Tag: ಅಯೋಧ್ಯೆ

  • ಗಣಪತಿಯೇ ನಮಗೆ ಮೊದಲ ಗುರು, ಕೃಷ್ಣನ ಶಂಖನಾದವೇ ನಮ್ಮ ಸಪ್ತಸ್ವರಗಳಿಗೆ ಪ್ರೇರಣೆ: ಉಡುಪಿಯಲ್ಲಿ ಉಸ್ತಾದ್ ಮೋಡಿ

    ಗಣಪತಿಯೇ ನಮಗೆ ಮೊದಲ ಗುರು, ಕೃಷ್ಣನ ಶಂಖನಾದವೇ ನಮ್ಮ ಸಪ್ತಸ್ವರಗಳಿಗೆ ಪ್ರೇರಣೆ: ಉಡುಪಿಯಲ್ಲಿ ಉಸ್ತಾದ್ ಮೋಡಿ

    ಉಡುಪಿ: ದೇಶಾದ್ಯಂತ ಅಯೋಧ್ಯೆಯ ರಾಮ ಮಂದಿರ ಕುರಿತಾದ ಚರ್ಚೆಗಳು ನಡೆಯುತ್ತಿದೆ. ರಾಮ ಮಂದಿರ, ಬಾಬ್ರಿ ಮಸೀದಿ ಅಂತ ರಾಜಕೀಯ ಪಕ್ಷಗಳು ಕಚ್ಚಾಡುತ್ತಿದೆ. ಹಿಂದೂಗಳು ಬಾಬ್ರಿ ಮಸೀದಿ ಧ್ವಂಸವಾದ ದಿನವನ್ನು ಶೌರ್ಯ ದಿನ ಅಂತ ಆಚರಿಸುತ್ತಿದ್ದಾರೆ. ಮುಸಲ್ಮಾನರು ಡಿಸೆಂಬರ್ ಆರನ್ನು ಕರಾಳ ದಿನ ಅಂತ ಆಚರಿಸುತ್ತಿದ್ದಾರೆ. ಈ ನಡುವೆ ಉಡುಪಿಯಲ್ಲಿ ಕಲೆಗೆ – ಕಲಾವಿದನಿಗೆ ಜಾತಿ, ಧರ್ಮವಿಲ್ಲ ಎಂಬುದು ಸಾಬೀತಾಗಿದೆ.

    ತಬಲ ಮಾಂತ್ರಿಕ ಝಾಕಿರ್ ಹುಸೇನ್ ಉಡುಪಿ ಶ್ರೀಕೃಷ್ಣಮಠದಲ್ಲಿ ಸಾವಿರಾರು ಪ್ರೇಕ್ಷಕರನ್ನು ತನ್ನ ಕೈಚಳಕದ ಮೂಲಕ ಮಂತ್ರಮುಗ್ಧಗೊಳಿಸಿದ್ದಾರೆ. ಮಠದೊಳಗೆ ಆಗಮಿಸಿ ಶ್ರೀಕೃಷ್ಣನ ದರ್ಶನ ಮಾಡಿ ಕನಕ ನವಗ್ರಹ ಕಿಂಡಿಯ ಮುಂದೆ ನಿಂತು ಭಕ್ತಿಪರವಶರಾಗಿದ್ದಾರೆ. ಶ್ರೀಕೃಷ್ಣನ ಮುಂದೆ ನಿಂತು ಕೈಮುಗಿದು ಕೆಲ ನಿಮಿಷಗಳ ಕಾಲ ಧ್ಯಾನ ಮಾಡಿದ್ದಾರೆ. ಶಿರಭಾಗಿ ಭಗವಂತನಿಗೆ ವಂದಿಸಿ ತಮ್ಮ ನಿವೇದನೆ ಅರ್ಪಿಸಿದ್ದಾರೆ.

    ಕೃಷ್ಣಮಠದ ರಾಜಾಂಗಣದಲ್ಲಿ ಎರಡೂವರೆ ಗಂಟೆಗಳ ಕಾಲ ಉಸ್ತಾದ್ ಝಾಕಿರ್ ಹುಸೇನ್ ತಬಲ ನುಡಿಸಿ ರಸದೌತಣ ಬಡಿಸಿದರು. ಬೆರಳಿನ ವೇಗಕ್ಕೆ ಸಾವಿರಾರು ಮಂದಿ ಅಭಿಮಾನಿಗಳು ತಮ್ಮನ್ನೇ ತಾವು ಮರೆತರು. ವಿದ್ವಾನ್ ಕುಮಾರೇಶ್ ವಯೋಲಿನ್, ವಿದೂಷಿ ಜಯಂತಿ ಕುಮಾರೇಶ್ ವೀಣೆ ನಾದ ತಬಲ ಮಾಂತ್ರಿಕ ಝಾಕಿರ್ ಹುಸೇನ್ ಗೆ ಸಾಥ್ ನೀಡಿದರು.

    ಝಾಕಿರ್ ಹುಸೇನ್ ರಿಂದ ಗಣಪತಿ ಸ್ತುತಿ- ಶಿವನಾಮ ಜಪ: ಕಾರ್ಯಕ್ರಮದ ನಡುವೆ ಝಾಕಿರ್ ಹುಸೇನ್ ಗಣಪತಿ, ಶ್ರೀಕೃಷ್ಣ ಮತ್ತು ಶಿವನನ್ನು ನೆನಪಿಸಿಕೊಂಡರು. ಗಣಪತಿಯ ಅನುಗ್ರಹ, ಕೃಷ್ಣನ ಶಂಖನಾದ, ಶಿವನ ಅನುಗ್ರಹ ನನ್ನ ಮೇಲೆ ಇರುವುದರಿಂದ ಈ ಹಂತಕ್ಕೆ ಬಂದು ನಿಂತಿದ್ದೇನೆ ಎಂದರು. ತಬಲದಲ್ಲಿ ಢಮರುಗ ನುಡಿಸಿ ಝಾಕಿರ್ ಚಪ್ಪಾಳೆ ಶಿಳ್ಳೆ ಗಿಟ್ಟಿಸಿದರು.

    ಕಾರ್ಯಕ್ರಮದ ಕೊನೆಗೆ ಪೇಜಾವರ ಹಿರಿಯ, ಕಿರಿಯ ಶ್ರೀ, ಸೋದೆ ವಿಶ್ವವಲ್ಲಭ ಸ್ವಾಮೀಜಿಯ ಪಾದ ಮುಟ್ಟಿ ಝಾಕಿರ್ ನಮಸ್ಕರಿಸಿದರು. ಸ್ವಾಮೀಜಿಗಳು ಆತ್ಮೀಯವಾಗಿ ಕಲಾವಿದ ಝಾಕಿರ್ ಹುಸೇನ್ ರನ್ನು ಸ್ಪರ್ಶಿಸಿ, ಅನುಗ್ರಹ ಮಂತ್ರಾಕ್ಷತೆ ನೀಡಿದರು. ಶಾಲು ಹೊದಿಸಿ – ಹಾರಹಾಕಿ, ಕೃಷ್ಣನ ವಿಗ್ರಹ ನೀಡಿ ಪೇಜಾವರ ಮಠ ಗೌರವಿಸಿತು.

    ಉಸ್ತಾದ್ ಝಾಕಿರ್ ಹುಸೇನ್ ಮಾತನಾಡಿ, ಮಠದಲ್ಲಿ ಕಾರ್ಯಕ್ರಮ ನೀಡಿದ್ದು ಬಹಳ ಸಂತೋಷವಾಗಿದೆ. ಕೃಷ್ಣ ಕರೆಸಿಕೊಂಡರೆ, ಸ್ವಾಮೀಜಿಯವರ ಆಶೀರ್ವಾದ ಇದ್ದರೆ ಮತ್ತೆ ಉಡುಪಿಯಲ್ಲಿ ಕಾರ್ಯಕ್ರಮ ಕೊಡುವುದಾಗಿ ಘೋಷಣೆ ಮಾಡಿದರು. ಗಣಪತಿಯೇ ಕಲಾವಿದರಿಗೆ ಮೊದಲ ಗುರು. ಕೃಷ್ಣನ ಶಂಖನಾದವೇ ನಮ್ಮ ಸಪ್ತಸ್ವರಗಳಿಗೆ ಪ್ರೇರಣೆ, ಶಿವನ ಢಮರುಗ ನಾದವೇ ನಮಗೆ ವೈಬ್ರೇಶನ್ ಅಂತ ತಮ್ಮ ಕಾರ್ಯಕ್ರಮದ ನಡುವೆ ಹೇಳಿದರು.

    ಪೇಜಾವರ ಕಿರಿಯ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ದೇವತೆಗಳಿಗೆ ಲಭ್ಯವಾದದ್ದು ಒಂದು ಬಿಂದು ಅಮೃತ. ಆದ್ರೆ ಝಾಕಿರ್ ಹುಸೇನರ ಕಾರ್ಯಕ್ರಮದ ಮೂಲಕ ನಮಗೆ ಅಮೃತದ ಸುಧೆಯೇ ಲಭ್ಯವಾಯ್ತು ಅಂತ ಹೇಳಿದರು.

     

  • ರಾಮಮಂದಿರ ಕಟ್ಟೋವರೆಗೂ ನಿದ್ರಿಸಬೇಡಿ, ನಾನೂ ನಿದ್ರಿಸಲ್ಲ- ಪೇಜಾವರ ಶ್ರೀ

    ರಾಮಮಂದಿರ ಕಟ್ಟೋವರೆಗೂ ನಿದ್ರಿಸಬೇಡಿ, ನಾನೂ ನಿದ್ರಿಸಲ್ಲ- ಪೇಜಾವರ ಶ್ರೀ

    ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುವವರೆಗೆ ನಿದ್ರಿಸಬೇಡಿ. ನಾನಂತೂ ನಿದ್ರಿಸಲ್ಲ ಎಂದು ಉಡುಪಿ ಮಠದ ಪೇಜಾವರ ಶ್ರೀ ಹೇಳಿದ್ದಾರೆ.

    ಹಿಂದೂ ಸಮಾಜೊತ್ಸವದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಕಟು ಟೀಕೆ ಮಾಡಿದ್ರು. ಸಿಎಂ ಬಸವಣ್ಣನ ಭಕ್ತರೆನ್ನುತ್ತಾರೆ. ನಾನು ಇದನ್ನು ಒಪ್ಪಲು ಸಾಧ್ಯವಿಲ್ಲ. ಬಸವಣ್ಣ ಗೋಹತ್ಯೆ ಬಗ್ಗೆ ವಿರೋಧ ಇದ್ದವರು. ಸಿಎಂ ಗೋಮಾಂಸ ಭಕ್ಷಕರಿಗೆ ಬೆಂಬಲ ಇದ್ದಾರೆ. ಸಿದ್ದರಾಮಯ್ಯ ಹೇಗೆ ಬಸವಣ್ಣನ ಭಕ್ತರಾಗಲು ಸಾಧ್ಯ ಅಂತ ಹೇಳಿದ್ರು.

    ರಾಮಮಂದಿರ ನಿರ್ಮಾಣ ಆಗುವವರೆಗೆ ನಿದ್ದೆ ಮಾಡದಿರಿ. ನಾನಂತೂ ನಿದ್ದೆ ಮಾಡಲ್ಲ. ನನಗೆ ಹಿಂದ- ಅಹಿಂದ ಒಂದೇ. ಕೆಲವರಿಗೆ ಅಹಿಂದ ಮಾತ್ರ ಮುಖ್ಯ. ಬುದ್ಧಿಜೀವಿಗಳ ಬಗ್ಗೆ ನನಗೆ ಕನಿಕರವಾಗುತ್ತಿದೆ. ಕಾಲು ಕೆರೆದುಕೊಂಡು ಜಗಳಕ್ಕೆ ಬರ್ತಾರೆ ಅಂತ ಅವರು ಹೆಳಿದ್ರು.

    ಮುಸ್ಲಿಮರಿಂದ ತಂಪು ಪಾನೀಯ: ಹಿಂದೂ ಸಮಾಜೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯ ಸಮಸ್ತ ಮುಸ್ಲಿಂ ಬಾಂಧವರಿಂದ ತಂಪು ಪಾನೀಯವನ್ನು ವಿತರಿಸಲಾಗಿತ್ತು.

  • ಈದ್ ರ‍್ಯಾಲಿಗೆ ಚಾನ್ಸ್, ದತ್ತ ಯಾತ್ರೆಗೆ ಬ್ರೇಕ್ – ಚಿಕ್ಕಮಗ್ಳೂರು ಜಿಲ್ಲಾಡಳಿತದಿಂದ ಇಬ್ಬಗೆ ನೀತಿ

    ಈದ್ ರ‍್ಯಾಲಿಗೆ ಚಾನ್ಸ್, ದತ್ತ ಯಾತ್ರೆಗೆ ಬ್ರೇಕ್ – ಚಿಕ್ಕಮಗ್ಳೂರು ಜಿಲ್ಲಾಡಳಿತದಿಂದ ಇಬ್ಬಗೆ ನೀತಿ

    – ಸರ್ಕಾರದ ವಿರುದ್ಧ ಹಿಂದೂಗಳ ಆಕ್ರೋಶ

    ಚಿಕ್ಕಮಗಳೂರು: ಸದ್ಯದಲ್ಲೇ ಅಯೋಧ್ಯೆಯ ಹೋರಾಟವನ್ನು ನೆನಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಒಂದು ಕಣ್ಣಿಗೆ ಬೆಣ್ಣೆ-ಒಂದು ಕಣ್ಣಿಗೆ ಸುಣ್ಣವೆಂಬ ನೀತಿಯಿಂದ ಹಿಂದೂ ಸಂಘಟಕರಿಗೆ ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ.

    ಜಿಲ್ಲಾಡಳಿತ ಸರ್ಕಾರದ ಏಜೆಂಟ್ ನಂತೆ ವರ್ತಿಸುತ್ತಿದೆ ಅಂತಿರೋ ಹಿಂದೂ ಸಂಘಟಕರು, ಡಿಸೆಂಬರ್ 3ರಂದು ದತ್ತಪೀಠದಲ್ಲಿ ನಡೆಯೋದೇ ಬೇರೆ ಎಂದು ಹೇಳುತ್ತಿದ್ದಾರೆ. ಆದರೆ ಇನ್ನೂ 11 ದಿನಗಳ ಕಾಲ ಕಾಫಿನಾಡು ಚಿಕ್ಕಮಗಳೂರು ಬೂದಿ ಮುಚ್ಚಿದ ಕೆಂಡ ಎನ್ನುವುದರಲ್ಲಿ ಅನುಮಾನವೇ ಬೇಡ.

    ಸರ್ಕಾರ ಅಲ್ಪಸಂಖ್ಯಾತರ ಮನವೊಲಿಕೆ ಮಾಡ್ತಿದ್ಯಾ? ಹಿಂದೂಗಳ ಹೋರಾಟವನ್ನು ಹತ್ತಿಕ್ಕುವ ಯತ್ನ ಮಾಡ್ತಿದ್ಯಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಏಕೆಂದರೆ ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿಗೆ ಬಜರಂಗದಳ ಹಾಗೂ ವಿಎಚ್‍ಪಿಯು ಚಾಲನೆ ನೀಡಿದೆ. 200ಕ್ಕೂ ಅಧಿಕ ಕಾರ್ಯಕರ್ತರು ಗುರುವಾರ ಮಾಲಾಧಾರಣೆಯೂ ಮಾಡಿದ್ದಾರೆ. ಆದರೆ ಜಿಲ್ಲಾಡಳಿತ ರಥಯಾತ್ರೆಗೆ ಬ್ರೇಕ್ ಹಾಕಿದೆ. ಈದ್-ಮಿಲಾದ್ ಮೆರವಣಿಗೆಗೆ ಅವಕಾಶ ಕೊಟ್ಟ ಜಿಲ್ಲಾಡಳಿತ ರಥಯಾತ್ರೆಗೆ ಅವಕಾಶ ಕೊಟ್ಟಿಲ್ಲ. ಇದು ಹಿಂದೂ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿದ್ದು, ಸರ್ಕಾರಕ್ಕೆ ತಕ್ಕ ಉತ್ತರ ಕೊಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.

    ದತ್ತ ಜಯಂತಿ ಅಂಗವಾಗಿ ರಥಯಾತ್ರೆ ಮೂಲಕ ಸಾರ್ವಜನಿಕರಿಗೆ ದತ್ತ ಪೀಠದ ಮಾಹಿತಿ ನೀಡೋದು ಹಿಂದೂ ಸಂಘಟನೆಯ ಉದ್ದೇಶ. ಆದರೆ ಜಿಲ್ಲಾಡಳಿತ ಈದ್-ಮಿಲಾದ್ ಹಬ್ಬದ ನೆಪವೊಡ್ಡಿ ನಮಗೆ ಅನುಮತಿ ನೀಡಿಲ್ಲ. ನಾವು ಮಾಡುತ್ತಿರೋ ಯಾತ್ರೆ ಯಾರ ವಿರುದ್ಧವೂ ಅಲ್ಲ, ರಾಜಕೀಯವೂ ಅಲ್ಲ. ಆದರೆ ಜಿಲ್ಲಾಡಳಿತ ಸರ್ಕಾರದ ಜೊತೆಗೂಡಿ ನಮ್ಮನ್ನ ಹತ್ತಿಕ್ಕಲು ಮುಂದಾಗಿದೆ ಎಂದು ಹಿಂದೂ ಸಂಘಟಕರು ಹೇಳುತ್ತಾರೆ.

    ಒಟ್ಟಿನಲ್ಲಿ ಇನ್ನೂ 11 ದಿನ ಚಿಕ್ಕಮಗಳೂರು ಬೂದಿ ಮುಚ್ಚಿದ ಕೆಂಡದಂತಿರುತ್ತೆ. ಈದ್-ಮಿಲಾದ್ ಹಾಗೂ ಬೃಹತ್ ಶೋಭಾಯಾತ್ರೆ ಒಂದೇ ದಿನವಿರೋದ್ರಿಂದ ಪೊಲೀಸರು ಜಿಲ್ಲೆಯಾದ್ಯಂತ ಹದ್ದಿನ ಕಣ್ಣು ಇಟ್ಟಿದ್ದಾರೆ.

  • ಮುಂದಿನ ದೀಪಾವಳಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ಇರುತ್ತೆ: ಸುಬ್ರಮಣಿಯನ್ ಸ್ವಾಮಿ

    ಮುಂದಿನ ದೀಪಾವಳಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ಇರುತ್ತೆ: ಸುಬ್ರಮಣಿಯನ್ ಸ್ವಾಮಿ

    ಪಾಟ್ನಾ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಶೀಘ್ರದಲ್ಲಿಯೇ ಶುರುವಾಗಲಿದ್ದು ಮುಂದಿನ ದೀಪಾವಳಿ ವೇಳೆಗೆ ಭಕ್ತರು ಭೇಟಿ ನೀಡಬಹುದು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

    ವಿರಾಟ್ ಹಿಂದೂಸ್ತಾನ್ ಸಂಗಮ್ ಕಾರ್ಯಕ್ರಮದಲ್ಲಿ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ, ಈ ವಾರದಲ್ಲಿ ದೀಪಾವಳಿ ಹಬ್ಬ ಇದ್ದು ಮುಂದಿನ ದೀಪಾವಳಿ ವೇಳೆಗೆ ರಾಮಮಂದಿರಕ್ಕೆ ಭಕ್ತರು ಭೇಟಿ ನೀಡಬಹುದು ಎಂದು ಅವರು ಹೇಳಿದರು.

    ಈಗಾಗಲೇ ರಾಮ ಮಂದಿರ ನಿರ್ಮಾಣಕ್ಕೆ ಹಲವಾರು ಅಡೆತಡೆಗಳಿದ್ದು ಅವುಗಳನ್ನು ಬಗೆಹರಿಸಿರುವುದಾಗಿ ಅವರು ತಿಳಿಸಿದರು.

    ರಾಮನ ಪತ್ನಿಯಾಗಿರುವ ಸೀತಾ ದೇವಿಯ ಜನ್ಮ ಸ್ಥಳವಾದ ಉತ್ತರ ಬಿಹಾರದ ಸೀತಾಮಾರ್ಹಿ ಎಂಬಲ್ಲಿ ವಿಶ್ವ ಹಿಂದೂ ಸಂಗಮದಿಂದ ದೇವಾಲಯವನ್ನು ನಿರ್ಮಾಣ ನಡೆಯಲಿದೆ ಎಂದು ತಿಳಿಸಿದರು.