Tag: ಅರಣ್ಯ ಇಲಾಖೆ

  • ಬೇಟೆಯಾಡುವಾಗ ಅರಣ್ಯಇಲಾಖೆ ಜೀಪು ಬಂತೆಂದು ಗನ್ ಮುಚ್ಚಿಡೋವಾಗ ಮಿಸ್ ಪೈರಿಂಗ್- ಓರ್ವ ಸಾವು

    ಬೇಟೆಯಾಡುವಾಗ ಅರಣ್ಯಇಲಾಖೆ ಜೀಪು ಬಂತೆಂದು ಗನ್ ಮುಚ್ಚಿಡೋವಾಗ ಮಿಸ್ ಪೈರಿಂಗ್- ಓರ್ವ ಸಾವು

    ಶಿವಮೊಗ್ಗ: ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಾಹನ ಬಂತೆಂದು ಲೋಡೆಡ್ ಬಂದೂಕು ಬಚ್ಚಿಡಲು ಹೋದಾಗ ಮಿಸ್ ಫೈರಿಂಗ್ ಆಗಿ ಓರ್ವ ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಾನುಮನೆ ಎಂಬಲ್ಲಿ ನಡೆದಿದೆ.

    35 ವರ್ಷದ ಕಾನುಮನೆ ಸತೀಶ್ ಮೃತಪಟ್ಟ ವ್ಯಕ್ತಿ. ಕಾನುಮನೆ ಗ್ರಾಮದ ಐವರು ಪುನುಗು ಬೆಕ್ಕು ಬೇಟೆಗೆ ಕಾಡಿಗೆ ಹೋಗಿದ್ದರು. ಈ ವೇಳೆ ವಾಹನವೊಂದು ಬರುವ ಸದ್ದಿಗೆ ಹೆದರಿದ ಐವರು ಅರಣ್ಯ ಇಲಾಖೆ ಸಿಬ್ಬಂದಿ ಎಂದು ತಿಳಿದು ಬಂದೂಕನ್ನು ಬಚ್ಚಿಡಲು ಹೋಗಿದ್ದಾರೆ. ಈ ವೇಳೆ ಪೈರಿಂಗ್ ಆಗಿದ್ದು, ಸತೀಶ್ ಅವರ ತಲೆಗೆ ಗುಂಡು ತಗುಲಿದೆ.

    ಕೂಡಲೇ ಸತೀಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೇಟೆಗಾರರು ಅಳವಡಿಸಿದ ತಂತಿ ಬೇಲಿಗೆ ಸಿಲುಕಿ ಚಿರತೆ, ಕರಡಿ, ಮುಳ್ಳುಹಂದಿ ಸಾವು

    ಬೇಟೆಗಾರರು ಅಳವಡಿಸಿದ ತಂತಿ ಬೇಲಿಗೆ ಸಿಲುಕಿ ಚಿರತೆ, ಕರಡಿ, ಮುಳ್ಳುಹಂದಿ ಸಾವು

    ಚಿತ್ರದುರ್ಗ: ಬೇಟೆಗಾರರು ಅರಣ್ಯಪ್ರದೇಶದಲ್ಲಿ ಅಳವಡಿಸಿದ್ದ ತಂತಿ ಬೇಲಿಗೆ ಸಿಲುಕಿ ಚಿರತೆ ಸೇರಿದಂತೆ ಮೂರು ಪ್ರಾಣಿಗಳು ಮೃತಪಟ್ಟ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಜಿಲ್ಲೆಯ ಹೊಸದುರ್ಗ ತಾಲೂಕಿನ ಕಪ್ಪನಾಯಕನಹಳ್ಳಿ ಗ್ರಾಮದ ಹೊರ ವಲಯದಲ್ಲಿ 5 ವರ್ಷದ ಗಂಡು ಚಿರತೆ, 3 ವರ್ಷದ ಹೆಣ್ಣು ಕರಡಿ, ಹಾಗೂ ಮುಳ್ಳುಹಂದಿ ಸಾವನ್ನಪ್ಪಿವೆ. ಈ ಮೂರು ಪ್ರಾಣಿಗಳು ಏಕಕಾಲದಲ್ಲಿ ಸಾವನ್ನಪ್ಪಿರುವುದರಿಂದ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಎರಡು ಮೂರು ದಿನಗಳ ಹಿಂದೆಯೇ ತಂತಿ ಬೇಲಿಯ ವಿದ್ಯುತ್ ಶಾಕ್‍ನಿಂದ ಪ್ರಾಣಿಗಳು ಸಾವನ್ನಪ್ಪಿವೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

  • ವೀಡಿಯೋ: ಕಬ್ಬಿಣದ ಕಂಬಿಯ ಕೆಳಗೆ ಸಿಲುಕಿದ್ದ ಆನೆಯ ರಕ್ಷಣೆ

    ವೀಡಿಯೋ: ಕಬ್ಬಿಣದ ಕಂಬಿಯ ಕೆಳಗೆ ಸಿಲುಕಿದ್ದ ಆನೆಯ ರಕ್ಷಣೆ

    ಚಾಮರಾಜನಗರ: ಆಹಾರ ಅರಸಿ ಕಾಡಿನಿಂದ ನಾಡಿನತ್ತ ಪ್ರಯಾಣ ಬೆಳಸಿದ್ದ ಆನೆಯೊಂದು ಕಬ್ಬಿಣದ ಕಂಬಿಯಡಿ ಸಿಲುಕಿದ್ದು, ಇದೀಗ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಕಾಡಿನಿಂದ ಪ್ರಾಣಿಗಳು ನಾಡಿನತ್ತ ಬರಬಾರದೆಂದು ಕಾಡಿನಂಚಿನಲ್ಲಿ ಕಬ್ಬಿಣದ ಕಂಬಿಗಳನ್ನು ಅರಣ್ಯ ಇಲಾಖೆ ಅಳವಡಿಸಿತ್ತು. ಆದ್ರೆ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಆನೆಯೊಂದು ಕಾಡಿನಿಂದ ಆಚೆ ಬರಲು ಪ್ರಯತ್ನಿಸಿ ಕಬ್ಬಿಣದ ಕಂಬಿಯಲ್ಲಿ ಸಿಲುಕೊಂಡಿದ್ದ ದೃಶ್ಯ ವೈರಲ್ ಆಗಿತ್ತು.

    ಇದನ್ನೂ ಓದಿ: ಬಂಡೀಪುರದಲ್ಲಿ ಕಬ್ಬಿಣದ ಕಂಬಿಗಳನ್ನು ದಾಟಿ ಆನೆ ನಾಡಿಗೆ ಬರೋದನ್ನು ನೋಡಿ

    ಆನೆ ಕಾಡಿನಿಂದ ಆಚೆ ಬರಲು ಪ್ರಯತ್ನಿಸಿ ಕಂಬಿಯ ಬೇಲಿಯ ಕೆಳಗೆ ಸಿಲುಕಿ ನರಳಾಡುತ್ತಿತ್ತು. ಈ ವೇಳೆ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಗಮನಿಸಿ ಆನೆಯನ್ನು ರಕ್ಷಣೆ ಮಾಡಿದ್ದಾರೆ.

    ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಕಾಡು ಪ್ರಾಣಿಗಳು ಆಹಾರಕ್ಕಾಗಿ ನಾಡಿನತ್ತ ಪ್ರಯಾಣ ಬೆಳಸಿ ಜೀವವನ್ನು ಕಳೆದುಕೊಳ್ಳುತ್ತಿವೆ. ಆನೆಗಳು ನಾಡಿಗೆ ಬಾರದಂತೆ ಸೋಲಾರ್ ಬೇಲಿ, ಕಂದಕ, ಕಬ್ಬಿಣದ ಕಂಬಿಗಳನ್ನು ಅಳವಡಿಸಲಾಗಿದೆ. ಆದ್ರೆ ಆನೆಗಳು ಮಾತ್ರ ಇದ್ಯಾವುದನ್ನು ಲೆಕ್ಕಿಸದೆ ತಮ್ಮದೇ ಮತ್ತೊಂದು ದಾರಿಯನ್ನು ಹುಡುಕುತ್ತಿವೆ.

    ಇದನ್ನೂ ಓದಿ: ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿದ ಆನೆಯ ರಕ್ಷಣೆ

    https://youtu.be/KBbFW3WwKdw

    https://www.youtube.com/watch?v=wYq7yw565mk

     

  • ಬೆಂಕಿಯ ಕೆನ್ನಾಲಿಗೆಗೆ ಧಗ-ಧಗಿಸಿದ ಸಸ್ಯಕಾಶಿ ಕಪ್ಪತ್ತಗುಡ್ಡ

    ಬೆಂಕಿಯ ಕೆನ್ನಾಲಿಗೆಗೆ ಧಗ-ಧಗಿಸಿದ ಸಸ್ಯಕಾಶಿ ಕಪ್ಪತ್ತಗುಡ್ಡ

    ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಔಷಧಿಯ ಸಸ್ಯಕಾಶಿ ಕಪ್ಪತ್ತಗುಡ್ಡ ಬೆಂಕಿಯ ಕೆನ್ನಾಲಿಗೆಯಿಂದ ಧಗ ಧಗಿಸಿದೆ.

    ಮುಂಡರಗಿ ತಾಲೂಕಿನ ಕಲಕೇರಿ ಹಾಗೂ ವಿರುಪಾಪೂರ ಗ್ರಾಮದ ಬಳಿ ಬುಧವಾರ ರಾತ್ರಿ ಸುಮಾರು 8 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಸುಮಾರು ಒಂದು ಹೆಕ್ಟರ್‍ಗೂ ಅಧಿಕ ಪ್ರದೇಶದವರೆಗೆ ಬೆಂಕಿ ವ್ಯಾಪಿಸಿದೆ. ಇದರಿಂದ ಅಪಾರ ಪ್ರಮಾಣದ ಆಯುರ್ವೇದ ಔಷಧಿಯ ಸಂಪತ್ತು ಬೆಂಕಿಗೆ ಆಹುತಿಯಾಗಿದೆ.

    ಇತ್ತೀಚೆಗಷ್ಟೇ ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಎಂಬುವುದಾಗಿ ಘೋಷಣೆಯಾಗಿದೆ. ಘೋಷಣೆಯಾದ ಬಳಿಕ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಈ ಭಾಗದ ಜನರಲ್ಲಿ ಆತಂಕ ಶುರುವಾಗಿದೆ. ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ರೂ, ಇಲಾಖೆಯ ಸಿಬ್ಬಂದಿ ತಡವಾಗಿ ಬಂದಿದ್ದಾರೆ. ಇದು ಸ್ಥಳೀಯರ ಕೋಪಕ್ಕೆ ಕಾರಣವಾಯಿತು.

    ಸ್ಥಳಕ್ಕೆ ಬಂದ ಅಧಿಕಾರಿಗಳು ಗ್ರಾಮಸ್ಥರ ಸಹಾಯದಿಂದ ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಕಪ್ಪತಗುಡ್ಡದಲ್ಲಿ ಪದೇ ಪದೇ ಬೆಂಕಿ ಕಾಣಿಸುಕೊಳ್ಳುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

     

  • ವಿಡಿಯೋ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು, ದಾರಿ ತಿಳಿಯದೇ ಸಮುದ್ರಕ್ಕೆ ಬಿದ್ದ ಕಡವೆ

    ವಿಡಿಯೋ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು, ದಾರಿ ತಿಳಿಯದೇ ಸಮುದ್ರಕ್ಕೆ ಬಿದ್ದ ಕಡವೆ

    ಕಾರವಾರ: ಇಂದು ಬೆಳಗ್ಗೆ ಕಾಡಿನಿಂದ ನಾಡಿಗೆ ಬಂದ ಕಡವೆಯೊಂದು ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಕಾರವಾರ ನಗರದ ಆಲಿಗದ್ದಾ ಕಡಲ ತೀರದ ಸಮುದ್ರದಲ್ಲಿ ಬಿದ್ದಿತ್ತು.

    ಸಮುದ್ರದಲ್ಲಿ ಸುಮಾರು ಒಂದು ಘಂಟೆಗಳ ಕಾಲ ಕಡವೆ ಈಜುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಕೋಸ್ಟ್ ಗಾರ್ಡ್ ಸಿಬ್ಬಂದಿ ಸ್ಥಳಿಯ ಮೀನುಗಾರರ ಸಹಾಯದಿಂದ ಕಡವೆಯನ್ನು ರಕ್ಷಿಸಿದ್ದಾರೆ.

    ಮೂರು ವರ್ಷದ ಪ್ರಾಯದ ಕಡವೆಯನ್ನು ರಕ್ಷಿಸಿ, ಚಿಕಿತ್ಸೆ ನೀಡಿ ಅದನ್ನು ಮರಳಿ ಕಾಡಿಗೆ ಬಿಡಲಾಗಿದೆ.

    https://www.youtube.com/watch?v=2jYcc65S2uQ

     

     

  • ಟ್ರ್ಯಾಕ್ಟರ್ ಶಬ್ದ ಕೇಳಿದ್ರೆ ಪ್ರತ್ಯಕ್ಷವಾಗೋ ಮಂಗ- 6 ತಿಂಗ್ಳಲ್ಲಿ 80ಕ್ಕೂ ಹೆಚ್ಚು ಜನರ ಮೇಲೆ ದಾಳಿ

    ಟ್ರ್ಯಾಕ್ಟರ್ ಶಬ್ದ ಕೇಳಿದ್ರೆ ಪ್ರತ್ಯಕ್ಷವಾಗೋ ಮಂಗ- 6 ತಿಂಗ್ಳಲ್ಲಿ 80ಕ್ಕೂ ಹೆಚ್ಚು ಜನರ ಮೇಲೆ ದಾಳಿ

    ಬೆಳಗಾವಿ: ಜಿಲ್ಲೆಯ ಅರಸಗಿ ಗ್ರಾಮದಲ್ಲಿ ಮಂಗವೊಂದು ಜನರ ನೆಮ್ಮದಿಯನ್ನು ಹಾಳು ಮಾಡಿದೆ. ಗ್ರಾಮದಲ್ಲಿ ಟ್ರ್ಯಾಕ್ಟರ್ ಶಬ್ದ ಕೇಳಿದ್ರೆ ಸಾಕು ಪ್ರತ್ಯಕ್ಷವಾಗುವ ಮಂಗ ಕಳೆದ 6 ತಿಂಗಳಿಂದ ಸುಮಾರು 80ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದೆ.

    ಇತ್ತೀಚಿಗಷ್ಟೆ ಟ್ರ್ಯಾಕ್ಟರ್‍ನಲ್ಲಿ ಸುರಕ್ಷತೆಗಾಗಿ ಕಟ್ಟಿಗೆ ತೆಗೆದುಕೊಂಡು ಹೋಗ್ತಿದ್ದ ರೈತನ ಮೇಲೂ ಮಂಗ ಮಾರಣಾಂತಿಕ ಹಲ್ಲೆ ಮಾಡಿದ್ದು, ಹಲ್ಲೆಗೊಳಗಾದ ರೈತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದಾಗಿ ಮಹಿಳೆಯರು, ಮಕ್ಕಳು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಇನ್ನು ಕೆಲಸಕ್ಕಾಗಿ ಹೊರಬರಲೇಬೇಕಾದ ಜನರು ಕೈಯಲ್ಲಿ ಕೋಲು ಹಿಡಿದುಕೊಂಡು ಓಡಾಡುವಂತಾಗಿದೆ.

    ಮಂಗನ ಕೀಟಲೆಯಿಂದ ತತ್ತರಿಸಿ ಹೋಗಿರುವ ಗ್ರಾಮಸ್ಥರು ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ರೆ ಪೊಲೀಸರು ಹಾಗು ಅರಣ್ಯ ಇಲಾಖೆ ಸಿಬ್ಬಂದಿ ಮಂಗನ ಸೆರೆಗೆ ಎಷ್ಟೇ ಪ್ರಯತ್ನಿಸಿದ್ರೂ ಮಂಗ ಮಾತ್ರ ಕೈಗೆ ಸಿಕ್ಕಿಲ್ಲ. ಮಂಗನ ಹಾವಳಿಯಿಂದ ಅಗಸಗಿ ಗ್ರಾಮದ ಜನರು ಆತಂಕದಲ್ಲಿ ಜೀವನ ಸಾಗಿಸಬೇಕಾಗಿದೆ.

     

  • ತಾಯಿಯಿಂದ ಬೇರ್ಪಟ್ಟ ಆನೆಮರಿಗೆ ಕೊನೆಗೂ ಸಿಕ್ತು ಆಶ್ರಯ

    ತಾಯಿಯಿಂದ ಬೇರ್ಪಟ್ಟ ಆನೆಮರಿಗೆ ಕೊನೆಗೂ ಸಿಕ್ತು ಆಶ್ರಯ

    ಕೊಡಗು: ತಾಯಿಯಿಂದ ಬೇರ್ಪಟ್ಟು ಅಡವಿಯ ಮಡಿಲಲ್ಲಿ ಒಂಟಿಯಾಗಿದ್ದ ಮುದ್ದಾದ ಮರಿಯಾನೆಗೆ ಕೊನೆಗೂ ಆಶ್ರಯ ಸಿಕ್ಕಿದೆ. ಅನಾಥವಾಗಿದ್ದ ಮರಿಯಾನೆಯನ್ನು ನಾಗರಹೊಳೆಯ ಅರಣ್ಯಾಧಿಕಾರಿಗಳು ಹಿಡಿದು ಕೊಡಗಿನ ತಿತಿಮತಿಯ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ನೀಡಿದ್ದಾರೆ. ಮುದ್ದಾದ ಮರಿಯಾನೆಯನ್ನು ಮಾವುತರು ಪಾಲನೆ ಪೋಷಣೆ ಮಾಡುತ್ತಿದ್ದಾರೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮೇಟಿಕೊಪ್ಪೆ ವನ್ಯಜೀವಿ ವಲಯದಲ್ಲಿ 20 ದಿನದ ಆನೆ ಮರಿಯೊಂದು ತಾಯಿಯಿಂದ ಬೇರ್ಪಟ್ಟು ಅನಾಥವಾಗಿ ಅಲೆದಾಡುತ್ತಿತ್ತು. ಸದ್ಯ ಮರಿ ಆನೆ ತಿತಿಮತಿಯ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಮಾವುತ ಶಿವು ಎಂಬವರ ಆರೈಕೆಯಲ್ಲಿದೆ. ದಿನಕ್ಕೆ 10 ಲೀಟರ್ ಹಾಲನ್ನು ನಿಪ್ಪಲ್ ಮೂಲಕ ಆನೆ ಮರಿಗೆ ನೀಡಲಾಗುತ್ತಿದೆ. ಮತ್ತಿಗೋಡು ಶಿಬಿರದ ಸಿಬ್ಬಂದಿ ಹಾಗೂ ಪಶುವೈದ್ಯರು ಮರಿಯಾನೆಯ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ. ಇದೀಗ ಮರಿಯಾನೆಗೆ 1.5 ತಿಂಗಳಾಗಿದೆ.

    ಒಟ್ಟಾರೆ ತಾಯಿಯಿಂದ ದೂರಾಗಿ, ತಾಯಿ ಪ್ರೀತಿ ಮರಿಚಿಕೆಯಾದ ಮುದ್ದಾದ ಆನೆಮರಿಗೆ ಮತ್ತಿಗೋಡು ಸಾಕಾನೆ ಶಿಬಿರದ ಅರಣ್ಯ ಇಲಾಖೆ ಸಿಬ್ಬಂದಿಯ ಪ್ರೀತಿ ಸಿಕ್ಕಿದೆ. ಎಲ್ಲರ ಪ್ರೀತಿಗೆ ಪಾತ್ರವಾಗಿರುವ ಮರಿಯಾನೆ ತುಂಟಾಟವಾಡುತ್ತಾ ಶಿಬಿರದಲ್ಲಿ ಕಾಲ ಕಳೆಯುತ್ತಿದೆ.

     

  • ಅರಣ್ಯ ಇಲಾಖೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದು ಏನು?

    ಅರಣ್ಯ ಇಲಾಖೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದು ಏನು?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ 5ನೇ ಬಜೆಟ್ ಇಂದು ಮಂಡನೆಯಾಗಿದೆ. ಬಜಟ್‍ನಲ್ಲಿ ಸಿದ್ದರಾಮಯ್ಯ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಘೋಷಿಸಿದ ಹಲವು ಯೋಜನೆಗಳು ಈ ಕೆಳಕಂಡಂತಿವೆ.

    ಒಟ್ಟು ಅನುದಾನ – 1732 ಕೋಟಿ ರೂ.

    > ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ.
    > ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನೀಲಗಿರಿ ಬದಲು 6 ಲಕ್ಷ ಶ್ರೀಗಂಧ ಸಸಿ ಬೆಳೆಸುವುದು. 700 ಹೆಕ್ಟೇರ್ ಪ್ರದೇಶದಲ್ಲಿ ಶ್ರೀಗಂಧ ನೆಡುತೋಪುಗಳ ಅಭಿವೃದ್ಧಿ.
    > ವನಮಹೋತ್ಸವಕ್ಕಾಗಿ 6 ಕೋಟಿ ಸಸಿಗಳನ್ನು ಬೆಳೆಸುವುದು.
    > ಕೃಷಿ, ಅರಣ್ಯ ಪ್ರೋತ್ಸಾಹ ಯೋಜನೆಯಡಿ ಬದುಕಿ ಉಳಿದ ಪ್ರತಿ ಸಸಿಗೆ ಪ್ರೋತ್ಸಾಹ ಧನ 45 ರೂ. ನಿಂದ 100 ರೂ.ಗೆ ಹೆಚ್ಚಳ.
    > ಉದ್ಯೋಗಖಾತ್ರಿ ಯೋಜನೆಯಡಿ 4,720 ಕಿಮೀ ರಸ್ತೆಯ ಬದಿ ನೆಡುತೋಪು ನಿರ್ಮಾಣ.

    > 5 ಕೋಟಿ ರೂ. ವೆಚ್ಚದಲ್ಲಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಸ್ಥಾಪಿಸಲು 5 ಕೋಟಿ ರೂ.
    > ಚಿಕ್ಕಮಣ್ಣುಗುಡ್ಡ ಸಂಶೋಧನೆ ಕೇಂದ್ರದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಅರಣ್ಯ ಮಾಹಿತಿ ಕೇಂದ್ರ ಅಭಿವೃದ್ಧಿ.
    > ಎಲ್ಲಾ ನರ್ಸರಿಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲು ನರ್ಸರಿ ಅಭಿವೃದ್ಧಿ ಏಜನ್ಸಿ ರಚನೆ.
    > ಜನವಸತಿ ಪ್ರದೇಶಗಳಿಗೆ ಮಘಗಗಳ ವಲಸೆ ತಡೆಗಟ್ಟಲು 10 ಕೋಟಿ ರು. ವೆಚ್ಚದಲ್ಲಿ ಸ್ವಯಂಚಾಲಿತ ಸೋಲಾರ್ ವಿದ್ಯುತ್ ಪಂಪ್‍ಗಳ ಸಹಾಯದೊಂದಿಗೆ ದಟ್ಟಾರಣ್ಯದಲ್ಲಿರುವ 100 ಜಲಕಾಯಗಳನ್ನು ತುಂಬುವುದು.

  • ಆಹಾರ ಅರಸುತ್ತಾ ಬಂದು ತಂತಿ ಬೇಲಿಯಲ್ಲಿ ಸಿಲುಕಿದ್ದ ಕರಡಿ ರಕ್ಷಣೆ

    ಆಹಾರ ಅರಸುತ್ತಾ ಬಂದು ತಂತಿ ಬೇಲಿಯಲ್ಲಿ ಸಿಲುಕಿದ್ದ ಕರಡಿ ರಕ್ಷಣೆ

    ಚಿತ್ರದುರ್ಗ: ಜಿಲ್ಲೆಯ ಹೊಳಲ್ಕರೆ ತಾಲೂಕಿನ ತಿರುಮಲಾಪುರ ಗ್ರಾಮಕ್ಕೆ ಆಹಾರ ಅರಸುತ್ತಾ ಬಂದು ತಂತಿ ಬೇಲಿಯಲ್ಲಿ ಸಿಲುಕಿದ್ದ ಕರಡಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

    ಆಹಾರ, ನೀರು ಹುಡುಕುತ್ತಾ ನಾಡಿನತ್ತ ಬಂದ ಕರಡಿ ರೈತರು ಗದ್ದೆಗೆ ಹಾಕಿದ ತಂತಿಗೆ ಸಿಲುಕಿತ್ತು. ಗ್ರಾಮದ ವೆಂಕಟೇಶ್ ಎಂಬವರ ಗದ್ದೆಯಲ್ಲಿ ಕರಡಿ ತಂತಿ ಬೇಲಿಗೆ ಸಿಕ್ಕಿ ಹಾಕಿಕೊಂಡಿತ್ತು. ಆರಂಭದಲ್ಲಿ ಹತ್ತಿರ ಹೋಗುವುದಕ್ಕೂ ಹೆದರುತ್ತಿದ್ದ ಗ್ರಾಮಸ್ಥರು ಬಳಿಕ ಕರಡಿ ಸಂಪೂರ್ಣವಾಗಿ ನಿತ್ರಾಣಗೊಂಡಿರೋದನ್ನ ಖಚಿತಪಡಿಸಿಕೊಂಡು ತಂತಿಯಿಂದ ಬಿಡಿಸಿದ್ದಾರೆ.

    ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ನಿತ್ರಾಣಗೊಂಡಿದ್ದ ಕರಡಿಯನ್ನು ಸ್ಥಳಾಂತರಗೊಳಿಸಿದರು. ಗ್ರಾಮದ ಹತ್ತಿರ ಮೂರು ಕರಡಿಗಳು ಇರೋದನ್ನು ಕಂಡಿರುವ ಗ್ರಾಮಸ್ಥರು ಸದ್ಯ ಒಂದು ಕರಡಿ ಸಿಕ್ಕಿದ್ದು, ಮತ್ತೆರೆಡು ಇರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದ ಕರಡಿಯನ್ನ ದಾವಣೆಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.

     

  • ಚಿಕ್ಕಮಗಳೂರು: ಬೆಂಕಿಗಾಹುತಿಯಾದ ಮೆರುತಿ ಗುಡ್ಡದ ವಿಶೇಷತೆ ಏನ್ ಗೊತ್ತಾ..?

    ಚಿಕ್ಕಮಗಳೂರು: ಬೆಂಕಿಗಾಹುತಿಯಾದ ಮೆರುತಿ ಗುಡ್ಡದ ವಿಶೇಷತೆ ಏನ್ ಗೊತ್ತಾ..?

    ಚಿಕ್ಕಮಗಳೂರು: ಈ ಬಾರಿಯ ಭೀಕರ ಬರಗಾಲದಿಂದ ರಾಜ್ಯಾದ್ಯಂತ ಸಾವಿರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ. ಅರಣ್ಯಕ್ಕೆ ಬೆಂಕಿ ಬಿದ್ದಾಗೆಲ್ಲಾ ಸ್ಥಳಿಯರು ಮಾಹಿತಿ ನೀಡಿದ್ರು ಅರಣ್ಯ ಅಧಿಕಾರಿಗಳು ಸರಿಯಾದ ಸಮಯಕ್ಕೆ ಸ್ಥಳಕ್ಕೆ ಬರೋದಿಲ್ಲ ಅನ್ನೋದು ರಾಜ್ಯದ ಜನರ ಆರೋಪ. ಅದೇ ರೀತಿ, ರಾಜ್ಯದ ಅತಿ ಎತ್ತರದ ಶಿಖರಗಳಲ್ಲಿ ಒಂದಾದ ಚಿಕ್ಕಮಗಳೂರಿನ ಮೆರುತಿ ಗುಡ್ಡಕ್ಕೂ ಬೆಂಕಿ ಬಿದ್ದು ಮುನ್ನೂರು ಎಕರೆಗೂ ಅಧಿಕ ಅರಣ್ಯ ನಾಶವಾದ್ರು ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಸಮುದ್ರಮಟ್ಟದಿಂದ 5700 ಅಡಿ ಎತ್ತರದಲ್ಲಿರೋ ಈ ಗುಡ್ಡಕ್ಕೆ ರಾಜ್ಯದಲ್ಲಿ ಏಳನೇ ಸ್ಥಾನವಿದೆ. ಪಿರಮಿಡ್ ಆಕಾರದಲ್ಲಿರೋ ಈ ಗುಡ್ಡ ಲಕ್ಷಾಂತರ ಪ್ರವಾಸಿ ಪ್ರಿಯರಗೂ ಇಷ್ಟವಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ಕೊಪ್ಪ ತಾಲೂಕಿನ ವ್ಯಾಪ್ತಿಗೆ ಬರೋ ಈ ಗುಡ್ಡ ಎರಡೂ ತಾಲೂಕಿನ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರಲಿದೆ. ಆದ್ರೆ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಬಿದ್ದಿದ್ದು, ಮುನ್ನೂರು ಎಕರೆಗೂ ಅಧಿಕ ಅರಣ್ಯ ನಾಶವಾಗಿದೆ. ಆದರೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಾರದಿರೋದು ಮಾತ್ರ ದುರಂತ ಎಂದು ಸ್ಥಳಿಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಗುಡ್ಡ ಉಡುಪಿಯ ಕೊಬ್ರಿ ಹಾಗೂ ಹೊರನಾಡಿಗೂ ಕಾಣುವಷ್ಟು ಎತ್ತರದಲ್ಲಿದೆ. ಈ ಗುಡ್ಡಕ್ಕೆ ಪ್ರತಿ ವರ್ಷ ಬೆಂಕಿ ಬೀಳುತ್ತೆ. ಆದರೆ ಯಾವಾಗ ಮಾಹಿತಿ ನೀಡಿದ್ರು ಅರಣ್ಯ ಇಲಾಖೆಯ ಸಿಬ್ಬಂದಿ ಸರಿಯಾದ ಸಮಯಕ್ಕೆ ಬರೋದಿಲ್ಲ ಅನ್ನೋದು ಸ್ಥಳಿಯರ ಆರೋಪ. ಗುಡ್ಡಕ್ಕೆ ಬೆಂಕಿ ಬಿದ್ದಿದ್ರಿಂದ ನೂರಾರು ಪ್ರಾಣಿ ಪಕ್ಷಿಗಳು ಬೆಂಕಿಗಾಹುತಿಯಾಗಿವೆ. ಚಿಕ್ಕಮಗಳೂರಿನ ಸೌಂದರ್ಯವನ್ನ ಹೆಚ್ಚಿಸೋದ್ರಲ್ಲಿ ಈ ಗುಡ್ಡ ಪ್ರಮುಖ ಪಾತ್ರ ವಹಿಸಿತ್ತು. ಕೊಪ್ಪ, ಶೃಂಗೇರಿ, ಹೊರನಾಡು, ಕಳಸಕ್ಕೆ ಭೇಟಿ ನೀಡೋ ಪ್ರವಾಸಿಗ್ರು ಪಿರಮಿಡ್ ಆಕಾರದ ಈ ಬೆಟ್ಟವನ್ನ ನೋಡಿ ಆನಂದಿಸುತ್ತಿದ್ದರು.