Tag: ಅಯ್ಯಪ್ಪ ಭಕ್ತರು

  • ಹಾವೇರಿಯಿಂದ ಶಬರಿಮಲೆಗೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿ – ಗುರುಸ್ವಾಮಿ ಸಾವು, 10ಕ್ಕೂ ಅಧಿಕ ಮಂದಿಗೆ ಗಾಯ

    ಹಾವೇರಿಯಿಂದ ಶಬರಿಮಲೆಗೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿ – ಗುರುಸ್ವಾಮಿ ಸಾವು, 10ಕ್ಕೂ ಅಧಿಕ ಮಂದಿಗೆ ಗಾಯ

    ಹಾವೇರಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ತೆರಳುತ್ತಿದ್ದ ಮಿನಿ ಬಸ್ ಪಲ್ಟಿಯಾಗಿ ಗುರುಸ್ವಾಮಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕೇರಳದ (Kerala) ಎರಿಮಲೈನಲ್ಲಿ ನಡೆದಿದೆ.

    ಹಾವೇರಿಯ (Haveri) ಹಾನಗಲ್ (Hanagal) ಪಟ್ಟಣದ ನಿವಾಸಿ ಮಾರುತಿ ಎಂ ಹರಿಹರ(51) ಮೃತ ಗುರುಸ್ವಾಮಿ. ಇದನ್ನೂ ಓದಿ: ಮಲ್ಪೆಯ ಟಾಯ್ಲೆಟ್‌ನಲ್ಲಿ ನವಜಾತ ಶಿಶುವಿನ ಶವ ಪತ್ತೆ

    ಹಿರೇಕಣಗಿ ಸೇರಿ ಹಾನಗಲ್ ತಾಲೂಕಿನ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಿನಿ ಬಸ್ ಮಾಡಿಕೊಂಡು ತೆರಳಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಮಿನಿ ಬಸ್ ಪಲ್ಟಿಯಾಗಿದೆ. ಪರಿಣಾಮ ಓರ್ವ ಗುರುಸ್ವಾಮಿ ಮೃತಪಟ್ಟಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 20 ಜನರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಯುವಕನೊಂದಿಗೆ ಆಂಟಿ ಲವ್ವಿಡವ್ವಿ – ರೀಲ್ಸ್‌ ಪ್ರಿಯನಿಗಾಗಿ ಗಂಡನಿಗೇ ಚಟ್ಟ ಕಟ್ಟಿದ ಪತ್ನಿ

    ರಾಜ್ಯ ಸರ್ಕಾರವು ಕೇರಳ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದೆ. ಅಲ್ಲದೇ ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಅವರು ರಾಜ್ಯ ಸರ್ಕಾರದೊಂದಿಗೆ ಮಾತನಾಡಿ, ಮೃತದೇಹವನ್ನು ತರುವ ವ್ಯವಸ್ಥೆ ಮಾಡಿದ್ದಾರೆ.

  • ಕೇರಳದಲ್ಲೂ ಭಾರೀ ಮಳೆ; ಕಾಲ್ನಡಿಗೆಯಲ್ಲಿ ಬರುವ ಶಬರಿಮಲೆ ಯಾತ್ರಿಕರಿಗೆ ನಿಷೇಧ

    ಕೇರಳದಲ್ಲೂ ಭಾರೀ ಮಳೆ; ಕಾಲ್ನಡಿಗೆಯಲ್ಲಿ ಬರುವ ಶಬರಿಮಲೆ ಯಾತ್ರಿಕರಿಗೆ ನಿಷೇಧ

    ತಿರುವನಂತಪುರಂ: ಫೆಂಗಲ್ ಚಂಡಮಾರುತದ (Fengal Cyclone) ಪರಿಣಾಮ ಕೇರಳದಲ್ಲೂ (Kerala) ಭಾರೀ ಮಳೆಯಾಗುತ್ತಿದೆ. ಮಳೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಶಬರಿಮಲೆಗೆ (Sabarimala) ಅರಣ್ಯದ ದಾರಿ ಮೂಲಕ ಕಾಲ್ನಡಿಗೆಯಲ್ಲಿ ಬರುವ ಯಾತ್ರಿಕರಿಗೆ ನಿಷೇಧ ಹೇರಲಾಗಿದೆ.

    ಕರಿಮಲ, ಪುಲ್ಲುಮೇಡು ದಾರಿಯಲ್ಲಿ ಸಂಚಾರ ಮಾಡದಂತೆ ತಡೆಯಲಾಗಿದೆ. ಭೂಕುಸಿತ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅರಣ್ಯ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಒಕ್ಕಲಿಗರ ದ್ರೋಹಿ, ಡಿಕೆಶಿ ಸುಳ್ಳಿನ ಶೂರ – ಜೆಡಿಎಸ್ ಲೇವಡಿ

    ಕಾಲ್ನಡಿಗೆ ಯಾತ್ರಿಕರು ನೀಲಕ್ಕಲ್-ಪಂಬಾ ಮೂಲಕ ಶಬರಿಮಲೆಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಅರಣ್ಯ ಮಾರ್ಗದ ಮೂಲಕ ಆಗಮಿಸಿದ್ದ ಭಕ್ತರನ್ನು ವಿಶೇಷ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಪಂಪಾಗೆ ಕರೆದೊಯ್ಯಲಾಗಿದೆ. ಇದನ್ನೂ ಓದಿ: ರಾಯಚೂರು | ಬೈಕ್‌ಗೆ ಸರ್ಕಾರಿ ಬಸ್ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

    ಪುಲ್ಲುಮೇಡುವಿನಿಂದ ಶಬರಿಮಲೆಗೆ 6 ಕಿ.ಮೀ ದೂರ ಇದೆ. ಭಾನುವಾರದಿಂದ ಈ ಅರಣ್ಯ ದಾರಿಯಲ್ಲಿ ದಟ್ಟ ಮಂಜು ಆವರಿಸಿದೆ. ಅಲ್ಲದೇ ಭೂಕುಸಿತ ಉಂಟಾಗುವ ಸಾಧ್ಯತೆಯಿಂದ ಅರಣ್ಯ ಮಾರ್ಗದಲ್ಲಿ ಕಾಲ್ನಡಿಗೆ ನಿಷೇಧಿಸಲಾಗಿದೆ. ಭಾರೀ ಮಳೆಯ ಹಿನ್ನೆಲೆ ಕೇರಳದ 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪ್ರವಾಹ ಉಂಟಾಗುವ ಪ್ರದೇಶದಲ್ಲಿ ನೆಲೆಸಿರುವವರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಇಂದು ರೈತರ ಪ್ರತಿಭಟನೆ: ದೆಹಲಿ–ನೋಯ್ಡಾ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್

  • ಶಬರಿಮಲೆ ಅಯ್ಯಪ್ಪ ಭಕ್ತರಿದ್ದ ಕಾರು ಅಪಘಾತ _ ಓರ್ವ ಸಾವು, ಮೂವರು ಗಂಭೀರ

    ಶಬರಿಮಲೆ ಅಯ್ಯಪ್ಪ ಭಕ್ತರಿದ್ದ ಕಾರು ಅಪಘಾತ _ ಓರ್ವ ಸಾವು, ಮೂವರು ಗಂಭೀರ

    ಮಡಿಕೇರಿ: ಶಬರಿಮಲೆ (Sabarimala) ಅಯ್ಯಪ್ಪ ಭಕ್ತರಿದ್ದ (Ayyappa Devotees) ಕಾರು (Car) ಅಪಘಾತವಾದ (Accident) ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ಅಂಗಮಾಲಿ (Angamaly) ಪೆರುಂಬುರ್ ಬಳಿ ನಡೆದಿದೆ.

    ಶಬರಿಮಲೆಯಿಂದ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಕೊಡಗು (Kodagu) ಜಿಲ್ಲೆ ಕುಶಾಲನಗರದ ಹಾರಂಗಿ ದೊಡ್ಡತ್ತೂರು ನಿವಾಸಿ ರಾಮ ಎಂಬವರ ಪುತ್ರ ಚಂದ್ರ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಇನ್ನೂ ಈ ಘಟನೆಯಲ್ಲಿ ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಶಸ್ತ್ರಚಿಕಿತ್ಸೆ ವೇಳೆ ವೃದ್ಧೆಯ ತಲೆಗೆ 3 ಬಾರಿ ಪಂಚ್‌ ಕೊಟ್ಟ ವೈದ್ಯ- ಮುಂದೇನಾಯ್ತು?

    ಗಾಯಾಳುಗಳನ್ನು ಕುಶಾಲನಗರದ ಲಿಂಗಂ, ಹರೀಶ್ ಹಾಗೂ ಸಂತೋಷ್ ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಪೆರಂಬೂರಿನ ರಾಜಗಿರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ವ್ಯಕ್ತಿಯ ಕಾಲಿಗೆ ಸರಪಳಿ ಹಾಕಿ ಜೀತಕ್ಕಿಟ್ಟ ಮಾಲೀಕ- ಕಾರ್ಮಿಕನ ರಕ್ಷಣೆ

  • ಕೇರಳ ಸರ್ಕಾರಕ್ಕೆ ಸೆಡ್ಡು ಹೊಡೆದ ಉಡುಪಿಯ 70 ಸಾವಿರ ಅಯ್ಯಪ್ಪ ಭಕ್ತರು

    ಕೇರಳ ಸರ್ಕಾರಕ್ಕೆ ಸೆಡ್ಡು ಹೊಡೆದ ಉಡುಪಿಯ 70 ಸಾವಿರ ಅಯ್ಯಪ್ಪ ಭಕ್ತರು

    – ಭವನಂ ಸನ್ನಿಧಾನಂ ಅಭಿಯಾನಕ್ಕೆ ಭಾರೀ ಬೆಂಬಲ

    ಉಡುಪಿ: ಕೇರಳ ಸರ್ಕಾರದ ವಿರುದ್ಧ ಉಡುಪಿಯ 70 ಸಾವಿರ ಅಯ್ಯಪ್ಪ ಭಕ್ತರು ಆಕ್ರೋಶಗೊಂಡಿದ್ದಾರೆ. ಶಬರಿಮಲೆ ಪ್ರವೇಶ ಮುನ್ನ ಎರಡು ಬಾರಿ ಕೋವಿಡ್ ಟೆಸ್ಟ್ ನಿಯಮ ರೂಪಿಸಿರುವ ಪಿಣರಾಯಿ ಸರ್ಕಾರದ ವಿರುದ್ಧ ಉಡುಪಿಯಲ್ಲಿ ಭವನಂ ಸನ್ನಿಧಾನಂ ಅಭಿಯಾನ ಶುರುವಾಗಿದೆ.

    ಉಡುಪಿ ಜಿಲ್ಲೆಯಿಂದ ಪ್ರತಿವರ್ಷ 70 ಸಾವಿರಕ್ಕಿಂತಲೂ ಹೆಚ್ಚು ಮಂದಿ ಕೇರಳದ ಶಬರಿಮಲೆಗೆ ಧಾರ್ಮಿಕ ಯಾತ್ರೆ ಮಾಡುತ್ತಾರೆ. ಜನವರಿ ತಿಂಗಳಲ್ಲಿ ಮಕರ ಸಂಕ್ರಾಂತಿಯ ಜ್ಯೋತಿ ದರ್ಶನಕ್ಕೆ 40 ಸಾವಿರಕ್ಕಿಂತಲೂ ಹೆಚ್ಚು ಭಕ್ತರು ತೆರಳುತ್ತಾರೆ. ವಿಶ್ವಾದ್ಯಂತ ವ್ಯಾಪಿಸಿರುವ ಕೊರೊನಾ ಮಹಾಮಾರಿ ರೋಗದಿಂದ ಈ ಬಾರಿ ಶಬರಿಮಲೆ ಪ್ರವೇಶ ಕಷ್ಟಕರವಾಗಿದೆ. ಕೇರಳ ಸರ್ಕಾರ ಲೆಕ್ಕಕ್ಕಿಂತ ಹೆಚ್ಚು ನಿಯಮಾವಳಿಗಳನ್ನು ವಿಧಿಸಿದೆ. ಕರ್ನಾಟಕದಿಂದ ತೆರಳುವ ಭಕ್ತರು ಕೋವಿಡ್ ಟೆಸ್ಟ್ ಮಾಡಿರಬೇಕು. ನೀಲಕಲ್ ಎಂಬಲ್ಲಿ ಇನ್ನೊಂದು ಕೋವಿಡ್ ಟೆಸ್ಟ್ ಮಾಡಿಸಬೇಕು. ಪಂಪಾ ನದಿ ತೀರದಲ್ಲಿ ಮತ್ತೊಂದು ಬಾರಿ ಟೆಸ್ಟ್ ಮಾಡಿಸಬೇಕು ಎಂದಿದೆ. ಈ ದುಬಾರಿ ನಿಯಮ ಉಡುಪಿಯ ಅಯ್ಯಪ್ಪ ಭಕ್ತರನ್ನ ಕೆರಳಿಸಿದೆ.

    ಇಷ್ಟೆಲ್ಲಾ ನಿಯಮಾವಳಿಯ ಸಹವಾಸವೇ ಬೇಡ ಅಂತ ಪಂದಳಕಂದನ ಸನ್ನಿಧಾನಕ್ಕೆ ತೆರಳದೆ ‘ಭವನಂ ಸನ್ನಿಧಾನಂ’ ಅಭಿಯಾನವನ್ನು ಉಡುಪಿಯಲ್ಲಿ ಶುರುಮಾಡಿದ್ದಾರೆ. ಈ ಅಭಿಯಾನದ ಪ್ರಕಾರ ಮನೆಯಲ್ಲೇ ಇದ್ದು ಕುಟುಂಬ ಸಮೇತ ಅಯ್ಯಪ್ಪಾರಾಧನೆ ಮಾಡಲು ನಿರ್ಧರಿಸಿದ್ದಾರೆ. ಎರಡೆರಡು ಕೋವಿಡ್ ಟೆಸ್ಟ್ ಮಾಡಲಿರುವ, ಇರುಮುಡಿ ವಾಪಾಸ್ ಕೊಡದ, ಭಕ್ತರ ತುಪ್ಪ ಸ್ವೀಕರಿಸದ, ಊಟದ ವ್ಯವಸ್ಥೆ ಮಾಡದ ದೇಗಲ ಆಡಳಿತ ಮಂಡಳಿ, ಕೇರಳ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಕೇರಳದ ಬಳಿ ಕಾಸಿಲ್ಲದಿದ್ದರೆ ಅಕೌಂಟ್ ನಂಬರ್ ಕಳುಹಿಸಿ. ಭಕ್ತರ ಭಾವನೆಗೆ ಜೊತೆ ವ್ಯವಹಾರ ಮಾಡಬೇಡಿ ಅಂತ ತಿರುಗೇಟು ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಯ್ಯಪ್ಪ ಭಕ್ತ ದಯಾಕರ್, ಹಿಂದೂಗಳ ಧಾರ್ಮಿಕ ಭಾವನೆಯನ್ನು ಕೇರಳ ಸರ್ಕಾರ ಚೆಲ್ಲಾಟವಾಡುತ್ತಿದೆ. ಮೂರು ಮೂರು ಬಾರಿ ಕೋವಿಡ್ ಟೆಸ್ಟ್ ಮಾಡುವ ಅವಶ್ಯಕತೆ ಏನಿದೆ. ಸರ್ಕಾರದ ಬಳಿ ಕಾಸಿಲ್ಲದಿದ್ದರೆ ಅಕೌಂಟ್ ನಂಬರ್ ಕೊಡಿ ನಾವು ಇಲ್ಲಿಂದಲೇ ನಮ್ಮ ಕಾಣಿಕೆಗಳನ್ನು ಹಾಕುತ್ತೇವೆ. ಕೊರೊನಾದ ಹೆಸರಿನಲ್ಲಿ ಹಣ ಲೂಟಿ ಮಾಡಬೇಡಿ ಎಂದಿದ್ದಾರೆ.

    ಮಲ್ಪೆ ಅಯ್ಯಪ್ಪಸ್ವಾಮಿ ಮಂದಿರದ ಅಧ್ಯಕ್ಷ ಆರ್.ಕೆ ಮಲ್ಪೆ ಮಾತನಾಡಿ, ಉಡುಪಿ ಜಿಲ್ಲೆಯ ಅಯ್ಯಪ್ಪ ಮಾಲಾಧಾರಿಗಳು ದಕ್ಷಿಣ ಕನ್ನಡ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯ ಲಕ್ಷಾಂತರ ಅಯ್ಯಪ್ಪ ಭಕ್ತರು ನಮ್ಮ ಅಭಿಯಾನದ ಜೊತೆ ಕೈಜೋಡಿಸಿದ್ದಾರೆ. ಅಯ್ಯಪ್ಪ ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸುವುದು ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಯಾವುದೇ ಶಿಬಿರಗಳನ್ನು ಮಾಡದೆ ಮನೆಗಳಲ್ಲೇ ಅಯ್ಯಪ್ಪ ದೇವರನ್ನ ಕುಟುಂಬ ಸಮೇತವಾಗಿ ನಿಯಮ ನಿಷ್ಠೆಯಿಂದ ಆರಾಧಿಸಲು ತೀರ್ಮಾನಿಸಿರುವುದಾಗಿ ಹೇಳಿದ್ದಾರೆ.

  • ಮೈಸೂರಿನ 23ಕ್ಕೂ ಹೆಚ್ಚು ಮಂದಿ ಅಯ್ಯಪ್ಪ ಭಕ್ತರಿದ್ದ ಬಸ್ಸಿಗೆ ಕೇರಳದಲ್ಲಿ ಬೆಂಕಿ

    ಮೈಸೂರಿನ 23ಕ್ಕೂ ಹೆಚ್ಚು ಮಂದಿ ಅಯ್ಯಪ್ಪ ಭಕ್ತರಿದ್ದ ಬಸ್ಸಿಗೆ ಕೇರಳದಲ್ಲಿ ಬೆಂಕಿ

    ಮೈಸೂರು: ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದ ಬಸ್ ಬೆಂಕಿಗೆ ಆಹುತಿಯಾಗಿದ್ದು, ಕರ್ನಾಟಕದಿಂದ ಶಬರಿ ಮಲೆಗೆ ತೆರಳಿದ್ದ 35ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಶುಕ್ರವಾರ ಸಂಜೆ ಕೇರಳದ ನೆಲಕ್ಕಲ್‍ನಿಂದ ಪಂಪಾ ನದಿಗೆ ಕೇರಳ ಸರ್ಕಾರಿ ಬಸ್ಸಿನಲ್ಲಿ ತೆರಳುವಾಗ ಈ ಅವಘಡ ಸಂಭವಿಸಿದೆ. ಈ ಬಸ್ಸಿನಲ್ಲಿ ಮೈಸೂರಿನ ಹೂಟಗಳ್ಳಿ ಬಡವಾಣೆಯ 23 ಮಂದಿ ಅಯ್ಯಪ್ಪನ ಭಕ್ತರು ಇದ್ದರು. ಟಯರ್ ಸ್ಪೋಟಗೊಂಡ ಪರಿಣಾಮ ಇಡೀ ಬಸ್ಸಿಗೆ ಬೆಂಕಿ ಹತ್ತಿಕೊಂಡು ಉರಿದಿದೆ.

    ಘಟನೆ ನಡೆದ ತಕ್ಷಣ ಸ್ಥಳೀಯರ ಸಹಾಯದಿಂದ ಎಲ್ಲ ಭಕ್ತರ ರಕ್ಷಣೆ ಮಾಡಿದ್ದು, ಓರ್ವ ಯುವಕನಿಗೆ ಮಾತ್ರ ಗಾಯವಾಗಿದೆ. ಗಾಯಗೊಂಡ ಯುವಕನನ್ನು ಕೇರಳದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಮಾಹಿತಿ ತಿಳಿದು ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಪ್ರಾಣಾಪಾಯದಿಂದ ಪಾರಾದ ಮೈಸೂರಿನ ಹೂಟಗಳ್ಳಿ ನಿವಾಸಿಗಳು ಮೈಸೂರಿಗೆ ಹಿಂದಿರುಗಿದ್ದಾರೆ.

  • ಪ್ರಧಾನಿ, ಸಂಸದರಿಗಾಗಿ ಪಾದಯಾತ್ರೆ ಹೊರಟ ಅಯ್ಯಪ್ಪನ ಭಕ್ತರು

    ಪ್ರಧಾನಿ, ಸಂಸದರಿಗಾಗಿ ಪಾದಯಾತ್ರೆ ಹೊರಟ ಅಯ್ಯಪ್ಪನ ಭಕ್ತರು

    ಮಡಿಕೇರಿ: ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಿ, ಕೊಡಗು ಮೈಸೂರು ಲೋಕಸಭಾ ಕ್ಷೇತ್ರದಿಂದ ಪ್ರತಾಪ್ ಸಿಂಹ ಗೆಲ್ಲಬೇಕು ಎಂದು ಹರಕೆ ಹೊತ್ತಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಕೊಡಗಿನಿಂದ ಶಬರಿಮಲೆಗೆ ಕಾಲ್ನಡಿಗೆ ಜಾಥಾ ಹೋಗುತ್ತಿದ್ದಾರೆ.

    ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಗುಡ್ಡೆಹೊಸೂರು ಸಮೀಪದ ಬಳ್ಳೂರಿನ ಸಲೀ ಮತ್ತು ಪೃಥ್ವಿ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಕಾಲ್ನಡಿಗೆ ಜಾಥಾ ನಡೆಸುತ್ತಿದ್ದಾರೆ. ಬಳ್ಳೂರಿನಿಂದ ಶಬರಿ ಮಲೆಗೆ 600 ಕಿಲೋ ಮೀಟರ್ ಕಾಲ್ನಡಿಗೆ ಜಾಥಾ ನಡೆಸುತ್ತಿದ್ದು, ಇಂದಿನಿಂದ 25 ದಿನಗಳ ಕಾಲ ಶಬರಿಮಲೆಗೆ ನಡೆಯಲಿದ್ದಾರೆ.

    ತಮ್ಮೂರಿನ ಯಾವುದೇ ಮನೆಗಳಿಗೆ ಹಕ್ಕುಪತ್ರವಿಲ್ಲ, ಅವುಗಳನ್ನು ನೀಡುವಂತೆ ಹಲವು ವರ್ಷಗಳಿಂದ ಕೇಳಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕೇಂದ್ರದಲ್ಲಿ ಮೋದಿಯವರು ಪ್ರಧಾನಿಯಾಗಿ ನಮ್ಮ ಸಮಸ್ಯೆ ಬಗೆಹರಿಸುವರೆಂಬ ನಂಬಿಕೆಯಿಂದ ಹರಕೆ ಹೊತ್ತಿದ್ದೇವು. ಆದರೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ ಆದರೆ ಸಿಗುತ್ತದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಕಾಲ್ನಡಿಗೆ ಮಾಡುತ್ತಿರುವ ಅಯ್ಯಪ್ಪ ಮಾಲಾಧಾರಿಗಳು.