Tag: ಅಮ್ಮ

  • ನನಗೆ ಮನೆಯಿಂದ ಪ್ರೆಷರ್ ಹಾಕ್ತಿದ್ದಾರೆ : ವೈಷ್ಣವಿ ಬಳಿ ಸತ್ಯ ಬಾಯ್ಬಿಟ್ಟ ಶುಭಾ ಪೂಂಜಾ

    ನನಗೆ ಮನೆಯಿಂದ ಪ್ರೆಷರ್ ಹಾಕ್ತಿದ್ದಾರೆ : ವೈಷ್ಣವಿ ಬಳಿ ಸತ್ಯ ಬಾಯ್ಬಿಟ್ಟ ಶುಭಾ ಪೂಂಜಾ

    ಬೆಂಗಳೂರು: ಬಿಗ್‍ಬಾಸ್ ಕಾರ್ಯಕ್ರಮದ ಹಲವು ಟಾಸ್ಕ್‌ಗಳಲ್ಲಿ ಕೆಲವು ಸ್ಪರ್ಧಿಗಳು ಗೆದ್ದಿದ್ದಾರೆ, ಮತ್ತೆ ಕೆಲವರು ಸೋತಿದ್ದಾರೆ. ಆದ್ರೆ ಎಲ್ಲರೂ ಒಂದಲ್ಲಾ ಒಂದು ಟಾಸ್ಕ್‌ನಲ್ಲಿ ಗೆದ್ದಿದ್ದಾರೆ. ಆದರೆ ಶುಭಾ ಪೂಂಜಾರವರು ಟಾಸ್ಕ್‌ಗಳಲ್ಲಿ ಭಾಗವಹಿಸಿದ್ದರು. ಒಂದು ಟಾಸ್ಕ್‌ಗಳಲ್ಲಿ ಕೂಡ ಇಲ್ಲಿಯವರೆಗೂ ಗೆದ್ದಿಲ್ಲ. ಹೀಗಾಗಿ ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಒಂದು ಟಾಸ್ಕ್‌ನಲ್ಲಿ ಆದರೂ ಗೆದ್ದು ಬರುವಂತೆ ಮನೆಯವರು ಪ್ರೆಷರ್ ಹಾಕುತ್ತಿದ್ದಾರೆ ಎಂದು ಶುಭಾ ಪೂಂಜಾರವರು ವೈಷ್ಣವಿ ಬಳಿ ಹೇಳಿಕೊಂಡಿದ್ದಾರೆ.

    ಬುಧವಾರ ದೊಡ್ಮನೆಯ ಲಿವಿಂಗ್ ಏರಿಯಾದಲ್ಲಿ ಶುಭಾಪೂಂಜಾ ಹಾಗೂ ವೈಷ್ಣವಿ ಕುಳಿತುಕೊಂಡಿರುತ್ತಾರೆ. ಈ ವೇಳೆ ನಮ್ಮ ಅಮ್ಮ, ಸುಮಂತ್, ಅಪ್ಪ ಎಲ್ಲರೂ ನನಗೆ ಬೈದಿದ್ದಾರೆ. ಈ ಬಾರಿ ಒಂದು ಟಾಸ್ಕ್ ಆದರೂ ಗೆದ್ದುಕೊಂಡು ಬಾ ಎಂದು ತುಂಬಾ ಪ್ರೆಷರ್ ಹಾಕಿದ್ದಾರೆ. ಆದರೆ ನನಗೆ ಒಂದು ಗೆಲ್ಲುವುದಕ್ಕೆ ಆಗುತ್ತಿಲ್ಲ. ಯಾವತ್ತು ಪ್ರೆಷರ್ ಹಾಕಬಾರದು ಎಂದು ಶುಭಾ ಹೇಳುತ್ತಾರೆ. ಆಗ ವೈಷ್ಣವಿ ಪ್ರೆಷರ್ ಇಲ್ಲದೆಯೇ ಲಾಸ್ಟ್ ಇನ್ನಿಂಗ್ಸ್ ಎಷ್ಟು ಚೆನ್ನಾಗಿ ಆಡುತ್ತಿದ್ರಿ. ಎಷ್ಟು ಟಾಸ್ಕ್ ಗೆದ್ರಿ ಎಂದು ರೇಗಿಸುತ್ತಾರೆ.

    ಇದಕ್ಕೆ ಶುಭಾ, ಒಂದು ಇಲ್ಲ. ಆದರೆ ಅದೇ ಬೆಟರ್ ಆಗಿತ್ತು. ಆದರೆ ಈಗ ನನಗೆ ಪ್ರೆಷರ್ ಹಾಕಿದ್ದಾರೆ. ಒಂದು ಸಾರಿ ಅಥವಾ ಎರಡು ಸಾರಿ ಹೇಳಿ ಬಿಟ್ಟು ಬಿಡಬೇಕು. ಆದರೆ ನಾನು ಬಿಗ್‍ಬಾಸ್ ಮನೆಗೆ ವಾಪಸ್ ಹೋಗುತ್ತಿದ್ದೇನೆ ಎಂದಾಗ ದಿನ ಪ್ರೆಷರ್ ಹಾಕುತ್ತಿದ್ದರು. ಟಾಸ್ಕ್ ಚೆನ್ನಾಗಿ ಆಡು, ಯಾವುದಾದರೂ ಒಂದು ಗೆಲ್ಲು, ಯಪ್ಪಾ ನನಗೆ ಎಷ್ಟು ಮೆಂಟಲಿ ಪ್ರೆಷರ್ ಎನ್ನುತ್ತಾರೆ.

    ಈ ವೇಳೆ ವೈಷ್ಣವಿ ನಾನು ಮನಸ್ಸು ಮಾಡಿದರೆ ಎಲ್ಲಾ ಟಾಸ್ಕ್‌ನನ್ನು ಕೂಡ ಗೆದ್ದು ಬಿಡುತ್ತೇನೆ ಎಂದು ಹೇಳಬೇಕಿತ್ತು ಎನ್ನುತ್ತಾರೆ. ನಾನು ಬಾಲ್ ಟಾಸ್ಕ್ ಆದರೂ ಗೆಲ್ಲಬಾರದಾ ಎಂದು ಶುಭಾ ಹೇಳುತ್ತಾ ನಗುತ್ತಾರೆ. ನಂತರ ಇನ್ನೂ ಎಷ್ಟು ವಾರಗಳಿದೆ, ಎಷ್ಟು ಟಾಸ್ಕ್‌ಗಳಿರಬಹುದು, ವಾಪಸ್ ಹೋಗುವಷ್ಟರಲ್ಲಿ ಒಂದಾದರೂ ವಿನ್ ಆಗಿ ಹೋಗಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಘುಗೆ ವೈಷ್ಣವಿ ಹುಚ್ಚುನಾಯಿ ಕಚ್ಚಿದ್ಯಾ ಎಂದಿದ್ಯಾಕೆ?

  • ಹುಡುಗರ ಜೊತೆ ಸೇರ್ಬೇಡ ವೈಷ್ಣವಿಗೆ ಅಮ್ಮನ ವಾರ್ನಿಂಗ್!

    ಹುಡುಗರ ಜೊತೆ ಸೇರ್ಬೇಡ ವೈಷ್ಣವಿಗೆ ಅಮ್ಮನ ವಾರ್ನಿಂಗ್!

    – ರಿವೀಲ್ ಆಯ್ತು ವೈಷ್ಣವಿ ಇರುವ ಏರಿಯಾ

    ಬಿಗ್‍ಬಾಸ್ ಮನೆಗೆ ಕಳುಹಿಸುವ ಮುನ್ನ ಹುಡುಗರ ಜೊತೆ ಹೆಚ್ಚಾಗಿ ಸೇರಬೇಡ ಎಂದು ಅಮ್ಮ ಹೇಳಿದ್ದ ವಿಚಾರವನ್ನು ವೈಷ್ಣವಿ ಇಂದು ಬಹಿರಂಗ ಮಾಡಿದ್ದಾರೆ.

    ಬಿಗ್‍ಬಾಸ್ ಮನೆಯಿಂದ ಹೊರಗೆ ಹೋಗುತ್ತಿರುವ ಸ್ಪರ್ಧಿಗಳಿಗೆ ಏನಾದರೂ ಭಯ ಕಾಡುತ್ತಿದ್ಯಾ ಎಂದು ಕಣ್ಮಣಿ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ವೈಷ್ಣವಿ ನಮ್ಮ ಅಮ್ಮ ದೊಡ್ಮನೆಗೆ ಬರುವಾಗ ಹುಡುಗರ ಜೊತೆ ಜಾಸ್ತಿ ಸೇರಬೇಡ, ಇರಬೇಡ ಎಂದು ಹೇಳಿ ಕಳುಹಿಸಿದ್ದರು. ಆದರೆ ನಾನು ಇಲ್ಲಿ ಇದ್ದಿದ್ದೆ ಹೆಚ್ಚಾಗಿ ಹುಡುಗರ ಜೊತೆ ಹಾಗಾಗಿ ಭಯ ಆಗುತ್ತಿದೆ. ಇನ್ನೊಂದು ವಿಪರ್ಯಾಸ ಎಂದರೆ ಈ ಎಪಿಸೋಡ್‍ನ ನಾನು ಅವರೊಟ್ಟಿಗೆಯೇ ಕುಳಿತು ನೋಡಬೇಕು. ಸೋ ಹಾಗಾಗಿ ಸ್ವಲ್ಪ ಟೆನ್ಷನ್ ಆಗ್ತಿದೆ ಎನ್ನುತ್ತಾರೆ.

    ಈ ವೇಳೆ ರಘು ನಾನು ಕೂಡ ಆಗಾಗ ಎಕ್ಸ್ ಗರ್ಲ್ ಫ್ರೆಂಡ್, ಹಾಗೇ, ಹೀಗೆ ಅಂತ ಹೇಳಿಬಿಟ್ಟಿದ್ದೇನೆ. ಸೋ ನೀವು ಸ್ವಲ್ಪ ಎಕ್ಸ್‌ಪ್ಲೇನ್ ಮಾಡಿ ಬಿಡಿ ಕಣ್ಮಣಿ ಎಂದು ಹೇಳುತ್ತಾಳೆ. ಆಗ ಕಣ್ಮಣಿ ಇನ್ನೂ ನಾಲ್ಕೆ ಘಂಟೆ ರಘು ನೀವೇ ಮಾಡಬಹುದು ಅಂತಾಳೆ.

    ನಂತರ ವೈಷ್ಣವಿಗೆ ಒಂದೇ ಒಂದು ಪ್ರಶ್ನೆ ಕೇಳುತ್ತೇನೆ. ನಿಮ್ಮ ಮನೆ ಇರುವುದು ಯಾವ ಏರಿಯಾ ಎಂದು ಕಣ್ಮಣಿ ಕೇಳುತ್ತಾಳೆ. ಆಗ ವೈಷ್ಣವಿ ರಾಜಾಜಿನಗರ ಎಂಬ ಸತ್ಯ ರಿವೀಲ್ ಮಾಡಿದ್ದಾರೆ. ನಂತರ ರಘುಗೆ ಆ ಕಡೆ ತಲೆ ಹಾಕಿ ಕೂಡ ಮಲಗಬೇಡಿ ಅಂತ ಕಣ್ಮಣಿ ಅಣುಗಿಸುತ್ತಾಳೆ. ಈ ವೇಳೆ ನಗುತ್ತಾ ರಘು ನಮ್ಮಿಬ್ಬರದ್ದು ಒಂದೇ ಏರಿಯಾ ನಮ್ಮ ಏರಿಯಾಗೆ ಹೋಗಲೇ ಬೇಕು ಕಣ್ಮಣಿ ನಾನೇದರೂ ಜಾಸ್ತಿ ಮಾತನಾಡಿದ್ನಾ ಎಂದು ಕೇಳುತ್ತಾರೆ.

    ವೈಷ್ಣವಿ ಬಿಗ್‍ಬಾಸ್ ಕಾರ್ಯಕ್ರಮದ ಆರಂಭದಲ್ಲಿ ನೀವು ವೇದಿಕೆ ಮೇಲೆ ಸುದೀಪ್ ಅವರ ಜೊತೆ ಹೇಳಿದ್ದನ್ನೆಲ್ಲಾ ರಘು ಜೊತೆ ಹಂಚಿಕೊಂಡಿದ್ದೀರಾ, ಅದೇ ನಿಮ್ಮ ಅಮ್ಮ ಯಾವ ಯಾವದರಲ್ಲಿ ನಿಮಗೆ ಹೊಡೆಯುತ್ತಾರೆ ಅಂತ ಎಂದು ಕಣ್ಮಣಿ ನೆನಪಿಸುತ್ತಾರೆ. ಆಗ ಮನೆಮಂದಿ ಜೋರಾಗಿ ನಗುತ್ತಾ ಚಪ್ಪಾಳೆ ಹೊಡೆಯುತ್ತಾರೆ.

    ಈ ವೇಳೆ ರಘು ಈ ಸೈಡ್ ಹೋದರೆ ನನ್ನ ಹೆಂಡತಿ, ಆ ಸೈಡ್ ಹೋದರೆ ವೈಷ್ಣವಿ ಅಮ್ಮ ನಾನು ಎಲ್ಲಿ ಹೋಗಲಿ ಎಂದು ಹೇಳುತ್ತಾ ಹಾಸ್ಯ ಮಾಡುತ್ತಾರೆ.

  • ಅಮ್ಮನ ಧ್ವನಿ ಕೇಳಿ ಗಳಗಳನೇ ಅತ್ತ ನಿಧಿ

    ಅಮ್ಮನ ಧ್ವನಿ ಕೇಳಿ ಗಳಗಳನೇ ಅತ್ತ ನಿಧಿ

    ಬಿಗ್‍ಬಾಸ್ ರಿಯಾಲಿಟಿ ಶೋ ಅಂತ್ಯದ ಹೊತ್ತಿಗೆ ಸ್ಪರ್ಧಿಗಳ ಆಸೆಯನ್ನು ಬಿಗ್‍ಬಾಸ್ ಈಡೇರಿಸುತ್ತಿದ್ದಾರೆ. ದೊಡ್ಮನೆಯ ಬಹುತೇಕ ಮಂದಿ ತಮ್ಮ ಮನೆಯವರ ಧ್ವನಿಯನ್ನು ಕೇಳಿದ್ದಾರೆ. ಮನೆಯಿಂದ ದೂರವಿದ್ದ ನಿಧಿ ಸುಬ್ಬಯ್ಯಗೆ ಮನೆಯಿಂದ ಮಾತ್ರ ಇಷ್ಟು ದಿನ ಯಾವುದೇ ಸಂದೇಶ ಬಂದಿರಲಿಲ್ಲ. ಆದರೆ ಇಂದು ನಿಧಿಗೆ ಅವರ ತಾಯಿ ವಾಯ್ಸ್ ರೆಕಾರ್ಡ್ ಕಳುಹಿಸಿದ್ದಾರೆ.

    ಹಾಯ್ ಕಂದ, ಹೇಗಿದ್ಯಾಮ್ಮ ಎಂದು ಮೊದಲಿಗೆ ಕೊಂಕಣಿಯಲ್ಲಿ ಮಾತನಾಡಲು ಆರಂಭಿಸಿದ ನಿಧಿ ತಾಯಿ ನಂತರ ಮಿಸ್ ಯೂ ಸೋ ಮಚ್.. ನಾನು ಮಾಜಿ ಬಾಬ್ಲೂ ಎಲ್ಲಾ ಚೆನ್ನಾಗಿದ್ದೇವಿ. ನೀನು ಮೊನ್ನೆ ಮಡಿಕೇರಿ ಸಿಪಾಯಿ ಸಾಂಗ್ ಹಾಡುತ್ತಿದ್ದಾಗ ಟಿವಿ ಬಳಿ ಬಂದು ತಲೆನಾ ಲೆಫ್ಟ್ ಟೂ, ರೈಟ್ ಲೆಫ್ಟ್ ಟೂ ರೈಲ್ ಅಲ್ಲಡಿಸುತ್ತಿದ್ದ. ಆಮೇಲೆ ಒಂದು ವಾಕ್ ಕರೆದುಕೊಂಡು ಹೋದ ನಂತರ ಸರಿಹೋದ. ನಮ್ಮ ಬಗ್ಗೆ ವರಿ ಮಾಡಬೇಡ. ನೀನು ಎಲ್ಲರ ಜೊತೆ ಚೆನ್ನಾಗಿ ಮಿಂಗಲ್ ಆಗಿ. ಚೆನ್ನಾಗಿ ಖುಷಿಯಾಗಿದ್ದೀಯಾ. ತುಂಬಾ ನಗುತ್ತಿರುತ್ತೀಯಾ, ಚೆನ್ನಾಗಿಯೂ ಆಡುತ್ತಿದ್ದಿಯಾ, ಹಾಗೆ ಇರು ಕಂದ. ಎಲ್ಲ ಸ್ಪರ್ಧಿಗಳಿಗೂ ನನ್ನ ಬೆಸ್ಟ್ ವಿಶಸ್ ತಿಳಿಸು. ಯು ಟೆಕ್ ಕೇರ್ ಕಂದ ಲವ್ ಯೂ ಸೋ ಮಚ್ ಬಾಯ್ ಎಂದು ವಿಶ್ ಮಾಡಿದ್ದಾರೆ.

    ಎಷ್ಟೋ ದಿನದ ನಂತರ ಅಮ್ಮನ ಧನಿ ಕೇಳಿ ನಿಧಿ ಸುಬ್ಬಯ್ಯ ಆನಂದ ಬಾಷ್ಪ ಸುರಿಸಿದ್ದಾರೆ. ಈ ವೇಳೆ ಮನೆ ಮಂದಿ ಎಲ್ಲಾ ಚಪ್ಪಾಳೆ ತಟ್ಟುತ್ತಾ, ನಿಧಿ ಸುಬ್ಬಯ್ಯ ಬಳಿ ಬಂದು ಅಳಬೇಡ ಎಂದು ಸಮಾಧಾನ ಮಾಡುತ್ತಾ ಮತ್ತೆ ಮೇಕಪ್ ಹಾಕಿಕೊಳ್ಳಬೇಕಲ್ಲಪ್ಪಾ ಎಂದು ರೇಗಿಸುತ್ತಾರೆ. ನಂತರ ನಿಧಿ ಸುಬ್ಬಯ್ಯ ಬಿಗ್‍ಬಾಸ್‍ಗೆ ಧನ್ಯವಾದ ತಿಳಿಸಿದ್ದಾರೆ.

  • ದಿವ್ಯಾ ಉರುಡುಗಗೇ ಬಂತು ಅಮ್ಮನಿಂದ ಸಂದೇಶ!

    ದಿವ್ಯಾ ಉರುಡುಗಗೇ ಬಂತು ಅಮ್ಮನಿಂದ ಸಂದೇಶ!

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ನಾಲ್ಕನೇ ವಾರದತ್ತ ಸಾಗುತ್ತಿದೆ. ಸದ್ಯ ನಿನ್ನೆ ವಾರದ ಕಥೆ ಕಿಚ್ಚ ಸುದೀಪ ಜೊತೆ ಸಂಚಿಕೆ ನಡೆಯಿತು.

    ಈ ವೇಳೆ ದಿವ್ಯಾ ಉರುಡುಗಗೆ ಅವರ ತಾಯಿ ವಿಶ್ ಮಾಡಿದ್ದಾರೆ. ಮೊದಲಿಗೆ ‘ಶಿಲೆಗಳು ಸಂಗೀತವ ಹಾಡಿದೆ’ ಎಂಬ ಗೀತೆ ಹಾಡಿದ ಅವರು, ಹಾಯ್ ಪುಟ್ಟಿ ನಾವು ದಿನ ಟಿವಿಯಲ್ಲಿ ನಿನ್ನ ನೋಡಲು ಒಂಬತ್ತುವರೆ ಯಾವಾಗ ಆಗುತ್ತೆ ಎಂದು ಕಾಯ್ತಾ ಕುಳಿತುಕೊಂಡಿರುತ್ತೇವೆ. ಈ ಬಾರಿ ಸಿದ್ಧಪುರ ಮಾರಿಕಾಂಬ ಜಾತ್ರೆ 30ನೇ ತಾರೀಖಿನಿಂದ ಆರಂಭವಾಗುತ್ತಿದ್ದು, ಅದಕ್ಕೆ ನಿನ್ನ ತಮ್ಮ ದರ್ಶನ್, ಅಕ್ಕ ಇಲ್ಲ. ಆದ್ದರಿಂದ ನಾನು ಬರುವುದೇ ಇಲ್ಲ ಎಂದು ಹೇಳುತ್ತಿದ್ದಾನೆ. ಆದರೂ ಕೂಡ ಹೋಗಲೆಬೇಕಾಗಿದೆ. ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೀವಿ. ಸ್ಕೂಲ್‍ನಲ್ಲಿ ನೀನು ಸ್ಪೋಟ್ರ್ಸ್ ನಲ್ಲಿರುವಾಗ ಒಂದು ಬಾರಿಯೂ ನಾವು ಮಿಸ್ ಮಾಡದೇ ಬಂದು ನಿನಗೆ ಸಪೋರ್ಟ್ ಮಾಡುತ್ತಿದ್ದೇವು. ಆ ಹಳೆಯ ನೆನಪುಗಳನ್ನು ನೀನು ಮತ್ತೆ ಬಿಗ್‍ಬಾಸ್ ವೇದಿಕೆಯ ಮೂಲಕ ತರಿಸುತ್ತಿದ್ದಿಯಾ. ನಾವು ಮಾತನಾಡಿದಷ್ಟು ಮಾತು ಮುಂದುವರೆಯುತ್ತಲೇ ಇರುತ್ತದೆ. ಮಾತನಾಡಲು ಬಹಳ ಇದೆ. ಸದ್ಯಕ್ಕೆ ನಿನ್ನನ್ನು ಫಿನಾಲೆನಲ್ಲಿ ನೋಡಬೇಕು ಎಂಬ ಆಸೆ ಇದೆ. ಚೆನ್ನಾಗಿ ಆಡು ಎಂದು ಶುಭ ಹಾರೈಸಿದ್ರು.

    ಈ ವೇಳೆ ದಿವ್ಯಾ ಉರುಡುಗ ಭಾವುಕರಾಗಿ ಅಳುತ್ತಾರೆ. ಅಮ್ಮ-ಮಗಳ ಭಾಂದವ್ಯ ನೋಡಿ ಮನೆಮಂದಿಯೆಲ್ಲಾ ಚಪ್ಪಾಳೆ ತಟ್ಟುತ್ತಾ, ಮೇಕಪ್ ಹೋಗುತ್ತೆ ಎಂದು ಹಾಸ್ಯ ಮಾಡುತ್ತಾ ದಿವ್ಯಾ ಉರುಡುಗಗೆ ಸಮಾಧಾನ ಪಡಿಸಿದರು. ಬಳಿಕ ದಿವ್ಯಾ ಉರುಡುಗ ಕ್ಯಾಮೆರಾ ಮುಂದೆ ಬಂದು ಬಿಗ್‍ಬಾಸ್‍ಗೆ ಖುಷಿಯಿಂದ ಧನ್ಯವಾದ ತಿಳಿಸಿದರು.

    ನಂತರ ಸುದೀಪ್ ಈ ಬಗ್ಗೆ ದಿವ್ಯಾ ಉರುಡುಗಗೆ ಕೇಳಿದಾಗ, ನಮ್ಮ ಅಮ್ಮ ಹಾಡು ಹೇಳುವುದನ್ನು ಎಲ್ಲರಿಗೂ ಕೇಳಿಸಬೇಕು ಎಂಬ ಆಸೆ ಇತ್ತು. ಇಂದು ಮನೆಯವರೆಲ್ಲರೂ ಕೇಳಿಸಿಕೊಂಡರು ನನಗೆ ಸಖತ್ ಖುಷಿಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

  • ಅಮ್ಮನ ಅಕ್ರಮ ಸಂಬಂಧದಿಂದ ಬೇಸತ್ತು ಮಗಳು ಆತ್ಮಹತ್ಯೆ

    ಅಮ್ಮನ ಅಕ್ರಮ ಸಂಬಂಧದಿಂದ ಬೇಸತ್ತು ಮಗಳು ಆತ್ಮಹತ್ಯೆ

    – ಬಾಲಕಿಗೆ ರಸ್ತೆಯಲ್ಲಿ ರೇಗಿಸ್ತಿದ್ದ ತಾಯಿಯ ಗೆಳೆಯ

    ಚಿಕ್ಕಮಗಳೂರು: ಅಮ್ಮನ ಅಕ್ರಮ ಸಂಬಂಧದಿಂದ ಮನನೊಂದು ಮಗಳು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದಲ್ಲಿ ನಡೆದಿದೆ.

    ಮೃತಳನ್ನ ಪೂರ್ಣಿಮಾ(16)ಎಂದು ಗುರುತಿಸಲಾಗಿದೆ. ಈಕೆ 10ನೇ ತರಗತಿಯಲ್ಲಿ ಓದುತ್ತಿದ್ದಳು. ಮೃತ ಪೂರ್ಣಿಮಾ ತಾಯಿ ಲೀಲಾವತಿಗೆ ಅದೇ ಊರಿನ ರಂಗಸ್ವಾಮಿ ಎಂಬವನ ಜೊತೆ ಅಕ್ರಮ ಸಂಬಂಧವಿತ್ತು. ಈ ವಿಷಯ ತಿಳಿದು ಮಗಳು ಮನನೊಂದಿದ್ದಳು. ಅಷ್ಟೆ ಅಲ್ಲದೆ ಲೀಲಾವತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ರಂಗಸ್ವಾಮಿ, ಪೂರ್ಣಿಮಾ ಶಾಲೆಗೆ ಹೋಗಿ ಬರುವಾಗ ರಸ್ತೆಯಲ್ಲಿ ರೇಗಿಸುತ್ತಿದ್ದನಂತೆ. ಇದರಿಂದಲೂ ಪೂರ್ಣಿಮ ಮನನೊಂದಿದ್ದಳು ಎನ್ನಲಾಗಿದೆ.

    ದಾರಿಯಲ್ಲಿ ಛೇಡಿಸುತ್ತಿದ್ದ ರಂಗಸ್ವಾಮಿ ಬಗ್ಗೆ ಅಪ್ಪನ ಬಳಿಯೂ ಹೇಳಿದ್ದಳು. ಕಳೆದ ಮಂಗಳವಾರ ಪೂರ್ಣಿಮಾ ಶಾಲೆಗೆ ಹೋಗಿ ಬರುವಾಗಲೂ ರಂಗಸ್ವಾಮಿ ರಸ್ತೆ ಮಧ್ಯೆ ಛೇಡಿಸಿದ್ದನು. ಆಗಲೂ ಪೂರ್ಣಿಮಾ ಅಪ್ಪ-ಅಮ್ಮನ ಬಳಿ ಹೇಳಿಕೊಂಡಿದ್ದಳು. ಅಂದು ಊರಿನಿಂದ ಚಿಕ್ಕಮಗಳೂರಿಗೆ ಬಂದಿದ್ದರು. ಯಾಕಂದರೆ ಊರಲ್ಲಿ ಪೂರ್ಣಿಮ ಅಪ್ಪ ಲಕ್ಷ್ಮಣ ಶೆಟ್ಟಿ ಹಾಗೂ ಪೂರ್ಣಿಮಳಿಗೂ ರಸ್ತೆ ಮಧ್ಯೆ ರೇಗುವುದು, ಹಲ್ಲೆಗೆ ಮುಂದಾಗುವುದು ಮಾಡುತ್ತಿದ್ದನಂತೆ.

    ಶಾಲೆಗೆ ಹೋಗಿ ಬರುತ್ತಿದ್ದ ಬಾಲಕಿಗೆ ನಿನ್ನ ಮುಖ ಚರ್ಯೆಯನ್ನೇ ಕತ್ತರಿಸುತ್ತೇನೆ ಎಂದು ಹೆದರಿಸುತ್ತಿದ್ದನಂತೆ. ಆಗಲೂ ಬಾಲಕಿ ಮನೆಯಲ್ಲಿ ಹೇಳಿದ್ದಳು. ಅಂದಿನಿಂದಲೂ ಮನೆಯಲ್ಲಿ ಮಂಕಾಗಿ ಇರುತ್ತಿದ್ದಳು. ರಂಗಸ್ವಾಮಿ ಲೀಲಾವತಿಗೆ ಏನೂ ಮಾಡುತ್ತಿರಲಿಲ್ಲ. ಆದರೆ ಪೂರ್ಣಿಮ ಹಾಗೂ ಆಕೆಯ ಅಪ್ಪ ಲಕ್ಷ್ಮಣ ಶೆಟ್ಟಿಗೆ ಹೆದರಿಸುತ್ತಿದ್ದನಂತೆ. ಕಳೆದೊಂದು ವಾರದಿಂದ ತೀರಾ ಮಂಕಾಗಿದ್ದ ಪೂರ್ಣಿಮ ನಿನ್ನೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಘಟನೆ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಏಳಮ್ಮ, ಮನೆಗೆ ಹೋಗೋಣ- ಅಮ್ಮನ ಶವದ ಜೊತೆ 5ರ ಕಂದಮ್ಮನ ಆಟ

    ಏಳಮ್ಮ, ಮನೆಗೆ ಹೋಗೋಣ- ಅಮ್ಮನ ಶವದ ಜೊತೆ 5ರ ಕಂದಮ್ಮನ ಆಟ

    ಗಾಂಧೀನಗರ: 5 ವರ್ಷದ ಕಂದಮ್ಮ ಅಮ್ಮನ ಶವದ ಜೊತೆ ಆಟವಾಡಿದ ಹೃದಯವಿದ್ರಾವಕ ಘಟನೆ ಗುಜರಾತಿನ ರಾಜಧಾನಿ ಗಾಂಧೀನಗರದಲ್ಲಿ ನಡೆದಿದೆ.

    ಮಗುವಿನ ಜೊತೆಯಲ್ಲಿಯೇ ಮಹಿಳೆ ಅಡ್ಲಾಜ್-ಅಂಬಾಪುರ ರಸ್ತೆ ಬದಿಯ ಕಸವನ್ನ ಸ್ವಚ್ಛಗೊಳಿಸುತ್ತಿರುವಾಗ ಸಾವನ್ನಪ್ಪಿದ್ದಾರೆ. ಆದ್ರೆ ಏನು ಅರಿಯದ ಮುಗ್ಧ ಕಂದಮ್ಮ ಅಮ್ಮನ ಶವದ ಜೊತೆಯಲ್ಲಿ ಕೆಲ ಸಮಯ ಆಟವಾಡಿದೆ. ನಂತರ ಅಮ್ಮನ ಬಟ್ಟೆ ಹಿಡಿದು ಎಚ್ಚರಗೊಳಿಸುವ ಪ್ರಯತ್ನ ಮಾಡಿದೆ. ಮಗುವನ್ನ ಕಂಡ ಸಾರ್ವಜನಿಕರು ಮಹಿಳೆಯನ್ನ ಎಚ್ಚರಗೊಳಿಸಲು ಮುಂದಾಗ ಆಕೆ ಸಾವನ್ನಪ್ಪಿರೋದು ತಿಳಿದಿದೆ. ಕೂಡಲೇ ಸಾರ್ವಜನಿಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಗುವಿನ ಜೊತೆ ಪರೀಕ್ಷೆಗೆ ತೆರಳಿದ ತಾಯಿ- ಅಮ್ಮನಾದ ಪೇದೆಯ ಫೋಟೋ ವೈರಲ್

    ಮೃತ ಮಹಿಳೆ ಮಂಜೂ ದೇವಿ ಪತಿ ರಾಮನಾಥ್ ಜೋಗಿ ಹಾಗೂ ಮೂರು ಮಕ್ಕಳೊಂದಿಗೆ ಶನಿದೇವ ನಮಂದಿರದ ಬಳಿ ವಾಸವಾಗಿದ್ದರು. ಎಂದಿನಂತೆ ಪತಿ ಕೆಲಸಕ್ಕೆ ತೆರಳಿದ್ರೆ ಮಂಜೂ ದೇವಿ ಸಹ 5 ವರ್ಷದ ಕಂದಮ್ಮನ ಜೊತೆ ಪೌರ ಕೆಲಸಕ್ಕೆ ಆಗಮಿಸಿದ್ದರು. ರಸ್ತೆ ಬದಿ ಕೆಲಸ ಮಾಡೋವಾಗ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಮಂಜೂದೇವಿ ರಸ್ತೆಯಲ್ಲಿ ಕುಸಿದು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಿನ್ನ ಹರಕೆಯಿಂದ ಮಗು ಹುಟ್ತು, ಆದರೆ ಈಗ ಪತಿಯನ್ನು ಕಿತ್ತುಕೊಂಡೆಯಾ ಅಮ್ಮಾ – ಬಾಣಂತಿ ರೋಧನೆ

    ಮಗು ಮಾತ್ರ ತುಂಬಾ ಸಮಯದವರೆಗೂ ಅಮ್ಮನ ಶವದ ಜೊತೆಯಲ್ಲಿಯೇ ಆಟವಾಡಿದೆ. ಅಮ್ಮ ಎಚ್ಚರಗೊಳ್ಳದಿದ್ದಾಗ ಮಗು ಜೋರಾಗಿ ಅಳಲು ಆರಂಭಿಸಿದಾಗ ಸಾರ್ವಜನಿಕರು ಮಹಿಳೆ ಬಳಿ ತೆರಳಿದಾಗ ಮಂಜೂದೇವಿ ಸಾವನ್ನಪ್ಪಿರೋದು ಖಚಿತವಾಗಿದೆ. ಪೊಲೀಸರು ಶವವನ್ನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಊಟ ಮಾಡಿಸಿ ಕೈ ತೊಳೆಯಲು ಹೋದ ಅಮ್ಮ – ಮಹಡಿಯಿಂದ ಬಿದ್ದು ಮಗು ಸಾವು

  • ಮೊಬೈಲ್ ಕಸಿದುಕೊಂಡಿದ್ದಕ್ಕೆ ಫಜೀತಿ ಸೃಷ್ಟಿಸಿದ ವಿದ್ಯಾರ್ಥಿ

    ಮೊಬೈಲ್ ಕಸಿದುಕೊಂಡಿದ್ದಕ್ಕೆ ಫಜೀತಿ ಸೃಷ್ಟಿಸಿದ ವಿದ್ಯಾರ್ಥಿ

    – ಗಾಜು ಒಡೆದು ಬಾತ್ ರೂಮಿಗೆ ಎಂಟ್ರಿ

    ಉಡುಪಿ: ದಿನಪೂರ್ತಿ ಇಂಟರ್ನೆಟ್ ನಲ್ಲಿ ಇರಬೇಡ ಎಂದು ತಾಯಿ ಬೈದರೆಂದು ವಿದ್ಯಾರ್ಥಿಯೊಬ್ಬ ಬಾತ್ ರೂಮ್ ಬಾಗಿಲು ಹಾಕಿಕೊಂಡು ಗಂಟೆಗಟ್ಟಲೆ ಹೊರಗೆ ಬಾರದೆ ಅವಾಂತರ ಸೃಷ್ಟಿಸಿದ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ.

    ಮಣಿಪಾಲದ ಎಂಐಟಿ ಕ್ಯಾಂಪಸ್ ಪಕ್ಕದ ಎಒನ್ ಅಪಾರ್ಟ್‍ಮೆಂಟ್‍ನಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತಾಯಿ ಮೊಬೈಲ್ ಕಿತ್ತುಕೊಂಡರು ಎಂದು ವಿದ್ಯಾರ್ಥಿಯೊಬ್ಬ ಬಾತ್ ರೂಮ್ ಸೇರಿಕೊಂಡು ಒಳಗಿಂದ ಬಾಗಿಲು ಹಾಕಿಕೊಂಡಿದ್ದ. ಎಷ್ಟೇ ಬಾಗಿಲು ತಟ್ಟಿದರೂ, ಮನವಿ ಮಾಡಿದರೂ ಬಾಗಿಲು ತೆರೆಯದಿದ್ದಾಗ ದಿಕ್ಕುತೋಚದೆ ಅಮ್ಮ ಅಗ್ನಿಶಾಮಕ ದಳಕ್ಕೆ ಫೋನ್ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮಣಿಪಾಲಕ್ಕೆ ತೆರಳಿ ಬಾಗಿಲು ತೆರೆಯುವಂತೆ ವಿನಂತಿ ಮಾಡಿಕೊಂಡಿದ್ದಾರೆ.

    ವಿದ್ಯಾರ್ಥಿ ಬಾಗಿಲು ತೆರೆಯದಿದ್ದಾಗ ಅಗ್ನಿಶಾಮಕ ಸಿಬ್ಬಂದಿ ಅಪಾರ್ಟ್‍ಮೆಂಟ್‍ನ ಟೆರಸ್ ಹತ್ತಿ, ಕಿಟಕಿ ಪಕ್ಕ ಇಳಿದು ಬಾತ್ ರೂಮ್ ನ ಕಿಟಕಿ ಗಾಜು ಮುರಿದು ಒಳಗೆ ಪ್ರವೇಶಿಸಿದ್ದಾರೆ. 17 ವರ್ಷದ ವಿದ್ಯಾರ್ಥಿಯನ್ನು ಹೊರಗೆ ತಂದಿದ್ದಾರೆ. ಫೈರ್ ಡಿಎಫ್‍ಒ ವಸಂತ್ ಕುಮಾರ್ ನೇತೃತ್ವದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಪ್ರಭುದೇವ ಮಾಣೆ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಿಎಫ್‍ಒ ವಸಂತ್ ಕುಮಾರ್, ಫೋನ್ ಕರೆ ಬಂದ 10 ನಿಮಿಷಕ್ಕೆ ನಮ್ಮ ತಂಡ ತೆರಳಿತ್ತು. ಯಾವುದೇ ಸಮಸ್ಯೆ ಆಗದಂತೆ ಆಪರೇಷನ್ ಮಾಡಿದ್ದೇವೆ. ಕುಟುಂಬ ನಿಟ್ಟುಸಿರು ಬಿಟ್ಟಿದೆ ಎಂದರು. ಮಣಿಪಾಲ ಸೆಕ್ಯೂರಿಟಿ ಮುಖ್ಯಸ್ಥ ಪ್ರಭುದೇವ ಮಾಣೆ ಮಾತನಾಡಿ, ಎಲ್ಲ ಉನ್ನತ ಅಧಿಕಾರಿಗಳು ಸ್ಥಳದಲ್ಲಿದ್ದು ಕಾರ್ಯಾಚರಣೆಗೆ ಸಹಕರಿಸಿದೆವು. ಅಗ್ನಿಶಾಮಕ ಸಿಬ್ಬಂದಿ ಬಾತ್ ರೂಮ್ ಪ್ರವೇಶಿಸಿದಾಗ ವಿದ್ಯಾರ್ಥಿ ತಬ್ಬಿಬ್ಬಾಗಿದ್ದಾನೆ. ಆಮೇಲೆ ನಾವೆಲ್ಲ ಬುದ್ಧಿವಾದ ಹೇಳಿದ್ದೇವೆ. ಸಂಪೂರ್ಣವಾಗಿ ಇಂಟರ್ನೆಟ್ ಗೆ ಒಗ್ಗಿಕೊಂಡಾಗ ಹೀಗಾಗುತ್ತದೆ. ಪೋಷಕರು ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸುವುದು ಕೂಡ ಬಹಳ ಮುಖ್ಯವಾಗುತ್ತದೆ ಎಂದರು.

  • ನಾನು ಹೇಡಿಯಲ್ಲ, ನನ್ನಿಂದ ಬದುಕಲು ಆಗ್ತಿಲ್ಲ- ವಿದ್ಯಾರ್ಥಿ ಆತ್ಮಹತ್ಯೆ

    ನಾನು ಹೇಡಿಯಲ್ಲ, ನನ್ನಿಂದ ಬದುಕಲು ಆಗ್ತಿಲ್ಲ- ವಿದ್ಯಾರ್ಥಿ ಆತ್ಮಹತ್ಯೆ

    – ಸಾರಿ ಅಪ್ಪ, ಅಮ್ಮ: ಪುತ್ರನ ಭಾವನಾತ್ಮಕ ಪತ್ರ
    – ನನ್ನ ನಿರ್ಧಾರ ಸರಿ ಇದೆಯೋ ಗೊತ್ತಾಗ್ತಿಲ್ಲ

    ಲಕ್ನೋ: ನಾನು ಹೇಡಿಯಲ್ಲ, ನನ್ನಿಂದ ಬದುಕಲು ಆಗುತ್ತಿಲ್ಲ ಎಂದು ಡೆತ್ ನೋಟ್ ಬರೆದಿಟ್ಟ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಉತ್ತರ ಪ್ರದೇಶದ ಪ್ರತಾಪಗಢದ ಲಾಲ್‍ಗಂಜ್ ವ್ಯಾಪ್ತಿಯ ಬೆಲ್ಹಾ ಗ್ರಾಮದ ಐಟಿಐ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಧೀರೇಂದ್ರ ಶರ್ಮಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮೃತ ಧೀರೇಂದ್ರ ಪ್ರತಾಪಘಢನಲ್ಲಿ ಐಟಿಐ ಓದುತ್ತಿದ್ದನು. ರಜೆ ಹಿನ್ನೆಲೆ ಶನಿವಾರ ಗ್ರಾಮಕ್ಕೆ ಆಗಮಿಸಿದ್ದನು. ಮನೆಗೆ ಬಂದವನು ಎರಡನೇ ಮಹಡಿಯಲ್ಲಿರುವ ಕೋಣೆ ಸೇರಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಾಹ್ನ ತಾಯಿ ಊಟಕ್ಕೆ ಕರೆದಾಗಲೂ ಕೋಣೆಯಿಂದ ಉತ್ತರ ಬಂದಿಲ್ಲ. ಬಾಗಿಲು ತಟ್ಟಿದ್ರೂ ಮಗ ಉತ್ತರಿಸಿದರಿಂದ ಆತಂಕಗೊಂಡ ತಾಯಿ ಬೆಳಕಿನ ಕಿಂಡಿಯಲ್ಲಿ ಇಣುಕಿದಾಗ ಮಗನ ಶವ ನೇತಾಡುತ್ತಿರುವ ಭಯಾನಕ ದೃಶ್ಯ ಕಂಡಿದೆ.

    ತಾಯಿಯ ಕಿರುಚಾಟ ಕೇಳಿ ಆಗಮಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಧೀರೇಂದ್ರ ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ತನ್ನ ಸಾವಿಗೆ ಪ್ರದೀಪ್ ಸಿಂಗ್ ಮತ್ತು ಆತನ ಸೋದರಳಿಯ ಕಾರಣ ಎಂದು ಬರೆದಿದ್ದಾನೆ. ಹಾಗೆ ತಂದೆ-ತಾಯಿಗೂ ಕ್ಷಮೆ ಕೇಳಿದ್ದಾನೆ.

    ಪ್ರೀತಿಯ ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ. ಸಾಯುತ್ತಿದ್ದೆನೆಂದು ನಾನೇನು ಹೇಡಿಯಲ್ಲ. ಆ ಇಬ್ಬರು ನನಗೆ ಬ್ಲ್ಯಾಕ್‍ಮೇಲ್ ಮಾಡಿ ಕಿರುಕುಳ ನೀಡುತ್ತಿದ್ದಾರೆ. ನಾನು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನಾ ಎಂಬುವುದು ನನಗೆ ಗೊತ್ತಾಗುತ್ತಿಲ್ಲ. ಆದ್ರೆ ನನ್ನಿಂದ ಬದುಕಲು ಆಗುತ್ತಿಲ್ಲ. ನನ್ನ ಸಾವಿಗೆ ಪ್ರದೀಪ್ ಸಿಂಗ್ ಮತ್ತು ಆತನ ಸೋದರಳಿಯ ಕಾರಣ ಎಮದು ಧೀರೇಂದ್ರ ಹೇಳಿದ್ದಾನೆ.

     

  • ನೆಟ್ಟಿಗರ ಹೃದಯ ಕದ್ದ ರಿತೇಶ್ ವಿಭಿನ್ನ ದೀಪಾವಳಿ ಆಚರಣೆ

    ನೆಟ್ಟಿಗರ ಹೃದಯ ಕದ್ದ ರಿತೇಶ್ ವಿಭಿನ್ನ ದೀಪಾವಳಿ ಆಚರಣೆ

    – ರಿತೇಶ್ ಐಡಿಯಾಗೆ ಮೆಚ್ಚುಗೆ
    – ಅಮ್ಮನ ಹಳೆ ಸೀರೆಯಿಂದ ಹೊಸ ಬಟ್ಟೆ

    ಮುಂಬೈ: ಬಾಲಿವುಡ್ ನಟ ರಿತೇಶ್ ದೇಶಮುಖ್ ಅವರ ದೀಪಾವಳಿಯ ಹೊಸ ಬಟ್ಟೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಮ್ಮನ ಹಳೆ ಸೀರೆಯಿಂದ ತಾವು ಹಾಗೂ ಇಬ್ಬರು ಮಕ್ಕಳಿಗೂ ರಿತೇಶ್ ಕುರ್ತಾ ಹೊಲಿಸಿಕೊಂಡಿದ್ದಾರೆ.

    ಅಮ್ಮನ ಹಳೆಯ ಸೀರೆಯನ್ನ ಬಳಸಿ ಹೊಸ ಬಟ್ಟೆ ಮಾಡಿಕೊಂಡಿರುವ ವೀಡಿಯೋ ರಿತೇಶ್ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಮ್ಮನ ಹಳೆ ಸೀರೆ. ಮಕ್ಕಳು ಮತ್ತು ನನಗೆ ದೀಪಾವಳಿಯ ಹೊಸ ಬಟ್ಟೆ. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು ಎಂದು ರಿತೀಶ್ ಬರೆದುಕೊಂಡಿದ್ದಾರೆ.

    ಇನ್ನು ರಿತೇಶ್ ಐಡಿಯಾಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ನೆಟ್ಟಿಗರು ತಾವು ಸಹ ಅಮ್ಮನ ಸೀರೆಯಲ್ಲಿ ಕುರ್ತಾ ಹೊಲಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಅಮ್ಮನ ಸೀರೆಯಲ್ಲಿ ಆಕೆಯ ಪ್ರೀತಿ ಮತ್ತು ಆಶೀರ್ವಾದ ಇರುತ್ತೆ. ಇಂತಹ ಪ್ರೀತಿಯ ಕ್ಯೂಟ್ ವೀಡಿಯೋ ಶೇರ್ ಮಾಡಿಕೊಂಡ ನಿಮಗೆ ಧನ್ಯವಾದಗಳು ಎಂದು ನೆಟ್ಟಿಗರೊಬ್ಬರು ರಿಪ್ಲೈ ಮಾಡಿದ್ದಾರೆ.

  • ಪತ್ನಿ ನೀಡಿದ ಚಾಕುವಿನಿಂದ ಸ್ವಂತ ತಮ್ಮನನ್ನ ಕೊಂದ ಅಣ್ಣ

    ಪತ್ನಿ ನೀಡಿದ ಚಾಕುವಿನಿಂದ ಸ್ವಂತ ತಮ್ಮನನ್ನ ಕೊಂದ ಅಣ್ಣ

    – ಅಮ್ಮನ ಜೊತೆ ಜಗಳ ಮಾಡ್ಬೇಡ ಅಂದಿದ್ದು ತಪ್ಪಾಯ್ತು

    ಪಾಟ್ನಾ: ಪತ್ನಿ ನೀಡಿದ ಚಾಕುವಿನಿಂದ ಸ್ವಂತ ತಮ್ಮನನ್ನೇ ಅಣ್ಣ ಕೊಲೆಗೈದಿರುವ ಘಟನೆ ಬಿಹಾರದ ಛಪ್ರಾದ ಭಗವಾನ ಬಜಾರ್ ಕ್ಷೇತ್ರದ ಶಿವ ಬಜಾರ್ ಗಲ್ಲಿಯಲ್ಲಿ ನಡೆದಿದೆ.

    ಅರವಿಂದ್ ಚೌಧರಿ ಅಣ್ಣನಿಂದ ಕೊಲೆಯಾದ ತಮ್ಮ. ಆರೋಪಿ ಅಣ್ಣ ಚಂದನ್, ತಾಯಿ ಜೊತೆ ಜಗಳ ಆಡುತ್ತಿದ್ದನು. ಈ ವೇಳೆ ಅಲ್ಲಿಗೆ ಬಂದ ಸೋದರ ಅಮ್ಮನೊಂದಿಗೆ ಹೀಗೆ ನಡೆದುಕೊಳ್ಳುವುದು ಉಚಿತವಲ್ಲ ಎಂದು ತಿಳಿ ಹೇಳಿದ್ದಾನೆ. ಈ ಸಂದರ್ಭದಲ್ಲಿ ಚಂದನ್ ಮತ್ತು ಅರವಿಂದ್ ನಡುವೆ ಜಗಳ ಆರಂಭವಾಗಿದೆ. ಇದನ್ನೂ ಓದಿ: ಬಸ್ಸಿಗೆ ರೈಲು ಡಿಕ್ಕಿ – ದೇವಾಲಯಕ್ಕೆ ಹೋಗ್ತಿದ್ದ 18 ಮಂದಿ ದುರ್ಮರಣ

    ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಚಂದನ್ ಗೆ ಪತ್ನಿ ಚಾಕು ನೀಡಿದ್ದಾಳೆ. ಪತ್ನಿ ನೀಡಿದ ಚಾಕುವಿನಿಂದ ಸೋದರನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಚಂದನ್ ನನ್ನು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚು ರಕ್ತಸ್ರಾವವಾದ ಹಿನ್ನೆಲೆ ಅರವಿಂದ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಮೃತ ಅರವಿಂದ್ ಆಟೋ ಚಾಲನೆ ಮಾಡಿಕೊಂಡು ಇಡೀ ಕುಟುಂಬದ ನಿರ್ವಹಣೆ ಮಾಡುತ್ತಿದ್ದನು. ಇದನ್ನೂ ಓದಿ: ವಯಸ್ಸು 58 ಆದ್ರು ಮೂವರ ಜೊತೆ ಸಂಬಂಧ- 50ಕ್ಕೂ ಅಧಿಕ ಬಾರಿ ಇರಿದು ಕೊಂದ್ಳು

    ವಿಷಯ ತಿಳಿಯುತ್ತಿದ್ದಂತೆ ಖಾಸಗಿ ಆಸ್ಪತ್ರೆಯಲ್ಲಿದ್ದ ಶವವನ್ನ ವಶಕ್ಕೆ ಪಡೆದು, ಮರಣೋತ್ತರ ಶವ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಆರೋಪಿ ಚಂದನ್ ಚೌಧರಿ ಮತ್ತು ಪ್ರಿಯಾಂಕಾ ಚೌಧರಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಮೃತ ಅರವಿಂದ್ ಪತ್ನಿ ಹೇಳಿಕೆಯ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೊಲೆಗೆ ಬಳಸಲಾದ ಚಾಕು ಸಹ ವಶಕ್ಕೆ ಪಡೆಯಲಾಗಿದೆ ಎಂದು ಭಗವಾನ್ ಬಜಾರ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಮುಕೇಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಅತ್ಯಾಚಾರಕ್ಕೆ ವಿರೋಧ- 13 ವರ್ಷದ ಬಾಲಕಿಗೆ ಬೆಂಕಿ ಹಚ್ಚಿದ ಮಾಲೀಕ