Tag: ಅರಣ್ಯ ಅಧಿಕಾರಿ

  • ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ಪರಿಹಾರ ವಿತರಣೆ

    ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ಪರಿಹಾರ ವಿತರಣೆ

    ಮಡಿಕೇರಿ: ಇತ್ತೀಚೆಗೆ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಮೀಸಲು ಅರಣ್ಯದ ಕೂಪಾಡಿ ಗಿರಿಜನರ ಹಾಡಿಯ ತಮ್ಮಣ್ಣ (67) ಅವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ (Kodagu Forest Department) 15 ಲಕ್ಷ ರೂ. ಪರಿಹಾರದ ಚೆಕ್‌ ಅನ್ನು ವಿತರಿಸಲಾಯಿತು.

    ಮೃತರ ತಾಯಿ ಬೋಜಿ ಅವರಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ ಗೋಪಾಲ್ ಚೆಕ್ ವಿತರಿಸಿದರು. ಶಾಸಕ ಡಾ.ಮಂತರ್‌ಗೌಡ ಅವರ ಸೂಚನೆಯಂತೆ ಚೆಕ್ ವಿತರಿಸಲಾಗಿದೆ. ಪರಿಹಾರ ಹಣವನ್ನು ಉತ್ತಮ ಕಾರ್ಯಕ್ಕೆ ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು. ಇದನ್ನೂ ಓದಿ: ವಿಜಯೇಂದ್ರ ಸಿಎಂ ಆಗೋದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ – ಕೆ.ಶಿವನಗೌಡ ನಾಯಕ್

    ಹಾಡಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಕಾಡಾನೆಗಳ ಬಗ್ಗೆ ಎಚ್ಚರ ವಹಿಸಬೇಕು. ಮೀಸಲು ಅರಣ್ಯದೊಳಗೆ ತಿರುಗಾಡಬಾರದು. ಕಾಡಾನೆ ಕಂಡಾಗ ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

    ಮಾನವರ ಮೇಲೆ ದಾಳಿ ಮಾಡುವ ಕಾಡಾನೆಗಳನ್ನು ಹಿಡಿದು ಪಳಗಿಸಲಾಗುವುದು. ಅಂತಹ ಆನೆಗಳನ್ನು ಕಂಡು ಹಿಡಿದು ಸೆರೆಹಿಡಿಯಲಾಗುವುದು ಎಂದು ಹೇಳಿದರು. ಇದನ್ನೂ ಓದಿ:  ಬಿಜೆಪಿಯಲ್ಲಿ ತೀವ್ರಗೊಂಡ ಬಣ ಕಚ್ಚಾಟ – ವಸ್ತುಸ್ಥಿತಿ ವರದಿ ಪಡೆಯಲು ರಾಜ್ಯಕ್ಕೆ ಬಿಎಲ್ ಸಂತೋಷ್ ಎಂಟ್ರಿ

    ಚೆಕ್ ವಿತರಣೆ ಸಂದರ್ಭ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾ‌ರ್, ಮೃತರ ಸಹೋದರ ಅಣ್ಣಯ್ಯ ಮತ್ತು ಹಾಡಿಯ ನಿವಾಸಿಗಳು ಇದ್ದರು.

  • Nelamangala| ಚಿರತೆ ದಾಳಿ- ಮಹಿಳೆ ಬಲಿ

    Nelamangala| ಚಿರತೆ ದಾಳಿ- ಮಹಿಳೆ ಬಲಿ

    ಬೆಂಗಳೂರು: ಚಿರತೆ ದಾಳಿಗೆ ಮಹಿಳೆ ಬಲಿಯಾಗಿರುವ ಘಟನೆ ನೆಲಮಂಗಲ (Nelamangala) ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.

    ಕರಿಯಮ್ಮ (55) ಮೃತ ಮಹಿಳೆ. ರಾತ್ರಿ ಜನಾನುವಾರುಗಳಿಗೆ ಮೇವು ತರಲು ಜಮೀನಿಗೆ ತೆರಳಿದ್ದ ವೇಳೆ ಚಿರತೆ ಮಹಿಳೆಯ ಮೇಲೆ ದಾಳಿ ಮಾಡಿದೆ. ಈ ಘಟನೆಯು ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿರುವ ಗೊಲ್ಲರಹಟ್ಟಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: Chitraduraga| 240 ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಒಂದೇ ಕೊಠಡಿಯಲ್ಲಿ ಪಾಠ!

    ಗ್ರಾಮದಲ್ಲಿ ಚಿರತೆಯು ಆಗಾಗ ಕಾಣಿಸಿಕೊಂಡಿದ್ದು, ಎಚ್ಚೆತ್ತುಕೊಳ್ಳದ ಅರಣ್ಯ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಒಂದೇ ದಿನ ಮೂವರು ಗರ್ಭಿಣಿಯರು ಸಾವು – ಇನ್ನೂ ಬಳ್ಳಾರಿಗೆ ಮುಖ ಮಾಡದ ಜಮೀರ್‌

  • ವನ್ಯಜೀವಿ ಸಂರಕ್ಷಣೆಯ ಸಂದೇಶಕ್ಕೆ 249 ಕಿ.ಮೀ ಸೈಕಲ್ ತುಳಿದ ಅರಣ್ಯಾಧಿಕಾರಿ

    ವನ್ಯಜೀವಿ ಸಂರಕ್ಷಣೆಯ ಸಂದೇಶಕ್ಕೆ 249 ಕಿ.ಮೀ ಸೈಕಲ್ ತುಳಿದ ಅರಣ್ಯಾಧಿಕಾರಿ

    ಮುಂಬೈ: ಅರಣ್ಯ ಅಧಿಕಾರಿಯೊಬ್ಬರಿಗೆ ಪುಣೆಯಿಂದ ಕೊಲ್ಲಾಪುರಕ್ಕೆ ವರ್ಗಾವಣೆಯಾಗಿತ್ತು. ಅಧಿಕಾರ ವಹಿಸಿಕೊಳ್ಳವ ಶುಭ ಸಂದರ್ಭದಲ್ಲಿ ಪರಿಸರ ಜಾಗೃತಿ ಮೂಡಿಸಲು 249 ಕಿ.ಮೀ ಸೈಕಲ್ ತುಳಿದು ಎಲ್ಲೆಡೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಮಹಾರಾಷ್ಟ್ರದ ಅರಣ್ಯ ಅಧಿಕಾರಿ ನಾನಾ ಸಾಹೇಬ್ ಲಾಡ್ಕತ್, ಬಿರು ಬಿಸಿಲ ನಡುವೆ ಕೆಲ ಘಟ್ಟ ಪ್ರದೇಶಗಳನ್ನು ದಾಟಿ 17 ಗಂಟೆಗಳ ನಂತರ ಕೊಲ್ಲಾಪುರ ತಲುಪಿದ್ದಾರೆ. ಈ ವೇಳೆ 12 ಗಂಟೆಗಳ ಕಾಲ ಸೈಕಲ್ ತುಳಿದಿದ್ದಾರೆ. ಇದನ್ನೂ ಓದಿ: ಕ್ರಿಶ್ಚಿಯನ್ ವರ, ಮುಸ್ಲಿಂ ವಧು ಹಿಂದೂ ಸಂಪ್ರದಾಯದಂತೆ ಮದುವೆ

    ಲಾಡ್ಕತ್ ಸಹ್ಯಾದ್ರಿ ಹುಲಿ ಸಂರಕ್ಷಿತಾರಣ್ಯದ ಸಂರಕ್ಷಣಾಧಿಕಾರಿ ಮತ್ತು ಕ್ಷೇತ್ರ ನಿರ್ದೇಶಕ ಹುದ್ದೆ ಸ್ವೀಕರಿಸಿದ್ದಾರೆ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಸಂದೇಶ ನೀಡುವುದು ಸ್ಲೈಕ್ಲಿಂಗ್ ಹಿಂದಿನ ಉದ್ದೇಶ ಎಂದು ಲಾಡ್ಕತ್ ಹೇಳಿದರು.

    ಬಿಸಿಲಿನ ತೀವ್ರತೆ ಹೆಚ್ಚಳದಿಂದ ಸ್ವಲ್ಪ ವಿರಾಮದ ಅಗತ್ಯವಿತ್ತು. ಪುಣೆ ಮತ್ತು ಸಾತರ ಜಿಲ್ಲೆ ನಡುವಿನ ಕಾಂಬಟ್ಕಿ ಘಟ್ಟ ಪ್ರದೇಶದಲ್ಲಿ ತೆರಳುವುದು ಸವಾಲಿನಿಂದ ಕೂಡಿತ್ತು. ಆದರೆ ಹೇಗೋ ಅದನ್ನು ನಿರ್ವಹಿಸಿದೆ. ಸ್ಲೈಕ್ಲಿಂಗ್ ನನ್ನ ಹವ್ಯಾಸವಾಗಿದೆ. ಆರಂಭದಲ್ಲಿ ದಿನವೊಂದರಲ್ಲಿ 60 ಕಿಲೋ ಮೀಟರ್ ದಾಟಿರಲಿಲ್ಲ. ಆದರೆ ಕೊಲ್ಲಾಪುರಕ್ಕೆ ವರ್ಗಾವಣೆಯಾದಾಗ ಅಲ್ಲಿಗೆ ಒಂದು ದಿನದಲ್ಲಿಯೇ ಸೈಕಲ್ ನಲ್ಲಿಯೇ ಹೋಗಬೇಕೆಂದು ನಿರ್ಧರಿಸಿದ್ದೆ ಎಂದು ಖಾಸಗಿ ವಾಹಿನಿಗೆ ಹೇಳಿದ್ದಾರೆ.

  • ಶ್ರೀಗಂಧ ಕಳ್ಳನ ಬಂಧನ – 910 ಕೆಜಿ ಶ್ರೀಗಂಧ ವಶ

    ಶ್ರೀಗಂಧ ಕಳ್ಳನ ಬಂಧನ – 910 ಕೆಜಿ ಶ್ರೀಗಂಧ ವಶ

    ಶಿವಮೊಗ್ಗ: ತುಂಗಾನಗರ ಠಾಣೆ ಪೊಲೀಸರು ಹಾಗು ಅರಣ್ಯಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 910 ಕೆಜಿ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

    ಶಿವಮೊಗ್ಗ ಜಿಲ್ಲೆಯ ಟಿಪ್ಪುನಗರದ 7ನೇ ತಿರುವಿನ ಗೋಡೌನ್‍ವೊಂದರಲ್ಲಿ, ಆರೋಪಿ ಅಪ್ಸರ್ 910 ಕೆಜಿ ಗಂಧದ ತುಂಡುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ:  ಮಾಜಿ ಶಾಸಕ, ಜೆಡಿಎಸ್ ನಾಯಕ ಕೋನರೆಡ್ಡಿ ಕಾಂಗ್ರೆಸ್ ಸೇರ್ಪಡೆ

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್, ಬಂಧಿತ ಆರೋಪಿ ಅಪ್ಸರ್ ಬೇರೆ-ಬೇರೆ ಕಡೆಯಿಂದ ಶ್ರೀಗಂಧದ ತುಂಡುಗಳನ್ನು ತೆಗೆದುಕೊಂಡು ಬಂದು ಸಂಗ್ರಹಿಸಿಟ್ಟಿದ್ದ. ಇದನ್ನು ಅಮರಾವತಿಗೆ ಮಾರಾಟ ಮಾಡಲು ಯತ್ನಿಸಿದ್ದ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ ಎಂದರು.

    ಬಂಧಿತ ಆರೋಪಿ ಅಪ್ಸರ್ ವಿರುದ್ಧ ಈ ಹಿಂದೆ ಯಾವುದೇ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಯಾವುದೇ ಮಾಹಿತಿ ಇಲ್ಲ. ಅರಣ್ಯ ಇಲಾಖೆಯಲ್ಲಿ ಮಾಹಿತಿ ಇದ್ದು, ಈತನ ವಿರುದ್ಧ ಅರಣ್ಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.

  • ಅರಣ್ಯ ಇಲಾಖೆಯ ಹುತಾತ್ಮ ಅಧಿಕಾರಿ, ಸಿಬ್ಬಂದಿಗೆ ಗೌರವ ನಮನ ಸಲ್ಲಿಕೆ

    ಅರಣ್ಯ ಇಲಾಖೆಯ ಹುತಾತ್ಮ ಅಧಿಕಾರಿ, ಸಿಬ್ಬಂದಿಗೆ ಗೌರವ ನಮನ ಸಲ್ಲಿಕೆ

    ಮಡಿಕೇರಿ: ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದಂತಹ ಹುತಾತ್ಮ ಅಧಿಕಾರಿ, ಸಿಬ್ಬಂದಿಗಳಿಗೆ ಮಡಿಕೇರಿಯಲ್ಲಿ ಗೌರವ ನಮನ ಸಲ್ಲಿಸಲಾಯಿತು.

    ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಹಿನ್ನೆಲೆ ಕೊಡಗು ಅರಣ್ಯ ವೃತ್ತದಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದಂತಹ ಅರಣ್ಯ ಅಧಿಕಾರಿಗಳಿಗೆ ಗೌರವ ಸಲ್ಲಿಸುವ ಮೂಲಕ ಹುತಾತ್ಮ ದಿನಾಚರಣೆಯನ್ನು ಮಡಿಕೇರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದನ್ನೂ ಓದಿ: ಕರ್ನಾಲ್ ರೈತ ಪ್ರತಿಭಟನೆಗೆ ಮಣಿದ ಸರ್ಕಾರ – ಐಎಎಸ್ ಅಧಿಕಾರಿಯ ವಿರುದ್ಧ ತನಿಖೆಗೆ ಅಸ್ತು

    ಮಡಿಕೇರಿ ನಗರದ ಅರಣ್ಯ ಭವನದಲ್ಲಿ ಅಯೋಜಿಸಲಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಅರಣ್ಯ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳು ತಾಕತ್ ಸಿಂಗ್ ರಾಣಾವತ್ ಹಾಗೂ ಮಡಿಕೇರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಏ ಟಿ ಪೂವಯ್ಯ ಹಾಗೂ ಕೊಡಗು ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು, ಉಪವಲಯ ಅರಣ್ಯ ಅಧಿಕಾರಿಗಳು, ಅರಣ್ಯ ರಕ್ಷಕರು, ಅರಣ್ಯ ವೀಕ್ಷಕರು ಮತ್ತು ಕಚೇರಿ ಸಿಬ್ಬಂದಿ ಹುತಾತ್ಮರಾದ ಅಧಿಕಾರಿ ಹಾಗೂ ಸಿಬ್ಬಂದಿಗೆ ಗೌರವ ಸಮರ್ಪಣೆ ಮಾಡಿದರು. ಇದನ್ನೂ ಓದಿ: 46 ವರ್ಷದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆ 

  • 15 ಅಡಿ ಉದ್ದದ ಬೃಹತ್ ಕಾಳಿಂಗ ಸೆರೆ

    15 ಅಡಿ ಉದ್ದದ ಬೃಹತ್ ಕಾಳಿಂಗ ಸೆರೆ

    ಚಿಕ್ಕಮಗಳೂರು: ಸುಮಾರು 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಗ್ರಾಮದಲ್ಲಿ ನಡೆದಿದೆ.

    ಅತ್ತಿಗೆರೆ ಗ್ರಾಮದ ಮಂಜುನಾಥ್ ಗೌಡ ಎಂಬವರ ತೋಟದಲ್ಲಿ 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಕಾಫಿ ತೋಟದಲ್ಲಿ ಕಾಳಿಂಗ ಸರ್ಪಗಳಿರುವುದು ಮಾಮೂಲಿ. ಅವು ಇದ್ದಲ್ಲೇ ಇರುವುದಿಲ್ಲ. ಬರುತ್ತದೆ, ಹೋಗುತ್ತೆ ಎಂದು ಜನ ಕೂಡ ಸುಮ್ಮನಾಗುತ್ತಿದ್ದರು. ಇದನ್ನು ಓದಿ: ಮನವಿ ಸ್ವೀಕರಿಸಲು ಬಾರದ ಸಚಿವರು – ಮನವಿ ಪತ್ರ, ಹೂವುಗಳನ್ನು ಸಮುದ್ರಕ್ಕೆ ಅರ್ಪಿಸಿ ಮೀನುಗಾರರಿಂದ ವಿನೂತನ ಪ್ರತಿಭಟನೆ

    ಆದರೆ ಲಾಕ್‍ಡೌನ್ ಇರುವುದರಿಂದ ತೋಟದಲ್ಲಿ ಹೆಚ್ಚಿನ ಕೆಲಸಗಾರರು ಇರಲಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಕಳೆದ ಎರಡು ದಿನಗಳಿಂದ ಕಾಳಿಂಗ ಸರ್ಪ ದಿನ ಕಾಣಿಸಿಕೊಳ್ಳುತ್ತಿರುವುದರಿಂದ ಕೆಲಸಗಾರರು ಭಯಗೊಂಡಿದ್ದಾರೆ. ಕೊನೆಗೆ ಆ ಬೃಹತ್ ಕಾಳಿಂಗ ಸರ್ಪವನ್ನ ಕಂಡ ಕೆಲಸಗಾರನೊಬ್ಬ ತೋಟದ ಮಾಲೀಕರ ಗಮನಕ್ಕೆ ತಂದಿದ್ದಾರೆ. ಕೂಡಲೇ ತೋಟದ ಮಾಲೀಕ ಮಂಜುನಾಥ್ ಗೌಡ ವಿಷಯವನ್ನ ಸ್ನೇಕ್ ಆರೀಫ್ ತಿಳಿಸಿದ್ದಾರೆ.

    ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಳಿಂಗ ಸರ್ಪವನ್ನ ಸೆರೆ ಹಿಡಿದಿದ್ದಾರೆ. ಕಾಫಿ ತೋಟ ಆಗಿರುವುದರಿಂದ ಕಾಳಿಂಗ ಸರ್ಪ ತೋಟದೊಳಗೆ ವೇಗವಾಗಿ ಸಂಚರಿಸುತ್ತೆ. ಗಿಡಗಳ ಮಧ್ಯೆ ಹಾವುಗಳು ಹೋದಷ್ಟು ವೇಗವಾಗಿ ಜನಸಾಮಾನ್ಯರು ಹೋಗಿ ಹಾವನ್ನ ಹಿಡಿಯುವುದು ಕಷ್ಟ. ಆದರೂ ಸ್ನೇಕ್ ಆರೀಫ್ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಳಿಂಗನನ್ನ ಸೆರೆ ಹಿಡಿದಿದ್ದಾರೆ.

    ಬಳಿಕ ಸೆರೆ ಹಿಡಿದ ಕಾಳಿಂಗ ಸರ್ಪವನ್ನ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಪರಿಸರವಾದಿಗಳು ಜಿಲ್ಲೆಯ ಮಲೆನಾಡು ಭಾಗದಲ್ಲಿ ಹಾವಾಡಿಗರು ಹಾವನ್ನ ಸೆರೆ ಹಿಡಿಯುವ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದನ್ನು ಓದಿ:ಮದ್ಯಕ್ಕಾಗಿ ಕ್ಯೂ- ಮದ್ಯದಂಗಡಿ ಮುಂದೆ ನೂಕುನುಗ್ಗಲು

  • ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ್ದ 8 ವರ್ಷದ ಚಿರತೆ ಸೆರೆ

    ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ್ದ 8 ವರ್ಷದ ಚಿರತೆ ಸೆರೆ

    ಬೆಂಗಳೂರು: ಕಳೆದ ಕೆಲವು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆಯೊಂದು ಇಂದು ಬೋನಿಗೆ ಬಿದ್ದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ಬಳಿಯ ಸೀಗೆಪಾಳ್ಯ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಅನೇಕ ದಿನಗಳಿಂದ ಉಪಟಳ ನೀಡುತ್ತಿದ್ದ ಸುಮಾರು 8 ವರ್ಷದ ಗಂಡು ಚಿರತೆಯನ್ನು ಅರಣ್ಯ ಅಧಿಕಾರಿಗಳು ಬೋನ್ ಇಟ್ಟು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ಈ ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

    ಚಿರತೆ ಸೆರೆಯಾದ ಸ್ಥಳಕ್ಕೆ ನೆಲಮಂಗಲ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಚಿರತೆಯನ್ನು ಬಿಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

    ಈ ವೇಳೆ ಸ್ಥಳೀಯ ಸಿದ್ಧರಾಜು ಮಾತನಾಡಿ, ಶಿವಗಂಗೆ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಕಾಡುಪ್ರಾಣಿಗಳು ಗ್ರಾಮದತ್ತ ಬರುತ್ತಿವೆ. ಅರಣ್ಯ ಅಧಿಕಾರಿಗಳು ಕಾಡು ಪ್ರಾಣಿಗಳ ಸಂತತಿ ಉಳಿಸುವ ನಿಟ್ಟಿನಲ್ಲಿ ನಾಡಿನತ್ತ ಬರುತ್ತಿರುವ ಪ್ರಾಣಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಅಲ್ಲದೆ ಈ ಚಿರತೆ ಕಳೆದ ಒಂದು ತಿಂಗಳಿನಿಂದ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟುಮಾಡಿತ್ತು. ಸದ್ಯ ಕಳೆದ ರಾತ್ರಿ ಆಹಾರ ಹರಸಿ ಬಂದ ಚಿರತೆ ಅರಣ್ಯಾಧಿಕಾರಿಗಳು ಅಳವಡಿಸಿದ್ದ ಬೋನಿನಲ್ಲಿ ಸೆರೆಯಾಗಿದೆ ಎಂದು ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

  • ಅರಣ್ಯ ಇಲಾಖೆ ಕಮಿಷನರ್‌ನಿಂದ ತುಘಲಕ್ ದರ್ಬಾರ್!

    ಅರಣ್ಯ ಇಲಾಖೆ ಕಮಿಷನರ್‌ನಿಂದ ತುಘಲಕ್ ದರ್ಬಾರ್!

    – ಆದೇಶ ಓದ್ತಿದ್ದಂತೆ ಕುಸಿದು ಬಿದ್ದ ಡಿವೈಆರ್ ಎಫ್
    – ಆಸ್ಪತ್ರೆಗೆ ದಾಖಲಾದ ಮಲ್ಲಿಕಾರ್ಜುನ ಕಳಮನಿ

    ಯಾದಗಿರಿ: ಅರಣ್ಯ ಇಲಾಖೆ ಕಮಿಷನರ್ ನಿಂದ ತುಘಲಕ್ ದರ್ಬಾರ್ ನಡೆಯುತ್ತಿದೆ ಎಂಬ ಆರೋಪವೊಂದು ಕೇಳಿ ಬಂದಿದೆ.

    ಲಕ್ಷ-ಲಕ್ಷ ದಂಡ ವಸೂಲಿ ಮಾಡಿ ಇಲ್ಲ ನಿಮ್ಮ ವೇತನ ಕಟ್ ಆಗುತ್ತೆ ಎಂದು ಡಿಸಿಎಫ್ ಆದೇಶ ಹೊರಡಿಸಿದ್ದಾರೆ. ಈ ಆದೇಶ ನೋಡಿ ಯಾದಗಿರಿ ಅರಕೇರಿ ಡಿವೈಆರ್ ಎಫ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಅಪರಾಧಿಗಳಿಂದ ಜಾಸ್ತಿ ದಂಡ ವಸೂಲಿ ಮಾಡದಿದ್ದರೆ ನಿಮ್ಮ ಸಂಬಳ ಕಟ್ ಮಾಡುತ್ತೇನೆ ಅಂತ ಡಿಸಿಎಫ್ ಮತ್ತು ಖಅಈ ಕೆಳಹಂತದ ಅಧಿಕಾರಿಗಳಿಗೆ ಬೇದರಿಕೆ ಹಾಕುತ್ತಿದ್ದಾರೆ. ಸಂಬಳ ಕಟ್ ಮಾಡೋದಾಗಿ ಯಾದಗಿರಿ ಆಅಈ ರವಿಶಂಕರ್ ಮತ್ತು ಆರ್ ಸಿಎಫ್, ಬಿಎಸ್  ಗೆ ಲಿಖಿತ ಆದೇಶ ಹೊರಡಿಸಿದ್ದಾರೆ. ಡಿಸಿಎಫ್ ಆದೇಶ ಕಂಡು ಸಿಬ್ಬಂದಿ ತಬ್ಬಿಬಾಗಿದ್ದು, ಆದೇಶಕ್ಕೆ ಹೆದರಿ ಜಿಲ್ಲೆಯ ಅರಕೇರಿ ಡಿಸಿಎಫ್ ಮಲ್ಲಿಕಾರ್ಜುನ ಕಳಮನಿ ಎದೆನೋವಿನಿಂದ ಆಸ್ಪತ್ರೆ ಸೇರಿದ್ದಾರೆ.

    ಮಲ್ಲಿಕಾರ್ಜುನ ಕಳಮನಿಗೆ ಬಿಪಿ ಶುಗರ್ ಇದ್ದು ಅಧಿಕಾರಿಗಳ ಆದೇಶ ಓದುತ್ತಿದ್ದಂತೆ ಕಚೇರಿಯಲ್ಲೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲ್ಲಿಕಾರ್ಜುನ ಕಾರ್ಯಾ ಸ್ಥಳದಲ್ಲಿ ಸುಮಾರು 1.20 ಲಕ್ಷ ದಂಡ ಬಾಕಿದೆ. ಇದನ್ನು ಹೇಗೆ ವಸೂಲಿ ಮಾಡಬೇಕು, ಇಲ್ಲದಿದ್ದರೆ ಸಂಬಳ ಕಟ್ ಆಗುತ್ತೆ ಅನ್ನೋ ಆತಂಕದಲ್ಲಿ ಈಗ ಆಸ್ಪತ್ರೆಗೆ ಸೇರಿದ್ದಾರೆ.

    ವಿಚಿತ್ರ ಅಂದ್ರೆ ಕಾನೂನು ಪ್ರಕಾರ ಡಿವೈಆರ್ ಎಫ್  ಗೆ ದಂಡ ವಸೂಲಿಗೆ ಅಧಿಕಾರವಿಲ್ಲ. ಹೀಗಿದ್ದರೂ ದಂಡ ವಸೂಲಿ ಮಾಡುವಂತೆ ಹಿರಿಯ ಅಧಿಕಾರಿಗಳು ಬೇದರಿಕೆ ಹಾಕುತ್ತಿದ್ದಾರೆ. ಜಿಲ್ಲೆಯ ಒಟ್ಟು 7 ರೆಂಜ್ ಅಧಿಕಾರಿಗಳಿಗೆ ಆದೇಶ ಪತ್ರ ನೀಡಲಾಗಿದೆ.

  • ಸಾವಿರ ಮರ ಕಡಿಯುತ್ತೇನೆ ಏನ್ ಮಾಡ್ತೀಯಾ ಮಾಡು: ಬಿಜೆಪಿ ಮುಖಂಡನಿಂದ ಅಧಿಕಾರಿಗೆ ಅವಾಜ್

    ಸಾವಿರ ಮರ ಕಡಿಯುತ್ತೇನೆ ಏನ್ ಮಾಡ್ತೀಯಾ ಮಾಡು: ಬಿಜೆಪಿ ಮುಖಂಡನಿಂದ ಅಧಿಕಾರಿಗೆ ಅವಾಜ್

    ಶಿವಮೊಗ್ಗ: ಜಿಲ್ಲೆಯ ಶಂಕರ ವಲಯ ಅರಣ್ಯ ವ್ಯಾಪ್ತಿಯ ಅರಣ್ಯಾಧಿಕಾರಿಗೆ ಬಿಜೆಪಿ ಯುವ ಮುಖಂಡನೋರ್ವ ಧಮ್ಕಿ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಗಾಜನೂರಿನ ಗಣಪತಿ ದೇವಸ್ಥಾನದ ಮುಂಭಾಗದಲ್ಲಿದ್ದ ಮಾವಿನ ಮರವನ್ನು ತುಂಗಾ ಮೇಲ್ದಂಡೆ ಯೋಜನೆಯ ಎಇಇ ಕುಮಾರಸ್ವಾಮಿ ಎಂಬವರು ಕಡಿಸಿದ್ದರು. ಈ ಸಂಬಂಧ ಎಇಇ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ ನೋಟಿಸ್ ನೀಡಿತ್ತು.

    ಇದರಿಂದ ಸಿಟ್ಟಿಗೆದ್ದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಿರಿರಾಜ್, ವಲಯ ಅರಣ್ಯಾಧಿಕಾರಿಗೆ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾನೆ. ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಿದ ಅಧಿಕಾರಿಗೆ, ‘ನೀನು ಸಸ್ಪೆಂಡ್ ಆಗುವುದು ಗ್ಯಾರಂಟಿ. ಮನೆಗೆ ನುಗ್ಗುತ್ತೇವೆ. ನಾನು ಸಾವಿರ ಮರ ಕಡಿಯುತ್ತೇನೆ, ಏನು ಮಾಡ್ತೀಯಾ ಮಾಡು. ನಮ್ಮದೇ ಸರ್ಕಾರ ಇರೋದು ಸರ್ಕಾರಿ ಸಂಬಳಕ್ಕೆ ಕೆಲಸ ಮಾಡುತ್ತಿರುವ ನಿನಗೆ ಇಷ್ಟೊಂದು ಕೊಬ್ಬಾ’ ಎಂದು ಅವಾಜ್ ಹಾಕಿದ್ದಾನೆ.

    ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪರಿಸರವಾದಿಗಳು ಹಾಗೂ ಸಾರ್ವಜನಿಕರು ಬಿಜೆಪಿ ಯುವ ಮುಖಂಡನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತುಂಗಾ ನಗರ ಠಾಣೆಯಲ್ಲಿ ಬೆದರಿಕೆ ಹಾಗು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣದಡಿ ಬಿಜೆಪಿ ಯುವ ಮುಖಂಡ ಗಿರಿರಾಜ್ ವಿರುದ್ಧ ದೂರು ದಾಖಲಾಗಿದೆ.

  • ಪಾರ್ಸೆಲ್ ಮೂಲಕ ನಾಗರಹಾವು ಕಳುಹಿಸಿದ ಕೊರಿಯರ್ ಕಂಪನಿ

    ಪಾರ್ಸೆಲ್ ಮೂಲಕ ನಾಗರಹಾವು ಕಳುಹಿಸಿದ ಕೊರಿಯರ್ ಕಂಪನಿ

    ಭುವನೇಶ್ವರ್: ಕೊರಿಯರ್ ಕಂಪನಿಯೊಂದು ಕಳುಹಿಸಿದ್ದ ಪಾರ್ಸೆಲ್ ಬಾಕ್ಸ್ ನಲ್ಲಿ ನಾಗರ ಹಾವು ಕಾಣಿಸಿಕೊಂಡ ಘಟನೆ ಓಡಿಶಾದ ಮಯೂರ್‍ ಭಂಜ್ ಜಿಲ್ಲೆಯ ರಾಯರಂಗ್‍ನಲ್ಲಿ ನಡೆದಿದೆ.

    ಮನೆಗೆ ಸಂಬಂಧಪಟ್ಟ ಲೇಖನಗಳು 15 ದಿನಗಳ ಹಿಂದೆ ಆಂಧ್ರ ಪ್ರದೇಶದ ವಿಜಯ್‍ವಾಡ ಮೂಲದ ಎಸ್ ಮುತ್ತುಕುಮಾರ್ ಖಾಸಗಿ ಕೊರಿಯರ್ ಎಜೆನ್ಸಿ ಮೂಲಕ ಬುಕ್ ಮಾಡಿದ್ದಾರೆ. ಈ ಪಾರ್ಸೆಲ್ ಭಾನುವಾರ ಮುತ್ತುಕುಮಾರ್ ಮನೆಗೆ ಬಂದಿದೆ.

    ಈ ವೇಳೆ ಪಾರ್ಸೆಲ್ ಬಂದಿದೆ ಎಂದು ಮುತ್ತುಕುಮಾರ್ ಅವರು ತನ್ನ ಮಯೂರ್‍ ಭಂಜ್‍ನ ರಾಯರಾಂಗ್‍ನಲ್ಲಿ ಇರುವ ಮನೆಯಲ್ಲಿ ಓಪನ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಒಂದು ಭಾಗವನ್ನು ತೆರೆದ ಮುತ್ತುಕುಮಾರ್ ಅವರಿಗೆ ಪಾರ್ಸೆಲ್ ಒಳಗೆ ನಾಗರಹಾವು ಕಂಡಿದೆ. ಪಾರ್ಸೆಲ್‍ನಲ್ಲಿ ಹಾವು ಕಂಡ ಮುತ್ತುಕುಮಾರ್ ಆಘಾತಕ್ಕೊಳಗಾಗಿದ್ದಾರೆ. ನಂತರ ತಕ್ಷಣ ಅರಣ್ಯ ಇಲಾಖೆಗೆ ಕೆರೆ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮುತ್ತುಕುಮಾರ್ ನಾನು 15 ದಿನದ ಹಿಂದೆ ಈ ಪಾರ್ಸೆಲ್ ಬುಕ್ ಮಾಡಿದ್ದೆ. ಅದರಂತೆ ಆಗಸ್ಟ್ 9 ರಂದು ಗುಂಟೂರಿನ ಕೊರಿಯರ್ ಸಂಸ್ಥೆಯಿಂದ ಈ ಪಾರ್ಸೆಲ್ ಬಂದಿದೆ. ಆದರೆ ಓಡಿಶಾಗೆ ಬಂದ ನಂತರ ಈ ಹಾವು ಪಾರ್ಸೆಲ್ ಒಳಗೆ ಸೇರಿಕೊಂಡಿರಬಹುದು ಎಂದು ಹೇಳಿದ್ದಾರೆ.

    ಅರಣ್ಯ ಅಧಿಕಾರಿ ಬಿಪಿನ್ ಚಂದ್ರ ಬೆಹೆರಾ ಪ್ರತಿಕ್ರಿಯಿಸಿ, ನಮಗೆ ಭಾನುವಾರ ಪಾರ್ಸೆಲ್ ಒಳಗೆ ನಾಗರಹಾವು ಇದೆ ಎಂದು ಕರೆ ಬಂತು. ನಾನು ತಕ್ಷಣ ನನ್ನ ಸಹೋದ್ಯೋಗಿಯೊಂದಿಗೆ ಸ್ಥಳಕ್ಕೆ ಬಂದು ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.