Tag: ಅಮ್ಮ

  • ಪತ್ನಿಯ ಕುತ್ತಿಗೆ ಕೊಯ್ದು ಕುಲದೇವತೆಗೆ ಬಲಿ ನೀಡಿದ ಗಂಡ

    ಪತ್ನಿಯ ಕುತ್ತಿಗೆ ಕೊಯ್ದು ಕುಲದೇವತೆಗೆ ಬಲಿ ನೀಡಿದ ಗಂಡ

    -ತಂದೆಯಿಂದ ಮಗನಿಗೆ ಜೀವ ಬೆದರಿಕೆ
    -ಅಪ್ಪನ ಕೃತ್ಯ ಬಿಚ್ಚಿಟ್ಟ ಮಗ

    ಭೋಪಾಲ್: ವ್ಯಕ್ತಿಯೋರ್ವ ಮೂಢನಂಬಿಕೆಯಿಂದ ಪತ್ನಿಯ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇದ ಸಿಂಗರೌಲಿಯ ಬಸೌಡಾ ಗ್ರಾಮದಲ್ಲಿ ನಡೆದಿದೆ. ಕೊಲೆಯ ಬಳಿಕ ಕುಲದೇವತೆಯ ಪ್ರಸನ್ನಗೊಳಿಸಲು ಪತ್ನಿಯ ಕುತ್ತಿಗೆ ಕೊಯ್ದುರೋದಾಗಿ ಹೇಳಿಕೊಂಡಿದ್ದಾನೆ.

    ಬ್ರಿಜೇಶ್ ಕೆವಟ್ ಪತ್ನಿ ಬಿಟ್ಟಿದೇವಿಯನ್ನ ಕೊಲೆಗೈದ ಪತಿ. ಅಪ್ಪನ ಕೃತ್ಯಕ್ಕೆ ಮಗನೇ ಪೊಲೀಸರ ಮುಂದೆ ಸಾಕ್ಷಿ ಹೇಳಿದ್ದಾನೆ. ತಂದೆ-ತಾಯಿ ಕುಲದೇವತೆಗೆ ಪೂಜೆ ಸಲ್ಲಿಸಿದ ಬಳಿಕ ನಾವೆಲ್ಲ ಮಲಗಿದೆವು. ತಡರಾತ್ರಿ ಒಳಗೆ ಅಪ್ಪ-ಅಮ್ಮ ಜಗಳ ಆಡುತ್ತಿರುವ ಧ್ವನಿ ಕೇಳಿದ್ದರಿಂದ ನನಗೆ ಎಚ್ಚರವಾಯ್ತು. ಇಬ್ಬರ ಜಗಳ ಆಡುತ್ತಾ ಜೋರು ಜೋರಾಗಿ ಮಾತಾಡುತ್ತಿದ್ದರು. ನಾನು ಅಪ್ಪನನ್ನ ತಡೆಯಲು ಹೋದಾಗ, ನೀವು ಮಧ್ಯ ಬರಬೇಡ ಅಂತಾ ನನ್ನನ್ನು ಹೊರಗೆ ಕಳಿಸಿದ್ರು.

    ಹೊರಗೆ ಬಂದ ಕೂಡಲೇ ಮನೆಯ ಬಾಗಿಲು ಹಾಕಲಾಯ್ತು. ತಂದೆ ಅಮ್ಮನನ್ನ ಕೊಂದು ಶವದ ಜೊತೆ ಹೊರ ಬಂದ್ರು. ತದನಂತರ ರುಂಡ ಮತ್ತು ಶವವನ್ನ ಹೂತರು. ನಾನು ಭಯದಿಂದ ಅಳಲು ಶುರು ಮಾಡಿದಾಗ ಕಿರುಚಾಡಬೇಡ, ಇಲ್ಲವಾದಲ್ಲಿ ನಿನ್ನನ್ನು ಕೊಂದು ಬಿಡ್ತೀನಿ ಅಂದು ಧಮ್ಕಿ ಹಾಕಿದರು.

    ಮಗುವಿನ ಅಳು ಶಬ್ಧ ಕೇಳಿ ಬಂದನೆರೆಹೊರೆಯವರು ಒಂದು ಕ್ಷಣ ಶಾಕ್ ಆಗಿದ್ದಾರೆ. ಕೂಡಲೇ ಪೊಲೀಸರಿಗೆ ಫೋನ್ ಮಾಡಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎಸ್‍ಪಿ ವೀರೇಂದ್ರ ಪ್ರತಾಪ್ ಸಿಂಗ್, ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನ ವಶಕ್ಕೆ ಪಡೆದು ಪೂಜೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

  • ಚಾಟಿಂಗ್ ಮಾಡ್ತಿದ್ದಾಗ ನಿರಂತರವಾಗಿ ಊಟಕ್ಕೆ ಕರೆದಿದ್ದಕ್ಕೆ ಅಮ್ಮನಿಗೆ ಗುಂಡು ಹಾರಿಸ್ದ

    ಚಾಟಿಂಗ್ ಮಾಡ್ತಿದ್ದಾಗ ನಿರಂತರವಾಗಿ ಊಟಕ್ಕೆ ಕರೆದಿದ್ದಕ್ಕೆ ಅಮ್ಮನಿಗೆ ಗುಂಡು ಹಾರಿಸ್ದ

    – ರಾತ್ರಿ ತಡವಾಗಿದ್ರೂ ಸ್ನೇಹಿತರೊಂದಿಗೆ ಚಾಟಿಂಗ್
    – ಕಾಡಿನಲ್ಲಿ ಆರೋಪಿ ಮಗ ಅರೆಸ್ಟ್

    ಪಾಟ್ನಾ: ಯುವಕನೊಬ್ಬ ಸ್ನೇಹಿತರೊಂದಿಗೆ ಚಾಟಿಂಗ್ ಮಾಡುತ್ತಿದ್ದಾಗ ಹಲವಾರು ಬಾರಿ ಊಟಕ್ಕೆ ಕರೆದಿದ್ದಕ್ಕೆ ಅಮ್ಮನ ಮೇಲೆ ಗುಂಡು ಹಾರಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಪಾಟ್ನಾದ ಮರಂಚಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೊಪಿಯನ್ನು ಅಂಗಾದ್ ಯಾದವ್ (20) ಎಂದು ಗುರುತಿಸಲಾಗಿದೆ. ಇದೀಗ ಆರೋಪಿಯನ್ನು ಗನ್ ಸಮೇತ ಪೊಲೀಸ್ ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಯಾದವ್ ನಿವಾಸದ ಹೊರಗೆ ತನ್ನ ಕೆಲ ಸ್ನೇಹಿತರೊಂದಿಗೆ ನಿರಂತರವಾಗಿ ಮೊಬೈಲಿನಲ್ಲಿ ಚಾಟಿಂಗ್ ಮಾಡುತ್ತಿದ್ದ. ರಾತ್ರಿ ತಡವಾಗಿದ್ದರಿಂದ ಯಾದವ್ ತಾಯಿ ಮಂಜು ದೇವಿ ಒಳಗೆ ಬಂದು ಊಟ ಮಾಡುವಂತೆ ಹಲವಾರು ಬಾರಿ ಕರೆದಿದ್ದಾರೆ. ಆದರೆ ಆರೋಪಿ ಯಾದವ್ ಪ್ರತಿ ಬಾರಿಯೂ ತಾಯಿಯ ಮಾತನ್ನು ನಿರ್ಲಕ್ಷಿಸಿದನು. ಕೊನೆಗೆ ಮಂಜು ದೇವಿ ತನ್ನ ಮಗನ ಬಳಿಗೆ ಹೋಗಿ ಮತ್ತೆ ಊಟಕ್ಕೆ ಬರುವಂತೆ ಕರೆದು ಮನೆಯೊಳಗೆ ಬರುತ್ತಿದ್ದರು.

    ಆಗ ಆರೋಪಿ ಸ್ನೇಹಿತರೊಂದಿಗೆ ಮಾತನಾಡುವಾಗ ಅಡ್ಡಿಪಡಿಸಿದ ಕಾರಣಕ್ಕಾಗಿ ಕೋಪದಿಂದ ತನ್ನ ತಾಯಿಗೆ ಗುಂಡು ಹಾರಿಸಿದ್ದಾನೆ. ತಕ್ಷಣ ಮಂಜು ದೇವಿ ಸ್ಥಳದಲ್ಲೇ ಕೆಳಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಮಂಜು ದೇವಿಯನ್ನು ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಅವರಿಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಪೊಲೀಸ್ ಅನಿಲ್ ಕುಮಾರ್ ತಿಳಿಸಿದ್ದಾರೆ.

    ಈ ಘಟನೆಗೆ ಮಂಜು ದೇವಿ ಸಹೋದರಿ ಇಂದೂ ದೇವಿ ಸಾಕ್ಷಿಯಾಗಿದ್ದು, ಈ ಕುರಿತು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಇಂದೂ ದೇವಿಯ ಹೇಳಿಕೆಯ ಆಧಾರದ ಮೇಲೆ ಅಂಗದ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ನಂತರ ಯಾದವ್‍ನನ್ನು ನಿವಾಸದ ಹಿಂದಿನ ಅರಣ್ಯದಲ್ಲಿ ಬಂಧಿಸಲಾಗಿದೆ. ಆರೋಪಿ ಬಂಧನದ ವೇಳೆ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಕೊನೆಗೆ ಪೊಲೀಸರು ಆರೋಪಿಯನ್ನು ಪಿಸ್ತೂಲ್ ಸಮೇತ ಬಂಧಿಸಿದ್ದಾರೆ.

    ಆರೋಪಿ ಯಾದವ್ ತಂದೆ ರಂಬಾಬು ಯಾದವ್ ಮತ್ತು ಅವರ ಇಬ್ಬರು ಹಿರಿಯ ಸಹೋದರರು ಪಂಜಾಬ್‍ನಲ್ಲಿ ದೈನಂದಿನ ಕೂಲಿ ಕೆಲಸ ಮಾಡುತ್ತಾರೆ. ಆರು ತಿಂಗಳ ಹಿಂದೆ 7,500 ರೂ. ಕೊಟ್ಟು ಪಿಸ್ತೂಲ್ ಖರೀದಿಸಿದ್ದೇನೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಗುರುವಾರ ಕೋವಿಡ್ -19 ಪರೀಕ್ಷೆಯ ನಂತರ ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಅನಿಲ್ ಕುಮಾರ್ ತಿಳಿಸಿದ್ದಾರೆ.

  • ನಾನು ಎಷ್ಟೇ ಹೋರಾಡಿದರು ನಿನ್ನ ಉಳಿಸಿಕೊಳ್ಳಲು ಆಗ್ಲಿಲ್ಲ, ಮಿಸ್ ಯು ಅಮ್ಮ: ಪ್ರೇಮ್

    ನಾನು ಎಷ್ಟೇ ಹೋರಾಡಿದರು ನಿನ್ನ ಉಳಿಸಿಕೊಳ್ಳಲು ಆಗ್ಲಿಲ್ಲ, ಮಿಸ್ ಯು ಅಮ್ಮ: ಪ್ರೇಮ್

    ಬೆಂಗಳೂರು: ನಾನು ಎಷ್ಟೇ ಹೋರಾಟ ನಡೆಸಿದರು ನಿನ್ನನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ನಟ, ನಿರ್ದೇಶಕ ಜೋಗಿ ಪ್ರೇಮ್ ಅಮ್ಮನ ಬಗ್ಗೆ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

    ಪ್ರೇಮ್ ಅವರ ತಾಯಿ ಭಾಗ್ಯಮ್ಮ ಕೆಲವು ತಿಂಗಳಿನಿಂದ ಲ್ಯುಕೇಮಿಯಾ ಕ್ಯಾನ್ಸರ್ ನಿಂದ (ರಕ್ತ ಕ್ಯಾನ್ಸರ್) ಬಳಲುತ್ತಿದ್ದರು. ಹೀಗಾಗಿ ಬೆಂಗಳೂರಿನ ಜಯನಗರದ ಶಾಂತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮ್ ಅವರ ತಾಯಿ ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ಕೊನೆಯುಸಿರೆಳೆದಿದ್ದರು.

    ಈಗ ಅಮ್ಮನ್ನು ಕಳೆದುಕೊಂಡ ನೋವಿನಲ್ಲಿರುವ ಪ್ರೇಮ್ ಅವರು ತಮ್ಮ ತಾಯಿಯ ಬಗ್ಗೆ ಟ್ವೀಟ್ ಮಾಡಿದ್ದು, ನಾನು ಎಷ್ಟೇ ಹೋರಾಟ ಮಾಡಿದರೂ ಕೊನೆಗೂ ನಿನ್ನನ್ನು ಉಳಿಸಿಕೊಳ್ಳಲು ಆಗಲಿಲ್ಲ. ನಿನ್ನ ಋಣ ತೀರಿಸೋಕೆ ಮತ್ತೆ ನಿನ್ನ ಹೊಟ್ಟೆಯಲಿ ಹುಟ್ಟುವುದಕ್ಕೆ ನನಗೆ ಒಂದು ಅವಕಾಶ ಮಾಡಿಕೊಂಡು, ಯಾವತ್ತು ಕಾಯುತ್ತಿರುತ್ತೇನೆ. ಮಿಸ್ ಯು ಅಮ್ಮ ಎಂದು ಬರೆದುಕೊಂಡು ತಾಯಿ ಭಾಗ್ಯಮ್ಮ ಅವರ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

    ಪ್ರೇಮ್ ಅವರು ಮಾತೃ ಹೃದಯಿಯಾಗಿದ್ದು, ಅವರ ತಾಯಿಯನ್ನು ಬಹಳ ಇಷ್ಟಪಡುತ್ತಿದ್ದರು. ಪ್ರೇಮ್ ಅವರು ಯಾವುದೇ ಸಿನಿಮಾ ಮಾಡಿದರು ಅದರಲ್ಲಿ ತಾಯಿಗೆ ಸಂಬಂಧಿಸಿದ ಒಂದು ಹಾಡು ಮತ್ತು ತಾಯಿ ಬಗ್ಗೆ ದೃಶ್ಯಗಳು ಇರುತ್ತಿತ್ತು. ಅವರ ಮೊದಲ ಸಿನಿಮಾ ಎಕ್ಸ್ ಕ್ಯೂಸ್‍ಮಿ ಯಿಂದ ಹಿಡಿದು ಇತ್ತೀಚೆಗೆ ಬಿಡುಗಡೆಯಾಗಿದ್ದ ಅವರು ನಿರ್ದೇಶನ ದಿ ವಿಲನ್ ಸಿನಿಮಾದವರೆಗೂ ಅವರ ಎಲ್ಲ ಸಿನಿಮಾದಲ್ಲಿ ತಾಯಿಯ ಬಗ್ಗೆ ವಿಶೇಷವಾದ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.

    ಅತ್ತೆ ಭಾಗ್ಯಮ್ಯ ಅವರ ನಿಧನದ ಸುದ್ದಿಯನ್ನು ರಕ್ಷಿತಾ ಪ್ರೇಮ್ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದರು. ಭಾಗ್ಯಮ್ಮ ಅವರಿಗೆ ಪ್ರೇಮ್ ಮತ್ತು ಅರುಣ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಭಾಗ್ಯಮ್ಮ ಅವರಿಗೆ ಕೊರೊನಾ ಪರೀಕ್ಷೆ ಮಾಡಿಸಿದ್ದು, ವರದಿ ನೆಗೆಟಿವ್ ಬಂದಿತ್ತು. ಮಂಡ್ಯದ ಬೆಸಗರಹಳ್ಳಿ ಫಾರ್ಮ್ ಹೌಸ್‍ನಲ್ಲಿ ಅಂತ್ಯಕ್ರಿಯೆ ನಡೆಯಿತು.

  • ಆರ್ಥಿಕ ಸಂಕಷ್ಟ – ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡ ಅಮ್ಮ, ಮಗ

    ಆರ್ಥಿಕ ಸಂಕಷ್ಟ – ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡ ಅಮ್ಮ, ಮಗ

    ಚಂಡೀಗಢ: ಲಾಕ್‍ಡೌನ್ ವೇಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡು ಅಮ್ಮ ಮತ್ತು ಮಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್‍ನ ಲುಧಿಯಾನದಲ್ಲಿ ನಡೆದಿದೆ.

    ಮೃತರನ್ನು ಕೃಷ್ಣದೇವಿ (65) ಮತ್ತು ಆಕೆಯ ಮಗ ಮನೀಶ್ ವರ್ಮಾ (35) ಎಂದು ಗುರುತಿಸಲಾಗಿದೆ. ಇಬ್ಬರೂ ದಾಬಾದ ಸದ್ಗುರ ನಗರದ ತಮ್ಮ ನಿವಾಸದಲ್ಲಿ ಒಂದೇ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಮೃತ ಮನೀಶ್ ಅವರ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು.

    ಮನೀಶ್‍ಗೆ ಮನೆ ಬಾಡಿಗೆ ಕೊಟ್ಟ ಮಾಲೀಕರು ಕಿಟಕಿ ತೆಗೆದು ನೋಡಿದಾಗ ವಿಚಾರ ಬೆಳಕಿಗೆ ಬಂದಿದೆ. ಮನೆಯಿಂದ ಯಾರೂ ಹೊರಗೆ ಬರುತ್ತಿಲ್ಲ. ಬಾಗಿಲೂ ತೆರೆದಿಲ್ಲ ಎಂಬ ಕಾರಣಕ್ಕೆ ಅನುಮಾನಗೊಂಡ ಮನೆಯ ಮಾಲೀಕ ಮನೆಯ ಕಿಟಕಿಯನ್ನು ತೆರೆದು ನೋಡಿದ್ದಾರೆ. ಈ ವೇಳೆ ಅಮ್ಮ ಮತ್ತು ಮಗ ಇಬ್ಬರು ಒಂದೇ ಫ್ಯಾನಿಗೆ ನೇಣು ಹಾಕಿಕೊಂಡಿರುವುದು ಕಂಡಿದೆ. ಆಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಪವಿತರ್ ಸಿಂಗ್, ಆತ್ಯಹತ್ಯೆ ಮಾಡಿಕೊಂಡ ಜಾಗದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಮೃತ ಅಮ್ಮ-ಮಗ ಕಳೆದ ಎರಡು ವರ್ಷಗಳಿಂದ ಇದೇ ಮನೆಯಲ್ಲಿ ಬಾಡಿಗೆಗೆ ಇದ್ದರು ಎಂದು ತಿಳಿದು ಬಂದಿದೆ. ಮನೀಶ್ ಅವರ ಪತಿ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ನಂತರ ಅವರು ತಮ್ಮ ಪೋಷಕರ ಮನೆಗೆ ಹೋಗಿ ಅಲ್ಲೇ ತೀರಿಹೋಗಿದ್ದರು ಎಂದು ಮಾಹಿತಿ ನೀಡಿದ್ದಾರೆ.

    ಲಾಕ್‍ಡೌನ್ ವೇಳೆ ಕೆಲಸವನ್ನು ಕಳೆದುಕೊಂಡ ಮನೀಶ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಜೊತೆಗೆ ಇತ್ತೀಚೆಗೆ ಹೆಂಡತಿ ಕೂಡ ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದರಿಂದ ಮನೀಶ್ ಖಿನ್ನತೆಗೆ ಒಳಾಗಿದ್ದ ಎನ್ನಲಾಗಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

  • ಕೊನೆ ಇನ್‍ಸ್ಟಾ ಪೋಸ್ಟ್ ನಲ್ಲಿ ಅಮ್ಮನ ಬಗ್ಗೆ ಭಾವುಕ ಮಾತು

    ಕೊನೆ ಇನ್‍ಸ್ಟಾ ಪೋಸ್ಟ್ ನಲ್ಲಿ ಅಮ್ಮನ ಬಗ್ಗೆ ಭಾವುಕ ಮಾತು

    -ಖಿನ್ನತೆಗೆ ಜಾರಿದ್ರಾ ಸುಶಾಂತ್?
    -ಒಂಟಿತನದ ಸುಳಿವು ನೀಡಿತ್ತು ಕೊನೆ ಪೋಸ್ಟ್
    -ಕಣ್ಣೀರು ತರಿಸುತ್ತೆ ಅಮ್ಮ-ಮಗನ ಕಪ್ಪು ಬಿಳುಪು ಫೋಟೋ

    ಮುಂಬೈ: ಇರ್ಫಾನ್ ಖಾನ್, ರಿಷಿ ಕಪೂರ್, ವಾಜೀದ್ ಖಾನ್ ಬಳಿಕ ಬಾಲಿವುಡ್ ಉದ್ಯಮದ ಮತ್ತೊಂದು ಕೊಂಡಿ ಕಳಚಿದೆ. ಹಂತ ಹಂತವಾಗಿ ಸ್ಟಾರ್ ಪಟ್ಟಕ್ಕೇರಿದ ಸುಶಾಂತ್ ಸಿಂಗ್ ರಜಪೂರ್ ವಿಧಿಯ ಕ್ರೂರ ಆಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಡೀ ಬಾಲಿವುಡ್‍ನಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಗಣ್ಯರು ನಟನ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ. ಮೃತ ಸುಶಾಂತ್ ಕೊನೆಯ ಇನ್‍ಸ್ಟಾಗ್ರಾಂ ಪೋಸ್ಟ್ ಮತ್ತಷ್ಟು ಕಣ್ಣೀರು ತರಿಸುವಂತಿದೆ.

    ತಾಯಿ ಫೋಟೋ ಶೇರ್ ಮಾಡಿಕೊಂಡಿರುವ ಸುಶಾಂತ್, ಹಳೆಯ ನೆನಪುಗಳಿಂದ ಕಣ್ಣೀರು ಆವಿಯಾಗಿ ಹೋಗಿದೆ. ನಿನ್ನ ನಗುವಿನಿಂದ ಕೊನೆಯಾದ ಕನಸು ಮೂಡುತ್ತಿದೆ. ಎರಡಲ್ಲಿ ಯಾವುದನ್ನು ಆಯ್ಕೆ ಮಾಡಲಿ ಅಮ್ಮ, ಇವುಗಳಲ್ಲಿ ಯಾವುದನ್ನ ಆಯ್ಕೆ ಮಾಡಿಕೊಳ್ಳಲಿ ಎಂದು ಬರೆದುಕೊಂಡಿದ್ದರು. ತಾಯಿ ಮತ್ತು ತಮ್ಮ ಕಪ್ಪು-ಬಿಳುಪು ಫೋಟೋ ಪೋಸ್ಟ್ ಮಾಡಿದ್ದರು.

    ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸಂಪೂರ್ಣವಾಗಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸುಶಾಂತ್ ಮುಂಬೈನ ಬಾಂದ್ರಾ ನಿವಾಸದಲ್ಲಿ ಒಬ್ಬರೇ ವಾಸವಾಗಿದ್ದರು. ಇಂದು ಮನೆಗೆ ಕೆಲಸದವರು ಬಂದಾಗ ಸಾವಿನ ವಿಷಯ ಬೆಳಕಿಗೆ ಬಂದಿದೆ. ಲಾಕ್‍ಡೌನ್ ಹಿನ್ನೆಲೆ ಒಂಟಿಯಾಗಿದ್ದ ಸುಶಾಂತ್ ಖಿನ್ನತೆಗೆ ಜಾರಿದ್ದರು ಎಂದು ಹೇಳಲಾಗುತ್ತಿದೆ. ಪೊಲೀಸರು ಸುಶಾಂತ್ ಪಾರ್ಥಿವ ಶರೀರವವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಪೊಲೀಸರು ಸುಶಾಂತ್ ಮನೆಯಲ್ಲಿ ಕೆಲಸ ಮಾಡುತ್ತಿದ್ದವರಿಂದ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಹಾಗೆ ನೆರೆಹೊರೆಯವರಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • 13ರ ಬಾಲಕಿಯನ್ನ ಅತ್ಯಾಚಾರಗೈದ 35 ವರ್ಷದ ಕಾಮುಕ ಅಂಕಲ್

    13ರ ಬಾಲಕಿಯನ್ನ ಅತ್ಯಾಚಾರಗೈದ 35 ವರ್ಷದ ಕಾಮುಕ ಅಂಕಲ್

    -ಮದ್ವೆಯಾಗೋದಾಗಿ ನಂಬಿಸಿ ನಿರಂತರ ಅತ್ಯಾಚಾರ
    -ಆಟ ಆಡೋ ವಯಸ್ಸಿನಲ್ಲಿ ತಾಯಿಯಾದ ಬಾಲೆ

    ವಿಜಯಪುರ: 13 ವರ್ಷದ ಬಾಲಕಿ ಮಗುವಿನ ಜನ್ಮ ನೀಡಿರುವ ಘಟನೆ ಜಿಲ್ಲೆಯ ಸಿಂದಗಿಯಲ್ಲಿ ನಡೆದಿದೆ. ಮೇ 30ರಂದು ಬಾಲಕಿ ಸಿಂದಗಿ ತಾಲುಕೂ ಆಸ್ಪತ್ರೆಯಲ್ಲಿ ಮಗುವಿನ ಜನ್ಮ ನೀಡಿದ ಬಳಿಕ ಅಪ್ರಾಪ್ತೆ ತಾಯಿ ದೂರು ದಾಖಲಿಸಿದ್ದಾರೆ.

    ಬಾಲಕಿಯ ತಾಯಿ ಬೆಂಗಳೂರಿನಲ್ಲಿ ತನ್ನ ಮೂರು ಮಕ್ಕಳೊಂದಿಗೆ ವಾಸವಾಗಿದ್ದರು. ತಾಯಿ ಮನೆಯಲ್ಲಿ ಇಲ್ಲದ ವೇಳೆ ಮನೆಗೆ ಎಂಟ್ರಿ ಕೊಡ್ತಿದ್ದ ಕಾಮುಕ ಅಂಕಲ್ ಬಾಲಕಿಯ ಜೊತೆ ಸಲುಗೆ ಬೆಳೆಸಿಕೊಂಡಿದ್ದಾನೆ. ಆರೋಪಿ ಸಹ ಸಿಂದಗಿ ಮೂಲದವನಾಗಿದ್ದರಿಂದ ಬಾಲಕಿ ಆತನೊಂದಿಗೆ ಒಡನಾಟ ಹೊಂದಿದ್ದಾಳೆ. ಮದುವೆಯಾಗೋದಾಗಿ ನಂಬಿಸಿ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಪ್ರಾಪ್ತೆ ತಾಯಿ ಮಕ್ಕಳೊಂದಿಗೆ ಸ್ವಗ್ರಾಮಕ್ಕೆ ಆಗಮಿಸಿದ್ದಳು. ಮೇ 30ರಂದು ಬಾಲಕಿಗೆ ಮಗುವಿಗೆ ಜನ್ಮ ನೀಡಿದ್ದಾಳೆ. ಪೊಲೀಸರು ಪೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಾಯಿ ಶವ ಸ್ವಗ್ರಾಮಕ್ಕೆ ತರಲು ನಿರಾಕರಣೆ-ಅಧಿಕಾರಿಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಗ

    ತಾಯಿ ಶವ ಸ್ವಗ್ರಾಮಕ್ಕೆ ತರಲು ನಿರಾಕರಣೆ-ಅಧಿಕಾರಿಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಗ

    -ಮಗನಿಗೆ ವಿನಾಯ್ತಿ ಪಾಸ್ ಸಹ ನೀಡದ ಅಧಿಕಾರಿಗಳು

    ಯಾದಗಿರಿ: ತಾಯಿ ಶವ ಸ್ವಗ್ರಾಮಕ್ಕೆ ತರಲು ಅನುಮತಿ ಸಿಗದಕ್ಕೆ ಪುತ್ರನೋರ್ವ ಯಾದಗಿರಿ ಅಪರ ಜಿಲ್ಲಾಧಿಕಾರಿ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.

    ಜಿಲ್ಲೆಯ ಬಾಡಿಹಾಳ ಗ್ರಾಮದ ನಿವಾಸಿಯಾಗಿದ್ದ ರುದ್ರಮ್ಮ ಕೆಲವು ದಿನಗಳ ಹಿಂದೆ ತವರೂರಾದ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಾಡಂಗಿ ಗ್ರಾಮಕ್ಕೆ ತೆರಳಿದ್ದರು. ಕೊರೊನಾ ತಡೆಗಾಗಿ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದ ರುದ್ರಮ್ಮ ತವರು ಮನೆಯಲ್ಲಿಯೇ ಉಳಿದುಕೊಂಡಿದ್ದರು. ಆದ್ರೆ ಇಂದು ರುದ್ರಮ್ಮ ಅಪಘಾತದಲ್ಲಿ ಸಾವನ್ನಪ್ಪಿದ್ದರು.

    ಸಾವಿನ ವಿಷಯ ತಿಳಿದ ರುದ್ರಮ್ಮ ಅವರ ವಿಕಲಚೇತನ ಮಗ ಮಲ್ಲಿಕಾರ್ಜುನ್ ಅಮ್ಮನ ಮೃತದೇಹವನ್ನು ಬಾಡಿಹಾಳ ಗ್ರಾಮಕ್ಕೆ ತರಲು ನಿರ್ಧರಿಸಿದ್ದರು. ಆದ್ರೆ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಶವ ತರಲು ಅನುಮತಿ ನೀಡಿಲ್ಲ. ಅನುಮತಿ ನಿಡುವಂತೆ ಮಲ್ಲಿಕಾರ್ಜುನ್ ಅಧಿಕಾರಿಗಳ ಮುಂದೆ ಅಳುತ್ತಿರುವ ದೃಶ್ಯ ಕಲ್ಲು ಹೃದಯದಲ್ಲಿ ಕಣ್ಣೀರು ಬರುವಂತೆ ಮಾಡಿತ್ತು. ಇದನ್ನೂ ಓದಿ: ಲಾಕ್‍ಡೌನ್‍ನಿಂದ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ ಮಗ

    ಅಧಿಕಾರಿಗಳು ಮಲ್ಲಿಕಾರ್ಜುನ್ ಗೂ ತೆರಳಲು ಯಾವುದೇ ವಿನಾಯ್ತಿ ಪಾಸ್ ನೀಡಿಲ್ಲ. ಕಚೇರಿಯಿಂದ ಅಳುತ್ತಾ ಹೊರ ಬಂದ ಮಲ್ಲಿಕಾರ್ಜುನ್ ಖಾಸಗಿ ವಾಹನದ ವ್ಯವಸ್ಥೆ ಮಾಡಿಕೊಂಡು ಕೊನೆಯ ಬಾರಿ ಅಮ್ಮನನ್ನು ಕಾಣುವದಕ್ಕಾಗಿ ಹೊರಟಿದ್ದಾರೆ. ಇನ್ನು ಬಳ್ಳಾರಿಯಲ್ಲಿ ಮಗನ ಬರುವಿಕೆಗಾಗಿ ಗ್ರಾಮಸ್ಥರು ಕಾಯುತ್ತಿದ್ದು, ನಾಳೆ ರುದ್ರಮ್ಮನವರ ಅಂತ್ಯಕ್ರಿಯೆ ನಡೆಯಲಿದೆ.

  • ಲಾಕ್‍ಡೌನ್‍ನಿಂದ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ ಮಗ

    ಲಾಕ್‍ಡೌನ್‍ನಿಂದ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ ಮಗ

    -ಅಮ್ಮನ ಮುಖ ನೋಡಲಿಲ್ಲವೆಂದು ಪುತ್ರನ ಕಣ್ಣೀರು

    ಹುಬ್ಬಳ್ಳಿ: ಲಾಕ್‍ಡೌನ್ ನಿಂದಾಗಿ ಪುತ್ರನೋರ್ವ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಆಗದೇ ಕಣ್ಣೀರು ಹಾಕುತ್ತಿದ್ದಾರೆ.

    ಹುಬ್ಬಳ್ಳಿಯ ಮಂಜುನಾಥ ನಗರದ ನಿವಾಸಿ ಸಮೀರ್ ಪುರೋಹಿತ್ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದೇ ಕಣ್ಣೀರಿಡುತ್ತಿದ್ದಾರೆ. ಸಮೀರ್ ಚೆನ್ನೈನ ನಿಸ್ಸಾನ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಲಾಕ್‍ಡೌನ್ ಪರಿಣಾಮ ಚೆನ್ನೈನಲ್ಲಿಯೇ ಉಳಿದುಕೊಂಡಿದ್ದರು. ಇತ್ತ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸಮೀರ್ ತಾಯಿಯವರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಮ್ಮನ ಅನಾರೋಗ್ಯದ ವಿಷಯ ತಿಳಿದ ಸಮೀರ್ ಹುಬ್ಬಳ್ಳಿಗೆ ಬರಲು ಪ್ರಯತ್ನಿಸಿದ್ದರು.

    ತಮಗೆ ವಿನಾಯ್ತಿಯ ಪಾಸ್ ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ, ಧಾರವಾಡದ ಪೊಲೀಸ್ ಆಯುಕ್ತರಿಗೆ ದಾಖಲೆ ಸಹಿತ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದರು. ಸೋಮವಾರ ಸಮೀರ್ ಅವರ ತಾಯಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಮಗನ ಆಗಮನ ತಡವಾದ ಹಿನ್ನೆಲೆಯಲ್ಲಿ ಸಂಬಂಧಿಕರು ಅಂತ್ಯಕ್ರಿಯೆ ನಡೆಸಿದ್ದರು.

    ಟ್ವೀಟ್ ನಿಂದಾಗಿ ಪಾಸ್ ಲಭ್ಯವಾದ್ರೂ ಚೆನ್ನೈನಿಂದ ಹುಬ್ಬಳ್ಳಿಗೆ ಬರುವಷ್ಟರಲ್ಲಿ ಅಮ್ಮನ ಅಂತ್ಯಕ್ರಿಯೆ ನಡೆಸಲಾಗಿತ್ತು. ಪ್ರಯಾಣದ ವಿನಾಯ್ತಿ ಪಾಸ್ ತಡವಾಗಿ ಲಭ್ಯವಾದ ಹಿನ್ನೆಲೆಯಲ್ಲಿ ಸಮೀರ್ ಅವರಿಗೆ ಕೊನೆಯ ಬಾರಿ ಅಮ್ಮನ ಮುಖ ನೋಡಲು ಆಗಲಿಲ್ಲ.

     

  • ವೇದಿಕೆಯಲ್ಲೇ ‘ರಾಧಾ ಕಲ್ಯಾಣ’ ಖ್ಯಾತಿಯ ರಾಧಾ ಕಣ್ಣೀರು

    ವೇದಿಕೆಯಲ್ಲೇ ‘ರಾಧಾ ಕಲ್ಯಾಣ’ ಖ್ಯಾತಿಯ ರಾಧಾ ಕಣ್ಣೀರು

    ಬೆಂಗಳೂರು: ಇತ್ತೀಚೆಗಷ್ಟೆ ಕಿರುತೆರೆ ನಟಿ ರಾಧಿಕಾ ರಾವ್ ತಮ್ಮ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ರಾಧಿಕಾ ರಾವ್ ತಮ್ಮ ತಾಯಿಯನ್ನು ನೆನಪಿಸಿಕೊಂಡು ವೇದಿಕೆಯ ಮೇಲೆ ಕಣ್ಣೀರು ಹಾಕಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಶೋನಲ್ಲಿ ರಾಧಿಕಾ ರಾವ್ ಭಾಗವಹಿಸಿದ್ದಾರೆ. ಈ ಶೋನಲ್ಲಿ ಕುಟುಂಬದ ಬಗ್ಗೆ ಮಾತನಾಡುತ್ತಾ, “ನಾನು ಇಂಡಸ್ಟ್ರೀಗೆ ಬಂದಾಗಿನಿಂದ ತಿಂಗಳಿಗೆ ಎರಡು ಬಾರಿ ಅಮ್ಮನನ್ನು ಭೇಟಿ ಮಾಡುಲು ಹೋಗುತ್ತಿದ್ದೆ. ನಾನು ಮೂಲತಃ ಮಂಗಳೂರು, ಆದರೆ ನಾನು ಬೆಂಗಳೂರಿನಲ್ಲಿದ್ದೇನೆ. ಅಮ್ಮ ಮಂಗಳೂರಿನಲ್ಲಿ ಇದ್ದಾರೆ. ಅಮ್ಮನ ಫೋನಿನಿಂದ ನನ್ನ ಪ್ರತಿದಿನ ಶುರುವಾಗುತ್ತಿತ್ತು” ಎಂದು ವೇದಿಕೆ ಮೇಲೆಯೇ ಕಣ್ಣೀರು ಹಾಕಿದರು.

    “ಈಗ ನನಗೆ ಮದುವೆಯಾಗಿದೆ. ಹೀಗಾಗಿ ಪತಿಯ ಕುಟುಂಬವನ್ನು ನೋಡಿಕೊಳ್ಳಬೇಕು. ಅಮ್ಮನನ್ನು ನೋಡಿಕೊಳ್ಳಬೇಕು. ಎರಡು ಕುಟುಂಬವನ್ನು ಹೇಗೇ ನೋಡಿಕೊಳ್ಳುತ್ತೇನೆ ಎಂದು ನನಗೆ ಗೊತ್ತಿಲ್ಲ. ಆದರೆ ನಾನು ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ” ಎಂದು ಗಳಗಳನೇ ರಾಧಿಕಾ ಅತ್ತಿದ್ದಾರೆ.

    ಮೂಲತಃ ಮಂಗಳೂರಿನವರಾಗಿರುವ ರಾಧಿಕಾ ರಾವ್ ಮಾರ್ಚ್ 11ರಂದು ಬುಧವಾರ ತಮ್ಮ ಗೆಳೆಯ ಆಕರ್ಷ್ ಭಟ್ ಜೊತೆ ಸಪ್ತಪದಿ ತುಳಿದಿದ್ದಾರೆ. ಈ ದಂಪತಿಯ ಮದುವೆ ಮೂಡಬಿದಿರೆಯಲ್ಲಿ ಅದ್ಧೂರಿಯಾಗಿ ನಡೆದಿತ್ತು. ಎಂಜಿನಿಯರಿಂಗ್ ಓದಿರುವ ವರ ಆಕರ್ಷ್ ಭಟ್ ಇಂಟರ್ ನ್ಯಾಷನಲ್ ಮ್ಯಾಜಿಷಿಯನ್ ಮತ್ತು ಮೈಂಡ್ ರೀಡರ್ ಆಗಿದ್ದಾರೆ. ಇವರು ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

    ರಾಧಿಕಾ ರಾವ್ ಈ ಹಿಂದೆ ‘ಮಂಗಳೂರು ಹುಡ್ಗಿ, ಹುಬ್ಬಳ್ಳಿ ಹುಡ್ಗ’ ಸೀರಿಯಲ್‍ನಲ್ಲಿ ಅಭಿನಯಿಸುತ್ತಿದ್ದರು. ಈ ಸೀರಿಯಲ್‍ನಲ್ಲಿ ಅಮೂಲ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಿಂದ ಈಕೆ ಅಮುಲ್ಯಾ ಎಂದೇ ಪ್ರೇಕ್ಷಕರಿಗೆ ಚಿರಪರಿಚಿತಾಗಿದ್ದರು. ಈಗ ‘ರಾಧಾ ಕಲ್ಯಾಣ’ ಧಾರವಾಹಿಯಲ್ಲಿ ರಾಧಾ ಪಾತ್ರಧಾರಿಯಾಗಿ ಜನರ ಮನ ಸೆಳೆದಿದ್ದಾರೆ.

     

  • ಅಮ್ಮ ನನಗಿಂತ ತುಂಬಾ ಫೇಮಸ್ ಆಗಿದ್ದಾರೆ: ಶೈನ್

    ಅಮ್ಮ ನನಗಿಂತ ತುಂಬಾ ಫೇಮಸ್ ಆಗಿದ್ದಾರೆ: ಶೈನ್

    ಬೆಂಗಳೂರು: ನನಗಿಂತ ನಮ್ಮ ಅಮ್ಮ ತುಂಬಾ ಫೇಮಸ್ ಆಗಿದ್ದಾರೆ ಎಂದು ‘ಬಿಗ್‍ಬಾಸ್ ಸೀಸನ್ 7’ ರ ವಿನ್ನರ್ ಶೈನ್ ಶೆಟ್ಟಿ ಹೇಳಿದ್ದಾರೆ.

    ಮೊದಲಿಗೆ ಸಂದರ್ಶನದಲ್ಲಿ ಮಾತನಾಡುವಾಗ, ಈ ಕ್ಷಣ ನಾನು ಖುಷಿಯಲ್ಲಿ ತೇಲಾಡುತ್ತಿದ್ದೇನೆ. ನನ್ನ ಇಷ್ಟು ವರ್ಷ ಶ್ರಮಕ್ಕೆ ಹಾಗೂ ಪ್ರಯತ್ನಕ್ಕೆ ಫಲ ಸಿಕ್ಕಿದೆ. ದೇವರು ಕೊಡಬೇಕಾದರೆ ಎಲ್ಲವನ್ನು ಒಂದೇ ಬಾರಿ ಕೊಡುತ್ತಾರೆ ಎನ್ನುವಂತ ಫೀಲಿಂಗ್‍ನಲ್ಲಿ ನಾನಿದ್ದೇನೆ ಎಂದು ಗೆಲುವಿನ ಅನುಭವವನ್ನು ಶೈನ್ ಹಂಚಿಕೊಂಡಿದ್ದಾರೆ.

    ಬಳಿಕ ಅಮ್ಮನ ಬಗ್ಗೆ ಮಾತನಾಡಿದ ಶೈನ್, ನಾನು ಬಿಗ್‍ಬಾಸ್ ಮನೆಯೊಳಗೆ ಇದ್ದಾಗ ಮಾಧ್ಯಮದವರು ನಮ್ಮ ಅಮ್ಮನನ್ನು ಸಂದರ್ಶನ ಮಾಡಿದ್ದಾರೆ. ಅಲ್ಲದೆ ಏನೋ ಉದ್ಘಾಟನೆ ಮಾಡಲು ಹೋಗಿದ್ದರಂತೆ. ನಾನು ಬಿಗ್‍ಬಾಸ್ ಮನೆಯಿಂದ ಹೊರಗಡೆ ಬಂದ ಮೇಲೆ ನನಗೆ ಗೊತ್ತಾಗಿದೆ ಎಂದರು.

    ನನಗಿಂತ ನಮ್ಮ ಅಮ್ಮ ತುಂಬಾ ಫೇಮಸ್ ಆಗಿಬಿಟ್ಟಿದ್ದಾರೆ. ಇದೇ ಫೇಮ್ ಮುಂಚಿತವಾಗಿ ಸಿಕ್ಕಿದಿದ್ದರೆ ನನ್ನ ಪೇಜ್‍ಗೆ ತುಂಬಾ ಫಾಲೋವರ್ಸ್ ಇರುತ್ತಿದ್ದರು. ನಿಜಕ್ಕೂ ಅಮ್ಮ ತುಂಬಾ ಸಂತೋಷದಿಂದ ಇದ್ದಾರೆ. ನಾನು ಹೊರಗಡೆ ಬಂದ ತಕ್ಷಣ ಅಮ್ಮ ತಬ್ಬಿಕೊಂಡರು. ಬೇರೆ ಏನು ಮಾತನಾಡಿಲ್ಲ ಎಂದರು.

    ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ತುಂಬು ಹೃದಯದ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಇಷ್ಟು ವರ್ಷದ ಪ್ರಯತ್ನಕ್ಕೆ, ಇಷ್ಟು ವರ್ಷದ ಛಲ ಇಟ್ಟುಕೊಂಡು ಮುಂದೆ ಬಂದಿದ್ದಕ್ಕೆ ಒಂದು ಸಾರ್ಥಕತೆಯನ್ನು ನೀವು ವೋಟ್ ಮಾಡುವ ಮೂಲಕ ನನಗೆ ನೀಡಿದ್ದೀರಿ. ದೇವರು ತುಂಬಾನೇ ಕಷ್ಟ, ನೋವು ಕೊಡುತ್ತಾನಂತೆ. ಆ ಕಷ್ಟಗಳನ್ನು ತಡೆದುಕೊಂಡು ಮುಂದೆ ಹೋದರೆ ನಮಗೆ ಗೆಲುವು ಸಿಗುತ್ತೆ ಎಂದು ಹೇಳುತ್ತಾರೆ. ಆ ಗೆಲುವು ನನಗೆ ಅಭಿಮಾನಿಗಳ ವೋಟ್‍ಗಳಿಂದ ಸಿಕ್ಕಿದೆ. ನನಗೆ ವೋಟ್ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಶೈನ್ ತಿಳಿಸಿದ್ದಾರೆ.