Tag: ಅರಣ್ಯ

  • ರಾಮನಗರ | ಹೊಸ ಹುಲ್ಲು ಚಿಗುರಲಿ ಎಂದು ಅರಣ್ಯ ಪ್ರದೇಶಕ್ಕೆ ಬೆಂಕಿ – 30 ಎಕರೆ ಸುಟ್ಟು ಭಸ್ಮ

    ರಾಮನಗರ | ಹೊಸ ಹುಲ್ಲು ಚಿಗುರಲಿ ಎಂದು ಅರಣ್ಯ ಪ್ರದೇಶಕ್ಕೆ ಬೆಂಕಿ – 30 ಎಕರೆ ಸುಟ್ಟು ಭಸ್ಮ

    – ಕೃತ್ಯವೆಸಗಿದ ಕುರಿಗಾಹಿ ಅರೆಸ್ಟ್

    ರಾಮನಗರ: ಹೊಸ ಹುಲ್ಲು ಚಿಗುರಲಿ ಎಂದು ಅರಣ್ಯ ಪ್ರದೇಶಕ್ಕೆ ಬೆಂಕಿ (Fire) ಹಾಕಿದ ಪರಿಣಾಮ ಸುಮಾರು 30 ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿರುವ ಘಟನೆ ಕನಕಪುರ (Kanakapura) ತಾಲೂಕಿನ ದೊಡ್ಡಾಲಹಳ್ಳಿ ವ್ಯಾಪ್ತಿಯ ಸಂಗಮ ವನ್ಯಜೀವಿ ವಲಯದಲ್ಲಿ ನಡೆದಿದೆ.

    ಅರಣ್ಯಕ್ಕೆ ಬೆಂಕಿಹಾಕಿದ ಹೂಳ್ಯ ಗ್ರಾಮದ ರಾಜಪ್ಪ (42) ಎಂಬಾತನನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆ ಸಂಗಮ ವನ್ಯಜೀವಿ ವಲಯದಲ್ಲಿ ಅರಣ್ಯ ಪ್ರದೇಶದಲ್ಲಿ ಕುರಿಗಾಹಿ ರಾಜಪ್ಪ ಮೇಕೆಗಳ ಮೇಯಿಸಲು ಹೋಗಿದ್ದ. ಅರಣ್ಯದಲ್ಲಿರುವ ಒಣ ಹುಲ್ಲು ಸುಟ್ಟರೆ ಹೊಸ ಹುಲ್ಲು ಚಿಗುರುತ್ತೆ. ಇದರಿಂದ ಕುರಿ, ಮೇಕೆಗಳಿಗೆ ಮೇವು ಸಿಗುತ್ತದೆ ಎಂಬ ಕಾರಣಕ್ಕೆ ಅರಣ್ಯಕ್ಕೆ ಬೆಂಕಿಹಚ್ಚಿದ್ದ. ಇದನ್ನೂ ಓದಿ: ಮೊನಾಲಿಸಾ ಸಿನಿಮಾ ವಿವಾದ – ಐವರ ವಿರುದ್ಧ ಬಿತ್ತು ಕೇಸ್‌

    ಅರಣ್ಯಕ್ಕೆ ಬೆಂಕಿಬಿದ್ದ ಹಿನ್ನೆಲೆ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಬಳಿಕ ಬೆಂಕಿನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬೆಂಕಿನಂದಿಸುವಷ್ಟರಲ್ಲಿ ಸುಮಾರು 30 ಎಕರೆಗಳಷ್ಟು ಅರಣ್ಯ ಸುಟ್ಟು ಭಸ್ಮವಾಗಿದೆ. ಈ ವೇಳೆ ಅಕ್ರಮವಾಗಿ ವನ್ಯಜೀವಿ ವಲಯಕ್ಕೆ ಎಂಟ್ರಿಯಾಗಿದ್ದ ರಾಜಪ್ಪನನ್ನ ಹಿಡಿದು ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಬೆಂಕಿಹಾಕಿದ್ದನ್ನ ರಾಜಪ್ಪ ಒಪ್ಪಿಕೊಂಡಿದ್ದಾನೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: 300 ಮಕ್ಕಳ ಮೇಲೆ ವೈದ್ಯನಿಂದ ರೇಪ್ – ನಾನು `ಶಿಶುಕಾಮಿ’ ಎಂದು ತಪ್ಪೊಪ್ಪಿಕೊಂಡ ಆರೋಪಿ

    ಅರಣ್ಯಕ್ಕೆ ಬೆಂಕಿಹಾಕಿದ ಹಿನ್ನೆಲೆ ಕೆಲ ವನ್ಯಜೀವಿಗಳೂ ಸಹ ಸಾವನ್ನಪ್ಪಿದ್ದು, ಬೃಹತ್ ಗಾತ್ರದ ಹೆಬ್ಬಾವು ಸಹ ಬೆಂಕಿಯಲ್ಲಿ ಸುಟ್ಟು ಮೃತಪಟ್ಟಿದೆ. ಇದನ್ನೂ ಓದಿ: ಕ್ರಿಪ್ಟೋ ಕರೆನ್ಸಿ ಹಗರಣ – ಬೆಂಗಳೂರು ಸೇರಿ ದೇಶದ 60 ಕಡೆ ಸಿಬಿಐ ದಾಳಿ

  • ಕಪ್ಪತ್ತಗುಡ್ಡಕ್ಕೆ ಬೆಂಕಿ – ನೂರಾರು ಹೆಕ್ಟೇರ್‌ ಅರಣ್ಯದಲ್ಲಿದ್ದ ಔಷಧಿಯ ಸಸ್ಯಗಳು, ಪ್ರಾಣಿ-ಪಕ್ಷಿಗಳು ಬೆಂಕಿಗಾಹುತಿ

    ಕಪ್ಪತ್ತಗುಡ್ಡಕ್ಕೆ ಬೆಂಕಿ – ನೂರಾರು ಹೆಕ್ಟೇರ್‌ ಅರಣ್ಯದಲ್ಲಿದ್ದ ಔಷಧಿಯ ಸಸ್ಯಗಳು, ಪ್ರಾಣಿ-ಪಕ್ಷಿಗಳು ಬೆಂಕಿಗಾಹುತಿ

    ಗದಗ: ಉತ್ತರ ಕರ್ನಾಟಕದ ಸೈಹಾದ್ರಿ, ಆಯುರ್ವೇದ ಔಷಧಿಯ ಸಸ್ಯಕಾಶಿ, ದೇಶದಲ್ಲಿಯೇ ಶುದ್ಧ ಗಾಳಿಗೆ ಹೆಸರಾದ ಜಿಲ್ಲೆಯ ಕಪ್ಪತಗುಡ್ಡದಲ್ಲಿ (Kappata Gudda) ಬೆಂಕಿ ಕಾಣಿಸಿಕೊಂಡಿದೆ.

    ಬೇಸಿಗೆ ಆರಂಭಕ್ಕೂ‌ ಮುನ್ನ ಔಷಧಿಯ ಸಸ್ಯಕಾಶಿ ಕಪ್ಪತ್ತಗುಡ್ಡ ಬೆಂಕಿಗಾಹುತಿ (Fire) ಆಗುತ್ತಿದೆ. ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಬಳಿ ಗುಡ್ಡಕ್ಕೆ ಬೆಂಕಿ ಹತ್ತಿಕೊಂಡಿದೆ. ಡೋಣಿ ಬಳಿಯ ನಂದಿವೇರಿ ಮಠದ ಹಿಂಭಾಗ,‌ ಬಂಗಾರಕೊಳ್ಳ, ದೊಡ್ಡ ಬಂಗಾರಕೊಳ್ಳ, ಉಪ್ಪಾರ ತಟ್ಟು, ನವಣೆ ರಾಶಿ, ಎತ್ತಿನಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು ನೂರಾರು ಹೆಕ್ಟೇರ್ ಪ್ರದೇಶದ ಅರಣ್ಯ ಪ್ರದೇಶ ಸುಟ್ಟು ಹೋಗಿದೆ.

    ಬೆಂಕಿಯಿಂದ ಸರೀಸೃಪಗಳು, ವನ್ಯಜೀವಿಗಳು, ಔಷಧೀಯ ಸಸ್ಯಗಳು, ಪ್ರಾಣಿ, ಪಕ್ಷಿಗಳು ಬೆಂಕಿಗಾಹುತಿಯಾಗಿವೆ. ಆರ್‌ಎಫ್‌ಒ ಮಂಜುನಾಥ ಮೆಗಲಮನಿ ನೇತೃತ್ವದಲ್ಲಿ ಅನೇಕ ಅರಣ್ಯ ಇಲಾಖೆ‌ ಸಿಬ್ಬಂದಿ ಹಾಗೂ ಸ್ಥಳೀಯರಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು.

     

    ಜೀವದ ಹಂಗು ತೊರೆದು ಬುಧವಾರ ಸಂಜೆಯಿಂದ ಇಂದು ಬೆಳಗಿನ‌ ಜಾವದ ವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಸಿರು ಸಂಪತ್ತು ರಕ್ಷಣೆಗಾಗಿ ಕಪ್ಪತ್ತಗುಡ್ಡದಲ್ಲಿ ಈಗ ಸುಮಾರು 70 ಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

    ಹಸಿರು ಕಾಶಿಗೆ ಮೊದಲು ಗಣಿ ಹಾಗೂ ಭೂಗಳ್ಳರಿಂದ ಕಪ್ಪತ್ತಗುಡ್ಡಕ್ಕೆ ಆಪತ್ತು ಬಂದಿತ್ತು. ಈಗ ಬೆಂಕಿ ಆಪತ್ತು ಬಂದೊದಗಿದೆ. ಯಾರೋ ಕೊಡಿಗೇಡಿಗಳ ಕೃತ್ಯದಿಂದ ಕಪ್ಪತ್ತಗುಡ್ಡ ಬೆಂಕಿ ಕೆನ್ನಾಲಿಗೆಗೆ ನಲುಗಿದೆ. ಗುಡ್ಡದಲ್ಲಿರುವ ವಿಂಡ್ ಫ್ಯಾನ್ ನಿಂದ ಆಗಿರಬಹುದಾ? ಕುರಿಗಾಹಿಗಳ ಕೃತ್ಯನಾ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ.

     

  • ಚಾರ್ಮಾಡಿ ಘಾಟಿಯಲ್ಲಿ ಭಾರೀ ಕಾಡ್ಗಿಚ್ಚು – ನೂರಾರು ಎಕರೆ ಅರಣ್ಯ ನಾಶ, ಸಂಕಷ್ಟದಲ್ಲಿ ಪ್ರಾಣಿ ಸಂಕುಲ

    ಚಾರ್ಮಾಡಿ ಘಾಟಿಯಲ್ಲಿ ಭಾರೀ ಕಾಡ್ಗಿಚ್ಚು – ನೂರಾರು ಎಕರೆ ಅರಣ್ಯ ನಾಶ, ಸಂಕಷ್ಟದಲ್ಲಿ ಪ್ರಾಣಿ ಸಂಕುಲ

    ಚಿಕ್ಕಮಗಳೂರು: ಮುಗಿಲೆತ್ತರದ ಬೆಟ್ಟ-ಗುಡ್ಡಗಳಿಂದ ಕೂಡಿರುವ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ (Charmadi Ghat) ಭಾರೀ ಪ್ರಮಾಣದಲ್ಲಿ ಕಾಡ್ಗಿಚ್ಚು (Wild Fire) ಆವರಿಸಿದ್ದು, ನೂರಾರು ಎಕರೆ ಅರಣ್ಯ, ಅಪರೂಪದ ಶೋಲಾ ಕಾಡು (ನೀರನ್ನ ಹಿಡಿದಿಟ್ಟು ವರ್ಷಪೂರ್ತಿ ನೀರು ಹರಿಸುವ ಸಾಮರ್ಥ್ಯದ ಕಾಡು) ಸುಟ್ಟು ಕರಕಲಾಗಿದೆ.

    ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇವಾಲಯದ ಬಳಿ ಅರಣ್ಯಕ್ಕೆ ಭಾರೀ ಪ್ರಮಾಣದಲ್ಲಿ ಕಾಡ್ಗಿಚ್ಚು ಆವರಿಸಿದ್ದು, ನೂರಾರು ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿದೆ. ಕಳೆದ ವಾರವಷ್ಟೆ ಅದೇ ಚಾರ್ಮಾಡಿ ಘಾಟಿಯ ಬಿದಿರುತಳ ತಪ್ಪಲಿನ ಕಾಡಿನಲ್ಲಿ ಕಾಡ್ಗಿಚ್ಚಿಗೆ ಅರಣ್ಯ ಹಾಗೂ ಪ್ರಾಣಿ ಸಂಕುಲ ನಾಶವಾಗಿತ್ತು. ಕಳೆದ ರಾತ್ರಿ ಮತ್ತೆ ಚಾರ್ಮಾಡಿ ತಪ್ಪಲಿನ ಅರಣ್ಯಕ್ಕೆ ಬೆಂಕಿ ಬಿದ್ದು ಮತ್ತೆ ನೂರಾರು ಎಕರೆ ಅರಣ್ಯ ಭಸ್ಮವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಇದನ್ನೂ ಓದಿ: ಮಹಿಳೆಯರಿಗೆ ಹಣ| ರಾಜ್ಯದ ಹಣಕಾಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತೆ: ಎಸ್‌ಬಿಐ ಎಚ್ಚರಿಕೆ

    ರಸ್ತೆಬದಿ ಇದ್ದ ಬೆಂಕಿಯನ್ನು ನಂದಿಸಿದ ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರು ಗುಡ್ಡ ಏರಿ ಬೆಂಕಿ ನಂದಿಸಲು ಸಾಧ್ಯವಾಗದೆ ಪರದಾಡಿದರು. ಬೆಂಕಿಯ ಕೆನ್ನಾಲಿಗೆ 10 ಕಿಲೋ ಮೀಟರ್‌ನಷ್ಟು ದೂರಕ್ಕೆ ಬೆಂಕಿ ಆವರಿಸಿದ್ದು, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಬೆಂಕಿ ಹೊತ್ತಿಕೊಂಡು ಎರಡು ಗಂಟೆ ಕಳೆದರೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಆರೋಪಿಸಿದರು. ತಡವಾಗಿ ಸ್ಥಳಕ್ಕೆ ಬಂದ ಸಿಬ್ಬಂದಿ ಈ ಭಾಗದಲ್ಲಿ ವನ್ಯಜೀವಿ ಮತ್ತು ಸಸ್ಯ ಸಂಪತ್ತು ಅಪಾರ ಪ್ರಮಾಣದಲ್ಲಿ ಇದ್ದುದ್ದರಿಂದ ಬೆಂಕಿ ನಂದಿಸಲು ಪರದಾಡಿದರು. ಇದನ್ನೂ ಓದಿ: ಟ್ರಕ್, ಕಾರು ಮುಖಾಮುಖಿ ಡಿಕ್ಕಿ – ನಾಲ್ವರು ಸಾವು, ಇಬ್ಬರು ಗಂಭೀರ

    ಚಾರ್ಮಾಡಿ ಘಾಟ್ ಮುಗಿಲೆತ್ತರದ ಬೆಟ್ಟಗುಡ್ಡಗಳಿಂದ ಕೂಡಿರುವ ಬೃಹತ್ ಕಾಡು. ಸಾವಿರಾರು ಪ್ರಾಣಿ-ಪಕ್ಷಿಗಳ ಆವಾಸ ಸ್ಥಾನ. ಅಪರೂಪದ ಸಸ್ಯ ಸಂಪತ್ತಿನ ವನರಾಶಿ. ಇಲ್ಲಿನ ಎತ್ತರದ ಪ್ರದೇಶದ ಕಾಡಿಗೆ ಬೆಂಕಿ ಬಿದ್ದರೆ ಬೆಂಕಿ ನಂದಿಸುವುದು ಕಷ್ಟಸಾಧ್ಯ. ಎತ್ತರದ ಪ್ರದೇಶಕ್ಕೆ ಅಗ್ನಿಶಾಮಕದ ಗಾಡಿ, ಸಿಬ್ಬಂದಿ ಹೋಗೋದು ಕಷ್ಟ. ಅರಣ್ಯ ಅಧಿಕಾರಿಗಳು ಕೈಯಲ್ಲಿ ಸೊಪ್ಪು ಹಿಡಿದೇ ಬೆಂಕಿ ನಂದಿಸಬೇಕು. ಆದರೆ, ಎತ್ತರದ ಪ್ರದೇಶದಲ್ಲಿನ ಗಾಳಿಗೆ ಬೆಂಕಿಯ ಕೆನ್ನಾಲಿಗೆ ಕೂಡ ಹೆಚ್ಚಾಗಿತ್ತು. ಹೆಚ್ಚಾಗುತ್ತಿತ್ತು. ಆದರೆ, ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರ ಹೋರಾಟದಿಂದ ಇಂದು ಬೆಳಗ್ಗೆ 10 ಗಂಟೆ ವೇಳೆಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ. ಮಲ್ಲೇಶ್, ರಂಜಿತ್, ಮುತ್ತಪ್ಪ, ಅಶೋಕ್, ಮೋಹನ್‌ರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಇದನ್ನೂ ಓದಿ: 76ನೇ ಗಣರಾಜೋತ್ಸವಕ್ಕೆ ಸಕಲ ಸಿದ್ಧತೆ – ಭದ್ರತೆ ಹೇಗಿದೆ?

  • ಇನ್ನು ಮುಂದೆ ಅರಣ್ಯದಲ್ಲಿ ಯಾವುದೇ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯ

    ಇನ್ನು ಮುಂದೆ ಅರಣ್ಯದಲ್ಲಿ ಯಾವುದೇ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯ

    ಬೆಂಗಳೂರು: ಅರಣ್ಯ (Forest) ಪ್ರದೇಶದಲ್ಲಿ ಇನ್ನು ಮುಂದೆ ಸಿನಿಮಾ, ಸಾಕ್ಷ್ಯಚಿತ್ರ, ಧಾರಾವಾಹಿ ಸೇರಿದಂತೆ ಯಾವುದೇ ಚಿತ್ರೀಕರಣಕ್ಕೆ (Shooting) ಸರ್ಕಾರದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ (Eshwar Khandre) ಸೂಚನೆ ನೀಡಿದ್ದಾರೆ.

    ಈ ಸಂಬಂಧ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸಚಿವರು ಸೂಚನೆ ನೀಡಿದ್ದಾರೆ.  ಇದನ್ನೂ ಓದಿ: ಕಾಂತಾರ 2ಗೆ ಬಿಗ್ ರಿಲೀಫ್ – ಅಧಿಕಾರಿಗಳಿಂದ ಕ್ಲೀನ್ ಚಿಟ್

     

    ಸೂಚನೆಯಲ್ಲಿ ಏನಿದೆ?
    ಚಲನಚಿತ್ರ, ದೂರದರ್ಶನ ಸಾಕ್ಷ್ಯಚಿತ್ರ, ಧಾರಾವಾಹಿ ಇತ್ಯಾದಿ ಚಿತ್ರೀಕರಣಕ್ಕೆ ಸಂಬಂಧಿತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನಿಗದಿತ ಶುಲ್ಕ ಕಟ್ಟಿಸಿಕೊಂಡು ಅನುಮತಿ ನೀಡುತ್ತಿದ್ದಾರೆ

    ಇದಲ್ಲದೆ ಸ್ಥಳೀಯ ಮಟ್ಟದಲ್ಲೂ ಅಧಿಕಾರಿಗಳು ಅನುಮತಿ ನೀಡುತ್ತಿರುವುದರಿಂದ ಅರಣ್ಯ ಪ್ರದೇಶದ ಗೌಪ್ಯ ಮಾಹಿತಿ ಹೊರ ಜಗತ್ತಿಗೆ ಲಭಿಸುವ ಸಂಭವ ಇರುತ್ತದೆ

    ಇದು ಪರಿಸರ ಹಾಗೂ ಜೀವವೈವಿಧ್ಯಕ್ಕೂ ಧಕ್ಕೆ ತರುತ್ತದೆ. ಅರಣ್ಯ ಹಾಗೂ ವನ್ಯ ಜೀವಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಪ್ರಕೃತಿ ಹಸ್ತಾಂತರಿಸುವ ನಿಟ್ಟಿನಲ್ಲಿ ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲಿ ಯಾವುದೇ ಬಗೆಯ ಚಿತ್ರೀಕರಣಕ್ಕೆ ಕಡ್ಡಾಯವಾಗಿ ಸರ್ಕಾರದ ವತಿಯಿಂದ ಅನುಮತಿ ಪಡೆಯಲು ಸೂಕ್ತ ಆದೇಶ ಹೊರಡಿಸಬೇಕು.

     

  • ಚಾರ್ಮಾಡಿ ಘಾಟ್ ಗುಡ್ಡದ ತುದಿಯಲ್ಲಿ ಕಾಡ್ಗಿಚ್ಚು – ನೂರಾರು ಎಕರೆ ಅರಣ್ಯ ನಾಶ

    ಚಾರ್ಮಾಡಿ ಘಾಟ್ ಗುಡ್ಡದ ತುದಿಯಲ್ಲಿ ಕಾಡ್ಗಿಚ್ಚು – ನೂರಾರು ಎಕರೆ ಅರಣ್ಯ ನಾಶ

    ಚಿಕ್ಕಮಗಳೂರು: ಚಾರ್ಮಾಡಿ ಘಾಟ್ (Charmadi Ghat) ಗುಡ್ಡದ ತುದಿಯಲ್ಲಿ ಕಾಡ್ಗಿಚ್ಚು (Wild Fire) ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ನೂರಾರು ಎಕರೆ ಅರಣ್ಯ ಸುಟ್ಟು ಕರಕಲಾಗಿದೆ.

    ಮೂಡಿಗೆರೆ (Mudigere) ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಿದಿರುತಳ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾಡ್ಗಿಚ್ಚಿಗೆ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದೆ. ಇನ್ನು ಬೆಂಕಿ ಹೆಚ್ಚಾಗುತ್ತಿದ್ದಂತೆ ಪ್ರಾಣಿ ಸಂಕುಲ ದಿಕ್ಕೆಟ್ಟು ಓಡಿದೆ.

    ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ.

  • AK-47, ಐದು 303 ಕೋವಿ, 100ಕ್ಕೂ ಹೆಚ್ಚು ಗುಂಡು – ನಕ್ಸಲರದ್ದು ಎನ್ನಲಾದ ಶಸ್ತ್ರಾಸ್ತ್ರ ಪತ್ತೆ

    AK-47, ಐದು 303 ಕೋವಿ, 100ಕ್ಕೂ ಹೆಚ್ಚು ಗುಂಡು – ನಕ್ಸಲರದ್ದು ಎನ್ನಲಾದ ಶಸ್ತ್ರಾಸ್ತ್ರ ಪತ್ತೆ

    ಚಿಕ್ಕಮಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಶರಣಾದ ನಕ್ಸಲರು ರಹಸ್ಯ ಸ್ಥಳದಲ್ಲಿ ಅಡಗಿಸಿಟ್ಟಿದ್ದರು ಎನ್ನಲಾದ ಶಸ್ತ್ರಾಸ್ತ್ರಗಳು (Naxalite weapons) ಪತ್ತೆಯಾಗಿವೆ.

    ಚಿಕ್ಕಮಗಳೂರು (Chikkamagaluru) ಜಿಲ್ಲೆ, ಕೊಪ್ಪ ತಾಲೂಕಿನ ಜಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿರುವ ಕಿತ್ತಲೆಗಂಡಿ ಕಾಡಿನಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ನಕ್ಸಲರದ್ದೇ ಎಂದು ಹೇಳಲಾಗುತ್ತಿದ್ದರೂ, ಇನ್ನೂ ಖಚಿತವಾಗಿಲ್ಲ. ತನಿಖೆಯಿಂದ ಗೊತ್ತಾಗಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ದನ್ನೂ ಓದಿ: ಚಿಕ್ಕಮಗಳೂರು | ಎಸ್ಟೇಟ್ ಮ್ಯಾನೇಜರ್ ಮೇಲೆ ಅಕ್ರಮ ಬಾಂಗ್ಲಾ ವಲಸಿಗರಿಂದ ಕಲ್ಲು ತೂರಾಟ

    1 ಎಕೆ-47, 303 ಕೋವಿ 5, ಒಂದು ಪಿಸ್ತೂಲ್, 100ಕ್ಕೂ ಹೆಚ್ಚು ಗುಂಡುಗಳು ಮೇಗೂರು ಅರಣ್ಯ ವ್ಯಾಪ್ತಿಯ ಕಿತ್ತಲೆಗಂಡಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿವೆ. ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಅಪರಿಚಿತರ ಆಯುಧಗಳು ಎಂದು ಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದನ್ನೂ ಓದಿ: ನಕ್ಸಲರು ಚೀನಾ, ಪಾಕ್‌ನಿಂದ ಸಹಾಯ ಪಡೆದಿದ್ದಾರೆ: ಸಿ.ಟಿ ರವಿ ಗಂಭೀರ ಆರೋಪ

    ಪೊಲೀಸರು 6 ಮಂದಿ ನಕ್ಸಲರನ್ನು ರಾಷ್ಟ್ರೀಯ ತನಿಖಾ ದಳದ (NIA) ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸುವ ಮೊದಲು ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದರು. ಕೆಲವರು ಅರಣ್ಯದ (Forest) ರಹಸ್ಯ ಸ್ಥಳದಲ್ಲಿ ಅಡಗಿಸಿ ಇಟ್ಟಿರುವುದಾಗಿ ತಿಳಿದುಬಂದಿತ್ತು. ಈ ಸ್ಥಳಗಳ ಮಾಹಿತಿ ಪೊಲೀಸರಿಗೆ ಇರಲಿಲ್ಲ. ಹೀಗಾಗಿ ಪೊಲೀಸರು ಬಾಡಿ ವಾರಂಟ್‌ ಪಡೆದು ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ ಬಳಿಕ ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಿದ್ದಾರೆ ಎನ್ನಲಾಗಿತ್ತು.

    ಪರಪ್ಪನ ಅಗ್ರಹಾರದಲ್ಲಿ ನಕ್ಸಲರು
    ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರ ಎದುರು ಬುಧವಾರ ರಾತ್ರಿ ಶರಣಾದ ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಟಿ.ಎನ್‌. ಜಿಶಾ, ಕೆ.ವಸಂತ್, ಮಾರೆಪ್ಪ ಅರೋಲಿ ಅವರನ್ನು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ದನ್ನೂ ಓದಿ: ಶರಣಾದ ನಕ್ಸಲರಿಗೆ ಎಷ್ಟು ಹಣ ಸಿಗುತ್ತೆ? ಸರ್ಕಾರದ ಪ್ಯಾಕೇಜ್ ಏನು?

    ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಡಿವೈಎಸ್‌ಪಿ ಬಾಲಾಜಿ ಸಿಂಗ್ ಅವರ ನೇತ್ವತ್ವದಲ್ಲಿ ಗುರುವಾರ ನಗರದದಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯವು ಆರು ಮಂದಿಯನ್ನು ಜನವರಿ 30ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ನಂತರ ಪೊಲೀಸರು 6 ಮಂದಿ ನಕ್ಸಲರನ್ನು ಬಿಗಿ ಭದ್ರತೆ ನಡುವೆ ಗುರುವಾರ ರಾತ್ರಿ ಪರಪ್ಪನ ಅಗ್ರಹಾರ (Parappana Agrahara) ಕೇಂದ್ರ ಕಾರಾಗೃಹಕ್ಕೆ ಬಿಟ್ಟು ಬಂದಿದ್ದಾರೆ.

    ಆರು ಮಂದಿ ನಕ್ಸಲರ ವಿರುದ್ಧವೂ ‘ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ’(ಯುಎಪಿಎ) ಅಡಿ ಪ್ರಕರಣ ದಾಖಲಾಗಿದೆ. ಹೀಗಾಗಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

  • ಕಾಡಿನ ರಹಸ್ಯ ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿದ್ದಾರೆ ನಕ್ಸಲರು!

    ಕಾಡಿನ ರಹಸ್ಯ ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿದ್ದಾರೆ ನಕ್ಸಲರು!

    ಬೆಂಗಳೂರು: ರಾಜ್ಯದಲ್ಲಿ ಶರಣಾದ ನಕ್ಸಲರು ( Naxals) ಇನ್ನೂ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿಲ್ಲ. ಆಧುನಿಕ ಶಸ್ತ್ರಾಸ್ತ್ರಗಳನ್ನು (Modern Weapons) ಕಾಡಿನ ರಹಸ್ಯ ಸ್ಥಳದಲ್ಲಿ ಅಡಗಿಸಿಟ್ಟಿರುವ ಶಂಕೆ ವ್ಯಕ್ತವಾಗಿದೆ.

    ಯಾವೊಬ್ಬ ನಕ್ಸಲರು ಕೂಡ ಆಯುಧಗಳನ್ನು ಪೊಲೀಸರಿಗೆ ನೀಡಿಲ್ಲ. ಮುಂದಿನ ವಾರ ಪೊಲೀಸರು ನಕ್ಸಲರ ವಶಕ್ಕೆ ಪಡೆಯಲಿದ್ದು ಬಳಿಕ ಅಡಗಿಸಿಟ್ಟ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ.

    ಪೊಲೀಸರು 6 ಮಂದಿ ನಕ್ಸಲರನ್ನು ರಾಷ್ಟ್ರೀಯ ತನಿಖಾ ದಳದ (NIA) ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸುವ ಮೊದಲು ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಕೆಲವರು ಅರಣ್ಯದ (Forest) ರಹಸ್ಯ ಅಡಗಿಸಿ ಇಟ್ಟಿರುವುದಾಗಿ ತಿಳಿಸಿದ್ದಾರೆ. ಈ ಸ್ಥಳಗಳ ಮಾಹಿತಿ ಪೊಲೀಸರಿಗೆ ಇಲ್ಲ. ಹೀಗಾಗಿ ಪೊಲೀಸರು ಬಾಡಿ ವಾರಂಟ್‌ ಪಡೆದು ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ ಬಳಿಕ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಿದ್ದಾರೆ ಎನ್ನಲಾಗಿದೆ.

    ಎಕೆ 47, ಮಿಷಿನ್‌ ಗನ್‌ಗಳನ್ನು ಇವರು ಬಳಸುತ್ತಿದ್ದರು. ಸಿಎಂ ಮುಂದೆ ಶರಣಾದ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರ ಕಾಡಿನಲ್ಲಿಯೇ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

    ಪರಪ್ಪನ ಅಗ್ರಹಾರದಲ್ಲಿ ನಕ್ಸಲರು
    ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರ ಎದುರು ಬುಧವಾರ ರಾತ್ರಿ ಶರಣಾದ ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಟಿ.ಎನ್‌. ಜಿಶಾ, ಕೆ.ವಸಂತ್, ಮಾರೆಪ್ಪ ಅರೋಲಿ ಅವರನ್ನು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

    ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಡಿವೈಎಸ್‌ಪಿ ಬಾಲಾಜಿ ಸಿಂಗ್ ಅವರ ನೇತ್ವತ್ವದಲ್ಲಿ ಗುರುವಾರ ನಗರದದಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯವು ಆರು ಮಂದಿಯನ್ನು ಜನವರಿ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ನಂತರ ಪೊಲೀಸರು ಆರು ಮಂದಿ ನಕ್ಸಲರನ್ನು ಬಿಗಿ ಭದ್ರತೆ ನಡುವೆ ಗುರುವಾರ ರಾತ್ರಿ ಪರಪ್ಪನ ಅಗ್ರಹಾರ (Parappana Agrahara) ಕೇಂದ್ರ ಕಾರಾಗೃಹಕ್ಕೆ ಬಿಟ್ಟು ಬಂದಿದ್ದಾರೆ. ಇದನ್ನೂ ಓದಿ: ಸ್ನೇಹಮಹಿ ಕೃಷ್ಣ ಹೆಸರಲ್ಲಿ ಹಲವರ ಮೇಲೆ ಅನಾಮಧೇಯರಿಂದ ದೂರು

    ಕೋರ್ಟ್‌ಗೆ ಹಾಜರು ಪಡಿಸುವ ಮೊದಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರು ಮಂದಿಯ ಆರೋಗ್ಯ ತಪಾಸಣೆ ನಡೆಸಲಾಯಿತು.  ಮುಖ್ಯಮಂತ್ರಿಯವರ ಗೃಹ ಕಚೇರಿಯಲ್ಲಿ ಶರಣಾದ ನಂತರ ನಕ್ಸಲರನ್ನು ಪೊಲೀಸರು ಬಂಧಿಸಿದ್ದರು. ನಾಲ್ವರು ಮಹಿಳೆಯರನ್ನು ಸಾಂತ್ವನ ಕೇಂದ್ರ ಹಾಗೂ ಇಬ್ಬರು ಪುರುಷರನ್ನು ಆಡುಗೋಡಿಯ ಎಫ್‌ಎಸ್‌ಎಲ್ ತಾಂತ್ರಿಕ ಕಚೇರಿಯಲ್ಲಿ ಬುಧವಾರ ರಾತ್ರಿ ಇರಿಸಿದ್ದರು.

    ಆರು ಮಂದಿ ನಕ್ಸಲರ ವಿರುದ್ಧವೂ ‘ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ’(ಯುಎಪಿಎ) ಅಡಿ ಪ್ರಕರಣ ದಾಖಲಾಗಿದೆ. ಹೀಗಾಗಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

     

  • ಕೊಡಗಿನಲ್ಲಿ ಹೆಚ್ಚಾದ ಕಾಡು ಪ್ರಾಣಿಗಳ ಹಾವಳಿ – ಜೀವ ಭಯದಲ್ಲಿ ದಿನ ಕಳೆಯುತ್ತಿರುವ ಜನ

    ಕೊಡಗಿನಲ್ಲಿ ಹೆಚ್ಚಾದ ಕಾಡು ಪ್ರಾಣಿಗಳ ಹಾವಳಿ – ಜೀವ ಭಯದಲ್ಲಿ ದಿನ ಕಳೆಯುತ್ತಿರುವ ಜನ

    ಮಡಿಕೇರಿ: ಕೊಡಗಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ. ಸೋಮವಾರ ಪೇಟೆ ತಾಲ್ಲೂಕಿನ ಭುವಂಗಾಲ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಾಡಾನೆಗಳ (Elephant) ಹಿಂಡು ಬೀಡುಬಿಟ್ಟಿವೆ. ಇದರಿಂದಾಗಿ ಜನ ಆತಂಕಗೊಂಡಿದ್ದಾರೆ.

    ಭುವಂಗಾಲ ಗ್ರಾಮದ ರಸ್ತೆಯಲ್ಲಿ ಮರಿಯಾನೆ ಸೇರಿ 11 ಕಾಡಾನೆಗಳ (Forest Elephant) ಹಿಂಡು ನಡು ರಸ್ತೆಯಲ್ಲಿ ಸಂಚಾರ ಮಾಡಿದ ವೀಡಿಯೋ ಸದ್ದು ಮಾಡುತ್ತಿವೆ. ಇದನ್ನೂ ಓದಿ: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮರಕುಂಬಿಯ 98 ಅಪರಾಧಿಗಳಿಗೆ ಜಾಮೀನು

    ರಸ್ತೆಯಲ್ಲೇ ಕೆಲಕಾಲ ಅಡ್ಡಗಟ್ಟಿದ್ದ ಕಾಡಾನೆಗಳು ಬಳಿಕ ಸುತ್ತಮುತ್ತಲಿನ ಕಾಫಿ ತೋಟಕ್ಕೆ ನುಗ್ಗಿ ದಾಂಧಲೆ ನಡೆಸಿವೆ. ಇದರಿಂದ ಅಪಾರ ಬೆಳೆ ನಾಶವಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆಗಳ ಹಿಂಡನ್ನು ಪುನಃ ಕಾಡಿಗೆ ಓಡಿಸಲು ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: ಹಿಪ್ಪರಗಿ ಕಬಡ್ಡಿ ವೈಭವ – ಕಣ್ಮನ ಸೆಳೆದ ಅಂತರ್ ರಾಜ್ಯ ಮಹಿಳಾ ಟೂರ್ನಿ

    ಜಿಲ್ಲೆಯ ಒಂದು ಭಾಗದಲ್ಲಿ ಹುಲಿ ಕಾರ್ಯಚರಣೆ, ಇನೊಂದು ಭಾಗದಲ್ಲಿ ಕಾಡಾನೆಗಳ ಉಪಟಳ ತಡೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರಿಂದ ಜೀವಭಯದಲ್ಲಿ ಗ್ರಾಮದ ಜನ ಮತ್ತು ಕೂಲಿ ಕಾರ್ಮಿಕರು ದಿನ ಕಳೆಯುವಂತಾಗಿದೆ. ಇದನ್ನೂ ಓದಿ: PUBLiC TV Impact | ಕೃಷ್ಣಾ ನದಿಗೆ ಭೇಟಿ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿ

  • HMT ಜಾಗವನ್ನು ರಾಜ್ಯ ಸರ್ಕಾರಕ್ಕೆ ನೀಡಲ್ಲ: ಖಂಡ್ರೆ ವಿರುದ್ಧ ಹೆಚ್‌ಡಿಕೆ ಆಕ್ರೋಶ

    HMT ಜಾಗವನ್ನು ರಾಜ್ಯ ಸರ್ಕಾರಕ್ಕೆ ನೀಡಲ್ಲ: ಖಂಡ್ರೆ ವಿರುದ್ಧ ಹೆಚ್‌ಡಿಕೆ ಆಕ್ರೋಶ

    ಬೆಂಗಳೂರು : ಹೆಚ್‌ಎಂಟಿ ಜಾಗವನ್ನು (HMT Land) ಅರಣ್ಯ ಭೂಮಿ (Forest Land) ಎಂದು ಪರಿಗಣಿಸಿ ರಾಜ್ಯ ಸರ್ಕಾರ ವಶಪಡಿಸಿಕೊಳ್ಳಲು ಮುಂದಾಗಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಕುಮಾರಸ್ವಾಮಿ (HD Kumaraswamy) ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

    ಹೆಚ್‌ಎಂಟಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್‌ಎಂಟಿಗೆ ಸೇರಿದ ಸುಮಾರು 590 ಎಕರೆ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡದ ಸುಮಾರು 290 ಎಕರೆ ಜಾಗವನ್ನು  ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದು ಅರಣ್ಯ ಇಲಾಖೆಯ ಜಾಗ ಎಂದು ವಶಪಡಿಸಿಕೊಳ್ಳಬೇಕು ಎಂದು ಈಶ್ವರ್‌ ಖಂಡ್ರೆ ಅವರು ಅಧಿಕಾರಿಗಳಿಗೆ ಟಿಪ್ಪಣಿ ಬರೆದಿದ್ದಾರೆ. ನನ್ನ ಮೇಲಿನ ದ್ವೇಷಕ್ಕೆ ಹೀಗೆ ಮಾಡುವುದು ಸರಿಯಲ್ಲ ಅಂತ ಕಿಡಿಕಾರಿದರು.

    ಹೆಚ್‌ಎಂಟಿಗೆ ಈ ಜಮೀನನ್ನು ಸರ್ಕಾರ ಪುಕ್ಕಟ್ಟೆಯಾಗಿ ಕೊಟ್ಟಿಲ್ಲ. ಇದಕ್ಕೆ ಹಣ ಪಡೆದಿದೆ. ಇದಲ್ಲದೆ ಅರಣ್ಯ ಇಲಾಖೆ ಕೂಡಾ ಹಿಂದೆ ಜಮೀನು ಖರೀದಿಗೆ ಒಪ್ಪಿಗೆ ಕೊಟ್ಟಿತ್ತು. ಈಗ ಯಾಕೆ ಏಕಾಏಕಿಯಾಗಿ ಖಾಲಿ ಜಾಗ ವಶಪಡಿಸಿಕೊಳ್ಳಲು ಮುಂದಾಗಿದ್ದೀರಿ? ಯಾರಿಗೆ ಹಂಚಲು ಈ ಆದೇಶ ಮಾಡಿದ್ದೀರಾ ಅಂತ ಈಶ್ವರ್ ಖಂಡ್ರೆಗೆ ಪ್ರಶ್ನೆ ಮಾಡಿದರು.

    1963 ರಲ್ಲಿ ಖರೀದಿ ವೇಳೆ ಆದ ಎಲ್ಲಾ ದಾಖಲಾತಿಗಳು ಹೆಚ್‌ಎಂಟಿ ಬಳಿ ಇವೆ. ಎಚ್‌ಎಂಟಿ, ಇಸ್ರೋದವರು NOC ಕೇಳಿದ್ರೆ ಕೊಡುತ್ತಿಲ್ಲ. ಆದರೆ ಖಾಸಗಿ ಸಂಸ್ಥೆ ಪ್ರೆಸ್ಟೀಜ್ ಕಂಪನಿ ಕೇಳಿದ ಕೂಡಲೇ ಎನ್‌ಒಸಿ ಕೊಡುತ್ತಾರೆ. ‌ ಇದರಲ್ಲಿ ಬ್ರ್ಯಾಂಡ್ ಬೆಂಗಳೂರು ಮಾಡುವವರ ಕೈವಾಡ ಇದೆಯಾ ಅಂತ ಪರೋಕ್ಷವಾಗಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಕಿಡಿಕಾರಿದರು.

    ಕುಮಾರಸ್ವಾಮಿ ಮೇಲೆ ಇರುವ ದ್ವೇಷಕ್ಕೆ ರಾಜ್ಯವನ್ನು ಈಶ್ವರ್ ಖಂಡ್ರೆ ಹಾಳು ಮಾಡಿಕೊಳ್ಳೋದು ಬೇಡ. ನನಗೆ ಲಾಟರಿ ಸಿಸ್ಟಮ್ ನಲ್ಲಿ ದೇವರು ಅಧಿಕಾರ ಕೊಟ್ಟಿದ್ದಾರೆ. ಇದರಲ್ಲಿ ನಾಲ್ಕು ಒಳ್ಳೆ ಕೆಲಸ ಮಾಡಬೇಕು ಅಂತ ಇದ್ದೇನೆ. ಇದರಲ್ಲಿ ರಾಜಕೀಯ ಮಾಡಬೇಡಿ. ಹೆಚ್‌ಎಂಟಿ ಜಾಗ ಧರ್ಮಕ್ಕೆ ಕೊಟ್ಟಿಲ್ಲ. ಈಶ್ವರ್ ಖಂಡ್ರೆ ಎಲ್ಲಾ ದಾಖಲಾತಿ ತರಿಸಿಕೊಂಡು ಓದಬೇಕು ಅಂತ ಕಿಡಿಕಾರಿದರು. ಇದನ್ನೂ ಓದಿ: Tungabhadra Dam| ಗೇಟ್‌ ಕೊಚ್ಚಿ ಹೋದ ಪ್ರಕರಣದ ತನಿಖೆಯಾಗಲಿ: ಹೆಚ್‌ಡಿಕೆ ಆಗ್ರಹ

    ಹೆಚ್‌ಎಂಟಿ ಸೇರಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆ, ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡಲು ಮುಂದಾಗಿದ್ದೇನೆ. ಇದಕ್ಕೆ ನೀವು ರಾಜಕೀಯ ಮಾಡುವುದು ಬೇಡ ಅಂತ ಕಿಡಿಕಾರಿದರು. ಯಾವುದೇ ಕಾರಣಕ್ಕೂ ಹೆಚ್‌ಎಂಟಿ ಜಾಗವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಅಂತ ಈಶ್ವರ್ ಖಂಡ್ರೆಗೆ ಸವಾಲ್ ಹಾಕಿದರು.