Tag: ಅಯ್ಯಪ್ಪನ ಭಕ್ತರು

  • ನೆಗೆಟಿವ್ ಬಂದ್ರು ಕನ್ನಡಿಗರಿಗಿಲ್ಲ ಅಯ್ಯಪ್ಪನ ದರ್ಶನ ಭಾಗ್ಯ

    ನೆಗೆಟಿವ್ ಬಂದ್ರು ಕನ್ನಡಿಗರಿಗಿಲ್ಲ ಅಯ್ಯಪ್ಪನ ದರ್ಶನ ಭಾಗ್ಯ

    – ಕೇರಳ ಪೊಲೀಸ ದೌರ್ಜನ್ಯಕ್ಕೆ ಕರ್ನಾಟಕ ಭಕ್ತರು ಕಂಗಾಲು

    ಬೆಂಗಳೂರು: ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಮಾಲೆ ಧರಿಸಿ ತಮ್ಮ ಕಷ್ಟ ಕಾರ್ಪಣ್ಯವನ್ನು ನೀಗಿಸು ತಂದೆ ಎಂದು ಕೇರಳದ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವರ ದರ್ಶನ ಮಾಡುವ ಕನ್ನಡದ ಭಕ್ತರಿಗೆ ಕೊರೊನಾ ವಿಚಾರದಲ್ಲಿ ಸಮಸ್ಯೆ ಎದುರಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕೆಲ ಸ್ವಾಮಿ ಭಕ್ತರು ಶಬರಿಮಲೆಯ ಅಯ್ಯಪ್ಪನನ್ನು ನೋಡಲು ಹೋದ ವೇಳೆ ಅಲ್ಲಿನ ಪೊಲೀಸರು ತಡೆ ಹಿಡಿದಿದ್ದಾರೆ. ಜೊತೆಗೆ ಕೊರೊನಾ ವರದಿ ನೆಗೆಟಿವ್ ಬಂದರೂ, ಅಯ್ಯಪ್ಪನ ಬೆಟ್ಟಕ್ಕೆ ಹೋಗಲು ಬಿಟ್ಟಿಲ್ಲ. ಜೊತೆಗೆ ತಲಾ 625 ರೂ. ಪಡೆದು ನೆಗೆಟಿವ್ ರಿಪೋರ್ಟ್ ನೀಡುವ ಪೋಲಿಸರ ವಿರುದ್ಧ ಭಕ್ತರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಕೇರಳ ಪೊಲೀಸರ ಈ ವರ್ತನೆಯಿಂದ ಕರ್ನಾಟಕ ಭಕ್ತರು ಕಂಗಾಲಾಗಿದ್ದು, ಅಲ್ಲಿನ ಡಾಕ್ಟರ್ ಈ ವರದಿ ಆಗುತ್ತೆ ಅಂದರೂ ಪೊಲೀಸರು ಮಾತ್ರ ಆಗಲ್ಲ ಎಂದು ಕಿರಿಕಿರಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯದ ಉನ್ನತ ಅಧಿಕಾರಿಗಳು ಪ್ರವಾಸೋದ್ಯಮ ಹಾಗೂ ಮುಜರಾಯಿ ಸಚಿವರು ಕೇರಳ ರಾಜ್ಯದ ಅಧಿಕಾರಿಗಳ ಜೊತೆಗೆ ಮಾತನಾಡಿ ಕನ್ನಡದ ಭಕ್ತರಿಗೆ ಆಗುತ್ತಿರುವ ಕಿರಿಕಿರಿಯನ್ನು ಹಾಗೂ ತೊಂದರೆಯನ್ನು ತಪ್ಪಿಸಬೇಕು ಎಂದು ಭಕ್ತರು ಮನವಿ ಮಾಡಿದ್ದಾರೆ.

  • ಅಯ್ಯಪ್ಪನ ಭಕ್ತರಿಗೆ ಸಸ್ಯಾಹಾರಿ ಎಂದು ಮಾಂಸಾಹಾರಿ ಊಟ ನೀಡಿದ ಹೋಟೆಲ್

    ಅಯ್ಯಪ್ಪನ ಭಕ್ತರಿಗೆ ಸಸ್ಯಾಹಾರಿ ಎಂದು ಮಾಂಸಾಹಾರಿ ಊಟ ನೀಡಿದ ಹೋಟೆಲ್

    ಮಂಗಳೂರು: ಅಯ್ಯಪ್ಪ ಸ್ವಾಮಿ ವೃತಾಧಾರಿಗಳಿಗೆ ಸಸ್ಯಾಹಾರಿ ಊಟ ಇದೆಯೆಂದು ನಂಬಿಸಿ ಮಾಂಸಾಹಾರಿ ಊಟ ನೀಡಿದ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದ್ದು ಹೋಟೆಲ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

    ಶಬರಿಮಲೆ ಯಾತ್ರೆ ವೇಳೆ ಕಾಸರಗೋಡು ಚೆರ್ಕಳದ ಹಳ್ಳಿಮನೆ ಎಂಬ ಹೋಟೆಲ್ ನಲ್ಲಿ ಘಟನೆ ನಡೆದಿದೆ. 50 ಜನರಿದ್ದ ಅಯ್ಯಪ್ಪ ವೃತಾಧಾರಿಗಳು ಊಟಕ್ಕೆಂದು ಬಸ್ಸು ನಿಲ್ಲಿಸಿ ಚೆರ್ಕಳದ ಹಳ್ಳಿಮನೆ ಹೋಟೆಲ್ ಗೆ ತೆರಳಿದ್ದರು. ಸಸ್ಯಾಹಾರಿ ಊಟ ನೀಡುತ್ತೇವೆ ಎಂದು ನಂಬಿಸಿ ಬಳಿಕ ಮಾಂಸಹಾರಿ ಉಪಹಾರ ಬಡಿಸಿ ವೃತಾಧಾರಿಗಳಿಗೆ ಅವಮಾನ ಮಾಡಿದ್ದಾರೆ.

    ಹೋಟೆಲ್ ಮಾಲೀಕ ತುಂಬಾ ಜನರಿದ್ದ ಕಾರಣ ಮಾಂಸಹಾರಿ ಊಟದ ಹೋಟೆಲ್ ನಲ್ಲಿ ಸಸ್ಯಹಾರಿ ಊಟ ನೀಡಲು ಮುಂದಾಗಿದ್ದ ಎನ್ನಲಾಗಿದೆ. ಆದರೆ ಮಾಂಸಹಾರಿ ಹೋಟೆಲ್ ಎಂದು ಭಾವಿಸಿದ ಅಯ್ಯಪ್ಪ ವೃತಾಧಾರಿಗಳು ಮಾಲೀಕನನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡು ಬಳಿಕ ತಿಂದ ಆಹಾರಕ್ಕೆ ಹಣ ನೀಡಿ ಹಿಂದಿರುಗಿದ್ದಾರೆ.