Tag: ಅರಣ್ಯ ಅಧಿಕಾರಿಗಳು

  • ಹುಲಿ ದಾಳಿಯ ಭೀತಿ; ಜಮೀನುಗಳಲ್ಲಿ ರೈತರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಸೆಕ್ಯುರಿಟಿ

    ಹುಲಿ ದಾಳಿಯ ಭೀತಿ; ಜಮೀನುಗಳಲ್ಲಿ ರೈತರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಸೆಕ್ಯುರಿಟಿ

    ಚಾಮರಾಜನಗರ: ಜಿಲ್ಲೆಯಲ್ಲಿ ಹುಲಿ ದಾಳಿಯ ಭೀತಿ ಎದುರಾಗಿದೆ. ಈ ಹಿನ್ನೆಲೆ ರೈತರ ಜಮೀನುಗಳಲ್ಲಿ ಅರಣ್ಯ ಇಲಾಖೆ ಸೆಕ್ಯುರಿಟಿ ವ್ಯವಸ್ಥೆ ಮಾಡುತ್ತಿದೆ.

    ಉಳುಮೆ ಮಾಡಲು, ಫಸಲು ಕೊಯ್ಲು ಮಾಡಲು, ಜಮೀನುಗಳಲ್ಲಿ ಕೆಲಸ ಮಾಡಲು ರೈತರಿಗೆ ಅರಣ್ಯ ಇಲಾಖೆಯಿಂದ ಸೆಕ್ಯುರಿಟಿ ಕೊಡಲಾಗಿದೆ. ಚಾಮರಾಜನಗರ ತಾಲೂಕು ಕಲ್ಪುರ ಸುತ್ತಮುತ್ತ ಭಾರಿ ಗಾತ್ರದ ಹುಲಿ ಕಾಣಿಸಿಕೊಂಡಿತ್ತು. ಈಗಾಗಲೇ ಎರಡು ಹಸುಗಳನ್ನು ಬಲಿ ಪಡೆದಿತ್ತು.

    ಜಮೀನುಗಳಿಗೆ ಹೋಗಲು ರೈತರು, ಕೃಷಿ ಕಾರ್ಮಿಕರ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಉಳುಮೆ ಮಾಡಲು, ಬೆಳೆ ಕೊಯ್ಲು ಮಾಡಲು ರೈತರಿಗೆ ಅರಣ್ಯ ಸಿಬ್ಬಂದಿ ಕಾವಲು ಮಾಡ್ತಿದ್ದಾರೆ. ಅರಣ್ಯ ಸಿಬ್ಬಂದಿಯ ಕಾವಲಿನಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ.

  • ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ಅಕ್ಕಿ, ಬೆಲ್ಲ, ತರಕಾರಿ ಕದ್ದು ಮೇಯೋ ಸಲಗ – ಪುಂಡಾನೆ ಸೆರೆಗೆ ಸಾಕಾನೆಗಳ ಕಾರ್ಯಾಚರಣೆ

    ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ಅಕ್ಕಿ, ಬೆಲ್ಲ, ತರಕಾರಿ ಕದ್ದು ಮೇಯೋ ಸಲಗ – ಪುಂಡಾನೆ ಸೆರೆಗೆ ಸಾಕಾನೆಗಳ ಕಾರ್ಯಾಚರಣೆ

    ಚಾಮರಾಜನಗರ: ಬಂಡೀಪುರ ಅರಣ್ಯದಂಚಿನಲ್ಲಿ ಕಾಡಾನೆ (Elephant) ಪುಂಡಾಟ ಜೋರಾಗಿದೆ. ಪುಂಡಾನೆ ಸೆರೆಗೆ ಸಾಕಾನೆಗಳ ಕಾರ್ಯಾಚರಣೆ ಇದೀಗ ಆರಂಭಿಸಲಾಗಿದೆ.

    ಗುಂಡ್ಲುಪೇಟೆ ತಾಲೂಕು ಹುಂಡೀಪುರ, ಮಂಗಲ, ಜಕ್ಕಳ್ಳಿ, ಎಲಚೆಟ್ಟಿ ಸೇರಿದಂತೆ ಹಲವೆಡೆ ಕಾಡಾನೆ ಉಪಟಳ ಹೆಚ್ಚಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ ಮೂರು ರಾಜ್ಯಗಳಲ್ಲಿಯೂ ಆನೆಗಳು ಸಂಚರಿಸಿ ಬೆಳೆ ನಾಶ, ಸೋಲಾರ್ ಬೇಲಿ ತಂತಿ ತುಳಿದು ಹಾನಿ ಮಾಡಿವೆ. ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ಒಂಟಿ ಸಲಗ ಅಕ್ಕಿ, ಬೆಲ್ಲ ತರಕಾರಿ ಕದ್ದು ಮೇಯುತ್ತಿದೆ.

    ಕಳೆದ 5 ತಿಂಗಳಿಂದ ನಿರಂತರವಾಗಿ ಉಪಟಳ ನೀಡುತ್ತಿರುವ ಒಂಟಿ ಆನೆಯನ್ನು ಸೆರೆಹಿಡಿಯಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. 5 ಸಾಕಾನೆಗಳಿಂದ ಪುಂಡಾನೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ದುಬಾರೆ, ರಾಮಾಪುರ ಬಿಳಿಗಿರಿರಂಗನ ಬೆಟ್ಟದಿಂದ ಸಾಕಾನೆಗಳನ್ನು ಕರೆತರಲಾಗಿದೆ. ಇದನ್ನೂ ಓದಿ: ರಿಮ್ಸ್ ಆಸ್ಪತ್ರೆಯಲ್ಲಿ ಮಂಗಗಳ ಕಾಟ – ಹೈರಾಣಾದ ಒಳರೋಗಿಗಳು

    ಈಗಾಗಲೇ ಡ್ರೋನ್ ಕಾರ್ಯಾಚರಣೆ ಮೂಲಕ ಪುಂಡಾನೆ ಪತ್ತೆಹಚ್ಚಲಾಗಿದೆ. ಎಲಚೆಟ್ಟಿ ಬಳಿ ಒಂಟಿ ಸಲಗದ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಅರಣ್ಯ ಸಿಬ್ಬಂದಿ ಪುಂಡಾನೆ ಹಿಡಿಯುವ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: 50 ಅಡಿ ಬ್ರಿಡ್ಜ್ ಮೇಲಿಂದ ಉರುಳಿ ಬಿದ್ದ ಕ್ಯಾಂಟರ್ – ಪವಾಡಸದೃಶವಾಗಿ ಬದುಕುಳಿದ ಚಾಲಕ

  • ಓಮ್ನಿ ಮೇಲೆ ಒಂಟಿ ಸಲಗ ದಾಳಿ – ನಾಲ್ವರು ಪ್ರಾಣಾಪಾಯದಿಂದ ಪಾರು

    ಓಮ್ನಿ ಮೇಲೆ ಒಂಟಿ ಸಲಗ ದಾಳಿ – ನಾಲ್ವರು ಪ್ರಾಣಾಪಾಯದಿಂದ ಪಾರು

    ಚಿಕ್ಕಮಗಳೂರು: ಓಮ್ನಿ ಕಾರಿನಲ್ಲಿ ಹೊರನಾಡಿಗೆ ಹೋಗುತ್ತಿದ್ದ ನಾಲ್ವರ ಮೇಲೆ ಒಂಟಿ ಸಲಗ ದಾಳಿ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಂದೂರು ಸಾರಗೋಡು-ಸಮೀಪದ ಭೈರೇಗುಡ್ಡ ಕ್ರಾಸ್ ಬಳಿ ನಡೆದಿದೆ.

    ಚಿಕ್ಕಮಗಳೂರು ತಾಲೂಕಿನ ಜೋಳದಾಳು ಗ್ರಾಮದ ನಾಲ್ವರು ಓಮ್ನಿಯಲ್ಲಿ ಹೊರನಾಡಿಗೆ ಹೋಗುವಾಗ ಭೈರೇಗುಡ್ಡ ಕ್ರಾಸ್ ಬಳಿ ಏಕಾಏಕಿ ಅಡ್ಡ ಬಂದ ಒಂಟಿ ಸಲಗ ದಾಳಿ ಮಾಡಿದೆ. ಕಾರಿನಲ್ಲಿದ್ದ ನಾಲ್ವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದರೆ, ಮೂವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಒಂಟಿ ಸಲಗ ದಾಳಿ ಮಾಡುತ್ತಿದ್ದಂತೆ ಕಾರಿನಲ್ಲಿದ್ದವರು ಕಾರಿನಿಂದ ಇಳಿದು ಓಡಿ ಹೋಗಿದ್ದಾರೆ.

    ಬಳಿಕ ಒಂಟಿ ಸಲಗ ಓಮಿನಿ ಕಾರಿನ ಮೇಲೆ ಮನಸ್ಸೋ ಇಚ್ಛೆ ದಾಳಿ ಮಾಡಿದ್ದು, ಓಮ್ನಿ ಬಹುತೇಕ ಜಖಂಗೊಂಡಿದೆ. ಗಾಯಾಳುಗಳನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಲೆನಾಡಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಈಗಾಗಲೇ ಕಳೆದ ಎರಡ್ಮೂರು ವರ್ಷದಿಂದ ಮಲೆನಾಡು ಭಾಗದಲ್ಲಿ ಆನೆ ಹಾವಳಿಯಿಂದ ಮೂರ್ನಾಲ್ಕು ಜನ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ಮಲೆನಾಡ ಹೊಲ-ಗದ್ದೆ, ತೋಟಗಳಲ್ಲಿ ದಾಳಿ ಮಾಡುತ್ತಿದ್ದ ಕಾಡಾನೆಗಳು ಈಗ ವಾಹನ ಹಾಗೂ ಜನಸಾಮಾನ್ಯರ ಮೇಲೂ ದಾಳಿ ಮಾಡಲು ಮುಂದಾಗಿವೆ. ಇದರಿಂದ ಮಲೆನಾಡಿಗರಲ್ಲಿ ಆತಂಕ ಮನೆಮಾಡಿದೆ.

    ಮಲೆನಾಡಿಗರು ಕಳೆದ ಒಂದೆರಡು ದಶಕಗಳಿಂದ ಕಾಡಾನೆ ದಾಳಿಗೆ ತುತ್ತಾಗಿರುವ ಮೂಡಿಗೆರೆ ತಾಲೂಕಿನ ಗೌಡಹಳ್ಳಿ, ಸಾರಾಗೋಡು, ಕುಂದೂರು, ಕೋಗಿಲೆ ಗ್ರಾಮ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಆನೆ ಹಾವಳಿ ಮೀತಿ ಮೀರಿದೆ. ಆನೆ ಹಾವಳಿಯಿಂದ ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡಿದ್ದಕ್ಕೆ ಲೆಕ್ಕವೇ ಇಲ್ಲದಂತಾಗಿದೆ. ಅಷ್ಟರ ಮಟ್ಟಿಗೆ ಕಾಡಾನೆಗಳ ಹಿಂಡು ಆಗಾಗ್ಗೆ ಹೊಲಗದ್ದೆ, ತೋಟಗಳ ಮೇಲೆ ದಾಳಿ ಮಾಡುತ್ತಿವೆ. ಈಗ ರಸ್ತೆಯಲ್ಲಿ ಸಂಚರಿಸುವವರ ಮೇಲೂ ದಾಳಿಗೆ ಮುಂದಾಗಿರುವುದರಿಂದ ಮಲೆನಾಡಿಗರು ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿ ಕೂಡಲೇ ಆನೆಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ:ಸಿಲಿಂಡರ್ ಸ್ಫೋಟಕ್ಕೆ ವ್ಯಕ್ತಿ ಬಲಿ – ಸಾವು ಬದುಕಿನ ಮಧ್ಯೆ ಮಗುವಿನ ಹೋರಾಟ

  • ಕೊಪ್ಪಳದಲ್ಲಿ ಕರುವಿನ ಕುತ್ತಿಗೆ ಕಚ್ಚಿದ ಚಿರತೆ

    ಕೊಪ್ಪಳದಲ್ಲಿ ಕರುವಿನ ಕುತ್ತಿಗೆ ಕಚ್ಚಿದ ಚಿರತೆ

    ಕೊಪ್ಪಳ: ಕರುವಿನ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆ ಗ್ರಾಮದಲ್ಲಿ ನಡೆದಿದೆ.

    ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆ ಗ್ರಾಮದ ಮೇಲ್ಭಾಗದ ವೀರುಪಣ್ಣ ಎಂಬವರ ಕರುವಿನ ಮೇಲೆ ಚಿರತೆ ದಾಳಿ ನಡೆಸಿದೆ. ಕರುವಿನ ಕುತ್ತಿಗೆ ಭಾಗಕ್ಕೆ ಚಿರತೆ ಕಚ್ಚಿ ಗಾಯ ಮಾಡಿದೆ. ಕರುವಿನ ಚೀರಾಟಕ್ಕೆ ಹತ್ತಿರದಲ್ಲಿರುವ ಜನರು ಓಡಿ ಬಂದು ಅದರ ಪ್ರಾಣವನ್ನು ರಕ್ಷಿಸಿದ್ದಾರೆ. ಬಳಿಕ ಚಿರತೆಯನ್ನು ಗ್ರಾಮಸ್ಥರು ಸ್ಥಳದಿಂದ ಓಡಿಸಿದ್ದಾರೆ.

    ಕಳೆದ ಎರಡು ದಿನಗಳ ಹಿಂದಷ್ಟೇ ಆನೆಗೊಂದಿಯಲ್ಲಿ ಹುಲಿಗೇಶ್ ಎಂಬ ಯುವಕನ ಮೇಲೆ ಚಿರತೆ ದಾಳಿ ಮಾಡಿ ತಿಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಇದೀಗ ಮತ್ತೆ ಚಿರತೆ ಪ್ರತ್ಯಕ್ಷವಾಗಿ ದಾಳಿ ನಡೆಸಿರುವುದರಂದ ಆನೆಗೊಂದಿ ಭಾಗದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಶೀಘ್ರವೇ ಚಿರತೆ ಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

  • ಬಂಡೆಯಾಕಾರದ ಬೃಹತ್ ತಿಮಿಂಗಿಲದ ಮೃತದೇಹ ಬೀಚ್‍ನಲ್ಲಿ ಪತ್ತೆ

    ಬಂಡೆಯಾಕಾರದ ಬೃಹತ್ ತಿಮಿಂಗಿಲದ ಮೃತದೇಹ ಬೀಚ್‍ನಲ್ಲಿ ಪತ್ತೆ

    – ನೋಡಲು ಮುಗಿಬಿದ್ದ ಜನರು

    ಚೆನ್ನೈ: ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ವಾಲಿನೋಕ್ಕಂ ಬೀಚ್‍ನಲ್ಲಿ ಬಂಡೆಯಾಕಾರದ ಬೃಹತ್ ತಿಮಿಂಗಿಲವೊಂದು ಪತ್ತೆಯಾಗಿದೆ.

    ವಾಲಿನೋಕ್ಕಂ ಬೀಚ್‍ನಲ್ಲಿ ಬೃಹತ್ ತಿಮಿಂಗಿಲ ನೋಡಿ ಜನರು ಅದನ್ನು ನೋಡಲು ಹತ್ತಿರ ಹೋಗಿದ್ದಾರೆ. ಆಗ ತಿಮಿಂಗಿಲ ಮೃತಪಟ್ಟಿರುವುದು ತಿಳಿದು ಬಂದಿದೆ.  ತಿಮಿಂಗಿಲಕ್ಕೆ ಸಮುದ್ರದಲ್ಲಿ ಹಡಗು ಡಿಕ್ಕಿ ಹೊಡೆದಿರಬಹುದು. ತಿಮಿಂಗಿಲದ ವಯಸ್ಸನ್ನು ಲೆಕ್ಕಹಾಕಲು ಸಾಧ್ಯವಾಗುತ್ತಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

    “ಇದು ಬೃಹತ್ ತಿಮಿಂಗಿಲ. ನಾವು ಇದೀಗ ತಿಮಿಂಗಿಲದ ಮರಣೋತ್ತರ ಪರೀಕ್ಷೆಯನ್ನು ಮುಗಿಸಿದ್ದೇವೆ. ತಿಮಿಂಗಿಲಕ್ಕೆ ದೊಡ್ಡ ಹಡಗು ಹೊಡೆದಿರಬಹದು ಎಂದು ಶಂಕಿಸಿದ್ದೇವೆ. ಆದರೆ ತಿಮಿಂಗಿಲ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ” ಎಂದು ಅರಣ್ಯ ಅಧಿಕಾರಿ ಸಿಕ್ಕಾಂತರ್ ಬಾಷಾ ತಿಳಿಸಿದ್ದಾರೆ.

    ಈ ಭಾಗದಲ್ಲಿ ಇಷ್ಟು ಬೃಹತ್ ತಿಮಿಂಗಿಲಗಳು ಕಾಣುವುದಿಲ್ಲ. ಆದರೆ ಜೂನ್‍ನಲ್ಲಿ ಇದೇ ಜಿಲ್ಲೆಯಲ್ಲಿ 18 ಅಡಿ ಉದ್ದದ, ಒಂದು ಕಾಲಿನ ಶಾರ್ಕ್‍ನ ಮೃತದೇಹ ತೀರಕ್ಕೆ ಬಂದಿತ್ತು. ಶವಪರೀಕ್ಷೆ ನಡೆಸಿದ ನಂತರ ಅರಣ್ಯ ಅಧಿಕಾರಿಗಳು ಅದನ್ನು ಕಡಲತೀರದಲ್ಲಿ ಸಮಾಧಿ ಮಾಡಿದ್ದರು.

    ಇಂತಹ ಅಪರೂಪದ ಜೀವಿಗಳನ್ನು ಹಿಡಿಯುವುದು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಅಪರಾಧ. ಒಂದು ವೇಳೆ ಅಪರೂಪದ ತಿಮಿಂಗಿಲಗಳನ್ನು ಹಿಡಿಯುವುದಾಗಲಿ, ಕೊಲ್ಲುವುದಾಗಲಿ ಮಾಡಿದರೆ ಕಾಯ್ದೆಯಡಿಯಲ್ಲಿ 3 ವರ್ಷದಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಬಾಷಾ ತಿಳಿಸಿದ್ದಾರೆ.

  • ರಾತ್ರಿ ವೇಳೆ ಸಾಕು ಪ್ರಾಣಿಗಳನ್ನ ಬೇಟೆಯಾಡ್ತಿದ್ದ ಚಿರತೆ ಸೆರೆ

    ರಾತ್ರಿ ವೇಳೆ ಸಾಕು ಪ್ರಾಣಿಗಳನ್ನ ಬೇಟೆಯಾಡ್ತಿದ್ದ ಚಿರತೆ ಸೆರೆ

    ವಿಜಯಪುರ: ರಾತ್ರಿ ವೇಳೆ ಸಾಕು ಪ್ರಾಣಿಗಳನ್ನ ಬೇಟೆಯಾಡುವ ಮೂಲಕ ಜಿಲ್ಲೆಯ ಜನರ ನಿದ್ದೆ ಕೆಡಿಸಿದ್ದ ಚಿರತೆ ಕೊನೆಗೂ ಬೋನಿ ಬಿದ್ದಿದೆ.

    ಜಿಲ್ಲೆಯ ಬಬಲೇಶ್ವರ ತಾಲೂಕಿನ ದೇವರಗೆಣ್ಣೂರು ಗ್ರಾಮದ ಹೊರವಲಯದಲ್ಲಿ ಚಿರತೆ ಬಲೆಗೆ ಬಿದ್ದಿದೆ. ಕಳೆದ ಒಂದು ವಾರದಿಂದ ಬಬಲೇಶ್ವರ ತಾಲೂಕಿನ ಬಬಲಾದಿ, ದೇವರಗೆಣ್ಣೂರು, ಗುಣದಾಳ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಈ ಚಿರತೆಯ ಹಾವಳಿ ಹೆಚ್ಚಾಗಿತ್ತು.

    ಅಷ್ಟೇ ಅಲ್ಲದೇ ರಾತ್ರಿ ಹೊತ್ತು ಎಮ್ಮೆ, ಮೇಕೆ, ಸಾಕು ಪ್ರಾಣಿಗಳ ಬೇಟೆಯಾಡುವ ಮೂಲಕ ಜನರ ನೆಮ್ಮದಿ ಹಾಗೂ ನಿದ್ದೆ ಕೆಡಿಸಿತ್ತು. ಹೀಗಾಗಿ ಅರಣ್ಯ ಇಲಾಖೆಯವರು ಕಳೆದ ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಪರಿಣಾಮ ಕೊನೆಗೂ ಚಿರತೆ ಸೆರೆ ಸಿಕ್ಕಿದೆ.

    ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಚಿರಾಂಕ ವನ್ಯಜೀವಿ ಪ್ರದೇಶದಿಂದ ಚಿರತೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಲಾಕ್‍ಡೌನ್ ವೇಳೆ ಜನ, ವಾಹನ ಸಂಚಾರ ಕಡಿಮೆಯಾಗಿದ್ದರಿಂದ ಕೃಷ್ಣಾ ನದಿ ದಾಟಿ ಬಂದಿರುವ ಶಂಕೆ ವ್ಯಕ್ತವಾಗಿದೆ.

  • ಆಹಾರ ಅರಸಿ ಗ್ರಾಮಕ್ಕೆ ಬಂದ ಗರ್ಭಿಣಿ ಆನೆ- ಪೈನಾಪಲ್‍ನಲ್ಲಿ ಪಟಾಕಿ ಇಟ್ಟು ಕೊಂದ ಪಾಪಿಗಳು

    ಆಹಾರ ಅರಸಿ ಗ್ರಾಮಕ್ಕೆ ಬಂದ ಗರ್ಭಿಣಿ ಆನೆ- ಪೈನಾಪಲ್‍ನಲ್ಲಿ ಪಟಾಕಿ ಇಟ್ಟು ಕೊಂದ ಪಾಪಿಗಳು

    – ಯಾರಿಗೂ ತೊಂದರೆ ಕೊಡದಿದ್ದರೂ ಆನೆ ಕೊಂದರು
    – ಹೊಟ್ಟೆಯಲ್ಲಿನ ಮಗು ನೆನೆದು, ಆಘಾತವಾಗಿ ಪ್ರಾಣ ಬಿಟ್ಟ ಆನೆ

    ತಿರುವನಂತರಪುರಂ: ಪಾಪಿಗಳು ಪೈನಾಪಲ್ ಹಣ್ಣಿನ ಒಳಗಡೆ ಪಟಾಕಿ ಇಟ್ಟು ಗರ್ಭಿಣಿ ಆನೆಗೆ ತಿನ್ನಿಸಿದ್ದು, ಪಟಾಕಿ ಸಿಡಿದು ಆನೆ ಮೃತಪಟ್ಟಿರುವ ಧಾರುಣ ಘಟನೆ ಕೇರಳದಲ್ಲಿ ನಡೆದಿದೆ.

    ಬುಧವಾರ ಘಟನೆ ನಡೆದಿದ್ದು, ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಸ್ಥಳೀಯರು ಪಟಾಕಿ ತುಂಬಿದ ಪೈನಾಪಲ್ ಹಣ್ಣನ್ನು ಗರ್ಭಿಣಿ ಆನೆಗೆ ತಿನ್ನಿಸಿದ್ದಾರೆ. ನಂತರ ಆನೆಯ ಬಾಯಿಯಲ್ಲಿ ಪಟಾಕಿ ಬ್ಲಾಸ್ಟ್ ಆಗಿ ಸಾವನ್ನಪ್ಪಿದೆ. ಘಟನೆ ಸಂಭವಿಸುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಆದರೆ ಆನೆ ಆಗಲೇ ಸಾವನ್ನಪ್ಪಿದೆ. ಘಟನೆ ನಡೆದ ಕುರಿತು ಮಲಪ್ಪುರಂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಅರಣ್ಯಾಧಿಕಾರಿಯೊಬ್ಬರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿದ್ದಾರೆ.

    മാപ്പ്… സഹോദരീ .. മാപ്പ് …
    അവൾ ആ കാടിന്റെ പൊന്നോമനയായിരുന്നിരിക്കണം. അതിലുപരി അവൾ അതിസുന്ദരിയും സൽസ്വഭാവിയും…

    Posted by Mohan Krishnan on Saturday, May 30, 2020

    ಗರ್ಭಿಣಿ ಆನೆ ಆಹಾರ ಹುಡುಕಿಕೊಂಡು ಗ್ರಾಮಕ್ಕೆ ತೆರಳಿತ್ತು. ಹೀಗೆ ದಾರಿಯಲ್ಲಿ ಓಡಾಡುತ್ತಿರುವಾಗ ಕೆಲ ಗ್ರಾಮಸ್ಥರು ಪಟಾಕಿ ತುಂಬಿದ ಪೈನಾಪಲ್‍ನ್ನು ಆನೆಯ ಸೊಂಡಿಲಿಗೆ ಇಟ್ಟಿದ್ದು, ಆನೆ ಅದನ್ನು ತಿಂದಿದೆ. ಬಾಯಿಯಲ್ಲಿ ಹಾಕಿಕೊಳ್ಳುತ್ತಿದ್ದಂತೆ ಪಟಾಕಿ ಸಿಡಿದಿದೆ. ಆನೆ ಸ್ಥಳದಲ್ಲೇ ಸಾವನ್ನಪ್ಪಿದೆ.

    ಅರಣ್ಯಾಧಿಕಾರಿ ಮೋಹನ್ ಕೃಷ್ಣನ್ ಅವರು ಈ ವಿಡಿಯೋವನ್ನು ಫೇಸ್ಬುಕ್‍ನಲ್ಲಿ ಹಂಚಿಕೊಂಡಿದ್ದು, ಮನಮುಟ್ಟುವ ಸಾಲುಗಳನ್ನು ಬರೆದಿದ್ದಾರೆ. ಅವಳು ಎಲ್ಲರನ್ನೂ ನಂಬಿದ್ದಳು, ಯಾವಾಗ ತಾನು ತಿಂದ ಪೈನಾಪಲ್ ಬ್ಲಾಸ್ಟ್ ಆಯಿತೋ ಆಗ ಆಘಾತಕ್ಕೊಳಗಾಗಿದ್ದಾಳೆ. ಆದರೆ ಅವಳಿಗಾಗಿ ಅಲ್ಲ ಹೊಟ್ಟೆಯಲ್ಲಿರುವ ತನ್ನ ಮಗುವಿಗಾಗಿ. ಅವಳು ಇನ್ನು 18-20 ತಿಂಗಳಲ್ಲಿ ಮಗುವಿಗೆ ಜನ್ಮ ನೀಡುತ್ತಿದ್ದಳು ಎಂದು ಬರೆದುಕೊಂಡಿದ್ದಾರೆ.

    ಪಟಾಕಿ ಸಿಡಿದಿದ್ದರಿಂದ ಆನೆಯ ಬಾಯಿ ಹಾಗೂ ನಾಲಗೆಗೆ ಗಂಭೀರ ಗಾಯಗಳಾಗಿದ್ದವು. ಗರ್ಭಿಣಿ ಆನೆ ಯಾವೊಬ್ಬ ಗ್ರಾಮಸ್ಥರಿಗೂ ತೊಂದರೆ ನೀಡಿರಲಿಲ್ಲ. ಬಾಯಿಯಲ್ಲಿ ಪಟಾಕಿ ಸಿಡಿಯುತ್ತಿದ್ದಂತೆ ನೋವಿನಲ್ಲಿ ರಸ್ತೆ ತುಂಬಾ ಓಡಾಡಿದೆ. ಬಾಯಲ್ಲಿ ಪಟಾಕಿ ಸಿಡಿಯುತ್ತಿದ್ದಂತೆ ಆನೆ ವೆಲ್ಲಿಯಾರ್ ನದಿಯಲ್ಲಿ ಮುಳುಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಆನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಅಧಿಕಾರಿಗಳು ನೀಲಕಂಠನ್ ಹಾಗೂ ಸುರೇಂದ್ರನ್ ಎಂಬ ಎರಡು ಆನೆಗಳನ್ನು ಕರೆ ತಂದಿದ್ದು, ಅಷ್ಟೊತ್ತಿಗಾಗಲೇ ಸಂಜೆ 4ರ ಸುಮಾರಿಗೆ ಆನೆ ನದಿಯಲ್ಲೇ ಸಾವನ್ನಪ್ಪಿದೆ.

  • ಕಾರ್ಕಳದಲ್ಲಿ ಮೂರು ಕಾಡುಕೋಣ – ಜನ ಆತಂಕ

    ಕಾರ್ಕಳದಲ್ಲಿ ಮೂರು ಕಾಡುಕೋಣ – ಜನ ಆತಂಕ

    ಉಡುಪಿ: ನಾಡಿಗೆ ಬರುತ್ತಿರುವ ಕಾಡು ಪ್ರಾಣಿಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಮೂರು ಕಾಡು ಕೋಣ ಕಾಣಿಸಿಕೊಂಡಿವೆ.

    ಕಾರ್ಕಳದ ಪೆರ್ವಾಜೆ ವಾರ್ಡ್ ನಲ್ಲಿ ಇಂದು ಕಾಡುಕೋಣ ಕಂಡು ಸಾರ್ವಜನಿಕರು ಆತಂಕಗೊಂಡಿದ್ದಾರೆ. ಏಕಾಏಕಿ ರಸ್ತೆಯಲ್ಲಿ ಮೂರು ಕಾಡುಕೋಣಗಳು ಕಾಣಿಸಿಕೊಂಡಿದೆ. ಈ ದೃಶ್ಯಗಳು ಸ್ಥಳೀಯರು ಮೊಬೈಲ್‍ಗಳಲ್ಲಿ ಸೆರೆಯಾಗಿದೆ. ಕಳೆದ ಒಂದೆರಡು ತಿಂಗಳಿನಿಂದ ಕಾಡುಗಳಿಂದ ಕಾಡುಕೋಣಗಳು ನಗರದತ್ತ ಮುಖ ಮಾಡುತ್ತಿದೆ. ಜನ ಓಡಾಡುವ ರಸ್ತೆಗಳು, ಜನವಸತಿ ಪ್ರದೇಶಗಳತ್ತ ಬರುತ್ತಿದೆ. ಕಾರ್ಕಳ ತಾಲೂಕು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಇರುವುದರಿಂದ ಈ ಭಾಗದಲ್ಲಿ ಚಿರತೆ, ನವಿಲು, ಜಿಂಕೆ ಸಾಮಾನ್ಯವಾಗಿತ್ತು. ಇದೀಗ ಕೆಲ ದಿನಗಳಿಂದ ಕಾಡುಕೋಣಗಳ ಹಾವಳಿ ಕೂಡ ಜಾಸ್ತಿಯಾಗಿದೆ.

    ಪೆರುವಾಜೆಯಲ್ಲಿ ಕಾಡುಕೋಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ಕಾಡುಕೋಣಗಳು ಕಣ್ಮರೆಯಾಗಿದೆ. ಪಶ್ಚಿಮ ಘಟ್ಟದ ತಪ್ಪಲು ಕೃಷಿ ಭೂಮಿ, ಗದ್ದೆಗಳಿಗೂ ಕಾಡುಕೋಣಗಳು ಇತ್ತೀಚೆಗೆ ಲಗ್ಗೆ ಇಡುತ್ತಿದೆ ಎಂದು ಕೃಷಿಕರು ದೂರಿದ್ದಾರೆ.

    ಸ್ಥಳೀಯ ಅಜಯ್ ಮಾತನಾಡಿ, ಪಶ್ಚಿಮ ಘಟ್ಟಕ್ಕೆ ಹತ್ತಿರ ಇರುವುದರಿಂದ ನಮ್ಮ ಊರಿಗೆ ಹೆಚ್ಚಿನ ಕಾಡುಪ್ರಾಣಿಗಳು ಬರುತ್ತವೆ. ಬೆಳೆಯನ್ನೆಲ್ಲಾ ನಾಶ ಮಾಡುತ್ತವೆ. ಸಂಬಂಧಿಸಿದ ಶಾಸಕರು ಸಚಿವರು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬೆಳೆದ ಬೆಳೆಯೆಲ್ಲ ಕಾಡುಪ್ರಾಣಿಗಳ ಪಾಲಾದ್ರೆ ನಮ್ಮ ಪಾಡೇನು ಎಂದು ಪ್ರಶ್ನಿಸಿದ್ದಾರೆ.

  • ಮಲಗಿದ್ದ ಮಗುವನ್ನ ಹೊತ್ತೊಯ್ದು ತಿಂದ ಚಿರತೆ – ಅರ್ಧ ದೇಹ ಪತ್ತೆ

    ಮಲಗಿದ್ದ ಮಗುವನ್ನ ಹೊತ್ತೊಯ್ದು ತಿಂದ ಚಿರತೆ – ಅರ್ಧ ದೇಹ ಪತ್ತೆ

    ರಾಮನಗರ: ಪೋಷಕರ ಬಳಿ ಮಲಗಿದ್ದ ಮಗುವನ್ನು ಚಿರತೆಯೊಂದು ಹೊತ್ತೊಯ್ದು ಅರ್ಧ ಚಿಂದು ಸಾಯಿಸಿರುವ ಅಮಾನವೀಯ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯದಲ್ಲಿ ನಡೆದಿದೆ.

    ಮೂರು ವರ್ಷದ ಹೇಮಂತ್‍ನನ್ನು ಚಿರತೆ ತಿಂದು ಸಾಯಿಸಿದೆ. ಹೇಮಂತ್ ತನ್ನ ತಾತನ ಮನೆಗೆ ಬಂದಿದ್ದ ಸಂದರ್ಭದಲ್ಲಿ ಇಂದು ನಸುಕಿನ ಜಾವ ಸುಮಾರು 2 ಗಂಟೆಗೆ ಈ ಘಟನೆ ನಡೆದಿದೆ. ಮನೆ ಸಮೀಪದ ಕಾಡಿನಲ್ಲಿ ಮಗುವನ್ನು ತಿಂದು ಹೋಗಿದೆ. ಇದೀಗ ಮಗುವಿನ ಅರ್ಧ ದೇಹ ಪತ್ತೆಯಾಗಿದೆ.

    ಮೃತ ಹೇಮಂತ್ ದೊಡ್ಡೇರಿ ಗ್ರಾಮದ ಚಂದ್ರಶೇಖರ್ ಮತ್ತು ಮಂಗಳ ದಂಪತಿಯ ಮಗುವಾಗಿದೆ. ಶುಕ್ರವಾರ ರಾತ್ರಿ ಮನೆಯಲ್ಲಿ ಹೇಮಂತ್ ತಂದೆ-ತಾಯಿಯ ಜೊತೆ ಮಲಗಿದ್ದನು. ಆದರೆ ಪೋಷಕರು ಸೆಕೆ ಹೆಚ್ಚಾಗಿದ್ದರಿಂದ ಬಾಗಿಲನ್ನ ತೆಗೆದು ಮಲಗಿದ್ದರು. ಈ ವೇಳೆ ಬಂದ ಚಿರತೆ ಮಲಗಿದ್ದ ಮಗುವನ್ನ ಹೊತ್ತೊಯ್ದಿದೆ.

    ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದೌಡಾಯಿಸಿದ್ದಾರೆ. ಬಳಿಕ ಮಗುವಿಗಾಗಿ ಹುಡುಕಾಟ ಶುರುಮಾಡಿದ್ದಾರೆ. ಆದರೆ ಮಗುವಿನ ಅರ್ಧ ದೇಹ ಮನೆ ಬಳಿ ಇರುವ ಕಾಡಿನಲ್ಲಿ ಪತ್ತೆಯಾಗಿದೆ.

    ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಅಕ್ರಮ ಮರ ಸಾಗಾಣೆ: ಇಬ್ಬರ ಬಂಧನ

    ಅಕ್ರಮ ಮರ ಸಾಗಾಣೆ: ಇಬ್ಬರ ಬಂಧನ

    ಕೊಡಗು: ಅನಧಿಕೃತವಾಗಿ ಹೆಬ್ಬಲಸಿನ ಮರಗಳನ್ನು ಸಾಗಾಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸುವಲ್ಲಿ ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದು, 3 ಲಕ್ಷ ಮೌಲ್ಯದ ಮರಗಳನ್ನು ವಶಪಡಿಸಿಕೊಂಡಿದ್ದಾರೆ.

    ವಿರಾಜಪೇಟೆ ತಾಲೂಕಿನ ಸಿ.ಎಸ್.ಸುಗುಣ, ಚೆನ್ನೈ ಕೋಟೆಯ ಪಿ.ಕೆ. ಮಜೀದ್ ಇಬ್ಬರನ್ನು ಬಂಧಿಸಿದ್ದು, ಲಾರಿ ಮಾಲೀಕ ರಫೀಕ್ ಹಾಗೂ ನಾಪೋಕ್ಲು ನಿವಾಸಿ ಹಂಸ ಇಬ್ಬರು ತಲೆ ಮರೆಸಿಕೊಂಡಿದ್ದಾರೆ.

    ಮಡಿಕೇರಿಯಿಂದ ಸೋಮವಾರಪೇಟೆ ತಾಲೂಕಿಗೆ ಸಂಪರ್ಕ ಕಲ್ಪಿಸುವ ಐಗೂರು ಗ್ರಾಮದ ಕಾಜೂರು ರಸ್ತೆ ಲಾರಿ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ. ಯಾರಿಗೂ ಅನುಮಾನ ಬಾರದಂತೆ ಆರೋಪಿಗಳು ಲಾರಿಯಲ್ಲಿ ಹೆಬ್ಬಲಸಿನ ಮರಗಳನ್ನು ತುಂಬಿ ಅವುಗಳ ಮೇಲೆ ಸಿಲ್ವರ್ ಮರಗಳನ್ನು ತುಂಬಿ ಸೋಮವಾರಪೇಟೆ ಕಡೆಯಿಂದ ಹಾಸನ ಮಾರ್ಗವಾಗಿ ಮಂಗಳೂರಿಗೆ ಸಾಗಿಸುತ್ತಿದ್ದರು ಎನ್ನಲಾಗಿದೆ.

    ಮಜೀದ್ ಕೆಲ ದಿನಗಳ ಹಿಂದಷ್ಟೇ ಹೆಬ್ಬಲಸು ಮರಗಳನ್ನು ಸಾಗಿಸುತ್ತಿದ್ದಾಗ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಹೊರಗೆ ಬಂದಿದ್ದನು. ಕಾರ್ಯಚರಣೆಯಲ್ಲಿ ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿ ಕ್ಷಮಾ, ಸತೀಶ್ ಕುಮಾರ್ ಅರಣ್ಯ ರಕ್ಷಕರಾದ ರಾಜಣ್ಣ, ಮೋಹನ್, ವಿಜಯ್ ಹಾಗೂ ವಾಹನ ಚಾಲಕ ನಂದೀಶ್ ಭಾಗವಹಿಸಿದ್ದರು.