ಬೀದರ್: ಅರಬ್ಬಿ ಸಮುದ್ರದಲ್ಲಿ ಶಕ್ತಿ (Shakti) ಚಂಡಮಾರುತದ ಹಿನ್ನೆಲೆ ಗಡಿಜಿಲ್ಲೆ ಬೀದರ್‌ನಲ್ಲಿ (Bidar) ವರುಣಾರ್ಭಟ ಜೋರಾಗಿದೆ.
ಸೋಮವಾರ (ಅ.6) ಬೆಳಗ್ಗೆಯಿಂದ ಬಿಟ್ಟು ಬಿಡದೇ ಧಾರಾಕಾರ ಮಳೆ ಸುರಿಯುತ್ತಿದ್ದು, ಗುಡುಗು, ಬಿರುಗಾಳಿ ಸಹಿತ ವರುಣ ಅಬ್ಬರಿಸುತ್ತಿದ್ದಾನೆ. ಬೀದರ್, ಹುಮ್ನಾಬಾದ್, ಬಸವ ಕಲ್ಯಾಣ, ಭಾಲ್ಕಿ, ಔರಾದ್ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.ಇದನ್ನೂ ಓದಿ: ಚಿತ್ರದುರ್ಗ | ರಸ್ತೆ ದಾಟುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್‌ಗೆ ಲಾರಿ ಡಿಕ್ಕಿ – ಗಂಭೀರ ಗಾಯ
ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲು ಪರದಾಡುವಂತಾಗಿದ್ದು, ಇತ್ತ ಕಚೇರಿ ಕೆಲಸಗಳಿಗೆ ಹೋಗಲು ಜನರು ಕೂಡ ಹೈರಾಣಾಗುತ್ತಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ ಇಂದು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಮುಂಬೈ: ಅರಬ್ಬಿ ಸಮುದ್ರದಲ್ಲಿ ಶಕ್ತಿ ಚಂಡಮಾರುತ (Shakti Cyclone) ಅಬ್ಬರ ಹಿನ್ನೆಲೆ ಮಹಾರಾಷ್ಟ್ರದಲ್ಲಿ (Maharashtra) ಭಾರೀ ಮಳೆ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಅಕ್ಟೋಬರ್ 3ರಿಂದ 7ರವರೆಗೆ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಬಲವಾದ ಗಾಳಿ, ಚಂಡಮಾರುತದ ಎಚ್ಚರಿಕೆ ನೀಡಿದ್ದು, ಮುಂಬೈ, ಥಾಣೆ, ಪಾಲ್ಘರ್, ರಾಯಗಢ, ರತ್ನಗಿರಿ, ಸಿಂಧುದುರ್ಗ ಸೇರಿದಂತೆ ಹಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಜೈಲಲ್ಲಿ ದರ್ಶನ್ ಸ್ಥಿತಿ ಕಂಡು ಪತ್ನಿ ವಿಜಯಲಕ್ಷ್ಮಿ ಕಣ್ಣೀರು
ಗುಜರಾತ್‌ನ ದ್ವಾರಕಾದಿಂದ ಸುಮಾರು 250 ಕಿ.ಮೀ ಪಶ್ಚಿಮ-ನೈಋತ್ಯಕ್ಕೆ ಚಂಡಮಾರುತ ಕೇಂದ್ರೀಕೃತವಾಗಿದೆ. ಇಂದು ಈ ಚಂಡಮಾರುತ ಇನ್ನಷ್ಟು ಬಲಗೊಳ್ಳಲಿದೆ. ಭಾರತೀಯ ಭೂಪ್ರದೇಶದ ಮೇಲೆ ಇದು ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ಗಂಟೆಗೆ 8 ಕಿ.ಮೀ. ವೇಗದಲ್ಲಿ ವಾಯುವ್ಯಕ್ಕೆ ಚಲಿಸುತ್ತಿದ್ದು, ಪಶ್ಚಿಮ-ನೈಋತ್ಯ ದಿಕ್ಕಿನಲ್ಲಿ ಮಧ್ಯ ಅರಬ್ಬಿ ಸಮುದ್ರದ ಕಡೆಗೆ ಸಾಗುವ ನಿರೀಕ್ಷೆಯಿದೆ. ನಾಳೆ ವೇಳೆಗೆ ಉತ್ತರ ಮತ್ತು ಪಕ್ಕದ ಮಧ್ಯ ಅರೇಬಿಯನ್ ಸಮುದ್ರದ ಮಧ್ಯ ಭಾಗಗಳನ್ನು ತಲುಪುವ ಸಾಧ್ಯತೆಯಿದೆ. ಗುಜರಾತ್ ತಲುಪುವ ಮುನ್ನ ಇದು ದುರ್ಬಲ ಆಗಬಹುದು. ಈ ಹಿನ್ನೆಲೆ ಮಳೆ ಹೊರತುಪಡಿಸಿ ಯಾವುದೇ ಆತಂಕ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದಿನಿಂದ ಜಾತಿಗಣತಿ ಸಮೀಕ್ಷೆ – 32 ಲಕ್ಷ ಮನೆ, ಎರಡು ವಾರಗಳ ಟಾರ್ಗೆಟ್
ಮುಂಬೈ: ಅರಬ್ಬಿ ಸಮುದ್ರದಲ್ಲಿ (Arabian Sea) ಮೀನುಗಾರರನ್ನು (Fisherman) ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮುಳುಗಿ (Boat Capsized) ಮೂವರು ನಾಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ (Maharashtra) ರಾಯಗಢ (Raigad) ಜಿಲ್ಲೆಯಲ್ಲಿ ನಡೆದಿದೆ.
ದೋಣಿ ಖಾಂಡೇರಿಯಿಂದ ಅಲಿಬಾಗ್ ಬಳಿಯ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ದೋಣಿ ಮಗುಚಿದೆ. ಕೂಡಲೇ ಎಚ್ಚೆತ್ತ ಮೀನುಗಾರರು ನೀರಿಗೆ ಹಾರಿದ್ದಾರೆ. 8 ಮಂದಿ ಮೀನುಗಾರರ ಪೈಕಿ 5 ಮಂದಿ ಈಜಿಕೊಂಡು ದಡ ಸೇರಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಮಳೆಯಬ್ಬರ – ಪಾಯ ಕುಸಿದು ಪಕ್ಕಕ್ಕೆ ವಾಲಿದ 4 ಅಂತಸ್ತಿನ ಕಟ್ಟಡ
ನಾಪತ್ತೆಯಾದವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ನಾಪತ್ತೆಯಾಗಿರುವ ಮೂವರು ಮೀನುಗಾರರನ್ನು ಪತ್ತೆಹಚ್ಚಲು ಪೊಲೀಸರು ಮತ್ತು ಸ್ಥಳೀಯ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಜೊತೆಗೆ ಡ್ರೋನ್‌ಗಳನ್ನು ಸಹ ನಿಯೋಜಿಸಲಾಗಿದೆ. ಇನ್ನು ಈಜಿ ದಡ ಸೇರಿದ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ನಂತೆಯೇ ಥಾಯ್ಲೆಂಡ್-ಕಾಂಬೋಡಿಯಾ ಯುದ್ಧ ನಿಲ್ಲಿಸಿದ್ದು ನಾನೇ: ಟ್ರಂಪ್
ಕಾರವಾರ: ಅರಬ್ಬಿ ಸಮುದ್ರದಲ್ಲಿ (Arabian Sea) ಮೀನುಗಾರಿಕೆ ನಡೆಸುತ್ತಿದ್ದ ಎರಡು ಬೋಟುಗಳು ಅಲೆಯ ಅಬ್ಬರಕ್ಕೆ ನೌಕಾದಳದ ವ್ಯಾಪ್ತಿ ಪ್ರದೇಶಕ್ಕೆ ಹೋಗಿದ್ದು, ನೌಕಾದಳದವರು ಎರಡು ಬೋಟುಗಳನ್ನು ವಶಕ್ಕೆ ಪಡೆದು ಆರು ಜನ ಮೀನುಗಾರರನ್ನು ಬಂಧಿಸಿದ್ದಾರೆ.
ಕಾರವಾರದ (Karwar) ಅರಗಾ ಬಳಿಯ ಸಮುದ್ರ ಭಾಗದಲ್ಲಿ ಘಟನೆ ನಡೆದಿದೆ. ಕಾರವಾರದ ಬೈತಕೋಲಿನ ರವಿ ನಾರಾಯಣ್ ಹರಿಕಾಂತ್ ಎಂಬವರಿಗೆ ಸೇರಿದ ಅರ್ಯಪರಮ್ ಎಂಬ ಬೋಟ್ ಹಾಗೂ ರಾಜು ವಾಮಂತ್ ತಾಂಡೇಲ್ ಎಂಬವರಿಗೆ ಸೇರಿದ ಓಂ ಶ್ರೀ ಆರ್ಯದುರ್ಗ ಎಂಬ ಹೆಸರಿನ ಬೋಟನ್ನು ನೌಕಾದಳದವರು ವಶಕ್ಕೆ ಪಡೆದಿದ್ದು, ಆರು ಜನ ಮೀನುಗಾರರನ್ನು ಬಂಧಿಸಿ ಕಾರವಾರ ಗ್ರಾಮೀಣ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ. ಇದನ್ನೂ ಓದಿ: ಉಡುಪಿ | ಹೆಂಡತಿ ಹೆಚ್ಚು ಮೊಬೈಲ್ ಬಳಸ್ತಾಳೆ ಅಂತ ಕಡಿದು ಕೊಂದ ಪತಿ!
ತಮ್ಮ ಬೋಟುಗಳು ಅಲೆಗಳ ಅಬ್ಬರಕ್ಕೆ ತೇಲೆ ನೌಕಾದಳದ ಸುಪರ್ಧಿಗೆ ಹೋಗಿದೆ. ಇದೀಗ ಬೋಟುಗಳು ಹಾಗೂ ಲಕ್ಷಾಂತರ ಮೌಲ್ಯದ ಬಲೆಗಳನ್ನು ನೌಕಾದಳದ ಅಧಿಕಾರಿಗಳು ವಶದಲ್ಲಿ ಇಟ್ಟುಕೊಂಡಿದ್ದಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದ್ದು, ಬೋಟುಗಳನ್ನು ಹಾಗೂ ಬಂಧಿಸಿದ ಮೀನುಗಾರರನ್ನು ಬಿಡುಗಡೆಗೊಳಿಸಬೇಕು ಎಂದು ಮೀನುಗಾರರು ಮನವಿ ಮಾಡಿದ್ದಾರೆ.
ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಮರಳುತ್ತಿದ್ದ ಬೋಟ್ ಸಮುದ್ರದಲ್ಲಿ ಕಲ್ಲಿಗೆ ತಾಗಿ ಮುಳುಗಡೆಯಾಗಿ ಆರು ಜನ ಮೀನುಗಾರರನ್ನು ರಕ್ಷಣೆ ಮಾಡಿದ ಘಟನೆ ಭಟ್ಕಳದ ಬಂದರು ಬಳಿ ನಡೆದಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರದ ಸುರೇಶ್ ಎಂಬುವರಿಗೆ ಸೇರಿದ ಬೋಟ್ ಬ್ರಹ್ಮಾವರದಿಂದ ಕುಮಟಾ ಭಾಗದಲ್ಲಿ ಮೀನುಗಾರಿಕೆ ನಡೆಸಿ ಭಟ್ಕಳ ಬಂದರಿಗೆ ಬರುತ್ತಿತ್ತು. ಮೀನನ್ನು ಇಳಿಸಲು ಬರುತ್ತಿದ್ದಾಗ ಭಟ್ಕಳ ಬಂದರು ಭಾಗದ ಸಮುದ್ರದಲ್ಲಿ ಬೋಟಿನ ತಳಭಾಗಕ್ಕೆ ಕಲ್ಲುಬಂಡೆ ಹೊಡೆದಿದೆ.
ಈ ವೇಳೆ ತಳಭಾಗದಲ್ಲಿ ಬೋಟ್ ಸೀಳುಬಿಟ್ಟು ನೀರು ಹೊಕ್ಕಿದ್ದು ಸಮುದ್ರದಲ್ಲೇ ಮುಳುಗಿದೆ. ಬೋಟಿನಲ್ಲಿ ಮೀನುಗಳು ಹಾಗೂ ಹಲವು ಸಾಮಾನುಗಳಿದ್ದು ಎಲ್ಲವೂ ನೀರುಪಾಲಾಗಿದ್ದು 50 ಲಕ್ಷ ರೂ. ಹೆಚ್ಚು ನಷ್ಟವಾಗಿದೆ. ರಕ್ಷಣೆಗೊಂಡ ಎಲ್ಲಾ ಮೀನುಗಾರರು ಸುರಕ್ಷಿತವಾಗಿದ್ದು ಭಟ್ಕಳ ಬಂದರಿನಲ್ಲಿ ಆಶ್ರಯ ಪಡೆದಿದ್ದಾರೆ.
ಮುಂಬೈ: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಅವರ ಚಿತಾ ಭಸ್ಮವನ್ನು (Ashes) ಅರಬ್ಬಿ ಸಮುದ್ರದಲ್ಲಿ (Arabian Sea) ವಿಸರ್ಜಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅನಾರೋಗ್ಯದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ (Breach Candy Hospital) ದಾಖಲಾಗಿದ್ದ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ (86) ಅ.9 ರಂದು ಕೊನೆಯುಸಿರೆಳೆದರು. ಅ.10 ರಂದು ಅಂತಿಮ ವಿಧಿವಿಧಾನಗಳನ್ನು ಮುಂಬೈನ (Mumbai) ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿತ್ತು. ಇದನ್ನೂ ಓದಿ: ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ
ಇದೀಗ ಅವರ ಆಸೆಯಂತೆ ಅವರ ಚಿತಾ ಭಸ್ಮವನ್ನು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸುವುದಾಗಿ ಟಾಟಾ ಕುಟುಂಬ ನಿರ್ಧಾರ ಕೈಗೊಂಡಿದೆ. ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ (Gate Way Of India) ಹಡಗಿನಲ್ಲಿ ಮೆರವಣಿಗೆಯ ಮೂಲಕ ಚಿತಾ ಭಸ್ಮವನ್ನು ವಿಸರ್ಜಿಸಲಾಗುವುದು. ಈ ಸಂದರ್ಭದಲ್ಲಿ ಅವರ ಕುಟುಂಬ, ಅವರ ಸ್ನೇಹಿತರು ಸೇರಿದಂತೆ ಇನ್ನಿತರರು ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರತನ್ ಟಾಟಾ ಮುಂಬೈ ನಗರದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಜೊತೆಗೆ ತಮ್ಮ ಜೀವನದ ಬಹುಪಾಲು ದಿನಗಳನ್ನು ಅವರು ಅಲ್ಲಿಯೇ ಕಳೆದಿದ್ದು, ಟಾಟಾ ಗ್ರೂಪ್ಸ್ (Tata Groups) ಎಂಬ ವ್ಯವಹಾರ ಸಾಮ್ರಾಜ್ಯಕ್ಕೆ ಮುಂಬೈನಲ್ಲಿ ಅಡಿಪಾಯ ಹಾಕಿದ್ದರು. ಅರಬ್ಬಿ ಸಮುದ್ರದ ನೀರು ಪ್ರಶಾಂತವಾದ ನೀರು. ಒಬ್ಬ ವ್ಯಕ್ತಿಗೆ ಅಂತಿಮ ವಿಶ್ರಾಂತಿಯನ್ನು ನೀಡುತ್ತದೆ ಎಂಬ ಅಭಿಪ್ರಾಯದೊಂದಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.ಇದನ್ನೂ ಓದಿ: ಭಾರತದಲ್ಲಿರುವ ಶೇಖ್ ಹಸೀನಾ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ
ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ (Arabian Sea) ವಾಯುಭಾರ ಕುಸಿತವಾದ ಹಿನ್ನೆಲೆ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯಾದ್ಯಂತ ಮುಂದಿನ 5 ದಿನಗಳ ಕಾಲ ಮಳೆಯಾಗುವ (Rain) ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ.
ಉತ್ತರ ಒಳನಾಡು, ದಕ್ಷಿಣ ಒಳನಾಡು, ಕಾರವಳಿ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇಂದು ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಬೆಳಗಾವಿ, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದನ್ನೂ ಓದಿ: ಬಾಂಗ್ಲಾ ಚುಕ್ಕಾಣಿ ಹಿಡಿಯಲಿದ್ದಾರೆ ಹಸೀನಾ ಕಟು ಟೀಕಾಕಾರ ಮೊಹಮ್ಮದ್ ಯೂನುಸ್
ಆಗಸ್ಟ್ ತಿಂಗಳಿನಲ್ಲಿ ರಾಜ್ಯದಲ್ಲಿ ವಾಡಿಕೆಯಂತೆ 22 ಸೆಂ.ಮೀ ಮಳೆಯಾಗಬೇಕು. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯಲ್ಲಿ ಆಗಸ್ಟ್ ತಿಂಗಳಲ್ಲಿ 82 ಸೆಂ.ಮೀ ಮಳೆಯಾಗುವ ನಿರೀಕ್ಷೆಯಿದೆ. ಟ್ರಫ್ ಅಥವಾ ವಾಯುಭಾರ ಕುಸಿತ ಉಂಟಾದರೆ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತದೆ. ಉತ್ತರ ಒಳನಾಡಿನಲ್ಲಿ 12 ಸೆಂ.ಮೀ ಮಳೆಯಾಗಬೇಕು. ಆದರೆ ನೀರಿಕ್ಷೆಗೂ ಮೀರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಇದನ್ನೂ ಓದಿ: ವಿಶ್ವದ ಅತಿದೊಡ್ಡ ಯುರೇನಿಯಂ ಗಣಿಗಾರಿಕೆಯನ್ನು ಆಸ್ಟ್ರೇಲಿಯಾ ನಿಷೇಧಿಸಿದ್ದೇಕೆ?
ದಕ್ಷಿಣ ಒಳನಾಡಿನಲ್ಲಿ 18 ಸೆಂ.ಮೀ ಮಳೆಯಾಗಬೇಕು. ಇದಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಇನ್ನು ಬೆಂಗಳೂರಿನಲ್ಲಿ 12 ಸೆಂ.ಮೀ ಮಳೆಯಾಗಬೇಕು. ಆದರೆ ಮಂಗಳವಾರ ಒಂದೇ ದಿನ 4 ಸೆಂ.ಮೀ ಮಳೆಯಾಗಿದ್ದು, ಇನ್ನೂ ಹೆಚ್ಚು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ಬಾಂಗ್ಲಾ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್ ಶಾಂತಿ ಪುರಸ್ಕೃತ ಮೊಹಮ್ಮದ್ ಯೂನುಸ್ ಆಯ್ಕೆ
ಉತ್ತರ ಕನ್ನಡ: ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಅನಾಹುತಗಳನ್ನ ಸೃಷ್ಟಿ ಮಾಡುತ್ತಿದೆ. ಜೊತೆಗೆ ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧವಾದ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅರಬ್ಬಿ ಸಮುದ್ರ (Arabian Sea) ತೀರ ಭಾಗದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಒಂದೆಡೆ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಮತ್ತೊಂದೆಡೆ ಸಮುದ್ರದಲ್ಲಿ ಅಲೆಗಳ ಅಬ್ಬರ ಇರುವ ಪರಿಣಾಮ ಬಂದರಿನಲ್ಲಿ ಮೀನುಗಾರಿಕಾ ಬೋಟುಗಳಿಗೆ ಲಂಗರು ಹಾಕಲಾಗಿದೆ. ಕರಾವಳಿ ಭಾಗದಲ್ಲಿ ಕಳೆದ ಎರಡು ದಿನದಿಂದ ಅಬ್ಬರದ ಮಳೆ ಸುರಿಯುತ್ತಿದೆ. ಹೆಚ್ಚಿನ ಮಳೆಯಾಗುವ ಸಾಧ್ಯತೆಯಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇದನ್ನೂ ಓದಿ: ಅಡ್ವಾಣಿ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದ ಮೋದಿ
ಆರು ದಿನಗಳ ಕಾಲ ಉತ್ತಮ ಮಳೆಯಾಗುವ ಸೂಚನೆ ನೀಡಿದೆ. ಹೀಗಾಗಿ ಜಿಲ್ಲಾಡಳಿತ ಸಹ ಸಮುದ್ರ ತೀರ ಭಾಗದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ. ಮೀನುಗಾರಿಕೆಗೂ ಸಹ ಎರಡು ತಿಂಗಳು ನಿಷೇಧ ಹೇರಲಾಗಿದೆ. ಉತ್ತಮ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಜಲಪಾತಗಳಲ್ಲಿ ಜೀವಕಳೆ ಬಂದಿದೆ. ಮಾಗೋಡು, ವಿಭೂತಿ ಜಲಪಾತ, ಬಂಗಾರದ ಕುಸುಮ ಜಲಪಾತಗಳಲ್ಲಿ ನೀರು ಹರಿದುಬರುತ್ತಿದ್ದು, ಇದೀಗ ಕಾರವಳಿ ತೀರಕ್ಕೆ ಬರುವ ಪ್ರವಾಸಿಗರನ್ನು ಜಲಪಾತದತ್ತ ಸೆಳೆಯುತ್ತಿದೆ. ನೂರಾರು ಪ್ರವಾಸಿಗರು ಕಡಲ ತೀರದಲ್ಲಿ ನಿರ್ಬಂಧವಿರುವ ಕಾರಣ ಜಿಲ್ಲೆಯ ಜಲಪಾತದತ್ತ ಮುಖ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಾಗ ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಆದರೆ ಈ ಬಾರಿ ಮಳೆಯಿಂದಾಗಿ ಜಲಸಾಹಸ ಕ್ರೀಡೆಗಳಿಗೆ ನಿಷೇಧ ಹೇರಲಾಗಿದೆ. ಹೀಗಾಗಿ ವೀಕೆಂಡ್, ರಜಾದಿನಗಳ ಮೋಜು ಮಸ್ತಿಗೆ ಬರುವವರು ಸಮುದ್ರ ತೀರ ಬಿಟ್ಟು ಜಲಪಾತದತ್ತ ಮುಖಮಾಡಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವುದರಿಂದ ಸದ್ಯದ ಮಟ್ಟಿಗೆ ಜಲಪಾತ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆ ಪ್ರಾರಂಭವಾಗಬೇಕಿದೆ. ಇದನ್ನೂ ಓದಿ: ಪೆನ್‌ಡ್ರೈವ್ ಹಂಚಿದವರು ತನಿಖಾಧಿಕಾರಿ ಎದುರೇ ಸಂಭ್ರಮಾಚರಣೆ ಮಾಡ್ತಾರೆ: ವಕೀಲ ಗೋಪಾಲಗೌಡ ಆರೋಪ
ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕರಾವಳಿ ಭಾಗದಲ್ಲಿ ಅಬ್ಬರದ ಗಾಳಿ ಜೊತೆ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ಭಟ್ಕಳದಲ್ಲಿ (Bhatkal) ಅರಬ್ಬಿ ಸಮುದ್ರದಲ್ಲಿ (Arabian Sea) ಮೀನುಗಾರಿಕೆಗೆ (Fishing) ತೆರಳಿದ್ದ ಬೋಟ್ ಮುಳುಗಡೆಯಾಗಿದೆ.
ಅಬ್ಬರದ ಮಳೆಗೆ ಓಂ ಗಣೇಶ್ ಹೆಸರಿನ ಮಹಾದೇವ ಖಾರ್ವಿ ಎಂಬವರಿಗೆ ಸೇರಿದ ಬೋಟ್ (Boat) ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ ನಾಲ್ಕು ಜನ ಮೀನುಗಾರರನ್ನು (Fishermen) ರಕ್ಷಣೆ ಮಾಡಲಾಗಿದೆ. ಘಟನೆಯಿಂದ ಲಕ್ಷಾಂತರ ರೂ. ಹಾನಿ ಸಂಭವಿಸಿದೆ. ಇದನ್ನೂ ಓದಿ: ನನ್ನ ಹೇಳಿಕೆಯಿಂದ ನೇಹಾ ಪೋಷಕರಿಗೆ ಬೇಸರವಾಗಿದ್ದರೆ ವಿಷಾದವಿರಲಿ: ಪರಮೇಶ್ವರ್
ಕಾರವಾರ: ಒಂದೆಡೆ ಸಮುದ್ರದ ಅಲೆಗಳನ್ನು ಸೀಳಿ ಶತ್ರುಗಳತ್ತ ಮುನ್ನುಗ್ಗುತ್ತಿರುವ ಕೋಸ್ಟ್ ಗಾರ್ಡ್ ಹಡಗು. ಮತ್ತೊಂದೆಡೆ ಶತ್ರುವನ್ನು ಗುರಿ ಇಟ್ಟು ಗುಂಡಿನ ದಾಳಿ ನಡೆಸುತ್ತಿರುವ ದೃಶ್ಯ. ಹೌದು, ಇದು ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ (Karwar) ಭಾಗದ ಅರಬ್ಬಿ ಸಮುದ್ರದಲ್ಲಿ (Arabian Sea) ನಡೆದ ಕಾರ್ಯಾಚರಣೆಯ ದೃಶ್ಯಗಳು. ಭಾರತೀಯ ತಟರಕ್ಷಣಾಪಡೆ (Coastal Defence) ತನ್ನ ಸಾಮರ್ಥ್ಯವನ್ನು ಅಣಕು ಕಾರ್ಯಾಚರಣೆ (Mock Operation) ಮೂಲಕ ತಾವೆಷ್ಟು ಸಮರ್ಥರು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.
ಇದಕ್ಕಾಗಿ ಕಾರವಾರದಲ್ಲಿರುವ ಕೋಸ್ಟ್ ಗಾರ್ಡ್ ತಟರಕ್ಷಕ ತಂಡದ ಹಡಗುಗಳಾದ ಐಸಿಜಿಎಸ್ ಕಸ್ತೂರ್ ಬಾ ಗಾಂಧಿ, ಐಸಿಜಿಎಸ್ ಸಾವಿತ್ರಿ ಬಾಯಿ ಪುಲೆ, ಐಸಿಜಿಎಸ್ ಸಿ-448, ಐಸಿಜಿಎಸ್ ವಿಕ್ರಮ್ ಕಾರ್ಯಾಚರಣೆಗಾಗಿ ಜನರನ್ನು ಹೊತ್ತುಕೊಂಡು ಸಮುದ್ರ ಭಾಗದ ಆರು ನಾಟಿಕಲ್ ಮೈಲು ದೂರದಲ್ಲಿ ಸಾಗಿ ತನ್ನ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿತು. ಜೊತೆಗೆ ತಾವು ನಿರ್ವಹಿಸುವ ಕರ್ತವ್ಯದ ಕುರಿತು ನೆರೆದಿದ್ದ ಜನರಿಗೆ ಅರಿವು ಮೂಡಿಸಿದರು. ಇದನ್ನೂ ಓದಿ: ಅಡ್ವಾಣಿಯನ್ನು ಬಿಜೆಪಿಯವರೇ ಮೂಲೆಗುಂಪು ಮಾಡಿದ್ರು, ಬುದ್ಧಿ ಬಂದ ಮೇಲೆ ‘ಭಾರತ ರತ್ನ’ ಕೊಟ್ಟಿದ್ದಾರೆ: ರಾಮಲಿಂಗಾ ರೆಡ್ಡಿ
ಫೆ.1ಕ್ಕೆ ಇಂಡಿಯನ್ ಕೋಸ್ಟ್ ಗಾರ್ಡ್ ಡೇ ಆಚರಣೆ ಹಿನ್ನೆಲೆ ಕೋಸ್ಟ್ ಗಾರ್ಡ್ ವತಿಯಿಂದ ಎರಡು ದಿನಗಳ ಕಾಲ ಈ ಅಣಕು ಕಾರ್ಯಾಚರಣೆ ಆಯೋಜಿಸಲಾಗಿತ್ತು. ಇಂಡಿಯನ್ ಕೋಸ್ಟ್ ಗಾರ್ಡ್ಸ್ ಯಾವ ರೀತಿಯಲ್ಲಿ ಭಾರತದ ಸಮುದ್ರ ಭಾಗದ ಸರಹದ್ದಿನಲ್ಲಿ ಪಹರೆ ಕಾಯುತ್ತೆ, ಸಮುದ್ರದಲ್ಲಿ ಮೀನುಗಾರರು ಅಪಾಯದಲ್ಲಿದ್ದಾಗ ಯಾವ ರೀತಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತೆ, ಸಮುದ್ರ ಭಾಗದಲ್ಲಿ ಯಾವುದಾದರು ಶಿಪ್ ಅಥವಾ ಬೋಟ್‌ಗಳಲ್ಲಿ ಅಗ್ನಿ ಅವಘಢ ನಡೆದರೆ, ಸಮುದ್ರದ ಲೂಟಿಕೋರರು ದಾಳಿಯನ್ನು ಯಾವ ರೀತಿ ಎದುರಿಸಲಾಗುತ್ತದೆ ಮುಂತಾದವುಗಳ ಬಗ್ಗೆ ಜನರಿಗೆ ಪ್ರಾತಕ್ಷಿಕೆ ಮೂಲಕ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಅಣಕು ಕಾರ್ಯಾಚರಣೆ ನಡೆಸಲಾಗಿತ್ತು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್‍ಗೆ ಕೋಲಾರದ ಮಹಿಳೆ ಆಯ್ಕೆ
ಕ್ಷಣಕ್ಷಣಕ್ಕೂ ವಿವಿಧೆಡೆ ನಡೆಯುವ ಕಾರ್ಯಾಚರಣೆಯ ಮಾಹಿತಿಯನ್ನು ಕೂಡಾ ಸಿಬ್ಬಂದಿ ಮೂಲಕ ಜನರು ಪಡೆದುಕೊಂಡರು. ಸಾಕಷ್ಟು ಬಾರಿ ಸಮುದ್ರದಾಳದಲ್ಲಿ ಸಿಲುಕಿದ್ದ ಮೀನುಗಾರರ ರಕ್ಷಣೆ ಮಾಡಿದ್ದಲ್ಲದೇ, ವಿದೇಶಗಳಿಂದ ಬರುವ ಸರಕು ಹಡಗುಗಳ ಮೇಲೆ ಲೂಟಿಕೋರರು ದಾಳಿ ನಡೆಸಿದಾಗಲೂ ಇಂಡಿಯನ್ ಕೋಸ್ಟ್ ಗಾರ್ಡ್ ಕೂಡಲೇ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು. ಇಂದು ನಡೆದ ಅಣಕು ಕಾರ್ಯಾಚರಣೆಯ ಮೂಲಕ ಇಂಡಿಯನ್ ಕೋಸ್ಟ್ ಗಾರ್ಡ್ ನಡೆಸಿದ ಆಪರೇಷನ್ ಅನ್ನು ಕಣ್ಣಾರೆ ಕಂಡ ಜನರಿಗೆ ತಾವೂ ದೇಶ ರಕ್ಷಣೆಯಲ್ಲಿ ತೊಡಗಬೇಕು ಎಂಬ ಹುಮ್ಮಸ್ಸನ್ನು ತಂದಿತ್ತು. ಇದನ್ನೂ ಓದಿ: ರಾಜ್ಯದ ಹಿತಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ: ಡಿಕೆ ಸುರೇಶ್