ಹೈದರಾಬಾದ್: ಕೇರಳದ ಶಬರಿಮಲೆಗೆ ಭೇಟಿ ನೀಡುವ ಅಯ್ಯಪ್ಪ ಭಕ್ತರು ತಮ್ಮ ತೀರ್ಥಯಾತ್ರೆಯ ಸಮಯದಲ್ಲಿ ಯಾವುದೇ ಮಸೀದಿಗಳಿಗೆ ಹೋಗಬೇಡಿ ಎಂದು ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ತಿಳಿಸಿದ್ದಾರೆ.
ಭಕ್ತರು ‘ಅಯ್ಯಪ್ಪ ದೀಕ್ಷಾ’ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಲಾಧಾರಿಗಳು ಮಸೀದಿಗೆ ಹೋದರೆ ಅವರು ಅಶುದ್ಧರಾಗುತ್ತಾರೆ. ಭಕ್ತರನ್ನು ಮಸೀದಿಗೆ ಬರುವಂತೆ ಮಾಡಿರುವುದು ಷಡ್ಯಂತ್ರ ಎಂದು ಸಿಂಗ್ ಹೇಳಿದ್ದಾರೆ.
ತೆಲಂಗಾಣ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾದ ಎ ರೇವಂತ್ ರೆಡ್ಡಿ ಮತ್ತು ಎನ್ ಚಂದ್ರಬಾಬು ನಾಯ್ಡು ಅವರು ಭಕ್ತರಿಗೆ ವಸತಿ ನಿರ್ಮಿಸಲು 10 ಎಕರೆ ಜಾಗವನ್ನು ಕೋರಿ ಕೇರಳ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಗೋಶಾಮಹಲ್ ಶಾಸಕ ಶಾಸಕ ರಾಜಾಸಿಂಗ್ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಮಾತು ವ್ಯಕ್ತವಾಗುತ್ತದೆ.
ತಿರುವನಂತಪುರಂ: ಶಬರಿಮಲೆಯಲ್ಲಿ (Sabarimala) ನವೆಂಬರ್‌ನಿಂದ ಪ್ರಾರಂಭವಾಗುವ ಎರಡು ತಿಂಗಳ ಮಂಡಲಂ-ಮಕರವಿಳಕ್ಕು ತೀರ್ಥಯಾತ್ರಾ ಹಿನ್ನೆಲೆ ಈ ವರ್ಷ ಆನ್‌ಲೈನ್ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಶಬರಿಮಲೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ಕೇರಳ ಸರ್ಕಾರ ತಿಳಿಸಿದೆ.
ಅಯ್ಯಪ್ಪ ದೇಗುಲದಲ್ಲಿ ದಿನಕ್ಕೆ ಗರಿಷ್ಠ 80,000 ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಮುಂಬರುವ ತೀರ್ಥಯಾತ್ರೆಯ ಸಿದ್ಧತೆಗಳ ಅವಲೋಕನದ ಮೌಲ್ಯಮಾಪನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಅತಿಹೆಚ್ಚು ಮಳೆ ದಾಖಲು – ಎಲ್ಲೆಲ್ಲಿ ಎಷ್ಟು ಮಳೆ?
ಸಾಂಪ್ರದಾಯಿಕ ಅರಣ್ಯ ಮಾರ್ಗದಲ್ಲಿ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ಜನಸಂದಣಿಯ ಸಮಯದಲ್ಲಿ ವಾಹನಗಳನ್ನು ನಿಯಂತ್ರಿಸಬೇಕಾದರೆ, ಪಾರ್ಕಿಂಗ್‌ಗೆ ಅಗತ್ಯ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಲಕ್ಷಾಂತರ ಭಕ್ತರು ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದರಿಂದ ಅದನ್ನು ನಿರ್ವಹಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಿದ್ದರಿಂದ ಅವ್ಯವಸ್ಥೆ ಉಂಟಾಗಿತ್ತು. ಇದರಿಂದ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷ ಭಕ್ತರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವ ನಿಟ್ಟಿನಲ್ಲಿ ಆನ್‌ಲೈನ್ ಬುಕ್ ಮಾಡಿದವರಿಗೆ ಮಾತ್ರ ಅವಕಾಶ ಕಲ್ಪಿಸಲು ಸರ್ಕಾರ ತೀರ್ಮಾನಿಸಿದೆ. ಇದನ್ನೂ ಓದಿ: ಇಂದು ಸಹ ಬೆಂಗಳೂರು ಸೇರಿ ಹಲವೆಡೆ ಭಾರೀ ಮಳೆ ಸಾಧ್ಯತೆ – 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಈ ಬಾರಿ ನಿಲಕ್ಕಲ್ ಮತ್ತು ಪಂಪಾದಲ್ಲಿ ಹೆಚ್ಚಿನ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ‘ವಿಶುಧಿ ಸೇನಾ’ ಸ್ವಯಂಸೇವಕರಿಗೆ (ಸ್ವಚ್ಛತಾ ಸ್ವಯಂಸೇವಕರು) ಆರೋಗ್ಯ ತಪಾಸಣೆ ಮತ್ತು ತರಬೇತಿಯನ್ನೂ ಏರ್ಪಡಿಸಲಾಗುವುದು. ಶಬರಿಮಲೆಯ ಶಬರಿ ಅತಿಥಿಗೃಹದ ನಿರ್ವಹಣೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಪ್ರಣವಂ ಅತಿಥಿ ಗೃಹದ ನವೀಕರಣ ಈಗಾಗಲೇ ಪೂರ್ಣಗೊಂಡಿದೆ ಎಂದು ತಿಳಿಸಲಾಗಿದೆ.
ಪಟ್ಟಣಂತಿಟ್ಟ: ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯಂದು ಜ್ಯೋತಿ ರೂಪದಲ್ಲಿ ಅಯ್ಯಪ್ಪ (Ayyappa) ಭಕ್ತರಿಗೆ ದರ್ಶನ ನೀಡಿದ್ದಾನೆ.
ಸಂಜೆ 6.48ರ ಸುಮಾರಿಗೆ ಅಯ್ಯಪ್ಪ (Sabarimala) ದೇಗುಲದ ಎದುರಿನ ಪೊನ್ನಂಬಲಮೇಡುವಿನಲ್ಲಿ ಜ್ಯೋತಿ ದರ್ಶನವಾಯಿತು. ಈ ವೇಳೆ ಅಯ್ಯಪ್ಪನ ಭಕ್ತಿಗೀತೆ ಗುಣಗಾನ ಮಾಡುತ್ತಾ ಲಕ್ಷಾಂತರ ಭಕ್ತರು ಮಕರ ಜ್ಯೋತಿ (Makara Jyoti) ದರ್ಶನ ಪಡೆದರು.
ಕೇರಳದ ಶಬರಿಮಲೆ (Sabarimala) ಅಯ್ಯಪ್ಪ ದೇಗುಲದಲ್ಲಿ ಸೋಮವಾರ ಮಕರ ಸಂಕ್ರಾಂತಿ (Makara Sankranti) ಪ್ರಯುಕ್ತ ವಿಶೇಷ ಪೂಜೆ-ಪುನಸ್ಕಾರಗಳು ಆಯೋಜನೆಗೊಂಡಿದ್ದವು. ಪಂದಳ ರಾಜಮನೆತನದಿಂದ ಆಭರಣಗಳನ್ನು ತಂದು ಆಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಾಮಂಗಳಾರತಿ ವೇಳೆಗೆ ಜ್ಯೋತಿರೂಪದಲ್ಲಿ ಅಯ್ಯಪ್ಪ ಕಾಣಿಸಿಕೊಂಡಿದ್ದಾನೆ.
ಪತ್ತನಂತಿಟ್ಟ: ಅಯ್ಯಪ್ಪ (Ayyappa) ಸನ್ನಿಧಾನದಲ್ಲಿ ಕಳೆದ 39 ದಿನಗಳಲ್ಲಿ ಬರೋಬ್ಬರಿ 204.30 ಕೋಟಿ ರೂ. ಆದಾಯ (Revenue) ಸಂಗ್ರಹವಾಗಿದೆ. ಆದರೆ ಕಳೆದ ವರ್ಷಕ್ಕಿಂತ ಈ ವರ್ಷ ಸುಮಾರು 18 ಕೋಟಿ ಆದಾಯ ಕಡಿಮೆಯಾಗಿದೆ ಎಂಬುದಾಗಿ ವರದಿಯಾಗಿದೆ.
ಶಬರಿಮಲೆ (Sabarimala) ದೇಗುಲದಲ್ಲಿ 41 ದಿನಗಳ ಕಾಲ ನಡೆದ ಮಂಡಲಂ-ಮಕರವಿಳಕ್ಕು (Mandalam-Makaravilakku) ಯಾತ್ರೆಯ ಮೊದಲ ಹಂತ ಇಂದು ಮುಕ್ತಾಯಗೊಳ್ಳಲಿದೆ. ಮೊದಲ 39 ದಿನಗಳ ಅಂದರೆ ಡಿಸೆಂಬರ್ 25 ರವರೆಗೆ ಬೆಟ್ಟದ ದೇಗುಲದ ಆದಾಯವು 204,30,76,704 ರೂ.ಗೆ ತಲುಪಿದೆ. ಆದಾಯದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆಯಾಗಿದೆ. ಆದರೆ ಮೊದಲ 39 ದಿನಗಳಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಯಾತ್ರಾರ್ಥಿಗಳ ಸಂಖ್ಯೆ ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ.
ತಿರುವಾಂಕೂರು ದೇವಸ್ವಂ ಬೋರ್ಡ್ (TDB) ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಶಬರಿಮಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವರ್ಷ ಈ ಬಾರಿ 222,98,70,250 (222.98 ಕೋಟಿ ರೂ.) ಆದಾಯ ಬಂದಿದ್ದು, ಈ ಬಾರಿ 18,67,93, 546 ರೂ. ಇಳಿಕೆಯಾಗಿದೆ. ಇನ್ನು ನಾಣ್ಯಗಳನ್ನು ಎಣಿಸಿದ ನಂತರ ‘ಕುತಕ ಲೇಲಂ’ ಆದಾಯವನ್ನು ಸೇರಿಸಿದರೆ ಆದಾಯ ಹೆಚ್ಚಾಗಬಹುದು ಎಂದು ಅವರು ತಿಳಿಸಿದ್ದಾರೆ.
ಭಕ್ತರು ಸಲ್ಲಿಸಿರುವ ಕಾಣಿಕೆಯಿಂದ 63.89 ಕೋಟಿ ರೂ. ಸಂಗ್ರಹವಾಗಿದೆ. ಅರವಣ ಪ್ರಸಾದದಿಂದ 96.32 ಕೋಟಿ ರೂ., ಅಪ್ಪಂ ಪ್ರಸಾದ ಮಾರಾಟದಿಂದ 12.39 ಕೋಟಿ ರೂ. ಆದಾಯ ಬಂದಿದೆ. ಈ ಋತುವಿನಲ್ಲಿ 31 ಲಕ್ಷ ಯಾತ್ರಾರ್ಥಿಗಳು ಬೆಟ್ಟದ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಕಳೆದ ಋತುವಿನಲ್ಲಿ ಸುಮಾರು 30 ಲಕ್ಷ ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದರು. ಹಿಂದಿನ ವರ್ಷ 50 ಲಕ್ಷ ಭಕ್ತರು ಇಡೀ ತೀರ್ಥೋದ್ಭವದಲ್ಲಿ ಪಾಲ್ಗೊಂಡಿದ್ದರು. ಈ ಬಾರಿ 50 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಪ್ರಶಾಂತ್ ವಿವರಿಸಿದ್ದಾರೆ.
ತಿರುವನಂತಪುರಂ: ಅಯ್ಯಪ್ಪನ (Ayyappa) ದರ್ಶನಕ್ಕೆಂದೇ 48 ದಿನಗಳವರೆಗೂ ವ್ರತ ಆಚರಿಸಿ ಶಬರಿಮಲೆಗೆ (Sabarimala) ತೆರಳಿದ್ದ ಕರ್ನಾಟಕ (Karnatka) ಸೇರಿ ಹಲವು ರಾಜ್ಯಗಳ ಭಕ್ತರು, ಅಯ್ಯಪ್ಪನ ದರ್ಶನ ಮಾಡಲಾಗದೆಯೇ ಮರಳುತ್ತಿದ್ದಾರೆ.
ಭಕ್ತರ ನಿರ್ವಹಣೆ, ಭಕ್ತರ ವಾಹನಗಳ ನಿರ್ವಹಣೆಯಲ್ಲಿ ಟ್ರಾವಂಕೂರು ದೇವಸ್ಥಾನ ಮಂಡಳಿ (Travancore Devaswom Board) ಮತ್ತು ಪೊಲೀಸರು ಪೂರ್ಣ ವಿಫಲರಾಗಿದ್ದು ಕೇರಳ ಸರ್ಕಾರದ (Kerala Government) ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ದೇವರ ದರ್ಶನಕ್ಕೆ ಭಕ್ತರು ಹಲವು ಗಂಟೆಗಳ ಕಾಲ ಅನ್ನ, ನೀರು ಇಲ್ಲದೇ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಅವ್ಯವಸ್ಥೆ ಪ್ರಶ್ನಿಸಿದ್ದಕ್ಕೆ ಪೊಲೀಸರು ಭಕ್ತರ ಮೇಲೆಯೇ ಹಲ್ಲೆ ನಡೆಸಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ. ಇದನ್ನೂ ಓದಿ: ಆಕಾಂಕ್ಷಿಯೂ ಅಲ್ಲದೆ ಕೊನೇ ಸಾಲಿನಲ್ಲಿದ್ದ ಭಜನ್ ಲಾಲ್ ಸಿಎಂ ಆಗಿದ್ದು ಹೇಗೆ?
VIDEO | Sabarimala pilgrims blocked the Erumeli-Pamba road overnight demanding that their vehicles be allowed to go till Pamba. #Sabarimalapic.twitter.com/IpsOonzRRU
ಮೊದಲು ಪಂಬೆಯಲ್ಲಿ ಪಾರ್ಕ್ ಮಾಡಿ ದೇವಸ್ಥಾನಕ್ಕೆ ಭಕ್ತರು ತೆರಳಬಹುದಿತ್ತು. ಆದರೆ ಈಗ ಕೇರಳ ಸರ್ಕಾರ ನಿಲಕ್ಕಲ್‌ನಲ್ಲಿ (Nilakkal) ಭಕ್ತರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ. ಇಲ್ಲಿಂದ ಸರ್ಕಾರಿ ಬಸ್ಸಿನ ಮೂಲಕ ಭಕ್ತರು ಹೋಗುತ್ತಿದ್ದಾರೆ. ಅವ್ಯವಸ್ಥೆಯ ಕಾರಣದಿಂದ ದರ್ಶನ ಸಿಗದೇ ಕರ್ನಾಟಕ, ತಮಿಳುನಾಡು, ಆಂಧ್ರ ಸೇರಿ ಹಲವು ರಾಜ್ಯಗಳ ಭಕ್ತರು ಪಂದಳಂನಿಂದಲೇ ಹಿಂದಿರುಗುತ್ತಿದ್ದಾರೆ.
ಕಣ್ಣೀರಿಟ್ಟ ಬಾಲಕ: ನೀಲಕ್ಕಲ್‌ನಲ್ಲಿ ತಂದೆಯಿಂದ ತಪ್ಪಿಸಿಕೊಂಡ ಪುಟ್ಟ ಬಾಲಕನೊಬ್ಬ ಬಸ್ಸಿನಲ್ಲೇ ತಂದೆಯನ್ನು ಹುಡುಕಿಕೊಡುವಂತೆ ಕಣ್ಣೀರೀಟ್ಟು ಕೈಮುಗಿದು ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಬಾಲಕ ಕಣ್ಣೀರಿಟ್ಟ ಕೆಲ ಹೊತ್ತಿನಲ್ಲೇ ಆತನ ತಂದೆ ವಾಹನದ ಬಳಿ ಪುತ್ರನನ್ನು ಸಂತೈಸಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಭಕ್ತರೊಬ್ಬರು, ಹಿಂದೆ ನಾನು ಹೋದಾಗ ಈ ರೀತಿಯ ಅನುಭವ ಆಗಲಿಲ್ಲ. ಭಕ್ತರ ಸಂಖ್ಯೆ ಜಾಸ್ತಿ ಏನು ಇಲ್ಲ. ಪಂಬೆಯಲ್ಲಿ ಪಾರ್ಕಿಂಗ್ ಜಾಗ ಇದ್ದರೂ ಕಡ್ಡಾಯವಾಗಿ ಭಕ್ತರಿಂದ ಹಣವನ್ನು ಸುಲಿಗೆ ಮಾಡುವ ಉದ್ದೇಶದಿಂದಲೇ ಸರ್ಕಾರಿ ಬಸ್ ಓಡಿಸುತ್ತಿದ್ದಾರೆ. ಆದರೆ ಕೇರಳ ನೋಂದಣಿಯ ವಾಹನಗಳನ್ನು ಬಿಡುತ್ತಿದ್ದಾರೆ. ಭಕ್ತರ ನಿರ್ವಹಣೆಯಲ್ಲಿ ಕೇರಳ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಹಾಲುಂಡ ತವರು ಸೇರಿದಂತೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ಸಿತಾರಾ (Sitara), ಹಲವು ವರ್ಷಗಳಿಂದ ಚಿತ್ರೋದ್ಯಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರು ದೇಶದಲ್ಲಿ ಇದ್ದರಾ ಅಥವಾ ವಿದೇಶದಲ್ಲಿ ನೆಲೆಯೂರಿದ್ದರಾ ಎನ್ನುವ ಕುರಿತೂ ಮಾಹಿತಿ ಇರಲಿಲ್ಲ. ಇದೀಗ ಏಕಾಏಕಿ ಶಬರಿಮಲೆಯಲ್ಲಿ (Sabarimala) ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಚಿರಂಜೀವಿ ಸರ್ಜಾ ನಟನೆಯ ‘ಅಮ್ಮ ಐ ಲವ್ ಯೂ’ ಚಿತ್ರದ ನಂತರ ಬಹುತೇಕ ಚಿತ್ರರಂಗದಿಂದಲೇ ದೂರವಿದ್ದ ಸಿತಾರಾಗೆ ಶಬರಿಮಲೆಗೆ ಹೋಗಬೇಕು ಎನ್ನುವ ಸಂಕಲ್ಪವಿತ್ತು ಎಂದು ಹೇಳಲಾಗುತ್ತಿದೆ. ಅದನ್ನು ಈಗ ಪೂರೈಸಿದ್ದಾರೆ. ಹಲವು ಮಹಿಳೆಯರ ಜೊತೆ ಶಬರಿಮಲೆಗೆ ಬಂದಿದ್ದ ಸಿತಾರಾ ಅಯ್ಯಪ್ಪನ ದರ್ಶನ (Darshana) ಪಡೆದಿದ್ದಾರೆ. ಇದನ್ನೂ ಓದಿ:ಅಭಿಮಾನಿ ವರ್ತನೆಗೆ ಬೆಚ್ಚಿಬಿದ್ದ ವಿಜಯ್ ದೇವರಕೊಂಡ
ಕಾರ್ತಿಕ ಮಾಸದ ಆರಂಭದ ದಿನಗಳಲ್ಲಿ ಶಬರಿಮಲೆ ಬಾಗಿಲು ತೆರೆದಿರುತ್ತದೆ. ಹಾಗಾಗಿ ಇದೇ ಸಂದರ್ಭದಲ್ಲಿ ಸಿತಾರಾ ಅಯ್ಯಪ್ಪನ (Ayyappa) ದರ್ಶನಕ್ಕೆ ಆಗಮಿಸಿದ್ದಾರೆ. ಕುಟುಂಬದ ಸದಸ್ಯರು ಮತ್ತು ಆಪ್ತರೊಂದಿಗೆ ಶಬರಿಮಲೆಗೆ ಬಂದಿದ್ದ ಅವರು, ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಆ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಕಣ್ಣೀರಿನ ಪಾತ್ರಗಳಿಗೆ ಹೇಳಿ ಮಾಡಿಸಿದಂತಿದ್ದರು ಸಿತಾರಾ. ಅದರಲ್ಲೂ ಹಾಲುಂಡ ತವರು ಸಿನಿಮಾ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಕನ್ನಡದಲ್ಲೇ ಅವರು ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ವಿಷ್ಣುವರ್ಧನ್ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡ ಹೆಗ್ಗಳಿಕೆ ಅವರದ್ದು.
ಧಾರವಾಡ: ಸ್ವಾಮಿ ಅಯ್ಯಪ್ಪನ (Ayappa) ದರ್ಶನಕ್ಕೆಂದು ಕೇರಳಕ್ಕೆ ತೆರಳಿದ್ದ ಧಾರವಾಡದ (Dharwada) ಹತ್ತರ ಹರೆಯದ ಬಾಲಕನೋರ್ವ (Boy) ರಸ್ತೆ ಅಪಘಾತದಲ್ಲಿ (Accident) ಸಾವನ್ನಪ್ಪಿದ್ದಾನೆ.
ಧಾರವಾಡ ಸೈದಾಪುರದ ಸುಮಿತ್ ಪಾಂಡೆ (10) ಅಪಘಾತದಲ್ಲಿ ಮೃತಪಟ್ಟ ಬಾಲಕ. ಜ.1 ರಂದು ಸೈದಾಪುರದಿಂದ ಶಬರಿಮಲೆಗೆ ಟಾಟಾ ಏಸ್ ವಾಹನದಲ್ಲಿ ಅಯ್ಯಪ್ಪ ಮಾಲೆಧಾರಿಗಳು ತೆರಳಿದ್ದರು. ದೇವರ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಕೇರಳದ ಮನಪುರಂನ ಯಡಪ್ಪಾಲ ಎಂಬಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸುಮಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿದೆ. ಇದನ್ನೂ ಓದಿ: ಸಾಲದ ಹಣಕ್ಕಾಗಿ ಚಿತ್ರಹಿಂಸೆ, ಕಿಡ್ನಾಪ್, ಕೊಲೆ – 9 ತಿಂಗಳ ಬಳಿಕ ಚಾರ್ಮಾಡಿಯಲ್ಲಿ ಯುವಕನ ಶವಕ್ಕಾಗಿ ಶೋಧ
ಕರ್ನೂಲ್ ಜಿಲ್ಲೆಯ ನಂದ್ಯಾಲದ ಮಾರಂ ವೆಂಕಟಸುಬ್ಬಯ್ಯ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವಜ್ರ ಹೊದಿಕೆಯ ಚಿನ್ನದ ಕಿರೀಟ ನೀಡಿದ್ದಾರೆ. ಕೇರಳ ಹೈಕೋರ್ಟ್ ವಕೀಲರೊಬ್ಬರ ನೆರವಿನೊಂದಿಗೆ ಶುಕ್ರವಾರ ಕಿರೀಟವನ್ನು ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕರಿಗೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಯೋಗಿ ಗೋರಖ್‍ಪುರದಲ್ಲಿಯೇ ಇರಲಿ, ಮತ್ತೆ ಬರುವುದು ಬೇಡ : ಅಖಿಲೇಶ್ ಯಾದವ್
ವೆಂಕಟಸುಬ್ಬಯ್ಯ ಅವರು ಅಯ್ಯಪ್ಪನ ಭಕ್ತರಾಗಿದ್ದಾರೆ. ಕಳೆದ 30 ವರ್ಷಗಳಿಂದ ಶಬರಿಗಿರಿಗೆ ಭೇಟಿ ನೀಡುತ್ತಿದ್ದಾರೆ. ವೆಂಕಟಸುಬ್ಬಯ್ಯ ಅವರು ಕಳೆದ ವರ್ಷ ಕೊರೊನಾ ಸೋಂಕಿಗೆ ಒಳಗಾಗಿದ್ದರು. 15 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದು ಸಾವು-ಬದುಕಿನ ನಡುವೆ ಹೋರಾಡಿ ಬದುಕುಳಿದಿದ್ದರು. ಇದನ್ನೂ ಓದಿ: ರಸ್ತೆಗಳನ್ನು ಕಂಗನಾ ಕೆನ್ನೆಗಿಂತ ಸುಗಮವಾಗಿಸುತ್ತೇನೆ: ಇರ್ಫಾನ್ ಅನ್ಸಾರಿ
ಚೇತರಿಸಿಕೊಂಡಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವಜ್ರದ ಕಿರೀಟವನ್ನ ನೀಡುವುದಾಗಿ ಹರಕೆ ಹೊತ್ತಿದ್ದರು. ಅದೇ ರೀತಿಯಾಗಿ ಆ ಹರಕೆಯ ಭಾಗವಾಗಿ ಚಿನ್ನದ ಕಿರೀಟವನ್ನ ದೇವಾಲಯಕ್ಕೆ ಕಾಣಿಕೆಯಾಗಿ ನೀಡಿದ್ದಾರೆ. ಅಯ್ಯಪ್ಪನ ಆಶೀರ್ವಾದಿಂದಲೇ ನಾನು ಮತ್ತೆ ಬದುಕಲು ಸಾಧ್ಯವಾಯಿತು ಎಂದು ವೆಂಕಟಸುಬ್ಬಯ್ಯ ಅವರು ಹೇಳಿದ್ದಾರೆ. ಈ ಕಿರೀಟದ ನಿಖರವಾದ ಬೆಲೆ ಎಷ್ಟು ಎನ್ನುವ ಮಾಹಿತಿ ಇಲ್ಲ.
ಬೆಂಗಳೂರು: ಯುವರತ್ನ ಪುನೀತ್ ರಾಜ್‌ಕುಮಾರ್‌ಗೆ ಅಭಿಮಾನಿಯೊಬ್ಬ ಅಯ್ಯಪ್ಪನ ದರ್ಶನ ಮಾಡಿಸಿದ್ದಾನೆ.
ಅಪ್ಪು ಅಗಲಿ ವಾರಗಳು ಕಳೆಯುತ್ತಿವೆ. ಆದರೂ ಸಹ ಅವರನ್ನು ಮರೆಯುವುದು ಅಭಿಮಾನಿಗಳಿಗೆ ಆಗುತ್ತಿಲ್ಲ. ಇನ್ನು ಅವರು ಬದುಕಿದ್ದಾರೆ ಎಂದು ಎಷ್ಟೋ ಅಭಿಮಾನಿಗಳು ತಿಳಿದುಕೊಂಡಿದ್ದಾರೆ. ಅದರಂತೆ ಅಪ್ಪು ಇಲ್ಲ ಎಂಬುದನ್ನು ಒಪ್ಪದ ಇಲ್ಲೊಬ್ಬ ಅಭಿಮಾನಿ ಶಬರಿಮಲೆ ಅಯ್ಯಪ್ಪನ 18 ಮೆಟ್ಟಿಲುಗಳನ್ನು ಅಪ್ಪು ಭಾವಚಿತ್ರದೊಂದಿಗೆ ಹತ್ತಿ ಸ್ವಾಮಿ ಅಯ್ಯಪ್ಪನ ದರ್ಶನ ಮಾಡಿಸಿದ್ದಾನೆ. ಇದನ್ನೂ ಓದಿ: ಪುನೀತ್‍ರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ: ವಿಜಯ ರಾಘವೇಂದ್ರ
ಪುನೀತ್ ರಾಜ್‍ಕುಮಾರ್ ಅನೇಕ ವರ್ಷಗಳಿಂದ ಶಬರಿಮಲೆಗೆ ಹೋಗಿ ಸ್ವಾಮಿ ಅಯ್ಯಪ್ಪನ ದರ್ಶನ ಮಾಡುತ್ತಿದ್ದರು. ಬಾಲ್ಯದಿಂದಲೂ ತಂದೆ ಡಾ.ರಾಜ್‍ಕುಮಾರ್ ಜೊತೆ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದ ಇವರು ಅಣ್ಣಾವ್ರು ಅಗಲಿದ ಬಳಿಕ ಅಣ್ಣ ಶಿವರಾಜ್ ಕುಮಾರ್ ಅವರ ಜೊತೆ ಶಬರಿಮಲೆಗೆ ಹೋಗುತ್ತಿದ್ದರು.
ಅಪ್ಪು ಅಗಲಿದಾಗಿನಿಂದ ಅವರ ಹೆಸರಿನಲ್ಲಿ ಅಭಿಮಾನಿಗಳು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಅಪ್ಪು ಜನರಿಗೆ ದೊಡ್ಡ ಸ್ಪೂರ್ತಿಯಾಗಿದ್ದಾರೆ. ಅದು ಅಲ್ಲದೇ ಅಪ್ಪು ಅಗಲಿಕೆ ಅಭಿಮಾನಿಗಳಿಗೆ ಮಾತ್ರವಲ್ಲ, ಕನ್ನಡ ಸಿನಿಮಾ ಲೋಕಕ್ಕೂ ದೊಡ್ಡಪೆಟ್ಟು ಬಿದ್ದಿದೆ.
ತಿರುವನಂತಪುರಂ: ಭಾರೀ ಮಳೆಯ ಹಿನ್ನೆಲೆ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಶಬರಿಮಲೆ ದೇಗುಲವನ್ನು ಇಂದು ಮುಚ್ಚುವುದಾಗಿ ಜಿಲ್ಲಾಡಳಿತ ಶುಕ್ರವಾರ ಆದೇಶ ಹೊರಡಿಸಿದೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ನಿರಂತರ ಮಳೆ ಮತ್ತು ಪಂಪಾ ನದಿ ಸೇರಿದಂತೆ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಸುರಕ್ಷತೆಯ ಸಲುವಾಗಿ ಇಂದು(ನವೆಂಬರ್ 20) ಪಂಪ ಮತ್ತು ಶಬರಿಮಲೆ ದೇಗುಲಕ್ಕೆ ಯಾತ್ರೆಯನ್ನು ನಿಷೇಧಿಸಲಾಗಿದೆ. ಶಬರಿಮಲೆಯ ಪ್ರಸಿದ್ಧ ಅಯ್ಯಪ್ಪ ದೇವಸ್ಥಾನಕ್ಕೆ ಶನಿವಾರದ ಯಾತ್ರೆಯನ್ನು ನಿಷೇಧಿಸಿ ಜಿಲ್ಲಾಡಳಿತ ಶುಕ್ರವಾರ ಆದೇಶವನ್ನು ಹೊರಡಿಸಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ
ಪತ್ತನಂತಿಟ್ಟ ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಂಪಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಕಕ್ಕಿ-ಆನಾತೋಡ್ ಜಲಾಶಯ ಮತ್ತು ಪಂಪಾ ಅಣೆಕಟ್ಟುಗಳಲ್ಲಿ ರೆಡ್ ಅಲರ್ಟ್ ಫೋಷಣೆಯಾದ ಹಿನ್ನೆಲೆ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಇಂದು ಪಂಪಾ ಮತ್ತು ಶಬರಿಮಲೆಗೆ ಯಾತ್ರೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ಅವರು ಆದೇಶ ಹೊರಡಿಸಿದ್ದಾರೆ.
ವರ್ಚುವಲ್ ಕ್ಯೂ ಸಿಸ್ಟಮ್ ಮೂಲಕ ಸ್ಲಾಟ್ ಕಾಯ್ದಿರಿಸಿದ ಯಾತ್ರಾರ್ಥಿಗಳಿಗೆ ಹವಾಮಾನ ಪರಿಸ್ಥಿತಿಗಳು ಅನುಕೂಲಕರವಾದ ನಂತರ ಹತ್ತಿರದ ಸಂಭವನೀಯ ಸ್ಲಾಟ್‍ನಲ್ಲಿ ದೇವರ ‘ದರ್ಶನ’ಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು. ಈ ಸಮಯದಲ್ಲಿ ಯಾತ್ರಾರ್ಥಿಗಳು ಪ್ರಯಾಣವನ್ನು ಕೈಗೊಳ್ಳದೆ ಸಹಕರಿಸಲು ವಿನಂತಿಸಿಕೊಂಡರು. ಇದನ್ನೂ ಓದಿ: ಓಟಿಟಿ ಪ್ರವೇಶಿಸಲು ಸಿದ್ಧರಾದ ನಾಗಚೈತನ್ಯ
ಎರಡು ತಿಂಗಳ ಕಾಲ ವಾರ್ಷಿಕ ಮಂಡಲ-ಮಕರವಿಳಕ್ಕು ತೀರ್ಥಯಾತ್ರೆಗಾಗಿ ನವೆಂಬರ್ 16 ರಂದು ತೆರೆದಾಗಿನಿಂದ ಹವಾಮಾನ ಪರಿಸ್ಥಿತಿಗಳು ಮತ್ತು ಕೋವಿಡ್-19 ಪರಿಸ್ಥಿತಿಯನ್ನು ಎದುರಿಸಿ, ನೂರಾರು ಭಕ್ತರು ಅಯ್ಯಪ್ಪ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಬರುತ್ತಿದ್ದಾರೆ. ಸಾಂಕ್ರಾಮಿಕ ಮತ್ತು ಭಾರೀ ಮಳೆಯ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳನ್ನು ನಿಯಂತ್ರಿಸಲು ಹಿಂದಿನ ವರ್ಷದಂತೆ ಈ ಬಾರಿಯೂ ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.