Tag: ಅಮ್ಮ ಐ ಲವ್ ಯು

  • ಫಿಟ್‍ನೆಸ್ ಚಾಲೆಂಜ್ – ಯಶ್ ಪರ ಚಿರಂಜೀವಿ ಸರ್ಜಾ ಬ್ಯಾಟಿಂಗ್

    ಫಿಟ್‍ನೆಸ್ ಚಾಲೆಂಜ್ – ಯಶ್ ಪರ ಚಿರಂಜೀವಿ ಸರ್ಜಾ ಬ್ಯಾಟಿಂಗ್

    ದಾವಣಗೆರೆ: ಫಿಟ್ನೆಸ್ ಚಾಲೆಂಜ್ ನಲ್ಲಿ ಯಶ್ ಸುದೀಪ್ ಹೆಸರನ್ನು ಏಕವಚನದಲ್ಲಿ ಬಳಕೆ ಮಾಡಿದ್ದು ತಪ್ಪಲ್ಲ. ಫ್ರೆಂಡ್ಸ್ ಅಂತ ಬಂದಾಗ ಹೆಸರು ಇಟ್ಟು ಕರೆದದ್ದು ತಪ್ಪೇನಲ್ಲ ಎಂದು ನಟ ಚಿರಂಜೀವಿ ಸರ್ಜಾ ಹೇಳಿಕೆ ನೀಡಿದ್ದಾರೆ.

    ತಮ್ಮ ನಟನೆಯ ‘ಅಮ್ಮ ಐ ಲವ್ ಯು’ ಸಿನಿಮಾ ಪ್ರಚಾರಕ್ಕಾಗಿ ನಗರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಯಶ್ ಗಿಂತ ಸುದೀಪ್ ಸೀನಿಯರ್, ಸೀನಿಯರ್ ಎಂದರೇ ಗೌರವ ನೀಡಬೇಕಾಗುತ್ತದೆ. ಹಾಗಂತ ಹೆಸರಿನಿಂದ ಕರೆದರೆ ಗೌರವ ಕೊಟ್ಟಿಲ್ಲವೆಂದಲ್ಲ. ಇದೊಂದು ಕಂಪರ್ಟ್ ಜೋನ್, ಈ ಬಗ್ಗೆ ಸುದೀಪ್ ಅವರ ಟ್ವೀಟ್ ನೋಡಿದಾಗಲೂ ಯಾವುದೇ ಗೊಂದಲವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಪ್ರೀತಿ ಲಿಮಿಟ್ ಇಲ್ಲ. ಅವರವರ ಹೀರೋಗೆ ಅವರೇ ದೊಡ್ಡ ಹೀರೋ. ಇಂತಹ ವಿಚಾರ ತುಂಬಾ ಸೆನ್ಸಿಟಿವ್, ಈ ಕುರಿತು ನಾನು ಮಾತನಾಡುವುದು ಅಷ್ಟು ಸರಿಯಲ್ಲ ಎಂದು ಅವರು ತಿಳಿಸಿದರು. ಇದನ್ನು ಓದಿ: ಯಶ್ ವಿರುದ್ಧ ಗರಂ ಆಗಿರೋ ಅಭಿಮಾನಿಗಳಿಗೆ ಸುದೀಪ್ ಮನವಿ!

    https://twitter.com/NimmaYash/status/1003581840563638272

    ದ್ವಾರಕೀಶ್ ನಿರ್ದೇಶನ ಹಾಗೂ ನನ್ನ ನಟನೆಯ ಅಮ್ಮ ಐ ಲವ್ ಯು ಸಿನಿಮಾ ಇದೆ ತಿಂಗಳ 15 ರಂದು ಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಎಲ್ಲರೂ ಸಿನಿಮಾ ನೋಡಿ ಎಂದು ಜನರಿಗೆ ಅವರು ಮನವಿ ಮಾಡಿಕೊಂಡರು.

  • ತಾಯಂದಿರ ದಿನದಂದು ಭಾವನಾತ್ಮಕ ಟೀಸರ್ ರಿಲೀಸ್ ಮಾಡಿದ ಸರ್ಜಾ ಬ್ರದರ್ಸ್!

    ತಾಯಂದಿರ ದಿನದಂದು ಭಾವನಾತ್ಮಕ ಟೀಸರ್ ರಿಲೀಸ್ ಮಾಡಿದ ಸರ್ಜಾ ಬ್ರದರ್ಸ್!

    ಬೆಂಗಳೂರು: ಇಂದು ವಿಶ್ವದೆಲ್ಲೆಡೆ ತಾಯಂದಿರ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ‘ಅಮ್ಮ ಐ ಲವ್ ಯು’ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.

    ಅಮ್ಮ ಐ ಲವ್ ಯು ಚಿತ್ರದ ಟೀಸರ್ ಎರಡು ನಿಮಿಷವಿದ್ದು, ಈ ಟೀಸರ್ ನೋಡಿದ ಪ್ರತಿಯೊಬ್ಬರಿಗೂ ತನ್ನ ತಾಯಿಯ ಮೇಲಿರುವ ಪ್ರೀತಿ ಇನ್ನಷ್ಟು ಹೆಚ್ಚಾಗುತ್ತದೆ. ಪ್ರತಿದಿನ ಎಲ್ಲರ ಜೀವನದಲ್ಲಿ ತಾಯಿಯ ಜೊತೆ ನಡೆಯುವ ಸಂಭಾಷಣೆಗಳನ್ನು ಟೀಸರ್ ನಲ್ಲಿ ತೋರಿಸಲಾಗಿದೆ.

    ಅಮ್ಮ ಐ ಲವ್ ಯು ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಗೆ ಧ್ರುವ ಸರ್ಜಾ ತಮ್ಮ ಧ್ವನಿಯನ್ನು ನೀಡಿದ್ದಾರೆ. ಟೀಸರ್ ನಲ್ಲಿ ತಾಯಿಯ ಬಗ್ಗೆ ಹೇಳಲಾಗಿದ್ದು, ತಾಯಿ ನಮಗಾಗಿ ಏನೇನು ಮಾಡುತ್ತಾರೆಂಬುದು ಟೀಸರ್ ನಲ್ಲಿ ಹೇಳಿದ್ದಾರೆ.

    ನಮ್ಮ ಬೇಕಾಗಿರುವ ಚಿಕ್ಕಚಿಕ್ಕ ವಸ್ತುಗಳ ಬಗ್ಗೆ ತಾಯಿಯ ಹತ್ತಿರ ಕೇಳುತ್ತೇವೆ. ಆದರೆ ತಂದೆ ಇದ್ದರೆ ತಾಯಿ ಎಲ್ಲಿ ಎಂದು ಕೇಳುತ್ತೇವೆ. ನಮಗೆ ಬೇಕಾಗಿರುವ ತಿಂಡಿಯನ್ನು ಕೇಳಿದರೆ, ಅವಳಿಗೆ ಏನು ಬೇಕೋ ಅದನ್ನು ಬಿಟ್ಟು, ನಮಗೇನು ಬೇಕೋ ಅದನ್ನು, ಯಾವಾಗ ಬೇಕಾದ್ರೂ ಮಾಡಿಕೊಡುತ್ತಾರೆ ಎಂದು ಟೀಸರ್ ನಲ್ಲಿ ತಿಳಿಸಿದ್ದಾರೆ.

    ಸ್ವೀಪರ್, ಕ್ಲೀನರ್, ಕೀಪರ್, ಶೇಫ್, ವೇಟರ್, ಟೀಚರ್, ಸಂಸ್ಥಾಪಕಿ, ಡೆಕೋರೇಟರ್, ಸ್ಟೋರಿ ರೈಟರ್, ಸಿಂಗರ್, ಆ್ಯಕ್ಟರ್, ಸರ್ಪೋಟರ್, ಮೋಟಿವೇಟರ್ ಎಲ್ಲರಿಗೂ ತಮ್ಮ ಅಮ್ಮ ಆಗಿರುತ್ತಾರೆ. ನಮಗೆ ಏನೇ ಆಗಬೇಕಾದರೂ ನಮಗೆ ನಮ್ಮ ಅಮ್ಮಾನೇ ಆಗಬೇಕು. ತಂದೆ ಆಗಲೂ ಕೆಲವು ಕ್ಷಣ ಸಾಕು, ಆದರೆ ತಾಯಿ ಆಗಲು ಜೀವನಪೂರ್ತಿ ಬೇಕು ಎಂದು ಟೀಸರ್ ನಲ್ಲಿ ತೋರಿಸಿದ್ದಾರೆ.

    ಎಂ ಚೈತನ್ಯ ಈ ಸಿನಿಮಾದ ನಿರ್ದೇಶಕರಾಗಿದ್ದು, ಚಿತ್ರತಂಡ ಈ ಟೀಸರ್ ನನ್ನು ಎಲ್ಲ ತಾಯಂದರಿಗೆ ಅರ್ಪಿಸಿದ್ದಾರೆ. ಈ ಚಿತ್ರ ದ್ವಾರಕೀಶ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದೆ. ಚಿತ್ರೀಕರಣ ಮುಗಿಸಿ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

    https://www.youtube.com/watch?v=SuX3BBVjPbk