಾವಳಿ ಪ್ರದೇಶದ ಮೇಲೆ ಪರಿಣಾಮ ಬೀರದಿದ್ದರೂ, ಸಮುದ್ರ ಜೀವರಾಶಿಗಳ ಮೇಲೆ ಪರಿಣಾಮ ಬೀರಿತ್ತು.

    ಅಮೋಕೊ ಕ್ಯಾಡಿಜ್ (ಬ್ರಿಟಾನಿ, ಫ್ರಾನ್ಸ್, ಮಾರ್ಚ್ 16, 1978): ಲೈಬೀರಿಯನ್-ನೋಂದಾಯಿತ ಸೂಪರ್‌ಟ್ಯಾಂಕರ್ ಬಿರುಗಾಳಿಯ ಸಮಯದಲ್ಲಿ ಬ್ರಿಟಾನಿಯ ಬಳಿ ನೆಲಕ್ಕೆ ಅಪ್ಪಳಿಸಿ ತುಂಡಾಗಿತ್ತು. ಇದರಿಂದ ಅದರಲ್ಲಿದ್ದ ಸಂಪೂರ್ಣ ಕಚ್ಚಾ ತೈಲ ಸೋರಿಕೆ ಆಗಿತ್ತು. 68.7 ಮಿಲಿಯನ್ ಗ್ಯಾಲನ್‌ಗಳಷ್ಟು ತೈಲವು ನೀರಿನಲ್ಲಿ ಚೆಲ್ಲಿ, 200 ಮೈಲುಗಳಷ್ಟು ಫ್ರೆಂಚ್ ಕರಾವಳಿ ಪ್ರದೇಶಕ್ಕೆ ಹಾನಿಯುಂಟು ಮಾಡಿತ್ತು. 20,000 ಸಮುದ್ರ ಪಕ್ಷಿಗಳು ಸಾವನ್ನಪ್ಪಿದ್ದವು. ಈ ತೈಲ ಸೋರಿಕೆಯನ್ನು ಶುಚಿಗೊಳಿಸಲು 100 ಶತಕೋಟಿ ಡಾಲರ್‌ ವೆಚ್ಚ ವಿನಿಯೋಗಿಸಲಾಯಿತು. ಜೊತೆಗೆ ತಿಂಗಳುಗಳ ಕಾಲ ಸಮಯ ಬೇಕಾಯಿತು.

  • ಭೂ ಕಬಳಿಸುತ್ತಾ ಬರುತ್ತಿದೆ ಸಮುದ್ರ; ಕಡಲಿನ ಮುಂದೆ ತಾಪಃಹಾರ ಮಂತ್ರ ಪಠಣಕ್ಕೆ ವೇದಿಕೆ ಸಜ್ಜು

    ಭೂ ಕಬಳಿಸುತ್ತಾ ಬರುತ್ತಿದೆ ಸಮುದ್ರ; ಕಡಲಿನ ಮುಂದೆ ತಾಪಃಹಾರ ಮಂತ್ರ ಪಠಣಕ್ಕೆ ವೇದಿಕೆ ಸಜ್ಜು

    ಉಡುಪಿ: ಕರ್ನಾಟಕ ಕರಾವಳಿಗೆ ಅರಬ್ಬೀ ಸಮುದ್ರದ ಆತಂಕ ಹೆಚ್ಚಾಗಿದ್ದು, ಭೂಭಾಗವನ್ನು ಕಬಳಿಸುತ್ತಾ ಬರುತ್ತಿದೆ ಸಮುದ್ರದ ನೀರು. ಸಮುದ್ರದ ತಾಪ ಕಡಿಮೆ ಮಾಡಲು ವಿಷ್ಣುವಿನ ಆರಾಧನೆಗೆ ವೇದಿಕೆ ಸಜ್ಜಾಗಿದೆ.

    ಜನವರಿ 26ರ ಸಂಜೆ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಂಪು ಗುಂಪಾಗಿ ವಿಷ್ಣು ಸಹಸ್ರನಾಮ ಪಠಣ ಮಾಡುವ ಅಭಿಯಾನ ಕೈಗೊಳ್ಳಲಾಗಿದೆ. ಈಗಾಗಲೇ ಸಮಿತಿಯನ್ನು ರಚನೆ ಮಾಡಲಾಗಿದ್ದು, ಕಡಲ ತೀರದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

    ವಿಷ್ಣು ಸಹಸ್ರನಾಮವನ್ನು ತಾಪಃಹಾರ ಎಂದು ಕರೆಯಲಾಗುತ್ತದೆ. ದೇಹದ ತಾಪ ಎಂದರೆ, ಜ್ವರ ಹೆಚ್ಚಾದಾಗ ವಿಷ್ಣು ಸಹಸ್ರನಾಮ ಆ ತಾಪಕ್ಕೆ ಆಹಾರ. ಸಾಮೂಹಿಕ ವಿಷ್ಣು ಸಹಸ್ರನಾಮ ಹೇಳಿದರೆ ತಪಸ್ ಶಕ್ತಿಯಿಂದ ಮಂತ್ರಶಕ್ತಿಯಿಂದ ಕಡಲಿನ ಅಬ್ಬರವು ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ವೇದ ಕೃಷಿಕ ಕೆ.ಎಸ್ ನಿತ್ಯಾನಂದರ ಮಾರ್ಗದರ್ಶನದಲ್ಲಿ ಮೂರನೇ ಬಾರಿಗೆ ಅಭಿಯಾನ ಕರಾವಳಿ‌‌ ತೀರದಲ್ಲಿ ನಡೆಯಲಿದೆ. ಮರವಂತೆ ಕಡಲ ಕಿನಾರೆಯಲ್ಲಿ ಈ ಪ್ರಯೋಗ ಈ ಹಿಂದೆ ಯಶಸ್ವಿಯಾಗಿದೆಯಂತೆ.

    ಏಕಕಾಲದಲ್ಲಿ 108 ಜನರ ಗುಂಪಿನಿಂದ 108 ಸ್ಥಳಗಳಲ್ಲಿ ವಿಷ್ಣು ಸಹಸ್ರನಾಮ ಕೇಳಿಬರಲಿದೆ. ಎಲ್ಲಾ ಗುಂಪುಗಳು ಆರು ಬಾರಿ ಮಂತ್ರ ಹೇಳಿದರೆ, ಮಹಾಭಿಯಾನದಲ್ಲಿ ಸುಮಾರು 18 ಸಾವಿರ ಮಂದಿ ಭಾಗವಹಿಸುತ್ತಾರೆ. 72 ಸಾವಿರ ಅಕ್ಷರ ಇರುವ ವಿಷ್ಣುಸಹಸ್ರನಾಮದಿಂದ ಶಕ್ತಿ ನಿರ್ಮಾಣವಾಗಲಿದೆ. ಕಡಲ ಕೊರೆತ ತಡೆಯಲು, ಹೊಸ ತಂತ್ರಜ್ಞಾನ, ಸಮುದ್ರಕ್ಕೆ ತಡೆಗೋಡೆ ಹೀಗೆ ಈಗಾಗಲೇ ಸರ್ಕಾರಗಳು ನೂರಾರು ಕೋಟಿ ಸುರಿದಾಗಿದೆ. ಇದೀಗ ರೂಪಾಯಿ ಖರ್ಚಿಲ್ಲದ ಸಮುದ್ರನ ಅಬ್ಬರ ತಂಪಾಗಿಸುವ ಪ್ರಯತ್ನಕ್ಕೆ ಆಸ್ತಿಕ ಸಮಾಜ ಮುಂದಾಗಿದೆ.

  • ಅಲೆ ಅಬ್ಬರಕ್ಕೆ ಸಮುದ್ರದಲ್ಲಿ ಸಿಲುಕಿಕೊಂಡ ಮಲ್ಪೆ ಬೋಟ್

    ಅಲೆ ಅಬ್ಬರಕ್ಕೆ ಸಮುದ್ರದಲ್ಲಿ ಸಿಲುಕಿಕೊಂಡ ಮಲ್ಪೆ ಬೋಟ್

    ಕಾರವಾರ: ಅರಬ್ಬೀ ಸಮುದ್ರದಲ್ಲಿ (Arabian Sea) ವಾಯುಭಾರ ಕುಸಿತದಿಂದ ಮೀನುಗಾರಿಕೆಗೆ (Fishing) ತೆರಳಿದ್ದ ಮಲ್ಪೆ ಬೋಟ್‌ಗೆ (Malpe Boat) ಭಾರೀ ಅಲೆಗಳ ಕಾರಣದಿಂದ ಹಾನಿಯಾಗಿ ಸಮುದ್ರಭಾಗದಲ್ಲಿ ಸಿಲುಕಿಕೊಂಡಿದೆ.

    ಭಾರೀ ಅಲೆಗಳ ಕಾರಣದಿಂದ ಮಲ್ಪೆ ಮೂಲದ ಬೋಟ್ ಫ್ಯಾನ್‌ಗೆ ಮೀನಿನ ಬಲೆ ಸಿಲುಕಿತ್ತು. ಬಲೆ‌ ಸಿಲುಕಿಕೊಂಡ ಕಾರಣ ಮುಂದೆ ಸಾಗಲಾಗದೇ ಮುಳುಗುವ ಸ್ಥಿತಿಯಲ್ಲಿದ್ದ ಬೋಟನ್ನು ಕೂಡಲೇ ಮೀನುಗಾರರನ್ನು ರಕ್ಷಿಸಿ ಭಟ್ಕಳ ಮೂಲದ ಬೋಟ್‌ಗೆ ಹಗ್ಗ ಕಟ್ಟಿ ಎಳೆದು ತರಲಾಗುತ್ತಿತ್ತು. ಇದನ್ನೂ ಓದಿ: ಬಿಜೆಪಿಗೆ ರವೀಂದ್ರ ಜಡೇಜಾ ಸೇರ್ಪಡೆ

    ತೀರ ಪ್ರದೇಶಕ್ಕೆ ಎಳೆದು ತರುವ ಮುನ್ನವೇ ಹಗ್ಗ ತುಂಡಾಗಿ ಭಟ್ಕಳದ (Bhatkal) ಹೆಬಳೆ ಪಂಚಾಯತ್‌ನ ತೆಂಗಿನಗುಂಡಿ ವ್ಯಾಪ್ತಿಯ ಸಮುದ್ರ ತೀರದ ಕಲ್ಲಿನ ರಾಶಿಯಲ್ಲಿ ಸದ್ಯ ಬೋಟ್‌ ಸಿಲುಕಿಕೊಂಡಿದೆ.

    ಅಲೆಗಳ ಅಬ್ಬರ ಹೆಚ್ಚಾಗ್ಗಿರುವುದರಿಂದ ಬೋಟ್‌ ಅನ್ನು ಹೊರತರಲಾರದೇ ಹಾಗೆಯೇ ಬಿಡಲಾಗಿದೆ.

  • ಸಸಿಹಿತ್ಲು ಬೀಚ್‍ನಲ್ಲಿ ಕಡಲಬ್ಬರದ ಅಲೆಗಳ ಜೊತೆ ಸರ್ಫರ್‌ಗಳ ಕಾದಾಟ!

    ಸಸಿಹಿತ್ಲು ಬೀಚ್‍ನಲ್ಲಿ ಕಡಲಬ್ಬರದ ಅಲೆಗಳ ಜೊತೆ ಸರ್ಫರ್‌ಗಳ ಕಾದಾಟ!

    – ದೇಶ-ವಿದೇಶಗಳಿಂದ ಬಂದ ಸರ್ಫರ್ ಗಳಿಂದ ಸಾಹಸ

    ಮಂಗಳೂರು: ಸದ್ಯ ಕಡಲನಗರಿ ಮಂಗಳೂರಿನಲ್ಲಿ ಸರ್ಫರ್ ಗಳದ್ದೇ ಹವಾ. ನಗರದ ಹೊರವಲಯದ ಸಸಿಹಿತ್ಲು ಬೀಚ್ ನಲ್ಲಿ (Sasihitlu Beach) ಸಾಹಸ ಲೋಕವೇ ನಿರ್ಮಾಣವಾಗಿದೆ. ಅರಬ್ಬೀ ಸಮುದ್ರದ (Arabian Sea) ರಕ್ಕಸ ಅಲೆಗಳಿಗೆ ಸಾಹಸಿಗಳು ಸವಾಲೆಸೆಯುತ್ತಿದ್ದಾರೆ.

    ಹೌದು. ಭಾರತ ಸರ್ಫಿಂಗ್ ಫೆಡರೇಶನ್, ಸರ್ಫಿಂಗ್ ಸ್ವಾಮಿ ಫೌಂಡೇಶನ್ ಮತ್ತು ಮಂತ್ರ ಸರ್ಫ್ ಕ್ಲಬ್ ಸಹಯೋಗದಲ್ಲಿ ಮಂಗಳೂರಿನಲ್ಲಿ ಓಪನ್ ಸರ್ಫಿಂಗ್ ಚಾಂಪಿಯನ್ ಶಿಪ್ ಕೂಟ ನಡೆಯುತ್ತಿದೆ. ಸುಂದರ ಸಸಿಹಿತ್ಲು ಬೀಚ್ ನಲ್ಲಿ ಕರಾವಳಿ ರಾಜ್ಯಗಳ ಪ್ರಮುಖ ಸರ್ಫರ್ ಗಳು ಕಡಲ ಅಲೆಗಳಿಗೆ ಸವಾಲೆಸೆಯುತ್ತಿದ್ದಾರೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಪಾಂಡಿಚೇರಿಯ ಸರ್ಫರ್ ಗಳು ಈ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಿದ್ದಾರೆ.

    ಮೂರು ದಿನಗಳ ಕಾಲ ನಡೆಯುವ ಈ ಸರ್ಫಿಂಗ್ ಚಾಂಪಿಯನ್ ಶಿಪ್‍ನಲ್ಲಿ ಪುರುಷರ ವಿಭಾಗ, ಮಹಿಳೆಯರ ವಿಭಾಗ, 16 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದ ಸ್ಪರ್ಧೆ ನಡೆದಿದೆ. ಈ ಮೊದಲು ಮಾರ್ಚ್ ನಲ್ಲಿ ಕೇರಳದ ವರ್ಕಲದಲ್ಲಿ ಮೊದಲ ಸ್ಪರ್ಧೆ ನಡೆದಿತ್ತು. ಈ ಬಾರಿಯ ಎರಡನೇ ಸ್ಪರ್ಧೆ ಸಸಿಹಿತ್ಲುನಲ್ಲಿ ನಡೆಯುತ್ತಿದೆ ಎಂದು ಸಫಿರ್ಂಗ್ ಸ್ವಾಮಿ ಫೌಂಡೇಶನ್ ಸದಸ್ಯ ರಾಮ್ ಮೋಹನ್ ತಿಳಿಸಿದ್ದಾರೆ. ಇದನ್ನೂ ಓದಿ: ಎಲ್ಲಾ ಎಕ್ಸಿಟ್‌ ಪೋಲ್‌ಗಳು ಖಂಡಿತಾ ಸುಳ್ಳು: ಕೇಜ್ರಿವಾಲ್‌

    ಸರ್ಫರ್ ಗಳ ಸಾಹಸ ನೆರೆದಿದ್ದ ಪ್ರವಾಸಿಗರ ಗಮನಸೆಳೆದಿದೆ. ಈ ಸರ್ಫಿಂಗ್ ನೋಡಲೆಂದೇ ವಿದೇಶಗಳಿಂದ, ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಸಕ್ತರು ಬಂದಿದ್ದರು. ಸುಡು ಬಿಸಿಲ ನಡುವೆ ಭಾರೀ ಗಾತ್ರದ ಅಲೆಗಳ ನಡುವೆ ಸರ್ಫರ್ ಗಳ ಸಾಹಸವನ್ನು ಕಣ್ತುಂಬಿಕೊಂಡು ಭೇಷ್ ಅಂದಿದ್ದಾರೆ.

    ಒಟ್ಟಿನಲ್ಲಿ ಮುಂಗಾರಿಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಕಡಲು ಮುಂಗಾರಿನ ಸ್ವಾಗತಕ್ಕೆ ಸಜ್ಜಾಗಿದೆ.ಅಲೆಗಳ ಭಾರೀ ಏರಿಳಿತ ಕಣ್ಣಿಗೆ ಭಯತಂದರೆ,‌ ಸರ್ಫರ್ ಗಳ ಸಾಹಸ ಮನಸ್ಸಿಗೆ ಮುದ ನೀಡಿದೆ.

  • ಸಚಿವ ಶಾಂತಿ ಧರಿವಾಲ್‌ರನ್ನು ಅರಬ್ಬೀ ಸಮುದ್ರಕ್ಕೆ ಎಸೆಯಬೇಕು: ಗಜೇಂದ್ರ ಸಿಂಗ್ ಶೆಖಾವತ್

    ಸಚಿವ ಶಾಂತಿ ಧರಿವಾಲ್‌ರನ್ನು ಅರಬ್ಬೀ ಸಮುದ್ರಕ್ಕೆ ಎಸೆಯಬೇಕು: ಗಜೇಂದ್ರ ಸಿಂಗ್ ಶೆಖಾವತ್

    ಜೈಪುರ: ರಾಜಸ್ಥಾನ ಸಚಿವ ಶಾಂತಿ ಧರಿವಾಲ್ (Shanti Dhariwal) ವಿರುದ್ಧ ಕೆಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ವಾಗ್ದಾಳಿ ನಡೆಸಿದ್ದಾರೆ.

    ಬಿಕಾನೆರ್‌ನಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಧರಿವಾಲ್ ಅವರು ಕಳೆದ ವರ್ಷ ನೀಡಿದ್ದ ‘ಅತ್ಯಾಚಾರಿಗಳೊಂದಿಗೆ ಪುರುಷತ್ವ ಥಳಕು ಹಾಕಿಕೊಂಡಿದೆ’ ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಗರಂ ಆದರು. ಧರಿವಾಲ್ ಅವರನ್ನು ಅರಬ್ಬೀ ಸಮುದ್ರಕ್ಕೆ ಎಸೆಯಬೇಕು ಎಂದು ಕಿಡಿಕಾರಿದರು.

    ರಾಜಸ್ಥಾನವು ನಿಜವಾಗಿಯೂ ಪುರುಷರ ರಾಜ್ಯವಾಗಿದೆ. ಇಲ್ಲಿರುವ ಪುರುಷತ್ವದ ಕಾರಣಕ್ಕಾಗಿಯೇ ಹಿಂದುತ್ವ, ಸನಾತನ ಧರ್ಮವು ಇಂದು ಭಾರತದಲ್ಲಿ ಜೀವಂತವಾಗಿದೆ ಎಂದು ತಿಳಿಸಿದ್ದಾರೆ.

    ಪೃಥ್ವಿರಾಜ್ ಚೌಹಾಣ್, ಬಪ್ಪಾ ರಾವಲ್, ರಾಣಾ ಸಂಗ, ವೀರ್ ದುರ್ಗಾದಾಸ್ ರಾವ್ ಚಂದ್ರಸೇನ್, ಮಹಾರಾಣಾ ಪ್ರತಾಪ್ ಅವರು ರಾಜಸ್ಥಾನದಲ್ಲಿ ಹುಟ್ಟಿದಿದ್ದರೆ ಇಂದು ನಮ್ಮ ಹೆಸರು ಬೇರೆಯದೇ ಆಗಿರುತ್ತಿತ್ತು ಎಂದು ಶೇಖಾವತ್ ಹೇಳಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಹೊರಗಿನವರು ನಮ್ಮವರೂ ಮೋಸ ಮಾಡ್ತಾರೆ, ಅನುಭವವಿದೆ: ಪರಮೇಶ್ವರ್

    ರಾಜಸ್ಥಾನದ ಪುರುಷತ್ವಕ್ಕೆ ಕಪ್ಪು ಮಸಿ ಬಳಿಯುವ ಕೆಲಸವನ್ನು ಮಾಡಿದವರು ಯಾರು? ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಈ ಕೆಲಸ ಮಾಡಿದೆ. ಇಂದಿಗೂ ಧರಿವಾಲ್ ಅವರು ಸಂಪುಟದ ಭಾಗವಾಗಿರುವುದು ದುರದೃಷ್ಟಕರ. ಅವರು ಇನ್ನೂ ಸಚಿವರಾಗಿದ್ದಾರೆ. ಅವರನ್ನು ಹೊರಹಾಕಬೇಕು ಇಲ್ಲವೇ ಅರಬ್ಬಿ ಸಮುದ್ರಕ್ಕೆ ಎಸೆಯಬೇಕು ಎಂದು ಶೇಖಾವತ್ ವಾಗ್ದಾಳಿ ನಡೆಸಿದರು.

    ಧರಿವಾಲ್ ಹೇಳಿದ್ದೇನು..?: 2022ರ ಮಾರ್ಚ್ ನಲ್ಲಿ ರಾಜ್ಯ ವಿಧಾನಸಭೆಯಲ್ಲಿ ಅತ್ಯಾಚಾರ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ರಾಜಸ್ಥಾನ ಪುರುಷರ ಪ್ರದೇಶ ಎಂದು ಹೇಳಿಕೆ ನೀಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿ- 9 ಮಂದಿಯ ರಕ್ಷಣೆ

    ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿ- 9 ಮಂದಿಯ ರಕ್ಷಣೆ

    ಉಡುಪಿ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಪಲ್ಟಿಯಾಗಿದ್ದು, 9 ಮಂದಿ ಮೀನುಗಾರರ (Fishermen Rescued) ರಕ್ಷಣೆ ಮಾಡಲಾಗಿದೆ.

    ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಪಲ್ಟಿಯಾಗಿದೆ. ಅದೃಷ್ಟವಶಾತ್ ದೋಣಿಯಲ್ಲಿದ್ದ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ. ಉಪ್ಪುಂದ ತಾರಾಪತಿಯಿಂದ ಬೆಳಗ್ಗೆ ದೋಣಿ ಮೀನುಗಾರಿಕೆಗೆ ತೆರಳಿತ್ತು. ಪುಂಡಲೀಕ ಅವರ ಒಡೆತನ ಶ್ರೀ ದುರ್ಗಾಪರಮೇಶ್ವರಿ ಹೆಸರಿನ ದೋಣಿ ಇದಾಗಿದ್ದು, 9 ಮಂದಿ ಮೀನುಗಾರರು ತೆರಳಿದ್ರು. ಇದನ್ನೂ ಓದಿ: ನಿನ್ನ ರಕ್ತ ಕುಡಿಯುತ್ತೇನೆಂದು ಗೆಳೆಯನ ಕುತ್ತಿಗೆಗೆ ಕಚ್ಚಿದವ ಹೆಣವಾದ!

    5 ನಾಟಿಕಲ್ ಮೈಲುಗಳ ದೂರದಲ್ಲಿ ದೋಣಿ ಪಲ್ಟಿಯಾಗಿದ್ದು, ಸಮೀಪದ ದೋಣಿಗಳಿಗೆ ಮಾಹಿತಿ ರವಾನೆ ಹಿನ್ನೆಲೆಯಲ್ಲಿ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಅಪಘಾತಕ್ಕೀಡಾದ ದೋಣಿಯಲ್ಲಿದ್ದ ನೀರನ್ನು ಖಾಲಿ ಮಾಡಿ ಬಳಿಕ ದೋಣಿಯನ್ನು ಮರವಂತೆ ಬಂದರಿಗೆ ರವಾನೆ ಮಾಡಲಾಗಿದೆ.

    ಅಪಘಾತದಲ್ಲಿ ದೋಣಿಯಲ್ಲಿದ್ದ ಬಲೆ, ಇಂಜಿನ್ ಹಾನಿಯಾಗಿದ್ದು, ಒಟ್ಟು 2 ಲಕ್ಷಕ್ಕೂ ಅಧಿಕ ನಷ್ಟವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರಾವಳಿಯಿಂದ 640 ಕಿ.ಮೀ ದೂರದಲ್ಲಿರೋ ಬಿಪರ್ಜೋಯ್ ಚಂಡಮಾರುತ – ಕರ್ನಾಟಕ ಸೇರಿ 3 ರಾಜ್ಯಗಳಿಗೆ ಅಲರ್ಟ್

    ಕರಾವಳಿಯಿಂದ 640 ಕಿ.ಮೀ ದೂರದಲ್ಲಿರೋ ಬಿಪರ್ಜೋಯ್ ಚಂಡಮಾರುತ – ಕರ್ನಾಟಕ ಸೇರಿ 3 ರಾಜ್ಯಗಳಿಗೆ ಅಲರ್ಟ್

    ನವದೆಹಲಿ: ಅರಬ್ಬೀ ಸಮುದ್ರದ (Arabian Sea) ಕರಾವಳಿ (Coastal) ಭಾಗದಲ್ಲಿ ಭಾರೀ ಆತಂಕ ಮೂಡಿಸಿರುವ ಬಿಪರ್ಜೋಯ್ ಚಂಡಮಾರುತ (Cyclone Biparjoy) ಮುಂದಿನ 24 ಗಂಟೆಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದ್ದು ಉತ್ತರ ಈಶಾನ್ಯದೆಡೆಗೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ತಿಳಿಸಿದೆ.

    ಪ್ರಸ್ತುತ ಚಂಡಮಾರುತ ಗೋವಾದಿಂದ (Goa) ಪಶ್ಚಿಮಕ್ಕೆ 690 ಕಿ.ಮೀ, ಮುಂಬೈನ ಪಶ್ಚಿಮ-ನೈಋತ್ಯಕ್ಕೆ 640 ಕಿ.ಮೀ ಹಾಗೂ ಪೋರಬಂದರ್‌ನಿಂದ ನೈಋತ್ಯಕ್ಕೆ 640 ಕಿ.ಮೀ ದೂರದಲ್ಲಿ ಇದ್ದು, ಗಂಟೆಗೆ 145 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಚಂಡಮಾರುತ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಹಾಗೂ ಬಲವಾದ ಗಾಳಿಯನ್ನು ಉಂಟುಮಾಡುತ್ತದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.

    ಶನಿವಾರ ಹಾಗೂ ಭಾನುವಾರ ಬಿಪರ್ಜೋಯ್ ಚಂಡಮಾರುತದ ಅಬ್ಬರ ಜೋರಾಗಲಿದೆ. ಗುಜರಾತ್, ಮಹಾರಾಷ್ಟ್ರದ ಕರಾವಳಿಯಲ್ಲಿ ಉಬ್ಬರದ ಭೀತಿಯಿದೆ. ರಾಜ್ಯ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಮಹಾರಾಷ್ಟ್ರ ಹಾಗೂ ಗುಜರಾತ್ ಕರಾವಳಿ ಭಾಗಗಳಲ್ಲಿ ಹೆಚ್ಚಿನ ಪ್ರಭಾವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಶಕ್ತಿ ಯೋಜನೆಗೆ ಭಾನುವಾರ ಚಾಲನೆ- ಬಸ್ ಕಂಡಕ್ಟರ್ ಆಗಲಿದ್ದಾರೆ ಸಿದ್ದರಾಮಯ್ಯ

    ಚಂಡಮಾರುತದಿಂದಾಗಿ ಜೂನ್ 10, 11 ಹಾಗೂ 12ರಂದು ಗಾಳಿಯ ವೇಗ ಗಂಟೆಗೆ 45-55 ಕಿ.ಮೀಗೆ ಏರುವ ಸಾಧ್ಯತೆಯಿದೆ. ಇದರಿಂದ ದಕ್ಷಿಣ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಲಘು ಮಳೆ ಹಾಗೂ ಗುಡುಗು ಸಹಿತ ಮಳೆ ಸುರಿಯಬಹುದು. ಇದನ್ನೂ ಓದಿ:  ಉಡುಪಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ

  • ಅರಬ್ಬೀ ಸಮುದ್ರದಲ್ಲಿ ದೋಣಿ ಮುಳುಗಡೆ – 12 ಮೀನುಗಾರರ ರಕ್ಷಣೆ

    ಅರಬ್ಬೀ ಸಮುದ್ರದಲ್ಲಿ ದೋಣಿ ಮುಳುಗಡೆ – 12 ಮೀನುಗಾರರ ರಕ್ಷಣೆ

    – 1.50 ಕೋಟಿ ರೂ. ಹಾನಿ

    ಕಾರವಾರ: ಅರಬ್ಬೀ ಸಮುದ್ರದಲ್ಲಿ (Arabian Sea) ಅಬ್ಬರದ ಗಾಳಿ ಹಾಗೂ ಅಲೆಗಳ ಹೊಡೆತಕ್ಕೆ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆಯಾಗಿದ್ದು (Boat Sinking) 12 ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ (Ankola) ತಾಲೂಕಿನಲ್ಲಿ ನಡೆದಿದೆ.

    ಮಂಗಳವಾರ ಅಂಕೋಲದ ಬೆಳ್ಳಂಬಾರಿನ ಕಡಲ ತೀರದಿಂದ ಅರಬ್ಬೀ ಸಮುದ್ರಕ್ಕೆ ಚಂದ್ರಾವತಿ ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಸುಭಾಷ್ ಖಾರ್ವಿ ಎಂಬವರಿಗೆ ಸೇರಿದ ಪರ್ಶಿಯನ್ ಬೋಟ್ ಇದಾಗಿತ್ತು. ಹವಾಮಾನ ವೈಪರಿತ್ಯದಿಂದಾಗಿ ಸಮುದ್ರದಲ್ಲಿ ಹೆಚ್ಚಿನ ಗಾಳಿ ಹಾಗೂ ದೊಡ್ಡ ಅಲೆಗೆ ಬೋಟ್‌ನ ತಳಭಾಗದ ಫೈಬರ್ ಕಿತ್ತು ಹೋಗಿದ್ದು ಬಳಿಕ ಬೋಟ್‌ನ ಒಳಭಾಗಕ್ಕೆ ನೀರು ನುಗ್ಗಿ ಮುಳುಗಲು ಪ್ರಾರಂಭಿಸಿತು. ಇದನ್ನೂ ಓದಿ: ಕೆಮ್ಮಿನ ಸಿರಪ್ ರಫ್ತಿಗೂ ಮುನ್ನ ಪರೀಕ್ಷೆ ಕಡ್ಡಾಯಗೊಳಿಸಿದ ಕೇಂದ್ರ

    ತಕ್ಷಣ ಹತ್ತಿರದಲ್ಲಿದ್ದ ಇನ್ನೊಂದು ಬೋಟ್‌ನಲ್ಲಿದ್ದವರು ಮುಳುಗುತ್ತಿದ್ದ ಬೋಟ್‌ನಿಂದ 12 ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಬೋಟ್ ಮುಳುಗಡೆಯಿಂದಾಗಿ ಅಂದಾಜು 1.50 ಕೋಟಿ ರೂ. ಹಾನಿಯಾಗಿದೆ. ಇದನ್ನೂ ಓದಿ: ಯುಪಿಎಸ್‍ಸಿ ಫಲಿತಾಂಶ ಪ್ರಕಟ – ಲೇಡಿಸ್‍ಗೆ ಫಸ್ಟ್ 4 ರ‍್ಯಾಂಕ್

  • ಅರಬ್ಬೀ ಸಮುದ್ರದಲ್ಲಿ ಪರ್ಷಿಯನ್ ಬೋಟ್ ಮುಳುಗಡೆ – 17 ಮೀನುಗಾರರ ರಕ್ಷಣೆ

    ಅರಬ್ಬೀ ಸಮುದ್ರದಲ್ಲಿ ಪರ್ಷಿಯನ್ ಬೋಟ್ ಮುಳುಗಡೆ – 17 ಮೀನುಗಾರರ ರಕ್ಷಣೆ

    ಕಾರವಾರ: ಅರಬ್ಬೀ ಸಮುದ್ರದಲ್ಲಿ (Arabian Sea) ಬಂಡೆಕಲ್ಲಿಗೆ ತಾಗಿ ಮುಳುಗುತ್ತಿದ್ದ ಬೋಟ್‌ನಿಂದ (Boat Sinking) 17 ಜನ ಮೀನುಗಾರರ (Fishermen) ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ (Uttara Kannada) ಕುಮಟಾ ತಾಲೂಕಿನ ಸಮೀಪದ ಕಡ್ಲೆ ಬಳಿ ನಡೆದಿದೆ

    ಆಳ ಸಮುದ್ರದಲ್ಲಿ 17 ಜನ ಮೀನುಗಾರರು ಮೀನುಗಾರಿಕೆಗೆ (Fishing)ತೆರಳಿದ್ದ ಶ್ರೀದೇವಿ ಅನುಗ್ರಹ ಹೆಸರಿನ ಸುಧಾಕರ್ ಕಾರ್ವಿ ಅವರ ಮಾಲೀಕತ್ವದ ಪರ್ಶಿಯನ್ ಬೋಟ್ ಇದಾಗಿದ್ದು, ಮೀನು ಹಿಡಿದುಕೊಂಡು ವಾಪಸ್ಸಾಗುತ್ತಿದ್ದಾಗ ಘಟನೆ ನಡೆದಿದೆ. ಇದನ್ನೂ ಓದಿ: ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದ ಜೆಡಿಎಸ್ ಅಭ್ಯರ್ಥಿ ನಿಧನ

    ಕರಾವಳಿ ಕಾವಲು ಪಡೆ ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ಸಹಾಯದಿಂದ 17 ಜನ ಮೀನುಗಾರರನ್ನು ರಕ್ಷಿಸಿ ದಡಕ್ಕೆ ತರಲಾಗಿದೆ. ಬೋಟ್ ಮುಳುಗಡೆಯಾಗಿರುವುದರಿಂದ 10 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಹಾನಿ ಸಂಭವಿಸಿದೆ. ಘಟನೆಯಲ್ಲಿ ಎಲ್ಲಾ ಮೀನುಗಾರರ ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಬಿಜೆಪಿಗೆ ಸೇರ್ತಾರಾ ಸುಮಲತಾ ಅಂಬರೀಶ್?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k