Tag: ಅಯೋಧ್ಯಬಾಲರಾಮನ

  • ಕೃಷ್ಣಾ ನದಿಯಲ್ಲಿ ಪತ್ತೆಯಾದ ವಿಷ್ಣು ವಿಗ್ರಹ ಪ್ರಾಚ್ಯ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರ

    ಕೃಷ್ಣಾ ನದಿಯಲ್ಲಿ ಪತ್ತೆಯಾದ ವಿಷ್ಣು ವಿಗ್ರಹ ಪ್ರಾಚ್ಯ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರ

    ರಾಯಚೂರು: ಜಿಲ್ಲೆಯ ದೇವಸುಗೂರು ಬಳಿ ಕೃಷ್ಣಾ ನದಿಯಲ್ಲಿ (Krishna River) ಪತ್ತೆಯಾಗಿದ್ದ 3 ವಿಗ್ರಹಗಳಲ್ಲಿ ಅಯೋಧ್ಯೆ ಬಾಲಕರಾಮನ ವಿನ್ಯಾಸ ಹೋಲುವ ದಶಾವತಾರಿ ವಿಷ್ಣು ವಿಗ್ರಹ (Vishnu Idol) ಈಗ ಪುರಾತತ್ವ ಇಲಾಖೆ ವಸ್ತುಸಂಗ್ರಹಾಲಯ ಸೇರಿದೆ. ಒಂದು ವಿಗ್ರಹ ರಾಜ್ಯಕ್ಕೆ ಸೇರಿದರೆ ಇನ್ನೂ ಎರಡು ವಿಗ್ರಹಗಳು ತೆಲಂಗಾಣದ ಪಾಲಾಗಿವೆ.

    ದೇವಸುಗೂರಿನ ರಾಮಲಿಂಗೇಶ್ವರ ದೇವಾಲಯದಲ್ಲಿ ಇರಿಸಿದ್ದ ವಿಷ್ಣು ಮೂರ್ತಿಯನ್ನ ಪುರಾತತ್ವ ಇಲಾಖೆ (Department of Archaeology) ಅಧಿಕಾರಿಗಳು ಪರಿಶೀಲನೆ ನಡೆಸಿ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರಿಸಿದ್ದಾರೆ. ರಾಯಚೂರಿನ (Raichur) ನವರಂಗ್ ದರ್ಗಾದಲ್ಲಿನ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ. ಆದ್ರೆ ವಿಗ್ರಹದ ಕಾಲಾವಧಿ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ. 400 ವರ್ಷಗಳಷ್ಟು ಹಳೆಯ ವಿಗ್ರಹ ಎಂದು ನಿರೀಕ್ಷಿಲಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಸಿಕ್ಕ ಶಿವಲಿಂಗ, ವಿಷ್ಣುವಿನ ವಿಗ್ರಹಕ್ಕೆ ಅಂತಾರಾಜ್ಯ ಪೈಪೋಟಿ

    ಮತ್ತೊಂದು ವಿಷ್ಣು ವಿಗ್ರಹ ಹಾಗೂ ಶಿವಲಿಂಗ ತೆಲಂಗಾಣ ಪಾಲಾಗಿವೆ. ಎರಡು ರಾಜ್ಯಗಳ ಗಡಿಯಲ್ಲಿ ಮೂರ್ತಿಗಳು ದೊರೆತ ಹಿನ್ನೆಲೆ ಪೈಪೋಟಿ ನಡೆದಿತ್ತು. ತೆಲಂಗಾಣದ ಭಕ್ತರು ತೆಗೆದುಕೊಂಡು ಹೋದ ವಿಷ್ಣು ವಿಗ್ರಹ ಹಾಗೂ ಶಿವಲಿಂಗ ಕುರಿತು ತೆಲಂಗಾಣದ ಅಧಿಕಾರಿಗಳು ಅಧ್ಯಯನ ನಡೆಸಿದ್ದಾರೆ. ವಿಗ್ರಹಗಳ ಸಂಪೂರ್ಣ ಪರಿಶೀಲನೆ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಅಂತ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ಚುನಾವಣೆ ಮತ ಎಣಿಕೆ ಅಂತ್ಯ; ಇಮ್ರಾನ್ ಖಾನ್ ಮುನ್ನಡೆ, ನವಾಜ್ ಷರೀಫ್‌ಗೆ ಸೇನೆ ಬೆಂಬಲ

    ರಾಯಚೂರು ಜಿಲ್ಲೆಯ ದೇವಸುಗೂರು ಬಳಿಯ ಕೃಷ್ಣಾ ನದಿಯಲ್ಲಿ ಕಳೆದ ಐದು ದಿನಗಳ ಹಿಂದೆ ಎರಡು ವಿಷ್ಣು ಅವತಾರದ ವೆಂಕಟೇಶ್ವರ ಸ್ವಾಮಿ ಮೂರ್ತಿಗಳು ಹಾಗೂ ಶಿವಲಿಂಗ ಮೂರ್ತಿ ಪತ್ತೆಯಾಗಿತ್ತು. ವೆಂಕಟೇಶ್ವರನ ಮೂರ್ತಿಯೊಂದು ಅಯೋಧ್ಯೆ ಬಾಲಕರಾಮನ ವಿನ್ಯಾಸವನ್ನೇ ಹೋಲುವಂತಿತ್ತು. ನದಿಯಲ್ಲಿ ನೀರು ಬತ್ತಿದ್ದು, ಇದ್ದಷ್ಟೇ ನೀರಿನಲ್ಲಿ ಮೀನುಗಾರರು ಮೀನು ಹಿಡಿಯುತ್ತಿದ್ದ ವೇಳೆ ಮೂರ್ತಿಗಳು ಪತ್ತೆಯಾಗಿದ್ದವು. ಇದನ್ನೂ ಓದಿ: ಉದ್ಯೋಗ ಕೊಡಿಸುವ ನೆಪದಲ್ಲಿ 20 ಮಹಿಳೆಯರ ಮೇಲೆ ಗ್ಯಾಂಗ್‌ರೇಪ್ – ಇಬ್ಬರ ವಿರುದ್ಧ ದೂರು ದಾಖಲು

  • ರಾಯಚೂರಿನ ಕೃಷ್ಣಾ ನದಿಯಲ್ಲಿ ಶಿವಲಿಂಗ, ವೆಂಕಟೇಶ್ವರ ಮೂರ್ತಿಗಳು ಪತ್ತೆ

    ರಾಯಚೂರಿನ ಕೃಷ್ಣಾ ನದಿಯಲ್ಲಿ ಶಿವಲಿಂಗ, ವೆಂಕಟೇಶ್ವರ ಮೂರ್ತಿಗಳು ಪತ್ತೆ

    ರಾಯಚೂರು: ಜಿಲ್ಲೆಯ ದೇವಸುಗೂರು (Devarsugur) ಬಳಿಯ ಕೃಷ್ಣಾ ನದಿಯಲ್ಲಿ (Krishna River) ಎರಡು ವಿಷ್ಣು ಅವತಾರದ ವೆಂಕಟೇಶ್ವರ ಸ್ವಾಮಿ ಮೂರ್ತಿಗಳು (Idols) ಹಾಗೂ ಶಿವಲಿಂಗ ಪತ್ತೆಯಾಗಿದೆ. ವೆಂಕಟೇಶ್ವರನ ಮೂರ್ತಿಯೊಂದು ಅಯೋಧ್ಯ (Ayodhya) ಬಾಲರಾಮನ (BalaRama) ವಿನ್ಯಾಸವನ್ನ ಹೊಂದಿರುವುದು ಅಚ್ಚರಿ ಮೂಡಿಸಿದೆ.

    ನದಿಯಲ್ಲಿ ನೀರು ಬತ್ತಿದ್ದು ಮೀನುಗಾರರು ಇದ್ದ ನೀರಿನಲ್ಲೇ ಮೀನು ಹಿಡಿಯುತ್ತಿದ್ದ ವೇಳೆ ಮೂರ್ತಿಗಳು ಪತ್ತೆಯಾಗಿವೆ. ಅಲ್ಲದೆ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾರ್ಯ ನಡೆದಿದ್ದು ಅಲ್ಲಲ್ಲಿ ಮಣ್ಣು ಅಗೆಯಲಾಗಿತ್ತು. ಭೂಮಿಯಲ್ಲಿ ಹೂತು ಹೋಗಿದ್ದ ಮೂರ್ತಿಗಳು ಈಗ ಹೊರಗೆ ಬಂದಿರಬಹುದು ಎನ್ನಲಾಗಿದೆ. ಸಿಕ್ಕಿರುವ ಮೂರು ಮೂರ್ತಿಗಳು ವಿಭಿನ್ನವಾಗಿವೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಚು – 6 ಮಂದಿ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಕೆ

    ಮೂರುವರೆ ಅಡಿಯ ಒಂದು ಏಕಶಿಲಾ ಮೂರ್ತಿಯಂತೂ ಅಯೋಧ್ಯ ಬಾಲರಾಮನ ವಿನ್ಯಾಸವನ್ನು ಹೋಲುತ್ತದೆ. ವಿಷ್ಣುವಿನ (Vishnu) ದಶವತಾರಗಳನ್ನ ಮೂರ್ತಿಯಲ್ಲಿ ಕೆತ್ತಲಾಗಿದೆ. ಇನ್ನೊಂದು ಮೂರ್ತಿ ಎರಡೂವರೆ ಅಡಿಯಷ್ಟಿದೆ. ವಿಷ್ಣು ಮೂರ್ತಿಗಳಲ್ಲಿ ಸಾಮಾನ್ಯವಾಗಿ ಕೆಳಗಡೆ ಜಯವಿಜಯ ಚಿತ್ರ ಕಾಣಲಾಗುತ್ತೆ. ಆದರೆ ಇಲ್ಲಿ ಲಕ್ಷ್ಮಿ ಪದ್ಮಾವತಿ ಚಿತ್ರಗಳಿವೆ. ಈ ಮೂರ್ತಿಗಳನ್ನು ಕಂಡ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದು, ಸಾವಿರಾರು ವರ್ಷಗಳ ಹಳೆಯ ಮೂರ್ತಿಗಳು ಇರಬಹುದು ಎಂದು ಊಹಿಸುತ್ತಿದ್ದಾರೆ. ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಬೇಕು ಅಂತ ಒತ್ತಾಯಿಸಲಾಗಿದೆ. ಇದನ್ನೂ ಓದಿ: ಯತ್ನಾಳ್ ಸಕ್ಕರೆ ಕಾರ್ಖಾನೆ ಬಂದ್ – ಅನುಮತಿ ಪಡೆಯುವರೆಗೂ ಕಾರ್ಖಾನೆ ನಡೆಸಲಾಗದು ಎಂದ ಕೋರ್ಟ್

    ಸಾಮಾನ್ಯವಾಗಿ ಮುಕ್ಕಾದ ದೇವರ ಮೂರ್ತಿಗಳು, ದೇವಾಲಯಗಳಲ್ಲಿನ ಹಳೆ ಮೂರ್ತಿಗಳನ್ನು ಬದಲಾಯಿಸಿದಾಗ ಮೂಲ ಮೂರ್ತಿಗಳನ್ನ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಅಂತಹ ಮೂರ್ತಿಗಳನ್ನು ಪೂಜೆಗೆ ಬಳಸುವುದಿಲ್ಲ. ಅದೇ ರೀತಿ ಈ ಮೂರ್ತಿಗಳನ್ನೂ ನೂರಾರು ವರ್ಷಗಳ ಹಿಂದೆ ಕೃಷ್ಣಾ ನದಿಯಲ್ಲಿ ವಿಸರ್ಜಿಸಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಸುತ್ತಮುತ್ತ ಎಲ್ಲೂ ವಿಷ್ಣು ದೇವಾಲಯವಾಗಲಿ ಅಥವಾ ವೆಂಕಟೇಶ್ವರ ಸ್ವಾಮಿ ದೇವಾಲಯಗಳಿಲ್ಲ. ಹೀಗಾಗಿ ಈ ಮೂರ್ತಿಗಳು ಇಲ್ಲಿಗೆ ಹೇಗೆ ಬಂದವು. ಇಲ್ಲೇ ದೇವಾಲಯವೇನಾದರೂ ಇತ್ತಾ ಎನ್ನುವ ಕುತೂಹಲ ಮೂಡಿಸಿದೆ. ಇದನ್ನೂ ಓದಿ:ಪೇಟಿಎಂ ವ್ಯಾಲೆಟ್‌ ಸೇವೆ ಖರೀದಿ ಮತುಕತೆ ನಡೆದಿಲ್ಲ – ಜಿಯೋ ಫೈನಾನ್ಸ್‌ ಅಧಿಕೃತ ಹೇಳಿಕೆ

    ಮೂರುವರೆ ಅಡಿಯ ಪುರಾತನ ಶಿಲ್ಪಕಲಾ ಶೈಲಿಯ ವಿಷ್ಣು ಮೂರ್ತಿಯನ್ನು ಸದ್ಯ ನದಿ ಪಕ್ಕದ ಕನಕಾದುರ್ಗ ದೇವಾಲಯ ಕಟ್ಟೆ ಮೇಲೆ ಇಡಲಾಗಿದ್ದು, ಪೂಜೆ ಸಲ್ಲಿಸಲಾಗುತ್ತಿದೆ. ಉಳಿದ ಎರಡು ನದಿ ದಂಡೆಯಲ್ಲೇ ಇವೆ. ಕನಕದುರ್ಗಾ ಮೂರ್ತಿಯೂ ಸಹ ಈ ಹಿಂದೆ ನದಿಯಲ್ಲಿ ಸಿಕ್ಕಿದ್ದು ಇಲ್ಲಿನ ಇನ್ನೊಂದು ವಿಶೇಷ. ಆದರೆ ನದಿಯಲ್ಲಿ ಈ ಮೂರ್ತಿಗಳು ಬಂದದ್ದಾದರೂ ಹೇಗೆ ಎನ್ನುವುದು ಸದ್ಯದ ಕುತೂಹಲ. ಪುರಾತತ್ವ ಇಲಾಖೆ ಈ ಮೂರ್ತಿಗಳನ್ನ ಪರಿಶೀಲನೆಗೆ ಒಳಪಡಿಸಿ ಸಂರಕ್ಷಿಸಬೇಕಿದೆ. ಇದನ್ನೂ ಓದಿ: ಹರಕೆ ಈಡೇರಿಸುವಂತೆ ಶಿವಲಿಂಗದ ಮೇಲೆ ಕೋರಿಕೆ ಬರೆದ ವಿದ್ಯಾರ್ಥಿ!